ಪ್ರಥಮ ಪಿ.ಯು.ಸಿ ಮಾನವ ವಿಕಸನದ ಕಥೆ ಇತಿಹಾಸ ನೋಟ್ಸ್, 1st Puc Manava Vikasanada Kathe History Notes Question Answer in Kannada Medium Pdf Download Karnataka Kseeb Solution For Class 11 Chapter 2 Notes ಮಾನವ ವಿಕಸನದ ಕಥೆ ಪ್ರಶ್ನೆ ಉತ್ತರಗಳು 1st PUC History 2nd Chapter Notes in Kannada
ತರಗತಿ : ಪ್ರಥಮ ಪಿ.ಯು.ಸಿ
ಪಾಠದ ಹೆಸರು : ಮಾನವ ವಿಕಸನದ ಕಥೆ
1. ಹೋಮೋ ಕುಲ ಯಾವಾಗ ಅಸ್ತಿತ್ವಕ್ಕೆ ಬಂದಿತು ?
ಹೋಮೋ ಕುಲ 5.6 ಮಿಲಿಯನ್ ವರ್ಷಗಳ ಪೂರ್ವದಲ್ಲಿ ಅಸ್ತಿತ್ವಕ್ಕೆ ಬಂದಿತು .
2. ಶಿಲೆಗಳಿಂದ ಆಯುಧಗಳನ್ನು ತಯಾರಿಸಿದ ಪ್ರಥಮ ಮಾವನ ಪ್ರಜಾತಿ ಯಾವುದು ?
ಶಿಲೆಗಳಿಂದ ಆಯುಧಗಳನ್ನು ತಯಾರಿಸಿದ ಪ್ರಥಮ ಮಾನವ ಪ್ರಜಾತಿ ಎಂದರೆ“ ಹೋಮೋಹ ಬಿಲಿಸ್ .
3. ದ್ವಿಪಾದ ಚಲನೆ ಎಂದರೇನು ?
ದ್ವಿಪಾದ ಚಲನೆ ಎಂದರೆ ಎರಡು ಕಾಲುಗಳನ್ನೂ ಉಪಯೋಗಿಸಿ ನಡೆಯುವುದು ಇಲ್ಲವೇ ಓಡುವುದು .
4 . “ ಹ್ಯೂಮನ್ ” ಪದವು ಯಾವ ಭಾಷೆಯಿಂದ ಬಂದಿದೆ ?
ಲ್ಯಾಟಿನ್ ಭಾಷೆಯಿಂದ ಬಂದಿದೆ .
5. “ ಹೋಮೋ ” ಪದದ ಅರ್ಥವೇನು ?
“ ಹೋಮೋ ” ಎಂದರೆ “ ಮಾನವ ” ಅಥವಾ “ ಮನುಷ್ಯ ” ,
6. ಭೂಮಿಯು ಯಾವಾಗ ಉದಯಿಸಿತು ?
ಸುಮಾರು 4.5 ಬಿಲಿಯನ್ ವರ್ಷಗಳ ಪೂರ್ವದಲ್ಲಿ ಭೂಮಿ ಉಗಮವಾಯಿತೆಂದು ಹೇಳಲಾಗಿದೆ .
7. ಚಾರ್ಲ್ಸ್ ಡಾರ್ವಿನ್ ರಚಿಸಿದ ಕೃತಿ ಯಾವುದು ?
ಚಾರ್ಲ್ಸ್ ಡಾರ್ವಿನ್ ರಚಿಸಿದ ಕೃತಿ ‘ ದಿ ಓರಿಜಿನ್ ಆಫ್ ದಿ ಸ್ಪೀಶೀಸ್ ( The origin of the species ) .
8. ಮಾನವರನ್ನು ಹೋಲುವ ಜೀವಿಗಳು ಭೂಮಿಯ ಮೇಲೆ ಯಾವಾಗ ವಿಕಸಿಸಿದವು ?
ಮಾನವರನ್ನು ಹೋಲುವ ಜೀವಗಳು ಭೂಮಿಯ ಮೇಲೆ 5-6 ಮಿಲಿಯ ವರ್ಷಗಳ ಪೂರ್ವದಲ್ಲಿ ವಿಕಸಿಸಿದವು .
9. ಮೇಲು ಕುಟುಂಬ ಹೋಮಿನಾಯ್ಡೆಯಿಂದ ಹೋಮೊ ಕುಲವು ಉತ್ಪತ್ತಿಯಾಗಲು ಎಷ್ಟು ವರ್ಷಗಳು ಬೇಕಾದವು?
ಮೇಲು ಕುಟುಂಬ ಹೋಮಿನಾಯ್ದೆಯಿಂದ ಹೋಮೋ ಕುಲವು ಉತ್ಪತ್ತಿಯಾಗಲು ಸುಮಾರು 30 ಮಿಲಿಯನ್ ವರ್ಷಗಳು ಬೇಕಾದವು .
II . ಈ ಕೆಳಗಿನ ಪ್ರಶ್ನೆಗಳನ್ನು ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ .
1 . ಚಾರ್ಲ್ಸ್ ಡಾರ್ವಿನ್ ಪ್ರಸ್ತಾಪಿಸಿದ ಎರಡು ಸಿದ್ಧಾಂತಗಳು ಯಾವುವು ?
ಚಾರ್ಲ್ಸ್ ಡಾರ್ವಿನ್ ಪ್ರಸ್ತಾಪಿಸಿದ ಎರಡು ಸಿದ್ದಾಂತಗಳೆಂದರೆ –
*ನೈಸರ್ಗಿಕ ಆಯ್ಕೆ ಸಿದ್ಧಾಂತ
* ಸಬಲರು ಬದುಕಿ ಉಳಿಯುವ ಸಿದ್ಧಾಂತ
2. ಯಾವ ಎರಡು ಪ್ರಾಣಿಗಳು ಮಾನವನ ಹತ್ತಿರದ ಸಂಬಂಧಿಗಳೆಂದು ಪರಿಗಣಿಸಲಾಗಿದೆ ?
ಚಿಂಪಾಂಜಿಗಳು ಮತ್ತು ಗೋರಿಲ್ಲಾಗಳು ಮಾನವನ ಹತ್ತಿರದ ಸಂಬಂಧಿಗಳೆಂದು ಪರಿಗಣಿಸಲಾಗಿದೆ . 6. ದೊಡ್ಡ ಪ್ರಾಣಿಗಳ
3. ದೊಡ್ಡ ಪ್ರಾಣಿಗಳ ಯೋಜಿತ ಬೇಟೆ ಹಾಗು ಧರಿಸಲ್ಪಟ್ಟಿರುವ ಆರಂಭಿಕ ಕುರುಹುಗಳು ಎಲ್ಲಿ ದೊರೆತಿದೆ ?
ದೊಡ್ಡ ಪ್ರಾಣಿಗಳ ಯೋಜಿತ ಬೇಟೆ ಹಾಗು ವಧಿಸಲ್ಪಟ್ಟಿರುವ ಆರಂಭಿಕ ಕುರುಹುಗಳು ಈ ಕೆಳಕಂಡ ಎರಡು ಸ್ಥಳಗಳಲ್ಲಿ ಕಂಡು ಬಂದಿದೆ . ಅವುಗಳೆಂದರೆ –
1 ) ಇಂಗ್ಲೆಂಡಿನ ಬಾಕ್ಸ್‌ಗೋವ ಹಾಗೂ
2 ) ಜರ್ಮನಿಯ ಷಾನಿಂಜೆನ್
4 . ಭೂಮಿಯ ಉಗಮ ಹಾಗೂ ವಿಕಸನದ ಯಾವುದೇ ಎರಡು ಸಿದ್ಧಾಂತಗಳನ್ನು ತಿಳಿಸಿರಿ .
ಭೂಮಿಯ ಉಗಮ ಹಾಗೂ ವಿಕಸನದ ಎರಡು ಸಿದ್ಧಾಂತಗಳೆಂದರೆ –
*ತತ್ವಶಾಸ್ತ್ರ ಇಲ್ಲವೇ ಧಾರ್ಮಿಕ ಸಿದ್ಧಾಂತ
*ವೈಜ್ಞಾನಿಕ ಸಿದ್ಧಾಂತ
5. ಭೂಮಿಯ ಹವಾಗುಣ ಮತ್ತು ವಾತಾವರಣ ನಿರ್ಮಿಸಿದ ಎರಡು ಮುಖ್ಯ ಅಂಶಗಳು ಯಾವುವು ?
ಭೂಮಿಯ ಹವಾಗುಣ ಮತ್ತು ವಾತಾವರಣ ನಿರ್ಮಿಸಿದ ಎರಡು ಮುಖ್ಯ ಅಂಶಗಳೆಂದರೆ –
* ಭೂಮಿಯ ಬಹುತೇಕ ಭಾಗಗಳು ಹಿಮಚ್ಛಾದಿತಗೊಂಡು ವಾಯುಗುಣ ಮತ್ತು ಸಸ್ಯರೇಖೆಗಳಲ್ಲಿ ಮಹತ್ವದ ಬದಲಾವಣೆಗಳುಂಟಾದವು , ತಂಪು ಹಾಗೂ ಒಣ ಹವಾಗುಣ ಅರಣ್ಯಗಳನ್ನು ಕುಗ್ಗಿಸಿ ಬಯಲು , ಹುಲ್ಲುಗಾವಲು ಮತ್ತು ಮರುಭೂಮಿ ಪ್ರದೇಶಗಳನ್ನು ಹೆಚ್ಚಿಸಿತು .
* ಅನೇಕ ಪ್ರಬೇಧಗಳಲ್ಲಿ ಬದುಕುಳಿಯಲು ಆದ ಬದಲಾವಣೆಗಳಿಗೆ ಭೂಮಿಯು ವಾಯುಗುಣವು ಪ್ರಮುಖವಾಗಿ ಕಾರಣವಾಯಿತು . ವಿವಿಧ ಪ್ರಭೇದಗಳ ಉಗಮ ಮತ್ತು ವಿಕಸನ ಹಾಗೂ ಅಸ್ತಿತ್ವ ಮತ್ತು ಅಳಿವಿಗೆ ಭೂಮಿಯ ವಾತಾವರಣ ಹಾಗೂ ವಾಯುಗುಣ ಪ್ರಮುಖ ಕಾರಣವಾಯಿತು .
6 . ಜೀವದ ಉದಯಕ್ಕೆ ಕಾರಣವಾದ ಎರಡು ರಸಾಯನಿಕಗಳು ಯಾವುವು ?
ಜೀವದ ಉದಯಕ್ಕೆ ಕಾರಣವಾದ ಎರಡು ರಸಾಯನಿಕಗಳು – 1 ) ಜಲಜನಕ ಮತ್ತು ಇಂಗಾಲ
1st PUC History 2nd Chapter Notes in Kannada Pdf
III . ಈ ಕೆಳಗಿನ ಪ್ರಶ್ನೆಗಳನ್ನು 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ .
1. ಆಹಾರ ಮತ್ತು ಆಶ್ರಯಗಳು ಹೇಗೆ ಮಾನವನ ವಿಕಸನಕ್ಕೆ ಕಾರಣವಾಯಿತು ?
ಆಹಾರ ಮತ್ತು ಆಶ್ರಯಗಳು ಮಾನವನ ವಿಕಾಸಕ್ಕೆ ಕಾರಣವಾಯಿತು . ಮರದ ಮೇಲೆ ವಾಸಿಸುತ್ತಿದ್ದ ಹೋಮಿನಿಡ್‌ಗಳು ಗುಹೆಗಳಲ್ಲಿ , ವಿಸ್ತಾರದ ಬಂಡೆಗಳ ನಡುವೆ ಆಶ್ರಯ ತಾಣಗಳಲ್ಲಿ ವಾಸಿಸತೊಡಗಿದವು . ಬಿಸಿಲು , ಮಳೆ , ಗಾಳಿ ಪರಭಕ್ಷಕಗಳಿಂದ ರಕ್ಷಣೆಯ ಅಗತ್ಯವಾಗಿತ್ತು . ಅಲ್ಲದೆ ಮರದ ಮೇಲಿದ್ದ ಹಣ್ಣುಗಳು , ಬೀಜಗಳು ಗೆಡ್ಡೆಗೆಣಸುಗಳ ಕೊರತೆಯಾದುದರಿಂದ ಆಹಾರವನ್ನು ಹುಡುಕುತ್ತಾ ನೆಲದ ಮೇಲೆ ಹೆಚ್ಚು ಹೆಚ್ಚು ದೂರ ಓಡಾಡಲಾರಂಭಿಸಿದವು . ಸತ್ತ ಪ್ರಾಣಿಗಳ ಸಂಗ್ರಹದ ಜೊತೆಗೆ ಬೇಟೆಯಾಡುವುದು , ಮೀನು ಹಿಡಿಯುವುದಕ್ಕೆ ಆರಂಭಿಸಿದವು . ನದಿ , ಕೆರೆ , ಹಳ್ಳ , ಕೊಳ್ಳಗಳ ಬಳ ಆಶ್ರಯತಾಣಗಳನ್ನು ನಿರ್ಮಿಸಿದವು . ಆಹಾರಕ್ಕಾಗಿ ಆಯುಧಗಳನ್ನು ನಿರ್ಮಿಸಿದವು . ದ್ವಿಪಾದಚಲನೆಯನ್ನು ಆರಂಭಿಸುವುದರ ಮೂಲಕ ವಿಕಾಸಕ್ಕೆ ಕಾರಣವಾಯಿತು.
2. ಭೂಮಿಯ ಮೇಲ್ಮೈ ಹೇಗೆ ರಚನೆಯಾಯಿತು ?
* ಸುಮಾರು 4.5 ಬಿಲಿಯನ್ ವರ್ಷಗಳ ಪೂರ್ವದಲ್ಲಿ ಭೂಮಿ ಉಗಮವಾಯಿತೆಂದು ಹೇಳಲಾಗಿದೆ . ಆಗ ಭೂಮಿಯು ಉರಿಯುವ ಗೋಳವಾಗಿತ್ತು . ಅದು ಪದೇ ಪದೇ ಜ್ವಾಲಾಮುಖಿಗಳ ಸ್ಫೋಟ ಹಾಗೂ ದಕ್ಕಮುಕ್ಕಿಗಳಗೊಳಪಟ್ಟಿತು . ವಿಕಸನದ ಆರಂಭಿಕ ಅವಧಿಯಲ್ಲಿ ಅನೇಕ ಧೂಮಕೇತುಗಳು ಹಾಗೂ ಉಲ್ಕೆಗಳು ಭೂಮಿಯನ್ನು ಅಪ್ಪಳಿಸಿದವು .
* ಇದರಿಂದಾಗಿ ಭೂಮಿಯ ವಾಲುವಿಕೆ ಹಾಗೂ ಚಂದ್ರನ ಉಗಮವಾಯಿತು . ಭೂಮಿಯಲ್ಲಿ ತಂಪಾಗುವಿಕೆಯ ಪ್ರಕ್ರಿಯೆ ಮುಂದುವರೆದಾಗ ಭೂಮಿಯ ಮೇಲ್ಪದರವು ಕುಗ್ಗಲಾರಂಭಿಸಿ – ಬೆಟ್ಟಗಳು ಹಾಗು ಕಣಿವೆಗಳು ಸೃಷ್ಟಿಯಾದವು . ಭೂಮಿಯ ಮೇಲ್ಮ ಟ್ರಸ್ಟ್ ಅತಿ ಉಷ್ಣಾಂಶವನ್ನು ಹೊಂದಿದ್ದು ನೀರು ಆವಿಯ ರೂಪದಲ್ಲಿತ್ತು . ಭೂಮಿಯ ಮತ್ತು ತಂಪಾಗಲಾರಂಭಿಸಿದಂತೆ ಆವಿಯು ಮೋಡಗಳಾಗಿ ನಂತರ ಧಾರಕಾರವಾಗಿ ಮಳೆ ಸುರಿಯಲಾರಂಭಿಸಿತು . ಹೀಗಾಗಿ ಕೆರೆ , ಕೊಳ , ನದಿ , ಸರೋವರಗಳು ಉಂಟಾದವು . ಶಿಲೆಗಳು ಸಣ್ಣ ಕಣಗಳಾಗಿ ಮರಳು , ಮಣ್ಣು ಮತ್ತು ಸಮುದ್ರ ತಳ ನಿರ್ಮಾಣಗೊಂಡವು.
3. ಮಾನವನ ವಿಕಾಸದಲ್ಲಿ ಪಶುಪಾಲನೆ ಮತ್ತು ಕೃಷಿಯ ಪಾತ್ರವೇನು ?
ಮಾನವನ ವಿಕಾಸದಲ್ಲಿ ಪಶುಪಾಲನೆ ಮತ್ತು ಕೃಷಿಯ ಮಹತ್ವದ ಪಾತ್ರ ವಹಿಸುತ್ತದೆ . ಮೊದಲಿಗೆ ಪಶುಪಾಲನೆ ಪ್ರಾರಂಭವಾಗಿ ಅನಂತರ ಕೃಷಿ ಚಟುವಟಿಕೆಗಳೂ ನಡೆದವು . ಇದರಿಂದಾಗಿ ಆಹಾರದ ಕೊರತೆ ನೀಗಿದಂತಾಗಿತ್ತು.
ಪಶುಪಾಲನೆಯಲ್ಲಿ ಇವರಿಂದ ಸಾಕಲ್ಪಟ್ಟ ಪ್ರಾಣಿ ಎಂದರೆ – ‘ ನಾಯಿ ‘ , ಅನಂತರ ಕುರಿ , ಮೇಕೆ , ಹಸು , ಬೆಕ್ಕು , ಒಂಟೆ ಮತ್ತು ಕುದುರೆಗಳು ಪಳಗಿಸಲ್ಪಟ್ಟವು . ನಾಯಿಗಳು ಮಾನವರಿಗೆ ಬೇಟೆಯಲ್ಲಿ ಸಹಾಯ ಮಾಡಲು ಮತ್ತು ಆಶ್ರಯ ತಾಣಗಳನ್ನು ಕಾಯಲು ಆರಂಭಿಸಿದವು . ಮಾನವ ವಿಕಾಸದ ಇತಿಹಾಸದಲ್ಲಿ ಕೃಷಿ ಚಟುವಟಿಕೆಯ ಆರಂಭವನ್ನು ಕ್ರಾಂತಿಕಾರಿ ಬದಲಾವಣೆ ಎಂದು ಅಭಿಪ್ರಾಯಪಡಲಾಗಿದೆ . ಇದು ನವಶಿಲಾಯುಗದ ಪ್ರಮುಖ ಅಂಶವಾಗಿದೆ . ಗೋಧಿ , ಅಕ್ಕಿ , ಸಿರಿಧಾನ್ಯಗಳು ಮುಂತಾದವುಗಳನ್ನು ಬೆಳೆಯಲಾರಂಭಿಸಿದರು . ಕೃಷಿಯು 13000 ವರ್ಷಗಳಿಗಿಂತ ಈಚೆಗೆ ಪ್ರಾರಂಭವಾಯಿತು .
ಕೃಷಿಯು ಮಾನವನನ್ನು ಕೃಷಿ ಭೂಮಿಯ ಬಳಿ ಒಂದೆಡೆ ನೆಲೆ ನಿಲ್ಲುವಂತೆ ಮಾಡಿತು . ಈ ನೆಲೆಸುವಿಕೆ ಗ್ರಾಮಗಳ ಉದಯಕ್ಕೆ ಕಾರಣವಾಗಿ ಗ್ರಾಮಗಳು ನಗರಗಳ ನಾಗರಿಕತೆಯ ತಳಪಾಯವಾದವು .
4. ಮಾನವನ ವಿಕಾಸದಲ್ಲಿ ದ್ವಿಪಾದ ಚಲನೆ ಹಾಗೂ ಶಿಲಾಯುಗಗಳು ಯಾವ ಪಾತ್ರವಹಿಸಿದವು ?
ಮಾನವನ ವಿಕಾಸದಲ್ಲಿ ದ್ವಿಪಾದ ಚಲನೆ ಹಾಗು ಶಿಲಾಯುಧಗಳು ಪ್ರಮುಖ ಪಾತ್ರವಹಿಸಿದವು . ನೇರ ಅಂಗರಚನೆಯನ್ನು ಹೊಂದಿದ ಹೋಮಿನಿನ್‌ಗಳು ದ್ವಿಪಾದ ಚಲನೆಯನ್ನು ರೂಢಿಸಿಕೊಂಡವು . ದ್ವಿಪಾದ ಚಲನೆಗೆ ಅನುಕೂಲಕರವಾಗಿ ಅಸ್ಥಿ ಪಂಜರ ವಿನ್ಯಾಸ ಹಾಗೂ ಸ್ನಾಯುಗಳ ಸಹ ಮಾರ್ಪಾಡುಗೊಂಡಿತು . ದ್ವಿಪಾದ ಚಲನೆ ಮುಂಗಾಲುಗಳನ್ನು ಸ್ವತಂತ್ರಗೊಳಿಸಿತು . ಕಾಲಕ್ರಮೇಣ ಹಿಡಿತ ಮುಷ್ಠಿ ಹಿಡಿತ ಅಭಿವೃದ್ಧಿ ಪಡಿಸಿಕೊಂಡು ಕೈಗಳಾಗಿ ಪರಿವರ್ತಿತವಾದವು . ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಆಯುಧಗಳನ್ನು ತಯಾರಿಸಲು , ಉಪಯೋಗಿಸಲು ಸಹಕಾರಿಯಾಯಿತು . ದ್ವಿಪಾದ ಚಲನೆಯು ದೂರ ಪ್ರಯಾಣವನ್ನು ಹೆಚ್ಚು ಶ್ರಮವಹಿಸಿ ಚಲಿಸಲು ಸಹಾಯವಾಯಿತು . ಕಟ್ಟಿಗೆ , ಮೂಳೆ ಮತ್ತು ಶಿಲೆಗಳನ್ನು ಉಪಯೋಗಿಸಿ ಉಪಕರಣಗಳನ್ನು ತಯಾರಿಸಲ್ಪಡುತ್ತಿತ್ತು . ಕಲ್ಲಿನ ಉಪಕರಣಗಳ ಬಳಕೆಯನ್ನು ಇತಿಹಾಸದಲ್ಲಿ ಶಿಲಾಯುಗ ಎಂದು ಅಭ್ಯಾಸಿಸಲಾಗುತ್ತದೆ . ಇದು ಮಿದುಳಿನ ಗಾತ್ರದ ಏರಿಕೆಗೂ ಕಾರಣವಾಯಿತು . ಉಪಕರಣಗಳ ನೈಪುಣ್ಯತೆಯ ಆಧಾರದ ಮೇಲೆ ‘ ಪ್ರಾಚೀನ ಶಿಲಾಯುಗ ‘ , ಮಧ್ಯಕಾಲಿನ ಹಾಗೂ ನವಶಿಲಾಯುಗ ಎಂದು ವರ್ಗಿಕರಿಸಲಾಗಿದೆ . ಇದರ ನಂತರ ಲೋಹಗಳ ಯುಗ ಪ್ರಾರಂಭವಾಯಿತು .
5. ಆಧುನಿಕ ಮಾನವ ಉಗಮಿಸಿದ ಸ್ಥಳವನ್ನು ಕುರಿತು ಚರ್ಚಿಸಿ .
ಆಧುನಿಕ ಮಾನವ ಎಂದರೆ , ಇಂದಿನ ಮಾನವ ಪ್ರಜಾತಿಯು ಎಲ್ಲಿ ಉದಯಿಸಿತು ಎಂಬುದು ಒಂದು ಚರ್ಚೆಯ ವಿಷಯವಾಗಿದೆ . ಇವುಗಳಿಗೆ ಸಂಬಂಧಿಸಿದಂತೆ ಎರಡು ಸಿದ್ಧಾಂತಗಳಿವೆ –
1 ) ಸ್ಥಳಾಂತರ ಸಿದ್ಧಾಂತ ಅಥವಾ ಆಫ್ರಿಕಾ ಉಗಮ ಸಿದ್ಧಾಂತ
2 ) ಪ್ರಾದೇಶಿಕ ಮುಂದುವರಿಕೆ ಸಿದ್ಧಾಂತ
1 ) ಸ್ಥಳಾಂತರ ಸಿದ್ಧಾಂತ ಅಥವಾ ಆಫ್ರಿಕಾ ಉಗಮ ಸಿದ್ಧಾಂತವೆಂದರೆ ಪ್ರಜಾತಿಗಳು ಪೋಷಣಾತ್ಮಕ ಉಷ್ಣವಲಯದಿಂದ ಹಾಗು ಹೆಚ್ಚಿನ ಮಳೆ ಹಾಗೂ ಪ್ರಬಲ ಬಿಸಿಲಿನಿಂದಾಗಿ ಮಾನವ ಜಾತಿಯು ಉಗಮಿಸಲು ಕಾರಣವಾಯಿತು .
2 ) ಪ್ರಾದೇಶಿಕ ಮುಂದುವರಿಕೆ ಸಿದ್ಧಾಂತ ಪ್ರಕಾರ – ಜಗತ್ತಿನ ವಿವಿಧ ಪ್ರದೇಶಗಳಲ್ಲಿ ಪೂರ್ವಜ ಮಾನವ ಪ್ರಜಾತಿಗಳಿಂದ ವಿಕಸನ ಹೊಂದಿದವು , ಆದರೆ ವಿಕಾಸದ ಗತಿಯು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿತ್ತು . ಜಗತ್ತಿನ ಮಾನವರಲ್ಲಿನ ವಿವಿಧತೆಯು ಈ ಸಿದ್ಧಾಂತಕ್ಕೆ ಪೂರಕವಾಗಿದೆ .
IV . ಈ ಕೆಳಗಿನ ಪ್ರಶ್ನೆಯನ್ನು 30 ರಿಂದ 40 ವಾಕ್ಯಗಳಲ್ಲಿ ಉತ್ತರಿಸಿ .
1. ಮಾನವನ ವಿಕಸನಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನು ಚರ್ಚಿಸಿರಿ ,
ಮಾನವನ ವಿಕಸನಕ್ಕೆ ಕಾರಣವಾದ ಪ್ರಮುಖ ಅಂಶಗಳೆಂದರೆ –
1 ) ವಾಯುಗುಣ ಬದಲಾವಣೆ : ವಾಯುಗುಣ ಹಾಗೂ ವಾತಾವರಣದ ಬದಲಾವಣೆಗಳು ಮಾನವನ ವಿಕಸನದ ಮೇಲೆ ಅತಿ ಹೆಚ್ಚಿನ ಪ್ರಭಾವ ಬೀರಿತು . ಶೀತಯುಗದಲ್ಲಿ ಭೂಮಿಯ ಬಹುತೇಕ ಭಾಗಗಳು ಹಿಮಚ್ಛಾದಿತಗೊಂಡು ವಾಯುಗುಣ ಮತ್ತು ಸಸ್ಯರಾಶಿಗಳಲ್ಲಿ ಮಹತ್ವದ ಬದಲಾವಣೆಗಳುಂಟಾದವು . ತಂತ್ರ ಹಾಗೂ ಒಣ ಹವಾಗುಣ ಅರಣ್ಯಗಳನ್ನು ಕುಗ್ಗಿ ಬಯಲು , ಹುಲ್ಲುಗಾವಲು ಮತ್ತು ಮರುಭೂಮಿ ಪ್ರದೇಶಗಳನ್ನು ಹೆಚ್ಚಿಸಿತು . ವಿವಿಧ ಪ್ರಭೇದಗಳ ಉಗಮ ಮತ್ತು ವಿಕಸನ ಹಾಗೂ ಅಸ್ತಿತ್ವ ಮತ್ತು ಅಳಿವಿಗೆ ಭೂಮಿಯ ವಾತಾವರಣ ಹಾಗೂ ವಾಯುಗುಣ ಪ್ರಮುಖ ಕಾರಣವಾಯಿತು .
2 ) ಮಿದುಳಿನ ಗಾತ್ರದಲ್ಲಿ ವೃದ್ಧಿ : ಪ್ರಕೃತಿಯ ಸವಾಲುಗಳನ್ನು ಎದುರಿಸಲು ಮಾನವ ಪ್ರಜಾತಿಯಲ್ಲಿ ದೊಡ್ಡ ಗಾತ್ರದ ಮತ್ತು ಸಂಕೀರ್ಣವಾದ ಮಿದುಳು ವಿಕಸನಗೊಂಡಿತು . ಮಿದುಳಿನ ಗಾತ್ರದ ವೃದ್ಧಿಯಿಂದಾಗಿ ದೃಷ್ಟಿ ಸುಧಾರಣೆ , ನೇರ ಅಂಗವಿನ್ಯಾಸ , ದ್ವಿಪಾದ ಚಲನೆ , ಆಯುಧಗಳ ಹಾಗೂ ಬೆಂಕಿಯ ಉಪಯೋಗ ಯೋಜಿತ ಬೇಟೆ , ಆಹಾರ ಸಂಗ್ರಹಣೆ , ಭಾಷೆ ಮುಂತಾದವು ವೃದ್ಧಿಗೊಂಡವು .
3 ) ಆಹಾರ ಹಾಗೂ ಆಶ್ರಯತಾಣ : ಹೋಮಿನೊಯ್ದಗಳು ಬೀಜಗಳು , ಹಣ್ಣುಗಳು , ಗಡ್ಡೆಗಳು ಮುಂತಾದ ಆಹಾರವನ್ನು ಸೇವಿಸುತ್ತಿದ್ದವು . ಹಾಗೂ ಸಂಗ್ರಹಿಸುತ್ತಿದ್ದವು . ನಂತರ ಆಹಾರ ಸಂಗ್ರಹಿಸಲು ಮರಗಿಡಗಳಿಂದ ಇಳಿದು ನೆಲದ ಮೇಲೆ ಓಡಾಡಲು ಪ್ರಾರಂಭಿಸಿದವು . ಆಹಾರ ಸಂಗ್ರಹಣೆಗೆ ದೂರ ದೂರ ಹೋಗುತ್ತಿದ್ದಂತೆ ಪರಭಕ್ಷಕಗಳಿಂದ , ಬಿಸಿಲು , ಗಾಳಿ ಮಳೆಯಿಂದ ರಕ್ಷಣೆ ಪಡೆಯಲು , ವಿಶಾಲವಾದ ಬಂಡೆಗಳ ನಡುವೆ ಆಶ್ರಯ ತಾಣಗಳಾದವು .
4 ) ದ್ವಿಪಾದ ಚಲನೆ : ಹೋಮಿನಾಯ್ಡ್ಗಳು ದ್ವಿಪಾದ ಚಲನೆಯನ್ನು ರೂಢಿಸಿಕೊಂಡವು . ದ್ವಿಪಾದ ಚಲನೆ ಮುಂಗಾಲುಗಳನ್ನು ಸ್ವತಂತ್ರಗೊಳಿಸಿತು . ನಿಧಾನವಾಗಿ ಇದು ಕೈಗಳಾಗಿ ಪರಿವರ್ತಿತವಾದವು . ಇವು ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಆಹಾರಕ್ಕಾಗಿ ಆಯುಧಗಳನ್ನು ತಯಾರಿಸಲು , ಬಹಳ ಹೋಗಲು ಇವು ಬಹಳ ಉಪಯೋಗವಾದವು .
5 ) ಉಪಕರಣಗಳ ತಯಾರಿಕೆ : ಆಹಾರದ ಸಂಗ್ರಹಣೆಗಾಗಿ ಹಾಗೂ ಪರಭಕ್ಷಕರಿಂದ ರಕ್ಷಿಸಿಕೊಳ್ಳಲು ಕಲ್ಲುಗಳಿಂದ ಆಯುಧ ತಯಾರಿಸ ತೊಡಗಿದರು . ನೈಮಣ್ಯತೆಯ ಆಧಾರದ ಮೇಲೆ ಪ್ರಾಚೀನ , ಮಧ್ಯ ನವಶಿಲಾಯುಗವೆಂದು ವಿಭಜಿಸಲಾಯಿತು . ನಂತರ ಲೋಹಗಳಲ್ಲಿ ಉಪಕರಣಗಳನ್ನು ತಯಾರಿಸಿದರು .
6 ) ಭಾಷೆ : ಯೋಜಿತ ಬೇಟೆಗೆ ಸಹಕಾರ ಅವಶ್ಯಕತೆ ಇತ್ತು . ಮೊದಲು ಸಂಜೆಗಳಿಂದ ಪ್ರಾರಂಭವಾಗಿ ವಿವಿಧ ಉಚ್ಛಾರಗಳ ಮೂಲಕ ಭಾಷೆ ಉಗಮವಾಯಿತು .
7 ) ಪಶುಪಾಲನೆ ಕೃಷಿಯ ಆರಂಭ : ಆಹಾರ ಸಂಗ್ರಹಣೆಯಿಂದಾಗಿ ಪಶುಪಾಲನೆ ಹಾಗೂ ಅಭಿವೃದ್ಧಿ ಉಂಟಾಯಿತು .
8 ) ಕಲೆ : ಮೂರ್ತಿಗಳನ್ನು ಮಾಡುವ ಕಲೆ , ಚಿತ್ರಕಲೆ ಮುಂತಾದವು ವಿಕಾಸಗೊಂಡವು .
FAQ
“ ಹೋಮೋ ” ಎಂದರೆ “ ಮಾನವ ” ಅಥವಾ “ ಮನುಷ್ಯ ” ,
ಚಾರ್ಲ್ಸ್ ಡಾರ್ವಿನ್ ರಚಿಸಿದ ಕೃತಿ ‘ ದಿ ಓರಿಜಿನ್ ಆಫ್ ದಿ ಸ್ಪೀಶೀಸ್ ( The origin of the species ) .
ಸುಮಾರು 4.5 ಬಿಲಿಯನ್ ವರ್ಷಗಳ ಪೂರ್ವದಲ್ಲಿ ಭೂಮಿ ಉಗಮವಾಯಿತೆಂದು ಹೇಳಲಾಗಿದೆ .
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
Please give me pdf
Notes super