10th Kannada Shabari Lesson Notes | 10ನೇ ತರಗತಿ ಶಬರಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ಶಬರಿ ಪಾಠದ ನೋಟ್ಸ್ ಪ್ರಶ್ನೆ ಉತ್ತರಗಳು, 10th Standard Kannada Shabari Lesson Notes Question Answer Pdf Download in Kannada Medium Karnataka State Syllabus 2024, Kseeb Solutions For Class 10 Kannada Chapter 1 Notes Shabari Lesson Summary in Kannada Pdf 10th Kannada Shabari Lesson Question Answer ಶಬರಿ ಪಾಠದ ಕೊಶನ್ ಆನ್ಸರ್ Sslc Shabari Question Answer Shabari Lesson Notes in Kannada

 

Shabari Lesson Notes Pdf 2024

Contents hide

ಗದ್ಯಪಾಠ -1 –

ಶಬರಿ (ಗೀತನಾಟಕ)

ಕವಿ – ಪು. ತಿ. ನರಸಿಂಹಾಚಾರ್ಯ

ಕವಿ – ಕಾವ್ಯ ಪರಿಚಯ

ಪು.ತಿ.ನರಸಿಂಹಚಾರ್

ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
ಇವರು ಕ್ರಿ.ಶ.೧೯೦೫ ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಎಂಬ ಊರಿನಲ್ಲಿ ಜನಿಸಿದ್ದಾರೆ.
ಇವರು ಶಬರಿ, ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿವಿಜಯ, ಹಂಸದಯಂತಿ ಮತ್ತು ಇತರ ರೂಪಕಗಳು,
ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಮುಂತಾದ ಕೃತಿಗಳನ್ನು
ರಚಿಸಿದ್ದಾರೆ. ಇವರ ಹಂಸದಮಯಂತಿ  ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಹಾಗೂ ಶ್ರೀಹರಿಚರಿತೆ ಕಾವ್ಯಕ್ಕೆ ಪಂಪಪ್ರಶಸ್ತಿ ಗಳನ್ನು ಪಡೆದಿದ್ದಾರೆ.

10th Shabari Lesson in Kannada Notes

ಬಹು ಆಯ್ಕೆ ಪ್ರಶ್ನೆಗಳು

1] ‘ನಿತ್ಯ ‘ ಇದರ ತದ್ಭವ ರೂಪ.
ಅ] ನೆಚ್ಚ ಅ] ನಿತ್ತ ಇ] ನಿಚ್ಚ ಈ] ಸತ್ಯ.

2] ‘ಚಂದ್ರಾಗನೇ’ ಈ ಅಲಂಕಾರಕ್ಕೆ ಉದಾಹರಣೆ.
ಅ] ರೂಪಕ ಆ] ಉಪಮಾ ಇ] ಉತ್ಪ್ರೇಕ್ಷ ಈ] ದೃಷ್ಟಾಂತ

3] ‘ಚೆಂದಳಿರು’ ಈ ಸಮಾಸಕ್ಕೆ ಸೇರಿದೆ.
ಅ] ಕರ್ಮಧಾರಯಾ ಆ] ದ್ವಿಗು. ಇ] ಕ್ರಿಯಾ ಈ] ಅಂಶಿ.

4] ‘ಅನುಜ’ ಇದರ ಅನ್ಯಲಿಂಗ ರೂಪ.
ಅ] ಸುತೆ. ಆ] ತಮ್ಮ. ಇ] ಅನುಜೆ ಈ] ವತ್ಸ

5] ‘ಉಪಕಾರ’ ಇದರ ವಿರುದ್ಧಾರ್ಥಕ ಪದ ಇದಾಗಿದೆ .
ಅ] ಪರೋಪಕಾರ. ಆ] ಪ್ರತ್ಯುಪಕಾರ. ಇ] ಪ್ರತೀಕಾರ. ಈ] ಅಪಕಾರ.

6] ‘ಪ್ರಾಣಾಹುತಿ’ ಈ ಸಂಧಿಗೆ ಉದಾಹರಣೆ.
ಅ] ಯಣ್‌ಸಂಧಿ. ಆ] ಆದೇಶ ಸಂಧಿ. ಇ] ಸವರ್ಣಧೀರ್ಘ ಸಂಧಿ. ಈ] ಆಗಮ ಸಂಧಿ.

7] ‘ರಾಮಲಕ್ಷ್ಮಣರು ’ ಇದು ಈ ಸಮಾಸಕ್ಕೆ ಉದಾಹರಣೆ.
ಅ] ಕರ್ಮಾಧಾರಯಾ ಆ] ದ್ವಂದ್ವ ಇ] ದ್ವಿಗು ಈ] ತತ್ಪುರುಷ.

8] ಬಾಬಾ ಇದು ಈ ವಾಕ್ಯಾರಾಣಾಂಶವಾಗಿದೆ.
ಅ] ಕ್ರಿಯೆ ಆ] ಅನುಕರಣಾವ್ಯಯ. ಇ] ದ್ವಿರುಕ್ತಿ ಈ] ಜೋಡಿನುಡಿ.

9] ‘ಸುರಭಿ’ ಪದದ ಅರ್ಥ.
ಅ] ಸುಂದರ ಆ] ನಕ್ಷತ್ರ. ಇ] ಕಾಮಧೇನು. ಈ] ಆಕಾಶ

10] ‘ಹಸುಳೆ ‘ ಪದದ ಅರ್ಥ
ಅ] ಎಳೆ. ಆ] ಬೆಳೆ ಇ] ಮಗು. ಈ] ಕರು.

11] ‘ಉದರಮುಖ‘ ಇದು ಈ ನಾಮಪದಕ್ಕೆ ಉದಾಹರಣೆ.
ಅ] ಅಂಕಿತನಾಮ ಆ] ಭಾವನಾಮ ಇ] ಅನ್ವರ್ಥನಾಮ ಈ] ರೂಢನಾಮ.

12] ‘ದನು ಪೇಳ್ದದಾರಿಯೊಳೆ  ನಾವು ಬಂದಿಹೆವೆ’ ಈ ವಾಕ್ಯದ ಕೊನೆಗಿರಬೇಕಾದ ಲೇಖನ ಚಿಹ್ನೆ ಇದಾಗಿದೆ.
ಅ] ಪೂರ್ಣವಿರಾಮ ಆ] ಭಾವಸೂಚಕ ಇ] ಉದ್ಧರಣ ಈ] ಪ್ರಶ್ನಾರ್ಥಕ.

13] ‘ವನ’ ಪದದ ತದ್ಭವ ರೂಪ
ಅ] ಮನ ಆ] ವನ ಇ] ಬನ ಈ] ದನ

14] ‘ಶೋಕದುಲ್ಕೆ’ ಈ ಸಂಧಿಯಾಗಿದೆ
ಅ] ಆದೇಶ ಆ] ಲೋಪಸಂಧಿ ಇ] ಸವರ್ಣಧೀರ್ಘ ಈ] ಯಣ್‌ಸಂದಿ

15] ‘ಐದಿ’ ಪದದ ಅರ್ಥ
ಅ] ಕಾಡು ಆ] ಆಸರೆ ಇ] ಹೋಗಿ ಈ] ವೇದಿ

16] ‘ದಿಟ್ಟಿ’ ಇದರ ತತ್ಸಮ ರೂಪ
ಅ] ದಿಟ್ಟ ಆ] ದಿಟ್ಟಿ ಇ] ದೃಷ್ಟಿ ಈ] ಮುಷ್ಠಿ

17. ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು
ಅ] ಸಂಯುಕ್ತಾಕ್ಷರಗಳು ಆ] ಸ್ವರಗಳು ಇ] ಗುಣಿತಾಕ್ಷರಗಳು ಈ] ಯೋಗವಾಹಗಳು

18] ಸಜಾತೀಯ ಸಂಯುಕ್ತಾಕ್ಷರಗಳಿಗೆ ಇದು ಉದಾಹರಣೆಯಾಗಿದೆ
ಅ] ಉಷ್ಣ ಆ] ಅಸ್ತ್ರ ಇ] ಅಜ್ಜ ಈ] ಅಕ್ಷರ

19] ಸ್ವರಾಕ್ಷರಗಳಲ್ಲಿನ ಪ್ಲುತಾಕ್ಷರಗಳು ಇವಾಗಿವೆ
ಅ] ಅ,ಇ,ಉ ಆ] ಆ,ಈ,ಐ ಇ] ಕ್,ಗ್,ಚ್ ಈ] ಅs

20] ವರ್ಗೀಯ ವ್ಯಂಜನಗಳಲ್ಲಿ ಮೊದಲ ಮತ್ತು ಮೂರನೆಯ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅ] ವಿಸರ್ಗ ಆ] ಅನುಸ್ವಾರ ಇ] ಅಲ್ಪಪ್ರಾಣ ಈ] ಮಹಾಪ್ರಾಣ

21] ವರ್ಗೀಯ ವ್ಯಂಜನಗಳಲ್ಲಿ ಐದನೆ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅ] ಅಲ್ಪಪ್ರಾಣ ಆ] ಮಹಾಪ್ರಾಣ ಇ] ಅನುನಾಸಿಕ ಈ] ವಿಸರ್ಗ

22] ವರ್ಣಮಾಲೆಯಲ್ಲಿನ ಸ್ವರಾಕ್ಷರಗಳೆಷ್ಟು
ಅ]೦೮ ಆ] ೧೦ ಇ] ೧೨ ಈ] ೧೩

23] ಯೋಗವಾಹಗಳು ಇವಾಗಿವೆ
ಅ] ಯ್ ರ್ ಆ] ಕ್ ಖ್ ಇ] ಃ ಂ ಈ]ಓ o o

24] ಅವರ್ಗೀಯ ವ್ಯಂಜನಾಕ್ಷರಗಳೆಷ್ಟು
ಅ] ೦೨ ಆ]೦೮ ಇ] ೦೭ ಈ] ೦೯

25] ಇವುಗಳಲ್ಲಿ ಅವರ್ಗೀಯ ವ್ಯಂಜಾನಾಕ್ಷರಗಳಾಗಿವೆ
ಅ] ಮ ಆ] ಬ ಇ] ರ ಈ] ಚ

26] ಇವುಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರಗಳನ್ನು  ಆರಿಸಿ ಬರೆಯಿರಿ
ಅ] ಎನ್ನ ಆ] ಪ್ರವೇಶ ಇ] ಅಹಂಕೃತಿ ಈ] ಹಾಯಾಗಿ

27] ಇವುಗಳನ್ನು ಕನ್ನಡ  ಅಂಕೆಗಳೆಂದು  ಕರೆಯುತ್ತಾರೆ
ಅ] ಮುಕ್ಕಾಲು ಆ] ಗಂಟೆ ಇ] ತಾಸು ಈ] ಅವಧಿ

28] ವರ್ಗೀಯ ವ್ಯಂಜಾನಾಕ್ಷರಗಳು ಎಷ್ಟು?
ಅ] ೨೫ ಆ] ೨೪ ಇ] ೨೫ ಈ] ೧೨

29] ‘ತಪಸ್ವಿ’ ಪದದ ತದ್ಭವ ರೂಪ ಬರೆಯಿರಿ
ಅ] ತವಸಿ ಆ] ತಪಸ್ವಿ ಇ] ತಪಸಿ ಈ] ತವಸ
30] ತ ವರ್ಗದ ಅನುನಾಸಿಕ ಅಕ್ಷರ ಯಾವುದು. [ಮಾರ್ಚ್ ೨೦೦೯]
ಅ]ಙ ಬ]ಣ ಕ]ಮ ಡ]ನ

31] ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷಾರಗಳಿಗೆ ಏನೆಂದು ಕರೆಯುತ್ತಾರೆ.
ಅ] ದೀರ್ಘಸ್ವರ ಬ]ಹೃಸ್ವಸ್ವರ  ಕ] ಪ್ಲುತ ಸ್ವರ ಡ] ಸಪ್ತ ಸ್ವರ [ಮಾ೨೦೧೧]

32) ಘ, ಝ, ಢ, ಧ, ಭ, ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ [ಏ- ೨೦೧೩]
ಅ] ದೀರ್ಘಸ್ವರಾಕ್ಷರಗಳು ಬ] ಅಲ್ಪಪ್ರಾಣಾಕ್ಷರಗಳು

ಉತ್ತರಗಳು 

ಕ]ಮಹಾಪ್ರಾಣಾಕ್ಷರಗಳು ಡ]ಅನುನಾಸಿಕಾಕ್ಷರಗಳು
1] ಇ 2] ಅ 3] ಅ 4] ಇ 5] ಈ 6] ಇ 7] ಅ 8] ಇ 9] ಇ ೯] ಇ 10] ಇ 11] ಈ 12] ಇ 13] ಆ 14] ಇ 15] ಇ 16] ಇ 17] ಇ 18] ಈ 19] ಇ 20] ಇ 21] ಈ 22] ಇ 23] ಈ 24] ಈ 25] 26] ಇ 27] ಅ 28] ಅ 29] ಅ 30] ಡ 31] ಅ

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.

1. ಶ್ರೀ ರಾಮನ ತಂದೆಯ ಹೆಸರೇನು?

ಶ್ರೀ ರಾಮನ ತಂದೆಯ ಹೆಸರು ದಶರಥ.

2. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನನ್ನ  ಸಂಗ್ರಹಿಸಿದ್ದಳು?

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಪರಿಮಳದ ಹೂವು, ರುಚಿಕರವಾದ ಹಣ್ಣುಹಂಪಲುಗಳು ಮತ್ತುಮಧುಪರ್ಕ
ಎಂಬ ಪಾನಿಯವನ್ನುಸಂಗ್ರಹಿಸಿದ್ದಳು.

3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.

4. ರಾಮಲಕ್ಶ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?

ರಾಮಲಕ್ಶ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ದನು ಮಹರ್ಷಿ.

5. ಶಬರಿ ಗೀತನಾಟಕದ ಕರ್ತೃ ಯಾರು?

ಶಬರಿ ಗೀತನಾಟಕದ ಕರ್ತೃ ಪು.ತಿ. ನರಸಿಂಹಾಚಾರ್ಯರು.

ಹೆಚ್ಚುವರಿ ಪ್ರಶ್ನೋತ್ತರಗಳು

10th Class Shabari Question Answer Notes Summery Mcq Pdf

6. ಭೂಮಿಜಾತೆ ಎಂದರೆ ಯಾರು ?

ಭೂಮಿಜಾತೆ ಎಂದರೆ ಸೀತೆ.

7. ಶಬರಿ ಯಾರಿಗಾಗಿ ಕಾದಿದ್ದಳು ?

ಶಬರಿ ಶ್ರೀರಾಮನಿಗಾಗಿ ಕಾದಿದ್ದಳು.

8.ಯಾರೊಡನೆ ಕಾಡಿಗೆ ಬರಲು ಶ್ರೀರಾಮನಿಗೆ ಭಯವಿಲ್ಲ ?

ಲಕ್ಷ್ಮಣನೊಡನೆ ಕಾಡಿಗೆ ಬರಲು ಶ್ರೀರಾಮನಿಗೆ ಭಯವಿಲ್ಲ.

9. ಶಬರಿಗೆ ಯಾರ ವರ ಫಲಿಸಿತು ?

ಶಬರಿಗೆ ಸಿದ್ಧರ ವರ ಫಲಿಸಿತು.

10. ಶಬರಿಯ ಪೂಣ್ಕೆ ಏನಾಗಿತ್ತು ?

ಶಬರಿಯ ಪೂಣ್ಕೆ ಮುಕ್ತಿ ಬಯಸುವುದಾಗಿತ್ತು.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

10th Kannada Shabari Lesson Notes Pdf Download

1. ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?

ರಾಮನು “ಎಲೈ ಗಿರಿ ವನವೇ ನಾನು ನಿಮ್ಮನ್ನು ಬೇಡಿಕೊಳ್ಳತ್ತಿದ್ದೇನೆ ಹೇಳಿರಿ ನನ್ನ ಪ್ರೀತಿಯ ರಾಣಿ ಸೀತೆಯು ದೊರೆಯುವಳೇ ? ದೊರೆಯುವುದಿಲ್ಲವೋ ? ಅವಳು ಇರುವ ನೆಲೆ ಯಾರಾದರೂ ತಿಳಿದಿರುವಿರಾ. ನನ್ನ ಹೃದಯದ ಈ ದುಃಖವು ನಾಶವಾಗುತ್ತಿಲ್ಲವಲ್ಲ.” ಎಂದು ಗಿರಿವನಗಳನ್ನು ಪ್ರಾರ್ಥಿಸುತ್ತಾನೆ.

2. ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು ತಿಳಿಸಿ.

ಲಕ್ಷ್ಮಣನು  “ತಾಳಿಕೋ ಅಣ್ಣ ತಾಳಿಕೋ ಸರ‍್ಯನೇ ಕಾಂತಿ ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ರಾಮನೇ ಧೈರ್ಯ ಕಳೆದುಕೊಂಡರೆ ಈ ಲೋಕಕ್ಕೆ ¸ ನೀಡುವವರು ಯಾರು ? ಎಂದು ಅಣ್ಣನನ್ನು ಸಂತೈಸಿದನು.

3. ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?

ರಾಮನ ಸ್ವಾಗತಕ್ಕಾಗಿ ಶಬರಿ ಕಡುಸವಿಯಾದ ಬಗೆಬಗೆಯ ಹಣ್ಣು – ಹಂಪಲುಗಳನ್ನು, ಜೇನುತುಪ್ಪ  ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು , ತಳಿರು , ಸುವಾಸನೆಯಿಂದ ಕೂಡಿದ ಹೂವುಗಳನ್ನು ಸಂಗ್ರಹಿಸಿ ಸಿದ್ಧತೆಮಾಡಿಕೊಂಡಿದ್ದಳು.

4. ಶಬರಿಯು ರಾಮ ಲಕ್ಷ್ಮಣರನ್ನು  ಉಪಚರಿಸಿದ ರೀತಿಯನ್ನು ವಿವರಿಸಿ.

ರಾಮ-ಲಕ್ಷ್ಮಣ  ಬಂದು ತನ್ನ ಮುಂದೆ ನಿಂತಿರುವದನ್ನು ಕಂಡು ಶಬರಿ ಬೆರಗಾದರೆ . ಬೆರಗು ಕಳೆದ ಮೇಲೆ ರಾಮನ  ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ  ಒತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬನ್ನಿರಿ ಎಂದು ಗದ್ಗದಿಸುತ್ತಾ ಅಯ್ಯೋ ಏನೂ ಸಿದ್ಧವೇ ಇಲ್ಲ. ನಿನ್ನೆಯಷ್ಟು ಚೆಂದವಿಲ್ಲ ಎನ್ನುತ್ತ ಬಹಳ ಹಂಬಲದಿಂದ ತನ್ನ ಮನದ ಬಯಕೆಯಂತೆ ಬಗೆ ಬಗೆಯ ಸುವಾಸನೆಯನ್ನು ಬೀರುವ ಹೂಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ತಾನೆ ರಾಮಲಕ್ಷö್ಮಣರ
ಕೈಯೊಳಗೆ ಇಟ್ಟು ಜಗದೊಳಗೆ ಇದರಷ್ಟು ರುಚಿಯಾದ ಹಣ್ಣು ಯಾವುದು ಇಲ್ಲ , ನಿಮಗಾಗಿಯೇ  ತಂದಿರುವೆನು ಎಂದು ತಿನ್ನಲು ಹೇಳಿದಳು. ಮಧುಪರ್ಕವನ್ನು ಸವಿಯಲು ಕೊಟ್ಟು ಉಪಚರಿಸಿದಳು.

5. ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು  ಶಬರಿಗೆ ಏನು ಹೇಳಿದರು?

ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣ  “ತಾಯಿ ನಿನ್ನ ಪ್ರೀತಿಯಲ್ಲಿ , ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಕಾಡಿನಲ್ಲಿ ಈ ಆನಂದ ಕಾಣುವ ಪುಣ್ಯಕ್ಕೆ ಎಂದೆದಿಗೂ ನಿನಗೆ ನಾವು ಚಿರಋಣಿಗಳಾಗಿದ್ದೇವೆ. ನಿಮ್ಮ ಆತಿಥ್ಯದಲ್ಲಿ ಸ್ವಲ್ಪವೂ ಕೊರೆತ ಕಾಣಲಿಲ್ಲ. ನಮ್ಮ ಅಯೋದ್ಯೇಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು  ಮನೆಯೆಂದೇ ತಿಳಿದೆ. ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೆ ತಿಳಿದೆವು” ಎಂದು ಶಬರಿಗೆ ಹೇಳಿದರು.

ಹೆಚ್ಚುವರಿ ಪ್ರಶ್ನೋತ್ತರಗಳು

6) ಶಬರಿ ಶ್ರೀ ರಾಮನ ಗುಣಗಣಗಳನ್ನು ಹೇಗೆ ಹಾಡಿ ಹೊಗಳಿದಳು ?

“ದಶರಥನ ಮಗನಂತೆ, ಸಾಧು-ಸಜ್ಜನರ ಮಿತ್ರನಂತೆ, ಧೀರ ಶೂರ ವೀರ ಗಂಭೀರ ಸದ್ಗುಣಗಳ ಸಾರನಂತೆ, ಹೆದರಿಸುವವರು ಹೆದರುವಂತೆ ಬಿಲ್ಲು ಹಿಡಿದು ಬರುವನಂತೆ ತುಂಬ ಸೌಮ್ಯಸ್ವಭಾವದವನಂತೆ, ಮಗುವಿನಂತೆ ಕಾಣುವನಂತೆ, ರಾಜಪದವಿಯ ತ್ಯಾಗ ಮಾಡಿದನಂತೆ, ತಪಸ್ವಿತನವ ಹಿಡಿದನಂತೆ, ತಮ್ಮನೊಡನೆ ಕಾಡಿಗೆ ಬರಲು ಮನದಲ್ಲಿ ಭಯವೇ ಇಲ್ಲವಂತೆ, ಕೆಟ್ಟಕನಸಿನ ರಾತ್ರಿಯನ್ನು ಕಳೆಯುವ ಸುಂದರವಾದ ಬೆಳಗಿನಂಥವನು. ಗುರುಗಳು,ತಪಸ್ವಿಗಳು ಮೆಚ್ಚಿದಂತ ಸನ್ಮಂಗಳ ಮೂರ್ತಿಯನ್ನು ಎಂದು ಕಾಣುವೆನೋ” ಎಂದು ಶಬರಿ ಶ್ರೀರಾಮನ ಗುಣಗಾನ ಮಾಡುತ್ತಾ ಹಾಡಿ ಹೊಗಳಿದಳು.

7. ಶಬರಿ ರಾಮನಿಗೋಸ್ಕರ ತಂದಿರುವ ಹೂ ಹಣ್ಣು ತಳಿರುಗಳನ್ನು ಉದ್ದೇಶಿಸಿ ಯಾವ ತೆರನಾಗಿ ಹಾಡುತ್ತಾಳೆ ?

ಶಬರಿ ರಾಮನಿಗೋಸ್ಕರ ಹೂವು-ಹಣ್ಣು ಹಂಪಲುಗಳನ್ನು ಹೊಂದಿಸುತ್ತ ಅವುಗಳನ್ನು ಉದ್ದೇಶಿಸಿ “ಎಲೈ ಕೆಂಪಾದ ಚಿಗುರೇ ನಿನ್ನ ಎಳೆಯತನ ಕೋಮಲತೆಯನ್ನು ಅವನು ಮುಟ್ಟದೆ ಬರಿ ಗಾಳಿಗೆ ಒಣಗಿರುವೆಯಲ್ಲ. ದುಂಬಿಗಳ ಸಮೂಹದ ವರ್ಣನೆಗೆ ಆಶ್ರಯವಾದ ಅರಳಿದ ಹೂವುಗಳು ನಿಮ್ಮ ಸುವಾಸನೆಯಿಂದ ಅವನ ಜೀವವನ್ನು ಉತ್ತೇಜಿಸದೇ ಬಾಡಿ ಹೋಗಿರುವಿರಲ್ಲವೇ ! ಅವನ ಜೀವಕ್ಕೆ ಆಹಾರವಾಗದೆ ರುಚಿ ಹದಗೆಟ್ಟು ಹುಳುವಿಗೆ ಆಸರೆಯಾದ ಎಲೆ ವನ್ಯಫಲವೇ” ಎಂಬ ತೆರನಾಗಿ ಹಾಡುತ್ತಾಳೆ.

8. ರಾಮಲಕ್ಷ್ಮಣರನ್ನು ಉಪಚಾರ ಮಾಡಿದ ಶಬರಿ ತನ್ನ ಅಂತಸ್ಸುಖವನ್ನು ತೋರಿಸಲು ಹೇಗೆ ಹಾಡುತ್ತಾಳೆ ?

ರಾಮಲಕ್ಷ್ಮಣರನ್ನು ಉಪಚಾರ ಮಾಡಿದ ಶಬರಿ ತನ್ನ ಅಂತಸ್ಸುಖವನ್ನು ತೋರಿಸಲು “ಸುಖಿ ನಾನು ಆಸೆ ತೀರಿ ಹಾಯಾಗಿರುವೆನು. ನನ್ನ ಹಂಬಲ ಅಳಿದು ಸಂತೋಷ ತುಂಬಿದೆ. ಹೊಳೆ ಕಡಲಿಗೆ ಸೇರುವ ರೀತಿಯಲ್ಲಿ , ದೋಣಿಯು ಬಂದರಿಗೆ ಬರುವ ರೀತಿಯಲ್ಲಿ, ಬಗೆಬಗೆಯ ಪಟಗಳನ್ನು ಇಳಿಸಿ ನಿಂತಂತೆ ತನ್ನ  ಮುಕ್ತಿ ಬಯಸಿ ನಿಂತಿದೆ. ನಿಮ್ಮನ್ನು ನೋಡುತ್ತಾ , ಮಾತನಾಡಿಸುತ್ತ ಸುಖವಾಗಿದ್ದೇನೆ. ನಿಮಗಾದ ತೃಪ್ತಿ , ಆನಂದದಲ್ಲಿ ನಾನು ಸುಖವಾಗಿದ್ದೇನೆ. ಇಂದು ನನ್ನ ಮನದ ಚಿಂತೆಗಳೆಲ್ಲವೂ ಕಳೆದು ನನ್ನ ಮನ ಬಹಳ ಹಗುರವಾಗಿದೆ. ಪರಲೋಕವು
ನನ್ನನ್ನು ಕರೆದುಕೊಳ್ಳಲು ತನ್ನ ಕೈಯನ್ನು ಚಾಚಿದೆ. ನಿನ್ನೆ ನಾಳೆ ಎಂಬುದೇ ನನಗಿಲ್ಲ ಈ ಆನಂದವೇ ಶಾಶ್ವತ ಎಂಬ ರೀತಿಯಲ್ಲಿ ನಾನು ಸುಖಿಯಾಗಿದ್ದೇನೆ” ಎಂದು ಹಾಡುತ್ತಾಳೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಶಬರಿಯ ಚಿಂತೆ ಹಿಂಗಿ ಹೋದ ಸಂದರ್ಭದ ಸ್ವಾರಸ್ಯವನ್ನು ವಿವರಿಸಿ

ಶಬರಿ ಶ್ರೀರಾಮನ ದರ್ಶನದ ಚಿಂತೆಯಲ್ಲಿ ಇದ್ದಾಗ ಒಂದು ದಿನ ರಾಮ ಲಕ್ಷ್ಮಣರು ಮತಂಗಾಶ್ರಮಕ್ಕೆ ಬರುತ್ತಾರೆ. ರಾಮನನ್ನು ಕಂಡು ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ ಒತ್ತಿಕೊಂಡು ತನ್ನ ಮನದ ಬಯಕೆಯಂತೆ ಹೂ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ಮಧುಪರ್ಕವನ್ನು ಸವಿಯಲು ಕೊಟ್ಟಳು. ಶಬರಿಯ ಆತಿಥ್ಯದಿಂದ ರಾಮಲಕ್ಷಣರು ಸುಪ್ರಸನ್ನರಾಗಿ ಮಂದಹಾಸ ತೋರಿದರು. ಇದನ್ನು ನೋಡಿದ ಶಬರಿ ಧನ್ಯತಾಭಾವದಿಂದ ಕೂಡಿದವಳಾದಳು. ಸುಖಿ ನಾನು ಆಸೆ ತೀರಿ ಹಾಯಾಗಿರುವೆನು. ನನ್ನ ಹಂಬಲ ಅಳಿದು ¸ಸಂತೋಷ ತುಂಬಿದೆ. ನನ್ನ ಮತ್ತು ಮುಕ್ತಿಬಯಸಿ ನಿಂತಿದೆ. ಎಂದು ಹಾಡುತ್ತಾ ನರ್ತಿಸುತ್ತಾಳೆ.

ಇದನ್ನು ಕಂಡ ರಾಮ ತಾಯಿ ನಿನ್ನ ಪ್ರೀತಿಯಲ್ಲಿ , ನಿನ್ನ ಸುಖದಲ್ಲಿ ನಾವು ಸುಖಿಗಳಾಗಿದ್ದೇವೆ. ಆನಂದ ಕಾಣುವ ಪುಣ್ಯಕ್ಕೆ ಎಂದೆದಿಗೂ ನಿನಗೆ ನಾವು ಚಿರಋಣಿಗಳಾಗಿದ್ದೇವೆ ಎಂದಾಗ ಶಬರಿ. ರಾಮ ನನಗೆ ಬಹಳ ಸಂತೋಷವಾಯಿತು. ಕೊನೆಗೂ ನನ್ನಾ¸  ದಾರಿ ಹಿಡಿದು ಬಂದಿರಲ್ಲವೇ, ದಣಿದು ಬಂದ ನಿಮಗೆ ಈಗ ಸಮಾಧಾನವಾಯಿತಾ ? ಹಸಿವು – ಬಾಯಾರಿಕೆ ನೀಗಿತಾ ? ಅಯ್ಯೋ ಇವಳು ಬಡವಳು ಒಬ್ಬಳೇ ಏನು
ಮಾಡುತ್ತಾಳೆ ಎಂದು ನನ್ನ ಮೇಲೆ ದಯೆ ತೋರಿದಿರಾ ? ಎಂದಾಗ ತಾಯಿ ನಿಮ್ಮ ಆತಿಥ್ಯದಲ್ಲಿ ಸ್ವಲ್ಪವೂ ಕೊರತೆ ಕಾಣಲಿಲ್ಲ. ನಮ್ಮ ಅಯೋಧ್ಯೆಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು ಮನೆಯೆಂದೇ ತಿಳಿದೆಯ . ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೆ ತಿಳಿದೆವು. ಎಂದು ರಾಮ ಶಬರಿಗೆ ಹೇಳಿದಾಗ ಶಬರಿ“ ನಿನ್ನ ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ !” ನಾನು ಇಂದು. ಮತಂಗ ತಪಸ್ವಿಗಳ ನೀಡಿದ ವರ ಇಂದು ನನಗೆ ಸಲ ನೀಡಿದೆ. ನಿಮ್ಮನ್ನು ಕಂಡ ಪುಣ್ಯವಂತೆ ನಾನು. ಚಿಂತೆಯೆಲ್ಲ ಹಿಂಗಿ ಹೋಯಿತು ಎನ್ನುತ್ತಾಳೆ.

2) ಶಬರಿಯ ಸಡಗರ ,ಸಂತೋಷ ಮೇಳದವರ ಹಾಡಿನಲ್ಲಿ ಹೇಗೆ ವರ್ಣಿತವಾಗಿದೆ ?

ರಾಮಲಕ್ಷ್ಮಣರ ಬಂದು ತನ್ನ ಮುಂದೆ ನಿಂತಿರುವದನ್ನು ಕಂಡು ಶಬರಿ ಬೆರಗಾದಳು. ಬೆರಗು ಕಳೆದ ಮೇಲೆ ರಾಮನ ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ ಪಾದಕ್ಕೆ ಬಿದ್ದಳು. ಕೈಯನ್ನು ಕಣ್ಣಿಗೆ  ಒತ್ತಿಕೊಂಡು ಆನಂದದ ಕಣ್ಣೀರನ್ನು ಸುರಿಸಿದಳು. ಬನ್ನಿರಿ ಎಂದು ಗದ್ಗದಿಸುತ್ತಾ ಅಯ್ಯೋ ಏನೂ ಸಿದ್ಧವೇ ಇಲ್ಲ. ನಿನ್ನೆಯಷ್ಟು ಚೆಂದವಿಲ್ಲ ಎನ್ನುತ್ತ ಬಹಳ ಹಂಬಲಿಸಿದಳು.ತನ್ನ ಮನದ ಬಯಕೆಯಂತೆ ಬಗೆ ಬಗೆಯ ಸುವಾಸನೆಯನ್ನು ಬೀರುವ ಕಾಡಿನ ಹೂವುಗಳಿಂದ ಮಾಡಿದ ಮಾಲೆಯನ್ನು ರಾಮನ ಕೊರಳಿಗೆ ಹಾಕಿ ಸಂಭ್ರಮಿಸಿದಳು. ತಾನು ತಂದಿದ್ದ ರುಚಿಯಾದ ಹಣ್ಣುಗಳನ್ನು ತಾನೆ ರಾಮಲಕ್ಷ್ಮಣರ ಕೈಯೊಳಗೆ ಇಟ್ಟು ಜಗದೊಳಗೆ ಇದದ್ದಷ್ಟು  ರುಚಿಯಾದ ಹಣ್ಣು ಯಾವುದು ಇಲ್ಲ , ನಿಮಗಾಗಿ  ತಂದಿರುವೆನು ಎಂದು ತಿನ್ನಲು ಹೇಳಿದಳು. ಮಧುಪರ್ಕವನ್ನು ಸವಿಯಲು ಕೊಟ್ಟಳು. ಶಬರಿಯ ಆತಿಥ್ಯದಿಂದ ರಾಜಕುಮಾರರಾದ ರಾಮಲಕ್ಷ್ಮಣರು ಸುಪ್ರಸನ್ನರಾಗಿ ಮಂದಹಾಸ ತೋರಿದರು.ಇದನ್ನು ನೋಡಿದ ಶಬರಿ ಧನ್ಯತಾಭಾವದಿಂದ ಕೂಡಿದವಳಾದಳು. ಹೀಗೆ ಶಬರಿಯ ಸಡಗರ,ಸಂತೋಷ ಮೇಳದವರು ಹಾಡಿನಲ್ಲಿ ವರ್ಣಿಸುತ್ತಾರೆ.

3. ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ಹೇಗೆ ನಿಜವಾಗಿದೆ ?

ಶಬರಿ ಬೇಡರಾಜನ ಮಗಳು. ಆಕೆ ಮತಂಗಾಶ್ರಮದಲ್ಲಿ ಬಂದು ಇದ್ದಳು. ಮತಂಗ ಋಷಿಗಳು ಪ್ರತಿನಿತ್ಯ ದಶರಥ ಪುತ್ರನಾದ ಶ್ರೀರಾಮನ ಗುಣ ಸ್ವಭಾವಗಳನ್ನು ಹಾಡಿ ಹೊಗಳುತಿರುತ್ತಾರೆ. ಇದರಿಂದ ಶ್ರೀರಾಮನ ಗುಣ ಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು  ಕಾಣುವುದೇ ಜೀವನದ ಏಕೈಕ ಗುರಿ ಎಂಬ ಹಂಬಲದಲ್ಲಿ ಇರುತ್ತಾಳೆ. ಮತಂಗ ಋಷಿಗೆ  ಶಬರಿಯ ಮನ  ಹಂಬಲವನ್ನು ತಿಳಿದು ಇಲ್ಲಿಗೆ ಶ್ರೀರಾಮ ಬಂದೇ ಬರುತ್ತಾನೆ ಅವನ ದರ್ಶನ  ಮುಕ್ತಿ ಸಿಗುತ್ತದೆ ಎಂದು ಹೇಳಿದ್ದರು. ಅದರಂತೆ ಶಬರಿ ಮತಂಗ ಋಷಿಗಳ ಮಾತನ್ನು ನಂಬಿ ಶ್ರೀರಾಮನ ದರ್ಶನಕ್ಕಾಗಿ ಕಾಯುತ್ತಿದ್ದಳು. ಮತಂಗ ಋಷಿಗಳು ದಿವ್ಯಲೋಕವನ್ನು ¸ ಬಳಿಕ ರಾಮಧ್ಯಾನದಲ್ಲಿ ತೊಡಗಿ ರಾಮನ ದರ್ಶನಕ್ಕಾಗಿ ಕಾದಿದ್ದಳು. ಶ್ರೀರಾಮಗಾಗಿ ದಿನಾಲೂ ಹೂ-ಹಣ್ಣುಹಂಪಲುಗಳನ್ನು ತಂದು ಇಟ್ಟುಕೊಂಡು ರಾಮ ಇವತ್ತು ಬರುವನೋ ನಾಳೆ ಬರುವುನೋ ಎಂಬ ಚಿಂತೆಯಲ್ಲಿ ಇರುತ್ತಾಳೆ.ಮತಂಗರ ಮಾತಿನಂತೆ ಒಂದು ದಿನ ರಾಮಲಕ್ಷ್ಮಣರು ಮತಂಗಾಶ್ರಮಕ್ಕೆ ಬರುತ್ತಾರೆ. ಶಬರಿ ಶ್ರೀರಾಮನ ದರ್ಶನದಿಂದ ಪುಳಕಿತಳಾಗುತ್ತಾಳೆ.ತನ್ನ ಮನದ ಬಯಕೆಯಂತೆ ಹೂಮಾಲೆಯನ್ನು ಹಾಕಿ,ಹಣ್ಣು-ಹಂಪಲುಗಳನ್ನು ಕೊಟ್ಟು ತನ್ನ ಮನದ ಬಯಕೆಯನ್ನು
ಈಡೇರಿಸಿಕೊಂಡು ಧನ್ಯಳಾಗುತ್ತಾಳೆ .ಮುಕ್ತಿಯನ್ನು ಪಡೆಯುತ್ತಾಳೆ. ಹೀಗೆ ತಾಳುವಿಕೆಗಿಂತ ತಪವಿಲ್ಲ ಎನ್ನುವ ಹಾಗೆ ಶಬರಿ ಶ್ರೀರಾಮನಿಗೋಸ್ಕರ ಕಾದು ಕೆಡಲಿಲ್ಲ. ಆದ್ದರಿಂದ ನಂಬಿಕೆಟ್ಟವರಿಲ್ಲ ಎಂಬ ಮಾತು ಶಬರಿಯ ಪಾಲಿಗೆ ನಿಜವಾಗಿದೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಆವುದೀ ಮರುಳು? ನಮ್ಮೆಡೆಗೆ ಬರುತಿಹುದು.”

ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ವಾಕ್ಯವನ್ನು ರಾಮನು ಲಕ್ಷ್ಮಣನಿಗೆ  ಹೇಳುತ್ತಾನೆ.ಸೀತಾಪಹರಣದನಂತರ ಶೋಕತಪ್ತರಾದ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಬರುವಾಗ ತಪಸ್ವಿ ದನು ಮಹರ್ಷಿಗಳು ಸಿಗುತ್ತಾರೆ. ಅವರು ಶಬರಿಯ ವೃತ್ತಾಂತವನ್ನು ಶಬರಿ ಇರುವ ಮತಂಗಾಶ್ರಮಕ್ಕೆ ಹೋಗಲು ಸೂಚಿಸುತ್ತಾರೆ. ಅವರ ಸೂಚನಿಯಂತೆ  ಮಾತಂಗಾಶ್ರಮವನ್ನು ಪ್ರವೇಶಿಸುವ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ (ಶಬರಿಯನ್ನು) ಕಂಡ ರಾಮನು ಅಗೋ ನೋಡು ಲಕ್ಷ್ಮಣ  “ಆವುದೀ ಮರುಳು ? ನಮ್ಮೆಡೆಗೆ ಬರುತಿಹುದು” ಇದರ ಬಯಕೆ ಏನೆಂದು ತಿಳಿಯೋಣ ಎಂದು ಲಕ್ಷö್ಮಣನಿಗೆ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ಶ್ರೀರಾಮನ ದರ್ಶನಕ್ಕಾಗಿ ಕಾದು, ಕಾತರಿಸಿ, ಹುಚ್ಚಿಯಂತೆ  ಆಗಿದ್ದ ವೃದ್ಧೆ ಶಬರಿಯನ್ನು ಕಂಡು  ರಾಮಲಕ್ಷ್ಮರರು  ಭಯಗೊಂಡದ್ದನ್ನು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ.

2. “ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ.”

ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ರಾಮನು ಲಕ್ಷ್ಮಣಗೆ ಹೇಳುತ್ತಾನೆ.ಶಬರಿ ಶ್ರೀರಾಮನಿಗೋಸ್ಕರ ತಳಿರು, ಹೂವು, ಹಣ್ಣು-ಹಂಪಲುಗಳನ್ನು ಕೊಂಡು ಬರುವಾಗ ಅವನು ತಿನ್ನದ ಈ ಅತಿಸವಿಯಾದ ಹಣ್ಣುಗಳನ್ನು ಏನು ಮಾಡಲಿ, ಈ ಮಧುಪರ್ಕವನ್ನು ನಾನು ಯಾರಿಗೆ ಕೊಡಲಿ. ನೀನು ಬರದೆ ನನಗೆ ಏನು ಸೇರುತ್ತಿಲ್ಲ ಎಂದು ಹಾಡುತ್ತಾ ರಾಮಧ್ಯಾನದಲ್ಲಿ ತೊಡಗಿದ್ದಾಳೆ. ಇದನ್ನು ಕಂಡ ಶ್ರೀರಾಮ ನನಗೋಸ್ಕರ ಇಷ್ಟೊಂದು ಹಂಬಲಿಸು ಈ ಜಟಿಲ ಶಬರಿಗೆ ತನ್ನಿಂದ ಸ್ವಲ್ಪವೂ ಉಪಕಾರವಿಲ್ಲ ಆದರೂ ಪ್ರೀತಿಯಿಂದ ನನ್ನನ್ನು ನೆನೆಯುತ್ತಿದ್ದಾಳೆ.“ನಾಚುತಿಹೆನೀ ಪೂಜ್ಯೆಯೀ ನಲುಮೆಯಿಂದ ”ಎಂದು ಲಕ್ಷ್ಮಣನಿಗೆ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :-ಶಬರಿಯು ತನ್ನನ್ನು ಪ್ರೀತಿಯಿಂದ ನೆನೆಯುತ್ತ , ಹಂಬಲಿಸುತ್ತ ಇರುವ ದೃಶ್ಯವನ್ನು ನೋಡಿ ರಾಮನು ಈ ಪೂಜ್ಯಳ ಅನುರಾಗದಿಂದ ನಾನು ನಾಚುತಿರುವೆನು ಎಂದು ಹೇಳುವುದುಸ್ವಾರಸ್ಯಪೂರ್ಣವಾಗಿದೆ.

3. “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆವುದೇ?”

ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ರಾಮನು ಶಬರಿಗೆ ಕೇಳಿದನು. ರಾಮಲಕ್ಷö್ಮಣರು ಮಾತಂಗಾಶ್ರಮವನ್ನು ಪ್ರವೇಶಿಸು  ಶಬರಿಯು “ಎಂದು ಕಾಣುವೇನೋ ರಾಮನನ್ನು ದಶರಥನ ಮಗನಂತೆ, ಸಾಧು-ಸಜ್ಜನರ ಮಿತ್ರನಂತೆ, ಗುರುಗಳು,ತಪಸ್ವಿಗಳು ಮೆಚ್ಚಿದಂತ ಸನ್ಮಂಗಳ ಮೂರ್ತಿಯನ್ನು ಎಂದು ಕಾಣುವೆನೋ” ಎಂದು ಶ್ರೀರಾಮನ ಗುಣಗಾನ ಮಾಡುತ್ತಾ ಹಾಡುತ್ತಿರುತ್ತಾಳೆ. ಇದನ್ನುನೋಡುತ್ತಾ ನಿಂತಿದ್ದ ರಾಮ ಶಬರಿಯ ಬಳಿಗೆ ಬಂದು “ತಾಯಿ, ದಾರಿಗರಿಗೆ ಬೀಡಿಲ್ಲಿ ದೊರೆವುದೇ ?”ಎಂದುಕೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- ತನಗಾಗಿ ಹಂಬಲಿಸುತ್ತಿರುವ, ಗುಣಗಾನ ಮಾಡುತ್ತಿರುವ ಶಬರಿಯನ್ನು ಕುರಿತು ರಾಮನು ಏನೂ ಅರಿಯದವನಂತೆ “ತಾಯಿ ಪ್ರಯಾಣಿಕರಿಗೆ ಇಲ್ಲಿ ಆಶ್ರಯ ಸಿಗುವುದೇ?”ಎಂದು ಕೇಳುವುದು ಸ್ವಾರಸ್ಯಪೂರ್ಣವಾಗಿದೆ.

4. “ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ !”

ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ಶಬರಿಯು ರಾಮನಿಗೆ ಹೇಳುತ್ತಾಳೆ. ಶಬರಿಯ ಆತಿಥ್ಯ ಸ್ವೀಕರಿಸಿದ ರಾಮನು “ಅಯೋಧ್ಯೆಯ ಅರಮನೆಯಲ್ಲೂ ಕೂಡ ಇದಕ್ಕಿಂತ ಹಿತವಾದದ್ದು ಇಲ್ಲ. ಇಂದು ನಾವು ಕಾಡು ಎಂಬುದನ್ನು ಮರೆತು ಮನೆಯೆಂದೇ ತಿಳಿದೆಯಾ . ಇಷ್ಟೊಂದು ಪ್ರೀತಿ ತೋರುವ ನಿನ್ನನ್ನು ತಾಯಿ ಎಂದೇ ತಿಳಿದೆವು” ಎಂದು ಶಬರಿಗೆ ಹೇಳಿದಾಗ ಶಬರಿ, “ನಿನ್ನ ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ !”. ನಾನು ಇಂದು ಧನ್ಯಳಾಗಿದ್ದೇನೆ ಎಂದು ರಾಮನಿಗೆ ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- “ರಾಮ ನಿನ್ನ ರೂಪದಂತೆ ಮಾತು ಕೂಡ ಎಷ್ಟೊಂದು ಧಾರಾಳವಾಗಿದೆ ” ಎಂದು ಹೇಳುವ ಮೂಲಕ ಶಬರಿಯು ರಾಮನ ವ್ಯಕ್ತಿತ್ವವನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸಿದ್ದಾಳೆ.

5. “ಬೆಳಕಿಗೊಲಿದವರ್ ಉರಿವ ಬತ್ತಿಯ ಕರುಕ ಕಾಣರು.”

ಆಯ್ಕೆ :-ಈ ವಾಕ್ಯವನ್ನು ಪು. ತಿ. ನರಸಿಂಹಾಚಾರ್ ಅವರು ರಚಿಸಿರುವ ‘ಶಬರಿ’ಗೀತನಾಟಕದಿಂದ ಆಯ್ದ ‘ಶಬರಿ’ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ :- ಈ ಮಾತನ್ನು ರಾಮನು , ಲಕ್ಷ್ಮಣನಿಗೆ ಹೇಳಿದ್ದಾನೆ.ರಾಮನ ದರ್ಶನ ಭಾಗ್ಯದಿಂದ ಸಂತುಷ್ಟಳಾದ ಶಬರಿಯು ಮೋಕ್ಷಕ್ಕೆ ಪ್ರಾಪ್ತಳಾದ ನಂತರ ರಾಮನು  .ಈಪ್ರ ಪಂಚ ಶಬರಿಯನ್ನು ಮರೆಯುವುದು ಸಾಧ್ಯವಿಲ್ಲ ಎಂದಾಗ , ಲಕ್ಷ್ಮಣ ಅಣ್ಣಾ ಶಬರಿ ಮಗುವಿನಂತೆ ಇಷ್ಟವಾದಳು. ನಮ್ಮನ್ನು ಕಡುತ್ತಲೆ ಬಹಳ ಆನಂದ ಪಟ್ಟಳು ಎಂದು ಶಬರಿಯ ಗುಣಗಾನ ಮಾಡಿದಾಗ ರಾಮ ಹೀಗೆ ಹೇಳುತ್ತಾನೆ, ಲಕ್ಷ್ಮಣ  “ಬೆಳಕಿಗೆ ಒಲಿದವರ್ ಉರಿವ ಬತ್ತಿಯ ಕರುಕ ಕಾಣರು”ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ :- “ಬೆಳಕನ್ನು ಇಷ್ಟಪಡುವವರು ಉರಿಯುವ ಬತ್ತಿಯ ಕಪ್ಪನ್ನು ನೋಡುವುದಿಲ್ಲ.” ಎಂಬ ಮಾತು ಶಬರಿಯ ರಾಮಭಕ್ತಿಯನ್ನು ಬಹು ಸ್ವಾರಸ್ಯಪೂರ್ಣವಾಗಿ ವರ್ಣಿಸುತ್ತದೆ.

ಉ) ಹೊಂದಿಸಿ ಬರೆಯಿರಿ:

ಅ ಪಟ್ಟಿಬ ಪಟ್ಟಿ    ಉತ್ತರಗಳು
1ಮತಂಗಸೀತೆಆಶ್ರಮ
2ಪು.ತಿ.ನ.ಆಶ್ರಮಮೇಲುಕೋಟೆ
3ದಶರಥಮೇಲುಕೋಟೆರಾಮ
4ಚಿತ್ರಕೂಟಪರ್ವತಪರ್ವತ
5ಭೂಮಿಜಾತೆರಾಮಸೀತೆ
ಅರಣ್ಯ

ಶಬರಿ ಪಾಠದ ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1.ಕನ್ನಡ ಸಂಧಿಗಳನ್ನು ಹೆಸರಿಸಿ, ಎರಡೆರಡು ಉದಾಹರಣೆಗಳನ್ನು ಬರೆಯಿರಿ.

ಕನ್ನಡ ಸಂಧಿಗಳು-1.ಲೋಪಸಂಧಿ 2.ಆಗಮಸಂಧಿ 3.ಆದೇಶಸಂಧಿ.

1.ಲೋಪಸಂಧಿ = ಊರೂರು, ಬಲ್ಲೆನೆಂದು, ಮಾತಂತು, ಸಂಪನ್ನರಾದ

2.ಆಗಮಸಂಧಿ = ಕೈಯನ್ನು, ಮಳೆಯಿಂದ, ಶಾಲೆಯಲ್ಲಿ , ಮರವನ್ನು, ಮಗುವಿಗೆ.

3.ಆದೇಶ ಸಂಧಿ = ಮಳೆಗಾಲ, ಮೈದೋರು, ಬೆಂಬತ್ತು, ಕಡುವೆಳ್ಪು, ಮೆಲ್ವಾತು.

2.ಸಂಸ್ಕೃತ ಸಂಧಿಗಳ ಹೆಸರುಗಳನ್ನು ಸ್ವರ ಮತ್ತು ವ್ಯಂಜನ ಸಂಧಿಗಳಿಗಾಗಿ ವಿಂಗಡಿಸಿ ಬರೆಯಿರಿ.

ಸಂಸ್ಕೃತ ಸ್ವರ ಸಂಧಿಗಳು: 1.ಸವರ್ಣದೀರ್ಘ ಸಂಧಿ   2.ಗುಣಸಂಧಿ   3.ವೃದ್ಧಿ ಸಂಧಿ   4.ಯಣ್ ಸಂಧಿ

ಸಂಸ್ಕೃತ ವ್ಯಂಜನ ಸಂಧಿಗಳು: 1.ಜಾಶ್ವಸಂಧಿ    2.ಶ್ಚುತ್ವಸಂಧಿ   3.ಅನುನಾಸಿಕ¸ ಸಂಧಿ

3.ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.

ಸುರಾಸುರ, ಬಲ್ಲೆನೆಂದು, ಸೂರ್ಯೋದಯ, ಮಳೆಗಾಲ, ಅಸ್ಟೈಶರ್ಯ , ವೇದಿಯಲ್ಲಿ.

ಸುರ + ಅಸುರ = ಸುರಾಸುರ – ಸವರ್ಣದೀರ್ಘ ಸಂಧಿ
ಬಲ್ಲೆನು + ಎಂದು = ಬಲ್ಲೆನೆಂದು – ಲೋಪಸಂಧಿ
ಸೂರ್ಯ + ಉದಯ = ಸೂರ್ಯೋದಯ – ಗುಣಸಂಧಿ
ಮಳೆ + ಕಾಲ = ಮಳೆಗಾಲ – ಆದೇಶ ಸಂಧಿ
ಅಷ್ಟ + ಐಶ್ವರ್ಯ = ಅಸ್ಟೈಶರ್ಯ  – ವೃದ್ಧಿ ಸಂಧಿ
ವೇದಿ + ಅಲ್ಲಿ = ವೇದಿಯಲ್ಲಿ – ಆಗಮಸಂಧಿ

ಆ) ಮೊದಲೆರಡು ಪದಗಳಿಗಿರುವ ಸಂಬಂಧಿಸಿದಂತೆ  ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ.

1. ನಮೋ ನಮೋ : ದ್ವಿರುಕ್ತಿ : : ಧೀರ ಶೂರ : ಜೋಡುನುಡಿ

2. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : ವ್ಯಂಜನ ಸಂಧಿ

3. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು : ಮೊದಲು ಮೊದಲು

4. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : ಜಶ್ವಸಂದಿ

FAQ :

1. ಶಬರಿ ಯಾರಿಗಾಗಿ ಕಾದಿದ್ದಳು ?

ಶಬರಿ ಶ್ರೀರಾಮನಿಗಾಗಿ ಕಾದಿದ್ದಳು.

2. ಭೂಮಿಜಾತೆ ಎಂದರೆ ಯಾರು ?

ಭೂಮಿಜಾತೆ ಎಂದರೆ ಸೀತೆ.

3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.

ಇತರೆ ವಿಷಯಗಳು :

10th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ ಡೌನ್ಲೋಡ್ ಮಾಡಬಹುದು

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

3 thoughts on “10th Kannada Shabari Lesson Notes | 10ನೇ ತರಗತಿ ಶಬರಿ ಕನ್ನಡ ನೋಟ್ಸ್

Leave a Reply

Your email address will not be published. Required fields are marked *

rtgh