ಪ್ರಥಮ ಪಿ.ಯು.ಸಿ ಪ್ರಾಚೀನ ನಾಗರಿಕತೆಗಳ ಇತಿಹಾಸ ನೋಟ್ಸ್‌ | 1st Puc History Chapter 3 Notes Question Answer

ಪ್ರಥಮ ಪಿ.ಯು.ಸಿ ಪ್ರಾಚೀನ ನಾಗರಿಕತೆಗಳ ಇತಿಹಾಸ ನೋಟ್ಸ್‌ ಪ್ರಶ್ನೋತ್ತರ, 1st Puc History Chapter 3 Notes Question Answer Prachina Nagarikategala Itihasa Notes Kseeb Solution For Class 11 Chapter 3 Notes in Kannada Medium ಪ್ರಾಚೀನ ನಾಗರಿಕತೆಗಳ ಇತಿಹಾಸ Notes in Kannada Prachina Nagarikategala Itihasa Kannada Notes Karnataka State Syllabus 2024

 

1st Puc History 3rd Lesson Notes Question Answer

1st Puc History 3rd Lesson

I. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ .

1. ವಿಶ್ವದ ಬೃಹತ್ ಪಿರಮಿಡ್ ಯಾವುದು ?

ಗೀಝಾ ಪಿರಮಿಡ್

2. ಮೆಸೊಪೊಟೋಮಿಯಾದ ಅರ್ಥವೇನು ?

ಎರಡು ನದಿಗಳ ನಡುವಿನ ಪ್ರದೇಶ

3. ತೂಗುವ ಉದ್ಯಾನವನ ನಿರ್ಮಿಸಿದವರು ಯಾರು ?

ನೆಬುಖಡ್ನೇಜರ್

4. ಜಗ್ಗುರಾತ್ ಎಂದರೇನು ?

ಎತ್ತರದ ಶಿಖರಗಳುಳ್ಳ ದೇವಾಲಯವನ್ನು ‘ ಜಗ್ಗುರಾತ್ ‘ ಎನ್ನುವರು .


5. ಚೀನಾದ ಪ್ರಸಿದ್ಧ ದೊರೆ ಯಾರು ?

‘ ಷಿ ಹೂವಾಂಗ್‌ಟಿಯು

6. ಯಾವ ನದಿಯ ದಂಡೆಯ ಮೇಲೆ ಈಜಿಪ್ಟ್ ನಾಗರಿಕತೆ ಬೆಳವಣಿಗೆಯಾಯಿತು ?

ನೈಲ್ ನದಿ ದಂಡೆಯ ಮೇಲೆ

7. ಈಜಿಪ್ತಿಯನ್ನರ ಲಿಪಿಯನ್ನು ಏನೆಂದು ಕರೆಯುತ್ತಾರೆ ?

‘ ಹೈರೋಗ್ಲಿಫ್ ‘

8 . ವಿಶ್ವದ ಪ್ರಥಮ ಸಾಮ್ರಜ್ಞೆಯಾರು ?

ಹತ್ತೆಪ್ಪುಟ್

9. ಈಜಿಪ್ತಿಯನ್ನರು ತಮ್ಮ ರಾಜರ ಮೃತದೇಹವನ್ನು ಏಕೆ ಸಂರಕ್ಷಿಸಿಡುತ್ತಿದ್ದರು ?

ಆತಗಳ ಮರು ಆಗಮನದಲ್ಲಿ ನಂಬಿಕೆಯಿಟ್ಟಿದ್ದುದೇ ಅಲ್ಲದೆ , ಪುನರ್‌ಜನ್ಮದಲ್ಲಿಯೂ ವಿಶ್ವಾಸವಿದ್ದುದರಿಂದ ಶವಗಳನ್ನು ಮಮ್ಮಿಗಳಲ್ಲಿ ಸಂರಕ್ಷಿಸಿಡುತ್ತಿದ್ದರು .

10 , ತಾವೋ ಸಿದ್ಧಾಂತವನ್ನು ಯಾರು ಪ್ರತಿಪಾದಿಸಿದರು ?

ಲಾವೋತ್ಸೆ

11. ಬೌದ್ಧ ಧರ್ಮವನ್ನು ಚೀನಾದಲ್ಲಿ ಜನಪ್ರಿಯಗೊಳಿಸಿದವರು ಯಾರು?

ಭಾರತದ ಬೌದ್ಧ ಭಿಕ್ಷುಗಳು ಹಾಗೂ ವ್ಯಾಪಾರಸ್ಥರು

1st Puc History 3rd Lesson Notes Kannada Medium

II. ಕೆಳಗಿನವುಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ

1. ಈಜಿಪ್ಟ್‌ ನ ಯಾವುದಾದರೂ ಎರಡು ದೇವಾನುದೇವತೆಗಳನ್ನು ಹೆಸರಿಸಿ

1 ) ಅಮುನ್‌ರಾ – ದೇವರ ದೇವನಾಗಿದ್ದನು .

2 ) ಇಸಿಸ್ – ಮಾತೃತ್ವದ ದೇವತೆ

3 ) ರಾ ಸೂರ್ಯ ದೇವತೆ

4 ) ಓಸಿರಿಸ್ – ಪಾತಾಳದ ಹಾಗೂ ಮೃತ್ಯುದೇವತೆಯಾಗಿದ್ದನು .

2. ಮೆಸೊಪೊಟೇಮಿಯಾವನ್ನು “ ನಾಗರಿಕತೆಯ ತೊಟ್ಟಿಲು ಮತ್ತು ಸಮಾಧಿ ” ಎಂದು ಏಕೆ ಕರೆಯಲಾಗಿದೆ?

* ಯುಫ್ರಿಟಿಸ್ ಮತ್ತು ಟೈಗ್ರಿಸ್ ಈ ಎರಡು ನದಿಗಳ ನಡುವೆ ಮೆಸೊಪೊಟೋಮಿಯ ನಾಗರಿಕತೆಯು ಬೆಳೆಯಿತು . ಈ ಎರಡು ನದಿಗಳು ಫಲವತ್ತಾದ ಮೈದಾನವನ್ನು ರೂಪಿಸಿವೆ . ಆರಂಭಿಕ ವ್ಯವಸಾಯಗಾರರು ಹಳ್ಳಿಗಳಲ್ಲಿ ನೆಲೆಸಿ . ಜನಸಂಖ್ಯೆಯ ಬೆಳವಣಿಗೆಯೊಂದಿಗೆ ಈ ಹಳ್ಳಿಗಳೇ ಪಟ್ಟಣಗಳಾಗಿ ನಂತರ ನಗರಗಳಾಗಿ ಅಭಿವೃದ್ಧಿ ಹೊಂದಿದವು .ವಧಿಯಲ್ಲಿ ಅನೇಕ ನಾಗರೀಕತೆಗಳು ಬೆಳೆದು ಅಳಿದವು . ಆದ್ದರಿಂದ ಮೆಸೊಪೊಟೋಮಿಯಾವನ್ನು “ ನಾಗರಿಕತೆ ತೊಟ್ಟಿಲು ಮತ್ತು ಸಮಾಧಿ ” ಎಂದು ಕರೆಯಲಾಗಿದೆ . ‌

3. ಮೆಸೊಪೊಟೇಮಿಯಾ ನಾಗರಿಕತೆಯ ಅವನತಿಗೆ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ .

ಎರಡು ಸುಮಾರ ಮೆಸೊಪೊಟೋಮಿಯಾ ನಾಗರಿಕತೆಯ ಅವನತಿಗೆ ಕಾರಣಗಳೆಂದರೆ

1 ) ಅಶಕ್ತ ಮತ್ತು ಅಸಮರ್ಥ ದೊರೆಗಳು : ಅನೇಕ ಬಾರಿ ಆಡಳಿತದ ಮೇಲಿ ಹಿಡಿತವನ್ನು ಕಳೆದುಕೊಂಡರು . ಇದು ಅವನತಿಗೆ ಕಾರಣವಾಯಿತು .

2 ) ರಾಜ ಮತ್ತು ಸರದಾರರಲ್ಲಿ ಉತ್ತರಾಧಿಕಾರಕ್ಕೆ ನಡೆದ ಹೋರಾಟಗಳು ಸಮಾ ಶಾಂತಿ , ಸುವ್ಯವಸ್ಥೆಯನ್ನು ಕದಡಿದವು . ಇದರಿಂದ ಇದು ಅವನತಿ ಹೊಂದಿತು .

4. ನಾಗರಿಕತೆಗಳು ಬೆಳಹಾಯಕವಾದ ಯಾವುದಾದರೂ ಎರಡ ಶೋಧನೆಗಳನ್ನು ತಿಳಿಸಿ .

ಪ್ರಾಣಿಗಳ ಸಾಕಣೆ , ಹೊಸ ಶಸ್ , ಉಪಕರಣಗಳು , ಮೀನಿನ ಬಲೆ , ಬೆಂಕಿಯ ಉಪಯೋಗ ಮುಂತಾದವುಗಳು , ಸಂಶೋಧನೆಗಳು ಹಾಗೂ ವೃತ್ರಕತೆ ಎಂಬುದು ಹೆಚ್ಚು ಪಕ್ವವಾದ ಮತ್ತು ಸಂಸ್ಕರಿಸಿದ ಜೀವನ ನಾಗರಿಕತೆ

5. ನದಿ ಕಣಿವೆಗಳನ್ನು ನಾಗರಿಕತೆಗಳ ತೊಟ್ಟಿಲು ‘ ಎಂದು ಏಕೆ ಕರೆಲಾಗಿದೆ ?

ವಿಶಾಲ ಮತ್ತು ಸಮತಟ್ಟನೈಲ್ ನದಿಯು ಆಫ್ರಿಕಾದ ದಟ್ಟವಾದ ಭೂಮಧ್ಯ ಆವೃತ್ತದ ಕಾಡುಗಳಲ್ಲಿ ಹುಟ್ಟುತ್ತದೆ . ವರ್ಷವಿಡೀ ತುಂಬಿ ಹರಿಯುತ್ತದೆ ನೈಲ್ ನದಿಯು ಇಲ್ಲದೇ ಹೋಗಿದ್ದರೆ ಈಜಿಪ್ಟ್ನ ನಾಗರಿಕತೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ . ಆದ್ದರಿಂದ ಈಜಿಪ್ಟ್‌ ನ್ನು ನೈಲ್ ನದಿಯ ವರಪ್ರಸಾದ ” ಎಂದು ಕರೆಯುತ್ತೇವೆ .

6. “ ಈಜಿಪ್ಟ್ ನ್ನು ನೈಲ್‌ನದಿಯ ವರಪ್ರಸಾದ ‘ ಎಂದು ಏಕೆ ಕರೆಯಲಾಗಿದೆ ?

ಈಜಿಪ್ಟ್ ನಲ್ಲಿ ಉತ್ತರಾಭಿಮುಖವಾಗಿ ಹರಿಯುವ ನೈಲ್ ನದಿಯು ತನ್ನ ಇಕ್ಕೆಲಗಳಲ್ಲಿ 15-20ಕಿ.ಮೀ.ವರೆಗೆ ಅತ್ಯಂತ ಫಲವತ್ತಾದ ಬಯಲನ್ನು ನಿರ್ಮಿಸಿದೆ . ನೈಲ್ ನದಿಯಿಂದಾಗಿ ಅಲ್ಲಿನ ಜನತೆಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಮತ್ತು ಸಾಕು ಪ್ರಾಣಿಗಳಿಗೆ ಮೇವು ಮತ್ತು ನಿರಂತರ ನೀರು ಸರಬರಾಜು ಸಾಧ್ಯವಾಯಿತು . ಮಾನವನಿಗೆ ದೊರೆತ ಆಹಾರದ ಭದ್ರತೆ ತನ್ಮೂಲಕ ಸಿಕ್ಕಿ ಹೆಚ್ಚಿನ ವಿರಾಮದ ಸಮಯದಿಂದಾಗಿ ನಾಗರಿಕತೆಯು ಬೆಳವಣಿಗೆಗೆ ಸಹಾಯವಾಯಿತು . ನೈಲ್ ನದಿಯು ಆಫ್ರಿಕಾದ ದಟ್ಟವಾದ ಭೂಮಧ್ಯ ಆವೃತ್ತದ ಕಾಡುಗಳಲ್ಲಿ ಹುಟ್ಟುತ್ತದೆ . ವರ್ಷವಿಡೀ ತುಂಬಿ ಹರಿಯುತ್ತದೆ . ನೈಲ್ ನದಿಯು ಇಲ್ಲದೇ ಹೋಗಿದ್ದರೆ ಈಜಿಪ್ಟ್ನ ನಾಗರಿಕತೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ . ಆದ್ದರಿಂದ ‘ ಈಜಿಪ್ತನ್ನು ನೈಲ್ ನದಿಯ ವರಪ್ರಸಾದ ” ಎಂದು ಕರೆಯುತ್ತೇವೆ .

7. ಚೀನಾ ನಾಗರಿಕತೆ ಬೆಳವಣಿಗೆಯಾದ ನದಿ ಕಣಿವೆಗಳನ್ನು ಹೆಸರಿಸಿ ,

ಉತ್ತರ ಚೀನಾದ ಹ್ವಾಂಗಹೊ ಮತ್ತು ಯಾಂಗತ್ಸೆ ಹಾಗೂ ದಕ್ಷಿಣ ಚೀನಾದ ಸಿಕಿಯಾಂಗ್ ನದಿ ಕಣಿವೆಗಳು ಚೀನಾ ನಾಗರಿಕತೆ ಬೆಳವಣಿಗೆಗೆ ಕಾರಣವಾದ ನದಿಗಳು .

8. ಚೀನಾದ ಮಹಾಗೋಡೆಯನ್ನು ನಿರ್ಮಿಸಿದವರು ಯಾರು ? ಏಕೆ ?

“ ಷಿ ಹೂವಾಂಗಟಿಯು ” ಮಂಗೋಲರ ದಾಳಿಯಿಂದ ಚೀನಾವನ್ನು ರಕ್ಷಿಸಲು ಚೀನಾದ ಮಹಾಗೋಡೆಯನ್ನು ನಿರ್ಮಿಸಿದನು .

9. ಚೀನಿಯರ ಯಾವುದಾದರೂ ಎರಡು ಪ್ರಮುಖ ವೈಜ್ಞಾನಿಕ ಶೋಧನೆಗಳನ್ನು

1 ) ಸೂಜಿ ಚಿಕಿತ್ಸೆ

2 ) ನಾವಿಕರ ದಿಕ್ಕೂಚಿ , ಭೂಕಂಪನದ ಮಾಪಕ ಚೀನಿಯರ ಪ್ರಮುಖ ವೈಜ್ಞಾನಿಕ ಶೋಧನೆಗಳು .

10. ಪ್ರಾಚೀನ ಚೀನಾದ ಯಾರಾದರೂ ಇಬ್ಬರು ತತ್ವಜ್ಞಾನಿಯನ್ನು ಹೆಸರಿಸಿ .

‘ ಲಾವೋತ್ಸೆ ‘ ಹಾಗೂ ಕನ್‌ಫ್ಯಸಿಯಸ್ ‘ ಚೀನಾದ ಪ್ರಮುಖ ತತ್ವಜ್ಞಾನಿಗಳು ,

1st Puc History 3rd Lesson Notes Pdf Download

III . ಕೆಳಗಿನವುಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

1. ನಾಗರಿಕತೆಯನ್ನು ವ್ಯಾಖ್ಯಾನಿಸಿ ಮತ್ತು ನಾಗರಿಕತೆ ಮತ್ತು ಸಂಸ್ಕೃತಿಗಳ ನಡುವಿನ ವ್ಯತ್ಯಾಸವನ್ನು ತಿಳಿಸಿ .

ನಾಗರಿಕತೆಯನ್ನು ಸಂಸ್ಕೃತಿಗೆ ‘ ಸಮಾನ ಅರ್ಥದಲ್ಲಿ ಬಳಸುತ್ತಾರೆ . ಇದರ ಇಂಗ್ಲೀಷಿನ ಸಮಾನ ಅರ್ಥ. ಸಿಎಲಿಜೇಷನ್ ‘ ಇದು ಲ್ಯಾಟಿನಿನ ಸಿವ್ಹಿಲಿಸ್‌ ಎಂಬುದರಿಂದ ‘ ಬಂದಿದೆ . ಇದರ ಅರ್ಥ ನಗರ ಅಥವಾ ನಗರರಾಜ್ಯ ಎಂದಾಗುತ್ತದೆ . ಆದರೆ ಇವು ಪರ್ಯಾಯ ಪದವಾಗಲಾರವು .

‘ ನಾವೇನು ಹೊಂದಿದ್ದೇವೆ ‘ ಎಂಬುದು ನಾಗರಿಕತೆಯಾದರೆ , ನಾವೇನಾಗಿದ್ದೇವೆ ಎಂಬುದು ಸಂಸ್ಕೃತಿ ಎನಿಸಿಕೊಳ್ಳುತ್ತದೆ . ನಾಗರಿಕತೆ ಎಂಬುದು ಭೌತಿಕ ಸಾಧನೆಗಳಿಗೆ ಸಂಬಂಧಿಸಿದ್ದಾಗಿದೆ . ಆದರೆ ಸಂಸ್ಕೃತಿ ಎಂಬುದು ವೈಚಾರಿಕ

ನಾಗರಿಕತೆಗೂ , ಸಂಸ್ಕೃತಿಗೂ ಇರುವ ವ್ಯತ್ಯಾಸವನ್ನು ಈ ರೀತಿ ಪಟ್ಟಿ ಮಾಡಬಹುದು .

ಕ್ರ. ಸಂನಾಗರಿಕತೆಸಂಸ್ಕೃತಿ
1ಬಾಹ್ಯ ಸ್ವರೂಪವುಳ್ಳದ್ದುಮಾನವನ ಅಂತರ್ಗತವಾದದ್ದು
2ಹಳ್ಳಿ , ಪಟ್ಟಣ , ನಗರ , ಕಟ್ಟಡಗಳು. ರಸ್ತೆ , ಸೇತುವೆ , ಸಾರಿಗೆ ಸಂಪರ್ಕ , ಪರಂಪರೆ ಮುಂತಾದವುಗಳನ್ನು ಒಳಗೊಂಡಿದೆ .ಕಲೆ ಸಾಹಿತ್ಯ , ಧರ್ಮ , ತತ್ವಜ್ಞಾನ ಆಹಾರ ಮತ್ತು ಉಡಿಗೆ – ತೊಡಿಗೆ ಆಚಾರ – ವಿಚಾರ , ನಂಬಿಕೆ , ಪದ್ಧತಿ ತಂತ್ರಜ್ಞಾನ ಮುಂತಾದವುಗಳನ್ನು ಒಳಗೊಂಡಿದೆ
3ಅಳತೆಗೆ ಒಳಪಟ್ಟಿದೆ .ಅಳತೆ ಮಾಡಲಾಗದು
4ನಾವು ಸಂಪಾದಿಸಿದ ಭೌತಿಕ ವಸ್ತುಗಳು , ಗಳಿಕೆಗಳು ಮತ್ತು ಸೌಲಭ್ಯಗಳನ್ನು ಬಳಸಿಕೊಂಡು ನಮ್ಮ ಜೀವನವನ್ನು ಉತ್ತಮ ಪಡಿಸುತ್ತದೆ .ಇದು ನಮ್ಮ ನಂಬಿಕೆ , ನಡತೆ , ಮತ್ತು ವಿಚಾರ ಶೈಲಿಗೆ ಸಂಬಂಧಿಸಿದ್ದಾಗಿದೆ
5ಇದು ಯಾವಾಗಲೂ ಬೆಳೆಯುತ್ತಿರುತ್ತದೆಖಚಿತವಾಗಿ ಹೇಳಲಾಗದು
6ಸಂಸ್ಕೃತಿ ಇಲ್ಲದೆ , ನಾಗರಿಕತೆ ಇರಲಾರದು .ನಾಗರಿಕತೆ ಇಲ್ಲದೆ ಸಂಸ್ಕೃತಿ ಇರಬಹುದು

2 . ನಾಗರಿಕತೆಗಳ ಬೆಳವಣಿಗೆಗೆ ಸಹಾಯಕವಾದ ಅಂಶಗಳನ್ನು ಚರ್ಚಿಸಿ :

ನಾಗರಿಕತೆಗಳ ಬೆಳವಣಿಗೆಗೆ ಸಹಾಯಕವಾದ ಅಂಶಗಳೆಂದರೆ –

1. ಪ್ರವಾಹದ ಸಮಯದಲ್ಲಿ ನದಿಗಳು ತಮ್ಮ ಇಕ್ಕೆಲಗಳಲ್ಲಿ ಸಂಚಯಿಸಿದ ಫಲವತ್ತಾದ ಮಣ್ಣು ,

2. ಕೃಷಿ ಹಾಗೂ ಗೃಹಬಳಕೆಗೆ ತಡೆರಹಿತ ಮತ್ತು ನಿರಂತರ ನೀರಿನ ಸರಬರಾಜು .

3. ಸಾಮಾನ್ಯವಾಗಿ ನದಿ ತೀರಗಳಲ್ಲಿ ಕಂಡುಬರುವ ವಾಸಯೋಗ್ಯವಾದ ವಾಯುಗುಣ ,

4. ಮಾನವನಿಗೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ಆಹಾರ ಧಾನ್ಯಗಳು , ಹಣ್ಣು ತರಕಾರಿಗಳು ಮತ್ತು ಅವನ ಪ್ರಾಣಿಗಳಿಗೆ ವಿಫುಲವಾದ ಮೇವಿನ ಲಭ್ಯತೆ ,

5. ನದಿಗಳು ಮೀನುಗಾರಿಕೆಗೆ ಅನುಕೂಲವಾಗಿವೆ .

6. ನದಿಗಳು ಆಂತರಿಕ ಜಲಮಾರ್ಗಗಳನ್ನು ಒದಗಿಸಿ ವ್ಯಾಪಾರ ಮತ್ತು ಸಂಪರ್ಕಕ್ಕೆ ಅನುವು ಮಾಡಿಕೊಟ್ಟವು .

‘ ಮನುಷ್ಯರು ರಚನಾತ್ಮಕ ಕಾರ್ಯ ಮಾಡಲು ಸಿಗುವ ಹೆಚ್ಚಿನ ವಿರಾಮದ ವೇಳೆಯೇ ನಾಗರಿಕತೆಯ ವಿಕಾಸಕ್ಕೆ ಪ್ರಮುಖ ಕಾರಣ ‘ ಎಂಬುದಾಗಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ .

3. ಈಜಿಪ್ಟ್ ನಾಗರಿಕತೆಯ ರಾಜಕೀಯ ಸ್ಥಿತಿಯನ್ನು ವಿವರಿಸಿ .

ಈಜಿಪ್ಟ್ ನಾಗರಿಕತೆಯ 3000 ವರ್ಷಗಳ ಅವಧಿಯಲ್ಲಿ 30 ರಾಜಮನೆತನಗಳು ಆಳಿವೆ . ಇವುಗಳಲ್ಲಿ ಯಾವೊಂದು ರಾಜಮನೆತನವು ಆರರಿಂದ ಏಳು ತಲೆಮಾರುಗಳಿಗೆ ಹೆಚ್ಚಿಗೆ ಬದುಕಲಿಲ್ಲ .

ಈಜಿಪ್‌ನ ರಾಜರನ್ನು “ ಫೆರೋ’ಗಳೆಂದು ಕರೆಯಲಾಗುತ್ತಿತ್ತು . ಅವರನ್ನು ದೇವರ ಪ್ರತಿನಿಧಿಗಳೆಂದು ಭಾವಿಸಲಾಗುತ್ತಿತ್ತು . ಫೆರೋ ಮೀನು ಉತ್ತರ ಮತ್ತು ದಕ್ಷಿಣದ ಈಜಿಪ್‌ಗಳನ್ನು ಸಾ.ಶಿ.ಪೂ. 3000 ರಲ್ಲಿ ಒಂದು ಗೂಡಿಸಿದನು . ಮೆಂಫಿಸ್‌ನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು . ಫೆರೋ ಸಂಸ್ಥೆಯು ಬಹಳ ಬಲಿಷ್ಠವಾಗಿತ್ತು . ಇದರಲ್ಲಿ ರಾಜಕೀಯ ಮತ್ತು ಧಾರ್ಮಿಕ ಅಧಿಕಾರಗಳೆರಡೂ ಅಡಕವಾಗಿದ್ದವು . ಬಲಿಷ್ಠವಾದ ಕೇಂದ್ರ ಸರ್ಕಾರ , ಪರಮಾಧಿಕಾರ

ಸುನಿಯಂತ್ರಿತ ಆಡಳಿತ ಮತ್ತು ಕಟ್ಟುನಿಟ್ಟಿನ ಕಾನೂನು ಪಾಲನೆ ಇವು ಈಜಿಪ್ತಿನ ರಾಜ್ಯ ವ್ಯವಸ್ಥೆಯ ಮೂಲ ಲಕ್ಷಣಗಳಾಗಿದ್ದವು . ರಾಜ ಮನೆತನಗಳ ಆಳ್ವಿಕೆಯ ಕಾಲವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು

1 ) ಹಳೆಯ ರಾಜಮನೆತನಗಳ ಕಾಲ

2 ) ಮಧ್ಯ ರಾಜಮನೆತನಗಳ ಕಾಲ

3 ) ಹೊಸ ರಾಜಮನೆತನಗಳ ಕಾಲ

1 ) ಹಳೆಯ ರಾಜಮನೆತನಗಳ ಕಾಲ : ಇದನ್ನು ಪಿರಮಿಡ್ಡುಗಳ ಕಾಲ ಎಂದು ಕರೆಯುತ್ತಾರೆ . ಈ ಕಾಲದ ಫೆರೋಗಳು ಅತ್ಯಂತ ಬಲಿಷ್ಠರಾಗಿದ್ದರು . ರಾಜರಿಗೆ

ಸಲಹೆ ನೀಡಲು ಹಿರಿಯರ ಸಭೆಯಿತ್ತು . ಫೆರೋ ವಿಝರನನ್ನು ನೇಮಿಸುತ್ತಿದ್ದ . ಆತ ಪ್ರಧಾನ ಮಂತ್ರಿಯಾಗಿದ್ದು , ಆಡಳಿತ , ನ್ಯಾಯ ಮತ್ತು ಖಜಾನೆಗಳ ಮುಖ್ಯಸ್ಥನಾಗಿದ್ದನು . ಈತನಿಗೆ ಸಹಾಯ ಮಾಡಲು ಸ್ಥಳೀಯ ಮತ್ತು ಕೇಂದ್ರಿಯ ಅಧಿಕಾರಿಗಳಿದ್ದರು . ಸ್ಥಳೀಯ ಅಧಿಕಾರಿಗಳು ತೆರಿಗೆ ಸಂಗ್ರಹಿಸುವುದರೊಂದಿಗೆ ಕಾನೂನು ಸುವ್ಯವಸ್ಥೆಯ ಪಾಲನೆ ಮಾಡುತ್ತಿದ್ದರು . ಕೇಂದ್ರಿಯ ಅಧಿಕಾರಿಗಳು ದಾಖಲೆ ಮತ್ತು ಲೆಕ್ಕಪತ್ರ ಇಡುತ್ತಿದ್ದರು .

2 ) ಮಧ್ಯರಾಜಮನೆತನಗಳ ಕಾಲ : ಇದನ್ನು ಭೂಮಾಲೀಕರ ಕಾಲವೆಂದೂ ಕರೆಯುತ್ತಾರೆ . ಈ ಅವಧಿಯಲ್ಲಿ ಜಮೀನುದಾರರು ಮತ್ತು ಸರದಾರರು ಫೆರೋಗಳಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾದರು . ಇದು ಆಂತರಿಕ ಯುದ್ಧಗಳಿಗೆ ದಾರಿ ಮಾಡಿಕೊಟ್ಟಿತು .

3 ) ಹೊಸ ರಾಜ್ಯಗಳ ಕಾಲ : ಈ ಕಾಲದಲ್ಲಿ ರಾಜರು ಬಲಿಷ್ಠವಾದ ಸೈನ್ಯವನ್ನು ಸಂಘಟಿಸಿದರು ಮತ್ತು ಬಲವಾದ ಸಾಮ್ರಾಜ್ಯವನ್ನು ಕಟ್ಟಿದರು .1 ನೇ ಥಟ್ಮೋಸನು ಹೊಸ ಪ್ರದೇಶಗಳನ್ನು ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು . ಅವನ ಮಗಳಾದ ಹತ್ಸೆಫುಟ್‌ಳು ಅವನ ಉತ್ತರಾಧಿಕಾರಿಯಾದಳು ಹಾಗೂ 21 ವರ್ಷಗಳ ಕಾಲ ಆಳ್ವಿಕೆ ಮಾಡಿದಳು . ಇವಳನ್ನು ಜಾಗತಿಕ ಇತಿಹಾಸದ ಪ್ರಥಮ ಸಾಮ್ರಾಜ್ಞೆಯೆಂದು ಗುರುತಿಸಲಾಗಿದೆ .

4 ) ಈಜಿಪ್ಟ್ ನಾಗರಿಕತೆಯ ಶಿಕ್ಷಣ ಮತ್ತು ಸಾಹಿತ್ಯದ ಬಗ್ಗೆ ಟಿಪ್ಪಣಿ ಬರೆಯಿರಿ .

ಈಜಿಪ್ಟ್ ನಾಗರಿಕತೆಯು ಶಿಕ್ಷಣಕ್ಕೆ ಹಾಗೂ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ . ಈಜಿಪ್ತಿಯನ್ನರು ಚಿತ್ರಲಿಪಿಯನ್ನು ಅಭಿವೃದ್ಧಿಪಡಿಸಿದರು . ಇವರು ಪೆಪರಸ್ ತೊಗಟೆಯನ್ನು ಬರವಣಿಗೆಗೆ ಬಳಸುತ್ತಿದ್ದರು . ಇವರ ಬರವಣಿಗೆಯನ್ನು “ ಹೈರೋಗ್ಲಿಫ್ ” ಎಂದು ಕರೆಯುತ್ತಾರೆ . ‘ ಗ್ಲಿಫ್ ‘ ಎಂದರೆ ‘ ಚಿಹ್ನೆ ‘ , ಹೈರೋಗ್ಲಿಫ್ ನೂರಾರು ಚಿಹ್ನೆಯನ್ನು ಒಳಗೊಂಡಿದೆ . ಅದರಲ್ಲಿ ಕೆಲವು ಚಿಹ್ನೆಗಳು ಪೂರ್ಣಶಬ್ದಗಳಾಗಿವೆ . ಇನ್ನುಳಿದವು ಧ್ವನಿಗಳನ್ನು ಪ್ರತಿನಿಧಿಸುತ್ತದೆ .

ಈಜಿಪ್ತಿಯನ್ನರಿಗೆ ರೇಖಾಗಣಿತ , ಪಂಚಾಂಗ , ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದ ಉತ್ತಮ ಜ್ಞಾನವಿತ್ತು . ಪ್ರಾಚೀನ ಈಜಿಪ್ತಿಯನ್ನಿನ ಬಹಳಷ್ಟು ಪಂಡಿತರು ಪುರೋಹಿತ ವರ್ಗಕ್ಕೆ ಸೇರಿದವರಾಗಿದ್ದರು . ಇವರು ತ್ರಿಕೋನ , ಆಯತ , ಚೌಕ , ವೃತ್ತ ಮತ್ತು ಷಟ್ರೋನಗಳ ವಿಸ್ತೀರ್ಣವನ್ನು ಖಚಿತವಾಗಿ ಅಳೆಯಬಲ್ಲವರಾಗಿದ್ದರು . ಈಜಿಪ್ತಿಯನ್ನರಿಗೆ ಸಂಕಲನ , ವ್ಯವಕಲನ ಮತ್ತು ಭಾಗಾಕಾರದ ಅರಿವು ಸ್ಪಷ್ಟವಾಗಿತ್ತು . ಆದರೆ ಅವರಿಗೆ ಗುಣಾಕಾರದ ತಿಳುವಳಿಕೆ ಇರಲಿಲ್ಲ .

ಆದರೆ ದಶಮಾಂಶವನ್ನು ಅಭಿವೃದ್ಧಿ ಪಡಿಸಿದವರಲ್ಲಿ ಮೊದಲಿಗರಾಗಿದ್ದಾರೆ . ಅವರಿಗೆ ಗ್ರಹ ಮತ್ತು ನಕ್ಷತ್ರಗಳಲ್ಲಿನ ಅಂತರವು ಸ್ಪಷ್ಟವಾಗಿ ತಿಳಿದಿತ್ತು . ಇವರ ಪಂಚಾಂಗವು ಸೂರನನ್ನು ಆಧರಿಸಿತ್ತು ಮತ್ತು ಅದನ್ನು ಸೌರ ಪಂಚಾಂಗ ಎನ್ನುತ್ತಾರೆ . 365 ದಿನಗಳ ಪಂಚಾಂಗವನ್ನು ಅಭಿವೃದ್ಧಿಪಡಿಸಿದ್ದರು . ಇದರಲ್ಲಿ ವರ್ಷ ಒಂದಕ್ಕೆ 12 ತಿಂಗಳು ಮತ್ತು ಪ್ರತಿ ತಿಂಗಳಲ್ಲಿ 30 ದಿನಗಳಿದ್ದವು . ಈಜಿಪ್ತಿಯನ್ನರು ವರ್ಷವೊಂದನ್ನು 4 ತಿಂಗಳುಗಳ 3 ಕಾಲಗಳಾಗಿ ವಿಂಗಡಿಸಿದ್ದರು . ಅವರ ಪ್ರಕಾರ –

* ನೈಲ್ ನದಿಯ ಮಹಾಪೂರದ ಏರಿಕೆ ಮತ್ತು ಇಳಿಕೆ ಮೊದಲ ಕಾಲವಾಗಿತ್ತು .

* ಭೂಉಳುಮೆ ಮಾಡಿ ಬಿತ್ತಿ ಬೆಳೆಯುವುದು ಎರಡನೆ ಕಾಲವಾಗಿತ್ತು .

*ಸುಗ್ಗಿಯ ಸಮಯವು ಮೂರನೇ ಕಾಲವಾಗಿತ್ತು .

ಸಾ.ಶಿ.ಪೂ. 1500 ರ ಸುಮಾರಿಗೆ ಇವರು ನೆರಳಿನ ಗಡಿಯಾರವನ್ನು ಕಂಡು ಹಿಡಿದಿದ್ದರು . ಅಂಥಹದ್ದೊಂದು ನೆರಳಿನ ಗಡಿಯಾರವನ್ನು ಬರ್ಲಿನ್ ಸಂಗ್ರಹಾಲಯದಲ್ಲಿ ಸಂರಕ್ಷಿಸಿಡಲಾಗಿದೆ . ಪುರೋಹಿತರು ಜನರಿಗೆ ಶಿಕ್ಷಣ ನೀಡುತ್ತಿದ್ದರು . ಮಗುವಿಗೆ 5 ವರ್ಷವಾದಾಗ ಗುರುವಿನ ಬಳಿ ಕಳುಹಿಸುತ್ತಿದ್ದರು . 12 ವರ್ಷ ಶಿಕ್ಷಣವನ್ನು ನೀಡುತ್ತಿದ್ದರು . ದೇವಾಲಯಗಳು ಶಿಕ್ಷಣದ ಕೇಂದ್ರಗಳಾಗಿದ್ದವು . ಸರ್ಕಾರಿ ಅಧಿಕಾರಿಗಳು ಉಚ್ಛ ಶಿಕ್ಷಣವನ್ನು ನೀಡುತ್ತಿದ್ದರು . ಶಿಕ್ಷಣವು ಸರ್ಕಾರದ ನಿಯಂತ್ರಣದಲ್ಲಿತ್ತು .

ಈಜಿಪ್ತನ್ನರ ಕಾಲದ ಹಲವಾರು ಪುಸ್ತಕಗಳು ದೊರೆತಿವೆ . “ ದ ಬುಕ್ ಆಫ್ ದಿ ಡೆಡ್ ” , “ ಕಾಫಿನ್ ಟೆಕ್ಸ್ ‘ , ‘ ದಿ ಸ್ಟೋರಿ ಆಫ್ ದಿ ಶಿಪ್ ರೆಡ್ ಸೇಲರ್ ‘ , ‘ ದಿ ಟೇಲ್ ಆಫ್ ಅನುಪು ಮತ್ತು ಬಿಟೂ ‘ , ಮುಂತಾದ ಪುಸ್ತಕಗಳು ದೊರಕಿವೆ .

5 ) ಈಜಿಪ್ಟ್ ನಾಗರಿಕತೆಯ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ವಿವರಣೆ ಕೊಡಿ .

ಈಜಿಪ್ಟಿಯನ್ನರು ಮಹಾನ್ ನಿರ್ಮಾಣಕಾರರಾಗಿದ್ದರು . ಅವರ ಕಲೆ ಮತ್ತು ವಾಸ್ತುಶಿಲ್ಪವು ಅವರ ಸಂಸ್ಕೃತಿಯ ಪ್ರತಿಬಿಂಬವಾಗಿದೆ . ಇವರ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಾಕ್ಷಿ ಎಂಬಂತೆ ಹಲವಾರು ವರ್ಷಗಳಿಂದ ನಿಸರ್ಗದ ಹೊಡೆತವನ್ನು ಸಹಿಸಿ ಉಳಿದುಕೊಂಡಿದೆ . ಪಿರಮಿಡ್ಡುಗಳು ಈಜಿಪ್ತಿಯನ್ನರ ಕಲೆ ವಾಸ್ತುಶಿಲ್ಪಕ್ಕೆ ಪ್ರಮುಖ ಸಾಕ್ಷಿಯಾಗಿದೆ . ರಾಜರು ಸತ್ತಾಗ ಹೂಳಲು ಪಿರಮಿಡ್ಡುಗಳನ್ನು ನಿರ್ಮಿಸುತ್ತಿದ್ದರು . ಪಿರಮಿಡ್ಡುಗಳ ಗೋಡೆಗಳ ಮೇಲೆ ಸುಂದರ ಮೂರ್ತಿಗಳನ್ನು ಕೆತ್ತಿದ್ದಾರೆ .
ಉದಾಹರಣೆಗೆ : ಗೀಝಾ ‘ ಪಿರಮಿಡ್ ಸಾಮ್ರಾಟ್ ಖುಘುವಿನ ಗೋರಿಯಾಗಿದೆ . ಇದು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ . ಇದು ಜಗತ್ತಿನಲ್ಲಿಯೇ ಅತ್ಯಂತ ಬೃಹತ್ತಾದ ಕಟ್ಟಡವಾಗಿದೆ . ಇದನ್ನು ಆತನ ಮಗ ಮತ್ತು ಮೊಮ್ಮಗ ಕಟ್ಟಿಸಿದರು . ಇದು 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ . ಇದನ್ನು 10 ಲಕ್ಷ ಜನಕೆಲಸಗಾರರು 20 ವರ್ಷಗಳ ಶ್ರಮದಿಂದ ಕಟ್ಟಿ ಮುಗಿಸಿದ್ದಾರೆ . 4000 ವರ್ಷಗಳ ನಂತರವೂ ಇದು ಸುಭದ್ರವಾಗಿ ನಿಂತಿದೆ .

‘ ಸ್ಪಿಂಕ್ ‘ ಇವರ ವಾಸ್ತುಶಿಲ್ಪಕ್ಕೆ ಮತ್ತೊಂದು ಉದಾಹರಣೆ . ಇದು ಮನುಷ್ಯನ ಶಿರ ಮತ್ತು ಸಿಂಹದ ಶರೀರ ಹೊಂದಿದೆ . ಇದನ್ನು ಖಾದ್ರೆ ಎಂಬ ಸಾಮ್ರಾಟ ಕೆತ್ತಿಸಿದ . ಇದು ಏಕಶಿಲೆಯಿಂದ ಕೆತ್ತಲಾಗಿದೆ . 240 ಅಡಿ ಉದ್ದ 66 ಅತಿ ಎತ್ತರವಾಗಿದೆ .

ಲಕ್ಸೂರ್ ದೇವಾಲಯವು ಇದು ವೈಭವ ಪೂರಿತವಾದ ಪ್ರವೇಶದ್ವಾರವನ್ನು ಹೊಂದಿತ್ತು . ಹಬ್ಬದ ದಿನಗಳಲ್ಲಿ ದೇವರ ಮೂರ್ತಿಗಳನ್ನು ಮೆರವಣಿಗೆ ಮಾಡುತ್ತಾ ಈ ಮಹಾದ್ವಾರದಿಂದ ದೇವಾಲಯದಲ್ಲಿ ಕೊಂಡೊಯ್ಯಲಾಗುತ್ತಿತ್ತು . ಈಜಿಪ್ತಿಯನ್ನರ ಕಲೆ ವಾಸ್ತುಶಿಲ್ಪ ಇಂದಿಗೂ ಅಮರವಾಗಿದೆ . ‌

6 ) ಹಮ್ಮುರಾಬಿಯ ಕಾನೂನು ಸಂಹಿತೆಯ ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ .

‘ ಹಮ್ಮುರಾಬಿ ‘ ಬೆಬಿಲೋನಿಯಾದ ರಾಜನಾಗಿದ್ದನು ಸುಮೇರನ್ನು ವಶಪಡಿಸಿಕೊಂಡು ಸಾ.ಶಿ.ಪೂ .2123 ರಿಂದ 2081 ರ ಅವಧಿಯಲ್ಲಿ ಆಳಿದನು . ಈತನು ಮೆಸೊಪೊಟೋಮಿಯಾದ ಅತ್ಯಂತ ಪ್ರಸಿದ್ಧ ದೊರೆ ಬಹುದೊಡ್ಡ ಸಾಮ್ರಾಜ್ಯವಾದಿ ಹಾಗೂ ಸಮರ್ಥ ಆಡಳಿತಗಾನಾಗಿದ್ದನು . ಈತನು ತನ್ನ ಕಾಲದಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಕಾನೂನುಗಳನ್ನು ಸಂಗ್ರಹಿಸಿದನು . ಅವುಗಳನ್ನು ವಿಂಗಡಿಸಿ ಮತ್ತು ಇನ್ನಷ್ಟು ಸುಧಾರಿಸಿದನು . ಅಲ್ಲದೆ ಅವುಗಳಿಗೆ ಇನ್ನಷ್ಟು ಕಾನೂನುಗಳನ್ನು ಸೇರಿಸಿದನು . ಇವುಗಳಿಗೆ ಸಂಖ್ಯೆಯನ್ನು ನೀಡಿದನು . ಇವನ ಕಾನೂನು ಸಂಹಿತೆಯಲ್ಲಿ 282 ಕಾನೂನುಗಳಿವೆ . ಈ ಕಾನೂನುಗಳು ವೈಯಕ್ತಿಕ ಆಸ್ತಿ , ವಾಣಿಜ್ಯ ವ್ಯಾಪಾರ , ಅಪಘಾತಗಳು , ಕಾರ್ಮಿಕರು , ಗುಲಾಮರು , ಮದುವೆ , ವಿವಾಹ – ವಿಚ್ಛೇದನ , ಸ್ತ್ರೀಪುರುಷರ ಅಧಿಕಾರಿಗಳು ಮುಂತಾದ ಜೀವನದ ಎಲ್ಲ ಅಂಶಗಳನ್ನು ಒಳಗೊಂಡಿದೆ .

ಈ ಕಾನೂನುಗಳು ಸಂಪೂರ್ಣ ನ್ಯಾಯ ಒದಗಿಸುವುದು ರಾಜ್ಯದ ಜವಾಬ್ದಾರಿ ಎಂಬ ತತ್ವವನ್ನಾಧರಿಸಿದ್ದವು . ಈತನು ರೂಪಿಸಿದ ಕಾನೂನು ಒಂದು ಸಾಧನೆಯಾಗಿದ್ದು , ಇತಿಹಾಸದಲ್ಲಿ ಅಮರನನ್ನಾಗಿಸಿದೆ .

7 ) ಮೆಸೊಪೊಟೋಮಿಯಾದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಕುರಿತು ಬರೆಯಿರಿ .

ಮೆಸೊಪೊಟೋಮಿಯಾದ ಸಾಮಾಜಿಕ ಮತ್ತು ಆರ್ಥಿಕಸ್ಥಿತಿ ಮಾದರಿಯಾಗಿತ್ತು . ಇವರ ಸಮಜವು ನಾಲ್ಕು ವರ್ಗಗಳಲ್ಲಿ ವಿಭಜಿತವಾಗಿತ್ತು .

1 ) ಅರಸರು , ಆಳುವವರ ವರ್ಗ

2 ) ಮರೋಹಿತರ ವರ್ಗ

3 ) ಜಮೀನ್ದಾರರು ಮತ್ತು ವ್ಯಾಪಾರಸ್ಥರು

4 ) ಗುಲಾಮರು

ಪುರೋಹಿತರಿಗೆ ಸಮಾಜದಲ್ಲಿ ಉನ್ನತ ಸ್ಥಾನವಿತ್ತು . ಸರದಾರರು ಅನುವಂಶೀಯವಾಗಿ ಅಧಿಕಾರ ಅನುಭವಿಸುತ್ತಿದ್ದರು . ಆಡಳಿತ ಮತ್ತು ಸೈನ್ಯದಲ್ಲಿ ಹೆಚ್ಚಿನ ಮರ್ಯಾದೆಯನ್ನು ಹೊಂದಿದ್ದರು ಹಾಗೂ ಅಧಿಕಾರವನ್ನು ಚಲಾಯಿಸುತ್ತಿದ್ದರು . ರೈತರು , ಕಲಾವಿದರು , ಕುಶಲಕರ್ಮಿಗಳು , ಚಿಕ್ಕ ವ್ಯಾಪಾರಸ್ಥರು , 3 ನೇ ವರ್ಗದವರಾಗಿದ್ದು , ಗುಲಾಮರು ಅತ್ಯಂತ ಕೆಳವರ್ಗದವರಾಗಿದ್ದರು . ಮಹಿಳೆಯರಿಗೆ ಗಮನಾರ್ಹ ಸ್ವಾತಂತ್ರ್ಯವಿತ್ತು.

ಇವರಿಗೆ ಎಲ್ಲಾ ರೀತಿಯ ಸ್ವಾತಂತ್ರ್ಯವಿತ್ತು . ಕೃಷಿ ಇವರ ಮುಖ್ಯ ಉದ್ಯೋಗವಾಗಿತ್ತು . ಪ್ರಾಣಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಹತ್ವ ಪಡೆದಿತ್ತು . ಅವರು ಎಮ್ಮೆ , ಆಡು , ಕುರಿ , ಕುದುರೆ , ಕತ್ತೆ ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು . ನೀರೆತ್ತುವ ಏತವನ್ನು ಮೆಸೊಪೋಟೋಮಿಯನ್ನರೇ ಕಂಡು ಹಿಡಿದಿದ್ದಾರೆ ಎಂದು ಹೇಳಲಾಗಿದೆ .

ಗೋಧಿ , ಬಾರ್ಲಿ , ಹಣ್ಣುಗಳು ಮತ್ತು ಖರ್ಜೂರಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದರು ಹಾಗೂ ರಫ್ತು ಮಾಡುತ್ತಿದ್ದರು . ಮೊದಲಿಗೆ ವ್ಯಾಪಾರವು ವಸ್ತು ವಿನಿಮಯವನ್ನು ಆಧರಿಸಿತ್ತು . ಲೋಹದ ನಾಣ್ಯ ಬಳಸುತ್ತಿದ್ದರು . ನೇಕಾರಿಕೆ , ಬಣ್ಣ ಹಾಕುವುದು , ಪಾತ್ರೆ – ಇಟ್ಟಿಗೆ ತಯಾರಿಕೆ , ಬಣ್ಣ ಹಾಕುವುದು , ಮುಂತಾದವು . ವೃತ್ತಿಗಳಾಗಿದ್ದವು . ಇವರು ತಾಮ್ರ , ಕಬ್ಬಿಣ , ಬೆಳ್ಳಿ , ಬಂಗಾರ ಮೊದಲಾದವುಗಳನ್ನು ಬಳಸುತ್ತಿದ್ದರು . ಭಾರತ ಮತ್ತು ಈಜಿಪ್ಟ್ನೊಂದಿಗೆ ವ್ಯಾಪಾರ ಸಂಪರ್ಕವಿತ್ತು . ಕುದುರೆ ಮತ್ತು ಕತ್ತೆಗಳು ಸಾಗಾಣಿಕೆಯ ಸಾಧನಗಳಾಗಿದ್ದವು .

8 ) ಕನ್‌ ಫ್ಯೂಸಿಯಸ್ ಮತ್ತು ತತ್ವಶಾಸ್ತ್ರದ ಬಗ್ಗೆ ಒಂದು ವಿವರಣೆ ಬರೆಯಿರಿ .

ಕನ್‌ ಫ್ಯೂಸಿಯಸ್ ಚೀನಾದ ಬಹುದೊಡ್ಡ ತತ್ವಜ್ಞಾನಿ . ಈತನು ಸಾ.ಶ.ಪೂ. 571 ರಲ್ಲಿ ‘ ಊ ‘ ಪ್ರಾಂತ್ಯದಲ್ಲಿ ಜನಿಸಿದನು . ಈತ ಭಾಷಾ ಶಿಕ್ಷಕ , ಸಂಪಾದಕ , ನ್ಯಾಯಾಧೀಶ ಮತ್ತು ಮಂತ್ರಿಯಾಗಿ ಸೇವೆಸಲ್ಲಿಸಿದ್ದನು .

ಕನ್‌ ಫ್ಯೂಸಿಯಸ್ ನ ತತ್ವಜ್ಞಾನವನ್ನು ‘ ಕನ್‌ ಫ್ಯೂಸಿಯಜಿಯಂ’ಎಂದು ಕರೆಯುತ್ತಾರೆ . ಕನ್‌ ಫ್ಯೂಸಿಯಸ್ ನ ತತ್ವವು ಈ ರೀತಿ ಇದೆ – ನೀವು ಇನ್ನೊಬ್ಬರು , ನಿಮಗೇನು ಮಾಡಬಾರದೆಂದು ಬಯಸುತ್ತಿರೋ ಅದನ್ನು ಇನ್ನೊಬ್ಬರಿಗೆ ಮಾಡಬೇಡಿ . ಇದನ್ನು ಕನ್‌ ಫ್ಯೂಸಿಯಸ್ ಸುವರ್ಣ ನಿಯಮವೆಂದು ಪರಿಗಣಿಸಲ್ಪಟ್ಟಿದೆ .

ಚಾರಿತ್ರ್ಯವು ಸಮಾಜದ ಬುನಾದಿ . ಅರಿವು ಮನೆಯಿಂದಲೇ ಆರಂಭವಾಗುತ್ತದೆ .

ಶ್ರೇಷ್ಠ ಮನುಷ್ಯ ಮೊದಲು ಕಾರ್ಯ ಮಾಡುತ್ತಾನೆ ಮತ್ತು ಅದರಂತೆ ನುಡಿಯುತ್ತಾನೆ .

ಸಮಾಜದ ಒಳಿತು , ತಂದೆ – ತಾಯಂದಿರಿಗೆ ಮಕ್ಕಳು ಗಂಡನಿಗೆ ಹೆಂಡತಿಯ ವಿಧೇಯತೆ ಮತ್ತು ಗುರುಗಳಿಗೆ ಶಿಷ್ಯ ವಿಧೇಯತೆಯನ್ನು ಅವಲಂಭಿಸಿದೆ .

ಅತಿಯಾದ ತೆರಿಗೆಗಳನ್ನು ಮತ್ತು ಕಠೋರ ಶಿಕ್ಷೆಯನ್ನು ತೊಡೆದು ಹಾಕಬೇಕು . ಒಳ್ಳೆಯದು ಯಾವುದೆಂದು ತಿಳಿದು ಆಚರಿಸುವುದಕ್ಕೆ ತತ್ವದ ಮತ್ತು ಧೈರ್ಯದ ಕೊರತೆಯೇ ಕಾರಣ .

ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕೊಡಬೇಕು . ಸರ್ಕಾರವು ಅನಾಥರನ್ನು , ಮುದುಕರನ್ನು , ವಿಧವೆಯರನ್ನು ರೋಗಿ ಮತ್ತು ಅಂಗವಿಕಲರನ್ನು ರಕ್ಷಿಸಬೇಕು .

ಕುಟುಂಬದಲ್ಲಿ ನಿಷ್ಠೆ , ಪೂರ್ವಜರ ಪೂಜೆ , ಹಿರಿಯರಲ್ಲಿ ಗೌರವ ಕೊಡುವುದನ್ನು ಕಿರಿಯರು ಅನುಸರಿಸಬೇಕು .

9 ) ಚೀನಿಯರ ಕಲೆ ಮತ್ತು ವಾಸ್ತುಶಿಲ್ಪದ ಬಗ್ಗೆ ಒಂದು ವಿವರಣೆ ಬರೆಯಿರಿ .

ಚೀನಿಯರು ಅದ್ಭುತವಾದ ಚಿತ್ರಕಲೆಯನ್ನು ಅಭಿವೃದ್ಧಿ ಪಡಿಸಿದರು . ಬಟ್ಟೆ ಗೋಡೆ , ಕಾಗದ , ಮಡಕೆ ಮುಂತಾದವುಗಳ ಮೇಲೆ ಸುಂದರ ಚಿತ್ರವನ್ನು ಬಿಡಿಸುತ್ತಿದ್ದರು . ಇವರ ಮೂರ್ತಿ ಕಲೆಯು ಶ್ಲಾಘನೀಯ . ಇವರು ಕಂಚಿನಲ್ಲಿ ಪ್ರಾಣಿಗಳ ಹಾಗೂ ರಾಕ್ಷಸರ ಪ್ರತಿಮೆಗಳನ್ನು ನಿರ್ಮಿಸುತ್ತಿದ್ದರು ಈ ಕಲೆಯು “ ಶಾಂಗ್ ” ಮತ್ತು “ ” ವಂಶಗಳ ಕಾಲಕ್ಕೆ ಇನ್ನಷ್ಟು ಅಭಿವೃದ್ಧಿಯಾಯಿತು . ಮಣ್ಣು ಮತ್ತು ಗಾರೆಗಳಲ್ಲಿಯೂ ಮೂರ್ತಿಗಳನ್ನು ನಿರ್ಮಿಸುತ್ತಿದ್ದರು . ಮೊದಲನೆಯ ದೊರೆ ‘ ಕಿನ್ ‘ ದೊರೆಯ ಗಿರಿಯಲ್ಲಿ ಜೋಡಿಸಲಾದ ಸುಮಾರು 8000 ಗಾರೆ ಮೂರ್ತಿಗಳು ಜೀವಂತ ಆಕೃತಿಗಳನ್ನು ಹೋಲುತ್ತಿದ್ದು ಬಹಳಷ್ಟು ಆಕರ್ಷಕವಾಗಿವೆ . ‘ ಷಿ ಹೂವಾಂಗ್ ಟಿಯು ‘ ಮಂಗೋಲರ ದಾಳಿಯಿಂದ ಚೀನಾವನ್ನು ರಕ್ಷಿಸಲು

2380 ಕಿ.ಮೀ. ಉದ್ದದ ಮಹಾಗೋಡೆಯೊಂದನ್ನು ನಿರ್ಮಿಸಿದನು . ಇದರ ಎತ್ತರ 22 ಅಡಿ ಇದ್ದು 20 ಅಡಿ ಅಗಲವಿದೆ . ಇದು ಪ್ರಾಚೀನ ವಿಶ್ವದ ಅದ್ಭುತಗಳಲ್ಲಿ ಒಂದಾಗಿದೆ . ಪ್ರತಿ 300 ಅಡಿಗಳಿಗೊಂದರಂತೆ 400 ಅಡಿ ಎತ್ತರದ ವೀಕ್ಷಣಾ ಗೋಪುರ ಇದರ ಮತ್ತೊಂದು ವೈಶಿಷ್ಟ್ಯ .

ಇದಲ್ಲದೆ ಚೀನಿಯರು ಹಲವಾರು ಮಹಲುಗಳನ್ನು ‘ ಪಗೋಡ’ಗಳೆಂಬ ಬೌದ್ಧ ದೇವಾಲಯಗಳನ್ನು ನಿರ್ಮಿಸಿದ್ದಾರೆ . ಇವುಗಳಲ್ಲಿ ‘ ಜೈಂಟ್ ವೈಲ್ಡ್‌ಗುಡ್ ಪಗೋಡ ‘ ಜೇಡ್‌ಪಗೋಡಾ ‘ , ‘ ಪ್ಲಾಸ್ತಾ ಪಗೋಡ ‘ ಇವುಗಳಲ್ಲಿ ಪ್ರಮುಖವಾಗಿದೆ . ಪೀಕಿಂಗನ ಹೊರ ಭಾಗದಲ್ಲಿರುವ ಮಲಗಿದ ಬುದ್ಧನ ಪಗೋಡಾ ಉಲ್ಲೇಖನೀಯವಾಗಿದೆ .

10 ) ಚೀನಿಯರ ಬರವಣಿಗೆ ಮತ್ತು ಸಾಹಿತ್ಯವನ್ನು ಕುರಿತು ಒಂದು ವಿವರಣೆ ನೀಡಿ .

ಶಾಂಗ್ ವಂಶದ ಆಡಳಿತಕಾಲದಲ್ಲಿ ಚೀನಿಯರು ಬರವಣಿಗೆಯನ್ನು ಬೆಳೆಸಿಕೊಂಡರು . ಚೀನಿಯರ ಬರವಣಿಗೆ ಚಿನ್ ವಂಶದ ಆಡಳಿತ ಕಾಲದಲ್ಲಿ ನಿಬಂಧನೆಗೆ ಒಳಪಟ್ಟಿತು . ಇವರ ಲಿಪಿಯಲ್ಲಿ ಮೂಲಾಕ್ಷರಗಳಾಗಲಿ , ಕಾಗುಣಿತ , ಕ್ರಿಯಾ , ವಾಚಕಗಳಾಗಲಿ ಇಲ್ಲ . ಈ ಭಾಷೆಯ 40 ಸಾವಿರಕ್ಕಿಂತಲೂ ಹೆಚ್ಚಿನ ಗುರುತು ಅಥವಾ ಚಿಹ್ನೆಗಳನ್ನು ಒಳಗೊಂಡಿದೆ . ಚೀನಾದ ಬರವಣಿಗೆಯು ಚಿತ್ರ ಲಿಪಿಯಾಗಿ ಪ್ರಾರಂಭವಾಯಿತು . ಇವರ ಬರವಣಿಗೆಯು ಚೀನಾದ ಸಾಂಸ್ಕೃತಿಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿದೆ . ಚೀನಾದ ಲಿಪಿಯು ಜಪಾನ್ , ಕೊರಿಯಾ , ವಿಯಟ್ನಾಂ ಲಿಪಿಗಳ ಮೇಲೂ ಪ್ರಭಾವ ಬೀರಿದೆ . ಚೀನಾದ ಇತಿಹಾಸ ಬರವಣಿಗೆಯು ಜನಪ್ರಿಯವಾಗಿತ್ತು .

ಚೀನಿಯರ ಸಾಹಿತ್ಯವು ಗದ್ಯ , ಪದ್ಯ ತತ್ವಜ್ಞಾನ ಮತ್ತು ಇತಿಹಾಸವನ್ನು ಒಳಗೊಂಡಿತ್ತು . ಹಾನ್ ಮತ್ತು ಟಾಂಗ್ ಮನೆತನದ ಕಾಲದಲ್ಲಿ ಚೀನಾದ ಕಾವ್ಯವು ತನ್ನ ಉತ್ತುಂಗವನ್ನು ತಲುಪಿತು . ಹಾಗ್ ಮನೆತನದ ಕಾಲದಲ್ಲಿ ಸಾಮ್ರಾಟರ ಗ್ರಂಥಾಲಯವು 3123 ಸಂಪುಟಗಳನ್ನು ಶಾಸ್ತ್ರೀಯ ಗ್ರಂಥಗಳು 2705 ಸಂಪುಟಗಳಷ್ಟು ಕಾವ್ಯ ಗ್ರಂಥಗಳು 2568 ಸಂಪುಟಗಳಷ್ಟು ಗಣಿತ ಮತ್ತು 790 ಸಂಪುಟಗಳಷ್ಟು ಯುದ್ಧ ಸಂಬಂಧಿ ಗ್ರಂಥಗಳನ್ನು ಹೊಂದಿತ್ತು . ‘ ತೈಲಿ ಪ್ಲೇ ‘ ಎಂಬ ಚೀನಾದ ಕವಿಯು 30 ಸಂಪುಟಗಳಷ್ಟು ಕವಿತೆಗಳನ್ನು ಬರೆದಿದ್ದಾನೆ . “ ತು ಘ ‘ ಇನ್ನೊಬ್ಬ ಮಹಾನ್ ಕವಿ .

ಚೀನಿಯರು ಭೂಗೋಳ , ರೇಖಾಗಣಿತ , ಅಂಕಗಣಿತ , ಪಂಚಾಂಗ , ಖಗೋಳಶಾಸ್ತ್ರ ಮುಂತಾದ ಜ್ಞಾನದ ಶಾಖೆಗಳನ್ನು ಅಭಿವೃದ್ಧಿಪಡಿಸಿದರು . ಅವರು ಗ್ರಹಣಗಳ ಆಗುವಿಕೆ ಊಹಿಸಬಲ್ಲವರಾಗಿದ್ದರು .

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1. ಈಜಿಪ್ಟ್ ನಾಗರಿಕತೆಯ ಕೊಡುಗೆಗಳನ್ನು ವಿವರಿಸಿ .

ಬಹುಶಃ ಜಗತ್ತಿನ ಮೊದಲ ನಾಗರಿಕತೆ ಈಜಿಪ್ಟ್ ದೇಶದ ನೈಲ್‌ನದಿಯ ತೀರದಲ್ಲಿ ಬೆಳೆಯಿತು . ಈಜಿಪ್ಟ್ , ಆಫ್ರಿಕಾ ಖಂಡದಲ್ಲಿದ್ದು ಏಷ್ಯಾ ಹಾಗೂ ಯೂರೋಪ್‌ಗಳೊಂದಿಗೆ ಭೌಗೋಳಿಕ ನಿಕಟತೆಯನ್ನು ಹೊಂದಿದೆ .

ಈಜಿಪ್ಟ್ ನಾಗರಿಕತೆಯು ಜಗತ್ತಿನಲ್ಲಿ ದೀರ್ಘಕಾಲ ಬಾಳಿದ ಹಾಗೂ ಶ್ರೀಮಂತ ನಾಗರಿಕತೆಗಳಲ್ಲಿ ಒಂದಾಗಿದೆ . ಇವರ ಕೊಡುಗೆ ಅಪಾರ ಇವರ ರಾಜಕೀಯ ಹಾಗೂ ಸಾಮಾಜಿಕ ಆರ್ಥಿಕ ಸ್ಥಿತಿಗಳು ಇಂದಿಗೂ ಅನುಕರಣೀಯ ಹಾಗೂ ಉತ್ತಮ ಮಾರ್ಗದರ್ಶನ , ಇನ್ನು ಈಜಿಪ್ತಿನರು ಕಲೆ , ವಾಸ್ತುಶಿಲ್ಪ , ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಸ್ಮರಣೀಯ .

ಪಿರಾಮಿಡ್ಡುಗಳು , ದೇವಾಲಯಗಳು , ಅಸಂಖ್ಯಾತ ಮೂರ್ತಿಗಳು , ಸಿಂಕ್ಸ್‌ಮೂರ್ತಿ ಶಿಲ್ಪ , ಚಿತ್ರಕಲಾಕೃತಿಗಳು , ಹಲವರು ರೀತಿಯ ಸಾಧನ ಸಲಕರಣೆಗಳು , ಆಭರಣಗಳು , ಪೈಪಿರಸ್‌ ಎಲೆಯ ಮೇಲೆ ಹೈರೋಗ್ಲಿಫಿಕ್ ಲಿಪಿಯಲ್ಲಿ ಬರೆದ ಗ್ರಂಥಗಳು , ರೊಸಟ್ಟಾ ಶಿಲಾಶಾಸನಗಳು ಇತಿಹಾಸಕ್ಕೆ ಅಪಾರ ಕೊಡುಗೆಯನ್ನು ನೀಡಿವೆ . ಮಹಿಳೆಯರಿಗೆ ಇವರು ಕೊಟ್ಟ ಸ್ಥಾನಮಾನ ಗೌರವ ಅನುಕರಣೀಯವಾಗಿದೆ . ಪಿತ್ರಾರ್ಜಿತ ಆಸ್ತಿಯಲ್ಲಿ ಸ್ತ್ರೀಯರಿಗೂ ಸಮಾನ ಹಕ್ಕಿತ್ತು . ವಿದೇಶಗಳೊಂದಿಗೆ ಇವರ ವ್ಯಾಪಾರ ಸಂಪರ್ಕ ಸಂಬಂಧಗಳು ದೇಶ – ದೇಶಗಳ ಬಾಂಧವ್ಯವನ್ನು ಭದ್ರಪಡಿಸಿದವು . ಇವರ ಧಾರ್ಮಿಕ ವಿಧಿವಿಧಾನಗಳು ಬಹುಶಃ ಇಂದಿನವರೆವಿಗೂ ಕಾಯ್ದುಕೊಂಡು ಬಂದಿದೆ . ಇವರು ಗಣಿತ , ರೇಖಾಗಣಿತ , ಖಗೋಳಶಾಸ್ತ್ರ ಮುಂತಾದವು ಇಂದಿಗೂ ಪ್ರಚಲಿತವಾಗಿದೆ . ಈಜಿಪ್ಟಿನ ಪಿರಮಿಡ್ಡುಗಳು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿದೆ . ಹೀಗೆ ಈಜಿಪ್ಟ್ ನಾಗರಿಕತೆಯ ಕತೆ ಅಪಾರವಾಗಿದೆ .

2 ) ಮೆಸೊಪೊಟೋಮಿಯಾದ ನಾಗರಿಕತೆಯ ಕೊಡುಗೆಗಳೇನು ?

ಮೆಸೊಪೊಟೋಮಿಯಾದ ನಾಗರಿಕತೆಯು ಸಾ.ಶಿ.ಪೂ. 4000 ದಿಂದ 3000 ದ ಮಧ್ಯದಲ್ಲಿ ಪ್ರಾರಂಭವಾಯಿತೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ . 5 ಜನಾಂಗಗಳು ನಾಗರಿಕತೆಯನ್ನು ಬೆಳೆಸಿ ಉಳಿಸಿದವು .

ಸುಮೇರಿಯನ್ನರು ಮೊಸೊಪೊಟೋನಿಯಾದ ಹರಿಕಾರರು . ಸುಮ

ಅಥವಾ ಬೆಬಿಲೋನಿಯನ್ನರು ನಾಗರಿಕತೆಯನ್ನು ಬೆಳೆಸಿದವರಾಗಿದ್ದಾರೆ . ಪ್ರಖ್ಯಾತನಾದ ದೊರೆ ಹಮ್ಮುರಾಬಿ , ಈತ ಸಮರ್ಥ ಆಡಳಿತಗಾರನಾಗಿದ್ದನು . ರಾಜ್ಯವನ್ನು ಜಿಲ್ಲೆಗಳಾಗಿ ವಿಂಗಡಿಸಿದನು . ಅರಮನೆ , ಕೋಟೆ , ದೇವಾಲಯಗಳನ್ನು ಕಟ್ಟಿಸಿದನು . ಹಮ್ಮುರಾಬಿಯು 282 ಕಾನೂನು ಸಂಹಿತೆ ಬಹಳ ಪ್ರಖ್ಯಾತವಾಗಿದೆ . ಕಾನೂನು ಅಮಾನವೀಯ ಶಿಕ್ಷೆಗಳ ಮಿಶ್ರಣವಾಗಿದೆ . ಅದರಲ್ಲಿಯೂ ಕಾನೂನು ಸೇಡಿಗೆ ಸೇಡು ಕಣ್ಣಿಗೆ –ಕಣ್ಣು , ಮುಯ್ಯಿಗೆ – ಮುಯ್ಯಿ ಹಲ್ಲಿಗೆ – ಹಲ್ಲು ಎಂಬುದಾಗಿತ್ತು . ಇವರ ಸಮಾಜದಲ್ಲಿ ನಾಲ್ಕು ವರ್ಗಗಳಿದ್ದವು .

1 ) ಆಳುವವರ ವರ್ಗ

2 ) ಪುರೋಹಿತರು

3 ) ಜಮೀನುದಾರರು ಮತ್ತು ವ್ಯಾಪಾರಸ್ಥರು

4 ) ಗುಲಾಮರು –

ಮೆಸೊಪೊಟೋಮಿಯನ್ನರು ಪ್ರಕೃತಿ ಪೂಜಿಯ ಆರಾಧಕರಾಗಿದ್ದರು .

ಮೊಸೊಪೊಟೋಮಿಯನ್ನರ ಮಹತ್ವದ ಕೊಡುಗೆ ಎಂದರೆ ಕೃಷಿಯಲ್ಲಿ ಸುಧಾರಣೆ , ನೀರೆತ್ತಲು ಏತವನ್ನು ಕಂಡು ಹಿಡಿದಿದ್ದು , ಎಲ್ಲಾ ಬಗೆಯ ಕಸಬುದಾರರನ್ನು ಮೊಸೊಪೊಟೋಮಿಯಾ ನಾಗರಿಕತೆಯಲ್ಲಿ ಕಾಣಬಹುದು . ಮೊಸೊಪೋಟೋಮಿಯ ನಾಗರಿಕತೆಯ ಮತ್ತೊಂದು ಕೊಡುಗೆ ಎಂದರೆ ಬ್ಯಾಬಿಲೋನಿಯಾದ ಉದ್ಯಾನವುಳ್ಳ ಅರಮನೆ , ಇದನ್ನು ತೂಗುವ ಉಯ್ಯಾಲೆ ಎಂದು ಕರೆಯಲಾಗಿದೆ .

ಸಾಹಿತ್ಯ ಕ್ಷೇತ್ರದಲ್ಲಿ ‘ ಗಿಲ್ಲುಮೇಶ ‘ ಮಹಾಕಾವ್ಯ ಇವರ ಕೊಡುಗೆಯಾಗಿದೆ . ಇದರೊಂದಿಗೆ ವಿಜ್ಞಾನ ಹಾಗೂ ಗಣಿತ ಕ್ಷೇತ್ರದಲ್ಲಿಯೂ ಹಲವಾರು ಪ್ರಯೋಗಗಳನ್ನು ಮಾಡಿ ಅದರಂತೆ ವಿಜ್ಞಾನ ಹಾಗೂ ಗಣಿತ ಕ್ಷೇತ್ರದಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ . ‘ ಮೆಟೋರಿಯಾ ಮೆಡಿಕಾ ‘ ಎಂಬ ಗ್ರಂಥದ ಮೂಲಕ ಸಸ್ಯ , ಲೋಹ , ಪ್ರಾಣಿಜನ್ಯ ವಸ್ತುಗಳಿಂದ ಸುಮಾರು 550 ಪ್ರಕಾರದ ಔಷಧಿಗಳನ್ನು ಕಂಡುಹಿಡಿದಿದ್ದಾರೆ . ಇದು ಅವರ ಅಪಾರ ಕೊಡುಗೆಗಳಲ್ಲಿ ಒಂದಾಗಿದೆ .

3 ) ಚೀನಾ ನಾಗರಿಕತೆಯ ಕೊಡುಗೆಗಳನ್ನು ವಿವರಿಸಿ .

ಚೀನಾ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿದ ದೇಶವಾಗಿದೆ . ಆರಂಭದಲ್ಲಿ ಅನೇಕ ರಾಜರಿಂದ ಆಳಲ್ಪಟ್ಟಿತು . ಕೇಂದ್ರಿಕೃತ ಆಡಳಿತವನ್ನು ಹೊಂದಿದ್ದರು . ಸಾ.ಶಿ.ಪೂ .2100 ರಿಂದ 1191 ರ ಅವಧಿಯವರೆಗೆ ಚೀನಾ ನಾಗರಿಕತೆ ಬೆಳೆದ ಉಲ್ಲೇಖಗಳು ಇವೆ .

‘ ಷಿ ಹೂವಾಂಗ್‌ಟಿಯು ‘ ಚೀನಾದ ಪ್ರಖ್ಯಾತ ದೊರೆ , ಮಂಗೋಲರ ದಾಳಿಯಿಂದ ಚೀನಾವನ್ನು ರಕ್ಷಿಸಲು 2380 ಕಿ.ಮೀ. ಉದ್ದದ ಬೃಹತ್ ಮಹಾಗೋಡೆಯೊಂದನ್ನು ನಿರ್ಮಿಸಿರುವುದು ಅವರ ನಾಗರಿಕತೆಯ ಅಭಿವೃದ್ಧಿ , ಕಲೆಗೆ ಕೊಟ್ಟ ಅಪಾರ ಕೊಡುಗೆಯಾಗಿದೆ . ವಿಶ್ವವಿಖ್ಯಾತವಾದ ಈ ಗೋಡೆ ಇಂದಿಗೂ ಸಾಕ್ಷಿಯಾಗಿದೆ . ರಸ್ತೆ , ಕಾಲುವೆಗಳ ನಿರ್ಮಾಣ ಇವರ ಮತ್ತೊಂದು ಕೊಡುಗೆಯಾಗಿದೆ . ಸಮಾಜದಲ್ಲಿ ಎಲ್ಲಾ ಬಗೆಯ ಕಸುಬುದಾರರಿದ್ದು ಅವರಿಂದ ವಿವಿಧ ಬಗೆಯ ಸಾಧನಗಳು ಅವರ ಕೊಡುಗೆಗಳಾಗಿವೆ .

ರೇಷ್ಮೆ ಚೀನಾದ ಪ್ರಮುಖ ಕೊಡುಗೆಯಾಗಿದೆ . ಭೂಮಾರ್ಗ , ಜಲಮಾರ್ಗಗಳೊಂದಿಗೆ ವಿವಿಧ ದೇಶಗಳೊಡನೆ ವ್ಯಾಪಾರ ಸಂಬಂಧವಿಟ್ಟುಕೊಂಡಿದ್ದರು . ಇದನ್ನು ರೇಷ್ಮೆ ಮಾರ್ಗ ಎಂದೇ ಕರೆಯಲಾಗುತ್ತಿದೆ . ಚೀನಿಯರ ಸಾಹಿತ್ಯ ಕೊಡುಗೆ ಎಂದರೆ ಅಪಾರ ಪುಟಗಳನ್ನು ಹೊಂದಿರುವ ಬೃಹತ್ ಗ್ರಂಥಗಳು . ಚಿತ್ರಕಲೆ , ಮೂರ್ತಿಕಲೆ , ಮಣ್ಣು ಮತ್ತು ಗಾರೆಯ ಮೂರ್ತಿಗಳೂ ಇವರ ಕೊಡುಗೆಗಳಾಗಿವೆ . ಪಗೋಡಾಗಳೆಂಬ ಬೌದ್ಧ ದೇವಾಲಯಗಳು ಚೀನಿಯರ ಮಹತ್ತರ ಕೊಡುಗೆಗಳಾಗಿವೆ . ಚೀನಿಯರ ತತ್ವಜ್ಞಾನಿಗಳಾದ ಲಾವೋತ್ಸೆ , ಕನ್‌ಸಿಯಸ್ , ಮೆನ್ಸಿಯಸ್‌ರವರ ತತ್ವಜ್ಞಾನದ ಸಂದೇಶಗಳು ಚೀನಿ ನಾಗರಿಕತೆಯ ಕೊಡುಗೆಗಳಾಗಿವೆ .

FAQ

1. ತೂಗುವ ಉದ್ಯಾನವನ ನಿರ್ಮಿಸಿದವರು ಯಾರು ?

ನೆಬುಖಡ್ನೇಜರ್

2. ವಿಶ್ವದ ಬೃಹತ್ ಪಿರಮಿಡ್ ಯಾವುದು ?

ಗೀಝಾ ಪಿರಮಿಡ್

3 . ವಿಶ್ವದ ಪ್ರಥಮ ಸಾಮ್ರಜ್ಞೆಯಾರು ?

ಹತ್ತೆಪ್ಪುಟ್

ಇತರೆ ವಿಷಯಗಳು :

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1st PUC History Notes

All Notes App

4 thoughts on “ಪ್ರಥಮ ಪಿ.ಯು.ಸಿ ಪ್ರಾಚೀನ ನಾಗರಿಕತೆಗಳ ಇತಿಹಾಸ ನೋಟ್ಸ್‌ | 1st Puc History Chapter 3 Notes Question Answer

Leave a Reply

Your email address will not be published. Required fields are marked *

rtgh