ಪ್ರಥಮ ಪಿ.ಯು.ಸಿ ಗ್ರೀಕ್‌ ಮತ್ತು ರೋಮನ್‌ ಸಾಮ್ರಾಜ್ಯಗಳ ಸ್ಥಾಪನೆ ಮತ್ತು ಕೊಡುಗೆಗಳು ಇತಿಹಾಸ ನೋಟ್ಸ್‌ | 1st Puc History Chapter 4 Notes

ಪ್ರಥಮ ಪಿ.ಯು.ಸಿ ಗ್ರೀಕ್‌ ಮತ್ತು ರೋಮನ್‌ ಸಾಮ್ರಾಜ್ಯಗಳ ಸ್ಥಾಪನೆ ಮತ್ತು ಕೊಡುಗೆಗಳು ಇತಿಹಾಸ ನೋಟ್ಸ್‌, 1st Puc History Chapter 4 Notes Question Answer 2023 Kseeb Solution For Class 11 Chapter 4 1st PUC History 4th Chapter Notes in Kannada Greek and Roman Empires Contributions Questions and Answers ರೋಮನ್ ಗಣರಾಜ್ಯಗಳು ರೋಮನ್ನರ ಕೊಡುಗೆಗಳು ಗ್ರೀಕರ ಸಾಂಸ್ಕೃತಿಕ ಕೊಡುಗೆಗಳು ಗ್ರೀಕ್ ನಾಗರಿಕತೆ ನೋಟ್ಸ್

 

1st Puc History Chapter 4 Notes

 1st Puc History Chapter 4 Notes

I. ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1 ) ಗ್ರೀಸಿನ ಯಾವ ನಗರ ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಭಿವೃದ್ಧಿಯಾಯಿತು .

ಅಥೆನ್ಸ್‌ನಲ್ಲಿ .

2 ) ಯಾರ ಕಾಲವನ್ನು ಅಥೆನ್ಸ್‌ ಸುವರ್ಣಯುಗವೆಂದು ಕರೆಯಲಾಗಿದೆ ?

ಪೆರಿಕ್ಲಿಸನ ಕಾಲವನ್ನು ಸುವರ್ಣಯುಗ ಎಂದು ಕರೆಯಲಾಗಿದೆ .

3). ಯೂರೋಪಿನ ಅತ್ಯಂತ ಪ್ರಾಚೀನ ನಾಗರಿಕತೆ ಯಾವುದು ?

ಯೂರೋಪಿನ ಅತ್ಯಂತ ಪ್ರಾಚೀನ ನಾಗರಿಕತೆ ಗ್ರೀಕ್ .

4 ) ಯಾವ ನದಿಯ ದಡದಲ್ಲಿ ಗ್ರೀಸ್ ನಾಗರಿಕತೆ ಅಭಿವೃದ್ಧಿಯಾಯಿತು ?

ಡಾನ್ಯೂಬ್ ನದಿ ದಡದಲ್ಲಿ

5 ) ‘ ಹೆಲೆನೆಸ್ ‘ ಎನ್ನುವ ಪದದ ಅರ್ಥವೇನು ?

‘ ಹೆಲೆನೆಸ್ ‘ ಎಂದರೆ ಗ್ರೀಕ್ .

6 ) ನಗರ ರಾಜ್ಯಗಳು ಯಾವ ನಾಗರಿಕತೆಯಲ್ಲಿ ಕಂಡು ಬರುತ್ತದೆ ?

ಗ್ರೀಕ್ ನಾಗರಿಕತೆಯಲ್ಲಿ ಕಂಡು ಬರುತ್ತದೆ .

7 ) ‘ ವೈದ್ಯ ವಿಜ್ಞಾನದ ಪಿತಾಮಹಾ ‘ ಎಂದು ಯಾರನ್ನು ಕರೆಯಲಾಗಿದೆ ?

ಹಿಪೋಕ್ರೆಟಿಸ್‌ನನ್ನು

8 ) ಪೆಲೋಪೋನಿಷಿಯಾದ ಯುದ್ಧಗಳು ಯಾರಾರ ನಡುವೆ ನಡೆದವು ?

ಅಥೆನ್ಸ್ ಹಾಗೂ ಸ್ಪಾರ್ಟಾ

9 ) ಪೂರುರವನನ್ನೂ ಅಲೆಕ್ಸಾಂಡರ್ ಯಾವ ಕದನದಲ್ಲಿ ಸೋಲಿಸಿದನು ?

ಹೈಡಸ್‌ಪಸ್ ಅಥವಾ ಜೇಲಂ ಕದನದಲ್ಲಿ

10 ) ಸೆಲ್ಯೂಕಸ್‌ನನ್ನು ಸೋಲಿಸಿದ ಭಾರತದ ದೊರೆ ಯಾರು ?

ಚಂದ್ರಗುಪ್ತ ಮೌರ್ಯ .

11 ) ಯೂರಿಪಿಡಿಸ್ ಯಾರು ?

ಶ್ರೇಷ್ಠ ದುರಂತ ನಾಟಕಕಾರ ,

12 ) ‘ ಪೆಲೊಪೊನಿಷಿಯನ್ ವಾರ್ಸ್ ‘ ಎಂಬ ಗ್ರಂಥದ ಕರ್ತೃ ಯಾರು ?

ಥುಸಿಡೈಡಿಸ್ .

13 ) ‘ ದ ರಿಪಬ್ಲಿಕ್ ‘ ಗ್ರಂಥವನ್ನು ಯಾರು ರಚಿಸಿದರು ?

ಪ್ಲೇಟೋ .

14 ) ಒಲಂಪಿಕ್ ಪಂದ್ಯಗಳು ಯಾವ ವರ್ಷದಲ್ಲಿ ಆರಂಭವಾದವು ?

ಸಾ.ಶಿ.ಪೂ. 776 ರಲ್ಲಿ .

1st Puc History Chapter 4 Notes Question Answer

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ಪೆರಿಕ್ಲಿಸ್‌ನ ಕಾಲದ ಯಾರಾದರೂ ಇಬ್ಬರು ದಾರ್ಶನಿಕರನ್ನು ಹೆಸರಿಸಿ .

ಸಾಕ್ರೆಟೇಸ್ ಹಾಗೂ ಪ್ಲೇಟೋ

2 ) ಪೆರಿಕ್ಲಿಸ್ ಕಾಲದ ಯಾರಾದರೂ ಇಬ್ಬರು ಪ್ರಮುಖ ಇತಿಹಾಸಕಾರರನ್ನು ತಿಳಿಸಿ .

1 ) ಹೆರೊಡೊಟಸ್

2 ) ಥುಸಿಡೈಡ್ಸ್‌

3 ) ಪರ್ಷಿಯನ್‌ರನ್ನು ಅಲೆಕ್ಸಾಂಡರ್ ಸೋಲಿಸಿದ ಯಾವುದಾದರೂ ಎರಡು ಕದನಗಳನ್ನು ಹೆಸರಿಸಿ .

1 ) ಗ್ರಾಸಿಕಸ್

2 ) ಅರಬೆಲ್

4 ) ಹೋಮರ್‌ನ ಎರಡು ಕೃತಿಗಳು ಯಾವುವು ?

1 ) ಇಲಿಯಡ್

2 ) ಒಡೆಸ್ಸಿ

5 ) ಪ್ರಾಚೀನ ಗ್ರೀಸ್‌ನ ಯಾವುದಾದರೂ ಎರಡು ನಗರ – ರಾಜ್ಯಗಳನ್ನು ಹೆಸರಿಸಿ .

1 ) ಅಥೆನ್ಸ್

2 ) ಮ್ಯಾಸಿಡೊನಿಯಾ

6 ) ಸೊಲಾನ್‌ ಪರಿಚಯಿಸಿದ ಯಾವುದಾದರೂ ಎರಡು ಸುಧಾರಣೆಗಳನ್ನು ಹೆಸರಿಸಿ

1 ) ಪ್ರಜಾಪ್ರಭುತ್ವ ತಳಹದಿಯಡಿಯಲ್ಲಿ ಸಂವಿಧಾನತ್ಮಕ ಸುಧಾರಣೆಗಳನ್ನು ತಂದನು

2 ) ಜೀತ ಪದ್ಧತಿಯನ್ನು ಕಾನೂನು ಬಾಹಿರ ಎಂದು ಘೋಷಿಸಿ ಎಲ್ಲಾ ಭೂಮಿಯನು ತಂದನು . ಒತ್ತೆಯಿಂದ ಮುಕ್ತ ಮಾಡಿದನು .

7 ) ಕ್ರೈಸ್ತನೀನಸ್‌ನ ಎರಡು ಸುಧಾರಣೆಗಳನ್ನು ತಿಳಿಸಿ .

1 ) ಬಡವರಿಗೆ ಮತ ಚಲಾಯಿಸುವ ಹಕ್ಕು ದೊರೆಯುವಂತೆ ಮಾಡಿದನು .

2 ) ಪ್ರಜಾಪ್ರಭುತ್ವದ ತಳಹದಿಯಲ್ಲಿ ರಾಜ್ಯವನ್ನು ಪುನರ್ ರಚಿಸಿದನು .

8 ) ಪ್ರಾರ್ಥನಾನ್ ದೇವಾಲಯ ಎಲ್ಲಿದೆ ? ಅದನ್ನು ಯಾರು ನಿರ್ಮಿಸಿದರು ?

ಅಥೆನ್ಸ್‌ನಲ್ಲಿದೆ . ಇದನ್ನು ದೊರೆ ಪೆರಿಕ್ಲಿಸ್ ಕಟ್ಟಿಸಿದನು . ಆನಸ್ ‘ ಎಂಬ ಇದನ್ನು ನಿರ್ಮಿಸಿದನು .

9 ) ಪೆರಿಕ್ಲಿಸ್‌ ಕಾಲದ ಯಾವುದಾದರೂ ಇಬ್ಬರು ಶ್ರೇಷ್ಟ ನಾಟಕಕಾರರನ್ನು ಹೆಸರಿಸಿ ,

1 ) ಯೂರಿಪಿಡಿಸ್

2 ) ಸೋಪೋಕ್ಲಿಸ್‌

10 ) ಗ್ರೀಕ್ ನಾಗರಿಕತೆಯ ಇಬ್ಬರು ಭಾವಗೀತೆ ಕವಿಗಳನ್ನು ಹೆಸರಿಸಿ .

1 ) ಪಿಂಡರ್‌

2 ) ಸ್ಯಾಪ್ರೊ

11 ) ಇಸ್ಕಿಲಸ್‌ನ ಎರಡು ಕೃತಿಗಳನ್ನು ತಿಳಿಸಿ .

1 ) ಪ್ರೊಮೇಥೆಸ್ ಚೌಂಡ್

2 ) ಅಗಾಮೆಮ್ಮನ್

12 ) ಸೊಫೋಕ್ಲಿಸ್ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .

1 ) ಈಡಿಪಸ್ ರೆಕ್

2 ) ಆಂಟಿಗೋನ್

13 ) ಪ್ರಾಚೀನ ಗ್ರೀಸ್‌ನ ಪ್ರಸಿದ್ಧ ಗಣಿತಶಾಸ್ತ್ರಜ್ಞರು ಯಾರು ?

1 ) ಪೈಥೋಗೋರಸ್

2 ) ಯುಕ್ಲಿಡರು .

14 ) ಪ್ರಾಚೀನಗ್ರೀಸ್‌ನ ಯಾವುದಾದರೂ ಎರಡು ವಾಸ್ತು ಶಿಲ್ಪ ಶೈಲಿಗಳನ್ನು ತಿಳಿಸಿ .

1 ) ಅಯೋನಿಯನ್

2 ) ಕೋರಿಂತಿಯನ್

15 ) ಪ್ರಾಚೀನ ಗ್ರೀಸ್‌ನ ಯಾರಾದರೂ ಇಬ್ಬರು ಪ್ರಮುಖ ದಾರ್ಶನಿಕರನ್ನು ತಿಳಿಸಿ .

1 ) ಸಾಕ್ರೆಟಿಸ್

2 ) ಪ್ಲೇಟೋ

16 ) ಪ್ಲೇಟೋನ ಎರಡು ಕೃತಿಗಳನ್ನು ತಿಳಿಸಿ

1 ) ಡಯಲಾಗ್ಸ್

2 ) ರಿಪಬ್ಲಿಕ್

17 ) ಅರಿಸ್ಟಾಟಲ್‌ನ ಎರಡು ಕೃತಿಗಳನ್ನು ತಿಳಿಸಿ .

1 ) ದ ಪೊಲಿಟಿಕ್ಸ್

2 ) ಹಿಸ್ಟರಿ ಆಫ್ ಅನಿಮಲ್ಸ್

1st Puc History 4th Chapter Notes

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ಪ್ರಾಚೀನ ಗ್ರೀಸ್ ನಗರ – ರಾಜ್ಯಗಳ ಬಗ್ಗೆ ಟಿಪ್ಪಣಿ ಬರೆಯಿರಿ .

ನಗರ ರಾಜ್ಯಗಳು , ಪ್ರಾಚೀನ ಗ್ರೀಕರ ಶ್ರೇಷ್ಟ ರಾಜಕೀಯ ಸಾಧನೆಯೆಂದರೆ ಬುಡಕಟ್ಟು ಜನಾಂಗದ ಲಕ್ಷಣಗಳು ಹಾಗೂ ಭೌಗೋಳಿಕ ಲಕ್ಷಣಗಳು , ನಗರ – ರಾಜ್ಯಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿವೆ . ಇದು ಮೂಲತಃ ಕೋಟೆಯಿಂದ ಇವುಗಳು ಕೋಟೆ , ನಗರ ಹಾಗೂ ಸುತ್ತಲಿನ ಹಳ್ಳಿಗಳನ್ನು ಒಳಗೊಂಡಿದ್ದವು . ಸಾ.ಶಿ.ಮ ಆವೃತವಾದ ಸ್ಥಳ , ನಂತರದಲ್ಲಿ ಸಾರ್ವಭೌಮ ರಾಜ್ಯ ಎಂದು ಕರೆಯಲ್ಪಡುತ್ತಿತ್ತು . 800 ರ ವೇಳೆಗೆ ಗ್ರೀಕ್ ಹಳ್ಳಿಗಳು ದೊಡ್ಡದಾದ ನಗರ – ರಾಜ್ಯಗಳಲ್ಲಿ ಸೇರತೊಡಗಿದವು . ನಗರ ರಾಜ್ಯದ ಉನ್ನತ ಭಾಗದಲ್ಲಿ ರಕ್ಷಣೆಗಾಗಿ ‘ ಮುರದುರ್ಗ ‘ ( ಅಕ್ರೋಪೋಲಿಸ್ ) ಅಥವಾ ಸಿಟಾಡೆಲ್ ‘ ಎಂಬ ರಕ್ಷಣಾ ಕೇಂದ್ರವನ್ನು ನಿರ್ಮಿಸಿದರು . ಈ ಕೇಂದ್ರದ ಸುತ್ತ ನಗರ ಬೆಳೆಯುತ್ತಿತ್ತು . ಸ್ಪಾರ್ಟಾ , ಅಥೆನ್ಸ್ , ಮ್ಯಾಸಿಡೊನಿಯಾ , ಕೊರಿಯಂತ್ ತಿಪ್ಪೆಗಳು ಮುಖ್ಯ ನಗರ ರಾಜ್ಯಗಳಾಗಿದ್ದವು , ಗ್ರೀಕ್ ನಗರ ಸರ್ವತಂತ್ರವಾಗಿದ್ದು , ಪರಸ್ಪರ ಅಸೂಯೆ ಹಾಗೂ ಅಂತಃಕಲಹಗಳಲ್ಲಿ ತೊಡಗಿದ್ದರೂ ತಾವೆಲ್ಲ ಹೆಲೆನೆಸರೆಂದು ಬಲವಾಗಿ ನಂಬಿದ್ದರು . ಗ್ರೀಕ್‌ರ ಒಗಟ್ಟಿಗೆ ಮತ್ತೊಂದು ಕಾರಣ . ಸಾಮಾನ್ಯ ಭಾಷೆ ಹಾಗೂ ಸಾಹಿತ್ಯ , ಇವಲ್ಲದೆ ಇವರು ಪೂಜಿಸುತ್ತಿದ್ದ ದೇವರುಗಳಾದ ಜೀಯಸ್ , ಅಪೋಲೋ ಹಾಗೂ ಅಥೆನಾ ಮತ್ತೊಂದು ಬಲವಾದ ಕಾರಣವಾಗಿತ್ತು .

2 ) ಅಥೆನ್ಸ್‌ನಲ್ಲಿ ಪ್ರಜಾಪ್ರಭುತ್ವದ ಬೆಳವಣಿಗೆಯ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ .

ಅಥೆನ್ಸ್‌ನಲ್ಲಿ ರಾಜಕೀಯ , ಕಾನೂನು , ಸಾಹಿತ್ಯ , ಕಲೆ ವಿಜ್ಞಾನ ಹಾಗೂ ತತ್ವಶಾಸ್ತ್ರದಲ್ಲಿ ಮಹತ್ತರ ಪ್ರಗತಿಯಾಯಿತು . ಅಥೆನ್ಸರು ರಾಜಕೀಯ ಪ್ರಯೋಗ ಪ್ರಿಯರಾಗಿದ್ದರು . ರಾಜಪ್ರಭುತ್ವ ಹಾಗೂ ಕುಲೀನ ( ಆಟಗಾರ್ತಿ ) ಪದ್ಧತಿಗಳು ಇವರ ಮನಸ್ಥಿತಿಗೆ ಹೊಂದಿಕೊಳ್ಳಲಿಲ್ಲ . ಹಾಗಾಗಿ ಇವುಗಳನ್ನು ತಿರಸ್ಕರಿಸಿದರು . ಅಂತಿಮವಾಗಿ ಇವರ ಪ್ರಬುದ್ಧ ಶಾಸನ ಕರ್ತೃಗಳಾದ , ಡ್ರಾಕೋ ಸೊಲೋನ್ ಹಾಗೂ ಕ್ರೈಸ್ತನೀಸ್ ಕೊಡುಗೆಗಳಿಂದಾಗಿ ಪ್ರಜಾಪ್ರಭುತ್ವ ಅಥೆನ್ಸ್‌ನಲ್ಲಿ ಜನ್ಮ ತಾಳಿತು , ಡ್ರಾಕೋ ಸರದಾರನಾಗಿದ್ದು , ಅಥೆನ್ಸ್‌ನಲ್ಲಿ ಲಿಖಿತ ಕಾನೂನು ಸಂಹಿತೆಯನ್ನು ನೀಡಿದನು . ಇದು ಭ್ರಷ್ಟ ನ್ಯಾಯಾದೀಶರುಗಳಿಂದ ಜನರಿಗೆ ರಕ್ಷಣೆ ನೀಡಿತು . ಬಡ ರೈತರಿಗೆ ಯಾವುದೇ ಸಹಾಯ ಆಗಲಿಲ್ಲ .

ಒಬ್ಬ ಸೋಲಾನ್ ಪ್ರಜಾಪ್ರಭುತ್ವದ ತಳಹದಿಯಡಿಯಲ್ಲಿ ಸಂವಿಧಾನತ್ಮಕ ಸುಧಾರಣೆಗಳನ್ನು ಜಾರಿಗೆ ತಂದನು . ಈತನ ಕಾನೂನುಗಳು ರೈತರನ್ನು ಮುಕ್ತಗೊಳಿಸಿತು . ಅಲ್ಲದೆ ಋಣ ಭಾರದ ಜೀತಪದ್ದತಿಯೂ ಕಾನೂನು ಬಾಹಿರ ಎಂದು ಘೋಷಿಸಿದನು . ಭೂಮಿಯನ್ನು ಒತ್ತೆಯಿಂದ ಮುಕ್ತ ಮಾಡಿದನು . ಕ್ರೈಸ್ತನಿಸ್‌ನು ಪೌರತ್ವದ ಹಕ್ಕು ಹಾಗೂ ಪುರುಷ ವಯಸ್ಕರಿಗೆ ಮತದಾನದ ಹಕ್ಕು ನೀಡುವುದರ ಮೂಲಕ ಪ್ರಭಾವಿಯಾದ ಇವನು ಆಳುವ ಕೂಟಗಳ ಅಧಿಕಾರವನ್ನು ಮೊಟಕು ಮಾಡಿದನು . ಬಡವರು ಮತ ಚಲಾಯಿಸುವ ಹಕ್ಕು ಪಡೆದರು . ಸಂವಿಧಾನವನ್ನು ವಿಸ್ತರಿಸಿದನು .

3 ) ಸಾಹಿತ್ಯಕ್ಕೆ ಗ್ರೀಕರ ಕೊಡುಗೆಗಳೇನು ?

ಸಾಹಿತ್ಯಕ್ಕೆ ಗ್ರೀಕರ ಕೊಡುಗೆ ಅಪಾರ , ಗ್ರೀಕರು ಮಹಾಕಾವ್ಯಗಳು , ಪದ್ಯ , ನಾಟಕ ಹಾಗೂ ಇತಿಹಾಸಗಳಿಗೆ ತಮ್ಮ ಅಮೂಲ್ಯ ಕೊಡುಗೆಯನ್ನು ಕೊಟ್ಟಿದ್ದಾರೆ . ಪ್ರಸಿದ್ಧ ಕವಿಯಾದ ಹೋಮರ್ , ಇಲಿಯಡ್ ಹಾಗೂ ಒಡೆಸ್ಸಿ ‘ ಎಂಬ ಎರಡು ಮಹಾಕಾವ್ಯಗಳನ್ನು ರಚಿಸಿನು . ಪಿಂಡರ್‌ ಮತ್ತು ಸ್ಯಾಷ್ಟೋ ಪ್ರಸಿದ್ದ ಭಾವಗೀತೆಗಳನ್ನು ರಚಿಸಿದ ಕವಿ ಹಾಗೂ ಕವಿಯಿತ್ರಿ , ಗ್ರೀಕರು ‘ ಲೈರ್ ‘ ಎಂಬ ಸಂಗೀತ ವಾದ್ಯದೊಂದಿಗೆ ಭಾವಗೀತೆಗಳನ್ನು ಹಾಡುತ್ತಿದ್ದರು .

ಗ್ರೀಕ್ ಸಾಹಿತ್ಯದಲ್ಲಿ ನಾಟಕ ರಚನೆ ಚಿರಪರಿಚಿತವಾದುದ್ದು ಈಗಲೂ ಏಜಿಯನ್ ಭಾಗದಲ್ಲಿ ಅಳಿದುಳಿದ ರಂಗಮಂದಿರಗಳನ್ನು ಕಾಣಬಹುದು . ನಾಟಕದ ಮೂಲ ಪುರುಷನಾದ ಈಸ್ಕಿಲಸ್‌ನು ‘ ಮೋಥಸ್ ಬೌಂಡ್ ‘ ಮತ್ತು ‘ ಅಗಾಮಮ್ಮಾನ್’ಗಳನ್ನು ರಚಿಸಿದನು . ಸೋಪೋಕ್ಲಿಸನು ದುರಂತ ನಾಟಕಕಾರದಲ್ಲಿ ಶ್ರೇಷ್ಟನಾಗಿದ್ದು ‘ ಈಡಿಪನ್ ರೆಕ್ಸ್ ‘ , ‘ ಆಂಟಿಗೋನ್ ‘ ಮತ್ತು ಎಲೆಕ್ಟ್ರಾಗಳನ್ನು ರಚಿಸಿದ್ದಾನೆ . ಈ ಕೃತಿಗಳು ಈಗಲೂ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ , ಮೂರನೇ ಶ್ರೇಷ್ಟ ದುರಂತ ನಾಟಕಕಾರನಾದ ಯೂಡಿಪಿಡಿಸನು ‘ ಟ್ರೋಜನ್ ವಿಮನ್ ನ್ನು ರಚಿಸಿದ್ದಾನೆ . ಈ ಕಾಲದ ಅತ್ಯಂತ ಪ್ರಸಿದ್ಧ ಕವಿ ‘ ಆರಿಸ್ಟೋಫಿನಿಸ್ . ಇತಿಹಾಸ ಪಿತಾಮಹಾ ಹೆರೋಡೋಟಿಸನು ಪ್ರಖ್ಯಾತ ಇತಿಹಾಸಕಾರನಾಗಿದ್ದನು , ಮತ್ತೊಬ್ಬ ಇತಿಹಾಸಕಾರ ಧುಸಿಡೈಟ್ ಈತನು ಫೆಲೋಫಿನಿಷಯನ್ ವಾರ್ಸ ಎಂಬ ಕೃತಿಯನ್ನು ರಚಿಸಿದ್ದಾನೆ . ಪ್ರೊಟಾಕ್ – ಮತ್ತೊಬ್ಬ ಇತಿಹಾಸಕಾರ . ಈತನು ಆತ್ಮ ಚರಿತ್ರೆಗಳಿಗೆ ಹೆಸರಾಗಿದ್ದಾನೆ . ವೈದ್ಯ ಆಫ್ ಇಲ್ಲಸ್ಟ್ರಿಯಸ್ ಮೆನ್ ಇವನ ಪ್ರಸಿದ್ಧ ಕೃತಿ ಡೆಮಾಸ್ತೀನೀಸ್ ಒಳ್ಳೆಯ ವಾಗ್ನಿಯಾಗಿದ್ದನು .

4 ) ಪೆರಿಕ್ಲಿಸ್‌ನ ಯುಗವನ್ನು ಸುವರ್ಣಯುಗವೆಂದು ಕರೆಯಲು ಕಾರಣವೇನು ?

ಅಥೆನ್ಸ್‌ನ ಪ್ರಜಾಪ್ರಭುತ್ವ ಪೆರಿಕ್ಲಿಸ್‌ನ ನಾಯಕತ್ವದಲ್ಲಿ ಉಚ್ಛಾಯ ಸ್ಥಿತಿಗೇರಿತು . ರಾಜಕೀಯದಲ್ಲಿ ತೀವ್ರ ಸುಧಾರಣೆ ಹಾಗೂ ಬದಲಾವಣೆ ತರುವಲ್ಲಿ ಅಗ್ರಗಣ್ಯನಾಗಿದ್ದನು . ಶಾಸನ ಸಭೆಯಲ್ಲಿ ಅಥೆನ್ಸ್‌ನ ಎಲ್ಲಾ ಜನತೆ ಸೇರಿ ಚರ್ಚಿಸುವ ಮೂಲಕ ಕಾನೂನುಗಳನ್ನು ಜಾರಿಗೆ ತರುತ್ತಿದ್ದರು .

ಪೆರಿಕ್ಲಿಸ್‌ನ ಮತ್ತೊಂದು ಮುಖ್ಯ ಸುಧಾರಣೆ ಎಂದರೆ ಜ್ಯೂರಿ ಪದ್ಧತಿ , ಪ್ರತಿ ವರ್ಷವು ಸುಮಾರು 5000 ನ್ಯಾಯದರ್ಶಿಗಳನ್ನು ಒಂದು ವರ್ಷದ ಅವಧಿಗಾಗಿ ಚುನಾಯಿಸಲಾಗುತ್ತಿತ್ತು . ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಈತ ಪ್ರತಿ ಬಡ ಪ್ರಜೆಯೂ ರಾಜಕೀಯ ವಿಚಾರಗಳಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದನು . ಇದನ್ನು ಇಂದು ‘ ಪ್ರತ್ಯಕ್ಷ ಪ್ರಜಾಪ್ರಭುತ್ವ ಎಂದು ಕರೆಯುತ್ತೇವೆ . ಪರ್ಷಿಯನ್ ಯುದ್ಧದಲ್ಲಿ ನಾಶವಾಗಿದ್ದ ಅಥೆನ್ಸ್‌ನ್ನು ಪುನರ್ ನಿರ್ಮಿಸಿದನು . ಸಂಗೀತಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟನು .

ಪೆರಿಕ್ಲಿಸ್‌ನ ಅವಧಿ ಸಾಹಿತ್ಯ ಅದರಲ್ಲೂ ಗ್ರೀಕ್ ನಾಟಕಗಳ ಸುವರ್ಣಯುಗವಾಗಿತ್ತು . ತತ್ವಜ್ಞಾನಿಗಳಾದ ಸಾಕ್ರೆಟಿಸ್ , ಪ್ಲೇಟೋ ವಿಶೇಷ ಸ್ಥಾನ ಪಡೆದಿದ್ದರು . ಈಸ್ಕಲಸ್ , ಸೋಪೋಕ್ಲಿಸ್ , ಈಡಿಪಸನಂತಹ ನಾಟಕಕಾರರು ನಾಟಕಗಳನ್ನು ರಚಿಸಿದರು . ಇತಿಹಾಸದ ಪಿತಾಮಹ , ಹೆರೋಡೋಟಿಸ್ ಹಾಗೂ ಥುಸಿಡೈಡ್ ಅಂತಹ ಇತಿಹಾಸಕಾರರು , ವೈದ್ಯಕೀಯ ಶಾಸ್ತ್ರದ ಪಿತಾಮಹ ಹಿಪೋಕ್ರೆಟಿಸ್ , ಕವಿಗಳಾದ ಸ್ಯಾಪ್ ಮತ್ತು ಪಿಂಡರ್ ಇವರುಗಳು ವಿಶೇಷ ಸ್ಥಾನ – ಮಾನ ಪಡೆದಿದ್ದರು . ಅಂತೆಯೇ ಪೆರಿಕ್ಲಸ್‌ನ ಅಧಿಕಾರಾವಧಿಯನ್ನು ಸುವರ್ಣಯುಗ ಎನ್ನುವರು .

5 ) ವಿಜ್ಞಾನಕ್ಕೆ ಗ್ರೀಕರ ಕೊಡುಗೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ .

ಗ್ರೀಕರ ಕಾಲದಲ್ಲಿ ವಿಜ್ಞಾನ ಸಾಕಷ್ಟು ಬೆಳವಣಿಗೆ ಕಂಡಿತು . ವಿಜ್ಞಾನದ ಅಧ್ಯಯನ ಆರಂಭಕ್ಕೆ ಗ್ರೀಕ್ ತತ್ವಜ್ಞಾನಿಗಳು ಉತ್ತೇಜನ ನೀಡಿದರು , ನೈಸರ್ಗಿಕ ವಿಜ್ಞಾನದ ಅಧ್ಯಯನಕ್ಕೆ ಅಡಿಗಲ್ಲು ಹಾಕಿದವನೆಂದರೆ ಅರಿಸ್ಟಾಟಲ್ . ಅರಿಸ್ಟಾಟಲ್‌ನ ವಿದ್ಯಾರ್ಥಿಯಾದ ಥಿಯೋಫೆಸ್ಟಾಸ್ ಸಸ್ಯಶಾಸ್ತ್ರವನ್ನು ಗುರುತಿಸಲ್ಪಟ್ಟ , ವಿಜ್ಞಾನವಾಗಿ ನೆಲಗೊಳಿಸಿದನು . ಪೆರಿಕ್ಲಿಯನ್ ಯುಗ ಮಹಾಪುರುಷರ ಉಗಮಕ್ಕೆ ಸಾಕ್ಷಿಯಾಯಿತು , ಹಿಪೋಕ್ರೆಟಿಸ್ ಆಧುನಿಕ ವೈದ್ಯಶಾಸ್ತ್ರಕ್ಕೆ ಅಡಿಪಾಯ ಹಾಕಿದನು , ವೈದ್ಯಶಾಸ್ತ್ರದ ಪಿತಾಮಹಾನೆಂದು ಕರೆಯಲ್ಪಟ್ಟಿದ್ದಾನೆ , ಹೆರೋಫಿಲಸ್‌ನನ್ನು ಅಂಗರಚನಾಶಾಸ್ತ್ರದ ಪಿತಾಮಹಾ ಎಂದು ಕರೆಯಲಾಗಿದೆ . “ ಟಾಲೆಮಿ ಸೌರಮಂಡಲಕ್ಕೆ ಭೂಮಿಯು ಕೇಂದ್ರ ಎಂದು ನಂಬಿದ್ದ , ಆದರೆ ಭೂಮಿ ಮತ್ತು ಇತರೆ ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತವೆ ಎಂಬುದನ್ನು ಅರಿಸ್ಟಾಟಲ್ ಮಂಡಿಸಿದ ಇರಾಟೋಸ್ತನೀಸ್ ಭೂಮಿಯ ಸುತ್ತಳತೆಯನ್ನು ಅಂದಾಜಿಸಿದನು . ಆರ್ಕಿಮಿಡಿಸ್ ಸಹ ಒಬ್ಬ ಪ್ರಸಿದ್ಧ ಗ್ರೀಕ್ ವಿಜ್ಞಾನಿ .

6 ) ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗ್ರೀಕರ ಕೊಡುಗೆಗಳೇನು ?

ಆರಂಭದಲ್ಲಿ ಗ್ರೀಕರು ದೇವಾಲಯಗಳನ್ನು ಮರವನ್ನು ಬಳಸಿ ನಿರ್ಮಿಸುತ್ತಿದ್ದರು . ಅನಂತರದಲ್ಲಿ ಸುಟ್ಟ ಇಟ್ಟಿಗೆ ಮತ್ತು ಅಮೃತಶಿಲೆಗಳನ್ನು ಬಳಸಿ ಕಟ್ಟಲಾರಂಭಿಸಿದರು . ಗ್ರೀಕ್ ವಾಸ್ತು ಶಿಲ್ಪದಲ್ಲಿ ಮೂರು ಶೈಲಿಗಳಿದ್ದವು . ಡೊರಿಕ್ , ಅಯೋನಿಯನ್ , ಕೋರಿಂತಿಯನ್ , ಬಣ್ಣದ ಅಮೃತಶಿಲೆಯಿಂದ ಪೆರಿಕ್ಲಿಸನು ಅಥೆನ್ಸನಲ್ಲಿ ಪಾರ್ಥೆನಾನ್ ದೇವಾಲಯವನ್ನು ಕಟ್ಟಿಸಿದನು . ಆಕ್ಸಿನಸ್ ಎಂಬ ಪ್ರಸಿದ್ದ ಶಿಲ್ಪಿ ಇದನ್ನು ನಿರ್ಮಿಸಿದನು . ದೇವಾಲಯದ ಒಳಗೆ ಫಿಡಿಯಾಸ್ ಕೆತ್ತಿರುವ ಅಮೃತಶಿಲೆಯ ಎತ್ತರವಾದ ಅಥೆನಾ ದೇವತೆಯ ವಿಗ್ರಹವಿದೆ . ಈ ದೇವಾಲಯವು ಅತ್ಯಂತ ಸುಂದರವಾಗಿದ್ದು 46 ಡೋರಿಕ್ ಕಂಬಗಳನ್ನು ಹೊಂದಿದೆ . ಗ್ರೀಕರು ಹೂದಾನಿಗಳ ಮೇಲೆ ಚಿತ್ರ ಬಿಡಿಸಿ ಬಣ್ಣ ಹಾಕುವುದರಲ್ಲಿ ನಿಪುಣರಾಗಿದ್ದರು , ಭಾರತದಲ್ಲಿ ಗಾಂಧಾರ ಕಲೆ ‘ ಗ್ರೀಕರ ಪ್ರಭಾವದಿಂದ ಉದಯಿಸಿತು .

7 ) ಪ್ರಾಚೀನ ಗ್ರೀಸ್‌ನ ಧರ್ಮವನ್ನು ವಿವರಿಸಿ .

ವಿಶ್ವದ ಬೇರೆ ಜನರಿಗಿಂತ ಇವರ ಧಾರ್ಮಿಕ ನಂಬಿಕೆ , ಸಂಪ್ರದಾಯ ವಿಭಿನ್ನವಾಗಿತ್ತು . ದೇವರಲ್ಲಿ ಇವರಿಗೆ ನಂಬಿಕೆ ಇರಲಿಲ್ಲ . ಆದರೆ ಶಕ್ತಿಶಾಲಿ ಮತ್ತು ಸುರದ್ರೂಪಿ ಪುರುಷರನ್ನು ವೈಭವೀಕರಿಸುತ್ತಿದ್ದರು . 12 ಒಲಿಂಪಿಯನ್‌ಗಳು ಗ್ರೀಕರ ದೇವರುಗಳು , ಇವರಲ್ಲಿ ಮೂವರು ಪ್ರಮುಖರಾಗಿದ್ದರು . ಅವರೆಂದರೆ ಜಿಯಾಸ್ , ಅಪೋಲೋ ಹಾಗೂ ಅಥೆನಾ , ಜಿಯಾಸ್ ದೇವತೆಗಳ ಒಡೆಯ ಹಾಗೂ ಮಾನವರ ಜನಕ , ಅಪೋಲೋ ಜಿಯಸ್‌ನ ಮಗ , ಅಥೆನಾ ನಗರಗಳ ರಕ್ಷಕಿಯಾಗಿದ್ದಳು . ಒಲಂಪಸ್ ಪರ್ವತ ಇವರ ಅವಾಸ ಸ್ಥಾನವಾಗಿತ್ತು .

ಇವರು ಭೂಮಿಗೆ ಆಗಾಗ ಬರುತ್ತಿದ್ದರೆಂಬ ನಂಬಿಕೆ ಗ್ರೀಕರಲ್ಲಿತ್ತು . ಗೀಕರಿಗೆ ಅನ್ಯ ಧರ್ಮಿಯರಂತೆ ಯಾವುದೇ ಚರ್ಚೆಗಳಾಗಲೀ ಗ್ರಂಥವಾಗಲಿ ಇರಲಿಲ್ಲ . ಸಾ.ಶಿ.ಪೂ .776 ರಲ್ಲಿಯೇ ಪ್ರಸಿದ್ಧ ಒಲಂಪಿಯಾ ಹಬ್ಬದಾಚಾರಣೆ ಇವರಲ್ಲಿ ರೂಢಿಯಲ್ಲಿತ್ತು . ದಿವ್ಯವಾಣಿ ಬೋಧಕರನ್ನು ಗ್ರೀಕರು ವಿಶೇಷವಾಗಿ ಭವಿಷ್ಯವನ್ನು ತಿಳಿಯಲು , ತೀರ್ಮಾನಗಳನ್ನು ಪಡೆಯಲು ಬರ್ಕೆಲ್‌ರ ಸಹಾಯವನ್ನು ಪಡೆಯುತ್ತಿದ್ದರು . ಡೆಲ್ಲಿಯ ಅಪೋಲೋ ಒಬ್ಬ ಪ್ರಸಿದ್ಧನಾದ ಒರೆಕಲ್

IV . ಕೆಳಗಿನವುಗಳಿಗೆ 30 -40 ವಾಕ್ಯದಲ್ಲಿ ಉತ್ತರಿಸಿರಿ :

1 ) ಪೆರಿಕ್ಲಿಸ್‌ನ ಸಾಧನೆಗಳನ್ನು ವಿವರಿಸಿ .

ಪೆರಿಕ್ಲಿಸ್ ಅಥೆನ್ಸ್ ಪ್ರಜಾಪ್ರಭುತ್ವದ ಪ್ರಖ್ಯಾತ ದೊರೆಯಾಗಿದ್ದನು . ಈತನು ರಾಜಕೀಯದಲ್ಲಿ ತೀವ್ರ ಸುಧಾರಣೆ ಹಾಗೂ ಬದಲಾವಣೆ ತರುವಲ್ಲಿ ಅಗ್ರಗಣ್ಯನಾಗಿದ್ದನು . ಮಂಡಳಿಗೆ ರಾಜಕೀಯ ಅಧಿಕಾರ ವರ್ಗಾಯಿಸುವ ಮೂಲಕ ಶಾಸನ ಸಭೆಯ ಸುಧಾರಣೆಗೆ ಮುಂದಾದನು . ಈ ಶಾಸನ ಸಭೆಯಲ್ಲಿ ಅಥನ್ಸ್ ಎಲ್ಲಾ ಜನತೆ ಸೇರಿ ಚರ್ಚಿಸುವ ಮೂಲಕ ಕಾನೂನುಗಳನ್ನು ಜಾರಿಗೆ ತರುತ್ತಿದ್ದರು . ಶಾಸನ ಸಭೆಯಿಂದ 10 ಜನರ ಮಂಡಳಿಯ ಜನರಲ್‌ಗಳು , ಆಯ್ಕೆಯಾಗುತ್ತಿದ್ದರು . ಈ ಮಂಡಳಿಗೆ ವರ್ಷಗಳ ಕಾಲ ಪೆರಿಕ್ಲಿಸ್ ಅಧ್ಯಕ್ಷನಾಗಿದ್ದನು . ಈ ಜನರಲ್‌ಗಳು ಶಾಸನಸಭೆಗೆ ಜವಾಬ್ದಾರಾಗಿದ್ದರು ಆದುದರಿಂದ ಅವರು ನಿರಂಕುಶ ಪ್ರಭುಗಳಾಗಲು ಸಾಧ್ಯವಾಗುತ್ತಿರಲಿಲ್ಲ .

ಪೆರಿಕ್ಲಿಸ್‌ನ ಇನ್ನೊಂದು ಮುಖ್ಯ ಸುಧಾರಣೆ ಎಂದರೆ ಜ್ಯೂರಿ ಪದ್ಧತಿ , ಪ್ರತಿ ವರ್ಷ ಸುಮಾರು 5000 ನ್ಯಾಯದರ್ಶಿಗಳನ್ನು ಒಂದು ವರ್ಷದ ಅವಧಿಗಾಗಿ ಚುನಾಯಿಸಲಾಗುತ್ತಿತ್ತು . ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಈತ ಪ್ರತಿ ಬಡ ಪ್ರಜೆಯೂ ರಾಜಕೀಯ ವಿಚಾರಗಳಲ್ಲಿ ಪಾಲ್ಗೊಳ್ಳಬೇಕೆಂದು ಬಯಿಸಿದನು . ಇದನ್ನು ಇಂದು ‘ ಪ್ರತ್ಯಕ್ಷ ಪ್ರಜಾಪ್ರಭುತ್ವ ‘ ಎಂದು ಕರೆಯುತ್ತೇವೆ .

ಪೆರಿಕ್ಲಿಸ್‌ನು ಕಲೆ , ವಾಸ್ತುಶಿಲ್ಲದ ಪ್ರಗತಿಗೆ ಪ್ರೋತ್ಸಾಹ ಕೊಟ್ಟನು . ಬೃಹತ್ ಕಟ್ಟಡಗಳು , ವರ್ಜಿನ್ ದೇವಾಲಯವನ್ನು ಅಮೃತಶಿಲೆಗಳಿಂದ ನಿರ್ಮಿಸಿದನು . ಪೆರಿಕ್ಲಿಸ್ ಸಂಗೀತ , ಸಾಹಿತ್ಯ , ವಿಜ್ಞಾನಕ್ಕೆ ಹೆಚ್ಚು ಪ್ರೋತ್ಸಾಹ ಕೊಟ್ಟನು . ಪೆರಿಕ್ಲಿಸ್ ರಾಜಕೀಯ , ಸಾಮಾಜಿಕ , ಸಂಗೀತ , ಸಾಹಿತ್ಯ , ಕಲೆ , ವಾಸ್ತುಶಿಲ್ಪ ಹೀಗೆ ಎಲ್ಲಾ ರೀತಿಯಿಂದಲೂ ಉಚ್ಛಾಯ ಸ್ಥಿತಿಯಲ್ಲಿತ್ತು . ಪೆರಿಕ್ಲಿಸನು ಕವಿಗಳಿಗೆ , ನಾಟಕಕಾರರಿಗೆ , ತತ್ವಜ್ಞಾನಿಗಳಿಗೆ , ವಿಜ್ಞಾನಿಗಳಿಗೆ , ಶಿಲ್ಪಿಗಳಿಗೆ ವಿಶೇಷ ಪ್ರೋತ್ಸಾಹ ಕೊಟ್ಟನು .

2. ಗ್ರೀಕರ ಕೊಡುಗೆಗಳನ್ನು ಕುರಿತು ಚರ್ಚಿಸಿ .

ಗ್ರೀಕರ ಕೊಡುಗೆ ಅಪಾರ , ರಾಜಕೀಯವಾಗಿ ಪ್ರಜಾಪ್ರಭುತ್ವದ ಬಗ್ಗೆ ಆಸಕ್ತಿ ಹೊಂದಿದ್ದರು . ನಿರಂಕುಶ ಪ್ರಭುತ್ವವನ್ನು ಸಂಪೂರ್ಣವಾಗಿ ತೊರೆದು ಹಾಕಿ ಪ್ರಜಾಪ್ರಭುತ್ವವನ್ನು ಬಡವರಿಗೂ ತಲುಪುವಂತೆ ಮಾಡಿದರು . ಸಮಾಜದಲ್ಲಿ ಎಲ್ಲಾ ಬಗೆಯ ಕಲಾವಿದರಿಗೆ ಪ್ರೋತ್ಸಾಹ ದೊರೆಕಿತು . ಸಾಹಿತ್ಯಕ್ಕೆ ಗ್ರೀಕರ ಕೊಡುಗೆ ಎಂದರೆ ವಿವಿಧ ಪ್ರಕಾರದ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಟ್ಟಿದ್ದು , ಉದಾಹರಣೆಗೆ ಸೊಪೋಕ್ಲಿಸ್ ಈಸ್ಕಿಲಿಸ್ , ಯೂರಿಪಿಡಿಸ್‌ನಂತಹ ನಾಟಕಕಾರರಿಗೆ ಪ್ರೋತ್ಸಾಹ ದೊರೆತಿದ್ದು ಅವರ ನಾಟಕಗಳು ಶಾಶ್ವತವಾಗಿ ನೆಲೆ ನಿಲ್ಲುವಂತೆ ಅಮರವಾಗುವ ಕೀರ್ತಿ ಪೆರಿಕ್ಲಿಸ್ ದೊರೆಗೆ ಸಲ್ಲುತ್ತದೆ .

ಕಲೆಗೆ ವಿವಿಧ ಶೈಲಿ ಬಳಸಿ ಅಮೃತ ಶಿಲೆಗಳಿಂದ ನಿರ್ಮಿಸಿರುವುದು ವಿಶೇಷ . ಇದಕ್ಕೆ ಸಾಕ್ಷಿಯಾಗಿ ನಿಂತಿರುವುದು ಅಥೆನ್ಸನ ಪಾರ್ಥನಾನ್ ದೇವಾಲಯ . ವಿಜ್ಞಾನ , ಖಗೋಳಶಾಸ್ತ್ರ , ಗಣಿತಶಾಸ್ತ್ರಕ್ಕೆ ಗೀಕರು ಮಹತ್ತರವಾದ ಕೊಡುಗೆಗಳನ್ನು ಕೊಟ್ಟಿದ್ದಾರೆ . ಕ್ರೀಡೆಗಳಿಗೂ ಗ್ರೀಕರ ಕೊಡುಗೆ ಅಪಾರವಾಗಿದೆ .

ನಾಲ್ಕು ವರ್ಷಗಳಿಗೊಮ್ಮೆ ನಡೆಯವು ಒಲಿಂಪಿಕ್ಸ್ ಪ್ರಾರಂಭದಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆಯಿತದರೂ , ಇಂದು ಕ್ರೀಡಾಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ . ವಿಶ್ವದೆಲ್ಲೆಡೆಯಿಂದ ಕ್ರೀಡಾ ಪಟುಗಳು ತಮ್ಮ ಶಕ್ತಿ , ಸಾಹಸ , ಶೌಲ್ಯಗಳನ್ನು ಮೆರೆಯುತ್ತಿದ್ದಾರೆ . ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಭಾಗವಹಿಸುವುದೇ ಇಂದು ಹೆಮ್ಮೆಯ ವಿಷಯವಾಗಿದೆ .

ಹೀಗೆ ಗ್ರೀಕರು – ರಾಜಕೀಯ , ಸಾಮಾಜಿಕ , ನಾಟಕ , ಕಲೆ , ವಾಸ್ತುಶಿಲ್ಪ , ವಿಜ್ಞಾನ ತತ್ವಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಶಾಶ್ವತವಾದ ಕೊಡುಗೆಯನ್ನು ಕೊಟ್ಟಿದ್ದಾರೆ . ಇದರ ಮೂಲಕ ಅಮರರಾಗಿದ್ದಾರೆ .‌

FAQ

1 ) ನಗರ ರಾಜ್ಯಗಳು ಯಾವ ನಾಗರಿಕತೆಯಲ್ಲಿ ಕಂಡು ಬರುತ್ತದೆ ?

ಗ್ರೀಕ್ ನಾಗರಿಕತೆಯಲ್ಲಿ ಕಂಡು ಬರುತ್ತದೆ .

2 ) ‘ ದ ರಿಪಬ್ಲಿಕ್ ‘ ಗ್ರಂಥವನ್ನು ಯಾರು ರಚಿಸಿದರು ?

ಪ್ಲೇಟೋ

ಇತರೆ ವಿಷಯಗಳು :

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1st PUC History Notes

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

1 thoughts on “ಪ್ರಥಮ ಪಿ.ಯು.ಸಿ ಗ್ರೀಕ್‌ ಮತ್ತು ರೋಮನ್‌ ಸಾಮ್ರಾಜ್ಯಗಳ ಸ್ಥಾಪನೆ ಮತ್ತು ಕೊಡುಗೆಗಳು ಇತಿಹಾಸ ನೋಟ್ಸ್‌ | 1st Puc History Chapter 4 Notes

Leave a Reply

Your email address will not be published. Required fields are marked *

rtgh