ಪ್ರಥಮ ಪಿ.ಯು.ಸಿ. ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ಉದಯ ಮತ್ತು ಪ್ರಸಾರ ಇತಿಹಾಸ ನೋಟ್ಸ್, 1st Puc History Chapter 5 Notes Question Answer Pdf Download Karnataka Rise and Spread of Christianity and Islam in Kannada 1st puc ಯೇಸು ಕ್ರಿಸ್ತನ ಜೀವನ ಮತ್ತು ಬೋಧನೆಗಳು notes 1st Puc krista dharma mattu islam dharma notes in Kannada Medium 2024
Rise and Spread of Christianity and Islam in Kannada
5.1 ಯೇಸು ಕ್ರಿಸ್ತನ ಜೀವನ ಮತ್ತು ಬೋಧನೆಗಳು
1st Puc History Chapter 5 Notes Question Answer
1. ಯಹೂದಿಗಳ ಧಾರ್ಮಿಕ ಪ್ರವಾದಿ ಯಾರು ?
ಮೋಸಸ್
2. ಯೇಸುಕ್ರಿಸ್ತ ಯಾವಾಗ ಜನಿಸಿದನು ?
ಸಾ.ಶ.ಪೂ .4 ರ ಡಿಸೆಂಬರ್ 25 ರಂದು .
3. ಯೇಸು ಎಲ್ಲಿ ಜನಿಸಿದನು ?
ಪ್ಯಾಲಿಸ್ಟೈನ್‌ನ ಬೆತ್ತೆಹಮ್‌ನಲ್ಲಿ
4. ಯೇಸು ಎಂದರೇನು ?
ಉದ್ಧಾರಕ ಅಥವಾ ದೀಕ್ಷಾವಂತ
5. ಪ್ರಪಂಚದ ಅತಿದೊಡ್ಡ ಧರ್ಮ ಯಾವುದು ?
ಕ್ರೈಸ್ತಧರ್ಮ .
6. ಕ್ರೈಸ್ತ ಧರ್ಮದ ಸ್ಥಾಪಕ ಯಾರು ?
ಯೇಸು ಕ್ರಿಸ್ತ .
7. ಕ್ರೈಸ್ತ ಧರ್ಮದ ಚಿಹ್ನೆ ಯಾವುದು ?
ಶಿಲುಬೆ
8. ಯಹೂದಿಗಳ ಧಾರ್ಮಿಕ ಕೇಂದ್ರ ಯಾವುದಾಗಿತ್ತು ?
ಜರುಸಲೇಂ
9. ಯಹೂದಿಗಳು ಪೂಜಿಸುತ್ತಿದ್ದ ದೇವರು ಯಾವುದು ?
ಜಹೂವ
10. ಯಹೂದಿಗಳ ಧರ್ಮ ಗ್ರಂಥ ಯಾವುದು ?
ಹಳೇ ಒಡಂಬಡಿಕೆ ಅಥವಾ ಹೀಬ್ರುಬೈಬಲ್ .
11. ಯೇಸು ಬದುಕಿದ್ದಾಗ ರೋಮಿನ ಚಕ್ರವರ್ತಿ ಯಾರು ?
ರಾಜ ಹೆರಾಡ್ ಅಥವಾ ಪಾಂಟಿಯಸ್ ಪಿಲೇಟ್
12. ಯೇಸುವನ್ನು ಯಾವ ಬೆಟ್ಟದ ಮೇಲೆ ಶಿಲುಬೆಗೇರಿಸಲಾಯಿತು ?
ಜರುಸಲೇಂನ ಹೊರವಲಯದಲ್ಲಿರುವ ಗೋಲ್ಗೊಥಾ ಗುಡ್ಡದ ಮೌಂಟ್ ಕ್ಯಾಲ್ವರಿ ಎಂಬಲ್ಲಿ .
13. ಈಸ್ಟರ್ ಭಾನುವಾರ ಎಂದರೇನು ?
ಯೇಸುವಿನ ಮರಣದ ಮೂರು ದಿನಗಳ ನಂತರ ಭಾನುವಾರ ಯೇಸು ಜೀವಂತವಾಗಿ ಕಾಣಿಸಿಕೊಂಡನು . ಆದ್ದರಿಂದ ಆ ದಿನವನ್ನು ‘ ಈಸ್ಟರ್ ಭಾನುವಾರ ಎನ್ನುವರು .
14. ಯೇಸುವಿನ ಬೋಧನೆಗಳು ಬೈಬಲ್‌ನ ಯಾವ ಭಾಗದಲ್ಲಿದೆ ?
ಹೊಸ ಒಡಂಬಡಿಕೆಯಲ್ಲಿವೆ .
15. ಮಿಲಾನ್ ಶಾಸನ ಎಂದರೇನು ?
ರೋಮಿನ ಸೆಂಟ್ ಪೀಟರ್ ಸಮಾಧಿಯ ಮೇಲೆ ಪೀಟರ್ ಚರ್ಚ್ ನಿರ್ಮಿಸಿದನು . ‘ ಮಿಲಾನ್ ಶಾಸನ’ದ ಪ್ರಕಾರ ಕ್ರೈಸ್ತ ಧರ್ಮವು ರೋಮನ್ ಸಾಮ್ರಾಜ್ಯದ ಶಾಸನಬದ್ಧ ಧರ್ಮ ಎಂಬುದನ್ನು ಈ ಮೂಲಕ ತಿಳಿಸಲಾಗಿತ್ತು .
16. ಕ್ರೈಸ್ತ ಧರ್ಮ ಸ್ವೀಕರಿಸಿದ ಮೊದಲ ರೋಮನ್ ಚಕ್ರವರ್ತಿ ಯಾರು ?
ಕ್ರೈಸ್ತ ಧರ್ಮ ಸ್ವೀಕರಿಸಿದ ಮೊದಲ ರೋಮನ್ ಚಕ್ರವರ್ತಿ – ಕಾನ್‌ಸ್ಟಾಂಟೈನ್ ” .
17. ಕ್ರೈಸ್ತಧರ್ಮವನ್ನು ರಾಷ್ಟ್ರೀಯ ಧರ್ಮವೆಂದು ಘೋಷಿಸಿದ ರೋಮನ್ ಚಕ್ರವರ್ತಿ ಯಾರು ?
ಥಿಯೋಡಿಸಿಯಸ್ .
8. ಭಾರತಕ್ಕೆ ಕ್ರೈಸ್ತಧರ್ಮ ಪ್ರಚಾರ ಮಾಡಲು ಬಂದ ಪ್ರಥಮ ಕ್ರೈಸ್ತ ಪಾದ್ರಿ ಯಾರು ?
ಸಂತ ಥಾಮಸ್
1st Puc life and Teachings of Jesus Christ Pdf in Kannada Medium
1 ) ಯೇಸುವಿನ ತಂದೆ – ತಾಯಿಯ ಹೆಸರೇನು ?
ಯೇಸುವಿನ ತಂದೆ – ಜೋಸೆಫ್ , ತಾಯಿ – ಮೇರಿ
2 ) ಬೈಬಲ್‌ನ ಎರಡು ಭಾಗಗಳಾವುವು ?
ಬೈಬಲ್‌ನ ಎರಡು ಭಾಗಗಳೆಂದರೆ –
1 ) ಹಳೆಯ ಒಡಂಬಡಿಕೆ
2 ) ಹೊಸ ಒಡಂಬಡಿಕೆ
3 ) ಯೇಸುವನ್ನು ಯಾವಾಗ ಶಿಲುಬೆಗೇರಿಸಲಾಯಿತು ? ಆಗಿನ ರೋಮನ್ ಗವರ್ನರ್ ಯಾರು ?
ಸಾ.ಶಿ. 30 ರ ಏಪ್ರಿಲ್ 3 ರ ಶುಕ್ರವಾರದಂದು ಯೇಸುವನ್ನು ಶಿಲುಬೆಗೇರಿಸಲಾಯಿತು . ಆಗಿನ ರೋಮನ್ ಗವರ್ನರ್ – ‘ ಪಾಂಟಿಯಾಸ್ ಪಿಲೇಟ್ ,
4 ) ಯೇಸುವಿನ ಪುನರುತ್ಥಾನ ಎಂದರೇನು ?
ಯೇಸುವನ್ನು ಶಿಲುಬೆಗೇರಿಸಿದ ಮೂರು ದಿನಗಳ ನಂತರ ಭಾನುವಾರ ತನ್ನ ಅನುಯಾಯಿಗಳಿಗೆ ದರ್ಶನ ಕೊಟ್ಟ ದಿನವನ್ನು ‘ ಪುನರುತ್ಥಾನ ‘ ಎಂದು ಕರೆಯುವರು .
5 ) ಯೇಸುವಿನ ಇಬ್ಬರು ಪ್ರಮುಖ ಶಿಷ್ಯರನ್ನು ಹೆಸರಿಸಿ .
ಯೇಸುವಿನ ಇಬ್ಬರು ಪ್ರಮುಖ ಶಿಷ್ಯರೆಂದರೆ 1 ) ಸಂತ ಪೀಟರ್ , ಹಾಗೂ 2 ) ಸಂತಪಾಲ್
6 ) ಯಹೂದಿಗಳನ್ನು ಹಿಂಸೆಗೊಳಪಡಿಸಿದ ಇಬ್ಬರು ರೋಮನ್ ಚಕ್ರವರ್ತಿಗಳು ಯಾರು ?
ಯಹೂದಿಗಳನ್ನು ಹಿಂಸೆಗೊಳಪಡಿಸಿದ ಇಬ್ಬರು ರೋಮನ್ ಚಕ್ರವರ್ತಿಗಳು ~ 1 ) ನೀರೋ 2 ) .ಡಿಯೋಕ್ಲಿಷಿಯನ್
7 ) ಮಿಲಾನ್ ಶಾಸನವನ್ನು ಯಾರು ಹೊರಡಿಸಿದರು ಮತ್ತು ಯಾವಾಗ ?
ಸಾ.ಶಿ. 313 ರಲ್ಲಿ ಮಿಲಾನ್ ಶಾಸನವನ್ನು ಹೊರಡಿಸಿದವರು ಥಿಯೋಡಿಸಿಯ
8 ) .ಕ್ರೈಸ್ತ ಧರ್ಮಕ್ಕೆ ರಾಜಾಶ್ರಯ ನೀಡಿದ ಇಬ್ಬರು ರೋಮನ್ ಚಕ್ರವರ್ತಿಗಳು ಯಾರು ?
ಕ್ರೈಸ್ತ ಧರ್ಮಕ್ಕೆ ರಾಜಾಶ್ರಯ ನೀಡಿದ ಇಬ್ಬರು ರೋಮನ್ ಚಕ್ರವರ್ತಿಗಳು –
1 ) ಕಾನ್‌ಸ್ಟಾಂಟೈನ್
2 ) ಥಿಯೋಡಿಸಿಯಸ್
9 ) ಕ್ರಿಶ್ಚಿಯನ್ನರ ಪ್ರಮುಖ ಹಬ್ಬಗಳು ಯಾವುವು ?
ಕ್ರಿಶ್ಚಿಯನ್ನರ ಪ್ರಮುಖ ಹಬ್ಬಗಳು – 1 ) ಕ್ರಿಸ್‌ಮಸ್ 2 ) .ಗುಡ್‌ಪ್ರೈಡೆ 3 ) .ಈಸ್ಟರ್ ಸಂಡೇ
10 ) ಕ್ರೈಸ್ತ ಧರ್ಮದ ಎರಡು ಪಂಗಡಗಳಾವುವು ?
ಕ್ರೈಸ್ತ ಧರ್ಮದ ಎರಡು ಪಂಗಡಗಳೆಂದರೆ
1 ) ರೋಮನ್ ಕ್ಯಾಥೋಲಿಕ್
2 ) ಪ್ರೋಟೆಸ್ಟಂಟರು
1 ) .ಕ್ರಿಸ್ತನ ಜೀವನ ಚರಿತ್ರೆ ಬಗ್ಗೆ ಬರೆಯಿರಿ .
ಕ್ರಿಸ್ತನ ಜೀವನ ಚರಿತ್ರೆ – ಕ್ರಿಸ್ತನ ಪೂರ್ಣ ಹೆಸರು ಯೇಸುಕ್ರಿಸ್ತ ಜನಿಸಿದ್ದು ಸಾ.ಶ.ಪೂ. 4 ಡಿಸೆಂಬರ್ 25 ರಂದು ಪ್ಯಾಲಿಸ್ಟೈನ್‌ನ ‘ ಬೆತ್ತೆಹಮ್’ನಲ್ಲಿ ಜನಿಸಿದನು . ಈತನ ತಂದೆಯ ಹೆಸರು – ಜೋಸೆಫ್ , ತಾಯಿ ಮೇರಿ . ಜೋಸೆಫ್ ನಜರೇತ್ ಎಂಬ ಹಳ್ಳಿಯಲ್ಲಿ ಬಡಗಿಯಾಗಿದ್ದನು . ಯೇಸು ಜನಿಸಿದಾಗ ಇದನ್ನು ಕಂಡ ಪುರೋಹಿತರಿಗೆ ಇವನು ದೈವಾಂಶ ಸಂಭೂತನೆಂದು ನಂಬಿಕೆಯನ್ನುಂಟು ಪೂರ್ವದಲ್ಲಿ ನಕ್ಷತ್ರವೊಂದು ಮಿನುಗಿತು . ಇದನ್ನು ‘ ಪೂರ್ವದ ನಕ್ಷತ್ರ ‘ ಎಂದು ಕರೆಯುತ್ತಾರೆ .
ಈತನು ತನ್ನ 25 ವರ್ಷಗಳನ್ನು ಗೆಲಾಲಿ ಪ್ರಾಂತ್ಯದ ನಜರತ್‌ನಲ್ಲಿ ಕಳೆದನು . ಆದ್ದರಿಂದ ಅವನನ್ನು ನಜರತ್ ಜೀಸಸ್ ಎಂದು ಕರೆಯಲಾಗಿದೆ . ಯೇಸು ತಂದೆಯ ವೃತ್ತಿಯನ್ನು ಕಲಿತನು ಹಾಗೂ ಕುರಿಗಳನ್ನು ಕಾಯುತ್ತಿದ್ದನು . ಈತನು ತನ್ನ ಸರಳ ಜೀವನವನ್ನು ನಡೆಸಿದನು . ಯಹೂದಿಗಳ ಸೈನ್‌ಗಾಗ್‌ಗೆ ಭೇಟಿ ನೀಡಿದನು ಮತ್ತು ಜನರಿಗೆ ಅರ್ಥವಾಗದ ಧರ್ಮಗ್ರಂಥಗಳ ಅರ್ಥ ವಿವರಣೆ ನೀಡಿ ಅವರನ್ನು ಚಕಿತಗೊಳಿಸಿದನು .
ಯೇಸು ತನ್ನ 30 ನೇ ವಯಸ್ಸಿನಲ್ಲಿ ಬ್ಯಾಪ್ಟಿಸ್ಟ್‌ನಿಂದ ದೀಕ್ಷೆ ಸ್ವೀಕರಿಸಿದನು . ನಂತರ ಜೀಸಸ್ ದೇವರ ಪಿತೃತ್ವವನ್ನು ಸಾರುತ್ತಾ ಅದರಲ್ಲಿ ಜನರು , ನ್ಯಾಯ , ಪ್ರೀತಿ , ಕರುಣೆಯನ್ನು ಪಡೆಯುವರೆಂದು ಹೇಳಿದನು . 12 ಜನ ತನ್ನ ಶಿಷ್ಯರೊಡನೆ ಪ್ರಯಾಣಿಸಿ , ತನ್ನ ಸಂದೇಶವನ್ನು ಸಾರಿದನು . ಆದರೆ ಯಹೂದಿಗಳಿಗೆ ಈತನ ಬೋಧನೆಗಳು ಸರಿಬೀಳಲಿಲ್ಲ . ಅಂದಿನ ರೋಮನ್ನರ ಗೌರರ್ ಆದ ಪಾಂಟಿಯಾಸ್ ಪೀಲೇಟ್‌ನು ಕ್ರಿಸ್ತನನ್ನು ಧರ್ಮನಿಂಧಕ ಮತ್ತು ದೇಶದ್ರೋಹಿ ಎಂದು ಆರೋಪಿಸಿ ಮರಣದಂಡನೆಗೆ ಒಳಪಡಿಸಿದನು . ಸಾ.ಶಿ. 30 ಏಪ್ರಿಲ್ 3 ಶುಕ್ರವಾರದಂದು ಯೇಸುವನ್ನು ಜರುಸಲೇಂನ ಹೊರವಲಯದಲ್ಲಿರುವ ಗೋಲ್ಗೊಥಾ ಗುಡ್ಡದ ಮೌಂಟ್ ಕ್ಯಾಲ್ವರಿ ಎಂಬಲ್ಲಿಗೆ ಎಳೆದೊಯ್ದು ಶಿಲುಬೆಗೇರಿಸಿ ಕೈಕಾಲುಗಳಿಗೆ ಮೊಳೆ ಹೊಡೆದು ಕೊಲ್ಲಲಾಯಿತು .
ಏಸುವಿನ ಅನುಯಾಯಿಗಳು ಸಮಾಧಿಯ ಬಳಿ ಶೋಕಿಸುತ್ತಿರಲು ಇದರ ಮೂರನೇ ದಿನ ಜೀವಂತವಾಗಿ ಕಾಣಿಸಿಕೊಂಡರು . ಅಂತೆಯೇ , ಶಿಲುಬೆಗೇರಿಸಿದ ದಿನವನ್ನು ಗುಡ್‌ಫ್ರೆಡೆ ಎಂಬುದಾಗಿಯೂ ಹಾಗೂ ಆನಂತರದ ಭಾನುವಾರವನ್ನು ಈಸ್ಟರ್ ಸಂಡೇ ಎಂದು ಕರೆಯುವರು . ನಂತರ 40 ದಿನಗಳವರೆಗೆ ತನ್ನ ಶಿಷ್ಯರೊಂದಿಗೆ ಯೇಸು ಇದ್ದು ನಂತರ ಸ್ವರ್ಗಸ್ಥನಾದನು .
2 ) ಯೇಸುಕ್ರಿಸ್ತನ ಬೋಧನೆಗಳನ್ನು ಬರೆಯಿರಿ .
ಯೇಸುಕ್ರಿಸ್ತನ ಬೋಧನೆಗಳು ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ‘ ಬೈಬಲ್ ‘ ನಲ್ಲಿದೆ . ಬೈಬಲ್‌ಗಳಲ್ಲಿ ಎರಡು ಪ್ರಧಾನ ಭಾಗಗಳಿವೆ . ಅವುಗಳೆಂದರೆ –
1 ) ಹಳೆಯ ಒಡಂಬಡಿಕೆ
2 ) ಹೊಸ ಒಡಂಬಡಿಕೆ ಹಳೆಯ ಒಡಂಬಡಿಕೆಗಳು ಯಹೂದಿಗಳಿಗೆ ಪವಿತ್ರ ಗ್ರಂಥವಾಗಿದೆ . ಹೊಸ ಒಡಂಬಡಿಕೆಯಲ್ಲಿರುವ ಬೋಧನೆಗಳೆಂದರೆ –
1 ) ದೇವರು ಸರ್ವವ್ಯಾಪಿ , ಸ್ವರ್ಗರಾಜ್ಯದ ಒಡೆಯ , ಆತ ದಯಮಯ .
2 ) ಮಾನವರೆಲ್ಲರೂ ಸಹೋದರರಂತೆ ಬದುಕಬೇಕು , ದೇವರ ಬಗ್ಗೆ ದೃಢ ಭಕ್ತಿಯನ್ನು ಹೊಂದಿರಬೇಕು .
3 ) ನಿನ್ನ ನೆರೆಯಹೊರೆಯವರನ್ನು ಪ್ರೀತಿಸು , ನಿನಗೆ ಕೇಡು ಬಯಸುವವರೆಗೂ ಒಳ್ಳೆಯದನ್ನು ಮಾಡು .
4 ) ಪ್ರಾಮಾಣಿಕತೆ ಮತ್ತು ಕರ್ತವ್ಯದಲ್ಲಿ ಬದ್ಧತೆಗಳು ಸ್ವರ್ಗಕ್ಕೆ ದಾರಿ
5 ) ಪ್ರಾಪಂಚಿಕ ಶ್ರೀಮಂತಿಕೆಯನ್ನು ತ್ಯಜಿಸಬೇಕು .
6 ) ಜನಸೇವೆಯೇ ಭಗವಂತನ ಸೇವೆ .
7 ) ದರಿದ್ರರೇ ಭಾಗ್ಯಶಾಲಿಗಳು ಏಕೆಂದರೆ ದೇವರ ರಾಜ್ಯ ಅವರದೇ ಆಗಿರುತ್ತದೆ , ದುಃಖಿಗಳೇ ಭಾಗ್ಯಶಾಲಿಗಳು . ಭಗವಂತನಿಂದ ಸಂತೈಸಲ್ಪಡುತ್ತಾರೆ .
8 ) ವ್ಯಭಿಚಾರ ಮಾಡದಿರುವುದು , ಕದಿಯದಿರುವುದು , ಸುಳ್ಳುಹೇಳದಿರುವುದು , ಹಿರಿಯರನ್ನು ಗೌರವಿಸುವುದು .
9 ) ಬಡವ – ಶ್ರೀಮಂತ , ಉಚ್ಛ – ನೀಚ , ಗುಲಾಮರು ಸಹಾಯಕರು , ಯಾವುದೇ ತಾರತಮ್ಯ ಮಾಡಬಾರದು .
10 ) ಕ್ಷಮಾಗುಣ ಬಹಳ ಮುಖ್ಯವಾದುದು .
3 ) ಕ್ರೈಸ್ತ ಧರ್ಮದ ಪ್ರಚಾರಕ್ಕೆ ಕಾರಣಗಳಾವುವು ?
ಕ್ರೈಸ್ತಧರ್ಮ ತನ್ನ ಸರಳತೆಯಿಂದ ಜಗತ್ತಿನಾದ್ಯಂತ ಜನಪ್ರಿಯಗೊಂಡಿದೆ . ಯೇಸುವಿನ ಮರಣದ ನಂತರ ಆತನ ಶಿಷ್ಯರು ಈ ಧರ್ಮ ಪ್ರಚಾರಕೈಗೊಂಡರು .
1. ಯೇಸುವಿನ ವ್ಯಕ್ತಿತ್ವ : ಯೇಸು ತನ್ನ ಸರಳತೆಯಿಂದ ಜನಸಾಮಾನ್ಯರನ್ನು ಆಕರ್ಷಿಸಿದನು . ಬಡವರು , ಪಾಪಿಗಳು ಮತ್ತು ನೊಂದವರ ಬಗ್ಗೆ ಇದ್ದ ಕಳಕಳಿ ಮತ್ತು ಆತನ ಆಧ್ಯಾತ್ಮಿಕ ಶಕ್ತಿಯು ಈ ಧರ್ಮ ಪ್ರಚಾರಕ್ಕೆ ಸಹಾಯವಾಯಿತು .
2. ಸರಳ ತತ್ವಗಳು : ಜೀಸಸ್‌ನ ತತ್ವಗಳಾದ ಸಹೋದರತ್ವ , ಅನುಕಂಪ , ಕ್ಷಮಾಗುಣ ಮತ್ತು ಸ್ವರ್ಗರಾಜ್ಯದಲ್ಲಿ ನಂಬಿಕೆ ಇವು ಯೇಸುವನ್ನು ಬಡವರು ಮತ್ತು ಗುಲಾಮರಲ್ಲಿ ಜನಪ್ರಿಯನನ್ನಾಗಿಸಿದವು .
3. ಯೇಸುವಿನ ಶಿಷ್ಯರ ಪಾತ್ರ : ಯೇಸುವಿನ ತತ್ವಗಳನ್ನು ಜನಪ್ರಿಯಗೊಳಿಸಿ , ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವಲ್ಲಿ ಈತನ 12 ಜನ ಶಿಷ್ಯರು ಪ್ರಮುಖ ಪಾತ್ರವಹಿಸಿದರು . ಅವರಲ್ಲಿ ಬಹಳ ಪ್ರಮುಖರಾದವರು ಸಂತ ಪೀಟರ್ ಹಾಗೂ ಸಂತಪಾಲ್ ರೋಮ್‌ನಲ್ಲಿ ಚರ್ಚ್ ಅನ್ನು ಕಟ್ಟಿಸಿದರು .
4. ಕ್ರೈಸ್ತರ ದೃಢ ನಿರ್ಧಾರ : ಕ್ರೈಸ್ತರು ರೋಮನ್ ಚಕ್ರವರ್ತಿಯನ್ನು ದೇವರೆಂದು ಆರಾಧಿಸುವುದನ್ನು ನಿರಾಕರಿಸಿದರು . ಇದರಿಂದಾಗಿ ನೀರೋನಂಥಹ ದುಷ್ಟರಾಜರು ಕ್ರೈಸ್ತರನ್ನು ಬಹುವಾಗಿ ಹಿಂಸಿಸಿದರು . ಕ್ರೈಸ್ತರನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಿಸಿದರು . ಆದರೂ ಕ್ರೈಸ್ತ ಧರ್ಮವು ಕ್ರೌರ್ಯಕ್ಕೆ ಪ್ರೀತಿನಿರ್ದಯೆಗೆ ದಯೆಯನ್ನು ಬೋಧಿಸುತ್ತಾ , ರಾಜಧರ್ಮದ ಸ್ಥಾನವನ್ನು ಅಲಂಕರಿಸಿತು .
5. ಚರ್ಚ್‌ನ ಪಾತ್ರ : ಕ್ರೈಸ್ತ ಧರ್ಮದ ಪ್ರಚಾರ ಮತ್ತು ಸಂರಕ್ಷಣೆಯಲ್ಲಿ ಚರ್ಚ್ ಮುಖ್ಯವಾದ ಸಂಸ್ಥೆಯಾಗಿತ್ತು . ಪೋಪನನ್ನು ದೇವರ ಪ್ರತಿನಿಧಿ ಎಂದೇ ಭಾವಿಸಲಾಗುತ್ತಿತ್ತು . ಹೀಗಾಗಿ ಹಿಂಸೆಯ ನಡುವೆಯೂ ಕ್ರೈಸ್ತ ಧರ್ಮ ಜನಪ್ರಿಯತೆ ಪಡೆಯಿತು .
6. ಕಾನ್‌ಸ್ಟಾಂಟನ್ ಹಾಗೂ ಥಿಯೋಡಿಸಿಯಸ ರೋಮನ ದೊರೆಗಳು ಕ್ರೈಸ್ತಧರ್ಮವನ್ನು ರಾಜ್ಯ ಧರ್ಮವನ್ನಾಗಿಸಿದರು .
FAQ
ಯೇಸು ಕ್ರಿಸ್ತ .
ಜರುಸಲೇಂ
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್
Supper all sub supper