ಪ್ರಥಮ ಪಿ.ಯು.ಸಿ ಮಧ್ಯಕಾಲೀನ ಯುಗ ಬದಲಾವಣೆಯತ್ತ ನೋಟ್ಸ್,1st Puc History Chapter 6 Notes Question Answer 1st Puc History Notes in Kannada Chapter 6 Kseeb Solution For Class 11 Chapter 6 Notes Medieval Period Towords Change in Kannada 2024 1st PUC History 5th Chapter Notes in Kannada Medium
1st Puc History Chapter 6 Notes
1. ನಾಲ್ಕನೇ ಹೆನ್ರಿಯನ್ನು ಪದಚ್ಯುತಿಗೊಳಿಸಿದ ಪೋಪ್ ಯಾರು ?
ಪೋಪ್ 7 ನೇ ಗ್ರೆಗೋರಿ ,
2. ಹಿಡುವಳಿದಾರ ಎಂದರೆ ಯಾರು ?
ರಾಜ ಅಥವಾ ಮಹಾ ಒಡೆಯನು ಕೆಲವೊಬ್ಬರಿಗೆ ಭೂಮಿಯನ್ನು ಕೊಡುಗೆಯಾಗಿ ನೀಡುತ್ತಿದ್ದನು . ಯಾವ ವ್ಯಕ್ತಿಯು ಇದನ್ನು ಸ್ವೀಕರಿಸುತ್ತಾನೆಯೋ ಅವನನ್ನು ಆ ರಾಜನ ‘ ಹಿಡುವಳಿದಾರ ‘ ಎನಿಸಿಕೊಳ್ಳುತ್ತಿದ್ದನು .
3. ಪೋಪ್ ಪೀಠದಲ್ಲಿನ ಒಡೆಕು ಯಾವಾಗ ಅಂತ್ಯಗೊಂಡಿತು ?
ಸಾ.ಶ. 1414 ರಲ್ಲಿ ಪೋಪ್ ಪೀಠದಲ್ಲಿನ ಒಡಕು ಉಂಟಾಯಿತು .
4 , ಕ್ಯಾಂಟರ್ ಬರಿಟೇಲ್ಸ್ ಬರೆದವನು ಯಾರು ?
ಜೆಫರಿ ಛಾಸರ್
5. ಮಧ್ಯಕಾಲೀನ ಕ್ರೈಸ್ತ ಧರ್ಮದ “ ದೈವಿಕ ಭಾಷೆ ” ಯಾವುದು ?
ಲ್ಯಾಟಿನ್
6. ಪೋಪನ ಆಸ್ಥಾನವನ್ನು ರೋಮಿನಿಂದ ಎಲ್ಲಿಗೆ ವರ್ಗಾಯಿಸಲಾಯಿತು ?
ಅವಿಗ್ನಾನ್ ನಗರಕ್ಕೆ “
7. ಡಿವೈನ್ ಕಾಮಿಡಿ ” ಕೃತಿಯನ್ನು ಬರೆದವನು ಯಾರು ?
ಡಾಂಟ ಅಲಿಗೆರಿ
8 . “ ಜಾಗೀರು ” ಎಂದರೇನು ?
ರಾಜ ಅಥವಾ ಮಹಾ ಒಡೆಯನ್ನು ಕೆಲವೊಬ್ಬರಿಗೆ ಭೂಮಿಯನ್ನು ಕೊಡುಗೆಯಾಗಿ ನೀಡುತ್ತಿದ್ದನು . ಅದನ್ನು ‘ ಜಾಗೀರು ‘ ಎನ್ನುತ್ತಿದ್ದರು .
9. ಅವಿಸ್ನಾನನ್ನು ಕೇಂದ್ರವಾಗಿಸಿಕೊಂಡ ಮೊದಲ ಸೋಪ್ ಯಾರು ?
ಫ್ರಾನ್ಸಿನ 5 ನೇ ಕ್ಲಮೆಂಟ್
10. ಆರಂಭಿಕ ಮಧ್ಯಯುಗವನ್ನು ಕತ್ತಲೆಯುಗ ‘ ಎಂದು ಏಕೆ ಕರೆಯುತ್ತಾರೆ ?
ಆರಂಭಿಕ ಮಧ್ಯಯುಗವು ಯೂರೋಪಿನಲ್ಲಿ ಗೊಂದಲ ಮತ್ತು ಪ್ರಕ್ಷುಬ್ಧ ಪರಿಸ್ಥಿತಿಯಿತ್ತು . ಆದ್ದರಿಂದ ಆರಂಭಿಕ ಮಧ್ಯಯುಗವನ್ನು ‘ ಕತ್ತಲೆಯುಗ ‘ ಎಂದು ಕರೆಯುತ್ತಾರೆ .
1 ) ಮಧ್ಯಕಾಲೀನ ಯೂರೋಪಿನ ಎರಡು ಯಾವುದಾದರೂ ಸಾಹಿತ್ಯ ಶೈಲಿಗಳನ್ನೂ ಹೆಸರಿಸಿ .
ಮಧ್ಯಕಾಲೀನ ಯೂರೋಪಿನ ಎರಡು ಸಾಹಿತ್ಯ ಶೈಲಿಗಳೆಂದರೆ –
* ಡಾಂಟೆ ಅಲಿಗೇರಿಯ – ‘ ಡಿವೈನ್ ಕಾಮಿಡಿ ‘
* ಜೆಫರಿ ಭಾಸರ್‌ನ – ‘ ಕ್ಯಾಂಟರ್‌ಬರಿ ಟೇಲ್ಸ್ ‘
2 ) 14 ನೇ ಶತಮಾನದಲ್ಲಿ ಪೋಪನ ಪರಮಾಧಿಕಾರ ಪತನ ಹೊಂದಲು ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ .
14 ನೇ ಶತಮಾನದಲ್ಲಿ ಪೋಪನ ಪರಮಾಧಿಕಾರ ಪತನ ಹೊಂದಲು ಇರುವ ಕಾರಣಗಳೆಂದರೆ :
1 ) ಪೋಪನ 6 ನೇ ಅರ್ಬನ್ ಅವಧಿಯಲ್ಲಿ ಅವನಿಗೂ ಮತ್ತು ಕಾರ್ಡಿನಲ್‌ಗಳಿಗೂ ಭಿನ್ನಾಭಿಪ್ರಾಯ ಮೂಡಿತು . ಅದು ಪೋಪನ ಪೀಠದಲ್ಲಿನ ಒಡಕಿಗೆ ಕಾರಣವಾಯಿತು .
2 ) 4 ನೇ ಫಿಲಿಪ್‌ನು ಚರ್ಚಿನ ಮೇಲೆ ಹೇರಿದ ತೆರಿಗೆಯ ಪರಿಣಾಮವಾಗಿತ್ತು . ಇದು ಹೆಚ್ಚಿನ ಸಂಘರ್ಷಕ್ಕೆ ಕಾರಣವಾಗಿ ಪೋಪನ ಪರಮಾಧಿಕಾರದ ಪತನಕ್ಕೆ ಕಾರಣವಾಯಿತು .
3 ) ಮಧ್ಯಕಾಲೀನ ಯುರೋಪಿನ ಯಾವುದಾದರೂ ಎರಡು ಪ್ರಮುಖ ವ್ಯಾಪಾರಿ ಕೇಂದ್ರಗಳನ್ನು ಹೆಸರಿಸಿ .
ಮಧ್ಯಕಾಲೀನ ಯೂರೋಪಿನ ಎರಡು ಪ್ರಮುಖ ವ್ಯಾಪಾರಿ ಕೇಂದ್ರಗಳು – 1 ) ವೆನಿಸ್ 2 ) ಜಿನೋವಾ
4 ) ಮಧ್ಯಕಾಲೀನ ಯೂರೋಪಿನಲ್ಲಿ ಅಸ್ತಿತ್ವಕ್ಕೆ ಬಂದ ಯಾವುದಾದರೂ ಎರಡು ವಿಶ್ವವಿದ್ಯಾಲಯಗಳನ್ನು ಹೆಸರಿಸಿ .
ಮಧ್ಯಕಾಲೀನ ಯೂರೋಪಿನಲ್ಲಿ ಅಸ್ತಿತ್ವಕ್ಕೆ ಬಂದ ಎರಡು ವಿಶ್ವವಿದ್ಯಾಲಯಗಳೆಂದರೆ –
1) ಇಂಗ್ಲೆಂಡಿನ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
2 ) ಫ್ರಾನ್ಸಿನ ಪ್ಯಾರಿಸ್ ಮತ್ತು ಮೌಂಟ್‌ಪೆಲ್ಲಿಯರ್
5 ) ಮಧ್ಯಕಾಲೀನ ಯೂರೋಪಿನ ಯಾರಾದರೂ ಇಬ್ಬರು ಬುದ್ಧಿಜೀವಿಗಳನ್ನು ಹೆಸರಿಸಿ .
ಮಧ್ಯಕಾಲೀನ ಯೂರೋಪಿನ ಇಬ್ಬರು ಬುದ್ಧಿಜೀವಿಗಳೆಂದರೆ
1) ರಾಬರ್ಟ್ ಗ್ರಾಸ್ಟೆಸ್ಟ್
2 ) ರೋಜರ್ ಬೇಕನ್
6 ) ಮಧ್ಯಕಾಲೀನ ಯೂರೋಪಿನಲ್ಲಿ ಕಂಡು ಬರುವ ಎರಡು ವಾಸ್ತು ಶೈಲಿಗಳು ಯಾವುವು ?
1 ) ರೋಮನ್ ಶೈಲಿ
2 ) ಗೋಥಿಕ್ ಶೈಲಿಗಳು
7 ) “ ಪ್ಯೂಡಲಿಸಂ ” ಎಂಬುದು ಯಾವ ಪದದಿಂದ ಬಂದಿದೆ ? ಮತ್ತು ಅದರ ಅರ್ಥವೇನು ?
“ ನ್ಯೂಡಲಿಸಂ ” ಎಂಬ ಆಂಗ್ಲ ಪದ ಜರ್ಮನ್ ಭಾಷೆಯ “ ಡ್ಯೂಡ್ನಿಂದ ಬಂದಿದೆ . ಅದರ ಅರ್ಥ “ ಭೂಮಿಯ ಒಂದು ತುಂಡು ” .
8 ) ಊಳಿಗಮಾನ್ಯ ವ್ಯವಸ್ಥೆಯ ಪಿರಮಿಡ್ಡಿನಾಕೃತಿಯ ರಚನೆಯಲ್ಲಿನ ಏಣಿ ಶ್ರೇಣಿಗಳನ್ನು ತಿಳಿಸಿ .
ಊಳಿಗಮಾನ್ಯ ವ್ಯವಸ್ಥೆಯ ಪಿರಮಿಡ್ಡಿನಾಕೃತಿಯ ರಚನೆಯಲ್ಲಿನ ಏಣಿ ಶ್ರೇಣಿಗಳು ಈ ಪ್ರಕಾರದಲ್ಲಿವೆ ಅತ್ಯಂತ ಮೇಲ್ಬಾಗದಲ್ಲಿ ‘ ರಾಜ ‘ ನಿರುತ್ತಿದ್ದ . ಅದರ ಕೆಳಗೆ ಕುಲೀನರು ಮತ್ತು ಆ ನಂತರ ಸರದಾರರು ; ಹಿಡುವಳಿದಾರರು ಇರುತ್ತಿದ್ದರು . ಪಿರಮಿಡ್‌ನ ಅಡಿಯಲ್ಲಿ ಜೀತದಾಳುಗಳು ಇರುತ್ತಿದ್ದರು . ರಾಜನು ಭೂಮಿಯನ್ನು ಕುಲೀನರಿಗೂ ಮತ್ತು ಸರದಾರರಿಗೂ ಹಂಚುತ್ತಿದ್ದನು . ಪ್ರತಿಯಾಗಿ ಅವರು ಹಿಡುವಳಿದಾರರಿಗೂ ಹಂಚುತ್ತಿದ್ದರು ಮತ್ತು ಜೀತದಾಳುಗಳಿಂದ ಉಳುಮೆ ಮಾಡಿಸುತ್ತಿದ್ದರು .
ರಾಜ
ಕುಲೀನರು
ಸರದಾರರು
ಹಿಡುವಳಿದಾರರು
ರೈತರು
ಜೀತದಾಳುಗಳು
9 ) ರೊಮಾನಿಕ್ ಶೈಲಿಯ ಎರಡು ಲಕ್ಷಣಗಳನ್ನು ಬರೆಯಿರಿ .
ರೊಮಾನಿಕ್ ಶೈಲಿಯ ಎರಡು ಲಕ್ಷಣಗಳೆಂದರೆ
1 ) ವೃತ್ತಾಕಾರದ ಕಮಾನು , ಕಿರಿದಾದ ಕಿಟಕಿಗಳು ,
2 ) ಕಲ್ಲಿನ ಬೃಹತ್ ಗೋಡೆಗಳು ಮತ್ತು ಪ್ರಮುಖವಾದ ಅಡ್ಡಪಟ್ಟಿಗಳು .
10 ) ಗೋಥಿಕ್ ಶೈಲಿಯ ಎರಡು ಲಕ್ಷಣಗಳನ್ನು ಬರೆಯಿರಿ .
ಗೋಥಿಕ್ ಶೈಲಿಯ ಎರಡು ಲಕ್ಷಣಗಳೆಂದರೆ
1 ) ಮೊನಚಾದ ಕಮಾನು , ಛಾವಣಿ ಕಮಾನುಗಳು ಕೂಡಂಚು .
2 ) ಊರೆಗೋಡೆ
11 ) ಮಧ್ಯಕಾಲೀನ ಯೂರೋಪಿಗೆ ಕೃಷಿಯ ಉತ್ಪಾದನೆಯು ತೀವ್ರಗೊಳ್ಳಲು ಕಾರಣವಾದ ಎರಡು ಅಂಶಗಳನ್ನು ಹೆಸರಿಸಿ .
ಮಧ್ಯಕಾಲೀನ ಯೂರೋಪಿನ ಕೃಷಿಯ ಉತ್ಪಾದನೆ ತೀವ್ರಗೊಳ್ಳಲು ಕಾರಣವಾದ ಎರಡು ಅಂಶಗಳೆಂದರೆ – 1 ) ಹೊಸ ಹೊಸ ತಂತ್ರಜ್ಞಾನ ಹಾಗೂ 2 ) ಉತ್ತಮವಾದ ಹೊಸ ಕೃಷಿ ಸಲಕರಣಿಗಳು .
1 ) ಮೆನೋರಿಯಲ್ ವ್ಯವಸ್ಥೆಯನ್ನು ಕುರಿತು ಬರೆಯಿರಿ .
ಈ ವ್ಯವಸ್ಥೆಯಡಿಯಲ್ಲಿ ಇದು ಮಧ್ಯಯುಗದ ಪ್ರಮುಖ ಸಂಸ್ಥೆಯಾಗಿದೆ . ಜೀತದಾಳುಗಳು ಭೂಮಾಲೀಕರ ಒಡೆತನದ ಜಾಗೀರಿನ ಸುತ್ತಮುತ್ತಲಿನ ಭೂಮಿಯಲ್ಲಿ ಭೂಮಿಯನ್ನು ಹೊಂದಿದ್ದರು . ಆದರೆ ಒಬ್ಬ ಸರದಾರನ ನಿಯಂತ್ರಣ ಮತ್ತು ವ್ಯಾಪ್ತಿಗೆ ಕೆಲಸ ಮಾಡುತ್ತಿದ್ದರು . ಜೀತದಾಳುಗಳು ಗುಲಾಮರಾಗಿರಲಿಲ್ಲ . ಅವರು ತುಂಬು ಒಳಪಟ್ಟಿದ್ದರು . ಅವರು ಸರದಾರನ ಮತ್ತು ತಮ್ಮ ಭೂಮಿಯಲ್ಲಿ ಕೆಲಸ ಮಾಡಿ , ಒಡೆಯನಿಗೆ ಗೇಣಿ ನೀಡುತ್ತಿದ್ದರು . ಜೀತದಾಳುಗಳು ಸಾಮಾನ್ಯವಾಗಿ ದನ ಮೇಯಿಸುವುದು , ಕಟ್ಟಿಗೆ ಸಂಗ್ರಹ , ಮೀನು ಹಿಡಿಯುವುದು ಮತ್ತು ಬೇಸಾಯವನ್ನು ಒಟ್ಟಾಗಿ ಮಾಡುತ್ತಿದ್ದರು . ಅದು ಒಂದು ರೀತಿಯಲ್ಲಿ ಆಪ್ತ ಸಾಮುದಾಯಿಕ ಜೀವನವಾಗಿತ್ತು . ನಂತರ ಮಧ್ಯಯುಗದಲ್ಲಿ ಜೀತದಾಳುಗಳ ಸ್ಥಿತಿಯಲ್ಲಿ ಸುಧಾರಣೆಯಾಯಿತು . ಸರದಾರರಿಗೆ ಸುಂಕ ಅಥವಾ ಸೇವೆಗೆ ಬದಲಾಗಿ ಬಾಡಿಗೆಯನ್ನು ಕೊಡುತ್ತಿದ್ದರು .
2 ) ಮಧ್ಯಕಾಲೀನ ಯುರೋಪಿನಲ್ಲಿ ಉಂಟಾದ ಸಾಮಾಜಿಕ ಆರ್ಥಿಕ ಬದಲಾವಣೆಗಳನ್ನು ಗುರ್ತಿಸಿ .
ಮಧ್ಯಕಾಲೀನ ಯೂರೋಪಿನಲ್ಲಿ ಉಂಟಾದ ಸಾಮಾಜಿಕ ಆರ್ಥಿಕ ಬದಲಾವಣೆಗಳೆಂದರೆ – ಈ ಕಾಲದಲ್ಲಿ ಒಂದು ಶ್ರೀಮಂತ ವರ್ಗ ಉದಯಿತು . ಅವರು ಸಾಂಸ್ಕೃತಿಕ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು . ಸ್ಥಳೀಯ ಕದನಗಳನ್ನು ಚರ್ಚ್ ನಿಯಂತ್ರಿಸುತ್ತಿತ್ತು . ಇದರಿಂದಾಗಿ ಸರದಾರರು ವೀರ ಯೋಧರನ್ನು ಬೆಳೆಸಿಕೊಳ್ಳಲು ಸಾಧ್ಯವಾಗಿ , ಮಹಿಳೆಯರ ಬಗೆಗಿನ ಮನೋಭಾವವು ಬದಲಾಯಿತು . ಮೆನೋರಿಯಲ್ ಪದ್ಧತಿಯಲ್ಲಿ ಜೀತದಾಳುಗಳು ಗೇಣಿ ನೀಡಬೇಕಾಗಿತ್ತು . ಇದರಿಂದ ನಾಣ್ಯ ಅಥವಾ ಹಣ ವಸ್ತು ವಿನಿಮಯ ಸ್ಥಾನವನ್ನು ಆಕ್ರಮಿಸಿತು , ಹಣದ ಚಲಾವಣೆಯು ವ್ಯಾಪಾರ ಮತ್ತು ವಾಣಿಜ್ಯದ ಪುನಶ್ವೇತನಕ್ಕೆ ಸಹಾಯಕವಾಯಿತು . ಇದು ರಸ್ತೆ ಮತ್ತು ನದಿ ಸಾರಿಗೆ ವ್ಯವಸ್ಥೆಯು ಅಭಿವೃದ್ಧಿಗೆ ಕಾರಣವಾಯಿತು . ತೇಗಾ , ವೆನಿಸಾ , ಜಿನೋವಾ ನಗರಗಳ ಜನಸಂಖ್ಯೆ ದ್ವಿಗುಣಗೊಂಡಿತು . ಗ್ರಾಮೀಣ ವಸ್ತುಗಳ ಬೇಡಿಕೆ ಹೆಚ್ಚಾಗಿ ಪ್ರಮುಖ ವ್ಯಾಪಾರ ಕೇಂದ್ರಗಳಾದವು . ಪ್ಯಾರಿಸ್ , ಲಂಡನ್ ಮತ್ತು ಕೊಲೋನ್‌ಗಳಂತಹ ಜನರ ಆರ್ಥಿಕ ಜೀವನ ಸದೃಢವಾಯಿತು . ಸುಶಿಕ್ಷಿತ ರೀತಿಯ ನಗರ ಜೀವನವು ಈ ಕಾಲದ ಒಂದು ಪ್ರಮುಖ ಲಕ್ಷಣವಾಗಿತ್ತು . ಅಲ್ಲಿ ವ್ಯಾಪಾರ ವರ್ಗವೊಂದು ಬೆಳೆಯಿತು . ಈ ವರ್ಗವು ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ವ್ಯಾಪಾರಿ ಸಂಘಗಳು ಸ್ಥಾಪಿತವಾಯಿತು . ಇದಕ್ಕಾಗಿ ಕೆಲವು ನಿಯಮಾಗಳನ್ನು ಮಾಡಿತು . ಪುರೋಹಿತದಲ್ಲಿ ಎರಡು ವರ್ಗಗಳಿದ್ದು – ಉನ್ನತ ವರ್ಗದ ಪುರೋಹಿತರು ವೈಭವಪೋರಿತ ಜೀವನ ನಡೆಸುತ್ತಿದ್ದರೆ ಕೆಳವರ್ಗದ ಪುರೋಹಿತರು ಸೀಮಿತ ಅವಶ್ಯಕತೆಗಳೊಂದಿಗೆ ಜೀವನ ನಡೆಸುತ್ತಿದ್ದರು .
3 ) ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಕಾರಣಗಳು ಯಾವುವು ?
ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಪ್ರಮುಖ ಕಾರಣಗಳೆಂದರೆ –
1 ) ಪ್ರಬಲ ಪ್ರಭುತ್ವಗಳ ಉದಯ : * ಯೂರೋಪಿನ ಹಲವು ದೇಶಗಳಲ್ಲಿ ಪ್ರಬಲ ಪ್ರಭುತ್ವಗಳು ಬೆಳೆದವು . ರಾಜ್ಯ ಊಳಿಗಮಾನ್ಯ ಒಡೆಯರನ್ನು ದಮನ ಮಾಡಲಾಗಿ , ಅದು ಊಳಿಗ ಮಾನ್ಯ ಪದ್ಧತಿಯ ಪತನಕ್ಕೆ ಕಾರಣವಾಯಿತು .
2 ) ಬದಲಾದ ನಿಷ್ಠೆ : ಹೆಚ್ಚಿನ ತೆರಿಗೆ ಕಟ್ಟಬೇಕಾದುದರಿಂದ ಮತ್ತು ನಿರ್ಲಕ್ಷ್ಯಕ್ಕೆ ಒಳಗಾದುದರಿಂದ ಸಾಮಾನ್ಯ ಜನರು ಹಾಗೂ ಜೀತದಾಳುಗಳೂ ಆ ಸಂತುಷ್ಟರಾಗಿದ್ದರು . ಆದ್ದರಿಂದ ಅವರು ತಮ್ಮ ನಿಷ್ಠೆಯನ್ನು ರಾಜನೆಡೆಗೆ ಬದಲಿಸಿದರು . ಇದು ಭೂ ಮಾಲೀಕರನ್ನು ದುರ್ಬಲಗೊಳಿಸಿತು . ಹೀಗಾಗಿ ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಕಾರಣವಾಯಿತು .
3 ) ವಾಣಿಜ್ಯ ಮತ್ತು ಕೈಗಾರಿಕೆಗಳ ಬೆಳವಣಿಗೆ : ವಾಣಿಜ್ಯ ಮತ್ತು ಕೈಗಾರಿಕೆಗಳ ಬೆಳವಣಿಗೆಯೊಂದಿಗೆ ಜನರು ಜೀವನೋಪಾಯದ ಹೊಸ ಮಾರ್ಗವನ್ನು ಕಂಡುಕೊಂಡರು ಮತ್ತು ತಮ್ಮ ಭೂಮಿಯನ್ನು ಬಿಟ್ಟು ಹೊರಟರು . ಮಧ್ಯಮ ವರ್ಗದ ಬೆಳೆವಣಿಗೆ ಊಳಿಗಮಾನ್ಯ ವ್ಯವಸ್ಥೆಯ ಪತನಕ್ಕೆ ಕಾರಣವಾಯಿತು .
4 ) ಹಣ ಆಧಾರಿತ ಅರ್ಥ ವ್ಯವಸ್ಥೆಯ ಪ್ರಾಬಲ್ಯ : ಸಾಮಾನ್ಯರು ಮತ್ತು ಜೀತದಾರರು ಒಡೆಯನಿಗೆ ಸಲ್ಲಿಸುತ್ತಿದ್ದ ಸೈನಿಕ ಸೇವೆ ಸಲ್ಲಿಸಿದರು . ಇದು ಊಳಿಗಮಾನ್ಯ ಒಡೆಯರ ಶಕ್ತಿ ಕುಸಿಯಲು ಕಾರಣವಾಯಿತು .
5 ) ರಾಜರಿಂದ ಬಅಷ್ಟ ಸೇನೆಗಳ ನಿರ್ಮಾಣ : ಸಿಡಿಮದ್ದಿನ ಉಪಯೋಗ ಮತ್ತು ಸುಸಂಘಟಿತ ಸೇನೆ ಊಳಿಗಮಾನ್ಯ ಪದ್ಧತಿಯ ಅವನತಿಗೆ ಕಾರಣವಾಯಿತು .
6 ) ಕಾರ್ಮಿಕರ ಕೊರತೆ : ಪರ್ಯಾಯ ಉದ್ಯೋಗವಕಾಶ ಕಲ್ಪಿಸಿಕೊಂಡು , ಪ್ಲೇಗನಂತಹ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದು , ಕಾರ್ಮಿಕರ ವೇತನ ಹೆಚ್ಚಿದುದು ಊಳಿಗಮಾನ್ಯ ಪದ್ಧತಿಯ ಒಡೆತನ ಕುಸಿಯಿತು .
7 ) ಭೂಮಾಲೀಕರ ನಡುವೆ ಸಂಘರ್ಷ : ಒಡೆಯರು , ಜೀತದಾಳುಗಳಿಗೆ ಕೊಡುತ್ತಿದ್ದ ತೊಂದರೆ ಅಸಹನೀಯವಾಗಿ ಉಂಟಾದುದು ಊಳಿಗಮಾನ್ಯ ಪದ್ಧತಿಯ ಪತನಕ್ಕೆ ಕಾರಣವಾಯಿತು .
4. ಮಧ್ಯಕಾಲೀನ ಯೂರೋಪಿನಲ್ಲಿ ಪೋಪ್ ಮತ್ತು ರಾಜರ ನಡುವೆ ನಡೆದ ಸಂಘರ್ಷಗಳನ್ನು ವರ್ಣಿಸಿ .
ಮಧ್ಯಕಾಲೀನ ಯೂರೋಪಿನಲ್ಲಿ ಪೋಪ್ ಮತ್ತು ರಾಜರ ನಡುವೆ ಸಂಘರ್ಷಗಳು ಹೆಚ್ಚಾಗಿದ್ದವು – ಪೋಪ್ 7 ನೇ ಗ್ರೆಗೋರಿ ಮತ್ತು ರೋಮ್ ಸಾಮ್ರಾಟನಾದ 4 ನೇ ಹೆನ್ರಿಯ ನಡುವೆ ಸಂಘರ್ಷವು ಉದ್ಭವಿಸಿತು . ರಾಜನು ಪೋಪನ ಒಪ್ಪಿಗೆ ಕೇಳದೆ ಮಿಲಾನ್ ನಗರದ ಬಿಷಪ್‌ನನ್ನು ನೇಮಕ ಮಾಡಿದನು . ಇದರಿಂದ ಪೋಪನು ರಾಜನ ಪ್ರಭಾವದಿಂದ ಚರ್ಚ್‌ನ್ನು ಮುಕ್ತಗೊಳಿಸಲು ಬಯಸಿದನು . 4 ನೇ ಹೆನ್ರಿಯ ವಿರೋಧಿಗಳಾಗಿದ್ದ ಅನೇಕ ಜರ್ಮನ್ ರಾಜಕುಮಾರರೊಂದಿಗೆ ಒಕ್ಕೂಟ ರಚಿಸಿಕೊಂಡನು . ಅವರೆಲ್ಲರೂ ಒಟ್ಟಾಗಿ ರಾಜನಾದ 4 ನೇ ಹೆನ್ರಿಯನ್ನು ಪದಚ್ಯುತಿಗೊಳಿಸಿದರು . ಆದ್ದರಿಂದ ಅವರು ಸೋಪನ ಕ್ಷಮೆಯಾಚಿಸುವಂತಾಯಿತು . ಅದಕ್ಕಾಗಿ ರಾಜನು ಬರಿಗಾಲಿನಲ್ಲಿ ಒಬ್ಬ ಸಾಧಾರಣ ಬಟ್ಟೆ ತೊಟ್ಟು ಮೂರು ದಿವಸ ಪೋಪನ ಕೋಟೆಯ ಬಾಗಿಲಲ್ಲಿ ಕಾಯಬೇಕಾಯಿತು . ನಂತರದಲ್ಲಿ ಅವನು ಕ್ಷಮೆ ಹಾಗು ಅಧಿಕಾರವನ್ನು ಪಡೆದನು . ನಂತರ 4 ನೇ ಹೆನ್ರಿಯು ಪೋಪ್ 7 ನೇ ಗ್ರೆಗೋರಿಯನ್ನು ಬೆನ್ನಟ್ಟಿ ರೋಮ್‌ನಿಂದ ಹೊರಗಟ್ಟಿದನು .
14 ನೇ ಶತಮಾನದಲ್ಲಿ ಪೋಪನ ಪರಮಾಧಿಕಾರ ಮುಕ್ತ ಘಟ್ಟತಲುಪಿತು . ಇದಕ್ಕೆ ಪ್ರಮುಖ ಕಾರಣ
1 ) ಕ್ರೈಸ್ತ ಧರ್ಮದೊಳಗಿನ ವ್ಯವಸ್ಥೆ ಮತ್ತು ಸೋಪನ ಅಧಿಕಾರಿಗಳಿಗೆ ಸಂಬಂಧಿಸಿದ ವ್ಯವಸ್ಥೆಯೊಳಗಿನ ವೈರುಧ್ಯ .
2 ) ಅನೈತಿಕ ಉತ್ತರಾಧಿಕಾರಿಗಳು , ಹಾಗೂ
3 ) ರಾಷ್ಟ್ರೀಯ ರಾಜಪ್ರಭುತ್ವದ ಏಳಿಗೆ .
1. ಊಳಿಗಮಾನ್ಯ ವ್ಯವಸ್ಥೆಯ ಗುಣ ಮತ್ತು ದೋಷಗಳನ್ನು ಚರ್ಚಿಸಿ .
ಊಳಿಗಮಾನ್ಯ ವ್ಯವಸ್ಥೆಯ ಗುಣಗಳು ಇಂತಿವೆ :
1 ) ವಿಕೇಂದ್ರಿಕೃತ ರಾಜಕೀಯ ಆಡಳಿತದ ಬೆಳವಣಿಗೆಗೆ ಸಹಾಯಕವಾಗಿ ನಿರಂಕುಶ ಪ್ರಭುತ್ವದ ಬೆಳವಣಿಗೆಯನ್ನು ತಡೆಯಿತು .
2 ) ರಾಜತ್ವವನ್ನು ಉಳಿಸುವಲ್ಲಿ ಊಳಿಗಮಾನ್ಯ ಪದ್ಧತಿಯು ಸಹಾಯ ಮಾಡಿತು .
3 ) ಊಳಿಗಮಾನ್ಯ ಒಡೆಯರು ರಾಜನ ಆಸ್ಥಾನಿಕರಾದ ಕಾರಣ “ ಬಲಿಷ್ಠ ಪ್ರಭುತ್ವಗಳು ” ಬೆಳೆಯಲು ಸಾಧ್ಯವಾಯಿತು .
4 ) ರಾಷ್ಟ್ರದ ರಕ್ಷಣೆ ಹಾಗೂ ರಾಷ್ಟ್ರೀಯತೆಯ ಉದಯಕ್ಕೆ ಕಾರಣವಾಯಿತು .
5 ) ನಿರಂತರ ಹೋರಾಟಗಳಿಂದ ಉತ್ತಮ ಶಸ್ತ್ರಾಸ್ತ್ರಗಳು ತರಬೇತಿ ಮತ್ತು ಸಂಘಟನೆಯಂತಹ ಸೈನಿಕ ತಂತ್ರಗಳ ಬೆಳವಣಿಗೆಗೆ ಸಹಾಯವಾಯಿತು .
6 ) ಊಳಿಗಮಾನ್ಯ ಪದ್ಧತಿಯು ಸಮಾಜದಲ್ಲಿ ಸ್ಥಿರತೆ ಮತ್ತು ವ್ಯವಸ್ಥೆಯನ್ನು ತಂದಿತು .
7 ) ಊಳಿಗಮಾನ್ಯ ಪದ್ಧತಿ ಕರ್ತವ್ಯ ಮತ್ತು ಕ್ರಮಬದ್ಧತೆಯ ಅರಿವನ್ನು ಬೆಳೆಸಿತು .
ಊಳಿಗಮಾನ್ಯ ಪದ್ಧತಿಯ ದೋಷಗಳು :
1 ) ಹಿಡುವಳಿದಾರರು ಮತ್ತು ರಾಜರ ನಡುವೆ ಆಗಾಗ ಕಲಹಗಳು ನಡೆಯುತ್ತಿದ್ದುದರಿಂದ ಸಮಾಜದಲ್ಲಿ ಸ್ಥಿರತೆ ಶಾಂತಿ , ಇರಲಿಲ್ಲ . ಅರ್ಥವ್ಯವಸ್ಥೆಯ ಮೇಲೂ ತನ್ನದೇ ಆದ ಪ್ರಭಾವ ಬೀರಿತು .
2 ) ಹಿಡುವಳಿದಾರರು ನಾಮಮಾತ್ರದ ರಾಜತ್ವವನ್ನು ಬೆಂಬಲಿಸಿದರು ಮತ್ತು ರಾಷ್ಟ್ರೀಯ ಸರ್ಕಾರ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದ್ದರು .
3 ) ಕುಲೀನರ ದಬ್ಬಾಳಿಕೆಯಿಂದ ಸಾಮಾನ್ಯ ಜನರು ಮತ್ತು ಜೀತದಾಳುಗಳು ನರಳಿದರು . ಹಿಂಸಾಚಾರದ ಬಲಿಪಶುಗಳಾಗಿದ್ದರು . ಸಾಮಾನ್ಯ ಜನರ ಮೇಲೆ ಹೆಚ್ಚಿನ ತೆರಿಗೆ ಹೊರೆಯಾಯಿತು .
4 ) ಜನರ ನಿಷ್ಠೆ ಭೂಮಾಲೀಕರಿಗೆ ಸೀಮಿತವಾಗಿದುದರಿಂದ ರಾಷ್ಟ್ರೀಯತೆಯ ಬೆಳವಣಿಗೆಗೆ ಅಡ್ಡಿಯಾಯಿತು .
5 ) ಊಳಿಗಮಾನ್ಯ ಪದ್ಧತಿಯು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸಿತು .
6 ) ಊಳಿಗಮಾನ್ಯ ಪದ್ಧತಿಯಿಂದಾಗಿ , ಬಿಷಪರು , ರಾಜ ಮತ್ತು ಅವನ ಹಿಡುವಳಿದಾರರ ನಡುವೆಯೂ ಸಂಘರ್ಷಗಳು ನಡೆಯುತ್ತಿದ್ದವು .
FAQ:
ಡಾಂಟ ಅಲಿಗೆರಿ
ಲ್ಯಾಟಿನ್
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್