rtgh

ಪ್ರಥಮ ಪಿ. ಯು. ಸಿ ಆಧುನಿಕ ಯುಗದ ಆರಂಭ ಇತಿಹಾಸ ನೋಟ್ಸ್‌ | 1st Puc History Chapter 7 Notes in Kannad Medium

ಪ್ರಥಮ ಪಿ. ಯು. ಸಿ ಆಧುನಿಕ ಯುಗದ ಆರಂಭ ಇತಿಹಾಸ ನೋಟ್ಸ್‌ , 1st Puc History Chapter 7 Notes in Kannad Medium Adhunika Yugada Arambha Notes Pdf Download Kseeb Solution For Class 11 Chapter 7 Notes in Kannada ಆಧುನಿಕ ಯುಗದ ಆರಂಭ Notes 1st PUC History 7th Chapter 2023

 

1st Puc History Notes in Kannada Chapter 7

1st Puc History Chapter 7 Notes

ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ .

1. “ ಪುನರುಜ್ಜಿವನದ ತಾಯ್ನಾಡು ( ತವರುಮನೆ ) ಎಂದು ಯಾವ ದೇಶವನ್ನು ಕರೆಯಲಾಗಿದೆ ?

ಇಟಲಿಯನ್ನು

2. ಮುದ್ರಣಯಂತ್ರವನ್ನು ಕಂಡು ಹಿಡಿದವರು ಯಾರು ?

ಜರ್ಮನಿಯ ಜಾನ್‌ಗುಟನ್ ಬರ್ಗ್ ,

3. ಪುನರುಜ್ಜಿವನದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?

ಪೆಟ್ರಾರ್ಕ್ ,

4. “ ನ್ಯಾವಿಗೇಟರ್ ” ಎಂದು ಯಾರನ್ನು ಕರೆಯಲಾಗಿದೆ ?

ಪೋರ್ಚುಗಲ್ ರಾಜಕುಮಾರ ಹೆನ್ರಿಗೆ .

5. ದಕ್ಷಿಣ ಅಮೇರಿಕಾದ ಮುಖ್ಯ ಭೂಭಾಗವನ್ನು ಅನ್ವೇಷಿಸಿದವರು ಯಾರು ?

ಅಮೆರಿಗೂ ವೆಸ್‌ಪಸ್ಸಿ

6 . ‘ಪುನರುಜ್ಜಿವನ’ ಪದದ ಅರ್ಥವೇನು ?

ಪುನರ್ಜನ್ಮ ಅಥವಾ ಪುನರಾವಲೋಕನ .

7 . ‘ ಪುನರುಜ್ಜಿವನ ‘ ಪದವು ಯಾವ ಶಬ್ದದಿಂದ ಬಂದಿದೆ ?

‘ ರೆನಾಸರೀ ‘ ಎಂಬ ಲ್ಯಾಟಿನ್ ಪದದಿಂದ ಬಂದಿದೆ .

8. “ ಮಾನವತಾವಾದದ ಪಿತಾಮಹ ” ಎಂದು ಯಾರನ್ನು ಕರೆಯಲಾಗಿದೆ ?

ಪೆಟ್ರಾರ್ಕ್

9. “ ಡಿವೈನ್ ಕಾಮಿಡಿ ” ಯ ಕರ್ತೃ ಯಾರು ?

ಡಾಂಟೆ

10. “ ಉಟೋಪಿಯಾ ” ದ ರಚನಾಕಾರರನ್ನು ಹೆಸರಿಸಿ ,

ಸರ್ ಥಾಮಸ್ ಮೋರ್

11. “ ಪ್ಯಾರಡೈಸ್ ಲಾಸ್ಟ್ ” ಕೃತಿಯನ್ನು ಯಾರು ರಚಿಸಿದರು ?

ಜಾನ್ ಮಿಲ್ಟನ್

12. ‘ ಮೊನಾಲಿಸಾ’ವನ್ನು ಚಿತ್ರಿಸಿದವರು ಯಾರು ?

ಲಿಯೋನಾರ್ಡೊ ಡಾ ವಿಂಚಿ

13. ಗುರುತ್ವಾಕರ್ಷಣೆಯ ನಿಯಮವನ್ನು ಪ್ರತಿಪಾದಿಸಿದವರು ಯಾರು ?

ಸರ್ ಐಸಾಕ್ ನ್ಯೂಟನ್

14. ಧಾರ್ಮಿಕ ಸುಧಾರಣೆಯ ನಾಯಕ ಯಾರು ?

ಜಾನ್ ವೈಕ್ಲೀಫ್

15. ಕ್ಯಾಥೋಲಿಕ್ ಚರ್ಚ್ ವಿರುದ್ಧ “ 95 ನಿಬಂಧನೆಗಳನ್ನು ಪ್ರಕಟಿಸಿದವರು ಯಾರು ?

ಮಾರ್ಟಿನ್‌ಲೂಥರ್

16. ಧಾರ್ಮಿಕ ಸುಧಾರಣೆಯ ‘ ಉಷಾತಾರೆ ‘ ಎಂದು ಯಾರನ್ನು ಕರೆಯಲಾಗಿದೆ ?

ಜಾನ್ ವೈಕ್ಲೀಫ್

17. ಪ್ರತಿಧಾರ್ಮಿಕ ಸುಧಾರಣೆ ಎಂದರೇನು ?

ಕ್ಯಾಥೋಲಿಕ್ ಚರ್ಚ್‌ಗಳು ತಮ್ಮೊಳಗೆ ಸುಧಾರಣೆಕೊಳ್ಳಲು ಕಾರ್ಯ ಪ್ರವೃತ್ತವಾದುದನ್ನು ಪ್ರತಿಧಾರ್ಮಿಕ ಸುಧಾರಣೆ ಎಂದು ಕರೆಯುತ್ತಾರೆ .

18. ಧಾರ್ಮಿಕ ವಿಚಾರಣಾ ನ್ಯಾಯಾಲಯ ( ಇನ್‌ಕ್ವಿರೋಷನ್ ) ಎಂದರೇನು ?

ಧರ್ಮನಿಂದನೆ ಮಾಡುವವರನ್ನು , ದೈವನಿಂದನೆ ಮಾಡುವವರನ್ನು ಹಾಗೂ ತಪ್ಪು ಮಾಡಿದವರನ್ನು ಶಿಕ್ಷಿಸಲು ಸ್ಥಾಪಿಸಲಾದ ನ್ಯಾಯಾಲಯವನ್ನು “ ಧಾರ್ಮಿಕ ವಿಚಾರಣಾ ನ್ಯಾಯಾಲಯ ” ಅಥವಾ ಇನ್‌ಕ್ವಿರೋಷಾನ್ ‘ ಎಂದು ಕರೆಯುವರು .

19. “ ಸೊಸೈಟಿ ಆಫ್ ಜೀಸಸ್ನ ಸ್ಥಾಪಕರು ಯಾರು ?

ಇಗ್ನಿಷಿಯಸ್ ಲಯೋಲ .

20. ಧಾರ್ಮಿಕ ಸುಧಾರಣಾ ಚಳುವಳಿ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಪೋಪ್ ಯಾರು ?

ಪೋಪ್ ಹತ್ತನೇ ಲಿಯೋ

21. ಕ್ಷಮಾಪಣಾ ಪತ್ರಗಳು ಎಂದರೇನು ?

ಪೋಪನ ಹೆಸರಿನಲ್ಲಿ ತಪ್ಪು ಮಾಡಿದವರನ್ನು ಕ್ಷಮಿಸಲು ವಿತರಿಸಲಾಗುತ್ತಿದ್ದ ( ಮಾರಾಟ ಮಾಡುತ್ತಿದ್ದ ) ಪತ್ರಗಳನ್ನು ಕ್ಷಮಾಪಣ ಪತ್ರಗಳು ಎನ್ನುವರು .

22. ಇನ್ನೇಷಿಯಸ್ ಲಯೋಲನ ಅನುಯಾಯಿಗಳನ್ನು ಏನೆಂದು ಕರೆಯುತ್ತಿದ್ದರು ?

‘ ಜೆಸೂಟ್ಸ್ ‘ ಎಂದು ಕರೆಯುತ್ತಿದ್ದರು .

1st Puc History Beginning of Modern Age in Kannada

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ಕಾನ್‌ಸ್ಟಾಂಟಿನೋಪಲ್ ಪಟ್ಟಣವನ್ನು ಯಾರು ಯಾವ ವರ್ಷದಲ್ಲಿ ವಶಪಡಿಸಿಕೊಂಡರು ?

ಆಟೋಮನ್ ಟರ್ಕರು 1453 ರಲ್ಲಿ ಕಾನ್‌ಸ್ಟಾಂಟಿನೋಪಲ್‌ನ್ನು ವಶಪಡಿಸಿಕೊಂಡರು .

2 ) ರಾಜಕುಮಾರ ಹೆನ್ರಿಯನ್ನು ‘ ದಿ ನ್ಯಾವಿಗೇಟರ್’ಎಂದು ಏಕೆ ಕರೆಯುತ್ತಾರೆ ?

ರಾಜಕುಮಾರ ಹೆನ್ರಿ ‘ ನೌಕಾ ತರಬೇತಿ ಶಾಲೆ’ಯನ್ನು ಸ್ಥಾಪಿಸಿದುದೆ ಅಲ್ಲದೆ ಹಡಗು ನಿರ್ಮಾಣ ಹಾಗು ನೌಕಾಯಾನದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದನು . ಈತನು ಸ್ವತಃ ಅನ್ವೇಷಣಾಕಾರನಾಗಿರದಿದ್ದರೂ , ಸಾಹಸಿ ನಾವಿಕರ ಹಿಂದಿನ ಪ್ರೇರಕ ಶಕ್ತಿಯಾಗಿದ್ದನು . ಆದ್ದರಿಂದ ಈತನನ್ನು ‘ ದಿ ನ್ಯಾವಿಗೇಟರ್‌ ‘ ಎಂದು ಕರೆಯುತ್ತಾರೆ .

3 ) ಭಾರತಕ್ಕೆ ಯಾರು ಮತ್ತು ಯಾವ ವರ್ಷದಲ್ಲಿ ಜಲಮಾರ್ಗವನ್ನು ಕಂಡು ಹಿಡಿದರು ?

1498 ರಲ್ಲಿ ವಾಸ್ಕೋಡಗಾಮ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದನು .

4 ) ಮೆಗಲಾನನ ಯಾವುದಾದರೂ ಎರಡು ಹಡಗುಗಳನ್ನು ಹೆಸರಿಸಿ .

1 ) ವಿಕ್ಟೋರಿಯಾ ಹಾಗೂ

2 ) ಸಾನ್ ಆಂಟೋನಿಯೋ

5 ) ವಿಶ್ವವನ್ನು ಪ್ರದಕ್ಷಿಣೆ ಹಾಕಿದ ಮೊದಲ ಹಡಗು ಯಾವುದು ? ಆ ನೌಕಾಯಾನದ ನಾಯಕನಾರು ?

ವಿಕ್ಟೋರಿಯಾ ನೌಕೆ , ಮೊದಲನೇ ನಾಯಕ

1 ) ಫರ್ಡಿನೆಂಡ್ ಮೆಗಲಾನ್ ಈತನ ಮರಣಾನಂತರ

2 ) ಜಾಗ್ ಸೆಬಾಸ್ಟಿಯನ್ ಎಲ್ಯಾನೋ

6 ) ಯಾವುದಾದರೂ ಇಬ್ಬರು ಪ್ರಮುಖ ಭೌಗೋಳಿಕ ಅನ್ವೇಷಣಾಕಾರರನ್ನು ಹೆಸರಿಸಿ .

ಪೋರ್ಚ್‌ಗೀಸ್ ನಾವಿಕ – ವಾಸ್ಕೋಡಗಾಮ ಇಟಲಿಯ ನಾವಿಕ – ಅಮೆರಿಗೋ ವೆಸ್‌ಪಸ್ಸಿ

7 ) ಪುನರುಜೀವನ ಕಾಲದ ಇಬ್ಬರು ಮಾನವತಾವಾದಿಗಳನ್ನು ಹೆಸರಿಸಿ .

ಮಹಾನ್ ಮಾನವತಾವಾದಿ – ಪೆಟ್ರಾರ್ಕ್ ಡಾಂಟೆ , ಸಿಸಿರೊ , ಬೊಕಾಷಿಯೊ , ಸರ್ವಾಂಟ್ಸ್ .

8 ) ವಿಲಿಯಂ ಷೇಕ್ಸ್‌ಪಿಯರ್‌ನ ಯಾವುದಾದರೂ ಎರಡು ಕೃತಿಗಳನ್ನು ಹೆಸರಿಸಿ .

ಜೂಲಿಯಸ್ ಸೀಸರ್ , ಮ್ಯಾಕ್‌ಬೆತ್ , ಒಥೆಲೋ ಆಸ್ ಯು ಲೈಕ್ ಇಟ್ , ಹ್ಯಾಬ್ಲೆಟ್ , ಕಿಂಗ್‌ಲಿಯರ್ ಮುಂತಾದವು .

9 ) ಪುನರುಜೀವನ ಕಾಲದ ಯಾವುದಾದರೂ ಇಬ್ಬರು ಚಿತ್ರಕಾರರನ್ನು ಹೆಸರಿಸಿ .

ಮೈಕೆಲ್ ಏಂಜಲೋ , ರಾಫೆಲ್ ಲಿಯೋನಾರ್ಡೋಡಾ ವಿಂಚಿ

10 ) ಲಿಯೋನಾರ್ಡೊ ಡಾವಿಂಚಿಯ ಯಾವುದಾದರೂ ಎರಡು ಚಿತ್ರಕೃತಿಗಳನ್ನು ಹೆಸರಿಸಿ .

ದಿ ಲಾಸ್ ಸಪರ್ , ದಿ ಮೊನಾಲಿಸ್ , ವರ್ಜಿನ್ ಆಫ್ ದಿ ರಾಕ್ಸ್ , ದಿ ವರ್ಜಿನ ಅಂಡ್ ಚೈಲ್ಡ್ .

11 ) ಮೈಕಲ್ ಏಂಜಲೋ , ರಚಿಸಿದ ಯಾವುದಾದರೂ ಎರಡು ಚಿತ್ರಕೃತಿಗಳನ್ನು ಹೆಸರಿಸಿ

ದಿ ಲಾಸ್ಟ್ ಜಡ್ಜ್ ಮೆಂಟ್ ,

ಡೇ ಅಂಡ್ ನೈಟ್ .

12 ) ಪುನರ್‌ಜೀವನ ಕಾಲದ ಯಾವುದಾದರೂ ಇಬ್ಬರು ವಿಜ್ಞಾನಿಗಳನ್ನು ಹೆಸರಿಸಿ

ಸರ್ ಐಸಾಕ್ ನ್ಯೂಟನ್ , ಗೆಲಿಲಿಯೋ

13 ) ಮಾರ್ಟಿನ್‌ಲೂಥರ್ ಎಲ್ಲಿ ಮತ್ತು ಯಾವ ವರ್ಷದಲ್ಲಿ ಜನಿಸಿದನು ?

ಮಾರ್ಟಿನ್ ಲೂಥರ್ 1483 ರಲ್ಲಿ ಜರ್ಮನಿಯ ಐಲ್‌ಬೆನ್ ಎಂಬಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದನು .

14 ) ಜಾನ್‌ ವೈಕ್ಲಿಫ್‌ ಯಾರು ? ಅವನು ಯಾವ ದೇಶಕ್ಕೆ ಸೇರಿದವನು ?

‘ ಜಾನ್ ವೈಕ್ಲಿಫ್‌ ‘ , ಧಾರ್ಮಿಕ ಸುಧಾರಣೆಯ ಆರಂಭದ ನಾಯಕನಾಗಿ “ ಧರ್ಮ ಸುಧಾರಣೆಯ ಉಷಾಃತಾರೆ ” ಎನಿಸಿಕೊಂಡವನು . ಈತನು ಇಂಗ್ಲೆಂಡ್ ದೇಶಕ್ಕೆ ಸೇರಿದವನು .

15 ) ಕ್ರೈಸ್ತ ಧರ್ಮದ ಎರಡು ಪಂಥಗಳನ್ನು ಹೆಸರಿಸಿ .

ಕ್ರೈಸ್ತ ಧರ್ಮದ ಎರಡು ಪಂಥಗಳೆಂದರೆ –

1 ) ರೋಮನ್ ಕ್ಯಾಥೋಲಿಕ್

2 ) ಪ್ರೊಟೆಸ್ಟಂಟ್

16 ) ಪ್ರತಿ ಧಾರ್ಮಿಕ ಸುಧಾರಣೆಯ ನಾಯಕ ಯಾರು ? ಈತ ಸ್ಥಾಪಿಸಿದ ಸಂಸ್ಥೆಯ ಹೆಸರೇನು ?

ಪ್ರತಿ ಧಾರ್ಮಿಕ ಸುಧಾರಣೆಯ ನಾಯಕ ಇನ್ನೇಷಿಯಸ್ ಲಯೋಲ ‘ , ಈತ ಸ್ಥಾಪಿಸಿದ ಸಂಸ್ಥೆ ಜೀಸಸ್ ಸೊಸೈಟಿ .

1st Puc History Chapter 7 Notes

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ಭೌಗೋಳಿಕ ಅನ್ವೇಷಣೆಗೆ ಕಾರಣಗಳೇನು ?

ಭೌಗೋಳಿಕ ಅನ್ವೇಷಣೆಗೆ ಕಾರಣವಾದ ಅಂಶಗಳು ಹೀಗಿವೆ –

1. ಟರ್ಕರಿಂದ ಕಾನ್‌ಸ್ಟಾಂಟಿನೋಪಲ್ ವಶ : ಟರ್ಕರು 1453 ರಲ್ಲಿ ಕಾನ್‌ಸ್ಟಾಂಟಿನೋಪಲ್‌ನ್ನು ವಶಪಡಿಸಿಕೊಂಡ ಮೇಲೆ ಇದ್ದ ಏಕೈಕ ಭೂಮಾರ್ಗವನ್ನು ಮುಚ್ಚಿದರು , ಅಲ್ಲದೆ ಅವರು ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದರು . ದೌರ್ಜನ್ಯ ಎಸಗುತ್ತಿದ್ದರು . ಇದರಿಂದ ಪೂರ್ವ ರಾಷ್ಟ್ರಗಳಿಗೆ ಹೊಸ ಜಲಮಾರ್ಗಗಳನ್ನು ಕಂಡುಹಿಡಿಯಲು ಪ್ರೇರೇಪಿಸಿತು .

2. ಸರಕುಗಳಿಗಿದ್ದ ಬೇಡಿಕೆ : ಏಷ್ಯಾದ ಸರಕುಗಳಿಗೆ ಅದರಲ್ಲೂ ಸಾಂಬಾರು ಪದಾರ್ಥಗಳಾದ ಮೆಣಸು , ಏಲಕ್ಕಿ , ಲವಂಗ , ಶುಂಠಿ ಮೊದಲಾದವುಗಳಲ್ಲಿ ಯೂರೋಪಿನಲ್ಲಿ ತುಂಬಾ ಬೇಡಿಕೆ ಇತ್ತು . ಇದು ಲಾಭದಾಯಕ ವ್ಯಾಪಾರವಾಗಿದ್ದರಿಂದ ವ್ಯಾಪಾರ – ವಾಣಿಜ್ಯ ಸಂಬಂಧ ಬೆಸೆಯಲು ಭೌಗೋಳಿಕ ಅನ್ವೇಷಣೆ ಅವಶ್ಯವೂ ಆಗಿತ್ತು . ಅನಿವಾರ್ಯವು ಆಗಿತ್ತು ,

3. ಪ್ರವಾಸಿಗರ ವಿವರಣೆಗಳು : ಏಷ್ಯಾ ರಾಷ್ಟ್ರಗಳು ಹೆಚ್ಚು ಶ್ರೀಮಂತವಾಗಿದ್ದರಿಂದ ಯೂರೋಪ್ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು ಇಲ್ಲಿನ ಸಂಪತ್ತಿನಬಗ್ಗೆ ವಿವರಗಳನ್ನು ನೀಡಿದ್ದರಿಂದ ಕುತೂಹಲವು ಹೆಚ್ಚಿತು . ಇದಕ್ಕೆ ಉದಾಹರಣೆ ಎಂದರೆ ವೆನಿಸ್‌ನ ಆಭರಣ ವ್ಯಾಪಾರಿ ಮಾರ್ಕೋಫೋಲ್ , ನಿಕೋಲ್‌ಪೋಲೋ ಮಂಗೋಲಿಯಾ , ಭಾರತ , ಚೀನಾ ದೇಶಕ್ಕೆ ಭೇಟಿಕೊಟ್ಟು 24 ವರ್ಷಗಳ ಕಾಲ ಇಲ್ಲಿಯೇ ಉಳಿದು ವಿವರಗಳನ್ನು ನೀಡಿದ್ದಾರೆ .

4. ಭೌಗೋಆಕ ಜ್ಞಾನ “ ಎ ಮರ್ಚೆಂಟ್ಸ್ ಹ್ಯಾಂಡ್‌ಬುಕ್ ” ಹಾಗೂ “ ಸೀಕ್ರೇಟ್ಸ್ ಆಫ್ ದಿ ಫೇಯ್ ಫುಲ್ ಕ್ರೂ ಸೇಡರ್ ” ಮುಂತಾದ ಪುಸ್ತಕಗಳು ಸಾಹಸಿ ಬುದ್ಧಿ ಜೀವಿಗಳಿಗೆ ಹೊಸ ಚೈತನ್ಯವನ್ನು ತುಂಬಿತ್ತು . ಭೌಗೋಳಿಕ ಜ್ಞಾನ , ಭೌಗೋಳಿಕ ಅನ್ವೇಷಣೆಗೆ ಕಾರಣವಾಯಿತು .

5. ಕ್ರೈಸ್ತ ಧರ್ಮದ ಪ್ರಸಾರ : ಯೂರೋಪಿನ ರಾಜರು , ಪಾದ್ರಿಗಳು , ಕ್ರೈಸ್ತ ಮಿಷನರಿಗಳು ಹೊಸ ಭೂಪ್ರದೇಶಗಳಲ್ಲಿ ಕ್ರೈಸ್ತ ಧರ್ಮವನ್ನು ಪ್ರಸಾರ ಮಾಡಲು ಉತ್ಸುಕರಾಗಿದ್ದರು .

6. ರಾಜಕುಮಾರ ಹೆನ್ರಿ ಪರಿಶ್ರಮ : ಪೋರ್ಚುಗಲ್ ರಾಜಕುಮಾರ ಹೆನ್ರಿಯು ಸ್ಥಾಪಿಸಿದ ‘ ನೌಕಾಯಾನ ತರಬೇತಿ ಶಾಲೆ’ಯು ನಾವಿಕರು , ಭೂಗೋಳಶಾಸ್ತ್ರಜ್ಞರು ಭೂಪಟ ತಯಾರಕರು ಹಾಗೂ ಹಡಗು ತಯಾರಿಕೆಗೆ ಸೂಕ್ತ ತರಬೇತಿ ನೀಡಿದುದು ಭೌಗೋಳಿಕ ಸಂಶೋಧನೆಗೆ ಸಹಕಾರಿಯಾಯಿತು .

7. ಇತರೆ ಕಾರಣಗಳು : ಮುದ್ರಣ ಯಂತ್ರದ ಆವಿಷ್ಕಾರ , ನಾವಿಕರ ದಿಕ್ಕೂಚಿ ಹೊಸ ಭೂಪಟಗಳ ರಚನೆ , ಬ್ಯಾಂಕುಗಳ ಸ್ಥಾಪನೆ ಮುಂತಾದವುಗಳು ಭೌಗೋಳಿಕ ಅನ್ವೇಷಣೆಗೆ ಅವಕಾಶ ಮಾಡಿಕೊಟ್ಟಿತು . ಅಲ್ಲದೆ ರಾಜರು ಪ್ರೋತ್ಸಾಹದಾಯಕರಾಗಿದ್ದರು .

2 ) ಭೌಗೋಳಿಕ ಅನ್ವೇಷಣೆಯಲ್ಲಿ ಕೊಲಂಬಸ್ ಹಾಗೂ ವಾಸ್ಕೋಡಗಾಮರ ಪಾತ್ರವನ್ನು ತಿಳಿಸಿ .

ಭೌಗೋಳಿಕ ಅನ್ವೇಷಣೆಯಲ್ಲಿ ಕೊಲಂಬಸ್ ಹಾಗೂ ವಾಸ್ಕೋಡಗಾಮರ ಪಾತ್ರಮಹತ್ವ ಪೂರ್ಣವಾದುದು . “ ಕ್ರಿಸ್ಟೋಪರ್ ಕೋಲಂಬಸ್‌ನು ಸ್ಪೇನ್ ಅರ ಫರ್ಡಿನೆಂಡ್ ಮತ್ತು ರಾಣಿ ಎಸೆಬೆಲ್ಲರ ಸಹಾಯ ಪಡೆದು , ಸಾಹಸಿ ಯುವಕರೊಂದಿಗೆ ನೌಕಾಯಾನ ಕೈಗೊಂಡು 1492 ರಲ್ಲಿ ವೆಸ್ಟ್ ಇಂಡೀಸ್‌ನ ಬಹಮಾಸ ದ್ವೀಪಗಳಲ್ಲಿ ಒಂದಾದ ಸಾನ್ ಸಾಲೈಡಾರ್ ತಲುಪಿ ತಾನು ಭಾರವನ್ನು ತಲುಪಿದನೆಂದು ನಂಬಿದನು . ಇಲ್ಲಿನ ಸ್ಥಳೀಯರು ಕೆಂಪು ಬಣ್ಣವುಳ್ಳವರಾಗಿದ್ದರಿಂದ ಅವರನ್ನು ರೆಡ್ ಇಂಡಿಯನ್ನರು ಎಂದು ಕರೆದನು .

ಯಾನ ಮುಂದುವರೆಸಿ ದಕ್ಷಿಣ ಅಮೆರಿಕ , ಕ್ಯೂಬಾ ಮತ್ತು ಹೈಟಿ ಭೂಪ್ರದೇಶಗಳನ್ನು ಕಂಡು ಹಿಡಿದನು . ಪೋರ್ಚ್‌ಗೀಸ್ ನಾವಿಕನಾದ ವಾಸ್ಕೋಡಗಾಮನು ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದನು . ಈತನಿಗೆ ಎರಡನೇ ಇಮ್ಯೂನ್ಯುಯಲ್‌ನ ಆಶ್ರಯ ಪಡೆದಿದ್ದನು . ಆಫ್ರಿಕಾದ ಪಶ್ಚಿಮ ತೀರದ ಮೂಲಕ ಪ್ರಯಾಣಿಸಿ “ ಬಿರುಗಾಳಿಗಳ ಭೂಶಿರವನ್ನು ತಲುಪಿದನು . ಇದನ್ನೇ ‘ ಕೇಪ್ ಆಫ್ ಗುಡ್ಹೋಪ್ ‘ ಎಂದು ಮರು ನಾಮಕರಣ ಮಾಡಿದನು . 1498 ರಲ್ಲಿ ಭಾರತದ ಪಶ್ಚಿಮ ಕರಾವಳಿಯ ಮಲಬಾರ ತೀರದ ಕಲ್ಲಿಕೋಟೆ ತಲುಪಿದನು . ಇಲ್ಲಿನ ದೊರೆ ಜಾಮೋರಿನ್‌ನು ವಾಸ್ಕೋಡಾಗಾಮನಿಗೆ ಸ್ವಾಗತ ನೀಡಿದನು . ಈತನ ಸಮುದ್ರಯಾನವು ಭಾರವನ್ನು ಪ್ರವೇಶಿಸಲು ಯುರೋಪಿಯನ್ನರಿಗೆ ಬಾಗಿಲು ತೆರೆದಂತಾಯಿತು .

3 ) ಭೌಗೋಳಿಕ ಅನ್ವೇಷಣೆಯ ಪರಿಣಾಮಗಳನ್ನು ವರ್ಣಿಸಿ .

ಭೌಗೋಳಿಕ ಅನ್ವೇಷಣೆಯ ಸಂಶೋಧನೆಗಳು ಪ್ರಪಂಚದ ರಾಜಕೀಯ , ಆರ್ಥಿಕ , ಸಾಮಾಜಿಕ , ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಮೇಲೆ ಮಹತ್ತರ ಪ್ರಭಾವವನ್ನು ಬೀರಿದೆ . ಅವುಗಳೆಂದರೆ –

1. ಹೊಸ ಭೂ ಪ್ರದೇಶಗಳಾದ ಉತ್ತರ ಅಮೇರಿಕಾ ಹಾಗೂ ದಕ್ಷಿಣ ಅಮೇರಿಕಾಗಳ ಶೋಧನೆಯಿಂದಾಗಿ ವಿಫುಲ ಅವಕಾಶಗಳು ಲಭಿಸಿದವು .

2. ಮೆಗಲನ್ನನ ಭೂ ಪ್ರದಕ್ಷಿಣೆಯಿಂದಾಗಿ ಭೂಮಿಯು ದುಂಡಾಗಿದೆಯೆಂಬುದು ಸಾಬೀತಾಯಿತು .

3 . ಯೂರೋಪಿಯನ್ನರು ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳೆರಡರ ಮೇಲೂ ಸಾಕಷ್ಟು ಪ್ರಭಾವ ಬೀರಿತು .

4. ಹಿಂದೆ ಯುರೋಪಿನಲ್ಲಿ ಪ್ರಾಮುಖ್ಯತೆ ಹೊಂದಿದ್ದ ವ್ಯಾಪಾರ ಕೇಂದ್ರಗಳಾದ ವೆನಿಸ್ , ಜಿನೋವಾ , ಪ್ಲಾರೆನ್ಸ್ ಮೊದಲಾದವು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡವು .

5. ಹೊಸದಾಗಿ ಪತ್ತೆ ಹಚ್ಚಲ್ಪಟ್ಟ ಭೂ ಪ್ರದೇಶಗಳಿಗೆ ಯೂರೋಪಿನ ರಾಜರುಗಳು ಕ್ರೈಸ್ತ ಧರ್ಮ ಪ್ರಸಾರ ಕೈಗೊಂಡರು .

6. ಶ್ರೀಮಂತ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದವರು ಭೌಗೋಳಿಕ ಅನ್ವೇಷಣೆಯಿಂದಾಗಿ ರಾಜಪ್ರಭುತ್ವಕ್ಕೆ ಬೆಂಬಲ ನೀಡಿದರು .

7. ಐರೋಪ್ಯ ರಾಷ್ಟ್ರಗಳಲ್ಲಿ ಪೈಪೋಟಿ ಉಂಟಾಯಿತು .

8 . ವ್ಯಾಪಾರ , ಹಡಗು ಉದ್ಯಮ ಕೈಗಾರಿಕೆ , ಬ್ಯಾಂಕುಗಳ ಹಾಗೂ ವಾಣಿಜ್ಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿತು .

4 ) ಪುನರುಜೀವನಕ್ಕೆ ಕಾರಣಗಳು ಯಾವುವು ?

1 ) ಕಾನ್‌ಸ್ಟಾಂಟಿನೋಪಲ್‌ನ ವಶ : 1453 ರಲ್ಲಿ ಆಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ಅನ್ನು ವಶಪಡಿಸಿಕೊಳ್ಳಲಾಗಿ , ಇಲ್ಲಿನ ವಿದ್ವಾಂಸರು ಇಟಲಿಗೆ ಪಲಾಯನ ಮಾಡಿದರು . ಇಟಲಿಯ ಪೋಪ್ , ಪಾದ್ರಿಗಳು , ರಾಜಕುಮಾರರು ಹಾಗೂ ವ್ಯಾಪಾರಿಗಳು ಆಶ್ರಯ ನೀಡಿದರು . ಶ್ರೇಷ್ಠ ಸಾಹಿತ್ಯದ ಅಧ್ಯಯನಕ್ಕೆ ಪ್ರೋತ್ಸಾಹದಾಯಕವಾಗಿತ್ತು .

2 ) ಶಿಕ್ಷಣದ ಪ್ರಕಾರ : ಯೂರೋಪಿನ ವಿವಿಧ ಸ್ಥಳಗಳಲ್ಲಿ , ಅದರಲ್ಲು ಪ್ಯಾರಿಸ್ , ಪಡುವಾ , ನೇಪಾಲ್ , ಆಕ್ಸ್‌ಫರ್ಡ್ ಮೊದಲಾದ ಕಡೆ ಕ್ಯಾಥೋಲಿಕರು ಸ್ಥಾಪಿಸಿದ ಮಿಷನರಿ ಶಾಲೆಗಳು ಹಾಗೂ ವಿಶ್ವವಿದ್ಯಾನಿಲಯಗಳು ಶಿಕ್ಷಣದ ಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟನು .

3 ) ಭೌಗೋಳಿಕ ಸಂಶೋಧನೆಗಳು : 15 ಮತ್ತು 16 ನೇ ಶತಮಾನಗಳಲ್ಲಿ ಯೂರೋಪಿಯನ್ನರು ಕಂಡು ಹಿಡಿದ ಹೊಸ ಪ್ರದೇಶಗಳಿಂದಾಗಿ ಇವರಿಗೆ ಹೊಸ ಆದರ್ಶಗಳು , ವಿಚಾರಗಳು ಮತ್ತು ಜ್ಞಾನದ ಸಂಪರ್ಕ ದೊರಕಿತು .

4 ) ಉಳಿಗಮಾನ್ಯ ಪದ್ಧತಿಯ ಅವನತಿ : ಯೂರೋಪಿನಲ್ಲಿ ಅಧಿಕಾರಕ್ಕೆ ಬಂದ ಕೇಂದ್ರೀಕೃತ ರಾಜಪ್ರಭುತ್ವಗಳಿಂದಾಗಿ ಮಧ್ಯಯುಗದ ಅಂತ್ಯದಲ್ಲಿ ಊಳಿಗಮಾನ್ಯ ಪದ್ಧತಿಯು ಅವನತಿಯಾಯಿತು . ರಾಜರುಗಳು ಪ್ರಜಾ ಕಲ್ಯಾಣ ಮತ್ತು ಶ್ರೇಷ್ಠ ಸಾಹಿತ್ಯವನ್ನು ಪ್ರೋತ್ಸಾಹಿಸಲು ಆಸಕ್ತಿ ತಳೆದಿದ್ದರು .

5 ) ಯೂರೋಪಿನ ಜನತೆ ಪ್ರಾಚೀನ ಕಲೆ ವಾಸ್ತುಶಿಲ್ಪ ಮತ್ತು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿದರು .

6 ) ಮುದ್ರಣ ಯಂತ್ರ ಪಾತ್ರ : ಮುದ್ರಣ ಯಂತ್ರದ ಸಂಶೋಧನೆಯು ಪ್ರಮುಖ ಅಂಶವಾಗಿದೆ .

5 ) ಪುನರ್‌ಜೀವನದ ಪ್ರಮುಖ ಲಕ್ಷಣಗಳನ್ನು ವಿವರಿಸಿ .

ಪುನರ್‌ ಜೀವನದ ಪ್ರಮುಖ ಲಕ್ಷಣಗಳೆಂದರೆ .

ಮಾನವತಾವಾದಿಗಳು ಜನತೆಯಲ್ಲಿ ವಿಶಾಲ ಮತ್ತು ಮುಕ್ತ ಮನಸ್ಸು ಇಟಲಿಯ ಬುದ್ದಿಜೀವಿಗಳ ಒಂದು ಗುಂಪು ಮಾನವತಾ ಚಳುವಳಿಯನ ಶಾಸ್ತ್ರೀಯ ಹಾಗೂ ವಿಮರ್ಶಾತ್ಮಕ ದೃಷ್ಠಿಕೋನಗಳನ್ನು ಬೆಳೆಸಿದರು . ಇವರು ಮೂಲತಃ ತ – ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದರು .

ಈ ಚಳವಳಿಯು ಮಹಾನ್ ಮಾನವತಾವಾಧಿ ಪೆಟ್ರಾರ್ಕನ ನೇತೃತ್ವದಲ್ಲಿ ಪ್ರಾರಂಭವಾಯಿತು . ಈತನನ್ನು ‘ ಮಾನವತಾವಾದದ ಪಿತಾಮ ಪುನರ್‌ ಜೀವನದ ಪಿತಾಮಹಾ ‘ ಎಂದು ಕರೆಯಲಾಗಿದೆ .

ಡಾಂಟೆ , ಸಿಸಿಕೊ ಬೊರಾಷಿಯೋ ಸರ್ವಾಂಟ್ಸ್ ಪ್ರಮುಖ ಮಾನವತಾವಾದಿಗಳಾಗಿದ್ದಾರೆ .

ಶಾಸ್ತ್ರೀಯ ಶೈಲಿಯ ಅನುಕರಣೆ : ಯೂರೋಪಿನ ಪುನರ್‌ಜೀವನದ ಕಾಲದ ಮತ್ತೊಂದು ಪ್ರಮುಖ ಲಕ್ಷಣ ಎಂದರೆ ಶಾಸ್ತ್ರೀಯ ಶೈಲಿಯ ಅನುಕರಣೆ . ಹೊಸ ಶೈಲಿಯ ಭಾವನೆಗಳನ್ನು ವ್ಯಕ್ತಪಡಿಸಲು ಅನಕೂಲವಾಯಿತು .

ಮಾನವಶಾವಾದ ಪ್ರಾದೇಶಿಕ ಭಾಷೆಗಳ ಬೆಳವಣಿಗೆ : ಯೂರೋಪಿನಲ್ಲುಂಟಾದ ಪುನರ್‌ಜೀವನದ ಪರಿಣಾಮವಾಗಿ ಪ್ರಾದೇಶಿಕ ಭಾಷೆಗಳಾದ ಇಂಗ್ಲೀಷ್ , ಜರ್ಮನ್ , ಇಟಾಲಿಯನ್ , ಸ್ಪಾನಿಷ್ ಮೊದಲಾದವುಗಳು ಅಭಿವೃದ್ಧಿಗೊಂಡವು .

6 ) ಪುನರ್‌ಜೀವನವು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳೇನು ?

ಪುನರ್‌ಜೀವನವು ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದೆ . ಮಾನವತಾವಾದ ಮತ್ತು ಶಾಸ್ತ್ರೀಯ ಶೈಲಿಗಳ ಅನುಕರಣೆ ಸಾಹಿತ್ಯದ ಪ್ರಮುಖ ಅಂಶಗಳಾಗಿವೆ . ಇಟಲಿಯ ಬರಹಗಾರರು ಇಂಗ್ಲೀಷ್ , ಸ್ಪಾನಿಷ್ , ಡಚ್ , ಫ್ರೆಂಚ್ ಮೊದಲಾದ ಬರಹಗಾರರಿಗೆ ಅಪಾರ ಸಾಹಿತ್ಯ ಸೃಷ್ಟಿಸಲು ಹೆಚ್ಚಿನ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದರು . ಪೆಟ್ರಾರ್ಕ್ , ಡಾಂಟೆ ಹಾಗೂ ಬೊಕಾಷಿಯೋ ಪುನರ್‌ಜೀವನ ಕಾಲದ ಆರಂಭಿ ಬರಹಗಾರರಾಗಿದ್ದರು , ಪೆಟಾರ್ಕನು ಸುಮಾರು 200 ಲ್ಯಾಟಿನ್ ಮತ್ತು ಗ್ರೀಕ್ ಹಸ್ತಪ್ರತಿಗಳನ್ನು ಸಂಗ್ರಹಿಸಿದನು . ಇವನನ್ನು ಪುನರ್‌ ಜೀವನದ ಚಳುವಳಿಯ ಉಷ ತಾರೆ ಎಂದು ಕರೆಯಲಾಗಿದೆ .

ಪುನರ್‌ಜೀವನ ಕಾಲದ ಪ್ರಮುಖ ಬರಹಗಾರರು ಹಾಗೂ ಅವರ ಪ್ರಮುಖ ಕೃತಿಗಳೆಂದರೆ

1 . ಡಾಂಟಿ ಇಟಲಿ ದೇಶದವನು ಡಿವೈನ್ , ಕಾಮಿಡಿ , ದಿ ಮೊನಾರ್ಕಿ

2 ಪೆಟ್ರಾರ್ಕ್ ಇಟಲಿ ದೇಶದವನು ಲಾರಾ , ಆಫ್ರಿಕಾ

3 .ಮಕಿಯಾವೆಲ್ಲಿ ಇಟಲಿ ದೇಶದವನು ದಿ ಪ್ರಿನ್ಸ್ , ದಿ ಹಿಸ್ಟರಿ ಆಫ್ ಫ್ಲಾರೆನ್ಸ್

4 ಬೊಕಾಷಿಯಾ – ಇಟಲಿ ದೇಶದವನು ದಿ ಟೇಲ್ಸ್ ಆಫ್ ಡೆಕಾಮೆಕಾನ್ ಹಾಗೂ ಲೈಫ್ ಆಫ್ ಡಾಂಟೆ‌

5 ಸರ್ ಥಾಮಸ್ ಮೊರ್ ಇಂಗ್ಲೆಂಡ್‌ ಉಥೋಪಿಯೂ

6. ಎಡ್ಕಂಡ್ ಸ್ಪೆನ್ಸರ್ ಇಂಗ್ಲೆಂಡ್ ಫೇರಿಕ್ಟಿನ್

7. ಜಾನ್ ಮಿಲ್ಟನ್ ಇಂಗ್ಲೆಂಡ್ ಪ್ಯಾರೆಡೈಸ್ ಲಾಸ್ಟ್ ಪ್ಯಾರಡೈಸ್ ರಿ ಗೇನ್

8. ವಿಲಿಯಂ ಷೇಕ್ಸ್‌ಫಿಯರ್ ಇಂಗ್ಲೆಂಡ್ ಜ್ಯೂಲಿಯಸ್ ಸೀಸರ್ , ಹ್ಯಾಬ್ಲೆಟ್ ಓಥೆಲೊ , ರೋಮಿಯೋ –

ಜೂಲಿಯಟ್ ಮ್ಯಾಕ್‌ಬೆಥ್ , ಕಿಂಗಲಿಯರ್ , ಇತ್ಯಾದಿ

9. ಮಿಗ್ಸೆಯಲ್ ಸವಾಂಟ್ಸ್‌ ಸ್ಪೈನ್‌ ಡಾನ್ ಕಿಜೋಟ್ .

10. ಡೆಸಿಡೇರಿಯಸ್ ಎರಾಸ್ಮಸ್ ಹಾಲೆಂಡ್ ಪ್ರೈಸ್ ಅಂಡ್ ಫಾಲಿ , ಫೆಮಿಲಿಯಸ್ : ಕೊಲೆಕ್ಟೇಸ್

11. ಲಿಯೋನಾಡೋಬ್ರೂನಿ‌ ಫ್ರಾನ್ಸ್ ಇಟಾಲಿಯನ್ ಭಾಷೆಗೆ ಅರಿಸ್ಟಾಟಲ್ , ಪ್ಲೇಟೋ ಸಾಕ್ರೆಟಿಸ್

ಕೃತಿಗಳ ಭಾಷಾಂತರ

7 ) ಕಲೆ ಮತ್ತು ವಾಸ್ತುಶಿಲ್ಪಕ್ಕೆ ಪುನ‌ ಜೀವನದ ಕೊಡುಗೆಗಳೇನು ?

ಪುನರ್‌ಜೀವನ ಕಾಲದ ಕಲೆ ಮತ್ತು ವಾಸ್ತುಶಿಲ್ಪವು ಸರಳ ಹಾಗೂ ನೈಜತೆಯಿಂದ ಕೂಡಿತ್ತು . ಇದು ನವ್ಯ ಮತ್ತು ಸ್ವತಂತ್ರ ದೃಷ್ಟಿಕೋನವನ್ನು ಹೊಂದಿದೆ . ಮುನರ್‌ಜೀವನ ಕಾಲದಲ್ಲಿ “ ಗೋಥಿಕ್ ” ವಾಸ್ತುಶಿಲ್ಪ ಪದ್ಧತಿ ಬೆಳವಣಿಗೆಯಾಯಿತು . ಇದು ಗ್ರೀಕ್ , ರೋಮನ್ , ಡೋರಿಕ್ , ಅಯೋನಿಕ್ ಮತ್ತು ಕೊರಂಥಿಯನ್ ಶೈಲಿಗಳ ಸಮ್ಮಿಶ್ರಣವಾಗಿತ್ತು . ಈ ಶೈಲಿಯು ಅಪಾರ ಪ್ರಮಾಣದ ಕಮಾನುಗಳು , ಗುಮ್ಮಟಗಳು ಎತ್ತರವಾದ ಸ್ತಂಭಗಳು ಹಾಗೂ ಸುಂದರವಾದ ಅಲಂಕಾರಗಳನ್ನು ಒಳಗೊಂಡಿದೆ . ಈ ಕಾಲದ ವಾಸ್ತುಶಿಲ್ಪಗಳು ಕಲ್ಲಿನಿಂದ ನಿರ್ಮಾಣವಾಗಿದೆ . ಈ ಕಾಲದಲ್ಲಿ ದೊಡ್ಡ ಗಾತ್ರದ ಅರಮನೆಗಳು , ಚರ್ಚ್‌ಗಳು , ವಿಹಾರಗಳು , ಸಾರ್ವಜನಿಕ ಕಟ್ಟಡಗಳು ನಿರ್ಮಾಣವಾಗಿವೆ . ಈ ಕಾಲದ ಪ್ರಮುಖ ವಾಸ್ತುಶಿಲ್ಪಿಗಳೆಂದರೆ – ಆಲ್ಬರ್ಟಿ , ಮಾನೆಟ್ಟಿ , ಬ್ರೂಮ್‌ಲೆಫ್ಟಿ , ಬ್ರೂಮಾಂಟೆ , ಮೈಕಲ್ ಏಂಜೆಲೋ ಮೊದಲಾದವರು

9 ) . ಮನರುಜೀವನದ ಪರಿಣಾಮಗಳನ್ನು ವಿವರಿಸಿ .

1) ಮುನರ್‌ಜೀವನವು ಆಧುನಿಕ ಯುಗದ ಉದಯಕ್ಕೆ ನಾಂದಿ ಹಾಡಿತು .

2 ) ಯೂರೋಪಿನಲ್ಲಿ ಉಂಟಾದ ಬೌದ್ಧಿಕ ಬೆಳವಣಿಗೆಯಿಂದಾಗಿ ರಾಜರು ಮತ್ತು ಜನತೆ ಚರ್ಚ್‌ನ ಬಿಗಿ ಹಿಡಿತದಿಂದ ಸ್ವತಂತ್ರರಾದರು .

3 ) ಪುನರ್‌ಜೀವನವು ಮಾನವತಾವಾದದ ಉದಯಕ್ಕೆ ಅವಕಾಶ ಕಲ್ಪಿಸಿತು . ಆಧ್ಯಾತ್ಮಿಕ ಪ್ರಪಂಚದಿಂದ ಹೊರಬಂದ ಮಾನವ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದನು .

4 ) ಪುನರ್‌ಜೀವನದಿಂದಾಗಿ ಲ್ಯಾಟಿನ್ ಭಾಷೆಯ ಮಹತ್ವ ಕಡಿಮೆಯಾಗಿ ದೇಶಿಯ ಸಾಹಿತ್ಯ ಪ್ರಾದೇಶಿಕ ಭಾಷೆಗಳಲ್ಲಿ ಸೃಷ್ಟಿಯಾಯಿತು .

5 ) ಪುನರ್‌ಜೀವನ ಕಾಲದಲ್ಲಿ ಕಲೆ ಮತ್ತು ವಾಸ್ತುಶಿಲ್ಪವು ಹೆಚ್ಚು ಪ್ರಗತಿ ಹೊಂದಿತು .

6 ) ಪ್ರಾಚೀನ ಗ್ರೀಕ್ ಮತ್ತು ರೋಮನ್ ಶಾಸ್ತ್ರೀಯ ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಿತು . ವಿವಿಧ ಶಾಲೆ , ಕಾಲೇಜು , ವಿಶ್ವವಿದ್ಯಾನಿಲಯಗಳಲ್ಲಿ ಯೂರೋಪ್ ಜನರು ಪ್ರಾಚೀನ ಸಾಹಿತ್ಯವನ್ನು ಅಧ್ಯಯನ ಮಾಡಿದರು .

7 ) ಇದು ವೈಜ್ಞಾನಿಕ ಸಂಶೋಧನೆಗೆ ಪ್ರೋತ್ಸಾಹ ನೀಡಿ ಪ್ರಯೋಗಗಳು ಹಾಗೂ ಅನ್ವೇಷಣೆಗಳಿಗೆ ಕಾರಣವಾಯಿತು . 8 ) ಪುನರುಜೀವನ ಪ್ರಭಾವದಿಂದ ರಾಜಪ್ರಭುತ್ವಗಳು ಬಲಿಷ್ಠಗೊಂಡವು . ಇದು ವಿವಿಧ ರಾಷ್ಟ್ರಗಳಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಲು ಅವಕಾಶ ಕಲ್ಪಿಸಿತು .

9 ) ಧಾರ್ಮಿಕ ಸುಧಾರಣೆಗೆ ಕಾರಣಗಳೇನು ?

ಧಾರ್ಮಿಕ ಸುಧಾರಣೆಯ ಚಳುವಳಿಯ ಮುಖ್ಯ ಗುರು ಪೋಪ್ ಆಗಿದ್ದನು . ಇದು ಪ್ರಾರಂಭವಾದದ್ದು ಮೊದಲು ಜರ್ಮನಿಯಲ್ಲಿ ನಂತರ ಯೂರೋಪಿನ ಎಲ್ಲಾ ದೇಶಿಗಳಲ್ಲಿಯೂ ಪ್ರಸಾರಗೊಂಡಿತು . ಕ್ರಾಂತಿಕಾರಿಗುಂಪು ಪೋಪನ ಪರಮಾಧಿಕಾರ ಹಾಗೂ ರೋಮನ್ ಕ್ಯಾಥೋಲಿಕ್ ಚರ್ಚ್‌ಗಳನ್ನು ಪ್ರಶ್ನಿಸಿದವು . ಇದಕ್ಕೆ ಪ್ರಮುಖ ಕಾರಣಗಳೆಂದರೆ –

1 ) ಧಾರ್ಮಿಕ ಕಾರಣಗಳು : ಚರ್ಚ್‌ಗಳಲ್ಲಿ ಉನ್ನತ ಹುದ್ದೆಗಳು ಹೆಚ್ಚು ಹಣ ನೀಡಿದವರಿಗೆ ನೀಡಲಾಗುತ್ತಿತ್ತು . ಯೇಸುಕ್ರಿಸ್ತನ ಸರಳತೆ ಮತ್ತು ಕ್ಷಮಾಗುಣ ಮೊದಲಾದ ತತ್ವಗಳನ್ನು ಚರ್ಚ್‌ಗಳು ಸಂಪೂರ್ಣವಾಗಿ ಮರೆತು ಬಿಟ್ಟಿದ್ದವು . ಇಂತಹ ಅನೀತಿಗಳ ವಿರುದ್ಧದ ಕೋಪ ಧಾರ್ಮಿಕ ಸುಧಾರಣೆಗೆ ಕಾರಣವಾಯಿತು .

2 ) ಸುನರುಜೀವನದ ಪ್ರಭಾವ : ಪುನರುಜೀವನವು ಪರೋಕ್ಷವಾಗಿ ಧಾರ್ಮಿಕ ಸುಧಾರಣೆಯ ಮೇಲೆ ಪ್ರಭಾವ ಬೀರಿದೆ . ಜನರಲ್ಲಿ ವಿಮರ್ಶಾತ್ಮಕ ಪ್ರವೃತ್ತಿ , ವ್ಯಕ್ತಿವಾದ , ವಿಚಾರ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ವಾದಗಳನ್ನು ಬೆಳೆಸಿತು .

3 ) ರಾಜಕೀಯ ಕಾರಣಗಳು : 16 ನೇ ಶತಮಾನದಲ್ಲಿ ಯೂರೋಪ್ ರಾಷ್ಟ್ರೀಯತೆಯ ಬೆಳವಣಿಗೆಗೆ ಸಾಕ್ಷಿಯಾಯಿತು . ನಿರಂಕುಶ ಪ್ರಭುತ್ವ ಹೆಚ್ಚಾಗಿತ್ತು . ಪೋಪನ ಹಸ್ತಕ್ಷೇಪವು ಹೆಚ್ಚಾದಾ ರಾಜರುಗಳು ಪೋಪನ ಅಧಿಕಾರವನ್ನು ಹತ್ತಿಕ್ಕಲು ಪ್ರಯತ್ನಿಸಿದರು .

4 ) ಆರ್ಥಿಕ ಕಾರಣಗಳು : ರೋಮನ್ ಕ್ಯಾಥೋಲಿಕ್ ಚರ್ಚ್ ತುಂಬಾ ಶ್ರೀಮಂತವಾಗಿತ್ತು . ಇದು ಹೆಚ್ಚಿಸಿ ಪ್ರಮಾಣದ ಭೂಮಿ , ಹಣ ಮತ್ತು ಇತರೆ ವೈಭವಯುತ ಕಟ್ಟಡಗಳು , ವಸ್ತುಗಳನ್ನು ಹಿಂಸಿಸುತ್ತಿದ್ದರು . ಚರ್ಚ್‌ನ ಅಧಿಕ ಆರ್ಥಿಕ ಹೊರೆಯಿಂದಾಗಿ ರಾಜರುಗಳು ಮತ್ತು ಹೊಂದಿತ್ತು . ಅಲ್ಲದೆ ಇವರು ತೆರಿಗೆ- ` ದಂಡಗಳನ್ನು ಕೊಡುವಂತೆ ಜನತೆಯನ್ನು ಜನತೆ ಕುಗ್ಗಿ ಹೋಗಿದ್ದರು .

5 ) ತಕ್ಷಣದ ಕಾರಣ : ಕ್ಷಮಾಪಣಾ ಪತ್ರಗಳ ಮಾರಾಟ : ಪೋಪನ ಹೆಸರಿನಲ್ಲಿ ತಪ್ಪು ಮಾಡಿದವರನ್ನು ಕ್ಷಮಿಸಲು ವಿತರಿಸಲಾಗುತ್ತಿದ್ದ ಪತ್ರಗಳನ್ನು ಕ್ಷಮಾಪಣಾ ಪತ್ರಗಳು ಎನ್ನುವರು . ಪಾಪ ಕಾರ್ಯಗಳು ಅಥವಾ ದುಷ್ಕೃತ್ಯಗಳನ್ನು ಮಾಡಿ ಸಿಕ್ಕಿಕೊಂಡ ನತೆಯು ತಮ್ಮನ್ನು ರಕ್ಷಿಸಿಕೊಳ್ಳಲು ಹಣ ನೀಡುವುದರ ಮೂಲಕ ಕ್ಷಮಾಪಣ ಪತ್ರಗಳನ್ನು ಖರೀದಿಸಬೇಕಾಗಿದ್ದಿತು . ಇದರಿಂದ ಜನರು ತೀವ್ರವಾಗಿ ಆಕ್ರೋಶಿತರಾದರು .

10 ) ಪ್ರತಿಧಾರ್ಮಿಕ ಸುಧಾರಣೆಯನ್ನು ಕುರಿತು ಬರೆಯಿರಿ .

16 ನೇ ಶತಮಾನದಲ್ಲುಂಟಾದ ಧಾರ್ಮಿಕ ಕ್ರಾಂತಿಯಿಂದಾಗಿ ಲೂಥರ್ , ಕ್ಯಾಲ್ವಿನ್ ಹಾಗೂ ಆಂಗ್ಲಿಕನ್ ಸಿದ್ಧಾಂತಗಳು ಎಂಬ ಹಲವಾರು ಸೈದ್ಧಾಂತಿಕ ಗುಂಪುಗಳು ಏಳಿಗೆಗೆ ಬಂದವು . ಪ್ರೊಟಿಸ್ಟೆಂಟ್ ಸಿದ್ಧಾಂತವು ಕ್ಷಿಪ್ರಗತಿಯಲ್ಲಿ ಯೂರೋಪಿನಾದ್ಯಂತ ಪ್ರಚಾರವಾದುದು ಕ್ಯಾಥೋಲಿಕರನ್ನು ಜಾಗೃತಗೊಳಿಸಿತು . ಪ್ರೊಟಿಸ್ಟೆಂಟ್‌ರಿಂದ ಮತ್ತಷ್ಟು ಆಘಾತಗಳು ನಡೆಯುವುದನ್ನು ಬಹುಬೇಗ ತಡೆಗಟ್ಟಲು ಕ್ಯಾಥೋಲಿಕ್ ಚರ್ಚ್‌ಗಳು ಮುಂದಾದವು . ತಮ್ಮೊಳಗೆ ಇವು ಸುಧಾರಣೆ ಮಾಡಿಕೊಳ್ಳಲು ಕಾರ್ಯಪ್ರವೃತ್ತವಾದವು . ಇದನ್ನು ಪ್ರತಿಧಾರ್ಮಿಕ ಸುಧಾರಣೆ ಎಂದು ಕರೆಯುವರು . ಪೋಪನ ದೃಷ್ಟಿಕೋನದಲ್ಲಿ ಸಾಕಷ್ಟು ಬದಲಾವಣೆಗಳಾದವು . ಪ್ರೊಟಿಸ್ಟೆಂಟ್ ಪ್ರಸಾರವನ್ನು ತಡೆಗಟ್ಟಲು ಕೆಲವು ದಿಟ್ಟ ಕ್ರಮಕೊಂಡರು . ಪ್ರೊಟಿಸ್ಟೆಂಟ್ ಪ್ರಭಾವ ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಪುನಃ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ರೋಮನ್ ಕ್ಯಾಥೋಲಿಕ್ ಚರ್ಚ್‌ಗಳು ಹೆಚ್ಚು ಶ್ರಮಿಸಿದವು . ಪ್ರತಿಧಾರ್ಮಿಕ ಸುಧಾರಣೆಯ ನಾಲ್ಕು ಪ್ರಮುಖ ಉದ್ದೇಶಗಳನ್ನು ಹೊಂದಿತ್ತು . ಅವುಗಳೆಂದರೆ ಶಿಕ್ಷಿಸುವುದು , ಸುಧಾರಿಸುವುದು , ಮತಾಂತರಿಸುವುದು ಹಾಗೂ ಸಾಮಾಜಿಕ ವಿಹಾರ ಸೇವೆ ಕೈಗೊಳ್ಳುವುದು ,

ವಿಚಾರಣಾ ನ್ಯಾಯಾಲಯಗಳು ಶಿಕ್ಷಿಸುವ , ಕೌನ್ಸಿಲ್ ಆಫ್ ಟೆಂಡ್ ಸುಧಾರಿಸುವ , ಸೊಸೈಟಿ ಆಫ್ ಜೀಸಸ್ ದೇವರ ಮತ್ತು ಸಾಮಾಜಿಕ ಸೇವೆ ಮಾಡುವಲ್ಲಿ ಮುಂದಾದವು .

11 ) ಧಾರ್ಮಿಕ ಸುಧಾರಣೆಯ ಪರಿಣಾಮಗಳನ್ನು ವಿವರಿಸಿ .

ಧಾರ್ಮಿಕ ಸುಧಾರಣೆಯಿಂದಾದ ಪರಿಣಾಮಗಳನ್ನು ನಾವು ಈ ರೀತಿ ಗುರ್ತಿಸಬಹುದು .

1 ) ಧಾರ್ಮಿಕ ಸುಧಾರಣೆಯು ಪ್ರತಿಯೊಬ್ಬನನ್ನು ಮೂಢನಂಬಿಕೆಗಳಿಂದ ಮುಕ್ತಗೊಳಿಸಿತಲ್ಲದೆ ಆತನಿಗೆ ಬೌದ್ಧಿಕ ಸ್ವಾತಂತ್ರ್ಯವನ್ನು ದೊರಕಿಸಿ ಕೊಟ್ಟಿತು .

2 ) ಕ್ರೈಸ್ತ ಧರ್ಮದ ಕ್ಯಾಥೋಲಿಕ್ ಮತ್ತು ಪ್ರೊಟಿಸ್ಟೆಂಟ್ ಪಂಥಗಳನ್ನು ಪುನಃಶ್ವೇತನಗೊಳಿಸಿತು . ಯೇಸುವಿನ ಬೋಧನೆಗಳು ಹಾಗೂ ಬೈಬಲ ತತ್ವಗಳು ಮತ್ತೊಮ್ಮೆ ಪ್ರಾಮುಖ್ಯತೆ ಗಳಿಸಿದವು .

3 ) ಕ್ರೈಸ್ತ ಧರ್ಮದಲ್ಲಿ ಒಡಕು ಉಂಟಾಗಿ ಎರಡು ಪಂಗಡಗಳು ಉದಯಿಸಿದವು . ಅವುಗಳೇ –

1 ) ರೋಮನ್ ಕ್ಯಾಥೋಲಿಕ್ ಹಾಗೂ 2 ) ಮೊಟಿಸ್ಟೆಂಟ್ ಚಳುವಳಿಯಿಂದಾಗಿ ಪೋಪ್ ಮತ್ತು ಚರ್ಚ್‌ನ ಪ್ರಾಬಲ್ಯ ಕುಸಿತಗೊಂಡಿತು . ಜೊತೆಗೆ ರಾಷ್ಟ್ರೀಯತೆ ಮತ್ತು ರಾಜಪ್ರಭುತ್ವಗಳು ಬಲಶಾಲಿಯಾದವು .

5 ) .ಜೀಸಸ್‌ ಸಂಘದ ಸದಸ್ಯರು , ಮಿಷನರಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ಪ್ರಪಂಚದಾದ್ಯಂತ ಕ್ರೈಸ್ತಧರ್ಮವನ್ನು ಪ್ರಸಾರ ಮಾಡಿದರು .

6 ) ಧಾರ್ಮಿಕ ಸುಧಾರಣೆಯ ಸಾಹಿತ್ಯಕ್ಕೆ ಅದರಲ್ಲೂ ದೇಶಿಯ ಭಾಷಾ ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ದೊರಕಿತು . ಇತಿಹಾಸದಲ್ಲಿ ಇದೊಂದು ಪ್ರಮುಖ ಹೆಗ್ಗುರುತಾಗಿದೆ .

7 ) ಚಳುವಳಿಯಿಂದಾಗಿ ಕ್ಯಾಥೋಲಿಕ್ ಮತ್ತು ಪ್ರೊಟಿಸ್ಟೆಂಟ್ ರಾಷ್ಟ್ರಗಳ ನಡುವೆ ಧಾರ್ಮಿಕ ಯುದ್ಧಗಳು ಪ್ರಾರಂಭಿಸಿದವು . ಪೋಪನ ಪ್ರಾಬಲ್ಯ ಕುಸಿಯಿತು . ಚಳುವಳಿಯ ಪರಿಣಾಮವಾಗಿ ಚರ್ಚ್‌ಗಳಿಂದ ಮುಟ್ಟುಗೋಲು ಹಾಕಿಕೊಂಡ ಸಂಪತ್ತನ್ನು ಆಯಾ ದೇಶಗಳ ಆರ್ಥಿಕ ಅಭಿವೃದ್ಧಿಗೆ ಬಳಸಿಕೊಳ್ಳಲಾಯಿತು . ಲೇವಾದೇವಿದಾರರು , ಬ್ಯಾಂಕ್‌ಗಳು ಹಾಗೂ ಹೂಡಿಕೆದಾರರು ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದರು .

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1 . ಧಾರ್ಮಿಕ ಸುಧಾರಣಾ ಚಳುವಳಿಯಲ್ಲಿ ಮಾರ್ಟಿನ್ ಲೂಥರ್‌ನ ಪಾತ್ರವನ್ನು ವಿವರಿಸಿ .

1511 ರಲ್ಲಿ ರೋಮ್‌ಗೆ ಭೇಟಿ ನೀಡಿದ ಮಾರ್ಟಿನ್‌ ಲೂಥರ್‌ನು ಅಲ್ಲಿನ ಪೋಪ್ ಮತ್ತು ಪಾದ್ರಿಗಳ ಭ್ರಷ್ಟತೆ ಮತ್ತು ಅನೀತಿಯುತ ಜೀವನವನ್ನು ಕಣ್ಣಾರೆ ಕಂಡು ದಿಗ್ಧಮೆಗೊಂಡನು . ಈ ಪಾಪದ ಕೆಲಸಗಳನ್ನು ಕಂಡು ನೊಂದನು . ಪೋಪ್ ಹತ್ತನೇ ಲಿಯೋ ರೋಮ್‌ನ ಪ್ರಮುಖ ಸೆಂಟ್ ಪೀಟರ್‌ ಚರ್ಚ್‌ನ ಪುನರ್ ನಿರ್ಮಾಣ ಮೊದಲು ಹಣ ಸಂಗ್ರಹಿಸಲು ಮುಂದಾದನು . ಈ ಕಾರಣಕ್ಕಾಗಿ ಕ್ಷಮಾಪತ್ರಗಳ ಮಾರಾಟದಿಂದ ಸಂಗ್ರಹವಾದ ಹಣವನ್ನು ಬಳಸಲಾಗುವುದೆಂದು ತಿಳಿಸಿದನು . ಈ ಕ್ಷಮಾಪಣಾ ಪತ್ರಗಳು ಅಪ್ರಿಯಗೊಂಡು ಜನರಲ್ಲಿ ಆಕ್ರೋಶ ಉಂಟು ಮಾಡಿದವು .

1517 ರಲ್ಲಿ ಪೋಪನ ಪ್ರತಿನಿಧಿ ಜಾನ್‌ಟೆಟಲ್‌ನ್ನು ಕ್ಷಮಾಪತ್ರ ಮಾರಲು ಜರ್ಮನಿಗೆ ಬಂದನು . ಈತನು ಕ್ಷಮಾಪತ್ರಗಳನ್ನು ಬೇಜವಾಬ್ದಾರಿಯುತವಾಗಿ ಯಾರು ಬೇಕಾದರೂ ಮಾರಟ ಮಾಡಿದನು . ಇದನ್ನು ಕಂಡ ಲೂಥರ್‌ನು ಕ್ಷಮಾಪತ್ರಗಳ ಮಾರಾಟವನ್ನು ಖಂಡಿಸಿದನು . ಈತನು “ ದಿ ಮ್ಯಾನಿಫೆಸ್ಟೋ ಆಫ್ ರಿಫಾರೇಷನ್ ‘ ಕೃತಿಯನ್ನು ರಚಿಸಿದನು . ಅಲ್ಲದೆ ಈತನು ತನ್ನ ಆಕ್ಷೇಪಣೆಗಳನ್ನು “ 95 ನಿಬಂಧನೆಗಳ ರೂಪದಲ್ಲಿ ಸಿದ್ಧಪಡಿಸಿ , ಅವುಗಳನ್ನು ವಿಟನ್‌ಬರ್ಗ್ ಚರ್ಚಿನ ಬಾಗಿಲಿನ ಮೇಲೆ ಅಂಟಿಸಿ ಇವುಗಳ ಬಗ್ಗೆ ಉತ್ತರ ನೀಡುವಂತೆ ಪೋಪ್ ಮತ್ತು ಪಾದ್ರಿಗಳಿಗೆ ಸವಾಲು ಹಾಕಿದನು . ಇದು ಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ಕಲ್ಪಿಸಿತು .

FAQ

3. ಪುನರುಜ್ಜಿವನದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ ?

ಪೆಟ್ರಾರ್ಕ್ ,

9. “ ಡಿವೈನ್ ಕಾಮಿಡಿ ” ಯ ಕರ್ತೃ ಯಾರು ?

ಡಾಂಟೆ

ಇತರೆ ವಿಷಯಗಳು :

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1st PUC History Notes

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *