ಪ್ರಥಮ ಪಿ.ಯು.ಸಿ ಅಧ್ಯಾಯ 8.1 ಕೈಗಾರಿಕಾ ಕ್ರಾಂತಿ ಇತಿಹಾಸ ನೋಟ್ಸ್ ಪ್ರಶ್ನೋತ್ತರಗಳು, 1st Puc Kaigarika Kranti History Notes Question Answer Pdf Download 1st Puc History Chapter 8 Question Answer in Kannada The Industrial Revolution Notes Class 11 Kseeb Solution For Class 11 Chapter 8 Notes Pdf 2024
8.1 ಕೈಗಾರಿಕಾ ಕ್ರಾಂತಿ(1750-1850)
1 . ಹತ್ತಿ ಕ್ರಾಂತಿಯು ಯಾವ ನಗರದಲ್ಲಿ ಪ್ರಾರಂಭಗೊಂಡಿತು ?
ಡರ್ಬಿಯಲ್ಲಿ
2. ‘ ಪವರ್ ಹೌಸ್ ಆಫ್ ದಿ ನಾರ್ತ್ ‘ ಎಂದು ಯಾವ ನಗರವನ್ನು ಕರೆಯಲಾಗಿದೆ ?
ಡರ್ಬಿಯು
3. ಕಲ್ಲಿದ್ದಲಿನ ಗಣಿಗಾರಿಕೆಯು ಎಲ್ಲಿ ಮೊದಲು ಪ್ರಾರಂಭಗೊಂಡಿತು ?
ಸೌಥ್ ವೇಲ್ಸ್‌ನಲ್ಲಿ
4 .’ ರೆವೊಲೂಪಿಯೋ ‘ ಎಂದರೇನು ?
ಸಂಪೂರ್ಣ ಬದಲಾವಣೆ .
5. ಯಾವ ಕಾಲಾವಧಿಯಲ್ಲಿ ಕೈಗಾರಿಕಾ ಕ್ರಾಂತಿಯು ಘಟಿಸಿತು ?
1750 ರಿಂದ 1850 ರ ಕಾಲವಧಿಯಲ್ಲಿ .
6. ಯಾವ ನಿಗದಿತ ಕ್ಷೇತ್ರದ ಮೇಲೆ ಕೈಗಾರಿಕಾ ಕ್ರಾಂತಿಯು ತನ್ನ ಅಗಾಧ ಪ್ರಭಾವವನ್ನು ಬೀರಿತು ?
ಕೃಷಿ ಹಾಗೂ ಜವಳಿ ಕ್ಷೇತ್ರದ ಮೇಲೆ .
7. ಕೈಗಾರಿಕಾ ಕ್ರಾಂತಿಯು ಎಲ್ಲಿ ಪ್ರಪ್ರಥಮವಾಗಿ ಆರಂಭಗೊಂಡಿತು ?
ಗೇಟ್ ಬ್ರಿಟನ್ನಿನಲ್ಲಿ .
8 . ವಾಟರ್ ಪ್ರೇಮ್ ಅನ್ನು ಯಾರು ಕಂಡು ಹಿಡಿದರು ?
ರಿಚರ್ಡ್ ಆರ್ಕ್‌ರೈಟ್ .
9 . ಸ್ಪಿನ್ನಿಂಗ್ ಜೆನ್ನಿಯನ್ನು ಯಾರು ಕಂಡು ಹಿಡಿದರು ?
ಹಾರ್ ಗ್ರೀವ್
10. ಜೇಮ್ಸ್ ವ್ಯಾಟನು ಯಾವುದಕ್ಕೆ ಹೆಸರುವಾಸಿಯಾಗಿದ್ದಾನೆ ?
ಉಗಿಯಂತ್ರವನ್ನು ಜೇಮ್ಸ್ವ್ಯಾಟನು ಕಂಡುಹಿಡಿದನು .
1st Puc Kaigarika Kranti Notes Pdf in Kannada Medium
1.ಕ್ರಾಂತಿ ಎಂದರೇನು ?
‘ ಕಾಂತಿ ‘ ಎಂದರೆ ‘ ಸಂಪೂರ್ಣ ಬದಲಾವಣೆ ‘ ಎಂಬುದಾಗಿದೆ .ಅತ್ಯಲ್ಪ ಅವಧಿಯಲ್ಲಿ ಆಡಳಿತ ಅಥವಾ ಸಂಘಟನಾತ್ಮಕ ರೂಪುರೇಷೆಗಳಲ್ಲಿ ಬರುವ ಮೂಲಭೂತ ಬದಲಾವಣೆಯಲ್ಲಿ ಕ್ರಾಂತಿ ‘ ಎನ್ನುವರು .
2 ) ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಯಾವ ನಿರ್ದಿಷ್ಟ ಕ್ಷೇತ್ರಗಳಲ್ಲಿ ಬದಲಾವಣೆ ಕಂಡು ಬಂದಿತು ?
ಕೈಗಾರಿಕಾ ಕ್ರಾಂತಿಯ ಕಾಲದಲ್ಲಿ ಕೃಷಿ , ಉತ್ಪಾದನೆ ಗಣಿಗಾರಿಕೆ , ಸಾರಿಗೆ ಹಾಗೂ ತಂತ್ರಜ್ಞಾನಗಳಲ್ಲಿ ಬದಲಾವಣೆ ಕಂಡಿತು . ಇದು ಸಾಮಾಜಿಕ , ಆರ್ಥಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯಾದರೂ ಆರ್ಥಿಕ ಕ್ಷೇತ್ರದಲ್ಲಿ ಹೆಚ್ಚು ಬದಲಾವಣೆ ಕಂಡುಬಂದಿತು ಇದು ಮೊದಲು ಇಂಗ್ಲೆಂಡ್‌ನಲ್ಲಿ ಆರಂಭವಾಗಿ ತದನಂತರ , ಪಶ್ಚಿಮ ಯೂರೋಪ್ ಉತ್ತರ ಅಮೇರಿಕಾ , ಜಪಾನ್ ಮುಂತಾದವು ಕ್ಷೇತ್ರಗಳಲ್ಲಿ ಒಪ್ಪಿತು . ಮೊದಲಿಗೆ ಕೃಷಿ ಮತ್ತು ಜವಳಿ ಕ್ಷೇತ್ರಗಳಲ್ಲಿ ಆರಂಭವಾಗಿ ನಂತರ ಗಣಿಗಾರಿಕೆ , ಉಸಿಶಕ್ತಿ , ರಾಸಾಯನಿಕಗಳು , ಯಂತ್ರೋಪಕರಣಗಳು , ಅನಿಲ – ಬೆಳಕು , ಗಾಜು ತಯಾರಿಕೆ ಕ್ಷೇತ್ರಗಳಲ್ಲಿ ಬದಲಾವಣೆ ಸಿ.ಎ.ಸಿ. ಕಂಡುಬಂದಿತು .
3 ) ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಕಂಡುಹಿಡಿದ ಯಾವುದಾದರೂ ಎರಡು ರಾಸಾಯನಿಕಗಳನ್ನು ಹೆಸರಿಸಿ .
ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಕಂಡು ಹಿಡಿದ ರಾಸಾಯನಿಕಗಳೆಂದರೆ
1 ) ಸಲ್ಯೂಯರಿಕ್ ಆಸಿಡ್ ,
2 ) ಆಲ್ಕಲಿ ( ಆಮ್ಲತೆಯನ್ನು ತಯಾರಿಸುವ ಕಾರ )
3 ) ಸೋಡಿಯಂ ಕಾರ್ಬೋನೆಟ್
4 ) ಅನಿಲ – ಬೆಳಕನ್ನು ದೊಡ್ಡ ಪ್ರಮಾಣದಲ್ಲಿ ಯಾರು ಕಂಡು ಹಿಡಿದರು ?
ಅನಿಲ ಬೆಳಕನ್ನು ದೊಡ್ಡ ಪ್ರಮಾಣದಲ್ಲಿ ಕಂಡು ಹಿಡಿದವರು ವಿಲಿಯಂ
5) ಯಾವ ನಗರದಲ್ಲಿ ಮೊದಲು ಅನಿಲ ಬೆಳಕನ್ನು ಪರಿಚಯಿಸಲಾಯಿತು ?
ಲಂಡನ್‌ನಲ್ಲಿ ಮೊದಲು ಅನಿಲ – ಬೆಳಕನ್ನು ಪರಿಚಯಿಸಲಾಯಿತು .
1 ) ವ್ಯವಸಾಯ , ಸಾರಿಗೆ , ಕಾಲುವೆಗಳು ಮತ್ತು ರಸ್ತೆಗಳು ಈ ಕ್ಷೇತ್ರಗಳ ಮೇಲೆ ಕೈಗಾರಿಕಾ ಕ್ರಾಂತಿಯಿಂದುಂಟಾದ ಪ್ರಮುಖ ಪರಿಣಾಮಗಳೇನು ?
ವ್ಯವಸಾಯದ ಮೇಲೆ ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಪ್ರಮುಖ ಪರಿಣಾಮಗಳೆಂದರೆ :-
ಯಂತ್ರಗಳ ಸಂಶೋಧನೆಯು ಕೃಷಿ ಕ್ರಾಂತಿಯನ್ನು ಮುಂದುವರೆಸುವಲ್ಲಿ ಪ್ರಮುಖ ಜಮೀನುಗಳಿಂದ ಬಿಡುಗಡೆಗೊಳಿಸಿ ಕೈಗಾರಿಕಾ , ಯಂತ್ರ ಶಾಲೆಗಳ ಕೆಲಸದಲ್ಲಿ ಪಾತ್ರ ವಹಿಸಿತು . 18 ನೇ ಶತಮಾನದಲ್ಲಿನ ಕೈಗಾರಿಕಾ ಕ್ರಾಂತಿಯು ಕೂಲಿಕಾರರನ್ನು ತೊಡಗಿಕೊಳ್ಳುವಂತೆ ಮಾಡಿತು . ಇದರಿಂದಾಗಿ ಆಹಾರದ ಉತ್ಪಾದನೆಯಲ್ಲಿ ಹೆಚ್ಚಳವಾಯಿತು .
ಕೈಗಾರಿಕಾ ಕ್ರಾಂತಿಯಿಂದ ಬ್ರಿಟನ್ನಿನ ಸಾರಿಗೆಯಲ್ಲಿ ಮೂಲಭೂತ ಸೌಕರ್ಯ , ವಾಹನಗಳಿಂದ ಸುಂಕಗಳು ಮತ್ತು ರಸ್ತೆಗಳ ಜಾಲ , ಕಾಲುವೆಗಳು , ಜಲಮಾರ್ಗಗಳು ಮತ್ತು ರೈಲ್ವೆ ಜಾಲಗಳಲ್ಲಿ ಸುಧಾರಣೆಯಾಯಿತು . ಇದರಿಂದ ಕಚ್ಚಾವಸ್ತು ಹಾಗೂ ಸಿದ್ಧ ವಸ್ತುಗಳನ್ನು ಕಡಿಮೆ ದರದಲ್ಲಿ ಸಾಗಿಸಲು ಅನುಕೂಲವಾಯಿತು .
ಕಾಲುವೆಗಳು : 18 ನೇ ಶತಮಾನದಲ್ಲಿ ಉತ್ಪಾದಕ ಕೇಂದ್ರಗಳ ಮಧ್ಯೆ ಸಂಪರ್ಕ ಕಲ್ಪಿಸಲು ಕಾಲುವೆಗಳನ್ನು ನಿರ್ಮಿಸಲಾಯಿತು . ಇಂತಹ ಕಾಲುವೆಗಳಲ್ಲಿ ಯಶಸ್ವಿ ಪ್ರಥಮ ಕಾಲುವೆ ಎಂದರೆ ವಾಯುವ್ಯ ಇಂಗ್ಲೆಂಡಿನ ಬ್ರಿಡ್ಜ್ ವಾಟರ್ ಕಾಲುವೆ . ಈ ಕಾಲುವೆಗಳು ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೆ ಸಹಾಯಕವಾದವು .
ರಸ್ತೆಗಳು : ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅನೇಕ ಹೊಸ ರಸ್ತೆಗಳನ್ನು ನಿರ್ಮಿಸಿದರು . ಅವರು ಈ ರಸ್ತೆಗಳನ್ನು ಉಪಯೋಗಿಸುವುದರಿಂದ ಸುಂಕವನ್ನು ಸಂಗ್ರಹಿಸುತ್ತಿದ್ದರು . ರಸ್ತೆಗಳು ಇಂಗ್ಲೆಂಡಿನ ಪ್ರಮುಖ ನಗರಗಳನ್ನು ಜೋಡಿಸಿವು ಹಾಗೂ ಸಾಗಾಣಿಕೆಯ ಗತಿಯು ತೀವ್ರಗೊಂಡಿತು .
2 ) ಸಮಾಜವಾದ , ಬಂಡವಾಳಶಾಹಿತ್ವ , ಕಾರ್ಖಾನೆಗಳು ಹಾಗೂ ನಗರೀಕರಣ ಮತ್ತು ಬಾಲ ಕಾರ್ಮಿಕ ಪದ್ಧತಿಯ ಮೇಲೆ ಕೈಗಾರಿಕಾ ಕ್ರಾಂತಿಯಿಂದುಂಟಾದ ಪ್ರಮುಖ ಪರಿಣಾಮಗಳೇನು ?
ಸಮಾಜವಾದ ಹೆಚ್ಚು ಕಡಿಮೆ ನೇರವಾಗಿ ಕೈಗಾರಿಕಾ ಕ್ರಾಂತಿಯಿಂದ ಹೊರಹೊಮ್ಮಿದ ಆರ್ಥಿಕ ಸಿದ್ಧಾಂತ . ಇದರ ಪ್ರಕಾರ ಸಮಾಜದಲ್ಲಿ ಸ್ವಾಭಾವಿಕ ಸ್ಪರ್ಧೆ ಇದ್ದಲ್ಲಿ ಉತ್ತಮ ಫಲಿತಾಂಶ ಕಾಣಬರುತ್ತಿತ್ತು . ಈ ಕೈಗಾರಿಕಾ ಕ್ರಾಂತಿಯು ಸಾಮಾನ್ಯ ಕಾರ್ಮಿಕರಿಗೆ ಒಡ್ಡಿದ ಸವಾಲಿನಿಂದ ಪ್ರಭಾವಿತವಾಗಿತ್ತು . ಕೆಲಸದ ಪರಿಸ್ಥಿತಿ , ದೀರ್ಘ ಕೆಲಸಾವಧಿ ಮತ್ತು ಕಡಿಮೆ ವೇತನ ಇವು ಕಾರ್ಮಿಕರನ್ನು ಒಟ್ಟುಗೂಡಿಸಿ ಸಮಾಜವಾದಿ ವ್ಯವಸ್ಥೆಯನ್ನು ಸಾಧಿಸುವಂತಾಯಿತು .
ಬಂಡವಾಳಶಾಯಿಯ ಮೇಲೆ ಪರಿಣಾಮ : ಹೂಡಿಕೆಗೆ ಲಭ್ಯವಿರುವ ಬಂಡವಾಳವು ಅಭಿವೃದ್ಧಿಯ ವೇಗವನ್ನು ಮತ್ತು ಸಂಪತ್ತನ್ನು ಕೈಗಾರೀಕರಣವು ಪ್ರಮುಖವಾಗಿ ಬಂಡವಾಳದ ಮೇಲೆ ಅವಲಂಬಿತವಾಗಿದೆ . ಹೆಚ್ಚಿಸುತ್ತವೆ . ಇದು ಬ್ರಿಟಿಷ್ ಕೈಗಾರಿಕಾ ಅರ್ಥವ್ಯವಸ್ಥೆಯು ಅಭಿವೃದ್ಧಿಯಾಗಲು ಪ್ರಮುಖ ಕಾರಣವಾಗಿದೆ .
ಕಾರ್ಖಾನೆಗಳು ಹಾಗೂ ನಗಲೀಕರಣ : ಕೈಗಾರಿಕೀಕರಣ ಕಾರ್ಖಾನೆಗಳ ಸ್ಥಾಪನೆಗೆ ಕಾರಣವಾಯಿತು . ಕಾರ್ಖಾನೆ ವ್ಯವಸ್ಥೆಯು ಅಭಿವೃದ್ಧಿಗೊಂಡಿತು . ಬಹುಸಂಖ್ಯೆಯ ಕೆಲಸಗಾರರು ಉದ್ಯೋಗ ಅರಸುತ್ತ ನಗರಗಳಿಗೆ ವಲಸೆ ಬಂದರು . ಕಾರ್ಖಾನೆ ವ್ಯವಸ್ಥೆಯು ನಗರೀಕರಣದ ವೇಗವನ್ನು ಹೆಚ್ಚಿಸಿತು . ಬಾಲಕಾರ್ಮಿಕ ಪದ್ಧತಿ : ಕೈಗಾರಿಕಾ ಕ್ರಾಂತಿಯಿಂದ ಜನಸಂಖ್ಯೆ ಹೆಚ್ಚಳವಾಯಿತು . ಪರಿಣಿತ ಕೆಲಸಗಾರರು ಸಿಗದೆ ಇದ್ದುದರಿಂದ ಉತ್ಪಾದನಾ ಕೈಗಾರಿಕೆಗಳಲ್ಲಿ ಬಾಲಕಾರ್ಮಿಕರೇ ಆದ್ಯತೆಯ ಆಯ್ಕೆಯಾಗಿದ್ದರು .
3 ) ಕೈಗಾರಿಕಾ ಕ್ರಾಂತಿಯ ಪ್ರಕ್ರಿಯೆಯು ಇಂಗ್ಲೆಂಡಿನಲ್ಲೇ ಏಕೆ ಪ್ರಾರಂಭವಾಯಿತು ?
ಕೈಗಾರಿಕಾ ಕ್ರಾಂತಿಯ ಪ್ರಕ್ರಿಯೆಯು ಪ್ರಾರಂಭಿಸಿದ ಯುರೋಪಿನ ಪ್ರಪ್ರಥಮ ರಾಷ್ಟ್ರ ಇಂಗ್ಲೆಂಡ್ ಆಗಿತ್ತು . ಯೂರೋಪಿನ ಇತರೆ ರಾಷ್ಟ್ರಗಳಿಗಿಂತ ಇದು ಮಂಚೂಣಿಯಲ್ಲಿತ್ತು . ಇದಕ್ಕೆ ಪ್ರೇರಕ ಶಕ್ತಿಗಳೆಂದರೆ – ಕಲ್ಲಿದ್ದಲು ಹಾಗೂ ಕಬ್ಬಿಣದಂತಹ ನೈಸರ್ಗಿಕ ಸಂಪತ್ತನ್ನು ಇಂಗ್ಲೆಂಡ್ ಹೊಂದಿತ್ತು . ಉತ್ತಮ ಆರೋಗ್ಯ ಸೌಲಭ್ಯ , ಪೌಷ್ಠಿಕ ಆಹಾರ , ಮರಣ ಪ್ರಮಾಣದಲ್ಲಿನ ಇಳಿಕೆ ಮುಂತಾದವುಗಳಿಂದಾಗಿ ಜನಸಂಖ್ಯೆಯಲ್ಲಿ ಹೆಚ್ಚಳವಾಯಿತು . ಇದು “ ಶ್ರಮಿಕ ಶಕ್ತಿಯನ್ನು ಹೆಚ್ಚಿಸಿತು . ಗ್ರಾಹಕರ ಸಂಖ್ಯೆಯಲ್ಲಿಯೂ ಹೆಚ್ಚಳವಾಯಿತು . ಆದ್ದರಿಂದ ಕೈಗಾರಿಕಾ ಕ್ರಾಂತಿಯ ಪ್ರಕ್ರಿಯೆಯು ಇಂಗ್ಲೆಂಡಿನಲ್ಲಿಯೇ ಪ್ರಾರಂಭವಾಯಿತು . 1688 ರ ಭವ್ಯ ಕ್ರಾಂತಿಯ ನಂತರ ದೇಶವು ರಾಜಕೀಯ ಸ್ಥಿರತೆಯನ್ನು ಸಾಧಿಸಿತು . ರಾಷ್ಟ್ರೀಯ ಬ್ಯಾಂಕಿಂಗ್ ವ್ಯವಸ್ಥೆಯು ಕಡಿಮೆ ಬಡ್ಡಿದರದಲ್ಲಿ ಹೆಚ್ಚು ಹಣವನ್ನು ತೊಡಗಿಸುವಲ್ಲಿ ಯುರೋಪಿನಲ್ಲಿ ಪ್ರಥಮವಾಗಿತ್ತು .
1 ಕೈಗಾರಿಕಾ ಕ್ರಾಂತಿಯಿಂದ ಉಂಟಾದ ವಿವಿಧ ಪರಿಣಾಮಗಳನ್ನು ವಿವರಿಸಿ
ಕೈಗಾರಿಕಾ ಕ್ರಾಂತಿಯಿಂದ ಉಂಟಾದ ವಿವಿಧ ಪರಿಣಾಮಗಳೆಂದರೆ –
ವ್ಯಾವಶಾಯದಲ್ಲಿ ಪ್ರಗತಿಯುಲಾಯಂತು : * ವ್ಯವಸಾಯಕ್ಕೆ ಹೊಸ ಯಂತ್ರಗಳ ಸೌಲಭ್ಯ ದೊರೆತ ಪರಿಣಾಮವಾಗಿ ಆಹಾರದ ಉತ್ಪಾದನೆಯಲ್ಲಿ ಹೆಚ್ಚಳವಾಯಿತು .
ಸಾರಿಗೆ : ಕಡಿಮೆ ದರದಲ್ಲಿ ಹಾಗೂ ಅತಿ ವೇಗವಾಗಿ ಸರಕುಗಳನ್ನು ಸಾಗಿಸುವಲ್ಲಿ ಕೈಗಾರಿಕಾ ಕ್ರಾಂತಿ ಹೆಚ್ಚಿನ ಕೊಡುಗೆಯನ್ನು ನೀಡಿತು . ಕಾಲುವೆಗಳು : 18 ನೇ ಶತಮಾನದಲ್ಲಿ ನಿರ್ಮಿಸಲಾದ ಕಾಲುವೆಗಳಿಂದ ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆ ಸಹಾಯವಾಯಿತು .
ರಸ್ತೆಗಳು : ಖಾಸಗಿ ವ್ಯಕ್ತಿಗಳ ಮತ್ತು ಸಂಸ್ಥೆಗಳು ಹೊಸ ರಸ್ತೆಗಳನ್ನು ನಿರ್ಮಿಸಿದರು . ಈ ರಸ್ತೆ ಉಪಯೋಗಿಸುವವರು ರಸ್ತೆ ಸುಂಕ ನೀಡಬೇಕಾಗಿತ್ತು . ಇವು ಇಂಗ್ಲೆಂಡಿನ ಪ್ರಮುಖ ನಗರಗಳನ್ನು ಜೋಡಿಸುತ್ತಿದ್ದುದರಿಂದ ಸಾಗಾಣಿಕೆ ವೇಗವಾಗಿ ಸಾಗಿತ್ತು .
ಸಮಾಜವಾದದ ಮೇಲೆ ಪ್ರಭಾವ : ಕೈಗಾರಿಕಾ ಕ್ರಾಂತಿಯು ಸಾಮಾನ್ಯ ಕಾರ್ಮಿಕರಿಗೆ ಒಡ್ಡಿದ ಸವಾಲಿನಿಂದ ಪ್ರಭಾವಿತವಾಗಿತ್ತು . ಕೆಲಸದ ಪರಿಸ್ಥಿತಿ , ದೀರ್ಘಕೆಲಸಾವಧಿ ಮತ್ತು ಕಡಿಮೆ ವೇತನ ಇವು ಕಾರ್ಮಿಕರನ್ನು ಒಟ್ಟುಗೂಡಿಸಿ ಸಮಾಜವಾದಿ ವ್ಯವಸ್ಥೆ ಯಶಸ್ವಿಯಾಯಿತು .
ಬಂಡವಾಳಶಾಹಿಯ ಮೇಲೆ ಪರಿಣಾಮ : ಹೂಡಿಕೆ ಬಂಡವಾಳವು ಇಂಗ್ಲೆಂಡಿನ ಕೈಗಾರಿಕಾ ಅರ್ಥವ್ಯವಸ್ಥೆಯು ಅಭಿವೃದ್ಧಿಯಲ್ಲೂ ಪ್ರಮುಖ ಕಾರಣವಾಯಿತು .
ಕಾರ್ಖಾನೆಗಳು ಹಾಗೂ ನಗಲೀಕರಣ : ಕೈಗಾರೀಕರಣ ಕಾರ್ಖಾನೆಗಳ ಸ್ಥಾಪನೆಗೆ ಕಾರಣವಾಯಿತು . ಕಾರ್ಖಾನೆ ವ್ಯವಸ್ಥೆಯು ನಗರೀಕರಣದ ವೇಗವನ್ನು ಹೆಚ್ಚಿಸಿತು .
ಬಾಲ ಕಾರ್ಮಿಕ ಪದ್ಧತಿ : ಕೈಗಾರಿಕಾ ಕ್ರಾಂತಿಯಿಂದ ಜನ ಬಲಹೆಚ್ಚಾಯಿತು . ಶಿಕ್ಷಣಕ್ಕೆ ಮಿತವಾದ ಪರಿಣಿತ ಕೆಲಸಗಾರರು ಸಿಗದೇ ಇದ್ದುದರಿಂದ ಉತ್ಪಾದನಾ ಕೈಗಾರಿಕೆಗಳಲ್ಲಿ ಬಾಲ ಕಾರ್ಮಿಕರೇ ಆದ್ಯತೆಯ ಆಯ್ಕೆಯಾಗಿದ್ದರು . ಹೀಗೆ ಕೈಗಾರಿಕಾ ಕ್ರಾಂತಿಯಿಂದ ಮಹತ್ವಪೂರ್ಣ ಪರಿಣಾಮಗಳುಂಟಾಯಿತು . ಒಟ್ಟಾರೆ ಕೈಗಾರಿಕಾ ಕ್ರಾಂತಿಯು ಜನರ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿತು . ಹೆಚ್ಚಿನ ನಗರಗಳು ಬೆಳೆಯುವಂತೆ ಮಾಡಿತು . ಕೈಗಾರಿಕಾ ಕ್ರಾಂತಿಯು ವೃತ್ತಿಗಳ ಉಗಮ , ಜನಸಂಖ್ಯಾವೃದ್ಧಿ ಮತ್ತು ಜೀವನ ಗುಣಮಟ್ಟದಲ್ಲಿ ಏರಿಕೆಗೆ ಆರ್ಥಿಕ ತಳಹದಿಯನ್ನು ಒದಗಿಸಿತು .
FAQ
1750 ರಿಂದ 1850 ರ ಕಾಲವಧಿಯಲ್ಲಿ ಕೈಗಾರಿಕಾ ಕ್ರಾಂತಿಯು ಘಟಿಸಿತು
ರಿಚರ್ಡ್ ಆರ್ಕ್‌ರೈಟ್ .
ಇತರೆ ವಿಷಯಗಳು :
ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf
1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್