ಪ್ರಥಮ ಪಿ.ಯು.ಸಿ ಅಧ್ಯಾಯ – 09 ನೆಪೋಲಿಯನ್ ಮತ್ತು ರಾಷ್ಟ್ರೀಯತೆಯ ಉದಯ ನೋಟ್ಸ್‌ | 1st Puc History Chapter 9 Notes Question Answer

ಪ್ರಥಮ ಪಿ.ಯು.ಸಿ ಅಧ್ಯಾಯ 9.1 ನೆಪೋಲಿಯನ್ ಮತ್ತು ರಾಷ್ಟ್ರೀಯತೆಯ ಉದಯ ನೋಟ್ಸ್‌, 1st Puc History Chapter 9 Notes Question Answer in Kannada Medium 2024 KSEEB Solution For Class 11 Chapter 9 Notes Napoleon Bonaparte History Notes Napoleon Bonaparte Notes Pdf Nepoleon Mattu Rashtriyate Udaya Notes Pdf

 

1st Puc History Chapter 9 Question Answer

1st Puc History Chapter 9 Notes Question Answer

9.1 ನೆಪೋಲಿಯನ್ ಬೋನಾಪಾರ್ಟೆ (1769-1821)

1. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ .

1. ಖಂಡಾಂತರ ಪದ್ಧತಿಯನ್ನು ಹೇರಿದವರು ಯಾರು ?

ನಮೋಲಿಯನ್ .

2 . ನೆಪೋಲಿಯನ್ನನು ನಿಧನವಾದದ್ದು ಎಲ್ಲಿ ?

ಸೆಂಟ್ ಹೆಲೆನಾ ದ್ವೀಪದಲ್ಲಿ ,

3. ನೆಪೋಲಿಯನ್ ಮಾಡಿದ ಕೊನೆಯ ಯುದ್ಧ ಯಾವುದು ?

1815 ರಲ್ಲಿ ನಡೆದ ವಾಟರ್‌ಲೂ ಕದನ ಕೊನೆಯ ಯುದ್ಧವಾಗಿತ್ತು .

4. ಫ್ರಾನ್ಸ್‌ನ ಮೊದಲ ಕಾನ್ಸಲ್ ಯಾರು ?

ನೆಪೋಲಿಯನ್ ಬೋನಾಪಾರ್ಟೆ .

5 , ಅಡ್ಡಿರಲ್ ನೆಲ್ಸನ್ ಯಾರು ?

ಇಂಗ್ಲೆಂಡಿನ ದಂಡನಾಯಕನಾಗಿದ್ದನು .

6. ನೆಪೋಲಿಯನ್ ಫ್ರಾನ್ಸ್ ಚಕ್ರವರ್ತಿ ಎಂದು ಕಿರೀಟಧರಿಸಿದ್ದು ಯಾವ ವರ್ಷದಲ್ಲಿ

‘ 1804 ರಲ್ಲಿ .

7. ಬ್ಯಾಂಕ್ ಆಫ್ ಫ್ರಾನ್ಸ್‌ನ್ನು ಸ್ಥಾಪಿಸಿದ್ದು ಯಾರು ?

ನೆಪೋಲಿಯನ್ .

8. ನೆಪೋಲಿಯನ್ ಸ್ಥಾಪಿಸಿದ ವಿಶ್ವವಿದ್ಯಾಲಯ ಯಾವುದು ?

ಫಾನ್ಸ್ ವಿಶ್ವವಿದ್ಯಾಲಯ

9 . ಎರಡನೇ ಜಸ್ಟಿನಿಯನ್ ಎಂದು ಯಾರನ್ನು ಕರೆಯಲಾಗಿದೆ ?

ನೆಪೋಲಿಯನ್ ಬೋನಾಪಾರ್ಟಿಗೆ .

10 , ವಾಟರ್‌ಲೂ ಕದನವೂ ಯಾವ ವರ್ಷದಲ್ಲಿ ನಡೆಯಿತು ?

1815 ರಲ್ಲಿ ನಡೆಯಿತು .

Napoleon and Rise of Nationalism Notes Pdf in Kannada Medium

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ನೆಪೋಲಿಯನ್‌ನ ತಂದೆ -ತಾಯಿಗಳ ಹೆಸರೇನು ?

ನೆಪೋಲಿಯನ್‌ನ ತಂದೆ – ಕೌಂಟ್‌ ಚಾರ್ಲ್ಸ್ ಬೋನಾಪಾರ್ಟೆ , ತಾಯಿ – ಕೌಂಟಿಸ್ ಲಿಟಿಸಿಯಾ ರೊಮೊಲಿನಾ .

2 ) ನೆಪೋಲಿಯನ್ ಜನಿಸಿದ್ದು ಎಲ್ಲಿ ಮತ್ತು ಯಾವ ವರ್ಷದಲ್ಲಿ ?

ನೆಪೋಲಿಯನ್ ಜನಿಸಿದ್ದು ಕೋರ್ಸಿಕಾ ದ್ವೀಪದ ಅಜಾಸಿಯೊ ಎಂಬಲ್ಲಿ ಆಗಸ್ಟ್ 5 , 1769 ರಲ್ಲಿ ಜನಿಸಿದನು .

3 ) ಆಲ್‌ಸಿಟ್ ಒಪ್ಪಂದ ಯಾರ ಮಧ್ಯೆ ಹಾಗೂ ಯಾವ ವರ್ಷದಲ್ಲಿ ಜರುಗಿತು ?

ತಿಲ್‌ಸಿಟ್ ಒಪ್ಪಂದ 1807 ರಲ್ಲಿ ರಷ್ಯಾದ ಝಾರ್ ಹಾಗೂ ನೆಪೋಲಿಯನ್ ನಡುವೆ ನಡೆಯಿತು .

4) ಕಾನ್‌ಕಾರ್ಡೇಟ್ ಎಂದರೇನು ‘

ಕಾನ್‌ಕಾರ್ಡೇಟ್ ‘ ಎಂಬುದೊಂದು ಧಾರ್ಮಿಕ ಒಪ್ಪಂದ , ಪೋಸ್ 7 : ಪಯಾಸ್ ನೊಂದಿಗೆ ನಮೋಲಿಯನ್‌ನ 1802 ರಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಕಾನ್‌ ಕಾರ್ಡೇಟ್ ಆಗಿದೆ .

5 ) ಖಂಡಾಂತರ ಪದ್ಧತಿ ಎಂದರೇನು ?

1805 ರ ಬರ್ಲಿನ್ ಮತ್ತು 1807 ರ ಮಿಲಾನ್‌ನ ಎರಡು ಘೋಷಣೆಗಳನ್ನು ಹೊರಡಿಸಿ , ಇದರ ಪ್ರಕಾರ ಬ್ರಿಟಿಷ್ ವಸ್ತುಗಳನ್ನು ಇಡೀ ಯೂರೋಪ್‌ನಿಂದ ಬಹಿಷ್ಕರಿಸಲಾಯಿತು . ಇದನ್ನು ಖಂಡಾಂತರ ಪದ್ಧತಿ ಎಂದು ಕರೆಯಲಾಗಿದೆ .

6 ) ಲೀಜನ್ ಆಫ್ ಹಾನರ್ ಎಂದರೇನು ?

ರಾಷ್ಟ್ರಕ್ಕಾಗಿ ಯಾರು ಸೈನಿಕ ಹಾಗೂ ನಾಗರಿಕ ವಲಯಗಳಲ್ಲಿ ಅತ್ಯಂತ ದಕ್ಷತೆಯಿಂದ ಸೇವೆಸಲ್ಲಿಸುವರೋ ಅಂಥಹವರನ್ನು ಗುರ್ತಿಸಿ , ಗೌರವಿಸಲು ನೆಪೋಲಿಯನ್ನು “ ಲೀಜನ್ ಆಫ್ ಹಾನರ್ ” ಎಂಬ ಪ್ರಶಸ್ತಿಯನ್ನು ನೀಡಲು ಆರಂಭಿಸಿದನು . ಈ ಪ್ರಶಸ್ತಿಯು ಯಾವುದೇ ರೀತಿಯ ವರ್ಗ ಮತ್ತು ಧರ್ಮಗಳ ವ್ಯತ್ಯಾಸ ಎಣಿಸದೇ ಸಮಾನತೆಯ ತತ್ವಗಳನ್ನು ಆಧರಿಸಿತ್ತು .

ನೆಪೋಲಿಯನ್ ಬೋನಾಪಾರ್ಟೆ Notes in Kannada

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ನೆಪೋಲಿಯನ್‌ನ ಜೀವನ ಹಾಗೂ ಏಳಿಗೆಯ ಕುರಿತು ಬರೆಯಿರಿ ,

ನೆಪೋಲಿಯನ್‌ನ ಪೂರ್ಣ ಹೆಸರು ನೆಪೋಲಿಯನ್ ಬೋನಾಪಾರ್ಟೆ , ಈತನು ಕೋರ್ಸಿಕಾ ದ್ವೀಪದ ಅಜಾಸಿಯೋ ಎಂಬಲ್ಲಿ ಆಗಸ್ಟ್ 15 , 1769 ರಂದು ಜನಿಸಿದರು . ಈತನ ತಂದೆಯ ಹೆಸರು ಕೌಂಟ್ ಚಾರ್ಲ್ಸ್ ಬೋನಾಪಾರ್ಟೆ , ತಾಯಿ ಕೌಂಟಿಸ್ ಲಿಟೆಸಿಯಾ ರೂಮಾಲಿನಾ . ಬಾಲ್ಯಾವಸ್ಥೆಯಲ್ಲಿಯೇ ಈತನು ಆತ್ಮವಿಶ್ವಾಸ , ಸತತ ಶ್ರಮ ಹಾಗೂ ಅತ್ಯಂತ ಮಹಾತ್ವಾಕಾಂಕ್ಷೆಯ ಗುಣಗಳನ್ನು ಹೊಂದಿದ್ದನು . ಆಸ್ಟ್ರಿಯಾದ ಬ್ರಿಯನ್ನೆಯಲ್ಲಿ ನಂತರ ಪ್ಯಾರಿಸ್ಸಿನ ಸೇನಾ ಅಕಾಡೆಮಿಯಲ್ಲಿ ಶಿಕ್ಷಣವನ್ನು ಪಡೆದನು . ಸೇನಾ ವಿಜ್ಞಾನದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಅದರಲ್ಲಿಯೂ ಶಿಕ್ಷಣವನ್ನು ಪಡೆದುಕೊಂಡನು . ನಂತರ ಹದಿನೇಳನೆಯ ವಯಸ್ಸಿಗೇ ಫ್ರೆಂಚ್ ಸೇನೆಯಲ್ಲಿ ಫಿರಂಗಿ ಪಡೆಯ ಅಧಿಕಾರಿಯಾಗಿ ಸೇರಿಕೊಂಡನು . ತನ್ನ ಸಾಮರ್ಥ್ಯದಿಂದ ಹುದ್ದೆಯಿಂದ ಹುದ್ದೆಗೆ ಬಡ್ತಿ ಹೊಂದಿದನು . ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ನಡೆದ ದಂಗೆಗಳಲ್ಲಿ , ಎರಡು ದಂಗೆಗಳನ್ನು ಹತ್ತಿಕ್ಕುವ ಮೂಲಕ ತನ್ನ ಪ್ರತಿಭೆಯನ್ನು ಸಾಬೀತು ಪಡಿಸಿದನು .

1796 ರಲ್ಲಿ ಫ್ರೆಂಚ್ ಸೇನೆಯ ದಂಡನಾಯಕನಾದನು . ಇಟಲಿಯ ಮೇಲೆ ಕೈಗೊಂಡ ದಂಡಯಾತ್ರೆ ಯಶಸ್ವಿಯಾಗಿತ್ತು . ಈತನು ಮೊದಲು ಸಾರ್ಡಿನಿಯನ್‌ರನ್ನು ನಂತರ ಆಸ್ಟಿಯನ್‌ರನ್ನು ಸೋಲಿಸಿದನು . 1797 ರಲ್ಲಿ ಈತನು ಮಾಡಿದ ಕಂಪೋ ಮೋರ್ಮಿಯೊ ಒಪ್ಪಂದ ಫ್ರಾನ್ಸ್‌ಗೆ ಯಶಸ್ವಿನ್ನು ಗಳಿಸಿಕೊಟಿತು . ನೆಪೋಲಿಯನ್ ಬೋನಾಪರ್ಟಿಯು ತನ್ನ ದಿಗ್ವಿಜಯಗಳ ಮೂಲಕ ಯೂರೋಪಿನ ನಕಾಶೆಯನ್ನು ಪುನರ್ ರಚಿಸಲು ಆರಂಭಿಸಿದನು . ‘ ಪಿರಮಿಡ್ ‘ ಕದನದಲ್ಲಿ ಇಂಗ್ಲೆಂಡಿನ ಮೇಲೆ ದಿಗ್ವಿಜಯವನ್ನು ಸಾಧಿಸಿದನು .

2 ) ನೆಪೋಲಿಯನ್‌ನ ದಂಡೆಯಾತ್ರೆಗಳನ್ನು ಕುರಿತು ಬರೆಯಿರಿ .

ಫ್ರೆಂಚ್ ಕ್ರಾಂತಿಯ ವಿರುದ್ಧ ಏಷ್ಯಾ , ಆಸ್ಟೀಯಾ , ರಷ್ಯಾ , ಸ್ಪೇನ್ ಮತ್ತು ಇತರ ದೇಶಗಳನ್ನು ಒಳಗೊಂಡು ರಚನೆಯಾದ ಪ್ರಥಮ ಒಕ್ಕೂಟವನ್ನು ನೆಪೋಲಿಯನ್ ಇಟಲಿ ವಿಜಯದ ಸಂದರ್ಭದಲ್ಲಿ ಸಂಪೂರ್ಣವಾಗಿ ಧ್ವಂಸಗೊಳಿಸಿದನು . 1801 ರಲ್ಲಿ ಆಸ್ಟ್ರಿಯಾವನ್ನು ಹೋಹೆಂಜೊಲೆರನ್ ಎಂಬಲ್ಲಿ ಸೋಲಿಸಿದನು . 1805 ರಲ್ಲಿ ಅಸ್ಟರ್‌ಲಿಟ್ಟೆ ಕದನದಲ್ಲಿ ಆತ್ಮೀಯಾ ಮತ್ತು ರಷ್ಯಾಗಳ ಸಂಯುಕ್ತ ಸೈನ್ಯವನ್ನು ಅತ್ಯಂತ ಹೀನಾಯವಾಗಿ ಸೋಲಿಸಿದನು . 1807 ರ ವೇಳೆಗೆ ಇಂಗ್ಲೆಂಡ್‌ನ್ನು ಹೊರತುಪಡಿಸಿ ಯೂರೋಪ್ ಖಂಡವೆಲ್ಲ ನೆಪೋಲಿಯನ್‌ನ ಅಧೀನಕ್ಕೆ ಒಳಪಟ್ಟಿತು . ಇಂಗ್ಲೆಂಡ್‌ನ್ನು ನಾಶಪಡಿಸುವ ಉದ್ದೇಶದಿಂದ 1806 ಮತ್ತು 1807 ರ ಮಿಲಾನ್‌ನಲ್ಲಿ ಎರಡು ಘೋಷಣೆಗಳನ್ನು ಹೊರಡಿಸಿ ಇಂಗ್ಲೆಂಡಿನ ವಸ್ತುಗಳನ್ನು ಯೂರೋಪಿನ ಯಾವ ರಾಷ್ಟ್ರವು ಖರೀದಿಸದಂತೆ ಬಹಿಷ್ಕರಿಸಿದನು . ರಷ್ಯಾದ ಝಾರಾನು ಖಂಡಾಂತರ ಪದ್ಧತಿಯನ್ನು ಮುರಿದುದರಿಂದ 1812 ರಲ್ಲಿ ರಷ್ಯಾದ ಮೇಲೆ ದಂಡೆತ್ತಿ ಹೋದನು . ರಷ್ಯಾ ಸೈನ್ಯವೇ ಮಾಸ್ಕೊ ನಗರಕ್ಕೆ ಬೆಂಕಿ ಹಚ್ಚಿದರು . ಇದರಿಂದ ನೆಪೋಲಿಯನ್ ಸೇನೆ ಕಂಗೆಟ್ಟಿತ್ತು . ಸಾವಿರಾರು ಸೈನಿಕರು ಸಾವನಪ್ಪಿದರು . ಮುಂದೆ ನಡೆದ 1813 ರ ಲಿಪ್‌ಜಿಗ್ ಕದನ ಹಾಗೂ 1815 ರ ವಾಟರ್‌ಲೂದಲ್ಲಿ ನೆಪೋಲಿಯನ್ ಸೋಲನ್ನು ಅನುಭವಿಸಿದನು .

3 ) ನೆಪೋಲಿಯನ್‌ನ ಖಂಡಾಂತರ ಪದ್ಧತಿಯನ್ನು ಕುರಿತು ಚರ್ಚಿಸಿ .

ಇಂಗ್ಲೆಂಡನ್ನು ಹೊರತು ಪಡಿಸಿ ಇಡೀ ಯೂರೋಪ್ ಖಂಡವು ನೆಪೋಲಿಯನ್‌ನ ನಿಯಂತ್ರಣಕ್ಕೆ ಒಳಪಟ್ಟಿತು . ಇಂಗ್ಲೆಂಡಿನ ಸಾಮರ್ಥ್ಯವು ಅದರ ವ್ಯಾಪಾರ , ವಾಣಿಜ್ಯದಲ್ಲಿತ್ತು . ಆದ್ದರಿಂದ ನೆಪೋಲಿಯನ್‌ನು ಇಂಗ್ಲೆಂಡಿನ ವ್ಯಾಪಾರ ಮತ್ತು ವಾಣಿಜ್ಯವನ್ನು ನಾಶಪಡಿಸಲು ನಿರ್ಧರಿಸಿದನು . 1806 ರ ಬರ್ಲಿನ್ ಹಾಗೂ 1807 ರಲ್ಲಿ ಮಿಲಾನ್‌ನ ನಡುವೆ ಎರಡು ಘೋಷಣೆಗಳನ್ನು ( ವಿಧಿಗಳನ್ನು ಹೊರಡಿಸಿ ಇದರ ಪ್ರಕಾರ ಬ್ರಿಟಿಷ್ 215ವಸ್ತುಗಳನ್ನು ಇಡೀ ಯೂರೋಪಿನಿಂದ ಬಹಿಷ್ಕರಿಸಿದನು . ಇದನ್ನು ಖಂಡಾಂತರ ಪದ್ಧತಿ ಎಂದು ಕರೆಯಲಾಗಿದೆ .

ಸಂಪೂರ್ಣ ಯೂರೋಪ್ ಖಂಡವು ವ್ಯಾಪಾರ ಸರಕುಗಳನ್ನು ಪಡೆಯಲು ತೊಂದರೆಯನ್ನುಂಟು ಮಾಡಿತು . ಯೂರೋಪಿನ ಎಲ್ಲಾ ದೇಶಗಳು ಖಂಡಾಂತರ ಪದ್ಧತಿಯನ್ನು ಜಾರಿಗೊಳಿಸಿದುದರಿಂದ ಬಹಳ ತೊಂದರೆಗೆ ಒಳಗಾದವು . ಏಕೆಂದರೆ ಇಂಗ್ಲೆಂಡಿನಿಂದ ಆಮದಾಗುವ ಸರಕುಗಳನ್ನು ಅವು ಅವಲಂಬಿಸಿದ್ದವು . ಇದರ ಪರಿಣಾಮ ಸ್ಪೇನ್ – ಪೋರ್ಚುಗಲ್ ದೇಶಗಳು ಖಂಡಾಂತರ ಪದ್ಧತಿಯ ನಿಯಮವನ್ನು ಮುರಿದವು . ಇದರಿಂದ ಕೋಪಗೊಂಡ ನೆಪೋಲಿಯನ್ ಆ ದೇಶಗಳ ಮೇಲೆ ಯುದ್ಧ ಸಾರಿದನು . ಸ್ಪೇನ್‌ನಲ್ಲಿ ರಾಷ್ಟ್ರೀಯ ಕ್ರಾಂತಿಯುಂಟಾಯಿತು . ಈ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡ ಇಂಗ್ಲೆಂಡ್ ಸ್ಪೇನ್‌ನ ಸಹಾಯಕ್ಕಾಗಿ ಸೈನ್ಯವನ್ನು ಕಳುಹಿಸಿತು . ಫ್ರಾನ್ಸ್ ಸೋತಿತು . ನೆಪೋಲಿಯನ್ನನೆ “ ಸ್ಪೇನ್ ಎಂಬ ‘ ಅಲ್ಲರ್ ತನ್ನನ್ನು ನಾಶಪಡಿಸಿತು ” ಎಂದು ಹೇಳಿಕೊಂಡಿದ್ದಾನೆ .

ಮುಂದೆ ರಷ್ಯಾದಲ್ಲಿಯೂ ಖಂಡಾಂತರ ನಿಯಮವನ್ನು ಉಲ್ಲಂಘಿಸಿದ ರಷ್ಯಾದ ಮೇಲೆ ನೆಪೋಲಿಯನ್ ಯುದ್ಧ ಸಾರಿದನು . ಫ್ರಾನ್ಸ್‌ನ ಸೈನ್ಯ ಮಾಸ್ಕೊ ಪ್ರವೇಶಿಸುತ್ತಿದ್ದಂತೆ ರಷ್ಯಾದ ಸೈನ್ಯವೇ ಮಾಸ್ಕೋ ನಗರಕ್ಕೆ ಬೆಂಕಿ ಹಚ್ಚಿತು . ಫ್ರೆಂಚ್ ಸೈನ್ಯ ಕೊರೆಯುವ ಚಳಿ , ಹಸಿವು ನೀರಡಿಕೆಯಿಂದ ತತ್ತರಿಸಿತ್ತು . ಮೂರು ಲಕ್ಷದಷ್ಟು ಸೈನ್ಯವನ್ನು ನೆಪೋಲಿಯನ್ ಕಳೆದುಕೊಂಡು ಸೋಲನ್ನು ಅನುಭವಿಸಿದನು .

4) ನೆಪೋಲಿಯನ್ನ ಅವನತಿಗೆ ಕಾರಣಗಳೇನು ? ವಿವರಿಸಿ .

*ನೆಪೋಲಿಯನ್‌ನಲ್ಲಿದ್ದ ಅಪರಿಮಿತ ಮಹಾತ್ವಾಕಾಂಕ್ಷೆ , ಸ್ವಪ್ರತಿಷ್ಠೆ ಮತ್ತು ಸ್ವಕೇಂದ್ರಿತ ಸ್ವಭಾವಗಳು ಈತನನ್ನು ವಿನಾಶದಲ್ಲಿ ಕೊನೆಗೊಳಿಸಿದವು .

*ನೆಪೋಲಿಯನ್‌ನ ಸಾಮ್ರಾಜ್ಯವು ಸೇನಾ ಸಂಘಟನೆಯಿಂದ ಸ್ಥಾಪಿತವಾಗಿದ್ದು ಅದರಲ್ಲಿ ಹಲವಾರು ನ್ಯೂನತೆಗಳಿದ್ದವು .

*ನೆಪೋಲಿಯನ್ನನ ಸಾಮ್ರಾಜ್ಯದ ವಿರುದ್ಧ ಉದಯವಾದ ರಾಷ್ಟ್ರೀಯತೆ ಆತನ ಅವನತಿಗೆ ಮತ್ತೊಂದು ಕಾರಣವಾಯಿತು .

*ನೆಪೋಲಿಯನ್ನನು ಜಾರಿಗೆ ತಂದ ಖಂಡಾಂತರ ಪದ್ಧತಿ ಅವನ ಅವನತಿಗೆ ಪ್ರಮುಖ ಕಾರಣವಾಯಿತು . ಅವನು ಕೈಗೊಂಡ ರಷ್ಯಾದ ದಂಡಯಾತ್ರೆ ‘ ಲಿಪ್ ಜಿಗ್ ಕದನ ‘ ‘ ವಾಟರ್‌ಲೂ ಕದನ ‘ ಅವನನ್ನು ಸಂಪೂರ್ಣವಾಗಿ ಅವನತಿಯ ದಿಕ್ಕಿಗೆ ಕೊಂಡೊಯ್ದವು .

*ನೆಪೋಲಿಯನ್ ಕ್ಯಾಥೋಲಿಕ್ ಧರ್ಮ ಗುರುವಾದ ಪೋಪನೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದು ಅಂದರೆ 1809 ರಲ್ಲಿ ಪೋಪನ ಎಲ್ಲಾ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಪೋಪನಸ್ಥಾನವನ್ನು ಪ್ಯಾರಿಸ್‌ಗೆ ಸ್ಥಳಾಂತರಿಸಿದ್ದು ಅವನ ಅವನತಿಗೆ ಕಾರಣವಾಯಿತು .

*ಇಂಗ್ಲೆಂಡ್‌ನೊಂದಿಗಿನ ವಿರೋಧವು ಆತನ ಸಾಗರ ಮೇಲಿನ ಪ್ರಭುತ್ವವು ವಿನಾಶಗೊಳಿಸಿತು .

ನೆಪೋಲಿಯನ್ನನು ಅಧಿಕಾರದ ಅತ್ಯುನ್ನತ ಹಂತದಲ್ಲಿದ್ದಾಗ ಆತನಿಂದ ಲಾಭ ಮಾಡಿಕೊಂಡಿದ್ದ ಆತನ ಸ್ನೇಹಿತರು ಮತ್ತು ಸಂಬಂಧಿಕರು ಆತನು ಕಷ್ಟದಲ್ಲಿದ್ದಾಗ ದ್ರೋಹ ಬಗೆದರು . ಇದು ಕೂಡ ಅವನ ಅವನತಿಗೆ ಕಾರಣವಾಯಿತು .

5 ) ನೆಪೋಲಿಯನ್‌ನು ‘ ಕ್ರಾಂತಿಯ ಶಿಶು ‘ ಹಾಗೂ ‘ ಕ್ರಾಂತಿಯ ನಿರ್ಮೂಲನಕಾರ ‘ ಈ ಹೇಳಿಕೆಯನ್ನು ಸಮರ್ಥಿಸಿ .

ನೆಪೋಲಿಯನ್‌ನು ‘ ಕ್ರಾಂತಿಯ ಶಿಶು ‘ ಹಾಗೂ ‘ ಕ್ರಾಂತಿಯ ನಿರ್ಮೂಲನಕಾರ ಎಂಬುದಾಗಿ ಇತಿಹಾಸಕಾರರು ನೆಪೋಲಿಯನನನ್ನು ಅರ್ಥೈಸಿದ್ದಾರೆ . ಸ್ವತಃ ನೆಪೋಲಿಯನ್ ‘ ನನ್ನ ದೇಶ ಸಾಯುತ್ತಿರುವಾಗ ನಾನು ಜನಿಸಿದೆ ‘ ಎಂಬುದಾಗಿ ಹೇಳಿದ್ದಾನೆ . ಫ್ರಾನ್ಸ್ ದೇಶಕ್ಕೆ ಹೊಸ ಬದುಕಿನ ಉತ್ಸಾಹವನ್ನು ತಂದುಕೊಡಲು ಅವನು ಪ್ರಯತ್ನಿಸಿದನು . ಫ್ರಾನ್ಸ್ ಕ್ರಾಂತಿಯ 10 ವರ್ಷಗಳ ತೀವ್ರ ಹಾಗೂ ಅಮೂಲಾಗ್ರ ಬದಲಾವಣೆಗಳ ನಂತರ ಫ್ರಾನ್ಸ್‌ಗೊಂದಲ ಮತ್ತು ಅಸ್ತವ್ಯಸ್ತತೆಯನ್ನು ಅನುಭವಿಸುತ್ತಿತ್ತು . ತನ್ನ ಆಡಳಿತಾತ್ಮಕ ಸುಧಾರಣೆಯಿಂದ ಉಂಟಾಗಿದ್ದ ಈ ಗೊಂದಲವನ್ನು ನಿವಾರಿಸಿ ಕ್ರಮಬದ್ಧತೆ ತಂದನು .

ನೆಪೋಲಿಯನ್ನನು ಜಾರಿಗೆ ತಂದ ಆಡಳಿತಾತ್ಮಕ ಸುಧಾರಣೆಗಳು , ನೆಪೋಲಿಯನ್ನನ ಸಂಹಿತೆ , ಕಾನ್‌ಕಾರ್ಡೆಟ್ ಎಂಬ ಧಾರ್ಮಿಕ ಒಪ್ಪಂದ , ಆತನು ಜಾರಿಗೆ ತಂದ ಶಿಕ್ಷಣ ವ್ಯವಸ್ಥೆ , ಫ್ರಾನ್ಸ್ ವಿಶ್ವವಿಧ್ಯಾಲಯದ ಸ್ಥಾಪನೆ , ಲೋಕೋಪಯೋಗಿ ಕಾರ್ಯಗಳಾದ ರಸ್ತೆ ಸುಧಾರಣ , ಜಲಮಾರ್ಗ , ಕಾಲುವೆಗಳ ನಿರ್ಮಾಣಗಳು , ಆರ್ಥಿಕ ಸುಧಾರಣೆಗಳು ಹಾಗೂ ಪ್ರತಿಭಾವಂತರಿಗೆ ಪ್ರೋತ್ಸಾಹ ಪೂರ್ವಕವಾಗಿ ‘ ಲೇಜನ್ ಆಫ್ ಹಾನರ್ ‘ ಕ್ರಾಂತಿಯ ಶಿಶುವಾಗಿ ಪ್ರಾರಂಭಿಸಿ ಫ್ರಾನ್ಸ್‌ನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದ್ದಾನೆ . ಆದರೆ ಈತನು ಕೈಗೊಂಡ ದಂಡಯತೆಗಳು , ಟಿಫಾಲ್ಟರ್ ಕದನ , ಆಸ್ಟರ್‌ ಲಿಟ್ ಕದನ , ಖಂಡಾಂತರ ಪದ್ಧತಿ , ವಾಟರ್‌ಲೂ ಕದನ , ಲಿಪ್‌ಜಿಗ್ ಕದನ , ರಷ್ಯಾದ ದಂಡಯಾತ್ರ , ಇವನನ್ನು ಕ್ರಾಂತಿಯ ವಿನಾಶಕ ” ನಾಗಿದ್ದನು , ಇದು ಅವನ ಅವನತಿಗೆ ಕಾರಣವಾಯಿತು .

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1. ನೆಪೋಲಿಯನ್ ಆಡಳಿತ ಸುಧಾರಣೆಗಳನ್ನು ವಿವರಿಸಿ .

ಕ್ರಿ.ಶ. 1799 ರಿಂದ 1815 ರ ಅವಧಿಯನ್ನು “ ನೆಪೋಲಿಯನ್ನನ ಯುಗ ” ಗೊಂದಲ ಮತ್ತು ಅಸ್ತವ್ಯಸ್ತತೆಯನ್ನು ಅನುಭವಿಸುತ್ತಿತ್ತು . ನೆಪೋಲಿಯನ್ ತನ್ನ ಪರಿಗಣಿಸಲಾಗಿದೆ . ಇದಕ್ಕೆ ಕಾರಣ ನೆಪೋಲಿಯನ್ನನ ಆಡಳಿತ ಸುಧಾರಣೆ ಫಾನ್ಸ್ ಆಡಳಿತಾತ್ಮಕ ಸುಧಾರಣೆಯಿಂದ ಉಂಟಾಗಿದ್ದ ಈ ಗೊಂದಲವನ್ನು ನಿವಾರಿಸಿ , ಕಮಬದ್ಧತೆಯನ್ನು ತಂದನು . ಫ್ರಾನ್ಸ್‌ನ ಸಮಗ್ರ ಸ್ಥಳೀಯ ಆಡಳಿತವನ್ನು ನೆಪೋಲಿಯನ್ ಕೇಂದ್ರಿಕರಿಸಿದನು . ಇಡೀ ದೇಶವನ್ನು ಹಲವು ಇಲಾಖೆಗಳಾಗಿ ವಿಂಗಡಿಸಿದನು . ಮನಃ ಇವುಗಳನ್ನು ಆರೊಂಡೀಸ್ ಮೆಂಟ್ಸ್ ಮತ್ತು ಕಮ್ಯೂನ್‌ಗಳೆಂಬ ಚಿಕ್ಕ – ಚಿಕ್ಕ ಘಟಕಗಳಾಗಿ ವಿಭಜಿಸಿದನು . ಎಲ್ಲಾ ಚುನಾಯಿತ ಮತ್ತು ಇನ್ನಿತರ ಸಂಸ್ಥೆಗಳ ಅಧಿಕಾರಿಗಳು ಪ್ರಿಫೆಕ್ಸ್ ಮತ್ತು ಉಪ ಪ್ರಿಫೆಕ್ಸ್‌ಗಳಿಗೆ ಸೇರಿತ್ತು . ಇವರು ನೆಪೋಲಿಯನ್‌ಗೆ ಮಾತ್ರ ಹೊಣೆಗಾರರಾಗಿದ್ದಾರೆ . ಹೊಸ ಆಡಳಿತ ವ್ಯವಸ್ಥೆಯು ಕೇಂದ್ರ ಸರ್ಕಾರದ ಶಾಸನಗಳನ್ನು ಪ್ರಾಮಾಣಿಕವಾಗಿ ಮತ್ತು ಏಕರೂಪವಾಗಿ ಜಾರಿಗೆ ತರುವ ಭರವಸೆ ನೀಡಿತು . ದಕ್ಷ ಆರಕ್ಷಕ ದಳ ಮತ್ತು ನಂಬಿಗಸ್ಥ ಸೈನ್ಯವು ಈ ಎಲ್ಲ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸುವಲ್ಲಿ ಅವನಿಗೆ ಸಹಾಯ ಮಾಡಿದವು . ರಾಜ್ಯ ಕಾರ್ಯದರ್ಶಿ ಮಂಡಳಿಯ ಕಛೇರಿಯನ್ನು ಹೊಸ ಸ್ಥಳಕ್ಕೆ ಬೆಳೆಸಿದನು . ಇದಲ್ಲದೆ ನೆಪೋಲಿಯನ್‌ನನ್ನು ರೂಪಿಸಿ ಜಾರಿಗೊಳಿಸಿದ ಕಾನೂನು ಸಂಹಿತೆಯಾಗಿತ್ತು . ಅಲ್ಲದೆ ಲೋಕೋಪಯೋಗಿ ಕಾರ್ಯಗಳು , ಶಿಕ್ಷಣವ್ಯವಸ್ಥೆ , ಬ್ಯಾಂಕಿಂಗ್ ವ್ಯವಸ್ಥೆ , ಅಂದರೆ ಆರ್ಥಿಕ ಸುಧಾರಣೆ , ಕಾನ್‌ ಕಾರ್ಡಟ್ ‘ ಎಂಬ ಧಾರ್ಮಿಕ ಒಪ್ಪಂದ ‘ ಲೀಜನ್ ಆಫ್ ಹಾನರ್ ‘ ಎಂಬ ಪ್ರಶಸ್ತಿಗಳು ನೆಪೋಲಿಯನ್ನನ ಆಡಳಿತ ಸುಧಾರಣೆಗೆ ಸಾಕ್ಷಿಯಾಗಿವೆ .

FAQ

1. ಫ್ರಾನ್ಸ್‌ನ ಮೊದಲ ಕಾನ್ಸಲ್ ಯಾರು ?

ನೆಪೋಲಿಯನ್ ಬೋನಾಪಾರ್ಟೆ .

1. ಬ್ಯಾಂಕ್ ಆಫ್ ಫ್ರಾನ್ಸ್‌ನ್ನು ಸ್ಥಾಪಿಸಿದ್ದು ಯಾರು ?

ನೆಪೋಲಿಯನ್ .

ಇತರೆ ವಿಷಯಗಳು :

1st PUC History Notes

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *

rtgh