ಪ್ರಥಮ ಪಿ.ಯು.ಸಿ ಅಧ್ಯಾಯ-10 ಪ್ರಪಂಚದ ಯುದ್ಧಗಳು ಮತ್ತು ಅಂತರಾಷ್ರ್ಟೀಯ ಸಂಘಗಳು ನೋಟ್ಸ್‌ | 1st Puc History Chapter 10 Notes Question Answer

ಪ್ರಥಮ ಪಿ.ಯು.ಸಿ ಅಧ್ಯಾಯ-10 ಪ್ರಪಂಚದ ಯುದ್ಧಗಳು ಮತ್ತು ಅಂತರಾಷ್ರ್ಟೀಯ ಸಂಘಗಳು ನೋಟ್ಸ್‌, 1st Puc History Chapter 10 Notes Question Answer Kannada Medium prathama jagatika yuddha ಎರಡನೇ ಜಾಗತಿಕ ಯುದ್ಧ ವರ್ಸೆಲ್‌ ಒಪ್ಪಂದ ವಿಶ್ವಸಂಸ್ಥೆಯ ಅಂಗಗಳು ಸಾಧನೆಗಳು ಪ್ರಥಮ ಜಾಗತಿಕ ಯುದ್ಧ ಸರ್ವಾಧಕಾರದ ಏಳಿಗೆ ನೋಟ್ಸ್ ವಿಶ್ವಸಂಸ್ಥೆಯ ಅಂಗಗಳು

 
1st Puc History Chapter 10 Notes

Kseeb Solution For History Class 11 Chapter 10 Notes

1. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.

1 ) ಎರಡನೇ ಜಾಗತಿಕ ಯುದ್ಧದಲ್ಲಿ ಅಮೇರಿಕಾ ಭಾಗಿಯಾಗಲು ಕಾರಣವೇನು ?

1941 ಜಪಾನ್ ದೇಶವು ಶಾಂತಸಾಗರದ ಪರ್ಲ್‌ಹಾರ್ಬ‌ರ್ ನೌಕಾ ನೆಲೆಯ ಮೇಲೆ ದಾಳಿ ಮಾಡಿ ಅಮೇರಿಕನ್ನರು ಅನೇಕ ಹಡಗುಗಳನ್ನು ಮುಳುಗಿಸಿತು . ಇದರಿಂದಾಗಿ ಅಮೆರಿಕಾ ಎರಡನೇ ಜಾಗತಿಕ ಯುದ್ಧದಲ್ಲಿ ಭಾಗಿಯಾಗುವಂತಾಯಿತು . ‌

2 ) ಜಪಾನ್ ಮೇಲೆ ಅಣುಬಾಂಬ್ ಹಾಕಲು ಅಮೇರಿಕಾ ವಾಯುಪಡೆಗೆ ಆಜ್ಞೆ ಮಾಡಿದವರು ಯಾರು ?

ಹ್ಯಾರಿ ಎಸ್ . ಟ್ಯೂಮನ್ .

3. ಅಮೇರಿಕಾ ದೇಶವು ಮೊದಲ ಜಾಗತಿಕ ಯುದ್ಧದಲ್ಲಿ ಭಾಗವಹಿಸಲು ಕಾರಣವೇನು ?

ಅಮೇರಿಕನ್ನರು ಪ್ರಯಾಣಿಸುತ್ತಿದ್ದ ಇಂಗ್ಲೆಂಡಿನ ‘ ಲುಸಟೇನಿಯನ್ ಹಡಗನ್ನು ನಾಶ ಮಾಡಿದ್ದರಿಂದ ಮೊದಲ ಜಾಗತಿಕ ಯುದ್ಧದಲ್ಲಿ ಅಮೇರಿಕಾವು ಕೂಡ ಭಾಗವಹಿಸಿತು .

4. ಯಾವ ಸಮ್ಮೇಳನದೊಂದಿಗೆ ಮೊದಲ ಜಾಗತಿಕ ಯುದ್ಧವು ಅಧಿಕೃತವಾಗಿ ಕೊನೆಗೊಂಡಿತು ?

1919 ರಲ್ಲಿನ ಪ್ಯಾರಿಸ್ ಸಮ್ಮೇಳನದೊಂದಿಗೆ ( ವರ್ಸೆಲ್ಸ್ ಒಪ್ಪಂದ ) ,

5 . ಫ್ಯಾಸಿಸ್ಟ್ ಪಕ್ಷದ ಸ್ಥಾಪಕನಾರು ?

ಬೆನಿಟೋ ಮುಸೋಲಿನಿ

6. “ ಫ್ಯಾಸಿಸಂ ” ಪದದ ಅರ್ಥವೇನು ?

ಕೊಡಲಿ ಮತ್ತು ದಂಡಗಳ ಕಟ್ಟು ( ರೋಮಿನ ಶಕ್ತಿಯ ಸಂಕೇತ ) ,

7. ಮೊದಲ ಜಾಗತಿಕ ಯುದ್ಧ ಯಾವಾಗ ಪ್ರಾರಂಭವಾಯಿತು ?

ಮೊದಲನೇ ಜಾಗತಿಕ ಯುದ್ಧ ಪ್ರಾರಂಭವಾದದ್ದು 1914 ರಲ್ಲಿ ,

8 . ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಜರ್ಮನಿಯ ಚಕ್ರವರ್ತಿಯರಾಗಿದ್ದರು ?

2 ನೇ ಕೈಸರ್ ವಿಲಿಯಂ .

9 . ಮೊದಲ ಜಾಗತಿಕ ಯುದ್ಧದ ತಕ್ಷಣದ ಕಾರಣ ಯಾವುದು ?

ಆಸ್ಟ್ರೀಯಾದ ರಾಜಕುಮಾರ ಆರ್ಚ್‌ಡ್ಯೂರ್ ಫರ್ಡಿನೆಂಡ್ ಮತ್ತು ಅವರ ಪತ್ನಿಯನ್ನು ಸರ್ಬಿಯಾದ ಪ್ರಜೆ ಗವ್ರಿಲ್ಲೋ ಪ್ರಿನ್ಸೆಸ್ ಎಂಬ ವಿದ್ಯಾರ್ಥಿ ಕೊಲೆಗೈದನು . ಅವನನ್ನು ಒಪ್ಪಿಸುವಂತೆ ಆಸ್ಟ್ರೀಯಾಗೆ ಗಡುವು ಕೊಟ್ಟಾಗ ಅದು ತಿರಸ್ಕರಿಸಿತು . ಆದ್ದರಿಂದ ಜುಲೈ 28 , 1914 ರಂದು ಆಸ್ಟ್ರಿಯಾ , ಜರ್ಮನಿಯ ಬೆಂಬಲ ಪಡೆದು ಸರ್ಬಿಯಾದ ಮೇಲೆ ಯುದ್ಧ ಸಾರಿತು ,

10 . ಮುಸೋಲಿಯು ಪ್ರಕಟಿಸಿದ ಪತ್ರಿಕೆಯನ್ನು ಹೆಸರಿಸಿ ,

‘ ಆವಂತಿ ‘ .

11 ) ‘ ಇಟಲಿ ವಿಸ್ತರಿಸಲೇಬೇಕು ಅಥವಾ ನಾಶ ‘ ಇದು ಯಾರ ಘೋಷಣೆ

ಬೆನಿಟೋ ಮುಸೋಲಿನಿ

12 ) ‘ ಅಡಾಲ್ಫ್ ಹಿಟ್ಲರ್ ‘ ಎಲ್ಲಿ ಜನಿಸಿದರು ?

ಆಸ್ಟ್ರೀಯಾದಲ್ಲಿ ,

13 ) ನಾಜಿ ಪಕ್ಷದ ಸ್ಥಾಪಕರು ಯಾರು ?

ಹಿಟ್ಲರ್ .

14 ) ಹಿಟ್ಲರ್‌ ಬರೆದ ಕೃತಿ ಯಾವುದು ?

ಮೈನ್‌ಕ್ಯಾಂಫ್ ( ನನ್ನ ಹೋರಾಟ ) ,

15 ) ಜರ್ಮನಿಯ ಸಂಸತ್ತಿನ ಹೆಸರನ್ನು ತಿಳಿಸಿ .

ರೈಖ್ ಸ್ಟ್ಯಾಗ್‌ ಗೆ ( ನಾಜೀ ಪಕ್ಷ )

16 ) ‘ ಗಸ್ಟ್‌ ‘ ಎಂದರೇನು ?

ಹಿಟ್ಲರ್‌ನು ತನ್ನ ವಿರೋಧಿಗಳನ್ನು ದಮನ ಮಾಡಲು ನೇಮಿಸಿದ ಪೋಲಿಸ್‌ ಗುಪ್ತದಳ .

17 ) ಯಹೂದಿಗಳಿಗಾಗಿ ಇಸ್ರೇಲ್ ರಾಷ್ಟ್ರ ಯಾವಾಗ ಸ್ಥಾಪಿಸಲ್ಪಟ್ಟಿತು ?

1948 ರಲ್ಲಿ .

18 ) ಅಂತಾರಾಷ್ಟ್ರೀಯ ನ್ಯಾಯಾಲಯವು ಎಲ್ಲಿದೆ ?

ನೆದರ್‌ಲ್ಯಾಂಡಿನ ಹೇಗ್ ನಗರದಲ್ಲಿದೆ .

19 ) ವಿಶ್ವಸಂಸ್ಥೆಯ ಇಂದಿನ ಪ್ರಧಾನ ಕಾರ್ಯದರ್ಶಿಗಳು ಯಾರು ?

ದಕ್ಷಿಣಕೊರಿಯಾದ ಬಾನ್ – ಕಿ – ಮೂನ್ .

20 ) ವಿಸ್ತರಿಸಿ ಬರೆಯಿರಿ :

UNESCO = ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ,

ILO= ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ .

FAO = ಆಹಾರ ಮತ್ತು ಕೃಷಿ ಸಂಸ್ಥೆ .

IBRD = ಅಂತಾರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್ .

IMF = ಅಂತಾರಾಷ್ಟ್ರೀಯ ಹಣಕಾಸುನಿದಿ .

WHO = ವಿಶ್ವ ಆರೋಗ್ಯ ಸಂಸ್ಥೆ .

WTO = ವಿಶ್ವ ವಾಣಿಜ್ಯ ಸಂಸ್ಥೆ ,

ಇರೋಸೋಕ್ = ಎಕನಾಮಿಕ್ ಅಂಡ್ ಸೋಷಿಯಲ್ ಕೌನ್ಸಿಲ್ ,

21 ) ಯಾವ ದಿನವನ್ನು ವಿಶ್ವಸಂಸ್ಥೆಯ ದಿನವೆಂದು ಆಚರಿಸಲಾಗುತ್ತದೆ ?

ಅಕ್ಟೋಬರ್ 24 ರಂದು .

22 ) ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ ?

ಅಮೇರಿಕಾದ ನ್ಯೂಯಾರ್ಕ್‌ನಲ್ಲಿದೆ .

23 ) ವಿಶ್ವಸಂಸ್ಥೆ ಯಾವಾಗ ಸ್ಥಾಪಿಸಲ್ಪಟ್ಟಿತು ?

1945 ರ ಅಕ್ಟೋಬರ್ 24 ರಂದು .

24 ) ವಿಶ್ವಸಂಸ್ಥೆಯಲ್ಲಿ ಇಂದು ಎಷ್ಟು ಸದಸ್ಯರಾಷ್ಟ್ರಗಳಿವೆ ?

193 ಸದಸ್ಯ ರಾಷ್ಟ್ರಗಳಿವೆ .

1st Puc History 10th Chapter Notes in Kannada

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ :

1 ) ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳನ್ನು ಹೆಸರಿಸಿ .

ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ರಾಷ್ಟ್ರಗಳೆಂದರೆ

1 ) ಅಮೇರಿಕಾ 2 ) ಇಂಗ್ಲೆಂಡ್ 3 ) ಫ್ರಾನ್ಸ್ 4 ) ರಷ್ಯಾ 5 ) ಚೀನಾ

2 ) ರಾಷ್ಟ್ರ ಸಂಘ ಯಾವ ವರ್ಷ ಸ್ಥಾಪಿಸಲ್ಪಟ್ಟಿತು ? ಇದರ ಕೇಂದ್ರ ಕಛೇರಿ ಎಲ್ಲಿದೆ ?

ರಾಷ್ಟ್ರ ಸಂಘ 1920 ರಲ್ಲಿ ಅಸ್ತಿತ್ವಕ್ಕೆ ಬಂದಿತು . ಇದರ ಕೇಂದ್ರ ಕಛೇರಿಯು ಸ್ವಿತ್ವರ್‌ಲ್ಯಾಂಡಿನ ಜಿನೀವಾದಲ್ಲಿತ್ತು .

3 ) ಫ್ಯಾಸಿಸ್ಟ್ ಪಕ್ಷ ಯಾವುದಾದರೂ ( ಎರಡು ) ತತ್ವಗಳನ್ನು ಬರೆಯಿರಿ .

ಫ್ಯಾಸಿಸ್ಟ್ ಪಕ್ಷದ ತತ್ವಗಳೆಂದರೆ –

 • ಯುದ್ಧದ ವೈಭವೀಕರಣ
 • ರಾಜ್ಯಕ್ಕೆ ಪ್ರಾಮುಖ್ಯತೆ
 • ಏಕಪಕ್ಷದಲ್ಲಿ ನಂಬಿಕೆ
 • ಪ್ರಜಾಪ್ರಭುತ್ವ ಮತ್ತು ಸಮಾಜವಾದಕ್ಕೆ ವಿರೋಧ
 • ಪ್ರಶ್ನಾತೀತ ಪರಮಾಧಿಕಾರ

3 ) ವಿಶ್ವಸಂಸ್ಥೆಯ ಯಾವುದಾದರೂ ಎರಡು ಅಧಿಕೃತ ಭಾಷೆಗಳನ್ನು ಹೆಸರಿಸಿ .

ವಿಶ್ವಸಂಸ್ಥೆಯ ಎರಡು ಅಧಿಕೃತ ಭಾಷೆಗಳೆಂದರೆ – ಇಂಗ್ಲೀಷ್ , ಫ್ರೆಂಚ್ ,

4 ) ವಿಟೋ ಅಧಿಕಾರ ಎಂದರೇನು ?

“ ವಿಟೋ ‘ ಎಂದರೆ ಐದು ಖಾಯಂ ಸದಸ್ಯ ರಾಷ್ಟ್ರಗಳು ಹೊಂದಿರುವ ವಿಶೇಷ ಅಧಿಕಾರ , ಭದ್ರತಾ ಮಂಡಳಿಯ ಯಾವುದೇ ನಿರ್ಧಾರದ ವಿರುದ್ಧ ಯಾವುದಾದರೂ ಖಾಯಂ ಸದಸ್ಯ ರಾಷ್ಟ್ರ ವಿಟೋ ಅಧಿಕಾರವನ್ನು ಚಲಾಯಿಸಬಹುದು . ನಿರ್ಣಯವನ್ನು ನಿರಾಕರಿಸುವ ಅಧಿಕಾರ ಖಾಯಂ ಸದಸ್ಯ ರಾಷ್ಟ್ರಗಳ ಪಡೆದುಕೊಂಡಿವೆ .

5 ) ನಾಜಿ ಪಕ್ಷದ ಯಾವುದಾದರೂ ( ಎರಡು ) ತತ್ವಗಳನ್ನು ಬರೆಯಿರಿ .

ನಾಜಿ ಪಕ್ಷದ ಪ್ರಮುಖ ಲಕ್ಷಣಗಳೆಂದರೆ –

 • ಏಕ ಪಕ್ಷ ಆಡಳಿತ
 • ನಾಜೀಕರಣ
 • ಜನಾಂಗೀಯ ಶ್ರೇಷ್ಠತೆ
 • ಯಹೂದಿ ವಿರೋಧಿ ಮತ್ತು ಧರ್ಮವಿರೋಧಿ
 • ರಾಜ್ಯಕ್ಕೆ ಪ್ರಾಮುಖ್ಯತೆ
 • ಯುದ್ಧದ ವೈಭವೀಕರಣ

6 ) ಎರಡನೇ ಜಾಗತಿಕ ಯುದ್ಧದ ಎರಡು ಬಣಗಳನ್ನು ತಿಳಿಸಿ ,

ಎರಡನೇ ಜಾಗತಿಕ ಯುದ್ಧದ ಎರಡು ಬಣಗಳೆಂದರೆ

1 ) ಆಕ್ಸಿಸ್ ಶಕ್ತಿಗಳಾದ – ಜರ್ಮನಿ , ಇಟಲಿ ಮತ್ತು ಜಪಾನ್

2 ) ಅಲೈಡ್ ಶಕ್ತಿಗಳಾದ – ಇಂಗ್ಲೆಂಡ್ , ಫ್ರಾನ್ಸ್ , ಯು.ಎಸ್.ಎಸ್.ಆರ್ ಹಾಗೂ ಯು.ಎಸ್.ಎ.

7 ) ಮೊದಲ ಜಾಗತಿಕ ಯುದ್ಧದ ಎರಡು ವೈರಿ ಬಣಗಳನ್ನು ತಿಳಿಸಿ .

ಮೊದಲ ಜಾಗತಿಕ ಯುದ್ಧದ ಎರಡು ವೈರಿ ಬಣಗಳೆಂದರೆ

ಟ್ರಪಲ್ ಅಲೈಯನ್ಸ್ – ಜರ್ಮನಿ . ಆಸ್ಟ್ರಿಯಾ ಮತ್ತು ಇಟಲಿ ( ಶಕ್ತಿಕೂಟ )

ಟ್ರಪಲ್ ಎಂಟೆಂಟ್ – ಫ್ರಾನ್ಸ್ , ರಷ್ಯಾ ಮತ್ತು ಇಂಗ್ಲೆಂಡ್ ( ಮಿತ್ರ ರಾಷ್ಟ್ರಗಳು )

8 ) .ಮಿತ್ರ ರಾಷ್ಟ್ರಗಳು ಜರ್ಮನಿಯೊಂದಿಗೆ ಮಾಡಿಕೊಂಡ ಒಪ್ಪಂದದ ಹೆಸರು ತಿಳಿಸಿ.ಹಾಗೂ ಯಾವಾಗ ಒಪ್ಪಂದ ನಡೆಯಿತು ?

ಮಿತ್ರ ರಾಷ್ಟ್ರಗಳು ಜರ್ಮನಿಯೊಂದಿಗೆ ಮಾಡಿಕೊಂಡ ಒಪ್ಪಂದವು ವರ್ಸೆಲ್ ಒಪ್ಪಂದವಾಗಿದೆ . ಇದು 28 ನೇ ಜೂನ್ 1919 ರಂದು ನಡೆಯಿತು

9 ) ಮೊದಲ ಜಾಗತಿಕ ಯುದ್ಧದ ನಂತರ ಪತನಗೊಂಡ ನಾಲ್ಕು ಸಾಮ್ರಾಜ್ಯಗಳನ್ನು ತಿಳಿಸಿ .

1 ) ` ಆಸ್ಟ್ರೀಯಾದ ಹ್ಯಾಪ್ಸ್‌ ಬರ್ಗ್ 2 ) ಜರ್ಮನಿಯ – ಹೋಹೆಂಜೋರಿನ್ 3 ) ರಷ್ಯಾ – ರೋಮೊನೋವ್ 4 ) ಟರ್ಕಿ – ಅಟೋಮನ್ ಸಾಮ್ರಾಜ್ಯಗಳು ( ಸುಲ್ತಾನ್ ಸಾಮ್ರಾಜ್ಯಗಳು )

10 ) ಆಕ್ಸಿಸ್‌ಬಣದ ರಾಷ್ಟ್ರಗಳನ್ನು ಹೆಸರಿಸಿ ,

ಆಕ್ಸಿಸ್ ಬಣದ ರಾಷ್ಟ್ರಗಳೆಂದರೆ – ಜರ್ಮನಿ , ಇಟಲಿ , ಜಪಾನ್ ,

11 )ಮಿತ್ರ ಪಡೆಯ ರಾಷ್ಟ್ರಗಳನ್ನು ಹೆಸರಿಸಿ .

ಮಿತ್ರ ಪಡೆಯ ರಾಷ್ಟ್ರಗಳು – ಇಂಗ್ಲೆಂಡ್ , ಫ್ರಾನ್ಸ್ , ಯುಎಸ್.ಎಸ್.ಆರ್ ಹಾಗೂ ಯು.ಎಸ್.ಎ.

12 ) ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಅಣುಬಾಂಬಿನ ಧಾಳಿಗೆ ತುತ್ತಾದ ಜಪಾನಿನ ಎರಡು ನಗರಗಳನ್ನು ಹೆಸರಿಸಿ .

ಎರಡನೇ ಜಾಗತಿಕ ಯುದ್ಧದ ಸಂದರ್ಭದಲ್ಲಿ ಅಣುಬಾಂಬಿನ ಧಾಳಿಗೆ ತುತ್ತಾದ ಜಪಾನಿನ ಎರಡು ನಗರಗಳೆಂದರೆ

1 ) ಹಿರೋಶಿಮಾ 2 ) ನಾಗಸಾಕಿ

13 ) ವಿಶ್ವಸಂಸ್ಥೆಯ ಯಾವುದಾದರೂ ಎರಡು ಧೈಯೋದ್ದೇಶಗಳನ್ನು ಬರೆಯಿರಿ .

ವಿಶ್ವಸಂಸ್ಥೆಯ ಎರಡು ದೇಯೆಗಳೆಂದರೆ ,

1 ) ಅಂತಾರಾಷ್ಟ್ರೀಯ ಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು .

2 ) ಜಗತ್ತಿನ ರಾಷ್ಟ್ರ – ರಾಷ್ಟ್ರಗಳ ನಡುವೆ ಸ್ನೇಹಯುತ ಸಂಬಂಧವನ್ನು ಬೆಳೆಸುವುದು .

World Wars International Organization in Kannada

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ಮೊದಲ ಜಾಗತಿಕ ಯುದ್ಧದ ಫಲಿತಾಂಶಗಳನ್ನು ವಿವರಿಸಿ .

ಮೊದಲ ಜಾಗತಿಕ ಯುದ್ಧದ ಪರಿಣಾಮಗಳೆಂದರೆ –

 • ಯುದ್ಧದ ಭೀತಿ , ನೋವುಗಳು ಅಪಾರವಾಗಿದ್ದವು . ಸುಮಾರು 60 ಮಿಲಿಯನ್ ಸೈನಿಕರು ಯುದ್ಧದಲ್ಲಿ ಭಾಗಿಯಾಗಿದ್ದರು . ಅವರಲ್ಲಿ ಸುಮಾರು ಹತ್ತು ಮಿಲಿಯನ್ ಸೈನಿಕರು ಕೊಲ್ಲಲ್ಪಟ್ಟರು . ಸುಮಾರು 20 ಮಿಲಿಯನ್ ಸೈನಿಕರು ಗಾಯಾಳುಗಳಾದರು . ಅವರಲ್ಲಿ ಬಹಳಷ್ಟು ಸೈನಿಕರು 40 ವರ್ಷಗಳಿಗಿಂತ ಕೆಳಗಿನವರಿದ್ದರು . ಅಲ್ಲದೆ ಮಿಲಿಯನ್ ಗಟ್ಟಲೆ ನಾಗರಿಕರು ಹಸಿವು , ಖಾಯಿಲೆ , ಹಿಂಸೆಗಳಿಂದ ಮರಣ ಹೊಂದಿದರು . ಮಹಿಳೆಯರು ಹೊರಗೆ ಹೋಗಿ ದುಡಿಯುವುದು ಅನಿವಾರ್ಯವಾಯಿತು .
 • ಯುದ್ಧದ ಪರಿಣಾಮವಾಗಿ ನಾಲ್ಕು ಸಾಮ್ರಾಜ್ಯಗಳು ಅಂತ್ಯಗೊಂಡವು .

ಅವುಗಳೆಂದರೆ- ಆತ್ಮೀಯಾದ – ಹ್ಯಾಪ್ಸ್ ಬರ್ಗ್

ಜರ್ಮನಿಯ – ಹೋಹೆಂಜೊಲಿರಿನ್

ರಷ್ಯಾದ – ರೋಮೋನೋವ್

ಟರ್ಕಿಯಾ – ಆಟೋಮನ್ ಸಾಮ್ರಾಜ್ಯ

 • ಫಿನ್‌ಲ್ಯಾಂಡ್ , ಲಿಥುರೇನಿಯಾ , ಎಸೋನಿಯಾ , ಪೋಲೆಂಡ್ , ಅಸ್ತಿತ್ವಕ್ಕೆ ಬಂದವು . ಜೆಕೋಸ್ಟೋವೇಕಿಯಾ , ಯುಗೋಸ್ತೋವಿಯಾ ಮುಂತಾದ ಹೊಸ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು.
 • ಯುದ್ಧದ ಪರಿಣಾಮವಾಗಿ ವರ್ಸೆಲ್ಸ್ ಒಪ್ಪಂದ ಏರ್ಪಟ್ಟಿತು .
 • ಯುದ್ಧದ ನಂತರ ಜನರ ಆರ್ಥಿಕವಾಗಿ ಸಾಮಾಜಿಕ ಮತ್ತು ಇತರೆ ಸಮಸ್ಯೆಗಳ ಪರಿಹಾರದ ಮಾರ್ಗದರ್ಶನಕ್ಕಾಗಿ ಸರ್ಕಾರ
 • ಜಗತ್ತಿನ ಉತ್ಪಾದನೆ ಇಳಿಮುಖವಾಯಿತು . ಬದುಕಿನ ವೆಚ್ಚ ಏರುತ್ತಾ ಹೋಯಿತು . ಯೂರೋಪಿನ ಸಾಲ ನೀಡುವ ಬೃಹತ್ ರಾಷ್ಟ್ರಗಳೇ ಸಾಲದಲ್ಲಿ ಸಿಕ್ಕಿಕೊಂಡವು .
 • 1920 ರ ಪ್ಯಾರಿಸ್ ಶಾಂತಿ ಸಮ್ಮೇಳನವು ಅಧಿಕೃತವಾಗಿ ಮೊದಲನೇ ಜಾಗತಿಕ ಯುದ್ಧವನ್ನು ಕೊನೆಗೊಳಿಸಿತು .

2 ) ವರ್ಸೆಲ್ಸ್‌ ಒಪ್ಪಂದದ ಮುಖ್ಯಾಂಶಗಳನ್ನು ಬರೆಯಿರಿ .

ವರ್ಸೆಲ್ಸ್ ಒಪ್ಪಂದದ ಮುಖ್ಯಾಂಶಗಳೆಂದರೆ

 • ಜರ್ಮನಿಯು ಅಲೈಸ್ ಮತ್ತು ಲೊರೈನ್‌ಗಳನ್ನು ಫ್ರಾನ್ಸಿಗೆ ಮರಳಿ ಕೊಡಬೇಕಾಯಿತು . ಉತ್ತರ ಭಾಗದ ಕಲ್ಲಿನ ಗಣಿಗಳನ್ನು ಹಾನಿಗೆ ಪರಿಹಾರವಾಗಿ ಕೊಡಬೇಕಾಯಿತು .
 • ಷೆಲ್ಸ್‌ನಿಗ್ ಮತ್ತು ಹೋಲ್‌ಸ್ಟೈನ್ ಪ್ರದೇಶಗಳನ್ನು ಜರ್ಮನಿಯು ಡೆನ್ಮಾರ್ಕ್‌ಗೆ ಮರಳಿಕೊಟ್ಟಿತು . ಜರ್ಮನಿಯ ಡ್ಯಾನ್‌ಜಿಗ್ ಬಂದರನ್ನು ಮುಕ್ತಾಯಗೊಳಿಸಿತು .
 • ರೈನ್‌ಲ್ಯಾಂಡ್ ಪ್ರದೇಶದಲ್ಲಿ ಸೈನಿಕ ಚಟುವಟಿಕೆಗಲನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು . ಆ ಪ್ರದೇಶದಲ್ಲಿನ ಎಲ್ಲಾ ಕೋಟೆಗಳನ್ನು ನಿರ್ನಾಮ ಗೊಳಿಸಲಾಯಿತು . ಮತ್ತು ಪುನಃ ಕೋಟೆಗಳನ್ನು ಕಟ್ಟದಂತೆ ಸೂಚನೆ ನೀಡಲಾಯಿತು .
 • ಪೋಲೆಂಡ್ , ಬೆಲ್ಸಿಯಂ ಮತ್ತು ಜಕೋಸ್ಲೋವಾಕಿಯಾಗಳ ಸ್ವಾತಂತ್ರ್ಯವನ್ನು ಜರ್ಮನಿಯು ಒಪ್ಪಿಕೊಳ್ಳಲೇಬೇಕಾಯಿತು .
 • ಮಿತ್ರಕೂಟಕ್ಕೆ ಜರ್ಮನಿಯು ತನ್ನ ಎಲ್ಲಾ ವಸಾಹತುಗಳನ್ನು ಬಿಟ್ಟುಕೊಟ್ಟಿತು . ಇವುಗಳನ್ನು ಇಂಗ್ಲೆಂಡ್ , ಫ್ರಾನ್ಸ್ , ಜಪಾನ್ ಮತ್ತು ಇತರ ರಾಷ್ಟ್ರಗಳು ಹಂಚಿಕೊಂಡವು .
 • ಮೊದಲನೇ ಜಾಗತಿಕ ಯುದ್ಧಕ್ಕೆ ತಾನೇ ಕಾರಣ ಅಥವಾ ನೇರ ಹೊಣೆಯೆಂದು ಜರ್ಮನಿ ಒಪ್ಪಿಕೊಳ್ಳಬೇಕಾಯಿತು . ಆದ್ದರಿಂದ ಯುದ್ಧದ ನಷ್ಟ ಪರಿಹಾರವಾಗಿ ಜರ್ಮನಿ 6600 ಮಿಲಿಯನ್ ಪೌಂಡ್ ನೀಡಬೇಕಾಯಿತು .
 • ಜರ್ಮನಿಯನ್ನು ನಿಶಸ್ತ್ರೀಕರಣಗೊಳಿಸಲಾಯಿತು . ಅವರ ನೌಕಾಪಡೆಯ ಗಾತ್ರವನ್ನು ಮಿತಗೊಳಿಸಲಾಯಿತು ಮತ್ತು ಜರ್ಮನಿ ಸೈನ್ಯವನ್ನು 1 ಲಕ್ಷಕ್ಕೆ ಮಿತಿಗೊಳಿಸಲಾಯಿತು . ಶಸ್ತ್ರಾಸ್ತ್ರಗಳ ಆಮದು – ರಫ್ತುಗಳನ್ನು ನಿಷೇಧಿಸಲಾಯಿತು . ಮಿಷನ್ ಗನ್ ಹಾಗೂ ರೈಫಲ್‌ಗಳ ತಯಾರಿಕೆಯ ಮೇಲೆ ನಿರ್ಬಂಧವನ್ನು ಹೇರಲಾಯಿತು . ಜರ್ಮನಿ ಯುದ್ಧ ನೌಕೆಗಳನ್ನು ವಾಣಿಜ್ಯ ಹಡಗುಗಳಾಗಿ ಪರಿವರ್ತಿಸಲಾಯಿತು . ಟ್ಯಾಂಕುಗಳು , ಸಬ್‌ಮೆರಿನ್‌ಗಳು ಹಾಗೂ ಯುದ್ಧ ವಿಮಾನಗಳನ್ನು ಹೊಂದಲು ಅನುಮತಿ ನೀಡಲಿಲ್ಲ .

3 ) ಮುಸೋಲಿನಿಯ ಸಾಧನೆಗಳನ್ನು ವಿವರಿಸಿ .

ಮುಸೋಲಿನಿಯ ಸಾಧನೆಗಳೆಂದರೆ

 • ಮುಸೋಲಿನಿ ‘ ಅವಂತಿ ‘ ಎಂಬ ಸಮಾಜವಾದಿ ಪತ್ರಿಕೆಯ ಸಂಪಾದಕನಾದನು .
 • ಮೊದಲನೇಯ ಜಾಗತಿಕ ಯುದ್ಧದ ನಂತರ 1919 ರಲ್ಲಿ ‘ ಫ್ಯಾಸಿಸ್ ಪಕ್ಷವನ್ನು ಮಿಲಾನ್ ನಗರದಲ್ಲಿ ಸ್ಥಾಪಿಸಿಲಾಯಿತು ,
 • ಮುಸೋಲಿನಿಯು ಸುವ್ಯವಸ್ಥೆಯನ್ನು ಸ್ಥಾಪಿಸಿ , ಕೈಗಾರಿಕಾ ಮುಷ್ಕರಗಳನ್ನು ಸಂಪೂರ್ಣವಾಗಿ ನಿಷೇಧಿಸಿದನು . ಕಮ್ಯೂನಿಸ್ಟರನ್ನು ನಿರ್ದಯವಾಗಿ ಹತ್ಯೆಗೈದನು , ಫ್ಯಾಸಿಸ್ ತತ್ವವನ್ನು ಹರಡಲು ಶಿಕ್ಷಣವನ್ನು ರಾಜ್ಯದ ನಿಯಂತ್ರಣಕ್ಕೆ ತಂದನು.
 • ತಾನು ಅಧಿಕಾರದಲ್ಲಿ ಮುಂದುವರೆಯಲು ಚರ್ಚಿನ ಬೆಂಬಲದ ಪ್ರಾಮುಖ್ಯತೆಯನ್ನು ಅರಿತುಕೊಂಡನು . ಆದ್ದರಿಂದ 11 ನೇ ಪಯಸ್‌ನೊಂದಿಗೆ ‘ ಲ್ಯಾಟಿರನ್ ಒಪ್ಪಂದ’ವನ್ನು 1929 ರಲ್ಲಿ ಮಾಡಿಕೊಂಡನು . ಇದರ ಪ್ರಕಾರ ಪೋಪನು ಇಟಲಿಗೆ ಮನ್ನಣೆ ನೀಡಿದನು.
 • ಫ್ಯಾಸಿಸಂ ಮೂಲಕ ಮುಸೋಲಿನಿ ಸುವ್ಯವಸ್ಥೆ ಮತ್ತು ಶಿಸ್ತನ್ನು ಜಾರಿಗೊಳಿಸಿದನು . ವಿದೇಶಿ ವ್ಯಾಪಾರವನ್ನು ಹೆಚ್ಚಿಸಲು ವಿದ್ಯುತ್ ಉತ್ಪಾದನೆಯನ್ನು ನೈಸರ್ಗಿಕ ಸಂಪತ್ತಿನ ಉಪಯೋಗವನ್ನು ಪ್ರೋತ್ಸಾಹಿಸಿದನು .
 • ಕೃಷಿ ಕ್ಷೇತ್ರವನ್ನು ಸುಧಾರಿಸಿದನು ಮತ್ತು ಇಟಲಿಯಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಿದನು .
 • ವ್ಯಾಪಾರ ಮತ್ತು ವಾಣಿಜ್ಯವನ್ನು ಮನಃಶ್ವೇತನಗೊಳಿಸಿದನು .
 • ರೈಲ್ವೆ ಹಾಗೂ ಹಡಗು ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತು .
 • ಯುದ್ಧವು ಫ್ಯಾಸಿಸ್ಟ್ ಪಕ್ಷದ ಪ್ರಮುಖ ಲಕ್ಷಣವಾಗಿತ್ತು .
 • ಆದುದರಿಂದ ಕಡ್ಡಾಯ ಸೈನಿಕ ಚಟುವಟಿಕೆ ತರಬೇತಿಯನ್ನು ಜಾರಿಗೆ ತರಲಾಯಿತು . ಭೂಸೇನೆ , ನೌಕಾಪಡೆ ಮತ್ತು ವಾಯುಪಡೆಯನ್ನು ಬಲಿಷ್ಠಗೊಳಿಸಿದನು . ಇದಲ್ಲದೆ ಜನಸಂಖ್ಯೆ ಹೆಚ್ಚಿಸಲು ಇಟಲಿಯಲ್ಲಿ ಹೆಚ್ಚು ಮಕ್ಕಳು ಹೊಂದಿದ ಕುಟುಂಬಕ್ಕೆ ತೆರಿಗೆ ವಿನಾಯ್ತಿ ಮತ್ತು ಉದ್ಯೋಗ ಮೊದಲಾದ ಸೌಲಭ್ಯಗಳನ್ನು ನೀಡಲಾಯಿತು .

4 ) ನಾಜಿ ಪಕ್ಷದ ಲಕ್ಷಣಗಳನ್ನು ತಿಳಿಸಿ .

ನಾಜಿ ಪಕ್ಷದ ಲಕ್ಷಣಗಳೆಂದರೆ –

 • 1 ) ಏಕ ಪಕ್ಷದ ಆಡಳಿತ
 • 2 ) ನಾಜೀಕರಣ
 • 3 ) ಜನಾಂಗೀಯ ಶ್ರೇಷ್ಠತೆ
 • 4 ) ಯಹೂದಿ ವಿರೋಧಿ ಮತ್ತು ಧರ್ಮ ವಿರೋಧಿ
 • 5 ) – ರಾಜ್ಯಕ್ಕೆ ಪ್ರಾಮುಖ್ಯತೆ
 • 6 ) ಯುದ್ಧದ ವೈಭವೀಕರಣ

1 ) ಹಿಟ್ಲರನು ನಾಜಿ ಪಕ್ಷವನ್ನು ಏಕಮಾತ್ರ ರಾಜಕೀಯ ಪಕ್ಷವನ್ನಾಗಿ ಮಾಡಿದನು . ಈತನು ಪತ್ರಿಕಾ ವಾಕ್ ಸ್ವಾತಂತ್ರ್ಯವನ್ನು ನಿಷೇಧಿಸಿದನು . ಕಾರ್ಮಿಕರನ್ನು ಹಾಗೂ ಯುವಕರನ್ನು ಸಂಘಟಿಸಿದನು . ಮುದ್ರಣ ಮಾಧ್ಯಮಗಳು ಎಲ್ಲಾ ಆರ್ಥಿಕ ಸಂಸ್ಥೆಗಳು ರಂಗಭೂಮಿ ಮತ್ತು ಸಿನಿಮಾ ಸೇರಿದಂತೆ ದೇಶದ ಎಲ್ಲಾ ಆಯಾಮಗಳನ್ನು ನಿಯಂತ್ರಿಸಿದನು . ದೇಶದೊಳಗಿನ ಪ್ರತಿಯೊಂದನ್ನು ನಾಜೀಕರಣಗೊಳಿಸಿದನು .

ಹಿಟ್ಲರನು ಜರ್ಮನಿಯ ನಾರ್ಡಿಕ್ ( ಆರ್ಯನ್ ) ಜನಾಂಗ ಜಗತ್ತಿನಲ್ಲಿಯೇ ಶ್ರೇಷ್ಠ ಎಂದು ಹೇಳಿದನು . ಇತರ ಜನಾಂಗದವರಾದ ಯಹೂದಿಗಳು ಹಾಗೂ ಇತರರನ್ನು ದೇಶದಿಂದ ಹೊರ ಹಾಕಿದನು . ದೇಶಕ್ಕೆ ಆದ ನಷ್ಟಗಳಿಗೆಲ್ಲಾ ಯಹೂದಿಗಳನ್ನು ಹೊಣೆಗಾರರನ್ನಾಗಿ ಮಾಡಲಾಯಿತು . ಅವರಿಗೆ ಚಿತ್ರಹಿಂಸೆ ನೀಡಿ ಕೊಲ್ಲಲಾಯಿತು . ಹಿಟ್ಲರನು ತನ್ನೆಲ್ಲಾ ವಿರೋಧಿಗಳನ್ನು ದಮನ ಮಾಡಲು ‘ ಗೆಸ್ಟಪೋ ‘ ಎಂಬ ಗುಪ್ತ ಪೋಲೀಸ್ ದಳವನ್ನು ಸಂಘಟಿಸಿದನು . ಯಹೂದಿಗಳನ್ನು ಸಂಪೂರ್ಣವಾಗಿ ನಾಶಪಡಿಸಲು ಯಾತನಾ ಶಿಬಿರಗಳನ್ನು ನಿರ್ಮಿಸಿದನು . ನಾಜಿ ಜರ್ಮನಿ ನಿರ್ದಯವಾಗಿ ಕೊಂದು ಹಾಕಿತು . ನಾಜಿಗಳು ಧರ್ಮ ವಿರೋಧಿಗಾದ್ದರಿಂದ ಅವರು ಕ್ರೈಸ್ತ ಧರ್ಮವನ್ನು ಗೌರವಿಸಲಿಲ್ಲ .

ಹಿಟ್ಲರನು ಹೇಳಿದಂತೆ ‘ ವ್ಯಕ್ತಿ ಇರುವುದು ದೇಶಕ್ಕಾಗಿ ಹೊರತು ದೇಶವಿರುವುದು ವ್ಯಕ್ತಿಗಾಗಿ ಅಲ್ಲ ‘ . ವ್ಯಕ್ತಿ ದೇಶಕ್ಕಾಗಿ ರಾಜ್ಯವನ್ನು ವಿರೋಧಿಸಲೇ ಬಾರದು ತ್ಯಾಗಕ್ಕಾಗಿ ಸಿದ್ಧನಿರಬೇಕು . ಸುಧಾರಣೆಗಳ ಮೂಲಕ ಹಿಟ್ಲರನು ಆಡಳಿತವನ್ನು ಪುನರ್ ಸಂಘಟಿಸಿ ಸೇನೆಯನ್ನು ಬಲಗೊಳಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧಿಸಿದನು . ಆರ್ಥಿಕ ಪ್ರಗತಿ ಸಾಧಿಸುವುದಕ್ಕಾಗಿ ಚತುರ್ ವಾರ್ಷಿಕ ಯೋಜನೆಯನ್ನು ಆರಂಭಿಸಿದನು . ಕೃಷಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಿದನು . ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸಲು ಬೃಹತ್ ಯೋಜನೆಯ ಕಾರ್ಯಕ್ರಮವನ್ನು ಆರಂಭಿಸಿದನು . ಕಡ್ಡಾಯ ಸೈನಿಕ ತರಬೇತಿಯನ್ನು ಜಾರಿಗೆ ತಂದನು .

5 ) ಎರಡನೇ ಜಾಗತಿಕ ಯುದ್ಧದ ಪರಿಣಾಮಗಳನ್ನು ತಿಳಿಸಿ .

 • 1 ) ಜಗತ್ತಿನ ಎಲ್ಲಾ ಯುದ್ಧಗಳಿಗಿಂತ ಎರಡನೇ ಜಾಗತಿಕ ಯುದ್ಧವು ಅತ್ಯಂತ ವಿನಾಶಕಾರವಾಗಿತ್ತು . ಈ ಯುದ್ಧದಲ್ಲಿ ಸುಮಾರು 25 ಮಿಲಿಯನ್ ಜನರು ಪ್ರಾಣ ಕಳೆದುಕೊಂಡರು ಮತ್ತು 50 ಮಿಲಿಯನ್ ಜನರು ಅಂಗವಿಕಲರಾದರು .ಮಿಲಿಯನ್ ಗಟ್ಟಲೆ ಜನರು ಯುದ್ಧದ ನಂತರ ಹುಪ್ಪ ಮತ್ತು ರೋಗಗೊಂದ ಮರ ಹೊಂದಿದರು . ಅಪಾರ ಸಂಖ್ಯೆಯಲ್ಲಿ ಮನೆ , ಕೈಗಾರಿಕೆಗಳು , ಸಾರಿಗೆ ಸಂಪರ್ಕ ವ್ಯವಸ್ಥೆಗಳು ಹಾನಿಗೊಂಡವು , ಕೃಷಿ ಭೂಮಿ ನಾಶ ಹೊಂದಿದ್ದರಿಂದ ಆಹಾರದ ಕೊರತೆ ಆಯಿತು .
 • 2 ) ಇಟಲಿ ಮತ್ತು ಜರ್ಮನಿಯಲ್ಲಿ ಸರ್ವಾಧಿಕಾರ ಅಂತ್ಯವಾಯಿತು . ಇಟಲಿಯನ್ನು ಗಣರಾಜ್ಯ ಎಂದು ಘೋಷಿಸಲಾಯಿತು . ನಾಜಿ ಪಕ್ಷದ ನಾಯಕರನ್ನು ನ್ಯೂರಂಬರ್ಗ್‌ನಲ್ಲಿ ವಿಚಾರಣೆಗೆ ಒಳಪಡಿಸಲು ನ್ಯಾಯಾಲಯವನ್ನು ಸ್ಥಾಪಿಸಲಾಯಿತು . ಜಪಾನ್ ದೇಶವು ತನ್ನ ಎಲ್ಲಾ ಹಕ್ಕುಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು . ಜಪಾನನ್ನು ಯು.ಎಸ್.ಎ. ವಶಪಡಿಸಿಕೊಂಡಿತು .
 • 3 ) ಯೂರೋಪಿನ ಪ್ರಭುತ್ವಕೊನೆಗೊಂಡಿತು . ಈ ಯುದ್ಧದ ನಂತರ ಯು.ಎಸ್.ಎ ಹಾಗೂ ಯು.ಎಸ್.ಎಸ್.ಆರ್ ಶಕ್ತಿಶಾಲಿ ರಾಷ್ಟ್ರಗಳಾಗಿ ಹೊರಹೊಮ್ಮಿದವು.
 • 4 ) ರಷ್ಯಾ ಮತ್ತು ಅಮೆರಿಕಾ ಎರಡು ಶಕ್ತಿಶಾಲಿ ರಾಷ್ಟ್ರಗಳ ನಡುವೆ ಅಪನಂಬಿಕೆ ಉಂಟಾಯಿತು , ಇದು ಮುಂದೆ ಶೀತಲ ಸಮರಕ್ಕೆ ಕಾರಣವಾಯಿತು , ವಿಶ್ವಶಾಂತಿಗೆ ನಿರಂತರವಾಗಿ ಧಕ್ಕೆ ಉಂಟಾಯಿತು .
 • 5 ) ಏಷ್ಯಾ ಆಫ್ರಿಕಾ , ಅಮೇರಿಕಾಗಳಲ್ಲಿ ಯೂರೋಪಿಯನ್ ವಸಾಹತುಗಳ ಸಾಮ್ರಾಜ್ಯ ಕೊನೆಗೊಂಡಿತು .
 • 6 )ಭಾರತ , ಶ್ರೀಲಂಕಾ , ಇಂಡೋನೇಷಿಯಾ ಮೂತಾದ ರಾಷ್ಟ್ರಗಳು ಸ್ವತಂತೊಂಡವು ,
 • 7 ) ಜರ್ಮನಿ ಆಳ್ವಿಕೆಯಲ್ಲಿ ಯಹೂದಿಗಳಲ್ಲಿ ನಿರ್ಗತಿಕರಾಗಿದ್ದರು . ಯಹೂದಿಗಳಿಗಾಗಿ ಒಂದು ಹೊಸ ಮೂಲ ನೆಲೆ ಇಸ್ರೇಲ್‌ನಲ್ಲಿ 1948 ರಲ್ಲಿ ಸ್ಥಾಪಿಸಲಾಯಿತು .
 • 8 ) ಅಣುಬಾಂಬುಗಳ ಪರಿಣಾಮ ಬಹಳ ವಿನಾಶಕಾರಿಯಾಗಿತ್ತು , ಇಡೀ ವಾತಾವರಣ ವಿಳಾಮೃತವಾಗಿ , ಇದರ ಪರಿಣಾಮ ಮುಂದಿನ ಹಲವಾರು ವರ್ಷಗಳವರೆಗೂ ಅಂಗವಿಕಲ ಶಿಶುಗಳ ಜನನವಾಗತೊಡಗಿದವು .
 • 9 ) ಅತ್ಯಂತ ಪ್ರಮುಖ ಪರಿಣಾಮವೆಂದರೆ ವಿಶ್ವಸಂಸ್ಥೆ ಸ್ಥಾಪನೆ ಭವಿಷ್ಯತ್ತಿನಲ್ಲಿ ಯುದ್ಧ ತಡೆಗಟ್ಟಿ , ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆಯಾಯಿತು .

6 ) .ವಿಶ್ವಸಂಸ್ಥೆಯ ಪ್ರಧಾನ ಅಂಗ ಸಂಸ್ಥೆಗಳ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ ,

ವಿಶ್ವಸಂಸ್ಥೆಯ ಪ್ರಧಾನ ಅಂಗ ಸಂಸ್ಥೆಗಳೆಂದರೆ ,

 • ಸಾಮಾನ್ಯ ಸಭೆ
 • ಭದ್ರತಾ ಮಂಡಳಿ
 • ಆರ್ಥಿಕ ಮತ್ತು ಸಾಮಾಜಿಕ ಮಂಡಳಿ
 • ಧರ್ಮದರ್ಶಿ ಮಂಡಳಿ
 • ಅಂತಾರಾಷ್ಟ್ರೀಯ ನ್ಯಾಯಾಲಯ
 • ಸಚಿವಾಲಯ

1) ಸಾಮಾನ್ಯ ಶಭೆ :

‘ ಸಾಮಾನ್ಯ ಸಭೆ ‘ ವಿಶ್ವಸಂಸ್ಥೆಯ ಸಮಾಲೋಚನೆಯ ಸಭೆಯಾಗಿದೆ . ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ವಿಷಯವನ್ನು ಇಲ್ಲಿ ಚರ್ಚಿಸಲಾಗುವುದು . ಸಾಮಾನ್ಯ ಸಭೆಯ ವರ್ಷದಲ್ಲಿ ಒಂದು ಬಾರಿ ಸೆಪ್ಟೆಂಬರ್‌ನಲ್ಲಿ ಸಭೆ ಸೇರುತ್ತದೆ . ಚರ್ಚಿಸಬಹುದಾದ ವಿಷಯವನ್ನು ಅಂಗೀಕರಿಸಲು 2/3 ಭಾಗ ಬಹುಮತ ಬೇಕಾಗುತ್ತದೆ . ಇದರ ಪ್ರಮುಖ ಕಾರ್ಯಗಳೆಂದರೆ –

 • 1 ) ಪ್ರಧಾನ ಕಾರ್ಯದರ್ಶಿ
 • 2 ) ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯರು .
 • 3 ) ಸಾಮಾಜಿಕ ಮತ್ತು ಆರ್ಥಿಕ ಸಮಿತಿಯ ಸದಸ್ಯರನ್ನು
 • 4 ) ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಧೀಶರನ್ನು ಆಯ್ಕೆ ಮಾಡುವುದು .
 • 5 ) ಆಯವ್ಯಯದ ಪ್ರಶ್ನೆಗಳನ್ನು ಚರ್ಚಿಸುವುದು .
 • 6 ) ಅಧ್ಯಕ್ಷ – ಉಪಾಧ್ಯಕ್ಷರನ್ನು ಪ್ರತಿ ವರ್ಷ ಆಯ್ಕೆ ಮಾಡುವುದು .
 • 7 ) ಹೊಸ ಸದಸ್ಯರಾಷ್ಟ್ರದ ಪ್ರವೇಶಕ್ಕೆ ಸಾಮಾನ್ಯ ಸಭೆಯ 2/3 ಬಹುಮತ ಬೇಕಾಗುತ್ತದೆ .

2 ) ಭದ್ರತಾ ಮಂಡಳಿ :

ಭದ್ರತಾ ಮಂಡಳಿಯು ಕಾರ್ಯನಿರ್ವಹಕ ಮಂಡಳಿಯಾಗಿದೆ . ಇದರಲ್ಲಿ 15 ಸದಸ್ಯ ರಾಷ್ಟ್ರಗಳಿವೆ . 5 ಖಾಯಂ ಸದಸ್ಯರು , 10 ತಾತ್ಕಾಲಿಕ ಸದಸ್ಯರು . ಖಾಯಂ ಸದಸ್ಯ ರಾಷ್ಟ್ರಗಳೆಂದರೆ – ಅಮೆರಿಕಾ , ಇಂಗ್ಲೆಂಡ್ , ಫ್ರಾನ್ಸ್ , ರಷ್ಯಾ ಮತ್ತು ಚೀನಾ . ತಾತ್ಕಾಲಿಕ ಸದಸ್ಯ ರಾಷ್ಟ್ರಗಳನ್ನು 2 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ . ನಿರ್ಣಯಕ್ಕಾಗಿ 9 ಮತಗಳು ಬೇಕಾಗುತ್ತದೆ . “ ವೀಟೋ ‘ ಎಂಬ ಅಧಿಕಾರವನ್ನು ಖಾಯಂ ಸದಸ್ಯರಾಷ್ಟ್ರಗಳು ಹೊಂದಿರುತ್ತವೆ .

3 ) ಆರ್ಥಿಕ ಮತ್ತು ಸಾಮಾಜಿಕ ಮಂಡಳಿ :

ಇದರ ಸದಸ್ಯರ ಸಂಖ್ಯೆ 54 , ಇವರು ಸಾಮಾನ್ಯ ಸಭೆಯಿಂದ ಚುನಾಯಿತರಾಗಿರುತ್ತಾರೆ . ಇವರ ಅಧಿಕಾರಾವಧಿ 3 ವರ್ಷ , 1 / 3 ರಷ್ಟು ಸದಸ್ಯರು ನಿವೃತ್ತರಾಗುವರು . ಜಗತ್ತಿನ ಕ್ಷೇಮಾಭಿವೃದ್ಧಿ ಇದರ ಪ್ರಮುಖ ಕಾರ್ಯವಾಗಿದೆ . ಆರ್ಥಿಕ , ಸಾಮಾಜಿಕ, ಸಾಂಸ್ಕೃತಿಕ ಶೈಕ್ಷಣಿಕ , ಆರೋಗ್ಯ ಮತ್ತಿತರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿದೆ .

4) ಧರ್ಮದರ್ಶಿ ಮಂಡಳಿ :

ಈ ಮಂಡಳಿಯು 14 ಸದಸ್ಯರನ್ನೊಳಗೊಂಡಿದೆ ಭದ್ರತಾ ಮಂಡಳಿಯು ಎಲ್ಲಾ ಖಾಯಂ ಸದಸ್ಯರು ಧರ್ಮದರ್ಶಿ ಮಂಡಳಿಯ ಸದಸ್ಯರಾಗಿರುತ್ತಾರೆ . ಉಸ್ತುವಾರಿ ಮಾಂತ್ಯಗಳ ಸ್ಥಿತಿಗತಿಯನ್ನು ಸಾಮಾನ್ಯ ಸಭೆಗೆ ವರದಿ ನೀಡುವುದು ಸಲಹೆ ನೀಡುವುದುದಾಗಿದೆ . ಇದು ಅವಶ್ಯಕತೆಗೆ ಅನುಗುಣವಾಗಿ ಸಭೆ ಸೇರುವುವು .

5 ) ಅಂತಾರಾಷ್ಟ್ರೀಯ ನ್ಯಾಯಾಲಯ :

ಅಂತಾರಾಷ್ಟ್ರೀಯ ನ್ಯಾಯಾಲಯವು ನೆದರ್‌ಲ್ಯಾಂಡಿನ ‘ ಹೇಗ್ ‘ ನಗರದಲ್ಲಿದೆ . ಸಾಮಾನ್ಯ ಸಭೆಯಿಂದ 15 ಜನ ನ್ಯಾಯಾಧೀಶರನ್ನು ಇದು ಒಳಗೊಂಡಿರುತ್ತದೆ . ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಸೇವಾವಧಿ 9 ವರ್ಷಗಳು , ಮರು ನೇಮಕಮಾಡುವ ಅವಕಾಶವಿದೆ . ಆದರೆ ಯಾವುದೇ ದೇಶವು ಏಕಕಾಲಕ್ಕೆ ಒಬ್ಬರಿಗಿಂತ ಹೆಚ್ಚು ನ್ಯಾಯಾಧೀಶರನ್ನು ಪ್ರತಿನಿಧಿಸುವಂತಿಲ್ಲ .

6 ) ಸಚಿವಾಲಯ :

ಇದರ ಕೇಂದ್ರ ಕಛೇರಿ ನ್ಯೂಯಾರ್ಕ್‌ನಲ್ಲಿದೆ . ಪ್ರಧಾನ ಕಾರ್ಯದರ್ಶಿ ಸಚಿವಾಲಯದ ಮುಖ್ಯಸ್ಥನಾಗಿರುತ್ತಾನೆ . ಅವನ ಕಾರ್ಯಾವಧಿ 5 ವರ್ಷಗಳು . ಪ್ರಸ್ತುತ ಪ್ರಧಾನಕಾರ್ಯದರ್ಶಿಯ ಬಾನ್ – ಕೀ – ಮೂನ್ ,

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1 . ಎರಡನೇ ಜಾಗತಿಕ ಯುದ್ಧದ ಕಾರಣಗಳು ಹಾಗೂ ಪರಿಣಾಮಗಳನ್ನು ತಿಳಿಸಿ .

ಎರಡನೇ ಜಾಗತಿಕ ಯುದ್ಧದ ಕಾರಣಗಳೆಂದರೆ – ‌

1 ) ವರ್ಸೇಲ್ಸ್ ಒಪ್ಪಂದ :

ಜರ್ಮನಿ ವರ್ಷಕ್ಕೆ ಒಪ್ಪಂದವನ್ನು ಮುರಿಯುವ ಅವಕಾಶಕ್ಕಾಗಿ ಕಾಯುತ್ತಿತ್ತು . 2ನೇ ಜಾಗತಿಕ ಯುದ್ದವು ಅವಕಾಶ ಕಲ್ಪಿಸಿತು .

2 ) ಜಪಾನ್ ಮತ್ತು ಇಟಲಿಯ ವಿಸ್ತರಣಾ ನೀತಿ:

ಇವು ಶಾಂತಿ ಒಪ್ಪಂದದಿಂದ ತೃಪ್ತರಾಗಿರಲಿಲ್ಲ . ಆರ್ಥಿಕ ಬಗೆಹರಿಸುವ ದೃಷ್ಟಿಯಿಂದ ಆಕ್ರಮಣಕಾರಿ ಹಾಗೂ ವಿಸ್ತರಣಾ ನೀತಿಗೆ ವಾಲಿದವು , ಜಪಾನ್ ಮಿತ್ರರಾಷ್ಟ್ರ ಜರ್ಮನಿಯೊಂದಿಗೆ ಸೇರಿತು , ಇದರ ಘೋಷಣೆ ವಿಷ್ಯಾ ಏಷ್ಯನ್ನರಿಗೆ ‘ ಚೀನಾ ಗುರಿಯಾಗಿ ಇಟ್ಟುಕೊಂಡು ಬಲಿಷ್ಠನೌಕಾಪಡೆಯನ್ನು ಅಭಿವೃದ್ಧಿಗೊಳಿಸಿತು .

3 ) ಸರ್ವಾಧಿಕಾರಿಗಳ ಏಳಿಗೆ:

ಇಟಲಿಯಲ್ಲಿ ಮುಸಲೋನಿ , ಜರ್ಮನಿಯಲ್ಲಿ ಹಿಟ್ಲರ್ ಜಪಾನಿನಲ್ಲಿ ಟೋಡೋ ನೇತೃತ್ವದಲ್ಲಿನ ಸರ್ವಾಧಿಕಾರ ಬೆಳವಣಿಗೆ 2 ನೇ ಮಹಾಯುದ್ಧಕ್ಕೆ ಕಾರಣವಾಯಿತು .

4 ) ವಸಾಹತು ಮತ್ತು ವಾಣಿಜ್ಯ ಪೈಪೋಟಿ :

ಆರ್ಥಿಕ ಪರಿಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟು ಮಾಡಿತ್ತು . ಕಚ್ಚಾ ಪದಾರ್ಥಗಳ ಕೊರತೆ ಮತ್ತು ಸಿದ್ಧವಸ್ತುಗಳಿಗೆ ಮಾರುಕಟ್ಟೆಗಳ ಅಭಾವ ಉಂಟಾಗಿ ಆರ್ಥಿಕ ಪರಿಸ್ಥಿತಿ ಉಂಟಾಯಿತು. ಇಂತಹ ಪರಿಸ್ಥಿತಿಯಲ್ಲಿ ಇಟಲಿ, ಜರ್ಮನಿ, ಜಪಾನ್‌ ಒಂದಾಗಿ ಅತಿ ಉಗ್ರ ಆಕ್ರಮಣಕಾರಿ ನೀತಿ ಅನುಸರಿಸಿದುದು ಎರಡನೇ ಭಾಗತಿಕ ಯುದ್ದಕ್ಕೆ ಕಾರಣವಾಯಿತು ,

5 ) ರಾಷ್ಟ್ರಸಂಘದ ವಿಫಲತೆ:

ರಾಷ್ಟ್ರಸಂಘ ದುರ್ಬಲಗೊಂಡು ಅಸಮರ್ಥವಾಗಿತ್ತು ಯೂರಿನಲ್ಲಿ ಕಾಪಾಡುವಲ್ಲಿ ವಿಫಲನಾಯಿಗಳು , ಎರಡು ಬಣಗಳ ನಡುವೆ ವೈರತ್ವ ಹೆಚ್ಚಾದಾಗ ರಾಷ್ಟ್ರದ ಟವಾಯಿತು , ದಾಳಿಗಳನ್ನು ತಲೆಗಟ್ಟುವಲ್ಲಿ ಈ ಘ ವಿಫಲವಾಯಿತು ಈ ಪರಿಸ್ಥಿತಿಯಲ್ಲಿ ಸರಿಪಡಿಸಲು ಸಾಧ್ಯವಿದ್ದ ನಾಯಕರು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ . ಇದರಿಂದಾಗಿ ರಾಷ್ಟ್ರಸಂಘ ವಿಫಲವಾಯಿತು ,

6 ) ಮರು ಶಸ್ತ್ರೀಕರಣ :

1919 ರ ಶಾಂತಿ ಒಪ್ಪಂದ ಸಂಪೂರ್ಣವಾಗಿ ಜರ್ಮನಿಯನ್ನು ನಿಶ್ಯಸ್ತ್ರೀಕರಣಗೊಳಿಸಿತು , ಆದರೆ ಹಿಟ್ಲರ್ “ ರಾಷ್ಟ್ರದ ಶಕ್ತಿ ಮತ್ತು ಸಾಧನೆಗೆ ಮದುರಕರಣವೇ ಏಕೈಕ ಮಾರ್ಗ ” ಎಂದು ಘೋಷಿಸಿದನು , ಹಿಟ್ಲರ್ ತೀವ್ರವಾಗಿ ಸೈನಿಕಶಕ್ತಿ ಆಧುನಿಕ ಶಸ್ತ್ರಾಸ್ತ್ರಗಳು , ಯುದ್ಧನೌಕೆಗಳು , ಯುದ್ಧವಿಮಾನಗಳು ಜಲಾಂತರಾಯಗಳ ಸಂಖ್ಯೆ ಹೆಚ್ಚಿನದನ್ನು ಇಟಲಿ , ಜಪಾನ್ ಕೂಡ ಮರುಶಸ್ತ್ರೀಕರಣ ಕೈಗೊಂಡಿದ್ದರಿಂದ ಎರಡನೇ ಜಾಗತಿಕ ಯುದ್ಧಕ್ಕೆ ಎಡೆ ಮಾಡಿತು .

7 ) ತತ್‌ ಕ್ಷಣದ ಕಾರಣಗಳು :

1939 ರ ಸೆಪ್ಟೆಂಬರ್ ಇದು ಹಿಟ್ಲರನು ಜೋಲೊಡಿನ ಮೇಲೆ ಮಾಡಿದ ಆಕ್ರಮಣವು ಎರಡನೇ ಜಾಗತಿಕ ಯುದ್ಧದ ತತ್‌ಕ್ಷಣದ ಕಾರಣವಾಯಿತು , ಇಂಗ್ಲೆಂಡ್ , ಫ್ರಾನ್ಸ್ , ಜರ್ಮನಿಯ ಮೇಲೆ ಯುದ್ರ ಘೋಷಿಸಿದ್ದು ಎರಡನೇ ಜಾಗತಿಕ ಯುದ್ಧಕ್ಕೆ ತಕ್ಷಣದ ಕಾರಣವಾಗಿತ್ತು .

ಪರಿಣಾಮಗಳು :

ಯೂರೋಪಿನ ಪ್ರಭುತ್ವಕೊನೆಗೊಂಡಿತು . ಈ ಯುದ್ಧದ ನಂತರ ಯು.ಎಸ್.ಎ ಹಾಗೂ ಯು.ಎಸ್.ಎಸ್.ಆರ್ ಶಕ್ತಿಶಾಲಿ ರಾಷ್ಟ್ರಗಳಾಗಿ ಹೊರಹೊಮ್ಮಿದವು. ರಷ್ಯಾ ಮತ್ತು ಅಮೆರಿಕಾ ಎರಡು ಶಕ್ತಿಶಾಲಿ ರಾಷ್ಟ್ರಗಳ ನಡುವೆ ಅಪನಂಬಿಕೆ ಉಂಟಾಯಿತು , ಇದು ಮುಂದೆ ಶೀತಲ ಸಮರಕ್ಕೆ ಕಾರಣವಾಯಿತು , ವಿಶ್ವಶಾಂತಿಗೆ ನಿರಂತರವಾಗಿ ಧಕ್ಕೆ ಉಂಟಾಯಿತು .ಏಷ್ಯಾ ಆಫ್ರಿಕಾ , ಅಮೇರಿಕಾಗಳಲ್ಲಿ ಯೂರೋಪಿಯನ್ ವಸಾಹತುಗಳ ಸಾಮ್ರಾಜ್ಯ ಕೊನೆಗೊಂಡಿತು .ಭಾರತ , ಶ್ರೀಲಂಕಾ , ಇಂಡೋನೇಷಿಯಾ ಮೂತಾದ ರಾಷ್ಟ್ರಗಳು ಸ್ವತಂತೊಂಡವು , ಜರ್ಮನಿ ಆಳ್ವಿಕೆಯಲ್ಲಿ ಯಹೂದಿಗಳಲ್ಲಿ ನಿರ್ಗತಿಕರಾಗಿದ್ದರು . ಯಹೂದಿಗಳಿಗಾಗಿ ಒಂದು ಹೊಸ ಮೂಲ ನೆಲೆ ಇಸ್ರೇಲ್‌ನಲ್ಲಿ 1948 ರಲ್ಲಿ ಸ್ಥಾಪಿಸಲಾಯಿತು . ಅಣುಬಾಂಬುಗಳ ಪರಿಣಾಮ ಬಹಳ ವಿನಾಶಕಾರಿಯಾಗಿತ್ತು , ಇಡೀ ವಾತಾವರಣ ವಿಳಾಮೃತವಾಗಿ , ಇದರ ಪರಿಣಾಮ ಮುಂದಿನ ಹಲವಾರು ವರ್ಷಗಳವರೆಗೂ ಅಂಗವಿಕಲ ಶಿಶುಗಳ ಜನನವಾಗತೊಡಗಿದವು . ಜಗತ್ತಿನ ಎಲ್ಲಾ ಯುದ್ಧಗಳಿಗಿಂತ ಎರಡನೇ ಜಾಗತಿಕ ಯುದ್ಧವು ಅತ್ಯಂತ ವಿನಾಶಕಾರವಾಗಿತ್ತು .

ಮಿಲಿಯನ್ ಗಟ್ಟಲೆ ಜನರು ಯುದ್ಧದ ನಂತರ ಹುಪ್ಪ ಮತ್ತು ರೋಗಗೊಂದ ಮರ ಹೊಂದಿದರು . ಅಪಾರ ಸಂಖ್ಯೆಯಲ್ಲಿ ಮನೆ , ಕೈಗಾರಿಕೆಗಳು , ಸಾರಿಗೆ ಸಂಪರ್ಕ ವ್ಯವಸ್ಥೆಗಳು ಹಾನಿಗೊಂಡವು , ಕೃಷಿ ಭೂಮಿ ನಾಶ ಹೊಂದಿದ್ದರಿಂದ ಆಹಾರದ ಕೊರತೆ ಆಯಿತು . ಇಟಲಿ ಮತ್ತು ಜರ್ಮನಿಯಲ್ಲಿ ಸರ್ವಾಧಿಕಾರ ಅಂತ್ಯವಾಯಿತು . ಇಟಲಿಯನ್ನು ಗಣರಾಜ್ಯ ಎಂದು ಘೋಷಿಸಲಾಯಿತು . ನಾಜಿ ಪಕ್ಷದ ನಾಯಕರನ್ನು ನ್ಯೂರಂಬರ್ಗ್‌ನಲ್ಲಿ ವಿಚಾರಣೆಗೆ ಒಳಪಡಿಸಲು ನ್ಯಾಯಾಲಯವನ್ನು ಸ್ಥಾಪಿಸಲಾಯಿತು . ಜಪಾನ್ ದೇಶವು ತನ್ನ ಎಲ್ಲಾ ಹಕ್ಕುಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು . ಜಪಾನನ್ನು ಯು.ಎಸ್.ಎ. ವಶಪಡಿಸಿಕೊಂಡಿತು . ಅತ್ಯಂತ ಪ್ರಮುಖ ಪರಿಣಾಮವೆಂದರೆ ವಿಶ್ವಸಂಸ್ಥೆ ಸ್ಥಾಪನೆ ಭವಿಷ್ಯತ್ತಿನಲ್ಲಿ ಯುದ್ಧ ತಡೆಗಟ್ಟಿ , ಶಾಂತಿ ಸ್ಥಾಪಿಸುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆಯಾಯಿತು . ಈ ಯುದ್ಧದಲ್ಲಿ ಸುಮಾರು 25 ಮಿಲಿಯನ್ ಜನರು ಪ್ರಾಣ ಕಳೆದುಕೊಂಡರು ಮತ್ತು 50 ಮಿಲಿಯನ್ ಜನರು ಅಂಗವಿಕಲರಾದರು .

2 ) ವಿಶ್ವಸಂಸ್ಥೆಯ ರಾಜಕೀಯ ಮತ್ತು ರಾಜಕೀಯೇತರ ಸಾಧನೆಗಳನ್ನು ವಿವರಿಸಿ ,

ವಿಶ್ವಸಂಸ್ಥೆಯು ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯನ್ನು ಮಾಡಿದೆ .

ಅವುಗಳೆಂದರೆ –

 • 1945 ರಿಂದ ಯಾವುದೇ ಜಾಗತಿಕ ಯುದ್ಧ ನಡೆಯದಿರುವುದು , ಅಣುಬಾಂಬು ಮುಂತಾದ ಮಾರಕಾಸ್ತ್ರಗಳನ್ನು ಉಪಯೋಗಿಸದೆ ಇರುವುದು ಅತ್ಯಂತ ಪ್ರಮುಖ ಸಾಧನೆಯಾಗಿದೆ .
 • ಇರಾನಿನ ಸಮಸ್ಯೆಯನ್ನು ಬಗೆಹರಿಸಿದ್ದು ವಿಶ್ವ ಸಂಸ್ಥೆಯ ಸಾಧನೆಗಳಲ್ಲಿ ಒಂದಾಗಿದೆ . ಇರಾನಿನಲ್ಲಿ ಬೇರುಬಿಟ್ಟಿದ್ದ ರಷ್ಯಾ ಸೇನೆಯನ್ನು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಹಿಂಪಡೆಯುವಂತೆ ಮಾಡಿತು .
 • 1947 ಹಾಲೆಂಡ್ ಮತ್ತು ಇಂಡೋನೇಷ್ಯಾಗಳ ಮಧ್ಯೆ ಇದ್ದ ಗಲಭೆಯನ್ನು 1948 ರಲ್ಲಿ ಬಗೆಹರಿಸಿತು .
 • ಸೂಯೋಜ್ ಕಾಲುವೆಯ ಹಾಗೂ ವಿಯೆಟ್ನಾಂ ಸಮಸ್ಯೆಗಳನ್ನು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಾಯಿತು .
 • 1989 ರಲ್ಲಿ ಇರಾನ್ ಮತ್ತು ಇರಾಕ್ ನಡುವಿನ ಯುದ್ಧವನ್ನು ಕೊನೆಗಾಣಿಸಿತು .
 • 1990 ರಲ್ಲಿ ಇರಾಕ್ ಕುವೈತನ್ನು ಆಕ್ರಮಿಸಿಕೊಂಡಾಗ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ 1991 ರಲ್ಲಿ ಇರಾಕ್ ಕುವೈತ್‌ನಿಂದ ಹೊರ ಬರುವಂತೆ ಮಾಡಿತು .
 • ಬರ್ಲಿನ್ ದಿಗ್ಬಂಧನವನ್ನು 1948 ರಲ್ಲಿ ವಿಶ್ವಸಂಸ್ಥೆ ಪಶ್ನಿಸಿ 1948 ರಲ್ಲಿ ಬಗೆಹರಿಸಿತು .
 • 1948 ರಲ್ಲಿ ಕಾಶ್ಮೀರದಲ್ಲಿ ವಿಶ್ವಸಂಸ್ಥೆಯ ಯುದ್ಧ ವಿರಾಮವನ್ನು ಘೋಷಿಸಿತು .
 • ಕೋರಿಯಾ ಬಿಕ್ಕಟ್ಟಿನಲ್ಲಿ ಉತ್ತರ ಮತ್ತು ದಕ್ಷಿಣಕೊರಿಯಾಗಳ ಮಧ್ಯೆ ಯುದ್ಧ ಪ್ರಾರಂಭವಾದಾಗ ವಿಶ್ವಸಂಸ್ಥೆ ವಿವಾದವನ್ನು ಬಗೆಹರಿಸಲು ಪ್ರಯೋಗಗಳನ್ನು ಮಾಡಿತು .
 • ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಾಂತಿ ಸ್ಥಾಪಿಸುವಲ್ಲಿ ವಿಶ್ವಸಂಸ್ಥೆ ಕಾರ್ಯನಿರ್ವಹಿಸಿದೆ .
 • ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿಯ ವಿಶೇಷ ಸಮಿತಿಯನ್ನು ನೇಮಕ ಮಡುವುದರೊಂದಿಗೆ 1954 ರಲ್ಲಿ ನಿಷೇಧವನ್ನು ಹೇರಿತು .

ರಾಜಕೀಯೇತರ ಸಾಧನೆಗಳು :

 • 1948 ರ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ಘೋಷಣೆ ಹೊರಡಿಸಿದ್ದು ವಿಶ್ವಸಂಸ್ಥೆಯ ಮಹತ್ತರ ಸಾಧನೆಯಾಗಿದೆ .
 • ವಿಶ್ವಸಂಸ್ಥೆಯು ತನ್ನ ವಿಶೇಷ ಸಂಸ್ಥೆಗಳ ಮೂಲಕ ಮಹತ್ತರ ಕೆಲಸಗಳನ್ನು ವಿಶ್ವಕಾರ್ಮಿಕರ ಸ್ಥಿತಿಯನ್ನು ಸುಧಾರಿಸಿದೆ . ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ( ILO ) ಮುಖಾಂತರ ವಿಶ್ವಕಾರ್ಮಿಕರ ಸ್ಥಿತಿಯನ್ನು ಸುಧಾರಿಸಿದೆ.
 • FAO ಆಹಾರ ಉತ್ಪಾದನೆಯನ್ನು ಹೆಚ್ಚಿಸಿ ಮಿಲಿಯನ್‌ಗಟ್ಟಲೆ ಹಸಿದ ಮಕ್ಕಳಿಗೆ ಆಹಾರವನ್ನು ಒದಗಿಸಲು ಸಹಾಯ ಮಾಡಿದೆ .
 • IMF ( ಅಂತಾರಾಷ್ಟ್ರೀಯ ಹಣಕಾಸು ನಿಧಿ ) ಮತ್ತು IBRD ಅಂತಾರಾಷ್ಟ್ರೀಯ ಪುನರ್ ನಿರ್ಮಾಣ ಅಭಿವೃದ್ಧಿ ಬ್ಯಾಂಕ್ , ಹಿಂದುಳಿದ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ನೀಡುತ್ತಿವೆ .
 • UNESCO ಹಿಂದುಳಿದ ದೇಶದಲ್ಲಿ ಸಾಮಾಜಿಕ , ಆರ್ಥಿಕ ಶೈಕ್ಷಣಿಕ , ತಾಂತ್ರಿಕ ಮತ್ತಿತರ ಕ್ಷೇತ್ರಗಳಲ್ಲಿ ಕೆಲಸ ಮಾಡಿದೆ . ವಿಶ್ವಸಂಸ್ಥೆಯ ಯುದ್ಧ , ಭೂಕಂಪ , ಸುನಾಮಿ ಮತ್ತಿತರ ನಿರಾಶ್ರಿತರಿಗೆ ಸಹಾಯ ಮಾಡಿದೆ .
 • 1959 ರಲ್ಲಿ ಸಾಮಾನ್ಯ ಸಭೆಯ ‘ ಶಿಶುವಿನ ಹಕ್ಕು ‘ ಘೋಷಣೆಯನ್ನು ಮಾಡಿ UNICEF ರಕ್ಷಣೆ , ಸಾಮಾಜಿಕ ಭದ್ರತೆ , ಆರೋಗ್ಯ ಮುಂತಾದವುಗಳ ಬೆಳವಣಿಗೆ ನಿಗಾವಹಿಸಿ ಪರಿಹಾರ ದೊರಕಿಸಿ ಕೊಡುತ್ತದೆ .
 • WHO ಜನರ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದೆ . ಯಶಸ್ವಿಯೂ ಆಗಿದೆ . ಮಲೇರಿಯಾ , ಕಾಲರಾ , ಸಿಡುಬು , ಕ್ಷಯರೋಗ , ಕುಷ್ಟರೋಗ , ಪೋಲಿಯೋ ಮುಂತಾದ ರೋಗರುಜಿನಗಳನ್ನು ತಡೆಗಟ್ಟಲು ನಿರಂತರ ಹೋರಾಟ ನಡೆಸುತ್ತಿವೆ . ಪ್ಲೇಗ್ ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಲಗಿಸಿವೆ . ದುರ್ಬಲ ಸಾಮಾಜಿಕ ವರ್ಗಗಳ ವಿಶೇಷ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಿದೆ .

3) ಮೊದಲನೇ ಜಾಗತಿಕ ಯುದ್ಧದ ಕಾರಣ ಹಾಗೂ ಪರಿಣಾಮಗಳನ್ನು ವಿವರಿಸಿ .

ಮೊದಲನೇ ಜಾಗತಿಕ ಯುದ್ಧದ ಕಾರಣಗಳೆಂದರೆ

1 ) ಉಗ್ರ ರಾಷ್ಟ್ರೀಯತೆ : ರಾಷ್ಟ್ರೀಯ ಆಸೋತ್ತರಗಳು ರಾಜಕೀಯ ವೈರತ್ವಕ್ಕೆ ಕಾರಣವಾಯಿತು . ಯೂರೋಪಿನ ಉಗ್ರ ರಾಷ್ಟ್ರೀಯತೆ ಬೆಳೆಯಿತು . ಅಂದರೆ ತನ್ನ ದೇಶವನ್ನು ಪ್ರೀತಿಸುವುದು . ಅನ್ಯದೇಶವನ್ನು ದ್ವೇಷಿಸುವುದಾಗಿತ್ತು . ಸರಿಯಿದ್ದರೂ , ತಪ್ಪಿದರೂ ಇದು ನನ್ನ ದೇಶ ” ಎಂಬುದು ರಾಷ್ಟ್ರೀಯ ವಾದಿಗಳ ತತ್ವವಾಗಿತ್ತು . 19 ನೇ ಶತಮಾನದಲ್ಲಿ ಅನೇಕ ಹೊಸ ರಾಜ್ಯಗಳನ್ನು ಹುಟ್ಟು ಹಾಕಿತು . ಹೀಗೆ ದೇಶಭಕ್ತಿ ಉಗ್ರರೂಪತಾಳಿ ಉಗ್ರ ರಾಷ್ಟ್ರೀಯತೆ , ಅತಿಯಾದ ದೇಶಪ್ರೇಮ ಮೊದಲನೇ ಜಾಗತಿಕ ಯುದ್ಧಕ್ಕೆ ಕಾರಣವಾಯಿತು .

2 ) ಸೇನಾ ಮೈತ್ರಿಕೂಟ: ಜರ್ಮನಿ ಏಕೀಕರಣದ ನಂತರ ಕುಸ್ಮಾರ್ಕ್ ಜರ್ಮನಿಯನ್ನು ಹಾಗೂ ಫ್ರಾನ್ಸ್‌ನ್ನು ಪ್ರತ್ಯೇಕಿಸಲು ಮೈತ್ರಿಕೂಟದ ರಚನೆಯಲ್ಲಿ ತೊಡಗು ಆತ್ಮೀಯಾದೊಂದಿಗೆ ಮೈತ್ರಿಮಾಡಿಕೊಂಡಿದ್ದರ ಪರಿಣಾಮವಾಗಿ ಎರಡು ಶಕ್ತಿಗ ರಚನೆಗೆ ಕಾರಣವಾಯಿತು , ಅದನ್ನು ಟ್ರಿಪಲ್ ಅಲೈಯನ್ಸ್‌ ಮತ್ತು ಟ್ರಿಪಲ್ Crn ಜರ್ಮನಿ , ಆಸ್ಟ್ರಿಯಾ ಮತ್ತು ಇಟಲಿಗಳು ಸೇರಿ ~ ಇವು ಶಕ್ತಿ ಕಂಗಳಾಗಿ , ಕೇಂದ್ರೀಯವೆಂದು ( ಟ್ರಿಪಲ್ ಅಲೈಯನ್ಸ್ ಫ್ರಾನ್ಸ್ ರಷ್ಯಾ ಮತ್ತು ಇಂಗ್ಲೆಂಡ್‌ಗಳು ಟಿಪಲ್ ಎಂಟೆಂಟ್ ರಚಿಸಿಕೊಂಡವು , ಇವುಗಳನ್ನು ಮಿತ್ರರಾಷ್ಟ್ರಗಳೆಂದು ಕರೆಯಲಾಗಿದೆ . ಎರಡು ಕೂಟಗಳು ಪರಸ್ಪರ ದ್ವೇಷ ಅಸೂಯೆಯಿಂದ ನೋಡಲಾಗದಾಗ , ಮೈತ್ರಿಕೂಟದಲ್ಲಿ ಆತಂಕದ ವಾತಾವರಣ ಮೂಡಿತು ,

3 ) ಶಸ್ತ್ರಾಸ್ತ್ರಗಳ ಪೈಪೋಟಿ : ಶಸ್ತ್ರಾಸ್ತ್ರಗಳ ಪೈಪೋಟಿ ಅಂದರೆ ಯುದ್ಧ ಸಲಕರಣೆಯ ಉತ್ಪಾದನೆಯ ಪೈಕೋಟಿ ಕಾರಣವಾಯಿತು . ( 1 ) ಪ್ರತಿಯೊಂದು ರಾಷ್ಟ್ರವು ಸೈನಿಕಶಕ್ತಿ , ಸೂಕ್ತ ತರಬೇತಿ ಹಾಗೂ ನೌಕಾ ಅಸ್ತ್ರಗಳನ್ನು ಹೆಚ್ಚಿಸಲು ಆರಂಭಿಸಿದವು . ಈ ಶಸ್ತ್ರಾಸ್ತ್ರಗಳ ಪೈಪೋಟಿ , ಪರಸ್ಪರ , ಭಯ , ಅನುಮಾನ , ಆತಂಕ ಮತ್ತು ಅಪನಂಬಿಕೆಗಳನ್ನು ಸೃಷ್ಟಿಸಿತು .

4 ) ಸಾಮ್ರಾಜ್ಯಶಾಹಿ ಮತ್ತು ಆರ್ಥಿಕ ಪೈಪೋಟಿ : ಕೈಗಾರಿಕಾ ಕ್ರಾಂತಿಯಿಂದ ಸಾಮ್ರಾಜ್ಯಶಾಹಿತ್ವ ಬೆಳೆಯಿತು . ಜರ್ಮನಿಯು ಇಂಗ್ಲೆಂ ವಶದಲ್ಲಿದ್ದ ಮಾರುಕಟ್ಟೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದರಿಂದ ಇಂಗ್ಲೆಂಡ್ ಮತ್ತು ಜರ್ಮನಿಯ ನಡುವೆ ಹಗೆತನ ಹೆಚ್ಚಾಯಿತು , ಯೂರೋಪಿನ ರಾಷ್ಟ್ರಗಳ ಮಧ್ಯೆ ಸಾಮ್ರಾಜ್ಯಶಾಹಿ ಮತ್ತು ಆರ್ಥಿಕ ಪೈಪೋಟಿಯೂ ಮೊದಲನೇ ಜಾಗತಿಕ ಯುದ್ಧ ಬಹುಮುಖ್ಯ ಕಾರಣಗಳಲ್ಲೊಂದಾಯಿತು .

5 ) ಬಾಲ್ಕನ್ ಸಮಸ್ಯೆ : ಟರ್ಕಿಯ ದುರ್ಬಲ ಮತ್ತು ಅದಕ್ಷ ಸುಲ್ತಾನನ್ನು “ ಯೂರೋಪಿನ ರೋಗಿ ಎಂದು ಕರೆಯಲಾಗುತ್ತಿತ್ತು . ಎರಡು ವೈರಿ ಬಣಗಳ ಮಧ್ಯೆ ವೈರತ್ವ ಹೆಚ್ಚಾದಂತೆ 1914 ರ ಜಾಗತಿಕ ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು . ‌

6 ) ವೃತ್ತ ಪತ್ರಿಕೆಗಳ ಪಾತ್ರ : ವೃತ್ತ ಪತ್ರಿಕೆಗಳು ರಾಷ್ಟ್ರೀಯ ಉದ್ದೀಪಿಸಲು ಪ್ರಯತ್ನಿಸಿದವು . ಯೂರೋಪಿನ ಜನರಲ್ಲಿ ಅಪನಂಬಿಕೆ ಉಂಟು ಮಾಡುವಲ್ಲಿ ವೃತ್ತಪತ್ರಿಕೆಗಳು ಕಾರಣವಾದವು .

7) ತತ್‌ ಕ್ಷಣದ ಕಾರಣ: ಮೊದಲನೇ ಭಾಗತಿಕ ಯುಗ ಸತ್ಯಕ್ಕೆ ಕಾರಣವೆಂದರೆ – ಬೋಸ್ನಿಯಾದ ರಾಜಧಾನಿಯಲ್ಲಿ ಸರಜೇವೋದಲ್ಲಿ 1945 ಜೂನ್ 28 ರಂದು ಆದ ರಾಜಕುಮಾರ ಆರ್ಚ್ ಡ್ಯೂಕ್‌ ಫರ್ಡಿನಾಂಡ್ ಮತ್ತು ಅವನ ಪತ್ನಿಯ ಕೊಲೆ , ಕೆಂಪಗೈದವರು ಸರ್ಬಿಯಾದ ಪ್ರಜೆ ಗವ್ರಿಲ್ಲೋ ಪ್ರಿನ್ಸೆಸ್‌ ಎಂಬ ವಿದ್ಯಾರ್ಥಿ ಆಸ್ಟ್ರೀಯಾ ಆ ವಿದ್ಯಾರ್ಥಿಯನ್ನು ತಮಗೊಪ್ಪಿಸಲು ಗಡುವು ನೀಡಿದರೂ ತಿರಸ್ಕರಿಸಿದಾಗ ಆತ್ಮೀಯ ಜರ್ಮನಿಯು ಬೆಂಬಲದೊಂದಿಗೆ ಜುಲೈ 22 , 1914 ರಂದು ಯುದ್ಧ ಘೋಷಿಸಿತು . ರಷ್ಯಾ , ಸರ್ಬಿಯಾದ ನೆರವಿಗೆ ಬಂದಿತು . ಹೀಗಾಗಿ ಮೊದಲನೇ ಜಾಗತಿಕ ಯುದ್ಧ ಪ್ರಾರಂಭವಾಯಿತು.

ಪರಿಣಾಮಗಳು:

ಸುಮಾರು 20 ಮಿಲಿಯನ್ ಸೈನಿಕರು ಗಾಯಾಳುಗಳಾದರು . ಅವರಲ್ಲಿ ಬಹಳಷ್ಟು ಸೈನಿಕರು 40 ವರ್ಷಗಳಿಗಿಂತ ಕೆಳಗಿನವರಿದ್ದರು . ಅಲ್ಲದೆ ಮಿಲಿಯನ್ ಗಟ್ಟಲೆ ನಾಗರಿಕರು ಹಸಿವು , ಖಾಯಿಲೆ , ಹಿಂಸೆಗಳಿಂದ ಮರಣ ಹೊಂದಿದರು. ಫಿನ್‌ಲ್ಯಾಂಡ್ , ಲಿಥುರೇನಿಯಾ , ಎಸೋನಿಯಾ , ಪೋಲೆಂಡ್ , ಅಸ್ತಿತ್ವಕ್ಕೆ ಬಂದವು . ಜೆಕೋಸ್ಟೋವೇಕಿಯಾ , ಯುಗೋಸ್ತೋವಿಯಾ ಮುಂತಾದ ಹೊಸ ರಾಷ್ಟ್ರಗಳು ಅಸ್ತಿತ್ವಕ್ಕೆ ಬಂದವು.ಯುದ್ಧದ ಪರಿಣಾಮವಾಗಿ ವರ್ಸೆಲ್ಸ್ ಒಪ್ಪಂದ ಏರ್ಪಟ್ಟಿತು . ಯುದ್ಧದ ನಂತರ ಜನರ ಆರ್ಥಿಕವಾಗಿ ಸಾಮಾಜಿಕ ಮತ್ತು ಇತರೆ ಸಮಸ್ಯೆಗಳ ಪರಿಹಾರದ ಮಾರ್ಗದರ್ಶನಕ್ಕಾಗಿ ಸರ್ಕಾರ ಜಗತ್ತಿನ ಉತ್ಪಾದನೆ ಇಳಿಮುಖವಾಯಿತು . ಯುದ್ಧದ ಭೀತಿ , ನೋವುಗಳು ಅಪಾರವಾಗಿದ್ದವು . ಸುಮಾರು 60 ಮಿಲಿಯನ್ ಸೈನಿಕರು ಯುದ್ಧದಲ್ಲಿ ಭಾಗಿಯಾಗಿದ್ದರು . ಅವರಲ್ಲಿ ಸುಮಾರು ಹತ್ತು ಮಿಲಿಯನ್ ಸೈನಿಕರು ಕೊಲ್ಲಲ್ಪಟ್ಟರು . ಮಹಿಳೆಯರು ಹೊರಗೆ ಹೋಗಿ ದುಡಿಯುವುದು ಅನಿವಾರ್ಯವಾಯಿತು .

ಯುದ್ಧದ ಪರಿಣಾಮವಾಗಿ ನಾಲ್ಕು ಸಾಮ್ರಾಜ್ಯಗಳು ಅಂತ್ಯಗೊಂಡವು . ಅವುಗಳೆಂದರೆ- ಆತ್ಮೀಯಾದ – ಹ್ಯಾಪ್ಸ್ ಬರ್ಗ್, ಜರ್ಮನಿಯ – ಹೋಹೆಂಜೊಲಿರಿನ್ ,ರಷ್ಯಾದ – ರೋಮೋನೋವ್, ಟರ್ಕಿಯಾ – ಆಟೋಮನ್ ಸಾಮ್ರಾಜ್ಯ. ಬದುಕಿನ ವೆಚ್ಚ ಏರುತ್ತಾ ಹೋಯಿತು . ಯೂರೋಪಿನ ಸಾಲ ನೀಡುವ ಬೃಹತ್ ರಾಷ್ಟ್ರಗಳೇ ಸಾಲದಲ್ಲಿ ಸಿಕ್ಕಿಕೊಂಡವು . 1920 ರ ಪ್ಯಾರಿಸ್ ಶಾಂತಿ ಸಮ್ಮೇಳನವು ಅಧಿಕೃತವಾಗಿ ಮೊದಲನೇ ಜಾಗತಿಕ ಯುದ್ಧವನ್ನು ಕೊನೆಗೊಳಿಸಿತು .

FAQ:

ನಾಜಿ ಪಕ್ಷದ ಸ್ಥಾಪಕರು ಯಾರು ?

ಹಿಟ್ಲರ್ .

ಯಾವ ದಿನವನ್ನು ವಿಶ್ವಸಂಸ್ಥೆಯ ದಿನವೆಂದು ಆಚರಿಸಲಾಗುತ್ತದೆ ?

ಅಕ್ಟೋಬರ್ 24 ರಂದು .

ಫ್ಯಾಸಿಸ್ಟ್ ಪಕ್ಷದ ಸ್ಥಾಪಕನಾರು ?

ಬೆನಿಟೋ ಮುಸೋಲಿನಿ

ಇತರೆ ವಿಷಯಗಳು :

1st PUC History Notes

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *

rtgh