ಪ್ರಥಮ ಪಿ.ಯು.ಸಿ ಅಧ್ಯಾಯ – 11 ಸಮಕಾಲಿನ ಪ್ರಪಂಚ ನೋಟ್ಸ್‌ | 1st Puc History Chapter 11 Notes Question Answer

ಪ್ರಥಮ ಪಿ.ಯು.ಸಿ ಸಮಕಾಲಿನ ಪ್ರಪಂಚ ನೋಟ್ಸ್‌ 1st Puc History Chapter 11 Notes Question Answer Download Kseeb Solutions For Class 11 Chapter 11 Notes In Kannada Medium 1st Puc Contemporary World History Notes ಸಮಕಾಲೀನ ಪ್ರಪಂಚ Question Answer samakalina prapancha

 

1st Puc History Chapter 11 Notes Question Answer

1st Puc Samakalina Prapancha History Notes In Kannada
1st Puc Samakalina Prapancha History Notes In Kannada

I. ಕೆಳಗಿನವುಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ.

1. ನಾಜಿಗಳ ಆಳ್ವಿಕೆಯಿಂದ ಗ್ರೀಸ್ ಯಾವಾಗ ಸ್ವತಂತ್ರವನ್ನು ಪಡೆಯಿತು ?

1944 ರಲ್ಲಿ

2. ಮಾರ್ಷಲ್ ಯೋಜನೆಗೆ ಪ್ರತಿಯಾಗಿ ಯಾವ ಯೋಜನೆಯನ್ನು ಸೋವಿಯತ್ ಒಕ್ಕೂಟ ಜಾರಿಗೆ ತಂದಿತು ?

ಮಾರ್ಷಲ್ ಯೋಜನೆಗೆ ಪ್ರತಿಯಾಗಿ ಸೋವಿಯತ್ ಒಕ್ಕೂಟ ತನ್ನದೆ ಆದ ಆರ್ಥಿಕ ಸಹಾಯವನ್ನು ಪ್ರತಿಪಾದಿಸಿತು . ಇದನ್ನು COMECO ಎಂದು ಪರಸ್ಪರ ಆರ್ಥಿಕ ಸಹಾಯ ಮಂಡಳಿ ಯೋಜನೆಯನ್ನು ಜಾರಿಗೆ ತಂದಿತು .

3. ಯು.ಎಸ್.ಎಸ್.ಆರ್ . ಮತ್ತು ಚೀನಾ ಯಾವಾಗ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದವು ?

1950 ರಲ್ಲಿ

4. NATO ವಿಸ್ತರಿಸಿ :

ನ್ಯಾಟೋ – ನಾರ್ತ್ ಅಟ್ಲಾಂಟಿಕ್ ಟ್ರೇಟಿ ಆರ್ಗನೈಜೇಷನ್

5. SEATO ವಿಸ್ತರಿಸಿ :

ಸಿಯಾಟೋ – ಸೌತ್ ಈಸ್ಟ್ ಏಷ್ಯಾ ಟೀಟಿ ಆರ್ಗನೈಜೇಷನ್

6 . ‘ ಶೀತಲ ಸಮರ ‘ ಎಂಬ ಪದ ಮೊದಲು ಬಳಕೆಗೆ ಬಂದದ್ದು ಯಾವಾಗ ?

‘ ಶೀತಲ ಸಮರ ‘ ಎಂಬುದು ಎರಡನೇ ಜಾಗತಿಕ ಯುದ್ಧದ ನಂತರ ಬಳಕೆಗೆ ಬಂದಿದೆ

7. ಶೀತಲ ಸಮರ ಎಂದರೇನು ?

ಯುದ್ಧವೂ ಅಲ್ಲದ ಶಾಂತಿಯೂ ಅಲ್ಲದ ಪರಿಸ್ಥಿತಿಯನ್ನು ಶೀತಲ ಸಮರ ‘ ಎಂದು ಕರೆಯುವರು . [ ಅಮೇರಿಕ ಮತ್ತು ರಷ್ಯಾ ಪರಸ್ಪರ ಪೈಪೋಟಿ ನಡೆಸಿ ಪ್ರಪಂಚದ ಎರಡು ಮಹಾಶಕ್ತಿಗಳಾಗಿ ಹೊರಹೊಮ್ಮಿದ್ದವು . ಈ ಎರಡು ದೇಶಗಳ ಶತ್ರುತ್ವದಿಂದ ಬಿಗುವಿನ ವಾತಾವರಣ ಉಂಟಾಯಿತು . ಈ ವಾತಾವರಣವೇ ‘ ಶೀತಲ ಸಮರ’ವೆನಿಸಿದೆ ]

8. ವಾರ್ಸಾ ಒಪ್ಪಂದವನ್ನು ಯು.ಎಸ್.ಎಸ್.ಆರ್ ಯಾವಾಗ ರಚಿಸಿತು ?

1955 ರಲ್ಲಿ

9. ಬರ್ಲಿನ್ ಗೋಡೆಯನ್ನು ಯಾವ ವರ್ಷದಲ್ಲಿ ಕಟ್ಟಲಾಯಿತು ?

1961 ರಲ್ಲಿ

10. ರಷ್ಯಾದ ಗುಪ್ತಚರ ಪಡೆಗೆ ಇರುವ ಹೆಸರು ಯಾವುದು ?

ಕೆ.ಜಿ.ಬಿ.

11. ‘ ಯೂ ಅಂಡ್ ದಿ ಅಟಾಮಿಕ್ ಬಾಂಬ್ ‘ ಎಂಬ ಪ್ರಬಂಧವನ್ನು ಬರೆದವರು ಯಾರು ?

‘ ಜಾರ್ಜ್ ಆರ್ವೆಲ್ ‘ ಪ್ರಬಂಧವನ್ನು ಬರೆದನು .

12. ‘ ಶೀತಲ ಸಮರ ‘ ಎಂಬ ಪದವನ್ನು ಖಚಿತವಾಗಿ ಮೊದಲು ಬಳಸಿದ ಅಮೇರಿಕಾದ ರಾಜನೀತಜ್ಞನನ್ನು ಹೆಸರಿಸಿ .

ಬರ್ನಾರ್ಡ್ ಬಾರುಚ್

13. CENTO ವಿಸ್ತರಿಸಿ :

ಸೆಂಟೋ – ಸೆಂಟ್ರಲ್ ಟ್ರೇಟ್ ಆರ್ಗನೈಜೇಷನ್

14. ಅಮೇರಿಕಾದ ಗುಪ್ತಚರ ಪಡೆಯನ್ನು ಹೆಸರಿಸಿ ,

ಸಿ.ಐ.ಎ.

15. ಟ್ಯೂಮನ್ ಯಾರು ?

1947 ರಲ್ಲಿದ್ದ ಅಮೇರಿಕಾದ ಅಧ್ಯಕ್ಷ

16.ಮಾರ್ಷಲ್ ಯೋಜನೆಯ ಉದ್ದೇಶವೇನು ?

ಯುದ್ಧದಲ್ಲಿ ಹಾನಿಗೀಡಾದ ಯೂರೋಪಿನ ರಾಷ್ಟ್ರಗಳ ಚೇತರಿಕೆ ಹಾಗೂ ಪುನರ್ ನಿರ್ಮಾಣಕ್ಕೆ ಅಮೇರಿಕಾದ ಸಹಾಯವನ್ನು ನೀಡಲು ಪ್ರಸ್ತಾಪಿಸಿದನ್ನು , ಆದರೆ ಪರೋಕ್ಷವಾಗಿ ಇದರ ಗುರಿ ಕಮ್ಯುನಿಸಂ ಬೆಳವಣಿಗೆಯನ್ನು ತಡೆಯುವುದಾಗಿತ್ತು .

17. SALT ವಿಸ್ತರಿಸಿ :

ಸ್ಟ್ರಾಜಿಟಿಕ್ ಆರ್ಮ್ಸ್ – ಲಿಮಿಟೇಷನ್‌ ಟಾಕ್ಸ ( ಯುದ್ಧ ಶಸ್ತ್ರಾಸ್ತ್ರ ನಿಯಂತ್ರಣ )

18. ಶೀತಲ ಸಮರ ಯಾವ ವರ್ಷ ಕೊನೆಗೊಂಡಿತು ?

1991 ರಲ್ಲಿ

19. ನ್ಯಾಟೋದ ಕೇಂದ್ರ ಕಛೇರಿ ಎಲ್ಲಿದೆ ?

ವಾಷಿಂಗ್‌ಟನ್

20. ಸಿಯಾಟೋ ಸ್ಥಾಪನೆಯ ಪ್ರಮುಖ ಉದ್ದೇಶವೇನು ?

ಕಮ್ಯೂನಿಸ್ಟ್ ಅತಿಕ್ರಮಣವನ್ನು ತಡೆಯಲು ಮುಂಜಾಗ್ರತೆ ವಹಿಸುವುದಾಗಿತ್ತು .

21. ಸಿಯಾಟೋ ಒಪ್ಪಂದವನ್ನು ಯಾವಾಗ ವಿಸರ್ಜಿಸಲಾಯಿತು ?

1975 ರಲ್ಲಿ

22. ಸೋವಿಯತ್ ಒಕ್ಕೂಟ ಯಾವಾಗ ವಿಘಟನೆಗೊಂಡಿತು ?

1991 ರಲ್ಲಿ

23. ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದಕ್ಕೆ ಯಾವಾಗ ಸಹಿ ಮಾಡಲಾಯಿತು ?

1963 ರಲ್ಲಿ

24. ವಿಯಟ್ನಾಂ ಯುದ್ಧ ಯಾವಾಗ ಕೊನೆಗೊಂಡಿತು ?

1975 ರಲ್ಲಿ

25. ವಿಯಟ್ನಾಂ ಯಾವ ವರ್ಷ ಒಗ್ಗೂಡಿತು ?

1975 ರಲ್ಲಿ

26. ಗ್ಲಾಸ್‌ನಾಸ್ಟ್ ಎಂದರೇನು ?

ವಾಣಿಜ್ಯ ಬೆಳವಣಿಗೆಗಳು ರೋಗಗ್ರಸ್ತವಾಗಿ ಕುಂಠಿತವಾದಾಗ ಅದನ್ನು ಸುಧಾರಿಸಲು ಕೈಗೊಂಡ ಕ್ರಮವನ್ನು ‘ ಗ್ಲಾಸ್‌ನಾಸ್ ‘ ಎನ್ನುವರು , ಗ್ಲಾಸ್‌ ನಾಸ್ಟ್ ಎಂದರೆ ಮುಕ್ತನೀತಿ ,

27. ಪೆರಿಸ್ಟೋಯಿಕಾ ಎಂದರೇನು ?

‘ ಪೆರಿಸ್ಟೋಯಿಕಾ ‘ ಎಂದರೆ ಪುನರ್‌ರಚನೆ

28. ಸೋವಿಯತ್ ಒಕ್ಕೂಟದ ವಿಘಟನೆಯ ನಂತರ ಸಿ.ಐ.ಎಸ್‌ನ ಮುಖ್ಯಸ್ಥನಾದವನು ಯಾರು ?

ಬೊರಿಸ್ ಎಲ್ಲಿನ್

29. ಕ್ಯೂಬಾವನ್ನು ದಿಗ್ಧಂಧಿಸಿದ ಅಮೇರಿಕಾದ ಅಧ್ಯಕ್ಷ ಯಾರು ?

ಜಾನ್ . ಎಫ್ ಕೆನಡಿ ,

30. ಸಿ.ಐ.ಎಸ್ ಕೇಂದ್ರ ಕಛೇರಿ ಎಲ್ಲಿದೆ ?

ಮಿನ್ಸ್ ನಲ್ಲಿದೆ .

1st puc history notes in kannada chapter 11

II . ಕೆಳಗಿನವುಗಳಿಗೆ 2 ಪದ ಅಥವಾ 2 ವಾಕ್ಯಗಳಲ್ಲಿ ಉತ್ತರಿಸಿ :

1 . ಶೀತಲ ಸಮರವನ್ನು ಮುಕ್ತಾಯಗೊಳಿಸಿದ ಆಮೇರಿಕಾ ಮತ್ತು ರಷ್ಯಾದ ಅಧ್ಯಕ್ಷರುಗಳು ಯಾರು ?

ಅಮೇರಿಕಾದ ಅಧ್ಯಕ್ಷ – ಜಾರ್ಜ್ ಬುಷ್

ರಷ್ಯಾದ ಅಧ್ಯಕ್ಷರು – ಬೋರಿಸ್ ವಿಲ್ಸನ್

2 . ಅಮೇರಿಕಾ ಬಣದ ವಿರೋಧಿ ಸೈನಿಕ ಸಂಘಟನೆ ಯಾವುದು ? ಅದು ಯಾವಾಗ ಅಸ್ಥಿತ್ವಕ್ಕೆ ಬಂದಿತು ?

ನ್ಯಾಟೋ , ಇದು 1949 ರಲ್ಲಿ ಅಸ್ತಿತ್ವಕ್ಕೆ ಬಂದಿತು ?

3. ಸ್ವತಂತ್ರ ಬಾಲ್ಟಿಕ್‌ನ ಯಾವುದಾದರೂ ನಾಲ್ಕು ರಾಜ್ಯಗಳನ್ನು ಹೆಸರಿಸಿ .

ಲಿಥುವೇನಿಯಾ , ಲ್ಯಾಟ್ವಿಯಾ , ಎಸ್ತೋನೀಯ ಹಾಗೂ ಯುಕ್ರೇನ್ ,

4. ವಾರ್ಸಾ ಒಪ್ಪಂದ ಮಾಡಿಕೊಂಡ ಯಾವುದಾದರೂ ನಾಲ್ಕು ರಾಜ್ಯಗಳನ್ನು ಹೆಸರಿಸಿ .

1 ) ಬಳ್ಳೇರಿಯಾ 2 ) ಮೊಲೆಂಡ್ 3 ) ಜಿಕೊಸ್ಟೋವಿಯಾ 4 ) ಹಂಗೇರಿ

5 . ನ್ಯಾಟೋ ಸ್ಥಾಪನೆಯಾದುದ್ದು ಯಾವಾಗ ? ಮತ್ತು ಎಲ್ಲಿ ?

ನ್ಯಾಟೋ 1949 ರಲ್ಲಿ ವಾಷಿಂಗ್‌ಟನ್‌ನಲ್ಲಿ ಸ್ಥಾಪನೆಯಾಯಿತು .

6. ಸಿಯಾಟೋದ ಯಾವುದಾದರೂ ನಾಲ್ಕು ರಾಷ್ಟ್ರಗಳನ್ನು ಹೆಸರಿಸಿ .

ಸಿಯಾಟೋದ ನಾಲ್ಕು ರಾಷ್ಟ್ರಗಳೆಂದರೆ

1 ) ಇಂಗ್ಲೆಂಡ್ 2 ) ಅಮೇರಿಕ 3 ) ಫ್ರಾನ್ಸ್ 4 ) ಆಸ್ಟ್ರೇಲಿಯಾ

7 . ನ್ಯಾಟೋದ ಯಾವುದಾದರೂ ನಾಲ್ಕು ರಾಷ್ಟ್ರಗಳನ್ನು ಹೆಸರಿಸಿ ,

ನ್ಯಾಟೋದ ನಾಲ್ಕು ಸದಸ್ಯ ರಾಷ್ಟ್ರಗಳೆಂದರೆ

1 ) ಅಮೇರಿಕ 2 ) ಬ್ರಿಟನ್ 3 ) ಫ್ರಾನ್ಸ್ 4 ) ಆಸ್ಟ್ರೇಲಿಯಾ

8. ರಷ್ಯಾದ ಮಾನವ ಹಕ್ಕುಗಳು ಕಾರ್ಯಕರ್ತರು ಯಾರು ?

ರಷ್ಯಾದ ಮಾನವ ಹಕ್ಕುಗಳ ಕಾರ್ಯಕರ್ತ ಗೊರ್ಬಚೇವ್ .

9. ಸೆಂಟೋದ ಯಾವುದಾದರೂ ನಾಲ್ಕು ರಾಷ್ಟ್ರಗಳನ್ನು ಹೆಸರಿಸಿ .

ಸೆಂಟೋ ರಾಷ್ಟ್ರಗಳೆಂದರೆ –

1 ) ಇಂಗ್ಲೆಂಡ್ 2 ) ಪಾಕಿಸ್ತಾನ 3 ) ಇರಾನ್ 4 ) ಇರಾಕ್

1st Puc Samakalina Prapancha History Notes In Kannada

III . ಕೆಳಗಿನವುಗಳಿಗೆ 15-20 ವಾಕ್ಯಗಳಲ್ಲಿ ಉತ್ತರಿಸಿ :

1 ) ಸಿಯಾಟೋ ಒಪ್ಪಂದ ಮತ್ತು ವಾರ್ಸಾ ಒಪ್ಪಂದ ಕುರಿತು ಟಿಪ್ಪಣಿ ಬರೆಯಿರಿ .

ಸಿಯಾಟೋ ಒಪ್ಪಂದವು 1954 ರಲ್ಲಿ ಫಿಲಿಫಿನ್ಸ್‌ನ ರಾಜಧಾನಿ ಮನಿಲಾದಲ್ಲಿ ಇಂಗ್ಲೆಂಡ್ ಅಮೇರಿಕಾ , ಫ್ರಾನ್ಸ್ , ಆಸ್ಟ್ರೇಲಿಯಾ , ನ್ಯೂಜಿಲ್ಯಾಂಡ್ , ಥೈಲ್ಯಾಂಡ್ ಮತ್ತು ಪಾಕಿಸ್ತಾನ ದೇಶಗಳು ಸೇರಿ ಏಷ್ಯಾದ ಹಿತದೃಷ್ಟಿಯಿಂದ ಈ ಒಪ್ಪಂದಕ್ಕೆ ಸಹಿ ಹಾಕಿದವು . ಸಿಯಾಟೋ , ಕಮ್ಯುನಿಸಂ ಪ್ರಕರಣದ ಭಯದಿಂದ ಹುಟ್ಟಿಕೊಂಡಿತು . ಚೀನಾದಲ್ಲಿ ಸ್ಥಾಪಿತವಾದ ಕಮ್ಯೂನಿಸ್ಟ್ ಆಳ್ವಿಕೆಯಿಂದ ಆಗೇಯ ಏಷ್ಯಾದ ಮತ್ತು ಫೆಸಿಫಿಕ್ ರಾಷ್ಟ್ರಗಳಲ್ಲಿ ಕಮ್ಯೂನಿಸಂನ ಪ್ರಸರಣದ ಭಯವನ್ನು ಮತ್ತಷ್ಟು ಹೆಚ್ಚಿಸಿದವು . ಈ ಹಿನ್ನಲೆಯಲ್ಲಿ ರಕ್ಷಣಾವ್ಯವಸ್ಥೆಯನ್ನು ನಿರ್ಧರಿಸಿದವು .ಸಿಯೋಟನ ಮುಖ್ಯ ಉದ್ದೇಶ ಕಮ್ಯೂನಿಸ್ಟ್ ಅತಿಕ್ರಮಣವನ್ನು ತಡೆಯಲು ಮುಂಜಾಗ್ರತೆ ವಹಿಸುವುದಾಗಿತ್ತು 1975 ರಲ್ಲಿ ಇದನ್ನು ವಿಸರ್ಜಿಸಲಾಯಿತು .

ವಾರ್ಸಾ ಒಪ್ಪಂದ:

1955 ರಲ್ಲಿ ರಷ್ಯಾವು ನ್ಯಾಟೋ ಒಪ್ಪಂದಕ್ಕೆ ವಿರುದ್ಧವಾಗಿ ಪೂರ್ವ ಯೂರೋಪಿನ ದೇಶಗಳಾದ ಬಲ್ಗೇರಿಯಾ , ಹಂಗೇರಿ , ಪೂರ್ವ ಜರ್ಮನಿ , ಜಕೋಸೊಲ್ಲಿವೇಕೀಯ , ರುಮೇನಿಯಾ ಮತ್ತು ಪೋಲೆಂಡ್‌ದೊಂದಿಗೆ ವಾರ್ಸಾ ಒಪ್ಪಂದವನ್ನು ಮಾಡಿಕೊಂಡಿತು .ಇದರಿಂದಾಗಿ ರಷ್ಯಾ ಮತ್ತು ಅಮೇರಿಕ ನಡುವಿನ ಪ್ರತಿಸ್ಪರ್ಧೆ ತೀವ್ರಗೊಂಡಿತು , ಅಣುಬಾಂಬ್ , ಜಲಜನಕ ಬಾಂಬ್‌ಗಳ ಪರೀಕ್ಷೆ ಖಂಡಾಂತರ ಕ್ಷಿಪಣಿಗಳ ಪ್ರಯೋಗ ಶೀತಲ ಸಮರದ ತೀವ್ರತೆಯನ್ನು ಹೆಚ್ಚಿಸಿತು . ಬಾಹ್ಯಾಕಾಶ ಸಂಶೋಧನೆಯಲ್ಲಿಯೂ ಎರಡು ರಾಷ್ಟ್ರಗಳ ನಡುವೆ ಪೈಪೋಟಿ ಮುಂದುವರೆದು ರಷ್ಯಾ ಮೊದಲ ಉಪಗ್ರಹವನ್ನು ಉಡಹಿಸಿದ ಪರಿಣಾಮವಾಗಿ ಅಮೇರಿಕಾ ಚಂದ್ರನ ಅಂಗಳದಲ್ಲಿ ಮೊದಲ ಮಾನವನನ್ನು ಇಳಿಸಿತು .

2. ಎರಡನೇ ಬರ್ಲಿನ್ ಬಿಕ್ಕಟ್ಟನ್ನು ಕುರಿತು ಟಿಪ್ಪಣಿ ಬರೆಯಿರಿ .

ಎರಡನೇ ಬಾರಿ 1958 – 61 ರವರೆಗೆ ಎರಡನೇ ಬಾರಿ ಬರ್ಲಿನ್ ದಿಬ್ಬಂಧನ ( ಬಿಕ್ಕಟ್ಟು ) ಪ್ರಾರಂಭವಾಯಿತು . ಜರ್ಮನಿಗೆ ಸಂಬಂಧಿಸಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ರಷ್ಯಾದ ನಡುವಿನ ಸಂಬಂಧದಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ . 1958 ರಲ್ಲಿ ಎರಡನೇ ಬಾರಿ ಜರ್ಮನಿಯಲ್ಲಿ ಬರ್ಲಿನ್ ಬಿಕ್ಕಟ್ಟು ಉದ್ಭವಿಸಿತು . ಅಮೇರಿಕಾದ ಅಧ್ಯಕ್ಷ ಐಸೆನ್‌ಹೋವರ್‌ ಹಾಗೂ ರಷ್ಯಾದ ಅಧ್ಯಕ್ಷ ಕೃಶೇವ್‌ರವರ ಭೇಟಿಯೊಂದಿಗೆ ಶಮನಗೊಂಡಿತು . 1961 ರಲ್ಲಿ 25 ಮೈಲಿ ಉದ್ದದ ಬರ್ಲಿನ್ ಗೋಡೆಯನ್ನು ನಿರ್ಮಿಸಿ ಪೂರ್ವ ಜರ್ಮನಿಯಿಂದ ಪಶ್ಚಿಮ ಜರ್ಮನಿಗೆ ಜನರು ಪಲಾಯನ ಮಾಡದಂತೆ ಬೃಹತ್ ಗೋಡೆಯೇ ನಿರ್ಮಿಸಲಾಯಿತು .

3. ಶೀತಲ ಸಮರದ ಕಾರಣಗಳನ್ನು ವಿವರಿಸಿ .

ಶೀತಲ ಸಮರಕ್ಕೆ ಕಾರಣಗಳು ಈ ಕೆಳಕಂಡಂತಿವೆ :

ಇರಾನ್‌ನಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲು ರಷ್ಯಾದ ನಿರಾಕರಣೆ :

ರಷ್ಯಾ ಎರಡನೇ ಜಾಗತಿಕ ಯುದ್ಧದ ನಂತರವೂ ತನ್ನ ಸೈನ್ಯವನ್ನು ಇರಾನಿನಲ್ಲಿಯೇ ಇರಿಸಿದ್ದರಿಂದ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕಾಯಿತು . ವಿಶ್ವ ಸಂಸ್ಥೆಯಾದ ಒತ್ತಾಯಕ್ಕೆ ಮಣಿದು ರಷ್ಯಾ ಸೈನ್ಯ ಹಿಂತೆಗಿಸಿಕೊಂಡಿತಾದ್ದರೂ ಸಂಬಂಧ ಕಹಿಯಾಗಿಯು ಉಳಿದಿತ್ತು .

ಪೌರಾತ್ಯ ಯೂರೋಪಿನ ಸೋವಿಯತೀಕರಣ :

ಯಾಲ್ಟಾ ಮತ್ತು ಬಾಲ್ಕನ್ ಒಪ್ಪಂದಗಳನ್ನು ನೆರವೇರಿಸಲಿಲ್ಲವೆಂಬ ಆರೋಪ ರಷ್ಯಾದ ಮೇಲಿತ್ತು . ಯೂರೋಪಿನಲ್ಲಿ ರಷ್ಯಾದ ಹಸ್ತಕ್ಷೇತ್ರವನ್ನು ವಿರೋಧಿಸಿದ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮತ್ತು ಕಮ್ಯೂನಿಸಂ ಪ್ರಭಾವ ತಡೆಯುವ ಸಲುವಾಗಿ ಒಂದಾದವು .

ಗ್ರೀಸ್‌ನಲ್ಲಿ ಸೋವಿಯತ್ ಪ್ರಭಾವ :

ಗ್ರೀಸ್‌ನಲ್ಲಿ ಕಮ್ಯೂನಿಸ್ಟರು ಮತ್ತು ರಾಜತ್ವ ನಿಷ್ಠರ ಮಧ್ಯೆ ಸಂಘರ್ಷ ಉತ ಸೋವಿಯತ್ ಒಕ್ಕೂಟ ಗ್ರೀಸ್‌ನಲ್ಲಿ ಕಮ್ಯೂನಿಸ್ಟ್ ಕ್ರಾಂತಿಯನ್ನು ಪ್ರಚೋದಿಸುತ್ತಿದೆ . ಎಂದು ಪಾಶ್ಚಿಮಾತ್ಯ ಶಕ್ತಿಗಳು ಬಲವಾಗಿ ನಂಬಿದ್ದವು , ಗ್ರೀಸ್ ಅಮೇರಿಕಾದ ಬಲವನ್ನ ಕೋರಿತು . ಗ್ರೀಸ್‌ನಲ್ಲಿ ಕಮ್ಯೂನಿಸ್ಟ್ ಪ್ರಭಾವ ತಡೆಯುವ ಉದ್ದೇಶದಿಂದ ಗ್ರೀಸ್‌ಗೆ ಮಿಲಿಟರಿ ಮತ್ತು ಆರ್ಥಿಕ ನೆರವು ಘೋಷಿಸಿತು .

ಟರ್ಕಿಯಲ್ಲಿ ಸೋವಿಯತ್ ಪ್ರಭಾವ :

ಎರಡನೇ ಜಾಗತಿಕ ಯುದ್ಧ ನಂತರ ಸೋವಿಯತ್ ರಷ್ಯಾ , ಟರ್ಕಿಯು ತನ್ನ ಕೆಲವು ಪ್ರದೇಶಗಳನ್ನು ತನಗೆ ಬಿಟ್ಟು ಕೊಡಬೇಕೆಂದು ಟರ್ಕಿಯ ಮೇಲೆ ಒತ್ತಡ ಹೇರಿದಾಗ , ಟರ್ಕಿ , ಅಮೇರಿಕಾದ ನೆರವು ಬಯಸಿತು . ಅಮೇರಿಕಾ ಅಧ್ಯಕ್ಷ ಟ್ಯೂಮನ್ ತನ್ನ ಪ್ರಸಿದ್ಧ ‘ ಟ್ಯೂಮನ್ ನೀತಿ ‘ ಘೋಷಿಸಿ ರಷ್ಯಾ ಧಾಳಿ ಮಾಡುವುದನ್ನು ತಡೆಯಲು ಟರ್ಕಿಗೆ ಆರ್ಥಿಕ ಹಾಗೂ ಸೈನಿಕ ಸೈನ್ಯವನ್ನು ನೀಡಿತು .

ಜರ್ಮನರಿಗೆ ಸಂಬಂಧಿಸಿದ ಸಮಸ್ಯೆಗಳು :

ಎರಡನೇ ಜಾಗತಿಕ ಯುದ್ಧದಲ್ಲಿ ಜರ್ಮನಿಯಿಂದ ರಷ್ಯಾ ಜರ್ಮನಿಯ ಕೈಗಾರಿಕೆಗಳನ್ನೆಲ್ಲ ನಾಶ ಮಾಡಿಸದಲ್ಲದೆ ಬೆಲೆ ಬಾಳುವ ಜರ್ಮನ್ ಯಂತ್ರಗಳನ್ನು ರಷ್ಯಾಕ್ಕೆ ಕೊಂಡೊಯ್ದಿತು . ಇದರಿಂದಾಗಿ ಜರ್ಮನಿಯ ಅರ್ಥ ವ್ಯವಸ್ಥೆ ನಾಶವಾಯಿತು . ಜರ್ಮನ್ ಅರ್ಥ ವ್ಯವಸ್ಥೆಯ ಪುನರ್ ರಚನೆಗೆ ಬ್ರಿಟನ್ ಮತ್ತು ಅಮೇರಿಕ ಸಹಾಯ ಮಾಡಿತು .

ಅಣುಬಾಂಬ್ ರಹಸ್ಯ :

ಅಮೇರಿಕಾವು ರಷ್ಯಾದಿಂದ ಅಣ್ವಸ್ತ್ರ ತಂತ್ರಜ್ಞಾನ ಗೌಪ್ಯವಾಗಿಟ್ಟಿತು . ಸ್ಟಾಲಿನ್ ಈ ಬೆಳವಣಿಗೆಯನ್ನು ಅಮೇರಿಕ ತನಗೆ ಬಗೆದ ನಂಬಿಕೆ ದ್ರೋಹ ಎಂದು ಭಾವಿಸಿತು , ರಷ್ಯಾವು ತನ್ನ ರಕ್ಷಣೆಯ ಬಗ್ಗೆಯೂ ಚಿಂತಿಸುವಂತಾಯಿತು .

ಅಮೇರಿಕಾದಲ್ಲಿ ಕಮ್ಯೂನಿಸ್ಟ್ ಚಟುವಟಿಕೆಗಳು :

1945 ರಲ್ಲಿ ಅಮೇರಿಕಾದ ಭದ್ರತಾ ಸೇವಾ ವಿಭಾಗ ತಮ್ಮ ಅಣ್ವಸ್ತದ ದಾಖಲೆಗಳು ರಹಸ್ಯವಾಗಿ ರಷ್ಯಾಕ್ಕೆ ರವಾನೆಯಾಗುತ್ತಿರುವ ವಿಷಯ ಕಂಡುಕೊಂಡಿತು . ಅಮೇರಿಕಾದ ಕೆಲವು ಉನ್ನತಾಧಿಕಾರಿಗಳು ಅಣ್ವಸ್ತ್ರ ರಹಸ್ಯಗಳನ್ನು ಹಾಗೂ ಯುರೇನಿಯಂನ ಮಾದರಿಗಳನ್ನು ರಷ್ಯಾಕ್ಕೆ ಸೋರಿಕೆ ಮಾಡಿದರು .

4 ) ಶೀತಲ ಸಮರದ ಪರಿಣಾಮಗಳು ಯಾವುವು ?

ಶೀತಲ ಸಮರದ ಪರಿಣಾಮಗಳು ಇಂತಿವೆ –

1 ) ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಸೋವಿಯತ್ ಒಕ್ಕೂಟ ಅಣ್ವಸ್ತ್ರ ಮತ್ತು ಖಂಡಾಂತರ ಕ್ಷಿಪಣಿಗಳ ಬೃಹತ್ ಕೋಠಿಗಳನ್ನು ಸ್ಥಾಪಿಸಿಕೊಂಡವು .

2 ) ಸೈನಿಕ ಒಪ್ಪಂದಗಳಾದ ನ್ಯಾಟೋ ಮತ್ತು ವಾರ್ಸಾ ಅಸ್ಥಿತ್ವಕ್ಕೆ ಬಂದವು .

3 ) ಇದು ವಿಯಟ್ನಾಂ ಯುದ್ಧ ಮತ್ತು ಕೊರಿಯಾ ಯುದ್ಧಗಳಂತಹ ವಿನಾಶಕಾರಿ ಸಂಘರ್ಷಗಳಿಗೆ ಕಾರಣವಾಯಿತು .

4 ) ಆರ್ಥಿಕ ದುರ್ಬಲತೆಯಿಂದಾಗಿ ಸೋವಿಯತ್ ಒಕ್ಕೂಟ ಕುಸಿಯಿತು .

5 ) ಬರ್ಲಿನ್ ಗೋಡೆಯ ಧ್ವಂಸವು ಪೂರ್ವ ಜರ್ಮನಿ ಮತ್ತು ಪಶ್ಚಿಮ ಜರ್ಮನಿಯನ್ನು ಮಾರ್ತ ಒಂದುಗೂಡಿಸಿತು .

6 ) ವಾರ್ಸಾ ಒಪ್ಪಂದವು ವಿಸರ್ಜನೆಗೊಂಡಿತು .

7 ) ಬಾಲ್ಟಿಕ್ ರಾಷ್ಟ್ರಗಳು ಮತ್ತು ಕೆಲವು ಪೂರ್ವ ಸೋವಿಯತ್ ಗಣರಾಜ್ಯಗಳು ಸ್ವಾತಂತ್ರಗೊಂಡವು .

8 ) ಅಮೇರಿಕ ವಿಶ್ವದ ಏಕೈಕ ಬಲಿಷ್ಟ ಶಕ್ತಿಯಾಗಿ ಹೊರಹೊಮ್ಮಿತು .

9 ) ವಿಶ್ವದಾದ್ಯಂತ ಕಮ್ಯೂನಿಸಂ ಹಿನ್ನಡೆ ಕಂಡಿತು .

6 ) ರಷ್ಯಾದ ವಿಘಟನೆಗೆ ಕಾರಣವಾದ ಅಂಶಗಳು ಯಾವುವು ?

5 ) ಸಿ.ಐ.ಎಸ್.ನ ಗುರಿ ಮತ್ತು ಉದ್ದೇಶಗಳು ಯಾವುವು ?

ಸ್ವತಂತ್ರ ರಾಜ್ಯಗಳ ಕಾಮನ್‌ವೆಲ್ತ್ ಒಕ್ಕೂಟವನ್ನು ಬೆಲಾರಸ್ ಗಣರಾಜ್ಯ , ರಷ್ಯಾದ ಒಕ್ಕೂಟ ಮತ್ತು ಉಕ್ರೀನ್ ರಾಜ್ಯಗಳು ಸೇರಿ 1991 ರಲ್ಲಿ ರಚಿಸಿಕೊಂಡವು . ಇದರ ನಾಯಕರು ಬೆಲಾರಸ್‌ನಲ್ಲಿ ಸಭೆ ಸೇರಿ ಸ್ವತಂತ್ರ ರಾಜ್ಯಗಳ ಕಾಮನ್‌ವೆಲ್ತ್ ಒಕ್ಕೂಟವನ್ನು ಮಿಸ್ಸಿನಲ್ಲಿ ಸ್ಥಾಪಿಸಲು ನಿರ್ಧರಿಸಿ ಒಪ್ಪಂದಕ್ಕೆ ಸಹಿ ಹಾಕಿದರು .

ಸಿ.ಐ.ಎಸ್‌ನ ಉದ್ದೇಶಗಳು ಹಾಗೂ ಗುರಿಗಳು ಹೀಗಿವೆ

1 ) ಪ್ರತಿ ಸದಸ್ಯ ರಾಜ್ಯವು ಒಂದು ಸ್ವಾತಂತ್ರ್ಯ ಮತ್ತು ಸಾರ್ವಭೌಮ ರಾಷ್ಟ್ರ

2 ) ಪ್ರತಿಯೊಂದು ಗಣರಾಜ್ಯದ ಗಡಿಯನ್ನು ಮಾನ್ಯ ಮಾಡುವುದು .

3 ) ಗಣರಾಜ್ಯಗಳನ್ನು ಒಳಗೊಂಡಂತೆ ಒಂದು ಮುಕ್ತ ಮಾರುಕಟ್ಟೆ ವಲಯವನ್ನು ಸ್ಥಾಪಿಸುವುದು .

4 ) ಗಣರಾಜ್ಯಗಳ ಪ್ರಾತಿನಿಧ್ಯವಿರುವ ಸಂಯುಕ್ತ ರಕ್ಷಣಾ ಪಡೆಯೊಂದನ್ನು ರಚಿಸುವುದು .

5 )ಗಡಿ ಉಲ್ಲಂಘಿತ ಅಪರಾಧಗಳನ್ನು ನಿಯಂತ್ರಿಸಲು ಸಹಕಾರ ಬೆಳೆಸುವುದು .

6) ಸದಸ್ಯ ರಾಜ್ಯಗಳ ಪ್ರದೇಶಗಳಲ್ಲಿ ಸಶಸ್ತ್ರ ಹೋರಾಟವನ್ನು ತಡೆಗಟ್ಟುವುದು .

7 ) ಸದಸ್ಯ ರಾಜ್ಯಗಳ ಆರ್ಥಿಕ ಮತ್ತು ವಿದೇಶಿ ನೀತಿಗಳನ್ನು ಸಂಘಟಿಸುವುದು .

6. ರಷ್ಯಾದ ವಿಘಟನೆಗೆ ಕಾರಣವಾದ ಅಂಶಗಳೆಂದರೆ :

1) ವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅತಿಯಾದ ನಿರ್ಬಂಧ

2 ) ಜನರಲ್ಲಿ ಸಮಾನತೆ ಮೂಡಿಸುವಲ್ಲಿ ವಿಫಲತೆ

3 ) ರಕ್ಷಣಾ ಉದ್ದಿಮೆಗೆ ಅತಿ ಹೆಚ್ಚಿನ ಪ್ರಾಶಸ್ಯ

4 )ಕೃಷಿಯ ಕಡೆಗಣನೆ .

5 ) ಉಕ್ಕಿನ ಪರದೆ ನೀತಿ

6 ) ಗೊರ್ಬಚೇವ್‌ ಜಾರಿಗೊಳಿಸಿದ ಉದಾರ ನೀತಿಗಳು

7 ) ಸಾಂಸ್ಕೃತಿಕ ಮತ್ತು ಜನಾಂಗೀಯ ಗುಂಪುಗಳ ನಡುವಿನ ಸಂಘರ್ಷ

7 . ಬರ್ಲಿನ್ ದಿಬ್ಬಂಧನ ಕುರಿತು ಟಿಪ್ಪಣಿ ಬರೆಯಿರಿ.

1949 ರಲ್ಲಿ ರಷ್ಯಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವಣ ಶೀತಲ ಸಮರಣ ಜಾಗತಿಕ ಯುದ್ಧದ ನಂತರ ಜರ್ಮನಿಯನ್ನು ಪೂರ್ವ ಮತ್ತು ಪಶ್ಚಿಮ ಜರ್ಮನಿ ಇದರಿಂದಾಗಿ ರಷ್ಯಾದ ಅಧ್ಯಕ್ಷ ಸ್ಟಾಲಿನ್ ಬರ್ಲಿನ್‌ನ್ನು ಸಂಪೂರ್ಣವಾಗಿ ದಿಬ್ಬಂದಿಸಿ ಪಶ್ಚಿಮ ಜರ್ಮನಿ ಹಾಗೂ ಬರ್ಲಿನ್ ನಡುವಿನ ಭೂ ಮತ್ತು ಸಮುದ್ರಮಾರ್ಗಗಳನ್ನು ಕಡಿದು ಹಾಕಿದನು . ಕೇವಲ ಮೂರು ದಾರಿಗಳು ಆಗಮನ – ನಿರ್ಗಮನಕ್ಕೆ ಅವಕಾಶವಿತ್ತು . ಹನ್ನೊಂದು ತಿಂಗಳ ನಂತರ ಈ ದಿಗ್ಧಂಧನ ಹಿಂತೆಗೆದುಕೊಳ್ಳಲಾಗಲಿಲ್ಲ . ಈ ಘಟನೆಯನ್ನು ಬರ್ಲಿನ್‌ನ ಮೊದಲ ದಿಗಂಧನ ಆಗಿದೆ ‘ ಬರ್ಲಿನ್ ಬಿಕ್ಕಟ್ಟು ‘ ಎಂದು ಕರೆಯಲಾಗಿದೆ .

History Notes 1st Puc Kannada Medium

IV . ಕೆಳಗಿನವುಗಳಿಗೆ 30-40 ವಾಕ್ಯಗಳಲ್ಲಿ ಉತ್ತರಿಸಿ :

1 ) .ಪ್ರಾದೇಶಿಕ ಸೈನಿಕ ಒಪ್ಪಂದಗಳನ್ನು ವಿವರಿಸಿ ?

1 ) ನ್ಯಾಟೋ ( ನಾರ್ತ್ ಅಟ್ಲಾಂಟಿಕ್ ಟ್ರೇಟಿ ಆರ್ಗನೈಜೇಷನ್ – 1949 ) :

ನ್ಯಾಟೋ ” ವಾಷಿಂಗಟನ್‌ನಲ್ಲಿ 1949 ರಲ್ಲಿ ಸ್ಥಾಪನೆಗೊಂಡಿತು . ರಷ್ಯಾ ವಿರುದ್ಧ ಅಮೇರಿಕಾ ನಾಯಕತ್ವದಲ್ಲಿ 15 ರಾಷ್ಟ್ರಗಳು ರಚಿಸಿಕೊಂಡ ಸೈನಿಕ ಒಪ್ಪಂದವಾಗಿದೆ . ರಷ್ಯಾ ವಿರುದ್ಧ ಅಮೇರಿಕಾ ನಾಯಕತ್ವದಲ್ಲಿ 15 ರಾಷ್ಟ್ರಗಳು ರಚಿಸಿಕೊಂಡ ಸೈನಿಕ ಒಪ್ಪಂದವಾಗಿದೆ . ನ್ಯಾಟೋದ ಸದಸ್ಯ ರಾಷ್ಟ್ರಗಳೆಂದರೆ – ‘ ಅಮೇರಿಕ , ಬ್ರಿಟನ್ , ಫ್ರಾನ್ಸ್ ಐಸ್‌ಲ್ಯಾಂಡ್ , ಜರ್ಮನಿ , ಗ್ರೀಸ್ ಮತ್ತು ಟರ್ಕಿ , ಹಂಗೇರಿ , ಪೋಲೆಂಡ್ ( ಪ್ರಸ್ತುತ ಬೆಲ್ಲಿಯಂ , ಕೆನಡಾ , ಪೋರ್ಚುಗಲ್ , ಲಕ್ಷಂಬರ್ಗ್ , ಇಟಲಿ , ನಾರ್ವೆ , ಡೆನ್ಮಾರ್ಕ್ , ನ್ಯಾಟೋ ಸದಸ್ಯರ ಸಂಖ್ಯೆ 27 ) .

ಇದರ ಕೇಂದ್ರ ಕಛೇರಿ ಪ್ಯಾರಿಸ್‌ನಲ್ಲಿದೆ .

2 ) ಸಿಯಾಟೋ ( ಮನಿಲಾ ಒಪ್ಪಂದ – 1954 ) ( ಸೌತ್ ಈಸ್ಟ್ ಏಷ್ಯಾ ಟೀಟಿ ಆರ್ಗನೈಜೇಷನ್ ) :

ಇದು ಕಮ್ಯೂನಿಸಂ ಪ್ರಸರಣದ ಭಯದಿಂದ ಹುಟ್ಟಿಕೊಂಡ ಒಪ್ಪಂದವಾಗಿದೆ . 1954 ರಲ್ಲಿ ಫಿಲಿಪೀನ್ಸ್‌ನ ರಾಜಧಾನಿ ಮನಿಲಾದಲ್ಲಿ ಸಭೆ ಸೇರಿ ಆನ್ನೇಯ ಏಷ್ಯಾದ ಹಿತದೃಷ್ಟಿಯಿಂದ ಒಪ್ಪಂದಕ್ಕೆ ಸಹಿ ಹಾಕಿದವು . ಇದರ ಮುಖ್ಯ ಉದ್ದೇಶ ಕಮ್ಯೂನಿಸ್ಟ್ ಅತಿಕ್ರಮಣವನ್ನು ತಡೆಯಲು ಮುಂಜಾಗ್ರತೆ ವಹಿಸುವುದಾಗಿತ್ತು . ವಿಯಟ್ನಾಂ ಯುದ್ಧದಲ್ಲಿ ` ಅಮೇರಿಕಾ ತನ್ನ ಘನತೆಯನ್ನು ಕಳೆದುಕೊಳ್ಳುವುದರೊಂದಿಗೆ ಸಿಯಾಟೊ ಒಪ್ಪಂದವನ್ನು 1975 ರಲ್ಲಿ ವಿಸರ್ಜಿಸಲಾಯಿತು .

3 ) ಅಂಜುಸ್ ಒಪ್ಪಂದ – 1951 :

ಇದು ಆಸ್ಟ್ರೇಲಿಯಾ , ನ್ಯೂಜಿಲ್ಯಾಂಡ್ ಮತ್ತು ಅಮೇರಿಕಾಗಳು ಒಳಗೊಂಡ ಸೈನಿಕ ಒಪ್ಪಂದವಾಗಿತ್ತು . ಇದರ ಪ್ರಕಾರ ಯಾವುದೇ ( ಈ ಮೂರು ದೇಶಗಳಲ್ಲಿ ಯುದ್ಧ ಬಂದರು ಒಬ್ಬರಿಗೊಬ್ಬರು ಸಹಕರಿಸಬೇಕೆಂದಾಗಿತ್ತು .

4 ) ಸೆಂಟೋ ಅಥವಾ ಬಾಗ್ದಾದ್ ಒಪ್ಪಂದ ( 1955 ) ( ಸೆಂಟ್ರೆಲ್ ಟೀಟಿ ಆರ್ಗನೈಜೇಷನ್ ) :

ಬಾಗ್ದಾದ್ ಒಪ್ಪಂದಕ್ಕೆ 1955 ರಲ್ಲಿ ಸಹಿ ಹಾಕಲಾಯಿತು . ಇದರ ಸಂಗಟನೆಯ ನೇತೃತ್ವವನ್ನು ಇಂಗ್ಲೆಂಡ್ ವಹಿಸಿಕೊಂಡಿತು . ಇರಾಕ್ ಮತ್ತು ಟರ್ಕಿ ಇದರ ಸದಸ್ಯ ರಾಷ್ಟ್ರಗಳೆನಿಸಿದ ನಂತರ ಇಂಗ್ಲೆಂಡ್ , ಪಾಕಿಸ್ತಾನ ಮತ್ತು ಇರಾನ್ ಸೇರಿಕೊಂಡವು ಇರಾಕಿನ ಅಧ್ಯಕ್ಷ ಕರೀಂಖಾಸಿಂ ಇದನ್ನು 1958 ರಲ್ಲಿ ತಿರಸ್ಕರಿಸಿದನು , ಸೆಂಟೋ ವಿಫಲವಾಗುವಾಗಿ ರಷ್ಯಾ ವಿಸ್ತರಣೆ ತಡೆಯುವಲ್ಲಿ ಸೋತಿತು .

5 ) ವಾರ್ಸಾ ಒಪ್ಪಂದ : ( 1955-1991 )

1955 ರಲ್ಲಿ ರಷ್ಯಾವು ನ್ಯಾಟೋ ಒಪ್ಪಂದಕ್ಕೆ ವಿರುದ್ಧವಾಗಿ ಪೂರ್ವ ಯೂರೋಪನ ದೇಶಗಳಾದ ಬಲ್ಲೇರಿಯಾ , ಹಂಗೇರಿ , ಪೂರ್ವ ಜರ್ಮನಿ , ಹಸ್ತೋಪಯ ರುಮೇನಿಯಾ ಮತ್ತು ಪೋಲೆಂಡ್‌ನೊಂದಿಗೆ ಪಾರ್ಸ ಒದವನ್ನು ಮಾಡಿಕೊಂಡ ವಾರ್ಸಾ ಪೋಲೆಂಡಿನ ರಾಜಧಾನಿಯಾಗಿದೆ . ವಾರ್ಸಾ ಒಪ್ಪಂದದಿಂದಾಗಿ ರಷ್ಯಾ ಮತ್ತು ಅಮೇರಿಕ ಪಡುವಿಗೆ ಪ್ರತಿಸ್ಪರ್ಧಿ ತೀವ್ರಗೊಂಡಿತು . ಅಣುಬಾಂಬ್ , ಜಲಜನಕ ಬಾಂಬ್‌ಗಳ ಪರೀಕ್ಷೆ ಮತ್ತು ಕ್ಷಿಪಣಿಗಳ ಪ್ರಯೋಗ ಶೀತಲ ಸಮರದ ತೀವ್ರತೆಯನ್ನು ಹೆಚ್ಚಿತು . ಬಾಹ್ಯಾಕಾಶ ಸಂಶೋಧನಮೆಯಲ್ಲಿಯೂ ಎರಡೂ ರಾಷ್ಟ್ರಗಳ ನಡುವೆ ಮೈಸೋಟ ಮುಂದುವರಿದು ರಷ್ಯಾ ಮೊದಲ ಉಪಗ್ರಹವನ್ನು ಉಡಾಯಿಸಿದರೆ ಪ್ರತಿಯಾಗಿ , ಅಮೇರಿಕಾವು , ಚಂದನ ಅಂಗಳದಲ್ಲಿ ಮೊದಲ ಮಾನವನನ್ನು ಇಳಿಸಿತು .

2. ಸೋವಿಯತ್ ಒಕ್ಕೂಟದ ವಿಘಟನೆಗೆ ಗೊರ್ಬಚೇವ್ ಹೇಗೆ ಕಾರಣರಾಗಿದ್ದಾರೆ ? ವಿವರಿಸಿ .

1885 ರಲ್ಲಿ ಮಿಖಾಯಿಲ್ ಗೊರ್ಬಚೇವ್ ರಷ್ಯಾದ ಅಧ್ಯಕ್ಷರಾದರು . ಈ ಸಮಯದಲ್ಲಿರಷ್ಯಾದ ಅರ್ಥ ವ್ಯವಸ್ಥೆ ಸ್ಥಗಿತಗೊಂಡಿತು . ವಿದೇಶಿ ವಿನಿಮಯ ತೀವ್ರವಾಗಿ ಯತೊಡಗಿತು . ರಾಷ್ಟ್ರವನ್ನು ಸುಧಾರಿಸಲು ಕ್ರಮಕೈಗೊಳ್ಳುವಂತೆ ಗೋಬಚೇವ್ ಇಾಸ್‌ನಾಸ್ಟ್ ‘ ( ಮುಕ್ತನೀತಿ ) ಎಂಬ ಸುಧಾರಣೆಗಳನ್ನು ಪ್ರಕಟಿಸಿದನು . ಸಓವಿಯತ್ ಪ್ರಯತ್ನಿಸಿದರು . 1987 ರ ಜೂನ್‌ನಲ್ಲಿ ಪರಿಸ್ಟೋಯಿಕ ( ಪುನರ್‌ರಚನೆ ) ಮತ್ತು ಒಕ್ಕೂಟವು ಕುಸಿತದ ಅಂಚಿನಲ್ಲಿ ಇದ್ದುದರಿಂದ , ಬಲಹೀನವಾಗುತ್ತಿದ್ದ ವಾರ್ಸಾ ರಾಷಗಳ ಕಮ್ಯೂನಿಸ್ಟ್ ನಾಯಕರು ಸೋವಿಯತ್ ಸೈನಿಕ ಬೆಂಬಲದಿಂದ ವಂಚಿತರಾದರು . – ಹೀಗಾಗಿ ಕಮ್ಯೂನಿಸ್ಟ್ ಪಕ್ಷವು ತನ್ನ 73 ವರ್ಷಗಳ ಏಕ ಸ್ವಾಮ್ಯತ್ವವನ್ನು ಬಿಟ್ಟು ಕೊಡಬೇಕಾಯಿತು . ಇದರಿಂದಾಗಿ ರಷ್ಯಾ ಗಣರಾಜ್ಯ 1991 ರಂದು ಡಿಸಂಬರ್ 25 ರಂದು ಅಧಿಕೃತವಾಗಿ ವಿಭಜಿತವಾಯಿತು .

ಗೊರ್ಬೆಚೇವ್ ಸಮಾಜ ಮತ್ತು ಅರ್ಥವ್ಯವಸ್ಥೆಯನ್ನು ಪುನರ್ ರಚಿಸಲು ಉದಾರನೀತಿಯನ್ನು ಅನುಸರಿಸಿದರು . ಇವರು ಸಮಾಜವಾದಕ್ಕೆ ಹೊಸ ಮುಖ ಮತ್ತು ಪ್ರಜಾಪ್ರಭುತ್ವವಾದಿ ಸ್ವರೂಪವನ್ನು ನೀಡಲು ಪ್ರಯತ್ನಿಸಿದರು . ಅವರು ಎಲ್ಲಾ ಧರ್ಮಗಳ ಜನರಿಗೆ ಧಾರ್ಮಿಕ ಸ್ವಾತಂತ್ರ್ಯದ ಭರವಸೆ ನೀಡಿದರು . ಮಾನವೀಯ ಹಕ್ಕುಗಳ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ ದೇಶವನ್ನು ಹಂತ ಹಂತವಾಗಿ ಸೈನಿಕ ಮುಕ್ತವನ್ನಾಗಿಸುವ ಕಡೆಗೆ ಗಮನಹರಿಸಿದರು .

ಗೊರ್ಬಚೇವ್‌ನ ನೀತಿಗಳನ್ನು ಅವನ ಅಧಿಕಾರವನ್ನು ಉಗ್ರವಾಗಿ ಟೀಕಿಸುವ ದೊಡ್ಡ ವಿರೋಧಿ ಬಣ ಹುಟ್ಟಿಕೊಂಡಿತು . 1989 ರಲ್ಲಿ ಸೋವಿಯನ್ ಪಾರ್ಲಿಮೆಂಟಿನಲ್ಲಿ 368 ಸದಸ್ಯರ ವಿರೋಧಿ ಬಣ ರಚಿತವಾಯಿತು .

ಗೊರ್ಬಚೇವ್ ತನ್ನ ಉದಾರನೀತಿಯೊಂದಿಗೆ ಸ್ಟಾಲಿನ್ನನ ‘ ಉಕ್ಕಿನ ಪರದೆ’ಯ ಚಿತ್ರಣವನ್ನು ಬದಲಾಯಿಸಲು ಪ್ರಯತ್ನಿಸಿದವು ಸೋವಿಯತ್ ಒಕ್ಕೂಟದ ವಿಘಟನೆಗೆ ಕಾರಣವಾಯಿತು .

12 ಸೋವಿಯತ್ ಗಣರಾಜ್ಯಗಳ ನಾಯಕರಲ್ಲಿ ಜನ ಅಲ್ಮಾ – ಆಲಾ ಎಂಬಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು . ಸೋವಿಯತ್ ಒಕ್ಕೂಟ ವಿಘಟನೆ ಸಾರಿತು . ಗೊರ್ಬಚೇವ್‌ನನಿಂದ ಬಲವಂತವಾಗಿ 1991 ರಲ್ಲಿ ರಾಜಿನಾಮೆ ಇದರ ಪರಿಣಾಮವಾಯಿತು . ಸೋವಿಯತ್ ಒಕ್ಕೂಟದ ವಿಘಟನೆಗೆ ಗೊರ್ಬಚೇವ್ ಪರೋಕ್ಷವಾಗಿ ಕಾರಣರಾಗಿದ್ದಾರೆ .

FAQ:

SEATO ವಿಸ್ತರಿಸಿ :

ಸಿಯಾಟೋ – ಸೌತ್ ಈಸ್ಟ್ ಏಷ್ಯಾ ಟೀಟಿ ಆರ್ಗನೈಜೇಷನ್

ಶೀತಲ ಸಮರ ಯಾವ ವರ್ಷ ಕೊನೆಗೊಂಡಿತು ?

1991 ರಲ್ಲಿ

NATO ವಿಸ್ತರಿಸಿ?

ನ್ಯಾಟೋ – ನಾರ್ತ್ ಅಟ್ಲಾಂಟಿಕ್ ಟ್ರೇಟಿ ಆರ್ಗನೈಜೇಷನ್

ಇತರೆ ವಿಷಯಗಳು :

1st PUC History Notes

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *

rtgh