ಪ್ರಥಮ ಪಿ.ಯು.ಸಿ 12 ಅಲಿಪ್ತ ಚಳುವಳಿ – ತೃತೀಯ ಜಗತ್ತಿನ ಉದಯ ನೋಟ್ಸ್‌ | 1st Puc History Chapter 12 Notes Question Answer

ಪ್ರಥಮ ಪಿ.ಯು.ಸಿ ಅಲಿಪ್ತ ಚಳುವಳಿ – ತೃತೀಯ ಜಗತ್ತಿನ ಉದಯ ನೋಟ್ಸ್‌ 1st Puc History Chapter 12 Notes Question And Answer In Kannada Medium Karnataka First puc Alipta Chaluvali Murane Jagattina Udaya notes question answer kseeb solutions 1st puc kannada Non-Aligned Movements Rise of the Third World

1st puc history chapter 12 question answer in kannada

 1st Puc History Chapter 12 Notes Question Answer
1st Puc History Chapter 12 Notes Question Answer

1. ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿರಿ :

1 ) ಅಲಿಪ್ತ ರಾಷ್ಟ್ರಗಳ ಮೊದಲ ಸಮ್ಮೇಳನ ಎಲ್ಲಿ ನಡೆಯಿತು ?

ಯುಗೋಸ್ಲಾವಿಯಾದ ರಾಜಧಾನಿ ಬೆಲ್ಗ್ರೇ ಡನಲ್ಲಿ ನಡೆಯಿತು .

2 ) ಬಾಂಡುಂಗ್ ಸಮ್ಮೇಳನ ನಡೆದ ವರ್ಷ ಯಾವುದು ?

1955 ರಲ್ಲಿ

3 ) ಬಾಂಡುಂಗ್ ಸಮ್ಮೇಳನದಲ್ಲಿ ಭಾಗವಹಿಸಿದ ಭಾರತೀಯ ಪ್ರಧಾನಿ ಯಾರು ?

ಜವಾಹರಲಾಲ್ ನೆಹರು .

4 ) ಬೆಲ್ಗ್ರೇಡ್ ಸಮ್ಮೇಳನ ನಡೆದ ವರ್ಷ ಯಾವುದು ?

1961 ರಲ್ಲಿ

5 ) ‘ ಅಲಿಪ್ತ ‘ ಎಂಬ ಪದವನ್ನು ಮೊದಲ ಬಳಸಿದವರು ಯಾರು ?

ವಿ.ಕೆ.ಕೃಷ್ಣಮೆನನ್‌ರವರು .

6 ) ಬಾಂಡುಂಗ್ ಸಮ್ಮೇಳನದಲ್ಲಿ ಭಾಗವಹಿಸಿದ ಇಂಡೋನೇಷ್ಯಾದ ಅಧ್ಯಕ್ಷ ಯಾರು ?

ಇಂಡೋನೇಷ್ಯಾದ ಅಧ್ಯಕ್ಷ , ‘ ಅಹಮ್ಮದ್ ಸುಕರ್ನೊ ‘

7 ) ಬಾಂಡುಂಗ್ ಸಮ್ಮೇಳನದಲ್ಲಿ ಭಾಗವಹಿಸಿದ ಈಜಿಪ್‌ನ ಅಧ್ಯಕ್ಷನನ್ನು ಹೆಸರಿಸಿ ,

ಗಮಾಲ್ ಅಬ್ದುಲ್ ನಾಸೆಕ್

8 ) ದೆಹಲಿಯಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಮ್ಮೇಳನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?

ಶ್ರೀಮತಿ ಇಂದಿರಾ ಗಾಂಧಿ ,

9 ) ಅಲಿಪ್ತ ಚಳುವಳಿ ಎಂದರೇನು ?

ತಟಸ್ಥರಾಗಿರುವುದು , ಎರಡು ಬಲಿಷ್ಟ ಶಕ್ತಿ ಬಣಗಳ ದಬ್ಬಾಳಿಕೆಯನ್ನು ಶಾಂತಿಯುತವಾಗಿ ಪ್ರತಿಭಟಿಸುವುದು ಎಂಬ ಅರ್ಥ ನೀಡುತ್ತದೆ .

10 ) ನೆಹರು ದೃಷ್ಟಿಯಲ್ಲಿ ಅಲಿಪ್ತ ಚಳುವಳಿ ಎಂದರೇನು ?

ನೆಹರು ದೃಷ್ಟಿಯಲ್ಲಿ ಅಲಿಪ್ತ ಚಳುವಳಿ ಶಸ್ತ್ರಾಸ್ತ್ರಗಳ ಬಲ ಪ್ರಯೋಗವಿಲ್ಲದೆ ಶಾಂತಿ , ಸೌಹಾರ್ದಯುತವಾಗಿ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಾಗಿದೆ .

1st puc history notes in kannada chapter 12

II . ಕೆಳಗಿನವುಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ :

1 ) ಬಾಂಡುಂಗ್ ಸಮ್ಮೇಳನ ನಡೆದ ವರ್ಷ ಯಾವುದು ? ಮತ್ತು ಅದರ ಅಧ್ಯಕ್ಷರು ಯಾರು ?

ಬಾಂಡುಂಗ್ ಸಮ್ಮೇಳನದಲ್ಲಿ ನಡೆದ ವರ್ಷ 1955 ರಲ್ಲಿ ನಡೆಯಿತು . ಇಂಡೋನೇಷಿಯಾದ ಅಧ್ಯಕ್ಷ ಅಹಮ್ಮದ್ ಸುಕರ್ನೊರವರು ಅಧ್ಯಕ್ಷತೆಯನ್ನು ವಹಿಸಿದ್ದರು .

2) ಅಲಿಪ್ತ ರಾಷ್ಟ್ರಗಳ 8 ನೇ ಸಮ್ಮೇಳನ ಎಲ್ಲಿ ನಡೆಯಿತು ?

ಅಲಿಪ್ತ ರಾಷ್ಟ್ರಗಳ 8 ನೇ ಸಮ್ಮೇಳನ ಹರಾರೆಯಲ್ಲಿ ನಡೆಯಿತು . ಇದರ ಅಧ್ಯಕ್ಷರು ಭಾರತದ ಪ್ರಧಾನಿ ‘ ರಾಜೀವಗಾಂಧಿಯವರು ‘ .

3 ) ಅಲಿಪ್ತ ರಾಷ್ಟ್ರಗಳ 9 ನೇ ಸಮ್ಮೇಳನ ಎಲ್ಲಿ ನಡೆಯಿತು ? ಅದರಲ್ಲಿ ಭಾಗವಹಿಸಿದ ಭಾರತದ ಪ್ರಧಾನಿಯನ್ನು ಹೆಸರಿಸಿ .

ಅಲಿಪ್ತ ರಾಷ್ಟ್ರಗಳ 9 ನೇ ಸಮ್ಮೇಳನ ಯುಗೋಸೋವಿಯಾದ ಬೆಲ್ಗ್ರೇಡ್ ನಲ್ಲಿ ನಡೆಯಿತು . ಆಗ ಭಾಗವಹಿಸಿದ ಪ್ರಧಾನ ಮಂತ್ರಿ ರಾಜೀವ್‌ಗಾಂಧಿ

4 ) ಬಾಂಡುಂಗ್ ಸಮ್ಮೇಳನದ ಇಬ್ಬರು ನಾಯಕರನ್ನು ಹೆಸರಿಸಿ .

ಬಾಂಡುಂಗ್ ಸಮ್ಮೇಳನದ ಅಧ್ಯಕ್ಷ ಜೋಸೆಫ್‌ ಬ್ರಾಚ್ ಟೆಟೋ ಹಾಗೂ ಈಜಿಪ್ತಿನ ಅಧ್ಯಕ್ಷ ‘ ಗಮಾಲ್ ಅಬ್ದುಲ್ ನಾಸೆರ್’ರವರು .

5 ) ಅಲಿಪ್ತ ಚಳುವಳಿಯ ಬಣದ ತ್ರಿಮೂರ್ತಿಗಳೆಂದು ಯಾರನ್ನು ಕರೆಯಲಾಗಿದೆ ?

ಚಳುವಳಿಯ ಬಣದ ತ್ರಿಮೂರ್ತಿಗಳೆಂದರೆ ಪ್ರಖ್ಯಾತರಾದವರು

1 ) ಜೊಸಿಫ್ ಬಾಜ್ ಬಿಟೋ

2 ) ಜವಾಹರಲಾಲ್ ನೆಹರು

3 ) ಗಮಾಲ್‌ ಅಬ್ದುಲ್ ನಾಸೀರ್

6 ) ಬೆಲ್ಗ್ರೇಡ್ ಸಮ್ಮೇಳನವು ನಡೆದ ವರ್ಷ ಯಾವುದು ಮತ್ತು ಅದರ ಅಧ್ಯಕ್ಷರು ಯಾರು?

ಬೆಲ್ಗ್ರೇಡ್ ಸಮ್ಮೇಳನವು 1961 ರಲ್ಲಿ , ಯೂ ಸ್ಥಾವಿಯಾದ ಅಧ್ಯಕ್ಷ ಜೋಫ್ , ಬಾಜ್‌ಟಿಟೋ ರವರು ಅಧ್ಯಕ್ಷತೆಯನ್ನು ವಹಿಸಿದ್ದರು .

7) ‘ ಅಲಿಪ್ತ ‘ ಎಂಬ ಪದವನ್ನು ಮೊದಲ ಬಳಸಿದವರು ಯಾರು ? ಮತ್ತು ವರ್ಷ ಯಾವುದು ?

ಅಲಿಪ್ತ ಎಂಬ ಪದವನ್ನು ಮೊದಲು ಬಳಸಿದವರು “ 1953 ರಲ್ಲಿ ವಿ.ಕೆ.ಕೃಷ್ಣ ಮೆನನ್‌ರವರು ವಿಶ್ವ ಸಂಸ್ಥೆಯ ಭಾಷಣವೊಂದರಲ್ಲಿ ಬಳಸಿದರು .

8 ) ಅಲಿಪ್ತ ಚಳುವಳಿಯ ಎರಡು ತತ್ವಗಳನ್ನು ತಿಳಿಸಿ ,

ಅಲಿಪ್ತ ಚಳುವಳಿಯ ಎರಡು ತತ್ವಗಳೆಂದರೆ –

1 ) ಪರಸ್ಪರ ರಾಷ್ಟ್ರಗಳ ಪ್ರಾದೇಶಿಕ ಏಕತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುವುದು .

2 ) ಪರಸ್ಪರರ ಮೇಲೆ ಆಕ್ರಮಣ ಮಾಡದಿರುವುದು .

9 ) ಅಲಿಪ್ತ ಚಳುವಳಿ ಯಾವ ಸ್ಥಳದಿಂದ ಆರಂಭವಾಯಿತು ? ಯಾವಾಗ ?

ಅಲಿಪ್ತ ಚಳುವಳಿಯು 1961 ರಲ್ಲಿ ಯುಗೋಸ್ತೋವಿಯಾದ ರಾಜಧಾನಿ ಬೆಲ್ಗಡ್‌ನಲ್ಲಿ ಆರಂಭವಾಯಿತು . ಆದರೆ 1947 ರ ದೆಹಲಿ ಹಾಗೂ ಬಾಂಡುಂಗ್ ಸಮ್ಮೇಳನಗಳು ಅಲಿಪ್ತ ಚಳುವಳಿಗೆ ನಾಂದಿಯಾಗಿದ್ದವು .

10 ) ಅಲಿಪ್ತ ರಾಷ್ಟ್ರಗಳ ಮೊದಲ ಸಮ್ಮೇಳನ ಯಾವಾಗ ನಡೆಯಿತು ? ಅದರ ಅಧ್ಯಕ್ಷರು ಯಾರು ?

ಅಲಿಪ್ತ ಚಳುವಳಿಗಳು ಆರಂಭವಾಗಿದ್ದು 1961 ರಲ್ಲಿ ಯುಗೋಸ್ತೋವಿಯಾದ ರಾಜಧಾನಿ ಬೆಲೈಡ್‌ನಲ್ಲಿ ಆರಂಭವಾಯಿತು . ಆಗ ಇದರ ಅಧ್ಯಕ್ಷರು ಯುಗೋಸ್ತೋವಿಯಾದ ಅಧ್ಯಕ್ಷ ಜೊಸೆಫ್ ಬ್ರಾಜ್ ಟೇಟೋ .

11 ) ಜವಹಾರಲಾಲ್ ನೆಹರು ಅಲಿಪ್ತ ಎಂಬ ಪದವನ್ನು ಬಳಸಿದ್ದು ಎಲ್ಲಿ ಮತ್ತು ವರ್ಷ ಯಾವುದು ?

1954 ರಲ್ಲಿ ಕೊಲಂಬೊದಲ್ಲಿ ಮಾಡಿದ ಭಾಷಣದಲ್ಲಿ

12 ) ಅಲಿಪ್ತ ರಾಷ್ಟ್ರಗಳ 7 ನೇ ಸಮ್ಮೇಳನ ನಡೆದ ವರ್ಷ ಯಾವುದು ? ಎಲ್ಲಿ ?

ಅಲಿಪ್ತ ರಾಷ್ಟ್ರಗಳ 7 ನೇ ಸಮ್ಮೇಳನ ನಡೆದ ವರ್ಷ 1983 ರಲ್ಲಿ ಭಾರತ ದೇಶದ ದೆಹಲಿಯಲ್ಲಿ ನಡೆಯಿತು .

1st puc history chapter 12 Alipta Chaluvali Tritiya Jagattina Odeya notes question answer

III . ಕೆಳಗಿನವುಗಳಿಗೆ 15 -20 ವಾಕ್ಯದಲ್ಲಿ ಉತ್ತರಿಸಿರಿ :

1 ) ಅಲಿಪ್ತ ಚಳುವಳಿಯ ಲಕ್ಷಣಗಳನ್ನು ವಿವರಿಸಿ :

ಅಲಿಪ್ತ ಚಳುವಳಿಯ ಲಕ್ಷಣಗಳೆಂದರೆ :

1 ) ಆರ್ಥಿಕವಾಗಿ ಹಿಂದುಳಿದಿರುವುದು : ಈ ರಾಷ್ಟ್ರಗಳು ಆರ್ಥಿಕವಾಗಿ ಹಿಂದುಳಿಯಲು ಸಾಂಪ್ರದಾಯಿಕ ಕೃಷಿ ಮತ್ತು ದುರ್ಬಲ ಕೈಗಾರಿಕೆಗಳನ್ನು ಹೊಂದಿರುವುದು , ರಾಷ್ಟ್ರೀಯ ಆದಾಯ ಹಾಗೂ ತಲಾ ಆದಾಯ ಅತ್ಯಂತ ಕಡಿಮೆಯಾಗಿರುವುದು .

2 ) ಪರಾವಲಂಬನ : ವಿಜ್ಞಾನ , ತಂತ್ರಜ್ಞಾನ , ಸೈನಿಕ ಕ್ಷೇತ್ರಗಳಲ್ಲಿ ಅಭಿಪ್ತ ರಾಷ್ಟ್ರಗಳು ತೀರಾ ಹಿಂದುಳಿದಿದ್ದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಹಾಯದ ಮೇಲೆ ಅವಲಂಬಿತವಾಗಿದೆ .

3 ) ಗ್ರಾಮೀಣ ವ್ಯವಸ್ಥೆ : ಅಲಿಪ್ತ ರಾಷ್ಟ್ರಗಳು ಬಹುತೇಕ ಹಳ್ಳಿಗಳಿಂದ ಕೂಡಿವೆ . ಇವು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ .

4 ) ಅತ್ಯಧಿಕ ಜನಸಂಖ್ಯೆ : ಬಡತನ , ಅನಕ್ಷರತೆ , ಮೂಢನಂಬಿಕೆಯಿಂದಾಗಿ ಜನಸಂಖ್ಯೆ ತೀವ್ರವಾಗಿ ಬೆಳೆಯುತ್ತಿದೆ . ಇದರಿಂದ ಆರ್ಥಿಕ ಹಿನ್ನಡೆಯಾಗುತ್ತಿದೆ .

5 ) ಬಡತನ ಹಾಗೂ ಹಸಿವು : ಅಲಿಪ್ತ ರಾಷ್ಟ್ರಗಳಲ್ಲಿನ ಬಡತನ ತುಂಬಾ ಗಂಭೀರ ಸಮಸ್ಯೆಯಾಗಿದೆ . ಆಹಾರ ಧಾನ್ಯಗಳ ಕೊರತೆ ಮುಖ್ಯ ಕಾರಣವಾಗಿವೆ . ಆಂತರಿಕ ಕಲಹ ಹಾಗೂ ಸಂಪನ್ಮೂಲಗಳ ಅಸಮರ್ಪಕ ಬಳಕೆಯು ಇದಕ್ಕೆ ಕಾರಣವಾಗಿದೆ .

6 ) ಸಾಂಕ್ರಾಮಿಕ ರೋಗಗಳ ಹರಡುವಿಕೆ : ಅಲಿಪ್ತ ರಾಷ್ಟ್ರಗಳಲ್ಲಿ ಆರೋಗ್ಯ ನಿರ್ಲಕ್ಷತನಕ್ಕೆ ಒಳಗಾಗಿದೆ . ಆರೋಗ್ಯ ಸೇವೆಗಳ ಕೊರತೆ , ಏಡ್ಸ್‌ನಂತಹ ಕಾಯಿಲೆ ಈ ರಾಷ್ಟ್ರಗಳಲ್ಲಿ ಹೆಚ್ಚಾಗಿದೆ .

7 ) ಅನಕ್ಷರತೆ : ಪ್ರಮಾಣ ತೀರಾ ಕಡಿಮೆ ಇದೆ . ಅಲಿಪ್ತ ರಾಷ್ಟ್ರಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳು ವಿಫಲವಾಗಿವೆ , ಸಾಕ್ಷರತಾ

8 ) ಸಾಲಭಾದೆ : ಹಳೆಯ ಸಾಲ – ಬಡ್ಡಿ ತೀರಿಸಲು ಹೊಸ ಸಾಲ ಮಾಡುತ್ತಿವೆ . ಬಹುತೇಕ ಅಲಿಪ್ತ ರಾಷ್ಟ್ರಗಳು ವಿದೇಶಿ ಸಾಲದ ಬಾಧೆಯಿಂದ ನರಳುತ್ತಿವೆ ,

9 ) ವಲಸೆ : ಉದ್ಯೋಗ , ಆಹಾರ , ಆತ್ಮರಕ್ಷಣೆಗಾಗಿ ದೇಶದಿಂದ ದೇಶಕ್ಕೆ , ಸುರಕ್ಷಿತ ಸ್ಥಳಗಳನ್ನು ಅರಸುತ್ತಾ ವಲಸೆ ಹೋಗುವುದು ಹೆಚ್ಚಾಗಿದೆ . ಆಫ್ರಿಕಾದಲ್ಲಿ ವಲಸೆ ಪ್ರಮಾಣ ಹೆಚ್ಚಿದೆ . ಅಲಿಪ್ತ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿದೆ ,

10 ) ನೀರಿನ ಅಭಾವ , ಅಸ್ಥಿರ ಸಹಕಾರ , ಸೈನಿಕ ಶಕ್ತಿಯ ಕೊರತೆ ಮುಂತಾದವು. ಅಲಿಪ್ತ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿದೆ.

2 ) ಅಲಿಪ್ತ ಚಳುವಳಿಯ ಧೈಯಗಳನ್ನು ವಿವರಿಸಿ.

1) ಶೀತಲಸಮರದ ತೀವ್ರತೆಯನ್ನು ಕಡಿಮೆ ಮಾಡುವುದು ಅಮೇರಿಕಾ ಹಾಗೂ ರಷ್ಯಾ ಎರಡು ಬಣಗಳಿಂದ ದೂರ ಉಳಿಯುವುದು .

2 ) ಅಂತರಾಷ್ಟ್ರೀಯ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆಗಳಿಂದ ಬಗೆಹರಿಸಿಕೊಳ್ಳುವುದು .

3 ) ವಸಾಹತು ಶಾಹಿ ಮತ್ತು ಸಾಮ್ರಾಜ್ಯಶಾಹಿ ನೀತಿಯನ್ನು ವಿರೋಧಿಸುವುದು ಮತ್ತು ಇವುಗಳ ವಿರುದ್ಧ ನಡೆಯುವ ಚಳುವಳಿಗೆ ಬೆಂಬಲ ನೀಡುವುದು .

4) ಅಣ್ವಸ್ತ್ರಗಳನ್ನು ಮಿತಗೊಳಿಸುವ ಒಪ್ಪಂದಗಳಿಗೆ ಬೆಂಬಲ ನೀಡುವುದು ಮತ್ತು ಸೈನಿಕ ಒಪ್ಪಂದಗಳಿಂದ ಹೊರಬರುವುದು .

5 ) ಜನಾಂಗೀಯ ಸಂಘರ್ಷ , ವರ್ಣಬೇಧ ನೀತಿಗಳನ್ನು ವಿರೋಧಿಸಿ ಅವುಗಳ ವಿರುದ್ಧ ಹೋರಾಟವನ್ನು ರೂಪಿಸುವುದು .

6 )ಬಲಿಷ್ಟ ಸೈನಿಕ ಬಣಗಳ ಆಕ್ರಮಣ ಹಾಗೂ ಅನ್ಯಾಯಗಳನ್ನು ಖಂಡಿಸುವುದು .

7 ) ದುರ್ಬಲ ರಾಷ್ಟ್ರಗಳನ್ನು , ಆರ್ಥಿಕ ಶೋಷಣೆಗೆ ಒಳಗಾಗಿರುವ ರಾಷ್ಟ್ರಗಳಿಗೆ ಧನ ಸಹಾಯ ಮಾಡುವುದು .

8 ) ಮಾನವನ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದು .

9 ) ಅಲಿಪ್ತ ರಾಷ್ಟ್ರಗಳು ಎದುರಿಸುತ್ತಿರುವ ಬಡತನ , ಹಸಿವು ಅನಕ್ಷರತೆ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವುದು .

10 ) ವಿಶ್ವ ಸಂಸ್ಥೆ ಕೈಗೊಳ್ಳುವ ಕಾರ್ಯಗಳಿಗೆ ಬೆಂಬಲ ನೀಡುವುದು .

11 ) ಆರ್ಥಿಕ ಸ್ವಾವಲಂಬನೆಯನ್ನು ಮೂಡಿಸುವುದು .

12 ) ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿ ಹಿಡಿದು ಅವುಗಳನ್ನು ಜನಪ್ರಿಯಗೊಳಿಸುವುದು .

3 ) ಭಾರತ ಮತ್ತು ಅಲಿಪ್ತ ಚಳುವಳಿಯ ಸಂಬಂಧವನ್ನು ಕುರಿತು ಬರೆಯಿರಿ.

ಭಾರತ ಮತ್ತು ಅಲಿಪ್ತ ಚಳುವಳಿ ನಡುವಿನ ಸಂಬಂಧವನ್ನು ಈ ಕೆಳಗಿನ ಅಂಶಗಳು ಸ್ಪಷ್ಟಪಡಿಸುತ್ತವೆ .

 • ಭಾರತವು ಇತರ ಅಲಿಪ್ತ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಬಾಂಡುಂಗ ಸಮ್ಮೇಳನದಲ್ಲಿ ನೆಹರು ಅವರ ತತ್ವಗಳಿಗೆ ವಿಶ್ವ ಮನ್ನಣೆ ದೊರೆಯಿತು .
 • ಅಲಿಪ್ತ ರಾಷ್ಟ್ರಗಳ 7 ನೇಯ ಸಮ್ಮೇಳನವು ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯಿತು . ಶ್ರೀಮತಿ ಇಂದಿರಗಾಂಧಿಯವರು ಅಧ್ಯಕ್ಷತೆ ವಹಿಸಿದ್ದರೆ , ನಿಶಸ್ತ್ರೀಕರಣ , ಆರ್ಥಿಕ ಅಭಿವೃದ್ಧಿ ಮುಂತಾದ ವಿಷಯಗಳನ್ನು ಚರ್ಚಿಸಲಾಯಿತು .
 • ಹರಾರೆಯಲ್ಲಿ ನಡೆದ 8 ನೇಯ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ರಾಜೀವ್‌ಗಾಂಧಿಯವರು , ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾರನ್ನು ಬಿಡುಗಡೆಗೊಳಿಸುವಂತೆ ಆಗರಹಿಸಿದರು ಹಾಗೂ ‘ ಆಫ್ರಿಕಾ ನಿಧಿ’ಯನ್ನು ಸ್ಥಾಪಿಸಿದರು .
 • ಅಲಿಪ್ತ ಚಳುವಳಿಯ 9 ನೇ ಸಮ್ಮೇಳನವು ಯುಗೋಸ್ಲಾವಿಯಾದ ರಾಜಧಾನಿ ಬೆಲ್ಗಡ್ ನಡೆಯಿತು , ರಾಜೀವಗಾಂಧಿಯವರು ಪರಿಸರ ಸಂರಕ್ಷಣೆಗಾಗಿ ‘ ಭೂ ಸಂರಕ್ಷಣಾ ನಿಧಿ’ಯನ್ನು ಸ್ಥಾಪಿಸುವಂತೆ ಕರೆ ನೀಡಿದರು .
 • ಅಲಿಪ್ತ ರಾಷ್ಟ್ರಗಳ 12 ಮತ್ತು 13 ನೇ ಸಮ್ಮೇಳನದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಅಂತರಾಷ್ಟ್ರೀಯ ಭಯೋತ್ಪಾದನೆ ನಿಗ್ರಹಕ್ಕೆ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕೆಂದು ಕರೆ ನೀಡಿದ್ದರು .
 • 14 ನೇ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮನ್‌ಮೋಹನ್‌ಸಿಂಗ್ ಅವರು ಅಂತಾರಾಷ್ಟ್ರೀಯ ಭಯೋತ್ಪಾದನೆ ಹಾಗೂ ಅಣ್ವಸ್ತ್ರಗಳ ಮೇಲೆ ನಿಷೇಧ ಹೇರುವ ವಿಷಯವನ್ನು ಪ್ರಸ್ತಾಪಿಸಿದರು .
 • ಇರಾನ್‌ನಲ್ಲಿ ನಡೆದ 16 ನೇ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮನ್‌ಮೋಹನ್‌ಸಿಂಗ್ ಅಣ್ವಸ್ತ್ರ ಮತ್ತು ಭಯೋತ್ಪಾದನೆ ವಿರುದ್ಧ ಜಾಗತಿಕ ಕ್ರಮದ ಅಗತ್ಯತೆಯನ್ನು ಪ್ರತಿಪಾದಿಸಿದರು . ಸಿರಿಯಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸರ್ವಸಮ್ಮತವಾಗುವ ತೀರ್ಮಾನವನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು . ಬೆಳೆಸಿಕೊಂಡಿದೆ . ಹೀಗೆ ಭಾರತವು ಅಲಿಪ್ತ ಚಳುವಳಿಯೊಂದಿಗೆ ಉತ್ತಮ ಬಾಂಧವ್ಯವನ್ನುಬೆಳೆಸಿಕೊಂಡಿದೆ.

4 ) .ಆಲಿಪ್ತ ಚಳುವಳಿಯ ಸಾಧನೆಗಳನ್ನು ತಿಳಿಸಿ ,

ಅಲಿಪ್ತ ಚಳುವಳಿಯ ಸಾಧನೆಗಳೆಂದರೆ –

1) ಅಲಿಪ್ತ ಚಳುವಳಿ ಶೀತಲ ಸಮರದ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡಿದೆ.

2 ) ಕೊರಿಯಾ , ವಿಯಾಟ್ನಾಂ , ಕ್ಯೂಬಾ , ಕುವೈತ್‌ಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಲಿಪ್ತ ಚಳುವಳಿ ವಿಶ್ವಸಂಸ್ಥೆಗೆ ಸಹಾಯ ಮಾಡಿದೆ .

3 ) ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯನ್ನು ಹೋಗಲಾಡಿಸಲು ಶ್ರಮಿಸಿದೆ .

4) ಅಣ್ವಸ್ತ್ರಗಳನ್ನು ಮಿತಗೊಳಿಸುವ ಒಪ್ಪಂದಗಳಿಗೆ ಸ್ಫೂರ್ತಿಯಾಗಿದೆ .

5 ) ಶಕ್ತಿ ಬಣಗಳ ಪ್ರಾಬಲ್ಯವನ್ನು ತಡೆಯಲು ಶ್ರಮಿಸಿದೆ .

6 ) , ಪ್ರಜಾಪ್ರಭುತ್ವ ತತ್ವವನ್ನು ಜನಪ್ರಿಯಗೊಳಿಸಿದೆ .

7 ) ಅಂತರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಶ್ರಮಿಸುತ್ತಿವೆ .

5 ) ಅಲಿಪ್ತ ಚಳುವಳಿಯ ಉದಯಕ್ಕೆ ಕಾರಣಗಳನ್ನು ವಿವರಿಸಿ .

1 ) ರಾಷ್ಟ್ರೀಯತೆಯ ಉದಯ : ಶೀತಲ ಸಮರಕ್ಕೆ ಮುನ್ನ ಏಷ್ಯಾ , ಆಫ್ರಿಕಾ ಹಾಗೂ ಲ್ಯಾಟಿನ್ ಅಮೇರಿಕದಲ್ಲಿ ಕಾಣಿಸಿಕೊಂಡ ರಾಷ್ಟ್ರೀಯತೆಯ ಉದಯದಿಂದ ಅಲ್ಲಿನ ರಾಷ್ಟ್ರಗಳು ಸ್ವಾತಂತ್ರ್ಯ ಗಳಿಸಿದವು .

2 ) ಅಲಿಪ್ತ ರಾಷ್ಟ್ರಗಳ ಸಮಸ್ಯೆಗಳು : ಸಾಮಾನ್ಯವಾಗಿ ಅಲಿಷ್ಠ ರಾಷ್ಟ್ರಗಳ ಸಮಸ್ಯೆಗಳೆಂದರೆ ಬಡತನ , ಅನಕ್ಷರತೆ , ನಿರುದ್ಯೋಗ , ಅತ್ಯಾಧಿಕ ಜನಸಂಖ್ಯೆ ಅಲಿಪ್ತ ಚಳುವಳಿಯ ಉದಯಕ್ಕೆ ಕಾರಣವಾದವು

3 ) ವಿಶ್ವಶಾಂತಿ ನೀತಿ : ವಿಶ್ವಶಾಂತಿಯನ್ನು ಸ್ಥಾಪಿಸುವ ಉದ್ದೇಶದಿಂದ ಅಲಿಪ್ತ ಚಳುವಳಿ ಉದಯಿಸಿತು .

4 )ಆರ್ಥಿಕ ಶೋಷಣೆ : ಆರ್ಥಿಕ ಶೋಷಣೆಯಿಂದ ಮುಕ್ತವಾಗಿ , ಸ್ವಾವಲಂಬನೆಯಿಂದ ಅಭಿವೃದ್ಧಿ ಸಾಧಿಸಲು ಅಲಿಪ್ತ ಚಳುವಳಿ ಉದಯಕ್ಕೆ ಕಾರಣವಾಯಿತು .

5 ) ಶಕ್ತಿ ಬಣಗಳ ಪ್ರಾಬಲ್ಯವನ್ನು ವಿರೋಧಿಸಲು : ಎರಡು ಶಕ್ತಿ ಬಣಗಳ ಪ್ರಾಬಲ್ಯವನ್ನು ವಿರೋಧಿಸಲು , ಅವರೊಂದಿಗಿದ್ದ ರಾಷ್ಟ್ರಗಳನ್ನು ದೂರ ಸರಿದು ಅವುಗಳ ಕಾರ್ಯ ಚಟುವಟಿಕೆಗಳನ್ನು ವಿರೋಧಿಸಿದರು .

6 ) ಪಂಚಶೀಲ ತತ್ವ : ನೆಹರುರವರು ಆಯೋಜಿಸಿದ್ದ ಪಂಚಶೀಲ ತತ್ವಗಳನ್ನು ಜಾರಿಗೆ ತರಲು ಅಲಿಪ್ತ ಚಳುವಳಿ ಉದಯಕ್ಕೆ ಕಾರಣವಾಯಿತು . 7 ) ಉತ್ತಮ ನಾಯಕತ್ವ : ಜವಾಹರಲಾಲ್‌ ನೆಹರು , ಅಬ್ದುಲ್ ನಾಸೇರ್‌ , ಮಾರ್ಷಾಲ್ ಟೆಟೋ , ಸುಕರ್ನೂ ಮುಂತಾದ ನಾಯಕರು ಅಲಿಪ್ತ ನೀತಿಯಡಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು .

8 ) ಶೀತಲ ಸಮರ : ಎರಡು ಶಕ್ತಿ ಬಣಗಳ ನಡುವೆ ಶೀತಲ ಸಮಲ ಆರಂಭವಾಯಿತು . ಇದನ್ನು ನಿಯಂತ್ರಣಕ್ಕೆ ತರಲು ಅಲಿಪ್ತ ಚಳುವಳಿಯ ಅಗತ್ಯತೆ ಇತ್ತು .

8 ) ಸದಸ್ಯ ರಾಷ್ಟ್ರಗಳ ಸಮಸ್ಯೆಗಳ ನಿವಾರಣೆಗಾಗಿ ಪ್ರಯತ್ನಿಸುತ್ತಿದೆ .

9 )ಸದಸ್ಯ ರಾಷ್ಟ್ರಗಳ ಸ್ವಾವಲಂಬನೆಗಾಗಿ ಹೋರಾಡುತ್ತಿದೆ .

6 ) ಅಲಿಪ್ತ ಚಳುವಳಿಯ ಇತಿಮಿತಗಳೇನು ?

ಅಲಿಪ್ತ ಚಳುವಳಿಯ ಇತಿಮಿತಿಗಳೆಂದರೆ :

 • 1990 ರ ಆಗಸ್ಟ್ 2 ರಂದು ಕುವೈತನ್ನು ಇರಾಕ್ ಆಕ್ರಮಿಸಿಕೊಂಡಿತು . ಈ ಎರಡು ರಾಷ್ಟ್ರಗಳು ಅಲಿಪ್ತ ಚಳುವಳಿಯ ಸದಸ್ಯರಾಗಿದ್ದರೂ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅದು ವಿಫಲವಾಯಿತು .
 • ಅಲಿಪ್ತ ಚಳುವಳಿಗೆ ಆರಂಭದಲ್ಲಿ ದೊರೆತ ಸಮರ್ಥ ನಾಯಕತ್ವ ಈಚೆಗೆ ದೊರೆಯುತ್ತಿಲ್ಲ .
 • ಅಲಿಪ್ತ ರಾಷ್ಟ್ರಗಳ ನಡುವೆ ಇರುವ ಆಂತರಿಕ ಜಗಳ ಹಾಗೂ ಏಕತೆಯ ಕೊರತೆಯಿಂದಾಗಿ ಅದು ದುರ್ಬಲವಾಗುತ್ತಿದೆ .
 • ಅಲಿಪ್ತ ರಾಷ್ಟ್ರಗಳು ಒಂದೆಡೆ ನಿಶ್ಯಸ್ತೀಕರಣ ಭೋದಿಸುತ್ತಿವೆಯಾದರೂ ಇನ್ನೊಂದೆಡೆ ಬಲಿಷ್ಟ ರಾಷ್ಟ್ರಗಳಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿವೆ .
 • ಅಲಿಪ್ತ ರಾಷ್ಟ್ರಗಳಿಗೆ ಸ್ವಂತ ಸೇನಾ ಬಲವಿಲ್ಲ , ಕೇವಲ ಖಂಡನೆ , ಶಾಂತಿಮಾತುಗಳಿಂದ ಸಾಧನೆ ಮಾಡುವುದು ಅಸಾಧ್ಯವಾಗಿದೆ .
 • ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ಅಲಿಪ್ತ ರಾಷ್ಟ್ರಗಳ ಸೋತಿವೆ.

1st puc history 12th chapter notes in kannada

IV ಕೆಳಗಿನವುಗಳಿಗೆ 30 -40 ವಾಕ್ಯದಲ್ಲಿ ಉತ್ತರಿಸಿರಿ :

1) ಅಲಿಪ್ತ ಚಳುವಳಿಯ ಬೆಳವಣಿಗೆಗಳನ್ನು ವಿವರಿಸಿ :

ಅಲಿಪ್ತ ಅಲಿಪ್ತ ಚಳುವಳಿಯ ಬೆಳವಳಿಗೆಯನ್ನು 1961 ರಿಂದ 2012 ರವರೆಗೆ ನಡೆದ ಸಮ್ಮೇಳನಗಳು ಸಾಕ್ಷೀಕರಿಸುತ್ತವೆ .

ಅಲಿಪ್ತ ಚಳುವಳಿಯ ಉಗಮಕ್ಕೆ ಕಾರಣವಾದ ರಾಷ್ಟ್ರಗಳಲ್ಲಿ ಭಾರತ ಮೊದಲನೇಯದು . ಅಲಿಪ್ತ ಚಳುವಳಿಯ ನಿಲಿಗಳಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರುರವರು ಪ್ರಮುಖರು . 1947 ರಲ್ಲಿ ನಡೆದ ಏಷ್ಯಾ ರಾಷ್ಟ್ರಗಳ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಗಳು ಏಷ್ಯಾ ರಾಷ್ಟ್ರಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಒಂದು ಸಂಘಟನೆಯ ಅವಶ್ಯವಿದೆ ಎಂದು ಅಭಿಪ್ರಾಯ ಪಟ್ಟಿತು . ಇದು ಮುಂದೆ ಆಲಿಪ್ತ ಚಳುವಳಿಯ ಆರಂಭಕ್ಕೆ ಕಾರಣವಾಯಿತು .

1955 ರಲ್ಲಿ ನಡೆದ ಬಾಂಡುಂಗ್ ಸಮ್ಮೇಳನದಲ್ಲಿ ವಿಶ್ವ ಶಾಂತಿಯ ಅಗತ್ಯತೆಯನ್ನು ಬಾಂಡುಂಗ ಸಮ್ಮೇಳನ ಪ್ರತಿಪಾದಿಸಿತು . ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಪ್ರಬಲ ಸ್ಪರ್ಧೆ ನೀಡುವ ಇಚ್ಚೆ ಈ ಮೂಲಕ ಸಭೆಯಲ್ಲಿ ವ್ಯಕ್ತವಾಯಿತು .

1947 ರ ದೆಹಲಿ ಮತ್ತು ಬಾಂಡುಂಗ್ ಸಮ್ಮೇಳನಗಳು ಅಲಿಪ್ತ ಚಳುವಳಿಗೆ ನಾಂದಿಯಾದವು .

ನಂತರ 1961 ರಲ್ಲಿ ಅಲಿಪ್ತ ಚಳುವಳಿಯ ಮೊದಲ ಸಮ್ಮೇಳನವು ಯುಗೋಸ್ತೋವಿಯಾದ ರಾಜಧಾನಿ ಬೆಲ್ಗಡೋನಲ್ಲಿ ನಡೆಯಿತು . ಸಮ್ಮೇಳನವನ್ನು ಯುಗೋಸ್ತೋವಿಯಾದ ಅಧ್ಯಕ್ಷ ಜೋಸಿಪ್ ಬ್ರಾಟೆ ಟೆಟೋ ಆಯೋಜಿಸಿ ಅಧ್ಯಕ್ಷತೆಯನ್ನು ವಹಿಸಿದ್ದರು . ಆಫ್ರಿಕಾ ಮತ್ತು ಏಷ್ಯಾದ ಒಟ್ಟು 25 ರಾಷ್ಟ್ರಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದವು . ಟೆಟೋ , ನೆಹರು ಮತ್ತು ನಾಸೀರ್ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದರು . ಇವರನ್ನು ಅಲಿಪ್ತ ಚಳುವಳಿ ಬಣದ ‘ ತ್ರಿಮೂರ್ತಿ’ಗಳೆಂದು ಕರೆಯಲಾಯಿತು .

ಇಲ್ಲಿ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಕುರಿತು ಚರ್ಚಿಸಲಾಯಿತು . ಈ ಸಮ್ಮೇಳನದಲ್ಲಿ ಭಾಗವಹಿಸಿದ ರಾಷ್ಟ್ರಗಳೆಂದರೆ – ಭಾರತ , ಅಫ್‌ಘಾನಿಸ್ತಾನ , ಅಲ್ಲೇರಿಯಾ , ಬರ್ಮಾ , ಕಾಂಬೋಡಿಯಾ , ಶ್ರೀಲಂಕಾ , ಈಜಿಪ್ಟ್ , ಘಾನಾ ಹಾಗೂ ಇರಾಕ್ ಮುಂತಾದವುಗಳು . ಇಂದಿಗೂ ಇದು ತನ್ನ ಬೆಳವಣಿಗೆಯತ್ತ ಸಾಗಿರುವುದು ಪ್ರಶಂಸನೀಯವಾಗಿದೆ .

FAQ:

ಅಲಿಪ್ತ ಚಳುವಳಿ ಯಾವ ಸ್ಥಳದಿಂದ ಆರಂಭವಾಯಿತು ? ಯಾವಾಗ ?

ಅಲಿಪ್ತ ಚಳುವಳಿಯು 1961 ರಲ್ಲಿ ಯುಗೋಸ್ತೋವಿಯಾದ ರಾಜಧಾನಿ ಬೆಲ್ಗಡ್‌ನಲ್ಲಿ ಆರಂಭವಾಯಿತು . ಆದರೆ 1947 ರ ದೆಹಲಿ ಹಾಗೂ ಬಾಂಡುಂಗ್ ಸಮ್ಮೇಳನಗಳು ಅಲಿಪ್ತ ಚಳುವಳಿಗೆ ನಾಂದಿಯಾಗಿದ್ದವು .

ಬಾಂಡುಂಗ್ ಸಮ್ಮೇಳನ ನಡೆದ ವರ್ಷ ಯಾವುದು ?

1955 ರಲ್ಲಿ

ದೆಹಲಿಯಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಸಮ್ಮೇಳನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?

ಶ್ರೀಮತಿ ಇಂದಿರಾ ಗಾಂಧಿ.

ಇತರೆ ವಿಷಯಗಳು :

1st PUC History Notes

First PUC All Textbooks Pdf 2022

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1 ರಿಂದ 12ನೇ ತರಗತಿ ಎಲ್ಲಾ ನೋಟ್ಸ್

All Notes App

Leave a Reply

Your email address will not be published. Required fields are marked *