10th Edege Bidda Akshara Kannada Notes | 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್ 

Contents

10th Edege Bidda Akshara Kannada Notes | 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್ 

10th Standard Kannada Deevige EdegeBidda Akshara Kannada Notes question answer, text book pdf download 10ನೇ ತರಗತಿ ಎದೆಗೆ ಬಿದ್ದ ಅಕ್ಷರ ಕನ್ನಡ ನೋಟ್ಸ್ ಪಾಠ, ಪ್ರಶ್ನೆ ಉತ್ತರ
ಗದ್ಯಪಾಠ ೦೬ ಎದೆಗೆ ಬಿದ್ದ ಅಕ್ಷರ
ಕವಿ – ಕಾವ್ಯ ಪರಿಚಯ
ದೇವನೂರ ಮಹಾದೇವ
ದೇವನೂರ ಮಹಾದೇವ ಅವರು ಕ್ರಿ.ಶ. 1948 ಮೈಸೂರು ಜಿಲ್ಲೆಯ ನಂಜನಗೊಡು ತಾಲೂಕಿನ ದೇವನೊರು ಎಂಬ ಊರಿನಲ್ಲಿ ಜನಿಸಿದರು. ಇವರು ಎದೆಗೆ ಬಿದ್ದ ಅಕ್ಷರ , ಕುಸುಮಬಾಲೆ, ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೋ, ನಂಬಿಕೆಯನೆಂಟ, ನೋಡು ಮತ್ತು ಕೂಡು, ಮುಂತಾದ ಪ್ರಮುಖ  ಕೃತಿಗಳನ್ನು ಬರೆದಿದ್ದಾರೆ.
ಇವರ ‘ಕಕುಮಬಾಲೆ ’ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,‘ ಒಡಲಾಳ ’ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು  ಲಭಿಸಿವೆ.

ಬಹು ಆಯ್ಕೆ ಪ್ರಶ್ನೆಗಳು

1.‘ಖುಷಿ’ ಈ ಪದದ  ಈ ಭಾಷೆಯಿಂದ ಬಂದಿದೆ
ಅ] ಇಂಗ್ಲೀಷ್ ಆ] ಉರ್ದು ಇ] ಪಾರ್ಸಿ ಈ] ತಮಿಳು
2. ‘ಮಹೋನ್ನತ’ ಇದು ಈ ಸಂಧಿಗೆ ಉದಾಹರಣೆ
ಅ] ಯಣ್ ಸಂಧಿ ಆ] ಸವರ್ಣಧೀರ್ಘ ಸಂಧಿ ಇ] ಗುಣ ಈ] ವೃದ್ಧಿ ಸಂಧಿ.
3. “ನಿಲ್ಲಿ ನನ್ ಮಕ್ಕಳಾ” ಇಲ್ಲಿರುವ ಚಿಹ್ನೆ
ಅ] ಪ್ರಶ್ನಾರ್ಥಕ ಆ] ಉದ್ಧರಣ ಇ] ವಾಕ್ಯವೇಷ್ಠನ ಈ] ಆಶ್ಚರ್ಯಸೂಚಕ
4. ‘ನನಗಿಲ್ಲಾ ತಾಯಿ’ ಇಲ್ಲಿರುವ ಚಿಹ್ನೆ
ಅ] ಪ್ರಶ್ನಾರ್ಥಕ ಆ] ಆಶ್ಚರ್ಯಸೂಚಕ. ಇ] ಉದ್ಧರಣ ಈ] ವಾಕ್ಯವೇಷ್ಠನ.
5. ‘ಜಾತಿಯ ಬಚ್ಚಲು’ ಇಲ್ಲಿರುವ ಅಲಂಕಾರ
ಅ] ರೂಪಕ ಆ] ಉಪಮಾ ಇ] ದೃಷ್ಟಾಂತ ಈ] ಅರ್ಥಾಂತರನ್ಯಾಸ
6. ‘ಗುಡಿ ಮನೆ’ ಇಲ್ಲಿರುವ ಅಲಂಕಾರ
ಅ] ಉಪಮ ಆ] ಅರ್ಥಲಂಕಾರ ಇ] ರೂಪಕ ಈ] ದೃಷ್ಟಾಂತ.
7. ‘ಕಕ್ಕಾಬಿಕ್ಕಿ’ ಇದು ಯಾವ ವ್ಯಾಕರಣಾಂಶ.
ಅ] ಜೋಡಿನುಡಿ ಆ]ದ್ವಿಯುಕ್ತಿ  ಇ] ನುಡಿಗಟ್ಟು ಈ] ಅವ್ಯಯ.
8. ತದ್ಧಿತಾಂತ ನಾಮಕ್ಕೆ ಉದಾಹರಣೆ 
ಅ] ಬಳೆಗಾರ ಆ] ಜಾಣತನ ಇ] ಬಡತನ ಈ] ಶಾಲೆಯ ತನಕ.
9. ‘ಚಲುವಿಕೆ’ ಇದು ಯಾವ ನಾಮ.
ಅ] ಭಾವನಾಮ ಆ] ತದ್ಧಿತಾಂತ ಇ] ಸಹನಾಭಾವ ಈ] ಕರುಣಾಭಾವ.
10. ತಾಂತದ್ಧಿತಂತಾ ವ್ಯಯಕ್ಕೆ ಉದಾಹರಣೇ.
ಅ] ಚಂದ್ರನಂತೆ  ಆ] ಭೀಮ ಇ] ಬಣ್ಣ ಈ] ಗೆಜ್ಜೆ.
11. ‘ಸೃಷ್ಡ್ತಿ ’ ಪದದ ತದ್ಭವ ರೂಪ
ಅ] ವ್ಯಷ್ಟಿ ಆ] ಗೋಷ್ಠಿ ಇ] ಸಮ  ಈ] ವ್ಯಕ್ತಿ.
12. ‘ಬುದ್ಧನನ್ನು’ ಇದು ಈ ವಿಭಕ್ತಿ  ಪ್ರತ್ಯಯ
ಅ] ಪಂಚಮೀ ಆ] ದ್ವಿತೀಯ ಇ] ತೃತೀಯಾ ಈ] ಪ್ರಥಮ
13. ಕನ್ನಡಿಗ  ಇದು
ಅ]ಭಾವನಾಮ ಆ] ತದ್ಧಿತಾಂತ ಇ] ತದ್ಧಿತಾಂತನಾಮ ಈ] ಅವ್ಯಯ
೧೪.‘ಕಟ್ಟಡದ ಸಲುವಾಗಿ’ ಇದು
ಅ]ಭಾವನಾಮ ಆ] ತದ್ಧಿತಾಂತ ಇ] ತದ್ಧಿತಾಂತನಾಮ ಈ] ತದ್ಧಿತಾಂತಾವ್ಯಯ
15.ಕಡೆಗಣ್ಣು ಈ ಸಮಾಸಕ್ಕೆ  ಉದಾ
ಅ] ತತ್ಪುರುಷ  ಆ] ಕರ್ಮಧಾರಯ ಸಮಾಸ ಇ] ಅಂಶಿ ಈ] ದ್ವಿರುಕ್ತಿ ಸಮಾಸ
16ಕಣ್ದೆರೆ ಈ ಸಮಾಸಕ್ಕೆ ಉದಾ
ಅ] ಕ್ರಿಯಾಸಮಾಸ ಆ] ಕರ್ಮಧಾರೆಯ ಸಮಾಸ  ಇ] ಅಂಶಿ ಈ] ದ್ವಿಗು ಸಮಾಸ
17. ‘ಮಾತಂತು’ ಇದು ಈ ಸಂಧಿಗೆ ಉದಾಹರಣೆ
ಅ] ಯಣ್ ಸಂಧಿ ಆ] ಸವರ್ಣಧೀರ್ಘ ಸಂಧಿ ಇ] ಗುಣ ಈ] ಲೋಪ ಸಂಧಿ.
18. ‘ಕಡುವೆಳ್ಪು’ ಇದು ಈ ಸಂಧಿಗೆ ಉದಾಹಹರಣೆ 
ಅ] ಯಣ್ ಸಂಧಿ ಆ] ಆದೇಶ ಸಂಧಿ ಇ]ಗುಣ ಈ] ವೃದ್ಧಿ ಸಂಧಿ.
19. ‘ಹೌದ್ಹೌದು’ ಇದು ಯಾವ ವ್ಯಾಕರಣಾಂಶ.
ಅ] ಜೋಡಿನುಡಿ ಆ] ದ್ವಿರುಕ್ತಿ  ಇ] ನುಡಿಗಟ್ಟು ಈ] ಅವ್ಯಯ.
ಉತ್ತರಗಳು
1] ಇ, 2]ಇ, 3]ಆ, 4]ಈ, 5]ಅ, 6]ಇ, 7]ಇ, 8]ಅ, 9]ಅ, 10]ಅ, 11]ಅ, 12]ಆ, 13]ಇ, 14]ಈ. 15.]ಇ 16. ]ಅ 17.]ಈ 18. ]ಆ 19.] ಆ

ವಿಶೇಷ ಬಹು ಆಯ್ಕೆ ಪ್ರಶ್ನೆಗಳು

1) ಅಂಜಿಕೆ ಇದು ಯಾವ ಕೃದಂತಕೆ ಉದಾ:
ಅ) ನಿಷೇಧ ಕೃದಂತ         ಬ) ವರ್ತಮಾನ ಕೃದಂತ
ಕ) ಕೃದಂತ ಭಾವನಾಮ   ಡ)ಕೃದಂತ ಅವ್ಯಯ
2) ತದ್ಧಿತಾಂತ ನಾಮಕ್ಕೆ ಉದಾಹರಣೆ ಕೊಡಿ.
ಅ)ಕನ್ನಡಿಗ  ಬ) ಚಿಕ್ಕದು
ಕ) ಚಿಕ್ಕವರು     ಡ) ಜಾಣ
3) ಮಾಡುತ ಪದಕ್ಕೆ  ಇದಕ್ಕೆ ಉದಾಹರಣೆಯಾಗಿದೆ.
ಅ) ಅವ್ಯಯ                   ಬ) ಕೃದಂತನಾಮಕ್ಕೆ
ಕ) ಕೃದಂತ ಅವ್ಯಯ       ಡ)ಕೃದಂತಬಾs ವಕ್ಕೆ.
4) ಹೂವಾಡಿಗ ಇದು ಯಾವ ತದ್ಧಿತಾಂತಕ್ಕೆ  ಸೇರಿದೆ
ಅ) ತದ್ಧಿತಾಂತ ನಾಮ       ಬ) ತದ್ಧಿತಾಂತ ಭಾವನಾಮ
ಕ) ತದ್ಧಿಂತ ಅವ್ಯಯ         ಡ) ತದ್ಧಿತಾಂತ
5) ಓಟ ಇದು ಯಾವ ಕೃದಾಂತಕ್ಕೆ ಸೇರಿದೆ.
ಅ) ಕೃದಂತ ಭಾವನಾಮ      ಬ) ಕೃದಂತ ಅವ್ಯಯ
ಕ) ಕೃದಂತನಾಮ                ಡ)ಅವ್ಯಯ
6) ಇವುಗಳಲ್ಲಿ ತದ್ಧಿತಾಂತ ನಾಮಕ್ಕೆ ಉದಾಹರಣೆ.
ಅ) ಕರುಡ        ಬ) ಕಾವೇರಿ
ಕ) ಬಂಗಾರ       ಡ) ಕನ್ನಡಿಗ
7) ಹಾಡುವಿಕೆ ಇದು ಯಾವ ಕೃದ್ಧಾಂತಕ್ಕೆ ಸೇರಿದೆ.
ಅ) ನಿಷೇಧ ಕೃದಂತ               ಬ) ಕೃದಂತ ಭಾವನಾಮ
ಕ) ವರ್ತಮಾನ  ಕೃದಂತ       ಡ) ಕೃದಂತ ಅವ್ಯಯ
8) ಧಾತುವಿಗೆ ಕೃತ್ ಪ್ರತ್ಯಯ ಸೇರಿದಾಗ ಆಗುವ ಪದವನ್ನು ?
ಅ) ತದ್ಧಿತಾಂತ            ಬ) ಸರ್ವನಾಮ
ಕ) ಅಂಕಿತನಾಮ         ಡ) ಕೃದಂತ
9) ಬಿಳುಪು ಎಂಬ ಪದವು  ಯಾವ ವ್ಯಾಕರಣಕ್ಕೆ ಸೇರಿದೆ.
ಅ) ತದ್ಧಿತಾಂತ ನಾಮ              ಬ) ಧಾತು
ಕ) ತದ್ಧಿತಾಂತ ಭಾವನಾಮ       ಡ) ಅವ್ಯಯ
10) ಆಟ ಇದು ಯಾವ ವ್ಯಾಕರಣಕ್ಕೆ  ಸೇರಿದೆ.
ಅ) ತದ್ಧಿತಾಂತ                  ಬ) ಕೃದಂತನಾಮ
ಕ) ಕೃದಂತ ಅವ್ಯಯ          ಡ) ಕೃದಂತ ಭವನಾಮ
11) ಹಣವಂತ ಇದು ಒಂದು.
ಅ) ತದ್ಧಿತಾಂತ ಭಾವನಾಮ        ಬ) ತದ್ಧಿತಾಂತ ನಾಮ
ಕ) ಕೃದಂತನಾಮ                       ಡ) ತದ್ಧಿತಾಂತ ಅವ್ಯಯ.
12) ಹೂವಾಡಿಗ ಇದರಲ್ಲಿರುವ ತದ್ಧಿತ ರೂಪ.
ಅ) ಇಗ       ಬ) ವಾಡಿಗ
ಕ) ಡಿಗ        ಡ) ಅಡಿಗ
13) ಕನ್ನಡಿಗ  ಈ ಪದದಲ್ಲಿರುವ ತದ್ಧಿತ ಅರ್ಥ.
ಅ) ಇಗ         ಬ) ಅಡಿಗ
ಕ) ನಡಿಗ       ಡ) ಡಿಗ
14) ತದ್ಧಿತಾಂತ ಭಾವನಾಮಕ್ಕೆ ಉದಾಹರಣೆ ಕೊಡಿ.
ಅ) ಜಾಣ್ಮೆ          ಬ) ರಾಮನಂತೆ
ಕ) ಮಾಲೆಗಾರ     ಡ) ಗುಣವಂತ
15) ಮಗುವನ್ನು ಶಾಲೆಯ ತನಕ ಬಿಟ್ಟು ಬಂದನು. ಈ ವಾಕ್ಯದಲ್ಲಿರುವ ತದ್ಧಿತಾಂತ ಅವ್ಯಯ.
ಅ) ಮಗು       ಬ) ಶಾಲೆ
ಕ) ಬಂದ      ಡ) ಶಾಲೆಯ ತನಕ
16) ಕೃದಂತ ಭಾವನಾಮಕ್ಕೆ ಉದಾಹರಣೆ ಇದು.
ಅ) ನಡೆಯಲು       ಬ) ನಡವಳಿಕೆ
ಕ) ನಡೆಯುವ        ಡ) ಚಲುವಿಕೆ
17) ತದ್ಧಿತಾಂತ ಭಾವನಾಮಕ್ಕೆ ಉದಾಹರಣೆ ಇದು.
ಅ) ಲೆಕ್ಕಿಗ          ಬ) ಅಲ್ಲಿಯತನಕ
ಕ) ದೊಡ್ಡತನ    ಡ) ಹಣವಂತ
ಉತ್ತರಗಳು
1]ಕ, 2]ಅ, 3]ಕ, 4]ಅ, 5]ಅ, 6]ಡ, 7]ಬ, 8]ಡ, 9]ಕ, 10]ಡ, 11]ಬ, 12]ಡ, 13]ಅ, 14]ಬ, 15]ಅ, 16]ಡ, 17]ಬಿ, 18]ಕ,

ಮೊದಲೆರೆಡು ಪದಗಳಿಗಿರುವ ಸಂಬದಿಸಿದಂತೆ ಮೂರನೆಯ ಪದಕ್ಕೆ ಸಂಬಂದಿಸಿದ  ಪದ ಬರೆಯಿರಿ.

1.ಗಳಿಗೆ ಗಳಿಗೆ : ದ್ವಿರುಕ್ತಿ:: ಮಾತುಕತೆ ______
2.ಅಕ್ಷರ : ಅಕ್ಕರ:: ಧರ್ಮ  _______
3.ಸಂಕುಲ : ಸಮೂಹ:: ಆರ್ತತೆ _______
4.ಕವಿ : ಕಬ್ಬ:: ಸಹಸ್ರ  _______
5.ಕತೆಯಲ್ಲಿ : ಸಪ್ತಮೀ:: ಬಚ್ಚಲಿನಿಂದ ______
6.ಜಾಣತನ : ತದ್ಧಿತಾಂತ ಭಾವನಾಮ:: ಸಿರಿವಂತೆ ………………
7.ನದಿಯವೋಲ್ : ತದ್ಧಿತಾಂತಾವ್ಯಯ:: ಕಪ್ಪು : …………………………………
8.ಬಟ್ಟಬಯಲು : ದ್ವಿರುಕ್ತಿ  :: ಸತಿಪತಿ……………………………………
ಉತ್ತರಗಳು
1] ಜೋಡಿನುಡಿ  2] ದಮ್ಮ   3] ಬಯಕೆ  4] ಸಾವಿರ 5] ತೃತೀಯಾ 6] ತದ್ಧಿತಾಂತನಾಮ  7] ತದ್ಧಿತಾಂತ ಭಾವನಾಮ    8].ಜೋಡುನುಡಿ

ಪಾಠದ ಆಶಯ ಭಾವ

ಶಿಕ್ಷಣ, ವಿಜ್ಞಾನ, ನಗರೀಕರಣದ  ಪ್ರಭಾವದಿಂದ ವೈಚಾರಿಕ ಚಿಂತನೆ ತೀವ್ರವಾಯಿತು. ಅಸಮಾನತೆಯ ವಿರುದ್ಧ ದನಿಯೆತ್ತುವ ಪರಿಸ್ಥಿತಿ
ನಿರ್ಮಾಣವಾಯಿತು. ಸಾಮಾಜಿಕ ಸಾಮರಸ್ಯಕ್ಕೆ ಮೊದಲನೆಯ ಅಡ್ಡಿ ಮೌಢ್ಯವೆ. ಮೌಢ್ಯಮರೆಯಾಗುವವರೆಗೆ  ಸಾಮರಸ್ಯವೆಂಬುದು ಕನಸಾಗಿಯೇ ಉಳಿಯುತ್ತದೆ . ವಚನಕಾರರ ಸಂದೇಶಗಳನ್ನೂ  ನಾವು ನಡೆ-ನುಡಿಗಳಲ್ಲಿ ಅನ್ವಯಿಸಿಕೊಂಡು ಅರಿವು ಮೂಡಿಸಿಕೊಂಡು, ದ್ವೇಷ ಅಸೂಯೆಗಳನ್ನು ತೊರೆದು ಸಮಷ್ಟಿಯ ಒಳಿತಿಗಾಗಿ ಸಾಮರಸ್ಯದ ನೆಲೆಯಲ್ಲಿ ಬದುಕನ್ನು ರೂಪಿಸಿಕೊಂಡಲ್ಲಿ ಸಮಾಜದ ಸ್ವಾಸ್ಥ್ಯ ಸ್ಥಿರಗೊಳ್ಳಬಹುದೆಂಬು.
ವಚನಕಾರರ ನಡೆ ನುಡಿಗಳ ಸಮನ್ವಯವೇ ಅರಿವು. ಅಂತರಂಗದ ಹೊಂದಾಣಿಕೆಯಿಂದ  ಮಾತ್ರ ಸಮಾನತೆ, ಸಾಮರಸ್ಯ ಅದಕ್ಕಾಗಿ ಹೋರಾಡಿದ ಮಹನೀಯರ ದಾರಿಯಲ್ಲಿ ಜಾಗತೀಕರಣವನ್ನು ರೂಪಿಸಬೇಕಾಗಿದೆ. ಕಾರುಣ್ಯ, ಸಮತೆ, ಪ್ರಜ್ಞೆಗಳು   ದೇವರು. ಅವು ಜಾಗೃತವಾಗಬೇಕೆಂಬುದೇ ಆಶಯವಾಗಿದೆ.
ದೇವರ ಮಹಾದೇವ ವಿರಚಿತ ‘ಎದೆಗೆ ಬಿದ್ದ ಅಕ್ಷರ’ ಎಂಬ ವೈಚಾರಿಕ ಬಿಡಿಲೇಖನಗಳ ಸಂಕಲನದಿಂದ  ಈ ಗದ್ಯಭಾಗದಲ್ಲಿ  ಆಯ್ಕೆಮಾಡಲಾಗಿದೆ.

ಎದೆಗೆ ಬಿದ್ದ ಅಕ್ಷರ ಪಾಠದ ಸಂಕ್ಷಿಪ್ತ ಸಾರಾಂಶಮ

ಮನೆ ಮಂಚಮ್ಮ 

ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ. ಆದ್ದರಿಂದ ಪ್ರತಿಯೊಬ್ಬರು ಅಕ್ಷರ ಅಂದರೆ ಜ್ಞಾನವನ್ನ  ಪಡೆಯಬೇಕು. ದೇವರ ಮಹಾದೇವ ಅವರಿಗೆ ಕವಿ ಸಿದ್ಧಲಿಂಗಯ್ಯ ಅವರು ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು ಹೇಳುತ್ತಾರೆ. ಆ ಕತೆ ಹೀಗಿದೆ ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ  ಗ್ರಾಮದೇವತೆ ಮಂಚಮ್ಮಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಗುಡಿ ಕಟ್ತಾ ಇರುವಾಗ ಗುಡಿಯ ಕಟ್ಟಡ ಚಾವಣಿ ಮಟ್ಟಕ್ಕೆ  ಬಂದಾಗ ಅಲ್ಲಿದ್ದಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ” ಎಂದು
ಅಬ್ಬರ ಮಾಡುತ್ತಾಳೆ. ಆ ಅಬ್ಬರ ಜನ ತಮ್ಮ  ಕೆಲಸ ನಿಲ್ಲಿಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ.
ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ? ” ಎನ್ನುತ್ತಾಳೆ. ಅಲ್ಲಿನ ಜನರಲ್ಲಿ  ‘ನಿನನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಪುನಃ ಆ ದೇವತೆ “ಓಹೋ, ನನ ಗುಡಿಮನೆಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ ಮಕ್ಕಳಾ ?”  ಎಂದು ಕೇಳುತ್ತಾಳೆ. ಆಗ ಒಬ್ಬನು “ನನಗಿಲ್ಲ ತಾಯಿ” ಹೇಳುತ್ತಾಳೆ  ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ” ಎಂದು ಹೇಳುತ್ತಾಳೆ.ಅಂದಿನಿಂದ  ಮಂಚಮ್ಮದೇವಿ  ಮಣೆಮಂಚಮ್ಮ್ಮನಾಗುತ್ತಾಳೆ.
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ  ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿ ಚಾವಣಿ ಇಲ್ಲದಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ. ಎಂದು ದೇವನೂರ ಮಹದೇವ
ಅವರು ನನ್ನ ದೇವರು ಯಾರು ಎಂಬುದನ್ನು  ಸ್ಪಷ್ಟಿಕರಿಸುತ್ತಾರೆ.

ಅರಿವು ಮತ್ತು ಪ್ರಜ್ಞೆ

ದೇವರ ಮಹಾದೇವ ಅವರು ಒಂದು ಪುಸ್ತಕ ಓದುತ್ತಾ ಇದ್ದರಂತೆ ಆ ಪುಸ್ತಕ  ಶಿವಾನುಭವ ಶಬ್ದಕೋಶ ’ ಅದನ್ನು  ಬರೆದು .ಫ.ಗು.ಹಳಕಟ್ಟಿಯವರು. ಅದರಲ್ಲಿ ಅರಿವು , ಜ್ಞಾನ , ಪ್ರಜ್ಞೆಯ ಬಗ್ಗೆ ಹೇಳಿದ ವಿಚಾರವನ್ನು ಹೀಗೆ ಹೇಳುತ್ತಾರೆ. ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ ಒಡಮೂಡಿ ಬರುವುದು. ಅದು ಕೇಳಿ
ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು ಎಂದು ವಿವರಿಸುತ್ತಾರೆ.
ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು  ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರದೇ ಆದ
ಇಷ್ಟವ ಇದ್ದಿತು. ಅದೇ ಪ್ರಜ್ಞೆ , ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ  ಕಷ್ಟ ಸುಖ , ದುಃಖ ದುಮ್ಮಾನ,
ಏಳುಬೀಳುಗಳನ್ನು  ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ
ಕೊಟ್ಟರು.

ಬುದ್ಧನ ಕಾರುಣ್ಯ 

ದೇವವರು ಮಹಾದೇವ ಅವರು ಬುದ್ಧನ ಕಾರುಣ್ಯ ತಮ್ಮ  ಮನದೊಳಗೆ ಕೂತ ಬಗೆಯನ್ನು ಶಿವಮೊಗ್ಗದ ಮನೋವೈದ್ಯರಾದ ಡಾ. ಅಶೋಕ ಪೈ ಅವರು ಮನಸ್ಸಿನ ಬಗ್ಗೆ ಹೇಳಿದ ಸಂಶೋಧನ  ಸತ್ಯವನ್ನು ಹೇಳುವುದರ ಮೂಲಕ ವಿವರಿಸುತ್ತಾರೆ.
ಅಶೋಕ ಪೈ ಹೇಳಿದ ಆ ಸಂಶೋಧನಾ ಸತ್ಯವೇನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ
ಕುಳಿತು ಟೆಲಿವಿಷನ್(ಟಿ.ವಿ) ನೋಡುತ್ತಿದ್ದಾರೆ. ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಪಕ್ಕದ
ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ  ತಾವು ಇರುತ್ತಾರೆ. ಆಗ ಟೆಲಿವಿಷನ್(ಟಿ.ವಿ) ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಟೆಲಿವಿಷನ್(ಟಿ.ವಿ) ನೋಡುತ್ತಿದ್ದವರು  ದು:ಖದ ಭಾವಳಗಾಗುತ್ತಾರೆ. ಇದು ಪಕ್ಕದ ಕೊಠಡಿಯಲ್ಲಿ ಇರುವ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ.ಅದೇ ಟೆಲಿವಿಷನ್(ಟಿ.ವಿ)ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು  ನೋಡುತ್ತಿದ್ದವರಲ್ಲಿ ಖುಷಿ ಭಾವನೇ  ಉಂಟಾಗುತ್ತದೆ. ಇದು ಪಕ್ಕದ ಕೊಠಡಿಯಲ್ಲಿ ಇದ್ದವರ ಮನಸ್ಸಿನ ಮೇಲೂ ಪರಿಣಾಮ ಬೀರಿ ಸಂತೋಷದ ಭಾವನೆ ಉಂಟಾಗುತ್ತದೆ.
ಈ ಸಂಶೋಧನಾ ಸತ್ಯದ ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವಸಂಕುಲವೆಲ್ಲ ಒಂದೇ ಎಂದು ಹೇಳುತ್ತದೆ.
ಬುದ್ಧನ ಕಾರುಣ್ಯ ಈ ಸಂಶೋಧನಾ ಸತ್ಯದ ತಿರುಳಿನ ರೀತಿಯಲ್ಲಿ ಮೂಡಿರಬಹುದು. ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆ (ತಳಮಳ) ಗೊಂಡು ನರಳುತ್ತಿರುವ ಈ ಜಗತ್ತು ತನ್ನ ಆಳದ ಒಳ ಸಮಷ್ಟಿ (ಸಮಸ್ತ) ಮನಸ್ಸನ್ನು ಘಾಸಿಗೊಳಿಸುವುದು. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ. ಮನಸ್ಸು ಘಾಸಿಗೊಳಗಾಗಬಾರದೆಂದರೆ ಎಲ್ಲರಲ್ಲೂ ಕಾರುಣ್ಯ ಮೂಡಬೇಕು. ಆದ್ದರಿಂದ ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು  ಎಚ್ಚರಗೊಳಿಸಬೇಕಾಗಿದೆ. ಈ ಕಾರುಣ್ಯದ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರ ಅದುಜಾಗತೀಕರಣ  ಎಂದು ಹೇಳಬಹುದು.

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು  ವಾಕ್ಯಗಳಲ್ಲಿ  ಉತ್ತರಿಸಿ.

1. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾಗಿವೆ.
2. ಮಣೆಮಂಚಮ್ಮ  ಯಾರು?
ಮನೆಮಂಚಮ್ಮ ಗ್ರಾಮದೇವತೆ .
3. ಮನೆ ಮಂಚಮ್ಮನ  ಕತೆ ಹೇಳಿದ ಕವಿ ಯಾರು?
ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ಧಲಿಂಗಯ್ಯ .
4. ಶಿವಾನು¨ ಶಬ್ದಕೋಶ ಪುಸ್ತಕ ಬರೆದವರು ಯಾರು?
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಫ.ಗು.ಹಳಕಟ್ಟಿಯವರು .
5. ವಚನಕಾರರಿಗೆ ಯಾವುದು ದೇವರಾಗಿತ್ತು?
ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು .
6. ಅಶೋಕ ಪೈ ಅವರ ವೃತ್ತಿ ಯಾವುದು?
ಅಶೋಕ ಪೈ ಅವರು ಮನೋವೈದ್ಯರು .
7. ದೇವನೂರರ ನನ್ನ ದೇವರು ಯಾರೆಂಬುದನ್ನು  ಸ್ಪಷ್ಟೀಕರಿಸಿ.
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ. ಎಂದು
ದೇವರ ಮಹದೇವ ಅವರು ನನನ್ನ  ದೇವರು ಯಾರು ಎಂಬುದನ್ನು ಸ್ಪಷ್ಟಿಕರಿಸುತ್ತಾರೆ.

ಹೆಚ್ಚುವರಿ ಪ್ರಶ್ನೋತ್ತರಗಳು

8. ಮನೆಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ ?
ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ.
9.ವಚನಕಾರರು ತಮ್ಮ ಕಷ್ಟ ಸುಖ ,, ದುಃಖ ದುಮ್ಮಾನ, ಏಳುಬೀಳುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತಿದ್ದರು ?
ವಚನಕಾರರು ತಮ್ಮ ಕಷ್ಟ ಸುಖ , ದುಃಖ ದುಮ್ಮಾನ, ಏಳುಬೀಳುಗಳನ್ನು ತಮ್ಮ ಪ್ರತಿಜ್ನೆ  ಮುಂದೆ ಹೇಳಿಕೊಳ್ಳುತಿದ್ದರು  .
10. ನಮ್ಮೊಳಗೆ ಯಾವುದನ್ನ ಎಚ್ಚಗೊಳಿಸಬೇಕಾಗಿದೆ ?
ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಅಶೋಕ ಪೈ ಹೇಳಿದ ಆ ಸಂಶೋಧನಾ ಸತ್ಯವೇನೆಂದರೆ – ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್(ಟಿ.ವಿ) ನೋಡುತ್ತಿದ್ದಾರೆ.
ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಪಕ್ಕ ದ ಕೊಠಡಿಯಲ್ಲಿ ಏನೋ ಮಾತುಕತೆಯಾಡುತ್ತ ತಮ್ಮಷ್ಟಕ್ಕೆ ತಾವು ಇರುತ್ತಾರೆ. ಆಗ ಟೆಲಿವಿಷನ್(ಟಿ
(ಟಿ.ವಿ)ನಲ್ಲಿ ಯಾವುದಾದ ಕೊಲೆ ದೃಶ್ಯ ಬಂದಾಗ ಟೆಲಿವಿಷನ್(ಟಿ.ವಿ) ನೋಡುತ್ತಿದ್ದವರು ದು:ಖದ ಭಾವಳಗಾಗುತ್ತಾರೆ. ಇದು ಪಕ್ಕದ
ಕೊಠಡಿಯಲ್ಲಿ ಇರುವರು  ಮನಸ್ಸಿಗೂ ಮುಟ್ಟಿ ಅವರ ಮನಸ್ಸು  ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದೆ. ಅದೇ ಟೆಲಿವಿಷನ್(ಟಿ.ವಿ)ನಲ್ಲಿ ಯಾವುದಾದರೂ
ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರಲ್ಲಿ ಖುಷಿ ಭಾವನೇ  ಉಂಟಾಗುತ್ತದೆ. ಇದು ಪಕ್ಕದ ಕೊಠಠಡಿಯಲ್ಲಿ ಇದ್ದವರ ಮನಸ್ಸಿನ ಮೇಲೂ
ಪರಿಣಾಮ ಬೀರಿ ಸಂತೋಷದ ಭಾವನೆ ಉಂಟಾಗುತ್ತದೆ. ಈ ಸಂಶೋಧನಾ  ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.
ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತದೆ. ಈ
ಅನುಕಂಪನ ಇಡೀ ಜೀವಸಂಕುಲವೆಲ್ಲ ಒಂದೇ ಎಂದು ಹೇಳುತ್ತದೆ.
2. ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು? ವಿವರಿಸಿ.
ವಚನಕಾರರ ದೃಷ್ಟಿಯಲ್ಲಿ ಅರಿವು ಅಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳಿವಳಿಕೆ, ಜ್ಞಾನ ಮಾತ್ರ ಅಲ್ಲ. ಅದು ಕ್ರಿಯೆಯ ಅನುಭವದಿಂದ
ಒಡಮೂಡಿ ಬರುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ, ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು
ಅರಿವು ಎಂದು ಹೇಳಲಾಗಿದೆ .ಹೆಚ್ಚುವರಿ ಪ್ರಶ್ನೋತ್ತರಗಳು
3. ಅಶೋಕ ಪೈರವರ ಸಂಶೋಧನಾ ಸತ್ಯದ ತಿರುಳೇನು ?
ಅಶೋಕ ಪೈರವರ ಸಂಶೋಧನಾ ಸತತ್ಯದ ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ
ಪರಿಸರದಲ್ಲಿ  ಉಸಿರಾಡುತ್ತ ಇರುವ ಎಲ್ಲಾ ಜೀವಿಗಳೆಲ್ಲವೂ  ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವ ಕುಲವೆಲ್ಲ ಒಂದೇ
ಎಂದು  ಹೇಳುತ್ತದೆ.
4. ದೇವನೂರ ಮಹಾದೇವ ಅವರು ಗುರುತಿಸಿದ ವಚನಕಾರರ ಪ್ರಜ್ಞೆಯ ಬಗ್ಗೆ ತಿಳಿಸಿ.
ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು  ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರದೇ
ಆದ ಇಷ್ಟ ವ ಇದ್ದಿತು. ಅದೇ ಪ್ರಜ್ಞೆ , ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ   ಕಷ್ಟ ಸುಖ , ದುಃಖ ದುಮ್ಮಾನ,
ಏಳುಬೀಳುಗಳನ್ನು  ಅವರ ಉತ್ಕಟ ಇಕ್ಕಟ್ಟುಗಳನ್ನು  ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ
ಕೊಟ್ಟರು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಕವಿ ಸಿದ್ಧಲಿಂಗಯ್ಯ ಹೇಳಿದ ಕತೆಯನ್ನು ಬರೆಯಿರಿ.
ದೇವನೂರ  ಮಹಾದೇವ ಅವರಿಗೆ ಕವಿ ಸಿದ್ಧಲಿಂಗಯ್ಯ ಅವರು ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು ಹೇಳುತ್ತಾರೆ. ಆ ಕತೆ ಹೀಗಿದೆ
– ಒಂದು ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ  ಗ್ರಾಮದೇವತೆ ಮಂಚಮ್ಮಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಗುಡಿ ಕಟ್ತಾ ಇರುವಾಗ
ಗುಡಿಯ ಕಟ್ಟಡ ಚಾವಣಿ ಮಟ್ಟಕ್ಕೆ  ಬಂದಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ನಿಲ್ಸಿ ನನ್ ಮಕ್ಕಳಾ”
ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರ ಜನ ತಮ್ಮ ಕೆಲಸ ನಿಲ್ಲಿಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ. ಆಗ ಗ್ರಾಮದೇವತೆ ಮಂಚಮ್ಮ “ಏನ್ರಯ್ಯಾ
ಏನ್ ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು ‘ನಿನಗೊಂದು  ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳುತ್ತಾರೆ. ಪುನಃ ಆ ದೇವತೆ“ಓಹೋ
 ಗುಡಿಮನೆ ಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ  ಮಕ್ಕಳಾ ?”? ಎಂದು ಕೇಳುತ್ತಾಳೆ. ಆಗ ಒಬ್ಬನು
“ ತಾಯಿ” ಹೇಳುತ್ತಾಳೆ  ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು
ಹೇಳುತ್ತಾಳೆ. ಅಂದಿನಿಂದ  ಮಂಚಮ್ಮದೇವಿ ಮನೆಮಂಚಮ್ಮನಾಗುತ್ತಾಳೆ. ಚಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು
ಪೂಜಿತಳಾಗುತ್ತಿದ್ದಾಳೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ.”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ ಎಂಬ
ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ವಾಕ್ಯವನ್ನು  ಮಣೆಮಂಚಮ್ಮ ದೇವತೆ , ತನಗೆ ಗುಡಿ ಕಟ್ಟುತ್ತಿದ್ದ ಜನರಿಗೆ ಹೇಳುತ್ತಾಳೆ. ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ
ಗ್ರಾಮದೇವತೆ ಮಂಚಮ್ಮಗೆ ಗುಡಿಕಟ್ಟುವಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆ ಮಂಚಮ್ಮ ಆವಾಹಿಸಿಕೊಂಡು “ಏನ್ರಯ್ಯಾ ಏನ್
ಮಾಡ್ತಾ ಇದ್ದೀರಿ ?” ಎನ್ನುತ್ತಾಳೆ. ಅಲ್ಲಿನ ಜನರು  ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’
ತಾಯಿ ಎಂದು ಹೇಳುತ್ತಾರೆ. ಆಗ ದೇವತೆ“ಓಹೋ,ಗುಡಿಮನೆ ಕಟ್ತಾ ಇದ್ದೀರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ನ  ಮಕ್ಕಳಾ ?”
? ಎಂದು ಕೇಳಿದಾಗ ಒಬ್ಬನು “ನನಗಿಲ್ಲತಾಯಿ” ಹೇಳುತ್ತಾರೇ ಆಗ ಗ್ರಾಮದೇವತೆ ಮಂಚಮ್ಮ“ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ”ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ಗುಡಿಕಟ್ಟುವ ಜನನರಿಗೆ ಮನೆ ಇಲ್ಲದ ಮೇಲೆ  ಗುಡಿಮನೆ ಎಂದು ಗ್ರಾಮದೇವತೆ ಹೇಳುವ ಈ ಮಾತು ಸಮಾನತೆಯ
ತತ್ವವನ್ನು ಪತಿ್ರ ಬಿಂಬಿಸುತ್ತದೆ.
2. “ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.”
ಆಯ್ಕೆ : ಈ ವಾಕ್ಯವನ್ನು  ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ಎಂಬ
ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ಲೇಖಕರು ಬುದ್ಧನ ಕಾರುಣ್ಯ ತಮ್ಮ  ಮನದಲ್ಲಿ ಕೂತ ಬಗೆಯನ್ನು ಅಶೋಕ ಪೈರವರು ಹೇಳಿದ ಸಂಶೋಧನಾ   ಉದಾಹರಣೆ
ನೀಡಿ ಅರ್ಥೈಸುವ ಸಂದರ್ಭದಲ್ಲಿ ಈ ಮಾತು ಬಂದಿದೆ. ಟಿ.ವಿ ನೋಡುವ ಭಾವನೆಗಳು ಪಕ್ಕದ ಕೊಠಡಿಯಲ್ಲಿದ್ದವರ ಮೇಲೆ ಹೇಗೆ
ಪರಿಣಾಮ ಬೀರಿತೋ, ಹಾಗೆಯೇ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ
ಇರುವ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವನ  ಕುಲವೆಲ್ಲ ಒಂದೇ ಎಂದು ಅರ್ಥೈಸಿದಸಂದ¨ ವಾಗಿದೆ.
ಸ್ವಾರಸ್ಯ : ಯಾವ ಜೀವಿಯು ಸ್ವತಂತ್ರವಾಗಿ ಬದುಕಲು ಸಾಧ್ಯವಿಲ್ಲ , ಜೀವಿಗ ಪರಸ್ಪರಾವಲಂಬಿಗಳು, ಇಡೀ ಜೀವಕುಲವೆಲ್ಲ ಒಂದೇ ಎಲ್ಲರೂಸಮಾನ ಎಂದು ಹೇಳಿರುವುದು ಸ್ವಾರಸ್ಯಪೂರ್ಣವಾಗಿ ಬಂದಿದೆ.
3. “ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು”
ಆಯ್ಕೆ : ಈ ವಾಕ್ಯವನ್ನು ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ ಎಂಬ
ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಡಿರಲಿಲ್ಲ
. ಪ್ರತಿಯೊಬ್ಬ ವಚನಕಾರರಿಗೂ ಅವರವರ ಆದ ಇಷ್ಟ ಇದ್ದಿತು. ಅದೇ ಪe, ಅಂದರೆ “ ವಚನಕಾರರಿಗೆಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ  ಕಷ್ಟ ಸುಖ , ದುಃದುಮ್ಮಾನ, ಏಳುಬೀಳುಗಳನ್ನು ಅವರ ಉತ್ಕಟ ಇಕ್ಕಟ್ಟುಗಳನ್ನು ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ ಎಂದು ಪ್ರಜ್ಞೆಯ ಬಗ್ಗೆ ವಿವರಿಸುವಾಗ ಈ ಮಾತು ಬಂದಿದೆ.
ಸ್ವಾರಸ್ಯ : ವಚನಕಾರರಿಗೆ ಇಷ್ಟ ವದ ರೀತಿಯಲ್ಲಿ ಇದ್ದ ಪ್ರಜ್ಞೆಯಂತೆಪ್ರತಿಯೊಬ್ಬರಲ್ಲಿ ಪ್ರಜ್ಞೆ ಜಾಗೃತವಾಗಿ ಎಂಬುದನ್ನು  ಸ್ವಾರಸ್ಯಪೂರ್ಣವಾಗಿ ವಿವರಿಸಿದ್ದಾರೆ.
4. “ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.”
ಆಯ್ಕೆ : ಈ ವಾಕ್ಯವನ್ನು  ದೇವನೂರ ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ ’ ಎಂಬ ಕೃತಿಯಿಂದ ಆಯ್ದ ‘ಎದೆಗೆ ಬಿದ್ದ ಅಕ್ಷರ ’ಎಂಬ
ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ (ತಳಮಳ  )ಗೊಂಡು ನರಳುತ್ತಿರುವ ಈ ಜಗತ್ತು ತನ್ನ ಆಳದ ಒಳ ಸಮಷ್ಟಿ
ಮನಸ್ಸಘಾಸಿಗೊಳಿಸುವುದು.ಈಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ . ಮನಸ್ಸು  ಘಾಸಿಗೊಳಗಾಗಬಾರ ದರೆ ಎಲ್ಲರಲ್ಲೂ ಕಾರುಣ್ಯಮೂಡಬೇಕು. ಆದ್ದರಿಂದ ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರಕಾರುಣ್ಯವನ್ನು ಎಚ್ಚಗೊಳಿಸಬೇಕಾಗಿದೆ   ಎಂದು ಹೇಳಿದಸಂವಾಗಿದೆ.
ಸ್ವಾರಸ್ಯ : ಸಮ  ಸ್ತರು ಸಮಾನ ಆದ್ದರಿಂದ ಕಾರುಣ್ಯ ಮನೋಭಾವ ಎಲ್ಲರ ಮನದಲ್ಲೂ ಮೂಡಿಬರಬೇಕು ಆಗ ಸಮಾಜ ಘಾಸಿಗೊಳ್ಳುವುದಿಲ್ಲ
ಎಂದು ಅಥೈಸಿರುವುದು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಗೊಂಡಿದೆ.

ಭಾಷಾ ಚಟುವಟಿಕೆ

1. ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ.
ಕಕ್ಕಾಬಿಕ್ಕಿ, ಆರಂಭಿಸು, ಪ್ರಯತ್ನಿಸು, ಘಾಸಿಗೊಳಿಸು.
ಕಕ್ಕಾಬಿಕ್ಕಿ: ವಿದ್ಯಾರ್ಥಿಗಳು ಹಾವನ್ನ  ನೋಡಿ ಕಕ್ಕಾಬಿಕ್ಕಿಯಾಗಿ ಓಡಿ ಹೋದರು.
ಆರಂಭಿಸು: ವಿಶ್ವೇಶ್ವರಯ್ಯನವರು  ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು  ಆರಂಭಿಸಿದರು.
ಪ್ರಯತ್ನಿಸು: ವಿದ್ಯಾರ್ಥಿಗಳು ೧೦ನೇ ತರಗತಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸಬೇಕು.
ಘಾಸಿಗೊಳಿಸು: ಸೋಲು ಉಂಟಾಯಿತೆಂದು  ಮನಸ್ಸಿಗೆ ಘಾಸಿಮಾಡಿಕೊಳ್ಳಬಾರದು.

ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ.

ಒಳಿತು, ಸಮಷ್ಟಿ, ಪುಣ್ಯ, ಬೆಳಕು  , ಧರ್ಮ
ಒಳಿತು ಘಿ ಕೆಡುಕು ಸಮಷ್ಟಿ ಘಿ ವ್ಯಷ್ಠಿ ಪುಣ್ಯ ಘಿ ಪಾಪ ಬೆಳಕು ಘಿ ಕತ್ತಲು
ಧರ್ಮ ಘಿ ಅಧರ್ಮ
10th class Kannada Edege Bidda Akshara Kannada Notes lesson question answer pdf lesson summary in Kannada deevige
10ನೇ ತರಗತಿ ಎದೆಗೆ ಬಿದ್ದ ಅಕ್ಷರ ಪ್ರಶ್ನೆ ಉತ್ತರ ನೋಟ್ಸ್ 10th Class Edege Bidda Akshara Kannada Notes, Lesson, Question Answer Summary text book pdf

SSLC 10th Kannada Edege Bidda Akshara Kannada Notes  Kannada Deevige 10th Notes Edege Bidda Akshara Pata Notes Question answer text book pdf download


ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh