10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಕನ್ನಡ ನೋಟ್ಸ್‌ | 10th Standard Shrestha Bharatiya chintanegalu Notes

10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು,,10th Standard Shrestha Bharatiya Chintanegalu Kannada Notes Question Answer Mcq Pdf Download in Kannada Medium Karnataka State Syllabus 2024, Kseeb Solutions For Class 10 Kannada Chapter 7 Notes SSLC Kannada 7th Chapter Notes 10th kannada 7th Lesson Notes

 

Shrestha Bharatiya Chintanegalu Notes Question Answer

10th standard shrestha bharatiya chintanegalu kannada

ಕೃತಿಕಾರರ ಪರಿಚಯ

ಶತಾವಧಾನಿ ಡಾ . ಆರ್ . ಗಣೇಶ್

ಶತಾವಧಾನಿ ಡಾ . ಆರ್ . ಗಣೇಶ್ ಅವರು ಕೋಲಾರದವರು , ಅವರ ತಾಯಿ ತಂದೆಯರು ಅಲಮೇಲಮ್ಮ ಮತ್ತು ಶಂಕರನಾರಾಯಣ ಅಯ್ಯರ್ , ಬಿ.ಇ. , ಎಂ.ಎಸ್ಸಿ . , ಎಂ.ಎ , ಮತ್ತು ಡಿ.ಲಿಟ್ . ಪದವೀಧರರಾದ ಗಣೇಶ್ ಅವರು ನಮ್ಮ ದೇಶದ ಕವಿ ವಿದ್ವಾಂಸರಲ್ಲಿ ಪ್ರಮುಖರು . ಇವರು ಕರ್ನಾಟಕದಲ್ಲಿ ಕಣ್ಮರೆಯಾಗಿದ್ದ ‘ ಅವಧಾನ ‘ ಕಲೆಯನ್ನು ಪುನರುಜ್ಜಿವನ ಮಾಡಿದ್ದಾರೆ . ಇದುವರೆಗೆ ೧೨೦೦ ಕ್ಕೂ ಹೆಚ್ಚು ಅಷ್ಟಾವಧಾನಗಳನ್ನು , ಐದು ಶತಾವಧಾನಗಳನ್ನು ನಡೆಸಿದ್ದಾರೆ . ಕನ್ನಡ , ತೆಲುಗು , ಸಂಸ್ಕೃತ , ಪ್ರಾಕೃತ , ಪಾಲಿ ಮೊದಲಾದ ಭಾರತೀಯ ಭಾಷೆಗಳಲ್ಲಿ ಪರಿಣತಿ ಗಳಿಸಿರುವ ಇವರು ಗ್ರೀಕ್ ಮೊದಲಾದ ಪಾಶ್ಚಾತ್ಯ ಭಾಷೆಗಳ ಪರಿಚಯವನ್ನೂ ಹೊಂದಿದ್ದಾರೆ

ಸಾಹಿತ್ಯ , ಕಲೆ , ಸಂಸ್ಕೃತಿ ಮೊದಲಾದ ವಿಷಯಗಳನ್ನು ಕುರಿತು ಸಾವಿರಾರು ಘಂಟೆ ಉಪನ್ಯಾಸಗಳನ್ನು ಮಾಡಿದ್ದಾರೆ , ಅರವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ . ಅರ್ಷಕಾವ್ಯಗಳ ನುಡಿಬೆಡಗು , ಷಡರ್ಶನಸಂಗ್ರಹ , ಭಾರತೀಲೋಚನ , ಬ್ರಹ್ಮಪುರಿಯ ಭಿಕ್ಷುಕ , ನಿತ್ಯನೀತಿ , ಭಾರತೀಯ ಕ್ಷಾತ್ರಪರಂಪರೆ , ಕಲಾಕೌತುಕ ಮುಂತಾದವು ಇವರ ಕನ್ನಡ ಕೃತಿಗಳು . ‘ ಮಣ್ಣಿನ ಕನಸು ‘ ಇವರು ಬರೆದಿರುವ ವಿಶಿಷ್ಟ ಕಾದಂಬರಿ , “ ಕನ್ನಡದಲ್ಲಿ ಅವಧಾನಕಲೆ ” ಎಂಬ ಅವರ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ತನ್ನ ಪ್ರಪ್ರಥಮ ಡಿ.ಲಿಟ್ . ಪದವಿಯನ್ನು ನೀಡಿತು . ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲೂ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ . ಶಾಸ್ತ್ರೀಯ ನೃತ್ಯ , ಸಂಗೀತ ಮತ್ತು ಯಕ್ಷಗಾನಗಳಿಗೆ ಇವರ ಕೊಡುಗೆ ಮೌಲಿಕವಾಗಿದೆ . ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ , ರಾಷ್ಟ್ರಪತಿಗಳು ನೀಡುವ ಬಾದರಾಯಣ ವ್ಯಾಸ ಸಮ್ಮಾನವೇ ಮೊದಲಾದ ಅನೇಕ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ .

Shrestha Bharatiya Chintanegalu in Kannada Pdf

ಆಶಯ ಭಾವ

ನಮ್ಮ ರಾಷ್ಟ್ರವು ಜಗತ್ತಿಗೆ ಅನೇಕ ಮೌಲಿಕ ತತ್ತ್ವಗಳನ್ನು ಪರಿಚಯಿಸಿದೆ . ಅವುಗಳ ಪೈಕಿ ಕೆಲವು ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಸಲ್ಲಬಹುದಾದ ಮೌಲ್ಯಗಳಾಗಿವೆ . ಇವುಗಳನ್ನು ಚೆನ್ನಾಗಿ ತಿಳಿದು ಮೈಗೂಡಿಸಿಕೊಂಡರೆ ನಮ್ಮ ವೈಯಕ್ತಿಕ ಜೀವನವನ್ನು ಹಸನಾಗಿಸಿ ಆ ಮೂಲಕ ಸಾಮಾಜಿಕ ಜೀವನವನ್ನೂ ಸುಂದರಗೊಳಿಸುವುದು ಸಾಧ್ಯ . ಇಂಥ ಕೆಲವು ಮೂಲಭೂತ ತತ್ತ್ವಗಳನ್ನು ಈ ಪಾಠದ ಉದ್ದೇಶ . ಸರಳವಾಗಿ ಪರಿಚಯಿಸುವುದು

( ೧ ) ಋತ ಎಂಬ ಶಬ್ದವು ಆಧುನಿಕ ಕಾಲದಲ್ಲಿ ಹೆಚ್ಚು ಬಳಕೆಯಾಗದೆ ಇದ್ದರೂ ಇದು ಭಾರತೀಯ ಸಂಸ್ಕೃತಿಯು ಜಗತ್ತಿಗೆ ಕೊಟ್ಟ ಒಂದು ಮಹೋನ್ನತ ಮೇಲಕ್ಕೆಸೆದ ಚೆಂಡು ಮತ್ತೆ ಭೂಮಿಯತ್ತ ಬೀಳುತ್ತದೆ ಎಂಬುದು ಕಣ್ಣಿಗೆ ಕಾಣುವ ಹೀಗೆ ವಾಪಸು ಭೂಮಿಯತ್ತ ಬರಲು , ಭೂಮಿಯ ಗುರುತ್ವವು ಚೆಂಡಿನ ಮೇಲೆ ಕಾರ್ಯವೆಸಗುವುದು ಎಂಬುದು “ ಋತ ” , ಭೂಮಿಯು ನಮ್ಮೆಲ್ಲರನ್ನೂ ತನ್ನ ಗುರುತ್ವದಿಂದ ಹಿಡಿದಿಟ್ಟಿದೆ , ಹಾಗೆಯೇ ನಮ್ಮ ಜೀವನಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಒಳಗೊಂಡಿದೆ . ಋಣಪ್ರಜ್ಞೆ ಮನುಷ್ಯಕುಲಕ್ಕೆ ಹಾನಿಯಾಗದಂತೆ ಭೂಮಿಯ ಧರ್ಮ ಗುರುತ್ವ , ಸೂರ್ಯನ ಧರ್ಮ – ಬೆಳಗುವುದು . ಸತ್ಯವು ಮೇಲ್ನೋಟಕ್ಕೆ ಎಲ್ಲರಿಗೂ ಕಾಣಿಸಬಲ್ಲುದಾದರೂ “ ಋತ ” ವನ್ನು ಕಾಣಲು ಹೆಚ್ಚಿನ ಪರಿಶ್ರಮ , ಸಂಸ್ಕಾರ ಬೇಕಾಗುತ್ತದೆ . ಹಾಗಾಗಿ ನಾವು ಭೂಮಿಗೆ ಕೃತಜ್ಞರಾಗಿರಬೇಕೆಂಬ ಭಾವವೇ ನಮ್ಮ ಬಾಳನ್ನು ಬಾಳುವುದು ನಮ್ಮ ಹಾಗೆಯೇ ( ೨ ) ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಇನ್ನೊಬ್ಬರಿಗೆ ನಮ್ಮ ವಸ್ತುಗಳನ್ನು ಅಥವಾ ಬಾಳಿನ ಯಾವುದೋ ಸಂಗತಿಯನ್ನು ಕೊಡುವುದೇ “ ಯಜ್ಞ ” ಆ ಅರ್ಥದಲ್ಲಿ , ಪ್ರತಿಫಲದ ನಿರೀಕ್ಷೆ ಮಾಡದೆ ತಾಯಿಯು ತನ್ನ ಮಗುವನ್ನು ಪೋಷಿಸುವುದು ಕೂಡ ಯಜ್ಞವೇ , ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾಡಿದ ತ್ಯಾಗಕ್ಕೆ “ ದಾನ ” ವೆಂದು ಹೆಸರು . ಮತ್ತು ಇಂಥ ತ್ಯಾಗಕ್ಕೆ ನಮ್ಮ ಮನಸ್ಸನ್ನು ಸಿದ್ಧಗೊಳಿಸುವುದೇ “ ತಪಸ್ಸು ” , ಲಾಭದ ಅಪೇಕ್ಷೆ ಇಲ್ಲದೆ ಏನನ್ನಾದರೂ ಯಾಕೆ ಮಾಡಬೇಕು ಎಂಬ ಪ್ರಶ್ನೆಗೆ “ ಋತ ” ದಲ್ಲಿ ಉತ್ತರವಿದೆ . ಉದಾಹರಣೆಗೆ ಜನರು ಮಾವಿನ ಗಿಡಗಳನ್ನು ನೆಡುತ್ತಾರೆ . ಅವರು ತಮ್ಮ ಜೀವನದಲ್ಲಿ ತಿಂದ ಮಾವಿನ ಹಣ್ಣುಗಳನ್ನು ಕೊಟ್ಟ ಮರಗಳನ್ನು ನೆಟ್ಟವರು ಯಾರೋ ಹಿರಿಯರು , ಮತ್ತು ಈಗ ಇವರು ನೆಡುವ ಗಿಡಗಳ ಹಣ್ಣುಗಳನ್ನು ತಿನ್ನುವವರು ಮುಂದಿನ ತಲೆಮಾರಿನವರು . ಹೀಗೆ “ ಬೇರೆಯವರ ತ್ಯಾಗದಿಂದ ನಾನು ಬಹಳಷ್ಟು ಲಾಭಗಳನ್ನು ಪಡೆದಿದ್ದೇನೆ . ನನ್ನ ಕಾರ್ಯಗಳಿಂದ ಉಳಿದವರು ಲಾಭ ಪಡೆಯಲಿ ” ಎಂಬ ಮನಸ್ಥಿತಿಯೇ ತಪಸ್ಸು .

( ೩ ) ಭಾರತೀಯ ಸಂಸ್ಕೃತಿಯಲ್ಲಿ ವಿವರಿಸಿರುವ ನಾಲ್ಕು ಪುರುಷಾರ್ಥಗಳೆಂದರೆ ಧರ್ಮ , ಅರ್ಥ , ಕಾಮ ಮತ್ತು ಮೋಕ್ಷ . ಇದರಲ್ಲಿ ಕಾಮ , ಅರ್ಥಾತ್ ಬಯಕೆ ಎಂಬುದು ಜೀವಕೇಂದ್ರಿತ . ಮನುಷ್ಯನು ಸುಖವಾಗಿ ಬದುಕುವುದನ್ನು ಇಚ್ಛಿಸುತ್ತಾನೆ . ಅದನ್ನು ಪೂರೈಸಿಕೊಳ್ಳಲು ಅರ್ಥಸಂಪಾದನೆಯು ಅವಶ್ಯಕ . ಹಾಗಾಗಿ ಅರ್ಥವು ಜಗತೇಂದ್ರಿತ . ಇವೆರಡನ್ನು ಬೆಸೆಯುವ ಮೌಲ್ಯವೇ ಧರ್ಮ , ಮನುಷ್ಯನು ಇಹದಲ್ಲಿ ಧರ್ಮಮಾರ್ಗದಲ್ಲಿ ಬದುಕಿ , ನಂತರ ಮೋಕ್ಷದ ದಾರಿಗೆ ಹೊರಳಿಕೊಳ್ಳಬೇಕು . ಮನುಷ್ಯನು ಎಂದಿಗೂ ತನ್ನ ಸ್ವಧರ್ಮದಲ್ಲಿ ನಡೆಯುವುದು ಉಚಿತವಾದದ್ದು . ತನ್ನ ಇಚ್ಛೆ , ಆಸಕ್ತಿ , ಮನೋಧರ್ಮ , ವ್ಯಕ್ತಿತ್ವ , ಭಾವನೆ ಇವೆಲ್ಲ ತನಗೊಬ್ಬನಿಗೇ ವಿಶಿಷ್ಟವಾದದ್ದು ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ . ನಮ್ಮ ಶೀಲ , ಗುಣ , ಜ್ಞಾನಗಳಲ್ಲಿ ನೂರಕ್ಕೆ ನೂರು ಹೊಂದಿಕೆಯಾಗಬಲ್ಲ ವ್ಯಕ್ತಿಗಳನ್ನು ಹುಡುಕುವುದು ಸಾಧ್ಯವಿಲ್ಲ . ಹಾಗಾಗಿ ನಮ್ಮ ಅನನ್ಯ ವ್ಯಕ್ತಿತ್ವವೇ ಒಟ್ಟಾಗಿ ನಮ್ಮ “ ಸ್ವಧರ್ಮ ” . ನಮ್ಮ ವ್ಯಕ್ತಿವಿಶಿಷ್ಟತೆಯನ್ನು ನಾವು ಅರಿತುಕೊಂಡಾಗ ಪೂರ್ಣ ಪ್ರಮಾಣದಲ್ಲಿ ಅದನ್ನು ದುಡಿಸಿಕೊಳ್ಳುವುದು ಸಾಧ್ಯವಾಗುತ್ತದೆ . ಉದಾಹರಣೆಗೆ ಹಾಡಿನಲ್ಲಿ ಆಸಕ್ತಿಯೂ ಶಾರೀರವೂ ಇರುವ ವ್ಯಕ್ತಿ ತನ್ನ ಜೀವನದ ಪ್ರಾರಂಭದಲ್ಲೇ ಅದನ್ನು ಗುರುತಿಸಿ ಸಾಧನೆ ಮಾಡಿದರೆ ಉತ್ತಮ ಸಂಗೀತಗಾರನಾಗಿ ಹೆಸರಾಗಬಹುದು .

10th Class Shrestha Bharatiya chintanegalu Kannada Notes 2024

ಪದಗಳ ಅರ್ಥ :

ಋತ – ಜಗತ್ತಿನ ಹಿಂದೆ ಇರುವ ವ್ಯವಸ್ಥೆ ; ಸತ್ಯದ ನೆಲೆ

ಜೀವಪೋಷಕ – ಪ್ರಾಣಕ್ಕೆ ರಕ್ಷಣೆಯನ್ನು ನೀಡುವ

ಪರಂಪರೆ – ಕುಲ , ವಂಶ ; ಸಂಪ್ರದಾಯ

ಲೋಭ – ಅತಿಯಾದ ಆಸೆ

ತಥ್ಯ – ಸತ್ಯ . ನಿಜ

ಪಶ್ಚಾತ್ತಾಪ – ಮಾಡಿದ ತಪ್ಪಿಗೆ ಮರುಗುವುದು

ಪರಿಪಾಕ – ಸಂಪೂರ್ಣವಾಗಿ

10ನೇ ತರಗತಿ ಶ್ರೇಷ್ಠ ಭಾರತೀಯ ಚಿಂತನೆಗಳು ಕನ್ನಡ ನೋಟ್ಸ್‌

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಯಜ್ಞ ಎಂಬ ಶಬ್ದಕ್ಕೆ ಏನೇನು ಅರ್ಥಸ್ವಾರಸ್ಯಗಳಿವೆ ?

ಯಜ್ಞಕ್ಕೆ ‘ ಒಟ್ಟು ಸೇರುವಿಕೆ ‘ , ‘ ಹಂಚಿಕೊಂಡು ಬಾಳುವಿಕೆ ‘ , ‘ ತ್ಯಾಗ ಮಾಡುವಿಕೆ ‘ ಎಂಬೆಲ್ಲ ಅರ್ಥ ಸ್ವಾರಸ್ಯಗಳಿವೆ.

2. ಅನ್ನದ ವಿಷಯದಲ್ಲಿ ವೇದ ಏನು ಹೇಳಿದೆ ?

ಅನ್ನದ ವಿಷಯದಲ್ಲಿ ವೇದವು “ ಮನುಷ್ಯಾ ಅನ್ನಗತಪ್ರಾಣಾ ! ” ಎಂದು ಹೇಳಿದೆ .

3. ಪುರುಷಾರ್ಥ ಎಂದರೆ ಏನೆಂದು ಲೇಖಕರ ಅಭಿಪ್ರಾಯ ?

ನಮ್ಮೊಳಗಿನ ಆತ್ಮತತ್ತ್ವದ ಪ್ರಾಪ್ತಿಯ ಪರಿಯೇ ‘ ಪುರುಷಾರ್ಥ ‘ . ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ‘ ಪುರುಷಾರ್ಥ ‘ ಎಂಬುದು ಲೇಖಕರ ಅಭಿಪ್ರಾಯವಾಗಿದೆ .

4. ಆಚಾರವು ಯಾವುದಕ್ಕೆ ಸಂಬಂಧಿಸಿದೆ ?

‘ ಆಚಾರ’ವು ಮಾನವರ ಒಳಗಣ ಶಿಸ್ತಿಗೆ ಸಂಬಂಧಿಸಿದೆ .

5. ಧರ್ಮ ಎಂದು ನಮ್ಮ ಪರಂಪರೆ ಯಾವುದನ್ನು ಒಕ್ಕಣಿಸಿದೆ ?

ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವಿಲ್ಲ . ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ .

6. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ಯಾವುದು ?

ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ‘ ಯಜ್ಞ ‘ ,

7. ಬಾಳು ಹಸನಾಗಬೇಕಾದರೆ ಯಾವುದನ್ನು ಮೀರಬೇಕು ?

ಬಾಳು ಹಸನಾಗಬೇಕಾದರೆ ಜಿಪುಣತನವನ್ನು ಮೀರಬೇಕು

8. ಯಾವುದು ಸ್ವಧರ್ಮ ಎಂದು ಲೇಖಕರು ಹೇಳುತ್ತಾರೆ ?

“ ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ ” ಎಂದು ಲೇಖಕರು ಹೇಳಿದ್ದಾರೆ .

9. ಸ್ವಧರ್ಮದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ಯಾವುದು ?

ಸ್ವಧರ್ಮದ ವಿಷಯದಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ‘ ಪ್ರತಿಯೊಬ್ಬ ವ್ಯಕ್ತಿಯ ಒಳಗಿನ ನಿಶ್ಚಯ . ”

10 , ಮನಸ್ಸಿನ ನಿಜವಾದ ಉನ್ನತಿಯನ್ನು ತೋರುವ ಅಂಶ ಯಾವುದು ?

ತ್ಯಾಗವನ್ನು ಮಾಡಿಯೂ ಪಶ್ಚಾತ್ತಾಪ ಪಡೆದಿರುವುದು ನಿಜವಾದ ಮನಸ್ಸಿನ ಉನ್ನತಿಯಾಗಿದೆ .

SSLC Shrestha Bharatiya Chintanegalu Kannada Notes

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಯಜ್ಞಕ್ಕಿರುವ ಎರಡು ಮುಖಗಳು ಯಾವುವು ?

ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ತ್ಯಾಗವು ‘ ದಾನ’ವಾದರೆ ಹಾಗೆ ಮಾಡಲು ಬೇಕಾದ ಮನಸ್ಸಿನ ಪರಿಪಾಕವೇ ತಪಸ್ಸು ‘ , ಹೀಗೆ ಯಜ್ಞ ಎಂಬ ನಾಣ್ಯಕ್ಕೆ ದಾನ ಮತ್ತು ತಪಸ್ಸುಗಳೆಂಬ ಎರಡು ಮುಖಗಳಿವೆ . ಜೀವನದಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ನಾಣ್ಯ ಯಜ್ಞವೇ ಹೊರತು ಬೇರೆ ಬೇರೆ ದೇಶ – ಕಾಲಗಳಲ್ಲಿ , ಬೇರೆ ಬೇರೆ ಪ್ರಭುತ್ವಗಳಲ್ಲಿ ಚಲಾವಣೆಗೆ ಬರುವ ಹಣವಲ್ಲ .

2. ಮನುಷ್ಯನು ತನ್ನ ಒಳಿತನ್ನು ಹೇಗೆ ಸಾಧಿಸಬಹುದು ?

ಮಾನವನು ತನ್ನ ಜೀವನದಲ್ಲಿ ಒಳಿತನ್ನು ಇಬ್ಬಗೆಯಾಗಿ ಸಾಧಿಸಬಹುದೆಂದು ವೇದಗಳು ತಿಳಿಸುತ್ತವೆ . ಅವುಗಳೆಂದರೆ ‘ ಇಷ್ಟ ‘ ಮತ್ತು ‘ ಪೂರ್ತ ‘ ಎಂಬ ಎರಡು ಬಗೆಯ ವಿಧಾನಗಳು , ‘ ಇಪ್ಪ ‘ ಎಂಬುದು ಸಾಮಾನ್ಯವಾದ ಯಜ್ಞವನ್ನು ಸಂಕೇತಿಸುತ್ತದೆ . ಕೆರೆ – ಬಾವಿಗಳನ್ನು ಕಟ್ಟಿಸುವುದು , ಮರ – ಗಿಡಗಳನ್ನು ನೆಡುವುದು , ದೀನ – ದಲಿತರಿಗೆ ಸಹಾಯಮಾಡುವುದು , ಮಂಟಪ – ಧರ್ಮಸತಗಳ ನಿರ್ಮಾಣ ಮಾಡುವುದು , ಕವಿ – ಕಲಾವಿದರ ಪೋಷಣೆ ಮಾಡುವುದು . ಇವೇ ಮುಂತಾದ ಸಾಮಾನ್ಯವಾದ ಲೋಕೋಪಕಾರಗಳನ್ನು ‘ ಪೂರ್ತ ‘ ಎಂಬುದು ಸಂಕೇತಿಸುತ್ತದೆ .

3. ಋತ ಎಂದರೇನು ?

‘ ಸತ್ಯ ‘ ಎನಿಸಿದ ಅಸ್ತಿತ್ವದ ಹಿಂದಿರುವ ‘ ಋತ ‘ ಎಂಬ ವ್ಯವಸ್ಥೆ ಪ್ರಯತ್ನದಿಂದ ಮಾತ್ರ ಅನುಭವಕ್ಕೆ ಬರುತ್ತದೆ . ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆಷ್ಟು ಋಣಿಗಳಾಗಿದ್ದೇವೆಂಬ ಪ್ರಜ್ಞೆ ಮೂಡುತ್ತದೆ . ನಲ್ಲಿ ತಿರುಗಿಸಿದೊಡನೆ ನೀರು ಬರುವುದು ಅಸ್ತಿತ್ವವಾದರೆ ಹೀಗೆ ನೀರು ಬರಲು ವಿಜ್ಞಾನ – ತಂತ್ರಜ್ಞಾನಗಳ ಮಾನವ ವ್ಯವಸ್ಥೆ ಹಾಗೂ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು , ಮುಗಿಲುಗಳು , ಮಳೆ – ಗಾಳಿಗಳು , ರವಿಕಿರಣಗಳು , ಗಿಡ – ಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ ; ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ

4. ಋಣಕ್ಕೂ ಧರ್ಮಕ್ಕೂ ಇರುವ ಸಂಬಂಧವೇನು ?

ಋಣಕ್ಕೂ ಧರ್ಮಕ್ಕೂ ಪರಸ್ಪರ ಸಂಬಂಧವಿದೆ . ಪ್ರಕೃತಿಯ ಯಾವುದೇ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ . ಈ ಅರಿವು ಯಾರನ್ನೇ ಆದರೂ ಇಡೀ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡುತ್ತದೆ . ಈ ಕೃತಜ್ಞತೆಯ ಭಾವವೇ ‘ ಯ’ಪ್ರಜ್ಞೆ , ಒಮ್ಮೆ ನಾವು ನಮ್ಮ ಸುತ್ತಲಿನ ಜತ್ತಿನ ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನೆ ಇರಲಾಗುವುದಿಲ್ಲ . ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿಯು ಅದನ್ನು ತೀರಿಸುವ ಪ್ರಯತ್ನ ಮಾಡದೆ ಇರುವುದಿಲ್ಲ . ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ತಿಳಿಸಿದೆ .

5. ಪುರುಷ ಎಂಬ ಶಬ್ದಕ್ಕಿರುವ ಅರ್ಥವೇನು ?

ನಮ್ಮೊಳಗಿನ ಆತ್ಮತತ್ತ್ವದ ಪ್ರಾಪ್ತಿಯ ಪರಿಯೇ ‘ ಪುರುಷಾರ್ಥ ‘ ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ , ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ . ಇವೆರಡೂ ತಮ್ಮ ಸಾರ್ಥಕ್ಯವನ್ನು ನಲವಿನಲ್ಲಿ ಕಾಣುತ್ತವೆ . ಹೀಗೆ ಸತ್ + ಚಿತ್ ಆನಂದ ಎಂಬ ಇರವು , ಅರಿವು , ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ . ಹೀಗಾಗಿಯೇ ಇಲ್ಲಿ ಕಾಣುವ ‘ ಪುರುಷ ‘ ಎಂಬ ಪದಕ್ಕೆ ಗಂಡು ಎಂಬ ಸಂಕುಚಿತವಾದ ಅರ್ಥ ಸಲ್ಲುವುದಿಲ್ಲ . ಅದೇನಿದ್ದರೂ ಲಿಂಗಾತೀತವಾದ ಆತ್ಮವನ್ನು ಕುರಿತದ್ದು , ಇಂಥ ಆತ್ಮವೇ ಪರಬ್ರಹ್ಮವಸ್ತು .

6. ಸ್ವಧರ್ಮವು ಯಾವುದನ್ನು ಅವಲಂಬಿಸಿದೆ ?

ವ್ಯಕ್ತಿಯು ತನ್ನೊಳಗಿನ ಒಲವು – ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ . ಇಲ್ಲಿ ಕೂಡ ಹುಟ್ಟು ಮತ್ತು ಪರಿಸರಗಳು ತಮ್ಮ ಪ್ರಭಾವವನ್ನು ಸ್ವಲ್ಪಮಟ್ಟಿಗೆ ಬೀರುತ್ತವೆ . ಆದರೆ ಎಂದೂ ಎಲ್ಲಿಯೂ ಇವುಗಳಿಗಿಂತ ಮುಖ್ಯವಾದುದು , ನಾವೆಲ್ಲ ನಂಬಬಹುದಾದ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಒಳಗಿರುವ ನಿಶ್ಚಯವನ್ನು ಸ್ವಧರ್ಮವು ಅವಲಂಬಿಸಿದೆ .

ಇ ) ಈ ಕೆಳಗಿನ ಶಬ್ದಗಳ ಸ್ವಾರಸ್ಯವನ್ನು ಐದಾರು ವಾಕ್ಯಗಳಲ್ಲಿ ವಿಸ್ತರಿಸಿ ಬರೆಯಿರಿ ,

1. ಋತ :

ಭೌತಜಗತ್ತಿನ ಅಸ್ತಿತ್ವದ ಹಿಂದಿರುವ ಭೌತವ್ಯವಸ್ಥೆ ವಿಜ್ಞಾನಿಗಳಿಗೆ ಅರಿವಾದರೆ , ಭಾವಜಗತ್ತಿನ ಅಸ್ತಿತ್ವದ ಹಿಂದಿರುವ ಭಾವವ್ಯವಸ್ಥೆಯು ಕಲಾವಿದರಿಗೆ ಅರಿವಾಗುತ್ತದೆ . ಇವೆರಡೂ ಜಗತ್ತುಗಳ ಹಿಂದಿರುವ ತತ್ತ್ವಜ್ಞಾನಿಗಳಿಗೆ ತಿಳಿಯುತ್ತದೆ . ಹೀಗೆ ‘ ಸತ್ಯ ‘ ಎನಿಸಿದ ಅಸ್ತಿತ್ವದ ಹಿಂದಿರುವ ‘ ಋತ ‘ ಎಂಬ ವ್ಯವಸ್ಥೆ ಪ್ರಯತ್ನದಿಂದ ಮಾತ್ರ ಅನುಭವಕ್ಕೆ ಬರುತ್ತದೆ . ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆ ಎಷ್ಟು ಋಣಿಗಳಾಗಿದ್ದೇವೆಂಬ ಪ್ರಜ್ಞೆ ಮೂಡುತ್ತದೆ . ನಲ್ಲಿ ತಿರುಗಿಸಿದೊಡನೆ ನೀರು ಬರುವುದು ಅಸ್ತಿತ್ವವಾದರೆ ಹೀಗೆ ನೀರು ಬರಲು ವಿಜ್ಞಾನ – ತಂತ್ರಜ್ಞಾನಗಳ ಮಾನವವ್ಯವಸ್ಥೆಯಷ್ಟೇ ಅಲ್ಲದೆ ಇದಕ್ಕೂ ಮೂಲವೆನಿಸಿದ ಪ್ರಕೃತಿಯ ಭಾಗವಾದ ಕಡಲುಗಳು , ಮುಗಿಲುಗಳು , ಮಳೆ ಗಾಳಿಗಳು , ರವಿಕಿರಣಗಳು , ಗಿಡ – ಮರಗಳೇ ಮೊದಲಾದ ದೊಡ್ಡ ವ್ಯವಸ್ಥೆ ದುಡಿಯುತ್ತದೆ ; ಹೀಗಾಗಿ ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ

2 , ಋಣ :

ಪ್ರಕೃತಿಯ ಭಾಗವಾದ ಕಡಲುಗಳು , ಮುಗಿಲುಗಳು , ಮಳೆ – ಗಾಳಿಗಳು , ರವಿಕಿರಣಗಳು , ಗಿಡ – ಮರಗಳೇ ಮೊದಲಾದ ಅದೆಷ್ಟು ದೊಡ್ಡ ವ್ಯವಸ್ಥೆ ದುಡಿಯುತ್ತದೆ ; ಹೀಗಾಗಿ ಇಂಥ ಜೀವಪೋಷಕ ದ್ರವ್ಯವನ್ನು ಯಾರೊಬ್ಬರೂ ಪೋಲು ಮಾಡಬಾರದು ಎಂಬ ಅರಿವೇ ಋತ ಈ ಅರಿವು ಯಾರನ್ನೇ ಆದರೂ ಇಡಿಯ ವ್ಯವಸ್ಥೆಗೆ ಕೃತಜ್ಞರಾಗಿರುವಂತೆ ಮಾಡದೆ ಇರದು . ಇಲ್ಲವಾದಲ್ಲಿ ಆ ಅರಿವೇ ಹುಸಿಯೆನ್ನಬೇಕು . ಕೃತಜ್ಞತೆಯ ಈ ಭಾವವೇ ‘ ಋಣ’ಪ್ರಜ್ಞೆ , ಒಮ್ಮೆ ನಾವು ನಮ್ಮ ಸುತ್ತಲಿನ ಜಗತ್ತಿನ ವ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನಿರಲಾಗುವುದಿಲ್ಲ . ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿಯು ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವೇ ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ .

3. ಸತ್ಯ :

ಜಗತ್ತಿನ ಅಸ್ತಿತ್ವ ಎಲ್ಲರಿಗೂ ತೋರುತ್ತದೆ . ಈ ಅಸ್ತಿತ್ವದ ಹಿಂದಿನ ವ್ಯವಸ್ಥೆ ಕೆಲವರಿಗೆ ಮಾತ್ರ ಕಾಣುತ್ತದೆ . ಭೌತಜಗತ್ತಿನ ಅಸ್ತಿತ್ವದ ಹಿಂದಿರುವ ಭೌತವ್ಯವಸ್ಥೆ ವಿಜ್ಞಾನಿಗಳಿಗೆ ಅರಿವಾದರೆ ಭಾವಜಗತ್ತಿನ ಅಸ್ತಿತ್ವದ ಹಿಂದಿರುವ ಭಾವವ್ಯವಸ್ಥೆ ಕಲಾವಿದರಿಗೆ ಅರಿವಾಗುತ್ತದೆ . ಇವೆರಡೂ ಜಗತ್ತುಗಳ ಹಿಂದಿರುವ ತತ್ತ್ವವು ಜ್ಞಾನಿಗಳಿಗೆ ತಿಳಿಯುತ್ತದೆ . ಹೀಗೆ ‘ ಸತ್ಯ ‘ ಎನಿಸಿದ ಅಸ್ತಿತ್ವದ ಹಿಂದಿರುವ ‘ ಋತ ‘ ಎಂಬ ವ್ಯವಸ್ಥೆಯು ಪ್ರಯತ್ನದಿಂದ ಮಾತ್ರ ತಿಳಿಯಲು ಸಾಧ್ಯ ಋತದ ಅರಿವಾದ ಕೂಡಲೆ ನಾವು ಸತ್ಯಕ್ಕೆ ಎಷ್ಟು ಋಣಿಗಳಾಗಿದ್ದೇವೆ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ .

4. ಧರ್ಮ :

ಒಮ್ಮೆ ನಾವು ನಮ್ಮ ಸುತ್ತಲಿನ ಜಗದ್ಯವಸ್ಥೆಗೆ ಋಣಿಗಳೆಂದು ತಿಳಿದ ಬಳಿಕ ಸುಮ್ಮನಿರಲಾಗುವುದಿಲ್ಲ . ಸಾಲದ ಹೊರೆ ಹೊತ್ತ ಪ್ರಾಮಾಣಿಕ ವ್ಯಕ್ತಿ ಅದನ್ನು ತೀರಿಸುವ ಪ್ರಯತ್ನ ಮಾಡದಿರಲು ಸಾಧ್ಯವಿಲ್ಲ . ಇಂಥ ಪ್ರಯತ್ನವನ್ನೇ ‘ ಧರ್ಮ ‘ ಎಂದು ನಮ್ಮ ಪರಂಪರೆ ಒಕ್ಕಣಿಸಿದೆ . ಬಯಕೆ – ಈಡೇರಿಕೆಗಳ ಮೊತ್ತವೆನಿಸಿದ ಜೀವ ಜಗತ್ತುಗಳ ನಡುವೆ ಸಾಮರಸ್ಯವನ್ನು ಕಲ್ಪಿಸುವ , ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ . ಧರ್ಮದ ಕೇಂದ್ರ ಈಶ್ವರನಲ್ಲಿದೆ . ಈಶ್ವರನಲ್ಲಿ ವಿಶ್ವಾಸವಿರಿಸದ ಜನರೂ ಈ ಜಗತ್ತಿನಲ್ಲಿ ಇದ್ದಾರೆ . ಅಂಥವರ ಪಾಲಿಗೆ ಧರ್ಮ ಎನ್ನುವುದು ಕೇವಲ ಜಗತ್ತು – ಜೀವಗಳ ನಡುವೆ ಇರಬೇಕಾದ ಪ್ರಾಮಾಣಿಕ ವ್ಯವಹಾರವಾಗುತ್ತದೆ . ಪ್ರತಿಯೊಬ್ಬರೂ ತಮ್ಮ ತಮ್ಮ ಅರ್ಥ – ಕಾಮಗಳನ್ನು ಈಡೇರಿಸಿಕೊಳ್ಳುವಾಗ ಮತ್ತೊಬ್ಬರ ಇಂಥದ್ದೇ ಪ್ರಯತ್ನಗಳಿಗೆ ಅಡ್ಡಿಯಾಗುವಂತಿಲ್ಲ . ಈ ಬಗೆಯ ಶಿಸ್ತೇ ಅವರ ಮಟ್ಟಿಗೆ ಧರ್ಮ , ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ .

5. ಸ್ವಧರ್ಮ :

ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದಾದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ಪರಿಯೇ ಸ್ವಧರ್ಮ ಹಿಂದೆ ಸಮಾಜ ತುಂಬ ಸರಳವಾಗಿದ್ದಾಗ , ವಿಜ್ಞಾನತಂತ್ರಜ್ಞಾನಗಳ ಮೂಲಕ ದೇಶ – ಕಾಲಗಳ ಬದಲಾವಣೆ ಹೆಚ್ಚಿಲ್ಲದಿದ್ದಾಗ , ಸಂಪನ್ಮೂಲಗಳ ಸಮೃದ್ಧಿ- ವೈವಿಧ್ಯಗಳು ಕಡಿಮೆಯಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು . ಇಂಥ ವ್ಯವಸ್ಥೆ ಪರಿಪೂರ್ಣವೇನೂ ಅಲ್ಲ . ಅದು ಆ ಕಾಲಕ್ಕೆ ಸಾಕೆಂದು ತೋರಿರಬಹುದು . ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ . ಇಂದು ಹುಟ್ಟು ಮತ್ತು ಪರಿಸರಗಳ ಮೂಲಕವೇ ಸ್ವಧರ್ಮವನ್ನು ವ್ಯಕ್ತಿಯೊಬ್ಬ ಗುರುತಿಸಿಕೊಳ್ಳುವುದು ಸಾಧ್ಯವೂ ಇಲ್ಲ , ಅದು ಸಾಧುವೂ ಅಲ್ಲ .

6.ಈಶ್ವರ :

ಬಯಕೆ – ಈಡೇರಿಕೆಗಳ ಮೊತ್ತವೆನಿಸಿದ ಜೀವ – ಜಗತ್ತುಗಳ ನಡುವೆ ಸಾಮರಸ್ಯವನ್ನು ಉಂಟುಮಾಡುವ ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ , ಧರ್ಮದ ಕೇಂದ್ರ ಈಶ್ವರನಲ್ಲಿದೆ . ಜನಸಾಮಾನ್ಯರು ‘ ದೇವರು ‘ ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ‘ ಈಶ್ವರ ‘ ಎಂದು ಹೆಸರಿಸಿವೆ . ದಿಟವೇ , ಈಶ್ವರನಲ್ಲಿ ವಿಶ್ವಾಸವಿರಿಸದ ಜನರೂ ಈ ಜಗತ್ತಿನಲ್ಲಿ ಇದ್ದಾರೆ . ಅಂಥವರ ಪಾಲಿಗೆ ಧರ್ಮ ಎನ್ನುವುದು ಕೇವಲ ಜಗತ್ತು – ಜೀವಗಳ ನಡುವೆ ಇರಬೇಕಾದ ವ್ಯವಹಾರವಾಗುತ್ತದೆ . ಪ್ರತಿಯೊಬ್ಬರೂ ತಮ್ಮ ತಮ್ಮ ಅರ್ಥ – ಕಾಮಗಳನ್ನು ಈಡೇರಿಸಿಕೊಳ್ಳುವಾಗ ಮತ್ತೊಬ್ಬರ ಇಂಥದ್ದೇ ಪ್ರಯತ್ನಗಳಿಗೆ ಅಡ್ಡಿಯಾಗುವಂತಿಲ್ಲ . ಈ ಬಗೆಯ ಶಿಸ್ತೇ ಅವರ ಮಟ್ಟಿಗೆ ಧರ್ಮ , ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ .

7. ಪುರುಷಾರ್ಥ :

ಪ್ರಾಮಾಣಿಕ ನಮ್ಮೊಳಗಿನ ಆತ್ಮತತ್ವ ಉಂಟಾಗುವ ರೀತಿಯೇ ‘ ಪುರುಷಾರ್ಥ ‘ ಅಂದರೆ ತನ್ನನ್ನು ತಾನು ಅರಿಯುವ ಬಗೆಯೇ ಪುರುಷಾರ್ಥ ಎಂದಾಗುತ್ತದೆ . ಪರಮಾರ್ಥದಲ್ಲಿ ಇರವಿಗೂ ಅರಿವಿಗೂ ವ್ಯತ್ಯಾಸವಿಲ್ಲ . ಇವೆರಡೂ ತಮ್ಮ ಸಾರ್ಥಕ್ಯವನ್ನು ನಲವಿನಲ್ಲಿ ( ಆನಂದದಲ್ಲಿ ಕಾಣುತ್ತವೆ . ಹೀಗೆ ಸತ್ + ಚಿತ್ + ಆನಂದ ಎಂಬ ಇರವು , ಅರಿವು , ನಲವುಗಳ ಅಭಿಜ್ಞಾನವೇ ಪುರುಷಾರ್ಥದ ಅಂತರಂಗ ಹೀಗಾಗಿಯೇ ಇಲ್ಲಿ ಕಾಣುವ ‘ ಪುರುಷ ‘ ಎಂಬ ಪದಕ್ಕೆ ಗಂಡು ಎಂಬ ಸಂಕುಚಿತವಾದ ಅರ್ಥ ಸಲ್ಲುವುದಿಲ್ಲ . ಇಂಥ ಆತ್ಮವೇ ಪರಬ್ರಹ್ಮವಸ್ತು , ಧರ್ಮ , ಅರ್ಥ , ಕಾಮ , ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳ ಪೈಕಿ ಬಯಕೆಯೇ ಮೂಲವಾದ ಕಾಮವು ಜೀವಕೇಂದ್ರಿತವಾಗಿದ್ದರೆ ಇಂಥ ಬಯಕೆಯನ್ನು ಆಯಾ ಹೊತ್ತಿಗೆ ಈಡೇರಿಸಬಲ್ಲ ಸಾಧನಗಳನ್ನು ಪ್ರತಿನಿಧಿಸುವ ಅರ್ಥವು ಜಗತೇಂದ್ರಿತವಾಗಿದೆ .

ಈ ) ಈ ಕೆಳಗಿನ ವಾಕ್ಯಗಳ ಸ್ವಾರಸ್ಯವನ್ನು ಸಂದರ್ಭಸಹಿತ ವಿಸ್ತರಿಸಿ ಬರೆಯಿರಿ .

1. ಚಿನ್ನವಿಲ್ಲದೆ ಬದುಕಬಹುದು , ಅನ್ನವಿಲ್ಲದೆ ಬದುಕಲಾದೀತೆ ? | ” ಮನುಷ್ಯಾಃ ಅನ್ನಗತಪ್ರಾಣಾಃ ”

ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .

ಸಂದರ್ಭ : ‘ ಯಜ್ಞ ‘ ಎಂದರೆ ಬೆಂಕಿಯಲ್ಲಿ ತುಪ್ಪ ಸುರಿಯುವ , ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರು ಆಕ್ಷೇಪಿಸುವುದರ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಅಗ್ನಿಯಲ್ಲಿ ಯಾವುದಾದರೂ ಆಹಾರಪದಾರ್ಥವನ್ನು ಹಾಕಿದರೆ ಅದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ . ಹೀಗಿದ್ದರೂ ಅದನ್ನೇ ಮಾಡುವುದೆಂದರೆ – ತನಗೆ ಮರಳಿ ಬರುವುದೆಂಬ ಯಾವುದೇ ನಿಶ್ಚಯ ಇಲ್ಲದಿದ್ದರೂ ಕೊಡಬೇಕೆಂಬ ಜೀವನಪಾಠದ ಕಲಿಕೆಯಾಗಿದೆ . ಮನುಷ್ಯಾ ಅನ್ನಗತಪ್ರಾಣಾ ” ಎಂದು ವೇದ ಹೇಳಿದೆ . ಚಿನ್ನವಿಲ್ಲದೆ ಬದುಕಬಹುದು : ಆದರೆ ಅನ್ನವಿಲ್ಲದೆ ಬದುಕಲಾಗುವುದಿಲ್ಲ . ಹೀಗೆ ನಮಗೆ ಅವಶ್ಯವಾಗಿ ಬೇಕಾದ ಆಹಾರವನ್ನು ನಾವು ಸಾಂಕೇತಿಕವಾಗಿಯಾದರೂ ಅಗ್ನಿಗೆ ಅರ್ಪಿಸುವುದೆಂದರೆ ಅದು ಪ್ರತಿಫಲದ ಅಪೇಕ್ಷೆಯಿಲ್ಲದೆ ತ್ಯಾಗ ಮಾಡುವುದರ ಲಕ್ಷಣ ಎಂದು ಲೇಖಕರು ಈ ಸಂದರ್ಭದಲ್ಲಿ ಹೇಳಿದ್ದಾರೆ .

ಸ್ವಾರಸ್ಯ : ನಮಗೆ ಮರಳಿ ಸಿಗುವುದಿಲ್ಲ ಎಂಬ ಅರಿವಿದ್ದರೂ , ಯಜ್ಞಕ್ಕೆ ತುಪ್ಪ ಇತ್ಯಾದಿಗಳನ್ನು ಹಾಕುವುದರ ಮೂಲಕ ‘ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತ್ಯಾಗಮಾಡುವ ಜೀವನಪಾಠ ಕಲಿಯುತ್ತೇವೆ ‘ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

2. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ಯಜ್ಞ

ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .

ಸಂದರ್ಭ : ಯಜ್ಞ , ದಾನ ಮತ್ತು ತಪಸ್ಸುಗಳ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ‘ ಯಜ್ಞ ‘ , ಯಜ್ಞ ಎಂದರೆ ಬೆಂಕಿಯಲ್ಲಿ ತುಪ್ಪ ಸುರಿಯುವ , ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರು ಆಕ್ಷೇಪಿಸುತ್ತಾರೆ . ಅಗ್ನಿಗೆ ಆಹುತಿ ನೀಡುವುದು ಒಂದು ಸಂಕೇತ ಮಾತ್ರ . ಇದು ಬಟ್ಟೆಯಿಂದಾದ ಬಾವುಟಕ್ಕೆ ರಾಷ್ಟ್ರಧ್ವಜವೆಂದು ಎಲ್ಲರೂ ಗೌರವ ಸಲ್ಲಿಸುವ ರೀತಿಯಾಗಿದೆ . ಪ್ರಸ್ತುತ ಜಗತ್ತಿನಲ್ಲಿ ಹೊತ್ತುಹೊತ್ತಿನ ತುತ್ತಿಗಾಗಿ , ಅನ್ನ – ಚಿನ್ನಗಳಿಗಾಗಿ , ಹೆಣ್ಣು ಹೆಸರುಗಳಿಗಾಗಿ ಸೆಣಸಿ ಹೆಣಗುತ್ತಿರುವ ಮಾನವನು ಸಹಜವಾಗಿ ಜಿಪುಣನಾಗಿದ್ದಾನೆ . ಆದ್ದರಿಂದ ನಮ್ಮ ಸಂಸ್ಕೃತಿಯು ಅವನ ಜಿಪುಣತನವನ್ನು ಹೋಗಲಾಡಿಸಿ ಅವನಲ್ಲಿ ಉದಾರತೆಯನ್ನು ಉಂಟುಮಾಡುತ್ತದೆ ಎಂದು ಲೇಖಕರು ಹೇಳಿದ್ದಾರೆ .

ಸ್ವಾರಸ್ಯ : ಯಜ್ಞದಲ್ಲಿ ಅಗ್ನಿಗೆ ಸಾಂಕೇತಿಕವಾಗಿ ತುಪ್ಪವನ್ನು ಆಹುತಿ ನೀಡಲಾಗುತ್ತದೆ . ಆ ಮೂಲಕ ಮಾನವನಲ್ಲಿರುವ ಲೋಭತನವನ್ನು ಕಡಿಮೆ ಮಾಡುವುದು ಅದರ ಹಿಂದಿರುವ ಮುಖ್ಯ ಉದ್ದೇಶ ಎನ್ನುವುದು ಇಲ್ಲಿನ ಸ್ವಾರಸ್ಯವಾಗಿದೆ .

3. ಧರ್ಮದ ಕೇಂದ್ರ ಈಶ್ವರನಲ್ಲಿದೆ .

ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .

ಸಂದರ್ಭ : ಪುರುಷಾರ್ಥಗಳಾದ ಧರ್ಮ , ಅರ್ಥ , ಕಾಮ ಮತ್ತು ಮೋಕ್ಷಗಳ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ‘ ಬಯಕೆ – ಈಡೇರಿಕೆಗಳ ಮೊತ್ತವೆನಿಸಿದ ಜೀವ – ಜಗತ್ತುಗಳ ನಡುವೆ ಸಾಮರಸ್ಯವನ್ನು ಕಲ್ಪಿಸುವ , ವ್ಯವಸ್ಥೆಯನ್ನು ರೂಪಿಸುವ ಮೌಲ್ಯವೇ ಧರ್ಮ , ಧರ್ಮದ ಕೇಂದ್ರ ಈಶ್ವರನಲ್ಲಿದೆ . ಜನಸಾಮಾನ್ಯರು ‘ ದೇವರು ‘ ಎಂದು ನಂಬುವ ಪರತತ್ತ್ವವನ್ನೇ ಶಾಸ್ತ್ರಗಳು ‘ ಈಶ್ವರ ‘ ಎಂದು ಹೆಸರಿಸಿವೆ . ಈಶ್ವರನಲ್ಲಿ ವಿಶ್ವಾಸವನ್ನು ಇರಿಸಿದವರಿಗೆ ಧರ್ಮವು ಬರಿಯ ವ್ಯವಹಾರವಷ್ಟೇ ಅಲ್ಲದೆ ಆಚಾರವೂ ಆಗುತ್ತದೆ . ‘ ಎಂದು ಧರ್ಮದ ಅಸ್ತಿತ್ವದ ಬಗ್ಗೆ ಹೇಳಿದ್ದಾರೆ .

ಸ್ವಾರಸ್ಯ : ಜೀವ – ಜಗತ್ತುಗಳ ನಡುವೆ ಸಾಮರಸ್ಯ ಉಂಟುಮಾಡುವ ಮೌಲ್ಯವಾದ ಧರ್ಮದ ಕೇಂದ್ರವು ಪ್ರಕೃತಿಯ ಸ್ವರೂಪನಾದ ಈಶ್ವರನಲ್ಲಿ ಇದೆ ಎಂಬುದು ಇಲ್ಲಿನ ಸ್ವಾರಸ್ಯವಾಗಿದೆ .

4. ‘ ಪುರುಷಾರ್ಥಗಳ ಸಾಧನೆಗೆ ಸ್ವಧರ್ಮಾಚರಣೆ ಅತ್ಯಾವಶ್ಯಕ . ‘ ‘ ವ್ಯಕ್ತಿಯು ತನ್ನೊಳಗಿನ ಒಲವು – ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ ‘

ಆಯ್ಕೆ : ಈ ವಾಕ್ಯವನ್ನು ಶತಾವಧಾನಿ ಡಾ . ಆರ್ . ಗಣೇಶ್ ಅವರು ಬರೆದಿರುವ ‘ ಶ್ರೇಷ್ಠ ಭಾರತೀಯ ಚಿಂತನೆಗಳು ‘ ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ .

ಸಂದರ್ಭ : ‘ ಯಾವುದೇ ವ್ಯಕ್ತಿಯು ತನ್ನ ಸ್ವಭಾವಕ್ಕೆ ಅನುಸಾರವಾಗಿ ತನ್ನದೇ ಆದ ಬದುಕನ್ನು ರೂಪಿಸಿಕೊಳ್ಳುವ ಮೂಲಕ ತಾನೂ ತನ್ನ ಸುತ್ತಮುತ್ತಲ ಜಗತ್ತೂ ಹೆಚ್ಚಿನ ನೆಮ್ಮದಿಯನ್ನು ಗಳಿಸುವ ರೀತಿಯೇ ಸ್ವಧರ್ಮ ‘ ಎಂದು ಹೇಳುವ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ . ಹಿಂದಿನ ಕಾಲದಲ್ಲಿ ಸಮಾಜ ತುಂಬ ಸರಳವಾಗಿದ್ದಾಗ , ವಿಜ್ಞಾನತಂತ್ರಜ್ಞಾನಗಳ ಮೂಲಕ ದೇಶ – ಕಾಲಗಳ ಮಾರ್ಪಾಡು ಹೆಚ್ಚಿಲ್ಲದಿದ್ದಾಗ , ಸಂಪನ್ಮೂಲಗಳ ಸಮೃದ್ಧಿ – ವೈವಿಧ್ಯಗಳು ಕಡಿಮೆಯಿದ್ದಾಗ ಹುಟ್ಟು ಮತ್ತು ಪರಿಸರಗಳಿಂದಲೇ ಮಾನವರ ಸ್ವಧರ್ಮಗಳು ಬಲುಮಟ್ಟಿಗೆ ರೂಪಿತವಾಗುತ್ತಿದ್ದವು . ಆದರೆ ಪ್ರಸ್ತುತ ವ್ಯಕ್ತಿಯು ತನ್ನೊಳಗಿನ ಒಲವು ನಿಲವುಗಳಿಂದಲೇ ಸ್ವಧರ್ಮವನ್ನು ಗುರುತಿಸಿಕೊಳ್ಳುವ ಅನಿವಾರ್ಯತೆ ಇದೆ ‘ ಎಂದು ಲೇಖಕರು ವಿವರಿಸಿದ್ದಾರೆ.

ಸ್ವಾರಸ್ಯ : ಸಮಾಜದಲ್ಲಿ ವ್ಯಕ್ತಿಯು ಕೇವಲ ತನ್ನ ಬದುಕನ್ನು ಮಾತ್ರ ರೂಪಿಸಿಕೊಳ್ಳವುದು ಮಾತ್ರವಲ್ಲ ತನ್ನ ಸುತ್ತಲಿನ ಜಗತ್ತಿಗೂ ನೆಮ್ಮದಿಯನ್ನು ಉಂಟುಮಾಡಬೇಕೆಂಬ ನೀತಿಯು ಇಲ್ಲಿನ ಸ್ವಾರಸ್ಯವಾಗಿದೆ .

FAQ :

1. ಅನ್ನದ ವಿಷಯದಲ್ಲಿ ವೇದ ಏನು ಹೇಳಿದೆ ?

ಅನ್ನದ ವಿಷಯದಲ್ಲಿ ವೇದವು “ ಮನುಷ್ಯಾ ಅನ್ನಗತಪ್ರಾಣಾ ! ” ಎಂದು ಹೇಳಿದೆ .

2. ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ಯಾವುದು ?

ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗ ‘ ಯಜ್ಞ ‘ ,

ಇತರೆ ವಿಷಯಗಳು :

10th Standard All Subject Notes

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 10ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh