ಪ್ರಥಮ ಪಿ.ಯು.ಸಿ. ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ | 1st Puc History Chapter 1 Notes Question Answer

ಪ್ರಥಮ ಪಿ.ಯು.ಸಿ. ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 1st Puc History Chapter 1 Notes Question Answer Pdf Downbload 2024 Kseeb Solutions For Class 11 Chapter 1 Notes Pdf ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ

1st Puc History Chapter 1

1st Puc History Chapter 1 Notes

 

I. ಈ ಕೆಳಗಿನವುಗಳಿಗೆ ಒಂದು ಪದ ಅಥವಾ ಒಂದು ವಾಕ್ಯದಲ್ಲಿ ಉತ್ತರಿಸಿ .

1. ಹೆರೊಡೋಟಸ್ ಯಾವ ದೇಶಕ್ಕೆ ಸೇರಿದವನು ?

“ ಹೆರೋಡೋಟಿಸ್ ” ಗ್ರೀಕ್ ದೇಶಕ್ಕೆ ಸೇರಿದವನು .

2. “ ಹೆರೋಡೋಟಿಸ್‌ ನ ಕೃತಿಯನ್ನು ಹೆಸರಿಸಿ .

“ ಹೆರೋಡೋಟಿಸ್ನ ಕೃತಿ – “ ದಿ ಹಿಸ್ಟ್ರಿ ಆಫ್ ಪರ್ಷಿಯನ್ ವಾರ್ಸ್ ( ಪರ್ಷಿಯನ್ ಕದನಗಳ ಇತಿಹಾಸ ) .

3. ‘ ದಿ ಸಿಟಿ ಆಫ್ ಗಾಡ್ ‘ ಕೃತಿಯನ್ನು ಬರೆದವನು ಯಾರು ?

‘ ದಿ ಸಿಟಿ ಆಫ್ ಗಾಡ್ ‘ ಕೃತಿಯನ್ನು ಬರೆದವನು ‘ ಸಂತ ಆಗಸ್ಟ್ರನ್

4 . ‘ ಹಿಸ್ಟರಿ ‘ ಪದದ ಅರ್ಥವೇನು ?

‘ ಹಿಸ್ಟರಿ ‘ ಪದದ ಅರ್ಥ “ ವಿಚಾರಣೆ ” ಅಥವಾ “ ತನಿಖೆ ” .

5 .’ ಹಿಸ್ಟರಿ ‘ ಪದವು ಯಾವ ಭಾಷೆಯಿಂದ ಬಂದಿದೆ ?

‘ ಹಿಸ್ಟರಿ ‘ ಎಂಬ ಪದವು ಗ್ರೀಕ್ ಭಾಷೆಯಿಂದ ಬಂದಿದೆ .

6.“ ಇತಿಹಾಸದ ಪಿತಾಮಹ ” ಎಂದು ಯಾರನ್ನು ಕರೆಯಲಾಗಿದೆ ? ‘

ಹೆರೊಡೊಟಸ್’ನನ್ನು ಇತಿಹಾಸದ ಪಿತಾಮಹ ಎಂದು ಕರೆಯಲಾಗಿದೆ .

7.‌ ಇತಿಹಾಸದ ಆರ್ಥಿಕ ಅರ್ಥ ವಿವರಣೆಯನ್ನು ನೀಡಿದವನು ಯಾರು ?

ಇತಿಹಾಸದ ಆರ್ಥಿಕ ವಿವರಣೆಯನ್ನು ನೀಡಿದವನು ‘ ಕಾರ್ಲ್‌ಮಾರ್ಕ್ಸ್ ‘

8. ಕಾರ್ಲ್‌ಮಾರ್ಕ್ಸ್‌ನ ಇತಿಹಾಸದ ವ್ಯಾಖ್ಯೆಯನ್ನು ಬರೆಯಿರಿ .

ಕಾರ್ಲ್‌ಮಾರ್ಕ್ಸ್‌ನ ಪ್ರಕಾರ – “ ಇತಿಹಾಸವೆಂದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ

9. ಇತಿಹಾಸಕ್ಕೆ ಸಂಬಂಧಿಸಿದಂತೆ ಜೆ.ಬಿ. ಬ್ಯೂರಿಯ ವ್ಯಾಖ್ಯೆ ಯಾವುದು ?

ಇತಿಹಾಸಕ್ಕೆ ಸಂಬಂಧಿಸಿದಂತೆ ಜೆ.ಬಿ. ಬ್ಯೂರಿಯ ವ್ಯಾಖ್ಯೆ ಎಂದರೆ – “ ಇತಿಹಾಸವು ಒಂದು ವಿಜ್ಞಾನ ಹೆಚ್ಚು ಅಲ್ಲ , ಕಡಿಮೆಯೂ ಅಲ್ಲ ” .

10. ಅರ್ನಾಲ್ಡ್ ಟಾಯ್ಸ್ಬಿಯ ಕೃತಿಯನ್ನು ತಿಳಿಸಿ .

ಅರ್ನಾಲ್ಡ್ ಟಾಯ್ಸ್ಬಿಯ ಕೃತಿ – “ ಎ ಸ್ಟಡಿ ಆಫ್ ಹಿಸ್ಟರಿ ,

11. ಇತಿಹಾಸವನ್ನು ‘ ನಾಗರಿಕತೆಗಳ ಏಳು ಬೀಳಿನ ಕಥೆ ‘ ಎಂದು ವ್ಯಾಖ್ಯಾನಿಸಿದ್ದು ಯಾರು ?

ಇತಿಹಾಸವನ್ನು “ ನಾಗರಿಕತೆಗಳು ಏಳು ಬೀಳಿನ ಕಥೆ ” ಎಂದು ವ್ಯಾಖ್ಯಾನಿಸಿದವರು “ ಅರ್ನಾಲ್ಡ್ ಟಾಯ್ನ್‌ ಬಿ .

12. ಇತಿಹಾಸಕ್ಕೆ “ ಜವಾಹಾರ್‌ಲಾಲ್‌ ನೆಹರು ” ನೀಡಿದ ವ್ಯಾಖ್ಯೆ ಏನು ?

ಇತಿಹಾಸಕ್ಕೆ “ ಜವಾಹಾರ್‌ಲಾಲ್ ನೆಹರು ” ನಾಗರಿಕತೆಯೆಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ ಎಂಬುದಾಗಿದೆ .

II . ಈ ಕೆಳಗಿನವುಗಳಿಗೆ ಎರಡು ಪದ ಅಥವಾ ಎರಡು ವಾಕ್ಯಗಳಲ್ಲಿ ಉತ್ತರಿಸಿ .

1. ಇತಿಹಾಸದ ಯಾವುದಾದರೂ ಎರಡು ವ್ಯಾಖ್ಯೆಗಳನ್ನು ವಿವರಿಸಿ .

“ ಇತಿಹಾಸದ ಪಿತಾಮಹ ” ಎನಿಸಿರುವ ಹೆರೋಡೋಟಿಸ್‌ನ ಪಕಾರ – “ ಮುಂದಿನ ಪೀಳಿಗೆಯು ನೆನಪಿಡಬೇಕಾದ ಮಹಾನ್‌ವೀರರ ಅಥವಾ ಮಹತ್ವ ಪೂರ್ಣವಾದ ಘಟನೆಗಳ ದಾಖಲೆಯೇ ಇತಿಹಾಸವಾಗಿದೆ .

ಈ ವಾಕ್ಯದಲ್ಲಿ ಈ ಇತಿಹಾಸಕಾರನು , ಭವಿಷ್ಯದ ತಲೆಮಾರುಗಳು ಮಹಾನ್ ವ್ಯಕ್ತಿಗಳು ಸಾಧನೆ ಹಾಗೂ ಮಹತ್ವ ಪೂರ್ಣ ಘಟನೆಗಳಿಂದ ಕಲಿಯಬಹುದು ಪಾಠಗಳ ಮೇಲೆ ತನ್ನ ವಿಚಾರ ಕೇಂದ್ರೀಕರಿಸಿದ್ದಾನೆ .

ಭಾರತದ ಪ್ರಧಾನಮಂತ್ರಿ ಜವಹಾರಲಾಲ್ ನೆಹರುರವರ ಪ್ರಕಾರ “ ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ ” ಎಂದಿದ್ದಾರೆ . ಅಂದರೆ ಯುಗಯುಗಗಳಲ್ಲಿ ಮಾನವನು ಪ್ರತಿಹಂತದಲ್ಲಿಯೂ ಪ್ರತಿ ಹೊಂದಲು ಸಂಘರ್ಷ ಮಾಡಿದ್ದಾನೆ .

2 ಕಾರ್ಲ್‌ಮಾರ್ಕ್ಸ್‌ನ ಕೃತಿಗಳನ್ನು ಹೆಸರಿಸಿ .

ಕಾರ್ಲ್‌ಮಾರ್ಕ್ಸ್‌ ಕೃತಿಗಳೆಂದರೆ –

1 ) ದಾಸ್ ಕ್ಯಾಪಿಟಲ್

2 ) ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ

3. ಜವಾಹಾರಲಾಲ್ ನೆಹರುರವರು ರಚಿಸಿದ ಪ್ರಸಿದ್ಧ ಕೃತಿಗಳಾವುವು ?

ಜವಾಹಾರ್‌ಲಾಲ್ ನೆಹರುರವರ ಪ್ರಸಿದ್ಧ ಕೃತಿಗಳೆಂದರೆ –

1 ) ‘ ಡಿಸ್ಕವರಿ ಆಫ್ ಇಂಡಿಯಾ ‘

2 ) ‘ ದಿ ಗ್ಲಿಂಪ್ಸಾಸ್ ಆಫ್ ವರ್ಲ್ಡ್ ಹಿಸ್ಟರಿ ‘

4. ಇತಿಹಾಸದ ಎರಡು ವೃತ್ತಿಪರ ಉಪಯೋಗಗಳನ್ನು ತಿಳಿಸಿ .

ಇತಿಹಾಸದ ಎರಡು ವೃತ್ತಿ ಪರ ಉಪಯೋಗಗಳೆಂದರೆ – ‌

* ಆಡಳಿತ ಮತ್ತು ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ರಾಜಕಾರಣಿಗಳಿಗೆ ಐತಿಹಾಸಿಕ ಜ್ಞಾನ ಅಗತ್ಯ , ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುವ ಪುರಾತತ್ವ ಇಲಾಖೆಗಳಲ್ಲಿ ಸಾವಿರಾರು ಇತಿಹಾಸಕಾರರು ಕಾರ್ಯನಿರ್ವಹಿಸುತ್ತಿದ್ದಾರೆ .

* ವಸ್ತು ಸಂಗ್ರಹಾಲಯ , ಪತ್ರಾಗಾರ ಹಾಗೂ ಪ್ರವಾಸೋದ್ಯಮ ಮತ್ತು ಅದರ ಸಂಬಂಧಿ ಕ್ಷೇತ್ರಗಳಲ್ಲಿ ಇತಿಹಾಸದ ವಿದ್ಯಾರ್ಥಿಗಳಿಗೆ ಹೊಸ ಹೊಸ ಅವಕಾಶಗಳಿವೆ .

III , 15 ರಿಂದ 20 ವಾಕ್ಯಗಳಲ್ಲಿ ಉತ್ತರಿಸಿ

1. ಇತಿಹಾಸದ ವ್ಯಾಖ್ಯೆಗಳನ್ನು ಬರೆಯಿರಿ .

ಪ್ರಮುಖ ಇತಿಹಾಸಕಾರರು ನೀಡಿರುವ ಇತಿಹಾಸದ ವ್ಯಾಖ್ಯೆಗಳು ಹೀಗಿವೆ :

ಇತಿಹಾಸದ ಪಿತಾಮಹನಾದ ಹೆರೋಡೋಟಿಸ್‌ನ ಪ್ರಕಾರ – “ ಮುಂದಿನ ಪೀಳಿಗೆಯು ನೆನಪಿನಲ್ಲಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ ” .

ಸಂತ ಅಗಸ್ಟೆನ್‌ನ ಪ್ರಕಾರ – “ ಇತಿಹಾಸವು ದೇವರು ಮತ್ತು ಸೈತಾನನ ನಡುವಿನ ಸಂಘರ್ಷದ ಕಥೆಯಾಗಿದ್ದು ಅಂತಿಮವಾಗಿ ದೇವರು ( ಶಿಷ್ಯ ) ಮತ್ತು ಸೈತಾನನ ( ದುಷ್ಟ ) ಮೇಲೆ ಸಾಧಿಸಿದ ವಿಜಯದಲ್ಲಿ ಪರ್ಯಾಸನಗೊಳ್ಳುತ್ತದೆ .

ಕಾರ್ಲ್‌ಮಾರ್ಕ್ಸ್‌ನ ಪ್ರಕಾರ – “ ಇತಿಹಾಸವೆಂದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷ ” ವಾಗಿದೆ .

ಜೆ.ಬಿ. ಬ್ಯೂರಿ ಯವರ ಪ್ರಕಾರ – “ ಇತಿಹಾಸವು ಒಂದು ವಿಜ್ಞಾನ , ಹೆಚ್ಚು ಅಲ್ಲ , ಕಡಿಮೆಯೂ ಅಲ್ಲ ” .

ಅರ್ನಾಲ್ಡ್ ಟಾಸ್ಕ್‌ಬಿ ಪ್ರಕಾರ – “ ಇತಿಹಾಸವು ನಾಗರಿಕತೆಗಳ ಏಳು ಬೀಳಿನ ಕಥೆಯಾಗಿದೆ ” .

ಜವಾಹಾರಲಾಲ್ ನೆಹರು ರವರ ಪ್ರಕಾರ – “ ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ ” ವಾಗಿದೆ

2. ಇತಿಹಾಸದ ಅಧ್ಯಯನದ ಪ್ರಾಮುಖ್ಯತೆಯನ್ನು ವಿವರಿಸಿ .

* ಇತಿಹಾಸದ ಅಧ್ಯಯನವು ಬಹಳ ಮಹತ್ವವುಳ್ಳದಾಗಿದ್ದು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ ಅವುಗಳೆಂದರೆ –

*ಇತಿಹಾಸವು ಗತಕಾಲದ ಘಟನೆಗಳ ಸ್ಮರಣೆಯಾಗಿದೆ : ಒಂದು ದೇಶದ ಗತಕಾಲವು ಒಬ್ಬ ವ್ಯಕ್ತಿಯ ಸ್ಮೃತಿ ಇದ್ದಂತೆ , ಸ್ಮೃತಿ ಹೋದರೆ ಅದರೊಂದಿಗೆ ಚಿತ್ತಸ್ವಾಸ್ಥ್ಯವೂ ಹೋಗುತ್ತದೆ .

*ಇತಿಹಾಸವು ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುತ್ತದೆ : ಭಾರತದ ಧರ್ಮ ಸಹಿಷ್ಣುತೆ ಮಾನವ ಜನಾಂಗದ ಉಳಿವಿಗೆ ಏಕೈಕ ಮಾರ್ಗವಾಗಿದೆ .

*ಇತಿಹಾಸವು ಸ್ಫೂರ್ತಿಯ ನೆಲೆಯಾಗಿದೆ : ಮಹಾಪುರುಷರು ಇಂದಿಲ್ಲ . ಆದರೆ ಪ್ರಪಂಚದ ಇತಿಹಾಸ ಮತ್ತು ಪುರುಷರ ಆತ್ಮ ಚರಿತ್ರೆಗಳು ಮಾತ್ರ ಇನ್ನು ಉಳಿದಿವೆ .

*ಇತಿಹಾಸವು ದೇಶಾಭಿಮಾನವನ್ನು ಮೂಡಿಸುತ್ತದೆ .

*ಇತಿಹಾಸವು ಸಮಾಜ – ವಿಜ್ಞಾನಗಳ ಪ್ರಯೋಗಶಾಲೆಯಾಗಿದೆ .

*ಇತಿಹಾಸವು ಉದಾತ್ತಗುಣಗಳನ್ನು ಬೆಳೆಸುತ್ತದೆ .

*ಇತಿಹಾಸವು ನಮ್ಮ ದೃಷ್ಟಿಕೋನವನ್ನು ವಿಸ್ತರಿಸುತ್ತದೆ .

* ಇದು ವಿಶ್ವಶಾಂತಿಯನ್ನು ಬೆಳೆಸುತ್ತದೆ .

FAQ

1.“ ಇತಿಹಾಸದ ಪಿತಾಮಹ ” ಎಂದು ಯಾರನ್ನು ಕರೆಯಲಾಗಿದೆ ? ‘

ಹೆರೊಡೊಟಸ್’ನನ್ನು ಇತಿಹಾಸದ ಪಿತಾಮಹ ಎಂದು ಕರೆಯಲಾಗಿದೆ .

2. ‘ ದಿ ಸಿಟಿ ಆಫ್ ಗಾಡ್ ‘ ಕೃತಿಯನ್ನು ಬರೆದವನು ಯಾರು ?

‘ ದಿ ಸಿಟಿ ಆಫ್ ಗಾಡ್ ‘ ಕೃತಿಯನ್ನು ಬರೆದವನು ‘ ಸಂತ ಆಗಸ್ಟ್ರನ್

ಇತರೆ ವಿಷಯಗಳು :

First PUC All Textbooks Pdf

ಪ್ರಥಮ ಪಿ.ಯು.ಸಿ ಕನ್ನಡ ಪಠ್ಯಪುಸ್ತಕ Pdf

1st PUC History Notes

All Notes App

8 thoughts on “ಪ್ರಥಮ ಪಿ.ಯು.ಸಿ. ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ | 1st Puc History Chapter 1 Notes Question Answer

Leave a Reply

Your email address will not be published. Required fields are marked *

rtgh