10th Kannada Hakki Harutide Nodidira Notes Question Answer Summary in Kannada | 10ನೇ ತರಗತಿ ಹಕ್ಕಿ ಹಾರುತ್ತಿದೆ  ನೋಡಿದಿರಾ ಕನ್ನಡ ನೋಟ್ಸ್

Contents

10th Standard Hakki Harutide Nodidira Poem Notes 10ನೇ ತರಗತಿ ಹಕ್ಕಿಹಾರುತಿದೆ ನೋಡಿದಿರಾ ಪದ್ಯ

10th Kannada Hakki Harutide Nodidira Poem Notes Question Answer Summary in Kannada pdf 10ನೇ ತರಗತಿ ಹಕ್ಕಿಹಾರುತಿದೆ ನೋಡಿದಿರಾ ಪ್ರಶ್ನೆ ಉತ್ತರ ನೋಟ್ಸ್

ಹಕ್ಕಿ ಹಾರುತ್ತಿದೆ  ನೋಡಿದಿರಾ 

ದ.ರಾ.ಬೇಂದ್ರೆ

ಕವಿ – ಕಾವ್ಯ ಪರಿಚಯ

ಅ೦ಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ದತ್ತಾತ್ರೇಯ
ರಾಮಚಂದ್ರ ಬೇಂದ್ರೆಯವರು ಕ್ರಿ.ಶ ೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು.
ನವೋದಯ ಕನ್ನಡ ಸಾಹಿತ್ಯದ ಪ್ರಮುಖ ಕವಿಗಳಲ್ಲಿಒಬ್ಬರಾದ ದ.ರಾ. ಬೇಂದ್ರೆ ಅವರು
ಗರಿ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಗಂಗಾವತರಣ,
ಸರ‍್ಯಪಾನ,ನಗೆಯ ಹೊಗೆ, ಸಾಹಿತ್ಯದವಿರಾಟ್ ಸ್ವರೂಪ ಮೊದಲಾದ ಕೃತಿಗಳನ್ನು
ರಚಿಸಿದ್ದಾರೇ ಇವರ ಅರಳು-ಮರಳು ಕವನ ಸಂಕಲನಕ್ಕೆ ‘ಕೇಂದ್ರ ಸಾಹಿತ್ಯ ಅಕಾಡೆಮೆ
ಪ್ರಶಸ್ತಿ  , ನಾಕುತಂತಿ ಕವನ ಸಂಕಲನಕ್ಕೆ  ‘ಜ್ಞಾನಪೀಠಪ್ರಶಸ್ತಿ’ ಲಭಿಸಿದೆ.

ಬಹು ಆಯ್ಕೆ ಪ್ರಶ್ನೆಗಳು

೧.‘ಹೊಸಗಾಲ’ ಬಿಡಿಸಿ ಬರೆದಾಗ.
ಅ] ಹೊಸ+ಗಾಲ ಆ] ಹೊಸ+ಕಾಲ ಇ] ಹೊಸದು+ಕಾಲ ಈ] ಹೊಸದಿಂದ+ಕಾಲ.
೨. ‘ಸೂರ್ಯ,ಚಂದ್ರ,ನಕ್ಷತ್ರಗಳು’ ಈ ಸಮಾಸಕ್ಕೆ  ಉದಾಹರಣೆ
ಅ] ದ್ವಂದ್ವ ಆ] ದ್ವಿಗು  ಇ] ಬಹುವ್ರೀಹಿ ಈ] ಕರ್ಮಾಧಾರಯಾ
೩. ‘ತೇಲಿಸು’ ಪದದ ವಿರುದ್ಧಾರ್ಥಕ ಪದ
ಅ] ಮುಳುಗಿಸು ಆ] ಸೋಲಿಸು ಇ] ಪಾಲಿಸು ಈ] ಹಾಳುಮಾಡು.
೪. ‘ ಹಾರುತಿದೆ’ ಇದರ ಕಾಲ
ಅ] ಮಳೆಗಾಲ ಆ] ಭವಿಷ್ಯತ್‌ಕಾಲ ಇ] ಭೂತಕಾಲ ಈ] ವರ್ತಮಾನ ಕಾಲ
೫. ‘ಹಸುಮಕ್ಕಳು’ ಇಲ್ಲಿರುವ ಅಲಂಕಾರ
ಅ] ರೂಪಕ ಆ] ಉಪಮಾ ಇ] ಉತ್ಪೆçÃಕ್ಷ ಈ] ಯಾವುದು ಅಲ್ಲ.
೬. ‘ದಿನದಿನ’ ಈ ವ್ಯಾಕರಣಾಂಶಕ್ಕೆ ಸೇರಿದೆ
ಅ] ಜೋಡಿನುಡಿ ಆ] ಅನುಕರಣಾವ್ಯಯ ಇ] ನುಡಿಗಟ್ಟು ಈ] ದ್ವಿರುಕ್ತಿ.
೭. ‘ಮನ್ವಂತರ’ ಈ ಸಂಧಿಗೆ ಉದಾಹರಣೆ
ಅ] ಆಗಮ ಆ] ವೃದ್ಧಿ ಇ] ಯಣ್ ಈ] ಆದೇಶ
೮. ‘ಗಾವುದ’ ಪದದ ಅರ್ಥ
ಅ] ದೂರು ಆ] ದಡ್ಡ ಇ] ಜಾಣ ಈ] ದೂರ
೯. ‘ಮಂಡಲಗಿ೦ಡಲ’ ಈ ಪದವು,
ಅ] ನುಡಿಗಟ್ಟು ಆ] ದ್ವಿರುಕ್ತಿ ಇ] ಅನುಕರಣಾವ್ಯಯ ಈ] ಜೋಡುನುಡಿ
೧೦. ‘ಕೆನ್ನದೆ ಪದದ  ಅರ್ಥ
ಅ] ಎಣೆ ಆ] ಕೋಲಾಟ ಇ] ಕೆಂಪು ಈ] ಬಯಲಾಟ.
ಉತ್ತರಗಳು
೧] ಆ೨]ಅ ೩]ಅ ೪]ಇ ೫]ಅ ೬]ಅ ೭]ಇ ೮]ಈ ೯]ಈ ೧೦]ಇ

ವಿಶೇಷ ಬಹು ಆಯ್ಕೆ ಪ್ರಶ್ನೆಗಳು

೧) ಅಥವಾ ಎಂಬುವುದು.
ಅ) ಅನುಕರಣಾವ್ಯಯ
ಬ) ಸಾಮಾನ್ಯ ಅವ್ಯಯ
ಕ) ಸಂಭ೦ದಾರ್ಥಕ ಅವ್ಯಯ
ಡ) ಭಾವಸೂಚಕ ಅವ್ಯಯ
೨) ಅಬ್ಬಾ ಎಂಬುವುದು.
ಅ) ಸಾಮಾನ್ಯ ಅವ್ಯಯ
ಅ) ಅನುಕರಣಾವ್ಯಯ
ಕ) ಸಂಭ೦ಧಾರ್ಥಕ ಅವ್ಯಯ
ಡ) ಭಾವಸೂಚಕ ಅವ್ಯಯ
೩) ಮಾಡುತ ಪದವು ಇದಕ್ಕೆ ಉದಾ:
ಅ) ಅವ್ಯಯ ಬ) ಕೃದಂತ ನಾಮ ಕ) ಕೃದಂತಾವ್ಯಕ್ಕೆ ಡ) ಕೃದಂತಬಾs ವಕ್ಕೆ
೪) ಇದು ಅನುಕರಣಾವ್ಯಕ್ಕೆ ಉದಾ;
ಅ) ಮನೆ-ಮಠ       ಬ) ಅಬ್ಬಬ್ಬಾ
ಕ) ಸರ ಸರ            ಡ) ತುತ್ತತುದಿ
೫) ಚಟ-ಚಟ ಇದು ಯಾವ ವ್ಯಾಕರಣಾಂಶಕ್ಕೆ ಸೇರಿದೆ.
ಅ) ಜೋಡುನುಡಿ ಬ) ದ್ವಿರುಕ್ತಿ ಕ) ಅನುಕರಣಾವ್ಯಯ ಡ) ಪಡೆನುಡಿ
೬) “ತಟ್ಟನೆ” ಹಣ್ಣು ಕೆಳಗೆ ಬಿತ್ತು. ತಟ್ಟನೆ ಎಂಬ ಪದವು ಈ ಅವ್ಯಯಕ್ಕೆ ಉದಾ:
ಅ) ಅನುಕರಣಾವ್ಯಯ    ಬ) ದ್ವಿರುಕ್ತಿ
ಕ) ಸಾಮಾನ್ಯ                ಡ) ಸಂಬ೦ಧಾರ್ಥಕ
೭) ಚೆನ್ನಾಗಿ ಎಂಬುದು ಯಾವ ಅವ್ಯಯಕ್ಕೆ ಬಂದಿದೆ.
ಅ) ಅನುಕರಣಾವ್ಯಯ
ಬ) ಭಾವಸೂಚಕ ಅವ್ಯಯ
ಕ) ಸಾಮಾನ್ಯ ಅವ್ಯಯ
ಡ) ಕೃದಂತಾವ್ಯಯ
೮) ಘುಳು-ಘಘುಳು ಎದು ಯಾವ ವ್ಯಾಕರಣಾಂಶಕ್ಕೆ ಸೇರಿದೆ.
ಅ) ದ್ವಿರುಕ್ತಿ ಬ) ಅನುಕರಣಾವ್ಯಯ ಕ) ಪಡೆನುಡಿ ಡ) ನಾಣ್ನುಡಿ
೯) ಅಂದು ಬೆಂಗಳೂರಿನ ಸುತ್ತ-ಮುತ್ತ ¨ಭೂಮಿ ಗಡಗಡ ನಡುಗಿತು. ಈ ವಾಕ್ಯದಲ್ಲಿರು ಅನುಕರಣಾವ್ಯಯ ಪದ.
ಅ) ಗಡಗಡ  ಬ) ಸುತ್ತ ಮುತ್ತ ಕ) ನಡುಗಿತು ಡ) ¨ಭೂಮಿಯು
೧೦) ಅವನೇ ಇದು
ಅ) ಅವಧಾರಣಾರ್ಥಕಾವ್ಯಯ
ಬ) ಭಾವಸೂಚಕ ಅವ್ಯಯ
ಕ) ಸಾಮಾನ್ಯ ಅವ್ಯಯ
ಡ) ಕೃದಂತಾವ್ಯಯ
೧೧) ಅಬ್ಬಾ! ಎಷ್ಟು ಚೆನ್ನಾಗಿದೆ ಈ ವಾಕ್ಯವು ಈ ವ್ಯಾಕರಣಾಂಶಕ್ಕೆ ಉದಾ:
ಅ) ಸಾಮಾನ್ಯ ಅವ್ಯಯ
ಬ) ಅನುಕರಣಾವ್ಯಯ
ಕ) ಸಂಭ೦ಧಾರ್ಥಕ ಅವ್ಯಯ
ಡ) ಭಾವಸೂಚಕ ಅವ್ಯಯ
೧೨) ಈ ಪದವು ಅನುಕರಣಾವ್ಯಕ್ಕೆ ಉದಾ;
ಅ) ಬೇಗ ಬೇಗ ಬ) ಓಡು ಓಡು ಕ) ಗಿಡಗಂಟೆ ಡ) ಧಗಧಗ
೧೩) ಚುರು-ಚುರು ಇದು ಯಾವ ವ್ಯಾಕರಣಾಂಶಕ್ಕೆ ಸೇರಿದೆ
ಅ) ಅನುಕರಣಾವ್ಯಯ
ಬ) ಭಾವಸೂಚಕ ಅವ್ಯಯ
ಕ) ಸಾಮಾನ್ಯ ಅವ್ಯಯ
ಡ) ಕೃದಂತಾವ್ಯಯ
೧೪) ಕೂಡಲೆ ಇದು
ಅ) ದ್ವಿರುಕ್ತಿ ಬ) ಅನುಕರಣಾವ್ಯಯ ಕ) ಪಡೆನುಡಿ ಡ) ಸಾಮಾನ್ಯ ಅವ್ಯಯ
೧೫) ಸಾಮಾನ್ಯ ಅವ್ಯಯ ಉದಾ
ಅ) ಚೆನ್ನಾಗಿ ಬ) ಓಡು ಓಡು ಕ) ಗಿಡಗಂಟೆ ಡ) ಧಗಧಗ
೧೬. ಬಸ್ಸು ರೊಯ್ಯನೆ ಬಂತ್ತು. ಗೆರೆ ಎಳೆದ ಪದವು
ಅ] ಅನುಕರಣಾವ್ಯಯ ಆ] ಭಾವಸೂಚಕ ಇ] ನಾಮಪದ ಈ] ಸಾಮಾನ್ಯಾವ್ಯಯ
೧೭. ಅಯ್ಯೋ ದೇವರೇ ನನ್ನನ್ನು ಕಾಪಾಡು ಗೆರೆ ಎಳೆದ ಪದದ ವ್ಯಾಕರಣಾಂಶ
ಅ] ಅನುಕರಣಾವ್ಯಯ ಆ] ಸಾಮಾನ್ಯಾವ್ಯಯ ಇ] ನಾಮಪದ ಈ] ಭಾವಸೂಚಕ
೧೮. ಮೆಲ್ಲಗೆ ಇದು
ಅ] ಅನುಕರಣಾವ್ಯಯ ಆ] ಭಾವಸೂಚಕ ಇ] ನಾಮಪದ ಈ] ಸಾಮಾನ್ಯಾವ್ಯಯ
೧೯. ಮತ್ತು ಇದು ಈ ವ್ಯಾಕರಣಾಂಶ
ಅ] ಸಂಬ೦ಧಾರ್ಥಕಾವ್ಯಯ ಆ] ಸಾಮಾನ್ಯಾವ್ಯಯ ಇ] ನಾಮಪದ ಈ] ಭಾವಸೂಚಕ
೨೦. ‘ನೀನು ಸೊಗಸಾಗಿ ಕಾಣುತ್ತಿದ್ದೀಯಾ’. ಸೊಗಸಾಗಿ ಎಂಬ ಪದವು
ಅ] ಭಾವಸೂಚಕ ಆ] ಸಾಮಾನ್ಯಾವ್ಯಯ ಇ] ನಾಮಪದ ಈ] ಅನುಕರಣಾವ್ಯಯ
ಉತ್ತರಗಳು
೧ ಕ, ೨ಡ, ೩ಕ, ೪ಕ, ೫ಕ, ೬ಕ, ೭ಕ, ೮ಬ, ೯ಅ, ೧೦]ಅ,
೧೧ಡ, ೧೨ಡ, ೧೩]ಅ, ೧೪]ಡ, ೧೫]ಅ, ೧೬]ಅ, ೧೭]ಈ, ೧೮]ಈ, ೧೯]ಅ, ೨೦]ಆ.

ಮೊದಲೆರೆಡು ಪದಗಳಿಗಿರುವ ಸಂಭದತೆ ಮೂರನೆಯ ಪದಕ್ಕೆ ಸಂಬಧಿಸಿದ ಪದ ಬರೆಯಿರಿ.

೧.ಹೊಸಗಾಲ : ಆದೇಶಸಂಧಿ :: ತೆರೆದಿಕ್ಕು :________
೨.ಮಾಲೆ : ಮಾಲಾ :: ಚಂದ್ರ : ________
೩.ಹೊತ್ತಿನ : ಷಷ್ಠಿ :: ಮುಗಿಲಿಗೆ : _______
೪.ಹರಸು : ಆಶೀರ್ವದಿಸು :: ಒಕ್ಕಿ : ______
೫.ಕ್ಷಣ : ಚಣ :: ಯುಗ :______
೬.ಗಡ:ಕೋಟೆ :: ಎವೆ:………………………………
೭.ನೀನೇ : ಅವಧಾರಣಾರ್ಥಕಾವ್ಯಯ :: ಊ :…………………………………
ಉತ್ತರಗಳು
೧] ಲೋಪಸಂಧಿ ೨] ಚಂದಿರ ೩] ಚತುರ್ಥಿ ೪] ಹಸನುಗೊಳಿಸು ೫] ಜುಗ
೬] ಕಣ್ಣರೆಪ್ಪೆ ೭] ಸಂಬ೦ಧಾರ್ಥಕಾವ್ಯಯ
ದ್ವಿರುಕ್ತಿಗಳು: ಇರುಳಿರು, ದಿನದಿನ, ಗಾವುದಗಾವುದ, ಗರಿಗರಿ,ಬಣ್ಣಬಣ್ಣ, ಖಂಡಖAಡ.
ಜೋಡುನುಡಿಗಳು: ಸುತ್ತಮುತ್ತ, ಬಿಳಿಹೊಳೆ,ಮಂಡಲಗಿAಡಲ,

ಪದ್ಯದ ಆಶಯ ಭಾವ

ಕಾಲ ನಿಂತ ನೀರಲ್ಲ ಅದು ಸದಾ ಹರಿಯುತ್ತಿರುವ ನದಿ ಇದ್ದಂತೆ. ಚಲನಶೀಲತೆ ಜೀವಂತಿಕೆಯ ಗುಣ. ನಿಸರ್ಗದ ಹೊಂದಾಣಿಕೆಯ೦ತೆ ಕಾಲ ಉರುಳುತ್ತದೆ. ಅದಕ್ಕೆ ತಡೆ ಎಂಬುದಿಲ್ಲ. ಎಂತಹ ಪ್ರಭಾವಶಾಲಿಯಾದರೊ  ನಿಸರ್ಗ ದತ್ತವಾದ ಕಾಲಚಕ್ರದ ಎದುರಿನಲ್ಲಿ ತಲೆಬಾಗಲೇಬೇಕು. ಅದಕ್ಕೆ
ಹೊಂದಿಕೊಳ್ಳಬೇಕು. ಆಯಾ ಕಾಲದಲ್ಲಿ ನಡೆದ ಪ್ರತಿಯೊಂದು ಘಟನೆಯೂ ಕಾಲ ಉರುಳಿದಂತೆ ಇತಿಹಾಸವಾಗುತ್ತ ಹೋಗುತ್ತದೆ. ಕವಿ ಬೇಂದ್ರೆ
ಅವರು ಕಾಲದ ಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನ ಮಾಡಿದ್ದಾರೆ. ಹಕ್ಕಿಯ ಹಾರುವಿಕೆ ಪ್ರಕೃತಿಯ ಸಹಜಕ್ರಿಯೆಯೊಂದಿಗೆ ಯುಗಗಳೇ ಉರುಳಿ ಹೊಸತನಕ್ಕೆ ತೆರೆದುಕೊಳ್ಳುವ ಸಂಕೇತವೂ  ಆಗಿದೆ.
ಬ್ರಿಟೀಷರ ಸಾಮ್ರಾಜ್ಯಶಾಹಿಯಿಂದ ಪಾರಾಗುವ ಸ್ವಾತಂತ್ರ್ಯ  ಚಿಂತನದ  ಕಲ್ಪನಾ ಪಕ್ಷಿಯ ಹಾರಾಟವು ಇನ್ನೊಂದು ಲಕ್ಷಣ. ಇದಲ್ಲದೆ
ಮಂಗಳ ಲೋಕದ ಅಂಗಳಕ್ಕೆ ಮಾನವನು ಏರುವ ಸೂಚನೆಯನ್ನು ಸಾರಿದ ಕವನ ಇದಾಗಿದೆ ಎನ್ನುವುದು ಗಮನಾರ್ಹ. ಕಾಲ ಪಕ್ಷಿಯ
ಹೊಡೆತಕ್ಕೆ ಮಾನವ ಪ್ರಪಂಚದದಲ್ಲಾಗುವ ವೈಚಿತ್ರ್ಯದ ವಿಸ್ಮಯದಲ್ಲಿ ಒಂದು ಉದ್ಗಾರವಿದು.
ಈ ಕವಿತೆಯಲ್ಲಿ ಕಾಲದ ವೇಗ, ಚಲನಾಶೀಲತೆ, ವಿಸ್ತಾರ , ಕಾಲದ ಗುರುತು, ವಿಶಾಲತೆ ಮತ್ತು ವ್ಯಾಪ್ತಿ, ಸಾರ್ವಭೌಮತ್ವ, ಪರಿವರ್ತನಾ ನಿಯಮ,
ಹಾರೈಕೆ , ಶುಕ್ರ, ಚಂದ್ರ, ಮಂಗಳ ಲೋಕ ಸಂಚಾರ ,ಬ್ರಹ್ಮಾಂಡ ರಹಸ್ಯ ಭೇಧನ ಕಾಲದ ಒಂದು ಭೌತಿಕ ಲಕ್ಷಣ ಮುಂತಾದ ಗುಣಗಳನ್ನು  ವಿವರಿಸಲಾಗಿದೆ.
ಇಂಥ ಭಾವಗೀತೆಯೊಂದನ್ನು ಪರಿಚಯಿಸುವುದೇ ಇಲ್ಲಿನ ಆಶಯವಾಗಿದೆ.
ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿAದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಸಾರಾಂಶ

hakki harutide nodidira saramsha in kannada

ಪದ್ಯದ ಸಾರಾಂಶ ವಿವರಣೆ

ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
 ಹಕ್ಕಿ ಹಾರುತಿದೆ ನೋಡಿದಿರಾ !
Hakki Harutide Nodidira
ಭಾವಾರ್ಥ ಸಹಿತ ಸಾರಾಂಶ :ಈ ಪದ್ಯದಲ್ಲಿ ಬೇಂದ್ರೆಯವರು  ಕಾಲವನ್ನು ಹಾರುವ ಹಕ್ಕಿಗೆ ಹೋಲಿಸುತ್ತಾ ಕಾಲದ ಚಲನೆ- ವೇಗ-ವಿಸ್ತಾರವನ್ನು
ಹೇಳಿದ್ದಾರೆ. ಕಾಲ ನಿಂತ ನೀರಲ್ಲ ಅದು ಸದಾ ಹರಿಯುತ್ತಿರುವ ನದಿ ಇದ್ದಂತೆ. ಚಲನಶೀಲತೆ ಜೀವಂತಿಕೆಯ ಗುಣ. ನಿಸರ್ಗದ ಹೊಂದಾಣಿಕೆಯಂತೆ ಕಾಲ ಉರುಳುತ್ತದೆ. ಅದಕ್ಕೆ ತಡೆ ಎಂಬುದಿಲ್ಲ  . ಕಾಲ, ರಾತ್ರಿ ಕಳೆದು ದಿನ ಬೆಳಕಾಗಿ ಪುನಃ ರಾತ್ರಿ – ಬೆಳಗು  ಹೀಗೆ ಪುನರಾವರ್ತನೆಯಾಗಿವ ಚಲನಾ ಗುಣ ಹೊಂದಿದೆ. ಅದು ಮೇಲೆ, ಕೆಳಗೆ ಸುತ್ತಮುತ್ತ ಎತ್ತೆತ್ತಲೂ ತನ್ನ ಕಬಂಧ ಬಾಹುವನ್ನು  ಹರಡಿಕೊಂಡು ವಿಶ್ವವ್ಯಾಪಕವಾಗಿದೆ. ಕಾಲ ಕಣ್ಣು ತೆರೆದು ರೆಪ್ಪೆ ಮುಚ್ಚುವುದರೊಳಗೆ ಗಾವುದದ ಗಾವುದ ಗಾವುದ ರೀತಿಯಲ್ಲಿ (೧೨ ಮೈಲು) ವೇಗವಾಗಿ ಹಾರಿಹೋಗುತ್ತಿದೆ ಇಂತಹ ಹಕ್ಕಿ ಹಾರುವುದನ್ನು (ಕಾಲ ಕಳೆದು) ಹೋಗುವುದನ್ನು ನೀವು ನೋಡಿದಿರಾ! ಎಂದು ಕಾಲದ ಚಲನಾಶೀಲಗುಣ,ವಿಸ್ತಾರ , ವೇಗ ಗುಣಗಳನ್ನು  ತಿಳಿಸಿದ್ದಾರೆ.
ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿಹೊಳೆ ಬಣ್ಣದ ಗರಿ ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡು ಪಕ್ಕದಲ್ಲುಂಟು
ಹಕ್ಕಿಹಾರುತಿದೆ ನೋಡಿದಿರಾ !
ಭಾವಾರ್ಥ ಸಹಿತ ಸಾರಾಂಶ : ಬೇಂದ್ರೆಯವರು ಈ ಪದ್ಯದಲ್ಲಿ ಕಾಲದ ಗುರುತುಗಳನ್ನು ಹಕ್ಕಿಯ ಭೌತಿಕ ಅಂಗಗಳಾದ ಪುಚ್ಚ, ಗರಿ, ರೆಕ್ಕೆಗಳ ಬಣ್ಣಗಳಿಗೆ ಹೋಲಿಸುತ್ತಾರೆ. ಹಕ್ಕಿಯ ಹಿಂದೆಯಿರುವ ಪುಚ್ಚ ಅಗೋಚರ ಅದು ಕಳೆದುಹೋದ ಭೂತಕಾಲ ಕರಿನರೆ ಬಣ್ಣಕ್ಕೆ ಹೋಲಿಸಿದ್ದಾರೆ.ಮತ್ತೊಂದು ಅರ್ಥದಲ್ಲಿ ಹಗಲು-ರಾತ್ರಿಗಳು  ಎಂಬ ಪರಿಕಲ್ಪನೆಯನ್ನು ಮಾಡಿಕೊಳ್ಳಲೂಬಹುದು. ಅಂದರೆ ಕಾಲವೆಂಬ ಹಕ್ಕಿಗೆ ಹಗಲು-ರಾತ್ರಿಗಳೆಂಬ ಪುಚ್ಚಗಳು  ಇವೆ. ನೇರವಾಗಿ ಗೋಚರಿಸುವ ಬಿಳಿಹೊಳೆ ಬಣ್ಣದ ಗರಿಗಳು ವರ್ತಮಾನದ ಗುರುತುಗಳು. ಹಾಗೆಯೇ ಕೆಂಪಾಗಿ – ಹೊನ್ನಿನ ಬಣ್ಣಗಳ ರಕ್ಕೆಗಳು ಭವಿಷ್ಯತ್ ಕಾಲದ ಗುರುತುಗಳು . . ಹಾಗಯೇ ಹೀಗೆ ಕಾಲವೆಂಬ ಹಕ್ಕಿ ¨ಭೂತ, ವರ್ತ  ಮಾನ, ಭವಿಷ್ಯತ್ ಕಾಲಗಳೆಂಬ ಗುರುತುಗಳನ್ನು ಮೂಡಿಸುತ್ತಾ ಹಾರಿ ಹೋಗುತ್ತಿದೆ ನೋಡಿದಿರಾ ಎಂದು ಅರ್ಥೈಸುತ್ತಾರೆ.
ನೀಲಮೇಘ ಮಂಡಲ ಸಮಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವು ಅಣ್ಣ
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯಚ0ದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ !
ಭಾವಾರ್ಥ ಸಹಿತ ಸಾರಾಂಶ : ಬೇಂದ್ರೆಯವರು  ಈ ಪದ್ಯದಲ್ಲಿ ಕಾಲದ ವಿಶಾಲತೆ ಮತ್ತು ವ್ಯಾಪ್ತಿಯನ್ನು ವಿವರಿಸಿದ್ದಾರೆ ಹಕ್ಕಿಯು ಆಕಾಶ, ಮೋಡ,¨
ಭೂಮಂಡಲಗಳ ಎಲ್ಲಾ ಬಣ್ಣಗಳನ್ನು  ಸಮನಾಗಿ ಆವರಿಸಿಕೊಂಡಿದೆ ಅಂದರೆ ಇವುಗಳಲ್ಲಿ  ಬೇಧವೆಣಿಸದೆ ಸಮತೆಯನ್ನು ಕಾಣುತ್ತಿದೆ. ಹಕ್ಕಿಯರೆಕ್ಕೆಯು ಮೂಡಿದಾಗ ಹೇಗೆ  ಹಾರಿಹೋಗುತ್ತದೆಯೋ ಹಾಗೆ ಕಾಲವೆಂಬ ಹಕ್ಕಿ ಮುಗಿಲನ್ನು ರೆಕ್ಕಗಳನ್ನಾಗಿ ಮಾಡಿಕೊಂಡು, ಮುಗಿಲಿಗೆರೆಕ್ಕೆ ರೆಕ್ಕೆಗೆಳೊಡೆದವೊ   ಎಂಬ೦ತೆ ಅನಂತವಾಗಿ ಹಾರಿಹೋಗುತ್ತಿದೆ. ಆಕಾಶದಲ್ಲಿ ಮಿನುಗುತ್ತಿರುವ ಚಿಕ್ಕೆಗಳ (ನಕ್ಷತ್ರ) ಮಾಲೆಯನ್ನು ಕೊರಳಿಗೆಸಿಕ್ಕಿಸಿಕೊಂಡು ಆಕಾಶವನ್ನು ಬೆಳಗುತ್ತಿರುವ ಸೂರ್ಯಚಂದ್ರರನ್ನು  ಕಣ್ಣುಗಳನ್ನಾಗಿ ಮಾಡಿಕೊಂಡು ಅನಂತದೆಡೆಗೆ  ಹಾರಿ ಹೋಗಿದೆನೋಡಿದಿರಾಎಂದು ಕಾಲವೆಂಬ ಹಕ್ಕಿಯ ಅಂಗಾ೦ಗಳನ್ನು  ವರ್ಣಿಸಿದ್ದಾರೆ.
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ – ಗಿಂಡಲಗಳ ಗಡಮುಕ್ಕಿ
ತೇಲಿಸಿ ಮುಳುಗಿಸಿ ಖಂಡ ಖಂಡಗಳ
ಸಾರ್ವಭೌಮರ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ !
ಭಾವಾರ್ಥ ಸಹಿತ ಸಾರಾಂಶ : ಬೇಂದ್ರೆಯವರು  ಈ ಪದ್ಯದಲ್ಲಿ ಕಾಲದ ಸಾರ್ವಭೌಮತ್ವವನ್ನು ವಿವರಿಸಿದ್ದಾರೆ. ರಾಜ್ಯ, ಸಾಮ್ರಾಜ್ಯಗಳನ್ನು
ವೈಭವದಿಂದ ಮೆರೆಯುವಂತೆ ಮಾಡಿದ್ದು ಇದೇ ಕಾಲವೆಂಬ ಹಕ್ಕಿ. ಹಾಗೆಯೇ ಅವುಗಳ ನಡುವೆ ಯುದ್ಧಗಳನ್ನು  ಮಾಡಿಸಿ ತೆನೆಯಲ್ಲಿನ
ಕಾಳುಗಳನ್ನು ಬೇರ್ಪಡಿಸುವಂತೆ ಬೇರೆ¨ಬೇರೆ ಮಾಡಿದ್ದು ಇದೆ ಕಾಲ. ಹಾಗಾಗಿ ಕಾಲ ಸಾರ್ವಭೌಮತ್ವವನ್ನು ಹೊಂದಿದೆ. ರಾಜ-ಮಹಾರಾಜರಸಣ್ಣದೊಡ್ಡ, ಕೋಟೆ-ಕೊತ್ತಲಗಳನ್ನು ಗಬಕ್ಕನೆ ನಾಶಮಾಡಿದ್ದು ಕಾಲವೇ. ವಿಶ್ವದ ಎಲ್ಲಾ ಭಾಗಗಳನ್ನು ಒಂದು ಸಲ ವೈಭದಿಂದ ಮೆರೆಯುವಂತೆಮಾಡಿದ್ದು ಮತ್ತೊಂದು ಸಲ ಮಳುಗುವಂತೆ ಮಾಡಿದೆ. ಹಾಗೆಯೇ ಸಾರ್ವಭೌಮರೆಂದು ಮೆರೆದವರ ನೆತ್ತಿಯ ಮೇಲೆ ಕುಕ್ಕಿ ಕೆಳಗೆ ಬೀಳಿಸಿ ಹೊಸಕಿಹಾಕಿ ಹಕ್ಕಿ ಹಾರಿಹೋಗಿದೆ ಎಂದು ಹೇಳುತ್ತಾರೆ.
ಯುಗಯುಗಗಳ ಹಣೆಬರೆಹವ ಒರೆಸಿ
ಮನ್ವಂತರಗಳ ಭಾಗ್ಯವತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸು ಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ !
ಭಾವಾರ್ಥ ಸಹಿತ ಸಾರಾಂಶ : ಬೇಂದ್ರೆಯವರು  ಈ ಪದ್ಯದಲ್ಲಿ ಕಾಲದ ಪರಿವರ್ತನಾ ನಿಯಮ ಹಾಗೂ ಹಾರೈಕೆಯನ್ನು ವಿವರಿಸಿದ್ದಾರೆ. ಕಾಲವು
ಯುಗಯುಗಳ  ಹಣೆಬರೆಹವನ್ನು ,(ಕೆಟ್ಟದ್ದನ್ನು ) ಚರಿತ್ರೆಯನ್ನು ಅಳಿಸಿ ಹಾಕಿ ಹೊಸತನವನ್ನು (ಒಳ್ಳೆತನವನ್ನು ) ಹೊಸ ಹಣೆಬರೆಹವನ್ನು ಬರೆದು  ಎಲ್ಲರಿಗೂ ಬದಲಾವಣೆಯಾಗುವ ಒಳ್ಳೆಯ ಭಾಗ್ಯವನ್ನು  ತೆರೆದು ಕೊಟ್ಟಿದೆ. ಹಾಗೆಯೇ ರೆಕ್ಕೆಯ ಬೀಸುತ , ಮೇಲಕ್ಕೆ ಹಾರುತ, ಹಾರುವ ಈಹೊಸಗಾಲದ ಹಸು ಮಕ್ಕಳಿಗೆ ಹೊಸ ಚೇತನವನ್ನು (ಶಕ್ತಿಯನ್ನು) ನೀಡುತ್ತ,ಉತ್ತಮ ಭವಿಷ್ಯಕ್ಕಾಗಿ ಹರಸಿ ಬದಲಾವಣೆಯ ಹಾದಿಯನ್ನು ಹಿಡಿದುಹಕ್ಕಿ ಹಾರಿ ಹೋಗುತ್ತಿದೆ.ಕಾಲ ಸದಾ ಪರಿವvðÀ ನಾಶೀಲ ಗುಣ ಹೊಂದಿದೆ ಎಂದು ಹೇಳುತ್ತಾರೆ.
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳ ಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ?
ಭಾವಾರ್ಥ ಸಹಿತ ಸಾರಾಂಶ :ಬೇಂದ್ರೆಯವರು  ಈ ಪದ್ಯದಲ್ಲಿ ಶುಕ್ರ, ಚಂದ್ರ, ಮಂಗಳಲೋಕ ಸಂಚಾರ ಕಾಲದ ಭೌತಿಕ ಲಕ್ಷಣವನ್ನುವೈಜ್ಞಾನಿಕವಾಗಿ
ಚಿತ್ರಿಸಿದ್ದಾರೆ. ಇನ್ನೊಂದು ಕಡೆ ಬ್ರಿಟೀಷರ ಸಾಮ್ರಾಜ್ಯಶಾಹಿ ನೀತಿಯಿಂದ ಪಾರಾಗುವ ಸ್ವಾತಂತ್ರ್ಯ  ಚಿಂತನದ  ಕಲ್ಪನಾ ಪಕ್ಷಿಯ ಹಾರಾಟ ಇನ್ನೊಂದು
ಲಕ್ಷಣ. ಬೆಳ್ಳಿಚುಕ್ಕಿ ಎಂದು ಕರೆಯಲ್ಪಡುವ ಶುಕ್ರಗ್ರಹವನ್ನು  ಹಳ್ಳಿಗೆ ಹೋಲಿಸಿ, ಕಾಲದ ಹಕ್ಕಿ ಆ ಹಳ್ಳಿಯ (ಶುಕ್ರಗ್ರಹದ ) ಮೇರೆಯನ್ನು ದಾಟಿ
ಹಾರಿಹೋಗುತ್ತಿದೆ. ತಿಂಗಳೂರು ಅಂದರೆ ಚಂದ್ರಲೋಕ. ಈ ಚಂದ್ರಲೋಕಕ್ಕೆ ಹಕ್ಕಿ(ಇಲ್ಲಿ ಭೌತಿಕವಾಗಿ ಮಾನವ ರೂಪದ ಕಾಲ) ಏರಿ ನೀರಿನ
ಸೆಲೆಯನ್ನು  ಹುಡುಕಿ ಅದನ್ನು ಹೀರುತ್ತ ಸಂತೋಷವಾಗಿ ಆಡುತ್ತಿದೆ. ಹಾಗೆಯೇ ಮುಂದೆ ಹಾರಾಡುತ್ತ ಹಾರಾಡುತ್ತ ಮಂಗಳ ಲೋಕ(ಗ್ರಹ)ದ
ಅಂಗಳಕ್ಕೆ ಏರಿ ಹೋಗುತ್ತಿದೆ. ಹೀಗೆ ವೈಜ್ಞಾನಿಕ ರೆಕ್ಕೆಗಳನ್ನು ಹೊಂದಿದ ಹಕ್ಕಿ ಹಾರುತಿದೆ ನೋಡಿದಿರಾ ಎಂದು ಹಾಡಿದ್ದಾರೆ.ವೈಜ್ಞಾನಿಕವಾಗಿ
ಭಾರತೀಯರು ಚಂದ್ರ,ಶುಕ್ರ, ಮಂಗಳನ ಅಂಗಳಕ್ಕೆ  ಹೋಗಿ ಸಂಶೋಧನೆ ಮಾಡುವ ಗುರಿಯನ್ನು,ದಾರ್ಶನಿಕ ಶಕ್ತಿಯನ್ನು ಪರೋಕ್ಷವಾಗಿ
ಅಭಿವ್ಯಕ್ತಪಡಿಸಿದ್ದಾರೆ.
ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾ೦ಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ!
ಹಕ್ಕಿ ಹಾರುತಿದೆ ನೋಡಿದಿರಾ?
ಭಾವಾರ್ಥ ಸಹಿತ ಸಾರಾಂಶ : ಬೇಂದ್ರೆಯವರು  ಈ ಪದ್ಯದಲ್ಲಿ ಕಾಲವೆಂಬ ಹಕ್ಕಿಯು ತನ್ನ ಬಾಹುದಿಂದ ಜಗತ್ತಿನ ರಹಸ್ಯವನ್ನು  ¨ಭೇಧಿಸುವ
ತಂತ್ರವನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಕಾಲವೆಂಬ ಹಕ್ಕಿ ದಿಶಾವಲಯದ (ದಶದಿಕ್ಕುಗಳ ತುದಿ) ತುತ್ತತುದಿಗೆ ಮುಟ್ಟಿದೆ. ದಿಶಾವಲಯದ ಆಚೆಗೆ ತನ್ನಯ
ಕೊಕ್ಕನ್ನು ಚಾಚಿದೆ. ಜಗತ್ತಿನ ಮೂಲವನ್ನು ಒಡೆಯಲು (ಹುಡುಕಲು,ರಹಸ್ಯವನ್ನು  ಬೇಧಿಸಲು ) ಎಂಬ೦ತೆ ಹೊಂಚುಹಾಕಿದೆ ಏನೋ ಬಲ್ಲವರಾರು ?
ಪ್ರಪಂಚದ ವಿಸ್ಮಯವನ್ನು ಭೇಧಿಸಲು ಕಾಲವೆಂಬ ಹಕ್ಕಿ ಹಾರುತಿದೆ ನೋಡಿದಿರಾ ! ಎಂದು ಹೇಳುತ್ತಾರೆ. ನಮ್ಮ  ಹಿಂದಿನ ಹಿರಿಯರು ಬ್ರಹ್ಮಾಂಡ
ರಹಸ್ಯವನ್ನು   ಋಷಿಮುನಿಗಳು ಬಲ್ಲವರಾಗಿದ್ದಾರೆ. ಹಿಂದಿನ ಕಾಲದಲ್ಲಿಯೇ ಆಧ್ಯಾತ್ಮದಿಂದ ಅದರ ಮೂಲವನ್ನು ಹುಡುಕಿದ್ದಾರೆ ಎಂಬುದನ್ನು
ಪರೋಕ್ಷವಾಗಿ ಅಭಿವ್ಯಕ್ತಿಸಿದ್ದಾರೆ.

ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಪ್ರಶ್ನೋತ್ತರಗಳು

ಅಭ್ಯಾಸ ಪ್ರಶ್ನೋತ್ತರಗಳು | ಹಕ್ಕಿಹಾರುತಿದೆ ನೋಡಿದಿರಾ notes | hakki harutide nodidira kannada notes


ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊAದು ವಾಕ್ಯಗಳಲ್ಲಿ ಉತ್ತರಿಸಿ.

೧. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ ?
ಹಕ್ಕಿ ಕಣ್ಣು ತೆರೆದು ರೆಪ್ಪೆ ಮುಚ್ಚುವುದರೊಳಗೆ ಗಾವುದ ಗಾವುದ ಗಾವುದ ರೀತಿಯಲ್ಲಿ ವೇಗವಾಗಿ ಹಾರುತ್ತಿದೆ.
೨. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ ?
ಹಕ್ಕಿಯ ಗರಿಯಲ್ಲಿ ಬಿಳಿಹೊಳೆ ಬಣ್ಣಗಳಿವೆ.
೩. ಹಕ್ಕಿಯು ಕಣ್ಣುಗಳು ಯಾವುವು ?
ಹಕ್ಕಿಯು ಕಣ್ಣುಗಳು ಸೂರ್ಯ ಚಂದ್ರರು  .
೪. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ ?
ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
೫. ಹಕ್ಕಿ ಯಾರನ್ನು ಹರಸಿದೆ ?
ಹಕ್ಕಿ ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
೬. ಹಕ್ಕಿಯು ಯಾವುದರ ಸಂಕೇತವಾಗಿದೆ ?
ಹಕ್ಕಿಯು ಕಾಲಪಕ್ಷಿಯ ಸಂಕೇತವಾಗಿದೆ.
೭. ಹಕ್ಕಿಯ ಚುಂಚಗಳು ಎಲ್ಲಿಯವರೆಗೆ ಚಾಚಿವೆ ?
ಹಕ್ಕಿಯ ಚುಂಚಗಳು ದಿಗ್ಮಂಡಲ ಅಂಚಿನ ಆಚೆಯವರೆUÆÀ ಚಾಚಿವೆ.
೮.ಹಕ್ಕಿಯು ಯಾವ ಮಾಲೆಯನ್ನು ಸಿಕ್ಕಿಸಿಕೊಂಡಿದೆ ?
ಹಕ್ಕಿಯು ಚಿಕ್ಕೆಯ ಮಾಲೆಯನ್ನು ಸಿಕ್ಕಿಸಿಕೊಂಡಿದೆ.
೯.ಹಕ್ಕಿಯು ಯಾವ ಲೋಕದ ಅಂಗಳಕ್ಕೇರಿದೆ ?
ಹಕ್ಕಿಯು ಮಂಗಳ ಲೋಕದ ಅಂಗಳಕ್ಕೇರಿದೆ.
೧೦.ಹಕ್ಕಿಯು ಏನನ್ನು ಒಡೆಯಲು ಹೊಂಚುಹಾಕಿದೆ ?
ಹಕ್ಕಿಯು ಬ್ರಂಹ್ಮಾ೦ಡಗಳನ್ನು ಒಡೆಯಲು ಹೊಂಚುಹಾಕಿದೆ.
೧೧.ಹಕ್ಕಿಯು ಯಾವ ಮೇರೆಯನ್ನು ಮೀರಿದೆ ?
ಹಕ್ಕಿಯು ಬೆಳ್ಳಿಯ ಹಳ್ಳಿಯ ಮೇರೆಯನ್ನು ಮೀರಿದೆ.
೧೨.ಹಕ್ಕಿ ಹಾರುತಿದೆ ನೋಡಿದಿರಾ ! ಕವಿತೆಯನ್ನು ಯಾವ ಕೃತಿಯಿಂದ ಆಯ್ಕೆ ಮಾಡಲಾಗಿದೆ ?
ಹಕ್ಕಿ ಹಾರುತಿದೆ ನೋಡಿದಿರಾ ! ಕವಿತೆಯನ್ನು ಗರಿ ಕೃತಿಯಿಂದ ಆಯ್ಕೆ ಮಾಡಲಾಗಿದೆ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತರಿಸಿ 

hakki harutide nodidira question answer

೧. ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ ?
ಕಾಲವೆಂಬ ಹಕ್ಕಿಯು ಆಕಾಶ, ಮೋಡ, ಭೂಮಂಡಲಗಳ ಎಲ್ಲಾ ಬಣ್ಣಗಳನ್ನು ಸಮನಾಗಿ ಆವರಿಸಿಕೊಂಡಿದೆ. ಆಕಾಶದಲ್ಲಿರುವ ಮುಗಿಲಿಗೆ
ರೆಕ್ಕೆಗಳೊಡೆದವು  ಎಂಬ೦ತೆ, ಆಕಾಶದಲ್ಲಿ ಮಿನುಗುತ್ತಿರುವ ಚಿಕ್ಕೆಗಳ (ನಕ್ಷತ್ರ) ಮಾಲೆಯನ್ನು ಕೊರಳಿಗೆ ಸಿಕ್ಕಿಸಿಕೊಂಡು, ಆಕಾಶದಲ್ಲಿ ಬೆಳಗುತ್ತಿರುವ
ಸೂರ್ಯಚಂದ್ರರನ್ನು  ಕಣ್ಣುಗಳನ್ನಾಗಿ್ನಗಿ ಮಾಡಿಕೊಂಡು ಅನಂತದೆಡೆಗೆ ಹಾರಿಹೋಗುತ್ತಿದೆ ಎಂದು ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೋಲಿಸಿದ್ದಾರೆ.
೨. ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಕಾಲವು ಯುಗಯುಗಗಳ  ಹಣೆಬರೆಹವನ್ನು , ಅಳಿಸಿ ಹಾಕಿ ಹೊಸತನವನ್ನು  (ಒಳ್ಳೆತನವನ್ನು) ಹೊಸ ಹಣೆಬರೆಹವನ್ನು  ಬರೆದು ಎಲ್ಲರಿಗೂಬದಲಾವಣೆಯಾಗುವ ಒಳ್ಳೆಯ ಭಾಗ್ಯವನ್ನು  ತೆರೆದು ಕೊಟ್ಟಿದೆ. ಹಾಗೆಯೇ ರೆಕ್ಕೆಯ ಬೀಸುತ , ಮೇಲಕ್ಕೆ ಹಾರುತ, ಹಾರುವ ಈ ಹೊಸಗಾಲದ ಹಸು ಮಕ್ಕಳಿಗೆ ಹೊಸ ಚೇತನವನ್ನು  (ಶಕ್ತಿಯನ್ನು) ನೀಡುತ್ತ , ಉತ್ತಮ ¨ಭವಿಷ್ಯಕ್ಕಾಗಿ ಶುಭ ಹರಸಿದೆ.
೩. ಹಕ್ಕಿಯು ಯಾವ ಮೇರೆ ಮೀರಿ, ನೀರನು ಹೀರಿದೆ?
ಕಾಲದ ಹಕ್ಕಿಯು, ಬೆಳ್ಳಿಚುಕ್ಕಿ ಎಂದು ಕರೆಯಲ್ಪಡುವ ಶುಕ್ರಗ್ರಹವೆಂಬ ಹಳ್ಳಿಯ ಮೇರೆಯನ್ನು ಮೀರಿ ಹಾರಿಹೋಗುತ್ತಿದೆ. ತಿಂಗಳೂರು ಅಂದರೆ
ಚ೦ದ್ರಲೋಕ. ಈ ಚಂದ್ರಲೋಕಕ್ಕೆ ಹಕ್ಕಿ ಏರಿ ನೀರಿನ ಸೆಲೆಯನ್ನು ಹುಡುಕಿ ಅದನ್ನು ಹೀರುತ್ತ ಸಂತೋಷವಾಗಿ ಆಡುತ್ತಿದೆ.ಹೆಚ್ಚುವರಿ ಪ್ರಶ್ನೋತ್ತರಗಳು
೪.ಕಾಲದ ಹಕ್ಕಿಯ ರೆಕ್ಕೆ ಪುಚ್ಚ ಗರಿಗಳನ್ನು ಯಾವ ಯಾವ ಬಣ್ಣಗಳಿಗೆ ಹೋಲಿಸಿದ್ದಾರೆ ?
ಕಾಲದ ಹಕ್ಕಿಗೆ ಪಕ್ಕೆಯಲ್ಲಿ ಇರುವ ರೆಕ್ಕೆಗಳನ್ನು ಕೆಂಪಾದ , ಹೊಳೆಯುವ ಹೊನ್ನಿನ ಬಣ್ಣ ಬಣ್ಣಗಳಿಗೆ ಹೋಲಿಸಿದ್ದಾರೆ. ಪುಚ್ಚಗಳನ್ನು ಕಪ್ಪು ಮತ್ತು ಬಿಳಿ ಬಣ್ಣಕ್ಕೆ  ಹೋಲಿಸಿದ್ದಾರೆ. ಹಾಗೆಯೇ  ಹಕ್ಕಿಯ ಗರಿಗಳನ್ನು ಬಿಳಿ-ಹೊಳೆ ಬಣ್ಣಕ್ಕೆ  ಹೋಲಿಸಿದ್ದಾರೆ.
೫.ಕಾಲಹಕ್ಕಿಯ ಚುಂಚಗಳು ಎಲ್ಲಿಯವರೆಗೆ ಚಾಚಿವೆ ಮತ್ತು ಏಕೆ ?
ಕಾಲವೆಂಬ ಹಕ್ಕಿ ದಿಶಾವಲಯದ (ದಶದಿಕ್ಕುಗಳ ತುದಿ) ತುತ್ತತುದಿಗೆ ಮುಟ್ಟಿದೆ. ದಿಶಾವಲಯದ ಆಚೆಗೆ ತನ್ನಯ ಚುಂಚವನ್ನು  ಚಾಚಿದೆ. ಜಗತ್ತಿನಮೂಲವನ್ನು ಒಡೆಯಲು, ಪ್ರಪಂಚದ ವಿಸ್ಮಯವನ್ನು ಭೇಧಿಸಲು ಎಂಬ೦ತೆ ಹೊಂಚುಹಾಕಿದೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

೧. ಹಕ್ಕಿಯನ್ನು ಕಾಲಗತಿಗೆ ಹೋಲಿಸುತ್ತಾ ಕವಿ ಹೇಳಿರುವ ಮಾತುಗಳಾವುವು ?
ಅಥವಾ
‘ಹಕ್ಕಿ ಹಾರುತಿದೆ ನೋಡಿದಿರಾ !’ ಪದ್ಯದ ಸಾರಾಂಶವನ್ನು ಬರೆಯಿರಿ.
ಕವಿ ದ.ರಾ.ಬೇಂದ್ರೆ  ಅವರು “ಹಕ್ಕಿ ಹಾರುತ್ತಿದೆ ನೋಡಿದಿರಾ’ ಕವನದಲ್ಲಿ  ಕಾಲದಗತಿಯನ್ನು ಹಾರುವ ಹಕ್ಕಿಯೊಂದಿಗೆ ಸಮೀಕರಿಸಿ ನೋಡುವಪ್ರಯತ್ನ ಮಾಡಿದ್ದಾರೆ. ಹಕ್ಕಿಯ ಹಾರುವಿಕೆ ಪ್ರಕೃತಿಯ ಸಹಜ  ಕ್ರಿಯೆ.ಇದಕ್ಕೆ ಚಲನಶೀಲವಾದ ಕಾಲವನ್ನು ಹೋಲಿಸಿ ವರ್ಣಿಸಿದ್ದಾರೆ.
ಕಾಲ, ರಾತ್ರಿ ಕಳೆದು ದಿನ ಬೆಳಕಾಗಿ ಹೀಗೆ ಪುನರಾವರ್ತನೆಯಾಗಿ ಮೇಲೆ, ಕೆಳಗೆ ಸುತ್ತಮುತ್ತ ಕಣ್ಣು ತೆರೆದು  ರೆಪ್ಪೆ ಮುಚ್ಚುವುದರೊಳಗೆ ಗಾವುದರೀತಿಯಲಿ ವೇಗವಾಗಿ ಹಾರಿಹೋಗುತ್ತಿದೆ. ಇಂತಹ ಹಕ್ಕಿ ಹಾರಿ (ಕಾಲ ಕಳೆದು) ಹೋಗುವುದಕ್ಕೆ ತಡೆಯಿಲ್ಲ .ಹಕ್ಕಿಯ ಪುಚ್ಚ,ಗರಿ,ರೆಕ್ಕೆಗಳನ್ನು ಭೂತ,ವರ್ತಮಾನ, ¨ಭವಿಷ್ಯತ್ ಕಾಲಗಳಿಗೆ ಹೋಲಿಸಿದ್ದಾರೆ. ನೀಲಮೇಘಮಂಡಲಗಳ ಬಣ್ಣಗಳನ್ನು ಸಮನಾಗಿ ಆವರಿಸಿಕೊಂಡು ಸಮತೆಯನ್ನು ಕಾಣುತಿದೆ. ಮುಗಿಲಿಗೆ ರೆಕ್ಕೆಗೆಳೊಡೆದವೊ  ಎಂಬ೦ತೆ ಅನಂತವಾಗಿ ಹಾರಿಹೋಗುತ್ತಿದೆ.ಚಿಕ್ಕೆಗಳ ಮಾಲೆಯನ್ನು ಕೊರಳಿಗೆ ಸಿಕ್ಕಿಸಿಕೊಂಡು,ಸೂರ್ಯಚಂದ್ರರನ್ನು  ಕಣ್ಣುಗಳನ್ನಾಗಿ ಮಾಡಿಕೊಂಡು ಅನಂತದೆಡೆಗೆ ಹಾರಿಹೋಗಿದೆ ನೋಡಿದಿರಾ ಎಂಬ ಮಾತನ್ನು ಹೇಳುತ್ತಾರೆ.
ರಾಜ್ಯ, ಸಾಮ್ರಾಜ್ಯಗಳನ್ನು ವೈಭವದಿಂದ ಮೆರೆಯುವಂತೆ ಮಾಡಿದ್ದು ಇದೇ ಕಾಲವೆಂಬ ಹಕ್ಕಿ. ರಾಜ ಮಹಾರಾಜರ ಸಣ್ಣದೊಡ್ಡ, ಕೋಟೆಕೊತ್ತಲಗಳನ್ನು ಗಬಕ್ಕನೆ ನಾಶಮಾಡಿದದ್ದು  ಕಾಲವೇ. ವಿಶ್ವದ ಎಲ್ಲಾ ಭಾಗಗಳನ್ನು ತೇಲಿಸಿ-ವಲಿಸಿ ಮುಳುಗಿಸಿ, ಸಾರ್ವಭೌಮ ನೆತ್ತಿಯ ಕುಕ್ಕಿ ಹಾರಿಹೋಗಿದೆ.ಕಾಲವು ಯುಗಯುಗಗಳ  ಹಣೆಬರೆಹವನ್ನು ಅಳಿಸಿ ಹಾಕಿ ಹೊಸತನದ ಭಾಗ್ಯವನ್ನು ತೆರೆದು ಕೊಟ್ಟಿದೆ. ಹೊಸಗಾಲದ ಹಸುಮಕ್ಕಳಿಗೆ ಹೊಸಚೇತನವನ್ನು  ನೀಡುತ್ತ, ಉತ್ತಮ ¨ಭ್ಯವಿಷ್ಯಕ್ಕಾಗಿ ಹರಸಿದೆ. ಬೆಳ್ಳಿಚುಕ್ಕಿ   ಎಂದು ಕರೆಯಲ್ಪಡು ವ ಶುಕ್ರಗ್ರಹವೆಂಬ  ಹಳ್ಳಿಯ ಮೇರೆಯನ್ನು ಮೀರಿ,ಚಂದ್ರಲೋಕಕ್ಕೆ ಏರಿ ನೀರಿನ್ನು ಹುಡುಕಿ ಹೀರಿದೆ. ಮಂಗಳನ  ಅಂಗಳಕ್ಕೆ  ಏರಿ ಹೋಗಿದೆ. ವೈಜ್ಞಾನಿಕವಾಗಿ ಭಾರತೀಯರು ಚಂದ್ರ,ಶುಕ್ರ,ಮ೦ಗಳನ ಅಂಗಳಕ್ಕೆ  ಹೋಗಿ ಸಂಶೋದನೆ ಮಾಡುವ ಗುರಿಯನ್ನು ಹೊಂದಿದ್ದಾರೆ ಎಂಬ ಮಾತನ್ನು ಪರೋಕ್ಷವಾಗಿ ಅಭಿವ್ಯಕ್ತಪಡಿಸಿದ್ದಾರೆ.ದಶದಿಕ್ಕುಗಳ ತುತ್ತತುದಿಗೆ ಮುಟ್ಟಿ ಅದರ ಆಚೆಗೆ ತನ್ನಯ   ಚುಂಚವನ್ನು  ಚಾಚಿದೆ. ಜಗತ್ತಿನ ಮೂಲವನ್ನು ಒಡೆಯಲು, ಪ್ರಪಂಚದ ವಿಸ್ಮಯವನ್ನುಭೇದಿಸಲೋ  ಎಂಬ೦ತೆ ಹೊಂಚುಹಾಕಿದೆ ಎಂಬ ಮಾತನ್ನು ಹೇಳುತ್ತಾರೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ರೆಕ್ಕೆಗಳೆರಡೂ ಪಕ್ಕದಲ್ಲುಂಟು”
ಆಯ್ಕೆ :- ಈ ವಾಕ್ಯವನ್ನುದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದ
ಆರಿಸಲಾಗಿದೆ.
ಸ೦ದರ್ಭ :- ಬೇಂದ್ರೆಯವರು ಕಾಲದ ಗುರುತನ್ನ  ಹಕ್ಕಿಯ ರೆಕ್ಕೆಗಳ  ಬಣ್ಣದ ರೂಪಗಳಿಗೆ ಹೋಲಿಸುವ ಸಂದರ್ಭದಲ್ಲಿ ಈ ಮಾತನ್ನು
ತಿಳಿಸಿದ್ದಾರೆ. ಹಕ್ಕಿಗೆ ಕರಿನರೆ ಬಣ್ಣದ ಪುಚ್ಚಳಿವೆ . ಬಿಳಿಹೊಳೆ ಬಣ್ಣದ ಗರಿಗಳಿವೆ ಹಾಗೆಯೇ ಕೆನ್ನನ  ಹೊನ್ನನ ಬಣ್ಣ-ಬಣ್ಣಗಳ “ರೆಕ್ಕೆಗಳೆರಡೂ
ಪಕ್ಕದಲುಂಟು” ಅಂದರೆ ಕೆ೦ಪಾದ ಮತ್ತು ಹೊನ್ನಿನ ಬಣ್ಣಗಳ ಹಕ್ಕಿಯ ರೆಕ್ಕೆಗಳು ಪಕ್ಕಿಯಲ್ಲಿವೆ ಎಂದು ವರ್ಣಿಸುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ಕಾಲವೆಂಬ ಹಕ್ಕಿಯ ರೆಕ್ಕೆಗಳಿಗಿರುವ ಬಣ್ಣಗಳ ಭೌತಿಕ ರೂಪವನ್ನು ಕಾಲದ ಗುರುತಾಗಿ ಅಭಿವ್ಯಕ್ತಿಸಿರುವುದು ಸ್ವಾರಸ್ಯಪೂರ್ಣವಾಗಿದೆ.
೨. “ಸಾರ್ವಭೌಮರಾ ನೆತ್ತಿಯ ಕುಕ್ಕಿ”
ಆಯ್ಕೆ :- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದ
ಆರಿಸಲಾಗಿದೆ.
ಸ೦ದರ್ಭ :- ಕವಿ ದ.ರಾ.ಬೇಂದ್ರೆ ಅವರು ಕಾಲದ ಸಾರ್ವಭೌಮತ್ವವನ್ನು ವಿವರಿಸಿ ವರ್ಣಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳುತ್ತಾರೆ.
ಕಾಲಪಕ್ಷಿಯು ರಾಜ್ಯ, ಸಾಮ್ರಾಜ್ಯಗಳನ್ನು ವೈಭವದಿ೦ದ ಮೆರೆಯುವಂತೆ ಮಾಡಿ, ಕಾಲಗತಿಯಲ್ಲಿ  ರಾಜ ಮಹಾರಾಜರ ಕೋಟೆ-ಕೊತ್ತಲಗಳನ್ನುನಾಶಮಾಡುತ್ತಾ, ಖಂಡ-ಖಂಡಗಳನ್ನು  ತೇಲಿಸಿ-ಮುಳುಗಿಸಿ, ಸಾರ್ವಭೌಮರೆಂದು ಮೆರೆದವರ ನೆತ್ತಿಯ ಮೇಲೆ ಕುಕ್ಕಿ ಕೆಳಗೆ ಬೀಳಿಸಿ ಹೊಸಕಿ ಹಾಕಿ
ಹಕ್ಕಿ ಹಾರಿಹೋಗಿದೆ ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ಕಾಲದ ಗತಿಯಲ್ಲಿ ವೈಭವದಿಂದ ಮೆರೆದ  ಸಾರ್ವಭೌಮರೆಲ್ಲರೂ ನಾಮಾವಶೇಷವಾಗಿದ್ದಾರೆ ಎಂಬುದು  ಸ್ವಾರಸ್ಯ ಪೂರ್ಣವಾಗಿ ಈ ವಾಕ್ಯದಲ್ಲಿ ವರ್ಣಿತವಾಗಿದೆ.
೩.“ಬಲ್ಲರು  ಯಾರಾ ಹಾಕಿದ ಹೊಂಚ”
ಆಯ್ಕೆ :- ಈ ವಾಕ್ಯವನ್ನುದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದಆರಿಸಲಾಗಿದೆ.
ಸ೦ದರ್ಭ :- ಬೇಂದ್ರೆಯವರ  ಕಾಲವೆಂಬ ಹಕ್ಕಿಯು ತನ್ನ ಬಾಹುವಿನಿಂದ ಜಗತ್ತಿನ ರಹಸ್ಯವನ್ನು ಭೇದಿಸುವ  ತಂತ್ರವನ್ನು ವಿಶ್ಲೇಷಿಸುವ
ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳುತ್ತಾರೆ. ಕಾಲವೆಂಬ ಹಕ್ಕಿ ದಿಶಾವಲಯದ ತುತ್ತತುದಿಗೆ ಮುಟ್ಟಿ, ಆಚೆಗೆ ತನ್ನಯ ಕೊಕ್ಕನ್ನು ಚಾಚಿದೆ.
ಅದು ಬ್ರಹ್ಮಾಂಡಲಗಳನ್ನು ಒಡೆಯಲೋ ಎಂಬ೦ತೆ ಹೊ೦ಚುಹಾಕಿದೆ ಏನೋ ಬಲ್ಲವರಾರು ?  ಸಂದರ್ಭದಲ್ಲಿ ಎಂಬ ವಿಸ್ಮಯವನ್ನು ಅಭಿವ್ಯಕ್ತಪಡಿಸುವ ಈ ವಾಕ್ಯ ಬಂದಿದೆ.
ಸ್ವಾರಸ್ಯ :-ಕಾಲಪಕಾಲಪಕ್ಷಿಯು ಬ್ರಹ್ಮಾಂಡ ರಹಸ್ಯವನ್ನು ¨ಭೇದಿಸಲು ಹೊಂಚು ಹಾಕಿರಬಹುದು!ಎಂಬ  ವಿಸ್ಮಯವನ್ನು ಈ ವಾಕ್ಯದಲ್ಲಿ
ಸ್ವಾರಸ್ಯಪೂರ್ಣವಾಗಿ ವರ್ಣಿಸಲಾಗಿದೆ.
೪. “ಹೊಸಗಾಲದ ಹಸುಮಕ್ಕಳ ಹರಸಿ”
ಆಯ್ಕೆ :- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದ
ಆರಿಸಲಾಗಿದೆ.
ಸ೦ದರ್ಭ :- ಬೇಂದ್ರೆಯವರು  ಯುವ ಜನಾಂಗದ ಉತ್ತಮ ¨ಭವಿಷ್ಯಕ್ಕಾಗಿ ಕಾಲದ ಶುಭ ಹಾರೈಕೆಯನ್ನು ಕುರಿತು ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು  ಹೇಳುತ್ತಾರೆ. ಕಾಲವು ಯುಗಯುಗಗಳ  ಹಣೆಬರೆವನ್ನು , ಅಳಿಸಿ ಹಾಕಿ ಹೊಸತನದ ಭಾಗ್ಯವನ್ನು ತೆರೆದು  ಕೊಟ್ಟಿದೆ. ಹಾಗೆಯೇರೆಕ್ಕೆಯ ಬಿಚ್ಚಿ ಮೇಲೇರುತ್ತಾ ಹೊಸಗಾಲದ ಹಸು ಮಕ್ಕಳಿಗೆ ಹೊಸ ಚೇತನವನ್ನು ನೀಡುತ,್ತ ಉತ್ತಮ ಭವಿಷ್ಯಕ್ಕಾಗಿ ಶುಭ ಹರಸಿದೆ ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ಯುವ ಜನಾಂಗದ ¨ವಿಷ್ಯಕ್ಕೆ ಶುಭವಾಗಲಿ ಎಂದು ಹರಸುವ ಕಾಲಪಕ್ಷಿಯ ಗುಣ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
೫. “ಮಂಗಳ ಲೋಕದ ಅಂಗಳಕೇರಿ”
ಆಯ್ಕೆ :- ಈ ವಾಕ್ಯವನ್ನು ದ.ರಾ.ಬೇಂದ್ರೆ ವಿರಚಿತ ‘ಗರಿ’ ಕವನ ಸಂಕಲನದಿ೦ದ ಆಯ್ದ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಪದ್ಯದಿಂದಆರಿಸಲಾಗಿದೆ.
ಸ೦ದರ್ಭ:- ಕಾಲದ ವೈಜ್ಞಾನಿಕ ಗತಿಯನ್ನು ಹೇಳುವ ಸಂದರ್ಭದಲ್ಲಿ ದ.ರಾ.ಬೇಂದ್ರೆ ಅವರು ಈ ವಾಕ್ಯವನ್ನು ಹೇಳುತ್ತಾರೆ. ಕಾಲಪಕ್ಷಿಯು
ಬೆಳ್ಳಿಚುಕ್ಕಿ(ಶುಕ್ರಗ್ರಹ)ಎಂಬ ಹಳ್ಳಿಯ ಮೇರೆಯನ್ನು ದಾಟಿ, ಚಂದ್ರಲೋಕಕ್ಕೆ  ಹಾರಿ ನೀರಿನ್ನು ಹೀರಿ ಹಾಗೆಯೇ ಮುಂದೆ ಹಾರಾಡುತ್ತ ಹಾರಾಡುತ್ತ
ಮಂಗಳ ಲೋಕ(ಗ್ರಹ)ದ ಅಂಗಳಕ್ಕೆ ಏರಿ ಹೋಗುತ್ತಿದೆ ಎಂದು ವಿವರಿಸುವ ಸಂದರ್ಭದಲ್ಲಿ ಈ ವಾಕ್ಯ ಬಂದಿದೆ.
ಸ್ವಾರಸ್ಯ :- ವೈಜ್ಞಾನಿಕವಾಗಿ ಭಾರತೀಯರು ಶುಕ್ರ, ಚಂದ್ರ, ಮಂಗಳನ ಅಂಗಳಕ್ಕೆ   ಹೋಗಿ ಸಂಶೋಧನೆ ಮಾಡುವ ಗುರಿಯನ್ನು ಪರೋಕ್ಷವಾಗಿ
ಅಭಿವ್ಯಕ್ತಪಡಿಸಿದ್ದಾರೆ.

ಉ) ಹೊಂದಿಸಿ ಬರೆಯಿರಿ.

ಅ’ ಪಟ್ಟಿ ಬ’ ಪಟ್ಟಿ ಉತ್ತರಗಳು
ಹಕ್ಕಿ ಜ್ಞಾನಪೀಠ ಪ್ರಶಸ್ತಿ ಪಕ್ಷಿ
ನಾಕುತಂತಿ ಪಕ್ಷಿ ಜ್ಞಾನಪೀಠ ಪ್ರಶಸ್ತಿ
ನೀಲಮೇಘಮಂಡಲ ಖಂಡ-ಖ೦ಡಳ ಸಮ ಬಣ್ಣ
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ ತೆನೆ ಒಕ್ಕಿ
ತೇಲಿಸಿ ಮುಳುಗಿಸಿ ಸಮ ಬಣ್ಣ ಖಂಡ-ಖ೦ಡಗಳ
ಮಂಗಳ ಭಾಗ್ಯವ ತೆರೆಸಿ ಅ೦ಗಳಕೇರಿ
ಅಂಗಳಕೇರಿ

ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

೧. ಕೊಟ್ಟಿರುವ ಪದಗಳಿಗೆ ಸಮಾನಾರ್ಥಕ ಪದ ಬರೆಯಿರಿ.

ಸೂರ್ಯ, ಮೇಘ, ಗಡ, ಹರಸು, ಒಕ್ಕಿ, ಕೆನ್ನ.
ಸೂರ್ಯ -ರವಿ, ಭಾನು, ಅರ್ಕ, ನೇಸರ, ಭಾಸ್ಕರ ಗಡ – ಸಣ್ಣಕೋಟೆ ಒಕ್ಕಿ – ಬೇರ್ಪಡಿಸಿ
ಮೇಘ –ಮೋಡ ,ಮುಗಿಲು ಹರಸು-ಆಶೀರ್ವದಿಸು,ಹಾರೈಸು ಕೆನ್ನ- ಕೆಂಪು, ಕೆಂಬಣ್ಣ

೨. ಕೊಟ್ಟಿರುವ ಪದಗಳಿಗೆ ತತ್ಸಮ-ತದ್ಭವ ಬರೆಯಿರಿ.

ಬಣ್ಣ, ಬ್ರಹ್ಮ, ಚಂದ್ರ, ಯುಗ, ಅಂಗಳ.

ತತ್ಸಮ ತದ್ಭವ
ವರ್ಣ ಬಣ್ಣ
ಬ್ರಹ್ಮ ಬೊಮ್ಮ
ಚ೦ದ್ರ ಚ೦ದಿರ
ಯುಗ ಜುಗ
ಅ೦ಕಣ ಅ೦ಗಳ

೩. ಕೊಟ್ಟಿರುವ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿ.

ಇರುಳಳಿದು, ತೆರೆದಿಕ್ಕುವ, ಹೊಸಗಾಲ, ದಿಗ್ಮಂಡಲ, ತಿಂಗಳಿನೂರು.
ಪದಗಳು ಬಿಡಿಸಿ ಬರೆಯುವುದು ಸಂಧಿ ಹೆಸರು
ಇರುಳಳಿದು ಇರುಳು + ಅಳಿದು ಲೋಪಸಂಧಿ
ತೆರೆದಿಕ್ಕುವ ತೆರೆದು + ಇಕ್ಕುವ ಲೋಪಸಂಧಿ
ಹೊಸಗಾಲ ಹೊಸ + ಕಾಲ ಆದೇಶ ಸಂಧಿ
ದಿಗ್ಮ೦ಡಲ ದಿಕ್ + ಮಂಡಲ ಜಶ್ತ್ವಸ೦ಧಿ
ತಿ೦ಗಳಿನೂರು ತಿ೦ಗಳಿನ + ಊರು ಲೋಪಸಂಧಿ
೪. ಈ ಪದ್ಯದಲ್ಲಿ ಬರುವ ದ್ವಿರುಕ್ತಿ ಪದಗಳನ್ನು ಪಟ್ಟಿ ಮಾಡಿರಿ.
ಇರುಳಿರುಳು ದಿನದಿನ ಗಾವುದಗಾವುದ ಬಣ್ಣಬಣ್ಣ ಖಂಡಖ೦ಡ ಯುಗಯುಗ

ಆ) ಕೊಟ್ಟಿರುವ ಅವ್ಯಯ ಪದಗಳು ಯಾವ ಯಾವ ಅವ್ಯಯಕ್ಕೆ ಸೇರಿವೆ ಎಂಬುದನ್ನು ಗುರುತಿಸಿ.

ಅದುವೇ, ಆದ್ದರಿಂದ, ಅಯ್ಯೋ, ಬೇಗನೆ, ಧಗಧಗ, ಸಾಕು, ಓಹೋ, ಹೌದು, ನೀನೇ, ರೊಯ್ಯನೆ, ಮೆಲ್ಲಗೆ, ಅಲ್ಲದೆ.
ಸಾಮಾನ್ಯವ್ಯಯ ಬೇಗನೆ, ರೊಯ್ಯನೆ, ಮೆಲ್ಲಗೆ.
ಭಾವಸೂಚಕಾವ್ಯಯ ಅಯ್ಯೋ, ಓಹೋ.
ಅನುಕರಣಾವ್ಯಯ ಧಗಧಗ
ಕ್ರಿಯಾರ್ಥಕಾವ್ಯಯ ಸಾಕು, ಹೌದು.
ಸಂಬ೦ಧಾರ್ಥಕಾವ್ಯಯ ಆದ್ದರಿಂದ,ಅಲ್ಲದೆ.
ಅವಧಾರಣಾರ್ಥಕಾವ್ಯಯ ಅದುವೇ,ನೀನೇ.

ಚಟುವಟಿಕೆ

೫. ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ

ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕೆಯಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚ೦ದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?
ಯುಗ-ಯುಗಗಳ ಹಣೆ ಬರೆಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?
10th Solutions for Class 10th Kannada Hakki Harutide Nodidira Lesson Notes question answer pdf lesson summary in Kannada deevige
10ನೇ ತರಗತಿ ಹಕ್ಕಿ ಹಾರುತ್ತಿದೆ  ನೋಡಿದಿರಾ ನೋಟ್ಸ್ ಪ್ರಶ್ನೆ ಉತ್ತರ , ಪದ್ಯ ಸಾರಾಂಶ ಕನ್ನಡ , ಪದ್ಯದ ಪ್ರಶ್ನೋತ್ತರಗಳು.
Kseeb Solutions 10th Kannada Hakki Harutide Nodidira Notes Question Answer Summary in Kannada pdf download

Kannada Lesson Notes Kannada Deevige 10th Notes Hakki Harutide Nodidira Pata Notes Question answer text book pdf download

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh