1st PUC Kannada Na Bari Brunavalla Notes |‌ ಪ್ರಥಮ ಪಿಯುಸಿ ಕನ್ನಡ ನಾ ಬರಿ ಭ್ರೂಣವಲ್ಲ ನೋಟ್ಸ್.

ಪ್ರಥಮ ಪಿ.ಯು.ಸಿ ನಾ ಬರಿ ಭ್ರೂಣವಲ್ಲ ಕನ್ನಡ ಪದ್ಯದ ನೋಟ್ಸ್ ಪ್ರಶ್ನೋತ್ತರಗಳು, 1st PUC Na bari Brunavalla Notes in Kannada Question Answer Summary Guide Saramsha Pdf Download in Kannada Medium Karnataka State Syllabus 2024, Kseeb Solutions For Class 11 Kannada Poem 10 Notes 1st Puc Kannada 10th Poem Notes Na Bari Brunavalla Kannada Saramsha ನಾ ಬರಿ ಭ್ರೂಣವಲ್ಲ ಸಾರಾಂಶ

Na Bari Brunavalla Kannada Notes Pdf

 

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಮಾಲತಿ ಪಟ್ಟಣಶೆಟ್ಟಿ

ಕಾವ್ಯಾ ಭಾಗದ ಹೆಸರು: ನಾ ಬರಿ ಭ್ರೂಣವಲ್ಲ.

1st PUC Na Bari Brunavalla Notes

1st P.U.C Kannada Naa Bari Bhrunavalla |ಪ್ರಥಮ ಪಿ.ಯು.ಸಿ ಕನ್ನಡ ನಾ ಬರಿ ಭ್ರೂಣವಲ್ಲ.
1st PUC Kannada Na Bari Brunavalla Notes ಪ್ರಥಮ ಪಿಯುಸಿ ಕನ್ನಡ ನಾ ಬರಿ ಭ್ರೂಣವಲ್ಲ ನೋಟ್ಸ್

ಕವನ – ಕವಿ ಪರಿಚಯ : ಮಾಲತಿ ಪಟ್ಟಣಶೆಟ್ಟಿ ( ೧೯೪೦ )

ಕನ್ನಡದ ಲೇಖಕಿಯರಲ್ಲಿ ಮಾಲತಿ ಪಟ್ಟಣಶೆಟ್ಟಿಯವರು ಪ್ರಮುಖರು , ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ , ಇವರು ಧಾರವಾಡದಲ್ಲಿ ನೆಲಸಿದ್ದಾರೆ . ಬಾ ಪರೀಕ್ಷೆಗೆ , ಗರಿಗೆದರಿ , ತಂದೆ ಬದುಕು ಗುಲಾಬಿ , ದಾಹ ತೀರ , ಮೌನ ಕರಗುವ ಹೊತ್ತು , ಹೂದಂಡಿ , ನನ್ನ ಸೂರ್ಯ , ಎಷ್ಟೊಂದು ನಾವೆಗಳು ಇವರ ಕವನ ಸಂಕಲನಗಳು.

ಇಂದು ನಿನ್ನಿನ ಕತೆಗಳು , ಸೂರ್ಯ ಮುಳುಗುವುದಿಲ್ಲ , ಇನ್ನಷ್ಟು ಕತೆಗಳು (ಕಥಾ ಸಂಕಲನ) , ಬೆಳ್ಳಕ್ಕಿ ಸಾಲು (ಮಕ್ಕಳ ಕವಿತೆ) , ಬೋರಂಗಿ (ಮಕ್ಕಳ ನಾಟಕ ) , ಬಸವರಾಜ ಕಟ್ಟಿಮನಿ ಬದುಕು ಬರಹ , ಶ್ರೀನಿವಾಸ ವೈದ್ಯ ಬದುಕು – ಬರಹ (ವ್ಯಕ್ತಿ ಚಿತ್ರ) , ಪ್ರಶಾಂತ , ಸಮತಾ , ಕಾವ್ಯ ೯೬ , ಅಕ್ಕ (ಸಂಪಾದಿತ) ಪ್ರಮುಖ ಕೃತಿಗಳು.

ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ , ಅನುಪಮಾ ಪ್ರಶಸ್ತಿ , ಗೊರೂರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭ್ರೂಣಾವಸ್ಥೆಯಲ್ಲಿರುವ ಹೆಣ್ಣು ಮಗುವು ತನ್ನ ತಾಯಿಯೊಂದಿಗೆ ನಡೆಸುವ ಆಪ್ತಸಂವಾದವನ್ನು ಈ ಕವಿತೆ ಚಿತ್ರಿಸುತ್ತದೆ .

ತಾಯಿಯ ಗರ್ಭವು ತನಗೆ ಅತ್ಯಂತ ಸುರಕ್ಷಿತ ತಾಣವೆಂದು ಭಾವಿಸಿರುವ ಮಗುವಿಗೆ ತನ್ನ ಅಸ್ತಿತ್ವವನ್ನೇ ನಿರಾಕರಿಸುತ್ತಿರುವ ವ್ಯವಸ್ಥೆಯ ಧೋರಣೆಗಳು ಆತಂಕವನ್ನು ಸೃಷ್ಟಿಮಾಡಿದೆ . ಬದುಕಲು ಮಾತ್ರವಲ್ಲ , ಹುಟ್ಟುವುದಕ್ಕೂ ಹೋರಾಟ ಮಾಡಬೇಕಾಗಿರುವ ಈ ವಿಷಮ ಪರಿಸ್ಥಿತಿಯಲ್ಲಿ ತಾಯಿಗೆ ಮಾತ್ರವೇ ತನ್ನನ್ನು ರಕ್ಷಿಸುವ ಶಕ್ತಿಯಿದೆ ಎಂಬ ಭರವಸೆಯೊಂದಿಗೆ ಹೊಟ್ಟೆಯೊಳಗಿನ ಮಗುವು ತನ್ನನ್ನು ಕಾಪಾಡುವಂತೆ ತಾಯಿಯಲ್ಲಿ ದೀನವಾಗಿ ಮೊರೆಯಿಡುವ ಚಿತ್ರಣ ಇಲ್ಲಿದೆ .

ಪದಕೋಶ :

ಮುಗುಳು – ಮೊಗ್ಗು ; ನಶೆ – ಅಮಲು ; ಪಾಶ – ನೇಣಿನ ಕುಣಿಕೆ ; ಗುಳಿಗೆ – ಮಾತ್ರೆ ಉಡಿ – ಮಡಿಲು .

1st PUC Kannada Na Bari Brunavalla Notes Question Answer

I. ಒಂದು ವಾಕ್ಯದಲ್ಲಿ ಉತ್ತರಿಸಿ .

1.ಭ್ರೂಣವಸ್ಥೆಯಲ್ಲಿರುವ ಮಗುವಿಗೆ ವಿಷವಾಗಿರುವುದು ಯಾವುದು ?

ಭ್ರೂಣ ವಸ್ಥೆಯಲ್ಲಿರುವ ಮಗುವಿಗೆ ವಿಷವಾಗಿರುವುದು ಔಷಧಿಗಳು .

2.ಅವ್ವನ ದೇಹದ ಮುಗುಳು ಯಾರು ?

ಅವ್ವನ ದೇಹದ ಮುಗುಳು ಅವಳ ಗರ್ಭದಲ್ಲಿರುವ ಭ್ರೂಣ

3.ಒಡಲೊಳಗಿನ ಮಗು ತನ್ನ ರಕ್ತವನ್ನು ಏನೆಂದು ಭಾವಿಸುತ್ತದೆ ?

ಒಡಲೊಳಗಿನ ಮಗು ತನ್ನ ರಕ್ತವನ್ನು ಪ್ರೀತಿಯರಸ ಎಂದು ಬಾವಿಸಿರುತ್ತದೆ .

4.ಭ್ರೂಣಾವಸ್ಥೆಯ ಮಗುವನ್ನು ಬೆನ್ನಟ್ಟಿರುವುದು ಯಾವುದು ?

ಭ್ರೂಣಾವಸ್ಥೆಯ ಮಗುವಿನ ಬೆನ್ನಟ್ಟಿರುವುದು ಕರಿಯುಗುರು ,

5. ತನ್ನನ್ನು ಉಳಿಸಿದರೆ ತಾಯಿಗೆ ಏನು ತರುವೆನೆಂದು ಮಗುವು ಹೇಳುತ್ತದೆ ?

ತನ್ನನು ಉಳಿಸಿದರೆ ತಾಯಿಯ ಬಾಳು ಹಸಿರಿಗೆ ಹೂ ತರುವೆನೆಂದು ಮಗುವು ಹೇಳುತ್ತದೆ .

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಭ್ರೂಣವಸ್ಥೆಯ ಮಗುವು ಏಕೆ ಗಾಬರಿಗೊಂಡಿದೆ ?

ಭ್ರೂಣ ವಸ್ಥೆಯಲ್ಲಿರುವ ಮಗುವು ನಶಿಸಿಬೇಕೆಂಬ ಮಾತುಗಳ ಕಿವಿಗೆ ಬಿದ್ದುದರಿಂದ ಅದನ್ನು ಕೇಳಿ ಅದಕ್ಕೆ ಗಾಬರಿಯಾಯಿತು .

2. ತಾನು ಬದುಕಿನಲ್ಲಿ ಇನ್ನೂ ಕಾಣಬೇಕಾಗಿರುವುದು ಏನೆಂದು ಒಡಲೊಳಗಿನ ಮಗುವು ಹೇಳುತ್ತದೆ ?

ತಾನು ಬದುಕಿನಲ್ಲಿ ನೀಲಾಕಾಶ , ಪಚ್ಚೆಯಂತ ನೆಲ , ಗಾಳಿಯ ಮೃದು ಸ್ಪರ್ಶವನ್ನು ಕಾಣಬೇಕಾಗಿರುವುದು ಇದೆ ಎಂದು ಒಡಲೊಳಗಿನ ಮಗುವು ಹೇಳುತ್ತದೆ .

3. ತನ್ನನ್ನು ಏಕೆ ಕಿತ್ತುಕೊಳ್ಳಬಾರದೆಂದು ಹೊಟ್ಟೆಯೊಳಗಿನ ಮಗುವು ಹೇಳುತ್ತಿದೆ ?

ತನ್ನನ್ನು ಕಿತ್ತುಕೊಂಡರೆ ತಾನು ಸತ್ತೆ ಹೋಗುವುದಾಗಿ , ಒಡಲ ಮುತ್ತಿನಂತಿರುವ ಈ ಮಗುವನ್ನು ಮಡಿಲಿಂದ ದೂರ ತಳ್ಳುವೆಯಾ ಎಂದು ಹೊಟ್ಟೆಯೊಳಗಿನ ಮಗು ಕೇಳುತ್ತದೆ .

4. ಹೊಟ್ಟೆಯಲ್ಲಿರುವ ಮಗುವು ತನ್ನ ಉಸಿರಿಗೆ ಯಾವುದು ಪಾಶವಾಗಿದೆಯೆಂದು ಭಾವಿಸುತ್ತದೆ ?

ಹೊಟ್ಟೆಯಲ್ಲಿರುವ ಮಗುವು ತನ್ನ ಉಸಿರಿಗೆ ಔಷಧಿ ಯೆಂದು ಭಾವಿಸುತ್ತದೆ . ಗುಳಿಗೆಗಳು ಪಾಶವಾಗಿದೆ

ಹೊಟ್ಟೆಯೊಳಗಿನ ಮಗುವು ಯಾವ ವರವನ್ನು ಬೇಡುತ್ತಿದೆ ?

ಹೊಟ್ಟೆಯೊಳಗಿನ ಮಗುವು ತನಗೆ ಸದಾ ಉಸಿರಾಡುವ ವರ ನೀಡಬೇಕೆಂದು ಹೊಟ್ಟೆಯೊಳಗಿನ ಮಗುವು ವರವನ್ನು ಬೇಡುತ್ತಿದೆ .

ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಹೆಣ್ಣಿಗೆ ಸಮಾನವಾಗಿ ಬದುಕುವ ಹಕ್ಕಿದೆ ಎಂಬ ಆಶಯವು ಕವಿತೆಯಲ್ಲಿ ಹೇಗೆ ಧ್ವನಿತವಾಗಿದೆ ?

ಹೆಣ್ಣು ಮಗುವನ್ನು ನಿರಾಕರಿಸುವ ನಿರ್ಲಕ್ಷಿಸುವ ಲಿಂಗತಾರತಮ್ಯ ಧೋರಣೆಯು ನಾಗರಿಕ ಸಮಾಜದಲ್ಲಿ ಹಲವಾರು ಗಂಭೀರ ತಿಕ್ಕಾಟುಗಳಲ್ಲಿ ಕಾರಣವಾಗಿದೆ . ಹಣ್ಣನ್ನು ಕೇವಲ ದೇಹವಾಗಿ ಪರಿಭಾವಿಸದೆ ಅವಳ ಮನೋವೃತ್ತಿಯನ್ನು ಗೌರವಿಸುವ , ಮಾನವೀಯ ಧೋರಣೆಗಳನ್ನು ಎಲ್ಲರೂ ಬೆಳಸಿಕೊಳ್ಳಬೇಕಾಗಿದೆ . ಬದುಕಿನ ಎಲ್ಲಾ ರಂಗಗಳಲ್ಲಿಯೂ ತಾರತಮ್ಯಕ್ಕೆ ಅವಕಾಶವಿಲ್ಲದಂತೆ ಸ್ತ್ರೀ – ಪುರುಷರಿಬ್ಬರ ಸಮಾನ ಸಹ ಭಾಗಿತ್ವದಲ್ಲಿ ಸ್ವಸ್ಥ ಸಮಾಜದ ನಿರ್ಮಾಣ ಮಾಡಬೇಕಾಗಿದೆ .

2. ‘ ನಾ ಬರಿ ಭ್ರೂಣವಲ್ಲ ‘ ಎಂದು ಹೊಟ್ಟೆಯೊಳಗಿನ ಮಗುವು ಹೇಳಲು ಕಾರಣವೇನು ?

‘ ನಾ ಬರಿ ಭ್ರೂಣವಲ್ಲ ‘ ಎಂದು ಹೊಟ್ಟೆಯೊಳಗಿನ ಮಗುವು ಹೇಳುತ್ತದೆ . ಇದಕ್ಕೆ ಕಾರಣ ಅದು ತನ್ನ ತಾಯಿಯ ಕನಸು . ಗರ್ಭದೊಳಗೆ ಮೊಗ್ಗಿನಂತಿರುವು ಮುಂದೆ ಹೂವು ಅರಳುವುದು , ತಾಯಿ ರಕ್ತವನ್ನು ಪ್ರೀತಿಯ ರಸವೆಂಬಂತೆ ಸಾರುವ , ಸಲಹುವ ತಾಯಿ ರಕ್ತವನ್ನು ಪ್ರೀತಿಯ ರಸವೆಂಬಂತೆ ಸಾರುವ ಸಲಹುವ ತಾಯಿ ಗರ್ಭದಲ್ಲಿರುವವನು ಎಂದು ನಾ ಬರಿಯ ಭ್ರೂಣವಲ್ಲ , ಅದು ತಾಯಿಯ ಮಡಿಲು ಸೇರುವ ಮುತ್ತುಗಳು ಎಂದು ‘ ತಾನು ಬರಿ ಭ್ರೂಣವಲ್ಲ ‘ ಎಂದು ಹೇಳಿಕೊಳ್ಳುತ್ತಿದೆ .

3. ಹೆಣ್ಣು ಭ್ರೂಣಹತ್ಯೆಯನ್ನು ಈ ಕವಿತೆ ಹೇಗೆ ವಿರೋಧಿಸುತ್ತದೆ ?

ಭ್ರೂಣಾವಸ್ಥೆಯಲ್ಲಿರುವ ಹೆಣ್ಣು ಮಗುವು ತನ್ನ ತಾಯಿಯೊಂದಿಗೆ ನಡೆಸುವ ಆಪ್ತ ಸಂವಾದವನ್ನು ಈ ಕವಿತೆ ಚಿತ್ರಿಸುತ್ತದೆ . ತಾಯಿಯ ಗರ್ಭವು ತನಗೆ ಅತ್ಯಂತ ಸುರಕ್ಷಿತ ತಾಣವೆಂದು ಭಾವಿಸಿರುವ ಮಗುವಿಗೆ ತನ್ನ ಅಸ್ತಿತ್ವನ್ನೇ ನಿರಾಕರಿಸುತ್ತಿರುವ ವ್ಯವಸ್ಥೆಯ ಧೋರಣೆಗಳು ಆತಂಕವನ್ನೂ ಸೃಷ್ಟಿ ಮಾಡಿದೆ . ಬದುಕಲು ಮಾತ್ರವಲ್ಲ , ಹುಟ್ಟುವುದಕ್ಕೂ ಹೋರಾಟ ಮಾಡಬೇಕಾಗಿರುವ ವಿಷಯ ಪರಿಸ್ಥಿತಿಯಲ್ಲಿ ತಾಯಿಗೆ ಮಾತ್ರವೇ ತನ್ನನ್ನು ರಕ್ಷಿಸುವ ಶಕ್ತಿಯಿದೆ ಎಂಬ ಭರವಸೆಯೊಂದಿಗೆ ಹೊಟ್ಟೆಯೊಳಗಿನ ಮಗುವು ತನ್ನನ್ನು ಕಾಪಾಡುವಂತೆ ತಾಯಿಯಲ್ಲಿ ದೀನವಾಗಿ ಮೊರೆಯಿಡುವುದನ್ನು ಚಿತ್ರಿಸುತ್ತಾ ಹೆಚ್ಚು ಭ್ರೂಣಹತ್ಯೆ ಕಾನೂನಿಗೆ ವಿರೋಧ ಎಂದು ವಿರೋಧಿಸುತ್ತದೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. ಚೆಲ್ಲಬೇಕೆ ಉಡಿಯ ಮುತ್ತು

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ನಾ ಬರಿ ಭ್ರೂಣವಲ್ಲ ” ಎಂಬ ಪದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಮಾಲತಿಪಟ್ಟಣಶೆಟ್ಟಿಯವರು ರಚಿಸಿದ್ದಾರೆ .

ಸಂದರ್ಭ : ತಾನು ತಾಯಿಯ ಮಡಿಲಲ್ಲಿ ಮುತ್ತಾಗಿ ಇರಬೇಕೆಂಬ ಆಸೆಯನ್ನು ಭ್ರೂಣ ವ್ಯಕ್ತಪಡಿಸುತ್ತಿದೆ . ವಿವರಣೆ : ತಾಯಿಗೆ ಮಡಿಲಲ್ಲಿ ತನ್ನ ಕಂದಮ್ಮ ಮಲಗಿದಾಗ ಮುತ್ತುರತ್ನ ಪಡೆದಷ್ಟು ಆನಂದ , ಎಂಬುದನ್ನು ಕವಯಿತ್ರಿ ಈ ರೀತಿ ಸೂಚಿಸಿದ್ದಾಳೆ .

ವಿಶೇಷತೆ : ಮಾತೆಯ ಮಮತೆ ಇಲ್ಲಿ ಹೊರಹೊಮ್ಮಿದೆ .

2. ಪಾಶವಾಗಿದೆಯವ್ವ ನನ್ನ ಸುಲಿಗೆ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ನಾ ಬರಿ ಭ್ರೂಣವಲ್ಲ ” ಎಂಬ ಆರಿಸಲಾಗಿದ್ದು ಇದನ್ನು ಮಾಲತಿಪಟ್ಟಣಶೆಟ್ಟಿಯವರು ರಚಿಸಿದ್ದಾರೆ .

ಸಂದರ್ಭ : ಹೆಣ್ಣು ಭ್ರೂಣ ಎಂದು ತಿಳಿದಾಕ್ಷಣ ಅದನ್ನು ಒಸಕಿ ಹಾಕುವ ಪ್ರಯತ್ನದಲ್ಲಿರುವ ಸಮಾಜದವರನ್ನು ಕಂಡು ಹೆದರಿದ ಭ್ರೂಣ ತನ್ನ ತಾಯಿಗೆ ತನ್ನ ಸಂಕಟವನ್ನು ತೋಡಿಕೊಳ್ಳುವ ಸಂದರ್ಭದಲ್ಲಿ ಈ ಸಾಲುಗಳನ್ನು ಕವಿ ಬರೆದಿದ್ದಾರೆ .

ವಿವರಣೆ : ಗರ್ಭ ತೆಗೆದು ಹಾಕಲು ತೆಗೆದುಕೊಳ್ಳುವ ಔಷಧಿ ಗುಳಿಗೆಗಳು ಭ್ರೂಣದ ಹತ್ಯೆಗೆ ಕಾರಣವಾಗಿದೆ ಎನ್ನುವುದು ಈ ಮೇಲ್ಕಂಡ ವಾಕ್ಯವನ್ನು ಬರೆದಿದ್ದಾರೆ .

ವಿಶೇಷತೆ : ಭ್ರೂಣ ತನ್ನ ಅಳಲನ್ನು ತಾಯಿಯ ಬಳಿ ತೋಡಿಕೊಳ್ಳುವ ರೀತಿ ಬಹಳ ಮಾರ್ಮಿಕವಾಗಿ ಚಿತ್ರಿತವಾಗಿದೆ .

3. ನಿನ್ನ ಕನಸಿನ ಅರಳವ್ವಾ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ನಾ ಬರಿ ಭ್ರೂಣವಲ್ಲ ” ಎಂಬ ಪದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಮಾಲತಿಪಟ್ಟಣಶೆಟ್ಟಿಯವರು ರಚಿಸಿದ್ದಾರೆ .

ಸಂದರ್ಭ : ‘ ಹೆಣ್ಣು ಭ್ರೂಣ ‘ ಎಂದು ತಿಳಿದಾಕ್ಷಣ ಅದನ್ನು ಕೊಲ್ಲು ನೋಡುವ ಈ ಸಮಾಜ ಗರ್ಭಧರಿಸಿದ ಹೆಣ್ಣಿನ ಬಗೆಯಾಗಲಿ ಅಥವಾ ಆ ಭ್ರೂಣದ ಬಗೆಯಾಗಲಿ ಯೋಚಿಸುವುದೇ ಇಲ್ಲ . ಇದರಿಂದ ನೊಂದ ಆ ಭ್ರೂಣ ಗರ್ಭದಲ್ಲಿದ್ದುಕೊಂಡೆ ಈ ಮಾತನ್ನು ಹೇಳುತ್ತಿದೆ .

ವಿವರಣೆ : ನಿನ್ನ ಕನಸಿನ ಅರಳವ್ವಾ ‘ ಎಂದರೆ , ಗರ್ಭದಲ್ಲಿರುವ ಭ್ರೂಣ ಮೊಗ್ಗಿನಂತೆ , ” ಅದು ಹೊರಗಿನ ಪ್ರಪಂಚಕ್ಕೆ ಬಂದಾಗ ಅದು ಪರಿಮಳ ಬೀರುವ ಅರಳಿದ ಹೂವಾಗುತ್ತದೆ . ಪ್ರತಿಯೊಂದು ಹೆಣ್ಣಿಗೂ ತನ್ನ ಮಗು ಗರ್ಭದಲ್ಲಿದ್ದಲ್ಲಿ ಅಥವಾ ಹೊರಗೆ ಬಂದಿರಲಿ , ಅದು ಅವಳ ಕನಸು , ತನ್ನ ನೋವು ಸಂಕಟಗಳನ್ನು ಅದರ ಆಟ -ಪಾಠ ನೋವು – ನಲಿವಿನೊಂದಿಗೆ ಮರೆಯುತ್ತಾಳೆ .

ವಿಶೇಷತೆ : ಒಂದು ಹೆಣ್ಣು ಭ್ರೂಣದ ಆತ್ಮಕತೆಯನ್ನು ಕವಯತ್ರಿ ಸರಳವಾದ ಭಾಷೆಯಲ್ಲಿ ಬರೆದಿದ್ದಾರೆ

4 ಯಾರದ್ವಾಕಾ ಒತ್ತಾಸೆ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ನಾ ಬರಿ ಭ್ರೂಣವಲ್ಲ ” ಎಂಬ ಪದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಮಾಲತಿಪಟ್ಟಣಶೆಟ್ಟಿಯವರು ರಚಿಸಿದ್ದಾರೆ .

ಸಂದರ್ಭ : ತನ್ನನ್ನು ಭ್ರೂಣದಲ್ಲಿ ಒಸಕಿ ಹಾಕಲಿದ್ದಾರೆ ಎಂದು ತಿಳಿದ ಭ್ರೂಣ ತನ್ನ ತಾಯಿ ಬಳಿ ಯಾರು ಏಕೆ , ತನ್ನ ನಾಶಕ್ಕೆ ಒತ್ತಾಸೆಯಾಗಿದ್ದಾರೆ ? ಎಂದು ನೊಂದು ಪ್ರಶ್ನಿಸುವ ಸಂದರ್ಭ ಇದಾಗಿದೆ .

ವಿವರಣೆ : ಹೆಣ್ಣು ಭ್ರೂಣ ಎಂದಾಕ್ಷಣ ಈ ಸಮಾಜದ ಪುರುಷ ವರ್ಗ , ಅತ್ತೆ ಎನ್ನುವ ಮಹಾ ಮಾತೆ ಭ್ರೂಣದ ಹತ್ಯೆಗೆ ಮುಂದಾಗುತ್ತಾರೆ ಎಂಬ ಚಿತ್ರಣ ಇಲ್ಲಿದೆ .

ವಿಶೇಷತೆ : ಸಮಾಜದಲ್ಲಿ ಇಂದಿಗೂ 21 ನೇ ಶತಮಾನದಲ್ಲಿಯೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದರ ಬಗ್ಗೆ ಮಾಹಿತಿ ದೊರಕಿಸಿಕೊಟ್ಟಿದ್ದಾರೆ .

5. ಕಂಡಿಲ್ಲ ನಾನಿನ್ನು ಬದುಕಿನಾಗಸದ ನೀಲ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ನಾ ಬರಿ ಭ್ರೂಣವಲ್ಲ ” ಎಂಬ ಪದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಮಾಲತಿಪಟ್ಟಣ ಶೆಟ್ಟಿಯವರು ರಚಿಸಿದ್ದಾರೆ .

ಸಂದರ್ಭ : ಗರ್ಭದಲ್ಲಿರುವ ಭ್ರೂಣಕ್ಕೆ ತಾನು ಬದುಕಬೇಕೆಂಬ ಆಸೆ ಇದೆ . ಅದಕ್ಕಾಗಿ ತನ್ನ ತಾಯಿಯ ಬಳಿ ತನ್ನ ಆಸೆಯನ್ನು ತೋಡಿಕೊಳ್ಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆಯಲಾಗಿದೆ .

ವಿವರಣೆ : ಭ್ರೂಣ ತನ್ನ ಅಮ್ಮನ ಬಳಿ , ತಾನು ಬದುಕಿ ಬಂದು ಹಸಿರಿನಿಂದ ಕೂಡಿದ ನೆಲವನ್ನು ನೀಲಾಕಾಶವನ್ನು ಇದುವರೆವಿಗೆ ಕಂಡಿಲ್ಲ . ಪರೋಕ್ಷವಾಗಿ ನೋಡಬೇಕೆಂಬ ಆಸೆಯನ್ನು ವ್ಯಕ್ತಪಡಿಸಿತು .

ವಿಶೇಷತೆ : ಕವಯಿತ್ರಿ ಭ್ರೂಣದ ಆಸೆ ಆಕಾಂಕ್ಷೆಯನ್ನು ಸರಳ ಭಾಷೆಯಲ್ಲಿ ತಿಳಿಸಿಕೊಟ್ಟಿದ್ದಾರೆ .

6.ನಿನ್ನವ್ವನಾಗಿಯೇ ಬರುವೆನೆ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ನಾ ಬರಿ ಭ್ರೂಣವಲ್ಲ ” ಎಂಬ ಪದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಮಾಲತಿಪಟ್ಟಣ ಶೆಟ್ಟಿಯವರು ರಚಿಸಿದ್ದಾರೆ .

ಸಂದರ್ಭ : ಭ್ರೂಣ ತನ್ನನ್ನು ರಕ್ಷಿಸಿಕೊಳ್ಳಲು , ಹೆಣ್ಣು ಮಕ್ಕಳಿಗೆ ತನ್ನ ತವರು ಎಂದರೆ ಬಲು ಪ್ರೀತಿ . ಆದ್ದರಿಂದ ಹೆಣ್ಣು ಭ್ರೂಣ ಪುನ : ನಾ ನಿನ್ನ ಅವ್ವನಾಗಿಯೇ ಬರುವೆನೆ ಎಂಬುದಾಗಿ ಹೇಳುತ್ತಿದೆ .

ವಿವರಣೆ : ‘ ನಾ ನಿನ್ನ ಅವ್ವನಾಗಿ ಹುಟ್ಟಿ ಬರುವೆ ‘ ಎಂಬ ಅರ್ಥ ಕೊಡಬಹುದು . ಮತ್ತೊಂದು ಅರ್ಥ ಎಂದರೆ ನೋಡಿಕೊಂಡಂತೆಯೇ , ನಾನು ನಿನ್ನನ್ನು ನೋಡಿಕೊಳ್ಳುವೆ ‘ ಎಂಬ ಪ್ರೀತಿ , ಮಮತೆಯ ಬಾಂಧವ್ಯ ಇಲ್ಲದೆ .

ವಿಶೇಷತೆ : ತಾಯಿಯ ಪ್ರೀತಿ ಮಮತೆಯ ಪರಿಚಯವಿಲ್ಲಿದೆ .

7. ಹೂ ತರುವೆನೇ ನಿನ್ನ ಹೆಸರಿಗೆ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ನಾ ಬರಿ ಭ್ರೂಣವಲ್ಲ ” ಎಂಬ ಪದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಮಾಲತಿಪಟ್ಟಣ ಶೆಟ್ಟಿಯವರು ರಚಿಸಿದ್ದಾರೆ . –

ಸಂದರ್ಭ : ಭ್ರೂಣವು ತನ್ನ ತಾಯಿಗೆ ತನ್ನನ್ನು ಉಳಿಸಿಕೊಳ್ಳುವಂತೆ , ನಾನು ಈ ಜಗತ್ತಿಗೆ ಬಂದ ಮೇಲೆ ಆಕೆಗೆ ಒಳ್ಳೆಯ ಹೆಸರು ಬರುವ ರೀತಿಯಲ್ಲಿ ನೋಡಿಕೊಳ್ಳುವುದಾಗಿ ಭರವಸೆ ಕೊಡುವ ಸಂದರ್ಭ ಇದಾಗಿದೆ .

ವಿವರಣೆ : ‘ ತಾಯಿಯ ಗೌರವ ಉಳಿಯುವಂತೆ ಕೆಲಸ ಮಾಡುತ್ತೇನೆ ‘ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತದೆ .

ವಿಶೇಷತೆ : ಭ್ರೂಣದ ಆಸೆ ಇಲ್ಲಿ ವ್ಯಕ್ತವಾಗಿದೆ .

1st PUC Na Bari Brunavalla Notes In Kannada Question Answer pdf

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh