rtgh

1st PUC Kannada jeevake-Indhana Notes | ಪ್ರಥಮ ಪಿಯುಸಿ ಕನ್ನಡ ಜೀವಕೆ-ಇಂಧನ ನೋಟ್ಸ್

ಪ್ರಥಮ ಪಿ.ಯು.ಸಿ ಜೀವಕೆ ಇಂಧನ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Jeevake Indhana Kannada Notes Question Answer Summary Mcq Pdf Download Kannada Medium Karnataka State Syllabus 2023, Kseeb Solutions For Class 11 Kannada Poem 15 Notes 1st Puc Kannada 15th Poem Notes Pdf

Jeevake Indana Kannada Notes Pdf

 

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಬಸವರಾಜ ವಕ್ಕುಂದ

ಕಾವ್ಯಾ ಭಾಗದ ಹೆಸರು: ಜೀವಕೆ-ಇಂಧನ‌

Kannada Notes For 1st Puc Jeevake Indhana

1st P.U.C Kannada jeevake-Indhana Notesಪ್ರಥಮ ಪಿ.ಯು.ಸಿ ಕನ್ನಡ ಜೀವಕೆ-ಇಂಧನ ನೋಟ್ಸ್.
1st P.U.C Kannada jeevake-Indhana Notes ಪ್ರಥಮ ಪಿ.ಯು.ಸಿ ಕನ್ನಡ ಜೀವಕೆ-ಇಂಧನ ನೋಟ್ಸ್

ಕವನ – ಕವಿ : ಬಸವರಾಜ ವಕ್ಕುಂದ ( ೧೯೫೮ )

ಧಾರವಾಡ ಜಿಲ್ಲೆ ಅಮ್ಮಿನಭಾವಿಯ ಬಸವರಾಜ ವಕ್ಕುಂದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ . ಧಾರವಾಡದ ಶ್ರೀ ಮಂಜುನಾಥೇಶ್ವರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಶೋಕ ಸಭೆ , ಬಿನ್ನವತ್ತಳೆ , ಅನ್ನ ಅಕ್ಷರಗಳ ನಡುವೆ ಕವನ ಸಂಕಲನಗಳು ಹಾಗೂ ಬಹುಮುಖಿ , ನಿರಾವರಣ , ಜಿನದತ್ತ ದೇಸಾಯಿ ಜೀವನ ಕಾವ್ಯ ವಿಮರ್ಶಾ ಕೃತಿಗಳು ಪ್ರಕಟವಾಗಿವೆ . ಪು.ತಿ.ನ. ಕಾವ್ಯಪ್ರಶಸ್ತಿ , ಪೆರ್ಲ ಕೃಷ್ಣಭಟ್ಟ ಕಾವ್ಯಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದಾರೆ .

ಜೈವಿಕ ಇಂಧನವನ್ನು ತೀರಿ ಹೋಗುತ್ತಿರುವ ನೈಸರ್ಗಿಕ ಇಂಧನದ ಪರಾಯವಾಗಿ ಬಳಸಬೇಕಾದ ಅವಶ್ಯಕತೆ ಇದೆ . ಇಂಧನ ಇಲ್ಲದಿದ್ದ ಪರಿಸ್ಥಿತಿಯಲ್ಲಿ ನಾಗರೀಕ ಸಮಾಜ ಮುಂದುವರಿಯಲು ಸಾಧ್ಯವಿಲ್ಲ . ಭೂಮಿಯ ಮೇಲೆ ಮನುಷ್ಯನ ಎಲ್ಲಾ ಚಟುವಟಿಕೆಗಳು ಇಂಧನದ ಮೇಲೆ ಅವಲಂಬಿತವಾಗಿವೆ .

ಇಂಧನ ನಾಶದಿಂದ ನಾಗರೀಕತೆ ಕುಸಿಯುವ ದುರಂತ ಕಣ್ಮುಂದೆ ಇದೆ . ಇದರಿಂದ ಹೊರ ಬರಲು ಜೈವಿಕ ಇಂಧನ ಬಹುಮುಖ್ಯ ಸಾಧನವಾಗುತ್ತದೆ ಎನ್ನುವ ಆಶಯ ಇಲ್ಲಿದೆ .

ಪದಕೋಶ:

ಸೆಲೆ – ಒಸರು : ಬರಡು – ಬಂಜರು .

Kannada Notes For 1st Puc Jeevake Indhana Question Answer

I . ಒಂದು ವಾಕ್ಯದಲ್ಲಿ ಉತ್ತರಿಸಿ .

1. ಜೀವದ ಸೆಲೆಗಳನ್ನು ಸುಡುತಿರುವುದು ಯಾವುದು ?

ಉಳ್ಳವರ ಆಸೆಗಳು ಜೀವದ ಸೆಲೆಗಳನ್ನು ಸುಡುತ್ತಿರುವುದು .

2. ಜೀವ ಎಲ್ಲಿ ಅರಳಿದೆ

ಚರಾಚರಗಳಲ್ಲಿ ಜೀವ ಅರಳಿದೆ .

3. ಜೀವ ಉಳಿಯುವ ದಾರಿ ಯಾವುದು ?

ಸಮತೋಲನದಲ್ಲಿ ಬದುಕುವುದೊಂದೇ ಜೀವ ಉಳಿಯುಯವ ದಾರಿಯಾಗಿದೆ .

4. ಎಂದೂ ಕರಗದ ಮೂಲಧನ ಯಾವುದು ?

ಜೈವಿಕ ಇಂಧನ ಜೀವಕೆ ಇಂಧನ ಎಂದೂ ಕರಗದ ಮೂಲಧನವಾಗಿದೆ .

5. ಭೂಮಿಯನ್ನು ಯಾರು ಮಾರಿಕೊಂಡರು ?

ಮಹಲಿನ ಬುಡದಲ್ಲಿದ್ದ ಬಡವರು ಭೂಮಿಯನ್ನು ಮಾರಿಕೊಂಡರು .

II ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಉಳ್ಳವರ ಆಸೆಯ ಪರಿಣಾಮಗಳೇನು ?

ಉಳ್ಳವರ ಆಸೆಯ ಪರಿಣಾಮಗಳೆಂದರೆ – ಜೀವದ ಸೆಲೆಗಳು ಸುಡುತ್ತಿವೆ . ಬತ್ತಿ ಬರಡಾಗಿ , ಒಣಗಿ ಹೋಗಿವೆ . ಕರುಣೆಯ ಜಲಗಳನ್ನು ಹೀರಿವೆ .

2. ಒಡಲೊಳಗೆ ಏನೇನು ಸೇರಿಕೊಂಡಿವೆ ?

ಒಡಲೊಳಗೆ ಗಾಳಿ , ನೀರು , ಬೆಂಕಿ ಎಲ್ಲಾ ಸೇರಿವೆ .

3.ಭೂಮಿ ಮತ್ತು ಜೀವವನ್ನು ಉಳಿಸುವ ದಾರಿ ಯಾವುದು ?

ಭೂಮಿಯ ಉಳಿಸುವ ದಾರಿ ಸಮತೋಲನ ಹಾಗೂ ಜೀವನ್ನು ಉಳಿಸುವ ದಾರಿ ಬದುಕು .

4. ಧನದಾಹದಿಂದ ಉಂಟಾಗುವ ಪರಿಣಾಮಗಳೇನು ?

ಧನ ಧನವೆನ್ನುವ ಧನದ ಆಕಾಂಕ್ಷೆಯಲ್ಲಿ ಧನಧನವೆನ್ನುವ ಧನದಾಹಿಗಳು ಭೂಮಿಯನ್ನು ಮಾರಿಕೊಂಡರು . ಮಹಲಿನ ಬುಡದಲ್ಲಿ ಬಿರುಕುಗಳೆದ್ದವು ಮಾರಿಯ ಸದ್ದು ಆದರೂ ಕೇಳರು .

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

2. ಭೂಮಿಯ ಹಸಿರನ್ನು ಉಳಿಸಿ ಜೈವಿಕ ಇಂಧನ ಬಳಸುವ ಕವಿಯ ಆಶಯವನ್ನು ವಿವರಿಸಿ .

“ ಇಂದನ ಇಲ್ಲದಿದ್ದ ಪರಿಸ್ಥಿತಿಯಲ್ಲಿ ನಾಗರೀಕ ಸಮಾಜ ಮುಂದುವರಿಯಲು ಸಾಧ್ಯವಿಲ್ಲ . ಭೂಮಿಯ ಮೇಲೆ ಮನುಷ್ಯನ ಎಲ್ಲಾ ಚಟುವಟಿಕೆಗಳು ಇಂಧನದ ಮೇಲೆ ಅವಲಂಬಿತವಾಗಿವೆ . ಇಂಧನ ನಾಶದಿಂದ ನಾಗರಿಕತೆ ಕುಸಿಯುವ ದುರಂತ ನಮ್ಮ ಕಣ್ಮುಂದೆಯೇ ಇದೆ . ಇದರಿಂದ ಹೊರ ಬರಲು ಜೈವಿಕ ಇಂಧನ ಬಹುಮುಖ್ಯ ಸಾಧನವಾಗುತ್ತದೆ ” ಎಂಬುದು ಕವಿಯ ಆಶಯವಾಗಿದೆ .

1 ಉಳ್ಳವರ ಸ್ವಾರ್ಥ , ಭೂಮಿ ಮತ್ತು ಇಂಧನವನ್ನು ಹೇಗೆ ನಾಶಗೈದಿದೆ ? ವಿವರಿಸಿ .

ಉಳ್ಳವರ ಸ್ವಾರ್ಥ , ಭೂಮಿ ಮತ್ತು ಇಂದನವನ್ನು ಇಂದು ನಾಶಗೈದಿದೆ . ಏಕೆಂದರೆ ಇಂದು ಭೂಮಿ ಹಸಿರು ಇರುವುದಕ್ಕಿಂತ ಅಂದರೆ ಬೆಳೆ ಬೆಳೆಯುವ ಭೂಮಿ ಇಂದು ಮಹಲುಗಳಾಗಿವೆ . ಇದರಿಂದಾಗಿ ಜೈವಿಕ ಭೂಮಿಯು ಇಲ್ಲ . ಜೀಕ್ಷೆ ಇದಂನವು ಇಲ್ಲದಾಗಿದೆ . ಇಂದನ ನಾಶದಿಂದ ನಾಗರಿಕತೆ ಕುಸಿಯುತ್ತಿದೆ . ಏಕೆಂದರೆ ಭೂಮಿಯ ಮೇಲೆ ಮನುಷ್ಯನ ಎಲ್ಲಾ ಚಟುವಟಿಕೆಗಳು ಇಂದನದ ಮೇಲೆ ಅವಲಂಬಿತವಾಗಿರುವುದರಿಂದ ಜೈವಿಕ ಅನಿಲ ಬಹುಮುಖ್ಯವಾಗಿದೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ

1. ಕೇಳರು ಮಾರಿಯ ಸದ್ದನು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಬಸವರಾಜು ವಕ್ಕುಂದರವರು ರಚಿಸಿರುವ ‘ ಜೀವನಕೆ ಇಂದನ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಧನಿಕರು ಹಣ ಸಂಪಾದನೆ ಮಾಡುವಲ್ಲಿ ಮುಂದಾಗಿದ್ದು ಎಷ್ಟು ಬೇಕೆಂದರು ಮತ್ತಷ್ಟು ಬೇಕು ಎಂಬ ಮಹತ್ವಕಾಂಕ್ಷೆಗಳಿಗಾಗಿ ಅವರ ಮಹಲಿನ ಬುಡದಲ್ಲಿ ಬಡವನ ಭೂಮಿಯನ್ನು ಕಬಳಿಸುತ್ತಿದ್ದಾರೆ . ಮಾರಿಗೆ ಈ ಬಡವರನ್ನು ಬಲಿಪಶುಗಳನ್ನಾಗಿಸಿದ್ದಾರೆ .

ವಿವರಣೆ : ಧನಿಕರಿಗೆ ಯಾವೊಂದು ಮಾತು , ಯಾರೊಬ್ಬರು ಮಾತು ಕೇಳಿಸದು . ಅವನು ಧನ ಸಂಗ್ರಹದಲ್ಲಿಯೇ ಮಗ್ನರಾಗಿದ್ದಾರೆ .

ವಿಶೇಷತೆ : ಭಾಷೆ ಸರಳ ಹಾಗೂ ಸಹಜವಾಗಿ ಮೂಡಿಬಂದಿದೆ .

2.ಸುಡುವೆ ಜೀವದ ಸೆಲೆಗಳನು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಬಸವರಾಜು ವಕ್ಕುಂದರವರು ರಚಿಸಿರುವ ‘ ಜೀವನಕೆ ಇಂದನ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಸಮಾಜದಲ್ಲಿ ಉಳ್ಳವರು ಆಸೆಗಳು ಜೀವಿಗಳ ನೆಲೆಯನ್ನೆ ಸುಟ್ಟು ಹಾಕುತ್ತಿವೆ ಎಂಬ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆದಿದ್ದಾರೆ ಆಕಾಂಕ್ಷೆಗಳಿಗಾಗಿ ,

ವಿವರಣೆ : ಶ್ರೀಮಂತರ ಭೋಗಜೀವನ , ಅವರ ಆಸೆ ಹಲವಾರು ಜೀವಿಗಳು ತಾವಿರಲು ತಾಣವಿಲ್ಲದೆ ನೆಲೆ ಕಾಣದೆ ಕಂಗಾಲಾಗಿವೆ ಎಂಬುದು ಈ ವಾಕ್ಯದ ಅರ್ಥ.

ವಿಶೇಷತೆ : ಬಡವ – ಬಲ್ಲಿದರ ನಡುವಿನ ಜೀವನದ ಬಗ್ಗೆ ಸರಳಭಾಷೆಯಲ್ಲಿ ಹೇಳಲಾಗಿದೆ .

3. ಜೈವಿಕ ಇಂಧನ ಜೀವಕೆ ಇಂದನ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಬಸವರಾಜು ವಕ್ಕುಂದರವರು ರಚಿಸಿರುವ ‘ ಜೀವನಕೆ ಇಂದನ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಜೈವಿಕದಿಂದಾಗಿ ಇಂಧನ ಸೌಲಭ್ಯ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸುತ್ತ ಕವಿ ಈ ವಾಕ್ಯವನ್ನು ಬರೆದಿದ್ದಾರೆ .

ವಿವರಣೆ : ಜೈವಿಕದಿಂದಾಗಿ ಇಂದನ ದೊರೆಯುತ್ತದೆ . ಆಗ ನಮ್ಮ ಜೀವನ ಸುಲಭವಾಗಿ ಇಂಧನ ದೊರಕಿದಂತಾಗುತ್ತದೆ ಎಂಬುದು ಕವಿಯ ಅಭಿಪ್ರಾಯ .

ವಿಶೇಷತೆ : ಜೈವಿಕದಿಂದ ಇಂದನ , ಅದು ನಮ್ಮ ಜೀವಕೆ ಇಂಧನ ‘ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.

4. ಧನವಿದ್ದರು ಇಂಧನ ಬೇಕಲ್ಲವೆ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಬಸವರಾಜು ವಕ್ಕುಂದರವರು ರಚಿಸಿರುವ ‘ ಜೀವನಕೆ ಇಂಧನ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಧನಿಕರು ಎಷ್ಟು ಬೇಕಾದರೂ ಧನ ಸಂಪಾದಿಸಬಹುದು . ಆದರೆ ಅವರಿಗೆ ಇಂಧನದ ಅಗತ್ಯವಿರುತ್ತದೆ ಎಂಬುದಾಗಿ ತಿಳಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆಯಲಾಗಿದೆ .

ವಿವರಣೆ : ಧನಿಕರ ಬಳಿ ಧನಮಾತ್ರವಿರುತ್ತದೆ . ಆದರೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ಇಂಧನವು ಅವರ ಬಳಿ ಇರಬೇಕು . ಆ ಇಂಧನ ಬೇಕಿದ್ದರೆ ಏನು ಮಾಡಬೇಕೆಂಬುದನ್ನು ಕವಿ ಮುಂದಿನ ಸಾಲುಗಳಲ್ಲಿ ವರ್ಣಿಸಿದ್ದಾರೆ .

ವಿಶೇಷತೆ : ಮೂಲಭೂತ ಅವಶ್ಯವಾದ ಇಂಧನದ ಅವಶ್ಯಕತೆಯನ್ನು ಕವಿ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ.

Kannada Notes For 1st Puc Jeevake Indhana Question Answer Pdf

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *