1st PUC Kannada Sunamiya Hadu Notes |ಪ್ರಥಮ ಪಿಯುಸಿ ಕನ್ನಡ ಸುನಾಮಿಯ ಹಾಡು ನೋಟ್ಸ್

ಪ್ರಥಮ ಪಿ.ಯು.ಸಿ ಸುನಾಮಿಯ ಹಾಡು ನೋಟ್ಸ್ ಪ್ರಶ್ನೆ ಉತ್ತರಗಳು 1st PUC Sunami Haadu Kannada Notes Question Answer Pdf kseeb solutions 2022

1st PUC Sunami Haadu Kannada Notes

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಡಾ . ಎಚ್.ಎಲ್ . ಪುಷ್ಪ

ಕಾವ್ಯಾ ಭಾಗದ ಹೆಸರು: ಸುನಾಮಿಯ ಹಾಡು.

1st P.U.C Kannada Sunaamiya Haaduಪ್ರಥಮ ಪಿ.ಯು.ಸಿ ಕನ್ನಡ ಸುನಾಮಿಯ ಹಾಡು.
1st PUC Kannada Sunamiya Hadu‌ Notes ಪ್ರಥಮ ಪಿಯುಸಿ ಕನ್ನಡ ಸುನಾಮಿಯ ಹಾಡು‌ ನೋಟ್ಸ್.

ಕವನ – ಕವಿ : ಡಾ .ಎಚ್.ಎಲ್. ಪುಷ್ಪ (೧೯೬೨)

ಡಾ . ಎಚ್.ಎಲ್ . ಪುಷ್ಪ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿಯವರು . ಬೆಂಗಳೂರು ವಿಶ್ವವಿದ್ಯಾಲಯದಿಂದ ಹ ೦ ಪಿಯ ಕನ್ನಡ ಎಂ.ಎ. ಪದ ವಿ ಹಾಗೂ ವಿಶ್ವವಿದ್ಯಾಲಯದಿಂದ ಪಿಎಚ್.ಡಿ . ಪದವಿ ಪಡೆದಿದ್ದಾರೆ . ಈಗ ಬೆಂಗಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಪ್ರಾದೇಶಿಕ ಭಾಷಾ ಸಲಹಾಸಮಿತಿಯ ಸದಸ್ಯರಾಗಿ , “ ಅನ್ವೇಷಣೆ ” ಸಾಹಿತ್ಯ ಪತ್ರಿಕೆಯ ಗೌರವ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ . ಅಮೃತಮತಿಯ ಸ್ವಗತ , ಗಾಜುಗೋಳ , ಲೋಹದ ಕಣ್ಣು , ಮದರಂಗಿ ವೃತ್ತಾಂತ ( ಕವನ ಸಂಕಲನಗಳು ) , ಭೂಮಿಯಲ್ಲ ಇವಳು , ಪರ್ವಾಪರ್ವ , ಗೆಲ್ಲಲಾರ್ಕುಮೆ ಮೃತ್ಯುರಾಜನಂ ( ನಾಟಕಗಳು ) , ಗಂಧಗಾಳಿ , ಅವಲೋಕನ ( ವಿಮರ್ಶೆಗಳು ) ಮುಂತಾದುವು ಇವರ ಪ್ರಮುಖ ಕೃತಿಗಳು.

ಒರಿಸ್ಸಾದ ಉದಯ ಭಾರತಿ ರಾಷ್ಟ್ರೀಯ ಪ್ರಶಸ್ತಿ , ಪುತಿನ ಕಾವ್ಯ ಪುರಸ್ಕಾರ , ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ , ದಿನಕರ ದೇಸಾಯಿ ಕಾವ್ಯ ಪುರಸ್ಕಾರ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಇವರಿಗೆ ಸಂದಿವೆ .

ಕಡಲ ಅಲೆಗಳ ಶಕ್ತಿಯೆದುರು ಕಟ್ಟಡಗಳು , ಗುಡಿ , ಚರ್ಚು , ಮಸೀದಿಗಳು ಯಾವುದೂ ಉಳಿಯುವುದಿಲ್ಲ . ಪ್ರಕೃತಿಯ ಎದುರು ಮಾನವ ನಿರ್ಮಿತ ಚರಿತ್ರೆಯು ಉರುಳಿ ಹೋಗುತ್ತದೆ . ಹೊಸಯುಗದ ಮನುಕುಲ ನಿರ್ಮಾಪಕರು ಮತ್ತೆ ಅಳಿದುಳಿದ ಅವಶೇಷಗಳ ನಡುವೆ ಉತ್ಪನನ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಕವಿತೆ ಸಾರುತ್ತದೆ.

ಪದಕೋಶ :

ಸತ್ತೆ – ವ್ಯವಸ್ಥೆ , ತಾಯಿಮಾಸು ; ಹವಳ – ನವರತ್ನಗಳಲ್ಲೊಂದು , ಕೆಂಪು ಬಣ್ಣದ ಮಣಿ ; ಮೊರೆ – ಗರ್ಜಿಸು , ಅಬ್ಬರಿಸು ; ಉತ್ಪನನ- ಪ್ರಾಚೀನ ಅವಶೇಷಗಳ ಶೋಧ ; ಅವಶೇಷ – ಉಳಿಕೆ .

1st PUC Sunami Haadu Kannada Notes Qustion Answer

I. ಒಂದು ವಾಕ್ಯದಲ್ಲಿ ಉತ್ತರಿಸಿ .

1. ಭೂಮಿಯೊಳಗಿನ ಯಾವ ತೆರೆ ಸರಿಯುತ್ತದೆ ?

ಭೂಮಿಯೊಳಗಿನ ಜಲದ ತೆರೆ ಸರಿಯುತ್ತದೆ .

2. ಮಾಯವಾಗಿರುವ ದ್ವೀಪ ಯಾವುದು ?

ಮಾಯವಾಗಿರುವ ದ್ವೀಪ ಹವಳದ ದ್ವೀಪ .

3. ಸಾಕ್ಷಿ ಇಲ್ಲದಂತೆ ಹಾರಿ ಹೋಗುತ್ತಿರುವುದು ಯಾವುದು ?

ಸಾಕ್ಷಿ ಇಲ್ಲದಂತೆ ಹಾರಿ ಹೋಗುತ್ತಿರುವುದು ಗುಡಿ , ಚರ್ಚು , ಮಸೀದಿಗಳು .

4. ಜಲದ ಕಣ್ಣು ತೆರೆದಾಗ ಕುಸಿಯುವುದು ಯಾವುದು ?

ಜಲದ ಕಣ್ಣು ತೆರೆದಾಗ ಮಣ್ಣು ಪದರ ಕುಸಿಯುವುದು .

5. ನಕಾಶೆ ಹುಡುಕುತ್ತಿರುವವರು ಯಾರು ?

ನಕಾಶೆ ಹುಡುಕುತ್ತಿರುವವರು ಉತ್ಖಲನ ನಡೆಸುವವರು .

6. ಜಗದ ಪ್ರಳಯ ಯಾವಾಗ ಸಂಭವಿಸುತ್ತದೆ ?

ಪಾಪದ ಕೊಡ ತುಂಬಿದಾಗ ಜಗದ ಪಳಯ ಸಂಭವಿಸುತ್ತದೆ .

II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಅಬ್ಬರದ ಅಲೆಯೆದುರು ದನಿ ಕಳೆದುಕೊಂಡವುಗಳು ಯಾವುವು ?

ಕರೆವ ಮಕ್ಕಳದೊರಳು , ಹಕ್ಕಿಗಳ ಪಿಸುಮಾತು , ಮೀನುಗಾರನ ಬಲೆ , ಬಲೆಯೊಳಗಿನ ಮೀನು , ನೀರಿನಲ್ಲಿ ನರಳಿಕೆಯಾಗಿ ಅಲೆಯಬ್ಬರದ ಎದುರು ದನಿ ಕಳೆದುಕೊಂಡವುಗಳು .

2. ಭೂಮಿ ಕಂಪಿಸಿದಾಗ ಏನಾಯಿತು ?

ಭೂಮಿ ಕಂಪಿಸಿದಾಗ ಗುಡಿ , ಚರ್ಚು , ಮಸೀದಿಗಳೆಲ್ಲಾ ಸಾಕ್ಷಿ ಇಲ್ಲದಂತೆ ಕುಸಿದು ಹೋಯಿತು .

3. ಕವಿತೆಯಲ್ಲಿ ಜಗಪಳಯವನ್ನು ಹೇಗೆ ಕಲ್ಪಿಸಲಾಗಿದೆ ?

ಕವಿತೆಯಲ್ಲಿ , ಮಣ್ಣು ಪದರ ಕುಸಿಯುತ್ತಾ , ಎಲ್ಲಾ ಜೀವಚರಗಳು ಸಮಾದಿಯಾಗುವುದು ವೈಜ್ಞಾನಿಕ ಸತ್ಯವಾದರೆ , ಪಾಪದ ಕೊಡ ತುಂಬಿದ್ದರಿಂದ ಜಲಪ್ರಳಯವಾಯಿತೆಂದು ಆದ್ಯಾತ್ಮಿಕ ನೆಲೆಗಟ್ಟಿನಲ್ಲಿ ಕಲ್ಪಿಸಲಾಗಿದೆ .

4. ಮಂಗಳ , ಶುಕ್ರಗ್ರಹಗಳನ್ನು ಯಾಕೆ ಹುಡುಕಬೇಕು ?

ಸುನಾಮಿಯಿಂದ ಎಲ್ಲ ನಾಶವಾಗಿ ಹೋದಾಗಿ ನಾವು ಬದಕಲು ಉಳಲು , ಬಿತ್ತಲು , ಮನೆಂತು ಕಟ್ಟಲು ಮತ್ತೆ ತೊಟ್ಟಿಲ ತೂಗಲು ಮಂಗಳ , ಶುಕ್ರಗ್ರಹಗಳನ್ನು ಹುಡುಕಬೇಕು .

5. ಕಾಗದದ ದೋಣಿಗಳಾಗಿ ತೆಲುತ್ತಿರುವವು ಯಾವುವು ?

ವಾಸ್ಕೋಡಗಾಮನ ನಾವೆ , ಟೈಟಾನಿಕ್‌ನ ಅವಶೇಷಗಳು ಕಾಗದದ ದೋಣಿಗಳಾಗಿ ತೇಲುತ್ತಿರುವುವು .

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಪ್ರಕೃತಿಯ ಸರ್ವಶಕ್ತಿಯ ಎದುರು ಮಾನವನ ಶಕ್ತಿ ಸಾಮರ್ಥ್ಯಗಳ ಮಿತಿಯನ್ನು ಕವಿತೆ ಹೇಗೆ ಸ್ಪಷ್ಟಪಡಿಸುತ್ತಿದೆ ?

ಹೊಸ ಕಾಲವನ್ನು ಮನುಷ್ಯ ಎಷ್ಟೇ ಬಲಿಷ್ಠವಾಗಿ ನಿರ್ಮಿಸಿ ಆಧುನಿಕಗೊಳಿಸಿದರೂ ನಿಸರ್ಗದ ಎದುರು ನಿಲ್ಲಲಾರ . ಅವನ ಸೃಷ್ಟಿಯನ್ನು ನಿಸರ್ಗ ಒಂದು ಕ್ಷಣದಲ್ಲಿ ನಾಶಪಡಿಸಬಲ್ಲದು . ವಿಜ್ಞಾನದ ಸವಲತ್ತುಗಳನ್ನು ಮಾತ್ರ ಮಾನವ ಸೃಷ್ಟಿಯಲ್ಲ . ಅವನು ಮತ ಮೌಡ್ಯಗಳನ್ನು ಸೃಷ್ಟಿಸಿಕೊಂಡಿದ್ದಾನೆ . ಅದನ್ನು ಬಿಟ್ಟು ಹೊಸ ಹುಡುಕಾಟದ ಕಡೆಗೆ ಮಾಡಬೇಕು . ಸಹಬಾಳ್ವೆ ನಮ್ಮೆಲ್ಲರ ಮೂಲ ಸೆಲೆಯಾಗಬೇಕು .

2. ಸಾವಿನಲ್ಲಿ ಎಲ್ಲರೂ ಸಮಾನರಾಗುವ ವಿಪನ್ಯಾಸವನ್ನು ಸುನಾಮಿಯ ಹಾಡು ಹೇಗೆ ಪ್ರತಿಧ್ವನಿಸುತ್ತದೆ ?

ಸಾವಿನಲ್ಲಿ ಎಲ್ಲರೂ ಸಮಾನರಾಗುವ ವಿಪರ್ಯಾಸವನ್ನು ನಾವು ಕಾಣಬಹುದು . ಎಲ್ಲೋ ದೂರದಲ್ಲಿ ಭೂಮಿ ಕಂಪಿಸಿದರೆ ಸಮುದ್ರ ಅಬ್ಬರಿಸಿದಾಗ – ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು ಜೋಡಿಸಿದ ಗುಡಿ , ಚರ್ಚು , ಮಸೀದಿಗಳಿಗೆಲ್ಲಾ ಹಾರಿ ಹೋಗುತ್ತದೆ . ಸಾಕ್ಷಿಯಿಲ್ಲದಂತೆ ಕುಸಿದು ಹೋಗುತ್ತದೆ .

3. ಜಲಪ್ರಳಯದ ಪರಿಣಾಮಗಳನ್ನು ಕವಿತೆಯ ಹಿನ್ನಲೆಯಲ್ಲಿ ವಿವರಿಸಿ .

ಜಲಪ್ರಳಯ ಪರಿಣಾಮಗಳನ್ನು ಕವಿತೆಯ ಹಿನ್ನಲೆಯಲ್ಲಿ ಹೀಗೆ ವಿವರಿಸಲ್ಪಟ್ಟಿವೆ .“ ಜಲಪಳಯದ ಪರಿಣಾಮ ಎಂದರೆ – ಭೂಮಿಯೊಳಗಿನ ಜಲದ ತೆರೆ ಸರಿಯುತ್ತದೆ , ಮಣ್ಣಿನ ಪದರ ಕುಸಿಯುತ್ತದೆ . ಜೀವಚರಗಳೆಲ್ಲ ಸಮಾಧಿಯಾಗಿವೆ .

ಅಭ್ಯಾಸ

I. ಸಂದರ್ಭ ಸೂಚಿ ವಿವರಿಸಿ .

1 ಪಾಪದ ಕೊಡ ತುಂಬಿದ ಜಗಪಳಯ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಲ್ . ಪುಷ್ಪರವರು ರಚಿಸಿರುವ ‘ ಸುನಾಮಿ ಹಾಡು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಜಲಪುಳಯವಾಗಲು ಕಾರಣವಾಗಬಹುದಾದ ಅಂಶವನ್ನು ಇಲ್ಲಿ ಲೇಖಕಿ ಪ್ರಸ್ಥಾಪಿಸಿದ್ದಾರೆ . ಸಾಂಸ್ಕೃತಿಕ ಪುಣ್ಯ , ಧರ್ಮ

ವಿವರಣೆ : ನಮ್ಮ ದೇಶ ಆದ್ಯಾತ್ಮಕ ಮನೋಭಾವನೆಯುಳ್ಳ ತಳಹದಿಯ ಮೇಲೆ ನಿಂತ ದೇಶವಾಗಿದೆ . ಇಲ್ಲಿ ಪಾಪ ಅಧರ್ಮ ಎಂಬುದಲ್ಲಿ ನಂಬಿಕೆ , ವಿಶ್ವಾಸಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ . ಈ ನಂಬಿಕೆಯ ಆಧಾರದ ಮೇಲೆ ಪಾಪ ಮಾಡಿದ ವರ ಸಂಖ್ಯೆ ಹೆಚ್ಚಾದುದೇ ಈ ಜಲಪುಳಯಕ್ಕೆ ಕಾರಣ ಎಂಬ ಅಂಶವನ್ನು ಇಲ್ಲಿ ಸ್ಪಷ್ಟಪಡಿಸುತ್ತಿದ್ದಾರೆ .

ವಿಶೇಷತೆ : ಪಾಪ ಹೆಚ್ಚಾದಾಗ ದೇವರು ಈ ಜಲಪಳಯ ಭೂಕಂಪ , ಮೊದಲಾದ ರೀತಿಯಲ್ಲಿ ನಮ್ಮನ್ನು ಪರೀಕ್ಷಿಸಿ ಸಂಕಟಕ್ಕೆ ಈಡು ಮಾಡುತ್ತಾನೆ ಎಂಬ ನಂಬಿಕೆಯನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ .

2. ಸತ್ತವರ ಎಲ್ಲ ಸತ್ತೆ ಹೊರಬೀಳುತ್ತದೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಲ್ . ಪುಷ್ಪರವರು ರಚಿಸಿರುವ ‘ ಸುನಾಮಿ ಹಾಡು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಜಲಪಳಯ ಅಥವಾ ಸುನಾಮಿಯ ಸಂದರ್ಭದಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ತಿಳಿಸುತ್ತಾ ಈ ವಾಕ್ಯವನ್ನು ಬರೆದಿದ್ದಾರೆ .

ವಿವರಣೆ : ಜಪಳಯ ಅಥವಾ ಸುನಾಮಿಯ ಸಂದರ್ಭದಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ತಿಳಿಸುತ್ತಾ ಈ ವಾಕ್ಯವನ್ನು ಬರೆದಿದ್ದಾರೆ

ವಿಶೇಷತೆ : ಸುನಾಮಿಯಿಂದಾಗಬಹುದಾದ ಭಯಂಕರ ಅನಾಹುತಗಳ ಬಗ್ಗೆ ತಿಳಿಸಲಾಗಿದೆ .

3. ಗುಡಿ , ಚರ್ಚು , ಮಸೀದಿಗಳೆಲ್ಲ ಹಾರಿಹೋಗುತ್ತವೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಲ್ . ಪುಷ್ಪರವರು ರಚಿಸಿರುವ “ ಸುನಾಮಿ ಹಾಡು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಭೂಕಂಪನ , ಸುನಾಮಿಯಿಂದ ಆಗಬಹುದಾದ ಪರಿಣಾಮದ ಬಗ್ಗೆ ಏರಿಸುತ್ತಾ ಈ ವಾಕ್ಯವನ್ನು ಬರೆದಿದ್ದಾರೆ .

ವಿವರಣೆ : ಭೂಮಿ ಕಂಪಿಸುವುದು , ಸಮುದ್ರ ಅಬ್ಬರಿಗೆ ಸುನಾಮಿ ಬಂದಾಗ ಸಂಭವಿಸುವುದು ಎಲ್ಲೋ , ಅದರ ಪರಿಣಾಮ ಎಷ್ಟು ಘೋರ ಎಂಬುದಕ್ಕೆ ಸಾಕ್ಷಿಯಾಗಿ ಕನ್ನಡ ಗುಡಿ , ಚರ್ಚು , ಮಸೀದಿಗಳೆಲ್ಲ ಉರುಳಿ ಹೋಗುವುದು . ಪವಿತ್ರ ಸ್ಥಳಗಳಲ್ಲಿ ಈ ರೀತಿ ಉಂಟಾದರೆ ಮುಂದೆ ಏನು ? ಪ್ರಶ್ನೆ ಸಹಜವಾಗಿಯೇ ಮೂಡುವುದು ಎಂಬ ವಿವರ ಇಲ್ಲಿದೆ .

ವಿಶೇಷತೆ : ಸುನಾಮಿಯಿಂದ ಆಗಬಹುದಾದ ನಷ್ಟತೊಂದರೆಯನ್ನು ಸರಳ ಭಾಷೆಯನ್ನು ವಿವರಿಸಲಾಗಿದೆ .

4 ಎಲ್ಲಿಂದ ಅಗೆಯಬೇಕೆಂದು ನಕಾಶೆ ಹುಡುಕುತ್ತಾರೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಲ್ . ಪುಷ್ಪರವರು ರಚಿಸಿರುವ ‘ ಸುನಾಮಿ ಹಾಡು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಸುನಾಮಿಯಿಂದಾದ ಅನಾಹುತಗಳೆಲ್ಲ ಮುಗಿದ ಮೇಲೆ ‘ ಸುನಾಮಿಯ ಪ್ರದೇಶಗಳನ್ನೂ ಉತ್ಪಲನ ಮಾಡುವ ಸಂದರ್ಭವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ .

ವಿವರಣೆ : ಸುನಾಮಿ ಆಗುವ ಮೊದಲೆ ವೈಜ್ಞಾನಿಕ ಮಾಹಿತಿ ದೊರೆತರೆ ಅನಾಹುತದಿಂದ ಪಾರಾಗಲು ಮುಂದಾಲೋಚನೆ ಮಾಡಿದ್ದರೆ ಇಂದು ನಕಾಶೆ ಹಿಡಿದು ಅಗೆಯಬೇಕಾದ ಪ್ರಮೇಯವನ್ನು ತಪ್ಪಿಸಬಹುದಿತ್ತು .

ವಿಶೇಷತೆ : ಮುಂದಾದರೂ ಇಂತಹ ಅನಹುತಗಳು ಸಂಭವಿಸಿದಾಗ ಸಾಧ್ಯವಾದಷ್ಟು ಮಟ್ಟಿಗೆ ಎಚ್ಚರಿಕೆ ಇರಬೇಕೆಂಬ ನೀತಿಯನ್ನು ನೀಡಿದ್ದಾರೆ .

5. ಅಣು ಯುದಿಂದ ಶಿಲಾಯುಗಕ್ಕೆ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಲ್ . ಪುಷ್ಪರವರು ರಚಿಸಿರುವ ‘ ಸುನಾಮಿ ಹಾಡು ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಸುನಾಮಿಯ ಪರಿಣಾಮದ ಬಗೆಗೆ ವಿಶ್ಲೇಷಿಸಿ ಹೇಳುವಾಗ ಮುಂದಾಗಬಹುದಾದ ಪರಿಣಾಮವನ್ನು ಇಲ್ಲಿ ವಿವರಿಸಲಾಗಿದೆ .

ವಿವರಣೆ : ಸುನಾಮಿಯಿಂದಾಗಿ , ಜಲಪಳಯವಾಗಿ ಎಲ್ಲವೂ ಮುಕ್ತಾಯವಾದಾಗ ಎಲ್ಲವನ್ನು ಕಳೆದುಕೊಂಡ ನಾವು ಅಣುಯುಗದಲ್ಲಿದ್ದ ಶಿಲಾಯುಗದಲ್ಲಿದ್ದರಂತೆ ಇರಬೇಕಾದ ಪರಿಸ್ಥಿತಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ .

ವಿಶೇಷತೆ : ಭಯಂಕರ ಕಲ್ಪನೆಯ ಚಿತ್ರ ಸರಳ ಭಾಷೆಯಲ್ಲಿ ವ್ಯಕ್ತವಾಗಿದೆ .

1st PUC Sunami Haadu Kannada Notes Qustion Answer pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 1PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh