1st PUC Kannada Holige Yantrada Ammi Notes | ಪ್ರಥಮ ಪಿಯುಸಿ ಕನ್ನಡ ಹೊಲಿಗೆ ಯಂತ್ರದ ಅಮ್ಮಿ ನೋಟ್ಸ್

ಪ್ರಥಮ ಪಿ.ಯು.ಸಿ ಹೊಲಿಗೆ ಯಂತ್ರದ ಅಮ್ಮಿ ಕನ್ನಡ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳು,1st Puc Kannada Poem Holige Yantrada Ammi Notes Question Answer Summary Guide Pdf Download in Kannada Medium Karnataka State Syllabus 2024, Kseeb Solutions For Class 11 Kannada Poem 13 Notes 1st Puc Kannada 13th Poem Notes

1st Puc Holige Yantrada Ammi Kannada Notes

 

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಆರಿಫ್ ರಾಜಾ

ಕಾವ್ಯಾ ಭಾಗದ ಹೆಸರು: ಹೊಲಿಗೆ ಯಂತ್ರದ ಅಮ್ಮಿ.

1st Puc Kannada Poem Holige Yantrada Ammi Notes

1st P.U.C Kannada Holige Yantrada Ammiಪ್ರಥಮ ಪಿ.ಯು.ಸಿ ಕನ್ನಡ ಹೊಲಿಗೆ ಯಂತ್ರದ ಅಮ್ಮಿ.
1st PUC Kannada Holige Yantrada Ammi‌ Notes ಪ್ರಥಮ ಪಿಯುಸಿ ಕನ್ನಡ ಹೊಲಿಗೆ ಯಂತ್ರದ ಅಮ್ಮಿನೋಟ್ಸ್

ಕವನ – ಕವಿ ಆರಿಫ್ ರಾಜಾ ( ೧೯೮೩ )

ಆರಿಫ್ ರಾಜಾ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಅರಕೆರಾ ಗ್ರಾಮದವರು . ಇವರು ರಾಯಚೂರು ಜಿಲ್ಲೆಯ ಉಪ್ರಾಳ ಕ್ಯಾಂಪ್‌ನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

ಸೈತಾನನ ಪ್ರವಾದಿ , ಜಂಗಮ ಫಕೀರನ ಜೋಳಿಗೆ , ಬೆಂಕಿಗೆ ತೊಡಿಸಿದ ಬಟ್ಟೆ ಇವರ ಕವನ ಸಂಕಲನಗಳು , 80 ಸಾಹಿತ್ಯ ಸಂಚಲನ ‘ ಜಂಗಮ ಫಕೀರನ ಜೋಳಿಗೆ ‘ ಸಂಕಲನಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಪ್ರಶಸ್ತಿ , ಬೇಂದ್ರೆ ಪುಸ್ತಕ ಬಹುಮಾನ ಹಾಗೂ ೨೦೧೨ ರ ಕೇಂದ್ರ ಸಾಹಿತ್ಯ ಅಕಾಡೆಮಿಯ “ ಯುವ ಪುರಸ್ಕಾರ ” ಪ್ರಶಸ್ತಿ ದೊರೆತಿವೆ . ಇವರ ಕವಿತೆಗಳು ಭಾರತದ ಹಲವು ಭಾಷೆಗಳಿಗೆ ಅನುವಾದಗೊಂಡಿವೆ .

ಪರ್ಶಿಯನ್ ಭಾಷೆಯಲ್ಲಿ ರಚಿತವಾದ “ ಭಾರತದ ಸಮಕಾಲೀನ ಕವಿತೆಗಳು ” ಸಂಕಲನದಲ್ಲಿ ಇವರ ಅನುವಾದಿತ ಕವಿತೆಗಳು ಪ್ರಕಟಣೆಗೊಂಡಿವೆ . ಧರ್ಮಾಂಧತೆ , ಅಂಧಶ್ರದ್ದೆ ಹಾಗೂ ವೈಷಮ್ಯಗಳಿಂದ ತತ್ತರಿಸುತ್ತಿರುವ ವಾತಾವರಣವನ್ನು ಕವಿ ಹೊಲಿಗೆ ಯಂತ್ರದ ರೂಪಕದೊಂದಿಗೆ ಕಟ್ಟಿಕೊಟ್ಟಿದ್ದಾರೆ .

ತಾಯಿಯ ಕೌಶಲ , ಶಕ್ತಿ , ಸಾಮರ್ಥ್ಯ , ವ್ಯಕ್ತಿತ್ವ ಹಾಗೂ ಸೃಷ್ಟಿಗುಣಗಳನ್ನು ಕಾಣಬಹುದು . ಅಮ್ಮಿಯ ಶ್ರಮ ಕಾವ್ಯವಾಗಿ ರೂಪುದಳೆದಿದೆ . ಕತ್ತರಿ , ಸೂಜಿ ಹಿಡಿದಿರುವ ಅಮ್ಮಿ ಚಿಂದಿ ಮನಸುಗಳನ್ನು ಹೊಲಿದು ಒಂದು ಮಾಡುತ್ತಾಳೆ . ದುಡಿದು ಸಂಸಾರವನ್ನು ಸಾಕುವ ತಾಯಿಯ ಚಿತ್ರಣ ಇಲ್ಲಿದೆ .

ಪದಕೋಶ :

ಪೆಡಲು – ತುಳಿಯುವ ಕಬ್ಬಿಣದ ಹಲಗೆ ; ರಾಟೆ – ಚಕ್ರ ಉಲ್ಕೆ ಮತ್ತು ಧೂಮಕೇತು- ಆಕಾಶಕಾಯಗಳು ; ಜುಮ್ಮಾ – ಶುಕ್ರವಾರ ; ದೂದ್‌ಖುರ್ಮಾ – ಶ್ಯಾವಿಗೆ ಪಾಯಸ ; ಈದ್ -ಹಬ್ಬ ; ನಮಾಜ್ – ಮುಸ್ಲಿಮರ ಪ್ರಾರ್ಥನೆ .

1st Puc Kannada Poem Holige Yantrada Ammi Notes Question Answer

I . ಒಂದು ವಾಕ್ಯದಲ್ಲಿ ಉತ್ತರಿಸಿ .

1. ಚಕ್ರ ತಿರುಗಿಸಿದಂತೆ ಉರುಳುವುದು ಯಾವುದು ?

ಚಕ್ರ ತಿರುಗಿಸಿದಂತೆ ಇತಿಹಾಸ ಒಂದು ಸುತ್ತು ಉರುಳುತ್ತದೆ .

2. ಅಮ್ಮಿ ಏನನ್ನೂ ಪಾಲು ಮಾಡಿದಂತೆ ಬಟ್ಟೆ ಕತ್ತರಿಸುತ್ತಾಳೆ ?

ಅಮ್ಮಿ ರೊಟ್ಟಿಯನ್ನು ಪಾಲು ಮಾಡಿದಂತೆ ಬಟ್ಟೆ ಕತ್ತರಿಸುತ್ತಾಳೆ .

3. ಅಮ್ಮಿ ಯಾವುದನ್ನು ಕಡಿದು ಹಾಕಲೊಂದು ಕತ್ತರಿ ಹಿಡಿದಿದ್ದಾಳೆ ?

ಅಮ್ಮಿ ಲೋಕವಿಕಾರಗಳನ್ನು ಕಡಿದು ಹಾಕಲೆಂದು ಕತ್ತರಿ ಹಿಡಿದಿದ್ದಾಳೆ .

4. ಅಮ್ಮ ಯಾವಾಗಲು ಏನನ್ನು ಧರಿಸುವಳು ?

ಅಮ್ಮ ಯಾವಾಗಲೂ ಹಾಲು ಬಿಳಿ ಸೀರೆಯನ್ನು ಧರಿಸುವಳು .

5. ಮಗುವಿನಂತೆ ಯಾರನ್ನು ಸಾಕಿದಳು ?

ಕಟ್ಟಿಕೊಂಡ ಗಂಡನನ್ನು ಪುಟ್ಟಮಗುವಿನಂತೆ ಸಾಕಿದಳು .

6. ಅಮ್ಮಿ ಜಗತ್ತಿಗೆ ಎಂತಹ ಬಟ್ಟೆಯನ್ನು ತೊಡಿಸುವಳು ?

ಅಮ್ಮಿ , ಜಗತ್ತಿಗೆ ಬಣ್ಣ ಬಣ್ಣದ ಬಟ್ಟೆ ತೊಡಿಸುವಳು .

7.ಹೊಲಿಗೆ ಯಂತ್ರದ ಜೊತೆಗೆ ಅಮ್ಮಿ ಕಳೆದ ಕಾಲವೆಷ್ಟು ?

ಹೊಲಿಗೆ ಯಂತ್ರದ ಜೊತೆಗೆ ಅಮ್ಮ ಸುಮಾರು ‘ ಕಾಲು ಶತಮಾನ ಅಂದರೆ 25 ವರ್ಷ ಕಳೆದಳು .

II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಅಮ್ಮಿಯ ಬದುಕಿನಲ್ಲಿ ನಿರ್ಜೀವ ಬಟ್ಟೆಗೆ ಪ್ರವೇಶ ಹೇಗಾಯಿತು ?

ಅಮ್ಮಿಯ ಬದುಕಿನಲ್ಲಿ ನಿರ್ಜೀವ ಬಟ್ಟೆಗೆ ಪ್ರವೇಶ ದೊರೆತದ್ದು ಆಕೆಯ ಪರಿಶ್ರಮದಿಂದ .

2. ಅಮ್ಮಿಯನ್ನು ಸೃಷ್ಟಿಕರ್ತೆಯೆಂದು ಏಕೆ ಕರೆಯಲಾಗಿದೆ ?

ನಿರಾಕಾರಮಾನಕ್ಕೆ ಹೊಲಿಗೆ ಹಾಕಿ ರೂಪು ನೀಡುವಳು . ಆಕಾಶದಂತಹ ಹಾಗೂ ಕಡಲಿನಂತಹ ಬಟ್ಟೆಗೆ ವಿವಿಧ ನಮೂನೆ ಆಕಾರ ಕೊಡುವ ಅಮ್ಮಿ ಸೃಷ್ಟಿಕರ್ತೆ ಎಂದು ಕರೆಯಲಾಗಿದೆ .

3. ಕತ್ತರಿ ಮತ್ತು ಸೂಜಿಗಳ ಕೆಲಸ ಯಾವುದು ?

ಕತ್ತರಿ ಕೆಲಸ ಕತ್ತರಿಸುವುದು ಸೂಜಿ ಕೆಲಸವೆಂದರೆ ಹೊಲಿಯುವುದು .

4. ದಿಕ್ಕು ದೆಸೆಯಿಲ್ಲದೆ ಅಲೆಯುತ್ತಿರುವುದು ಯಾವುದು ?

ದಿಕ್ಕು ದೆಸೆಯಿಲ್ಲದೆ ಅಲೆಯುತ್ತಿರುವವುಗಳೆಂದರೆ – ಚಂದ್ರ ನಕ್ಷತ್ರ ಯಾರದೊ ಚಾಟಿ ಏಟಿಗೆ ಗಿರನೆ ತಿರುಗುವ ಗ್ರಹ ಬುಗರಿಗಳು ದಿಕ್ಕು ದೆಸೆಯಿಲ್ಲದೆ ಅಲೆಯು .. ಅಲೆಮಾರಿಗಳು ಆಗಿವೆ .

5. ಅಮ್ಮಿಯ ಪಾಲಿಗೆ ನಮಾಜ್ ಮತ್ತು ಈದ್ ಎಂದರೆ ಯಾವುವು ?

ಅಮ್ಮಿಂಯ ಪಾಲಿಗೆ ನಮಾಜ್ ಎಂದರೆ ಜುಮ್ಮಾಶುಕ್ರವಾರದ ಪ್ರಾರ್ಥನೆ ಮತ್ತು ಈದ್ ಎಂದರೆ ದೂದ್‌ಖುರ್ಮಾ

6. ಹಾಸಿಗೆಯನ್ನು ಹೊಲಿದು ಕೊಡುವಂತೆ ಅಮ್ಮಿಯನ್ನು ಕೇಳಲು ಕಾರಣವೇನು ?

ಉಲ್ಕೆಗಳು , ದೂಮಕೇತುಗಳು , ನಿದ್ದೆ ಬಾರದೆ ಒದ್ದಾಡುತ್ತಿರುಲು ಒಂದು ಹಾಸಿಗೆ ಬೇಕು ಎಂದು ಕೇಳಲು ಅಮ್ಮಿ ಹೊಲೆದು ಕೊಡುವಳು .

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ

1. ಹೊಲಿಗೆ ಕಾಯಕದ ಮೂಲಕ ಮನೆ ಮತ್ತು ಲೋಕದ ಮಾನವನ್ನು ಅಮ್ಮಿ ಹೇಗೆ ಕಾಪಾಡಿದ್ದಾಳೆ ?

ಹೊಲಿಗೆ ಕಾಯಕದ ಮೂಲಕ ಮನೆ ಮತ್ತು ಲೋಕದ ಮಾನವನ್ನು ಅಮ್ಮಿ ಕಾಪಾಡಿದ್ದಾರೆ . ಅಗಲವಾದ ಉದ್ದವಾದ ಬಟ್ಟೆಯನ್ನು ಸುತ್ತುಕೊಂಡು ಓಡಾಡಲು ಸಾಧ್ಯವಾಗುವುದು . ಅದನ್ನು ಕತ್ತರಿಸಿ ಬೇಕಾದ ಆಕಾರಕ್ಕೆ ಹೊಲೆದು ಅದನ್ನು ಧರಿಸುವಂತೆ ಸಿದ್ಧಪಡಿಸುತ್ತಾಳೆ . ಈ ರೀತಿ ಅಮ್ಮಿ ಲೋಕದಮಾನ ಕಾಪಾಡುತ್ತಾಳೆ.

2. ಅಮ್ಮಿಯ ಹೊಲಿಗೆಯ ಕೌಶಲ್ಯವು ಕವಿತೆಯಲ್ಲಿ ಹೇಗೆ ಅಭಿವ್ಯಕ್ತಗೊಂಡಿದೆ ?

ರೊಟ್ಟಿ ಪಾಲು ಮಾಡಿದಂತೆ , ಬುಟ್ಟಿಯನ್ನು ಅಮ್ಮಿ ಗಡಿಕೊರೆದು ಕತ್ತರಿಸಿ ತುಂಡು ತುಂಡು ಮಾಡುವಳು . ನಂತರ ಅದನ್ನು ಹೊಲೆದು ಒಂದು ಮಾಡುವಳು . ಆಕಾಶದಂತಹ , ಕಡಲಿನಂತಹ ಬಟ್ಟೆಗೆ ವಿವಿಧ ನಮೂನೆಯ ಆಕರ ಕೊಟ್ಟು ನಿಗೂಡ ಬದುಕಿನೊಳಗೆ ಅಂದರೆ ನಿರ್ಜೀವ ಬಟ್ಟೆಗೆ ಆಕಾರ ಕೊಡುವಳು , ಅಮ್ಮಿಯ ಈ ಹೊಲಿಗೆಯ ಕೌಶಲ್ಯವು ಕವಿತೆಯಲ್ಲಿ ಬಹಳ ಸುಂದರವಾಗಿ ಅಭಿವ್ಯಕ್ತಿಗೊಂಡಿದೆ .

3. ಹಾಸಿಗೆಯನ್ನು ಹೊಲಿದುಕೊಡುವಂತೆ ಅಮ್ಮಿಯನ್ನು ಕೇಳಲು ಕಾರಣಗಳೇನು ?

ಅಮ್ಮಿ ಬೇಕಾದ ಆಕಾರವನ್ನು ಕತ್ತರಿಸಿ ತೆರೆದ ಮೇಲೆ ಅದು ಚಂದ್ರ – ನಕ್ಷತ್ರ , ಉಲ್ಕೆ , ಧೂಮಕೇತು , ಆಕಾರದಲ್ಲಿ ಹೊಲೆದು ಉಳಿದ ಚಿಂದಿಯನ್ನು ಸೇರಿಸಿ ಉ ಧೂಮಕೇತುಗಳ ಆಕೃತಿಯಲ್ಲಿ ಉಳಿದ ಚಿಂದಿಗಳನ್ನೆಲ್ಲ ಸೇರಿಸಿ ಒಂದು ಮೆತ್ತನೆ ಹಾಸಿಗೆಯನ್ನು ಹೊಲೆದು ಕೊಡುವಳು . ಅಮ್ಮಿಯ ವ್ಯಕ್ತಿತ್ವ ಕವಿತೆಯಲ್ಲಿ ಒಡಮೂಡಿದ ಬಗೆಯನ್ನು ಚರ್ಚಿಸಿ ತಾಯಿಯ ಕೌಶಲ , ಶಕ್ತಿ , ಸಾಮರ್ಥ್ಯ , ವ್ಯಕ್ತಿತ್ವ ಹಾಗೂ ಸೃಷ್ಟಿಗಣಗಳನ್ನು ಕವಿ ಚಿತ್ರಿಸಿದ್ದಾರೆ . ಅಮ್ಮಿಯ ಶ್ರಮ ಕಾವ್ಯವಾಗಿ ರೂಪುಗೊಂಡಿದೆ . ಕತ್ತರಿ , ಸೂಜಿ ಹಿಡಿದಿರುವ ಅಮ್ಮಿ ಚಿಂದಿ ಮನಸುಗಳನ್ನು ಹೊಲೆದು ಒಂದು ಮಾಡುತ್ತಾಳೆ . ಮಕ್ಕಳಿಗಾಗಿ ಬೆವರು ಸುರಿಸಿ ದುಡಿದು ಸಾರುವ ಅಮ್ಮಿಯ ಚಿತ್ರಣ ಮಾರ್ಮಿಕವಾಗಿ ಚಿತ್ರಿತಗೊಂಡಿದೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ ,

1. ಚಿಂದಿ ಮನಸುಗಳನ್ನು ಜೋಡಿಸಲು ಸೂಜಿ ಇದೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಆರೀಫ್ ರಾಜಾರವರು ರಚಿಸಿರುವ ‘ ಹೊಲಿಗೆಯಂತ್ರದ ಅವಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅಮ್ಮಿ ಕತ್ತರಿಯಿಂದ ಕತ್ತರಿಸಿದ ಬಟ್ಟೆಗಳನ್ನು ಸೂಜಿಯಿಂದ ಹೊಲೆದು ಅದಕ್ಕೆ ಸುಂದರ ರೂಪಕೊಡುತ್ತಿದ್ದಳು . ಎಂಬುವ ಸಂದರ್ಭದಲ್ಲಿ ಈ ವಾಕ್ಯ ಬರೆಯಲಾಗಿದೆ .

ವಿವರಣೆ : ಬರಿ ಅಂಗಡಿಯಿಂದ ಬಟ್ಟೆ ತಂದರೆ ಸಾಲದು , ಅದನ್ನು ಬೇಕಾದ ಆಕಾರಕ್ಕೆ ಕತ್ತರಿಸಬೇಕು . ನಂತರ ಚಿಂದಿಯಂತೆ ಕತ್ತರಿಸಿ , ಕತ್ತರಿಸಿದ ಭಾಗವನ್ನು ಸರಿಯಾದ ರೀತಿಯಲ್ಲಿ ಸೂಜಿಯಿಂದ ಹೊಲೆದು ಸಿದ್ಧಪಡಿಸಲು .

ವಿಶೇಷತೆ : ಸಿದ್ಧಪಡಿಸಿದ ಉಡುಪು ಮಾತ್ರ ಧರಿಸಲು ಯೋಗ್ಯವಾದುದು . ಅದನ್ನು ಸುಂದರಗೊಳಿಸುವ ಕಾರ್ಯ ಅಮ್ಮಿ ಮಾಡಿದ್ದಾಳೆ .

2. ನಮಾಜ್ ಎಂದರೆ ಜಮ್ಮಾ … ಈ ದ್ ಅಂದರೆ ದೂದ್ ಖುರ್ಮಾ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಆರೀಫ್ ರಾಜಾರವರು ರಚಿಸಿರುವ ‘ ಹೊಲಿಗೆಯಂತ್ರದ ಅಮ್ಮ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅಮ್ಮಿಯ ಆದ್ಯಾತ್ಮಿಕ ಭಾವನೆಯು ಇಲ್ಲಿ ತಿಳಿಸಲಾಗಿದೆ . ಈ ಸಂದರ್ಭದಲ್ಲಿ ಹೇಳಿದ ಮಾತಿದು .

ವಿವರಣೆ : ಅಮ್ಮಿ ಎಷ್ಟೇ ಕೆಲಸ ಕಾರ್ಯಗಳಿದ್ದರೂ ಶುಕ್ರವಾರದ ನವಾಜನ್ನು ತಪ್ಪಿಸಿಲ್ಲ . ಆಕೆಗೆ ತೃಪ್ತಿಯಾದ ಗುಣ ಗೋಚರಿಸುತ್ತದೆ .

ವಿಶೇಷತೆ : ಈ ವಾಕ್ಯದಲ್ಲಿ ಅಮ್ಮಿಯ ಆಧ್ಯಾತ್ಮಕ ಭಾವನೆ ಮೂಡಿಬಂದಿದೆ .

3. ನಿರಾಕಾರಮಾನಕ್ಕೆ ಹೊಲಿಗೆ ಹಾಕಿ ರೂಪು ನೀಡುತ್ತಾಳೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಆರೀಫ್ ರಾಜಾರವರು ರಚಿಸಿರುವ ‘ ಹೊಲಿಗೆಯಂತ್ರದ ಅಮ್ಮಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬಟ್ಟೆ ಯಾವುದೇ ರೀತಿಯ ಆಕಾರವಿಲ್ಲದೆ ಇರುತ್ತದೆ . ಇದನ್ನು ಕತ್ತರಿಸಿ ಅದಕ್ಕೆ ಸುಂದರ ರೂಪುಕೊಟ್ಟು ಆ ಬಟ್ಟೆಗೂ ಸೌಂದರ್ಯ ಹಾಗೂ ಅದನ್ನು ತೊಡುವವರು ಕೂಡ ಅದೇ ರೀತಿಯದನ್ನೇ ತೊಡುವರು .

ವಿವರಣೆ : ಆಕಾರವಿಲ್ಲದ ಬಟ್ಟೆಗೆ ಸುಂದರ ರೂಪು ನೀಡುತ್ತಾಳೆ .

ವಿಶೇಷತೆ : ಆಕಾರವಿಲ್ಲದ ಬಟ್ಟೆ ಸುತ್ತಿಕೊಳ್ಳಲೂ ಆಗುವುದಿಲ್ಲ . ಅದನ್ನು ಕತ್ತರಿಸಿ ಹೊಲೆಗೆ ಹೊಲೆದು ಸುಂದರ ರೂಪು ತೊಟ್ಟಾಗ ಅದು ಅತಿ ಸುಂದರವಾಗಿ ಕಾಣುತ್ತದೆ .

4. ಕರಳು ಕುಡಿಗಳೆಂದರೆ ಕನಸುಗಳು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಆರೀಫ್ ರಾಜಾರವರು ರಚಿಸಿರುವ ‘ ಹೊಲಿಗೆಯಂತ್ರದ ಅಮ್ಮಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅಮ್ಮಿ ಬಹಳಷ್ಟು ಪರಿಶ್ರಮದಿಂದ ದುಡಿಯುತ್ತಿದ್ದಾಳೆ ಎಂದರೆ ಅದು ಕೇವಲ ಅವಳ ಮಕ್ಕಳಿಗಾಗಿ ಎಂಬ ಸಂದರ್ಭದಲ್ಲಿ ವಿವರಿಸಲಾಗಿದೆ .

ವಿವರಣೆ : ಕರಳು ಕುಡಿಗಳೆಂದರೆ , ಅಮ್ಮಿಯ ಮಕ್ಕಳ ಅವರಿಗಾಗಿ ಈ ಪರಿಶ್ರಮ ಎಂಬುದು ಇಲ್ಲಿ ವ್ಯಕ್ತವಾಗಿದೆ .

ವಿಶೇಷತೆ : ಪ್ರಸ್ತುತ ಈ ಪದ್ಯದಲ್ಲಿ ಅಮಿಗೆ ತನ್ನ ಮಕ್ಕಳ ಬಗ್ಗೆ ಇದ್ದ ಅತಿಯಾದ ಪ್ರೇಮದ ಬಗ್ಗೆ ವಿವರಿಸಲಾಗಿದೆ .

5. ಅಮ್ಮ ಯಾವಾಗಲು ಧರಿಸುವುದು ಹಾಲು ಬಿಳಿ ಸೀರೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಆರೀಫ್ ರಾಜಾರವರು ರಚಿಸಿರುವ ‘ ಹೊಲಿಗೆಯಂತ್ರದ ಅವಿ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅಮ್ಮಿಬಣ್ಣ ಬಣ್ಣದ ವಿವಿಧಕಾರದ ಬಟ್ಟೆಯನ್ನು ಕತ್ತರಿಸಿ ಹೊಲೆದು ಕೊಟ್ಟರು ತಾನು ಧರಿಸಿದ್ದು ಸರಳವಾದ ಬಿಳಿ ಸೀರೆ ಎಂಬ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆಯಲಾಗಿದೆ .

ವಿವರಣೆ : ಅಮ್ಮಿಸರಳ ವ್ಯಕ್ತಿತ್ವವನ್ನು ಹೊಂದಿದ ಶ್ರಮ ಜೀವಿ . ಆಕೆ ತನ್ನ ಕಲಾ ಕೌಶಲ್ಯದಿಂದ ವಿವಿಧಕಾರ ಬಣ್ಣಗಳಿಂದ ಸಿದ್ಧಪಡಿಸಿದರು . ಆಕೆ ಧರಿಸಿದ್ದು ಮಾತ್ರ ಹಾಲು ಬಿಳಿ ಬಣ್ಣದ ಸೀರೆ ಎಂಬುದು ಇದರ ಅರ್ಥ .

ವಿಶೇಷತೆ : ಅಮ್ಮಿಯ ಸರಳತೆಯ ಬಗ್ಗೆ ತಿಳಿಸಲಾಗಿದೆ .

1st Puc Kannada Poem Holige Yantrada Ammi Notes Question Answer Pdf

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh