1st PUC Kannada Devarigondu Arji Notes |ಪ್ರಥಮ ಪಿಯುಸಿ ಕನ್ನಡ ದೇವರಿಗೊಂದು ಅರ್ಜಿ ನೋಟ್ಸ್

ಪ್ರಥಮ ಪಿ.ಯು.ಸಿ ದೇವರಿಗೊಂದು ಅರ್ಜಿ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು Pdf, 1st PUC Devarigondu Arji Kannada Notes Question Answer Summary Pdf Download in Kannada Medium karnataka State Syllabus 2024 Kseeb Solutions For Class 11 Kannada Poem 14 Notes 1st Puc Kannada 14th Poem Notes Pdf Saramsha Devarigondu Arji Poem Notes Summary in Kannada

 

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಲಕ್ಕೂರು ಸಿ . ಆನಂದ

ಕಾವ್ಯಾ ಭಾಗದ ಹೆಸರು: ದೇವರಿಗೊಂದು ಅರ್ಜಿ.

Devarigondu Arji Kannada Notes

1st P.U.C Kannada Deevarigondu Arji Notesಪ್ರಥಮ ಪಿ.ಯು.ಸಿ ಕನ್ನಡ ದೇವರಿಗೊಂದು ಅರ್ಜಿ ನೋಟ್ಸ್.
1st PUC Kannada Devarigondu Arji Notes ಪ್ರಥಮ ಪಿಯುಸಿ ಕನ್ನಡ ದೇವರಿಗೊಂದು ಅರ್ಜಿ ನೋಟ್ಸ್

ಕವನ ಕವಿ : ಲಕ್ಕೂರು ಸಿ . ಆನಂದ ( ೧೯೮೦ )

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಲಕ್ಕೂರಿನವರು . ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಊರಿಂದ ಊರಿಗೆ , ಇಪ್ಪತ್ತರ ಕಲ್ಲಿನ ಮೇಲೆ , ಬಟವಾಡೆಯಾಗದ ರಸೀತಿ , ಇತಿ ನಿನ್ನ ವಿಧೇಯನು- ಕವನ ಸಂಕಲನಗಳು .

ಸ್ಮತಿ ಕಿಣಾಂಕಂ ,ಆರುದ್ರ , ದಿ ಲಾಸ್ಟ್ ಬ್ರಾಡ್ಮಿನ್ , ಆಕಾಶ ದೇವರು- ಅನುವಾದ ಕೃತಿಗಳು . ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪುರಸ್ಕಾರ , ದು.ನಿಂ.ಬೆಳಗಲಿ ಕಾವ್ಯ ಪ್ರಶಸ್ತಿ , ಅಖಿಲ ಭಾರತ ದಲಿತ ಕಾವ್ಯ ಪುರಸ್ಕಾರ ಹಾಗೂ ಆಂಧ್ರ ಪ್ರದೇಶ ಸರ್ಕಾರದ ಶ್ರೀ ಶ್ರೀ ಕಾವ್ಯ ಪುರಸ್ಕಾರಗಳನ್ನು ಪಡೆದಿದ್ದಾರೆ .

ಹುಟ್ಟಿನಿಂದ ಜಾತಿಯ ಕಾರಣಕ್ಕಾಗಿ ಲೋಕದ ಜನತೆ ಕೀಳಾಗಿ ಕಾಣುತ್ತಿರುವ ಬಗೆಗೆ ಗಾಢ ವಿಷಾದವಿದೆ . ಮುಟ್ಟಿದರೆ “ ಅಪವಿತ್ರವೆಂದು ಭಾವಿಸಿರುವ ಪ್ರಧಾನ ಸಂಸ್ಕೃತಿಯ ವಿರುದ್ಧ ದನಿಯೆತ್ತುವ ಕವನ ಆ ಸಂಸ್ಕೃತಿಯ ಭಾಗವಾಗದೇ ಸ್ವತಂತ್ರವಾಗಿ ಅಸ್ತಿತ್ವವನ್ನು ಸಾಫಿಸಿಕೊಳ್ಳುವ ದಿಟ್ಟ ನಿಲುವು ಇಲ್ಲಿದೆ .

ಪದಕೋಶ :

ಊರಿ – ದೃಢವಾಗಿ ; ಗುಂಡಿಗೆ – ಎದೆ , ಹೃದಯ , ಧೈರ್ಯ ; ಉರಿಪಾದ – ನೋವಿನಿಂದ ಉರಿಯುತ್ತಿರುವ ಪಾದ ; ಅಗಲ – ವಿಶಾಲ.

1st PUC Kannada Devarigondu Arji question answer

I . ಒಂದು ವಾಕ್ಯದಲ್ಲಿ ಉತ್ತರಿಸಿ .

1. ಸಮಾಧಿಗಳು ಯಾರನ್ನು ಬಚ್ಚಿಟ್ಟುಕೊಂಡಿವೆ ?

ನಮ್ಮದಲ್ಲದವರ ಯಾರನ್ನೂ ಜೀವಂತ ವ್ಯಕ್ತಿಗಳನ್ನು ಸಮಾದಿ ಬಚ್ಚಿಟ್ಟುಕೊಂಡಿವೆ .

2. ತನ್ನನ್ನು ಕ್ಷಮಿಸುವಂತೆ ಕವಿ ಯಾರಲ್ಲಿ ಕೇಳುತ್ತಾನೆ ?

ತನ್ನನ್ನು ಕ್ಷಮಿಸುವಂತೆ ಕವಿ ದೇವರಲ್ಲಿ ಕೇಳುತ್ತಾನೆ .

3. ಬೊಗಸೆಯಲ್ಲಿ ಕವಿ ಯಾರನ್ನು ಬಂಧಿಸಲು ಕವಿ ಬಯಸಿದ್ದಾನೆ ?

ಚಂದಿರನನ್ನು ಬೊಗಸೆಯಲ್ಲಿ ಬಂಧಿಸಲು ಕವಿ ಬಯಸಿದ್ದಾನೆ .

4. ಕವಿಯ ಬೆನ್ನನ್ನು ಮುಳ್ಳುಗಳಾಗಿ ಚುಚ್ಚುತ್ತಿರುವುದೇನು ?

ಅವರಿವರು ಉದಾಸೀನವಾಗಿ ಬಿಟ್ಟಂತಹ ಬಿಸಿ ಉಸಿರು ಕವಿಯ ಗುಂಡಿಯನ್ನು ಹಿಂಡುತ್ತಿದೆ .

5. ಕವಿಯ ಗುಂಡಿಗೆಯನ್ನು ಹಿಂಡುತ್ತಿರುವುದು ಯಾವುದು ?

ಅವರಿವರು ಉದಾಸೀನವಾಗಿ ಬಿಟ್ಟಂತಹ ಬಿಸಿ ಉಸಿರು ಕವಿಯ ಗುಂಡಿಗೆಯನ್ನು ಹಿಂಡುತ್ತಿದೆ .

III ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ನಗುವ ಚಂದಿರ ಏಕೆ ಕೈಗಂಟಿಕೊಳ್ಳುತ್ತಿದ್ದಾನೆ ?

ಬೊಗಸೆ ನೀರೆಲ್ಲಾ ಬೆರಳ ಸಂದಿಯಿಂದ ಸೋರಿ ಹೋಗಿ ನಗುವ ಚಂದಿರ ಮಾತ್ರ ಕೈಗಂಟಿಕೊಳ್ಳುತ್ತಿದ್ದಾನೆ .

2. ಧರೆಯ ಮೇಲಿನ ನಡಿಗೆ ಹಾಗೂ ಕರೆಯು ಧ್ವನಿ ಕವಿಗೆ ಹೇಗೆ ಭಾಸವಾಗುತ್ತಿದೆ ?

ಧರೆಯ ಮೇಲಿನ ನಡಿಗೆ ಉರಿಯಿಂದ ಕೂಡಿದ್ದು ಯಾರೋ ತನ್ನ ತಲೆಯ ಮೇಲೆ ನಡೆದಂತಾಗುತ್ತದೆ . ಹಾಗೂ ಯಾರೇ ಕರೆದರೂ ಬಂದೂಕು , ಬಾಂಬ್ ಧ್ವನಿ ಕೇಳಿಸಿದಂತೆ ಕವಿಗೆ ಬಾಸವಾಗುತ್ತದೆ .

3. ಕವಿಯನ್ನು ಚುಚ್ಚುತ್ತಿರುವುದು ಯಾವುದು ? ಏಕೆ ?

ನೆಲಕ್ಕೆ ಬೆನ್ನು ಮುಟ್ಟಿಸೋಣವೆಂದು ಪ್ರಯತ್ನಿಸದೆ ನಗುವ ಅಮೃತಶಿಲೆಗಳ ಸಮಾಧಿಗಳು ಮುಳ್ಳುಗಳಾಗಿ ಕೊಂಚ ಕೊಂಚವೇ ಬೆನ್ನನ್ನು ಚುಚ್ಚುತ್ತಿದೆ .

4. ದಿಕ್ಕು ಬಂದ ಕಡೆಗೆ ನಡೆದ ಕವಿಗೆ ಆದ ಅನುಭವವೇನು ?

ದಿಕ್ಕು ಬಂದ ಕಡೆಗೆ ನಡೆದ ಕವಿಗೆ ಅವರಿವರು ಉದಾಸೀನವಾಗಿ ಬಇಟ್ಟ ಬಿಸಿ ಉಸಿರು ಗುಂಡಿಗೆಯನ್ನು ಹಿಚುಕಿದ ಅನುಭವವಾಗುತ್ತಿತ್ತು .

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1 ಜಗತ್ತು ತನ್ನನ್ನು ಕೀಳಾಗಿ ಕಂಡು ನಿರಾಕರಿಸುತ್ತಿರುವ ಬಗೆಯನ್ನು ಕವಿ ಹೇಗೆ ಚಿತ್ರಿಸಿದ್ದಾನೆ ?

ಹುಟ್ಟಿನಿಂದ ಜಾತಿಯ ಕಾರಣಕ್ಕಾಗಿ ಲೋಕದ ಜನತೆ ಕೀಳಾಗಿ ಕಾಣುತ್ತಿರುವ ಬಗೆಗೆ ಗಾಢ ವಿಷಾದವಿದೆ . ಸಮಾಜದಲ್ಲಿ ಬೇರು ಬಿಟ್ಟ ಜಾತೀಯತೆಯ ಮನೋಭಾವ ಕೇವಲ ಮಾನವರಿಗೆ ಸೀಮಿತವಾಗಿರದೆ ಚರಾಚರಗಳಿಗೂ ಅದು ವ್ಯಾಪಕವಾಗಿತ್ತು . ಅದರ ಒಂದು ಉದಾಹರಣೆ ಇಂತಿದೆ – “ ಸುಮ್ಮನಿರಲಾರದೆ ಗುಲಾಬಿಯನ್ನು ಮುತ್ತಿಡೋಣವೆಂದರೆ ಎಚ್ಚೆತ್ತ ಗುಲಾಬಿ ಯಾವ ಕುಲ ? ಯಾವ ಮತ ? ಎಂದು ಪ್ರಶ್ನೆ ಕೇಳುತ್ತಾ ದಿಟ್ಟಿಸಿ ನೋಡಿತು ” ಕೊನೆಗೆ ನೊಂದ ಕವಿ – “ ನನ್ನನ್ನು ಈಗಲಾದರೂ ಕ್ಷಮಿಸಿ ಬಿಡು ದೇವರೆ ಇವರನ್ನೆಲ್ಲ ಮುಟ್ಟಿ ಮುಟ್ಟಿ , ಅಪವಿತ್ರವಾಗುವುದಕ್ಕಿಂತ ಮುಟ್ಟಿಸಿಕೊಳ್ಳದೆ ಪವಿತ್ರನಾಗಬೇಕೆಂದು ಕೊಂಡಿದ್ದೇನೆ ” ಎಂಬ ಸಾಲುಗಳು ಕವಿಯ ನಿರಾಕರಣೆಯ ಬಾವನೆಯನ್ನು ವ್ಯಕ್ತಪಡಿಸುತ್ತದೆ .

2. ಮುಟ್ಟಿಸಿಕೊಳ್ಳದೆ ಪವಿತ್ರನಾಗಿರಬೇಕೆಂದು ಹೇಳುವ ಕವಿಯ ಮಾತಿನ ಅರ್ಥವೇನು ?

ಮಾನವರೆಲ್ಲರೂ ಒಂದು ‘ ಅಸ್ಪೃಶ್ಯ ‘ ಅಥವಾ ಮುಟ್ಟಿಸಿಕೊಳ್ಳುವಿಕೆ ಎಂಬುದು ಸಮಾಜದಲ್ಲಿ ತನ್ನನ್ನು ತಾವು ಶ್ರೇಷ್ಠರು , ಮೇಲ್ದಾತಿಯವರು ಎಂದು ಹೇಳಿಕೊಳ್ಳುವ ಜನರು . ಅವರು ತಮ್ಮನ್ನು ಶ್ರೇಷ್ಠವೆಂದು ಕೊಂಡಾಗ ನಾವು ಕೂಡ ನಮ್ಮನ್ನು ನಾವು ಶ್ರೇಷ್ಠರೆಂದುಕೊಳ್ಳಬೇಕು . ಅವರು ನಮ್ಮನ್ನು ಮುಟ್ಟಿದಾಗ ಅಪವಿತರಾಗುತ್ತೇವೆ ಎಂದು ಕೊಂಡರೆ ನಾವು ಕೂಡು ಅವರನ್ನು ಮುಟ್ಟಿಸಿಕೊಂಡರೆ ಅಪವಿತ್ರರಾಗುತ್ತೇವೆ . ಆದ್ದರಿಂದ ನಾವು ‘ ಮುಟ್ಟಿಸಿಕೊಳ್ಳದೆ ಪವಿತ್ರನಾಗಿರಬೇಕೆಂದು ಕವಿಯ ಭಾವನೆಯಾಗಿದೆ .

3. ದೇವರಿಗೊಂದು ಅರ್ಜಿ ಕವಿತೆಯ ಆಶಯವನ್ನು ವಿವರಿಸಿ .

ಹುಟ್ಟಿನಿಂದ ಜಾತಿಯ ಕಾರಣಕ್ಕಾಗಿ ಲೋಕದ ಜನತೆ ಕೀಳಾಗಿ ಕಾಣುತ್ತಿರುವ ಬಗೆಗೆ ಗಾಢವಿಷಾದವಿದೆ ಮುಟ್ಟಿದರೆ “ ಅಪವಿತ್ರ ಎಂದು ಭಾವಿಸಿರುವ ಪ್ರಧಾನ ಸಂಸ್ಕೃತಿಯ ವಿರುದ್ಧ ದನಿ ಎತ್ತುವ ಕವನ ಈ ಸಂಸ್ಕೃತಿಯ ಭಾಗವಾಗದೇ ಸ್ವತಂತ್ರವಾಗಿ ಅಸ್ತಿತ್ವನ್ನು ಸ್ಥಾಪಿಸಿಕೊಳ್ಳುವ ದಿಟ್ಟ ನಿಲುವು ಇಲ್ಲಿದ್ದು ” ” ದೇವರಿಗೊಂದು ಅರ್ಜಿ ‘ ಕವಿತೆಯಲ್ಲಿ ಮೂಡಿ ಬಂದಿದೆ .

ಅಭ್ಯಾಸ

I ಸಂದರ್ಭ ಶೂಚಿ ವಿವರಿಸಿ .

1 . ಯಾವ ಕುಲ ? ಯಾವ ಮತ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಲಕ್ಕೂರ್ ಸಿ . ಆನಂದ್‌ರವರು ರಚಿಸಿರುವ ದೇವರಿಗೊಂದು ಅರ್ಜಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ನಮ್ಮ ಸಮಾಜದಲ್ಲಿ ಜಾತಿ , ಮತ , ಕುಲ ಎಂಬುದು ಎಷ್ಟರಮಟ್ಟಿಗೆ ಪಸರಿಸಿದೆಯೆಂದರೆ ಮನುಷ್ಯರು ಹೋಗಲಿ ಸಸ್ಯಕಾಶಿಯಲ್ಲಿಯೂ ಈ ಭೇದ – ಭಾವ ಮೂಡಿ ಬಂದಿರುವುದು ಶೋಚನೀಯ . ಈ ಸಂದರ್ಭದಲ್ಲಿನ ಕವಿ ಒಂದು ಉದಾಹರಣೆಯೊಂದಿಗೆ ಇದನ್ನು ಸೃಷ್ಟಿಕರಿಸಿದ್ದಾರೆ .

ವಿವರಣೆ : ಇತರ ಜನರು ಸ್ಪರ್ಶಿಸಲು ಗೊಣಗಬಹುದು ? ಬೈಯಲು ಬಹುದು ಎಂದು ತಿಳಿದು ಪ್ರೀತಿಯಿಂದ ಸುಂದರವಾದ ಗುಲಾಬಿ ಹೂವನ್ನು ನೋಡಿ ಸಂತೋಷದಿಂದ ಮುದ್ದಾಡಲು ಹೋದರೆ ಆ ಗುಲಾಬಿ ಹೂ ಕೂಡ ತನ್ನನ್ನು ಯಾವ ಕುಲ ? ಯಾವ ಮತ ( ಜಾತಿ ) ಎಂದು ಕೇಳುತ್ತದೆ . ಅಂದರೆ ಈ ಸಮಾಜದಲ್ಲಿ ಜಾತಿ ಎಷ್ಟು ಆಳವಾಗಿ ಬೇರೂರಿರಬಹುದೆಂದು ತಿಳಿದು ಬರುತ್ತದೆ .

ವಿಶೇಷತೆ : ಮನುಷ್ಯ ಮಾತ್ರವಲ್ಲದೆ ಇತರ ಚರಾಚರಗಳಲ್ಲಿಯೂ ಜಾತಿಯತೆ ಬೇರು ಬಿಟ್ಟಿರುವ ಬಗ್ಗೆ ಕವಿ ನೊಂದು ನುಡಿದಿದ್ದಾರೆ .

2. ನನ್ನ ಕೈ ಗುರುತುಗಳನ್ನು ಅಪ್ಪಿಕೊಳ್ಳುತ್ತಿದೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಲಕ್ಕೂರ್ ಸಿ . ಆನಂದ್‌ರವರು ರಚಿಸಿರುವ ದೇವರಿಗೊಂದು ಅರ್ಜಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅಸ್ಪೃಶ್ಯತೆಯ ಸಮಾಜದಲ್ಲಿ ಸ್ಪರ್ಶತೆಯು ಅನುಬವ ರೋಮಾಂಚನವೆನಿಸಿ ದರೂ ಅದು ಅಸಾಧ್ಯವಾದಾಗ ಮನಸ್ಸಿನ ತುಂಬ ತುಂಬಿಕೊಳ್ಳು ನಿರಾಸೆ ಇನ್ನೂ ಹೆಚ್ಚಿನ ನೋವನ್ನು ಕೊಡುತ್ತವೆ . ಜೀವಂತವಾಗಿದ್ದಾಗ ಸ್ಪರ್ಶಿಸಲು ಸಾಧ್ಯವಾಗದೆ ಇರುವುದು ಹಾಗೂ ಸಮಾಧಿಯನ್ನು ಮುಟ್ಟುವಷ್ಟು ಉದಾರತ ತೋರುತ್ತದೆ . ಈ ಸಂದರ್ಭದಲ್ಲಿ ಈ ಮೇಲಿನ ವಾಕ್ಯವನ್ನು ಉದಾಕರಿಸಿ ಬರೆಯಲಾಗಿದೆ .

ವಿವರಣೆ : ಜೀವಂತವಿರುವಾಗ ಸ್ಪರ್ಶಿಸಲು ನಿರ್ಬಂಧವಿರುತ್ತದೆ . ಆದರೆ ಅದ ಸಮಾಧಿಯೊಳಗಿದ್ದಾಗ ನಮ್ಮ ಸ್ಪರ್ಶ ಒಪ್ಪಿಕೊಂಡು ಸಂತೋಷದಿಂದ ನನ್ನ ಕೈ ಗುರುತುಗಳನ್ನು ಅಪ್ಪಿಕೊಳ್ಳುತ್ತದೆ ಎಂಬುದು ಇದರ ಅರ್ಥ .

ವಿಶೇಷತೆ : 21 ನೇ ಶತಮಾನದಲ್ಲಿಯೂ ಅಸ್ಪೃಶ್ಯ ಮನೋಭಾವ ಬೆಳೆದು ಬಂದಿರುವುದು ವಿಷಾದನೀಯ ಭಾಷೆ ಸರಳ ಹಾಗೂ ಸಹಜ ರೂಪದಲ್ಲಿ ಮೂಡಿ ಬಂದಿದೆ .

3. ಮುಟ್ಟಿಸಿಕೊಳ್ಳದೆ ಪವಿತ್ರನಾಗಿರಬೇಕೆಂದುಕೊಂಡಿದ್ದೇನೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಲಕ್ಕೂರ್ ಸಿ . ಆನಂದ್‌ರವರು ರಚಿಸಿರುವ ದೇವರಿಗೊಂದು ಅರ್ಜಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮುಟ್ಟಿದರೆ ಅಪವಿತ್ರ ಎಂದು ಭಾವಿಸಿರುವ ಈ ಸಮಾಜದಲ್ಲಿ ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿ ಸ್ವತಂತ್ರವಾಗಿ ಅಸ್ತಿತ್ವವನ್ನು ಸ್ಥಾಪಿಸುವ ಬಿಟ್ಟ ನಿಲುವನ್ನು ತೋರಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಕವಿ ರಚಿಸಿದ್ದಾರೆ .

ವಿವರಣೆ : ಅಸ್ಪೃಶ್ಯತೆಯ ಬದಲಾದ ರೂಪವನ್ನು ವ್ಯಕ್ತಪಡಿಸುತ್ತಾ – ಅಸ್ಪಶ್ಯರು ಎಂದು ನಮ್ಮನ್ನು ಕಡೆಗಣಿಸಿರುವ ಇವರನ್ನು ನಾವು ಮುಟ್ಟಿ ಮುಟ್ಟಿ ಅಪವಿತವಾಗುವುದಕ್ಕಿಂತ ಮುಟ್ಟಿಸಿಕೊಳ್ಳದೆ ಪವಿತನಾಗಿರಬೇಕೆಂಬ ದಿಟ್ಟ ನಿಲುವು ಈ ವಾಕ್ಯದಲ್ಲಿ ಮೂಡಿ ಬಂದಿದೆ .

ವಿಶೇಷತೆ : ಜಾಗತೀಕರಣದ ಯುಗದಲ್ಲಿ ಅಸ್ಪೃಶ್ಯತೆಯ ಬದಲಾದ ರೂಪವು ಸರಳ – ಸಹಜ ಭಾಷೆಯಲ್ಲಿ ಮೂಡಿ ಬಂದಿದೆ

4. ನಗುವ ಚಂದಿರ ಕೈಗಂಟಿಕೊಳ್ಳುತ್ತಿದ್ದಾನೆ ?

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಲಕ್ಕೂರ್‌ ಸಿ . ಆನಂದ್‌ರವರು ರಚಿಸಿರುವ ದೇವರಿಗೊಂದು ಅರ್ಜಿ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಗುಲಾಬಿ ಹೂವಿನ ಸ್ಪರ್ಶದಿಂದ ನಿರಾಸೆ ಹೊಂದಿದ ಕವಿ , ಚಂದಿರನ ರ್ಸದಿಂದಲಾದರೂ ನೋವನ್ನು ಮರೆಯೋಣವೆಂದು ಬೊಗಸೆ ತುಂಬಾ ನೀರು ತುಂಬಿಕೊಂಡು ಚಂದಿರನ ಹಿಡಿಯಲು ಪ್ರಯತ್ನಿಸಿದ ಸಂದರ್ಭವನ್ನು ಇಲ್ಲಿ ಉಲ್ಲೇಖಿಸಲಾಗಿದೆ .

ವಿವರಣೆ : ಬೊಗಸೆ ತುಂಬಿದ ನೀರಿನಲ್ಲಿ ಚಂದಿರನನ್ನು ಹಿಡಿದು ಬಂಧಿಸಿ ಕುಡಿಯಬೇಕೆಂದು ಹಿಡಿದರೆ ಬೆರಳ ಸಂಧಿಯಿಂದ ನೀರೆಲ್ಲಾ ಸೋರಿ ಚಂದಿರ ಕೈಗಂಟಿಕೊಳ್ಳುತ್ತಿದ್ದಾನೆ ಎಂಬುದು ಇದರ ಅರ್ಥ .

ವಿಶೇಷತೆ : “ ಮುಟ್ಟಿದರೆ ಅಪವಿತ್ರದ ಭಾವನೆ ದೂರವಾಗಿಲ್ಲ ಎಂಬ ಸೂಚ್ಯವು ಸರಳ ಭಾಷೆಯಲ್ಲಿ ಮೂಡಿಬಂದಿದೆ .

Devarigondu Arji Kannada Notes Question Answer pdf

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh