1st PUC Kannada Ragi Mudde Notes | ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್

ಪ್ರಥಮ ಪಿ.ಯು.ಸಿ ರಾಗಿಮುದ್ದೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Kannada Ragi Mudde Lesson Notes Question Answer Summary Guide Mcq Pdf Download in Kannada Medium Karnataka State Syllabus 2024 Kseeb Solutions For Class 11 Kannada Chapter 2 Notes 1st Puc Kannada 2nd Lesson Notes 1st Puc Kannada Notes Ragi Mudde Question Answer Summary Pdf

 

1st PUC Kannada Ragi Mudde Notes

ತರಗತಿ: ಪ್ರಥಮ ಪಿ.ಯು.ಸಿ

ಕತೆಗಾರರು ಹೆಸರು: ಚ.ಹ.ರಘುನಾಥ

ಗದ್ಯ ಭಾಗದ ಹೆಸರು: ರಾಗಿಮುದ್ದೆ

1st P.U.C Kannada Raagimudde Notes ಪ್ರಥಮ ಪಿ.ಯು.ಸಿ ಕನ್ನಡ ರಾಗಿಮುದ್ದೆ ನೋಟ್ಸ್.‌
1st PUC Kannada Raagi mudde Notes ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್.‌

ಲೇಖನ – ಲೇಖಕರು : ಚ.ಹ.ರಘುನಾಥ ( ೧೯೭೪ )

‘ಪ್ರಜಾವಾಣಿ ‘ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಇವರು , ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹರಳಾಪುರದವರು , ‘ ಹೊಳೆಯಲ್ಲಿ ಹರಿದ ನೀರು ‘ ಕವನ ಸಂಕಲನ , ‘ ಹೊರಗೂ ಮಳೆ ಒಳಗೂ ಮಳೆ ‘ ಕಥಾ ಸಂಕಲನ ಪ್ರಕಟಿಸಿದ್ದಾರೆ .

ಕಥಾರಂಗಂ ಪ್ರಶಸ್ತಿ , ವಸುದೇವ ಭೂಪಾಲಂ ದತ್ತಿನಿಧಿ ಬಹುಮಾನ , ಕೆ.ಸಾಂಬ ಶಿವಪ್ಪ ಸ್ಮಾರಕ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿವೆ . ಹಳ್ಳಿಯ ಬದುಕಿನಲ್ಲಿ ರಾಗಿ ಮುದ್ದೆಗಿರುವ ಮಹತ್ವವನ್ನು ಲೇಖಕರು ಇಲ್ಲಿ ಚಿತ್ರಿಸಿದ್ದಾರೆ.

ಜಾನಪದ ಜಗತ್ತಿನ ಜನ ಗಾದೆ ಮತ್ತು ಹಾಡುಗಳ ಮೂಲಕ ರಾಗಿಯ ಮಹತ್ವ ಕೊಂಡಾಡಿರುವುದನ್ನು , ಆಧುನಿಕ ರಾಗಿ ಕೃಷಿ ಪದ್ಧತಿಯನ್ನು ಈ ಪ್ರಬಂಧ ಹಾಸ್ಯ ಶೈಲಿಯಲ್ಲಿ ನಿರೂಪಿಸಿದೆ .

ಪದಕೋಶ :

ಚೌಲ – ದೇವರ ಹೆಸರಿನಲ್ಲಿ ಮಕ್ಕಳ ಕೂದಲು ತೆಗೆಸುವ ಪದ್ಧತಿ : ಅಸಗೆಟ್ಟಿತ್ತು – ಗಡ್ಡೆ ಕಟ್ಟುವುದು : ಸೀಕು – ಮುದ್ದೆಯ ಅಂಟಿನ ಸಣ್ಣದೊಂದು ಎಳೆ : ಎಸರು – ಅಡಿಗೆ ಮಾಡಲು ಇಟ್ಟಿರುವ ಕುದಿಯುವ ನೀರು , ಸಾರು : ಪ್ರತ್ಯಾಮೀಯ – ಆಮ್ಲಗುಣವನ್ನು ಶಮನಗೊಳಿಸುವ.

Ragi mudde lesson in Kannada 1st PUC Question answer

II . ಒಂದು ವಾಕ್ಯದಲ್ಲಿ ಉತ್ತರಿಸಿ .

1. ಕಣ್ಣುಗಳಲ್ಲಿ ಯಾವುದರ ಸಾಲು ಚಿತ್ರಗಳು ಮೂಡಿ ಕೊಂಡವು ?

ಕಣ್ಣುಗಳಲ್ಲಿ ಮುದ್ದೆಯ ಸಾಲು ಸಾಲು ಚಿತ್ರಗಳು ಮೂಡಿ ಬಂದವು .

2. ಗ್ರಾಮದ ಅಧಿದೇವತೆ ಯಾರು ?

ಗ್ರಾಮದ ಅಧಿ ದೇವತೆ ನಾಗಮ್ಮ ದೇವತೆ .

3 . ಊರಿನ ನೀರು ಎಲ್ಲಿ ನೆಲೆ ನಿಂತಿತ್ತು ?

ಊರಿನ ನೀರು ಪಾತಾಳದಲ್ಲಿ ನೆಲೆ ನಿಂತಿದ್ದವು .

4. ಹೋಟೆಲ್‌ನಲ್ಲಿ ಕರಿಯ ಏನು ಕೆಲಸ ಮಾಡುತ್ತಿದ್ದ ?

ಹೋಟಲ್‌ನಲ್ಲಿ ಕರಿಯ ಕಸಮುಸರೆ , ಸಾಮಾನು ತರುವುದು ಹೀಗೆ ಎಲ್ಲಾ ಕೆಲಸ ಮಾಡುತ್ತಿದ್ದ .

5. ನೀರಿಗಾಗಿ ಕರಿಯ ಏನನ್ನು ತರುತ್ತಿದ್ದ ?

ನೀರಿಗಾಗಿ ಕರಿಯ ದೊಡ್ಡದೊಂದು ಬಾನಿಯನ್ನೇ ತರುತ್ತಿದ್ದ .

6. ರಾಗಿಗೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆ ?

ರಾಗಿಗೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ .

7. ಬಡಮಕ್ಕಳ ಪಾಲಿಗೆ ಚಾಕಲೇಟ್ ಯಾವುದು ?

ಬಡ ಮಕ್ಕಳ ಪಾಲಿಗೆ ಸೀಕು ಪಾಕುಗಳ ಚಾಕಲೇಟ್‌ಗಳು ,

8. ರಾಗಿಯಲ್ಲಿನ ಸ್ವಲ್ಪನೇ ಬಿಡುಗಡೆಯಾಗುವ ಅಂಶ ಯಾವುದು ?

ರಾಗಿಯಲ್ಲಿನ ಸ್ವಲ್ಪ ಸ್ವಲ್ಪವೇ ಬಿಡುಗಡೆಯಾಗುವ ಅಂಶ “ ಕಾರ್ಬೋ ಹೈಡೇಟ್ “.

II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ರಾಗಿ ಬೀಸುವ ಕಲ್ಲನ್ನು ಕುರಿತ ಜನಪದ ಹೆಣ್ಣು ಮಗಳ ಪ್ರಾರ್ಥನೆ ಯಾವುದು ?

ರಾಗಿ ಬೀಸುವ ಕಲ್ಲನ್ನು ಪವಿತ್ರ ಎಂದು ಭಾವಿಸಿ “ ಕಲ್ಲಮ್ಮ ಮಾತಾಯಿ , ಮೆಲ್ಲಮ್ಮ ರಾಗೀಯ ! ಜಲ್ಲ ಜಲ್ಲನೆ ಉದುರಮ್ಮ ” ಎಂಬುದಾಗಿ ಹಾಡುವರು .

2. ನಮ್ಮ ರಾಜ್ಯದ ಯಾವ ಜಿಲ್ಲೆಗಳು ರಾಗಿಯ ಕಣಜಗಳಾಗಿವೆ ?

ನಮ್ಮ ರಾಜ್ಯದ ಮಂಡ್ಯ , ಮೈಸೂರು , ತುಮಕೂರು , ಕೋಲಾರಗಳು ಹೆಚ್ಚು ಬೆಳೆ ಬೆಳೆಯುವ ಜಿಲ್ಲೆಗಳಾಗಿವೆ .

3.ಲೇಖಕರು ಹಾಗೂ ಅವರ ಅಣ್ಣನ ನಾಲಗೆಯ ಮೇಲೆ ನೀರೂರಲು ಕಾರಣವೇನು ?

ಬುತ್ತಿಯಿಂದ ಹೊರ ಹೊಮ್ಮುತ್ತಿದ್ದ ಮುದ್ದೆ ಹಾಗೂ ಕಿವಿಚಿದ ಸಾರಿನ ಸೊಗಸಾದ ಘಮ , ಮುದ್ದೆಯನ್ನು ಮುರಿಯುತ್ತ ತುತ್ತುಗಳನ್ನು ಸಾರಿನಲ್ಲಿ ಹೊರಳಿಸುತ್ತ ತವರು ನುಂಗುತ್ತಿದ್ದರೆ ಇತ್ತ ಲೇಖಕರಿಗೂ , ಅವರ ಅಣ್ಣ ನಾಲಿಗೆಯ ಮೇಲೆ ನೀರೂರುತ್ತಿತ್ತು ,

4. ಲೇಖಕರ ಪ್ರಕಾರ ದುಡಿದು ಜನಕ್ಕೆ ಯಾವ ರೀತಿಯ ಮುದ್ದೆ ಇರಬೇಕು ?

ಲೇಖಕರ ಪ್ರಕಾರ ದುಡಿದ ಜನಕ್ಕೆ ಮುದ್ದೆ ಗೋಡೆಗೆ ಹೊಡೆದರೆ ಚೆಂಡಿನಂತೆ ಪುಟಿಯುವ ಗಟ್ಟಿ ಮುದ್ದೆ ಬೇಕು .

5. ಮುದ್ದೆ ಮಾಡಲು ಬೇಕಾದ ಕೌಶಲ್ಯವೇನು ?

ಮುದ್ದೆ ಮಾಡುವುದು ಒಂದು ಅನುಭವದ ಕೆಲಸ ಗಂಟಾಗದಂತೆ ಪೆಡುಸಾಗದಂತೆ ಮುದ್ದೆ ಮಾಡಲಿಕ್ಕೆ ಪಳಗಿದ್ದ ಕೈಗಳೇ ಆಗಬೇಕು ಹಬೆಯಾಡುವ ಮುದ್ದೆಯನ್ನು ಕೈ ಒದ್ದೆ ಮಾಡಿಕೊಂಡು ಉಂಡೆಗಟ್ಟುವುದಕ್ಕೂ ಕೌಶಲ್ಯ ಇರಬೇಕು .

6. ಮುದ್ದೆಯ ಕುರಿತು ಕೋಮಲಾಂಗಿಯರಿಗೆ ಇರುವ ಹೆದರಿಕೆ ಯಾವುದು ?

ಮುದ್ದೆಯ ಬಣ್ಣ ತಮ್ಮ ಮೈ ಬಣ್ಣ ಕುಂದಿಸುತ್ತದೆಂದು ಕಂಗಾಲಾಗುವ ಕೋಮಲಾಂಗಿಯರಿಗೆ ಹೆದರಿಕೆ ಇದೆ .

7. ಯಾವ ಕಾರಣದಿಂದ ಕ್ಯಾಂಟೀನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು ?

ಕ್ಯಾಂಟಿನ್‌ನಲ್ಲಿ ಕೆಲವರು ಮುದ್ದೆಯನ್ನು ಪಟ್ಟಿಯಲ್ಲಿ ಇಟ್ಟುಕೊಂಡು ತುಟಿಬಣ್ಣ ಕೆಡದಂತೆ ಚಮಚೆಯಲ್ಲಿ ತಿನ್ನುವ ಚೆಲುವೆಯರು , ಇಡೀ ಮುದ್ದೆಯನ್ನು ಒಮ್ಮೆಗೆ ಎತ್ತಿಕೊಂಡು ಕಚ್ಚಿ ತಿನ್ನುವ ಚೆನ್ನಿಗರ ಕಾರಣದಿಂದ ಕ್ಯಾಂಟಿನ್ ರಸಮಯ ಸನ್ನಿವೇಶಗಳ ರಂಗಸ್ಥಳವಾಗಿತ್ತು .

8. ರಾಗಿಯಲ್ಲಿ ಯವ ರೋಗಗಳನ್ನು ತಡೆಯಬಲ್ಲ ಗುಣವಿದೆ ?

ರಾಗಿಯಲ್ಲಿ ಮಧು ಮೇಹ ರೋಗವನ್ನು ನಿಯಂತ್ರಿಸುತ್ತದೆ ಇದು ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಿಸುತ್ತದೆ . ಪ್ರತ್ಯಾಮೀಯ ಗುಣ ಹೊಂದಿರುವುದರಿಂದ ರಾಗಿ ತಿನಿಸು ದೇಹಕ್ಕೆ ತಂಪು ರಾಗಿಯಲ್ಲಿ ಹೃದಯದ ಬೇನೆ ಹಾಗೂ ಕ್ಯಾನ್ಸರ್ ತಡೆಯಬಲ್ಲ ಔಷದೀಯ ಗುಣಗಳಿವೆ . ತೆಳ್ಳಗಾಗುವವರಿಗೆ ರಾಗಿ ಮುದ್ದೆ ಹೇಳಿ ಮಾಡಿಸಿದ ಊಟ ಹಸುಳೆಗಳಿಗೆ ರಾಗಿ ಪೌಷ್ಠಿಕ ಆಹಾರ ರಾಗಿ ಹಿಟ್ಟಿಗೂ ಸೂಪ್‌ನಿಂದ ಮಕ್ಕಳು ನಳನಳಿಸುತ್ತಾರೆ . ರಾಗಿಯಲ್ಲಿನ ಅಧಿಕ ಪ್ರಮಾಣದ ಕ್ಯಾಲ್ಸಿಯಂ ಮಕ್ಕಳ ಬೆಳವಣಿಗೆ ನಿಟ್ಟಿನಲ್ಲಿ ಟಾನಿಕ್‌ನಂತೆ ಕೆಲಸ ಮಾಡುತ್ತದೆ .

IV ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ರಾಗಿ ಮುದ್ದೆ ಕುರಿತ ಇರುವ ಹತ್ತಾರು ಮೆಚ್ಚುಗೆಯ ನಂಬಿಕೆಯ ಮಾತುಗಳಾವುವು ?

ರಾಫಿ ಮುದ್ದೆ ಗಟ್ಟಿತನಕ್ಕೆ ಹೆಸರಾದುದು “ ಹಿಟ್ಟು ತಿಂದು ಜಟ್ಟಿಯಾಗು ” ಹಿಟಂ ತಿಂದಂ ಬೆಟ್ಟಂ ಕಿತ್ತಿಟಂ ” ಎಂಬ ಹತ್ತಾರು ಮೆಚ್ಚುಗೆಯ ನಂಬಿಕೆಯ ಮಾತುಗಳು ಇವೆ .

2. ಕರಿಯನ ಜೀವನ ಹೇಗಿತ್ತು ? ಜನರು ಆತನನ್ನು ಕಾಣುವ ರೀತಿಯನ್ನು ಲೇಖಕರು ಹೇಗೆ ವಿವರಿಸಿದ್ದಾರೆ ?

ಹೊಟೇಲ್‌ವೊಂದರಲ್ಲಿ ಕಸಮುಸುರೆ ಬಳಿಯುತ್ತಿದ್ದ ನೋಡಲಿಕ್ಕೆ ಅವನೂ ದೊಡ್ಡದೊಂದು ರಾಗಿ ಮುದ್ದೆಯಂತೆಯೇ ಕಾಣುತ್ತಿದ್ದನು ನೀರಿಗಾಗಿ ಬೋರ್‌ವೆಲ್‌ಗೆ ನೀರಿಗಾಗಿ ಬರುತ್ತಿದ್ದ ನೀರು ಪಾತಾಳದಲ್ಲಿ ನೆಲೆನಿಂತ ಊರದು , ಎಷ್ಟು ಜೋರಾಗಿ ಜಗ್ಗಿದರೂ ಚಿಮ್ಮುತ್ತಿದ್ದುದು ದಾರದ ಎಳೆಯ ಗಾತ್ರ ನೀರು ಅವನು ದೊಡ್ಡದೊಂದು ಬಾನಿಯನ್ನೇ , ತುಂಬಿದ ಮಣ್ಣಿನ ಅರವಿಯನ್ನು ಸಲಿಸಾಗಿ ಭುಜದ ಮೇಲಿರಿಸಿಕೊಂಡು ಸಾಗುತ್ತಿದ್ದರೆ ಎರಡು ಗುಡಾಣಗಳು ಸಾಗುತ್ತಿರುವಂತೆ ತೋರುತ್ತಿತ್ತು .

3. ಹಳ್ಳಿಯ ಜನ ಕೈಯಲ್ಲೇ ಮುದ್ದೆ ತಿನ್ನುವ ಚಿತ್ರಣವನ್ನು ವಿವರಿಸಿ .

ಹಳ್ಳಿಯ ಜನ ಕೈಯಲ್ಲೇ ಮುದ್ದೆ ತಿನ್ನುವ ರೀತಿ ಬಲು ಸೊಗಸು , ಮುದ್ದೆಯನ್ನು ಅದುಮುತ್ತಾ ಅದುಮುತ್ತಾ ಇಡೀ ಮುದ್ದೆಯನ್ನೇ ಬಟ್ಟಲಿನಾಕಾರಕ್ಕೆ ಬದಲಿಸುತ್ತಾರೆ . ಈ ಮುದ್ದೆಯ ಗುಂಡಿಯಲ್ಲಿ ಸಾರನ್ನೋ , ಗೊಜ್ಜನ್ನೋ ತುಂಬಿಸಿಕೊಂಡು , ಎಡ ಅಂಗೈಗುಣಿಯಲ್ಲಿ ಪವಡಿಸಿದ ಮುದ್ದೆಯ ಮೇಲ್ಬಾಗದಿಂದ ತುತ್ತು ತುತ್ತಾಗಿ ಮುರಿಯುತ್ತಾ ನುಂಗುತ್ತಾ ಇರುತ್ತಾರೆ , ಮುದ್ದೆ ಕರಗುವ ವೇಳೆಗಾಗಲೇ , ಅಂಗೈಯಲ್ಲಿ ಮತ್ತೊಂದು ಮುದ್ದೆ ಪ್ರತ್ಯಕ್ಷವಾಗಿರುತ್ತದೆ .

4. ಡಾ || ಸಿ.ಹೆಚ್ . ಲಕ್ಷ್ಮಣಯ್ಯನವರ ರಾಗಿ ಸಂಶೋಧನೆ ಮತ್ತು ರಾಗಿ ಪ್ರೀತಿಯನ್ನು ವಿವರಿಸಿ .

ಡಾ || ಸಿ.ಹೆ. ಲಕ್ಷ್ಮಣಯ್ಯನವರ ರಾಗಿ ಸಂಶೋಧನೆ ಶ್ಲಾಘನೀಯವಾಗಿದ್ದು , ಇಂಥಹ ಸಂದರ್ಭದಲ್ಲಿ ಲಕ್ಷ್ಮಣಯ್ಯ “ ಸಂಪರ್ಕ ಪದ್ಧತಿ ” , ಎನ್ನುವ ತಮ್ಮ ನೂತನ ಪರಿಕಲ್ಪನೆಯ ಮೂಲಕ ಹೊಸ ತಳಿಗಳ ಅನ್ವೇಷಣೆಯಲ್ಲಿ ತೊಡಗಿಸಿಕೊಂಡರು , ಈ ನಿಟ್ಟಿನಲ್ಲಿ ಮೈಸೂರು ಹಆಗೂ ತಮಿಳುನಾಡಿನ ತಳಿಗಳನ್ನು ಬಳಸಿಕೊಂಡರು . ಪರಿಣಾಮವಾಗಿ ದೊರೆತದ್ದು ಅದ್ಭುತ ಯಶಸ್ಸು , ಅದೇ ಕರ್ನಾಟಕ “ ರಾಗಿ ಕ್ರಾಂತಿ ” . ಇವರ ಸಂಶೋಧನೆಯ ಫಲವಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದರು . ಲಕ್ಷ್ಮಣಯ್ಯನವರು ಅನಾರೋಗ್ಯದಿಂದ ಪೀಡಿತರಾಗಾಲು ‘ ರಾಗಿದ್ಯಾನ ‘ ಮರೆಯಲಿಲ್ಲ . ಆಪರೇಷನ್ ಕೊಠಡಿಗೆ ತೆರಳುವ ಮುನ್ನ ಚಿಕಿತ್ಸೆಯ ನಂತರ ನಾನು ಚೇತರಿಸಿಕೊಂಡು ರಾಗಿ ಸಂಶೋಧನೆಯಲ್ಲಿ ಮುಂದುವರೆಯಲು ಸಾಧ್ಯವಾದರೆ ಶಸ್ತ್ರಚಿಕಿತ್ಸೆ ಮಾಡಿ , ಇಲ್ಲದಿದ್ದರೆ ಬಿಟ್ಟುಬಿಡಿ ಎಂದರಂತೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿಲ್ಲ . ಅವರು ತಮ್ಮ ಪತ್ನಿಯ ಬಳಿ “ ತನ್ನ ಅಂತ್ಯ ಸಂಸ್ಕಾರಕ್ಕೆ ಮೊದಲು ತನ್ನ ದೇಹದ ಮೇಲೆ ಮುಷ್ಠಿರಾಗಿ ಸುರಿಯಿರಿ ” ಎಂಬುದಾಗಿ ಹೇಳಿದರಂತೆ ಇದು ಅವರ ರಾಗಿ ಶ್ರಮಕ್ಕೆ ಸಾಕ್ಷಿಯಾಗಿದೆ .

5. ರಾಗಿ ಮುದ್ದೆ ಯಾವ ಬಗೆಯ ಸಾರುಗಳ ಜೊತೆ ಸೇರಿ ಎಂತಹ ರಸಾನುಭವವನ್ನು ಸೃಷ್ಟಿಸುತ್ತದೆ ?

ರಾಗಿ ಮುದ್ದೆ ಎಲ್ಲಾ ಬಗೆಯ ಸಾರುಗಳ ಜೊತೆ ಹೊಂದಿಕೊಳ್ಳುತ್ತದೆ , ಸೊಪ್ಪಿನ ಸಾರಿಗೂ ರಾಗಿಮುದ್ದೆಗೂ ಹೇಳಿಮಾಡಿಸಿದ ಜೊತೆ , ಕಿವುಚಿದ ಸಾರು , ಹಿತಕವರೆ , ಮೊಳಕೆಯಾಡದ ಹುರುಳಿಕಾಳು ಸಾರು , ಉಪ್ಪು ಮಣ ಸಿಕಾಯಿ ಗೊಜ್ಜು , ಕೋಳಿ ಸಾರು ಹೀಗೆ ಎಲ್ಲರೊಂದಿಗೂ ರಾಗಿಹಿಟ್ಟು ಅನುರೂಪ ಜೋಡಿಯಾಗಬಲ್ಲದು . ಏನೂ ಇಲ್ಲದಿದ್ದಲ್ಲಿ ಮಜ್ಜಿಗೆಯಲ್ಲಿ ಮುದ್ದೆಯನ್ನು ಕದರಿ ಕುಡಿಯುವ ಸುಖ ಉಪ್ಪು ಮೆಣಸಿನ ಕಾಯಿ ಗೊಜ್ಜಿನೊಂದಿಗೆ ಮುದ್ದೆಯನ್ನು ಮೆಟ್ಟಿ ಮೆಲ್ಲುವ ಆನಂದವನ್ನು ಅನುಭವಿಸಿದವರೇ ಬಲ್ಲರು , ಅದು ಪದಗಳಿಗೆ ನಿಲುಕದ ರಸಾನುಭವವಾಗಿದೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. ಎಷ್ಟು ಜೋರಾಗಿ ಜಗ್ಗಿದರೂ ಚಿಮ್ಮುತ್ತಿದ್ದು ದಾರದಷ್ಟೇ ದಪ್ಪದ ನೀರು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಹಳ್ಳಿಗಳಲ್ಲಿ ನೀರಿನ ಬವಣೆಯ ಬಗ್ಗೆ ಚಿತ್ರಿಸುತ್ತಾ ಲೇಖಕರು ಬೋರ್‌ವೆಲ್ ನೀರಿನ ವ್ಯವಸ್ಥೆಯ ಬಗ್ಗೆ ಲೇಖಕರು ತಿಳಿಸುತ್ತಾ ಈ ವಾಕ್ಯವನ್ನು ತಿಳಿಸಿದ್ದಾರೆ

ವಿವರಣೆ : ನೀರಿನ ಸೌಲಭ್ಯ ಎಲ್ಲರಿಗೂ ದೊರಕಲೆಂದೇ ಬೋರ್‌ವೆಲ್‌ ಹಾಕಿಸಿದ್ದಾರೆ . ಆದರೆ ನೀರು ಮಾತ್ರ ಬಾರದು . ಜೋರು ಜೋರಾಗಿ ಒತ್ತಿದರೆ ಮಾತ್ರ ದಾರದಷ್ಟು ಗಾತ್ರದಲ್ಲಿ ಮಾತ್ರ ನೀರು ಬರುತ್ತಿತ್ತು .

ವಿಶೇಷತೆ : ಸರಳ ಭಾಷೆಯಲ್ಲಿ ಬೋರ್‌ವೆಲ್‌ನಲ್ಲಿ ಬರುವ ನೀರಿನ ಬಗ್ಗೆ ತಿಳಿಸಲಾಗಿದೆ .

2. ಅಂಗೈನಲ್ಲಿ ಮತ್ತೊಂದು ಮುದ್ದೆ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಶ್ರಮಿಕರು ಹೇಗೆ ಮುದ್ದೆ ಊಟವನ್ನು ಇಷ್ಟಪಟ್ಟು ಊಟವನ್ನು ಮಾಡುವರು ಎಂಬುದರ ಬಗ್ಗೆ ಇಲ್ಲಿ ತಿಳಿಸುತ್ತಾ ಈ ವಾಕ್ಯವನ್ನು ಲೇಖಕರು ತಿಳಿಸಿದ್ದಾರೆ .

ವಿವರಣೆ : ಶ್ರಮಿಕರು ಒಂದು ಮುದ್ದೆ ಮುಗಿಸಿದಂತೆ ಇನ್ನೊಂದೆ ಮುದ್ದೆ ಅಂಗೈ ಮೇಲೆ ಬರುತ್ತಿತ್ತು . ಎಂಬುದು ಇದರ ಭಾವಾರ್ಥ .

ವಿಶೇಷತೆ : ಸವಾದಿಷ್ಟ ಹಾಗೂ ತೃಪ್ತಿಕರ ಊಟವೆಂದರೆ ‘ ಮುದ್ದೆ ಊಟ ಎಂಬುದರ ಬಗ್ಗೆ ಸರಳ ಭಾಷೆಯಲ್ಲಿ ತಿಳಿಸಲಾಗಿದೆ .

3. ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮುದ್ದೆ ಮಾಡಲಿಕ್ಕೆ ಒಂದು ಪ್ರಕಾರದ ಕಲಾ ಕೌಶಲ್ಯತೆ ಬೇಕೆ ಬೇಕು , ಎಂಬುದರ ಬಗ್ಗೆ ಹೇಳುತ್ತಾ ಈ ಮಾತನ್ನು ಹೇಳಿದ್ದಾರೆ .

ವಿವರಣೆ : ಮುದ್ದೆ ಮಾಡಲಿಕ್ಕೆ ಪಳಗಿದ ಕೈಗಳೇ ಆಗಬೇಕು , ಅಂದರೆ ಅನುಭವಿಗಳ ಕೈಲಿ ಮುದ್ದೆ ಘಮಘಮಿಸುತ್ತಾ ಮತ್ತಷ್ಟು ತಿನ್ನಬೇಕೆಂಬ ಆಸೆಯಾಗುತ್ತದೆ , ಇಲ್ಲದಿದ್ದಲ್ಲಿ ಮುದ್ದೆ ಬರೀ ಗಂಟುಗಂಟಾಗಿ ತಿನ್ನಲು ಸಾಧ್ಯವಾಗುವುದಿಲ್ಲ , ಹದವಾಗಿ ಮುದ್ದೆ ತಿರುವಲು ಪಳಗಿದ ಕೈಗಳೇ ಬೇಕು ಎಂಬುದಾಗಿ ಲೇಖಕರು ಹೇಳುತ್ತಾರೆ .

ವಿಶೇಷತೆ : ಅಡಿಗೆ ಮಾಡುವುದೇ ಒಂದು ಕೌಶಲ್ಯ ಅದರಲ್ಲೂ ಮುದ್ದೆ ಮಾಡುವುದು ಅಷ್ಟು ಸುಲಭದ ಮಾತಲ್ಲ ಎಂಬುದನ್ನು ಲೇಖಕರು ಸರಳ ಭಾಷೆಯಲ್ಲಿ ನುಡಿದಿದ್ದಾರೆ . ವ್ಯವಸ್ಥೆಯ

4. ಸೀಕನ್ನು ಚಪ್ಪರಿಸಿದ ರುಚಿ ಇನ್ನೂ ನಾಲಗೆಯಲ್ಲಿದೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಲೇಖಕರು ತಮ್ಮ ಬಾಲ್ಯವನ್ನು ನೆಪಿಸಿಕೊಳ್ಳುತ್ತಾ ಆಗ ಅಮ್ಮ ಮುದ್ದೆ ಮಾಡಿ ತಳಹಿಡಿದ ಸೀಕನ್ನು ಒಣಗಿಸಿ ಕೊಡುತ್ತಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಈ ವಾಕ್ಯವನ್ನು ಬರೆದಿದ್ದಾರೆ .

ವಿವರಣೆ : ಸೀಕು ತಿನ್ನಲು ರಉಚಿ , ಕುರಂ , ಕುರಂ ಎಂದು ತಿನ್ನುವಾಗ ಅದರ ಮಜವೇ ಬೇರೆ , ಆ ಸವಿರುಚಿ ಇನ್ನು ನಾಲಿಗೆಯ ಮೇಲೆ ಇದೆ ಎಂಬುದಾಗಿ ನೆನಪಿಸಿಕೊಳ್ಳುತ್ತಿದ್ದಾರೆ . ವಿಶೇಷತೆ : ಬಾಲ್ಯದ ಸವಿನೆನಪನ್ನು ಸರಳ , ಸಹಜ ಭಾಷೆಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ .

5. ಸಂದು ಹೋದ ಜೀವನ ಶೈಲಿಯೊಂದರ ಮೆಲುಕು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಹಿಂದೆ ಅಂದರೆ ಹಿಂದಿನ ಕಾಲದಲ್ಲಿ ಮುದ್ದೆಯನ್ನು ಹೇಗೆ ಮಾಡುತ್ತಿದ್ದ ರೀತಿ , ಊಟ ಮಾಡುತ್ತಿದ್ದ ರೀತಿಯೆಲ್ಲವನ್ನು ನೆನಪಿಸಿಕೊಂಡ ಲೇಖಕರು ಈ ಮಾತನ್ನು ಹೇಳಿದರು .

ವಿವರಣೆ : ಹಿಂದಿನ ದಿನಗಳಲ್ಲಿ ಊಟವೆಂದರೆ ರಾಗಿಮುದ್ದೆ ಊಟ , ಅದನ್ನು ಮಡುತ್ತಿದ್ದ ರೀತಿ , ಊಟ ಮಾಡುತ್ತಿದ್ದ ರೀತಿಯೆಲ್ಲವನ್ನು ನೆನಪಿಸಿಕೊಂಡ ಲೇಖಕರು ಈ ಮಾತನ್ನು ಹೇಳಿದರು .

ವಿಶೇಷತೆ : ಹಳೆಯ ಮೆಲುಕುಗಳು ಮನಸ್ಸಿಗೆ ಮುದವನ್ನು ಕೊಡುತ್ತವೆ ಎಂಬುದನ್ನು ಲೇಖಕರು ಸರಳಭಾಷೆಯಲ್ಲಿ ತಿಳಿಸಿದ್ದಾರೆ .

6. ಅದು ಪದಗಳಿಗೆ ನಿಲುಕದ ರಸಾನುಭವ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮುದ್ದೆ ಯಾವುದೇ ಸಾರು ಗೊಜ್ಜಿಗಾದರೂ ಸರಿ ಹೊಂದಿಕೊಳ್ಳುತ್ತದೆ . ಬಿಸಿ ಮುದ್ದೆಗೆ ಯಾವುದೇ ಸಾರು ಆಗಿದ್ದರೂ ಸರಿ , ಏನು ಇಲ್ಲದಿದ್ದರೂ ಸರಿ ಉಪ್ಪು ಮೆಣಸಿನಕಾಯಿ ಜೊತೆಗೆ ತಿಂದರೂ ಎನ್ನುವ ಸಂದರ್ಭದಲ್ಲಿ ಈ ಮಾತು ಹೇಳಿದರು .

ವಿವರಣೆ : ಬಿಸಿ ಬಇಸಿ ಮುದ್ದೆ ಜೊತೆಗೆ ಉಪ್ಪು ಮೆಣಸಿನಕಾಯಿ ಗೊಜ್ಜು ನೆಂಚಿಕೊಂಡು ತಿನ್ನುತ್ತಿದ್ದರೆ ಸಿಗುವ ಆನಂದವನ್ನು ಅನುಭವಿಸಬಹುದೇ ಹೊರತು ಅದು ಪದಗಳಿಗೆ ಸಿಲುಕದ ರಸಾನುಭವವಾಗಿದೆ .

ವಿಶೇಷತೆ : ಅನುಭವಕ್ಕೆ ಶಬ್ದಗಳಿಲ್ಲ ಎಂಬುದನ್ನು ಸರಳ , ಸುಂದರ ಭಾಷೆಯಲ್ಲಿ ವಿವರಿಸಿದ್ದಾರೆ .

7. ನನ್ನ ದೇಹದ ಮೇಲೆ ಒಂದು ಮುಷ್ಠಿ ರಾಗಿ ಸುರಿಯಿರಿ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ತಮ್ಮ

ಸಂದರ್ಭ : ರಾಗಿ ಲಕ್ಷ್ಮಣಯ್ಯನವರು ತಾವು ಸಾಯುವ ಮೊದಲು ಆಸೆಯನ್ನು ಹೆಂಡತಿಗೆ ಈ ಮಾತು ಹೇಳಿದರು .

ವಿವರಣೆ : ತನ್ನ ಜೀವನವನ್ನು ರಾಗಿ ಸಂಶೋಧನೆಗೆ ತೊಡಗಿಸಿಕೊಂಡಿದ್ದರು . ಸಾಯುವವರೆಗೂ ಅದರಲ್ಲಿಯೇ ತಮ್ಮನ್ನು ತಾವು ಬೆರೆತು ಹೋಗಿದ್ದರು ಸತ್ತಮೇಲೂ ತಮ್ಮ ದೇಹದ ಮೇಲೆ ಒಂದು ಮುಷ್ಠಿ ರಾಗಿ ಸುರಿಯಬೇಕೆಂದು ಕೇಳಕೊಂಡರು .

ವಿಶೇಷತೆ : ಲಕ್ಷ್ಮಣಯ್ಯನವರಿಗೆ ರಾಗಿಯ ಬಗ್ಗೆ ಇದ್ದ ಕಾಳಜಿಯ ಬಗ್ಗೆ ತಿಳಿಸಲಾಗಿದೆ . ಸರಳ ಭಾಷೆಯಲ್ಲಿ ಲೇಖಕರು ಇದನ್ನು ತಿಳಿಸಿದ್ದಾರೆ

8. ತುಟಿ ಬಣ್ಣ ಕೆಡದಂತೆ ಚಮಚದಲ್ಲಿ ತಿನ್ನುವ ಚೆಲುವೆ ಯಾರು ?

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಚ.ಹ. ರಘುನಾಥರವರು ರಚಿತವಾಗಿರುವ ‘ ರಾಗಿಮುದ್ದೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : 2006 ನೇ ಇಸವಿಯಲ್ಲಿ ಜರ್ಮನಿಯಲ್ಲಿ ವಿಶ್ವಕಪ್ ಪುಟ್‌ಬಾಲ್ ಪಂದ್ಯವಳಿಯ ಕ್ಯಾಂಟಿನ್‌ನಲ್ಲಿ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಂಡು ಪಾಠಕರೊಂದಿಗೆ ವಿವರಿಸಿದ್ದಾರೆ .

ವಿವರಣೆ : ಕ್ಯಾಂಟಿನಲ್ಲಿ ಮುದ್ದೆ ಸಿಕ್ಕಿದಾಗ ಕೆಲವು ಲಲನಾ ಮಣಿಯರು ತಮ್ಮ ತುಟಿಗೆ ಬಳಿದ ಬಣ್ಣ ಕೆಡದಂತೆ ಚಮಚದಿಂದ ಮುದ್ದೆ ತಿನ್ನುವುದು ಹಾಸ್ಯಸ್ಪದವಾಗಿತ್ತು .

ವಿಶೇಷತೆ : ಹಾಸ್ಯಾತ್ಮಕವಾಗಿ ಈ ವಾಕ್ಯ ಸರಳ ಭಾಷೆಯಲ್ಲಿ ಮೂಡಿ ಬಂದಿದೆ .

1st PUC Kannada Ragi Mudde Notes Question Answer Pdf Download

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

7 thoughts on “1st PUC Kannada Ragi Mudde Notes | ಪ್ರಥಮ ಪಿಯುಸಿ ಕನ್ನಡ ರಾಗಿಮುದ್ದೆ ನೋಟ್ಸ್

  1. Vidya D Mundaragi says:

    Superb 👌Thank you so much for helping to students. Most uses to your app in me. Once again thank you so much.

Leave a Reply

Your email address will not be published. Required fields are marked *

rtgh