ಪ್ರಥಮ ಪಿಯುಸಿ ಕನ್ನಡ ಗಾಂಧಿ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 1st Puc Kannada Gandhi Lesson Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 11 Kannada Chapter 1 Notes 1st Puc Kannada Gandhi Lesson Question Answers Gandhi Lesson Notes Kannada 1st Puc Kannada 1st Lesson Notes
1st Puc Kannada 1st Chapter Notes
ತರಗತಿ: ಪ್ರಥಮ ಪಿ.ಯು.ಸಿ
ಕತೆಗಾರರು ಹೆಸರು: ಡಾ || ಬೆಸಗರಹಳ್ಳಿ ರಾಮಣ್ಣ
ಗದ್ಯ ಭಾಗದ ಹೆಸರು: ಗಾಂಧಿ
1st PUC Kannada Gandhi Lesson Notes
ಕತೆ – ಕತೆಗಾರರು : ಡಾ || ಬೆಸಗರಹಳ್ಳಿ ರಾಮಣ್ಣ ( ೧೯೩೮-೧೯೯೯ )
ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಬೆಸಗರಹಳ್ಳಿ ರಾಮಣ್ಣನವರು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯವರು . ವೈದ್ಯರಾಗಿದ್ದ ಇವರು ಬಂಡಾಯ ಸಾಹಿತ್ಯದ ಪ್ರಮುಖ ಲೇಖಕರು . ಹಳ್ಳಿಯ ಬಡ ಜನರ ಮುಗ್ಧತೆ , ಅಸಹಾಯಕತೆ , ನೋವು , ನಲಿವುಗಳನ್ನು ತುಂಬ ಹತ್ತಿರದಿಂದ ಗಮನಿಸಿದವರು .
ಜೀವನವನ್ನು ಬಲು ಪ್ರೀತಿಯಿಂದ ತಮ್ಮ ಕತೆಗಳಲ್ಲಿ ಚಿತ್ರಿಸಿದ್ದಾರೆ . ‘ ನೆಲದ ಪ್ರಸ್ತುತ ಕಥೆಯನ್ನು ‘ ಕಣಜ ‘ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ . ಒಡಲು ‘ , ‘ ಗರ್ಜನೆ ‘ , ‘ ನೆಲದಸಿರಿ ‘ , ‘ ಹರಕೆಯಹಣ ‘ , ‘ ಒಂದು ಹುಡುಗನಿಗೆ ಬಿದ್ದ ಕನಸು ‘ ಹಾಗೂ ‘ ಕೊಳಲು ಮತ್ತು ಖಡ್ಗ ‘ ಇವರ ಕಥಾ ಸಂಕಲನಗಳು .
‘ ತೋಳಗಳ ‘ ಗರ್ಜನೆ ‘ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ನಡುವೆ ‘ ಕಿರು ಕಾದಂಬರಿ , ಅಕಾಡೆಮಿ ಬಹುಮಾನ ದೊರೆತಿದೆ . ಬಡ ಕುಟುಂಬದ ರೋಗಿಷ್ಠ ಹುಡುಗನೊಬ್ಬನ ದಾರುಣ ಸ್ಥಿತಿಯ ಮೇಲೆ ಕತೆಯು ಬೆಳಕು ಚೆಲ್ಲುತ್ತದೆ . ಬಡವರಿಗೆ ಸರಿಯಾಗಿ ಸಿಗದ ವೈದ್ಯಕೀಯ ಸೌಲಭ್ಯಗಳು , ಅದನ್ನು ಪಡೆಯುವಲ್ಲಿ ಅವರು ಪಡುವ ಪರಿಪಾಟಲನ್ನು ಕತೆ ತೆರೆದಿಡುತ್ತದೆ .
ಪದಕೋಶ :
ವರಾಂಡ – ಮನೆಯ ಮುಂಭಾಗದ ಕೈಸಾಲೆ , ಮೊಗಸಾಲೆ , ಅಂಗಳ ; ಹೋಗ್ಯ – ಹೋಗೋಣ ; ಮೂಸೆ- ಚಿನ್ನಬೆಳ್ಳಿ ಮುಂತಾದ ಲೋಹಗಳನ್ನು ಕರಗಿಸಲು ಬಳಸುವ ಉಪಕರಣ ; ನರಪೇತಲ- ತೆಳ್ಳನೆ ಮನುಷ್ಯ ; ಅವ್ಯಕ್ತ- ಕಾಣದ ; ವಸಿ – ಸ್ವಲ್ಪ : ಗೋಗರೆ – ಬೇಡಿಕೊಳ್ಳು ; ಕಾಕತಾಳ – ಒಂದು ಲೋಕನ್ಯಾಯ , ಅನಿರೀಕ್ಷಿತ ಘಟನೆ ; ಮಿಡ್‌ವೈಫ್ – ಸೂಲಗಿತ್ತಿ , ನರ್ಸ್ , ಆರೋಗ್ಯ ಸಹಾಯಕಿ ; ಎಕ – ಚಪ್ಪಲಿ ; ನಾಳಾಕೆ – ನಾಳೆಗೆ ; ಮೊರ ಕಾಳು , ರಾಗಿ ಮೊದಲಾದ ಧಾನ್ಯಗಳನ್ನು ಹಸನು ಮಾಡಲು ಬಳಸುವ ಸಾಧನ ; ಪುಡಿಗಂಟು – ಚಿಲ್ಲರೆ ಹಣ ; ತೊಂಟೆ – ಕಫ ; ಸರೋತ್ತು – ಮಧ್ಯರಾತ್ರಿ : ಗಿರವಿ – ಅಡ ( ಒತ್ತೆ ) ಇಡುವುದು ; ಮಂತೆ – ಮತ್ತೆ .
1st PUC Kannada Gandhi Lesson Notes Question Answer
I . ಒಂದು ವಾಕ್ಯದಲ್ಲಿ ಉತ್ತರಿಸಿ .
ವೈದ್ಯಾಧಿಕಾರಿ ಇಲ್ಲಿಯವರೆಗೆ ಕಾಕತಾಳೀಯ ನ್ಯಾಯವನ್ನು ಅವನು ಕಂಡಿರಲಿಲ್ಲ .
ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರು ನರಸಿಂಹಮೂರ್ತಿ ,
ಮೊಮ್ಮಗನ ಅಗಲವಾದ ಕಿವಿಗಳ ಕಂಡ ಕರಿಸಿದ್ದೇಗೌಡ ಜೋಯಿಸರ ಮನೆಗೆ ಹೋದನು
ವೈದ್ಯಾಧಿಕಾರಿಯ ಜ್ಞಾಪಕಕ್ಕೆ ಬಂದದ್ದು ಇತರ ವ್ಯಕ್ತಿಗಳು ತನ್ನಂತೆ ಮನುಷ್ಯ ವರ್ಗಕ್ಕೆ ಸೇರಿದವರು ಅಂತಲೋ ಅಥವಾ ವೈದ್ಯಾರಾಗಬೇಕಾದವರಿಗೆ ಅನುಕಂಪದಿಂದ ಕೂಡಿದ ಹೃದಯ ಇರಬೇಕು ಎಂಬುದು .
ಹುಡುಗನಿಗೆ ಮಹಾತ್ಮಗಾಂಧಿ ಎಂಬ ಹೆಸರಿನ್ನು ಇಟ್ಟವರು ಅವರ ತಾತ ಕರಿಸಿದ್ದೇಗೌಡ
ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೌಡನಿಗೆ ಹಣ 250 ರೂ ಸಿಕ್ಕಿತು .
ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಡಿಸ್ಟ್ರಿಕ್ಟ್ ಆಸ್ಪತ್ರೆಗೆ ಸೇರಿಸಬೇಕೆಂದು ವೈದ್ಯಾಧಿಕಾರಿಗಳು ಸೂಚಿಸಿದರು .
II ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1st PUC Gandhi Lesson Question answer
1. ಹುಡುಗನ ಯಾವ ಮಾತಿಗೆ ವೈದ್ಯಾಧಿಕಾರಿ ಬೆಪ್ಪಾಗಿ ಹೋದನು ?
ಹುಡುಗನ ಕಿವಿ ಗಾಂಧೀಜಿಯವ ಕಿವಿಯಂತೆ ಇದ್ದವು , ಅಷ್ಟೆ ಅಲ್ಲದೆ ಆ ಹುಡುಗನ ಹೆಸರು ಕೂಡ ಮಹಾತ್ಮ ಗಾಂಧೀ ಎಂದು ಕೇಳಿ ಹಾಗೂ ಈ ರೀತಿ ಕಾಕತಾಳೀಯವನ್ನು ಕಂಡು ಅಪರೂಪ ಈ ಘಟನೆಯಿಂದಾಗಿ ಹಾಗೂ ಆ ಹುಡುಗನು ಧೈರ್ಯವಾಗಿ , ದೃಢ , ನಿಲುವಿನಿಂದ ನುಡಿದು – ನನ್ನ ಹೆಸರು ನಿಜವಾಗಲೂ ಮಹಾತ್ಮಾಗಾಂದೀ ಎಂಬ ಮಾತನ್ನು ಕೇಳಿ ವೈದ್ಯಾಧಿಕಾರಿ ಬೆಪ್ಪಾಗಿ ಹೋದನು .
2. ವೈದ್ಯಾಧಿಕಾರಿ ಹುಡುಗನನ್ನು ನೋಡಿ ಏನೆಂದು ಕುಚೇಷ್ಟೆ ಮಾಡಿದನು ?
ವೈದ್ಯಾಧಿಕಾರಿ , ಹುಡುಗನನ್ನು ನೋಡಿ , ‘ ವಸಿ ಏನೋ ಚೆನ್ನಾಗಿ ನೋಡೋ , ನಿನ್ನ ಹೊಟ್ಟೆ ದಪ್ಪ ಕೈಕಾಲು ಸಣ್ಣ ಕಿವಿಗಳು ಮಾತ್ರ ಗಾಂಧಿ ಕವಿಗಳು ಇದ್ಯಾಗಿದೆಯಪ್ಪಾ ‘ ಎಂದು ಕುಚೇಷ್ಟೆ ಮಡಿದನು .
3. ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು ?
ಸುಮಾರು ಎತ್ತರ , ನರಪೇತಲ , ಅಗಲ ಕಿವಿಗಳ ಹೊಟ್ಟೆ ಡುಬ್ಬಣ , ಅವನ ಮುಖದಲ್ಲಿ ಅವ್ಯಕ್ತ ನೋವಿನ ರೋಷ ಅವನ ಮುಖದ ಮೇಲೆ ಆವರಸಿದ ಹುಡುಗನೊಬ್ಬ ವೈದ್ಯಾಧಿಕಾರಿಗೆ ಅಪರೂಪದ ವ್ಯಕ್ತಿಯಂತೆ ಕಂಡನು .
4. ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡಿದ್ದು ಹೇಗೆ ?
ನಿಂಗಮ್ಮನ ಗಂಡ ಆ ಊರಿನ ಸಾಹುಕಾರನ ಬಳಿ ಕೆಲಸಕ್ಕೆ ಇದ್ದ . ಮರ ಹತ್ತಿ ಸೇಂದಿ ಇಳಿಸೋ ಕೆಲ್ಸ ಮಾಡುತ್ತಿದ್ದ . ಒಮ್ಮೆ ಸೇಂದಿ ಇಳಿಸೋಕೆ ಮರ ಹತ್ತಿದ್ದ ಮರದಿಂದ ಬಿದ್ದು ಪಕ್ಕನೆ ಅವನ ಪ್ರಾಣ ಹೊಡಲು ಹೋಗಿತ್ತು . ಹೀಗೆ ನಿಂಗಮ್ಮನ ಗಂಡ ಪ್ರಾಣ ಕಳೆದುಕೊಂಡಿದ್ದ .
5. ಗಾಂಧೀ ಎಂಬ ಹುಡುಗನ ಕೊನೆಯ ಆಸೆ ಯಾವುದು ?
“ ತಾನು ಸತ್ತರೆ ತನ್ನನ್ನು ಹಲಸಿನ ಮರದ ಬುಡದಲ್ಲಿ ಮಣ್ಣು ಮಾಡಬೇಕೆಂಬುದು ಗಾಂಧೀ ಎಂಬ ಹುಡುಗನ ಕೊನೆಯ ಆಸೆಯಾಗಿತ್ತು .
4 ಗಾಂಧೀಯನ್ನು ಪರೀಕ್ಷೆ ಮಾಡಲು ವೈದ್ಯರು ನಿಂಗಮ್ಮನಿಗೆ ಹೇಳಿದ ಮಾತುಗಳೇನು ?
ಗಾಂಧೀಯನ್ನು ಪಕೀಕ್ಷೆ ಮಾಡಿದ ವೈದ್ಯರು ನಿಂಗಮ್ಮನಿಗೆ – “ ನಿಮ್ಮ ಹುಡುಗನಿಗೆ ಎಕ್ಸರೇ ಆಗಬೇಕು . ಹೃದಯದ ಪರೀಕ್ಷೆ ಮಾಡಿಬೇಕು . ರಕ್ತ , ಮೂತ್ರ ಪರೀಕ್ಷೆ ಮಾಡಬೇಕು . ಇಲ್ಲಾಗುವ ವಿಷಯವಲ್ಲ ಇದು , ಹೊಟ್ಟೆಯಲ್ಲಿ ನೀರು ಸೇರಿಕೊಂಡಿದೆ . ಇದು ಹೃದಯಕ್ಕೆ ಸಂಬಂಧಿಸಿದ ಖಾಯಿಲೆ . ದೊಡ್ಡಾಸ್ಪತ್ರೆಗೆ ( ಡಿಸ್ಟಿಕ್ಸ್ ಆಸ್ಪತ್ರೆಗೆ ) ಕರೆದುಕೊಂಡು ಹೋಗುವಂತೆ ” ಹೇಳಿದರು .
IV ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
gandhi lesson notes in kannada
3. ಮೊಮ್ಮಗನ ಪ್ರಾಣ ಉಳಿಸಿಕೊಳ್ಳಲು ಕರಿಸಿದ್ದೇಗೌಡ ಪಟ್ಟ ಪಾಡೇನು ?
ಕರಿಸಿದ್ದೇಗೌಡ ದೊಡ್ಡಾಸ್ಪತ್ರೆಗೆ ಮೊಮ್ಮಗನನ್ನು ಕರೆದುಕೊಂಡು ಬಂದನು . ವೈದ್ಯರು ` ಪರೀಕ್ಷೆ ಮಾಡಿ ಆತನಿಗೆ ಹೃದಯ ಹಾಗೂ ಮೂತ್ರಪಿಂಡ ಖಾಯಿಲೆ ಇದೆ ಎಂದಾಗ ಮಕ್ಕಳಂತೆ ಅತ್ತನು . ವೈದ್ಯಾಧಿಕಾರಿಗಳು ಚೌಷದಿ ಬರೆದುಕೊಟ್ಟು ಕಳುಹಿಸಿದಾಗ , ಕರಿಸಿದ್ದೇಗೌಡ ಕೈಮುಗಿದು ನಿಂದಮ್ಮಯ್ಯ , ಇವಗೆ ಮಾಡೋ ಉಪಕಾರ ಈ ಅಪ್ಪನಿಗೆ ಮಾಡಿದ್ದು ಅಂದುಕೊಳ್ಳಿ ‘ ಎಂದು ಗಾಂಧೀಜಿ ಪೋಟೋ ಮುಂದೆ ನಿಂತು ಗೋಳೂ ಎಂದು ಅತ್ತನು , ನಂತರ ಚೌಷಧಿಗಾಗಿ ದುಡ್ಡು ಇಲ್ಲದಿದ್ದಾಗ ಮಗಳ ಮೊಮ್ಮಗಳ ಕಿವಿ ಓಲೆ ಗಿರಿವಿ ಇಡಲು ಪ್ರಯತ್ನಿಸಿದರು ಆಗಲಿಲ್ಲ . ಸಾಲ ಕೇಳಿದರೂ ಕೊಡುವವರಿಲ್ಲ , ಕೊನೆಗೆ ಹಲಸಿನ ಮರವನ್ನು 50 ರೂಪಾಯಿಗೆ ಮರಿ ಹಣ ಒದಗಿಸಿಕೊಂಡು ಬಂದ ಮೊಮ್ಮಗನ ಪ್ರಾಣ ಉಳಿಸಿಕೊಳ್ಳಲು ಎಷ್ಟು ಪಾಡುಪಟ್ಟರು ಸಾಧ್ಯವೇ ಆಗಲಿಲ್ಲ .
1 ವೈದ್ಯಾಧಿಕಾರಿ ಮತ್ತು ಆಸ್ಪತ್ರೆಯ ಸಬ್ಬಂದಿಳು ಗಾಂಧಿಯನ್ನು ನಡೆಸಿಕೊಂಡ ರೀತಿಯನ್ನು ವಿವರಿಸಿ .
ಮೊದಲಿಗೆ ವೈದ್ಯಾಧಿಕಾರಿ ಗಾಂಧೀಯನ್ನು ಕಂಡು ಕುಚೇಷ್ಟೆ ಮಾಡಿದನು . “ ಸತ್ಯವಾಗ್ಲು ತನ್ನ ಹೆಸರು ಗಾಂಧಿ ‘ ಎಂದು ಹೇಳುದ ಮೇಲೆ ಆಸ್ಪತ್ರೆಯ ಸಿಬ್ಬಂದಿಗಳನ್ನೇಲ್ಲಾ ಕರೆಸಿದನು . ವೈದ್ಯಾಧಿಕರಿ ಗಾಂಧೀಜಿ ಪೋಟೋ ತೋರಿಸಿ ಈ ಫೋಟೋ ಯಾರದಯ್ಯ ? ಎಂದು ಕೇಳಿ , ನಂತರ ನಿನ್ನ ಹೆಸರೇನು ? ಎಂದು ಕೇಳಿ ಕಾವಹರಣ ಮಾಡುತ್ತ ಕುಚೇಷ್ಟೆ ಮಾಡುತ್ತಿದ್ದನು . ದೊಡ್ಡಾಸ್ಪತ್ರೆಯಲ್ಲಿಯು ಮಹಾತ್ಮಗಾಂದೀ ಎಂದು ಹೆಸರು ಕೂಗಿ ಆ ಹುಡುಗಿ ಗಾಂಧೀ ಬಂದು ನಿಂತಾಗ ಎಲ್ಲರೂ ಹೋಳ್ ಎಂದು ನಕ್ಕರು . ಹೀಗೆ ವೈದ್ಯಾಧಿಕರಿ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಗಾಂಧಿಯನ್ನು ಅವಮಾನ ಮಾಡುವ ರೀತಿಯಲ್ಲಿ ನಡೆಸಿಕೊಂಡರು .
4. ಗಾಂಧೀ ಎಂಬ ಹುಡುಗನ ಸಾವಿನ ಸಂದರ್ಭವನ್ನು ವಿವರಿಸಿ .
ಗಾಂಧೀಯನು ದೊಡ್ಡಾಸ್ಪತ್ರೆಗೆ ಸೇರಿಸಲಾಗಿತ್ತು . ಮೂವತ್ತು ಜನರು ಇರಬೇಕಾದ ವಾರ್ಡಿನಲ್ಲಿ ಅರವತ್ತು ಜನರಿದ್ದ ಕಡೆ ನೆಲದ ಮೇಲೆ ಹಾಸಿಗೆ ಕೊಟ್ಟು ಹಾಕಿದರು . ಎಕ್ಸರೆ , ತೊಂಟೆ ಪರೀಕ್ಷೆಗಳ ಜೊತೆಗೆ ಚೌಷದೋಪಚಾರವೂ ನಡೆಯ ತೊಡಗಿತು . ಬರೆದು ಕೊಟ್ಟ ಚೌಷಧಿ ತಂದು ಕೊಡುವಲ್ಲಿ ಅವರಲ್ಲಿದ್ದ ಹಣವೆಲ್ಲಾ ಮುಗಿದು ಹೋಯಿತು . ದೊಡ್ಡ ಡಾಕ್ಟರು ಬಂದು ಪರೀಕ್ಷೆ ಮಾಡಿ ಚೌಷಧಿ ಚೀಟಿ ಬರೆದು ಕೊಟ್ಟು ಹೋದರು . ಆದರೆ ಅವರ ಬಳಿ ದುಡ್ಡಿಲ್ಲದಿದ್ದಾಗ ಕಿವಿ ಓಲೆ ಗಿರಿವಿ ಇಡಲು ಪ್ರಯತ್ನಿಸಿದರೂ ಹಣ ಸಿಗಲಿಲ್ಲ . ಎಲ್ಲೂ ಸಾಲವೂ ಸಿಗಲಿಲ್ಲ . ಕೊನೆಗೆ ಹಲಸಿನ ಮರ ಮಾರಿ ಹಣ ತರುವಷ್ಟರಲ್ಲಿ ಎರಡು ದಿನ ಕಳೆದುಹೋಯ್ತು . ಅಷ್ಟರಲ್ಲಿ ಗಾಂಧೀ ಕೊನೆ ಉಸಿರೆಳೆದಿದ್ದನು .
2. ಕರಿಸಿದ್ದೇಗೌಡ ತನ್ನ ಮೊಮ್ಮಗನಿಗೆ ಗಾಂಧೀಯ ಹೆಸರಿಡಲು ಕಾರಣವೇನು ?
ಮಗು ಹುಟ್ಟಿದಾಗ ಗಂಡು ಮಗು , ಅದೆ ಕಿವಿಗಳು ಅಗಲವಾಗಿದ್ದುದನ್ನು ಕಂಡ ತಕ್ಷಣ ಜೋಯಿಸರ ಬಳಿಗೆ ಓಡಿದ , ಜೋಯಿಸರು ಸಮಯದ ಘಳಿಗೆ ಲೆಕ್ಕ ಹಾಕಿ , ಮಗುವಿನ ಕಿವಿ ಅಗಲವಾಗಿರಿವುದರಿಂದ ಹಾಗೂ ಶಿವಪುರಕ್ಕೆ ಬಂದಿದ್ದ ಗಾಂಧೀಯು ದರ್ಶನ ಮಾಡಿದ್ದ ಏಕೈಕ ವ್ಯಕ್ತಿ ಆದ್ದರಿಂದ ಕರಿಸಿದ್ದೇಗೌಡ ತನ್ನ ಮೊಮ್ಮಗನಿಗೆ ‘ ಮಹಾತ್ಮ ಗಾಂಧೀ ‘ ಎಂದು ಹಿಸರಿಟ್ಟರು .
ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ ,
1. ಇದ್ದು ನಾನು ಯಾವ ರಾಜ್ಯ ಆಳಬೇಕು ?
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ | ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧಿ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಈ ವಾಕ್ಯವನ್ನು ಗಾಂಧೀ ತನ್ನ ದೈಹಿಕ ನೋವಿನಿಂದಾಗಿ ನಿರಾಸ ಹೊಂದಿದ್ದು , ಹಿಂತಿರುಗಿ ಊರಿಗೆ ಹೋಗೋಣವೆಂದು ಹೇಳುವ ಸಂದರ್ಭದಲ್ಲಿ ತನ್ನ ತಾಯಿಗೆ ಹೇಳಿದನು .
ವಿವರಣೆ : ಗಾಂಧೀ ತನ್ನೊಳಿದ್ದ ಖಾಯಿಲೆಯಿಂದ ಜಿಗುಪ್ಪೆ ಹೋಂದಿದ್ದು ಈ ಮಾತನ್ನು ಹೇಳಿದನು . ಅಂದರೆ ತಾನು ಬದುಕಿ ಸಾಧಿಸಬೇಕಾದ ಕಾರ್ಯವೇನು ಇಲ್ಲ ಎಂಬ ಅರ್ಥದಲ್ಲಿ ಹೇಳಿದನು .
ವಿಶೇಷತೆ : ಮನುಷ್ಯನಿಗೆ ಮಾನಸಿಕವಾಗಲಿ ದೈಹಿಕವಾಗಿ ಆಗಲಿ ಮುಖ್ಯವಾಗಿ ಬೇಕಾದುದು ಆರೋಗ್ಯಭಾಗ್ಯ , ‘ ಆರೋಗ್ಯಭಾಗ್ಯ ‘ ಇಲ್ಲದಿದ್ದರೆ ಜೀವನದಲ್ಲಿ ಜಿಗುಪ್ಪೆ ತರುವುದು ಗಾಂಧೀ ಮಾತಿನಿಂದ ತಿಳಿದು ಬರುತ್ತದೆ .
1st puc kannada gandhi notes pdf download
2. ಇಲ್ಲಿ ನಿನ್ನ ರಾಗವ ಯಾರು ಕೇಳ್ಯಾರು ?
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ಗಾಂದೀ ‘ ಗದ್ಯಭಾಗದಿಂದ ಆರಿಸಲಾಗಿದ್ದು , ಇದನ್ನು ‘ ಕಣಜ ‘ ಎಂಬ ಕೃತಿ ಆಯ್ದುಕೋಳ್ಳಲಾಗಿದೆ .
ಸಂದರ್ಭ : ಈ ವಾಕ್ಯವನ್ನು ನಿಂಗಮಗಮ ತನ್ನ ಮಗ ಗಾಂಧೀಗೆ ಹೇಳಿದಳು . ಆಸ್ಪತ್ರೆಗೆ ಬಂದು ತುಂಬಾ ಹೊತ್ತಾದರೂ ಯಾರು ಗಮನಿಸದಿದ್ದಾಗ ಗಾಂದೀಗೆ ವಾಪಸ್ ಊರಿಗೆ ಹೋಗೋ ಮಾತಾಡಿದಾಗ ಅವನ ತಾಯಿ ನಿಂಗವ್ವ ಹೇಳಿದಳು .
ವಿವರಣೆ : ಸರ್ಕಾರಿ ಆಸ್ಪತ್ರೆ ಬಡವರಿಗಾಗಿಯೇ ಇದ್ದರೂ , ಈಗಿನ ಅವ್ಯವಸ್ಥಿತ ಸ್ಥಿತಿಯಲ್ಲಿ ಈ ಬಡವರನ್ನೇ ತಿರಸ್ಕಾರದಿಂದ ಕಡೆಗಣಿಸಿರುವುದು ಈ ವಾಕ್ಯದಿಂದ ತಿಳಿದುಬರುತ್ತದೆ
ವಿಶೇಷತೆ : ಗ್ರಾಮ್ಯ ಭಾಷೆಯ ಸೊಗಡು ಕತೆಗೆ ಪುಷ್ಟಿ ತಂದಿದೆ .
3. ‘ ಮೊದಲೇ ತೂರಾಡ್ತಿ ಬಿದ್ದುಗಿದ್ದು ಬುಟ್ಟಿಕನಪ್ಪ ‘ ,
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ ॥ ಬೆಸಗರಹಳ್ಳಿ ರಾಮಣ್ಣನವರು . ರಚಿಸಿರುವ ‘ ಗಾಂಧೀ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ‘ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ .
ಸಂದಭ : ಈ ವಾಕ್ಯವನ್ನು ನಿಂಗವ್ವ ತನ್ನ ಮಗ ಗಾಂದೀಗೆ ಹೇಳುತ್ತಾಳೆ . ಎಷ್ಟೋತ್ತಾದರೂ ಯಾರು ವಿಚಾರಿಸದಿದ್ದಾಗ ನಿಂಗವ್ವನ ಅಸಹಾಯಕತೆಯನ್ನು ತಾನೆ ವೈದ್ಯರನ್ನು ಕಾಣಲು ಹೋದಾಗ ಹೇಳಿದ ಮಾತು .
ವಿವರಣೆ : ಗಾಂಧಿಗೆ ದೈಹಿಕವಾಗಿ ಆರೋಗ್ಯವಿಲ್ಲದೆ ಇದ್ದುದರಿಂದ ಸಾಕಷ್ಟು ಸುಸ್ತಾಗಿದ್ದ , ಮೂರ ಮೈಲಿ ಆಸ್ಪತ್ರೆಗೆ ನಡೆದು ಬಂದದ್ದು ಮತ್ತಷ್ಟು ಆಯಾಸವಾಗಿತ್ತು ವೈದ್ಯತನ್ನು ಕಾಣಲು ಹೋರಟಾಗ ಅವನಿಗೆ ಸರಿಯಗಿ ನಡೆಯಲು ಆಗುತ್ತಿರಲಿಲ್ಲ . ಇದನ್ನು ಕಂಡ ತಾಯಿ ಮಗನ ಬಗ್ಗೆ ಕಾಳಜಿ ತೆಗೆದುಕೊಂಡದ್ದು ಇದರಿಂದ ತಿಳಿಯುತ್ತದೆ .
ವಿಶೇಷತೆ : ತಾಯಿಗರ ಮಗನ ಮೇಲಿದ್ದ ಪ್ರೀತಿ , ವಾತ್ಸಲ್ಯ ಕಂಡು ಬರುತ್ತದೆ . .
4. ಓಹೋ ! ಇವನ ಹೆಸರು ಮದಂತೇಗೌಡ ಅಂತ ಅಲ್ವೆ ?
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧೀ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಡಿಸ್ಟಿಕ್ಸ್ ಆಸ್ಪತ್ರೆಗೆ ಬಂದ ಕರಿಸಿದ್ದೇಗೌಡ ತಾಲ್ಲೂಕು ವೈದ್ಯಾಧಿಕಾರಿ ಬರೆದುಕೊಟ್ಟ ಪತ್ರವನ್ನು ಅಲ್ಲಿನ ಗುಮಾಸ್ತನಿಗೆ ಕೊಟ್ಟಾಗ ಆತ ಪತ್ರ ಓದಿ ಮಹಾತ್ಮಗಾಂಧಿ ಎಂದು ಬರೆದಿರುವ ಬಗ್ಗೆ ಹಾಸ್ಯ ಮಾಡುವಂತೆ ಈ ಮಾತನ್ನು ಹೇಳಿದ್ದಾನೆ .
ವಿವರಣೆ : ಗಾಂಧೀ ಎಂದು ಹೆಸರಿಟ್ಟಿರುವುದು ಎಲ್ಲರಿಗೂ ಆಡಿಕೊಳ್ಳುವಂತಹ ಸಂದರ್ಭ ಸೃಷ್ಟಿಸುತ್ತದೆ ಎಂಬ ಉದಾಹರಣೆ ಇದಾಗಿದೆ .
ವಿಶೇಷತೆ : ವ್ಯಂಗ್ಯಾತ್ಮಕವಾಗಿ ಈ ವಾಕ್ಯ ರಚಿಸಲಾಗಿದೆ .
4. ಲೋ ಹುಡುಗ ಈ ಫೋಟೋ ಯಾರದಯ್ಯ .
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧೀ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ‘ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಆಸ್ಪತ್ರೆಯಲ್ಲಿ ಗಾಂಧೀ ಹುಡುಗನನ್ನು ಕಂಡು ವೈದ್ಯಾಧಿಕಾರಿ ಆ ಹುಡುಗನನ್ನು ಹಂಗಿಸಿ ವ್ಯಂಗ್ಯಾತ್ಮಕವಗಿ ಹೇಳಿದ ಸಂದರ್ಭದಲ್ಲಿ ಈ ಮಾತು ಹೇಳಲಾಗಿದೆ .
ವಿವರಣೆ : ಗಾಂಧೀ ಪೋಟೋವನ್ನು ತೋರಿಸುತ್ತ , ಗಾಂದೀ ಹುಡುಗನನ್ನು ಈ ರೀತಿ ವ್ಯಂಗ್ಯವಾಗಿ ಆಡಿದ ಮಾತು ಇದಾಗಿದೆ .
ವಿಶೇಷತೆ : ವಿದ್ಯಾಂವತರ ಬಾಯಿಂದ ಬರುವ ಅದರಲ್ಲೂ ವೈದ್ಯರ ಬಾಯಿಂದ ಬರುವ ಮಾತು ಅವರ ಗರ್ವವನ್ನು ವ್ಯಕ್ತಪಡಿಸುತ್ತದೆ . ವೈದ್ಯೋ ನಾರಾಯಣೋ ಹರಿಃ ‘ ಎಂಬ ವಾಕ್ಯ ಇಲ್ಲಿ ಮಾಯವಾಗಿದೆ .
5. ಇದನ್ನು ಸಾಕ್ಷಾತ್ ಗಾಂಧಿ ಅಂತ ತಿಳ್ಕೊಂಡು ಬಿಟ್ಟು .
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಡಾ || ಬೆಸಗರಹಳ್ಳಿ ರಾಮಣ್ಣನವರು ರಚಿಸಿರುವ ‘ ಗಾಂಧೀ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಣಜ ‘ ಎಂಬ ಕಥಾಸಂಕಲನದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಈ ಮಾತನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಿಂಗಮ್ಮನಿಗೆ ವ್ಯಂಗ್ಯಾತ್ಮಕವಾಗಿ ಆಕೆಯ ಮಗನ ಹೆಸರು ‘ ಮಹಾತ್ಮಗಾಂಧಿ ‘ ಎಂಬುದನ್ನು ಕೇಳಿ ಹೇಳಿದನು .
ವಿವರಣೆ : ಮಹಾತ್ಮಗಾಂಧಿಯ ಹೆಸರನ್ನು ಕೇಳಿದವರು ಗಾಂದೀ ಹುಡುಗನನ್ನು ವ್ಯಂಗ್ಯವಾಗಿ ಹಂಗಿಸುವುದು ಇಲ್ಲಿ ಕಂಡು ಬರುತ್ತದೆ .
1st PUC Kannada Gandhi Lesson Notes Question Answer Pdf
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Nice
Oooo super ❤️
Website is very very easy and super
Super
Chikkavankalakuntaa
Prakruthi.N