1st PUC Kannada Jyothishya Arthapurnavo Artharahitavo? Notes | ಪ್ರಥಮ ಪಿಯುಸಿ ಕನ್ನಡ ಜ್ಯೋತಿಷ್ಯ-ಅರ್ಥಪೂರ್ಣವೋ ಅರ್ಥರಹಿತವೋ? ನೋಟ್ಸ್

ಪ್ರಥಮ ಪಿ.ಯು.ಸಿ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 1st Puc Jyothishya Arthapurnavo Artharahitavo? Kannada Notes Question Answer Summary Mcq Pdf Download in Kannada Medium Karnataka State Syllabus 2024 Kseeb Solutions For Class 11 Kannada Chapter 3 Notes 1st Puc Kannada 3rd Chapter Notes Pdf jyothishya kannada notes

1st Puc Kannada 3rd Lesson Notes Question Answer

 

ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ನೋಟ್ಸ್

ತರಗತಿ: ಪ್ರಥಮ ಪಿ.ಯು.ಸಿ

ಲೇಖನ – ಲೇಖಕರು ಹೆಸರು: ಡಾ . ಎಚ್ . ನರಸಿಂಹಯ್ಯ

ಗದ್ಯ ಭಾಗದ ಹೆಸರು: ಜ್ಯೋತಿಷ್ಯ- ಅರ್ಥಪೂರ್ಣವೋ ಅರ್ಥರಹಿತವೋ? ನೋಟ್ಸ್

1st P.U.C Kannada Jyotishya-Arthapurnavo Artha Rahitavo Notesಪ್ರಥಮ ಪಿ.ಯು.ಸಿ ಕನ್ನಡ ಜ್ಯೋತಿಷ್ಯ- ಅರ್ಥಪೂರ್ಣವೋ ಅರ್ಥರಹಿತವೋ ನೋಟ್ಸ್.‌
1st PUC Kannada Jyotishya-Arthapurnavo Artha Rahitavo Notes ಪ್ರಥಮ ಪಿಯುಸಿ ಕನ್ನಡ ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ ನೋಟ್ಸ್.‌

ಲೇಖನ – ಲೇಖಕರು : ಡಾ . ಎಚ್ . ನರಸಿಂಹಯ್ಯ ( ೧೯೨೧-೨೦೦೫ )

ಡಾ . ಎಚ್ . ನರಸಿಂಹಯ್ಯರವರು ‘ ಎಚ್ಚೆನ್’ಎಂದೇ ಚಿರಪರಿಚಿತರು . ಗಾಂಧಿವಾದಿ , ವಿಚಾರವಾದಿ , ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದ ಇವರು ಮೂಲತಃ ವಿಜ್ಞಾನ ಕ್ಷೇತ್ರದವರು .

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಹೊಸೂರಿನ ಕಡುಬಡತನದ ಕುಟುಂಬದಲ್ಲಿ ಜನಿಸಿದವರು.ನ್ಯಾಷನಲ್ ವಿದ್ಯಾಸಂಸ್ಥೆಯನ್ನು ಕಟ್ಟಿ ಬೆಳೆಸಿದ ಇವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು .

ಅಧ್ಯಾಪನ ಮತ್ತು ಆಡಳಿತಗಳೆರಡರಲ್ಲೂ ಹೆಸರುಗಳಿಸಿದ್ದರು . ವೈಜ್ಞಾನಿಕ ಮತ್ತು ವೈಚಾರಿಕ ಮನೋಧರ್ಮವನ್ನು ಎತ್ತಿ ಹಿಡಿಯುತ್ತ ಬಂದವರು . “ ತೆರೆದಮನ ” ಇವರ ಪ್ರಬಂಧ ಸಂಕಲನ , ‘ ಹೋರಾಟದ ಹಾದಿ ‘ ಇವರ ಆತ್ಮಕತೆಯಾಗಿದೆ . ಜ್ಯೋತಿಷ್ಯ ವಿಜ್ಞಾನವಾಗಿ ಉಳಿಯಬೇಕಾದರೆ ಆಧಾರ , ಪ್ರಯೋಗ ಮತ್ತು ತರ್ಕಗಳ ಮೂಸೆಯಲ್ಲಿ ಗೆದ್ದು ಬರಬೇಕಾಗುತ್ತದೆ .

ಹಾಗಿಲ್ಲದಿದ್ದರೆ ಅದನ್ನು ವಿಜ್ಞಾನವೆಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ . ಭವಿಷ್ಯದ ಹಿಂದೆ ಬಿದ್ದ ಜನರು ಸುಳ್ಳು ಮಾಹಿತಿಗಳಿಂದ ಮೋಸ ಹೋಗುವುದು ಸರ್ವೇಸಾಮಾನ್ಯವಾಗಿದೆ . ಪ್ರಶ್ನಿಸದೆ ಒಪ್ಪಿಕೊಳ್ಳುವುದು ಸಮಂಜಸವಲ್ಲ . ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳುವುದು ಬಹು ಮುಖ್ಯ ಜ್ಯೋತಿಷ್ಯದ ಹಿಂದೆ ಹೋಗಿ ಬದುಕನ್ನು ಹಾಳು ಮಾಡಿಕೊಳ್ಳದಿರುವುದು ಬುದ್ಧಿವಂತಿಕೆಯ ಲಕ್ಷಣ .

ಪದಕೋಶ :

ಜ್ಯೋತಿಷ್ಯ – ಗ್ರಹನಕ್ಷತ್ರಾದಿಗಳ ಚಲನೆ ; ಸ್ಥಾನ ಇವುಗಳಿಂದ ಉಂಟಾಗುವ ಫಲ ಇತ್ಯಾದಿಗಳನ್ನು ತಿಳಿಸುವ ಶಾಸ್ತ್ರ ಪ್ರಭಾವ – ಪರಿಣಾಮ ; ದಿಗಿಲು – ಭಯ ; ಖಗೋಳಶಾಸ್ತ್ರ ಗ್ರಹನಕ್ಷತ್ರಗಳನ್ನೊಳಗೊಂಡ ಆಕಾಶಮಂಡಲ ; ಅಸಂಗತ ಹೊಂದಾಣಿಕೆಯಾಗದೆ ; ಅಜಗಜಾಂತರ – ಆನೆಗೂ ಆಡಿಗೂ ಇರುವ ಅಂತರ ; ದ್ವಿಪದಿ – ಎರಡು ಸಾಲಿನ ಪದ್ಯ : ತಪಾಸಣೆ – ವಿಚಾರಣೆ ; ಅಸ್ತಿತ್ವ – ಇರುವಿಕೆ .

1st PUC Kannada ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ Notes Question Answer

I. ಒಂದು ವಾಕ್ಯದಲ್ಲಿ ಉತ್ತರಿಸಿ.

1 ಜ್ಯೋತಿಷ್ಯದ ಉಗಮವು ಎಲ್ಲಿ ಕಂಡು ಬರುತ್ತದೆ ?

ಜ್ಯೋತಿಷ್ಯದ ಉಗಮವು ಖಗೋಳ ಶಾಸ್ತ್ರದಲ್ಲಿ ಕಂಡು ಬರುತ್ತದೆ .

ಜಾತಕಗಳನ್ನು ಹೇಗೆ ಬರೆಯಲಾಗುತ್ತದೆ ?

ಜಾತಕಗಳನ್ನು ಜ್ಯೋತಿಷ್ಯದ ಆಧಾರದ ಮೇಲೆ ರಚಿತವಾಗಿರುತ್ತದೆ .

2. ಯಾವುದು ಹಾಸ್ಯಾಸ್ಪದ ಸಂಗತಿ ?

ಮನುಷ್ಯನ ಎಲ್ಲಾ ಗುಣಗಳನ್ನು ಗ್ರಹಗಳಿಗೆ ಆರೋಪಿಸುವುದು ಹಾಸ್ಯಾಸ್ಪದ .

6. ಜ್ಯೋತಿಷ್ಯ ಮುಗ್ಧ ಜನರನ್ನು ಹೇಗೆ ಶೋಷಿಸುತ್ತದೆ ?

ಜ್ಯೋತಿಷ್ಯ ಮುಗ್ಧ ಜನರನ್ನು ಭಯದಲ್ಲಿರಿಸಿ ಅವರ ಸುಲಿಗೆ ಮಾಡುತ್ತ ಶೋಷಿಸುತ್ತದೆ .

ಜ್ಯೋತಿಷಿಗಳ ಭವಿಷ್ಯವಾಣಿ ಓದಲು ಹೇಗಿರುತ್ತದೆ ?

ಜ್ಯೋತಿಷ್ಯಗಳ ಭವಿಷ್ಯವಾಣಿಯು ಓದಲು ತಮಾಷೆಯಾಗಿರುತ್ತದೆ .

5. ಜನ ನಿರಾಶೆ , ಸಮಸ್ಯೆಗಳಲ್ಲಿದ್ದಾಗ ಯಾವುದರ ಮೊರ ಹೋಗುತ್ತಾರೆ ?

ಜನ ನಿರಾಶೆ ಸಮಸ್ಯೆಗಳಲ್ಲಿದ್ದಾಗ ಜ್ಯೋತಿಷಿಗಳ ಮೊರೆ ಹೋಗುತ್ತಾರೆ .

8. ವಾಯು , ಜಲ , ಶಬ್ದ ಮಾಲಿನ್ಯಗಳಿಗಿಂತ ಯಾವುದು ಹೆಚ್ಚು ಅಪಾಯಕಾರಿಯಾದ ಮಾಲಿನ್ಯವಾಗಿರುತ್ತದೆ ?

ವಾಯು , ಜಲ , ಶಬ್ದ ಮಾಲಿನ್ಯಗಳಿಗಿಂತ ಹೆಚ್ಚು ಅಪಾಯಕಾರಿಯಾದುದು ಮೂಢನಂಬಿಕೆಗಳಿಂದ ಉಂಟಾಗುವ ಪರಿಸರ ಮಾಲಿನ್ಯ

7 ಮೂಢನಂಬಿಕೆಗಳಿಂದ ಉಂಟಾಗುವ ಅಪಾಯ ಎಂಥದ್ದು .

ಮೂಢನಂಬಿಕೆಗಳಿಂದ ಉಂಟಾಗುವ ಅಪಾಯ ವಾಯುಮಾಲಿನ್ಯ , ಜಲಮಾಲಿನ್ಯ ಶಬ್ದಮಾಲಿನ್ಯಗಳಿಗಿಂತ ಹೆಚ್ಚು ಅಪಾಯ ಕಾರಿಯಾಗಿದೆ .

1st PUC Kannada Jyothishya Arthapurnavo Artharahitavo Notes Question Answer

III . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1 ಪ್ರಕೃತಿಯ ಘಟನೆಗಳು ಆದಿ ಮಾನವನ ಮನಸ್ಸಿನ ಮೇಲೆ ಉಂಟು ಮಾಡಿದ ಪರಿಣಾಮಗಳೇನು ?

ಪ್ರಕೃತಿಯ ಘಟನೆಗಳು ಆದಿಮಾನವನ ಮನಸ್ಸಿನ ಮೇಲೆ ಭಯ ಬಗ್ಗೆ ಹಾಗೂ ಬಹು ಪಾಲು ನಂಬಿಕೆಗಳನ್ನು ಉಂಟು ಮಾಡಿದವು

2 ಜ್ಯೋತಿಷ್ಯದ ಪ್ರಕಾರ ಗ್ರಹಗಳೆಷ್ಟು ? ಅವುಗಳು ಯಾವುವು ?

ಜ್ಯೋತಿಷ್ಯದ ಪ್ರಕಾರ ಗ್ರಹಗಳು ಒಂಬತ್ತು ಅವುಗಳೆಂದರೆ ಸೂರ್ಯ , ಚಂದ್ರ , ಮಂಗಳ , ಬುಧ , ಗುರು , ಶುಕ್ರ , ಶನಿ , ರಾಹು , ಕೇತು .

3. ರಾಹುಕಾಲ , ಗುಳಿಕಾಲ , ಯಮಗಂಡಕಾಲಗಳ ಬಗ್ಗೆ ಲೇಖಕರ ಅಭಿಪ್ರಾಯವೇನು ?

ಜ್ಯೋತಿಷ್ಯವು ರಾಹುಕಾಲ , ಗುಳಿಕ ಕಾಲ ಮತ್ತು ಯಮಗಂಡಕಾಲ ಈ ಮೂರು ಅಂತಗಳನ್ನು ಅಡಿಪಾಯವಾಗಿ ಹೊಂದಿದೆ . ಆದರೆ ಲೇಖಕರ ಮಾತಿನಲ್ಲಿ ಹೇಳುವುದಾದರೆ ರಾಹು , ಕೇತುಗಳು ಅಸ್ತಿತ್ವದಲ್ಲಿಯೇ ಇಲ್ಲದಿರುವಾಗ ರಾಹುಕಾಲ , ಗುಳಿಕಕಾಲ , ಯಮಗಂಡಕಾಲಗಳಿಗೆ ಸಹಜವಾಗಿಯೇ ಯಾವ ಅರ್ಥವು ಇರವುದಿಲ್ಲ ಇದಕ್ಕೆ ಒಂದು ನಿದರ್ಶನವೆಂದರೆ ಪ್ರತಿದಿನ ಸಂಚರಿಸುವ ಸಾವಿರಾರು ಪರಯಾಣಿಕರು ಬಸ್ಸು ರೈಲು , ಕಾರು , ಬೈಕ್ , ವಿಮಾನ , ಹಡಗು ಹೀಗೆ ಯಾವುದೇ ಅ ಆದರೂ ಸರಿ ಅವುಗಳು ರಾಹುಕಾಲಕ್ಕೆ ಹೊರಟ್ಟಿದ್ದರಿಂದ ಅಪಘಾತವಾಯಿತು . ರಾಹುಕಾಲವನ್ನು ಕಳೆದು ನಂತರ ಪ್ರಯಾಣಿಸಬೇಕು ಎಂಬುದು ಮೂರ್ಖ ತನದ ಪರಮಾವಧಿಯಾದಿತು .

4 ಬುದ್ದನು “ ವಿನಯ ಪೀಟಿಕಾ ” ಗ್ರಂಥದಲ್ಲಿ ಯಾರಿಂದ ದೂರವಿರಬೇಕೆಂದು ಎಚ್ಚರಿಸಿದ್ದಾನೆ ?

ಬುದ್ದನ್ನು “ ವಿನಯ ಪೀಟಿಕಾ ” ಗ್ರಂಥದಲ್ಲಿ ಯಾರು ನಕ್ಷತ್ರಗಳ ಲೆಕ್ಕಾಚಾರದಂತಹ ತಂತ್ರಗಳಿಂದ ಜೀವನ ನಡೆಸುತ್ತಾರೋ ಅವರಿಂದ ದೂರವಿರಬೇಕು ಎಂದು ಎಚ್ಚರಿಸುತ್ತಾನೆ . ನಕ್ಷತ್ರ ವೀಕ್ಷಣೆ ಮತ್ತು ಜ್ಯೋತಿಷ್ಯ ಶಾಸನಗಳ ಆಧಾರದಿಂದ ಶುಭ ಅಥವಾ ಅಶುಭವನ್ನು ತಿಳಿಸುವುದು ಒಳಿತು , ಕೆಡಕುಗಳ ಬಗ್ಗೆ ಭವಿಷ್ಯ ನುಡಿಯುವುದು , ಇಂತಹವುಗಳನ್ನೇಲ್ಲಾ ತ್ಯಜಿಸಬೇಕು ಎಂಬ ಅಭಿಪ್ರಾಯ ಬುದ್ಧನ ಉಪದೇಶಗಳಲ್ಲಿ ಕಂಡು ಬರುತ್ತದೆ .

IV . ಐದು ಆರು ವಾಕ್ಯಗಳಲ್ಲಿ ಉತ್ತರಿಸಿ .

1 ಪ್ರಕೃತಿಯ ಘಟನೆಗಳು ಆದಿಮಾನವ ಮನಸ್ಸಿನ ಮೇಲೆ ಉಂಟು ಮಾಡಿದ ಪರಿಣಾಮಗಳೇನು ?

ಪ್ರಕೃತಿಯ ಘಟನೆಗಳು ಆದಿಮಾನವನ ಮನಸ್ಸಿನ ಮೇಲೆ ಉಂಟು ಮಾಡಿದ ಗುಡುಗುಗಳು ಪರಿಣಾಮಗಳೆಂದರೆ “ ಭಯ ಭಕ್ತಿಯನ್ನು ಉಂಟು ಮಾಡಿದ್ದು ಬಹುವಾಲು ನಂಬಿಕೆಗಳು ಈ ಹಿನ್ನಲೆಯಲ್ಲಿ ರೂಪುಗೊಂಡದ್ದು ಇದಕ್ಕೆ ಕಾರಣ , ಮಿಂಚು ಅವನಿಗೆ ಸಾಕಷ್ಟು ಭಯವನ್ನುಂಟು ಮಾಡಿರಬೇಕು ಮಧ್ಯಾಹ್ನದಲ್ಲಿ ಗ್ರಹಣ ಉಂಟಾದ ಕತ್ತಲು ಆವರಿಸಿದ್ದು ಎಂತಹ ಧೈರ್ಯಶಾಲಿಯಾದ ಮಾನವನಿಗೂ ನಡುಕವನ್ನುಂಟು ಮಾಡಿರಬೇಕು ಭೂ ಕಂಪನವು ಅವನಿಗೆ ಹೆಚ್ಚಿನ ದಿಗಿಲನ್ನು ತಂದಿರಬೇಕು ಕನಸು , ರೋಗ , ಸಾವು ಇವೆಲ್ಲಾ ಅವನಿಗೆ ರಹಸ್ಯಗಳಾಗಿರಬೇಕು , ಪ್ರಕೃತಿಯ ವಣಕೋಪದ ಸಂದರ್ಭದಲ್ಲಿ ಕಾಣುವ ಸಾವಿನ ಸನ್ನಿವೇಶವನ್ನು ವಿಶ್ಲೇಷಿಸಿದಾಗ ಅದು ಮಾರಕ ಪರಿಣಾಮವನ್ನುಂಟು ಮಾಡುವುದು .

2. ಜ್ಯೋತಿಷ್ಯ ಏಕೆ ವಿಜ್ಞಾನವಾಗಿರಲಾರದು ? ವಿವರಿಸಿ .

ಜ್ಯೋತಿಷ್ಯ ವಿಜ್ಞಾನವಾಗಿ ಉಳಿಯಬೇಕಾದರೆ ಆಧಾರ , ಪ್ರಯೋಗ ಮತ್ತು ತರ್ಕಗಳ ವಾಸೆಯಲ್ಲಿ ಗೆದ್ದು ಬರಬೇಕಾಗುತ್ತದೆ . ಹಾಗಿಲ್ಲದಿದ್ದರೆ ಅದನ್ನು ಎಂದು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ . ಉದಾಹರಣೆಗೆ : ಜ್ಯೋತಿಷ್ಯದಲ್ಲಿ ಸೂರ್ಯ , ಚಂದ್ರ , ರಾಹು ಕೇತುವನ್ನು ಗ್ರಹಗಳೆಂದು ಉಲ್ಲೇಖಿಸಲಾಗಿದೆ . ಆದರೆ ವಿಜ್ಞಾನದ ಪ್ರಕಾರ ಸೂರ್ಯ ಒಂದು ನಕ್ಷತ್ರ , ಚಂದ್ರ ಒಂದು ಉಪಗ್ರಹ , ರಾಹು , ಕೇತುಗಳ ಉಲ್ಲೇಖವಂತು ವಿಜ್ಞಾನದಲ್ಲಿ ಇಲ್ಲವೇ ಇಲ್ಲ . ಅಲ್ಲದೆ ವಿಜ್ಞಾನದಲ್ಲಿರಬಹುದಾದ , ಯೂರೇನಸ್ , ನೆಪ್ಸನ್ , ಪ್ಲೋಟೋ ಗ್ರಹಗಳ ಬಗ್ಗೆ ಜ್ಯೋತಿಷ್ಯದಲ್ಲಿ ಯಾವ ಪುರಾವೆಯೂ ಇಲ್ಲ . ಆದ್ದರಿಂದ ‘ ಜ್ಯೋತಿಷ್ಯ ವಿಜ್ಞಾನವಾಗಿರಲಾರದು ‘ ಎಂಬುದನ್ನು ಒಪ್ಪಬಹುದಾಗಿದೆ .

3. ಸ್ವಾಮಿ ವಿವೇಕನಂದರು ಜ್ಯೋತಿಷ್ಯದ ಬಗ್ಗೆ ತಾಳಿರುವ ಅಭಿಪ್ರಾಯವೇನು ?

ಸ್ವಾಮಿ ವಿವೇಕನಂದರು ಜ್ಯೋತಿಷ್ಯದ ಬಗ್ಗೆ ಕಟುವಾದ ಅಭಿಪ್ರಾಯ ಪಡುತ್ತಾರೆ . ನಕ್ಷತ್ರಗಳ ಪ್ರಭಾವ ನನ್ನ ಮೇಲೆ ಆಗುವುದಾದರೆ ಆಗಲಿ , ಅದು ನನ್ನ ಜೀವನದ ಮೇಲೆ ಪ್ರಭಾವ ಬೀರಿದರೆ ಅದಕ್ಕೆ ಯಾವ ಬೆಲೆಯು ಇಲ್ಲ ಜ್ಯೋತಿಷ್ಯ ಮತ್ತಿತ್ತರ ಸಂಗತಿಗಳು ಸಾಮಾನ್ಯವಾಗಿ ದುರ್ಬಲ ಮನಸ್ಸಿನ ಗುರುತುಗಳು , ಇಂತಹುಗಳು ಬದುಕಿನಲ್ಲಿ ಪ್ರಾಮುಖ್ಯತೆ ಪಡೆದುಕೊಂಡ ಕೂಡಲೆ ವೈದ್ಯರನ್ನು ಕಂಡು ಉತ್ತಮ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು ಎಂಬುದು ವಿವೇಕಾನಂದರ ಅಭಿಪ್ರಾಯ .

4 ಶಿಕ್ಷಣದ ಮುಖ್ಯ ಉದ್ದೇಶ ಏನಾಗಬೇಕು ?

ಅಧ್ಯಾಪಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನುಅವ ಬೆಳೆಸುವುದು ಯವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿರಬೇಕು , ಸಮಾಜ ಸುಧಾರಣೆ ಶಿಕ್ಷಣದ ಒಂದು ಉದ್ದೇಶ , ನಮ್ಮ ಶಿಕ್ಷಣ ಅವಿದ್ಯಾವಂತ ಮೂಢ ನಂಬಿಕೆಯುಳ್ಳವರನ್ನು ವಿದ್ಯಾವಂತ ಮೂಢನಂಬಿಕೆಯುಳ್ಳವನನ್ನಾಗಿ ಪರಿವರ್ತಿಸುತ್ತದೆ .

5. ಜ್ಯೋತಿಷ್ಯವು ಅರ್ಥಪೂರ್ಣವೋ ? ಅರ್ಥ ರಹಿತವೋ ವಿಶ್ಲೇಷಿಸಿ .

ಜ್ಯೋತಿಷ್ಯವು ಅರ್ಥಪೂರ್ಣ ಎಂದು ಹೇಳಲು ಸಾಧ್ಯವಿಲ್ಲ . ಇದನ್ನು ಅರ್ಥರಹಿತವೆಂದೇ ಹೇಳಬಹುದು ಇದನ್ನು ಈ ಕೆಲಕಂಡ ನಿದರ್ಶನಗಳು ಸ್ಪಷ್ಟಪಡಿಸುತ್ತವೆ .

* ಜ್ಯೋತಿಷ್ಯದಲ್ಲಿ ಹೇಳಲಾಗಿರುವ ಗ್ರಹಗಳಲ್ಲಿ , ರಾಹು , ಕೇತು , ವಿಜ್ಞಾನದ ಅಸ್ತಿತ್ವದಲ್ಲಿ ಇಲ್ಲವೇ ಇಲ್ಲ . ಮತ್ತೊಂದು ಪ್ರಮುಖ ಅಂಶವೆಂದರೆ ವಿಜ್ಞಾನ ಸಾಕಷ್ಟು ರೀತಿಯಲ್ಲಿ ಪ್ರಮಾಣಿಕರಿಸಿದೆ . ಸೂರ್ಯ ಒಂದು ನಕ್ಷತ್ರವೇ ಹೊರತು , ಗ್ರಹ ಅಲ್ಲ , ಇದೇ ರೀತಿ ಚಂದ್ರ ಉಪಗ್ರಹವೇ ಹೊರತು ಗ್ರಹ ಅಲ್ಲ , ಆದರೆ ಜ್ಯೋತಿಷಿಗಳು ಜ್ಯೋತಿಷ್ಯವನ್ನು ಆಧಾರವಾಗಿರಿಸಿಕೊಂಡು ಗ್ರಹಗಳಾಗಿ ಉಲ್ಲೇಖಿಸಿರುವುದು ಅರ್ಥ ರಹಿತವಾಗಿದೆ .

* ಜ್ಯೋತಿಷ್ಯವು ರಾಹುಕಾಲ , ಗುಳಿಕಕಾಲ ಮತ್ತು ಯಮಗಂಡಕಾಲ ಈ ಮೂರು ಅಂಶಗಳನ್ನು ಅಡಿಪಾಯವಾಗಿ ಹೊಂದಿದೆ , ಈ ಕಾಲುಗಳು ಶುಭ ಕಾರ್ಯಗಳಿಗೆ ನಿಷಿದ್ದ ಎಂಬ ಅಭಿಪ್ರಾಯವನ್ನು ಮಂಡಿಸಿವೆ . ಆದರೆ ಸಾಮಾನ್ಯವಾಗಿ ನಾವು ಯೋಚಿಸಿದಾಗ ದಿನಂಪ್ರತಿ ಬೈಕ್ , ಸೈಕಲ್ , ಕಾರು , ಬಸ್ಸು , ರೈಲು , ವಿಮಾನ ಮಾನವ ಕಾಲ್ನಡಿಗೆ ನಿರಂತರವಾಗಿ ನಡೆದೇ ಇರುತ್ತದೆ , ಈ ಕಾಲಗಳಲ್ಲಿ ಯಾವ ಕಾರ್ಯವೂ ಮಾಡಬಾರದೆಂದಾರೆ ಆ ವಾಹನಗಳ ಸಂಚಾರಗಳನ್ನು ಸ್ಥಗಿತಗೊಳಿಸಬೇಕು ? ಕಾಲಗಳಾಗಲಿ , ಗ್ರಹಗಳ ಸ್ಥಾನಗಳಾಗಲಿ ವಿದ್ಯಾಭ್ಯಾಸ , ಮದುವೆ , ವಿದೇಶ ಪ್ರಯಾಣ , ಅಪಘಾತ , ಸಾವು ಇವುಗಳನ್ನು ನಿರ್ಧರಿಸುತ್ತದೆ ಎಂದು ನಂಬುವುದು ಅರ್ಥ ರಹಿತವಾಗಿರುತ್ತದೆ .

* ಜೀವನದ ಎಲ್ಲವೂ ಪೂರ್ವ ನಿರ್ಧಾರಿತವಾಗುತ್ತದೆಂಬ ವಿಧಿವಾದವನ್ನು ಜ್ಯೋತಿಷ್ಯ ತಿಳಿಸುತ್ತದೆ , ಇದು ಪುರಾತನ ನಂಬಿಕೆ ಹಾಗೂ ತಪ್ಪು ಗ್ರಹಿಕೆಗಳನ್ನು ಹೊಂದಿದೆ . * ಜ್ಯೋತಿಷ್ಯವು ಅರ್ಥ ಪೂರ್ಣವಾಗಿ ಉಳಿಯಬೇಕಾದರೆ ಆಧಾರ , ಪ್ರಯೋಗ ಮತ್ತು ತರ್ಕಗಳಿಂದ ಗೆದ್ದು ಬರಬೇಕಾಗುತ್ತದೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ ,

1. ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ . ಹೆಚ್ . ನರಸಿಂಹಯ್ಯನವರು ಅರ್ಥಪೂರ್ಣವೋ ? ಅರ್ಥರಹಿತವೋ ? ‘ ಎ ೦ ಬ ರಚಿಸಿರುವ ‘ ಜ್ಯೋತಿಷ್ಯ ಗದ್ಯಭಾಗದಿಂದ ಆರಿಸಲಾಗಿದೆ , ಇದನ್ನು “ ತೆರೆದ ಮನ ” ಎಂಬ ಪುಸ್ತಕದಿಂದ ಆರಿಸಲಾಗಿದೆ .

ಸಂದರ್ಭ : ಜ್ಯೋತಿಷಿಗಳು ಹೇಳುವ ಜ್ಯೋತಿಷ್ಯದ ಬಗ್ಗೆ ಹೇಳುವ ಸಂದರ್ಭದಲ್ಲಿ ಲೇಖಕರು ಪಾಠಕರರೊಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ .

ವಿವರಣೆ : ಜ್ಯೋತಿಷಿಗಳು ನಿಖರವಾಗಿ ಜ್ಯೋತಿಷ್ಯವನ್ನು ಹೇಳುವುದಿಲ್ಲ . ಉದಾ : ಈ ವರ್ಷ ಸರ್ಕಾರಿ ಕೆಲಸ ಪ್ರಯತ್ನ ಪಟ್ಟರೆ ಸಿಕ್ಕರೂ ಸಿಗಬಹುದು ಎಂಬ ಜಾಣ್ಮಯ ಭವಿಷ್ಯ ನುಡಿಯುತ್ತಾರೆ , ಸಿಕ್ಕರೆ ನಾನು ಹೇಳಿರಲಿಲ್ಲವೇ ಸಿಗುತ್ತದೆ ಎಂದು , ಎಂಬುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವುದು , ಸಿಗದಿದ್ದಲ್ಲಿ ನಾನು ಹೇಳಿದೆನಲ್ಲಾ ಪ್ರಯತ್ನ ಪಡಬೇಕೆಂದು ತಾವು ಪ್ರಯತ್ನವನ್ನೇ ಪಡಲಿಲ್ಲವೇನೋ ಅದಕ್ಕೆ ಸಿಗಲಿಲ್ಲ ಎಂದು ಹಾರಿಕೆಯ ಉತ್ತರ ಕೊಡುವರು . ಇದನ್ನೆ ಅಡ್ಡಾಗೋಡೆಯ ಮೇಲೆ ದೀಪವಿಟ್ಟಂತೆ ಎಂಬುದನ್ನು ವಿವರಿಸುವರು .

ವಿಶೇಷತೆ : ಒಂದು ಗಾದೆ ಮಾತಿನ ಮೂಲಕ ಬಹಳ ಅಸ್ಪಷ್ಟವಾಗಿ ಜ್ಯೋತಿಷ್ಯ ಹೇಳುವ ರೀತಿ ತೋರಿಸಲಾಗಿದೆ .

2. ಹೊರಡಲು ಜ್ಯೋತಿಷ್ಯದ ಅನುಮತಿಯನ್ನು ಯಾರು ಕೇಳುವುದಿಲ್ಲ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ರಚಿಸಿರುವ ‘ ಜ್ಯೋತಿಷ್ಯ ಡಾ . ಹೆಚ್ . ನರಸಿಂಹಯ್ಯನವರು ಅರ್ಥರಹಿತವೋ ? ‘ ಎಂಬ ಅರ್ಥಪೂರ್ಣವೋ ? ಗದ್ಯಭಾಗದಿಂದ ಆರಿಸಲಾಗಿದೆ , ಇದನ್ನು “ ತೆರೆದ ಮನ ” ಎಂಬ ಪುಸ್ತಕದಿಂದ ಆರಿಸಲಾಗಿದೆ .

ಸಂದರ್ಭ : ನಾವು ಪರತಿದಿನ ಕೆಲಸಕ್ಕಾಗಿ ಹೊರಡುವುದನ್ನಾಗಲಿ ಅಥವಾ ದಿನದ ಕೆಲಕಾರ್ಯ ಮಾಡುವುದಕ್ಕಾಗಲಿ ರಾಹುಕಾಲ , ಗುಳಿಕಾಲ , ಯಮಗಂಡಕಾಲ ಎಂದು ನೋಡುತ್ತಾ ಕುಳಿತುಕೊಳ್ಳಬಾರದು ಎಂದು ಹೇಳುವ ಸಂದರ್ಭದಲ್ಲಿ ಲೇಖಕರು , ಪಾಠಕರಿಗೆ ಈ ಮಾತನ್ನು ಹೇಳುತ್ತಿದ್ದಾರೆ .

ವಿವರಣೆ : ರೈಲು ಹೊರಡುವ ವೇಳೆಯನ್ನು ರೈಲ್ವೆ ಇಲಾಖೆಗೆ ಸಂಬಂಧಿಸಿದವರು ಯಾವಾಗ , ಎಷ್ಟು ಹೊತ್ತಿಗೆ ಹೊರಡಬೇಕು ಎಂಬುದನ್ನು ತೀರ್ಮಾನಿಸಬೇಕಾದವರು ರೈಲ್ವೆ ಇಲಾಖೆಯವರು ಎಂಬುದಾಗಿ ಹೇಳುತ್ತಾ ಈ ವಾಕ್ಯವನ್ನು ಲೇಖಕರು ಹೇಳಿದ್ದಾರೆ .

ವಿಶೇಷತೆ : ಸರಳ ಭಾಷೆಯಲ್ಲಿ ಹೇಳಿದ್ದಾರೆ .

3. ಸಮಾಜದ ಸುಧಾರಣೆ ಶಿಕ್ಷಣದ ಒಂದು ಉದ್ದೇಶ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ . ಹೆಚ್ . ನರಸಿಂಹಯ್ಯನವರು ರಚಿಸಿರುವ ‘ ಜ್ಯೋತಿಷ್ಯ ಅರ್ಥಪೂರ್ಣವೋ ? ಅರ್ಥರಹಿತವೋ ? ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು “ ತೆರೆದ ಮನ ” ಎಂಬ ಪುಸ್ತಕದಿಂದ ಆರಿಸಲಾಗಿದೆ .

ಸಂದರ್ಭ : ಸಮಾಜದ ಸುಧಾರಣೆಗೆ ಅಥವಾ ಸಮಾಜ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದರೆ ಉತ್ತಮವಾದ ವೈಚಾರಿಕ ಪೂರ್ಣ ಶಿಕ್ಷಣವನ್ನು ಶಿಕ್ಷಕರು ಮಕ್ಕಳಿಗೆ ಕೊಡಬೇಕೆಂಬುದರ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ .

ವಿವರಣೆ : ಇಂದಿನ ಮಕ್ಕಳ ಮುಂದಿನ ಪ್ರಜೆಗಳು , ಅವರಲ್ಲಿ ವೈಜ್ಞಾನಿ ಮನೋಭಾವ ಬೆಳೆಸುವುದು ಶಿಕ್ಷಕರ ಕರ್ತವ್ಯ ಆದರೆ ಅದು ಪಾರದರ್ಶಕವಾಗಿರಬೇಕು , ಯಾವುದೇ ವಿಷಯವಾಗಲಿ , ಪ್ರಶ್ನಿಸದೆ , ಪರಿಶೀಲಿಸದೆ ಒಪ್ಪಿಕೊಳ್ಳಬಾರದು , ಇಂಥಹ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯವಿದೆ ಇದರಿಂದ ವಿದ್ಯಾರ್ಥಿಯ ಜೊತೆಗಳಲ್ಲಿ ಮೂಡನಂಬಿಕೆ ಅಂಧಾನಕರಣ ಮೊದಲಾದವುಗಳನ್ನು ಓಡಿಸಿ ಸಮಾಜವನ್ನು ಶಿಕ್ಷಣ ಸುಧಾರಣೆಯತ್ತ ಸಾಗಬಹುದು .

ವಿಶೇಷತೆ : ಶಿಕ್ಷಣದ ಉದ್ದೇಶವನ್ನು ಸರಳ ಭಾಷೆಯಲ್ಲಿ ಲೇಖಕರು ಸ್ಪಷ್ಟವಾಗಿ ಹೇಳಿದ್ದಾರೆ .

4. ಶೇ . 90 ರಷ್ಟು ಹೆಚ್ಚು ಜನರ ಮದುವೆಗಳು ಯಾವುದೇ ಜಾತಕವಿಲ್ಲದೆ ನಡೆಯುತ್ತವೆ . ಡಾ . ಹೆಚ್ . ನರಸಿಂಹಯ್ಯನವರು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ರಚಿಸಿರುವ ‘ ಜ್ಯೋತಿಷ್ಯ ಅರ್ಥಪೂರ್ಣವೋ ? ಅರ್ಥರಹಿತವೋ ? ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ , ಇದನ್ನು “ ತೆರೆದ ಮನ ” ಎಂಬ ಪುಸ್ತಕದಿಂದ ಆರಿಸಲಾಗಿದೆ .

ಸಂದರ್ಭ : ಮದುವೆಯ ಸಂದರ್ಭದಲ್ಲಿ ಜಾತಕಗಳನ್ನು ನೋಡುವ ವಾಡಿಕೆ ಇಂದಿಗೂ ಇದೆ , ಈ ಸಂದರ್ಭದಲ್ಲಿ ಈ ಮೇಲ್ಕಂಡ ವಾಕ್ಯವನ್ನು ಬರೆಯಲಾಗಿದೆ .

ವಿವರಣೆ : ಪ್ರಪಂಚದಲ್ಲಿ ಇತರ ಧರ್ಮಗಳ ಜನರು ಮದುವೆ ವಿಷಯದಲ್ಲಿ ಅಥವಾ ಯಾವುದೇ ಶುಭ ಕಾರ್ಯ ಮಾಡುವಾಗಲೂ ಅನುಕೂಲಕರವಾದ ದಿನಾಂಕವನ್ನು ಗೊತ್ತು ಮಾಡುವರೇ ವಿನ : ಜಾತಕಗಳನ್ನುಕ , ನಕ್ಷತ್ರ ದಿನಗಳನ್ನು ನೋಡಿ ಮಾಡುವುದಿಲ್ಲ ಆದ್ದರಿಂದ ಜಗತ್ತಿನ 90 % ರಷ್ಟು ಜನ ಜಾತಕವನ್ನು ನೋಡಿ ಮದುವೆ ಮಾಡುವುದಿಲ್ಲ ಎಂದು ಬರೆದಿದ್ದಾರೆ .

ವಿಶೇಷತೆ : ಅತಿಯಾದ ಮೂಡನಂಬಿಕೆ ಒಳ್ಳೆಯದಲ್ಲ ಎಂಬ ನೀತಿಯನ್ನುಲೇಖಕರು ಉದಾಹರಣೆಯೊಂದಿಗೆ ಸರಳ ಭಾಷೆಯಲ್ಲಿ ತಿಳಿಸಿ ಕೊಟ್ಟಿದ್ದಾರೆ .

1st PUC Kannada ಜ್ಯೋತಿಷ್ಯ ಅರ್ಥಪೂರ್ಣವೋ ಅರ್ಥರಹಿತವೋ Notes Question Answer Pdf Download

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh