1st PUC kannada Shastri mastara Mattavara makkalu Notes | ಪ್ರಥಮ ಪಿಯುಸಿ ಕನ್ನಡ ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು ನೋಟ್ಸ್

1st PUC kannada Shastri mastara Mattavara makkalu Notes 4th Lesson Question Answer Guide Pdf Download Kseeb Solutions, chapter 4 ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು ನೋಟ್ಸ್2022

ತರಗತಿ: ಪ್ರಥಮ ಪಿ.ಯು.ಸಿ

ಲೇಖನ – ಲೇಖಕರು ಹೆಸರು: ಡಾ . ಚೆನ್ನಣ್ಣ ವಾಲೀಕಾರ

ಗದ್ಯ ಭಾಗದ ಹೆಸರು: ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು

Shastri Mastara Mattavara Makkalu Notes

1st PUC kannada Shaastrimaastara Mattavara makkalu.ಪ್ರಥಮ ಪಿಯುಸಿ ಕನ್ನಡ ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು.
1st PUC kannada Shaastrimaastara Mattavara makkalu.ಪ್ರಥಮ ಪಿಯುಸಿ ಕನ್ನಡ ಶಾಸ್ತ್ರಿಮಾಸ್ತರ ಮತ್ತವರ ಮಕ್ಕಳು.

ಕತೆ – ಕತಗಾರರು : ಡಾ . ಚೆನ್ನಣ್ಣ ವಾಲೀಕಾರ ( ೧೯೪೩ )

ಡಾ.ಚನ್ನಣ್ಣ ವಾಲೀಕಾರ ಚಿತ್ತಾಪುರ ತಾ || ಯಾದಗಿರಿ ಜಿಲ್ಲೆ ಶಂಕರವಾಡೆಯವರು . ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾದ್ಯಾಪಕರಾಗಿ , ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ , ವಿಶ್ರಾಂತ ಜೀವನ ನಡೆಸುತ್ತಿದ್ದಾರೆ , ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ- ಇವರ ಪಿಎಚ್.ಡಿ . ಪ್ರಬಂಧ , ಪ್ಯಾಂಥರ್ ಪದ್ಯಗಳು , ಬಂಡೆದ್ದ ದಲಿತರ ಬೀದಿ ಹಾಡುಗಳು ಮುಂತಾದವು ಕವನ ಸಂಕಲನಗಳು .

ಒಂದು ಹೆಣ್ಣಿನ ಒಳಜಗತ್ತು , ಗ್ರಾಮಭಾರತ ಕಾದಂಬರಿಗಳು , ಜಾನಪದ ಲೋಕ , ಒಂದು ಗ್ರಾಮದ ಜಾನಪದೀಯ ಅಧ್ಯಯನ ಹಾಗು ಕರ್ನಾಟಕ ದೇವದಾಸಿಯರ ಸಮಸ್ಯೆಗಳು- ಸಮಗ್ರ ಅಧ್ಯಯನಗಳು ಸಂಶೋಧನ ಗ್ರಂಥಗಳು . ಗುಲ್ಬರ್ಗಾ ಜಿಲ್ಲೆಯ ತ್ರಿಪದಿಗಳು , ಗುಲ್ಬರ್ಗಾ ಜಿಲ್ಲೆಯ ಮೂಹರಂ ಪದಗಳು ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ .

ಇವರಿಗೆ ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಜಾನಪದ ಅಕಾಡೆಮಿ ಪ್ರಶಸ್ತಿ , ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಲಭಿಸಿವೆ . ಅಖಿಲಭಾರತ ನಾಲ್ಕನೇ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು .

ಅಕ್ಷರದಿಂದ ವಂಚಿತರಾದ ಮಕ್ಕಳಿಗೆ ಅಕ್ಷರ ಕಲಿಸಬೇಕೆಂಬ ಮಹದಾಸೆ ಶಾಸ್ತಿವಾಸ್ತರರದ್ದು , ಮಕ್ಕಳಿಲ್ಲದ ಮಾಸ್ತರರು ನಿರೂಪಕರಿಗೆ ಹೆತ್ತವರ ವಾತ್ಸಲ್ಯ ತೋರಿಸುತ್ತ ಓದಿಸುತ್ತಾರೆ . ತಮಗೆ ಅವಳಿ ಮಕ್ಕಳಾದ ಮೇಲೂ ನಿರೂಪಕರನ್ನು ಬಿಡುವುದಿಲ್ಲ . ಹೆಂಡತಿ ಮಕ್ಕಳ ಸಾವಿನಿಂದ ದುಃಖಿತರಾದ ವಾಸ್ತರರು ಸ್ವಯಂ ನಿವೃತ್ತಿ ಪಡೆಯುತ್ತಾರೆ .

ನಿವೃತ್ತಿಯಿಂದ ಬಂದ ಹಣದಿಂದ ‘ ಬಾಲಕರ ಅನಾಥಾಶ್ರಮ’ವನ್ನು ಆರಂಭಿಸಿ ಅನಾಥ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ . ಎಲ್ಲೋ ಬಿದ್ದ ಕಲ್ಲನ್ನು ಕಡೆದು ದೇಗುಲದೊಳಗಡೆ ‘ ಇಟ್ಟ ಕೀರ್ತಿ ಶಾಸ್ತ್ರಿ ಮಾಸ್ತರರದು , ಇಂತಹ ಎಷ್ಟೋ ಕಲ್ಲುಗಳನ್ನು ಕಡೆದಿದ್ದಾರೆ . ವಾಸ್ತರರಲ್ಲಿರುವ ಆದರ್ಶದ ನಿಲುವು ಅನುಕರಣೀಯ .

ಪದಕೋಶ :

ದಂಧಾ-ಕೆಲಸ , ಉದ್ಯೋಗ : ಚಪರಾಸಿ – ಜವಾನ , ಸೇವಕ : ಜೆಂಡಾ – ಬಾವುಟ ಬೋರ್‌ಹುಳ – ನಗಾರಿಹುಳ , ಜೀರುಂಡೆ , ಕಬ್ಬಡಹುಳು ( ಒಂದು ಜಾತಿಯ ಹುಳು : ಪಾಟಿ – ಬರೆಯುವ ಕಪ್ಪುಹಲಗೆ , ಪ್ಲೇಟು : ಕುಳ್ಳು – ಬೆರಣ ‘ : ಕುಣಿ – ಗುಂಡಿ ; ನಳ ನಲ್ಲಿ : ಬಂಬು – ಸೈರನ್ ( ಕಾರ್ಖಾನೆಯಲ್ಲಿ ಸಮಯ ಸೂಚಿಸಲು ಬಳಸುವ ಯಂತ್ರ )

1st PUC kannada Shastri mastara Mattavara makkalu Notes Question Answer

I . ಒಂದು ವಾಕ್ಯದಲ್ಲಿ ಉತ್ತರಿಸಿ .

1. ಗಾಡಿ ಶಹಾಬಾದಿಗೆ ಬಂದಾಗ ಸಮಯ ಎಷ್ಟಾಗಿತ್ತು ?

ಗಾಡಿ ಶಹಬಾದಿಗೆ ಬಂದಾಗ ಒಂದು ಗಂಟೆ ಆಗಿತ್ತು .

2. ಸೇಂಗಾ ಮಾರುವವನ ದಿನದ ಸಂಪಾದನೆ ಎಷ್ಟು ?

ಸೇಂಗಾ ಮಾರುವವನ ದಿನದ ಸಂಪಾದನೆ ಐವತ್ತು – ಅರವತ್ತು ರೂಪಾಯಿಗಳು .

3. ಮಾಸ್ತರರ ಮಕ್ಕಳ ಸಾವು ಹೇಗಾಯಿತು ?

ಮಾಸ್ತರರ ಮಕ್ಕಳು ಶಾಲೆಯಿಂದ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ಲಾರಿಯೊಂದು ಮಕ್ಕಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದರು .

4. ಶಾಸ್ತ್ರಿ ಮಾಸ್ತರರ ಹೆಂಡತಿಯ ಹೆಸರೇನು ?

ಶಾಸ್ತ್ರಿ ವಾಸ್ತರರ ಹೆಂಡತಿಯ ಹೆಸರು ಅಂಬವ್ವ.

5. ಮಾಸ್ತರರಿಗೆ ಇನ್ನು ಎಷ್ಟು ವರ್ಷ ಸೇವೆ ಇತ್ತು ?

ಮಾಸ್ತರರಿಗೆ ಇನ್ನು ಹತ್ತು ವರ್ಷಗಳ ಸೇವೆ ಇತ್ತು .

6. ನಿರೂಪಕರನ್ನು ರೂಪಿಸಿದ ಶಿಲ್ಪಿ ಯಾರು ?

ನಿರೂಪಕರನ್ನು ರೂಪಿಸಿದ ಶಿಲ್ಪಿ ಶಾಸ್ತ್ರಿ ಶಾಲಾ ಮಾಸ್ತರು .

7. ಮಾಸ್ತರರ ಮನೆಯ ಮುಂದೆ ಬರೆಸಿ ಹಾಕಿದ ಬೋರ್ಡ್ ಯಾವುದು ?

ವಾಸ್ತರರ ಮನೆಯ ಮುಂದೆ “ ಅನಾಥ ಬಾಲಕರಾಶ್ರಮ ” ಎಂಬ ಬೋರ್ಡನ್ನು ಬರೆಸಿ ಹಾಕಿದ್ದಾರೆ .

II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ ,

1. ನಿರೂಪಕರ ಓರೆ ಕೋರೆಗಳನ್ನು ತಿದ್ದಿದ ಗುರುಗಳು ಯಾರಾರು ?

“ ಸೂತಿ , ಲಾಲ , ಶೆಟ್ಟಿ , ದೇಶಪಾಂಡೆ ಮುಂತಾದ ಗುರುಗಳು .

2. ನಿರೂಪಕರ ತಂದೆ ಅವರನ್ನು ಯಾರು ಯಾರಿಂದ ಅಗಲಿಸಿ ಊರಿಗೆ ಕರೆತಂದರು ?

ನಿರೂಪಕರ ತಂದೆ , ನಿರೂಪಕರನ್ನು ಅವರ ಪ್ರೀತಿಯ ದನಗಳನ್ನು , ಗೆಳೆಯರನ್ನು , ಹಂಪಲು , ಅವರು ಪ್ರೀತಿಸಿದ ಹೊಳೆ , ಹಳ್ಳ , ಗಿಡಮರ , ಬೆಟ್ಟ – ಗುಡ್ಡ , ಹಣ್ಣು ಬೋರುಳಗಳಿಂದ ಅಗಲಿಸಿ ಊರಿಗೆ ಕರೆ ತಂದರು .

3.ಪ್ರೈಮರಿ ಶಾಲೆ ಸೇರಿದಾಗ ನಿರೂಪಕರನ್ನು ಅಂಬವ್ವ ಹೇಗೆ ನೋಡಿಕೊಳ್ಳುತ್ತಿದ್ದರು ?

ಅಂಬವ್ವ ನಿರೂಪಕರಿಗೆ ಸಂಜೆ ಮತ್ತು ಮುಂಜಾನೆ ಸಿಹಿ ತಿಂಡಿ ತಿನಿಸುಗಳನ್ನು ಮಾಡಿದ ಅಡಿಗೆಯನ್ನೇ ತಿನ್ನಿಸುತ್ತ ಉಣ್ಣಿಸುತ್ತಿದ್ದರು ಇದಲ್ಲದೆ ಹೋಟಲ್‌ನಲ್ಲಿ ಹೊಟ್ಟೆ ತುಂಬ ತಿನ್ನಿಸುತ್ತಿದ್ದರು , ಶಹಾಬಾದಿನ ಸಂತೆಗೆ ಹೋದಾಗ ಕರೆದುಕೊಂಡು ಹೋಗುತ್ತಿದ್ದರು . ಸಿನಿಮಾ ತೋರಿಸಿದ್ದರು . ಓದಲು ಬರೆಯಲು ಒತ್ತಾಯ ಮಾಡುತ್ತಿರಲಿಲ್ಲ .

4. ತಾವು ಓದಿದ ಹೈಸ್ಕೂಲ್ ನೆನಪು ಬಂದಾಗ ನಿರೂಪಕರಿಗೆ ಏನೆನಿಸಿತು ?

ತಾವು ಓದಿದ ಹೈಸ್ಕೂಲ್ ನೆನಪು ಬಂದಾಗ ನಿರೂಪಕರು ತಮ್ಮನ್ನು ತಾವು ಮರೆತು ಅಂದಿನ ದಿನಗಳನ್ನು ಸ್ಮರಿಸತೊಡಗಿದರು . ತಾನು ಎಂಟನೇ ವರ್ಗದಲ್ಲಿದ್ದಾಗ ಭಾಷಣ , ಲೇಖನ , ಭಾವಗೀತೆ ಸ್ಪರ್ಧೆಗಳಲ್ಲಿ ಬಹುಮಾನ ಪಡೆದದ್ದು , ಆಗ ತಮ್ಮ ಶಾಲೆಗೆ ಬಂದ ಹಾಸ್ಯ ಋಷಿ ಬೀಚಿ , ಪ್ರಕೃತಿ ಕವಿ ಕಾವ್ಯಾನಂದ , ಜಾನಪದ ಗಾರುಡಿಗ ಬೇಂದ್ರೆ ಕಾವ್ಯ ಮತ್ತು ಜೀವನ ತರಂಗಗಳನ್ನೆನಿಸಿದುದು ನೆನಪಾಯಿತು . ತನ್ನನ್ನು ಒಬ್ಬ ಸುಂದರ ಮೂರ್ತಿಯನ್ನಾಗಿಸಿದ ಶಾಸ್ತ್ರಿ ಮಾಸ್ತರರ ನೆನಪು ಆಯಿತು .

5. ಮಾಸ್ತರರು ಬಾಡಿಗೆ ಮನೆಯನ್ನು ಹೇಗೆ ಖರೀದಿಸಿದ್ದರು ?

ಮಾಸ್ತರರು ಬಾಡಿಗೆ ಮನೆಯನ್ನು ಸ್ವಂತಕ್ಕೆ ಖರೀದಿಸಿ ಅಲ್ಲಿ ಅನಾಥ ಬಾಲಕರಾಶ್ರಮ ಎಂದು ಬೋರ್ಡು ಬರೆಸಿ ಮನೆಮುಂದೆ ಹಾಕಿಸಿದರು , ಶಾಲೆ ಓದಲು ಬರುವ ನಿರ್ಗತಿಕ , ಬಡವ ಅನಾಥ ಮಕ್ಕಳಿಗೆ ಸೇರಿಸಿಕೊಂಡು ಅವರ ಊಟ , ವಸತಿ , ಬಟ್ಟೆ , ಪಾಟಿ ಪುಸ್ತಕಗಳ ಖರ್ಚು ನೋಡಿಕೊಂಡು ತಮ್ಮ ಹೆಂಡತಿ ಮಕ್ಕಳ ಸಾವಿನ ನೋವನ್ನು ಮರೆಯತೊಡಗಿದರು .

6. ಮಾಸ್ತರರ ಮಕ್ಕಳ ಶವ ಯಾತ್ರೆಗೆ ಜನ ಹೇಗೆ ಬಂದಿತ್ತು ?

ಮಾಸ್ತರರ ಮಕ್ಕಳ ಶವಯಾತ್ರೆಗೆ ಶಾಲೆಗೆ ಶಾಲೆ , ಬಜಾರಿಗೆ ಬಜಾರೆ , ಊರಿಗೆ ಊರೇ ಆಸ್ಪತ್ರೆಯ ಬಳಿ ಓಡಿ ಬಂದಿತ್ತು . ಇದು ಶವಯಾತ್ರೆಯಾಗಿರದೆ , ದೇವರ ಜಾತ್ರೆಗೆ ಜನ ಸೇರಿದಂತೆ ಕಾಣುತ್ತಿತ್ತು .

7. ಅವಳಿ ಮಕ್ಕಳ ಸಾವಿನ ನಂತರ ಮಾಸ್ತರರ ಮತ್ತು ಅಬಂವ್ವನ ಸ್ಥಿತಿ ಏನಾಯಿತು ?

ಮಾಸ್ತರರ ಮಕ್ಕಳ ಸಾವಿನ ನಂತರ ಅಂಬವ್ವ ಈ ಆಘಾತವನ್ನು ತಡೆಯಲಾರದೆ ಮೂರ್ಛಿ ಹೋದವಳು ಮೇಲೆ ಏಳಲೇ ಇಲ್ಲ . ಆಕೆಯು ಅಲ್ಲಿಯೇ ಕೊನೆ ಉಸಿರೆಳೆದಳು . ವಾಸ್ತರರು ಹುಚ್ಚಾಗಿ ಹೋಗಿದ್ದರು ಮೇಲೆ ಮುಗಿಲು ಹರಿದು ಬಿದ್ದಂತೆ ಸಿಡಿಲು ಬಡಿದಂತೆ ಅವರ ಸ್ಥಿತಿಯಾಗಿತ್ತು .

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಮಾಸ್ತರರು ಮತ್ತು ಅಂಬವ್ವರ ಪ್ರೀತಿ ಕಡಲಲ್ಲಿ ಕತೆಗಾರರ ಬಾಲ್ಯ ಹೇಗೆ ಕಳೆಯಿತು ?

ಅಂಬವ್ವ ದಿನ ಸಂಜೆ , ಮುಂಜಾನೆ ಸಿಹಿತಿಂಡಿ , ಅಡಿಗೆ ಮಾಡಿ ತಿನ್ನಿಸುತ್ತಿದ್ದರು . ಹೋಟಲ್‌ಗೆ ಕರೆದೊಯ್ಯುವುದು , ಶಹಾಬಾದಿನ ಸಂತೆಗೆ ಕರೆದುಕೊಂಡು ಬರುತ್ತಿದ್ದರು . ಮಾಸ್ತರರು ವಾರಕ್ಕೊಮ್ಮೆ ಸಿನಿಮಾಕ್ಕೆ ಕರೆದುಕೊಂಡು ಬರುತ್ತಿದ್ದರು . ಆದರೆ ಅವರಿಗೆ ಓದಲು ಬರೆಯಲು ಎಂದು ಹೇಳುತ್ತಿರಲಿಲ್ಲ ಪ್ರೀತಿಯಿಂದ ಒಮ್ಮೆ ಹೇಳಿದರು . ನಂತರ ಕತೆಗಾರರು ಅವರ ಪ್ರೀತಿಯಲ್ಲಿ ಕರಗಿ ಮನೆಯಲ್ಲಿ ಹಿರಿಯಮಗನಾಗಿ ಬೆಳೆಯುತ್ತಾ ನಮ್ಮ ಬಾಲ್ಯವನ್ನು ಕಳೆದರು .

2. ನಿರೂಪಕರ ಬಯಲು ಶಾಲೆಯ ಅನುಭವ ಮತ್ತು ನಂತರ ಶಾಲೆಯ ಅನುಭವಗಳು ಹೇಗಿದ್ದವು ?

ನಿರೂಪಕರು , ಪ್ರತಿನಿತ್ಯ ಟೊಂಕಕ್ಕೆ ರೊಟ್ಟಿ ಬುತ್ತಿ ಕಟ್ಟಿ ಕೊಂಡು ಹಳ್ಳ , ಹೊಳೆ , ಕೆರೆ ಬಾವಿ , ಗಿಡ ಮರ , ಬಳ್ಳಿ , ಬೆಟ್ಟ ಗುಡ್ಡ , ಹಣ್ಣು ಹಂಪಲುಗಳ ಮದ್ಯ ಬೋರುಳ ಹಿಡಿಯುತ್ತ , ಪೀಪಿ ಊದುತ್ತ ಕೃಷ್ಣನಂತೆ ಹುಡುಗಿಯರ ಜೊತೆ ಕಣ್ಣಾ ಮುಚ್ಚಾಲೆ ಬಳಿಚಕಾರಾಟಾ , ಕೋಲರುಗುಳ್ಳಿ ಲೋಡ , ಲೋಡ ತಿಮ್ಮಯ್ಯ ಆಟ ಆಡುವುದೆಂದರೆ ಎಲ್ಲಿಲ್ಲದ ಹಿಗ್ಗು , ದನಗಳನ್ನು ಮೇಯಲು ಎಲ್ಲೊ ಬಿಟ್ಟು ಎಲ್ಲೋ ಆಡುತ್ತ , ಸಂಜೆ ಆದಾಗ ಹಾಡುತ್ತಾ ಕುಣಿಯುತ್ತ ಮನೆಗೆ ದನವಾಗಿ , ಪಕ್ಷಿಯಾಗಿ ಬರುವುದೊಂದು ಅವರ ಪಾಲಿಗೆ ನಿತ್ಯ ಹಬ್ಬವಾಗಿರುತ್ತಿತ್ತು . ತಂದೆ ಇವರನ್ನು ಹೊಡೆದು ಶಾಲೆಗೆ ಹಾಕಿದಾಗ ಬಯಲು ಶಾಲೆಯಲ್ಲಿದ್ದವರಿಗೆ ನಾಲ್ಕು ಗೋಡೆಗಳ ಕೋಟೆ ಬಂಧನವಾಗಿ ಅವರನ್ನು ಬಂಧನದಲ್ಲಿ ಬಂಧಿಸಿ ಇಡಿಸಿದಂತಾಗಿತ್ತು . ಯಾರು ಎಷ್ಟೇ ಹೇಳಿದರು ಮೂರಾಲ್ಕು ತಿಂಗಳು ಪಾಟಿಯ ಮೇಲೆ ಒಂದಕ್ಷರ ಬರೆಯಲಿಲ್ಲ ಸದಾ ಬಯಲು ಶಾಲೆಯ ಬಳಗವನ್ನೇ ನೆನೆಯುತ್ತಾ ಕುಳಿತಿದ್ದರು .

3. ಅವಳಿ ಮಕ್ಕಳ ಸಾವು ಮಾಸ್ತರರ ಬದುಕನ್ನೇ ಬದಲಾಯಿಸಿದ್ದು ಹೇಗೆ ? ವಿವರಿಸಿ .

ಆ ಮಾಸ್ತರರ ಅವಳಿ ಮಕ್ಕಳ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದಾಗ ಅಂಬವ್ವ ಕೂಡ ದು : ಖ ತಡೆಯಲಾಗದೆ ಆಕೆಯು ಸಾವನ್ನಪ್ಪಿದರು . ಇವರನ್ನೆಲ್ಲಾ ಕಳೆದುಕೊಂಡ ಮಾಸ್ತರರು ಹುಚ್ಚರಾಗಿ , ಆರು ತಿಂಗಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದರು . ನಂತರ ನಿವೃತ್ತಿ ಪಡೆದು , ಹೆಂಡತಿ ಮಕ್ಕಳ ಜೀವವಿಮೆ ಹಾಗೂ ಎಲ್ಲವನ್ನು ತೆಗೆದುಕೊಂಡು ತಾವಿದ್ದ ಬಾಡಿಗೆ ಮನೆಯನ್ನು ಖರೀದಿಸಿ ಬಾಲಕರಾಶ್ರಮವನ್ನು ಸ್ಥಾಪಿಸಿದರು .

4. ಬದಲಾದ ಶಹಾಬಾದನ್ನು ಲೇಖಕರು ಹೇಗೆ ನಿರೂಪಿಸಿದ್ದಾರೆ ?

ಶಹಬಾದ್ ಹಿಂದಿಗಿಂತ ಸಾಕಷ್ಟು ಬದಲಾಗಿತ್ತು ಕಂಪನಿಗಳು ತಲೆ ಎತ್ತಿದ್ದವು . ಎಸಿಸಿ ಸಿಮೆಂಟ್ ಕಂಪನಿ ಹಾಗೂ ಎ.ಬಿ.ಎಲ್ . ಕಂಪನಿಗಳು ನೂರಾರು ಜನರಿಗೆ ಉದ್ಯೋಗ ಒದಗಿಸಿತ್ತು . ಊರಿನ ನಾಲ್ಕು ದಿಕ್ಕಿಗೂ ಊರು ಒಂದೊಂದು ಮೈಲಿನವರೆಗೆ ಬೆಳೆದಿತ್ತು . ಸಿನಿಮಾ ಮಂದಿರ ಟಾಕೀಸ್ ಹಾಕಿತ್ತು . ತರಕಾರಿ ಮಂಡಿ ಬಜಾರ ( ಮಾರುಕಟ್ಟೆ ಆಗಿತ್ತು . ಒಟ್ಟಾರೆ ಶಹಾಬಾದ್ ಈಗ ಸಾಕಷ್ಟು ಬೆಳೆದು ಅಭಿವೃದ್ಧಿ ಹೊಂದಿತ್ತು .

5. ಶಾಸ್ತ್ರಿ ಮಾಸ್ತರರ ವ್ಯಕ್ತಿತ್ವವನ್ನು ನಿರೂಪಿಸಿ ,

ಶಾಸ್ತ್ರಿ ಮಾಸ್ತರರ ಒಬ್ಬ ಒಳ್ಳೆಯ ವ್ಯಕ್ತಿತ್ವವುಳ್ಳ ಆದರ್ಶ ವ್ಯಕ್ತಿ . ಅವರು ಅಂಬವ್ವನಿಗೆ ಒಳ್ಳೆಯ ಪತಿಯಾಗಿದ್ದರು . ಶಾಲೆಗೆ ಬರಲೊಪ್ಪದ ನಿರೂಪಕರನ್ನು ಮನವಲಿಸಿ ಮಕ್ಕಳಿಲ್ಲದ ಅವರನ್ನು ತಮ್ಮ ಮಗನಂತೆಯೇ ಮನೆಯಲ್ಲಿರಿಸಿಕೊಂಡು ಪ್ರೀತಿ ವಾತ್ಸಲ್ಯಗಳ ಧಾರೆ ಎರೆದರು , ಇದರಿಂದಾಗಿ ಬಯಲು ಶಾಲೆ ಮರೆತು ನಿರೂಪಕರು ಶಾಸ್ತ್ರಿ ಮಾಸ್ತರರ ಒಳ್ಳೆಯ ಶಿಷ್ಯನಾದುದು ಮಾತ್ರವಲ್ಲದೆ ಹಿರಿಯಮಗನಾಗಿ ಅವರ ಮನೆಯಲ್ಲಿಯೇ ಬೆಳೆದರು ಶಾಸ್ತ್ರಿ ವಾಸ್ತರರು . ಅವಳಿ ಮಕ್ಕಳ ತಂದೆಯಾದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ . ಮೂರು ಮಕ್ಕಳ ತಂದೆಯಾಗಿ ಒಬ್ಬ ಆದರ್ಶ ತಂದೆ ಎನಿಸಿಕೊಂಡಿದ್ದರು . ಅಪಘಾತದಲ್ಲಿ ಮಕ್ಕಳನ್ನು ಆ ಆಘಾತದಲ್ಲಿ ಹೆಂಡತಿಯನ್ನು ಕಳೆದುಕೊಂಡರೂ ನಿರೂಪಕರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಿ , ನಂತರ ಅನಾಥ ಬಾಲಕರಾಶ್ರಮವನ್ನು ಸ್ಥಾಪಿಸಿ ಸೇವಾ ಧಾರುಣಿದಾರರು ತಮ್ಮ ದು : ಖವನ್ನು ಆ ಮಕ್ಕಳಲ್ಲಿ ಮರೆತರು ಎಪ್ಪತ್ತರ ವಯಸ್ಸಿನಲ್ಲಿಯೂ , ನಿರೂಪಕರನ್ನು ಮರೆಯಲಿಲ್ಲ . ನಿರೂಪಕರು ಬಂದಾಗ ನನ್ನ ಹಿರಿಯ ಮಗ ಬಂದೆ ಎಂದು ಆತನನ್ನು ಬಾಚಿ ತಬ್ಬಿ ತಮ್ಮ ಪ್ರೀತಿ ವಾತ್ಸಲ್ಯವನ್ನು ವ್ಯಕ್ತಪಡಿಸಿದರು . ಶಾಸ್ತ್ರಿ ವಾಸ್ತರರು ಬಹುಮುಖ ವ್ಯಕ್ತಿತ್ವವುಳ್ಳ ಸೇವಾದುರಿಣ ಆದರ್ಶ ವ್ಯಕ್ತಿಯಾಗಿದ್ದರು .

6. ಅನಾಥ ಬಾಲಕರಾಶ್ರಮವನ್ನು ಶಾಸ್ತ್ರಿ ಮಾಸ್ತರರು ಹೇಗೆ ಪ್ರಾರಂಭಿಸಿದರು ? ಅದರ ಉದ್ದೇಶವೇನು ?

ಹೆಂಡತಿ ಮಕ್ಕಳು ಸತ್ತ ಮೇಲೆ ಅವರ ಜೀವವಿಮೆ ಹಣವನ್ನು ಪಡೆದು ನಂತರ ತಾವು ನಿವೃತ್ತಿ ಪಡೆದು ಹಣ ಸೇರಿಸಿ ತಾವಿದ್ದ ಬಾಡಿಗೆ ಮನೆಯನ್ನು ಸ್ವಂತಕ್ಕೆ ಖರೀದಿಸಿದದು , ನಿರ್ಗತಿಕರು , ಶಾಲೆಗೆ ಹೋಗುವ ಬಡ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಉಚಿತವಾಗಿ ಊಟ ವಸತಿ , ಬಟ್ಟೆ , ಪುಸ್ತಕ , ಎಲ್ಲವನ್ನು ಕೊಡಿಸಿ ಅವರ ಎಲ್ಲಾ ಖರ್ಚನ್ನು ವಹಿಸಿಕೊಂಡು ಹೆಂಡತಿ ಮಕ್ಕಳ ಸಾವನ್ನು ಮರೆಯತೊಡಗಿದರು .

ಅಭ್ಯಾಸ

ಸಂದರ್ಭ ಸೂಚಿಸಿ ವಿವರಿಸಿ .

1. ನಾನು ಗಡಬಡಿಸಿ ಎದ್ದು ಗಾಡಿ ಹತ್ತಿದೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಚೆನ್ನಣ್ಣ ವಾಲೀಕಾರರವರು ರಚಿಸಿರುವ “ ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ: ಶಹಬಾದಿಗೆ ಹೊರಟ ಲೇಖಕರು ರೈಲ್ವೆನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ಕುಳಿತಿದ್ದಾಗ ಬಾಲ್ಯಸ್ನೇಹಿತ ಕಡಲೆಕಾಯಿ ಮಾರುವವನ ಜೊತೆ ಮಾತನಾಡುತ್ತಿದ್ದಾಗ ರೈಲು ಬಂದ ಸಂದರ್ಭವನ್ನು ಇಲ್ಲಿ ತಿಳಿಸಿಲಾಗಿದೆ .

ವಿವರಣೆ : ಮತಿನಲ್ಲಿ ಮಗ್ನರಾಗಿದ್ದ ಅವರಿಗೆ ರೈಲುಗಾಡಿ ಬಂದ ತಕ್ಷಣ ಗಡಬಡಿಸಿ ಎದ್ದರು .

ವಿಶೇಷತೆ : ಸರಳ ಭಾಷೆಯಲ್ಲಿ ದಿನ ನಿತ್ಯದ ಅನುಭವ ಇಲ್ಲಿ ನಮೂದಿಸಲಾಗಿದೆ .

2. ನಾನು ಸಮ್ಮೋಹನಕ್ಕೊಳಗಾದೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚೆನ್ನಣ್ಣ ವಾಲೀಕಾರರವರು ರಚಿಸಿರುವ “ ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ಲೇಖಕರು ಶಹಾಬಾದಿಗೆ ಅರ್ಧರಾತ್ರಿಯಲ್ಲಿ ಬಂದು ಮಳೆ ಸುರಿಯುವುದು ನಿಂತ ನಂತರ ತಾನು ಓದಿದ ಹಳೆಯ ಶಾಲೆಗೆ ಬಂದು ವಿಶ್ರಾಂತಿ ಪಡೆಯಲು ತಂಗಿದಾಗ , ಅಲ್ಲಿನ ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಲೇಖಕರು ತಮ್ಮ ಅನುಭವದ ಮಾತನ್ನು ಇಲ್ಲಿ ಹೇಳಿದ್ದಾರೆ .

ವಿವರಣೆ : “ ಶಾಲೆಯ ವಾತಾವರಣದ ಆಕರ್ಷಣೆಗೆ ನಾನು ಒಳಗಾದೆ ” ಎಂಬುದು ಈ ವಾಕ್ಯದ ಅರ್ಥ

ವಿಶೇಷತೆ : ಸರಳ ಭಾಷೆಯಲ್ಲಿ ತಮ್ಮ ಅನುಭವವನ್ನು ಲೇಖಕರು ಹಂಚಿಕೊಂಡಿದ್ದಾರೆ .

3. ನಮ್ಮ ಪಾಲಿಗೆ ನಿತ್ಯ ಹಬ್ಬವಾಗಿರುತ್ತಿತ್ತು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಚೆನ್ನಣ್ಣ ವಾಲೀಕಾರರವರು ರಚಿಸಿರುವ “ ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅಕ್ಕನೂರಿನಲ್ಲಿ ಲೇಖಕರು ತಮ್ಮ ಬಾಲ್ಯದ ದಿನಗಳಲ್ಲಿ ದನಕಾಯಲು ಹೋಗುತ್ತಿದ್ದ ಸಂದರ್ಭವನ್ನು ಇಲ್ಲಿ ಸಮರಿಸುತ್ತಾ ವಿವರಿಸಿದ್ದಾರೆ .

ವಿವರಣೆ : ದನಗಳನ್ನು ಮೇಯಲು ಬಿಟ್ಟು ಎಲ್ಲರೂ ಕೆಲವೊತ್ತು ಆಡುತ್ತಾ ಹಾಡುತ್ತಾ ಕಾಲಕಳೆಯುತ್ತಿದ್ದುದು ಆ ಮಕ್ಕಳ ಪಾಲಿಗೆ ನಿತ್ಯ ಹಬ್ಬವಾಗಿರುತ್ತಿತ್ತು .

ವಿಶೇಷತೆ : ಬಾಲ್ಯದ ಸವಿನೆನಪು ಸರಳ ಭಾಷೆಯಲ್ಲಿ ತಿಳಿಸಲಾಗಿದೆ .

4. ನೆನಪುಗಳು ಮಳೆಯಂತೆ ಸುರಿಯತೊಡಗಿದವು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚೆನ್ನಣ್ಣ ವಾಲೀಕಾರರವರು ರಚಿಸಿರುವ “ ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ಶಾಹಾಬಾದಿನ ಶಾಲೆಯಲ್ಲಿ ಗಂತಿದ್ದ ಲೇಖಕರು ನೆನಪಿಸಿಕೊಂಡ ಪ್ರಸಂಗವನ್ನು ಇಲ್ಲಿ ಸ್ಮರಿಸಲಾಗಿದೆ .

ವಿವರಣೆ : ಮಳೇಗಾಲದಲ್ಲಿ ದೋ ದೋ ಎಂದು ಸುರಿಯುವ ಮಳೆಯಂತೆ ಲೇಖಕರಿಗೆ ಶಾಸ್ತ್ರಿ ಮಾಸ್ತರರ ನೆನಪುಗಳು ಬಹಳವಾಗಿ ಕಾಡತೊಡಗಿದವು .

ವಿಶೇಷತೆ : ಸರಳ ಭಾಷೆಯಲ್ಲಿ ಅಲಂಕಾರಿಕವಾಗಿ ಇಲ್ಲಿ ವಿವರಿಸಿದ್ದಾರೆ .

5. ನಾಲ್ಕು ಗೋಡೆಗಳ ಕೋಟೆ ಬಂಧನದಲ್ಲಿ ಬಂಧಿಸಿದರು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚೆನ್ನಣ್ಣ ವಾಲೀಕಾರರವರು ರಚಿಸಿರುವ “ ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ದನಕಾಯುವ ಹುಡುಗರ ಜೊತೆ ಸ್ವಚಂದವಾಗಿ ಹಾಗೆ ಅಡಿ ನಲಿಯುತ್ತಿದ್ದವರಿಗೆ ಶಾಲೆಗೆ ಕರೆದೊಯ್ದು ಸೇರಿಸಿದಾಗ ಲೇಖಕರು ತಮಗಾದ ಅನುಭವನ್ನು ಈ ರೀತಿ ಸ್ಪಷ್ಟಪಡಿಸುತ್ತಿದ್ದಾರೆ .

ವಿವರಣೆ : ಶಾಲೆಯೊಳಗೆ ನಾಲ್ಕು ಗೋಡೆಗಳ ಮದ್ಯದಲ್ಲಿ ಕೂರಿಸಿ ಅಕ್ಷರಭ್ಯಾಸ ಮಾಡಿಸುತ್ತಿದ್ದುದು ಅವರಿಗೆ ಇಷ್ಟವಾಗುತ್ತಿರಲಿಲ್ಲ , ಆದ್ದರಿಂದ ಬಂಧನದಲ್ಲಿ ಬಂಧಿಸಿದಂತೆ ಅವರಿಗೆ ಅನುಭವವಾಗುತ್ತಿತ್ತು .

ವಿಶೇಷತೆ : ಚಿಕ್ಕ ಮಕ್ಕಳ ಬಾಲ ಮನೋವಿಜ್ಞಾನವನ್ನು ಇಲ್ಲಿ ಚಿತ್ರಿಸಲಾಗಿದೆ .

6. ಅಲ್ಲಿ ಅಳದವರೆ ಪಾಪಿಗಳಾಗಿದ್ದರು .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಚೆನ್ನಣ್ಣ ವಾಲೀಕಾರರವರು ರಚಿಸಿರುವ ಪ್ರಥಮ “ ಶಾಸ್ತ್ರಿ ಮಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ರಸ್ತೆ ಅಪಘಾತದಲ್ಲಿ ಒಟ್ಟಿಗೆ ಇಬ್ಬರು ಮಕ್ಕಳನ್ನು ಕಳೆದುಕೊಂಡ ಅಂಬವ್ವ ಆ ಆಘಾತದಿಂದ ತಾನು ಪ್ರಾಣ ತ್ಯಜಿಸಿದ್ದಳು , ಒಟ್ಟಿಗೆ ಮೂರು ಶವಗಳನ್ನು ಕಂಡ ಜನರು ದುಃಖಪಟ್ಟ ಸಂದರ್ಭ ಇಲ್ಲಿದೆ .

ವಿವರಣೆ : ಅಂಬವ್ವ ಹಾಗೂ ಇಬ್ಬರು ಪುಟ್ಟ ಬಾಲಕರ ಶವಗಳನ್ನು ಕಂಡ ಜನರು ದುಃಖದಲ್ಲಿ ಮುಳುಗಿದ್ದರು ಎಂಬುದು ಇದರ ಬಾವಾರ್ಥ ,

ವಿಶೇಷತೆ : “ ಸಾವು ‘ ಎಂಥಹವರನ್ನು ದು : ಖದಲ್ಲಿ ಮುಳುಗಿಸುತ್ತದೆ ಎಂಬ ಸಂಶಯವನ್ನು ಲೇಖಕರು ಇಲ್ಲಿ ವ್ಯಕ್ತಪಡಿಸಿದ್ದಾರೆ .

7. ನನ್ನ ಹಿರೀ ಮಗ ಬಂದ ನನ್ನ ಹಿರಿಮಗ ಬಂದ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಚೆನ್ನಣ್ಣ ವಾಲೀಕಾರರವರು ರಚಿಸಿರುವ “ ಶಾಸ್ತ್ರಿ ವಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ಶಾಹಾಬಾದನ “ ಅನಾಥ ಬಾಲಕರ ಆಶ್ರಮಕ್ಕೆ ಬಂದ ಲೇಖಕರನ್ನು ಕಂಡು ವಾಸ್ತರರು ಅದೆಷ್ಟು ಸಂತೋಷ ಪಟ್ಟರೆಂಬುದನ್ನು ಲೇಖಕರು ಇಲ್ಲಿ ಸ್ಪಷ್ಟಪಡಿಸಿದರು . ”

ವಿವರಣೆ : ಶಾಸ್ತ್ರಿಮಾಸ್ತರು ಲೇಖಕರನ್ನು ತಮ್ಮ ಸ್ವಂತ ಮಗನಂತೆ ಪ್ರೀತಿಯಿಂದ ನೋಡಿಕೊಂಡಿದ್ದರು , ಲೇಖಕರು ಅವರ ಮನೆಯಲ್ಲಿ ಹಿರಿಯ ಮಗನಂತೆ ಬೆಳೆದರು . ಅಂಬವ್ವ ಹಾಗೂ ಮಕ್ಕಳು ಸತ್ತ ಮೇಲೆ ಮಾಸ್ತರರು ತಾವಿದ್ದ ಬಾಡಿಗೆ ಮನೆಯನ್ನು ಕೊಂಡು ಅನಾಥಾಶ್ರಮವನ್ನಾಗಿ ಮಾಡಿದರು . ಅಲ್ಲಿಗೆ ಬಂದ ಲೇಖಕರನ್ನು ಕಂಡು ಶಾಸ್ತ್ರಿ ಮಾಸ್ತರರು ಇವರನ್ನು ಕಂಡು ಸಂತೋಷದಿಂದ ತಬ್ಬಿಕೊಂಡು ತನ್ನ ಹಿರೀ ಮಗ ಬಂದೆ ಎಂದು ಕೂಗಿ ಕೂಗಿ ಹೇಳಿದರು .

ವಿಶೇಷತೆ : ಶಾಲಾ ವಾಸ್ತರರು ಲೇಖಕರ ಬಗ್ಗೆ ಇಟ್ಟಿದ ಅಪಾರ ಪ್ರೀತಿ ಇಲ್ಲಿ ವ್ಯಕ್ತವಾಗಿದೆ .

8. ಅಕ್ಷರ ಮಳೆ ಧಾರಾಕಾರವಾಗಿ ಸುರಿಯತೊಡಗಿತು . ಡಾ ಚೆನ್ನಣ್ಣ ವಾಲೀಕಾರರವರು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ರಚಿಸಿರುವ “ ಶಾಸ್ತಿ ಮಾಸ್ತರ ಮತ್ತವರ ಮಕ್ಕಳು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು ಲೇಖಕರು ತಮಗೆ ನಾಲ್ಕು ಗೋಡೆಗಳ ಮಧ್ಯೆ ಕುಳಿತ ಕಲಿಯುವಲ್ಲಿ ತಮಗೆ ಆಸಕ್ತಿ ಇರಲಿಲ್ಲವೆಂದು ನಿಂತ ತಾವು ಕಲಿತ ರೀತಿಯನ್ನು ಈ ಮದ್ಯದಲ್ಲಿ ವಿವರಿಸುವ ಸಂದರ್ಭದಲ್ಲಿ ಬರೆಯಲಾಗಿದೆ .

ವಿವರಣೆ : ನಾಲ್ಕಾರು ತಿಂಗಳು ತಿನ್ನುವುದು , ಕುಳಿತುಕೊಳ್ಳುವುದು ಮಾಡುತ್ತಿದ್ದ ಲೇಖಕರು ಅಂಬಕ್ಕ ಹಾಗೂ ಮಾಸ್ತರರ ಪ್ರೀತಿಯಲ್ಲಿ ಕರಗಿ ಅಕ್ಷರವೆಂಬುದು ಕಲಿಯಲು ಪ್ರಾರಂಬಿಸಿದರು , ಎಂಬುದು ಈ ವಾಕ್ಯದ ಅರ್ಥ .

ವಿಶೇಷತೆ : ಅಕ್ಷರ ಕಲಿಕೆಯು ಮಳೆಯ ರೂಪದಲ್ಲಿ ನಿರರ್ಗಳವಾಗಿ ಸಾಗುತ್ತಿತ್ತು ಎಂಬ ಹೋಲಿಕೆಯೊಂದಿಗೆ ವಿವರಿಸಿದ್ದಾರೆ .

1st PUC kannada Shastri mastara Mattavara makkalu Notes Question Answer Pdf

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 1PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh