ಪ್ರಥಮ ಪಿ.ಯು.ಸಿ ಬುದ್ಧ ಬಿಸಿಲೂರಿನವನು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Buddha Bisilurinavanu Kannada Notes Question Answer Summary Mcq Pdf Download in Kannada Medim Karnataka State Syllabus 2024, Kseeb Solutions For Class 11 Kannada Chapter 5 Notes 1st Puc Kannada 5th Lesson Notes Buddha Bisilurinavanu Summary in Kannada Buddha Bisilurinavanu Notes in Kannada
1st Puc Kannada 5th Chapter Notes Pdf Download
ತರಗತಿ: ಪ್ರಥಮ ಪಿ.ಯು.ಸಿ
ಲೇಖನ – ಲೇಖಕರು ಹೆಸರು : ನಾಗತಿಹಳ್ಳಿ ಚಂದ್ರಶೇಖರ್
ಗದ್ಯ ಭಾಗದ ಹೆಸರು: ಬುದ್ಧ ಬಿಸಿಲೂರಿನವನು
ಪ್ರವಾಸ ಕಥನ ಲೇಖಕರು : ನಾಗತಿಹಳ್ಳಿ ಚಂದ್ರಶೇಖರ್ ( ೧೯೫೮ )
ನಾಗತಿಹಳ್ಳಿ ಚಂದ್ರಶೇಖರ್ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿದರು . ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ .
ಬಹುಮುಖಿ ವ್ಯಕ್ತಿತ್ವದ ಇವರು ಸಾಹಿತ್ಯ , ರಂಗಭೂಮಿ , ಪ್ರವಾಸ , ಚಲನಚಿತ್ರ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ . ಚಲನಚಿತ್ರಗಳಿಗಾಗಿ ರಾಷ್ಟ್ರಪ್ರಶಸ್ತಿ , ರಾಜ್ಯಪ್ರಶಸ್ತಿ ಮತ್ತು ಫಿಲ್ಡ್‌ಫೇರ್ ಪ್ರಶಸ್ತಿಗಳು ಲಭಿಸಿವೆ . ‘ ನಾಗತಿಹಳ್ಳಿ ಸಂಸ್ಕೃತಿ ಹಬ್ಬ’ದ ಪರಿಕಲ್ಪನೆಯ ಮೂಲಕ ತಮ್ಮ ಹುಟ್ಟೂರನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದ್ದಾರೆ .
ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂವತ್ತೊಂದು ಸಾಹಿತ್ಯ ಕೃತಿಗಳು ಪ್ರಕಟವಾಗಿವೆ . ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ . ವಲಸೆ ಹಕ್ಕಿಯ ಹಾಡು ಅವರ ಪ್ರಮುಖ ಕಾದಂಬರಿ.
ಮೂವತ್ತಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿ : ಅನೇಕ ಪ್ರವಾಸ ಕಥನಗಳನ್ನು ರಚಿಸಿದ್ದಾರೆ . ಅಯನ , ನನ್ನ ಗ್ರಹಿಕೆಯ ಈಜಿಪ್ಟ್ , ದಕ್ಷಿಣ ಧ್ರುವದಿಂ ಮತ್ತು ನನ್ನ ಗ್ರಹಿಕೆಯು ನೇಪಾಳ ಇವರ ಪ್ರಮುಖ ಪ್ರವಾಸಕಥನಗಳು .
ಗೌತಮ ಬುದ್ಧ ಜನಿಸಿದ ನೆಲೆ ಅವನ ವಿಚಾರಗಳನ್ನು ನಂಬಿ ಪಾಲಿಸುವವರ ಪಾಲಿಗೆ ದಿವ್ಯ ಸನ್ನಿಧಿ , ‘ ಲುಂಬಿನಿ ‘ ಬುದ್ಧನ ಜನ್ಮಸ್ಥಳವೆಂಬ ಕಾರಣದಿಂದ ರೋಮಾಂಚನ ನೀಡುವಂತದ್ದು . ಭಾವನೆ , ಸಂವೇದನೆ , ಭಾವಸ್ಪಂದನೆಗಳಿಂದ ಕೂಡಿದ ಸಂವಹನವೊಂದು ಪ್ರವಾಸಿಗರ ಅನುಭವಕ್ಕೆ ಬರುತ್ತದೆ .
ಲೇಖಕರು : ಬುದ್ಧನ ಜನ್ಮಸ್ಥಳ ಲುಂಬಿನಿಗೆ ಹೋದಾಗಿನ ಅನುಭವಗಳನ್ನು ನಿರೂಪಿಸಿದ್ದಾರೆ . ನಿರ್ಮಲವಾದ ತೆರೆದ ಮನಸ್ಸಿನ ಸ್ವಾರಸ್ಯಗಳನ್ನು , ಬೆರಗು , ವಿಸ್ಮಯ , ಉತ್ತೇಕ್ಷೆಗಳಿಗೆ ಹೊರತಾದ ಚಿಕಿತ್ಸಕ ಜೀವನದೃಷ್ಟಿಯ ಆಪ್ತಶೈಲಿಯನ್ನು ಇಲ್ಲಿ ಕಾಣಬಹುದು .
ಪದಕೋಶ :
ದಾರುಣ – ಬೀಕರ : ದಹಿಸು – ಸುಡು : ಪ್ರಖರ – ತೀಕ್ಷ್ಣ , ಬೆಳಗು : ಉತ್ಕರ್ಷ – ಮೇಲೆ ಅಭಿವೃದ್ಧಿ : ಪುಳಕ- ರೋಮಾಂಜನ ; ಮೂರ್ತ – ಗೋಚರಿಸುವ ; ಉಚಿತ ಯೋಗ್ಯ : ಪ್ರತೀತಿ – ನಂಬಿಕೆ : ತಾಕಲಾಟ – ಘರ್ಷಣೆ : ತಪ್ತ- ನೊಂದ : ಗವಾಕ್ಷಿ- ಬೆಳಕಿಂಡಿ ಭಕ್ಷೀಸು – ಇನಾಮು , ಬಹುಮಾನ ; ಸ್ಪೋಪಜ್ಞತೆ – ಸ್ವಂತಿಕೆ .
I . ಒಂದು ವಾಕ್ಯದಲ್ಲಿ ಉತ್ತರಿಸಿ
ನೇಪಾಳದ ವಿಮಾನಗಳು , ಮೆಟಡಾರ್ ವ್ಯಾನಿಗೆ ಎರಡು ರೆಕ್ಕೆಗಳು ಜೋಡಿಸಿದ ಹಾಗೆ ಕಾಣುತ್ತದೆ .
ಗೌತಮ ಜಿನಿಸಿದ್ದು ಲುಂಬುನಿಯಲ್ಲಿ .
ಮಾಯಾದೇವಿ ದೇವಾಲಯ ಶ್ವೇತ ವರ್ಣದಿಂದ ಶುಭಪರಿಸರದಲ್ಲಿ ಚೌಕಾಕಾರದಲ್ಲಿತ್ತು .
ಬುದ್ಧನಿಗೆ ಜ್ಞಾನೋದಯವಾದ ವೈಶಾಖ ಶುದ್ಧ ಪೂರ್ಣಿಮೆಯಂದು .
ಚೀನಿ ಯಾತ್ರಿಕ ಹೂಯೆನ್‌ತ್ಸಾಂಗ್‌ನ ಪ್ರವಾಸಾನುಭವದಲ್ಲಿ ಲುಂಬಿನಿಯ ಬಗೆಗೆ ವಿವರಗಳಿಗೆ .
ಮಾಯಾದೇವಿಯ ದೇವಾಲಯದ ಹೊರವಾತಾವರಣದ ಹತ್ತಿರವಿರುವ ಪುಷ್ಕರಿಣಿಯ ಉತ್ತರ ಬದಿಯಲ್ಲಿ ಅಶೋಕ ಸ್ಥಂಭವಿದೆ .
ಅರಮನೆಯ ಗಾರ್ಡು ಲೇಖಕರನ್ನು “ ಕಾಫಿಗೇನಾದ್ರು ಕೊಡಿ ” ಎಂದು ಕೇಳಿದನು .
ಲೇಖಕರ ಮನಸ್ಸಿನಲ್ಲಿ ಗಾಢವಾಗಿ ಅಷ್ಟೊತ್ತಿದ್ದು ಗೌತಮ ಇಲ್ಲದ ಅರಮನೆ ಮತ್ತು ನಾವೇ ಕಟ್ಟಿಕೊಂಡ ಕಲ್ಪನೆಯ ಅರಮನೆ ಮಾತ್ರ .
ಕಪಿಲ ವಸ್ತುವಿನ ಇಂದಿನ ಹೆಸರು ಲಾರ್‌ಕೋಟ್ .
II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಗೌತಮನ ಮನಲೋಕವನ್ನು ನಿರಂತರವಾಗಿ ದಹಿಸಿದ ಪ್ರಶ್ನೆಗಳು ಯಾವುವು ?
ಗೌತಮನ ಮನಲೋಕವನ್ನು ನಿರಂತರವಾಗಿ ದಹಿಸಿದ ಪ್ರಶ್ನೆಗಳೆಂದರೆ “ ಬದುಕು ಎಂದರೇನು ? ” ಅದರ ಉದ್ದೇಶವೇನು ? ರೋಗ , ಮುಪ್ಪು , ಮರಣಗಳನ್ನು ಗೆಲ್ಲುವುದು ಸಾಧ್ಯವೇ ? ಮನುಷ್ಯನ ಸಂಕಟಗಳ ಮೂಲ ಯಾವುದು ? ಈ ಎಲ್ಲಾ ಪ್ರಶ್ನೆಗಳು ಅವನನ್ನು ಕಾಡುತ್ತಿದ್ದವು .
2. ನೇಪಾಳದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ ?
ನೇಪಾಳದ ವೈಮಾನಿಕ ವ್ಯವಸ್ಥೆ ಭಾರತಕ್ಕೆ ಅನುಕರಣೀಯವಾಗಿದೆ . ಪರ್ವತಗಳ ನಾಡಿನಲ್ಲಿ ರಸ್ತೆಗಳ ಮೂಲಕ ಊರಿಂದ ಊರಿಗೆ ಹೋಗಲು ಹೆಚ್ಚು ಸಮಯ ಬೇಕು . ಆದ್ದರಿಂದ ನೇಪಾಳ ಸರ್ಕಾರ ಪುಟ್ಟ ಊರುಗಳಿಗೆಲಕ ಪುಟ್ಟ ವಿಮಾನ ನಿಲ್ದಾಣ ನಿರ್ಮಿಸಿ , ಸುಮಾರು 25 ಜನ ಪ್ರಯಾಣಿಕರನ್ನು ಕೊಂಡೊಯ್ಯುವ ವಿಮಾನಗಳನ್ನು ಹಾರಲು ಬಿಟ್ಟಿದೆ . ಹಳೆಯ ಮೆಟಡೋರ್ ವ್ಯಾನಿಗೆ ಎರಡು ರೆಕ್ಕೆ ಜೋಡಿಸಿದರೆ ಹೇಗಿರುತ್ತದೆಯೋ ಅದೇ ರೀತಿ ವಿಮಾನಗಳಿವೆ . ನೇಪಾಳದಂತಹ ಪುಟ್ಟ ದೇಶದಲ್ಲಿ ಸುಮಾರು 30 ಕ್ಕೂ ಹೆಚ್ಚು ವಿಮಾನ ಸಂಪರ್ಕಗಳಿವೆ . ವಿಮಾನ ದರ ಕೂಡ ಶ್ರೀ ಸಾಮಾನ್ಯನ ಕೈಗೆಟುಕುವಂಥಹುದ್ದು . ಗಂಟೆಗೊಮ್ಮೆ ಟ್ಯಾಕ್ಸಿಗಳಂತೆ ಸಂಚರಿಸುವ ಇವು , ವಾರವೊಂದರಲ್ಲಿ ಹಿಮಗಿರಿಯ ಮೇಲೆ ಹಾರಿ ಇಡೀ ನೇಪಾಳವನ್ನು ದರ್ಶನ ಮಾಡಿಸುತ್ತದೆ .
3. ಮಹಾನ್ ವ್ಯಕ್ತಿಗಳ ದರ್ಶನ ಅರ್ಥವಾಗುವುದು ಹೇಗೆ ?
ಮಹಾನ್ ವ್ಯಕ್ತಿಗಳ ದರ್ಶನವನ್ನು ಆಶಯವನ್ನು ಅವರ ಕೃತಿಗಳಿಂದಲೇ ಅರ್ಥ ಮಾಡಿಕೊಳ್ಳಬಹುದು ಆದರೆ ನೋಡುವುದರಿಂದ ನಮ್ಮ ಅನುಭವಕ್ಕೆ ಹೊಸದೊಂದು ಆಯಾಮ ಸಿಗುತ್ತದೆ .
IV ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ
1. ಗೌತಮನ ಮನಲೋಕವನ್ನು ನಿರಂತರವಾಗಿ ದಹಿಸಿದ ಪ್ರಶ್ನೆಗಳು ಯಾವುವು ?
ಗೌತಮನಿಗೆ ಮನಲೋಕವನ್ನು ನಿರಂತರವಾಗಿ ದಹಿಸಿದ ಪ್ರಶ್ನೆಗಳೆಂದರೆ “ ಬದುಕು ಎಂದರೇನು ” ಅದರ ಉದ್ದೇಶವೇನು ? ರೋಗ , ಮುಪ್ಪು , ಮರಣಗಳನ್ನು ಗೆಲ್ಲುವುದು ಸಾಧ್ಯವೇ ? ಮನುಷ್ಯನ ಸಂಕಟಗಳ ಮೂಲ ಯಾವುದು ? ಈ ಎಲ್ಲಾ ಪ್ರಶ್ನೆಗಳು ಅವನ್ನನ್ನು ಕಾಡುತ್ತಿದ್ದವು .
2. ನೇಪಾಳದ ವೈಮಾನಿಕ ಸಾರಿಗೆ ವ್ಯವಸ್ಥೆ ಹೇಗಿದೆ ?
ನೇಪಾಳದ ವೈಮಾನಿಕ ವ್ಯವಸ್ಥೆ ಭಾರತಕ್ಕೆ ಅನುಕರಣೀಯವಾಗಿದೆ . ಪರ್ವತಗಳ ನಾಡಿನಲ್ಲಿ ರಸ್ತೆಗಳ ಮೂಲಕ ಊರಿಂದ ಊರಿಗೆ ಹೋಗಲು ಹೆಚ್ಚು ಸಮಯಬೇಕು . ಆದ್ದರಿಂದ ನೇಪಾಳ ಸರ್ಕಾರ ಪುಟ್ಟ ಊರುಗಳಿಗೆಲ್ಲ ಪಟ್ಟ ಸಮರು ಬೇಕು . .ಆದ್ದರಿಂದ ನೇಪಾಳ ಸರ್ಕಾರ . ಪುಟ್ಟ ಊರುಗಳಿಗೆಲ್ಲ ಪುಟ್ಟ ವಿಮಾನ ನಿಲ್ದಾಣ ನಿರ್ಮಿಸಿ , ಸುಮಾರು 25 ಜನ ಪ್ರಯಾಣಿಕರನ್ನು ಕೊಂಡೊಯ್ಯುವ ವಿಮಾನಗಳನ್ನು ಹಾರಲು ಬಿಟ್ಟಿದೆ . ಹಳೆಯ ಮೆಟಡಾರ್ ವ್ಯಾನಿಗೆ ಎರಡು ರೆಕ್ಕೆ ಜೋಡಿಸಿದರೆ ಹೇಗಿರುತ್ತದೆಯೋ ಅದೇ ರೀತಿ ವಿಮಾನಗಳಿವೆ . ನೇಪಾಳದಂತಹ ಪುಟ್ಟ ದೇಶದಲ್ಲಿ ಸುಮಾರು 30 ಕ್ಕೂ ವಿಮಾನ ಸಂಪರ್ಕಗಳಿವೆ . ವಿಮಾನ ದರ ಕೂಡ ಶ್ರೀಸಾಮಾನ್ಯನ ಕೈಗೆಟುಕುವಂಥಹದ್ದು ಗಂಟೆಗೊಮ್ಮೆ ಟ್ಯಾಕ್ಸಿಗಳಂತೆ ಸಂಚರಿಸುವ ಇವು , ವಾರವೊಂದರಲ್ಲಿ ಹಿಮಗಿರಿಯ ಮೇಲೆ ಹಾರಿ ಇಡೀ ನೇಪಾಳವನ್ನು ದರ್ಶನ ಮಾಡಿಸುತ್ತದೆ .
3. ಲುಂಬಿನಿ ಪಯಣದ ಅನುಭವಗಳೇನು ?
ಹಿಮ ಪರ್ವತಗಳನ್ನು ಹಿಂದಕ್ಕೆ ಬಿಟ್ಟು ತಂಪು ಗಾಳಿಯನ್ನು ಮರೆತು ಒಣಗುವ ಬಿಸಿಲಿಗೆ ಒಡ್ಡಿಕೊಳ್ಳಬೇಕು . ಭಾರತದ ಗಡಿಯತ್ತ ಸಮೀಪಿಸುವಾಗ ಲುಂಬಿನಿ ಸಿಗುತ್ತದೆ . ಲುಂಬಿನಿ ಯಾವುದೋ ಶಿಖರಾಗ್ರಹದಲ್ಲಿರುವ ತಂಪನೆಯ ಗ್ರಾಮ ಎಂದು , ಆದರೆ ಬುದ್ದ ಬಿಸಿಲೂರಿನವರು , ಲುಂಬಿನಿಯನ್ನು ಸೇರಲು ಬಹುದೂರದ ಪಯಣ , ಗುಡ್ಡಗಾಡನ್ನು ಇಳಿದು ಬಟಾಬಯಲನ್ನು ಹಿಡಿದು ಗಂಟೆಗಟ್ಟಲೆ ಸಾಗಬೇಕು .
4. ಇಟ್ಟಿಗೆ ಕಟ್ಟಡಗಳ ಮೇಲೆ ಲೇಖಕರು ಏನೇನು ಚರ್ಚಿಸಿದರು ?
ಇಟ್ಟಿಗೆ ಕಟ್ಟಡಗಳ ಮೇಲೇರಿ ಗೌತಮನು ಇಲ್ಲಿ ಆಡವಾಡಿರಬಹುದು . ಇಲ್ಲಿ ಊಟ ಮಾಡಿರಬಹುದು , ಇಲ್ಲಿ ಪಟ್ಟಾಭಿಷೇಕವಾಗಿರಬಹುದು . ಇದು ಯಶೋಧರ ಗೌತಮನ ಕೋಣೆ ಇರಬಹುದು , ರಾಹುಲನ ಗೆಳೆಯರು ಇಲ್ಲಿ ಆಡಿರಬಹುದು .ಮಾಯಾದೇವಿ ಈ ಗವಾಕ್ಷಿಯಿಂದ ಮಗನನ್ನು ಕೂಗಿರಬಹುದು . ಇದೇ ತಿರುವಿನಲ್ಲಿ ಗೌತಮನು ನಗರ ದರ್ಶನದಲ್ಲಿ ಮುಪ್ಪಿನ ಮುದುಕನನ್ನು , ಹಣ್ಣು – ಹಣ್ಣು ರೋಗಿಯನ್ನು ಶವಯಾತ್ರೆಯನ್ನೆಲ್ಲ ಕಂಡಿರಬಹುದು . ಮಹಾನಿಷ್ಕಮಣ ದ್ವಾರದಿಂದ ಬುದ್ದನು ಇಲ್ಲಿಂದ ನಿರ್ಗಮಿಸಿರಬಹುದೆಂದು ಮಗಳೊಂದಿಗೆ ಚರ್ಚಿಸಿದರು .
5. ಕಪಿಲ ವಸ್ತುವಿನ ಉದ್ಯಾನವನದ ಬಗ್ಗೆ ಲೇಖಕರು ನೀಡುವ ವಿವರಗಳನ್ನು ಸಂಗ್ರಹಿಸಿ ,
ಕಪಿಲವಸ್ತು ಒಂದು ಸುಧಾರಣ ಹಳ್ಳಿ , ಹಳ್ಳಿಯಲ್ಲಿ ಹಾದು ಹೋದರೆ ಲುಂಬಿನಿಯಲ್ಲಿ ಇರುವಂತಹ ಒಂದು ವಿಶಾಲ ಉದ್ಯಾನವನವಿದೆ . ಈ ಉದ್ಯಾನದಲ್ಲಿ ಶುದ್ಧೋದನನ ಅರಮನೆ ಇತ್ತಂತೆ . ಆದರೆ ಅಲ್ಲಿ ಅರಮನೆಯ ವಿವಿಧ ಪ್ರಾಂಗಣಗಳೆಂದು ಊಹಿಸಬಹುದಾದ ಇಟ್ಟಿಗೆಯ ಅರೆಬರೆ ಆಕೃತಿಗಳು , ವಿನ್ಯಾಸಗಳು ಸಾವಿರಾರು ವರ್ಷಗಳ ಕತೆ ಹೇಳುತ್ತವೆ . ಇಲ್ಲಿ ಅಶಿಸ್ತಿನಿಂದ ಕೂಡಿದ ಉದ್ಯಾನವನ ಬಿಟ್ಟರೆ ಬೇರೇನು ಕಂಡು ಬರುವುದಿಲ್ಲ . ಮದ್ಯರಾತ್ರಿಯಲ್ಲಿ ನಿರ್ಗಮಿಸಿದನೆಂದು ಪ್ರತೀತಿ ಇರುವ ದ್ವಾರವೊಂದು ಪೂರ್ವದಿಕ್ಕಿಗೆ , ಬೌದ್ಧಧರ್ಮ ಪ್ರಚಲಿತವಾಗಿರುವ ಎಲ್ಲಾ ದೇಶಗಳು ಲುಂಬಿನಿಯಲ್ಲಿ ಪೈಪೋಟಿಯಿಂದ ಅದ್ದೂರಿಯಾದ ವರ್ಣರಂಜಿತ ನಿರ್ಮಿಸಿವೆ . ಆದರೆ ಕಪಿಲವಸ್ತುವಿನ ಉದ್ಯಾನವನ ಸ್ವಂತಿಕೆಯನ್ನು ಕಳೆದುಕೊಂಡಿರುವುದು ಸೋಜಿಗವೆನಿಸುತ್ತದೆ ಎಂದು ಲೇಖಕರು ತಿಳಿಸಿದ್ದಾರೆ .
6. ಕಪಿಲ ವಸ್ತುವಿನಲ್ಲಿ ಲೇಖಕರ ನಿರಾಸೆಗೆ ಕಾರಣವೇನು ?
ಗೌತಮನಾಗುವ ಆದರೆ ಈಗ ಲುಂಬಿನಿಯಿಂದ 27 ಕಿ.ಮೀ. ದೂರದಲ್ಲಿ ಕಪಿಲವಸ್ತು ಇದೆ . ಅದನ್ನೀಗ ಲಾರ್‌ಕೋಟ್ ಎನ್ನುತ್ತಾರೆ . ಸಾಧಾರಣವಾದ ಹಳ್ಳಿಯದು . ಹಳ್ಳಿಯನ್ನು ಹಾದು ಮುಂದೆ ಹೋದರೆ ಲುಂಬಿನಿ ಕಾದಿರಿಸುವಂತೆಯೇ ಒಂದು ವಿಶಾಲ ಉದ್ಯಾನವನ . ಈ ಉದ್ಯಾನವನದಲ್ಲಿ ಶುದ್ಧೋದನ ಮಹಾರಾಜನ ಅರಮನೆ ಇತ್ತಂತೆ . ಬಹಳ ಪುಳಕಿತನಾಗಿ ಉತ್ಸಾಹದಿಂದ ಲೇಖಕರು ಅಲ್ಲಿಗೆ ಹೋದರು . ಮೊದಲು ಸಿದ್ದಾರ್ಥನು 21 ವರ್ಷಗಳ ಕಾಲ ಕಳೆದ ಜಾಗವಿದು . ಅಲ್ಲಿರುವುದು ವಿವಿಧ ಪ್ರಾಂಗಣಗಳೆಂದು ಊಹಿಸಬಹುದಾದ ಆಕೃತಿಗಳು , ವಿನ್ಯಾಸಗಳು ಸಾವಿರಾರು ವರ್ಷಗಳ ಕಥೆ ಹೇಳುತ್ತದೆ . ಆ ಅವಶೇಷಗಳಿಂದ ಲೇಖಕರು ಮತ್ತು ಮಕ್ಕಳು ಜಾಗಗಳನ್ನು ಕಲ್ಪಿಸತೊಡಗಿದರು . ಆದರೆ ಅಲ್ಲಿ ಅಶಿಸ್ತಾಗಿ ಬೆಳೆದಿದ್ದ ಉದ್ಯಾನವನ್ನು ಬಿಟ್ಟರೆ ಅರಮನೆಯಾಗಲಿ , ರಾಣಿದ್ವಾರವಾಗಲಿ , ಗವಾಕ್ಷಿಯಾಗಲಿ ಯಾವುದು ಇರಲಿಲ್ಲ . ಮಹಾ ನಿಷ್ಕಮಣ ದ್ವಾರವೊಂದು ಪೂರ್ವಕ್ಕಿದೆ . ಅಲ್ಲಿ ಹೃದಯಕ್ಕೆ ನಾಟಿದ್ದು ಗೌತಮ್ ಇಲ್ಲದ ಅರಮನೆ , ಲೇಖಕರ ಎದೆಯಲ್ಲಿ ಸುವರ್ಣಾ ಕಾರಗಳು ದೊಪ್ಪನೆ ಕುಸಿದು ಘೋರ ನಿರಾಶೆಯಾಗಿ ಆ ನಿರಾಶೆಯಲ್ಲಿ ಸುವರ್ಣ ಶಿಲ್ಪವನ್ನು ಕಲ್ಪಿಸಿಕೊಳ್ಳುವ ಸಂಸ್ಕೃತಿ ಕಪಿಲವಸ್ತು ಕೊಟ್ಟಿತು
ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ .
1. ಇನ್ನು ಮುಂದೆ ಅನಗತ್ಯವಾಗಿ ಕೋಪಿಸಿಕೊಳ್ಳುವುದಿಲ್ಲ
ಪ್ರಸ್ತಾವನೆ : ಈ ವಾಕ್ಯವನ್ನು “ ನಾಗತಿಹಳ್ಳಿ ಚಂದ್ರಶೇಖರ್ ರವರು ರಚಿಸಿರುವ ಪ್ರವಾಸಿ ಕಥನ “ ಬುದ್ಧ ಬಿಸಿಲೂರಿನವನು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ನನ್ನ ಗ್ರಹಿಕೆಯ ನೇಪಾಳ ಎಂಬ ಕೃತಿಯಿಂದ ಆರಿಸಲಾಗಿದೆ .
ಸಂದರ್ಭ : ಪವಿತ್ರ ಸ್ಥಳಗಳಲ್ಲಿ ಯಾವುದಾದರೊಂದು ನಮ್ಮಲ್ಲಿರುವ ದುರ್ಗುಣಗಳನ್ನು ಅಥವಾ ದೌರ್ಬಲ್ಯವನ್ನು ಬಿಟ್ಟುಬಿಡಬೇಕೆಂಬ ವಾಡಿಕೆ ಇದು . ಲೇಖಕರ ಮಗಳು ತನ್ನ ತಂದೆಗೆ ಹೇಳಿದಾಗ ಲೇಖಕರು – ಇನ್ನು ಮುಂದೆ ಅನಗತ್ಯವಾಗಿ ಕೋಪಿಸಿಕೊಳ್ಳುವುದಿಲ್ಲ ಎಂದರು .
ವಿವರಣೆ : ‘ ಕೋಪ ನಮ್ಮಲ್ಲಿರುವ ಭಾವನೆ , ಇದು ಕೆಲವರಲ್ಲಿ ಹೆಚ್ಚಾಗಿ ದುರ್ಗುಣವಾಗುತ್ತದೆ . ಆಗಾಗ ಕೋಪಿಸಿಕೊಳ್ಳುವುದು ದೌರ್ಬಲ್ಯವು ಆಗುತ್ತದೆ . ಆದರೆ ಇದನ್ನು ಬಿಡುವುದು ಅಷ್ಟು ಸುಲಭವಲ್ಲ . ಆದ್ದರಿಂದ ಲೇಖಕರು ಅನಗತ್ಯ ಎಂಬ ಪದ ಬಳಸಿ ಯುಕ್ತಿಯಿಂದ ‘ ಅಗತ್ಯ ‘ ಬಿದ್ದಾಘ ಕೋಪಿಸಿಕೊಳ್ಳಬೇಕೆಂಬ ಅರ್ಥದಲ್ಲಿ ಬರೆದಿದ್ದಾರೆ .
ವಿಶೇಷತೆ : ನಮ್ಮ ಸಂಸ್ಕೃತಿ , ನಮ್ಮ ದೇಶದ ರೂಢಿಯನ್ನು ಇಲ್ಲಿ ಸ್ಮರಿಸಲಾಗಿದೆ .
2. ಈ ಬಿಸಿಲೇ ಗೌತಮನನ್ನು ಸಂನ್ಯಾಸಕ್ಕೆ ದೂಡಿರಬೇಕು
ಪ್ರಸ್ತಾವನೆ : ಈ ವಾಕ್ಯವನ್ನು “ ನಾಗತಿಹಳ್ಳಿ ಚಂದ್ರಶೇಖರ್ರವರು ರಚಿಸಿರುವ ಪ್ರವಾಸಿ ಕಥನ “ ಬುದ್ಧ ಬಿಸಿಲೂರಿನವನು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ನನ್ನ ಗ್ರಹಿಕೆಯ ನೇಪಾಳ ಎಂಬ ಕೃತಿಯಿಂದ ಆರಿಸಲಾಗಿದೆ .
ಸಂದರ್ಭ : ಲುಂಬಿನಿಯಲ್ಲಿದ್ದ ಬಿಸಿಲಿನ ತಾಪವನ್ನು ಕಂಡ ಲೇಖಕರ ಮಗಳು ಈ ಮಾತನ್ನು ತಂದೆಯ ಬಳಿ ಹಂಚಿಕೊಂಡಳು .
ವಿವರಣೆ : ಲುಂಬಿನಿಯಲ್ಲಿ ಬಿಸಿಲಿನ ಝಳ ಸಾಮಾನ್ಯ ಜನತೆಗೆ ಸಹಿಸಲು ಅದರಲ್ಲೂ ಕರ್ನಾಟಕದವರಿಗೆ ಸಹಿಸಲು ಅಸಾಧ್ಯ ಆದ್ದರಿಂದ ಲೇಖಕರ ಮಗಳು ಲುಂಬಿನಿಯು ಬಿಸಿಲಿನ ಝಳಕ್ಕೆ ಗೌತಮ್ ಸನ್ಯಾಸಿಯಾಗಿರಬೇಕು ಎಂದು ತಮಾಷೆ ಮಾಡಿದಳು .
ವಿಶೇಷತೆ : ದೇಶದ ಭೌಗೋಳಿಕ ವೈಪರೀತ್ಯವನ್ನು ಹಾಸ್ಯದ ಶೈಲಿಯಲ್ಲಿ ತಿಳಿಸಿದ್ದಾರೆ .
3. ಬುದ್ದನೇ ಇಲ್ಲದ ಅರಮನೆಗೊಬ್ಬ ಗಾರ್ಡು !
ಪ್ರಸ್ತಾವನೆ : ಈ ವಾಕ್ಯವನ್ನು “ ನಾಗತಿಹಳ್ಳಿ ಚಂದ್ರಶೇಖರ್ ರವರು ರಚಿಸಿರುವ ಪ್ರವಾಸಿ ಕಥನ “ ಬುದ್ಧ ಬಿಸಿಲೂರಿನವನು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ನನ್ನ ಗ್ರಹಿಕೆಯ ನೇಪಾಳ ಎಂಬ ಕೃತಿಯಿಂದ ಆರಿಸಲಾಗಿದೆ .
ಸಂದರ್ಭ : ಬುದ್ಧನು ನಿರ್ಗಮಿಸಿದ ಪೂರ್ವದ ಹೆಬ್ಬಾಗಿಲಿನಲ್ಲಿ ಒಬ್ಬ ಗಾರ್ಡ್ ನಿಂತಿದ್ದು ಭಕ್ಷಿಸಿಗಾಗಿ ಕೈಚಾಚುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆಯಲಾಗಿದೆ . ವಿವರಣೆ : ಬುದ್ದ ಇದ್ದಾಗ ಅದು ಅರಮನೆ , ನೂರಾರು ಸಿಪಾಯಿಗಳು , ಆದರೆ ಈಗ ಬುದ್ದನೇ ಇಲ್ಲದ ಅರಮನೆ ಅಲ್ಲಿ , ಅವಶೇಷಗಳ ಅರಮನೆಗೆ ಭಕ್ಷಿಸು ಬಯಸುವ ಗಾರ್ಡು ಮಾತ್ರ ಇದ್ದಾನೆ .
ವಿಶೇಷತೆ : ಗತ ವೈಭವವನ್ನು ಇಲ್ಲಿ ತಿಳಿಸಿಕೊಡಲಾಗಿದೆ .
4. ಗವಾಕ್ಷಿಯಿಂದ ಮಗನನ್ನು ಕೂಗಿರಬಹುದು .
ಪ್ರಸ್ತಾವನೆ : ಈ ವಾಕ್ಯವನ್ನು ನಾಗತಿಹಳ್ಳಿ ಚಂದ್ರಶೇಖರ್ರವರು ರಚಿಸಿರುವ ಪ್ರವಾಸಿ ಕಥನ “ ಬುದ್ಧ ಬಿಸಿಲೂರಿನವನು ” ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ನನ್ನ ಗ್ರಹಿಕೆಯ ನೇಪಾಳ ಎಂಬ ಕೃತಿಯಿಂದ ಆರಿಸಲಾಗಿದೆ .
ಸಂದರ್ಭ : ಕಪಿಲವಸ್ತುವಿನ ಉದ್ಯಾನಕ್ಕೆ ಬಂದ ಪ್ರವಾಸಿಗಳು ಇಟ್ಟಿಗೆಗಳ ಆಕಾರ ಯಶೋದರರ ಕೊಠಡಿ ಇರಬಹುದು . ಇಲ್ಲಿ ಕೃತಿಗಳನ್ನು ಕಂಡು ಇಲ್ಲಿ ಗೌತಮ ಆಡುತ್ತಿರಬಹುದು , ಇಲ್ಲಿ ಮಾಯಾದೇವಿ ಗವಾಕ್ಷಿಯಿಂದ ಮಗನನ್ನು ಕರೆಯುತ್ತಿದ್ದಳೇನೊ ಎಂಬ ಕಲ್ಪನೆಯನ್ನು ಮೂಡಿಸಿಕೊಳ್ಳುತ್ತಾರೆ .
ವಿವರಣೆ : ತಾಯಿ ಮಗನನ್ನು ಪದೇ ಪದೇ ನೋಡುವುದು ಕೂಗುವುದು ಆಕೆಯ ವಾತ್ಸಲ್ಯದ ಗುರುತಾಗಿದೆ . ಆಕೆ ಪ್ರೀತಿ ಮಗ ಸದಾ ಕಣ್ಮುಂದೆ ಇರಬೇಕೆನ್ನುವುದೇ ಆಗಿರುತ್ತದೆ .
ವಿಶೇಷತೆ : ತಾಯಿಯ ಪ್ರೀತಿ , ಹಿಂದಿನ ರಾಜರ ವೈಭವದ ಕಲ್ಪನೆ ಇಲ್ಲಿದೆ .
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.