rtgh

1st PUC Kannada Mahatmara Guru Notes | ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್

ಪ್ರಥಮ ಪಿ.ಯು.ಸಿ ಮಹಾತ್ಮರ ಗುರು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st PUC Mahatmara Guru Kannada Notes Question Answer Summary Mcq Pdf Download Kannada Medium Karnataka State Syllabus 2023 Kseeb Solutions For Class 11 Kannada Chapter 6 Notes 1st Puc Kannada 6th Lesson Notes Mahatmara Guru Class 11 Kannada Mahatmara Guru Lesson Notes

1st PUC Kannada Mahatmara Guru Notes Question Answer

 

ತರಗತಿ: ಪ್ರಥಮ ಪಿ.ಯು.ಸಿ

ವ್ಯಕ್ತಿ ಚಿತ್ರಣ – ಲೇಖಕರು ಹೆಸರು: ಡಾ . ಮುಗಳವಳ್ಳಿ ಕೇಶವ ಧರಣಿ

ಗದ್ಯ ಭಾಗದ ಹೆಸರು: ಮಹಾತ್ಮರ ಗುರು

1st PUC Kannada Mahaatmara Guru Notes. ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್.‌‌
1st PUC Kannada Mahatmara Guru Notes ಪ್ರಥಮ ಪಿಯುಸಿ ಕನ್ನಡ ಮಹಾತ್ಮರ ಗುರು ನೋಟ್ಸ್

ವ್ಯಕ್ತಿ ಚಿತ್ರಣ – ಲೇಖಕರು : ಡಾ . ಮುಗಳವಳ್ಳಿ ಕೇಶವ ಧರಣಿ ( ೧೯೫೬ )

ಡಾ . ಮುಗಳವಳ್ಳಿ ಕೇಶವ ಧರಣಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮುಗಳವಳ್ಳಿಯವರು . ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸಕಲೇಶಪುರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ .

“ ರಸ್ತೆ ಸುರಕ್ಷತೆ : ಸಮಸ್ಯೆಗಳು ಮತ್ತು ಪರಿಹಾರಗಳು ” ಕೃತಿಗೆ ಡಿ.ಲಿಟ್ . ಪಡೆದಿದ್ದಾರೆ . ರಸ್ತೆ ಅಪಘಾತಗಳನ್ನು ತಪ್ಪಿಸುವುದು ಹೇಗೆ ? ಜನಸಾಮಾನ್ಯರಿಗೆ ಆರ್.ಟಿ.ಓ. ಕಚೇರಿ ಕಾನೂನು ಸಲಹೆ , ರಸ್ತೆ ಸುರಕ್ಷತೆ ಮಕ್ಕಳಿಗೆ ಕಲಿಸೋಣ , ರಸ್ತೆಯಲ್ಲಿ ರಕ್ತ ಚೆಲ್ಲಿದೆ ( ಬೀದಿ ನಾಟಕಗಳು ) , ರಸ್ತೆ ಸುರಕ್ಷೆ ಜೀವನ ರಕ್ಷೆ ( ಹನಿಗವನಗಳು ) , ಮೂಢನಂಬಿಕೆಗಳು ಮತ್ತು ವೈಚಾರಿಕತೆ , ಅಂಬೇಡ್ಕರ್ ಅಮರವಾಣಿಗಳು ಇವರ ಕೃತಿಗಳು .

ಕುದ್ಮುಲ್ ರಂಗರಾವ್ ರಾಷ್ಟ್ರೀಯ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿರುವ ಅವರು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ . ಸಾಮಾಜಿಕ ಸುಧಾರಣಾವಾದಿ ಚಳವಳಿಯ ಮೊದಲ ತಲೆಮಾರಿನ ವ್ಯಕ್ತಿಗಳಲ್ಲಿ ಕುದ್ಮುಲ್ ರಂಗರಾವ್ ಪ್ರಮುಖರು .

ಅಸ್ಪೃಶ್ಯರ ಏಳಿಗೆಗೆ ಅಪಾರವಾಗಿ ಶ್ರಮಿಸಿ ಶೋಷಿತರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡಿದ ಕುದ್ಮುಲ್ ರಂಗರಾವ್‌ ಅಜ್ಞಾತವಾಗಿ ಉಳಿದಿದ್ದಾರೆ .

ಪ್ರತಿರೋಧಗಳು ಎದುರಾದಾಗಲೂ ಅಸ್ಪೃಶ್ಯರ ಜೊತೆಗೆ ಬೆರೆತು ಅವರ ಮನಸ್ಸು ಗೆದ್ದು ಶಿಕ್ಷಣ ಪಡೆಯುವಂತೆ ಮಾಡಿದರು . ಕುದ್ಮುಲ್‌ರ ಸಾಮಾಜಿಕ ,ಶೈಕ್ಷಣಿಕ, ರಾಜಕೀಯ ಸೇವೆ ಗಮನಾರ್ಹ . ರಂಗರಾವ್‌ರ ಕೆಲಸಗಳಿಂದ ಮಹಾತ್ಮ ಗಾಂಧೀಜಿಯವರು ಪ್ರೇರಣೆ ಪಡೆದಿರುವುದು ಬಹು ಮುಖ್ಯ .

1st PUC Kannada Mahatmara Guru Notes Question Answer

I . ಒಂದು ವಾಕ್ಯದಲ್ಲಿ ಉತ್ತರಿಸಿ .

1. ಬಡವರ ವಕೀಲರೆಂದು ಪ್ರಸಿದ್ಧರಾದವರು ಯಾರು ?

ಬಡವರ ವಕೀಲರೆಂದು ಪ್ರಸಿದ್ಧರಾದವರು ‘ ಕುದ್ಮಲ್ ರಂಗರಾವ್’ರವರು .

2. ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದವರು ಯಾರು ?

ಶೋಷಿತ ಜನಾಂದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದವರು ‘ ಕುದ್ಮುಲ್ ರಂಗರಾವ್’ರವರು .

3. ರಂಗರಾವ್ ಕೋರ್ಟ್ ಹಿಲ್ಸ್‌ನಲ್ಲಿ ಯಾವ ಸಂಘ ಸ್ಥಾಪಿಸಿದರು ?

ರಂಗರಾವ್ ಕೋರ್ಟ್ ಹಿಲ್ಸ್‌ನಲ್ಲಿ ಸ್ಥಾಪಿಸಿದ ಸಂಘ – ‘ ಆದಿ ದ್ರಾವಿಡ ಸಹಕಾರ ಸಂಘ .

4. ಸರ್ಕಾರ ರಂಗರಾವ್‌ರವರಿಗೆ ಯಾವ ಬಿರುದು ನೀಡಿತ್ತು ?

ಸರ್ಕಾರ ರಂಗರಾವ್‌ರವರಿಗೆ ‘ ರಾವ್ ಸಾಹೇಬ್ ‘ ಎಂಬ ಬಿರುದು ನೀಡಿತ್ತು .

5. ರಂಗರಾವ್‌ ಸ್ಥಾಪಿಸಿದ ಸಂಸ್ಥೆಯ ಹೆಸರೇನು ?

ರಂಗರಾವ್‌ರವರು ಸ್ಥಾಪಿಸಿದ ಸಂಸ್ಥೆಯ ಹೆಸರು ಡಿ.ಸಿ.ಎಂ. ಸಂಸ್ಥೆ ಅಂದರೆ “ ಡಿಪ್ರೆಸ್ಟ್ ಕ್ಲಾಸ್ ಮಿಷನ್ ”

6. ರಂಗರಾವ್‌ರವರು ಕೈಗಾರಿಕಾ ತರಬೇತಿ ಶಾಲೆ ಎಲ್ಲಿ ಸ್ಥಾಪಿಸಿದರು ?

ರಂಗರಾವ್‌ರವರು ಕೈಗಾರಿಕಾ ತರಬೇತಿ ಶಾಲೆಯನ್ನು ಶೇಡಿಗುಡ್ಡೆ ‘ ಎಂಬಲ್ಲಿ ಸ್ಥಾಪಿಸಿದರು .

II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1st PUC Kannada Mahatmara Guru Notes Question Answer

1. ಗಾಂಧೀಯವರು ರಂಗರಾವ್ ಬಗ್ಗೆ ಏನು ಹೇಳಿದರು ?

ಗಾಂಧಿಯವರು ರಂಗರಾವ್‌ರ ಬಗ್ಗೆ ಹೀಗೆ ಹೇಳಿದ್ದಾರೆ . ‘ ಪೂಜ್ಯ ರಂಗರಾವ್‌ರವರಿಂದ ಸಾರ್ವಜನಿಕ ಸೇವಾ ನಿಷ್ಠೆಯನ್ನು ಮನಗಾಣಿಸಿಕೊಂಡೆ , ನಮಗೆ ಅವರು ಒಂದು ಉತ್ತಮ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟಿದ್ದಾರೆ . ಅಸ್ಪೃಶ್ಯ ಜನಾಂಗದ ಪುನರುದ್ಧಾರ ಕಾರ್ಯದಲ್ಲಿ ಮುನ್ನಡೆದ ರಂಗರಾವ್ ನನಗೆ ಸ್ಪೂರ್ತಿ ಮಾರ್ಗದರ್ಶಕರರು , ಅಸ್ಪೃಶ್ಯತಾ ನಿವಾರಣಾ ಕಾರ್ಯದಲ್ಲಿ ಕುದ್ಮಲ್ ರಂಗರಾವ್ ನಿಜವಾಗಿಯೂ ನನ್ನ ಗುರುಗಳು ಎಂದು ಘೋಷಿಸಿದರು .

2. ರಂಗರಾವ್‌ ಸಮಾಧಿಯ ಮೇಲೆ ಬರೆದ ಹೇಳಿಕೆ ಯಾವುದು ?

ರಂಗರಾವ್‌ ಸಮಾದಿಯ ಮೇಲೆ ಬರೆದ ಹೇಳಿಕೆಯೆಂದರೆ – ‘ ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ , ದೊಡ್ಡವರಾಗಿ , ಸರ್ಕಾರಿ ನೌಕರಿಗೆ ಸೇರಿ , ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು . ಆಗ ರಸ್ತೆಯಲ್ಲಿ ಏಳುವ ದೂಳು ನನ್ನ ತಲೆಗೆ ತಾಗಬೇಕು . ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ

3. ರಂಗರಾವ್ ಪ್ರಾರಂಭಿಸಿದ್ದ ಹೆಣ್ಣು ಮಕ್ಕಳ ಹಾಸ್ಟೆಲ್‌ನಿಂದ ಉಂಟಾದ ಪ್ರಯೋಜನವೇನು ?

ರಂಗರಾವ್ ಪ್ರಾರಂಭಿಸಿದ ಹೆಣ್ಣು ಮಕ್ಕಳ ಹಾಸ್ಟೆಲ್‌ನಿಂದಾಗಿ ಉಂಟಾದ ಪ್ರಯೋಜನಗಳೆಂದರೆ * ದೂರದ ಹಳ್ಳಿಗಳಿಂದ ನಡೆದು ಬರುವ ಹೆಣ್ಣು ಮಕ್ಕಳಿಗೆ ಆಶ್ರಯ ದೊರೆತು ಅನುಕೂಲವಾಯಿತು . ಹಾಸ್ಟೆಲ್‌ನಲ್ಲಿದ್ದ ಹೆಣ್ಣು ಮಕ್ಕಳಿಗೆ ರಕ್ಷಣೆಗೆ ದೊರೆತಂತಾಯಿತು . * ಜೀವನೋಪಾಯಕ್ಕಾಗಿ ವಿವಿಧ ವೃತ್ತಿಗಳನ್ನು ಅವಲಂಬಿಸಬೇಕಾದ ತರಬೇತಿಯೂ ದೊರಕುವಂತಾಯಿತು . * ಅಸ್ಪೃಶ್ಯರ ಒಳವಿವಾಹ , ಅಂತರ್‌ಜಾತಿಯ ವಿವಾಹ ಹಾಗೂ ವಿಧವೆಯರಿಗೆ ಪುನರ್‌ ವಿವಾಹಕ್ಕೆ ಅವಕಾಶ ದೊರೆಯಿತು .

4. ಸಾಮೂಹಿಕ ಸುಧಾರಣಾ ಚಳುವಳಿಯ ಪ್ರಮುಖ ನಾಯಕರನ್ನು ಹೆಸರಿಸಿ .

ಸಾಮೂಹಿಕ ಸುಧಾರಣಾ ಚಳುವಳಿಯ ಪ್ರಮುಖ ನಾಯಕರು – ‘ ಮಹಾತ್ಮ ಜ್ಯೋತಿಬಾ ಪುಲೆ , ಶಾಹು , ಮಹಾರಾಜ್ , ನಾರಾಯಣ ಗುರು , ನಾಲ್ವಡಿ ಕೃಷ್ಣರಾಜ ಒಡೆಯರ್ , ಮಹಾತ್ಮಾಗಾಂಧೀ , ಬಾಬಾ ಸಾಹೇಬ ಅಂಬೇಡ್ಕರ್‌ ಮೊದಲಾದವರು .

5. ರಂಗರಾವ್ ಅಂತರ್‌ಜಾತಿಯ ವಿವಾಹಕ್ಕೆ ನೀಡಿದ ಪ್ರೋತ್ಸಾಹ ಗಾಂಧೀ ಮೇಲೆ ನೀಡಿದ ಪ್ರಭಾವವೇನು ?

ರಂಗರಾವ್‌ರವರ ಪೋಷಕರ ಮನವೊಲಿಸಿ ಹಲವಾರು ಅ ೦ ತರ್‌ ಜಾತಿಯ ವಿವಾಹಗಳನ್ನು ಮಾಡಿಸಿದರು . ಮಾದರಿಯಾಗಿ ತಮ್ಮ ಮಗಳನ್ನು ಮದ್ರಾಸಿನಲ್ಲಿದ್ದ ಹುಡುಗ ಡಾ || ಸುಬ್ರಾಯನ್‌ಗೆ ಮದುವೆ ಮಾಡಿಸಿದರು . ಮದುವೆಗೆ ಚಕ್ರವರ್ತಿ ರಾಜಗೋಪಾಲ ದಾರಿಯದೂ ಪೌರತ್ವ ವಹಿಸಿದರು . ಇದರಿಂದ ಪ್ರಭಾವಿತರಾದ ಗಾಂಧೀಜಿಯವರು ತಮ್ಮ ಮಗನಿಗೆ ರಾಜಾಜಿಯವರ ಮಗಳನ್ನು ತಂದುಕೊಂಡರು . ಅ ೦ ತರ್ ಜಾತಿಯ ವಿವಾಹವನ್ನು ಪ್ರೋತ್ಸಾಹಿಸಿದರು .

6 . ಡಿ.ಸಿ.ಎಂ. ಸಂಸ್ಥೆಗೆ ಯಾರು ಯಾರು ಭೇಟಿ ನೀಡಿದ್ದರು ?

ಡಿ.ಸಿ.ಎಂ ಸಂಸ್ಥೆಗೆ ಗರುದೇವ ರವೀಂದ್ರನಾಥ ಟ್ಯಾಗೋರ್‌ರವರು ಅನಿಬೆಸೆಂಟ್ , ಧೀನಬಂದು ಸಿ.ಎಸ್ . ಅಂಡ್ರಸ್ , ಗೋಪಾಲಕೃಷ್ಣಗೋಖಲೆ ಮತ್ತು ಜಿ.ಕೆ. ದೇವಧರ್ ಮುಂತಾದವರು ಭೇಟಿ ನೀಡಿದ್ದರು .

7. ರಂಗರಾವ್ ತಮ್ಮ ಉಯಿಲನಲ್ಲಿ ಏನು ಬರೆದಿದ್ದರು ?

ರಂಗರಾವ್‌ರವರು ತಮ್ಮ ಊಯಿಲಿನಲ್ಲಿ ಅಸ್ಪೃಶ್ಯ ಜನಾಂಗದಲ್ಲೇ ಅತಿಯಾಗಿ ಹಿಂದುಳಿದವರೆನಿಸಿದ ಜಾಡಮಾಲಿಗಳು ನನ್ನ ಪಾರ್ಥೀವ ಶರೀರಕ್ಕೆ ಶವ ಸಂಸ್ಕಾರ ಮಾಡಬೇಕು . ಆಗ ಮಾತ್ರ ತನಗೆ ಚಿರಶಾಂತಿ ದೊರೆಯುವುದು , ಎಂದು ಬರೆದಿದ್ದರು.

8. ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ನಡೆದ ಘಟನೆ ಯಾವುದು ?

ಮಂಗಳೂರು ಜಿಲ್ಲಾ ಕೋರ್ಟ್‌ನಲ್ಲಿ ಪೇದೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದ . ಆತನನ್ನು ಆಗಿನ ಆಂಗ್ಲ ನ್ಯಾಯಾಧೀಶರು ಕೆಲಸಕ್ಕೆ ನೇಮಿಸಿಕೊಂಡರು . ಈ ವಿಷಯ ತಿಳಿದ ಕೆಲವರು ಒಟ್ಟಾಗಿ ಪ್ರತಿಭಟಿಸಿದರು . ನ್ಯಾಯಾಲಯವನ್ನು ಬಹಿಷ್ಕರಿಸಿ , ನ್ಯಾಯಧೀಶರಿಗೆ ಕೊಲೆ ಬೆದರಿಕೆಯನ್ನು ಹಾಕಿದರು . ಇದನ್ನೆಲ್ಲ ಗಮನಿಸಿದ ರಂಗರಾವ್ ವಕೀಲಿ ವೃತ್ತಿಯನ್ನು ತ್ಯಜಿಸಿ ಜೀವನ ಪರಂತ ಪರಿಸರ ಉದ್ಧಾರಕ್ಕಾಗಿ ತಮ್ಮ ಶಕ್ತಿಯನ್ನೆಲ್ಲಾ ವಿನಿಯೋಗಿಸಲು ತೀರ್ಮಾನಿಸಿದರು .

9. ರಂಗರಾವ್ ರಾಜಕೀಯ ಮೀಸಲಾತಿಗಾಗಿ ಹೇಗೆ ಪ್ರಯತ್ನಿಸಿದರು ?

1888 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಲಿತ ಸಮುದಾಯಕ್ಕೆ ರಾಜಕೀಯ ಮೀಸಲಾತಿ ಒದಗಿಸಿಕೊಟ್ಟ ಕೀರ್ತಿ ಕುದ್ಮುಲ್ ರಂಗರಾವ್‌ರವರಿಗೆ ಸಲ್ಲುತ್ತದೆ . ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಬೋರ್ಡ್ ಹಾಗೂ ಪುರಸಭೆಗಳಲ್ಲಿ ದಲಿತ ಜನಾಂಗದ ಸದಸ್ಯರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜನರನ್ನು ಹೋರಾಟಕ್ಕಿಳಿಸಿದರು . ಅವರ ಇವರ ಪರಿಶ್ರಮದ ಫಲವಾಗಿ ಅಂಗರ ವಾಸ್ತರ ಹಾಗೂ ಗೋವಿಂದ ವಾಸ್ತರ್ ಎಂಬ ಇಬ್ಬರು ದಲಿತರು ಪ್ರಥಮವಾಗಿ ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರಾದರು

1st Puc Kannada 6th Chapter Mahatmara Guru Notes

III. ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ರಂಗರಾವ್ ಅಸ್ಪೃಶ್ಯರನ್ನು ಶಿಕ್ಷಣ ಪಡೆಯಲು ಮನಸ್ಸು ಗೆದ್ದ ಬಗೆಯನ್ನು ತಿಳಿಸಿ .

ರಂಗರಾವ್ ಅಸ್ಪೃಶ್ಯರ ಮನವೊಲಿಸಲು ಅವರುಗಳ ಅಟ್ಟಿಗೆ ಹೋಗಿ ಅಲ್ಲಿದ್ದ ಮಕ್ಕಳನ್ನು ಸ್ನಾನ ಮಾಡಿಸಿ ಶುಚಿಗೊಳಿಸುತ್ತಿದ್ದಾರೆ . ಅವರೊಟ್ಟಿಗೆ ಇದ್ದು ಊಟ ಮಾಡಿ , ಮಲಗಿ ಅವರ ಮನಸ್ಸು ಗೆದ್ದು ಅವರ ಮಕ್ಕಳನ್ನು ತಮ್ಮ ಶಾಲೆಗೆ ಸೇರಿಸುವಂತೆ ಮನ ಒಲಿಸುತ್ತಿದ್ದರು . ಅವರಿಗೆ ಪ್ರೋತ್ಸಾಹ ನೀಡುತ್ತಾ ಅವರಲ್ಲಿದ್ದ ಪ್ರತಿಭೆಯನ್ನು ಬೆಳಕಿಗೆ ತಂದರು . ಉದ್ಯೋಗಾವಕಾಶಗಳಿಂದ ವಂಚಿತರಾಗಬಾರದೆಂದು , ಬಡಗಿ , ನೇಯ್ದೆ , ತೋಟಗಾರಿಕೆ , ಕಸೂತಿ , ರೇಷ್ಮೆ ಹುಳು ಸಾಕಾಣೆ ಮುಂತಾದ ತರಬೇತಿಯನ್ನು ನೀಡಲು ವ್ಯವಸ್ಥೆ ಮಾಡಿ ವೃತ್ತಿ ಪರ ಶಿಕ್ಷಣ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು .

2. ರಂಗರಾವ್‌ರವರ ಸಾಮಾಜಿಕ ಸುಧಾರಣೆಯ ಕೊಡುಗೆಗಳೇನು ?

ರಂಗರಾವ್‌ರವರು ಮಾಡಿದ ಸಾಮಾಜಿಕ ಸುಧಾರಣೆಯೆಂದರೆ ಶಿಕ್ಷಣದಿಂದ ವಂಚಿತರಾಗಿದ್ದ ದಲಿತರಿಗೆ ತಾವೇ ಶಾಲೆ ತೆರೆದು ಶಿಕ್ಷಣವನ್ನು ಸ್ಥಾಪಿಸಿದರು . ಮಕ್ಕಳಿಗೆ ಶಾಲೆಗೆ ಸೇರಿಸಲು ಮದ್ಯಾಹ್ನದ ಊಟದ ಯೋಜನೆ , ಮಕ್ಕಳಿಂದ ಸಂಪಾದನೆಯಾಗ ಬಹುದಿದ್ದ 2 ಪೈಸೆ ಪೋಷಕರಿಗೆ ಕೊಟ್ಟು ಅವರ ಅಟ್ಟಿಯೊಳಗಿದ್ದು ಅವರೊಡನೆ ಊಟ ಮಾಡಿ , ಅವರೊಟ್ಟಿಗೆ ಮಲಗಿ ಶಿಕ್ಷಣದ ಮಹತ್ವ ತಿಳಿಸಿ ಅವರ ಮನವೊಲಿಸಿದರು . ವೃತ್ತಿಪರ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿ ಅವರಲ್ಲಿ ಬಡಗಿ , ಕಸೂತಿ ಕೆಲಸ , ರೇಷ್ಮೆ ಸಾಕಾಣಿ ಮುಂತಾದವುಗಳ ಬಗ್ಗೆ ತರಬೇತಿ ಕೊಡಿಸುತ್ತಿದ್ದರು . ಅವರಲ್ಲಿದ್ದ ಪ್ರತಿಭೆಯನ್ನು ಗುರ್ತಿಸಿ ಅದು ಅರಸುವಂತೆ ಪ್ರೋತ್ಸಾಹಿಸಿದರು ಹೆಣ್ಣು ಮಕ್ಕಳಿಗೆ ಶಾಲೆಗಳನ್ನು ತೆರೆಯುವುದರ ಜೊತೆಗೆ ಅವರಿಗೆ ಪ್ರತ್ಯೇಕ ಹಾಸ್ಟೆಲ್‌ಗಳನ್ನು ತೆರೆದರು . ಅಬಲೆಯರ ಹಾಗೂ ವಿಧವೆಯರ ವಿದ್ಯಾಭ್ಯಾಸಕ್ಕಾಗಿ ಆಶ್ರಮಗಳನ್ನು ನಿರ್ಮಿಸಿದರು . ಎಲ್ಲಾ ಜಾತಿಯ ಅನಾಥ , ಅಬಲೆಯರಿಗಾಗಿ ಈ ಆಶ್ರಮಗಳು ಮುಕ್ತವಾಗಿ ಸದಾ ತೆರೆದಿರುತ್ತಿತ್ತು . ವಿಧವಾ ಪುನರ್ ವಿವಾಹವನ್ನು ಮಾಡಿಸುವುದರ ಮೂಲಕ ನೊಂದ ವಿಧವೆಯರಿಗೆ ಹೊಸ ಬಾಳು ಬೆಳಕು ತೋರಿಸಿದರು , ಅಂತರ್ ಜಾತಿಯ ವಿವಾಹಗಳನ್ನು ಪ್ರೋತ್ಸಾಹಿಸಿ , ಆಡಂಬರದ ವಿವಾಹ , ವರದಕ್ಷಿಣೆ , ದುಂದು ವೆಚ್ಚಗಳಿಗೆ ಸಂಪೂರ್ಣ ಕಡಿವಾಣ ಹಾಕಿದರು . ಪತ್ರಿಕೆಗಳಾಗಲಿ , ರೈಲು ಬಸ್ಸುಗಳ ಸೌಕರ್ಯವಾಗಲಿ ಇಲ್ಲದಿದ್ದ ಆ ಕಾಲದಲ್ಲಿ ಕಾಲ್ನಡಿಗೆಯಲ್ಲಿಯೇ , ಊರೂರು ಅಲೆದು ದಲಿತರ ಧಮನಿಗಳಲ್ಲಿ ಹೊಸ ಚೈತನ್ಯವನ್ನು ತುಂಬಿದರು . ರಾಜಕೀಯ ಮೀಸಲಾತಿ ಒದಗಿಸಿಕೊಟ್ಟರು .

3. ರಂಗರಾವ್ ಅಸ್ಪೃಶ್ಯರ ಶಿಕ್ಷಣಕ್ಕಾಗಿ ನೀಡಿದ ಕೊಡುಗೆಯೇನು ?

ರಂಗರಾವ್‌ರವರು ಅಸ್ಪೃಶ್ಯರ ಶಿಕ್ಷಣಕ್ಕಾಗಿ ಡಿ.ಸಿ.ಎಂ. ಅಂದರೆ ಡಾ || ಪ್ರೆಸ್ ಕ್ಲಾಸ್ ಮಿಷನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮಂಗಳೂರಿನ ಕರಕನಾಡಿ , ಮುಲ್ಕ ಬೋಳೋರು , ಉಡುಪಿ ಬನ್ಮರಿಜೆ , ನಾಜೇರು , ಅತ್ತವರ , ಬಾಬುಗುಡ್ಡೆ ಎಂಬಲ್ಲಿ ಉಚಿತ ಶಾಲೆಗಳನ್ನು ತೆರೆದರು , ಈ ಶಾಲೆಗಳನ್ನು ಪಂಚಮಶಾಲೆಗಳ ಎಂದು ಕರೆಯುತ್ತಿದ್ದರು . ಸಂಪ್ರದಾಯಸ್ಥ ಶಿಕ್ಷಕರು ನಿರಾಕರಿಸಿದಾಗ ಕ್ರೈಸ್ತ ಅಧ್ಯಾಪಕರನ್ನು ನೇಮಿಸಿದರು . ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿದರು . ಮಕ್ಕಳು ಶಾಲೆಗೆ ತಪ್ಪದೆ ಬರುವಂತೆ ಪ್ರೋತ್ಸಾಹಿಸಲು ದಿನಕ್ಕೆ 2 ಪೈಸೆ ನಗದು ಪ್ರೋತ್ಸಾಹ ಧನವನ್ನು ಮಕ್ಕಳ ತಂದೆ ತಾಯಿಗಳಿಗೆ ಕೊಡುತ್ತಿದ್ದರು . ಪೋಷಕರ ಮನೆಗಳಿಗೆ ಹೋಗಿ ಅವರೊಟ್ಟಿಗೆ ಇದ್ದು ಅಲ್ಲಿ ಊಟ ಮಾಡಿ ಮಲಗಿ , ಮಕ್ಕಳಿಗೆ ಸ್ನಾನ ಮಾಡಿಸಿ ಅವರ ಮನಗೆದ್ದು ಮಕ್ಕಳಿಗೆ ಶಾಲೆಗೆ ಕಳುಹಿಸುವಂತೆ ಮನ ಒಲಿಸುತ್ತಿದ್ದರು . ಇದರಿಂದ ಬಹು ಸಂಖ್ಯಾತ ದಲಿತ ಜನ ಸಮುದಾಯದ ಪ್ರತಿಭೆಗಳು ಬೆಳಕಿಗೆ ಬರ ತೊಡಗಿದವು . ನಂತರ ವೃತ್ತಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿದರು .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. ರಸ್ತೆಯಿಂದ ಏಳುವ ಧೂಳು ನನ್ನ ತಲೆಗೆ ತಾಗಬೇಕು .

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು “ ಡಾ . ಮಗಳವಳ್ಳಿ ಕೇಶವಧರಿಣಿಯವರು ರಚಿಸಿದ ಮಹಾತ್ಮರ ಗುರು ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ದಲಿತರ ಏಳಿಗೆ ಅಭಿವೃದ್ಧಿ ಎಲ್ಲಿಯವರೆಗೆ ಆಗಬೇಕೆಂಬ ಅವರ ಉದ್ದೇಶವಿದ್ದೀತೋ ಆ ಉದ್ದೇಶದ ಒಂದು ವಾಕ್ಯಾಂಶ ಇಲ್ಲಿ ವ್ಯಕ್ತವಾಗಿದೆ .

ವಿವರಣೆ : ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ , ದೊಡ್ಡವರಾಗಿ , ಸರ್ಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು . ಆಗ ರಸ್ತೆಯಲ್ಲಿ ಏಳುವ ದೂಳು ನನ್ನ ತಲೆಗೆ ತಾಗಬೇಕು . ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ ಎಂಬುದಾಗಿ ರಂಗರಾವ್ ಹೇಳಿರುವುದು ಮಾತ್ರವಲ್ಲ , ತಮ್ಮ ಸಮಾದಿಯ ಮೇಲೂ ಬರೆಸಿದ್ದಾರೆ .

ವಿಶೇಷತೆ : ರಂಗರಾವ್‌ರವರ ನಿಸ್ವಾರ್ಥ ಸೇವೆ , ಹಾಗೂ ಸೇವಾಕಾರ್ಯ ಗುರಿ ಈ ವಾಕ್ಯದಲ್ಲಿ ಸ್ಪಷ್ಟವಾಗಿದೆ .

2. ಪ್ರಗತಿಗೆ ವಿದ್ಯೆಯೇ ಮೂಲ

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು “ ಡಾ . ಮಗಳವಳ್ಳಿ ಕೇಶವಧರಿಣಿ ” ಯವರು. – ಕನ್ನಡ ರಚಿಸಿದ ಮಹಾತ್ಮರ ಗುರು ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಜಾತೀಯತೆ , ಅಸ್ಪೃಶ್ಯತೆ , ಜೀತಾ ಮುಂತಾದ ಸಂಕಟಗಳಿಂದ ದಲಿ ಪಾರುಮಾಡಬೇಕಾದರೆ ಅವರಿಗೆ ಮೊದಲು ಬೇಕಾಗಿರುವುದು ವಿದೆ ಆದ್ದರಿಂದ ವಿದ್ಯೆಯಿಂದ ವಂಚಿತರಾದ ಇವರಿಗೆ ವಿದ್ಯೆ ಕಲಿಸಬೇಕೆಂಬ ನಿರ್ಧಾರಕ್ಕೆ ಬಂದ ಇವರ ಪ್ರಗತಿಗೆ ವಿದ್ಯೆಯೇ ಮೂಲ ಎಂದು ತಿಳಿದು ಅದಕ್ಕಾಗಿ ರಂಗರಾವ್ ಶಾಲೆ ಪ್ರಾರ ೦ ಭಿಸಿದರು .

ವಿವರಣೆ : ಮನುಷ್ಯ ದೈಹಿಕ ಮಾನಸಿಕ ವಿಕಾಸಕ್ಕೆ ಪ್ರಗತಿಗೆ ಮುಖ್ಯವಾಗಿ ಬೇಕಾಗಿರುವುದು ವಿದ್ಯೆ ಎಂಬ ಸತ್ಯಾಂಶವನ್ನು ದಲಿತರಿಗೆ , ರಂಗರಾವ್‌ರವರು ಮನಗಾಣಿಸಿ ಅದಕ್ಕಾಗಿ ಅವರನ್ನೆಲ್ಲಾ ವಿದ್ಯಾವಂತರನ್ನಾಗಿ ಮಾಡಲು ಪಣ ಣ ತೊಟ್ಟು ಶಾಲೆಗಳನ್ನು ಪ್ರಾರಂಭಿಸಿದರು .

ವಿಶೇಷತೆ : ವಿದ್ಯೆಯ ಮಹತ್ವವನ್ನು ತಿಳಿಸಲಾಗಿದೆ .

3. ಅನ್ಯರ ಮನೆಯ ಅನ್ನಕ್ಕಿಂತ ಆತ್ಮಗೌರವದ ಗಂಜಿ ಊಟವೇ ದೊಡ್ಡದು .

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು “ ಡಾ . ಮಗಳವಳ್ಳಿ ಕೇಶವಧರಿಣಿಯವರು ರಚಿಸಿದ ಮಹಾತ್ಮರ ಗುರು ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ರಂಗರಾವ್‌ರವರು ದಲಿತರನ್ನು ಜೀತದಿಂದ ಮುಕ್ತರನ್ನಾಗಿ ಮಾಡಿ ಅವರಲ್ಲಿ ಆತ್ಮಸ್ಥೆರ್ಯವನ್ನು ತುಂಬುವ ಕಾರ್ಯದಲ್ಲಿ ನಿರತರಾದ ಸಂದರ್ಭದಲ್ಲಿ ಮಾತನ್ನು ಹೇಳಿದರು .

ವಿವರಣೆ : ಅನ್ಯರ ಮನೆಯ ಅನ್ನಕ್ಕಿಂತ ಎಂದಾಗ , ತುತ್ತು ಅನ್ನಕ್ಕಾಗಿ ಹೀನಾ ಮಾನವಾಗಿ ಬೈಸಿಕೊಂಡು ಒಂದು ತುತ್ತು ಅನ್ನ ತಿನ್ನುವುದರಿಂದ ಗೌರವದೊಂದಿಗೆ ಪರಿಶ್ರಮ ಪಟ್ಟು ಗಂಜಿ ಕುಡಿದರು ಅದರಲ್ಲಿ ತೃಪ್ತಿ ಸಿಗುತ್ತದೆ ಎಂಬುದು ಈ ವಾಕ್ಯದ ಅರ್ಥ .

ವಿಶೇಷತೆ : ಸ್ವತಂತ್ರವಾಗಿ ಬದುಕಬೇಕೆಂಬ ನೀತಿ ಇಲ್ಲಿದೆ .

4. ಜೀತದ ಕೆಲಸ ಯಾರು ಮಾಡುತ್ತಾರೆ ?

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು “ ಡಾ . ಮಗಳವಳ್ಳಿ ಕೇಶವಧರಿಣಿ ” ಯವರು ರಚಿಸಿದ ಮಹಾತ್ಮರ ಗುರು ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಸಮಾಜದ ಜನ ದಲಿತರಿಗೆ ವಿದ್ಯೆಯಿಂದ ವಂಚಿತರಾಗುವಂತೆ ಮಾಡಿದ್ದರು . ಏಕೆಂದರೆ ಅವರು ವಿದ್ಯಾವಂತರಾಗಿ , ಬುದ್ದಿವಂತರಾದರೆ ಜೀತದ ಕೆಲಸ ಮಾಡುವವರು ಎಂಬುದು ಸಮಾಜದಲ್ಲಿ ತಮ್ಮನ್ನು ತಾವು ಶ್ರೇಷ್ಠರೆಂದು ಭಾವಿಸುವ ಜನರ ಅಭಿಪ್ರಾಯ ಎಂಬುದಾಗಿ ರಂಗರಾವ್ ಈ ವಾಕ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ .

ವಿವರಣೆ : ದಲಿತರನ್ನು ವಂಚಿತರನ್ನಾಗಿಸಿದ ಸಮಾಜದ ಬಗ್ಗೆ ವಿಷಾದ ಪಡಿಸುತ್ತ ರಂಗರಾವ್‌ರವರು ಈ ಮಾತನ್ನು ಹೇಳಿದ್ದಾರೆ . ಜೀತಮುಕ್ತರನ್ನಾಗಿ ಮಾಡಲು ವಿದ್ಯಾವಂತರಾಗಿ ಪಣ ತೊಟ್ಟ ಸಂದರ್ಭದಲ್ಲಿ ವಿವರಿಸಲಾಗಿದೆ .

ವಿಶೇಷತೆ : ವಿದ್ಯಾವಂತರನ್ನಾಗಿಸಬೇಕೆಂಬ ಪರೋಕ್ಷ ಉದ್ದೇಶ ಇಲ್ಲಿದೆ .

5. ರಂಗರಾವ್‌ರವರಿಂದ ಸಾರ್ವಜನಿಕ ಸೇವಾ ನಿಷ್ಠೆಯನ್ನು ಮನಗಾಣಿಸಿಕೊಂಡೆ

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು “ ಡಾ . ಮಗಳವಳ್ಳಿ ಕೇಶವಧರಿಣಿಯವರು ರಚಿಸಿದ ಮಹಾತ್ಮರ ಗುರು ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು ಮಹಾತ್ಮ ಗಾಂಧೀಜಿಯವರು ರಂಗರಾವ್‌ರವರ ಸೇವಾನಿಷ್ಠೆಯನ್ನು ಕಂಡ ಗಾಂಧೀಜಿಯವರು ಈ ಮೇಲ್ಕಂಡ ವಾಕ್ಯವನ್ನು ಹೇಳಿದರು .

ವಿವರಣೆ : ರಂಗರಾವ್‌ರವರ ನಿಸ್ವಾರ್ಥ ಸೇವೆಯನ್ನು ಕಣ್ಣಾರೆ ಕಂಡು ಅವರು ನನ್ನ ಗುರುಗಳು ಎಂದು ಕರೆದರು . ಇದರಲ್ಲಿ ರಂಗರಾವ್‌ರವರ ಬಗ್ಗೆ ಗಾಂಧೀಜಿಯವರಿಗಿದ್ದ ಅಭಿಪ್ರಾಯ ಸ್ಪಷ್ಟವಾಗಿದೆ .

ವಿಶೇಷತೆ : ಗಾಂಧೀಜಿಯವರು ಮಹಾತ್ಮರೆನಿಸಿದರು , ಮಹಾತ್ಮರಾದ ಗಾಂಧೀಜಿ ರಂಗರಾವ್‌ರನ್ನು ನನ್ನ ಗುರುಗಳು ‘ ಎಂದರು . ಲೇಖಕರು ಅವರನ್ನು ‘ ಮಹಾತ್ಮರ ಗುರು ‘ ಎಂಬುದಾಗಿ ಕರೆದರು .

6. ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ .

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು “ ಡಾ . ಮಗಳವಳ್ಳಿ ಕೇಶವಧರಿಣಿಯವರು ರಚಿಸಿದ ಮಹಾತ್ಮರ ಗುರು ಎಂಬ ಗದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತೀಯತೆ ಅಸ್ಪೃಶ್ಯತೆಯ ಅನಿಷ್ಠ ಪಿಡುಗುಗಳು ತುಂಬಿರುವಾಗ ದಕ್ಷಿಣ ಕನ್ನಡ ಜಿಲ್ಲೆಯ ಶೋಷಿತ ಜನಾಂಗದವರ ಬಾಳಿನಲ್ಲಿ ನೈತಿಕ ಧೈರ್ಯದ ನಂದಾದೀಪ ಹಚ್ಚಿದ ಕುದ್ಮುಲ್ ರಂಗರಾವ್‌ರವರ ಸೇವಾಕಾರ್ಯದ ಬಗ್ಗೆ ಇಲ್ಲಿ ವಿವರಿಸಲಾಗಿದೆ .

ವಿವರಣೆ : ಶೋಷಿತ ಜನಾಂಗದವರಿಗೆ ವಿದ್ಯಾ ಬುದ್ದಿ ಕೊಟ್ಟು ಆತ್ಮಸ್ಥೆರ್ಯ ವನ್ನು ಹೆಚ್ಚಿಸಿ ಸಮಾನತೆಯ ಅರ್ಥ ನಾಡಿ ಜ್ಞಾನವೆಂಬ ನಂದಾದೀಪವಾದವರು ರಂಗರಾವ್‌ರವರು ಎಂಬುದಾಗಿ ಹೇಳುತ್ತಾ ಅವರ ವ್ಯಕ್ತಿತ್ವದ ಬಗ್ಗೆ ಬೆಳಕು ಚೆಲ್ಲಿದೆ .

ವಿಶೇಷತೆ : ತಾತ್ಕಾಲಿಕ ಸಮಾಜದ ಜಾತೀಯತೆಯ ಪಿಡುಗು ಹಾಗೂ ಅದನ್ನು ನಿವಾರಣೋಪಾಯ ದಾರಿಯ ಬಗ್ಗೆ ಇಲ್ಲಿ ಸರಳ ಭಾಷೆಯಲ್ಲಿ ವಿವರಿಸಲಾಗಿದೆ .

1st PUC Kannada Mahatmara Guru Notes Question Answer Pdf Download

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *