1st PUC Kannada Nirakarane Notes | ಪ್ರಥಮ ಪಿಯುಸಿ ಕನ್ನಡ ನಿರಾಕರಣೆ ನೋಟ್ಸ್

ಪ್ರಥಮ ಪಿ.ಯು.ಸಿ ನಿರಾಕರಣೆ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 1st Puc Nirakarane Kannada Lesson Notes Question Answer Summary Mcq Pdf Download Kannada Medium Karnataka State Syllabus 2024 Kseeb Solutions For Class 11 Kannada Chapter 7 Notes 1st Puc Kannada 7th Lesson Notes Nirakarane Kannada Question Answer Nirakarane Notes in Kannada

1st Puc Kannada 7th Chapter Notes Pdf Download

 

Nirakarane Kannada Lesson Notes

ತರಗತಿ: ಪ್ರಥಮ ಪಿ.ಯು.ಸಿ

ಕತೆಗಾರರು ಹೆಸರು: ಡಾ . ವೀಣಾಶಾಂತೇಶ್ವರ

ಗದ್ಯ ಭಾಗದ ಹೆಸರು: ನಿರಾಕರಣೆ

1st PUC Kannada Nirakarane Notes. ಪ್ರಥಮ ಪಿಯುಸಿ ಕನ್ನಡ ನಿರಾಕರಣೆ ನೋಟ್ಸ್.‌‌
1st PUC Kannada Nirakarane Notes ಪ್ರಥಮ ಪಿಯುಸಿ ಕನ್ನಡ ನಿರಾಕರಣೆ ನೋಟ್ಸ್

ಕತೆ – ಕತೆಗಾರ್ತಿ : ಡಾ . ವೀಣಾಶಾಂತೇಶ್ವರ ( ೧೯೪೫ )

ಡಾ . ವೀಣಾಶಾಂತೇಶ್ವರ ಬಾಗಲಕೋಟೆಯವರು . ಇಂಗ್ಲಿಷ್ ಪ್ರಾಧ್ಯಾಪಕರಾಗಿ , ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಈಗ ನಿವೃತ್ತಿ ಹೊಂದಿದ್ದಾರೆ . ನಡೆದದ್ದೇ ದಾರಿ – ಸಮಗ್ರ ಕಥಾ ಸಂಕಲನ , ‘ ಗಂಡಸರು ‘ ಇವರ ಕಾದಂಬರಿ , ಇವರಂದ ವಿಮರ್ಶಾಕೃತಿಗಳು ಮತ್ತು ಅನೇಕ ಸಂಪಾದಿತ ಕೃತಿಗಳು ಹಾಗೂ ಅನುವಾದಿತ ಕೃತಿಗಳು ಪ್ರಕಟವಾಗಿವೆ .

ಅನೇಕ ಸಣ್ಣಕತೆಗಳು ಅನ್ಯಭಾಷೆಗಳಿಗೆ ಅನುವಾದವಾಗಿವೆ . ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ , ಹಿಂದಿಯಿಂದ ಕನ್ನಡಕ್ಕೆ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ದಾನ ಚಿಂತಾಮಣಿ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ .

ನಿರಾಕರಣೆಯು ದುಷ್ಯಂತ ಮತ್ತು ಶಕುಂತಲೆಯರ ಕತೆಯನ್ನು ಗಮನದಲ್ಲಿಟ್ಟುಕೊಂಡು ವಾಸ್ತವಿಕ ನೆಲೆಯಲ್ಲಿ ಬರೆದ ಅಪರೂಪದ ಕತೆ , ಗಾಂಧರ್ವ ವಿವಾಹವಾದ ದುಷ್ಯಂತ , ಉಂಗುರದ ಕಾರಣಕೊಟ್ಟು ಶಕುಂತಲೆಯನ್ನು ನಿರಾಕರಿಸುತ್ತಾನೆ .

ಕಾಲಕ್ರಮೇಣ ಶಕುಂತಲೆಯನ್ನು ತನ್ನ ಅರಮನೆಗೆ ಬರಮಾಡಿಕೊಳ್ಳುವ ಸಂದರ್ಭ ಸ್ವತಃ ದುಷ್ಯಂತನೆ ಅಂತಃಪುರಕ್ಕೆ ಆಹ್ವಾನ ಕೊಟ್ಟಾಗ ಅಲ್ಲಿಗೆ ಹೋಗಲು ಶಕುಂತಲೆ ನೇರವಾಗಿ ನಿರಾಕರಣೆ ಮಾಡುತ್ತಾಳೆ . ಸ್ತ್ರೀವಾದಿ ನೆಲೆಯಲ್ಲಿ ‘ ನಿರಾಕರಣೆ ‘ ಕತೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಬಹುದು .

ಪದಕೋಶ :

ತಪ್ತ – ನೊಂದ , ಬೆಂದ ; ಹಳವಂಡ – ಹಂಬಲ , ಕಳವಳ , ಏನೇನನ್ನೋ ಬಯಸುವುದು ; ಸ್ತಬ್ಧ – ಮೌನ , ಮಂಕಾಗಿ ; ಕರಂಡ – ಕರಡಿಗೆ , ಪೆಟ್ಟಿಗೆ : ಜಾತಕರ್ಮ – ನಾಮಕರಣದ ಸಮಾರಂಭ ; ದಾವಾನಲ – ಕಾಡಿಚ್ಚು : ವಿಪ್ಲವ – ಆಂದೋಲನ , ಪೀಡೆ , ಕ್ರಾಂತಿ , ಬದಲಾವಣೆ : ಪ್ರಾಜ್ಞ ವಿದ್ವಾಂಸ ; ತಿಳುವಳಿಕೆಯುಳ್ಳವನು .

1st PUC Nirakarane Kannada Lesson Notes Question Answer

I . ಒಂದು ವಾಕ್ಯದಲ್ಲಿ ಉತ್ತರಿಸಿ .

1.ಭರತನ ತಂದೆಯ ಹೆಸರೇನು ?

ಭರತನ ತಂದೆಯ ಹೆಸರು ದುಷ್ಯಂತ .

2. ರಕ್ಷಾ ಕರಂಡಾವು ಯಾರ ಕೈಯಿಂದ ಕೆಳಗೆ ಬಿದ್ದಿತು ?

ರಕ್ಷಾ ಕರಂಡಾವು ಭರತನ ಕೈಯಿಂದ ಕೆಳಗೆ ಬಿದ್ದಿತು .

3. ಶಕುಂತಲೆಯ ಅಂತಃಪುರದಿಂದ ದುಷ್ಯಂತ ಹೊರ ನಡೆದದ್ದು ಹೇಗೆ ?

ಭಾರವಾದ ಹೆಜ್ಜೆಗಳನ್ನಿಡುತ್ತಾ ನಿಧಾನವಾಗಿ ಶಕುಂತಲೆಯ ಅಂತಃಪುರದಿಂದ ದುಷ್ಯಂತ ಹೊರನಡೆದನು .

4. ಶಕುಂತಲೆಯ ತಾಯಿಯ ಹೆಸರೇನು ?

ಶಕುಂತಲೆಯ ತಾಯಿಯ ಹೆಸರು ಮೇನಕಾ ,

5. ಯಾರ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ ?

ಭರತನ ಶ್ರೇಯಸ್ಸಿಗಾಗಿ ಶಕುಂತಲೆ ಅರಮನೆಗೆ ಬಂದಿದ್ದಾಳೆ .

II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಅಪರಾಜಿತಾ ಬಳ್ಳಿಯ ಗುಣ ಯಾವುದು ?

ತಂದೆ ತಾಯಿಯನ್ನು ಬಿಟ್ಟು ಯಾರಾದರೂ ಅದನ್ನು ಮುಟ್ಟಿದರೆ ತಕ್ಷಣ ಆ ಅಪರಾಜಿತಾ ಬಳ್ಳಿ ಹಾವಾಗಿ ಕಚ್ಚುತ್ತದೆ .

2. ಆರ್ಯ ಪುತ್ರ ಬಂದಿದ್ದಾನೆ ಎಂದಾಗ ಶಕುಂತಲೆಯ ಪ್ರತಿಕ್ರಿಯೆ ಏನು ?

ಆರ್ಯ ಪತ್ರ ಬಂದಿದ್ದಾನೆ ಎಂದಾಗ ಶಕುಂತಲೆಯ ಮನಸ್ಸಿನಲ್ಲಿ ಹಲವು ವರ್ಷಗಳಿಂದ ರಾತ್ರಿ – ಹಗಲೆನ್ನದೆ ಅವಮಾನದ ಅಗ್ನಿಯಲ್ಲಿ ಬೇಯುತ್ತಿರುವ , ನಿರೀಕ್ಷೆಯ ನೋವಿನಲ್ಲಿ ನಲುಗುತ್ತಿರುವ , ಅಂದು ರಾಜ್ಯಸಭೆಯಲ್ಲಿ ಎಲ್ಲರೆದುರು ದುಷ್ಯಂತನಿಗೆ ತಿರಸ್ಕೃತಳಾಗಿ ಹೊರಟು ಬಂದಂದಿನಿಂದ ಇಲ್ಲಿಯವರೆಗೆ ಅನುಭವಿಸಿದ ಯಾತನೆಗಳ ಮರುಕಳೆಸುತ್ತಿದ್ದವು .

3. ಶಕುಂತಲೆ ಕಂಚಿನ ಧ್ವನಿಯಿಂದ ದುಷ್ಯಂತನಿಗೆ ಹೇಳಿದ್ದೇನು ?

ಶಕುಂತಲೆ , ಕಂಚಿನ ಧ್ವನಿಯಲ್ಲಿ , ನಿಲ್ಲು ಮಹಾರಾಜ ಎಂಬ ಶಬ್ದದೊಂದಿಗೆ ಹೇಳಿದಳು . – ಅವಳ ಧ್ವನಿ ಅವಶ್ಯಕತೆಗಿಂತ ಕಠಿಣವಾಗಿತ್ತು . ಧ್ವನಿಯನ್ನು ಸ್ಥಿಮಿತಕ್ಕೆ ತರಲು ಯತ್ನಿಸಿದಳು .

4. ದುಷ್ಯಂತರಾಜನು ಶಕುಂತಲೆಯ ಅಂತಃಪುರದಿಂದ ಹೊರ ನಡೆದಾಗ ಆತನ ಮನಸ್ಥಿತಿ ಹೇಗಿತ್ತು ?

ಹೊರಗಿನ ಜಗತ್ತಿನಲ್ಲಿ ಕತ್ತಲು ಆವರಿಸಿದ ರೀತಿ , ಆತನ ಮನಸ್ಥಿತಿಯೂ ದು : ಖದಿಂದ ಭಾರವಾಗಿತ್ತು . ಭಾರವಾದ ಹೆಜ್ಜೆಗಳನ್ನು ಇಡುತ್ತ ದುಷ್ಕಂಥನು ನಿಧಾನವಾಗಿ ಶಕುಂತಲೆಯ ಅಂತ : ಪುರದಿಂದ ಹೊರಗೆ ನಡೆದನು

5. ಶಕುಂತಲೆ ತನ್ನ ಬದುಕು ಏನಾಗಿದೆ ಎಂದು ಯೋಚಿಸುತ್ತಾಳೆ ?

ಶಕುಂತಲೆ ತನ್ನ ಬದುಕು ಒಂದು ಅಗ್ನಿಕುಂಡವಾಗಿದೆ , ಬೆಂಗಾಡಾಗಿದೆ , ದಾವಾನಲವಾಗಿದೆ , ಬತ್ತಿ ಹೋದ ಸಮುದ್ರವಾಗಿದೆ . ಇಂತಹ ತಾನು ಈತನನ್ನು ಸ್ವೀಕರಿಸಬೇಕಂತೆ ! ಏನಿದು ವಿಧಿಯ ಕ್ರೂರ ಅಪಹಾಸ್ಯ ಎಂಬುದಾಗಿ ಶಕುಂತಲೆ ತನ್ನ ಬದುಕಿನ ಬಗ್ಗೆ ಯೋಚಿಸಿದಳು .

6. ಅರಮನೆಗೆ ಯಾವ ಕಾರಣಕ್ಕಾಗಿ ಬಂದಿದ್ದೇನೆಂದು ಶಕುಂತಲೆ ಹೇಳುತ್ತಾಳೆ ?

ಮಹಾರಾಜ ತಾನು ಈ ಅರಮನೆಗೆ ಶಕುಂತಲೆಯು , ದುಷ್ಯಂತನಿಗೆ ಬಂದಿರುವುದು ಕುಮಾರ ಭರತನ ಶ್ರೇಯಸ್ಸಿಗಾಗಿ ಮಾತ್ರ . ಆತನ ವಿದ್ಯಾಭ್ಯಾಸ , ತರಬೇತಿ , ಸರಿಯಾಗಿ ನಡೆಯಬೇಕು ” ಎಂಬ ಹಂಬಲದಿಂದ ಮಾತ್ರ ತಾನು ಬಂದಿರುವೆ , ಎಂಬುದಾಗಿ ಹೇಳುತ್ತಾಳೆ .

III ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ ,

1. ದುಷ್ಯಂತ ಮತ್ತು ಶಕುಂತಲೆ ನಡುವೆ ಅಂತ : ಪುರದಲ್ಲಿ ನಡೆದ ಮಾತುಗಳನ್ನು ವಿವರಿಸಿ .

ದುಷ್ಯಂತ , ಶಕುಂತಲೆಯ ಅಂತಃಪುರದೊಳಗೆ ಬಹಳ ಉಲ್ಲಾಸದಿಂದ – ದೇವಿ , ನಾನಿಂದ ಪರಮಸುಖಿ ! ವರ್ಷಗಳ ಕಾಲ ತಪಿಸಿರುವ ನಿನ್ನ ಮನಸ್ಸು ಶಾಂತ ಗೊಳಿಸುವುದಿಲ್ಲವೇ ? ಎಂದು ಹೇಳಲೂ ಇಲ್ಲ ಮಹಾರಾಜ , ವರ್ಷಗಳ ಕಾಲ ತಪಿಸಿರುವ ನನ್ನ ಮನಸ್ಸು ಶಾಂತವಾಗಬಹುದು . ಆದರೆ ನೀನು ಘಾಸಿಗೊಳಿಸಿರುವ ಮನಸ್ಸು ಮತ್ತೆ ಚೇತರಿಸಿಕೊಳ್ಳಲಾರದು . ನೀನು ಹೊಸಕಿ ಹಾಕಿದ ಭಾವನೆಗಳು ಮತ್ತೆ ಜೀವ ತಾಳಲರವು , ಅಲ್ಲದೆ ಇಲ್ಲಿಗೆ ತಾನೂ ಬಂದಿರುವುದು , ಕುಮಾರ ಭರತನ ಶ್ರೇಯಸ್ಸಿಗಾಗಿ ತಾನು ಬಂದಿರುವುದಾಗಿ ತಿಳಿಸುತ್ತಾಳೆ . ದುಷ್ಯಂತ ಪದೇ ಪದೇ ತನ್ನನ್ನು ಕ್ಷಮಿಸುವ ಮಾತನಾಡಿದಾಗಲೂ ಶಕುಂತಲೆಯ ಮಾತು ಶೋಷಿತ ಹೆಣ್ಣಿನ ಪ್ರತೀಕಳಾಗಿದ್ದಳು .

2.ದುಷ್ಯಂತನನನು ನಿರಾಕರಿಸಲು ಶಕುಂತಲೆ ಕೊಡುವ ಕಾರಣಗಳೇನು ?

ತಿಳಿಸಿ ದುಷ್ಯಂತನನ್ನು ನಿರಾಕರಿಸಲು ಶಕುಂತಲೆ ಕೊಡುವ ಕಾರಣಗಳೆಂದರೆ – ಅಂದು ಅರಮನೆಯಲ್ಲಿ ನಿಷ್ಟುರವಾಗಿ ತನ್ನನ್ನು ಹೊರಗಟ್ಟಿದ ಮನುಷ್ಯನ ಬಗ್ಗೆ ಆಕೆಯ ಹೂವಿನಂತಹ ಮನಸ್ಸು ಮುದುಡಿ ಹೋಗಿದೆ . ನೂರು ಆಸೆ ಹೊತ್ತು ಶಕುಂತಲೇ ದುಷ್ಯಂತನೆಡೆಗೆ ಬಂದಿದ್ದಳು . ನಿಷ್ಠುರವಾಗಿ ತಿರಸ್ಕರಿಸಿದ ದಿನವೇ ಆಕೆಯಲ್ಲಿ ಸುಪ್ತವಾಗಿ ಅಡಗಿದ್ದ ಭಾವನೆಗಳೆಲ್ಲಾ ಸತ್ತು ಹೋಗಿದ್ದವು . ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ಶಕುಂತಲೆಯ ಬದುಕು ಒಂದು ಅಗ್ನಿ ಕುಂಡವಾಗಿದೆ . ಬೆಂಗಾಡಾಗಿದೆ …. ದಾವಾನಲವಾಗಿದೆ . ಬತ್ತಿ ಹೋದ ಸಮುದ್ರವೂ ಆಗಿದೆ . ಆಕೆಯಲ್ಲಿ ಅಡಗಿದ್ದ ಸ್ತ್ರೀತ್ವವು ತೀವ್ರವಾಗಿ ಅವಮಾನಿತವಾಗಿದೆ .

3.ಪುರುಷ ಸಮಾಜದ ಬಗ್ಗೆ ಶಕುಂತಲೆಯ ನಿಲುವೇನು ?

ಪುರುಷ ಸಮಾಜದ ಬಗ್ಗೆ ಶಕುಂತಲೆಯ ನಿಲುವು ಹೀಗಿತ್ತು . – “ ತಾನು ಮಾಡಿದ ತಪ್ಪಿನಿಂದ ಸುಲಭವಾಗಿ ಪಾರಾಗಲು ಪುರುಷನಿಗೆ ನೂರು ದಾರಿಗಳಿವೆ , ತನ್ನ ಅನುಚಿತ ವರ್ತನೆಯಿಂದ ಬೇರೆಯವರಿಗೆ ಆಗುವ ನೋವಿನ ಹೊಣೆಯಿಂದ ತಪ್ಪಿಸಿಕೊಳ್ಳಲು ಆತನಿಗೆ ಹಲವು ಮಾರ್ಗಗಳಿವೆ ” ಪುರುಷ ತಪ್ಪು ಮಾಡಿದನೆಂದೂ ನಮ್ಮ ಸಮಾಜ ಗಂಭೀರವಾಗಿ ಪರಿಗಣಿಸುವುದು ಇಲ್ಲ . ಆದ್ದರಿಂದ ಆತನು ಲಜ್ಜಿತನಾಗುವುದಿಲ್ಲ .

4. ಶಕುಂತಲೆ ತನ್ನ ಬದುಕನ್ನು ಅರ್ಥೈಸಿಕೊಂಡದ್ದು ಹೇಗೆ ತಿಳಿಸಿ .

ಶಕುಂತಲೆ ತನ್ನ ಬದುಕನ್ನು ಅರ್ಥೈಸಿಕೊಂಡಿದ್ದು ಹೀಗೆ ಅಗ್ನಿಕುಂಡದಲ್ಲಿ ಇದ್ದು ಬೆಂದು ಎಲ್ಲಾ ಸುಟ್ಟು ಭಸ್ಮವಾಗಿ ಬೆಂಗಾಡಾಗಿ , ಇಡೀ ಬದುಕೆಂಬ ಅರಣ್ಯದಲ್ಲಿ ದುಃಖವೆಂಬ ದಾವಾನಲು ಉರಿಯುತ್ತಿದ್ದು , ಇಡೀ ಬದುಕು ವಿಶಾಲವಾದ ಸಮುದ್ರದಂತೆ ಈಗ ಅದು ಸಂಪೂರ್ಣವಾಗಿ ಬತ್ತಿ ಹೋಗಿದೆ ಎಂಬುದಾಗಿ ಅರ್ಥೈಸಿಕೊಳ್ಳುತ್ತಾಳೆ .

5. ನಿರಾಕರಣೆಯ ಕತೆಯಲ್ಲಿ ಬರುವ ಶಕುಂತಲೆಯ ವ್ಯಕ್ತಿತ್ವವನ್ನು ವಿವರಿಸಿ .

ನಿರಾಕರಣೆಯ ಕತೆಯಲ್ಲಿ ಬರುವ ಶಕುಂತಲೆಯಲ್ಲಿ ಬಹುಮುಖ ವ್ಯಕ್ತಿತ್ವವನ್ನು ಹೊಂದಿದ್ದಾಳೆ . ಶಕುಂತಲೆಯ ಮಾತಿಯಲ್ಲಿಯೇ ಹೇಳುವುದಾದರೆ ‘ ನಾನು ಶಿಕ್ಷೆ ಕೊಡುವಷ್ಟು ಕಠಿಣ ಮನಸ್ಸಿನವಳು ಅಲ್ಲ , ಪ್ರತಿರೋಧ ಮಾಡುವಷ್ಟು ಸಣ್ಣ ಮನಸ್ಸಿನವಳೂ ಅಲ್ಲ , ತಾಯಿಯ ಜವಾಬ್ದಾರಿ ಅರಿತ ಆಕೆ ಒಬ್ಬ ಆದರ್ಶ ಮಾತೆ , ತಾಯಿ ಮೇನಕೆಯಿಂದ ಪರಿತ್ಯಕ್ತಳಾದ ಈಕೆ ಕಣ್ಣಾಶ್ರಮದಲ್ಲಿ ಎಲ್ಲರ ಪ್ರೀತಿ ಪಾತ್ರಳಾಗಿ ಕೋಮಲ ಮನೋಭಾವನೆಯೊಂದಿಗೆ ಬೇಳೆದ ಈಕೆ ಭಾರತೀಯ ಸಂಪ್ರದಾಯ ರೀತಿ – ನೀತಿಗಳನ್ನು ಅನುಸರಿಸಿ ಆತ್ಮ ಸಾಕ್ಷಿಗೆ ನಿಷ್ಠಳಾಗಿ ಬದುಕು ಸಾಗಿಸಿದವಳು . ಆದರೆ ದುಷ್ಯಂತನ ಅರಮನೆಗೆ ಬಂದದ್ದು ಒಬ್ಬ ಆದರ್ಶ ಮಾತೆಯಾಗಿ ಮಗನ ಅಭಿವೃದ್ಧಿಗಾಗಯೇ ಹೊರತು ಮಹಾರಾಣಿಯಾಗಿ ಬದುಕಲು ಅಲ್ಲ . ಅಕೆಯ ಬದುಕು ಈಗಾಗಲೇ ಜೀವನದಲ್ಲಿ ನೊಂದು ಬೆಂದು ಅಗ್ನಿ ಕುಂಡವಾಗಿ , ಬೆಂಗಾಡಾಗಿ , ದಾವನಲವಾಗಿ , ಬತ್ತಿ ಹೋದ ಸಮುದ್ರವಾಗಿದ್ದಳು , ಪುರುಷ ಪ್ರಧಾನದ ಶೋಷಿತ ಪ್ರಮುಖ ಮಹಿಳೆಯಾಗಿದ್ದಳು .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. ತಾನು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದಿರುವೆ

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು ಡಾ ವೀಣಾಶಾಂತೇಶ್ವರವರು ರಚಿಸಿರುವ ‘ ನಿರಾಕರಣೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಬಿಡುಗಡೆ ‘ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ದುಷ್ಯಂತನು ಮಾರರೀಚಮುನಿಯ ಆಶ್ರಮದಲ್ಲಿ ಶಕುಂತಲೆಯನ್ನು ರಾಜಧಾನಿಗೆ ಕರೆದುಕೊಂಡು ಬರಬೇಕೆಂದು ಉದ್ದೇಶದಿಂದ ಬಂದು ಶಕುಂತಲೆಯ ಮುಂದೆ ಮಂಡಿ ಊರಿ ಕುಳಿತು ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುವ ಸಂದರ್ಭ ಇದಾಗಿದೆ .

ವಿವರಣೆ : ದುಷ್ಯಂತ ಮಹಾರಾಜನೆ ಆದರೂ , ಶಕುಂತಲೆಗೆ ತನ್ನಿಂದ ತುಂಬಾ ಕಷ್ಟ , ನೋವು ಉಂಟಾಗಿದೆ ಎಂಬ ಅರಿವುಂಟಾಗಿ ಯಾವುದೇ ರೀತಿಯ ಕೀಳರಿಮೆಯ ಭಾವನೆ ಇಲ್ಲದೆ ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಎಂಬ ಬೆಂಕಿಯಲ್ಲಿ ತಾನು ಬೆಂದು ನೋವನ್ನು ಅನುಭವಿಸಿರುವ ವಿಷಯವನ್ನು ಶಕುಂತಲೆಗೆ ತಿಳಿಸಿ ತನ್ನೊಡನೆ ಅರಮನೆಗೆ ಕರೆಯುತ್ತಾನೆ .

2. ನೀನಿನ್ನು ನನ್ನನ್ನು ಕ್ಷಮಿಸಲಿಲ್ಲವೇ ?

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು ಡಾ ವೀಣಾಶಾಂತೇಶ್ವರವರು ರಚಿಸಿರುವ ‘ ನಿರಾಕರಣೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಬಿಡುಗಡೆ ‘ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ದುಷ್ಯಂತ ಮಹಾರಾಜರು ಶಕುಂತಲೆಗೆ ಕೇಳುತ್ತಿದ್ದಾನೆ . ಪ್ರೀತಿಯಿಂದ ದುಷ್ಯಂತ ಶಕುಂತಲೆಯ ಅಂತಃಪುರದಲ್ಲಿ ಅವಳ ಬಳಿಗೆ ಬಂದಾಗ ತನ್ನ ಮನಸ್ಸಿನ ಗಾಯ ಆರಿಲ್ಲವೆಂತಲೂ , ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ ಮಾತಿಗೆ ದುಷ್ಯಂತ ಈ ಮಾತನ್ನು ಕೇಳಿದ್ದಾನೆ .

ವಿವರಣೆ : ದುಷ್ಯಂತ ಹಳೆಯ ಜೀವನ ಮರೆತು ಹೊಸ ಜೀವನ ಸಾಗಿಸಬೇಕೆಂಬ ಆಸೆಯಿಂದ ಬಂದಾಗ , ಶಕುಂತಲೆ ತಾನು ಕೇವಲ ಬರತ ತಾಯಿಂದಾಗಿ ಬಂದಿರುವುದಾಗಿಯೂ ಮಹಾರಾಣಿಯಾಗುವ ಯಾವ ಆಸೆಯೂ ತನ್ನಲ್ಲಿ ಉಳಿದಿಲ್ಲವೆಂದು ದೃಢವಾಗಿ ಹೇಳಿದಾಗ ದುಷ್ಯಂತ ಈ ಮಾತನ್ನು ಕೇಳಿದ್ದಾರೆ . ಬಗ್ಗೆ

ವಿಶೇಷತೆ : ದುಷ್ಯಂತ ಹಾಗೂ ಶಕುಂತಲೆಯ ಮನರಾವರ್ತಿ ಗುಣಗಳ ಲೇಖಕಿ ಸರಳ ಭಾಷೆಯಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾಳೆ .

3. ನಮಗಿದು ಅಭ್ಯುದಯದ ಕಾಲ , ಮಹಾಸುದಿನ

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು ಡಾ ವೀಣಾ ಶಾಂತೇಶ್ವರವರು ರಚಿಸಿರುವ ನಿರಾಕರಣೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ ಇದನ್ನು ಬಿಡುಗಡೆ ‘ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ದುಷ್ಯಂತ ಮಹಾರಾಜನು ಬಹಳ ಸಂತೋಷದಿಂದ ಶಕುಂತಲೆ ಮಗುವನ್ನು ಕಂಡು ಪೂಜ್ಯ ಮಾರೀಚಿಯವರ ಆಶೀರ್ವಾದ ಪಡೆದು ನಂತರ ರಾಜಧಾನಿಗೆ ಕರೆದುಕೊಂಡು ಹೋಗುವ ಹುಮ್ಮಸ್ಸಿನಿಂದ ಈ ವಾಕ್ಯವನ್ನು ಹೇಳುತ್ತಾನೆ .

ವಿವರಣೆ : ದುಷ್ಯಂತನೊಡನೆ ಹೊರಡಲು ಶಕುಂತಲೆ ಸಾಧ್ಯವಿಲ್ಲ ಎಂದಾಗ ದುಷ್ಯಂತನು ಆಕೆಗೆ ಸಮಾಧಾನ ಪಡಿಸುತ್ತಾ ಇಷ್ಟು ದಿನದ ಕಷ್ಟಗಳ ಕಾಲ ಕಳೆದಿದೆ , ಇನ್ನು ಮುಂದೆ ಎಲ್ಲವೂ ಒಳ್ಳೆಯದಾಗುವುದು . ಈ ದಿನ ತುಂಬಾ ಒಳ್ಳೆಯ ದಿನ ಎಂದೂ ಸಂತೋಷದಿಂದ ಸಮಾಧಾನ ಮಾಡುತ್ತಾನೆ .

ವಿಶೇಷತೆ : ಇಲ್ಲಿಯೂ ದುಷ್ಯಂತನ ವ್ಯಕ್ತಿತ್ವದ ಬಗ್ಗೆ ಲೇಖಕಿಯವರು ತಿಳಿಸಿಕೊಟ್ಟಿದ್ದಾರೆ .

4.ತಾನು ಅನುಭವಿಸಿದ ಯಾತನೆಗೆ ಎಣಿಯುಂಟೆ ?

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು ಡಾ ವೀಣಾಶಾಂತೇಶ್ವರವರು ರಚಿಸಿರುವ ನಿರಾಕರಣೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಬಿಡುಗಡೆ ‘ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ .

ಸಂದರ್ಭ : ದುಷ್ಯಂತನಿಗೆ ತನ್ನ ತಪ್ಪಿನ ಅರಿವಾಗಿ ಮಾರೀಚ ಮುನಿಗಳ ಆಶ್ರಯದಲ್ಲಿರುವ ಶಕುಂತಲೆ ಹಾಗೂ ಆಕೆಯ ಮಗುವನ್ನು ಕರೆದುಕೊಂಡು ಹೋಗಲು ಬಂದಿರುವುದಾತಿ ತಿಳಿದು ಬಂದಾಗ , ಈ ಮೊದಲು ತಾನು ಬರಬಹುದೆಂಬ ನಿರೀಕ್ಷೆಯಲ್ಲಿದ್ದು ಬಾರದಿದ್ದಾಗ ಅನುಭವಿಸಿದ ಸಂಕಟ ನೋವುಗಳ ಬಗ್ಗೆ ಶಕುಂತಲೆ ನೆನಪಿಸಿಕೊಳ್ಳುವ ಸಂದರ್ಭ ಈ ವಾಕ್ಯ ಮೂಡಿ ಎಂದಿದೆ .

ವಿವರಣೆ : ಈ ಮಾತನ್ನು ಶಕುಂತಲೆ , ಅರಮನೆಯಿಂದ ಅವಮಾನಿಸಿ , ತಿರಸ್ಕರಿಸಿ ಕಳುಹಿಸಿದ ದಿನದಿಂದ ಇದುವರೆವಿಗೂ ತಾನು ಪಟ್ಟ ನೋವು ಸಂಕಟಗಳಿಗೇನು ಕೊನೆಯಿದೇಯೇ ? ಎಂಬುದಾಗಿ ನೆನಪಿಸಿಕೊಳ್ಳುತ್ತಿದ್ದಾಳೆ .

ವಿಶೇಷತೆ : ಶಕುಂತಲೆಯ ನೋವು ಸಂಕಟಗಳನ್ನು ಲೇಖಕಿ ಸರಳವಾದ ಭಾಷೆಯಲ್ಲಿ ಮಾರ್ಮಿಕವಾಗಿ ವರ್ಣಿಸಿದ್ದಾರೆ .

5. ಹೆಣ್ಣಾಗಿ ನಾನು ಆತ್ಮ ಸಾಕ್ಷಿಗೆ ವಿರುದ್ಧವಾಗಿ ವರಿಸಲಾರೆ

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು ಡಾ || ವೀಣಾ ಶಾಂತೇಶ್ವರವರು ರಚಿಸಿರುವ ನಿರಾಕರಣೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಬಿಡುಗಡೆ ‘ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ .

ಸಂದರ್ಭ : ಶಕುಂತಲಾ ತನ್ನ ದೃಢ ನಿರ್ಧಾರವನ್ನು ದುಷ್ಯಂತನಿಗೆ ತಿಳಿಸುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆದಿದ್ದಾರೆ .

ವಿವರಣೆ : ಗಂಡಿಗೆ ಪುರುಷ ಪ್ರಧಾನ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ . ಆತ ತಪ್ಪು ಮಾಡಿದರೂ ಸಮಾಜ ಅವನನ್ನು ಕ್ಷಮಿಸುವ ದೊಡ್ಡ ಗುಣ ತೋರಿಸುತ್ತದೆ . ಆದರೆ ಹೆಣ್ಣಿನ ತಪ್ಪಿಲ್ಲದಿದ್ದರೂ ಕ್ಷಮೆ ಕೇಳುತ್ತಾ ಬಾಳಿದರೂ ತೃಪ್ತಿ ಇರುವುದಿಲ್ಲ . ದಿಟ್ಟ ಹೆಣ್ಣು ಕಂದಾಚಾರಕ್ಕೆ ಕಟ್ಟು ಬೀಳದೆ ತನ್ನ ಆತ್ಮ ಸಾಕ್ಷಿಯಾಗಿ ನಡೆದುಕೊಳ್ಳುವ ಎಂಬ ಮಾತು ಇಲ್ಲಿ ಅರಿವಾಗುತ್ತದೆ .

ವಿಶೇಷತೆ : ಪ್ರತಿಯೊಬ್ಬ ಹೆಣ್ಣಿಗೂ ಆತ್ಮಸಾಕ್ಷಿ , ಆತ್ಮಾಭಿಮಾನ ಇದ್ದು ಅದರಂತೆ ನಡೆದುಕೊಳ್ಳಬೇಕಾದ ರೀತಿಗೆ ಇಲ್ಲಿ ಹೆಚ್ಚು ಒತ್ತು ಕೊಡಲಾಗಿದೆ .

6.’ ಅಮ್ಮಾ ಈತ ನಿಜವಾಗಿಯೂ ಮಹಾರಾಜ ದುಷ್ಯಂತನೆ ! ಈತನೇ ನನ್ನ ತಂದೆಯೇ ‘

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು ಡಾ ವೀಣಾಶಾಂತೇಶ್ವರವರು ರಚಿಸಿರುವ ‘ ನಿರಾಕರಣೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಬಿಡುಗಡೆ ‘ ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ .

ಸಂದರ್ಭ : ದುಷ್ಯಂತನನ್ನು ಕಂಡ ಶಕುಂತಲೆಯ ಮಗ , ಭರತನು ಶಕುಂತಲೆಗೆ ಕೇಳಿದನು . ಪುಟ್ಟಬಾಲಕ ದುಷ್ಯಂತನನ ಬಗ್ಗೆ ಕೇಳಿದನು ಆದರೆ ಇದುವರೆವಿಗೂ ನೋಡಿರಲಿಲ್ಲ . ತಂದೆಯ ತದ್ರೂಪ ಹೊಂದಿದ ಬಾಲಕನನ್ನು ಕಂಡು ಈ ಮಾತನ್ನು ಆಶ್ಚರ್ಯ , ಕುತೂಹಲದಿಂದ ಕೇಳಿದುದಾಗಿದೆ .

ವಿವರಣೆ : ದುಷ್ಯಂತನೇ ಭರತನ ತಂದೆ ಎಂದು ಆಶ್ರಮವಾಸಿಗಳು ಮಾತನಾಡಿದುದು ತಿಳಿದಿದೆಯಾದ್ದರಿಂದ ಭರತನು ತನ್ನ ತಂದೆಯ ಬಗ್ಗೆ ತಾಯಿಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಿ ಸಮಾಧಾನ ಸಂತೋಷ ಪಡಲು ಇಚ್ಚಿಸುತ್ತಾನೆ . ಮಗುವಿನ ಮನಸ್ಸಿನಲ್ಲಿ ದುಷ್ಯಂತನ ಬಗ್ಗೆ ಬೇರೆ ಕಲ್ಪನೆ ಇದ್ದಿರಬಹುದು .

ವಿಶೇಷತೆ : ಭರತನ ಮುಗ್ಧ ಮನೋಭಾವನೆಯನ್ನು ಲೇಖಕಿ ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ .

7. ನಾನು ತಾಯಿಯ ಕರ್ತವ್ಯ ನಿರ್ವಹಿಸಲೇ ಬೇಕು

ಪ್ರಸ್ತಾವನೆ : ಪ್ರಸ್ತುತ ಈ ಕಾವ್ಯವನ್ನು ಡಾ ವೀಣಾ ಶಾಂತೇಶ್ವರವರು ರಚಿಸಿರುವ ನಿರಾಕರಣೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದ್ದು ಇದನ್ನು ಬಿಡುಗಡೆ ” ಎಂಬ ಕಥಾ ಸಂಕಲನದಿಂದ ಆರಿಸಲಾಗಿದೆ .

ಸಂದರ್ಭ : ಶಕುಂತಲೆ ತನ್ನ ಮಗನ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಈ ಮಾತನ್ನು ತಾನು ತನ್ನ ಮನಸ್ಸಿನಲ್ಲಿಯೇ ಹೇಳಿಕೊಂಡು ಸ್ಥಿರತೆಯನ್ನು ತಂದುಕೊಳ್ಳುವ ಸಂದರ್ಭ ಇದಾಗಿದೆ .

ವಿವರಣೆ : ಶಕುಂತಲೆಯೇ ತಾಯಿ ಮೇನಕೆ ತನ್ನ ಮಗುವನ್ನು ತ್ಯಜಿಸಿದ್ದರಿಂದ ಆಕೆಯ ಬದುಕು ಇಂದು ಈ ಸಂಕಷ್ಟಕ್ಕೆ ಗುರಿಯಾಗಿದೆ . ತಾನು ಆ ತಪ್ಪು ಮಾಡಬಾರದು . ಭರತನ ಮುಂದಿನ ಉತ್ತರಾಧಿಕಾರಿ , ಮಹಾರಾಜನಾಗುವವನು ಅವನಿಗಾಗಿ ಆತನ ಶಿಕ್ಷಣ , ಅಭ್ಯಾಸ , ಊಟ ಉಪಚಾರಗಳನ್ನು ಆರೈಕೆಗಳನ್ನು ತಾನು ತಾಯಿಯಾಗಿ ತನ್ನ ಕರ್ತವ್ಯ ನಿರ್ವಹಿಸಲೇಬೇಕೆಂಬ ನಿರ್ಧಾರಕ್ಕೆ ಬಂದ ವಿವರ ಈ ವಾಕ್ಯದಲ್ಲಿದೆ .

ವಿಶೇಷತೆ : ಇಲ್ಲಿ ಶಕುಂತಲೆ ಆಧುನಿಕ ತಾಯಿಯಂತೆ ತನ್ನ ಮಗನ ಶ್ರೇಯೋಭಿವೃದ್ಧಿಗಾಗಿ ತಾನು ಎಷ್ಟು ಬೇಕಾದರೂ ಕಷ್ಟಪಡಲು ಸಿದ್ಧಳಿದ್ದಾಳೆ .

1st PUC Nirakarane Kannada Lesson Notes Question Answer Pdf Download

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh