1st PUC Kannada Boleshankara Notes | ಪ್ರಥಮ ಪಿಯುಸಿ ಕನ್ನಡ ಬೋಳೇಶಂಕರ ನೋಟ್ಸ್

ಪ್ರಥಮ ಪಿ.ಯು.ಸಿ ಬೋಳೇಶಂಕರ ನಾಟಕ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Boleshankara Kannada Notes Question Answer Summary Guide Mcq Pdf Download in Kannada Medium Karnataka State Syllabus 2024, Kseeb Solutions For Class 11 Kannada Boleshankara Notes 1st Puc Kannada Boleshankara Notes 1st Puc Kannada Boleshankara Nataka Notes Pdf Boleshankara Lesson in Kannada

Boleshankara 1st Puc Kannada Notes

 

ತರಗತಿ: ಪ್ರಥಮ ಪಿ.ಯು.ಸಿ

ನಾಟಕಕಾರರು : ಡಾ . ಚಂದ್ರಶೇಖರ ಕಂಬಾರ

ನಾಟಕ-ಭಾಗದ ಹೆಸರು : ಬೋಳೇಶಂಕರ

1st PUC Kannada Booleshankara Notes. ಪ್ರಥಮ ಪಿಯುಸಿ ಕನ್ನಡ ಬೋಳೇಶಂಕರ ನೋಟ್ಸ್.‌‌
1st PUC Kannada Boleshankara Notes ಪ್ರಥಮ ಪಿಯುಸಿ ಕನ್ನಡ ಬೋಳೇಶಂಕರ ನೋಟ್ಸ್

1st PUC Boleshankara Kannada Notes Question answer

ನಾಟಕ – ನಾಟಕಕಾರರು : ಡಾ . ಚಂದ್ರಶೇಖರ ಕಂಬಾರ ( ೧೯೩೭ )

ಡಾ . ಚಂದ್ರಶೇಖರ ಕಂಬಾರರ ಹುಟ್ಟೂರು ಬೆಳಗಾವಿ ಜಿಲ್ಲೆಯ ಘೋಡಗೇರಿ . ತಂದೆ ಬಸವಣ್ಣೆಪ್ಪ ಕಂಬಾರ , ತಾಯಿ ಚೆನ್ನಮ್ಮ , ತಮ್ಮ ವಿಶಿಷ್ಟ ಸಾಹಿತ್ಯ ರಚನೆಯ ಮೂಲಕ ಕನ್ನಡನಾಡಿನ ಗಮನ ಸೆಳೆದಿರುವ ಕಂಬಾರರು ದ.ರಾ.ಬೇಂದ್ರೆಯವರ ನಂತರ ಉತ್ತರ ಕರ್ನಾಟಕ ಭಾಗದ ಜಾನಪದ ಭಾಷೆಯ ಸೊಗಡನ್ನು ತಮ್ಮ ಕೃತಿಗಳ ಮೂಲಕ ಕನ್ನಡಿಗರಿಗೆ ಉಣಿಸಿದ್ದಾರೆ .

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ , ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ . ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ .

ಕನ್ನಡ ಸಾಹಿತ್ಯದ ಸ್ಥಿತ್ಯಂತರ ಹಾಗು ಚಳವಳಿಗಳ ದೃಷ್ಟಿ – ಧೋರಣೆಗಳನ್ನು ಕರಗತ ಮಾಡಿಕೊಂಡು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಅಷ್ಟೊತ್ತಿದ್ದಾರೆ . ಕಂಬಾರರು ಕವಿ , ನಾಟಕಕಾರ , ನಟ , ಚಲನಚಿತ್ರ ಹಾಗೂ ಸಂಗೀತ ನಿರ್ದೇಶಕ , ಜಾನಪದ ತಜ್ಞ , ಉತ್ತಮ ಆಡಳಿತಗಾರ . ಜೊತೆಗೆ ಅಧ್ಯಾಪಕರು .

ಅಣ್ಣತಂಗಿ , ಕರಿಮಾಯಿ , ಜಿಕೆ ಮಾಸ್ತರ ಪ್ರಣಯ ಪ್ರಸಂಗ , ಶಿಖರ ಸೂರ್ಯ ಸಿಂಗಾರವ್ವ ಮತ್ತು ಅರಮನೆ – ಇವರ ಕಾದಂಬರಿಗಳು , ಮುಗುಳು , ಹೇಳತೇನ ಕೇಳಾ , ತಕರಾರಿನವರು , ಬೆಳ್ಳಿಮೀನು , ಅಕ್ಕಕ್ಕು ಹಾಡುಗಳು ಇವರ ಕವನ ಸಂಕಲನಗಳು , ಋಷ್ಯಶೃಂಗ , ಹರಕೆಯಕುರಿ , ಸಂಗ್ಯಾಬಾಳ್ಯ , ನಾರ್ಸಿಸಿಸ್ , ಜೋಕುಮಾರಸ್ವಾಮಿ , ಪುಷ್ಪರಾಣಿ , ಸಿರಿಸಂಪಿಗೆ , ಜೈಸಿದನಾಯ್ಕ , ಬೆಂಬೆತ್ತಿದ್ದ ಕಣ್ಣು ಮುಂತಾದ ನಾಟಕಗಳನ್ನು ಬರೆದಿದ್ದಾರೆ .

ಜಾನಪದ , ರಂಗಭೂಮಿ , ಸಾಹಿತ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ 235 ನಾಟಕ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ . ‘ ಚಕೋರಿ ‘ ಎಂಬ ಮಹಾಕಾವ್ಯವನ್ನೂ ರಚಿಸಿದ್ದಾರೆ .

ಕರಿಮಾಯಿ , ಸಂಗೀತಾ , ಕಾಡು – ಕುದುರೆ , ಸಿಂಗಾರೆವ್ವ ಮತ್ತು ಅರಮನೆ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿ , ನಿರ್ದೇಶಿಸಿರುವುದು ಇವರ ಸೃಜನಶೀಲತೆಯ ದ್ಯೋತಕ . ೨೨೬ ನಾಡೋಜ , ಪದ್ಮಶ್ರೀ , ಕುಮಾರನ್ ಆಶನ್ , ಠಾಗೋರ್ ಹಾಗೂ ಕಬೀರ ಸಮ್ಮಾನ್ ಪ್ರಶಸ್ತಿ ಪಡೆದಿರುವ ಇವರು ತಮ್ಮ ಸಮಗ್ರ ಸಾಹಿತ್ಯ ರಚನೆಗಾಗಿ ೨೦೧೦ ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಗಳಿಸಿದ್ದಾರೆ . ೨೦೦೪ ರಿಂದ ೨೦೧೦ ರ ಅವಧಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ನೇಮಕಗೊಂಡಿದ್ದರು .

ಪದಕೋಶ :

ಬೋಳೆ – ಮುಗ್ಧ , ಸಾಧು ( ಮುಕ್ತ ವ್ಯಕ್ತಿತ್ವ ಹೊಂದಿದ ) ; ಐಲೀಕಡೆ – ಇತ್ತೀಚೆಗೆ : ಬೆಪ್ಪಕ್ಕಡಿ ತಿಳಿಗೇಡಿ , ಧಡ್ಡ ; ಆದಿಮ- ಮೂಲದ , ಆದಿಕಾಲದ ; ಮಜಬೂತ – ಸೊಗಸಾದುದು , ಬಲವಾದುದು ; ಕಿಲುಬು – ಕೊಳೆ , ಪೊಲಸು , ಮಳೆ – ಪೊದೆ ; ಮರಡಿ – ಗುಡ್ಡ : ಗಿಟ್ಟು ಗಳಿಸು , ಪಡೆ ; ಪೈಕಿ – ಕಡೆ , ಸಂಬಂಧಿಸಿದವ ; ದ್ರಾಬೆ – ಮೂರ್ಖ , ದುರ್ಬಲ ವ್ಯಕ್ತಿ , ನಿಷಯೋಜಕ ; ತಂತ್ರಿ – ಉಪಾಯಗಾರ , ಪಿತೂರಿಗಾರ : ಹಂಗಾಮು – ಹಾವಳಿ , ಗಲಾಟೆ ; ಸೊಲಗಿ – ಅಳತೆಯ ಸಾಧನ ; ಐಷಾರಾಮ – ವಿಲಾಸಿ : ಗಳೆಸಾಮಾನು- ಬೇಸಾಯದ ಪರಿಕರಗಳು ; ರುಂಭಾಲು – ರುಮಾಲು , ಪೇಟ : ಲಫಂಗ – ಪುಂಡ , ದುರಾಚಾರಿ ; ಸಗ್ಗುವ ಕುಗ್ಗುವ : ಮಜಕೂರು – ಸುದ್ದಿ : ಜಾಪಾಳಮಾತ್ರೆ – ಭೇದಿಮಾತ್ರೆ : ಮಲೆತು – ಗರ್ವದಿಂದ ; ಗರ್ದಗಮ್ಮತ್ತು – ಗತ್ತುಗೈರತ್ತು ; ಹತ್ಯರ – ಆಯುಧ ; ಬೇಖಬರಾ – ಅರಿವಿಲ್ಲದ .

1st PUC Boleshankara Kannada Notes Question answer

I . ಒಂದು ವಾಕ್ಯದಲ್ಲಿ ಉತ್ತರಿಸಿ .

1. ಬೋಳೇಶಂಕರನ ಊರು ಯಾವುದು ?

ಬೋಳೇಶಂಕರನ ಊರು ಶಿವಪುರ .

2. ಪಿಶಾಚಿಗಳು ಮನುಷ್ಯನನ್ನು ಯಾವುದರ ಮೂಲಕ ಪ್ರವೇಶಿಸುತ್ತವೆ ?

ಪಿಶಾಚಿಗಳು ಮನುಷ್ಯನ ದೌರ್ಬಲ್ಯಗಳ ಮೂಲಕ ಅವನೊಳಗೆ ಪ್ರವೇಶಿಸುತ್ತವೆ .

3. ಬೋಳೇಶಂಕರನ ಅಣ್ಣ ಅತ್ತಿಗೆಯವರಿಗೆ ಉಂಟದ ಆಸೆ ಯಾವುದು ?

ಬೆಟ್ಟದ ಮೇಲಿನಿಂದ ನೆಗೆಯೊ ಆಸೆ ಜೊತೆಗೆ ಆಸ್ತಿ ಪಾಲು ಮಾಡಿ ತಂದ ಪಾಲಿನ ಆಸ್ತಿ .

4. ಪಿಶಾಚಿಗಳಿಗೆ ಯಾರ ಹೆಸರು ಕೇಳಿದರೆ ಹೆದರುತ್ತವೆ ?

ಪಿಶಾಚಿಗಳು ಶಿವನ ಹೆಸರು ಕೇಳಿದರೆ ಹೆದರುತ್ತವೆ .

5 . ಬೋಳೇಶಂಕರನ ಹೊಟ್ಟೆನೋವು ಯಾವುದರಿಂದ ಮಾಯವಾಯಿತು ?

ಪಿಶಾಚಿ ಕೊಟ್ಟ ಬೇರು ನೊಂದಿಗೆ ಮೇಲೆ ಹೊಟ್ಟೆನೋವು ಮಾಯವಾಯಿತು .

6. ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ ” ಎಂದು ಪಿಶಾಚಿ ಯಾರ ಬಗ್ಗೆ ಹೇಳುತ್ತದೆ ?

ಬದುಕಿನ ಬಗ್ಗೆ ಅವನಿಗೆ ಒಂದೂ ತಕರಾರಿಲ್ಲ ” ಎಂದು ಪಿಶಾಚಿ ಬೋಳೇಶಂಕರ ಬಗ್ಗೆ ಹೇಳಿತು .

7. ರಾಜಕುಮಾರಿಗೆ ಬಂದ ರೋಗ ಯಾವುದು ?

ರಾಜಕುಮಾರಿಗೆ ವಿಪರೀತ ಹೊಟ್ಟೆ ನೋವು ಬಂದಿತ್ತು .

8. ಸೈನಿಕರು ಯಾವುದಕ್ಕೆ ಜಯವಾಗಲಿ ಎಂದು ಹಾಡಿದರು ?

ಸೈನಿಕರು ಕೋವಿಗೆ ಜಯವಾಗಲಿ ಎಂದು ಹಾಡಿದರು .

9. ಕತ್ತಲೆಯ ನಿಜ ಜನಕನು ಯಾರು ?

ಕತ್ತಲೆಯ ನಿಜ ಜನಕ ಸೈತಾನ .

10. ಬೋಳೇಶಂಕರ ಎಲ್ಲಿ ಕುಳಿತು ಊಟ ಮಾಡಬೇಕೆಂದು ಅವನ ಅತ್ತಿಗೆ ಹೇಳುತ್ತಾಳೆ ?

ಬೋಳೇಶಂಕರ ಹೊರಗೆ ದನದ ಕೊಟ್ಟಿಗೆಯಲ್ಲಿ ಊಟ ಮಾಡಲಿ ಎಂದು ಅವನ ಅತ್ತಿಗೆ ಹೇಳುತ್ತಾಳೆ .

11. ಅಣ್ಣಂದಿರಿಗೆ ಯಾವ ರೋಗ ಹಿಡಿದಿದೆ ಎಂದು ಬೋಳೇಶಂಕರ ಹೇಳುತ್ತಾನೆ ?

ಅಣ್ಣಂದಿರಿಗೆ ದುರಾಸೆಯ ರೋಗ ಹೆಚ್ಚಿವೆ ಎಂದು ಹೇಳುತ್ತಾನೆ

12. ಬೋಳೇಶಂಕರನಿಗೆ ಬೇರು ಕಿತ್ತುಕೊಳ್ಳಲು ಪಿಶಾಚಿ ಯಾವ ವೇಷದಲ್ಲಿ ಬರುತ್ತದೆ ?

ಬೋಳೇಶಂಕರನಿಗೆ ಬೇರು ಕಿತ್ತುಕೊಳ್ಳಲು ಪಿಶಾಚಿ ಮುದುಕಿಯ ವೇಷದಲ್ಲಿ ಬರುತ್ತದೆ.

13. ಹುಡುಗಿಯರ ಹಾಡಿಗೆ ಬೋಳೇಶಂಕರ ಬಹುಮಾನವಾಗಿ ಏನು ಕೊಡುವನು ?

ಹುಡುಗಿಯರ ಹಾಡಿಗೆ ಬೋಳೇಶಂಕರ ಬಹುಮಾನವಾಗಿ ಚಿನ್ನದ ನಾಣ್ಯ ಕೊಡುವನು.

1st PUC Boleshankara Kannada Notes Question answer

II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ರಾಜಕುಮಾರಿಯ ಹೊಟ್ಟೆನೋವು ವಾಸಿಮಾಡುವವರಿಗೆ ಏನೇನು ಬಹುಮಾನ ಕೊಡುವುದಾಗಿ ಡಂಗೂರ ಸಾರುತ್ತಾರೆ ?

ರಾಜಕುಮಾರಿಯ ಹೊಟ್ಟೆನೋವು ವಾಸಿಮಾಡುವವರಿಗೆ ರಾಜ್ಯವನ್ನು ಹಾಗೂ ಮಗಳನ್ನು ಕೊಟ್ಟು ಮದುವೆಮಾಡುವುದಾಗಿ ಡಂಗೂರ ಸಾರುತ್ತಾರೆ .

2. ಬೋಳೇಶಂಕರ ಏನೆಂದು ಡಂಗುರ ಸಾರುತ್ತಾನೆ ?

ಬೋಳೇಶಂಕರ ನಾನು ರಾಜ್ಯದಲ್ಲಿ ರಾಜನಾದರೆ ಸೈನ್ಯ ಇರೋದಿಲ್ಲ . ತೆರಿಗೆಗಳು ಇರೋದಿಲ್ಲ , ನಾಣ್ಯಗಳು ಇರೋದಿಲ್ಲ . ರಾಜರಾಣಿಯರಿಂದ ಹಿಡಿದು ಎಲ್ಲರೂ ದುಡಿಯುತ್ತಾರೆ . ಎಲ್ಲರೂ ಉಣ್ಣುತ್ತಾರೆ . ದುಡಿಯದ ಸೋಮಾರಿಗಳಿಗೆ ಖಂಡಿತ ಅವಕಾಶವಿಲ್ಲ , ಎಂಬುದಾಗಿ ಡಂಗೂರ ಸಾರುತ್ತಾನೆ .

3. ಸಾವಾರಣ್ಣನು ತನ್ನ ಸಹೋದರರಿಗೆ ಆಸ್ತಿಯನ್ನು ಹೇಗೆ ಹಂಚಿದ ?

ಸಾತ್ಕಾರಣ್ಣನು ತನ್ನ ಸಹೋದರರಿಗೆ ಆಸ್ತಿಯನ್ನು ಮೂರು ಭಾಗ ಮಾಡಿ ಹಂಚಿದನು . ದುಡ್ಡಿರೋ ಪೆಟ್ಟಿಗೆ ಆಭರಣ ಸಾತ್ಕಾರಣ್ಣನಿಗೆ ಹಾಗೂ ಒಳ್ಳೆ ಗದ್ದೆ ತೋಟ ಹೊಲ ಎಲ್ಲಾ ಸರದಾರ ಸೋಮಣ್ಣನಿಗೆ ನರಿ ಹತ್ತಿರ ಇರೋ ಕಲ್ಲು ಮರಡಿ ಬೋಳೇಶಂಕರನಿಗೆ ಎಂದು ಭಾಗ ಮಾಡಿದನು .

4. ಕೋಡಂಗಿ ತಾನು ಬೆಳಿಗ್ಗೆಯಿಂದ ಏನೇನು ಕೆಲಸ ಮಾಡಿದನೆಂದು ಹೇಳುತ್ತಾನೆ ?

ಕೋಡಂಗಿ ತಾನು ಬೆಳಿಗ್ಗೆಯಿಂದ ಹದಿನೆಂಟು ರೊಟ್ಟಿ ತಿಂದು , ಎಂಟು ಮುದ್ದೆ ನುಂಗಿ , ಸೂಲಗಿ ಅನ್ನ ಉಂಡು , ಒಂದು ಗಡಿಗೆ ಅಂಬಲಿ ಕುಡಿದು , ಗಡತ್ತಾಗಿ ಮೂರು ಗಂಟೆ ನಿದ್ದೆ ಮಾಡಿದನು .

5. ಪಿಶಾಚಿಗಳು ಯಾವುದರಿಂದ ನಾಣ್ಯ ಹಾಗೂ ಸಿಪಾಯಿಗಳನ್ನು ಮಾಡಿಕೊಡುತ್ತವೆ ?

ಪಿಶಾಚಿಗಳು , ತೆನೆಗಳಿಂದ ಕಾಳು ಉದುರಿಸಿ ಕೈ ಮುಟ್ಟಲು ಬೋಳೇಶಂಕರನಿಗೆ ಹೇಳಿ ಹಂಡೋಲ ಬಂಡೋಲ ಚಿಗರಿ ಚಿಕಲಕ ಬರಲಕ ಸಾಲಕುದುರಿ ಹನುಮಂತರಾಯ ಧಾನ್ಯವೆಲ್ಲ ನಾಣ್ಯವಾಗಿ , ನಾಣ್ಯವೆಲ್ಲಾ ಚಿನ್ನವಾಗಿ , ಬಚ್ಚಾ ಬೋಲ್‌ ಬೋಲತಿ ಬೋಲ್ ಹ್ರಾಂ ಲಂಗೋಟಿ ಕೋಲ್ ಎಂಬ ಮಂತ್ರ ಹೇಳಿದಾಗ ಕಾಳುಗಳೆಲ್ಲಾ ಚಿನ್ನದ ನಾಣ್ಯಗಳಾದವು .

6. ಬೋಳೇಶಂಕರ ಹುಡುಗಿಯರಿಗೆ ಚಿನ್ನ ಕೊಟ್ಟಿದಕ್ಕೆ ಸಾವಾರಣ್ಣನು ಏನು ಹೇಳುತ್ತಾನೆ ?

ಬೋಳೇಶಂಕರ ಹುಡುಗಿಯರಿಗೆ ಚಿನ್ನ ಕೊಟ್ಟಿದಕ್ಕೆ ಸಾತ್ಕಾರಣ್ಣನು – ಬೋಳೇಶಂಕರ ಎಂಥ ಕೆಲಸ ಮಾಡಿದೆಯಯ್ಯ ? ಬೇಜವಾಬ್ದಾರಿ ಹುಡುಗಿಯರಿಗೆ ಆಡೋ ಮಕ್ಕಳಿಗೆ ಚಿನ್ನದ ನಾಣ್ಯ ಕೊಟ್ಟಿಯಂತಲ್ಲ . ನನಗೆ ಕೊಡಬಾರದಿತ್ತೆ ? ನನಗೆ ತುಸು ಹಣ ಸಿಕ್ಕಿದರೆ ವ್ಯಾಪಾರ ಮಾಡಿ ಅದು ಪ್ರಪಂಚದ ಮೂಲೆ ಮೂಲೆಯಲ್ಲಿ ಚಿನ್ನದ ಮೊಟ್ಟೆಯಿಡೋ ಹಾಗೆ ಮಾಡ್ತಿದ್ದೆ .

7. ಸೈತಾನನ ಆಗಮನವನ್ನು ಭಾಗವತ ಹೇಗೆ ತಿಳಿಸಿದ್ದಾನೆ ?

ಸೈತಾನನ ಆಗಮನವನ್ನು ಭಾಗವತ ಹೀಗೆ ವಿವರಿಸಿದ್ದಾನೆ. ಬಿರುಗಾಳಿ ಬೀಸ್ತಾ ಇದೆ. ನದಿ ಹರಿಯೋದನ್ನು ನಿಲ್ಲಿಸಿ ಯಾರದೋ ಪಿಸುದನಿ ಕೇಳಿಸಿಕೊಳ್ತಾ ಇದೆ, ಕಾಲು ಭೂಮಿ ಮೇಲಿದ್ದರು ತಲೆ ಮೋಡಗಳಲ್ಲಿ ಕಾಣಿಸುತ್ತಿದ್ದವು . ಲೋಕ ಕುಟ್ಟಿ ಕೆಡಹುವ ಹಾಗೆ ಹೆಜ್ಜೆಯಿಡುತ್ತ ಯಾರೋ ಬರ್ತಿದ್ದಾರೆ . ಇದನ್ನು ಹಾಡಿನ ರೂಪದಲ್ಲಿ ಹೀಗೆ ಹಾಡಿದ್ದಾನೆ .

“ ಬಂದಾನೊ ಸೈತಾನ ಬಂದನು

ಸರ್ವ ಕೆಡಕಿನ ಒಡೆಯ ಬಂದನು

ತನ್ನ ಚಿನ್ನ ಹಲ್ಲು ಸಿಡಿವಂತೆ ಗಡಿಸಿ ನಗುತ

ಚಿತ್ತದಲ್ಲಿ ನರಕಗಳ ಸೃಷ್ಟಿಸಿ ಬತ್ತಿಸುತಲಿ ಜೀವದ ಸುಳಿ

ಕತ್ತಲೆಯು ನಿಜ ಜನಕ ಬಂದನು ಬೆಳರ ನೋಡಿಸುತ “

8. ಬೆಟ್ಟದ ಮೇಲೆ ದೇವತೆಯು ಬೋಳೇಶಂಕರನ ಅಣ್ಣ ಅತ್ತಿಗೆಯವರಿಗೆ ಹೇಗೆ ಕಾಣಿಸುತ್ತದೆ ?

ಬೆಟ್ಟದ ಮೇಲೆ ದೇವತೆಯು ಬೋಳೇಶಂಕರನ ಅಣ್ಣ ಅತ್ತಿಗೆಯವರಿಗೆ ಈ ರೀತಿ ಕಾಣಿಸುತ್ತದೆ . ಬೆಟ್ಟದ ಮೇಲೆ ಕೆಂಪು ಹೂವಿನ ಮಳೆಯ ಮೇಲೆ ನಿಂತ ದೇವತ ದುಂಡಗೆ ಉರಿಯುವ ಕಣ್ಣುಗಳಿಗೆ , ಹೊಳೆಯುವ ಹಲ್ಲುಗಳಿವೆ , ಎತ್ತಿನ ಹಾಗೆ ಕೊಂಬುಗಳಿವೆ .

9. ಸೈತಾನನು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸಿದ್ದು ಏಕೆ ?

ಶಿವಪುರದ ಮೂರು ಜನ ಸಹೋದರರಾದ ಸರದಾರ ಸೋಮಣ್ಣ , ಸಾವಾರ ಕಾಮಣ್ಣ ಹಾಗೂ ಬೋಳೇಶಂಕರ ಇವರುಗಳನ್ನು ತಮ್ಮ ಬಲೆಗೆ ಬೀಳಿಸಲು ಸೈತಾನನು ಮೂರು ಪಿಶಾಚಿಗಳನ್ನು ಭೂಲೋಕಕ್ಕೆ ಕಳುಹಿಸುತ್ತಾನೆ .

1st PUC Boleshankara Kannada Notes Question answer

III. ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಬೋಳೇಶಂಕರನ ಅಣ್ಣಂದಿರೇ ವಾಸಿ ಎಂದು ಪಿಶಾಚಿ ಹೇಳಲು ಕಾರಣವೇನು ?

ಬೋಳೇಶಂಕರನ ಅಣ್ಣಂದಿರೇ ವಾಸಿ ಎಂದು ಪಿಶಾಚಿ ಹೇಳಲು ಕಾರಣವೆಂದರೆ ಅಣ್ಣಂದಿರು ತಲೆ ತುರಿಸಿಕೊಳ್ಳುವ ಮೊದಲೆ ಪಿಶಾಚಿಗಳ ವಶವಾಗಿದ್ದರು . ಕೊಲೆತ ಬಲೆ ಹಾಕಿ ಎಳೆದರೂ ಬರುವಂತಹವರು . ಬೆಟ್ಟದ ತುದಿಯಿಂದ ನೆಗೆದು ಬೀಳೋದಕ್ಕೆ ಹ್ಯಾಗೆ ಚಡ ತಿದ್ದರು ಎಂಬುದು ಈ ಬೆಪ್ತಕ್ಕಡಿ ಬೋಳೇಶಂಕರ ಅಣ್ಣಂದಿರು ಒಬ್ಬರಿಗೊಬ್ಬರು ಕಿತ್ತಾಡುತ್ತಾರೆಂಬುದಕ್ಕೆ ಅವಕಾಶ ಕೊಡದೆ ಕೇಳಿದ್ದೆಲ್ಲ ಕೊಟ್ಟು ಬಿಟ್ಟ . ಬೋಳೇಶಂಕರನ ಒಳಗೆ ಪ್ರವೇಶಿಸಲು ಆಗಲಿಲ್ಲ . ಏಕೆಂದರೆ ಅವನಲ್ಲಿ ಯುವ ದೌರ್ಬಲ್ಯವೂ ಇರಲಿಲ್ಲ . ಅಣ್ಣಂದಿರಲ್ಲಿ ದೌರ್ಬಲ್ಯ ಹೆಚ್ಚಾದ್ದರಿಂದ ಪಿಶಾಚಿಗಳು ಅವರೊಳಗೆ ಸೇರಲು ಅವಕಾಶವಾಯಿತು . ಅವರು ಬಲೆಗೆ ಬಿದ್ದರು . ಆದ್ದರಿಂದ ಬೋಳೇಶಂಕರನಿಗಿಂತ , ಅವನ ಅಣ್ಣಂದಿರೇ ವಾಸಿ ಎಂದು ಪಿಶಾಚಿಗಳು ಹೇಳಿದವು .

2. ತಲೆಯಿಂದ ಕೆಲಸ ಮಾಡಬೇಕೆಂಬ ಸೈತಾನನ ಭಾಷಣದ ಸ್ವಾರಸ್ಯವೇನು ?

ತಲೆಯಿಂದ ಕೆಲಸ ಮಾಡಬೇಕೆಂಬ ಸೈತಾನನ ಭಾಷಣ ಸ್ವಾರಸ್ಯವೆಂದರೆ ತಲೆಯ ಬೆಲೆ ತಿಳಿದರೆ ಸ್ವರ್ಗ ಸುಖವನ್ನು ಪಡೆಯಬಹುದು . ಸಿಟಿ ಕಟ್ಟಬಹುದು . ಶ್ರಮವನ್ನು ವಿನಿಯೋಗಿಸಿ ಅತ್ಯಂತ ಸುಖವನ್ನು ಅಲ್ಲಿ ನಾವು ಅನುಭವಿಸಬಹುದು . ಅಂದರೆ ನಾಗರಿಕತೆಯನ್ನು ಅದಿಮ ಸ್ಥಿತಿಗೆ ಒಂದು , ಬಂಧುಗಳೇ ಚರಿತ್ರೆ ಮುಂದೆ ಮುಂದೆ ಸಾಗುತ್ತಾ ಹೋಗುತ್ತಿದೆ . ಹಿಂದೆ ಹಿಂದಲ್ಲ , ನೀವು ಜಾಣರಾಗಬೇಕು ..

3. ರಾಜಕುಮಾರಿಯ ಹೊಟ್ಟೆನೋವು ಪ್ರಸಂಗದಿಂದ ಬೋಳೇಶಂಕರ ರಾಜನಾದ ಕಥೆಯನ್ನು ತಿಳಿಸಿ .

ರಾಜಕುವಾರಿ ಹೊಟ್ಟೆನೋವಿನಿಂದ ನರಳುತ್ತಿರಲು ಬಹಳಷ್ಟು ವೈದ್ಯರು ಚಿಕಿತ್ಸೆ ಮಾಡಿದರೂ ಆಕೆಯ ಹೊಟ್ಟೆನೋವು ಮಾತ್ರ ಕಡಿಮೆಯಾಗಲೇ ಇಲ್ಲ . ಆಗ ರಾಜ ಸಾಕಷ್ಟು ಬಹುಮಾನ ಕೊಡುವುದಾಗಿ ಡಂಗೂರು ಸಾರಿದನು . ಹಣದ ಆಸೆಗೆ ಹಲವಾರು ವೈದ್ಯರು ಚಿಕಿತ್ಸೆ ಮಾಡಲು ಪ್ರಯತ್ನಿಸಿದರು ಫಲಕಾರಿಯಾಗಲಿಲ್ಲ . ಆಗ ರಾಜ ಪುನ : “ ತನ್ನ ಮಗಳ ಹೊಟ್ಟೆನೋವು ಜಾಸ್ತಿಯಾದುದರನ್ನು ಕಂಡು ತನ್ನ ಮಗಳ ಹೊಟ್ಟೆನೋವು ವಾಸಿಮಾಡಿದವರಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿ ತನ್ನ ರಾಜ್ಯಕ್ಕೆ ರಾಜನನ್ನಾಗಿ ಮಾಡುವುದಾಗಿ ಡಂಗೂರ ಸಾರಿಸಿದನು . ಆಗಲೂ ಸಾಕಷ್ಟು ಜನ ವೈದ್ಯರು ಪರೀಕ್ಷಿಸಿ ಔಷಧಿ ಕೊಟ್ಟರು ವಾಸಿಯಾಗಲಿಲ್ಲ . ಆಗ ಬೋಳೇಶಂಕರನು ಬಂದು ಒಂದು ಬೇರನ್ನು ಕೊಟ್ಟು ರಾಜಕುಮಾರಿಗೆ ಜಿಗಿದು ತಿನ್ನಲು ಹೇಳಿದನು . ರಾಜಕುಮಾರಿ ಹಾಗೆ ಮಾಡು ಸ್ವಲ್ಪ ಹೊತ್ತಿನಲ್ಲೇ ಆಕೆಯ ಹೊಟ್ಟೆ ನೋವು ವಾಸಿಯಾಯಿತು . ಮಾತಿನಂತೆ ರಾಜ ತನ್ನ ಮಗಳನ್ನು ಮದುವೆ ಮಾಡಿ ಕೊಟ್ಟು ರಾಜ್ಯಕ್ಕೆ ರಾಜನನ್ನಾಗಿ ಮಾಡಿದನು .

4. ತನ್ನ ಕನಸನ್ನು ಕುರಿತು ಬೋಳೇಶಂಕರನು ಮಂತ್ರಿಗೆ ಹೇಳಿದ್ದೇನು ?

ತನ್ನ ಕನಸನ್ನು ಕುರಿತು ಬೋಳೇಶಂಕರನು ಮಂತ್ರಿಗೆ ಹೇಳಿದ್ದೇನೆಂದರೆ – ನಾನು ರಾಜನಾದರೆ ರಾಜ್ಯದಲ್ಲಿ ಸೈನ್ಯ ಇರೋದಿಲ್ಲ . ತೆರಿಗೆಗಳು ಇರೋದಿಲ್ಲ , ನಾಣ್ಯಗಳು ಇರೋದಿಲ್ಲ , ರಾಜ ರಾಣಿಯರಿಂದ ಹಿಡಿದು ಎಲ್ಲರೂ ದುಡೀತಾರೆ . ಎಲ್ಲರೂ ಉಣ್ಣುತ್ತಾರೆ . ದುಡಿಯದ ಸೋಮಾರಿಗಳಿಗೆ ಖಂಡಿತ ಅವಕಾಶವಿಲ್ಲ ಎಂಬ ಅಂಶವನ್ನು ಹೇಳಿದನು .

5 . ಬೋಳೇಶಂಕರ ಮತ್ತು ಅವನ ಅಣ್ಣಂದಿರನ್ನು ಭಾಗವತರು ಹೇಗೆ ಪರಿಚಯಿಸುತ್ತಾರೆ ?

ಬೋಳೇಶಂಕರ ಮತ್ತು ಅವನ ಅಣ್ಣಂದಿರನ್ನು ಭಾಗವತರು ಪರಿಚಯಿಸಿದ ರೀತಿಯನ್ನು ಲೇಖಕರು ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾರೆ . ಶಿವಪುರದಲ್ಲಿ ಮಾನವರು ವಾಸವಾಗಿದ್ದರು . ಆ ಮಾನವರಲ್ಲಿ ಮೂರು ಜನ ತಮ್ಮಂದಿರು , ದೊಡ್ಡನು ಬಂದು ಸರದಾರ ಸೋಮಣ್ಣ , ಆಳೋದಕ್ಕೆ ಕುರಿ ಕೋಳಿ ಕೊಂದವನು . ಅವು ಸಿಗದಿದ್ದರೆ ಮತ್ತು ಸಾಧ್ಯವಾದರೆ ಮನುಷ್ಯರನ್ನು ಕೊಲ್ಲಬಲ್ಲನು . ಎರಡನೆಯವರು ಬಂದು ಸಾವ್ಕಾರ ಕಾಮಣ್ಣ , ಹೊಟ್ಟೆ ಮಜಬೂತಣ್ಣ , ಅದಕ್ಕೆ ಅವನ ಉರ್ಘನಾಮೆ ಡಬ್ಬಣ , ಎಣಿಸೋದರಲ್ಲಿ ಜಾಣ , ಹಸು ಎಣಿಸುತ್ತಾನೆ , ಹಣ ಎಣಿಸುತ್ತಾನೆ . ಯಾರಾರ ಜಮೀನು ಎಷ್ಟೆ ಕರೆ ಐತಣ್ಣ ಅಂದರೆ ತಕ್ಷಣ ಅಂಕಿಯೊಳಗೇ ಹೇಳುವಾತ . ಇನ್ನೂ ಮೂರನೆಯವರು ಬೆಪ್ತಕಡಿ ಬೋಳೇಶಂಕರ , ಅವನಿಗೆ ಅವನಾಯ್ತು , ಭೂಮಿ ಸೀಮೆ ಆಯ್ತು . ಮಳೆ ಬೆಳೆ ಆಯ್ತು . ಒಂದು ನೊಣ ನೋಯಿಸಿದವನಲ್ಲ . ಮಳೆ ಬರೋದನ್ನು ಒಂದು ವಾರಕ್ಕೆ ಮುಂಚೇನೇ ಹೇಳಬಲ್ಲ . ನಿಂತ ನೀರಿಗೆ ಹರಿಯೋದಕ್ಕೆ ಕಾಲುವೆ ತೋಡಬಲ್ಲ . ಹಕ್ಕಿ ಹಾಡಿನ ಅರ್ಥ ಹೇಳಬಲ್ಲ . ಹೂವಿಗೆ ಬೀಳುವ ಕನಸು ಹೇಳಬಲ್ಲ , ಇನ್ನೆನಪ್ಪ ಅಂದರೆ ಕೈ ಬೆರಳಿಲ್ಲದೆ ಎಣಿಸೋದಕ್ಕೆ ಬರೋದಿಲ್ಲ .

6. ಸೈನಿಕರು ಹಾಡಿದ ಸಿಟಿ ಹಾಡಿನ ಸಾರಾಂಶವೇನು ?

ನೀಲಾಕಾಶದ ತುಂಬಾ ಸೇರಿಕೊಂಡಿದೆ . ಸೈನಿಕರು ಹಾಡಿನ ಸಿಟಿ ಹಾಡಿನ ಸಾರಾಂಶವೆಂದರೆ – ದೊಡ್ಡ ದೊಡ್ಡ ಸಿಟಿಗಳಲ್ಲಿ , ದೊಡ್ಡ ದೊಡ್ಡ ಕಾರ್ಖಾನೆಗಳು ತಲೆ ಎತ್ತಿ ಅದರಿಂದ ಹೊರಡುವ ಹೊಗೆ ಸ್ವಚ್ಛವಾದ ಅದರಿಂದ ಹೊರಡುವ ಸೈರನ್ ಶಬ್ದ ಎಳೆ ಕಿವಿಗಳನ್ನು ತುಂಬಿವೆ . ಸಿಟಿಯ ಬಹುಭಾಗ ಕೊಳೆಗೇರಿಗಳ ಹೆಚ್ಚು ಅವೆಲ್ಲಾಕೊಚ್ಚೆಯಿಂದ ತುಂಬಿವೆ . ಆ ಕೇರಿಯಲ್ಲಿ ವಾಸಮಾಡುವ ಮಕ್ಕಳು ಸದಾಕಾಲ ಆ ಕೊಚ್ಚೆಯಲ್ಲಿ ಆಡುತ್ತಿದ್ದವು , ಅಲಂಕರಕ್ಕಾಗಿ , ಗೋಡೆಗಳ ಮೇಲೆ ಇರುವ ಕ್ಯಾಲೆಂಡರ್‌ನ ಮೇಲೆ ಮೂಡಿರುವ ಚಿತ್ರ ಆಲದ ಎಲೆಯ ಮೇಲೆ ಚಿಕ್ಕ ಮಗುವಾಗಿ ಮಲಗಿರುವ ಕೃಷ್ಣನ ಚಿತ್ರ ಎಷ್ಟು ಮುದ್ದಾಗಿದ್ದೆಯೋ ಅದೇ ಆಲದ ಮರಗಳು ಈಗ ಪೆಟ್ರೋಲ್ , ಡೀಸೆಲ್ ಈ ಪೆಟ್ರೋಲ್‌ನ ವಾಸನೆಯಿಂದ ತುಂಬಿದೆ ವಾಹನಗಳು ಕೇವಲ ವಾಸನೆ ಮಾತ್ರ ಅಲ್ಲ ಅದರ ನಿಶಾನೆಗಳನ್ನು ಬಿಟ್ಟು ಹೋಗುತ್ತಿವೆ . ಇದರಿಂದ ಗಿಡಮರಗಳು ಅದರ ಎಲೆ ಹೂಗಳು ಸ್ವಂತಿಕೆಯ ಬಣ್ಣ ಹೋಗಿ ಕಪ್ಪಾಗಿದೆ , ಆದರೆ ಈಗ ಅದನ್ನು ನಾವು ನೋಡಬೇಕಾದರೆ ಕೇವಲ ಊಟ ಬಾಗಿನಲ್ಲಿ ನೋಡಬೇಕಾಗಿದೆ . ಇದರ ಬಾವಾರ್ಥ ಎಂದರೆ ಈಗ ನಗರಗಳಲ್ಲಿ ಎಲ್ಲೆಲ್ಲೂ ಹೊಗೆ ಉಗುಳುವ ಕಾರ್ಖಾನೆಗಳಿಂದ ವಾಹನಗಳಿಂದ ವಾಯು ಮಾಲಿನ್ಯ , ಶಬ್ದ ಮಾಲಿನ್ಯ ಉಂಟಾಗಿ ವಾತಾವರಣವೆಲ್ಲ ಕೆಟ್ಟು ಹೋಗಿದೆ .

7. ‘ ಹಸಿರು ಉಸಿರು ” ಎಂಬುದನ್ನು ಬೋಳೇಶಂಕರನ ಪಾತ್ರದ ಮೂಲಕ ನಾಟಕಕಾರರು ಹೇಗೆ ಸ್ಪಷ್ಟ ಪಡಿಸಿದ್ದಾರೆ ? ‘

ಬೋಳೇಶಂಕರ ‘ ಬೆಪ್ಪತಕ್ಕಡಿ ಎನಿಸಿದರು ಶ್ರಮಜೀವಿ , ಸದಾ ತನ್ನ ಪಾಲಿನ ಜಮೀನಿನಲ್ಲಿ ಸದಾ ದುಡಿದು ನೆಲವೆಲ್ಲಾ ಹಸಿರಿನಿಂದ ಥಳಥಳಿಸುವಂತೆ ಮಾಡಿದ್ದ ಶ್ರಮಕ್ಕೆ ಬೆಲೆ ಕೊಡುವವನೇ ಹೊರತು ಚಿನ್ನಕ್ಕಲ್ಲ . ಚಿನ್ನದಂತ ಬೆಳೆ ಇದ್ದರೆ ಸಾಕು , ಚೆನ್ನ ಏಕೆ ಬೇಕು , ನೆಲ ಸದಾ ಹಸಿರಾಗಿರುವಂತೆ ನೋಡಿಕೊಡಾಗ ಅದೇ ನಮ್ಮ ಉಸಿರಾಗುತ್ತದೆ . ಯಾವುದೇ ದುಷ್ಟ ಪಿಶಾಚಿಗಳು ನಮ್ಮನ್ನು ಏನು ಮಾಡಲಾರವು . ಇದಕ್ಕೆ ಸಾಕ್ಷಿಯಾಗಿರುವವನು ಬೋಳೇಶಂಕರ , ಇವನು ಪರಿಶ್ರಮಿಯಾಗಿ ‘ ಹಸಿರೇ ನಮ್ಮ ಉಸಿರೆಂದು ನಂಬಿದ್ದರಿಂದ ಸೈತಾನನಾಗಲಿ , ಪಿಶಾಚಿಗಳಾಗಲಿ ಇವನ ಬಳಿ ಸುಳಿಯಲು ಸಾಧ್ಯವಾಗಲೇ ಇಲ್ಲ ಅಲ್ಲದೆ ಇವನು ಇದ್ದರೆ ಪ್ರಜೆಗಳು , ಸೈನಿಕರು ಸುಭಿಕ್ಷತೆಯಿಂದ ಕೂಡಿದ್ದು ಸುಖವಾಗಿದ್ದರು .

8. ಬೋಳೇಶಂಕರನು ನಾಣ್ಯ ಹಾಗೂ ಸೈನಿಕರನ್ನು ಪಡೆದ ಪ್ರಸಂಗವನ್ನು ವಿವರಿಸಿ

ಬೋಳೇಶಂಕರನು ಪಿಶಾಚಿಯಿಂದ ದಾನ್ಯಗಳಿಂದ ಮಂತ್ರ ಹೇಳುವುದರ ಮೂಲಕ ನಾಣ್ಯಗಳನ್ನು ಪಡೆದನು , ಹುಲ್ಲಿನ ಹೊರೆಯಿಂದ ಸೈನಿಕನ್ನು ಪಡೆನು , ಅಂದರೆ ತೆನೆಯಿಂದ ಕಾಳು ಉದುರಿಸಿ –

‘ದಂಡೋಲ ಬಂಡೋಲ ಚಿಗರಿ ಚಿಕಲಕ ಬಕಲಕ

ಸಾಲಕುದುರಿ ಹನುಮಂತರಾಯ

ಧಾನ್ಯವಲ್ಲಾ ನಾಣ್ಯವಾಗಿ ನಾಣ್ಯವೆಲ್ಲಾ ಚಿನ್ನವಾಗಿ …

ಎಂದು ಹೇಳಿದರೆ ಕಾಳುಗಳೆಲ್ಲಾ ಚಿನ್ನದ ನಾಣ್ಯವಾಗುವುದು ,

ಇದೇ ರೀತಿ ,

ಹುಲ್ಲನ್ನು ನೆಲದ ಮೇಲೆ ನಿಲ್ಲಿಸಿ

ಹಂಡೋಲ ಬಂಡೋಲ

ಚಿಗರಿ ಚಿಕಲಕ ಬಕಲಕ

ಸಾಲಕುದುರಿ ಹನುಮಂತರಾಯ

ಹುಲ್ಲಿನೆಸಳು ಸಿಪಾಯಿ ಆಗಲಿ ಎಂಬ ಮಂತ್ರ ಹೇಳಿದರೆ ಒಂದೊಂದು ಹುಲ್ಲನೆಸಳು ಸಿಪಾಯಿಯಾಗುವುದು . ಈ ರೀತಿ ಬೋಳೇಶಂಕರ ಚಿನ್ನದ ನಾಣ್ಯ ಹಾಗೂ ಸಿಪಾಯಿಯನ್ನು ( ಸೈನಿಕರನ್ನು ) ಪಡೆದನು .

9. ಬೋಳೇಶಂಕರನ ತನ್ನ ಅಣ್ಣಂದಿರಿಗೆ ಸಿಪಾಯಿ ಮತ್ತು ನಾಣ್ಯಗಳನ್ನು ಮಾಡಿಕೊಡಲು ಏಕೆ ನಿರಾಕರಿಸುತ್ತಾನೆ ?

ಬೋಳೇಶಂಕರ ತನ್ನ ಅಣ್ಣಂದಿರಿಗೆ ಸಿಪಾಯಿ ಮತ್ತು ನಾಣ್ಯಗಳನ್ನು ಮಾಡಿ ಕೊಡಲು ನಿರಾಕರಿಸುತ್ತಾನೆ . ಏಕೆಂದರೆ ಬೋಳೇಶಂಕರನ ಸಿಪಾಯಿಗಳು , ಬೇರೆಯವರನ್ನು ಹಿಂಸಿಸುತ್ತಾರೆ , ಕೊಲ್ಲುತ್ತಿದ್ದಾರೆ . ಇದರಿಂದಾಗಿ ಎಷ್ಟೋ ಜನ ಮಕ್ಕಳು , ವಯಸ್ಸಾದವರು ಅನಾಥರಾಗಿದ್ದಾರೆ . ದಿನ ಬೆಳಗಾಗಿ ಸಿಪಾಯಿಗಳನ್ನು ಮಾಡಿಕೊಡುವುದು ಇನ್ನು ಭಯಂಕರ ಮೂರ್ಖತನ ಇನ್ನು ಚಿನ್ನದ ನಾಣ್ಯ ಮಾಡಿಕೊಡುವ ಮಾತುಕೂಡ ದೂರವೇ ಸರಿ , ಅಣ್ಣಂದಿರು ಹಾಕುವ ತೆರಿಗೆ ಬಾರ ಸಹಿಸಲಾರದೆ ಜನ ತಮ್ಮಲ್ಲಿಯ ಹಸು ಕರುಮಾರಿ ತೆರಿಗೆ ಕಟ್ಟಿ ಬೋಳೇಶಂಕರನ ರಾಜ್ಯಕ್ಕೆ ವಲಸೆ ಬರುತ್ತಿದ್ದಾರೆ . ಇನ್ನು ಅವರ ಅಣ್ಣಂದಿರು ಸ್ಥಾಪಿಸಿರುವ ಕಾರ್ಖಾನೆಗಳಿಂದ ಬರುವ ಹೊಗೆ ನುಂಗಲಾರದೆ ಜನ ಓಡಿ ಬರುತ್ತಿದ್ದಾರೆ ಬೆಳೆಯೋ ಮಕ್ಕಳಿಗೆ ಹಸುವಿನ ಹಾಲು ಸಿಕ್ಕುತ್ತಿಲ್ಲ . ಅಲ್ಲದೆ ಅಣ್ಣಂದಿರಿಬ್ಬರಿಗೂ ಅತಿಯಾಸೆಯ ರೋಗ ಹಿಡಿದಿದೆ . ಇದು ಮದ್ದೆ ಇಲ್ಲದ ರೋಗ , ಆದ್ದರಿಂದ ಬೋಳೇಶಂಕರನು ಅಣ್ಣಂದಿರಿಗೆ ಸಿಪಾಯಿ ಮತ್ತು ನಾಣ್ಯಗಳನ್ನು ಮಾಡಿಕೊಡಲು ನಿರಾಕರಿಸಿದನು .

10. ಯುದ್ಧ ಮಾಡಲು ಸೈನಿಕರು ಏಕೆ ನಿರಾಕರಿಸುತ್ತಾರೆ ?

ಯುದ್ಧ ಬೋಳೇಶಂಕರನ ರಾಜ್ಯದಲ್ಲಿದ್ದ ಸೈನಿಕರು , ಸೈತಾನನು ಹೇಳಿದಂತೆ ಮಾಡಲು ನಿರಾಕರಿಸುತ್ತಾರೆ . ಏಕೆಂದರೆ – ಯುದ್ಧ ಮಾಡಲು ಸೈನಿಕರೇ ಇಲ್ಲ , ಜನ ಈ ಸೈನಿಕರನ್ನು ಹಳೇ ಸ್ನೇಹಿತರಂತೆ ಪ್ರೀತಿಯಿಂದ ನೋಡ್ತಾರೆ . ಊಟ ತಿಂಡಿ ಕೊಡ್ತಾರೆ ಹಿಂದೆ ನೀವು ಬೋಳೇಶಂಕರನ ಮೆರಣಿಗೆಯಲ್ಲಿದ್ದವರು ನೀವಲ್ಲವೆ ? ನೀವಲ್ಲವೆ ? ಅಂತಾ ಗುರುತು ಹಿಡಿಯುತ್ತಾರೆ . ಇಲ್ಲಿ ಯುದ್ಧ ಮಾಡುವುದು ಸಾಧ್ಯವಿಲ್ಲ ಸ್ವಾಮಿ ಎಂದು ಯುದ್ಧ ಮಾಡಲು ನಿರಾಕರಿಸುತ್ತಾರೆ .

11. ಸೈನಿಕರು ಏನೇನನ್ನು ನಾಶ ಮಾಡಿದರು ಎಂದು ಶಿವಪುರದ ಜಕನರು ಹೇಳುತ್ತಾರೆ ?

ಶಿವಪುರದಲ್ಲಿ ಸೈನಿಕರು ಮಾಡಿದ ನಾಶವನ್ನು ಅಲ್ಲಿಯ ಜನರು ಬೋಳೇಶಂಕರನಿಗೆ ಹೇಳಿದ ಮಾತೆಂದರೆ ಅಣ್ಣನ ಸೈನಿಕರು ಬಂದು ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದರು , ದನಗಳನ್ನು ಅಟ್ಟಿಕೊಂಡು ಹೋಗಬೇಡೆಂದರು ಕೇಳದೆ , ಅವುಗಳನ್ನು ಕಡಿದು ಕಡಿದು ಚೆಲ್ಲುತ್ತಿದ್ದಾರೆ . ಸೈನಿಕರು ತೋಟಕ್ಕೆ ನುಗ್ಗಿ ಎಳನೀರು ಕುಡಿದು ಮರಗಳನ್ನು ಕಡಿದು ಉರುಳಿಸುತ್ತಿದ್ದಾರೆ . ಹಸಿರು ಗದ್ದೆಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ .

12. ಚಿನ್ನ ತೆಗೆದುಕೊಂಡು ಅನ್ನ ಕೊಡಿ ಎಂದು ಸೈತಾನನಿಗೆ ಶಿವಪುರದ ಜನರು ಹೇಳುತ್ತಾರೆ ?

ಶಿವಪುರದ ಜನರು , ಸೈತಾನನಿಗೆ , ಚಿನ್ನ ತೆಗೆದುಕೊಂಡು ಅನ್ನ ಕೊಡಿ ಎಂದು ನಾಣ್ಯದಿಂದ ಯಾವ ಉಪಯೋಗವು ಸದ್ಯಕ್ಕೆ ಇಲ್ಲ . ಅಂಥಹ ಕೇಳುತ್ತಾರೆ . ಏಕೆಂದರೆ ನಾಣ್ಯವನ್ನು ಇಟ್ಟುಕೊಂಡು ಪ್ರಯೋಜನವೇನು ? ಅಲ್ಲದೆ ತೆರಿಗೆ ಹಣ ಕಟ್ಟಲು ಹಣ ಬೇಕು . ಆದರೆ ಶಿವಪುರದಲ್ಲಿ ತೆರಿಗೆ ಪಾವತಿಸಬೇಕಾದ ಪದ್ಧತಿಯೇ ಇಲ್ಲ . ವಸ್ತುಗಳನ್ನು ಒಬ್ಬರಿಂದ ಒಬ್ಬರಿಗೆ ವಿನಿಮಯ ಮಾಡಿಕೊಳ್ಳುವುದರಿಂದ ಇಲ್ಲಿ ಚಿನ್ನದ ನಾಣ್ಯಗಳ ಪ್ರಯೋಜನವಿಲ್ಲ . ಉಪಯೋಗವಿಲ್ಲದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದರಿಂದಾಗುವ ಪ್ರಯೋಜನವು ಇಲ್ಲ , ಎಂಬುದಾಗಿ ಲೇಖಕರು ಈ ವಾಕ್ಯದ ಮೂಲಕ ತಿಳಿಸಿಕೊಟ್ಟಿದ್ದಾರೆ .

13. ಶ್ರಮ ಜೀವನ ಹಾಗೂ ಸರಳ ಬದುಕನ್ನು ಕೂಡಿಸಿಕೊಂಡವರಿಗೆ ಪಿಶಾಚಿಗಳು ಏನು ಮಾಡಲಾರವು ಎಂಬುದು ನಾಟಕದಲ್ಲಿ ಹೇಗೆ ಮೂಡಿ ಬಂದಿದೆ .

ಪ್ರಸ್ತುತ ನಾಟಕದಲ್ಲಿ ಎರಡು ಗುಂಪುಗಳನ್ನು ನೋಡಬಹುದು . ಬೋಳೇಶಂಕ ಹಾಗೂ ಆತನ ಅನುಚರರು ನಂತರ ರಾಜ ರಾಣಿ ಎಲ್ಲರ ಒಂದು ಗುಂಪು , ಈ ಗುಂಪು ಶ್ರಮಜೀವಿಗಳ ಗುಂಪು , ಇಲ್ಲಿ ಚಿನ್ನದ ನಾಣ್ಯಕ್ಕೆ ಬೆಲೆಯೇ ಇಲ್ಲ . ಏಕೆಂದರೆ ತೆರಿಗೆ ಕಟ್ಟುವ ಹಾಗಿಲ್ಲ . ರಾಜ ರಾಣಿಯರೇ ಆಗಲಿ ಶ್ರಮಪಟ್ಟು ದುಡಿದರೆ ಮಾತ್ರ ಊಟ , ಇಲ್ಲಿ ಬೇಕು , ಬೇಕು ಎಂಬ ಯಾವುದೇ ಲಾಲಸೆಗಳಿಲ್ಲ . ಸೈನಿಕರು ಕೂಡ ಇಲ್ಲಿ ರಕ್ಷಣೆ ಕೊಡುವವರೆ ಹೊರತು ಹಿಂಸಿಸುವವರಲ್ಲ . ಇಲ್ಲಿ ಪ್ರೀತಿ ಪ್ರೇಮ ಬಾಂಧವ್ಯ ಇರುವುದರಿಂದ ಎಲ್ಲೆಲ್ಲೂ ಸುಖ ತಾನು ತಾನೆ ಹುಡುಕಿಕೊಂಡು ಬರುತ್ತದೆ . ಇದಕ್ಕೆ ಉದಾಹರಣೆ ಕೆಲಸಕ್ಕೆ ಬಾರದ ಬೆಪ್ಪತಕ್ಕಡಿ ಎಣಿಸಿಕೊಂಡು ರಾಜನಾದ . ಇನ್ನು ಎರಡೇ ಗುಂಪು ಬೋಳೇಶಂಕರನ ಅಣ್ಣಂದಿರು , ಇವರ ಅತಿಯಾದ ಲಾಲಸೆಯಿಂದ ಬೇಗನೆ ಎಲ್ಲವನ್ನು ಕಳೆದುಕೊಂಡರು . ಇವರ ದೌರ್ಬಲ್ಯದಿಂದ ಪಿಶಾಚಿಗಳು ಇವರನ್ನು ಆಕ್ರಮಿಸಿದವು . ಪರಿಣಾಮ ತಾವೇ ಸ್ವತ : ಬೆಟ್ಟದಿಂದ ಹಾರಿ ಸಾಯುವ ಯೋಚನೆ ಮಾಡುವುದು . ಅದೇ ಶ್ರಮ ಜೀವಿಗಳಾದ ಬೋಳೇಶಂಕರರ ಬಳಿ ಪಿಶಾಚಿಗಳು ಸುಳಿಯಲು ಕೂಡ ಸಾಧ್ಯವಾಗಲಿಲ್ಲ .

14. ಸೈತಾನನು ತನ್ನ ಪರಿಚಯ ಮಾಡಿಕೊಂಡ ಬಗೆ ಹಾಗೂ ಬಂದಂಥ ಕಾರಣವನ್ನು ತಿಳಿಸಿ.

ಸೈತಾನನು ತನ್ನ ಪರಿಚಯವನ್ನು ಮಾಡಿಕೊಂಡನು , ಇದಕ್ಕೆ ಕಾರಣ ಎಲ್ಲರ ಪರಿಚಯವನ್ನೇ ಮಾಡಿಕೊಡುತ್ತಿದ್ದವರು ಭಾಗವತರು . ಸೈತಾನನ ಪರಿಚಯ ಮಾಡಿಕೊಡು ಭಾಗವತರು ಹೆದರಿದ್ದರಿಂದ ಸೈತಾನನೇ ತನ್ನ ಪರಿಚಯ ಮಾಡಿಕೊಳ್ಳ ತೊಡಗಿತು . ಸೈತಾನ ಎಂಬುದೊಂದು ಪಿಶಾಚಿ , ಸೈತಾನ ಎಂಬುದು ಒಂದು ಪರಿವಾರ , ಆ ಪರಿವಾರಕ್ಕೆ ಸೇರಿದವನು . ಪಿಶಾಚಿ ಎಂದೇ ಇದನ್ನು ಕರೆಯುವರು . ಪಿಶಾಚಿ ಸೈತಾನನ ಬಲಭುಜವೋ , ಎಡಭುಜವೋ ಆಗಿದೆ . ಪಿಶಾಚಿಯ ಸೈತಾನನಷ್ಟೇ ಶಕ್ತಿಶಾಲಿ . ಹೇಳಿಕೊಳ್ಳುವಷ್ಟು ದುಷ್ಟತನ ಪಿಶಾಚಿಯಲ್ಲಿ ಇರಲಿಲ್ಲ . ಆದ್ದರಿಂದಲೇ ಸೈತಾನ ದೊರೆ ಈ ಪಿಶಾಚಿಯನ್ನು ನಂಬುದಿಲ್ಲ . ಮನುಷ್ಯರಿಗೆ ಇರುವ ದೌರ್ಬಲ್ಯಗಳ ಮೂಲಕ ಪಿಶಾಚಿಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ . ಒಮ್ಮೆ ಒಳಕ್ಕೆ ಇಳಿದರಾಯ್ತು , ನಿಧಾನವಾಗಿ ದಿನಾ ದಿನಾ ಹಬ್ಬುತ್ತವೆ . ಮುಂದೊಂದು ದಿನ ಕಿಡಿ ತಾಗಿದರೆ ಮುದ್ದಿನ ಭಂಡಾರವಾಗಿ ಸಿಡಿಯುತ್ತವೆ .

1st PUC Kannada Boleshankara Notes

ಅಭ್ಯಾಸ

1 . ಸಂದರ್ಭ ಸೂಚಿಸಿ ವಿವರಿಸಿ ,

1. ಇವನಿಗೇನು ಹೆಂಡತೀನೆ ? ಮಕ್ಕಳೆ ?

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ಬೋಳೇಶಂಕರನ ಅಣ್ಣ ಸಾತ್ಕಾರ ರಾಯಣ್ಣನ ಹೆಂಡತಿ ಬೋಳೇಶಂಕರನಿಗೆ ಹೇಳುತ್ತಾಳೆ . ಆಸ್ತಿ ಹಂಚುವ ಸಂದರ್ಭದಲ್ಲಿ ಗಂಡ ಹಾಗೂ ಅವನ ಅಣ್ಣನಿಗೆ ಹೇಳಿದ ಮಾತು .

ವಿವರಣೆ : ಬೋಳೇಶಂಕರನಿಗೆ ಆಸ್ತಿಯಲ್ಲಿ ಪಾಲು ಕೊಡದಿದ್ದರೂ ನಡೆದೀತು . ಏಕೆಂದರೆ ಅವನಿಗೆ ಮದುವೆ ಆಗಿಲ್ಲ . ಆದ್ದರಿಂದ ಹೆಂಡತಿ ಮಕ್ಕಳೂ ಸಾಕಬೇಕೆಂಬ ಹೊಣೆಗಾರಿಕೆ ಇಲ್ಲ , ಎಂಬುದು ಈ ವಾಕ್ಯದ ವಿವರಣೆ .

ವಿಶೇಷತೆ : ಸರಳಭಾಷೆಯಲ್ಲಿ ವ್ಯಕ್ತಿಗಳ ಅನಿಸಿಕೆಯನ್ನು ವಿವರಿಸಲಾಗಿದೆ .

2. ಒಂದು ಹೊತ್ತು ರೊಟ್ಟಿ ತಿನ್ನದಿದ್ದರೆ ತಾನೇನು ಸಾಯುವುದಿಲ್ಲ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಬೋಳೇಶಂಕರ , ತನ್ನ ರೊಟ್ಟಿ ಪಿಶಾಚಿಗೆ ಹೇಳಿದ ಮಾತು .

ವಿವರಣೆ : ಒಂದು ಹೊತ್ತು ನಾವು ಉಪವಾಸ ಮಾಡಿದಾಕ್ಷಣ ಸಾಯುವುದಿಲ್ಲ . ಅದಕ್ಕಾಗಿ ಮಾಡಬೇಕಾದ ಕೆಲಸ ಬಿಟ್ಟು ಅದರ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳುವುದು ಸರಿಯಲ್ಲ ಎಂಬುದಾಗಿ ಹೇಳುವಾಗ ಈ ಮಾತನ್ನು ವಿವರಿಸಿದ್ದಾನೆ .

ವಿಶೇಷತೆ : ಸರಳವಾದ ಭಾಷೆಯಲ್ಲಿ ಮೂಡಿ ಬಂದಿದೆ .

3. ಕೊಳೇತ ಬಲೆ ಹಾಕಿ ಎಳೆದರೂ ಬರುವಂತವರು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ . ಸಂದರ್ಭ : ಈ ವಾಕ್ಯವನ್ನು 1 ನೇ ಪಿಶಾಚಿ ಬೋಳೇಶಂಕರನ ಅಣ್ಣಂದಿರ ಬಗ್ಗೆ ಹೇಳುತ್ತದೆ .

ವಿವರಣೆ : ಬರಿ ಕೆಟ್ಟ ಗುಣಗಳೇ ತುಂಬಿರುವ ಬೋಳೇಶಂಕರನ ಅಣ್ಣಂದಿರನ್ನು ಸುಲಭವಾಗಿ ಪಿಶಾಚಿಗಳು ಆಕ್ರಮಿಸಬಹುದು . ಏಕೆಂದರೆ ಅವರಲ್ಲಿ ಅಷ್ಟೊಂದು ದೌರ್ಬಲ್ಯಗಳು , ಕೆಟ್ಟ ಗುಣಗಳು ತುಂಬಿವೆ , ಎಂಬುದಾಗಿ ಪಿಶಾಚಿ ಹೇಳುತ್ತಿದೆ .

ವಿಶೇಷತೆ : ಸರಳ ಭಾಷೆಯಲ್ಲಿ ಮನುಷ್ಯನಲ್ಲಿ ದೌರ್ಬಲ್ಯಗಳು ಉಂಟಾದರೆ ಆಗುವ ಪರಿಣಾಮವನ್ನು ಇಲ್ಲಿ ತಿಳಿಸಿದ್ದಾರೆ . ‘

4. ದಾರಿ ತಪ್ಪಿದವರಿಗೆ ಗಾದೆ ಬಲ್ಲವರು ಬುದ್ದಿ ಹೇಳುತ್ತಾರೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಶಿವಪುರದ ಪ್ರಜೆಯೊಬ್ಬ ಬೋಳೇಶಂಕರನ ಬಳಿ ಬಂದು ಆತನ ಅಣ್ಣನ ಸೈನಿಕರು ಕೊಡುತ್ತಿರುವ ತೊಂದರೆ ಬಗ್ಗೆ ಹೇಳಿ ಬುದ್ದಿವಂತರಾದ ತಾವೇ ಏನಾದರೂ ಮಾಡಬೇಕೆನ್ನುತ್ತಾ ಈ ವಾಕ್ಯವನ್ನು ಹೇಳಿದರು .

ವಿವರಣೆ : ಗಾದೆ ‘ ಎಂಬುದು ಹಿರಿಯರ ಅನುಭವದಿಂದ ಬಂದ ನೈಜ , ನೀತಿಯುಕ್ತ ನುಡಿಗಳು , ಗಾದೆ ಹೇಳುವವರನ್ನು ಬುದ್ದಿವಂತರೆಂದು ಪರಿಗಣಿಸುವರು . ಶಿವಪುರದಲ್ಲಿ ಪ್ರಜೆಗಳಿಗೆ ಸರಿಯಾದ ದಾರಿ ತೋರಿಸಿದ್ದರಿಂದ ಆ ಜನಗಳಿಗೆ ಆತನು ಬುದ್ದಿವಂತನು ಅಲ್ಲದೆ ಈಗ ರಾಜನು ಆಗಿರುವುದರಿಂದ ದಾರಿ ತಪ್ಪಿದವರಿಗೆ ನೀವೇ ಬುದ್ದಿ ಹೇಳಬೇಕು ಎ ೦ ಬುದು ಇದರ ಅರ್ಥ .

ವಿಶೇಷತೆ : ಬೋಳೇಶಂಕರನ ವ್ಯಕ್ತಿತ್ವ ಈ ವಾಕ್ಯದಿಂದ ತಿಳಿದು ಬರುತ್ತದೆ . ಅವರ ಅಣ್ಣ ಅತ್ತಿಗೆ ಅವನನ್ನು ಬೆಪ್ಪತಕ್ಕಡಿ ಎಂದರೂ ಊರಿನ ಜನ ಅವನನ್ನು ಬುದ್ದಿವಂತರೆಂದು ಭಾವಿಸಿದ್ದರು .

5. ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದ ಮೇಲೆ ಹೆಂಡತಿಗೆ ಕೊಡ್ತೀನಿ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ಬೋಳೇಶಂಕರ ” ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ಕೋಡಂಗಿ ಭಾಗವತರಿಗೆ ಹೇಳುತ್ತಾನೆ , ಬುದ್ಧಿವಂತನಾದರೆ ಬೋಳೇಶಂಕರನ ‘ ರೀತಿ ಎಂದು ಹೇಳಿದಾಗ ಕೋಡಂಗಿ ಈ ಮಾತನ್ನು ಹೇಳುತ್ತಾನೆ .

ವಿವರಣೆ : ಈ ಪ್ರಪಂಚದಲ್ಲಿ ಎಲ್ಲರಿಗೂ ಹಣಬೇಕು , ಅದನ್ನು ಕೊಡಿಸಿಡಬೇಕು , ಆದರೆ ಎಲ್ಲಿ ಎಂದಾಗ ಬ್ಯಾಂಕ್ ಸುರಕ್ಷಿತ ಸ್ಥಳ . ಆದ್ದರಿಂದ ಒಬ್ಬನೇ ಇರುವುದರಿಂದ ಖರ್ಚು ಕಡಿಮೆ ಹೆಂಡತಿ ಬಂದಾಗ ಸಂಸಾರ ದೊಡ್ಡವಾಗುತ್ತದೆ . ಆದ್ದರಿಂದ ಬ್ಯಾಂಕಿನಲ್ಲಿ ಕೂಡಿಸಿಟ್ಟು ಮದುವೆ ಆದ ಮೇಲೆ ಹೆಂಡ್ತಿಗೆ ಕೊಡ್ತಿನಿ ಎಂದು ಹೇಳುತ್ತಾನೆ .

ವಿಶೇಷತೆ : ಸರಳವಾಕ್ಯವಾದರೂ ನೀತಿಯುಕ್ತವಾಗಿದೆ . ಭಾಷೆ ಸರಳವಾಗಿ , ಸಹಜವಾಗಿದೆ .

6. ಜನ ಎಲ್ಲಿ ಸೇರಿದರೆ ಅಲ್ಲೇ ದರ್ಬಾರು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಬೋಳೇಶಂಕ ರಾಜನಾದುದನೆಲ್ಲಾ ಸಹಿಸಲಾರದ ಅವನ ಅಣ್ಣ ,ಅವನು ರಾಜನಾದರೂ ರೈತನಾಗಿ ದುಡಿಯುವುದನ್ನು ನೋಡಿ ಮೂದಲಿಸುತ್ತಾ ಎಲ್ಲಪ್ಪ ನಿನ್ನ ದರ್ಬಾರು ಎಂದು ಕೇಳಿದ ಸಾತ್ಕಾರ ಕಾಮಣ್ಣನಿಗೆ ಉತ್ತರವಾಗಿ ಬೋಳೇಶಂಕರ ಈ ಮಾತನ್ನು ನುಡಿಯುತ್ತಾರೆ .

ವಿವರಣೆ : ರಾಜನಾಗಬೇಕಾಗಿರುವುದು , ರಾಜನ ದರ್ಬಾರು ನಡೆಸಬೇಕಾಗಿರುವುದು ಪ್ರಜೆಗಳಿಗಾಗಿ , ಆ ಜನಗಳು ಎಲ್ಲಿರುತ್ತಾರೋ ಅಲ್ಲೇ ದರ್ಬಾರು ಅಂದರೆ ಅವರ ಸಮಸ್ಯೆ ಕೇಳಿ ಪರಿಹಾರ ನೀಡುತ್ತೇನೆ ಎಂಬುದು ಇದರ ಅರ್ಥ .

ವಿಶೇಷತೆ : ಪ್ರಜಾಪ್ರಭುತ್ವದ ನಿಜವಾದ ಅರ್ಥ ಇಲ್ಲಿದೆ .

7. ಹೆಣ್ಣಿದ್ದ ಮನೆಯ ಸೌಭಾಗ್ಯವೇ ಬೇರೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ | ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಬೋಳೇಶಂಕರ ಅಣ್ಣಂದಿರಿಗೆ , ಅತ್ತಿಗೆಯರ ಬಗ್ಗೆ ಹೇಳುತ್ತಾನೆ .

ವಿವರಣೆ : ಹೆಣ್ಣು ಮನೆಯಲ್ಲಿ ನಗುನಗುತ್ತಾ ಓಡಾಡುತ್ತಾ ಹೊರಗಿನಿಂದ ಆ ಮನೆಯಲ್ಲಿ ಲಕ್ಷ್ಮೀ ಕಾಲಿಗೆ ನೀರು ಕೊಟ್ಟು ಬಿಸಿ ಬಿಸಿ ಅಡಿಗೆ ಮಾಡಿ ನಗುತ್ತಾ ಓಡಾಡುತ್ತಿದ್ದರೆ ಆ ಮನೆಯಲ್ಲಿ ಲಕ್ಷ್ಮೀ ಓಡಾಡುತ್ತಿರುತ್ತಾಳೆ . ಆದ್ದರಿಂದಲೇ ಹೆಣ್ಣಿದ್ದ ಮನೆಯ ಸೌಭಾಗ್ಯತೆ ಬೇರೆ ಎಂದು ಕವಿ ಹೇಳಿದ್ದಾನೆ .

ವಿಶೇಷತೆ : ಬೋಳೇಶಂಕರನ ಒಳ್ಳೆಯ ನೀತಿ , ರೂಡಿ , ವ್ಯಕ್ತಿತ್ವ ಇಲ್ಲಿ ಕಂಡು ಬರುತ್ತದೆ .

8. ಹಸಿರು ಸಾಮ್ರಾಜ್ಯದ ನಮ್ಮ ಪ್ರಜೆ ಕಾಣಯ್ಯ ನಾನು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ “ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ಬೋಳೇಶಂಕರ , ಕೋಡಂಗಿಗೆ , ಈ ಮಾತು ಹೇಳುತ್ತಾನೆ , ತನ್ನ ಭಾವನೆ , ತನ್ನ ಗುಣವನ್ನು ಪರಿಚಯಿಸುತ್ತಾ ಹೇಳುತ್ತಾನೆ .

ವಿವರಣೆ : ನಮ್ಮ ದೇಶ ಹಸಿರು ಬೆಳೆಗಳಿಂದ ಸಮೃದ್ಧವಾದ , ಸಂಪತ್‌ಭರಿತ ರಾಷ್ಟ್ರವಾಗಿದೆ . ಇಂಥಹ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ನಮ್ರತಾ ಮನೋಭಾವನೆ ರಕ್ತಗತವಾಗಿ ಮನೋಭಾವ ಇಲ್ಲಿ ವ್ಯಕ್ತವಾಗಿದೆ . ಭಾರತೀಯರಿಗೆ ಬಂದಿದೆ ಎಂಬುದನ್ನು ಲೇಖಕರು ಬೋಳೇಶಂಕರನಿಂದ ಹೇಳಿಸಿದ್ದಾರೆ .

ವಿಶೇಷತೆ : ಭಾರತ ದೇಶದ ಫಲವತ್ತಾದ ಮಣ್ಣು , ಹಾಗೂ ಭಾರತೀಯರ ನವ ನಿಯಮದ ಗುಣ ಇಲ್ಲಿ ವ್ಯಕ್ತವಾಗಿದೆ .

9. ರಾಜಕುಮಾರಿಗೆ ಬಂದಿರೋದು , ರಾಜಯೋಗ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ಮಾತನ್ನು ಮಂತ್ರಿ , ಬೋಳೇಶಂಕರನಿಗೆ ಹೇಳುತ್ತಾನೆ , ಏಕೆಂದರೆ ಬೋಳೇಶಂಕರನಿಗೆ ಬೆಪ್ಪತಕ್ಕಡಿ ಎಂದು ಹೇಳಿ ಮೂದಲಿಸುವಾಗ ರಾಜ ವೈದ್ಯರಿಂದಲೇ ಆಗಿಲ್ಲ . ಈತ ಏನು ಮಾಡಿಯಾನು ? ಎಂಬ ತಾತ್ಸಾರ ಭಾವನೆಯಿಂದ ಹೇಳುತ್ತಾನೆ .

ವಿವರಣೆ : ರಾಜಕುಮಾರಿಗೆ ರಾಜವೈದ್ಯೆಯರು , ಮಹಾ ಪಂಡಿತರೆಲ್ಲರೂ ಔಷಧಿ ಕೊಟ್ಟರು ವಾಸಿಯಾಗಲಿಲ್ಲ . ಆದ್ದರಿಂದ ಇದೊಂದು ರಾಜಯೋಗ , ಅಂದರೆ ಶ್ರೀಮಂತರಿಗೆ ಬರುವ ಖಾಯಿಲೆ , ನಿನ್ನಂತ ಸಾಮಾನ್ಯರಿಂದ ಸಾಧ್ಯವಿಲ್ಲ ಎನ್ನುತ್ತಾನೆ .

ವಿಶೇಷತೆ : ‘ ಹಿತ್ತಲಗಿಡ ಮದ್ದಲ್ಲ ‘ ಎಂಬ ಗಾದೆಯಂತೆ ವ್ಯಕ್ತಿಯ ಗುಣಕ್ಕಿಂತ ಅವರ ಬಾಹ್ಯ ನೋಟದಿಂದ ವ್ಯಕ್ತಿಯನ್ನು ಅಳಿಯಬಾರದೆಂದು ಲೇಖಕರು ಸೂಚ್ಯವಾಗಿ ನುಡಿದಿದ್ದಾರೆ .

10. ನಾವು ಜಗಳದ ಭಾಷೆ ಆಡಿದರೆ , ಅವರು ಸ್ನೇಹದ ಭಾಷೆ ಆಡುತ್ತಾರೆ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಸೈತಾನನು ಸೈನಿಕನಿಗೆ ಯುದ್ಧ ಮಾಡಲು , ಜಗಳವಾಡಲು , ಬಂದೂಕಿನಿಂದ ಗುಂಡು ಹಾರಿಸಲು ಹೇಳಿದಾಗ ಸೈನಿಕನೊಬ್ಬನು ಶಿವಪುರದ ಜನರ ಬಗ್ಗೆ ಈ ಮಾತನ್ನು ಹೇಳುತ್ತಾನೆ .

ವಿವರಣೆ : ಜಗಳವಾಡಲು , ಜಗಳದ ಅವಾಚ್ಯ ಶಬ್ದಗಳಿಂದ ಮಾತನಾಡಿದರೂ ಬೋಳೇಶಂಕರನ ಪ್ರಜೆಗಳು ಸ್ನೇಹದಿಂದ ಪ್ರೀತಿಯಿಂದ ಮಾತನಾಡಿಸುತ್ತಾರೆ ಎಂಬುದು ಇದರ ಎವರಣೆ .

ವಿಶೇಷತೆ : ಗುಣಕ್ಕೆ ಎಂದು ಮಾತ್ಸರವಿಲ್ಲ ಎಂಬುದು ಇಲ್ಲಿ ತಿಳಿದು ಬರುತ್ತದೆ .

11. ರಾಜರಾಣಿಯರಿಂದ ಹಿಡಿದು ಎಲ್ಲರೂ ದುಡಿಯುತ್ತಾರೆ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೆಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ಬೋಳೇಶಂಕರ , ಮಂತ್ರಿಗೆ ಹೇಳುತ್ತಾನೆ . ಮಂತ್ರಿ ಬಂದು , ಅವನು ಕೊಟ್ಟ ಚಿಕಿತ್ಸೆಯಿಂದ ರಾಜಕುಮಾರಿಯ ಹೊಟ್ಟೆ ನೋವು ವಾಸಿಯಾಗಿದೆ . ಬೋಳೇಶಂಕರನಿಗೆ ರಾಜನನ್ನಾಗಿ ರಾಜಮಾತಿನಂತೆ ಆಕೆಯನ್ನು ಮದುವೆ ಮಾಡಿಕೊಟ್ಟು ಮಾಡುವುದಾಗಿ ಹೇಳಿ ಕರೆದುಕೊಂಡು ಬರಲು ಕಳುಹಿಸಿದಾಗ

ವಿವರಣೆ : ತಾನು ರಾಜನಾದರೆ ಕೆಲವು ನಿಬಂಧನೆಯಿದೆ ಅದಕ್ಕೆ ಒಪ್ಪುವುದಾದರೆ – ರಾಣಿ ಎಂದು ಕುಳಿತು ತಿನ್ನುವ ಆಗಿಲ್ಲ . ರಾಜನಾಗುವನು ತನ್ನ ರಾಜ್ಯದಲ್ಲಿ ರಾಜ ಅವರು ಕೂಡ ದುಡಿಯಬೇಕು ಎಂಬುದು ಇದರ ಅರ್ಥ .

12. ಚಿನ್ನ ತಿಂದು ಬದುಕಲಾಗುತ್ತ !

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಬೋಳೇಶಂಕರ ಅವರ ಅಣ್ಣನಿಗೆ ಕೇಳಿದ ಮಾತು , ಅಣ್ಣನಿಗೆ ಇದ್ದ ಚಿನ್ನದ ವ್ಯಾಮೋಹವನ್ನು ವ್ಯಂಗ್ಯವಾಗಿ ಹೇಳಲಾಗಿದೆ .

ವಿವರಣೆ : ಹೊಟ್ಟೆ ಹಸಿವಾದಾಗ ತಿನ್ನಲು ಅನ್ನ – ರೊಟ್ಟಿ ಬೇಕೆ ಹೊರತು ನಮ್ಮ ಬಳಿ ಇರುವ ಚಿನ್ನದ ನಾಣ್ಯ ಅಲ್ಲ ಎಂಬುದನ್ನು ಇಲ್ಲಿ ಬಹಳ ಸೂಕ್ಷ್ಮವಾಗಿ ತಿಳಿಸಿದ್ದಾರೆ . ನಮ್ಮ ಬಳಿ ಎಷ್ಟೆ ಚಿನ್ನ ಇದ್ದರೂ , ನಮ್ಮ ಹಸಿವನ್ನು ತೀರಿಸುವುದು ಕೇವಲ ಆಹಾರ ಧಾನ್ಯವೇ ಹೊರತು ಚಿನ್ನವಲ್ಲ ಎಂಬುದಾಗಿ ಹೇಳಲಾಗಿದೆ .

ವಿಶೇಷತೆ : ಮನುಷ್ಯನ ಬದುಕಿಗೆ ಆಹಾರದ ಪ್ರಾಮುಖ್ಯತೆಯನ್ನು ಚಿನ್ನದೊಂದಿಗೆ ಕನ್ನಡ ಹೋಲಿಸಿ ತಿಳಿಸಿ ಕೊಡಲಾಗಿದೆ .

13. ನಾನೇನಾದರೂ ರಾಜನಾದರೆ ನಿಮ್ಮಂತ ಸೋಮಾರಿಗಳಿಗೆ ಊಟ ಹಾಕೋದೆ ಇಲ್ಲ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ ಚಂದ್ರಶೇಖರ ಕಂಬಾರರು ರಚಿಸಿರುವ ‘ ಬೋಳೇಶಂಕರ ‘ ಎಂಬ ನಾಟಕದಿಂದ ಆರಿಸಲಾಗಿದೆ .

ಸಂದರ್ಭ : ಈ ವಾಕ್ಯವನ್ನು ಬೋಳೇಶಂಕರ 1 ನೇ ಪಿಶಾಚಿಗೆ ಹೇಳುತ್ತಾನೆ . ಹೇಗಾದರೂ ಮಾಡಿ ಬೋಳೇಶಂಕರನಲ್ಲಿ ಪಿಶಾಚಿ ಸೇರಿ ಅವನನ್ನು ನಾಶ ಮಾಡಲು ಪ್ರಯತ್ನಿಸುತ್ತದೆ . ಆದರೆ ಬೋಳೇಶಂಕರ ದಿಟ್ಟ ನೇರ ಮಾತು . ಆತನು ದುಡಿಯುವ ರೀತಿ ಕಂಡು ಅವನ ಬಳಿ ಸುಳಿಯಲು ಆಗದಿದ್ದರೆ ಕಳ್ಳತನ , ಸುಳ್ಳತನ ಹೇಳಲು ಪ್ರಾರಂಭಿಸಿದಾಗ ಬೋಳೇಶಂಕರ ಹೇಳುತ್ತಾನೆ .

ವಿವರಣೆ : ಪಿಶಾಚಿಯಾದರೂ ಸರಿ , ನಾವು ಪರಿಶ್ರಮದಿಂದ ದುಡಿದು ಸರಿಯಾಗಿದ್ದರೆ ನಮ್ಮನ್ನು ಯಾರು ಏನು ಮಾಡಲಾರರು , ಅಲ್ಲದೆ ರಾಜನಿಗೆ ಸಾಮಾನ್ಯ ಮನುಷ್ಯನಿಗೆ ಅಧಿಕಾರ ಜಾಸ್ತಿ , ರಾಜನ ಅಧಿಕಾರ ಉಪಯೋಗಿಸಿ ‘ ದುಡಿದವರಿಗೆ ಊಟ , ಇಲ್ಲದಿದ್ದವರಿಗೆ ಇಲ್ಲ ‘ ಎಂದು ಹೇಳುತ್ತಾನೆ .

ವಿಶೇಷತೆ : ಬೋಳೇಶಂಕರನ ಒಳ್ಳೆಯ ನೀತಿ , ರೂಡಿ , ವ್ಯಕ್ತಿತ್ವ ಇಲ್ಲಿ ಕಂಡು ಬರುತ್ತದೆ .

1st PUC Boleshankara Kannada Notes Question answer PDF Download

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

7 thoughts on “1st PUC Kannada Boleshankara Notes | ಪ್ರಥಮ ಪಿಯುಸಿ ಕನ್ನಡ ಬೋಳೇಶಂಕರ ನೋಟ್ಸ್

Leave a Reply

Your email address will not be published. Required fields are marked *

rtgh