ಪ್ರತಮ ಪಿ.ಯು.ಸಿ ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ಕನ್ನಡ ನೋಟ್ಸ್ ಪ್ರಶ್ನೊತ್ತರಗಳು, 1st Puc Krushi Samskruthi Mattu Jagatikarana Kannada Notes Summary Question Answer Mcq Pdf Download in Kannada Medium Karnataka State Syllabus 2024, Kseeb Solutions For Class 11 Kannada Chapter 8 Notes 1st Puc Kannada 8th Lesson Notes
1st Puc Kannada Chapter 8 Notes
Kannada 1st Pu Notes Krushi Samskruthi mattu jagatikarana
ತರಗತಿ: ಪ್ರಥಮ ಪಿ.ಯು.ಸಿ
ಕ ಲೇಖನ ಲೇಖಕರು ಹೆಸರು: ಚ್ . ಹನುಮಂತರಾಯ
ಗದ್ಯ ಭಾಗದ ಹೆಸರು: ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ
ಲೇಖನ ಲೇಖಕರು : ಸಿ , ಎಚ್ . ಹನುಮಂತರಾಯ ( ೧೯೪೭ )
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕಬೆಳವಂಗಲದ ರೈತ ಕುಟುಂಬದಲ್ಲಿ ಜನಿಸಿದ ಸಿ.ಎಚ್.ಹನುಮಂತರಾಯರು ಕನ್ನಡ ನಾಡು ನುಡಿಯ ಬಗ್ಗೆ ಪ್ರೀತಿ , ಕಾಳಜಿಯನ್ನಿಟ್ಟುಕೊಂಡಿದ್ದಾರೆ .
ಬಿ.ಎ ( ಆನರ್ ) ಹಾಗೂ ಎಲ್.ಎಲ್.ಬಿ. ಪದವಿಯನ್ನು ಪಡೆದ ಇವರು ಬೆಂಗಳೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು .
ವಕೀಲ ವೃತ್ತಿಯಲ್ಲಿ ಹೆಸರುಗಳಿಸಿರುವ ಇವರು ರೈತಪರ ಮತ್ತು ಕನ್ನಡಪರ ಹೋರಾಟಗಾರರ ವಿರುದ್ಧ ಹಾಕಿದ ಪ್ರಕರಣಗಳಲ್ಲಿ ಅವರ ಪರ ವಕಾಲತ್ತು ವಹಿಸಿದ್ದಾರೆ. ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವಾದ ಮಂಡಿಸುವ ಕೌಶಲ್ಯ ಅವರಿಗೆ ಒಲಿದಿದೆ .
ಹಲವಾರು ಕಾನೂನು ಕಾಲೇಜುಗಳಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಇವರ ‘ ವಕೀಲರೊಬ್ಬರ ವಗೈರೆಗಳು ‘ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ .
ರಾಜ್ಯ ಸರ್ಕಾರ ಇವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ . ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿ ಮಾನವಪರ ಹೋರಾಟಗಳು ನೆಲಗಚ್ಚುತ್ತಿವೆ .
ಜಾಗತೀಕರಣ ಮನುಷ್ಯನ ಬದುಕುವ ಹಕ್ಕನ್ನು ಕಸಿದುಕೊಂಡಿದೆ . ರೈತಪರ ಹೋರಾಟಗಳು ಸ್ವಾರ್ಥಿಗಳ ಪಾಲಾಗಿ ರೈತರು ದಿಕ್ಕೆಟ್ಟಿದ್ದಾರೆ .
ಬಂಡವಾಳಶಾಹಿಗಳು ರೈತರಿಗೆ ಆಸೆ ತೋರಿಸಿ ಭೂಮಿ ಕಸಿಯುತ್ತಿದ್ದಾರೆ . ರೈತರ ಭೂಮಿಗಳು ಕೈಗಾರಿಕೆಗಳಾಗಿ , ಖಾಸಗಿ ಬಡಾವಣೆಗಳಾಗಿ ಪರಿವರ್ತನೆಗೊಂಡು , ಆನ್ನದಾತ’ನೆಂದು ಕರೆಸಿಕೊಂಡ ರೈತ ಅನ್ನ ಇಲ್ಲದವನಾಗುತ್ತಿರುವುದು ದುರಂತ .
ಬಡರಾಷ್ಟ್ರಗಳು ಮತ್ತು ಬಡವರು ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂಬುದರ ಬಗ್ಗೆ ಕಾಳಜಿ ಇಲ್ಲಿದೆ . ಅವಸರದ ನಡುವೆ ಬದುಕಿಗೆ ಬೇಕಾಗಿರುವ ಮೂಲ ದ್ರವ್ಯವನ್ನೇ ಕಳೆದುಕೊಂಡು , ಬದುಕು ಕಟ್ಟಿಕೊಳ್ಳಲು ಹೊರಟಿರುವ ಚಿತ್ರಣವನ್ನು ಕೊಳ್ಳು ಬಾಕು ‘ ಸಂಸ್ಕೃತಿಯ ಮೂಲಕ ತೆರೆದುತೋರುವ ರೀತಿ ಭಿನ್ನವಾಗಿದೆ .
ದೇಸಿಯ ಆಹಾರ ಪದ್ಧತಿಗಳು ಮಾಯವಾಗಿ , ಅನಾರೋಗ್ಯಕ್ಕೆ ಗುರಿ ಮಾಡುವ ರಾಸಾಯನಿಕ ಆಹಾರ ಪದಾರ್ಥಗಳು ದೇಹ ಸೇರುತ್ತಿವೆ . ವಿದೇಶಿ ಖಾದ್ಯ ತಿನಿಸುಗಳಿಗೆ ದಾಸರಾಗಿರುವ ಯುವ ಜನಾಂಗವು ಖಿನ್ನತೆ , ಕೋಪ , ಭಯ , ತಲ್ಲಣ , ತಳಮಳ ಮತ್ತು ಆತ್ಮವಿಶ್ವಾಸವಿಲ್ಲದ ಪರಿಸ್ಥಿತಿಗೆ ಒಳಗಾಗುತ್ತಿದ್ದಾರೆ .
ಪದಕೋಶ :
ಸಿಪಾಯಿ – ಸೈನಿಕ ; ಮೂಲೋತ್ಪಾಟನೆ – ಬೇರುಸಹಿತ ಕೀಳು: ಮುಟ್ಟುಗೋಲು- ಸಾಲ ವಸೂಲಿ ಮತ್ತಿತರ ಕಾರಣಗಳಿಗಾಗಿ ಒಬ್ಬರ ಸ್ವತ್ತನ್ನು ಸರ್ಕಾರ ಅಥವಾ ನ್ಯಾಯಾಲಯ ಮುಂತಾದವುಗಳ ಆದೇಶದಂತೆ ಸ್ವಾಧೀನಕ್ಕೆ ತೆಗೆದುಕೊಳ್ಳುವುದು : ಪಾಳೆಗಾರ – ಒಂದು ಪ್ರಾಂತ್ಯದ ಸರ್ವಾಧಿಕಾರಿ ; ದುಸ್ತರ – ಕಷ್ಟ ಬಿಕರಿ – ಮಾರಾಟ , ರಿಟೇಲ್ ಶಾಪ್ – ಚಿಲ್ಲರೆ ಅಂಗಡಿ : ಇರಾದೆ – ಉದ್ದೇಶ ; ಸೋಗು – ವೇಷ , ಬಾತು – ಉದು , ದಪ್ಪ : ಉಜ್ವಲ – ಪ್ರಕಾಶ : ಲೇವಾದೇವಿ – ವ್ಯವಹಾರ : ಡಿಪಾಜಿಟ್ – ಶೇಖರಣೆ , ಠೇವಣಿ ; ರವಾನೆ – ಸೇರು ; ತಾತ್ಸಾರ – ತಿರಸ್ಕಾರ , ಬಾಬತ್ – ವಿಷಯ , ಸಂಗತಿ .
Kannada 1st Pu Notes Krushi Samskruthi mattu jagatikarana Question Answer
I . ಒಂದು ವಾರದಲ್ಲಿ ಉತ್ತರಿಸಿ .
ರೈತರು ಹಣದ ರೂಪದಲ್ಲಿ ಪಾವತಿಸಬೇಕಾಯಿತು .
ಲೇಖಕರು ‘ ಸಿಪಾಯಿದಂಗೆ’ಯನ್ನು ‘ ರೈತರದಂಗೆ ‘ ಎಂದು ಕರೆದಿದ್ದಾರೆ .
ರೈತರ ಬದಲಿಗೆ ಸ್ವಾತಂತ್ರ್ಯವು ಬಂಡವಾಳಶಾಹಿಗಳ ಕೈಗೆ ಸಿಕ್ಕಿತು .
ಶ್ರೀಮಂತ ರೈತರ ಉದಯಕ್ಕೆ ಹಸಿರು ಕ್ರಾಂತಿ ಸಹಾಯಕವಾಯಿತು .
ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಬಾರದೆಂದು ಗಾಂಧೀಜಿಯವರು ಹೇಳಿದರು .
ದೇಶಗಳಲ್ಲಿ ದೇಶೀಯ ವಿಮೋಚನಾ ಚಳುವಳಿಗಳು ಹುಟ್ಟಿಕೊಂಡವು .
ಜಂಕ್‌ಫುಡ್ ಹೊಟೇಲ್‌ಗಳೆಂದು ಹೀಯಾಳಿಸಿದವರು ಅಮೇರಿಕನ್ನರು .
II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1.ರೈತ ಚಳುವಳಿಗಳು ಎಲ್ಲೆಲ್ಲಿ ನಡೆದವು ?
ರೈತ ಚಳುವಳಿಗಳು , ದಾಂದೇಲಿಯಲ್ಲಿ ಹಳಿಯಾಳ ಹಾಗೂ ನರಗುಂದ ಮತ್ತು ಶಿವಮೊಗ್ಗಗಳಲ್ಲಿ ರೈತ ಚಳುವಳಿಗಳು ನಡೆದವು .
2. ಜಂಕ್‌ಫುಡ್ ಹೊಟೇಲ್‌ಗಳೆಂದು ಹೀಯಾಳಿಸಿದವರು ಅಮೇರಿಕನ್ನರು .
ರಾಸಾಯನಿಕಗಳನ್ನು ತಿಂದು ಬೆಳೆಯುವ ಪ್ರಾಣಿಗಳಿಗೆ ಕ್ಯಾನ್ಸರ್ , ಲ್ಯುಕೋಸಿನ್ , ಹಂದಿಜ್ವರ ಇತ್ಯಾದಿ ರೋಗಗಳು ಬರುತ್ತದೆ .
3..ಕೃಷಿ ಜಮೀನನ್ನು ಯಾರು ಖರೀದಿಸುವಂತಿಲ್ಲ ?
ಕರ್ನಾಟಕ ರಾಜ್ಯ ಭೂ ಸುಧಾರಣಾ ಕಾಯ್ದೆಯ ಪ್ರಕಾರ ರೈತ ಅಥವಾ ರೈತ ಕೂಲಿಕಾರರಲ್ಲದವರು ಕೃಷಿ ಜಮೀನನ್ನು ಖರೀದಿಸುವಂತಿರಲಿಲ್ಲ .
4. ರೈತರನ್ನು ಶೋಷಣೆ ಮಾಡಿದವರು ಯಾರು ?
ರೈತರನ್ನು ಶೋಷಣೆ ಮಾಡಿದವರು ‘ ಬ್ರಿಟಿಷರು ತೆರಿಗೆ ವಸೂಲು ಮಾಡುತ್ತಾ , ಸಾಹುಕರರು ಸಾಲಕೊಟ್ಟು ಸಿಕ್ಕಾ ಪಟ್ಟೆ ಬಡ್ಡಿ ಹಾಕಿ , ಜಮೀನುದಾರರು ಜೀತಕ್ಕೆ ಇಟ್ಟುಕೊಂಡು ಶೋಷಣೆ ಮಾಡಿದರು , ಕಾರ್ಖಾನೆ ಮಾಲೀಕರು
5. ಸಾಲ ಕೇಳಲು ಹೋದ ಬಡರಾಷ್ಟ್ರಗಳ ಮೇಲೆ ವಿಧಿಸಿದ ನಿರ್ಬಂಧಗಳಾವುವು ?
ಸಾಲ ಕೇಳಲು ಹೋದ ರಾಷ್ಟ್ರಗಳಿಗೆ ಹತ್ತು ಹಲವು ಷರತ್ತುಗಳನ್ನು ಸಾಲಕ್ಕೆ ಸಂಬಂಧಪಡದ ನಿರ್ಬಂಧಗಳನ್ನು ಹೇರತೊಡಗಿದವು . ಮಹಿಳೆ ಮತ್ತು ಶಿಶುಕಲ್ಯಾಣ , ಶಿಕ್ಷಣ , ಆರೋಗ್ಯ , ಸಮಾಜಕಲ್ಯಾಣಗಳಂತ ಯೋಜನೆಗಳಿಗಾಗಿ ಹಣ ವ್ಯಯಿಸಬಾರದೆನ್ನುವ ನಿರ್ಬಂಧಗಳನ್ನು ಹೇರತೊಡಗಿದವು . ಬಡರಾಷ್ಟ್ರಗಳು ಅನುತ್ಪಾದಕವಾಗಿಯೇ ಮುಂದುವರಿದು ಕೇವಲ ಖರೀದಿದಾರರಾಗಬೇಕೆನ್ನುವುದು ಸಾಮ್ರಾಜ್ಯಶಾಹಿಗಳ ಇರಾದೆಯಾಗಿತ್ತು .
krushi samskruthi mattu jagatikarana question answer
III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1. ರೈತ ಚಳುವಳಿಗಳ ಬಗ್ಗೆ ಬರೆಯಿರಿ .
ಸ್ವಾತಂತ್ರ್ಯ ಸಂಗ್ರಾಮದ ದ್ವಿತೀಯ ಘಟ್ಟದಲ್ಲಿ ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕೊಡಬಾರದು ಎಂದು ಗಾಂಧೀಜಿ ಕರೆಕೊಟ್ಟರು . ಈ ಕರೆಗೆ ಒಗೊಟ್ಟಿದ್ದರಿಂದ ಸ್ವಾತಂತ್ರ್ಯ ಚಳುವಳಿ ಹಳ್ಳಿಹಳ್ಳಿಗೂ ವ್ಯಾಪಿಸಲು ಸಾಧ್ಯವಾಯಿತು , ರೈತ ಹೋರಾಟಗಳು ವಿಶೇಷವಾಗಿ ಎಪ್ಪತ್ತರ ದಶಕದಲ್ಲಿ ಭುಗಿಲೇಳತೊಡಗಿದವು . ರೈತರು ಸರ್ಕಾರಗಳನ್ನು ನಡುಗಿಸತೊಡಗಿದರು . ಕರ್ನಾಟಕದಲ್ಲಿ ಕಾಗೋಡು ರೈತ ಹೋರಾಟವು ಅಭೂತಪೂರ್ವ ನೆಲಗಟ್ಟನ್ನು ಒದಗಿಸಿಕೊಟ್ಟಿತು . ದಾಂಡೇಲಿಯಲ್ಲಿ ಹಳಿಯಾಳ ರೈತ ಹೋರಾಟವು ನಡೆಯಿತು . ನರಗುಂದ ಮತ್ತು ಶಿವಮೊಗ್ಗ ರೈತ ಚಳುವಳಿಗಳು ನಡೆದವು .
2. ಹತ್ತೊಂಬತ್ತನೆಯ ಶತಮಾನದಲ್ಲುಂಟಾದ ಬರದ ಪರಿಣಾಮಗಳೇನು ?
ಹತ್ತೊಂಬತ್ತನೇ ಶತಮಾನದ ಪೂರ್ವಾರ್ಧದಲ್ಲಿ ಮಾನವ ನಿರ್ಮಿತ ಬರಗಳು ಉಂಟಾಗತೊಡಗಿದ್ದವು . 1500 ರಿಂದ 1857 ರಷ್ಟು ಹೊತ್ತಿಗೆ ಸುಮಾರು ಇಪ್ಪತ್ತಕ್ಕೂ ಆ ಕಾಲಕ್ಕೆ ಹಸಿವಿನಿಂದ ಸಾಯುವ ರೈತರ ದೇಹ ಮಿಕ್ಕ ಬರಗಳು ಕಾಣಿಸಿಕೊಂಡವು . ಗಳನ್ನು ಅಂತ್ಯಕ್ರಿಯೆ ಮಾಡಲು ಆಗದಂತ ಸ್ಥಿತಿ ಉಂಟಾಗಿತ್ತು ಶವಗಳನ್ನು ನಾಯಿ ನರಿಗಳು ತಿನ್ನುತ್ತಿದ್ದವು , ಮಾವನ ಅಸ್ಥಿ ಪಂಜರಳು ಎಲ್ಲೆಂದರಲ್ಲಿ ಬಿದ್ದಿರುತ್ತಿದ್ದವು . ಈಗಿನ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈ ಬರವನ್ನು ‘ ಡೊಂಗಿಬರ ‘ ಎಂದು ಕರೆದರು .
3. ಸಿಪಾಯಿ ದಂಗೆಯನ್ನು ರೈತರ ದಂಗೆಯೆಂದು ಲೇಖಕರು ಏಕೆ ಕರೆದಿದ್ದಾರೆ ?
ಸಿಪಾಯಿದಂಗೆಯನ್ನು ಲೇಖಕರು ರೈತ ದಂಗೆ ಎಂದು ಕರೆದರು . ಏಕೆಂದರೆ ಈ ದಂಗೆ ಸ್ಫೋಟಗೊಳ್ಳುವುದಕ್ಕೆ ಕ್ರಾಂತಿಕಾರಕ ವಾತಾವರಣವನ್ನು ರೈತರು ತಮ್ಮ ಚಳುವಳಿಗಳ ಮೂಲಕ ಸೃಷ್ಟಿ ಮಾಡಿದ್ದರು . ಬ್ರಿಟಿಷರು ರೈತರಿಂದ ತೆರಿಗೆ ವಸೂಲಿ ಮಾಡುತ್ತಿದ್ದರು . ಅದಕ್ಕೆ ಪ್ರತಿಯಾಗಿ , ಯಾವ ಅನುಕೂಲಗಳನ್ನು ಒದಗಿಸುತ್ತಿರಲಿಲ್ಲ . ಬ್ರಿಟಿಷರು ತೆರಿಗೆ ಹಾಕಿ ರೈತರನ್ನು ಶೋಷಿಸಿದರೆ ಶ್ರೀಮಂತರು ಸಾಲ ಕೊಟ್ಟು ಅದಕ್ಕೆ ಬಡ್ಡಿ ಹಾಕಿ ಅವರನ್ನು ಸುಲಿಗೆ ಮಾಡುತ್ತಿದ್ದರು .
4. ನಮ್ಮ ಆರೋಗ್ಯದ ಮೇಲೆ ವಿದೇಶಿ ಹೊಟೇಲ್‌ಗಳು ನಡೆಸಿದ ದಾಳಿಗಳೇನು ?
ಜಾಗತೀಕರಣದ ಭಾಗವಾಗಿ ನಮ್ಮ ದೇಶಕ್ಕೆ ಖಾದ್ಯ ತಯಾರಿಕಾ ಕಂಪನಿಗಳು ಹೊಟೇಲ್‌ಗಳು ದಾಳಿಯಿಟ್ಟವು . ವಿದೇಶಗಳಲ್ಲಿ ಈ ಹೊಟೇಲ್‌ಗಳು ಆರೋಗ್ಯ ಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು . ಅಮೇರಿಕಾದ ಸಂಸತ್ತು ಇಂತಹ ಹೊಟೇಲ್‌ಗಳು ತಂಯಾರಿಸುವ ಖಾದ್ಯಗಳ ಗುಣಮಟ್ಟ ಪರೀಕ್ಷಿಸಲು ಸಮಿತಿಯೊಂದನ್ನು ರಚಿಸಿತ್ತು . ಈ ಕಂಪನಿಗಳ ಖಾದ್ಯಗಳ ಗುಣಮಟ್ಟ ಪರೀಕ್ಷಿಸಲು ಸಮಿತಿಯೊಂದನ್ನು ರಚಿಸಿತ್ತು . ಈ ಕಂಪನಿಗಳ ಖಾದ್ಯ ತಯಾರಿಕೆಗೆ ಬಳಸುವ ಕುರಿ , ಕೋಳಿಗಳಿಗೆ ವಿಶೇಷ ರಾಸಾಯನಿಕಗಳ ಆಹಾರ ತಿನ್ನಿಸಿ ಬೆಳೆಸಲಗುತ್ತಿದ್ದ ಅಂಶ ಬೆಳಕಿಗೆ ಬಂದಿತು . ಇಂತಹ ಪ್ರಾಣಿಗಳನ್ನು ತಿನ್ನುವುದರಿಂದ ಕರುಳಿನ ಕ್ಯಾನ್ಸರ್ , ಜ್ವರ , ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಲೈಂಗಿಕ ಬದಲಾವಣೆಗಳು , ನಪುಂಸಕತ್ವ , ಮಕ್ಕಳಲ್ಲಿ ಅಕಾಲಿಕ ಹರೆಯ ಬರುವಿಕೆ ಮುಂತಾದ ಸಮಸ್ಯೆಗಳು ತಲೆದೋರುವುದು ಎಂದು ಅಮೇರಿಕಾದ ತಜ್ಞರು ತಮ್ಮ ಅಧ್ಯಯನದಿಂದ ತೋರಿಸಿಕೊಟ್ಟರು .
5. ಭೂ ಸುಧಾರಣಾ ಕಾಯ್ದೆ ಎಂದರೇನು ? ಅದರ ಪರಿಣಾಮಗಳೇನು ?
ಭೂ ಸುಧಾರಣಾ ಕಾಯ್ದೆ ಎಂದರೆ ರೈತ ಅಥವಾ ರೈತ ಕೂಲಿಕಾರರಲ್ಲದವರು ಇದರ ಪರಿಣಾಮವಾಗಿ ಕೃಷಿ ಜಮೀನುಗಳನ್ನು ಖರೀದಿಸರಿಸುವಂತಿಲ್ಲದಿರುವುದು . ವ್ಯಾಪಾರಿಗಳು , ಸಾಲ , ಲೇವಾದೇವಿಗಾರರು ಸರಕಾರಕ್ಕೆ ಆದಾಯ ತವರಿಗೆ ವಂಚಿಸಲು ಜಮೀನುಗಳನ್ನು ಖರೀದಿಸಿ , ತಮ್ಮ ವ್ಯಾಪಾರಿ ಮೂಲದಿಂದ ಬಂದ ಆದಾಯವನ್ನು ಕೃಷಿ ಮೂಲದಿಂದ ಬಂದ ಆದಾಯವೆಂದು ತೋರಿಸುವ ಪ್ರಕರಣಗಳು ಬೆಳಕಿಗೆ ಬ ೦ ದವು . ಭೂಮಿ ರೈತರಿಗೆ ಉತ್ಪಾದನಾ ಸಾಧನ ಮಾತ್ರವಲ್ಲದೆ ಅವನ ಬದುಕು ಆಗಿದೆ . ರೈತನ ಬದುಕಿನ ವ್ಯವಸ್ಥೆಯ ಮೇಲೆ ನಡೆದ ದಾಳಿ ಇದಾಗಿದೆ .
ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ .
ಬೆಳೆಯಲಿ ಬೆಳೆಯದಿರಲಿ ತೆರಿಗೆ ಕಡ್ಡಾಯವಾಯಿತು .
ಪ್ರಸ್ತಾವನೆ : ಪ್ರಸ್ತುತ ಈ ವಆಕ್ಯವನ್ನು ‘ ಸಿ.ಎಚ್ . ಹನುಮಂತರಾಯ’ರವರು ರಚಿಸಿರುವ ‘ ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನೂ ‘ ವಕೀಲರೊಬ್ಬರ ವಗೈರೆಗಳು ‘ ಪುಸ್ತಕದಿಂದ ಆರಿಸಲಾಗಿದೆ . ಆ ಸಮಯದ ತೆರಿಗೆ
ಸಂದರ್ಭ : ಬ್ರಿಟಿಷರು ತಂದ ಹೊಸ ನಮೂನೆಯ ಜಮೀನ್ದಾರಿ ಪದ್ಧತಿಯಿಂದ ರೈತರು ಹಣದ ರೂಪದಲ್ಲಿ ತೆರಿಗೆ ಪಾವತಿಸಬೇಕಾಗಿತ್ತು . ಪದ್ಧತಿಯ ಬಗ್ಗೆ ವಿವರಿಸುತ್ತ ಲೇಖಕರ ಈ ವಾಕ್ಯವನ್ನು ಹೇಳಿದ್ದಾರೆ .
ವಿವರಣೆ : ಹಳೆ ತೆರಿಗೆ ಪದ್ಧತಿಯ ಪರಕಾರ ಬೆಳೆದ ಬೇಳೆಯಲ್ಲಿ ಒಂದಷ್ಟು ಭಾಗವನ್ನು ಕೊಡಬೇಕೆನ್ನುವ ನಿಯಮವಿತ್ತು , ‘ ಬರ’ದ ಕಾರಣ ಬೆಳೆಬಾರದಿದ್ದರೆ ಆ ವರ್ಷವೂ ತೆರಿಗೆ ಪಾವತಿಸಬೇಕಾಗಿತ್ತು . ಈ ಜಮೀನ್ದಾರಿ ಪದ್ಧತಿಯಿಂದಾಗಿ ಬೆಳೆ ಬೆಳೆಯಲಿ , ಬೆಳೆಯಾಗದಿರಲಿ ತೆರಿಗೆ ಕಡ್ಡಾಯವಾಯಿತು .
ವಿಶೇಷತೆ : ಸ್ವಾತಂತ್ರ್ಯ ಪೂರ್ವದಲ್ಲಿ ರೈತರ ಸ್ಥಿತಿಗತಿಯ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ .
2. ಶವಗಳನ್ನು ನಾಯಿ ನರಿಗಳು ತಿನ್ನುತ್ತಿದ್ದವು .
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ` ಸಿ.ಎಚ್ . ಹನುಮಂತರಾಯ’ರವರು ರಚಿಸಿರುವ ‘ ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನೂ ವಕೀಲರೊಬ್ಬರ ವಗೈರೆಗಳು ‘ ಪುಸ್ತಕದಿಂದ ಆರಿಸಲಾಗಿದೆ .
ಸಂದರ್ಭ : ಭೀಕರ ಬರಗಾಲದ ಸಂದರ್ಭದಲ್ಲಿ ರೈತರ ಸ್ಥಿತಿ – ಗತಿ ಏನಾಗಿತ್ತು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ .
ವಿವರಣೆ : ಬರಗಾಲದ ತೀವ್ರತೆ ಎಷ್ಟಿತ್ತೆಂದರೆ ರೈತರು ಹಸಿವನ್ನು ತಾಳಲಾರದೆ ಎರೆಮಣ್ಣು ತಿಂದು ಜೀವ ಉಳಸಿಕೊಳ್ಳುತ್ತಿದ್ದರಂತೆ . ಆ ಕಾಲಕ್ಕೆ ಹಸಿವಿನಿಂದ ಸಾಯುವ ರೈತರ ದೇಹಗಳನ್ನು ಅಂತ್ಯಕ್ರಿಯೆ ಮಾಡಲು ಆಗದಂತಹ ಸ್ಥಿತಿ ಉಂಟಾಗಿ , ಶವಗಳನ್ನು ನಾಯಿ – ನರಿಗಳು ತಿನ್ನುತ್ತಿದ್ದವು .
ವಿಶೇಷತೆ : ಬರಗಾಲದ ತೀವ್ರತೆಯನ್ನು ಇಲ್ಲಿ ಮಾರ್ಮಿಕವಾಗಿ ವರ್ಣಿಸಲಾಗಿದೆ .
3. ಸ್ವಾತಂತ್ರ್ಯಕ್ಕಾಗಿ ಸೆಣಸಿದ ಸಾಮಾನ್ಯ ರೈತರ ಬದುಕು ದುಸ್ತರವಾಯಿತು
ಪ್ರಸ್ತಾವನೆ : ಪ್ರಸ್ತುತ ಈ ವಾಆಕ್ಯವನ್ನು ‘ ಸಿ.ಎಚ್ . ಹನುಮಂತರಾಯ’ರವರು ರಚಿಸಿರುವ ‘ ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನೂ ವಕೀಲರೊಬ್ಬರ ವಗೈರೆಗಳು ‘ ಪುಸ್ತಕದಿಂದ ಆರಿಸಲಾಗಿದೆ .
ಸಂದರ್ಭ : ಸ್ವಾತಂತ್ರ್ಯವು ರೈತರ ಕೈಗೆ ಸಿಗದೆ ಬಂಡವಾಳಶಾಶಾಹೀಗಳ ಕೈಗೇ ಸಿಕ್ಕಿತು . ಪರಿಣಾಮ ದೊಡ್ಡ ದೊಡ್ಡ ಕಾರ್ಖಾನೆಯ ಮಾಲೀಕರು ತಮ್ಮ ಇಂಡಸ್ಟ್ರಿಗಳ ಕಚ್ಚಾಮಾಲಿಗೆಬೇಕೆಂದು ಲಕ್ಷಾಂತರ ಎಕರೆ ಜಮೀನುಗಳನ್ನು ಲಪಟಾಯಿಸಿಕೊಂಡರು . ಎಂಬ ಘಟನೆ ನಡೆದ ಸಂದರ್ಭದಲ್ಲಿ ವಿವರಿಸಲಾಗಿದೆ .
ವಿವರಣೆ : ಸ್ವಾತಂತ್ರ್ಯಕ್ಕೆ ಹೋರಾಡಿದ ರೈತರಿಗೆ ಸಿಕ್ಕಿದ ಫಲ ನಿರಾಸೆ , ಅವರ ಜಮೀನುಗಳನ್ನು ಬಂಡವಾಳಶಾಹಿಗಳು ಜಪಟಾಯಿಸಿದರು . ಇದರಿಂದ ರೈತರ ಬದುಕು ಬಹಳ ಶೋಚನೀಯವಾಯಿತು . ರೈತರು ಸಂಕಟಕ್ಕೆ ಈಡಾದರು .
ವಿಶೇಷತೆ : ರೈತರ ಸ್ಥಿತಿಗಳ ಬಗ್ಗೆ ತಿಳಿಸಲಾಗಿದೆ .
ರೋಗನಿರೋಧಕ ಶಕ್ತಿಯೇ ಇರಲಿಲ್ಲ .
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಸಿ.ಎಚ್ . ಹನುಮಂತರಾಯ’ರವರು ರಚಿಸಿರುವ ‘ ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನೂ ‘ ವಕೀಲರೊಬ್ಬರ ವಗೈರೆಗಳು ‘ ಪುಸ್ತಕದಿಂದ ಆರಿಸಲಾಗಿದೆ .
ಸಂದರ್ಭ : ವಿಷಪೂರಿತ ಮಾಂಸಭಕ್ಷಣೆಯಿಂದ ಅಮೇರಿಕನ್ನರ ಹೃದಯ ರೋಗಗಳಿಗೆ ಬಲಿಯಾಗುವುದನ್ನು ಪತ್ತೆ ಹಚ್ಚಿದಳು . ರಾಸಾಯನಿಕಗಳನ್ನು ಭಕ್ಷಿಸಿ ಬೆಳೆಯುವ ಹಂತದಲ್ಲಿಯೇ ಪ್ರಾಣಿಗಳಿಗೆ ಕ್ಯಾನ್ಸರ್ ಲುಕೋಸಿನ್ ಹಂದಿಜ್ವರ ಇತ್ಯಾದಿ ರೋಗಗಳು ಬರಲಾರಂಭಿಸುತ್ತದೆ . ಇದನ್ನು ತಡೆಯಲು ರೋಗನಿರೋಧಕ ಶಕ್ತಿಯೇ ಇರುವುದಿಲ್ಲ ಎಂಬುದಾಗಿ ಹೇಳುವ ಸ ೦ ದರ್ಭ .
ವಿವರಣೆ : ರೋಗಗಳನ್ನು ತಡೆಗಟ್ಟಲು ರೋಗಾಣುಹರಡದಂತೆ ಅದನ್ನು ತಡೆಗಟ್ಟಲು ಕೊಡುವ ರಾಸಾಯನಿಕ ಕ್ರಿಯೆಗಳು ಕಾರ್ಯ ನಿರ್ವಹಿಸುವುದಿಲ್ಲ . ಇಂಥದ್ದನ್ನು ರೋಗನಿರೋಧಕ ಶಕ್ತಿಗಳೆಂದು ಕಳೆದುಕೊಂಡಿದೆ ಎನ್ನುವರು .
ವಿಶೇಷತೆ : ವೈಜ್ಞಾನಿಕ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ .
5. ಹೊಟೇಲ್‌ಗಳು ಆರೋಗ್ಯಪ್ರಿಯರ ತಿರಸ್ಕಾರಕ್ಕೆ ಗುರಿಯಾಗಿದ್ದವು .
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಸಿ.ಎಚ್ . ಹನುಮಂತರಾಯ’ರವರು ರಚಿಸಿರುವ ` ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನೂ ‘ ವಕೀಲರೊಬ್ಬರ ವಗೈರೆಗಳು ‘ ಪುಸ್ತಕದಿಂದ ಆರಿಸಲಾಗಿದೆ .
ಸಂದರ್ಭ : ಜಾಗತೀಕರಣದ ಭಾಗವಾಗಿ ನಮ್ಮ ದೇಶಕ್ಕೆ ಖಾದ್ಯ ತಯಾರಿಕಾ ಕಂಪನಿಗಳು ಹೊಟೇಲ್‌ಗಳು ದಾಳಿಯಿಟ್ಟವು ಎಂಬ ಸಂದರ್ಭದಲ್ಲಿ ಈ ವಾಕ್ಯವನ್ನು ತಿಳಿಸಲಾಗಿದೆ .
ವಿವರಣೆ : ಅಮೆರಿಕಾ ಸಂಸತ್ತು ಇಂತಹ ಹೊಟೇಲ್‌ಗಳ ಗುಣಮಟ್ಟ ಪರೀಕ್ಷಿಸಲು ಸಮಿತಿಯೊಂದನ್ನು ರಚಿಸಲಾಯಿತು . ಇದರಿಂದ ಗೊತ್ತಾದ ವಿಷಯವೆಂದರೆ , ಕುರಿ ಕೋಳಿಗಳಿಗೆ ರಾಸಾಯನಿಕಗಳ ಆಹಾರ ತಿನ್ನಿಸಿ ಬೆಳೆಸಲಾಗುತ್ತಿತ್ತು . ಆದರೆ ಇದರಿಂದ ಹಲವಾರು ಭಯಂಕರ ರೋಗಗಳು ಕಾಣಿಸಿದವು . ಆರೋಗ್ಯ ಬಯಸುವವರು ಇಂಥಹ ಆಹಾರಗಳನ್ನು ತಿರಸ್ಕರಿಸಿದರು .
ವಿಶೇಷತೆ : ಆರೋಗ್ಯವರ್ಧನೆಗೆ ತಿನ್ನುವ ಆಹಾರ ಕೂಡ ವಾಣಿಜ್ಯ ಮಯವಾಗಿತ್ತೆಂಬುದು ಇಲ್ಲಿ ತಿಳಿಯಲಾಗಿದೆ .
Kannada 1st Pu Notes Krushi Samskruthi mattu jagatikarana Question Answer Pdf
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.