ಪ್ರಥಮ ಪಿ.ಯು.ಸಿ ಚತುರನ ಚಾತುರ್ಯ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Chaturana Chaturya Kannada Notes Question Answer Summary Guide Pdf Download in Kannada Medium Karnataka State Syllabus 2024, Kseeb Solutions For Class 11 Kannada Chapter 9 Notes 1st Puc Kannada 9th Lesson Notes Pdf Chaturana Chaturya in Kannada Notes
1st Puc Kannada Sahitya Sanchalana Chaturana Chaturya Notes
ತರಗತಿ: ಪ್ರಥಮ ಪಿ.ಯು.ಸಿ
ಕವಿ – ಕಥಾನಕ ಹೆಸರು: ಯಾದವಕವಿ
ಗದ್ಯ ಭಾಗದ ಹೆಸರು: ಚತುರನ ಚಾತುರ್ಯ
ಕವಿ – ಕಥಾನಕ : ಯಾದವಕವಿ ( ಕಿ.ಶ. ೧೮೦೦ )
‘ ಕಲಾವತೀ ಪರಿಣಯಂ ‘ ಗ್ರಂಥದ ಕರ್ತೃ ಯಾದವ ಕವಿ , ಚಿಕ್ಕಬಳ್ಳಾಪುರ ಇವನ ಜನ್ಮಸ್ಥಳ . ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಪಂಡಿತನಾಗಿದ್ದನೆಂದು ತಿಳಿದುಬರುತ್ತದೆ .
ಉಭಯಕವಿ ವಿಚಕ್ಷಣ , ಉಭಯ ಕವಿತಾವಿಶಾರದ ಇವನ ಬಿರುದುಗಳು . ವಿದ್ಯಾವಂತನಲ್ಲದ ನಾಪಿತನೊಬ್ಬ ತೊಂದರೆಗಳು ಎದುರಾದ ಸಂದರ್ಭಗಳಲ್ಲಿ ತನ್ನ ಜಾಣೆಯಿಂದ ಪ್ರಾಣಾಪಾಯವನ್ನು ತಪ್ಪಿಸಿಕೊಳ್ಳುವ ಪ್ರಸಂಗ ಇದು .
ಹೆದರದೆ ಮುನ್ನುಗ್ಗುವ ಹಾಗು ಯುಕ್ತಿಯಿಂದ ಸಮಸ್ಯೆಯನ್ನು ಎದುರಿಸುವ ಚಾಣಾಕ್ಷತೆ ಈ ಕತೆಯಲ್ಲಿದೆ .
ಪದಕೋಶ :
ನಾಪಿತ – ಕ್ಷೌರಿಕ , ದಿವಾಕೀರ್ತಿ ; ಒರೆ – ಹೇಳು ; ಪಾಮರ- ಮುಗ್ಧ , ಮೂಢ , ದಡ್ಡ : ಪಾ(ಹಾ )ರುವ(ಪಾರ್ವ) -ಬ್ರಾಹ್ಮಣ : ಹೇಳಿಕೆ : ಯೋಜನ – ಎರಡು ಗಾವುದ , ಹನ್ನೆರಡು ಮೈಲು ; ಪರಿಷ – ಜಾತ್ರೆ : ಮೋರಿ- ವಾಲಗ , ವಾದ್ಯ ; ದ್ರವ್ಯ – ಸಂಪತ್ತು ; ಎಪ್ರ – ಬ್ರಾಹ್ಮಣ ; ವಾಣಿ – ಮಾತು , ನುಡಿ , ಸಂಗೀತ , ಸರಸ್ವತಿ , ಬೆಸಗೊಳ್ – ಕೇಳು , ವಿಚಾರಿಸು :
ವಿಪಿನ – ಕಾಡು , ಕಾಂತಾರ ; ಕರ – ಕೈ , ಕಿರಣ , ತೆರಿಗೆ , ಸಂವರಿಸಿ – ಒಟ್ಟುಗೂಡಿಸಿ , ಸರಿಪಡಿಸಿ , ಹಿಂದೆಸರಿಸಿ ; ಶಾರ್ದೂಲ – ಪುಲಿ , ಪುಂಡರೀಕ , ವ್ಯಾಘ್ರ , ದ್ವೀಪಿ , ತರಕು : ಕೃಷ್ಟಪುಷ್ಠಾ – ಸುಖದಿಂದ ಕೊಬ್ಬಿರುವ , ಚೆನ್ನಾಗಿ ಬೆಳೆದ : ರಜ್ಜು – ಹಗ್ಗ , ಪಾಶ ; ಕಟ್ಟಳೆ – ನಿಯಮ ; ಸನ್ನಾಹ- ಸಿದ್ಧತೆ : ಜಂತು- ಕುದ್ರ ಪಾಣಿ : ಉಪಕ್ರಮ – ಪ್ರಾರಂಭ , ತೊಡಗು : ಶೇಷ – ಉಳಿದ , ಮಿಕ್ಕಿದ್ದು , ಪ್ರಸಾದ , ಸರ್ಪ : ಕಕ್ಷ – ಕಂಕುಳ , ಬಗಲು ; ಹಡಪಕ್ಷೌರದಸಲಕರಣೆ ಚೀಲ : ಕೈಪಿಡಿ – ಕೈಗನ್ನಡಿ : ದರ್ಪಣ – ಕನ್ನಡಿ ; ಸ್ಕೂಲ – ಶಕ್ತಿಶಾಲಿ , ದಪ್ಪ , ಸರಿಸುಮಾರು , ಅಂದಾಜು ; ಪ್ರಾದೇಶಮಾತ್ರಪ್ರದೇಶ – ಹೆಬ್ಬರಳು ಮತ್ತು ತೋರು ಬೆರಳ ನಡುವಿನ ಸ್ಥಳ ; ( ಪಾ ) ಹಾಯ್ಕು ಹಾಕು ; ಸಾಧ್ಯಸದಿ – ಭಯದಿಂದ ; ಪೊಡಮಡು – ನಮಸ್ಕರಿಸು :
ನರಕಪಾಲಾಸ್ಥಿಮೆದೆಗಳ ( ನರ + ಕಪಾಲ + ಅ + ಮೆದೆಗಳ್ ) – ತಲೆಬುರುಡೆ ಮೂಳೆ ರಾಶಿಗಳು ; ಮೇದ ಕೊಬ್ಬು ; ಕರ್ದಮಿತ – ಕೆಸರಾಗಿರುವ ; ದೃಷ್ಠಿಪಥ – ಕಣ್ಣಿಗೆ : ವತ್ಸರ – ವರ್ಷ : ಸಂಪ್ರಾಪ್ತ ಸಂಭವಿಸು ; ಜವ – ವೇಗ , ಯಮ ; ದುರಿತ – ಪಾಪ : ( ಗಟೆಗೆ ) ಘಳಿಗೆ – ಸಮಯ , ಒಂದು ದಿನದ ೧/೬೦ ಭಾಗ , ೨೪ ನಿಮಿಷಗಳು : ಪೂರ್ವ – ಮುಂಚೆ , ಹಿಂದಿನ , ದಿಕ್ಕು ; ಮಹಾವೃಕ್ಷ ದೊಡ್ಡ ಮರ ;
ಶಾಖೆ – ಕೊಂಬೆ ; ಶಾಶ್ವಲ – ಹಸಿರಾದ ; ಹರಣ – ಪ್ರಾಣ ತೆಗೆ ; ಚಿರಕಾಲ ಬಹಳಸಮಯ ; ನಖ – ಉಗುರು ; ಖಂಡಿಸು – ತುಂಡು ಮಾಡು , ಕತ್ತರಿಸು ; ಖಂಡತುಂಡು , ಚೂರು ; ಹೆಗ್ಗಡಿ – ಹಿರಿಯ , ಒಡೆಯ , ಮುಖ್ಯಸ್ಥ ; ಪ್ರವರ ಪೀಳಿಗೆಯ ವಿವರಣೆ , ಸಂವಿಧಾನ ತಂತ್ರ : ನಗಾಗ್ರ – ಮರದ ತುದಿ , ( ನಗ – ಮರ , ಒಡವೆ , ಬೆಟ್ಟ ) : ಪ್ರಚ್ಛನ್ನ – ಅಡಗಿಕೊಂಡು , ಮರೆಯಾಗಿ , ಕಣ್ಣಿಗೆ ಕಾಣದಂತೆ ; ನೋಡಲಮ್ಮದೆ – ಇಪ್ಪಪಡದೆ : ದಿಗ್ದಶ ( ದಿಕ್ + ದೇಶ ) ದಿಕ್ಕಾಪಾಲು ; ತಾಣ – ಸ್ಥಳ , ಜಾಗ ; ಉಕ್ಕಾಳ – ಉತ್ಸಾಹ , ಉಬ್ಬಿಹೋಗು ; ಪಾಷಾಣ – ಕಲ್ಲು , ವಿಷ ; ಅಸು – ಪ್ರಾಣ : ಸಮ್ಯಗ್ – ಒಳ್ಳೆಯ : ಜನನಿ- ತಾಯಿ
1st Puc Kannada Sahitya Sanchalana Chaturana Chaturya Notes Question Answer
II . ಒಂದು ವಾಕ್ಯದಲ್ಲಿ ಉತ್ತರಿಸಿ .
ಹುಲಿ ಹುಲಿ ಕಾಡಿನಲ್ಲಿ ನಾಪಿತನಿಗೆ ಎದುರಾಗಿ ಬಂದಿತು .
ದ್ರವ್ಯಾಭರಣಗಳನ್ನು ಕೊಡುವುದಾಗಿ ಹುಲಿ ನಾಪಿತನಿಗೆ ಹೇಳಿತು .
ಮಹೇಂದ್ರನು ವ್ಯಾಪಯಜ್ಞವನ್ನು ಕೈಗೊಂಡಿದ್ದನು .
ಹುಲಿ ಕನ್ನಡಿಯಲ್ಲಿ ಕಂಡಿದ್ದು ತನ್ನ ಪ್ರತಿಬಿಂಬವನ್ನೇ ಆದರೂ ಅದು ತಇಳಿದು ಕೊಂಡದ್ದು ಬೇರೊಂದು ದೊಡ್ಡ ಹುಲಿ ಎಂದು .
ನಾಪಿತನು ತಂದ ದ್ರವ್ಯದಲ್ಲಿ ವಿಪನಿಗೆ ಅರ್ಧ ಭಾಗ ಕೊಟ್ಟನು .
ಹುಲಿಯ ಹಿಂಡನು ಕಂಡು ಹೆದರಿದ ನಾಪಿತ ಮತ್ತು ವಿಪರು ಮರದ ಮೇಲೆ ಅಡಗಿಕೊ೦ಡರು .
ನರಿ , ನಾಪಿತನ ಕಲ್ಲಿನ ಹೊಡೆತಕ್ಕೆ ಸಿಕ್ಕಿ ಪ್ರಾಣ ಬಿಟ್ಟಿತು .
ಹುಲಿಯನ್ನು ನೋಡಿ ಹೆದರಿಕೊಳ್ಳದ ಪ್ರಾಣಿಗಳು ಆದರೆ ಹುಲಿ ಹೆದರಿಕೊಂಡು ಹೋಗುತ್ತಿದ್ದನ್ನು ಕಂಡು ನರಿಗೆ ಆಶ್ಚರ್ಯವಾಯಿತು .
ವಿಪ್ರನು ಮರದಿಂದ ದೊಪ್ಪನೆ ಹುಲಿಗಳ ಮಾಂಸ ಭಕ್ಷ್ಯ ಮಾಡುತ್ತಿದ್ದ ಜಾಗದಲ್ಲಿ ಬಿದ್ದನು .
ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ನರಿ .
1st Puc Kannada Sahitya Sanchalana Chaturana Chaturya Notes Question Answer
II ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಮಹಾದೇವನ ಉತ್ಸವಕ್ಕೆ ನಾಪಿತನು ತೆರಳಿದ ಉದ್ದೇಶವೇನು ?
ಮಹಾದೇವನ ಉತ್ಸವಕ್ಕೆ ನಾಪಿತನು ತೆರಳಿದ ಉದ್ದೇಶವೆಂದರೆ ಒಲಗವನ್ನು ಊದಿ ಸೇವೆ ಮಾಡುವುದರ ಜೊತೆಗೆ ಹಣಸಂಪಾದನೆಗೆ ದಾರಿಯಾಗಬಹುದೆಂಬ ಉದ್ದೇಶದಿಂದ ತೆರಳಿದನು .
ಹುಲಿಯ ಗುಹೆಯಲಿ ನಾಪಿತನು ಏನೇನನ್ನು ಕಂಡನು ?
ಹುಲಿಯ ಗುಹೆಯಲ್ಲಿ ನಾಪಿತನು ರಕ್ತಸಿಕ್ತ ಮಾಂಸ , ಮೂಳೆಗಳು , ಅಸ್ತಿಪಂಜರಗಳ ನಡುವೆ , ದ್ರವ್ಯಾಭರಣಗಳನ್ನು ಕಂಡನು .
3. ಎರಡನೆ ಬಾರಿ ಮಹಾದೇವನ ಉತ್ಸವಕ್ಕೆ ನಾಪಿತ ತೆರಳಿದ್ದೇಕೆ ?
ಎರಡನೆ ಬಾರಿ ಮಹಾದೇವನ ಉತ್ಸವಕ್ಕೆ ನಾಪಿತ ದೇವ – ಸೇವೆಗಾಗಿ ತೆರಳಿದ್ದನು . ಕಾಡಿನಲ್ಲಿ ಹುಲಿಗಳೆಲ್ಲಾ ದಿಕ್ಕಾ ಪಾಲಾಗಿ ಏಕೆ ಓಡಿದವು ?
4 . ಕಾಡಿನಲ್ಲಿ ನಾಪಿತ ಹಾಗೂ ವಿಪ್ರನನ್ನು ಕಂಡ ಹುಲಿಗಳು ಇವರು ಗಂದರ್ವರೆಂದೂ ಮಹೇಂದ್ರನ ವ್ಯಾಘ್ರ ಯಜ್ಞಕ್ಕೆ ನಮ್ಮನ್ನು ಬಲಿಕೊಡುವರೆಂದು ಹೆದರಿ ದಿಕ್ಕಾ ಪಾಲಾಗಿ ಓಡಿದವು .
5. ನರಿಯೊಡನೆ ಬರುತ್ತಿರುವ ಹುಲಿಯನ್ನು ಕಂಡ ನಾಪಿತನು ಏನೆಂದು ಕೊಂಡನು ?
ನರಿಯೊಡನೆ ಬರುತ್ತಿರುವ ಹುಲಿಯನ್ನು ಕಂಡ ನಾಪಿತನು – ‘ ಇವೆರೆಡೊಂದಾಗಿ ನಡೆತಂದ ಬಳಿಕ ತಾವು ಉಳಿಯುವುದೆಂತು ‘ ಎಂದುಕೊಂಡನು .
6. ನರಿಯನ್ನು ನಾಪಿತ ಹೇಗೆ ಗದರಿದನು ?
ಐದು ಹುಲಿಗಳನ್ನು ಮೂರು ದಿನದೊಳಗೆ ಹಿಡಿದು ನಿಮಗೊಪ್ಪಿಸುವೆನೆಂದು ಶಪಥ ಮಾಡಿದ ನೀನು , ಐದು ದಿನಕ್ಕೆ ಒಂದೇ ಒಂದು ಹುಲಿಯನ್ನು ತಂದಿರುವೆಯಲ್ಲಾ ಎಂದು ಗದರಿದನು .
III ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1.ಪಲಾಯನ ಮಾಡುತ್ತಿದ್ದ ಹುಲಿಯನ್ನು ನರಿ ಹೇಗೆ ಸಮಾಧಾನ ಪಡಿಸಿ ಹಿಂದಕ್ಕೆ ಕರೆ ತಂದಿತು ?
ಪಲಾಯನ ಮಾಡುತ್ತಿದ್ದ ಹುಲಿಯನ್ನು ನರಿಯು ನೋಡಿ – ಇದೆನು ಹುಲಿರಾಯ , ಎಲ್ಲರೂ ನಿನ್ನನ್ನು ನೋಡಿ ಪಲಾಯನ ಮಾಡಿದರೆ , ಮೂರ್ಖ ಮನುಷ್ಯರನ್ನು ಕಂಡು ನೀನು ಪಲಾಯನ ಮಾಡುತ್ತಿರುವೆಯಲ್ಲಾ ‘ ಎಂದು ಸಮಾಧಾನ ಮಾಡಿ ಮನ : ಅದರ ಗುಹೆಯ ಬಳಿ ಕರೆ ತಂದಿತು .
2.ಹುಲಿಯಿಂದ ಪಾರಾಗಲು ನಾಪಿತ ಕಲ್ಪಿಸಿದ ಕತೆ ಯಾವುದು ?
ಹುಲಿಯಿಂದ ಪಾರಾಗಲು ನಾಪಿತ ಕಟ್ಟಿಸಿದ ಕತೆಯೆಂದರೆ – ಗಂಧರ್ವನೆಂದು , ಮಹೇಂದ್ರನ ವ್ಯಾಘ್ರ ಯಜ್ಞಕ್ಕೆ ಐವರು ಗಂದರ್ವರು ತಲಾ ನೂರು ವ್ಯಾಘ್ರಗಳನ್ನು ತರಲು ಹೇಳಿರುವುದಾಗಿ ಈಗಾಗಲೇ 96 ವ್ಯಾಪ್ತಿಗಳನ್ನು ತಲುಪಿಸಿದ್ದು ನೆನ್ನೆ ಒಂದು ದೊಡ್ಡ ವ್ಯಾಘ್ರನನ್ನು ಹಿಡಿದು ತನ್ನ ಹಡಪದಲ್ಲಿ ಇಟ್ಟಿರುವುದಾಗಿ ಈಗ ನಿನ್ನನ್ನು ಬಂಧಿಸುವುದಾಗಿ ಪಾಶವನ್ನು ತೋರಿಸಲು ಹುಲಿಯ ಭಯಭೀತಿಗೊಂಡಿತು .
3. ಮೂರ್ಛ ಹೋದ ವಿಪ್ರನನ್ನು ನಾಪಿತನು ಹೇಗೆ ಸಂತೈಸುತ್ತಾನೆ ?
ಅತ್ತ ಹುಲಿಗಳು ಪಲಾಯನ ಮಾಡುತ್ತಿದ್ದಂತೆ ನಾಪಿತನು ವಿಪ್ರನನ್ನು ಎಚ್ಚರಿಸಿಗೊಳಿಸಿ ‘ ಇಷ್ಟು ಹೆದರಿದರೆ ಹೇಗೆ ? ಕಷ್ಟದ ಸಂಕಟದ ಸಮಯದಲ್ಲಿ ನಾವು ಧೈರ್ಯ ತಂದುಕೊಳ್ಳಬೇಕು , ‘ ಮುಂತಾದಿ ವಿಪುನನ್ನು ಸಮಾಧಾನ ಗೊಳಿಸಿದನು .
4. ಹುಲಿಯು ನಾಪಿತನಿಂದ ತಪ್ಪಿಸಿಕೊಂಡ ರೀತಿಯನ್ನು ವಿವರಿಸಿ .
ಹುಲಿಯು ಪಾಶ ಹಾಕಲು ಯತ್ನಿಸಿದ ನಾಪಿತನಿಗೆ ಹುಲಿಯು ದೈನ್ಯದಿಂದ ತನಗೆ ಬಂದಿಸಬಾರದೆಂದು ತಾನು ತನ್ನ ಪ್ರಾಣದ ಬದಲಾಗಿ ತುಂಬಾ ದ್ರವ್ಯಾಭರಣಗಳನ್ನುಕೊಡುವುದಾಗಿ ಹೇಳಿ ತನಗೆ ಬಂದಿಸಬಾರದೆಂದು ಬೇಡಿಕೊಂಡಿತು .
5. ವ್ಯಾಘ್ರಗಳ ಮಧ್ಯೆ ಬಿದ್ದ ವಿಪನನ್ನು ಉಳಿಸಿಕೊಳ್ಳಲು ನಾಪಿತನು ಮಾಡಿದ ಉಪಾಯವೇನು ?
ವ್ಯಾಘ್ರಗಳ ಮಧ್ಯೆ ಬಿದ್ದ ವಿಪನನ್ನು ಉಳಿಸಿಕೊಳ್ಳಲು ನಾಪಿತನು , ಯುಕ್ತಿ ಉಪಯೋಗಿಸಿದ ಮೂರ್ಛ ಹೋದ ವಿಪ್ರನನ್ನು ಬೇರೆಯಾರಿಗೂ ತಿಳಿಯದಿರಲೆಂದು ‘ ಎಲವೋ ಗಂದರ್ವ , ನಾ ದುಮುಕಿದುದು ಲೇಸಾಯ್ತು ‘ ಎಂದು ಹೇಳಿದಾಗ ಇತರ ಹುಲಿಗಳು ದಿಕ್ಕಾಪಾಲಾಗಿ ಓಡಿದವು . ಇದರಿಂದ ವಿಪನ ಹಾಗೂ ನಾಪಿತನ ಪ್ರಾಣ ಉಳಿಯಿತು .
ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ .
1. ಇನ್ನು ಮೂರೊಂದು ದೊರೆಯ ತಾ ಕೃತಕೃತ್ಯನೆಂದು
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ಯಾದವ ಕವಿ ‘ ರಚಿಸಿರುವ ‘ ಚತುರನ ಪಥಮ ಪಿ.ಯು.ಸಿ. ಕಾಯ ಚಾತುರ್ಯ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ಕಲಾವತಿಪರಿಣಯ , ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಈ ವಾಕ್ಯವನ್ನು ನಾಪಿತನು , ಹುಲಿರಾಯನಿಗೆ ಇಂದ್ರನು ನಡೆಸುತ್ತಿರುವ ವ್ಯಾಘ್ರಯಜ್ಞಕ್ಕೆ ಐವರು ಗಂಧರ್ವರು ಮಾರು ವೇಷದಲ್ಲಿ ಬಂದಿದ್ದೇವೆ . ನಾನು ಈಗಾಗಲೇ 94 ಹುಲಿಗಳನ್ನು ಒಪ್ಪಿಸಿರುವೆ , ನೆನ್ನೆಯೇ ಒಂದು ಹುಲಿಯನ್ನು ಹಿಡಿದು ಈ ಹಡಪದಲ್ಲಿಟ್ಟಿದ್ದೇನೆ . ಇನ್ನು ಈಗ ನೀನು , ಎಂಬ ಸದರ್ಭದಲ್ಲಿ ಹೇಳಿದ ಮಾತು ಇದಾಗಿದೆ .
ವಿವರಣೆ : 96 ಹುಲಿಗಳ ಕಳುಹಿಸಿ ಆಗಿದೆ . ನನ್ನ ಒಂದು ಹಿಡಿದಾಗಿದೆ ಉಳಿದ ಮೂರು ಹುಲಿಗಳು ಮಾತ್ರಬೇಕಾಗಿವೆ ಎಂಬುದಾಗಿ ನಾಪಿತ ಹುಲಿರಾಯನೊಂದಿಗೆ ಹೇಳಿದನು .
ವಿಶೇಷತೆ : “ ಧೈರ್ಯಂ ಸರ್ವತ್ರಂ ಸಾಧನಂ ” ಎಂಬ ತತ್ವ ಇಲ್ಲಿದೆ .
2. ಪತ್ನಿ ಪುತ್ರರನಾದರಾದವರಿಗಿನ್ನೇನು ಗತಿ
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಯಾದವ ಕವಿ ‘ ರಚಿಸಿರುವ ಚತುರನ ಚಾತುರ್ಯ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ಕಲಾವತಿಪರಿಣಯಂ ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ನಾಪಿತನು ದೇವರ ಸೇವೆಗೆಂದು ಹೊರಟಾಗ ಮಾರ್ಗ ಮಧ್ಯೆ ದಟ್ಟಡವಿಯಲ್ಲಿ ಸಾಗುತ್ತಿದ್ದ ಹುಲಿಯೊಂದು ಎದುರಾಯಿತು . ಎದುರಿಗೆ ಬಂದ ಹುಲಿಯನ್ನು ಕಂಡು ನಾಪಿತನ ಮನಸ್ಸಿನಲ್ಲಿ ಭಯ ಆಲೋಚನೆಗಳು ಉಂಟಾದ ಸಂದರ್ಭದಲ್ಲೂ ಈ ವಾಕ್ಯ ಮೂಡಿ ಬಂದಿದೆ .
ವಿವರಣೆ : ನಾಪಿತನು , ಹುಲಿಯಿಂದ ತಪ್ಪಿಸಿಕೊಳ್ಳುವುದು ಹೇಗೆ , ಒಂದು ವೇಳೆ ತಾನು ಹುಲಿಯ ಬಾಯಿಗೆ ಸಿಕ್ಕಿ ಬಿದ್ದರೆ ತನ್ನ ಪತ್ನಿ ಪುತ್ರರ ಗತಿ ಏನೆಂದು ಯೋಚಿಸಿದನು .
ವಿಶೇಷತೆ : ನಾಪಿತನ ಭಯದ ಪರಿಸ್ಥಿತಿ ಇಲ್ಲಿ ತಿಳಿಸಲಾಗಿದೆ . ಈ ಗದ್ಯಭಾಗವು ನಡುಗನ್ನಡ ಭಾಷೆಯಲ್ಲಿದೆ .
3. ಎಲವೋ ಗಂದರ್ವ , ನೀ ಧುಮುಕಿದುದು ಲೇಸಾಯ್ತು
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಯಾದವ ಕವಿ ‘ ರಚಿಸಿರುವ ‘ ಚತುರನ ಚಾತುರ್ಯ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ಕಲಾವತಿಪರಿಣಯಂ ‘ ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಎರಡನೇ ಬಾರಿ , ಮಹಾದೇವನ ಜಾತ್ರೆಗೆ ನಾಪಿತನು ಹೊರಡಲು ಏಷ್ಯನು ಅವನೊಂದಿಗೆ ಹೊರಟನು . ಹಿಂದಿನ ಬಾರಿ ಹುಲಿಯ ಕೈಗೆ ಸಿಕ್ಕಿಬಿದ್ದರಿಂದ ಈ ಬಾರಿ ಬೇರೆ ಮಾರ್ಗವಾಗಿ ಹೊರಟಾಗ , ಹಲವಾರು ಹುಲಿಗಳನ್ನು ಭಯಭೀತರಾಗಿ ಮರವನ್ನೇರಿದರು . ಹುಲಿಗಳು ಮಾಂಸಭಕ್ಷ ನೀಡಿ ಅಬ್ಬರಿಸಿ ಘರ್ಜಿಸಿದಾಗ ಹೆದರಿ ಏುದೊಪ್ಪನೆ ಕೆಳಗೆ ಬಿದ್ದನು , ಹುಲಿಯ ಬಾಯಿಂದ ತಪ್ಪಿಸಲು ಹೊಸ ಯುಕ್ತಿ ಉಪಯೋಗಿಸಿ ನಾಪಿತ ಈ ಮಾತನ್ನೇ ಹೇಳಿದನು .
ವಿವರಣೆ : ಮರದ ಮೇಲಿಂದ ಧುಮುಕಿದ ವಿಪನ ಪ್ರಾಣ ಉಳಿಸಲು ವಿಪ್ರನನ್ನು ಗಂಧರ್ವ ಎಂದು ಕರೆದಿದ್ದಾರೆ . ಪ್ರಾಣಾಪಾಯದಿಂದ ಪಾರು ಮಾಡಿದ್ದಾನೆ .
ವಿಶೇಷತೆ : ‘ ಧೈರ್ಯ ೦ ಸರ್ವತ್ರ ಸಾಧನಂ ‘ ಎಂಬುದು ನಾಪಿತನ ಧೈರ್ಯ ಗೋಚಾರವಾಗುತ್ತದೆ .
4. ಇವರೆದೊಂದಾಗಿ ನಡೆ ತಂದ ಬಳಿದ ತಾವು ಉಳಿಯುವದೆಂತು
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಯಾದವ ಕವಿ ‘ ರಚಿಸಿರುವ ‘ ಚತುರನ ಚಾತುರ್ಯ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ಕಲಾವತಿ ಪರಿಣಯಂ ‘ ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ನರಿ ಹಾಗೂ ಹುಲಿ ಒಟ್ಟಾಗಿ ಬಂದುದ್ದನ್ನು ನೋಡಿ ನಾಪಿತನ ಮನಸ್ಸಿನಲ್ಲಿ ಉಂಟಾದ ಭಾವನೆ ಇಲ್ಲಿ ವ್ಯಕ್ತವಾಗಿದೆ .
ವಿವರಣೆ : ನರಿ ಹುಲಿ ಒಟ್ಟಾದರೆ ಬುದುಕುವುದು ಕಷ್ಟ . ಹುಲಿ ಬಲಶಾಲಿ , ನರಿ ಬುದ್ದಿಶಾಲಿ ಇವರ ಮಧ್ಯೆ ನಾವು ಸಿಕ್ಕಿ ಹಾಕಿಕೊಂಡರೆ ಪ್ರಾಣಕೊಳ್ಳುವುದು ಖಚಿತ , ಎ೦ದು ನಾಪಿತ ಯೋಚಿಸಿದನು .
ವಿಶೇಷತೆ : ನಾಪಿತನ ಬುದ್ಧಿವಂತಿಕೆ ಇಲ್ಲಿ ವ್ಯಕ್ತವಾಗಿದೆ .
5. ಮೊದಲು ತನಗಂತಿತ್ತ , ಇವನೆಂತು ತಂದನೊ ?
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಯಾದವ ಕವಿ ‘ ರಚಿಸಿರುವ ‘ ಚತುರನ ಚಾತುರ್ಯ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ಕಲಾವತಿಪರಿಣಯಂ ‘ ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಈ ವಾಕ್ಯವನ್ನು ವಿಪನು , ನಾಪಿತನು ತಂದ ದ್ರವ್ಯಾಭರಣಗಳಲ್ಲಿ ಅರ್ಧ ಭಾಗವನ್ನು ಕೊಟ್ಟಾಗ , ತನಗೆ ಇಷ್ಟೊಂದು ಕೊಟ್ಟಿರುವಾಗ ಇವನೆಷ್ಟು ತಂದಿರುವನೋ ಎಂಬ ಭಾವನೆ ಇಲ್ಲಿ ವ್ಯಕ್ತವಾಗಿದೆ .
ವಿವರಣೆ : ಮೊದಲು ನನಗೆ ಇಷ್ಟೊಂದು ದ್ರವ್ಯ ಭೂಷಣೆಗಳನ್ನು ಕೊಟ್ಟಿರುವ ಇವನ ಬಳಿ ಮತ್ತಷ್ಟು ಇರಬಹುದು ಎಂಬ ಆಲೋಚನೆ ಬುರುವುದು ಸಾಮಾನ್ಯ ಮನುಷ್ಯನ ಸಹಜ ಗುಣವೆಂಬುದು ವ್ಯಕ್ತವಾಗುತ್ತದೆ .
ವಿಶೇಷತೆ : ವಿಪನ ವ್ಯಕ್ತಿತ್ವ ಇಲ್ಲಿ ಮೂಡಿ ಬಂದಿದೆ .
6. ಜನನಿಯುದರದಿಂ ಬಂದನೆಂದು ಜವಳಲ್ಲಿಂತೆರಳಿ
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಯಾದವ ಕವಿ ರಚಿಸಿರುವ ‘ ಚತುರನ ಚಾತುರ್ಯ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ . ಇದನ್ನು ಕಲಾವತಿ ಪರಿಣಯಂ ‘ ಎಂಬ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ .
ಸಂದರ್ಭ : ಹಾಲಿಯು , ತಪ್ಪಿಸಿಕೊಳ್ಳಲು ಯುಕ್ತಿ ಉಪಯೋಗಿಸಿ ಮನೆಗೆ ಹಿಂತಿರುಗಿದ ನಾಪಿತ ಈ ಮಾತನ್ನು ಹೇಳುತ್ತಾನೆ .
ವಿವರಣೆ : ಹುಲಿಯಿಂದ ಬಾಯಿಂದ ತಪ್ಪಿಸಿಕೊಂಡು ಬಂದದ್ದು ತಾಯಿಯ ಗರ್ಭದಿಂದ ಹೊರಬಂದು ಪುನರ್ಜನ್ಮ ಪಡೆದ ಹಾಗಾಯಿತು ಎಂಬುದಾಗಿ ನಾಹಿತ ತನ್ನ ಅನುಭವವನ್ನು ಹೇಳಿಕೊಂಡಿದ್ದಾನೆ .
ವಿಶೇಷತೆ : ನಾಪಿತನ ಅನುಭವ ಇಲ್ಲಿ ವ್ಯಕ್ತವಾಗಿದೆ .
1st Puc Kannada Sahitya Sanchalana Chaturana Chaturya Notes Question Answer Pdf Download
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.