1st PUC Kannada Magu Mattu Hannugalu Notes | ಪ್ರಥಮ ಪಿಯುಸಿ ಕನ್ನಡ ಮಗು ಮತ್ತು ಹಣ್ಣುಗಳು ನೋಟ್ಸ್

ಪ್ರಥಮ ಪಿ.ಯು.ಸಿ ಮಗು ಮತ್ತು ಹಣ್ಣುಗಳು ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st PUC Magu Mattu Hannugalu Kannada Notes Question Answer Summary Guide Pdf Download in Kannada Medium Karnataka 2023, Kseeb Solutions For Class 11 Kannada Poem 9 Notes 1st Puc Kannada 9th Poem Notes Magu Mattu Hannugalu Saramsha Magu Mattu Hannugalu Kannada Notes Class 11 Magu Mattu Hannugalu Kannada Poem Notes Pdf

 

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಎಸ್ . ಶಿವಪ್ರಕಾಶ್

ಕಾವ್ಯಾ ಭಾಗದ ಹೆಸರು: ಮಗು ಮತ್ತು ಹಣ್ಣುಗಳು

Magu Mattu Hannugalu Kannada Notes

1st PUC Kannada Magu Mattu Hannugalu notes | ಪ್ರಥಮ ಪಿಯುಸಿ ಕನ್ನಡ ಮಗು ಮತ್ತು ಹಣ್ಣುಗಳು ನೋಟ್ಸ್.
1st PUC Kannada Magu Mattu Hannugalu notes | ಪ್ರಥಮ ಪಿಯುಸಿ ಕನ್ನಡ ಮಗು ಮತ್ತು ಹಣ್ಣುಗಳು ನೋಟ್ಸ್.

ಕವನ – ಕವಿ : ಎಚ್ . ಎಸ್ . ಶಿವಪ್ರಕಾಶ್ ( ೧೯೫೪ )

ಎಚ್ . ಎಸ್ . ಶಿವಪ್ರಕಾಶ್ ಬೆಂಗಳೂರಿನವರು . ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ . ಜೈನ್ ವಿಶ್ವವಿದ್ಯಾಲಯ ಹಾಗೂ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ‘ ಆರ್ಟ್ಸ್ ಅಂಡ್ ಏಸ್ತೆಟಿಕ್ಸ್ ಸ್ಕೂಲ್’ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ . ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ .

ಪ್ರಸ್ತುತ ಜರ್ಮನಿಯ ಬರ್ಲಿನ್‌ನಲ್ಲಿರುವ “ ರವೀಂದ್ರನಾಥ ಟ್ಯಾಗೋರ್ ಕೇಂದ್ರ ” ದ ನಿರ್ದೇಶಕರಾಗಿದ್ದಾರೆ . ಮಳೆಬಿದ್ದ ನೆಲದಲ್ಲಿ , ಅಣುಕ್ಷಣಚರಿತೆ , ಸೂರ್ಯಜಲ, ನವಿಲು ನಾಗರ , ಮಳೆಯ ಮಂಟಪ ಇವರ ಪ್ರಮುಖ ಕವನ ಸಂಕಲನಗಳು , ಮಹಾಚೈತ್ರ , ಮಂಟೇಸ್ವಾಮಿ ಕಥಾ ಪ್ರಸಂಗ , ಸುಲ್ತಾನ್ ಟಿಪ್ಪು , ಮಾದಾರಿ ಮಾದಯ್ಯ , ಸಿಲಪ್ಪದಿಗಾರಂ ಪ್ರಸಿದ್ಧ ನಾಟಕಗಳು .

ಮಾರನಾಯಕನ ದೃಷ್ಟಾಂತ , ಮಲ್ಲಮ್ಮನ ಮನೆಹೋಟು , ಷೇಕ್ಸ್ಪಿಯರ್ ಸ್ವಪ್ನನೌಕೆ , ಮರೆತುಹೋದ ದೊಂಬರಾಕೆ ಅನುವಾದಿತ ಕೃತಿಗಳು . ಮೊದಲ ಕಟ್ಟಿನ ಗದ್ಯ , ಸಾಹಿತ್ಯ ಮತ್ತು ರಂಗಭೂಮಿ ಇವರ ವಿಮರ್ಶೆಗಳು .

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಸಂದಿವೆ . ೨೦೧೨ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ .

ಪ್ರಸ್ತುತ ಕವಿತೆಯಲ್ಲಿ ಬೇರೆ ಬೇರೆ ಹಣ್ಣುಗಳ ವಿಭಿನ್ನ ಬಗೆಯ ರುಚಿ , ಮಾಗುವಿಕೆ , ಲಭ್ಯತೆ ಹಾಗೂ ಅಪರೂಪತೆಗಳ ಅಂಶಗಳನ್ನು ಮಗುವಿನ ವಿಕಸನದ ಗುಣಗಳಾಗಿ ಭಾವಿಸಲಾಗಿದೆ . ಈ ನೆಲೆಯಲ್ಲಿ ಅದರ ವ್ಯಕ್ತಿತ್ವ ನಿರ್ಮಾಣವಾಗಬೇಕೆಂಬ ಆಶಯ ವ್ಯಕ್ತವಾಗಿದೆ .

ಬಾಳಿ ಬದುಕಬೇಕಾದ ಮಗು ಎಳವೆಯಲ್ಲಿ ಯಾವುದೇ ತೊಂದರೆಗಳಿಗೆ ಒಳಗಾಗದೆ ಉತ್ತಮವಾದ ಸಮಗಾತ್ರದ ಗುಣಗಳನ್ನು ಒಳಗೊಳ್ಳುತ್ತಾ ಪಕ್ವಗೊಂಡು , ಅಪರೂಪದ ವ್ಯಕ್ತಿತ್ವವಾಗಿ ಬೆಳೆದು , ಮೆಚ್ಚುಗೆಯನ್ನು ಗಳಿಸಬೇಕು .

ಉಪಕಾರಿಯಾಗಿ , ಎಲ್ಲರಿಗೂ ದಕ್ಕುವ ವ್ಯಕ್ತಿಯಾಗಿ ರೂಪುಗೊಳ್ಳಬೇಕೆಂಬುದನ್ನು ಕಾಣಬಹುದು , ಆಧುನಿಕ ಸರಕು ಮಾರುಕಟ್ಟೆಯ ನಡುವೆ ಮಗು ಹಣ್ಣಿನಂಗಡಿಯಂತೆ ಆಗಬೇಕೆಂಬ ಉದ್ದೇಶ ಇಲ್ಲಿದೆ. ಮಗು ವ್ಯಾಪಾರಿ ಸಂಸ್ಕೃತಿಯ ಗುಣಗಳನ್ನು ಮೈಗೂಡಿಸಿಕೊಳ್ಳದೆ ಜನಪರ ಹಾಗೂ ಸಮಾಜಮುಖಿ ಗುಣ , ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ಆಶಯ ಇದೆ .

ಪದಕೋಶ :

ಗುಜರಿ – ಹಳೆ ವಸ್ತುಗಳನ್ನು ಮಾರುವ ಸ್ಥಳ ; ಸುಕ್ಕು – ನೆರಿಗೆ ; ಸಮನಿಸು – ಸೇರು , ಹೊಂದಿಕೊಳ್ಳು ; ಕಮರು – ಬಾಡು ; ಗಿರವಿ – ಅಡವು , ಒತ್ತೆ ; ಖನಿ – ಗಣಿ , ನೆಲೆ ; ಎಲಚಿ -ಇಲಚಿ , ಬೋರೆಹಣ್ಣು .

1st PUC Kannada Magu Mattu Hannugalu Notes Question Answer

I. ಒಂದು ವಾಕ್ಯದಲ್ಲಿ ಉತ್ತರಿಸಿ .

1. ಮಗು ಕಣ್ಣನ್ನು ಎಲ್ಲಿ ಅರಳಿಸುತ್ತದೆ ?

ಹಣ್ಣಿನಂಗಡಿಯ ಮುಂದೆ ಮಗು ಕಣ್ಣರಳಿಸಿತು .

2. ಮಗು ಯಾವುದರ ಹಾಗೆ ಬಾಗಬೇಕು ?

ಮಗು ಕಳಿತ ಬಾಳೆಹಣ್ಣಿನಂತೆ ಬಾಗಬೇಕು .

3. ಯಾವ ಹಣ್ಣಿನಂತೆ ಮಗು ಕೊಬ್ಬಬಾರದು ?

ಚಕೋತ ಹಣ್ಣಿನಂತೆ ಮಗು ಕೊಬ್ಬಬಾರದು .

4.ಆಯುಷ್ಯದ ಚಪ್ಪರಕ್ಕೆ ಮಗು ಹೇಗೆ ಹಬ್ಬಿಕೊಳ್ಳಬೇಕು ?

ಆಯುಷ್ಯರ ಚಪ್ಪರಕ್ಕೆ ದ್ರಾಕ್ಷಿ ಹಣ್ಣಿನಂತೆ ಚಪ್ಪರದ ಉದ್ದಗಲಕ್ಕೂ ಹಬ್ಬಿಕೊಳ್ಳಬೇಕು .

5. ತಿರುವಿನಲ್ಲಿ ಆವತರಿಸುವ ವಾಹನ ಯಾವುದು ?

ತಿರುವಿನಲ್ಲಿ ಅವತರಿಸುವ ವಾಹನ ಲಾರಿ .

6.ಅನ್ಯರ ಕಣ್ಣಿಗೆ ಯಾವ ಹಣ್ಣಿನಂತೆ ಮಗು ಅಪರೂಪವಾಗಬೇಕು ?

ಅಂಜೂರದ ಹಣ್ಣಿನಂತೆ ಮಗು ಅನ್ಯರ ಕಣ್ಣಿಗೆ ಅಪರೂಪವಾಗಬೇಕು .

7. ಎಲ್ಲರಿಗೂ ದಕ್ಕುವ ಹಣ್ಣು ಯಾವುದು ?

ಎಲ್ಲರಿಗೂ ದಕ್ಕುವ ಹಣ್ಣು ಎಲಚಿ ಹಣ್ಣು .

8.ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಯಾವುದು ? `

ಬೆಲೆಯ ರಾಕೆಟ್ಟು ಯಾನದಲ್ಲಿ ಹೊರಟ ಹಣ್ಣು ಸೇಬು .

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಮಗು ಹಣ್ಣಿನಂಗಡಿ ಆಗಬೇಕಾದುದು ಎಲ್ಲಿ ?

ಮಗು ಹಣ್ಣಿನ ಅಂಗಡಿ ಆಗಬೇಕಾದುದು ಸಮಾಜವೆಂಬ ಜನಬೀಡ , ರಸ್ತೆ ಪಕ್ಕದ ಗಿರಿವಿ ಅಂಗಡಿಯ ಬಳಿ ಹಾಗೂ ಊರ ಮಾರುಕಟ್ಟೆಯ ನಡುವೆ .

2. ಮಗು ಬದುಕಿನಲ್ಲಿ ಯಾವ – ಯಾವ ತೊಂದರೆಗಳಿಂದ ಒಳಗಾಗಬಾರದು ?

ಮಗು ಬದುಕಿನಲ್ಲಿ ದೈಹಿಕ ತೊಂದರೆಗಳಾಗಿ , ಮಾನಸಿಕ ತೊಂದರೆಗಳಿಗೆ ಒಳಗಾಗಬಾರದು . ಉದಾಹರಣೆಗೆ : ಮರದಲ್ಲಿರುವ ಕಾಯನ್ನು ಕಲ್ಲು ಹೊಡೆದು ಉರುಳಿಸುವುದು ಬೇರೆಯವರಿಂದ ತೊಂದರೆಗೆ ಒಳಗಾಗಬಾರದು .

3. ಅರಳಿಸಿದ ದಾಳಿಂಬೆ ಯಾವ ರೀತಿ ಕಾಣುತ್ತದೆ ?

ಅರಳಿಸಿದ ದಾಳಿಂಬೆ ಥಳಥಳ ಹೊಳೆಯುವ ಮಣಿಗಳಂತೆ ಹನಿಹನಿಯಿಂದ ಕೂಡಿದ ತನಿರಸದ ರೀತಿಯಲ್ಲಿ ಕಾಣುತ್ತದೆ .

4. ಮಗುವಿನಲ್ಲಿ ಗಮನಿಸಬೇಕಾದ ಗುಣಗಳು ಯಾವುವು ?

ಮಗುವಿನಲ್ಲಿ ಗಮನಿಸಬೇಕಾದ ಗುಣಗಳೆಂದರೆ – ಚಕೋತದಂತೆ ಕೊಬ್ಬಬೇಕು . ನಿಂಬೆಯಂತೆ ಕುಗ್ಗಬೇಕು , ಬಾಳೆಹಣ್ಣಿನಂತೆ ಬಾಗಬಾರದು . ಕಿತ್ತಲೆ , ಮೊಸಂಬಿ , ಮಾವಿನಂತೆ ಸಮರಸವಿರಬೇಕು . ಅಂಜೂರದಂತೆ ಅಪರೂಪವಾಗಬೇಕು , ಕಲ್ಲಂಗಡಿಯಂತೆ ಎಲ್ಲರಿಗೂ ಕಾಣಿಸಿಕೊಳ್ಳಬೇಕು ದ್ರಾಕ್ಷಿಯಂತೆ ಹಬ್ಬಬೇಕು . ಎಲಚಿಯಂತೆ ಎಲ್ಲರೊಳಗೆ ಒಂದಾಗಬೇಕು .

IV ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಮಗುವಿನ ವ್ಯಕ್ತಿತ್ವಕ್ಕೆ ಹಾಗೂ ಹಣ್ಣುಗಳಿಗೂ ಕವಿ ಹೇಗೆ ಸಂಬಂಧಗಳನ್ನು ಕಲಿಸಿದ್ದಾನೆ ? ವಿವರಿಸಿ .

ಕವಿ ಮಗುವಿನ ವ್ಯಕ್ತಿತ್ವಕ್ಕೂ ಹಾಗೂ ಹಣ್ಣುಗಳಿಗೂ ಸಂಬಂಧವನ್ನು ಕಲ್ಪಿಸಿದ್ದಾನೆ . ಬೇರೆ ಬೇರೆ ಹಣ್ಣುಗಳ ವಿಭಿನ್ನ ಬಗೆಯ ರುಚಿ , ವಾಗುವಿಕೆ , ಲಭ್ಯತೆ ಹಾಗೂ ಅಪರೂಪತೆಗಳ ಅಂಶಗಳನ್ನು ಮಗುವಿನ ವಿಕಸನದ ಗುಣಗಳಾಗಿ ಭಾವಿಸಲಾಗಿದೆ . ಈ ನೆಲೆಯಲ್ಲಿ ಅದರ ವ್ಯಕ್ತಿತ್ವ ನಿರ್ಮಾಣವಾಗಬೇಕೆಂಬ ಆಶಯ ವ್ಯಕ್ತವಾಗಿದೆ ಬಾಳಿ ಬದುಕಬೇಕಾದ ಮಗು ಎಳೆ ವಯಸ್ಸಿನಲ್ಲಿ ಯಾವುದೇ ತೊಂದರೆಗಳಿಗೆ ಒಳಗಾಗದೆ , ಉತ್ತಮವಾದ ಸಮಗಾತ್ರದ ಗುಣಗಳನ್ನು ಒಳಗೊಳ್ಳುತ್ತಾ ಪಕ್ವಗೊಂಡು ಅಪರೂಪದ ವ್ಯಕ್ತಿಯಾಗಿ ಬೆಳೆದು ಮೆಚ್ಚುಗೆ ಗಳಿಸಬೇಕು . ಉಪಕಾರಿಯಾಗಿ ಎಲ್ಲರಿಗೂ ದಕ್ಕುವ ವ್ಯಕ್ತಿಯಾಗಿ ರೂಪುಗೊಳ್ಳಬೇಕು , ಜನಪದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು .

2. ಮಗು ಹಣ್ಣುಗಳಿಂದ ಕಲಿಯಬೇಕಾದ ಗುಣಗಳು ಯಾವುವು ? ವಿವರಿಸಿ .

ಮಗು ಹಣ್ಣುಗಳಿಂದ ಕಲಿಯಬೇಕಾದ ಗುಣಗಳೆಂದರೆ – “ ಕಳಿತ ಬಾಳೆಹಣ್ಣಿನಂತೆ ಕೊಂಚಬಾಗಬೇಕು , ಚಕೋತದ ಹಾಗೆ ಕೊಬ್ಬಿದರೂ , ನಿಂಬೆಹಣ್ಣಿನಂತೆ ಕುಗ್ಗಬೇಕು , ಕಿತ್ತಲೆ , ಮೋಸಂಬಿ , ಮಾವಿನ ಹಣ್ಣಿನಂತೆ ಸಮವಿರಬೇಕು . ಕೆಲಸವರ ಕಣ್ಣಿಗೆ ಅಂಜರದಂತೆ ಅಪರೂಪವಾಗಬೇಕು ಹಾಗೂ ಕಲ್ಲಂಗಡಿಯಂತೆ ಎದ್ದು ಕಾಣುವ ರೀತಿಯಲ್ಲಿರಬೇಕು , ದಾಳಿಂಬೆಯಂತೆ ಥಳಥಳ ಹೊಳೆಯಬೇಕು . ದ್ರಾಕ್ಷಿಯಂತೆ ಆಯುಷ್ಯ ಇರುವವರೆಗೂ ಉದ್ದ ಅಗಲಕ್ಕೂ ಹಬ್ಬಬೇಕು . ಸೇಬಿನಂತೆ ದುಬಾರಿಯಾಗದೆ ಎಲಚಿ ಹಣ್ಣು ಎಲ್ಲರ ಕೈಗೆಟುಕುವಂತೆ ಎಲ್ಲರೊಳಗೆ ಒಂದಾಗಿ ಬಾಳಬೇಕು .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. ಹಣ್ಣಿನ ಅಂಗಡಿಯಾಗೂ ನೀನೂನು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಸ್ . ಶಿವಪ್ರಕಾಶರವರು ರಚಿಸಿರುವ “ ಮಗು ಮತ್ತು ಹಣ್ಣುಗಳು ” ಎಂಬ ಪದ್ಯದಿಂದ ಆರಿಸಲಾಗಿದೆ .

ಸಂದರ್ಭ : ವಿವಿಧ ಹಣ್ಣುಗಳ ರುಚಿಯಂತೆ , ವಿವಿಧ ಹಣ್ಣಿನಂತೆ ನೀನು ಬಾಳಬೇಕು . ಅಂತೆಯೇ ಹಣ್ಣಿನ ಅಂಗಡಿಯಾಗು ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಬರೆಯಲಾಗಿದೆ .

ವಿವರಣೆ : ಹಣ್ಣಿನ ಅಂಗಡಿಯಲ್ಲಿ ಎಲ್ಲಾ ರೀತಿಯ ಹಣ್ಣುಗಳಿರುವಂತೆ ನಿನ್ನ ದೇಹವೆಂಬ ಹಣ್ಣಿನ ಅಂಗಡಿಯಲ್ಲಿ ನೀನೂ ಹಣ್ಣಿನ ಎಲ್ಲ ಗುಣಗಳನ್ನು ನಿನ್ನ ಗುಣದಲ್ಲಿ ಬೆರೆಯಿಸಿ ನಿನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು .

ವಿಶೇಷತೆ : ಹಣ್ಣಿನ ಅಂಗಡಿಯನ್ನೂ ಮಗುವಿನ ದೈಹಿಕ ವಿಕಾಸಕ್ಕೂ ಭರಿತ ಹಣ್ಣನ ರಸಭರಿತ ಗುಣವನ್ನು ವ್ಯಕ್ತಿತ್ವಕ್ಕೆ ಹೋಲಿಸಲಾಗಿದೆ .

2. ಕಾಯಿಯಲ್ಲೇ ನಿನ್ನ ಕೆಡವದಿರಲಿ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಶ್ರೀಯುತ ಎಚ್.ಎಸ್ . ಶಿವಪ್ರಕಾಶರವರು ರಚಿಸಿರುವ “ ಮಗು ಮತ್ತು ಹಣ್ಣುಗಳು ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ”

ಸಂದರ್ಭ : ಕವಿ , ಮಗುವಿಗೆ ಸಮಾಜದಲ್ಲಿ ತಾನು ಯಾವ ರೀತಿ ಬಾಳಬೇಕು ಎಂಬುದರ ಬಗ್ಗೆ ತಿಳಿಸುತ್ತಾ ಮಗುವಿನ ಬಾಲ್ಯಾವಸ್ಥೆಯಲ್ಲಿ ತುಂಟತನ ಸಹಜ . ಅಂತೆಯೇ ಮರದಲ್ಲಿ ತಾಯಿಯ ಸ್ಥಿತಿಯಲ್ಲಿರುವ ಹಣ್ಣನ್ನು ಕಲ್ಲು ಹೊಡೆದು ಕೆಳಗೆ ಬೀಳಿಸುವಂತೆ ನಿನ್ನನ್ನು ಬೀಳಿಸದಿರಲಿ ಅಂದರೆ ನಿನ್ನ ಬಾಲ್ಯ ಮಿತಿ ಮೀರದಿರಲಿ ಎಂದು ನೀತಿ ಮಾತು ಹೇಳುವ ಸಂದರ್ಭ ಈ ವಾಕ್ಯವನ್ನು ತಿಳಿಸಲಾಗಿದೆ .

ವಿವರಣೆ : ವ್ಯಕ್ತಿತ್ವ ನಿರ್ಮಾಣವಾಗುವ ಹಂತದಲ್ಲಿರುವಾಗಲೇ ಅದು ನಶಿಸಿ ಹೋಗದಿರಲಿ , ಕಾಯಿಲ್ಲೇ ನಿನ್ನ ಬಾಲ್ಯಾವಸ್ಥೆಯಲ್ಲಿಯೇ ಹಣ್ಣನ್ನು ಕೆಡವುವಂತೆ ನಿನ್ನನ್ನು ಕೆಳಗೆ ಬೀಳಿಸಿ ನಿನ್ನ ವ್ಯಕ್ತತ್ವವನ್ನು ನಾಶಪಡಿಸದಿರಲಿ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ .

ವಿಶೇಷತೆ : ಹೋಲಿಕೆಯ ಭಾವನೆಯೊಂದಿಗೆ ಈ ಸಾಲು , ಸರಳ – ಭಾಷೆಯಲ್ಲಿರುವ ಮೂಡಿ ಬಂದಿದೆ ,

3. ಅಂಜೂರದಂತೆ ಅಪರೂಪವಾಗು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಸ್ . ಶಿವಪ್ರಕಾಶರವರು ರಚಿಸಿರುವ “ ಮಗು ಮತ್ತು ಹಣ್ಣುಗಳು ” ಎಂಬ ಪದ್ಯದಿಂದ ಆರಿಸಲಾಗಿದೆ .

ಸಂದರ್ಭ : ಸಮಾಜದಲ್ಲಿ ನಾವು ಕೆಲವರಿಂದ ದೂರವಾಗಿರಬೇಕು ಉದಾಹರಣೆಗೆ ರಾಜಕಾರಣಿಗಳಿಗೆ , ಕೆಲವು ಸಮಾಜಘಾತುಕರಿಂದ ಶಕ್ತಿಗಳಿಂದ , ಅದನ್ನು ಅಂಜೂರ ಹಣ್ಣಿನೊಂದಿಗೆ ಹೋಲಿಸುತ್ತಾ ಕವಿ ಈ ಸಾಲನ್ನು ಬರೆದಿದ್ದಾರೆ .

ವಿವರಣೆ : ಪ್ರಸ್ತುತ ಈ ಸಾಲಿನಲ್ಲಿ ಅಂಜೂರ ಅಪರೂಪವಾಗಿ ಕಾಣಿಸಿಕೊಳ್ಳುವಂತೆ ” ಮೇಲ್ಕಂಡಂತೆ ಹೇಳಿದ ಕೆಲವು ವಿಶೇಷ ವ್ಯಕ್ತಿಗಳೇ ಈ ಸಮಾಜದಲ್ಲಿರುವಂತೆ , ಮಗೂ ನೀನು ಕೂಡ ಕೆಲವು ಸಮಾಜಘಾತುಕರಿಂದ ದೂರ ಇರುವಂತೆ ಅಪೇಕ್ಷಿಸುತ್ತದೆ .

ವಿಶೇಷತೆ : ಸಮಾಜದಲ್ಲಿ ಹೇಗೆ ಬಾಳ ಬೇಕೆಂಬುದನ್ನು ಕವಿ ಸರಳ ಭಾಷೆಯಲ್ಲಿ ಸೊಗಸಾಗಿ ಹೇಳಿದ್ದಾರೆ .

4. ಎಲ್ಲರಿಗೂ ದಕ್ಕುವ ಎಲಚಿಯಾಗು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಸ್ . ಶಿವಪ್ರಕಾಶರವರು ರಚಿಸಿರುವ “ ಮಗು ಮತ್ತು ಹಣ್ಣುಗಳು ” ಎಂಬ ಪದ್ಯದಿಂದ ಆರಿಸಲಾಗಿದೆ .

ಸಂದರ್ಭ : ಸಮಾಜದಲ್ಲಿ ನಾವು ಎಲ್ಲರೊಂದಿಗೆ ಕೂಡಿ ಬಾಳಬೇಕಾದರೆ ನಾವು ಎಲ್ಲರಲ್ಲಿ ಒಂದಾಗಬೇಕು ಅದಕ್ಕೆ ಎಲಚಿ ಹಣ್ಣಿನ ಉದಾಹರಣೆ ಕೊಟ್ಟು ತಿಳಿಸಿದ್ದಾರೆ

ವಿವರಣೆ : ಸಮಾಜದಲ್ಲಿ ಬದುಕುವ ನಾವು ಎಲ್ಲರೊಂದಿಗೆ ಎಲಚಿ ಹಣ್ಣಿನಂತೆ ಪಕ್ವವಾಗಿ ಇರಬೇಕು ಎಂಬ ನೀತಿಯನ್ನು ಕವಿ ಹೇಳಿದ್ದಾರೆ .

5. ಸರಿಗಾತ್ರವಾಗಿ ಸಮನಿಸಲಿ ನಿನ್ನ ತನ .

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಡಾ || ಎಚ್.ಎಸ್ . ಶಿವಪ್ರಕಾಶರವರು ರಚಿಸಿರುವ “ ಮಗು ಮತ್ತು ಹಣ್ಣುಗಳು ” ಎಂಬ ಪದ್ಯದಿಂದ ಆರಿಸಲಾಗಿದೆ .

ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು ಮಗುವಿನ ಹೋಲಿಕೆ ವಿವಿಧ ಹಣ್ಣಿನೊಂದಿಗೆ ಹೋಲಿಸುತ್ತಾ ವ್ಯಕ್ತಿತ್ವ ವಿಕಾಸವಾಗಲಿ ಎಂದು ಆಶಿಸುತ್ತಾ ಹೇಳುವ ಸಂದರ್ಭದಲ್ಲಿ ಈ ಸಾಲನ್ನು ಬರೆಯಲಾಗಿದೆ .

ವಿವರಣೆ : ಸಮಾಜದಲ್ಲಿ ಉಚ್ಚ ನೀಚ , ಸಿರಿವಂತ ಬಡವ ಎಂಬ ತಾರತಮ್ಯ ಇಂದಿಗೂ ಸಾಗಿಬಂದಿದೆ . ಆದ್ದರಿಂದ ಇಂದಿನ ಮಕ್ಕಳ ಮುಂದಿನ ಪ್ರಜೆಗಳಾಗಿರುವುದರಿಂದ ಅವರ ವ್ಯಕ್ತಿತ್ವ , ಚಿಕ್ಕ ಬಾಲ್ಯವಸ್ಥೆಯಲ್ಲಿ ಸರಿಯಾದ ರೀತಿಯಲ್ಲಿ ಪಕ್ವವಾಗಬೇಕು .

ವಿಶೇಷತೆ : ಸರಳ ಭಾಷೆಯಲ್ಲಿ ಹೆಚ್ಚಿನ ವಿಶೇಷ ಅರ್ಥವು ಈ ವಾಕ್ಯದಲ್ಲಿದೆ .

Magu Mattu Hannugalu Kannada Notes 2023 Pdf Download

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh