ಪ್ರಥಮ ಪಿ.ಯು.ಸಿ ಎಂದಿಗೆ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Endige Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solurions For Class 11 Kannada Poem 8 Notes 1st Puc Kannada 8th Poem Notes 1st Puc Kannada Endige Saramsha 1st Puc Kannada Endige Question Answer
ತರಗತಿ: ಪ್ರಥಮ ಪಿ.ಯು.ಸಿ
ಕವನ- ಕವಿ ಹೆಸರು: ಡಾ . ಬಿ.ಸಿ.ರಾಮಚಂದ್ರ ಶರ್ಮ
ಕಾವ್ಯಾ ಭಾಗದ ಹೆಸರು: ಎಂದಿಗೆ
ಎಂದಿಗೆ Notes
ಕವನ – ಕವಿ : ಡಾ . ಬಿ.ಸಿ.ರಾಮಚಂದ್ರ ಶರ್ಮ ( ೧೯೨೫-೨೦೦೫ )
ಡಾ . ಬಿ . ಸಿ . ರಾಮಚಂದ್ರಶರ್ಮರು ನವ್ಯಕಾವ್ಯ ಪರಂಪರೆಯ ಕವಿಗಳಲೊಬ್ಬರು . ಬೆಂಗಳೂರಿನಲ್ಲಿ ಇವರ ಜನನ , ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಬೆಂಗಳೂರು , ಇಥಿಯೋಪಿಯಾ , ಲಂಡನ್‌ಗಳಲ್ಲಿ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದರು . ಲ೦ಡನ್ ವಿಶ್ವವಿದ್ಯಾಲಯದಿಂದ ಮನಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಶರ್ಮರು , ಇಂಗ್ಲೆಂಡ್ , ಜಾಂಬಿಯಾ ಹಾಗೂ ಯುನಸ್ಕೊ ಸಂಸ್ಥೆಗಳಲ್ಲಿ ಮನಃಶಾಸ್ತ್ರಜ್ಞರಾಗಿ ಹಾಗೂ ಶಿಕ್ಷಣ ತಜ್ಞರಾಗಿ ಕೆಲಸ ಮಾಡಿದ್ದಾರೆ .
ಹೃದಯಗೀತೆ , ಏಳು ಸುತ್ತಿನ ಕೋಟೆ , ಬುವಿ ನೀಡಿದ ಸ್ಫೂರ್ತಿ , ಹೇಸರಗತ್ತೆ , ಬ್ರಾಹ್ಮಣ ಹುಡುಗ , ಮಾತು – ಮಾಟ , ದೆಹಲಿಗೆ ಬಂದ ಹೊಸ ವರ್ಷ , ಸಪ್ತಪದಿ ಮುಂತಾದವು ಇವರ ಕವನ ಸಂಕಲನಗಳು.
ಪ್ರಸ್ತುತ ಕವನದಲ್ಲಿ ನಾಡಿನ ಜನರ ದಾಸ್ಯ ಮನೋಭಾವವನ್ನು ವಿಡಂಬಿಸಲಾಗಿದೆ . ಗತ ವೈಭವದಲ್ಲೇ ಮೈಮರೆತು ವರ್ತಮಾನದ ವಾಸ್ತವಗಳನ್ನು ಅರಿಯದ ನಾಡಿನ ಜನರನ್ನು ಕುರಿತು ಸಿಟ್ಟಿದೆ . ಹೀಗೆ ಗತವೈಭವದಲ್ಲಿ ಮೈಮರೆತಿರುವ ಜನರು ಒಂದೆಡೆಯಾದರೆ , ದೇಶಕ್ಕೆ ಬಂದ ಬಿಡುಗಡೆಯನ್ನು ಸ್ವಾರ್ಥ , ದುರಾಸೆಗಳಿಗೆ ಬಳಸುತ್ತಾ ಶೋಷಿಸುತ್ತಿರುವ ಮಂದಿ ಇನ್ನೊಂದೆಡೆ ಇದ್ದಾರೆ . ಹೊರಗಿನ ಶಕ್ತಿಗಳಿಂದ ನಾಡು ಮುಕ್ತವಾದರೂ ಒಳಗಿನ ಸ್ವಾರ್ಥ ಶಕ್ತಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿದೆ . ಇವೆಲ್ಲವನ್ನೂ ನಾಡ ಜನತೆ ಮೆಟ್ಟಿನಿಂತು ಸತ್ವಪೂರ್ಣ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಚಿಂತನೆ ಇಲ್ಲಿದೆ .
ಪದಕೋಶ :
ಕುನ್ನಿ – ನಾಯಿಮರಿ , ಅಲ್ಪ , ಕುದ್ರ : ತೊನೆಸು – ಒದ್ದೆಯಾಗಿಸು ; ಅಂತ – ಅಂತ್ಯ , ಕೊನೆ ; ಸೂಡು – ಸ್ಮಶಾನ : ಉನ್ಮತ್ತ – ಕೊಬ್ಬಿದ ಮದಿಸಿದ ; ತಣ್ಪು – ಸಂತುಷ್ಟಿ , ತಣಿಸು , ಸಂತೋಷಪಡಿಸು ; ಕಡೆಗೋಲು – ಮಥಿಸುವ ಕೋಲು , ಮಂತು : ತಡೆಬಡೆ – ಅಡ್ಡಿ , ಅಡೆತಡೆ ; ಒಡಲು – ದೇಹ ; ಕ್ಷಾತ್ರ – ಕ್ಷತ್ರಿಯ ; ಕಾವಳ – ಅಂಧಕಾರ , ಮಬ್ಬು .
1st PUC Kannada Endendigu Notes Question Answer
I. ಒಂದು ವಾಕ್ಯದಲ್ಲಿ ಉತ್ತರಿಸಿ .
ಉನ್ಮತ್ತ ನಾಟ್ಯಕ್ಕೆ ನಾಡು ತಾಳ ಹೊಡೆದಿದೆ .
ಕಡಲನ್ನು ಕಡೆದಾಗ ಬಂದುದು ವಿಷ .
ಹುಟ್ಟಿನೊಂದಿಗೆ ಅಂಟಿ ಬಂದ ಚಿತ್ತದಾಸ್ಯ ಕಳೆಯಬೇಕು .
ನಾಡಿಗೆ ಕಡಲುಗಳ್ಳರ ಕಾಟ ಕೊನೆಗೊಂಡಿದೆ .
ಗತ ವೈಭವದ ಮೆಲು ಹಾಕಿ ದವಡೆ ದಣಿದಿದೆ .
ಕ್ಷಾತ್ರವದ ಮಾಡಿದವನು ಜಮದಗ್ನಿ ಮುನಿ .
ಇರುಳ ಬಿಸರು ಬಗೆದು ಬರಬೇಕಾದುದು ಉದಯರಾಗ.
II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ನಾಡಿನ ಬಿಡುಗಡೆಯಲ್ಲಿ ಯಾವುದಕ್ಕೆ ಅಡೆತಡೆಗಳು ಇಲ್ಲವಾಗಿವೆ ?
ಮೋಸ , ಸುಳ್ಳು , ಸುಲಿಗೆ , ಲಂಚ ಇವುಗಳಿಗೆ ನಾಡಿನ ಬಿಡುಗಡೆಯಲ್ಲಿ ಅಡೆತಡೆಗಳು ಇಲ್ಲವಾಗಿವೆ .
2. ನಾಡಿನ ಹೊರಗಿನ ಹಾಗೂ ಒಳಗಿನ ಕಳ್ಳರು ಯಾರು ?
ನಾಡಿನ ಹೊರಗಿನ ಕಳ್ಳರೆಂದರೆ ಬ್ರಿಟಿಷರು ಒಳಗಿನ ಕಳ್ಳರೆಂದರೆ – ನಮ್ಮ ರಾಜಕಾರಣಿಗಳು , ಅಧಿಕಾರಿಗಳಾಗಿದ್ದಾರೆ .
3. ಚಿತ್ತ-ದಾಸ್ಯ ಕಳೆಯ ಬೇಕಾಗಿರುವುದು ಯಾರು ಯಾರಿಗೆ ?
ಚಿತ್ತದಾಸ್ಯ ಕಳೆಯ ಬೇಕಾಗಿರುವುದು ನಮ್ಮ ನಾಡಿನ ಮಂದಿಗೆ
4. ನಾಡ ಮಂದಿಗೆ ಯಾವುದರ ಬಲ ಹಾಗೂ ಮಹಿಮೆಯಿಂದ ಬಿಡುಗಡೆಯಾಗಿದೆ ?
ನಾಡ ಮಂದಿಗೆ ಜೀವದ ಯೋಗ ಬಲ ಹಾಗೂ ಉಗ್ರ ತಾಪಸೀಯರ ಮಹಿಮೆಯಿಂದ ಬಿಡುಗಡೆಯಾಗಿದೆ .
5. ರಾಕ್ಷಸಗಣ ಹತ್ಯೆಗೆ ಜನತೆ ಹೇಗೆ ಹೆಜ್ಜೆ ಇಡಬೇಕು ?
ರಾಕ್ಷಸಗಣ ಹತ್ಯೆಗೆ , ಕ್ಷಾತ್ರವದತೆಗೆ ನಿಂತ ಜಮದಗ್ನಿಯಂತೆ ಕೆರಳಿ ಗಂಡುಗೊಡಲಿ ಹಿಡಿದು ಹೆಜ್ಜೆ ಇಡಬೇಕು .
III ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1. ಒಡಲುಗಳ್ಳರು ನಾಡನ್ನೆ ಹೇಗೆ ಸುಲಿಗೆ ಮಾಡುತ್ತಿದ್ದಾರೆ ?
ಒಡಲುಗಳ್ಳರು ರೈತ ಮಕ್ಕಳು ಬಯಸಿ ಬೆಳೆದ ಬೆಳೆಯನ್ನು ಸುಲಿದು ಸುಖ ಪಡುವ ರಕ್ಕಸರು ನಡುವೆ ಇಹರೋ ಅಥವಾ ನರನಸ್ಥಿಪಂಜರದ ಅಡಿಗು ಮೇಲೆ ಸುಸ್ಥಿರವು ಎಂಬ ಭಾವನೆಗಳನ್ನು ನಿರ್ಮಿಸುವ ಕ್ರೂರಜನ , ತೊಗಲೆಂದೆ ಬವದು , ಕೂಸ ಕೊರಳನ್ನು ಹಿಸುಕಲು ಯತ್ನಿಸುವರು .
2. ನಾಡಜನರ ದಾಸ್ಯಮನೋಭಾವ ಹಾಗೂ ನಿಷ್ಕ್ರಿಯತೆ ಬಗ್ಗೆ ಕವಿಯ ಪ್ರತಿಕ್ರಿಯೆಯೇನು ?
ನಾಡ ಜನರ ದಾಸ್ಯ ಮನೋಭಾವ ಹಾಗೂ ನಿಷ್ಕ್ರಿಯತೆಯ ಬಗ್ಗೆ ಕವಿಯ ಪ್ರತಿಕ್ರಿಯೆಯೆಂದರೆ ನಮ್ಮ ನಾಡ ಮಂದಿಗೆ ಅಜ್ಞಾನದ ಕತ್ತಲು ಕಳೆದು ಸೂರ್ಯೋದಯದ ಜ್ಞಾನ ಆಗುವುದೆಂದು ನಾಡಿನ ರಾಜನ ಮೂಲೆ ಮೂಲೆಗೆ ರಾಜ ಬೀದಿ ಸಂದಿಗೆ ಕ್ರಾಂತಿಯ ಹೊಂಬೆಳಕು ಬರುವುದೆಂದಿಗೆ ಎಂದು ಪ್ರತಿಕ್ರಿಯಿಸಿದ್ದಾರೆ .
3. ನಾಡ ಜನರ ಗತ ವೈಭವದ ಕನಸನ್ನೂ ಕವಿ ಹೇಗೆ ವಿಡಂಬಿಸಿದ್ದಾರೆ ?
ನಾಡ ಜನರ ಗತ ವೈಭವದ ಕನಸನ್ನೂ ಕವಿ ವ್ಯಂಗ್ಯಾತ್ಮಕವಾಗಿ ವಿಡಂಬಿಸಿದ್ದಾರೆ . ಗತಕಾಲದ ವೈಭವವನ್ನೂ , ಯುಗಯುಗಾಂತರಗಳ ಹಿರಿಮೆಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಆನಂದ ಪಡುತ್ತಿದ್ದಾರೆ . ಹೇಳಿದ ವಿಷಯವೇ ಹೇಳಿ , ಅದೆ ವಿಷಯಗಳನ್ನು ಮೆಲಕು ಹಾಕುತ್ತಾ ಬಾಯಿಯಲ್ಲಿರುವ ದವಡೆಗಳು ದಣಿದಿದೆ , ಎಂಬುದಾಗಿ ವಿಡಂಬಿಸಿದ್ದಾರೆ .
4. ಸ್ವಾಭಿಮಾನದ ನಾಡನನು ಕಟ್ಟುವಲ್ಲಿ ಕವಿಯು ಹೊಂದಿರುವ ಆಶಯಗಳನ್ನು ವಿವರಿಸಿ .
ಹೊರಗಿನ ಶಕ್ತಿಗಳಿಂದ ನಾಡು ಮುಕ್ತವಾದರೂ ಒಳಗಿನ ಸ್ವಾರ್ಥ ಶಕ್ತಿಗಳ ಕೈಯಲ್ಲಿ ಸಿಲುಕಿ ನಲಗುತ್ತಿರವಾಗ ಇವೆಲ್ಲವನ್ನು ನಾಡ ಜನತೆ ಮೆಟ್ಟಿ ನಿಂತು ಸತ್ವಪೂರ್ಣ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಆಶಯವನ್ನು ಕವಿ ವ್ಯಕ್ತಪಡಿಸಿದ್ದಾರೆ .
ಸಂದರ್ಭ ಸೂಚಿಸಿ ವಿವರಿಸಿ .
1 ಹುಟ್ಟಿಗಂಟಿ ಬಂದ ಚಿತ್ತದಾಸ್ಯ ಕಳೆವುದೆಂಗಿಗೆ
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಡಾ || ಬಿ.ಸಿ. ರಾಮಚಂದ್ರಶರ್ಮ ರವರು ರಚಿಸಿರುವ “ ಎಂದಿಗೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ನಮ್ಮ ನಾಡಿನ ಮಂದಿ ಇನ್ನು ಬಂಧಮುಕ್ತರಾಗದೆ ದಾಸ್ಯ ಜೀವನದಲ್ಲಿ ಜೀವನ ಸವೆಯಿಸುತ್ತಿರುವುದನ್ನು ಕಂಡು , ಕವಿನೊಂದು ಈ ವಾಕ್ಯವನ್ನು ಹೇಳಿದ್ದಾರೆ .
ವಿವರಣೆ : ‘ ದಾಸ್ಯ ‘ ಎಂಬುದು ನಮ್ಮ ಜನ್ಮಕ್ಕೆ ಅಂಟಿಕೊಂಡು ಬಂದಿದೆ . ಇದರಿಂದಿ ಮನಸ್ಸಿನಲ್ಲಿಯೇ ಈ ಭಾವನೆ ಬೆಳೆದು ಬಂದಿದೆ . ಹುಟ್ಟಿನಿಂದಲೇ ಮನಸ್ಸಿಗೆ ಅಂಟಿ ಬಂದ ಈ ದಾಸ್ಯ ಭಾವನೆ ನಡಮಂದಿಯಿಂದ ಎಂದಿಗೆ ಕಳೆಯುವುದು ಎಂಬುದು ಇದರ ಸ್ವಾರಸ್ಯ .
ವಿಶೇಷತೆ : ಕವಿಯು ನೊಂದು ನುಡಿದಿರುವ ಭಾವನೆಯು ಸರಳ ಭಾಷೆಯಲ್ಲಿ ವ್ಯಕ್ತವಾಗಿದೆ .
2. ಅಳಿದ ಸಿರಿಯ ಅಣಕವಾಡು ಒಂದೆ ಸಮನೆ ನಡೆದಿದೆ .
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಡಾ || ಬಿ.ಸಿ. ರಾಮಚಂದ್ರಮೂರ್ತಿಯವರು ರಚಿಸಿರುವ “ ಎಂದಿಗೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ನಮ್ಮ ನಾಡಿನ ಮಂದಿ ತಮ್ಮ ಗತಕಾಲದ ವೈಭವವನ್ನು ಮೆಲುಕು ಹಾಕುತ್ತಾ ವರ್ಥ ಮಾನ ಮರೆಯುತ್ತಿರುವುದರ ಬಗ್ಗೆ ಕವಿ ‘ ವ್ಯಂಗ್ಯಾತವಾಗಿ ‘ ನುಡಿದಿದ್ದಾರೆ .
ವಿವರಣೆ : ನಮ್ಮ ಗತಕಾಲದಲ್ಲಿ ಇದ್ದ ವೈಭವವೆಲ್ಲ ಇಂದು ನಶಿಸಿ ಹೋಗಿದೆ . ಆದರೆ ನಾವು ಇಂದಿಗೂ ಭೂತಕಾಲದ ವೈಭವದಲ್ಲಿಯೇ ಇದ್ದು ವರ್ತ ಮಾನವನ್ನು ಮರೆತಿದ್ದೇವೆ ಎಂಬುದಾಗಿ ಕವಿ ನೊಂದು ನುಡಿದಿದ್ದಾರೆ .
ವಿಶೇಷತೆ : ಸರಳ ಭಾಷೆಯಲ್ಲಿ ನಮ್ಮ ನಾಡಿನ ಜನತೆಯ ಮುಗ್ಧತೆಯ ಬಗ್ಗೆ ಇಲ್ಲಿ ತಿಳಿಸಲಾಗಿದೆ .
3. ಅಂತು ಬಂದಿತು ಬಂದೆ ಬಂದಿತು ಎಂಥಾ ಎಂಥಾ ಬಿಡುಗಡೆ
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಡಾ || ಬಿ.ಸಿ. ರಾಮಚಂದ್ರಶರ್ಮ ಯವರು ರಚಿಸಿರುವ “ ಎಂದಿಗೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಸ್ವಾತಂತ್ರ್ಯ ಬಂದರೂ ನಾವು ಸಂಪೂರ್ಣವಾಗಿ ಸ್ವತಂತ್ರವಾಗಿಲ್ಲ . ಇನ್ನು ದಾಸ್ಯ ಜೀವಿತಾವದಿ ನಮ್ಮನ್ನು ಬಿಟ್ಟಿಲ್ಲ ಲಂಚ , ಸುಲಿಗೆ , ಮೋಸ ಇವುಗಳಿಂದ ನಾವು ಬಿಡುಗಡೆ ಪಡೆದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ವಾಕ್ಯವನ್ನು ಬರೆದಿದ್ದಾರೆ .
ವಿವರಣೆ : ಬಹಳಷ್ಟು ಪರಿಶ್ರಮದಿಂದ ನಮಗೆ ಬಿಡುಗಡೆ ಏನೋ ಸಿಕ್ಕಿತು . ಆದರೆ ಸಮಾಜದಲ್ಲಿ ಕೆಟ್ಟ ಸಾಂಕ್ರಮಿಕವಾಗಿ ಹರಡಿದ ಮೋಸ , ಸುಲಿಗೆ , ಲಂಚ , ಇವುಗಳಿಂದ ನಾವು ಬಿಡುಗಡೆ ಸಿಕ್ಕಿಲ್ಲ ಎಂದ ಮೇಲೆ ಬಂದಿರುವ ಬಿಡುಗಡೆ ಎಂತಹ ಬಿಡುಗಡೆ ಎಂದು ಕವಿ ಹೇಳಿದ್ದಾರೆ .
ವಿಶೇಷತೆ : ಕವಿ ನೊಂದ ಮನದಿಂದ ನಮಗೆ ಸಿಕ್ಕ ಬಿಡುಗಡೆಯ ಬಗ್ಗೆ ವ್ಯಂಗ್ಯವಾಗಿ ನುಡಿದಿದ್ದಾರೆ .
4 ಒಡಲುಗಳ್ಳರು ಇನ್ನೂ ಇಲ್ಲೆ ಇಹರೊ .
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಡಾ || ಬಿ.ಸಿ. ರಾಮಚಂದ್ರಶರ್ಮ ರವರು ರಚಿಸಿರುವ “ ಎಂದಿಗೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಸಮುದ್ರದಾಚೆಯಿಂದ ಬಂದ ಕಡಲುಗಳ್ಳರಿಂದ ಬಿಡುಗಡೆಯೇನೋ ದೊರೆಯಿತು . ಆದರೆ ದೇಶದ ಒಳಗಿರುವ ಒಡಲುಗಳ್ಳರಿಂದ ಎಂದು ಬಿಡುಗಡೆ ಸಿಗುವುದೆಂದು ನೊಂದು ನುಡಿದಿದ್ದಾರೆ .
ವಿವರಣೆ : ಕಡಲುಗಳ್ಳರು ನಮ್ಮ ದೇಶ ಬಿಟ್ಟು ಹೋದರು . ಅಂದರೆ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋದರು . ಆದರೆ ದೇಶದ ಒಳಗಿರುವ ರಜಕಾರಣಿಗಳಿಂದು ಒಡಲುಗಳನ್ನು ಇಲ್ಲೇ ಇದ್ದು ನಮ್ಮನ್ನು ದೋಚುತ್ತಿದ್ದಾರೆ . ನಮಗೆ ಇವರಿಂದ ಬಿಡುಗಡೆ : ಎಂದಿಗೆ ? ಎಂಬುದು ಕವಿಯ ಮಾತಿನ ಅರ್ಥವಾಗಿದೆ .
ವಿಶೇಷತೆ : ಪರೋಕ್ಷವಾಗಿ ನಮ್ಮ ದೇಶದ ರಾಜಕಾರಣಿಗಳ ಬಗ್ಗೆ ವ್ಯಂಗ್ಯಾತ್ಮಕವಾಗಿ ತಿಳಿಸಿಕೊಟ್ಟಿದ್ದಾರೆ .
5. ಕ್ರಾಂತಿಭಾನು ಹೊಳೆದು ಹೊಂಬೆಳಕು ಚೆಲ್ವುದೆಂದಿಗೆ
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಡಾ || ಬಿ.ಸಿ. ರಾಮಚಂದ್ರಶರ್ಮ ರವರು ರಚಿಸಿರುವ “ ಎಂದಿಗೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ನಮ್ಮ ನಾಡಿನ ಮಂದಿಗೆ ಕ್ರಾಂತಿಯ ಭಾವನೆ ಬರುವುದೆಂದಿಗೆ ಎಂದು ಕೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳಿದ್ದಾರೆ .
ವಿವರಣೆ : ಕ್ರಾಂತಿ ಎಂಬ ಬಾನು ( ಸೂರ್ಯ ) ಹೊಂಬೆಳಕನ್ನು ಸೂಸುತ್ತ ಚೆಲುವಿನಿಂದಾಗಿ ಬರುವುದೆಂದಿಗೆ , ಅಂದರೆ ಜ್ಞಾನದ ಬೆಳಕು ಸೂಸುತ್ತ ಎಂದಿಗೆ ಬರುವನು . ಎಂದು ಕವಿ ನೊಂದು ನುಡಿಯುತ್ತಿದ್ದಾರೆ .
ವಿಶೇಷತೆ : ಸರಳ ಸುಂದರ ಭಾಷೆಯಲ್ಲಿ ನೊಂದು ಮಾರ್ಮಿಕವಾಗಿ ವಿವರಿಸಿದ್ದಾರೆ .
ಎಂದಿಗೆ notes PDF 1st PUC Kannada Endige Notes Question Answer Download
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
Notes download