1st PUC Kannada Akhanda Karnataka Notes | ಪ್ರಥಮ ಪಿಯುಸಿ ಕನ್ನಡ ಅಖಂಡ ಕರ್ನಾಟಕ ನೋಟ್ಸ್.

ಪ್ರಥಮ ಪಿ.ಯು.ಸಿ ಅಖಂಡ ಕರ್ನಾಟಕ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Kannada Akhanda Karnataka Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 11 Kannada Poem 7 Notes 1st Puc Kannada 7th Poem Notes Pdf Akhanda Karnataka Poem Summary in Kannada Akhanda Karnataka Question Answer Akhanda Karnataka Poem Notes

 

1st PUC Kannada Akhanda Karnataka Notes

ತರಗತಿ: ಪ್ರಥಮ ಪಿ.ಯು.ಸಿ

ಕವನ- ಕವಿ ಹೆಸರು: ಕುವೇಂಪು

ಕಾವ್ಯಾ ಭಾಗದ ಹೆಸರು : ಅಖಂಡ ಕರ್ನಾಟಕ!‌

1st P.U.C Kannada Akhanda Karnataka! Notesಅಖಂಡ ಕರ್ನಾಟಕ! ನೋಟ್ಸ್
1st PUC Kannada Akhanda Karnataka Notes | ಅಖಂಡ ಕರ್ನಾಟಕ! ನೋಟ್ಸ್

ಕವನ- ಕವಿ : ಕುವೆಂಪು ( ೧೯೦೪-೧೯೯೪ )

ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯವರು . ತೀರ್ಥಹಳ್ಳಿ ಹಾಗೂ ಮೈಸೂರಿನಲ್ಲಿ ಶಿಕ್ಷಣ ಪಡೆದ ಕುವೆಂಪು , ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿಯೂ ಕರ್ತವ್ಯ ನಿರ್ವಹಿಸಿದ್ದರು .

ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಇವರು ಭಾವಗೀತೆ , ಕತೆ , ಕಾದಂಬರಿ , ನಾಟಕ , ಮಹಾಕಾವ್ಯ , ಜೀವನ ಚರಿತ್ರೆ , ಆತ್ಮಚರಿತ್ರೆ , ವಿಮರ್ಶೆ , ಮಕ್ಕಳ ಸಾಹಿತ್ಯ , ವೈಚಾರಿಕ ಲೇಖನ ಹೀಗೆ ಎಲ್ಲ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿದ್ದಾರೆ . ಕೊಳಲು , ಕನ್ನಡ ಡಿಂಡಿಮ , ಪ್ರೇಮಕಾಶ್ಮೀರ , ಕೋಗಿಲೆ ಮತ್ತು ಸೋವಿಯತ್ ರಷ್ಯಾ , ಪಕ್ಷಿಕಾಶಿ ಮುಂತಾದ ಕವನ ಸಂಕಲನಗಳು , ಕಾನೂರು ಹೆಗ್ಗಡತಿ , ಮಲೆಗಳಲ್ಲಿ ಮದುಮಗಳು ಕಾದಂಬರಿಗಳು , ನೆನಪಿನ ದೋಣಿಯಲ್ಲಿ ಆತ್ಮಕಥನ , ನಿರಂಕುಶ ಮತಿಗಳಾಗಿ , ಮನುಜಮತ ವಿಶ್ವಪಥ , ವಿಚಾರಕಾಂತಿಗೆ ಆಹ್ವಾನ ವೈಚಾರಿಕ ಕೃತಿಗಳು , ಶೂದ್ರತಪಸ್ವಿ , ಸ್ಮಶಾನ ಕುರುಕ್ಷೇತ್ರಂ , ಬೆರಳ್‌ಗೆ ಕೊರಳ್ ಇನ್ನು ಮುಂತಾದ ನಾಟಕಗಳು ಇವರ ಕೃತಿಗಳು .

“ ಶ್ರೀರಾಮಾಯಣ ದರ್ಶನಂ ” ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ‘ ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ . ಧಾರವಾಡದಲ್ಲಿ ನಡೆದ ೩೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಇವರಿಗೆ ಕೇಂದ್ರ ಸರ್ಕಾರ ‘ ಪದ್ಮಭೂಷಣ ‘ ಪ್ರಶಸ್ತಿ , ರಾಜ್ಯ ಸರ್ಕಾರ ‘ ರಾಷ್ಟ್ರಕವಿ ‘ ಹಾಗೂ ‘ ಕರ್ನಾಟಕ ರತ್ನ ‘ ಬಿರುದು ನೀಡಿ ಗೌರವಿಸಿವೆ .

ರಾಷ್ಟ್ರದ ಬದುಕಿನಲ್ಲಿ ರಾಜಕೀಯ ಅಧಿಕಾರವೇ ಅಂತಿಮವಲ್ಲ . ಪ್ರಭುತ್ವವು ನಾಡಿನ ಸಾಂಸ್ಕೃತಿಕ ಅಸ್ತಿತ್ವವನ್ನು ನಿರ್ಲಕ್ಷಿಸುತ್ತಿದೆ . ರಾಜಕೀಯ ಪ್ರಭುತ್ವವು ನೈತಿಕ ಅಧಃಪತನದತ್ತ ಸಾಗಿದಾಗ ಸಾಂಸ್ಕೃತಿಕ ಶಕ್ತಿಗಳೇ ನಾಡಿನ ಅಂತಃಪ್ರಜ್ಞೆಯ ದ್ಯೋತಕವಾಗಿ ಪ್ರತಿರೋಧಿಸುತ್ತಾ ಬಂದಿವೆ . ರಾಜ್ಯದ ಆತ್ಮಗೌರವವನ್ನು ಎತ್ತಿ ಹಿಡಿದಿವೆ . ಆಳುವವರ ಇಬ್ಬಂದಿತನದಿಂದಾಗಿ ಕರ್ನಾಟಕದ ಏಕತೆಗೆ ಧಕ್ಕೆ ಒದಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಈ ಕವಿತೆ ಅತ್ಯಂತ ಪ್ರಸ್ತುತವಾಗಿದೆ .

ಪದಕೋಶ :

ಋತಸ್ಯಂಧಿ – ಸತ್ಯದ ಒಸರು , ಸತ್ಯ ದ್ರವಿಸುವಿಕೆ ; ಅವಂಧ್ಯೆ – ಬಂಜೆಯಲ್ಲದವಳು ; ಕಿನಿಸು ರೇಗು , ಕೋಪಿಸು ; ಜಲ್ಪನೆ – ಅಸ್ಪಷ್ಟವಾದ ಮಾತು , ಅಸಂಬದ್ಧವಾದ ಮಾತು ; ರುಚಿರ – ಕಾಂತಿ ; ಸೊಮ್ಮು – ಸೊಕ್ಕು , ಗರ್ವ ; ಜೋಳವಾಳಿ – ಅನ್ನದ ಋಣ , ಅನ್ನದ ಋಣವನ್ನು ತೀರಿಸುವವನು ; ತ್ರೋಟಕ – ರೂಪಕ ; ಪೇಟಕ – ಸಮೂಹ ; ದೀಧಿತಿ – ಹೊಳಪು , ಕಾಂತಿ , ಕಿರಣ ; ಬರಡು – ಪೊಳ್ಳು , ಬಂಜರು ; ಹುರುಡು – ಸ್ಪರ್ಧೆ , ಪೈಪೋಟಿ , ಮತ್ಸರ ; ಫಣಾ ಸರ್ಪದಹೆಡೆ .

1st PUC Kannada Akhanda Karnataka Notes Question Answer pdf

I. ಒಂದು ವಾಕ್ಯದಲ್ಲಿ ಉತ್ತರಿಸಿ .

1.ಅಖಂಡ ಕರ್ನಾಟಕದ ಚಕ್ರವತಿ ಯಾರು ?

ಅಖಂಡ ಕರ್ನಾಟಕದ ಚಕ್ರವರ್ತಿ ನೃಪತುಂಗ .

2. ಅಖಂಡ ಕರ್ನಾಟಕದ ಮುಖ್ಯಮಂತ್ರಿ ಯಾರು ?

ಅಖಂಡ ಕರ್ನಾಟಕದ ಮುಖ್ಯಮಂತ್ರಿ ಪಂಪ .

3. ಇಂದು ಬಂದು ನಾಳೆ ಹೋಗುವುದು ಯಾವುದು ?

ಇಂದು ಬಂದು ನಾಳೆ ಹೋಗುವುದು ಸಚಿವ ಮಂಡಲ .

4. ಸಿರಿಗನ್ನಡವನ್ನು ಯಾವುದಕ್ಕೆ ಹೋಲಿಸಲಾಗಿದೆ ?

ಸಿರಿಗನ್ನಡವನ್ನು ವಜ್ರಕರ್ಣಕುಂಡಲಕ್ಕೆ ಹೋಲಿಸಲಾಗಿದೆ .

5. ಸರಸ್ವತಿಯು ಯಾವ ಸಂಸ್ಕೃತಿಯನ್ನು ಮರೆಯಲು ಕರ್ನಾಟಕವನ್ನು ರಚಿಸಿದ್ದಾಳೆ ?

ಸರಸ್ವತಿಯು ಕಾಂತಿಯುಕ್ತ ಜೀವ ಸಂಸ್ಕೃತಿಯನ್ನು ಮರೆಯಲು ಕರ್ನಾಟಕವನ್ನು ರಚಿಸಿದ್ದಾಳೆ .

6. ಅಖಂಡ ಕರ್ನಾಟಕವನ್ನು ಹರಸುತ್ತಿರುವವನು ಯಾರು ?

ಅಖಂಡ ಕರ್ನಾಟಕವನ್ನು ಹರಸುತ್ತಿರುವವರು ದೇವ ಪುರುಷ ಗಾಂಧಿ .

II. ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1 ಅಖಂಡ ಕರ್ನಾಟಕ ಬೂಟಾಟದ ರಾಜಕೀಯ ನಾಟಕವಲ್ಲವೇಕೆ ?

ಅಖಂಡ ಕರ್ನಾಟಕ ಬೂಟಾಟದ ರಾಜಕೀಯ ನಾಟಕವಲ್ಲ , ಏಕೆಂದರೆ ಇದು ಸರಸ್ವತಿಯು ರಚಿಸಿರುವ ಸಚಿವ ಮಂಡಲವಾಗಿದ್ದು ಇಂದು ಬಂದು ನಾಳೆ ಹೋಗುವಂಥಹದು ಅಲ್ಲ , ಇದು ಸಿರಿಗನ್ನಡದ ವಜ್ರ ಕರ್ಣದ ಕುಂಡಲವಾಗಿದೆ .

2. ಪರಮಾತ್ಮ ಚರಣದೀಪ್ತಿ ಎಲ್ಲಿ ಮತ್ತು ಹೇಗೆ ಉರಿಯಬೇಕೆಂದು ಕವಿ ಹೇಳುತ್ತಾರೆ ?

ಪರಮಾತ್ಮನ ಚರಣದೀಪ್ತಿ ಶರಣ ಹೃದಯದಲ್ಲಿ ಹೊತ್ತಿ ಉಸಿರುಸಿರಿನ ಹಣತೆ ಬತ್ತಿ ಬಾಳೆಂಬ ಗುಡಿಯಲ್ಲಿ ತಣ್ಣಗೆ ಉರಿಯಬೇಕೆಂದು ಕವಿ ಹೇಳುತ್ತಾನೆ .

3. ಮೆಳ್ಳಗಣನಿಗೆ ಕವಿ ಕೇಳುವ ಪ್ರಶ್ನೆಗಳು ಯಾವುವು ?

ಹಾಡುತಿಹ ಕಂಡನಾನು ದಿಟ್ಟಿಗೇಡೋ ? ಹುಟ್ಟು ಕುರುಡೋ ಬುದ್ದಿ ಬರಡೋ ? ಬೇರೆ ಹುರುಡೋ ? ಹೇಳು ನನ್ನ ತಪ್ಪೇನು ? ಎಂದು ಮೆಳ್ಳಗಣಿಗೆ ಕವಿ ಹೇಳುವ ಪ್ರಶ್ನೆಯಾಗಿದೆ .

4. ಸರಸ್ವತಿಯ ಸಚಿವ ಮಂಡಲದ ಸದಸ್ಯರು ಯಾರು ?

ಸರಸ್ವತಿಯ ಸಚಿವ ಮಂಡಲದ ಸದಸ್ಯರು , ಚಕ್ರವರ್ತಿ – ನೃಪತುಂಗ , ಮುಖ್ಯಮಂತ್ರಿ ಪಂಪ , ಸಚಿವರು – ರನ್ನ , ಜನ್ನ , ನಾಗವರ್ಮ , ರಾಘವಾಂಕ , ಹರಿಹರ , ಬಸವೇಶ್ವರ , ಷಡಕ್ಷರಾ ನಾರಾಯಣ ಪ್ಪ ಮುಂತಾದವರು .

III . ಐದು ಆರು ವಾಕ್ಯಗಳಲ್ಲಿ ಉತ್ತರಿಸಿ .

1 ಕುವೆಂಪುರವರು “ ಕೂಗಾಟದ ರಾಜಕೀಯ ನಾಟಕ ” ಎಂದು ಹೇಳಿರುವ ಹಿನ್ನಲೆ ಏನು ?

ಕುವೆಂಪುರವರು , ‘ ಕೂಗಾಟದ ರಾಜಕೀಯ ‘ ನಾಟಕ ಎಂದು ಹೇಳಿದ್ದಾರೆ . ಏಕೆಂದರೆ ರಾಜಕೀಯ ಮಂತ್ರಿ ಮಂಡಲ ಸದಾಕಾಲ ಕೂಗಾಟ ಕಿರಿಚಾಟ ಒಬ್ಬರ ಮೇಲೊಬ್ಬರು ಆರೋಪ ಬರಿಸುತ್ತಿರುವ ಸಂತೆಯಾಗಿದೆ , ಪ್ರತಿಯೊಬ್ಬ ರಾಜಕೀಯ ಮುಖಂಡನು ತನ್ನದೆ ಆದ ವಾದವನ್ನು ಕೂಗಿ ಕಿರಿಚಾಡುವ ಪರಿ ಕೂಗಾಟದ ರಾಜಕೀಯಕ್ಕೆ ತಾಣವಾಗಿರುವುದರಿಂದ ಕೂಗಾಟದ ರಾಜಕೀಯ ಕೇವಲ ನಾಟಕವೆಂದು ಕವಿ ಹೇಳಿದ್ದಾರೆ .

2. ಸರಸ್ವತಿಯ ಸಚಿವ ಮಂಡಲವನ್ನು ಕುರಿತು ಬರೆಯಿರಿ .

ಸರಸ್ವತಿಯ ಸಚಿವ ಮಂಡಲ ಬೂಟಾಟಿಕೆಯ ರಾಜಕೀಯ ನಾಟಕ ಅಲ್ಲ . ಇಂದು ಬಂದು ನಾಳೆ ಹೋಗವ ತಾತ್ಕಾಲಿಕ ಸಚಿವ ಮಂಡಲ , ಇದು ಸಿರಿಗನ್ನಡ ವಜ್ರ ಕರ್ಣ ಕುಂಡಲ , ಈ ಸಚಿವ ಮಂಡಲದಲ್ಲಿ ನೃಪತುಂಗನೇ ಚಕ್ರವರ್ತಿ , ಪಂಪನೇ ಮುಖ್ಯಮಂತ್ರಿ ರನ್ನ , ಜನ್ನ , ನಾಘವರ್ಮ , ರಾಘವಾಂಕ , ಹರಿಹರ , ಬಸವೇಶ್ವರ , ನಾರಾಯಣಪ್ಪ , ಸರ್ವಜ್ಞ ಷಡಕ್ಷರರು ಸಚಿವರು ಇದೊಂದು ನಿತ್ಯ ಸಚಿವ ಮಂಲ ಎಂದು ಕವಿ ತಿಳಿಸಿದ್ದಾರೆ .

3. ಅಖಂಡ ಕರ್ನಾಟಕವು ಬರೀ ರಾಜಕೀಯ ನಾಟಕವಲ್ಲ ಏಕೆ ?

ಅಖಂಡ ಕರ್ನಾಟಕವು ಬರೀ ರಾಜಕೀಯ ನಾಟಕವಲ್ಲ , ಇದು ಒಂದು ನಾಳೆ ಇದ್ದು ಹೋಗುವ ಸಚಿವ ಮಂಡಲ ಇಲ್ಲಿಲ್ಲ . ಈ ಮಂತ್ರಿ ಮಂಡಲದ ರಚನೆಯೂ ಕೃತಕವಲ್ಲ ಇದನ್ನು ಸರಸ್ವತಿ ಮಾತೆಯು ರಚಿಸಿರುವ ಮಂತ್ರಿ ಮಂಡಲ ಇದು ಸಿರಿಗನ್ನಡ ಸರಸ್ವತಿಯ ವಾಚಕ ವಜ್ರ ಕರ್ಣ ಕುಂಡಲವಾಗಿದೆ ಎಂದು ಕವಿ ಹೇಳಿದ್ದಾರೆ .

4. ರಾಜಕೀಯ ಶಕ್ತಿಯ ಮೊಳಯಸುತ್ತಿರುವ ಇಂದಿನ ಸಂದರ್ಭದಲ್ಲಿ ನಾಡನ್ನು ಒಂದು ಸಾಂಸ್ಕೃತಿಕ ಆಸ್ತಿತ್ವವಾಗಿ ಕಲ್ಪಿಸಲು ಈ ಕವನ ಹೇಗೆ ಪೂರಕವಾಗಿದೆ ?

ರಾಜಕೀಯ ಶಕ್ತಿಯೇ ಮೇಳೆಸುತ್ತಿರುವ ಇಂತ ಸಂದರ್ಭದಲ್ಲಿ ನಾಡನ್ನು ಒಂದು ಸಾಂಸ್ಕೃತಿಕ ಅಸ್ತಿತ್ವವಾಗಿ ಕಲ್ಪಿಸಲು ಈ ಕವನ ಪೂರಕವಾಗಿದೆ . ಏಕೆಂದರೆ ರಾಷ್ಟ್ರದ ಬದುಕಿನಲ್ಲಿ ರಾಜಕೀಯ ಅಧಿಕಾರವೇ ಅಂತಿಮವಾಗಿರದೆ ಪ್ರಜಾಪ್ರಭುತ್ವವು ನಾಡಿನ ಸಾಂಸ್ಕೃತಿಕ ಅಸ್ತಿತ್ವನ್ನು ನಿರ್ಲಕ್ಷಿಸುತ್ತಿದೆ . ರಾಜಕೀಯ ಪ್ರಭುತ್ವವು ಅಂಥ : ಪತನದತ್ತ ಸಾಗಿದಾಗ ಸಾಂಸ್ಕೃತಿಕ ಶಕ್ತಿಗಳೇ ನಾಡಿನ ಅಂತ : ಪ್ರಜ್ಞೆಯ ದ್ಯೋತಕವಾಗಿ ಪ್ರತಿನಿಧಿಸುತ್ತಾ ಬಂದಿದೆ ಆಳುವವಳ ಇಬ್ಬದಿತನದಿಂದಾಗಿ ಏಕತೆಗೆ ಧಕ್ಕೆ ಒದಗುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಈ ಕವಿತೆ ಪೂರಕವಾಗಿ ಬಂದಿದೆ , ರಾಜ್ಯದ ಆತ್ಮಗೌರವವನ್ನು ಎತ್ತಿ ಹಿಡಿದಿದೆ .

5. ಕರ್ನಾಟಕ ಎಂಬುದು ಬರೀ ಮಣ್ಣಿಗೆ ಹೆಸರಲ್ಲ ಎಂಬುದು ಕವಿ ಹೇಗೆ ಹೇಳಿದ್ದಾರೆ .

ಕರ್ನಾಟಕ ಎಂಬುದು ಬರೀ ಮಣ್ಣಿಗೆ ಹೆಸರಲ್ಲ , ಎಂಬುದನ್ನು ಕವಿ ಹೀಗೆ ಹೇಳಿದ್ದಾರೆ . ಕರ್ನಾಟಕ ಎಂಬುದು ಬರಿ ಮಣ್ಣಲ್ಲ , ಇದೊಂದು ಮಂತ್ರ , ಇದೊಂದು ಶಕ್ತಿ , ಕರ್ನಾಟಕ ನಮ್ಮ ತಾಯಿ , ನಮ್ಮ ದೇವಿ , ಶತ್ರುಗಳ ಪಾಲಿಗೆ ಇದು ಬೇಂಕಿ ಸಿಡಿಲು , ಚಲಕ್ಕೆ ಬಂದಾಗ ಈಕೆ ಚಂಡಿ , ಒಲವಿನಿಂದ ಬಂದವರಿಗೆ ಕೈಹಿಡಿದು ಕಾಪಾಡುವ ಬಲ ಋಷಿಗಳ ಕಣ್ಣಿಗೆ ಅಖಂಡ ದೇವಿ , ವಿರೋಧಿಗಳಿಗೆ ಸ್ಫೋಟಗಳು ಕವಿಕಂಡ ಅಖಂಡೇ ಕರ್ನಾಟಕ ಎಂಬುದಾಗಿ ಕವಿ ತಿಳಿಸಿದ್ದಾರೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ

1 ಅಯ್ಯೋ ನಮ್ಮ ಕೂಗಾಟದ ರಾಜಕೀಯ ನಾಟಕ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ ಕುವೆಂಪುರವರು ರಚಿಸಿರುವ “ ಅಖಂಡ ಕರ್ಣಾಟಕ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ನಮ್ಮ ಅಖಂಡ ಕರ್ನಾಟಕ’ದ ವಿಶಿಷ್ಠತೆಯ ಬಗ್ಗೆ ತಿಳಿಸುತ್ತ ಕವಿಗಳು ಈ ಮಾತನ್ನು ಹೇಳಿದ್ದಾರೆ .

ವಿವರಣೆ : ನಮ್ಮದು ಅಖಂಡ ಕರ್ನಾಟಕ ‘ , ಇದು ವಿಶಾಲತೆಯಿಂದ ಹಲವಾರು ವಿಶಿಷ್ಠ ವಿಶೇಷತೆಗಳಿಂದ ಕೂಡಿದೆ , ಇದು ಕೇವಲ ರಾಜಕೀಯದಲ್ಲಿ ನಡೆಯುವ ಕೂಗಾಟಗಳ ನಾಟಕವಲ್ಲವೆಂದು ಕವಿ ವಿವರಿಸಿದ್ದಾರೆ

ವಿಶೇಷತೆ : ನಮ್ಮ ಕರ್ನಾಟಕದ ವಿಶೇಷತೆಯ ಬಗ್ಗೆ ತಿಳಿಸಿದ್ದಾರೆ .

2. ಇಂದು ಬಂದು , ನಾಳೆ ಸಂದು ಮೋಹ ಸಚಿವ ಮಂಡಲ .

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಕುವೆಂಪು ” ರವರು ರಚಿಸಿರುವ “ ಅಖಂಡ ಕರ್ನಾಟಕ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ನಮ್ಮ ಅಖಂಡ ಕರ್ನಾಟಕ ಶಾಶ್ವತವಾಗಿ ನಲಿಸಿರುವ ಸರಸ್ವತಿಯ ನೆಲ ನಾಡು ಎಂದು ಪರಿಚಯಿಸಿರುವ ಸಂದರ್ಭದಲ್ಲಿ ಈ ಮಾತನ್ನು ಹೇಳಲಾಗಿದೆ

ವಿವರಣೆ : ನಮ್ಮ ಅಖಂಡ ಕರ್ನಾಟಕವು ಒಂದು ಸಚಿವ ಮಂಡಲದಂತೆ , ಇಂದು ಇಂದಿನ ರಾಜಕೀಯ ಸಂಸತ್ತಿನಂತೆ ಇಂದು ಬಂದು , ನಾಳೆಗೆ ಕೂಗಾಡಿ ಬಿಟ್ಟು ಹೋಗುವ ಮಂತ್ರಿಮಂಡಲವಾಗಿದೆ ಸರಸ್ವತಿಯಿಂದ ರಚಿತವಾಗಿರುವ ಮಂತ್ರಿ ಮಂಡಲವಾಗಿದೆ .

ವಿಶೇಷತೆ : ಪ್ರಸ್ತುತ ವಾಕ್ಯದಲ್ಲಿ ಅಖಂಡ ಕರ್ನಾಟಕದಲ್ಲಿ ರಾಜಕೀಯ ವಾತಾವರಣ ಎಷ್ಟು ಚೆನ್ನಾಗಿದೆ ಎಂಬುದರ ಬಗ್ಗೆ ಕವಿ ತಿಳಿಸಿಕೊಟ್ಟಿದ್ದಾರೆ .

3. ನೃಪತುಂಗನೇ ಚಕ್ರವರ್ತಿ , ಪಂಪನಲ್ಲಿ ಮುಖ್ಯಮಂತ್ರಿ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ ಕುವೆಂಪುರವರು ರಚಿಸಿರುವ “ ಅಖಂಡ ಕರ್ಣಾಟಕ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ನಮ್ಮ ಅಖಂಡ ಕರ್ಣಾಟಕಕ್ಕೆ ಇರುವ ಮಹತ್ತರ ಇತಿಹಾಸದ ತಿಳಿಸಲಾಗಿದೆ .

ವಿವರಣೆ : ನಮ್ಮ ಕರ್ನಾಟಕದಲ್ಲಿ ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ನಮ್ಮದು ಅತಿ ಪ್ರಾಚೀನವಾದ ಇತಿಹಾಸವನ್ನು ಹೊಂದಿದೆ . ಇಲ್ಲಿ ಮೊಟ್ಟ ಮೊದಲ ಚಕ್ರವರ್ತಿ ನೃಪತುಂಗ ಮಹಾರಾಜ ಇವನಿಗೆ ಮಂತ್ರಿಯಾಗಿ ಸಹಕರಿಸಿದವನು ಆದಿಕವಿ ಎನಿಸಿದ ಪಂಪ ; ಎಂದು ಕವಿ ತಿಳಿಸಿದ್ದಾನೆ .

ವಿಶೇಷತೆ : ನಮ್ಮ ಪ್ರಾಚೀನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಾಗಿದೆ .

4.ಪಕ್ಷ ಜಾತಿ ಕಲಹರಲ್ತೊ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ ಕುವೆಂಪುರವರು ರಚಿಸಿರುವ “ ಅಖಂಡ ಕರ್ಣಾಟಕ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ನಮ್ಮ ಅಖಂಡ ಕರ್ನಾಟಕವು ಹಲವಾರು ಉತ್ತಮ ಗುಣಗಳಿಂದ , ವಿಶೇಷತೆಗಳಿಂದ ಕೂಡಿದೆ , ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳಿದ್ದಾರೆ .

ವಿವರಣೆ : ಕರ್ಣಾಟಕ ವಿಶಾಲವಾದ ಮನೋಭಾವವನ್ನು ಹೊಂದಿದೆ ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯವು ಮೂಡಿಬಂದಿದೆ ನಮ್ಮಲ್ಲಿ ಹಲವಾರು ಜಾತಿಧರ್ಮದವರು ಇದ್ದಾರೆ . ಇವರಲ್ಲಿ ಯಾವುದೇ ಕಲಹಗಳಿಲ್ಲ ಎಂದು ಹೇಳಿದ್ದಾರೆ .

ವಿಶೇಷತೆ : ನಮ್ಮದು ಪಕ್ಷಾತೀತ ಸಮಾಜದಿಂದ ಕೂಡಿದ ಸಮಾಜವಾಗಿದೆ ಇಲ್ಲಿ ಯಾವುದೆ ರೀತಿಯ ಜಾತಿ ಬೇಧ ಭಾವಗಳು ಇಲ್ಲ , ಜಾತಿಯ ಜಗಳಗಳು ಇಲ್ಲಿ ಇಲ್ಲ ಎಂದು ಹೇಳಿದ್ದಾರೆ .

5. ಮಂತ್ರ ಕಣಾ ! ಶಕ್ತಿ ಕಣಾ !

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ ಕುವೆಂಪುರವರು ರಚಿಸಿರುವ “ ಅಖಂಡ ಕರ್ಣಾಟಕ ” ಎಂಬ ಪದ್ಯಬಾಗದಿಂದ ಆರಿಸಲಾಗಿದೆ .

ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು ಕರ್ನಾಟಕದ ವಿಶೇಷ ಶಕ್ತಿಯಾಗುವುದ ಎಂಬುದರ ಬಗ್ಗೆ ತಿಳಿಸುತ್ತಾ ಈ ವಾಕ್ಯವನ್ನು ಬರೆದಿದ್ದಾರೆ .

ವಿವರಣೆ : ನಮ್ಮ ಅಖಂಡ ಕರ್ಣಾಟಕದಲ್ಲಿ ತನ್ನದೆ ಆದ ಒಂದು ವಿಶೇಷ ಸಕ್ತಿ ಇದೆ ಅದು ವೇದ ಮಂತ್ರ ಘೋಷಗಳಿಂದ ಕೂಡಿರುವುದಾಗಿದೆ ಎಂಬುದಾಗಿ ವಿವರಿಸಿದ್ದಾರೆ .

ವಿಶೇಷತೆ : ಈ ವಾಕ್ಯದಲ್ಲಿ ನಮ್ಮ ಅಖಂಡ ಕರ್ಣಾಟಕದ ವಿಶೇಷತೆಯನ್ನು ಸರಳವಾದ ಭಾಷೆಯಲ್ಲಿ ತಿಳಿಸಿಕೊಟ್ಟಿದ್ದಾರೆ .

6. ಮರೆಯಲಾತ್ಮ ಸಂಸ್ಕೃತಿ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ ಕುವೆಂಪುರವರು ರಚಿಸಿರುವ “ ಅಖಂಡ ಕರ್ಣಾಟಕ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ನಾವು ನಮ್ಮ ಭವ್ಯ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿಂದ ಕವಿ ಹೇಳುವ ಸಂದರ್ಭ ಕವಿ ಈ ವಾಕ್ಯವನ್ನು ಹೇಳಿದ್ದಾನೆ .

ವಿವರಣೆ : ಪ್ರಸ್ತುತ ವಾಕ್ಯದಲ್ಲಿ ನಮ್ಮ ಅಖಂಡ ಕರ್ಣಾಟಕವು ಅತಿಭವ್ಯವಾದ ಪ್ರಾಚೀನವಾದ ಸಂಸ್ಕೃತಿಯನ್ನು ಹೊಂದಿರುವ ಬಗ್ಗೆ ತಿಳಿಸಿ ಕೊಟ್ಟಿದ್ದ .

ವಿಶೇಷತೆ : ನಮ್ಮ ಅಖಂಡ ಕರ್ನಾಟಕವು ಪ್ರಾಚೀನ ಸಂಸ್ಕೃತಿಯನ್ನು ಹೊಂದಿದ್ದು ಅದನ್ನು ನಾವು ಈಗಲೂ ಕಾಣಬಹುದಾದ ಭವ್ಯ ಸಂಸ್ಕೃತಿ ಪಡೆದ ರಾಜ್ಯವೆಂದು ವಿವರಿಸಿದ್ದಾರೆ.

FAQ :

ಇಂದು ಬಂದು ನಾಳೆ ಹೋಗುವುದು ಯಾವುದು ?

ಇಂದು ಬಂದು ನಾಳೆ ಹೋಗುವುದು ಸಚಿವ ಮಂಡಲ .

ಸಿರಿಗನ್ನಡವನ್ನು ಯಾವುದಕ್ಕೆ ಹೋಲಿಸಲಾಗಿದೆ ?

ಸಿರಿಗನ್ನಡವನ್ನು ವಜ್ರಕರ್ಣಕುಂಡಲಕ್ಕೆ ಹೋಲಿಸಲಾಗಿದೆ .

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

1 thoughts on “1st PUC Kannada Akhanda Karnataka Notes | ಪ್ರಥಮ ಪಿಯುಸಿ ಕನ್ನಡ ಅಖಂಡ ಕರ್ನಾಟಕ ನೋಟ್ಸ್.

Leave a Reply

Your email address will not be published. Required fields are marked *

rtgh