ಪ್ರಥಮ ಪಿ.ಯು.ಸಿ ಶಿಶು ಮಕ್ಕಳಿಗೊಲಿದ ಮಾದೇವ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 1st Puc Shishu Makkaligolida Madeva Kannada Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 11 Kannada Poem 6 Notes 1st Puc Kannada 6th Poem Notes Shishu Makkaligolida Madeva Kannada Notes Pdf ಸಿಸು ಮಕ್ಕಳಿಗೊಲಿದ ಮಾದೇವ ಸಾರಾಂಶ Shishu Makkaligolida Madeva Question Answer Pdf
ಶಿಶು ಮಕ್ಕಳಿಗೊಲಿದ ಮಾದೇವ ಕನ್ನಡ ನೋಟ್ಸ್
ತರಗತಿ: ಪ್ರಥಮ ಪಿ.ಯು.ಸಿ
ಜಾನಪದ ಕಾವ್ಯ ಹೆಸರು: ಶಿಶು ಮಕ್ಕಳಿಗೊಲಿದ ಮಾದೇವ
ಜಾನಪದ ಕಾವ್ಯ – ಪರಿಚಯ :
‘ ಮಲೆಯ ಮಾದೇಶ್ವರ ‘ ಮಹಾಕಾವ್ಯದಲ್ಲಿ ೧೪ ಕಥಾ ಭಾಗಗಳಿವೆ . ಒಂದೊಂದು ಕಥಾ ಭಾಗವನ್ನು ಒಂದೊಂದು ಸಾಲು ಎಂದು ಕರೆಯುತ್ತಾರೆ . ಒಂದೊಂದು ಸಾಲಿನಲ್ಲಿ ಅನೇಕ ಭಾಗ ಅಥವಾ ಕವಲುಗಳಿದ್ದು ಅವನ್ನು ‘ ಕವಟ್ಟು ‘ ಎಂದು ಕರೆದಿದ್ದಾರೆ .
ಸಂಕಮ್ಮನ ಮಕ್ಕಳಾದ ಕಾರಯ್ಯ ಬಿಲ್ಲಯ್ಯರನ್ನು ಮಾದೇಶ್ವರ ತನ್ನ ಶಿಶು ಮಕ್ಕಳನ್ನಾಗಿ ಮಾಡಿಕೊಳ್ಳುತ್ತಾನೆ . ಅವರನ್ನು ಪರೀಕ್ಷೆಗೆ ಒಡ್ಡಿದ ಸಂದರ್ಭ ಇದಾಗಿದೆ .
ಡಾ . ಪಿ . ಕೆ . ರಾಜಶೇಖರ ( ೧೯೪೭ ) ಪ್ರಸಿದ್ಧ ಜಾನಪದ ತಜ್ಞರು , ಪಿರಿಯಾಪಟ್ಟಣದಲ್ಲಿ ಜನಿಸಿದ ಇವರು ಜನಪದ ಮಹಾಕಾವ್ಯಗಳಾದ ಮಲೆಯ ಮಾದೇಶ್ವರ , ಜನಪದ ಮಹಾಭಾರತ , ಜನಪದ ರಾಮಾಯಣ , ಪಿರಿಯಾಪಟ್ಟಣ ಕಾಳಗ , ಬೆಟ್ಟದ ಚಾಮುಂಡಿ ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ .
ಪದಕೋಶ :
ಮೂಡಲ – ಪೂರ್ವ ದಿಕ್ಕು ; ಏಗ – ಯೋಗ ; ಒರಗು – ಮಲಗು ; ಬ್ಯಾಡಾರ – ಬೇಡರ ; ಸಿಸು ಮಕ್ಕ = ಶಿಷ್ಯರು , ಗಳುಗೆ – ಗಳಿಗೆ , ಕ್ಷಣ ; ದೇವೇವ್ರಪತಿ – ಇಂದ್ರ ; ವಾಸುದೇವ ವಾಯುದೇವ ; ತಿರಿಯೊಂಗೆ – ತಿರುಗುವಂತೆ ; ಕಳುಗು – ಕಳುಪು ; ಕೆಂಡಗಣ್ಣಯ್ಯ ( ಕೆಂಡದಂತೆ ( ಬೆಂಕಿ ) ಕಣ್ಣುಳ್ಳವ ) -ಮಾದೇಶ್ವರ ; ಸಿಳ್ಳು – ಸಿಡಿಲು ; ಕಾರೆಂಬಕತ್ತಲ್ಯ ಕಗ್ಗತ್ತಲೆ ; ರವುಸು – ರಭಸ ; ಬ್ಯಾಡುಗಂಪನ – ಕಂಪಣಬೇಡರು ವಾಸಿಸುತ್ತಿದ್ದ ಪ್ರದೇಶ ; ಮೊಕು – ಮೊಗ ; ಮೇಲೋಕ – ಸ್ವರ್ಗ ; ಒಕ್ಕೊಂಡು ಹೊತ್ತುಕೊಂಡು .
1st PUC Kannada ಶಿಶು ಮಕ್ಕಳಿಗೊಲಿದ ಮಾದೇವ notes Question and Answer
I. ಒಂದು ವಾಕ್ಯದಲ್ಲಿ ಉತ್ತರಿಸಿ .
1.ಯಾರ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು ?
ಸಂಕಮ್ಮನ ಮಕ್ಕಳನ್ನು ಮಾದೇವ ದತ್ತುವಾಗಿ ಪಡೆದನು .
2.ಶಿಶು ಮಕ್ಕಳು ಹೂ ತರಲು ಎಲ್ಲಿಗೆ ಹೋಗಿದ್ದರು ?
ಶಿಶು ಮಕ್ಕಳು ಹೂ ತರಲು ಕಡ್ಡಿ ಹಳ್ಳಕ್ಕೆ ಹೋಗಿದ್ದರು .
3.ಮಾದೇವ ಮಕ್ಕಳ ಸತ್ಯ ನೋಡಲು ಏನು ಮಾಡಬೇಕೆನ್ನುತ್ತಾನೆ ?
ಮಾದೇವ ಮಕ್ಕಳ ಸತ್ಯ ನೋಡಲು ಮಾಯದ ಮಳೆ ಕರೆಯಬೇಕೆನ್ನುತ್ತಾನೆ .
4. ವಾಯುದೇವನನ್ನು ಎಂತಹ ಸುಂಟರಗಾಳಿ ಕಳುಹಿಸು ಎಂದು ಮಾದೇವ ಕೇಳುತ್ತಾನೆ ?
ಜಗತ್ತೆಲ್ಲ ಬುಗುರಿಯಂತೆ ತಿರುಗುವ ಸುಂಟರಗಾಳಿಯ ಹಾಗೆ ಬೀಸುವ ಸುಂರಗಾಳಿಯನ್ನು ಕಳುಹಿಸು ಎಂದು ಮಾದೇವ ಕೇಳುತ್ತಾನೆ .
5. ಮಾದೇವ ಎಲ್ಲಿ ಒದಗಿದ್ದಾನೆ ?
ಮೂಡಲ ಮಲೆಯಲ್ಲಿ ಮಾದೇವ ಯೋಗದಲ್ಲಿ ಒದಗಿದ್ದಾನೆ .
6.ಗಂಗಮ್ಮ ಏನನ್ನು ಹೊತ್ತು ಕೊಂಡು ಹೋದಳು ?
.ಆನೆ , ಮದ್ದಾನೆ ಹಿಂಡನ್ ಗಂಗಮ್ಮ ಹೊತ್ತುಕೊಂಡು ಹೋದಳು ..
7. ಗಂಗೆ ಸುರಿಯುವ ರಭಸಕ್ಕೆ ಏನೇನು ಒಂದಾದವು ?
ಗಂಗೆ ಸುರಿಯುವ ರಭಸಕ್ಕೆ ಆಕಾಶ ಭೂಮಿ ಒಂದಾದವು
8. ನೀರಿನ ಸುಳಿಗೆ ಸಿಲುಕಿದ ಮಾದೇವ ಹೇಗೆ ತಿರುಗಿದನು ?
ನೀರಿನ ಸುಳಿಗೆ ಸಿಲುಕಿದ ಮಾದೇವ ಗರಗರನೆ ತಿರುಗಿದನು .
9.ಮಾದೇವ ಯಾವುದಕ್ಕೆ ಒಲಿದನು ?
ಮಕ್ಕಳ ಪ್ರೇಮಕ್ಕೆ ಮಾದೇವ ಒಲಿದನು .
10. ನಂಬಿದವನ ಮನದಲ್ಲಿ ಮಾದೇವ ಹೇಗಿರುತ್ತಾನೆ ?
ನಂಬಿದವನ ಮನದಲ್ಲಿ ಮಾದೇವ ತುಂಬಿ ತುಳುಕಾಡುತ್ತಾನೆ .
11..ಮಳೆಯನ್ನು ಕಳುಹಿಸು ಎಂದು ಯರನ್ನು ಕೇಳುತ್ತಾನೆ ?
ಮಳೆಯನ್ನು ಕಳುಹಿಸು ಎಂದು ಇಂದ್ರನನ್ನು ಕೇಳುತ್ತಾನೆ .
12. ಕಾರೆಂಬೋ ಕತ್ತಲಲ್ಲಿ ಎಂತಹ ಮಳೆ ಬಂತು ?
ಕಾರೆಂಬೋ ಕತ್ತಲಲ್ಲಿ ಜೊರೆಂಬ ಮಳೆ ಬಂತು .
II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಸಿಡಿಲು ಗುಡುಗುಗಳನ್ನು ಕಳುಹಿಸು ಎಂದು ಮಾದೇವ ಯಾರನ್ನು ಕೇಳುತ್ತಾನೆ ?
ಗುಡುಗಾಜಮ್ಮನನ್ನು ಗುಡುಗಾಗಲೆಂದು ಹಾಗೂ ಬೊಮ್ಮಯ್ಯನಿಗೆ ಸಿಡಿಲಗಬೇಕೆಂದು ಮಾದೇವ ಕೇಳುತ್ತಾನೆ .
2. ಮಳೆಯನ್ನು ನೋಡಿ ಕನ್ನಯ್ಯ ತನ್ನೊಳಗೆ ಏನೆಂದು ಕೊಳ್ಳುತ್ತಾನೆ ?
ಮಳೆಯನ್ನು ನೋಡಿ ಕನ್ನಯ್ಯ ಗುಡುಗು ಸಿಡಿಲಿನ ರಭಸಕ್ಕೆ ನಾಕು ಲೋಕಗಳು ನಡಗೋದೊ . ( ನಡಗಿ ಹೋದವು ) .
3. ಶಿಶು ಮಕ್ಕಳು ನಾವು ಸತ್ತರೂ ಚಿಂತಿಲ್ಲ ಎನ್ನಲು ಕಾರಣವೇನು ?
ಮುಳುಗಿ ಹೋಗುತ್ತಿರುವ ಮಾದೇವನನ್ನು ಉಳಿಸಲು ಶಿಶುಮಕ್ಕಳು ತಾವು ಸತ್ತರೂ ಚಿಂತಿಲ್ಲ ಎಂದರು .
4. ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಳ್ಳುವುದು ಏಕೆ ?
ನೀರಿನ ಸುಳಿಗೆ ಮಾದೇವ ಸಿಕ್ಕಿ ಗರಗರನೇ ತಿರುಗಿ ಎಳೆದುಕೊಂಡು ಹೋಗುವಾಗ ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಂಡನು .
5. ಶಿಶು ಮಕ್ಕಳು ಬಾಯಿ ಬಾಯಿ ಏಕೆ ಬಡಿದುಕೊಳ್ಳುತ್ತಾರೆ ?
ದೊಡ್ಡ ಅಪ್ಪಾನೆ ಮುಳುಗೋದ ಮೇಲೆ ನಾವು ಬಾಳಬೋದೇನೋ ಮಾದೇವ ಎಂದು ಶಿಶು ಮಕ್ಕಳ ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ .
6. ಶಿಶು ಮಕ್ಕಳ ಪ್ರೇಮಕ್ಕೆ ಮಾದಪ್ಪ ಹೇಗೆ ಬಂದನು ?
ಸಿಶು ಮಕ್ಕಳ ಪ್ರೇಮಕ್ಕೆ ಮಾದಪ್ಪ ಎಡ – ಬಲ ಹಿಡಿದು ತಬ್ಬಿಕೊಂಡು ಮಕ್ಕಳನ್ನೆತ್ತಿ ಹೆಗಲ ಮೇಲೆ ಹೊತ್ತುಕೊಂಡು ಗುಡಿಗೆ ಬಂದನು .
7.ಮಾದೇವನ ಶಿಶು ಮಕ್ಕಳ ಹೆಸರೇನು ?
ಮಾದೇವನ ಶಿಶು ಮಕ್ಕಳ ಹೆಸರೆಂದರೆ ಕಾರಯ್ಯ ಮತ್ತು ಬಿಲ್ಲಯ್ಯ .
8. ಮಾದೇವ ತನ್ನ ಶಿಶುಮಕ್ಕಳಿಗೆ ಏನೇನು ನೀಡಿ ಸಲುಹಿದನು ?
ಮಾದೇವ ತನ್ನ ಶಿಶುಮಕ್ಕಳಿಗೆ ಹಾಲು , ಬೆಣ್ಣೆ , ತುಪ್ಪ , ಗೆಡ್ಡೆಗೆಣಸು ಕೊಟ್ಟು ಸಲುಹಿದನು .
III. ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ .
1. ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಳ್ಳುವುದು ಏಕೆ ?
ನೀರಿನ ಸುಳಿಗೆ ಮಾದೇವ ಸಿಕ್ಕಿ ಗರಗರನೇ ತಿರುಗಿ ಎಳೆದುಕೊಂಡು ಹೋಗುವಾಗ ಬಲಿಯ ಕಲ್ಲನ್ನು ಕನ್ನಯ್ಯ ಬಲವಾಗಿ ಹಿಡಿದುಕೊಂಡನು .
2. ಮಾದೇವ ತನ್ನ ಶಿಶುಮಕ್ಕಳಿಗೆ ಏನೇನು ನೀಡಿ ಸಲುಹಿದನು ?
ಮಾದೇವ ತನ್ನ ಶಿಶುಮಕ್ಕಳಿಗೆ ಹಾಲು , ಬೆಣ್ಣೆ , ತುಪ್ಪ , ಗೆಡ್ಡೆಗೆಣಸು ಕೊಟ್ಟು ಸಲುಹಿದನು .
3. ಸಿಡಿಲು ಗುಡುಗುಗಳನ್ನು ಕಳುಹಿಸು ಎಂದು ಮಾದೇವ ಯಾರನ್ನು ಕೇಳುತ್ತಾನೆ ?
ಗುಡುಗಾಜಮ್ಮನನ್ನು ಗುಡುಗಾಗಲೆಂದು ಹಾಗೂ ಬೊಮ್ಮಯ್ಯನಿಗೆ ಸಿಡಿಲಗಬೇಕೆಂದು ಮಾದೇವ ಕೇಳುತ್ತಾನೆ .
4.ಶಿಶು ಮಕ್ಕಳು ಬಾಯಿ ಬಾಯಿ ಏಕೆ ಬಡಿದುಕೊಳ್ಳುತ್ತಾರೆ ?
ದೊಡ್ಡ ಅಪ್ಪಾನೆ ಮುಳುಗೋದ ಮೇಲೆ ನಾವು ಬಾಳಬೋದೇನೋ ಮಾದೇವ ಎಂದು ಶಿಶು ಮಕ್ಕಳ ಬಾಯಿ ಬಾಯಿ ಬಡಿದುಕೊಳ್ಳುತ್ತಾರೆ .
5. ಶಿಶು ಮಕ್ಕಳು ನಾವು ಸತ್ತರೂ ಚಿಂತಿಲ್ಲ ಎನ್ನಲು ಕಾರಣವೇನು ?
ಮುಳುಗಿ ಹೋಗುತ್ತಿರುವ ಮಾದೇವನನ್ನು ಉಳಿಸಲು ಶಿಶುಮಕ್ಕಳು ತಾವು ಸತ್ತರೂ ಚಿಂತಿಲ್ಲ ಎಂದರು .
6.ಮಾದಪ್ಪ ತನ್ನ ಶಿಶು ಮಕ್ಕಳನ್ನು ಪರೀಕ್ಷಿಸಲು ಕಾರಣಗಳೇನು ?
ಮಾದಪ್ಪ ತನ್ನ ಶಿಶು ಮಕ್ಕಳನ್ನು ಪರೀಕ್ಷಿಸಲು ಕಾರಣ ಎಂದರೆ “ ಇವರ ಸತ್ಯವನ್ನು ಜಗತ್ತೆ ತೋರಿಸಿಕೊಡಲು ಮಾಯದ ಮಳೆ ಕರೆದು ಪರೀಕ್ಷಿಸಲು ಕಾರಣವಾಯಿತು .
7. ಮಳೆಯನ್ನು ನೋಡಿ ಕನ್ನಯ್ಯ ತನ್ನೊಳಗೆ ಏನೆಂದು ಕೊಳ್ಳುತ್ತಾನೆ ?
ಮಳೆಯನ್ನು ನೋಡಿ ಕನ್ನಯ್ಯ ಗುಡುಗು ಸಿಡಿಲಿನ ರಭಸಕ್ಕೆ ನಾಕು ಲೋಕಗಳು ನಡಗೋದೊ . ( ನಡಗಿ ಹೋದವು).
8. ಶಿಶು ಮಕ್ಕಳ ಪ್ರೇಮಕ್ಕೆ ಮಾದಪ್ಪ ಹೇಗೆ ಬಂದನು ?
ಸಿಶು ಮಕ್ಕಳ ಪ್ರೇಮಕ್ಕೆ ಮಾದಪ್ಪ ಎಡ – ಬಲ ಹಿಡಿದು ತಬ್ಬಿಕೊಂಡು ಮಕ್ಕಳನ್ನೆತ್ತಿ ಹೆಗಲ ಮೇಲೆ ಹೊತ್ತುಕೊಂಡು ಗುಡಿಗೆ ಬಂದನು .
IV ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1. ಮಳೆ ಉಂಟು ಮಾಡಿದ ಪರಿಣಾಮಗಳನ್ನು ವಿವರಿಸಿ .
ಮಳೆ ಉಂಟು ಮಾಡಿದ ಪರಿಣಾಮಗಳೆಂದರೆ ಚೆಂಡು ಗಾತ್ರ ಮಳೆ ಹನಿಗಳಿಂದ ಜೋರಾಗಿ ಮಳೆ ಸುರಿದು ಭೂಮಿ ಆಕಾಶ ಒಂದಾದವೋ ಎಂಬಂತೆ ಸುರಿಯುತ್ತಿತ್ತು . ಅದರಲ್ಲಿ ಕಾಡು ಪ್ರಾಣಿಗಳು , ಆನೆ , ಮದ್ದಾನೆಗಳೆಲ್ಲ ತೇಲಿಕೊಂಡು ಹೋದವು , ಅಪ್ಪನ ಗುಡಿಯು ಮುಟ್ಟೋಯ್ತು
2. ಮಾದೇವ ತನ್ನ ಶಿಶು ಮಕ್ಕಳನ್ನು ಪರೀಕ್ಷಿಸಲು ಯಾರಾರ ಸಹಕಾರವನ್ನು ಹೇಗೆ ಪಡೆದನು ?
ಮಾದೇವ ತನ್ನ ಶಿಶು ಮಕ್ಕಳನ್ನು ಪರೀಕ್ಷಿಸಲು ಇಂದ್ರ ವಾಯುದೇವ , ಗುಡುಗಾಜಮ್ಮ ಹಾಗೂ ಬೊಮ್ಮರಾಯನ ಸಹಾಯ ಸಹಕಾರವನ್ನು ಪಡೆದರು .
3. ಮಳೆಯಲ್ಲಿ ಸಿಲುಕಿದ ಮಾದೇವನನ್ನು ಶಿಷ್ಯರು ಹೇಗೆ ರಕ್ಷಿಸಿದನು ?
ಮಳೆಯಲ್ಲಿ ಸಿಲುಕಿದ ಮಾದೇವನನ್ನು ಶಿಷ್ಯರು ತಾವು ಸತ್ತರೂ ಚಿಂತೆ ಇಲ್ಲ ಮಾದೇವನನ್ನು ರಕ್ಷಿಸಬೇಕು ಎಂದು ಹೇಳಿ ಮಾದೇವನನ್ನು ಇಬ್ಬರು ಬಿಗಿಯಾಗಿ ತಬ್ಬಿಕೊಂಡರು .
4.ಮಾದಪ್ಪ ತನ್ನ ಶಿಶು ಮಕ್ಕಳನ್ನು ಪರೀಕ್ಷಿಸಲು ಕಾರಣಗಳೇನು ?
ಮಾದಪ್ಪ ತನ್ನ ಶಿಶು ಮಕ್ಕಳನ್ನು ಪರೀಕ್ಷಿಸಲು ಕಾರಣ ಎಂದರೆ “ ಇವರ ಸತ್ಯವನ್ನು ಜಗತ್ತೆ ತೋರಿಸಿಕೊಡಲು ಮಾಯದ ಮಳೆ ಕರೆದು ಪರೀಕ್ಷಿಸಲು ಕಾರಣವಾಯಿತು .
5. ಮಾದೇವ ಶಿಷ್ಯರನ್ನು ಹೇಗೆ ಸಲುಹಿದನು ?
ಮಾದೇವ ಶಿಷ್ಯರನ್ನು , ಹಾಲು , ಬೆಣ್ಣೆ , ತುಪ್ಪ , ಗೆಡ್ಡೆಗೆಣ ಸುಗಳನ್ನು ಕೊಟ್ಟು ಹತ್ತ ತಾಯಿಯಂತೆ ಸಲುಹಿದ್ದನು .
ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ
1. ಒನೋನ್ ಚಂಡುನ ಗಾತ್ರ ಹನಿಗಳು
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಮಕ್ಕಳಿಗೊಲಿದ ಮಾದೇವ ” ಎಂಬ ಜಾನಪದ ಶೈಲಿಯಲ್ಲಿರುವ “ ಮಲೆಯ ಮಾದೇಶ್ವರ ” ಎಂಬ ಮಹಾಕಾವ್ಯದಿಂದ ಆರಿಸಲಾಗಿದೆ .
ಸಂದರ್ಭ : ಮಾದೇವನ ಆದೇಶದಂತೆ ಇಂದ್ರನು ಸುಂಟರ ಬಿರುಗಾಳಿ , ಗುಡುಗು ಸಿಡಿಲುಗಳ ಸಹಿತ ಹಳ್ಳ – ಕೊಳ್ಳ ಮಳೆಯಿಂದ ತುಂಬಿಹೋಯಿತು . ಆ ಮಳೆಯ ಹನಿಗಳು ಚೆಂಡಿನ ಗಾತ್ರದಷ್ಟು ದೊಡ್ಡ ದೊಡ್ಡ ಗಾತ್ರದ ಹನಿಗಳು ಬೀಳತೊಡಗಿತ್ತು , ಎಂಬ ಸಂದರ್ಭದಲ್ಲಿ ಈ ವಾಕ್ಯವನ್ನು ಹೇಳಲಾಗಿದೆ .
ವಿವರಣೆ : ಮಳೆಯ ಹನಿಗಳು ಚೆಂಡಿನ ಗಾತ್ರ ಇದ್ದವು . ಇದರಿಂದ ಹೆಚ್ಚಿನ ಹಾನಿಯಾಗಿತ್ತೆಂಬ ವಿಷಯವನ್ನೇ ಇಲ್ಲಿ ವಿವರಿಸಲಾಗಿದೆ .
ವಿಶೇಷತೆ : ಗ್ರಾಮೀಣ ಭಾಷೆಯ ಸೊಗಡು ಇದ್ದು ವಸ್ತು ವಿಷಯ ಭಯವನ್ನುಂಟು ಮಾಡುತ್ತವೆ .
2. ನೀವೊಪ್ಪುದಂಗೆ ಮಾಡುತ್ತೀವಿ .
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಮಕ್ಕಳಿಗೊಲಿದ ಮಾದೇವ ” ಎಂಬ ಜಾನಪದ ಶೈಲಿಯಲ್ಲಿರುವ ” ಮಲೆಯ ಮಾದೇಶ್ವರ ” ಎಂಬ ಮಹಾಕವ್ಯದಿಂದ ಆರಿಸಲಾಗಿದೆ .
ಸಂದರ್ಭ : ಮಾದೇವ ಇಂದ್ರನ ಬಳಿ ಬಂದು ಮಾಯದ ಭಯಂಕರ ಮಳೆ ಸುರಿಸುವಂತೆ ಕೇಳಿದಾಗ ಮೊದಲು ಇಂದ್ರ ಹೆದರುತ್ತಾನೆ . ನಂತರ ಮಾದೇವನ ಮಾತಿಗೆ ಒಪ್ಪುತ್ತಾನೆ , ಅವನು ಒಪ್ಪಿಕೊಳ್ಳುವ ಮಾತೆ ಈ ವಾಕ್ಯವಾಗಿದೆ .
ವಿವರಣೆ : ನೀವು ಒಪ್ಪು ಹಾಗೆ ಮಾಡುತ್ತೇವೆ . ಎಂದರೆ ಸುಂಟರಗಾಳಿ , ಭಯಂಕರ ಗುಡುಗು ಸಿಡಿಲಿನೊಂದಿಗೆ ಹಳ್ಳ – ಕೊಳ್ಳ ತುಂಬಿ ಹರಿಯುವಂತೆ ಮಾಡುತ್ತೇವೆ .ಎಂದು ಮಾದೇವ ಒಪ್ಪಿದ ಹಾಗೆ ಮಾಡುತ್ತೇವೆ ಎಂಬುದು ಇದರ ಅರ್ಥ .
ವಿಶೇಷತೆ : ಜಾನಪದದ ಸರಳ ಸಹಜ ಸೊಗಡು ಈ ಸಾಲಿನಲ್ಲಿದೆ .
3. ನೀನಿಂತ ಬಂದಾನ ಕೊಟ್ಯಪ್ಪ
ಪ್ರಸ್ತಾವನೆ : ಪ್ರಸ್ತುತ ಈ ಸಾಲುನ್ನು “ ಮಕ್ಕಳಿಗೊಲಿದ ಮಾದೇವ ” ಎಂಬ ಜಾನಪದ ಶೈಲಿಯಲ್ಲಿರುವ “ ಮಲೆಯ ಮಾದೇಶ್ವರ ” ಎಂಬ ಮಹಾಕಾವ್ಯದಿಂದ ಆರಿಸಲಾಗಿದೆ .
ಸಂದರ್ಭ : ಕಾರಯ್ಯ , ಬಿಲ್ಲಯ್ಯ , ಎಂದೂ ಬಾರದ ಈ ಮಳೆಯಿಂದ ತತ್ತರಿಸಿ ಹೋಗಿ ತಮ್ಮ ಸ್ವಾಮಿ ಮಾದೇವನ್ನನು ನೆನೆಯುತ್ತಾರೆ .
ವಿವರಣೆ : ಬಾರಿ ಮಳೆಯಿಂದಾಗಿ ಕಾಡು ಪ್ರಾಣಿಗಳೆಲ್ಲವು ಕೊಚ್ಚಿಹೋಯಿತು . ಈ ಮಳೆ ತಮ್ಮನ್ನು ಬಲಿ ತೆಗೆದುಕೊಳ್ಳಬಹುದೆಂದು ಹೆದರಿ ಎಂಥಹ ಕಷ್ಟ ಕೊಟ್ಟೆಯಪ್ಪ ಎಂದು ದು : ಖಿಸಿದರು .
ವಿಶೇಷತೆ : ಕಾಳಯ್ಯ , ಬೀರಯ್ಯ , ನೋವು ಮಾನಸಿಕ ಸಂಕಟದ ಅರಿವಾಗುತ್ತದೆ .
4. ಮಾಯಾದ ಮಳೆಯ ಕಳುಗಪ್ಪ
ಪ್ರಸ್ತಾವನೆ : ಪ್ರಸ್ತುತ ಈ ಸಾಲುನ್ನು “ ಮಕ್ಕಳಿಗೊಲಿದ ಮಾದೇವ ” ಎಂಬ ಜಾನಪದ ಶೈಲಿಯಲ್ಲಿರುವ “ ಮಲೆಯ ಮಾದೇಶ್ವರ ” ಎಂಬ ಮಹಾಕಾವ್ಯದಿಂದ ಆರಿಸಲಾಗಿದೆ .
ಸಂದರ್ಭ : ಪ್ರಸ್ತುತ ಈ ಸಲನ್ನು ಕಾರಯ್ಯ ಬಿಲ್ಲಯರನ್ನು ಪರೀಕ್ಷೆಗೆ ಗುರಿಪಡಿಸಲು ಮಾದೇವನು ಇಂದ್ರನ ಬಳಿಗೆ ಬಂದು ಹಳ್ಳ ಕೊಳ್ಳ ಎಲ್ಲಾ ತುಂಬಿ ಹರಿಯುವಂತೆ ರಭಸದಿಂದ ಮಾಯದ ಮಳೆ ಸುರಿಯುವಂತೆ ಮಾಡು ಎಂದು ಕೇಳಲು ಹೋದಾಗ ಮಾದೇವನು ಇಂದ್ರನಿಗೆ ಹೇಳಿದ ಮಾತು ಇದಾಗಿದೆ .
ವಿವರಣೆ : ಇಂದ್ರನ ಬಳಿಗೆ ಬಂದು ಮಾದೇವ ಭೂಮಿಯ ಮೇಲೆ ಎಲ್ಲವೂ ಕೊಚ್ಚಿ ಹೋಗುವಷ್ಟು ಭಯಂಕರ ಗುಡುಗು ಸಿಡಿಲಿನಿಂದ ಕೂಡಿದ ಮಾಯದ ಮಳೆ ಸುರಿವುವಂತೆ ಹೇಳುತ್ತಾನೆ .
ವಿಶೇಷತೆ : ಭಕ್ತರನ್ನು ಭಗವಂತನು ಪರೀಕ್ಷಿಸಿ ನಂತರ ತನ್ನ ಸಾನಿಧ್ಯಕ್ಕೆ ಕರೆದುಕೊಳ್ಳುವನು , ಹಾಗೂ ಆ ಭಕ್ತರ ಚರಿತ್ರೆಯನ್ನು ಜಗತ್ತಿಗೆ ಸಾರುವುದು ಜಾನಪದ ಶೈಲಿಯಲ್ಲಿ ಮೂಡಿ ಬಂದಿದೆ .
5. ಸತ್ವಂತವುಳ್ಳ ಬ್ಯಾಡ್ರ ಕನ್ನಯ್ಯ
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಮಕ್ಕಳಿಗೊಲಿದ ಮಾದೇವ ”ಎಂಬ ಜಾನಪದ ಶೈಲಿಯಲ್ಲಿರುವ “ ಮಲೆಯ ಮಾದೇಶ್ವರ ” ಎಂಬ ಮಹಾಕಾವ್ಯದಿಂದ ಆರಿಸಲಾಗಿದೆ .
ಸಂದರ್ಭ : ಮಾಯದ ಮಳೆಯಿಂದಾಗಿ ಎಲ್ಲವೂ ಕೊಚ್ಚಿ ಹೋಗುತ್ತಿದ್ದಾಗ ನೀರಿನ ಸುಳಿಗೆ ಮಾದೇವ ಸಿಕ್ಕಿ ಗಿರಗಿರನೆ ತಿರುಗುತ್ತಿದ್ದ ನೋಡಿ , ಸತ್ಯವಂತನಾದ ಬ್ಯಾಡರಕನ್ನಯ್ಯ ಸುತ್ತಮುತ್ತಲೂ ನೋಡಿ ಎಲ್ಲಿ ಮಾದೇವ ಹೊರಟು ಹೋಗುವನೋ ಎಂದು ಓಡಿ ಬರುತ್ತಾನೆ .
ವಿವರಣೆ : ಸತ್ವಂತ ಅಂದರೆ ಸತ್ಯವಂತನಾದ ಬ್ಯಾಡರ ಕನ್ನಯ್ಯ ಮಾದೇವನಿಗಾಗಿ ಪ್ರಾಣ ಕೊಡಲು ಸಿದ್ಧನಾಗಿದ್ದನು .
ವಿಶೇಷತೆ : ಜಾನಪದದ ಶೈಲಿಯಲ್ಲಿ ಮಾರ್ಮಿಕವಾಗಿ ವರ್ಣನೆಯಾಗಿದೆ .
6. ಕಣ್ಣಲ್ಲಿ ನೀರ ಕೆಡಗಿದರು .
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಮಕ್ಕಳಿಗೊಲಿದ ಮಾದೇವ ” ಎಂಬ ಜಾನಪದ ಶೈಲಿಯಲ್ಲಿರುವ “ ಮಲೆಯ ಮಾದೇಶ್ವರ ” ಎಂಬ ಮಹಾಕಾವ್ಯದಿಂದ ಆರಿಸಲಾಗಿದೆ .
ಸಂದರ್ಭ : ಮಾಯೆಯ ಮಳೆಯಿಂದ ಹಳ್ಳ ಕೊಳ್ಳ ಎಲ್ಲಾ ತುಂಬಿ ಪ್ರಾಣಿಗಳೆಲ್ಲ ಕೊಚ್ಚಿ ಹೋಗುವಾಗ ಮಾದೇವನನ್ನು ಸುಳಿ ಗಿರಗಿರನೆ ತಿರುಗಿಸಲಾರಂಬಿಸಿದಾಗ ಆತ ಬಲಿಯ ಕಲ್ಲನ್ನು ಬಿಗಿಯಾಗಿ ತಬ್ಬಿ ಹಿಡಿದನು , ಇದನ್ನು ಕಂಡ ಬಿಲ್ಲಯ್ಯ ಆತನ ಸ್ಥಿತಿ ಕಂಡು ದುಃಖಿಸುತ್ತಾ ಕಣ್ಣಲ್ಲಿ ನೀರ ಕೆಡಗಿದರು .
ವಿವರಣೆ : ಕಾರಯ್ಯ – ಬಿಲ್ಲಯ್ಯನಿಗೆ ಮಾದೇವ ಸ್ಥಿತಿ ಕಂಡ ದು : ಖವಾಗಿ ಸ್ವಲ್ಪ ನೀರು ತುಂಬಿತು , ಅವರು ದು : ಖದಿಂದ ಅಳಲು ಪ್ರಾರಂಭಿಸಿದರು .
ವಿಶೇಷತೆ : ಮಕ್ಕಳಿಗೆ ಮಾದೇವನ ಮೇಲಿದ್ದ ಪ್ರೀತಿಭಕ್ತಿ ಇಲ್ಲಿ ಕಂಡು ಬರುತ್ತದೆ .
7. ಹೆತ್ತವುನಂತೆ ಸಲುವಿದೆ
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಮಕ್ಕಳಿಗೊಲಿದ ಮಾದೇವ ” ಎಂಬ ಜಾನಪದ ಶೈಲಿಯಲ್ಲಿರುವ “ ಮಲೆಯ ಮಾದೇಶ್ವರ ” ಎಂಬ ಮಹಾಕಾವ್ಯದಿಂದ ಆರಿಸಲಾಗಿದೆ .
ಸಂದರ್ಭ : ಮಾದೇವನನ್ನು ಉಳಿಸಲು ಕಾರಯ್ಯ , ಬಿಲ್ಲಯ್ಯ ಓಡಿ ಹೋಗಿ ಮಾದೇವನನ್ನು ತಬ್ಬಿ ಹಿಡಿದು ಈ ಮೇಲಿನ ವಾಕ್ಯವನ್ನು ಹೇಳಿದರು .
ವಿವರಣೆ : ಕಾರಯ್ಯ – ಬಿಲ್ಲಯ್ಯನಿಗೆ ಮಾದೇಶ್ವರ ಹೆತ್ತ ತಾಯಿಯಂತೆ ಪ್ರೀತಿಯಿಂದ ಮಮತೆಯಿಂದ ಸಾಕಿ ಸಲುಹುತ್ತಿದುದ್ದನ್ನು ನೆನಪಿಸಿಕೊಳ್ಳುತ್ತಾರೆ .
ವಿಶೇಷತೆ : ತಾಯಿ ಮಕ್ಕಳ ಪ್ರಿತಿ ವಾತ್ಸಲ್ಯದ ಬಗ್ಗೆ ತಿಳಿಸಲಾಗಿದೆ .
8. ಗುಡಿಗೆ ಬಂದಾರು ಮಾದೇವ
ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಮಕ್ಕಳಿಗೊಲಿದ ಮಾದೇವ ” ಎಂಬ ಜಾನಪದ ಶೈಲಿಯಲ್ಲಿರುವ “ ಮಲೆಯ ಮಾದೇಶ್ವರ ” ಎಂಬ ಮಹಾಕಾವ್ಯದಿಂದ ಆರಿಸಲಾಗಿದೆ .
ಸಂದರ್ಭ : ಕಾರಯ್ಯ , ಬಿಲ್ಲಯ್ಯನ ಪ್ರೀತಿ ಭಕ್ತಿಯನ್ನು ಕಂಡು ಮಾಹಾದೇವನು ಇಬ್ಬರನ್ನು ಎಡಬಲದಲ್ಲಿ ತಬ್ಬಿ , ಮಕ್ಕಳನೆ ಹೆಗಲ ಮೇಲೆ ಹೊತ್ತುಕೊಂಡು ಗುಡಿಯ ಒಳಗೆ ಹೋದರು .
ವಿವರಣೆ : ಮಾದೇವ ಮಕ್ಕಳಿಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ಗುಡಿಯೊಳಗೆ ಹೋದರು .
ವಿಶೇಷತೆ : ಮಾದೇವ ಮಕ್ಕಳಿಬ್ಬರನ್ನು ಹೆಗಲ ಮೇಲೆ ಕೂರಿಸಿಕೊಂಡು ದೇವರಿಗೆ ಭಕ್ತರ ಅಗತ್ಯತೆಯೂ ಇದೆ . ಅದೆ ಭಕ್ತರಿಗೆ ದೇವರ ಅಗತ್ಯವಿದೆ ದೇವರು ತಮ್ಮ ಭಕ್ತರನ್ನೇ ಅತೀವ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ .
FAQ :
ಗಂಗೆ ಸುರಿಯುವ ರಭಸಕ್ಕೆ ಆಕಾಶ ಭೂಮಿ ಒಂದಾದವು
ಶಿಶು ಮಕ್ಕಳು ಹೂ ತರಲು ಕಡ್ಡಿ ಹಳ್ಳಕ್ಕೆ ಹೋಗಿದ್ದರು .
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.