1st P.U.C Kannada Tallanisadiru Kandya Talu Manave Notes | ಪ್ರಥಮ ಪಿ. ಯು.ಸಿ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಕನ್ನಡ ನೋಟ್ಸ್

ಪ್ರಥಮ ಪಿ.ಯು.ಸಿ ತಲ್ಲಣಿಸದಿರು ಕಂಡ್ಯ ತಾಳು ಮನವೇ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 1st PUC Kannada 5th Poem Tallanisadiru Kandya Talu Manave Notes Question Answer Summary Mcq Pdf Download in Kannada Medium Karnataka State Syllabus 2024, Kseeb Solutions For Class 11 Kannada Poem 5 Notes 1st Puc Kannada 5th Poem Notes Saramsha

Tallanisadiru Kandya Talu Manave Kannada Notes Pdf 2024

 

ತರಗತಿ : ಪ್ರಥಮ ಪಿ.ಯು.ಸಿ

ಕಾವ್ಯಾ ಭಾಗದ ಹೆಸರು: ತಲ್ಲಣಿಸದಿರು ಕಂಡ್ಯ ತಾಳು ಮನವೇ

ಕೀರ್ತನೆ ಕೀರ್ತನಕಾರ ಹೆಸರು: ಕನಕದಾಸರು

ತಲ್ಲಣಿಸದಿರು ಕಂಡ್ಯ ತಾಳು ಮನವೇ ನೋಟ್ಸ್‌ Tallanisadiru Kandya talu manave notes
1st PUC Kannada Tallanisadiru Kandya Taalu manave ತಲ್ಲಣಿಸದಿರು ಕಂಡ್ಯ ತಾಳು ಮನವೇ

ಕೀರ್ತನೆ ಕೀರ್ತನಕಾರ : ಕನಕದಾಸರು ( ೧೫೦೯-೧೬೦೭ )

ಕನಕದಾಸರು ಪ್ರಮುಖ ಕೀರ್ತನಕಾರರಲ್ಲಿ ಒಬ್ಬರು . ಪುರಂದರದಾಸರ ಸಮಕಾಲೀನರು . ಹಾವೇರಿ ಜಿಲ್ಲೆಯ ಬಾಡ ಇವರ ಜನ್ಮ ಸ್ಥಳ . ತಂದೆ ಬೀರಪ್ಪ , ತಾಯಿ ಬಚ್ಚಮ್ಮ . ತಿಮ್ಮಪ್ಪನಾಯಕನಾಗಿದ್ದ ಇವರು ಕನಕದಾಸರಾದದ್ದು ಐತಿಹ್ಯ . ಕಾಗಿನೆಲೆಯ ಆದಿಕೇಶವ ಇವರ ಆರಾಧ್ಯ ದೈವ .

ವಿಜಯನಗರದ ಪಾಳೆಯಗಾರರಾಗಿದ್ದು ಯುದ್ಧದಲ್ಲಿನ ಹಿಂಸೆಯನ್ನು ಕಂಡು ವೈರಾಗ್ಯದಿಂದ ಅಧಿಕಾರವನ್ನು ತ್ಯಜಿಸಿದರು . ಕೀರ್ತನೆ , ಉಗಾಭೋಗ , ಸುಳಾದಿಗಳನ್ನು ರಚಿಸಿದ್ದಾರೆ . ಮೋಹನತರಂಗಿಣಿ , ಹರಿಭಕ್ತಿಸಾರ , ನಳಚರಿತೆ , ರಾಮಧಾನ್ಯ ಚರಿತೆ ಎಂಬ ಕಾವ್ಯಗಳನ್ನು ರಚಿಸಿದ್ದಾರೆ. ‘ಕಾಗಿನೆಲೆಯಾದಿಕೇಶವ ‘ ಇವರ ಅಂಕಿತ .

ಲೋಕದ ಜಂಜಡಗಳಿಗೆ ಮನುಷ್ಯ ತಲ್ಲಣಿಸಬಾರದು . ಎಲ್ಲ ಜೀವಿಗಳನ್ನು ದೈವಶಕ್ತಿಯು ತಾಯಿಯ ರೀತಿಯಲ್ಲಿ ರಕ್ಷಿಸುತ್ತದೆ ಎಂಬುದನ್ನು ಹಲವು ಉದಾಹರಣೆಗಳ ಮೂಲಕ ಈ ಕೀರ್ತನೆ ಪ್ರಸ್ತುತ ಪಡಿಸುತ್ತದೆ .

ಪದಕೋಶ :

ತಲ್ಲಣ – ತಳಮಳ ; ಪವಳ – ಹವಳ , ನವರತ್ನಗಳಲ್ಲಿ ಒಂದು , ಕೆಂಪು ; ಲತೆ – ಬಳ್ಳಿ ; ಅರಗಿಳಿ- ( ಅರಸಗಿಳಿ ) ಮುದ್ದುಗಳಿ , ಅರಸಂಚೆ .

1st P.U.C Kannada Tallanisadiru Kandya Talu manave Notes Question Answer

I. ಒಂದು ವಾಕ್ಯದಲ್ಲಿ ಉತ್ತರಿಸಿ .

1. ಮೃಗ ಪಕ್ಷಿಗಳು ಎಲ್ಲಿ ಆಡುತ್ತಿದ್ದವು ?

ಮೃಗ ಪಕ್ಷಿಗಳೆಲ್ಲ ಅಡವಿಯಲ್ಲಿ ( ಕಾಡುಗಳಲ್ಲಿ ) ಆಡುತ್ತಿದ್ದವು .

2.ಅರಗಿಳಿಗೆ ಯಾವ ಬಣ್ಣವನ್ನು ಬರೆಯಲಾಗಿದೆ ?

ಅರಗಿಳಿಗೆ ಹಸುರು ಬಣ್ಣವನ್ನು ಬರೆಯಲಾಗಿದೆ .

3.ಕಪ್ಪೆಗಳು ಎಲ್ಲಿ ಹುಟ್ಟಿ ಕೂಗುತ್ತವೇ ?

ಕಲ್ಲಿನ ಪೊಟರೆಗಳಲ್ಲಿ ಕಪ್ಪೆಗಳು ಹುಟ್ಟಿ ಕೂಗುತ್ತವೆ .

4.ವೃಕ್ಷವು ಎಲ್ಲಿ ಹುಟ್ಟಿತ್ತು ?

ಬೆಟ್ಟದಾ ತುದಿಯಲ್ಲಿ ವೃಕ್ಷವು ಹುಟ್ಟಿತು .

5.ಯಾವ ತೆರೆದಿ ಸ್ವಾಮಿ ನಮ್ಮನ್ನು ಬಿಡದೆ ರಕ್ಷಿಸುವನು ?

ಜನನಿಯ ( ತಾಯಿ ) ತೆರದಿ ಸ್ವಾಮಿ , ನಮ್ಮನ್ನು ಬಿಡದೆ ರಕ್ಷಿಸುವನು .

tallanisadiru kandya talu manave prashn uttar

II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಮೃಗ ಪಕ್ಷಿಗಳನ್ನು ಸೌಆಮಿಯು ಹೇಗೆ ರಕ್ಷಿಸುತ್ತಾನೆ ?

ಮೃಗ ಪಕ್ಷಿಗಳಿಗೆಲ್ಲ ಅಲ್ಲಿ ಅಲ್ಲಿಯೇ ಅವುಗಳಿಗೆ ಬೇಕಾಗುವ ಆಹಾರವನ್ನು ಸಿಗುವಂತೆ ಮಾಡುತ್ತಾನೆ . ತಾಯಿ ಮಕ್ಕಳನ್ನು ಸಲಹುವಂತೆ ಆದಿಕೇಶವ ದೇವನು ಮೃಗ ಪಕ್ಷಿಗಳಿಗೆ ಬೇಕಾದ ಆಹಾರವನ್ನು ಕೊಟ್ಟು ಸಲಹುತ್ತಾನೆ .

2. ವೃಕ್ಷವನ್ನು ಆದಿಕೇಶವ ಹೇಗೆ ಸಲಹುತ್ತಾನೆ ?

ವೃಕ್ಷಗಳಿಗೆ ಕಾಲಕಾಲಕ್ಕೆ ನೀರೆರೆದು , ಅದು ಬೆಳೆಯಲು ಸರಿಯಾದ ಪ್ರಮಾಣದ ಬಿಸಿಲು , ನೀರುಗಳನ್ನು ಭಗವಂತನೇ ಮಳೆ ರೂಪದಲ್ಲಿ ನೀರು ಸುರಿಸಿ ಕೊಡುತ್ತಾನೆ . ಇದರಿಂದ ಸಸಿ ದೊಡ್ಡ ವೃಕ್ಷವಾಗಿ ಬೆಳೆಯುವಂತೆ ಆದಿಕೇಶವ ದೇವನು ಸದಾ ಕಾಲ ಸಲಹುವನು .

I ಐದು ಆರು ವಾಕ್ಯಗಳಲ್ಲಿ ಉತ್ತರಿಸಿ .

1 , ಕನಕದಾಸರು “ ತಲ್ಲಣಿಸದಿರು ಮನವೇ ” ಎಂದು ಹೇಳಲು ಕಾರಣವೇನು ?

ಲೋಕದಲ್ಲಿ ಹಲವಾರು ಸಮಸ್ಯೆಗಳು ಪ್ರತಿಕ್ಷಣದಲ್ಲಿಯೂ ನಮ್ಮನ್ನು ಬೆಂಬಿಡದೆ ಕಾಡುತ್ತವೆ , ಇದರಿಂದ ನಮ್ಮ ಮನಸ್ಸು ವಿಚಲಿತಗೊಂಡು ತಳಮಳಗೊಳ್ಳುತ್ತದೆ . ಈ ತಳಮಳದಿಂದಾಗಿ ನಮಗೆ ಬೇಸರ , ಕೋಪ , ನಿರಾಸೆ ಮೊದಲಾದ ಭಾವಗಳು ನಮ್ಮ ಮನದಲ್ಲಿ ಹುಟ್ಟುತ್ತವೆ . ಆದರೆ ದೈವಶಕ್ತಿ ನಮ್ಮ ಎಲ್ಲಾ ಜಂಜಾಟಗಳನ್ನು ತಾಯಿಯು ರೀತಿಯಲ್ಲಿ ನಮ್ಮೊಟ್ಟಿಗಿದ್ದು ಅದರಿಂದ ನಾವು ಪಾರಾಗುವಂತೆ ರಕ್ಷಿಸುತ್ತದೆ , ಆದ್ದರಿಂದ ಕನಕದಾಸರು ಆದೈವ ಸಕ್ತಿಯನ್ನು ಸ್ಮರಿಸು ಹೇ ಮನವೆ ತಳಮಳಗೊಳ್ಳದಿರು ಆದೈವ ಶಕ್ತಿ ನಮ್ಮನ್ನು ಖಂಡಿತ ರಕ್ಷಿಸುತ್ತದೆ ಇದಕ್ಕೆ ಸಂಶಯ ಬೇಡ ಎಂದು ಹೇಳಿದ್ದಾರೆ .

2. “ ಎಲ್ಲವನ್ನು ರಕ್ಷಿಸುವ ದೇವರು ನಮ್ಮನ್ನು ರಕ್ಷಿಸುತ್ತಾನೆ ” ಎಂಬುದನ್ನು ದಾಸರು ಹೇಗೆ ಹೇಳಿದ್ದಾರೆ ?

ಎಲ್ಲವನ್ನು ರಕ್ಷಿಸುವ ದೇವರು ನಮ್ಮನ್ನು ರಕ್ಷಿಸುತ್ತಾನೆ , ಎಲ್ಲೊ ಬೆಟ್ಟದ ಮೇಲೆ ಬೆಳೆದ ಸಸಿಯನ್ನು ಸಲಹುತ್ತ ಅದನ್ನು ಬೆಳೆಸಿ ದೊಡ್ಡ ವೃಕ್ಷವನ್ನಾಗಿ ಮಾಡಿದ ದೇವರನ್ನು ನಮ್ಮನ್ನು ಕೂಡ ರಕ್ಷಿಸುತ್ತನೆ , ಕಾಡಿನಲ್ಲಿರುವ ಮೃಗ ಪಕ್ಷಿಗಳಿಗೆಲ್ಲ ಅಡಿಗಡಿಗೆ ಆಹಾರ ವದಗಿಸಿಕೊಟ್ಟ ತಾಯಿ ಮಕ್ಕಳನ್ನು ಕಾಪಾಡುವ ರೀತಿಯಲ್ಲಿ ಕಾಪಾಡುವ ಭಗವಂತ ನಮ್ಮನ್ನು ಕಾಪಾಡದೇ ಬಿಡುವನೇ ಖಂಡಿತ ಎಲ್ಲರನ್ನು ರಕ್ಷಿಸುವಂತೆ ಭಗವಂತ ನಮ್ಮನ್ನು ರಕ್ಷಿಸುತ್ತಾನೆ .

FAQ :

ಮೃಗ ಪಕ್ಷಿಗಳು ಎಲ್ಲಿ ಆಡುತ್ತಿದ್ದವು ?

ಮೃಗ ಪಕ್ಷಿಗಳೆಲ್ಲ ಅಡವಿಯಲ್ಲಿ ( ಕಾಡುಗಳಲ್ಲಿ ) ಆಡುತ್ತಿದ್ದವು .

ಯಾವ ತೆರೆದಿ ಸ್ವಾಮಿ ನಮ್ಮನ್ನು ಬಿಡದೆ ರಕ್ಷಿಸುವನು ?

ಜನನಿಯ ( ತಾಯಿ ) ತೆರದಿ ಸ್ವಾಮಿ , ನಮ್ಮನ್ನು ಬಿಡದೆ ರಕ್ಷಿಸುವನು .

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

1 thoughts on “1st P.U.C Kannada Tallanisadiru Kandya Talu Manave Notes | ಪ್ರಥಮ ಪಿ. ಯು.ಸಿ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಕನ್ನಡ ನೋಟ್ಸ್

Leave a Reply

Your email address will not be published. Required fields are marked *

rtgh