1st P.U.C Kannada Halubidal Kalmaram Karaguvante Notes| ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್

1st PUC Kannada Question Answer Halubidal Kalmaram Karaguvante 4th chapter Notes pdf download ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ ಪ್ರಶ್ನೋತ್ತರ

ತರಗತಿ: ಪ್ರಥಮ ಪಿ.ಯು.ಸಿ

ಕಾವ್ಯ-ಕವಿ ಹೆಸರು: ಲಕ್ಷ್ಮೀಶ

ಕಾವ್ಯಾ ಭಾಗದ ಹೆಸರು: ಹಲುಬಿದಳ್‌ ಕಲ್ಮರಂ ಕರಗುವಂತೆ

1st Puc Kannada Question Answer Notes

ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್ 1st Puc kannada question answer
annada Question Answer Halubidal Kalmrama Karaguvante Notes ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್

ಕಾವ್ಯ – ಕವಿ : ಲಕ್ಷ್ಮೀಶ ( ೧೫೫೦ )

ಲಕ್ಷ್ಮೀಶನ ಜನ್ಮಸ್ಥಳ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು , ವಿದ್ವಾಂಸರಲ್ಲಿ ಇವನ ಜನ್ಮಸ್ಥಳದ ಬಗ್ಗೆ ಭಿನ್ನಾಭಿಪ್ರಾಯಗಳಿವೆ . ಇವನಿಗೆ ‘ ಕರ್ನಾಟಕ ಕವಿಚೂತವನಚೈತ್ರ ‘ ಮತ್ತು ‘ ಉಪಮಾಲೋಲ’ಎಂಬ ಬಿರುದುಗಳಿವೆ . ವಾರ್ಧಕ ಷಟ್ಟದಿ ಇವನ ಕಾವ್ಯದ ಛಂದಸ್ಸು .

ಬಂಧು – ಮಿತ್ರರನ್ನು ಕೊಂದ ಪಾಪವನ್ನು ಪರಿಹಾರ ಮಾಡಿಕೊಳ್ಳುವ ಸಲುವಾಗಿ ಪಾಂಡವರು ಅಶ್ವಮೇಧಯಾಗವನ್ನು ಮಾಡಿದ ಪ್ರಸಂಗವೇ ಜೈಮಿನಿ ಭಾರತದ ಕಥಾವಸ್ತು . ವೈಶಂಪಾಯನನ ಶಿಷ್ಯನಾದ ಜೈಮಿನಿಮುನಿಯು ಜನಮೇಜಯ ರಾಜನಿಗೆ ಈ ಕಥೆಯನ್ನು ಹೇಳುತ್ತಾನೆ .

ಮಹಾಭಾರತದಲ್ಲಿ ಅಶ್ವಮೇಧ ಯಜ್ಞದ ಕುದುರೆಯನ್ನು ಕಟ್ಟಿ ಹಾಕಿದ ಬಬ್ರುವಾಹನ ಅರ್ಜುನನೊಡನೆ ಯುದ್ಧಕ್ಕೆ ನಿಲ್ಲುತ್ತಾನೆ . ಈ ಸಂದರ್ಭದಲ್ಲಿ ತಂದೆ – ಮಕ್ಕಳ ನಡುವೆ ನಡೆದ ಯುದ್ಧಗಳನ್ನು ದಾಖಲಿಸುವ ಕವಿ , ಲವ – ಕುಶರ ಯುದ್ಧವನ್ನು ವರ್ಣಿಸುತ್ತಾನೆ .

ಆಗ ಉಲ್ಲೇಖಿತವಾದ ಸೀತಾ ಪರಿತ್ಯಾಗದ ಸನ್ನಿವೇಶ ಪ್ರಸ್ತುತ ಪದ್ಯಭಾಗ , ಗೂಢಚಾರರ ಮಾತು ಕೇಳಿದ ರಾಮ , ಮನೋವ್ಯಾಕುಲಗೊಂಡು ಸೀತೆಯನ್ನು ಕಾಡಿಗೆ ಬಿಟ್ಟು ಬರುವಂತೆ ಲಕ್ಷ್ಮಣನಿಗೆ ಆಜ್ಞಾಪಿಸುತ್ತಾನೆ . ರಾಮ ತನ್ನನ್ನು ಪರಿತ್ಯಾಗ ಮಾಡಿದ ವಿಷಯ ತಿಳಿದ ಸೀತೆಯ ದುಃಖ – ದುಗುಡಗಳು ಹಾಗೂ ಲಕ್ಷ್ಮಣನ ಸಂದಿಗ್ಧತೆಗಳು ಇಲ್ಲಿವೆ . ಸೀತೆಯ ದುಃಖದಲ್ಲಿ ಪ್ರಕೃತಿ , ಪ್ರಾಣಿ ಪಕ್ಷಿಗಳು ಹೇಗೆ ಭಾಗಿಯಾಗುತ್ತವೆಂಬುದನ್ನು ಕಾಣಬಹುದು .

ಪದಕೋಶ :

೧. ಸೌಮಿತ್ರಿ – ಲಕ್ಷ್ಮಣ ; ಪತಾಕೆ – ಬಾವುಟ , ಧ್ವಜ ; ನೆರವಿ – ಗುಂಪು ; ಪರಿಸು – ಮುನ್ನಡೆಸು ; ಕಾಳಟ್ಟೆ- ಕಾಡುದಾರಿ .

೨. ಮಂದಾಕಿನಿ – ಗಂಗಾನದಿ ; ಪೊಡಮಡು – ನಮಸ್ಕರಿಸು ; ನಾವೆ – ದೋಣಿ : ಘೂರ್ಮಿಸು – ಗರ್ಜಿಸು ; ಹಳು – ಕಾಡು ; ಕರ್ಕಶಮಾರ್ಗ – ಕಠಿಣದಾರಿ .

೩. ಮಖ – ಯಜ್ಞ ; ದಿವ- ಸ್ವರ್ಗ ; ಪಯೋನಿಧಿ- ಹಾಲ್ಗಡಲು ; ನಿರುತ – ನಿರಂತರ ,ಸತತ ; ಸೋಮ – ಸೋಮಲತೆ , ಚಂದ್ರ , ಅರ್ಕ – ಸೂರ್ಯ , ಎಕೈಗಿಡ ; ಶಿಖಿ-ಅಗ್ನಿ , ನವಿಲು ; ಸಹಸ್ರಾಕ್ಷ – ಇಂದ್ರ , ನವಿಲು ; ಹರಿ – ವಿಷ್ಣು , ಸಿಂಹ ; ಶಿವ ಶಂಕರ , ಮುಳ್ಳು ; ಧುರ – ಯುದ್ಧ : ನಭ – ಆಕಾಶ ; ಶರ – ಹುಲ್ಲು , ಬಾಣ ; ಪುಂಡರೀಕ-ಹುಲಿ , ಕಮಲ ; ವಿದ್ರುಮ – ಮರ , ಹವಳ ; ಋಕ್ಷ – ಕರಡಿ , ನಕ್ಷತ್ರ.

೪. ಸುಹವಿ – ಹವಿಸ್ಸು ; ದಾರುದಾರುಣದ – ಅತಿಭಯಂಕರವಾದ ; ಯಜ್ಞಕುಂಡ -ಅಗ್ನಿಹೋತ್ರ

೫. ಉರೆ – ಬಹಳ ; ತರಣಿ – ಸೂರ್ಯ : ಬೇಗುದಿ – ಸಂತಾಪ .

೬. ಸೀವರಿಸು – ಸಹಿಸಲಾರದೆ ; ವಿಭು – ರಾಜ ; ವಿಪಿನ-ಕಾಡು ; ಒಯ್ಯೋಯ್ಯನೆ -ಮೆಲ್ಲಮೆಲ್ಲನೆ .

೭. ಫಲಿತ ಕದಳಿ – ಗೊನೆಯಿರುವ ಬಾಳೆಗಿಡ ; ಹಮ್ಮಿಸು – ಪ್ರಜ್ಞೆತಪ್ಪು .

೮. ರಘುದ್ವಹಂ – ರಘುವಂಶ ಶ್ರೇಷ್ಠ : ನೆಗಳ್ದ – ಶ್ರೇಷ್ಠವಾದ ; ನಿರೂಪ – ಆಜ್ಞೆ ; ಕಣ್ಬಟ್ಡೆ -ಮುಂದಿನ ದಾರಿ .

೯. ಕೌಶಿಕ – ವಿಶ್ವಾಮಿತ್ರ

೧೦. ಕಾಕುತ್ಸ್ಥ-ರಾಮ ; ತಳುವು – ತಡಮಾಡು .

೧೧. ಪಾತಕ – ಪಾಪ : ಆರ್ತ -ದುಃಖಿತೆ .

೧೨. ತೃಣ – ಹುಲ್ಲು ; ಗುಲ್ಮ – ಪೊದೆ .

೧೩. ಧರಣಿಸುತೆ – ಸೀತೆ ; ಮೈಯುಡುಗಿ – ದೇಹವನ್ನು ಕುಗ್ಗಿಸಿ ; ನಿಜವೈರ -ತಮ್ಮ ತಮ್ಮಲ್ಲಿನ ವೈರ .

೧೪. ಪಥ – ದಾರಿ ; ಹಲುಬು -ದುಃಖಿಸು.

೧೫. ಯೂಪ -ಯಜ್ಞಪಶುವನ್ನು ಕಟ್ಟುವ ಕಂಬ ; ಸನ್ನುತ ಪ್ರಸಿದ್ಧ ; ಬನ್ನ -ದುಃಖ ; ಬಗೆಗೆಟ್ಟು – ದಿಕ್ಕುತೋಚದೆ ಪಾಡಳಿದು – ಅನಾಥವಾಗಿ , ನೆಲೆಗೆಟ್ಟು.

೧೬. ಯುಗಳ – ಅವಳಿ ; ಓವು – ರಕ್ಷಿಸು ; ರಾವಣಾರಿ ( ರಾವಣ + ಅರಿ ) -ರಾಮ .

1st puc kannada question answer Halubidal Kalmaram Karaguvante

I. ಒಂದು ವಾಕ್ಯದಲ್ಲಿ ಉತ್ತರಿಸಿ .

1. ಲಕ್ಷ್ಮಣನ ಮಾತು ಕೇಳಿದ ಸೀತೆ ಭೂಮಿಗೆ ಹೇಗೆ ಬಿದ್ದಳು ?

ಲಕ್ಷ್ಮಣನ ಮಾತು ಕೇಳಿದ ಸೀತೆ ಬುಡಕಡಿದ ಬಾಳೆಗಿಡದಂತೆ ನೆಲಕ್ಕೆ ಉರುಳಿದಳು .

2. ಕಾಡಿನಲ್ಲಿ ತನಗೆ ಯಾರ ನೆರವುಂಟೆಂದು ಸೀತೆ ಹೇಳುತ್ತಾಳೆ ?

ಕಾಡಿನಲ್ಲಿರುವಾಗ ಮೃಗ ಪಕ್ಷಿಗಳು ತನಗೆ ನೆರವುಂಟೆಂದು ಸೀತೆ ಹೇಳುತ್ತಾಳೆ .

3. ವಾಲ್ಮೀಕಿ ಏನನ್ನು ಹುಡುಕುತ್ತಾವನಕ್ಕೆ ಬಂದನು ?

ವಾಲ್ಮೀಕಿ , ಯಜ್ಞಕ್ಕೆ ಬೇಕಾಗುವ ಸಮ್ಮತ್ತುಗಳನ್ನು ಆರಿಸಲು ಶಿಷ್ಯರೊಂದಿಗೆ ವನಕ್ಕೆ ಬಂದರು .

4. ರಾಮನ ಆಜ್ಞೆ ಏನು ?

ಸೀತೆಯನ್ನು ಒಂಟಿಯಾಗಿ ಕಾಡಿನಲ್ಲಿ ಬಿಟ್ಟು ಬರಬೇಕೆಂದು ರಾಮನ ಆಜ್ಞೆಯಾಗಿತ್ತು .

5. ಸೌಮಿತ್ರಿ ಸೀತೆಯನ್ನು ಎಲ್ಲಿಗೆ ಕರೆದುಕೊಂಡು ಹೋದನು ?

ಸೌಮಿತ್ರಿ ಸೀತೆಯನ್ನು ದಟ್ಟವಾದ ಕ್ರೂರ ಮೃಗಗಳಿಂದ ಕೂಡಿದ ಅರಣ್ಯಕ್ಕೆ ಕರೆದುಕೊಂಡು ಹೋದನು .

6. ಸೀತೆ ಲಕ್ಷ್ಮಣನಿಗೆ ಏನೆಂದು ಹಾರೈಸಿ ಬೀಳ್ಕೊಟ್ಟಳು ?

ನೀನು ಹೋಗುವ ಮಾರ್ಗದಲ್ಲಿ ಅಡಿಗಡಿಗೂ ಸುಖಮಯವಾಗಲೆಂದು ಸೀತೆ ಲಕ್ಷ್ಮಣನಿಗೆ ಹಾರೈಸಿದಳು .

7. ಸೀತೆಯನ್ನು ಆಶ್ರಮಕ್ಕೆ ಕರೆತಂದವರು ಯಾರು ?

ಸೀತೆಯನ್ನು ಆಶ್ರಮಕ್ಕೆ ಕರೆತಂದವರು ವಾಲ್ಮೀಕಿ ಋಷಿಗಳು .

8.ಸೀತೆ ಯಾರಲ್ಲಿ ತಪ್ಪಿಲ್ಲವೆಂದು ಹೇಳುತ್ತಾಳೆ ?

ರಾಮನಲ್ಲಾಗಲಿ , ಲಕ್ಷ್ಮಣನಲ್ಲಾಗಲಿ ತಪ್ಪಿಲ್ಲವೆಂದು ಸೀತೆ ಹೇಳುತ್ತಾಳೆ .

9.ರಾವಣಾರಿ ಎಂದರೆ ಯಾರು ?

ರಾವಣಾರಿ ಎಂದರೆ ರಾಮ .

10. ಭೂದೇವಿಯ ಮಗಳು ಯಾರು ?

ಭೂದೇವಿಯ ಮಗಳು ಸೀತೆ .

II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಸೀತೆ ಪ್ರವೇಶಿಸಿದ ಕಾಡು ಹೇಗಿತ್ತು ?

ಸೀತೆ ಪ್ರವೇಶಿಸಿದ ಕಾಡು ಭಯಂಕರವಾದ ಕ್ರೂರ ಪ್ರಾಣಿಗಳಿಂದ ತುಂಬಿತ್ತು ಅಲ್ಲಿನ ಮೃಗ , ಪಕ್ಷಿಗಳು ಭಯಂಕರವಾಗಿ ಕೂಗುತ್ತಿದ್ದವು . ಗಿಡಮರಗಳು ಗಾಳಿ ಬೀಸಿದಾಗ ವಾಲಾಡುತ್ತಿದ್ದ ಹಾಗೂ ಅಲ್ಲಾಡುವಾಗ ಆಗುತ್ತಿದ್ದ ಶಬ್ದ ಕಂಡು ಬೆಚ್ಚಿ ಬೀಳುತ್ತಿದ್ದಳು .

2. ಲಕ್ಷಣ ದು : ಖಿತನಾಗಲು ಕಾರಣವೇನು ?

ಕಾಡು , ಕ್ರೂರಪ್ರಾಣಿಗಳಿಂದ ತುಂಬಿದ್ದು ಅಲ್ಲಿನ ಮೃಗ – ಪಕ್ಷಿಗಳು ಭಯಂಕರವಾಗಿ ಕೂಗುತ್ತಿತ್ತು . ಮರಗಳು ಅಲಗಾಡುವುದು ಆಗ ಬೀಸುವ ಶಬ್ದ ಮತ್ತಷ್ಟು ಭಯಂಕರವಾಗಿತ್ತು . ಇಂಥಹ ಕಾಡಿನಲ್ಲಿ ಗರ್ಭಿಣಿಯಾದ ಸೀತಾ ಮಾತೆಯನ್ನು ಬಿಟ್ಟು ಹೋಗುವುದಾದರೂ ಹೇಗೆ ಎಂದು ದು : ಖಿತನಾದನು .

3. ಮೂರ್ಛಿತಳಾದ ಸೀತೆಯನ್ನು ಲಕ್ಷ್ಮಣ ಹೇಗೆ ಉಪಚರಿಸಿದನು ?

ಮೂರ್ಛಿತಳಾದ ಸೀತೆಯನ್ನು ಲಕ್ಷ್ಮಣನು ತಣ್ಣೀರನ್ನು ಎಲೆಗಳಿಂದ ಚುಮುಕಿಸಿ , ತನ್ನ ಸೆರಗಿನಿಂದ ಗಾಳಿ ಬೀಸಿ , ತಾನು ರಾಮನ ಸೇವಕನಾಗಿ ಆತನ ಸೇವೇ ಮಾಡಿದುದೇ ನಿಜವಾದಲ್ಲಿ ಸೀತಾಮಾತೆಯು ಎಚ್ಚರವಾಗಲಿ ಎಂದು ದುಃಖಿಸುತ್ತಾನೆ . ಸೀತಾಮಾತೆ ಎಚ್ಚರಗೊಂಡು ದು : ಖಿಸುವಳು .

4 . ಸೀತೆ ಸೌಮಿತ್ರಿಯನ್ನು ಹಿಂತಿರುಗಿ ಹೋಗೆಂದು ಏಕೆ ಹೇಳಿದಳು ?

ಸೀತೆ ಸೌಮಿತ್ರಿಯನ್ನು ಮಾರ್ಗವಾಗಿ ಯಾವ ತೊಂದರೆಯಾಗದಿರಲೆಂದು ಹರಸಿ ಅಲ್ಲಿ ರಾಘವ ಏಕಾಂಗಿಯಾಗಿ ದುಃಖಿಸುತ್ತಿರುತ್ತಾನೆ . ನೀನು ಬೇಗ ಹಿಂತಿರುಗಿ ಹೋಗು ಎಂಬುದಾಗಿ ಲಕ್ಷ್ಮಣನಿಗೆ ಹೇಳಿದಳು .

5. ಸೀತೆಯನ್ನು ಕಾಡಿನ ಪ್ರಾಣಿಗಳು ಹೇಗೆ ಉಪಚರಿಸಿದವು ?

ಲಕ್ಷ್ಮಣನು ಹಿಂತಿರುಗಿದ ಮೇಲೆ ಸೀತೆಯ ದುಃಖ ಮತ್ತಷ್ಟು ಹೆಚ್ಚಾಯಿತು . ಮುಂದೆ ದಾರಿ ಕಾಣದೆ ತಾನೇನು ಮಾಡಬೇಕೆಂದು ತಿಳಿಯದೆ ರೋಧಿಸುತ್ತಿರಲು ಕಾಡಿನ ಪ್ರಾಣಿಗಳೆಲ್ಲವೂ ಆಕೆಯನ್ನು ಸುತ್ತುವರೆದು , ತಲೆಗತ್ತಿಸಿ ತಾವು ಕೂಡ ರೋಧಿಸುತ್ತಿದ್ದವು . ಆಕೆಗೆ ತೊಂದರೆಯಾಗದಂತೆ ಆಕೆಯ ಬಳಿಯಲ್ಲಿಯೇ ಕುಳಿತು ಸಂತೈಸಿದವು .

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1 ಸೀತೆ – ಲಕ್ಷ್ಮಣರು ಮಹಾರಣ್ಯವನ್ನು ಪ್ರವೇಶಿಸಿದ ಸನ್ನಿವೇಶವನ್ನು ವಿವರಿಸಿ .

ಸೀತೆ ಹಾಗೂ ಲಕ್ಷ್ಮಣರು ರಥವೇರಿ ಅಯೋಧ್ಯೆಯನ್ನು ಬಿಟ್ಟು ಗಂಗಾನದಿ ತೀರಕ್ಕೆ ಬಂದು ಅಲ್ಲಿ ಸ್ನಾನ ಮಾಡಿ ಋಷ್ಯಾಶ್ರಮದೆಡೆ ಹೊರಟರು , ಆದರೆ ಲಕ್ಷ್ಮಣ ಕರೆದುಕೊಂಡು ಹೋಗುತ್ತಿದ್ದುದು ಕಾಡಿನ ದಾರಿಯಾಗಿದ್ದು ಕ್ರೂರ ಮೃಗ ಪಕ್ಷಿಗಳ ಕೂಗು ಭಯಂಕರವಾಗಿ ಕೇಳಿ ಬರುತ್ತಿತ್ತು . ಎಲ್ಲಿಯೂ ಯಜ್ಞಕುಂಡಗಳಾಗಲಿ , ವೇದಶಾಸ್ತ್ರಗಳ ಮಂತ್ರ ಗೋಷ್ಠವಾಗಲಿ ಕೇಳಿಬರುತ್ತಿರಲಿಲ್ಲ ಋಷಿಗಳಾಗಲಿ ಅಥವಾ ಋಷಿ ಕುಠೀರಗಳಾಗಲಿ ಅಲ್ಲಿರಲಿಲ್ಲ . ಕೇಳಿಸುತ್ತಿದ್ದು ಪ್ರಾಣಿ ಪಕ್ಷಿಗಳ ಭಯಂಕರ ಕೂಗು ಮಾತ್ರ ದಟ್ಟವಾದ ಮರಗಿಡಗಳಿಂದ ಗಾಳಿಬೀಸಿದಾಗಲೂ ಭಯಂಕರ ಸದ್ದು ಕೇಳಿ ಬರುತ್ತಿತ್ತು .

2. ಕಾಡಿನಲ್ಲಿ ಜಾನಕಿ ಏನೇನು ಕಣಲು ಬಯಸಿದಳು ?

ಕಾಡಿನಲ್ಲಿ ಜಾನಕ್ಕೆ ಋಷ್ಯಾಶಮಗಳನ್ನು ಋಷಿಗಳು , ಋಷಿಪತ್ನಿಯರು , ಋಷಿ ಕುಮಾರರನ್ನು ಹಾಗೂ ಯಜ್ಞ ಕುಂಡಗಳನ್ನು ಯಜ್ಞಕುಂಡದಿಂದ ಹೊರಟ ದೂಮ ಹಾಗೂ ವಾಸನೆ ಹಾಗೂ ವೇದ ಘೋಷಗಳು ಮುಂತಾದವುಗಳನ್ನು ಕಾಣಲು ಬಯಸಿದಳು .

3. ಸೀತೆಯನ್ನು ಕಾಡಿನಲ್ಲಿ ಬಿಡಲು ಬಂದ ಲಕ್ಷ್ಮಣನ ಬೇಗುದಿ ಹೇಗಿತ್ತು ?

ಸೀತೆಯನ್ನು ಕಾಡಿನಲ್ಲಿ ಬಿಡಲು ಬಂದ ಲಕ್ಷ್ಮಣನ ಬೇಗುದಿ ಅಸಹನೀಯವಾಗಿತ್ತು . ಏಕೆಂದರೆ ಒಂದೆಡೆ ರಾಜ ಹಾಗೂ ಅಣ್ಣನಾದ ರಾಮನ ಆಜ್ಞೆ ಮತ್ತೊಂದೆಡೆ ಮಾತ್ರ ಸ್ವರೂಪಿಸಿ , ಅದರಲ್ಲೂ ಗರ್ಭಿಣಿ ಶೀತೆಯನ್ನು ಕಾಡಿನಲ್ಲಿ ಏಕಾಂಗಿಯಾಗಿ ಬಿಟ್ಟು ಹೋಗುವುದು , ಸೀತೆ ಕಾಡಿನ ಆ ಕ್ರೂರ ಮೃಗಗಳ ಭಯಂಕರ ಶಬ್ದದಿಂದ ಹೆದರಿದ್ದಳು . ಇಂತಹ ಸಂದರ್ಭದಲ್ಲಿ ಒಂಟಿಯಾದ ಒಂದು ಹೆಣ್ಣನ್ನು ಬಿಟ್ಟು ಹೋಗುವುದಾದರೂ ಹೇಗೆ ? ಎಂಬುದಾಗಿ ಕಂನಿ ಸುರಿಸುತ್ತಿದ್ದನು

4. ರಾಮನ ಆಜ್ಞೆಯನ್ನು ಲಕ್ಷ್ಮಣನು ಸೀತೆಗೆ ಹೇಗೆ ತಿಳಿಸಿದನು ?

ಸೀತೆ ಕಾಡಿನ ದಾರಿ ಹಿಡಿದ ಲಕ್ಷ್ಮಣನಿಗೆ ಇಲ್ಲಿ ತಪೌವನಗಲಿಲ್ಲ , ಋಷಿಕುಮಾರರಿಲ್ಲ . ವೇದ ಗೋಷ್ಠಗಳ ಬದಲು ಕಾಡುಮೃಗಗಳ ಧ್ವನಿಗಳು ಕೇಳಿಬರುತ್ತಿವೆಯೆಲ್ಲಾ ಎಂದು ಕೇಳಿದಾಗ ಲಕ್ಷ್ಮಣ ತಲೆಬಾಗಿಸಿ , ಕಂಬನಿ ತುಂಬಿ ರಘುರಾಮನ ಅಗಸನ ಮಾತಿಗೆ ನೊಂದು ತಮ್ಮನ್ನು ಕಾಡಿಗೆ ಬಿಟ್ಟು ಬರುವಂತೆ ಆಜ್ಞೆ ಮಾಡಿದ್ದಾನೆಂದು ತಿಳಿಸಿದನು .

5. ಸೀತೆ ಹಿಂದಿನ ಘಟನೆಗಳನ್ನು ನೆನೆಪಿಸಿಕೊಂಡು ಹೇಗೆ ದು : ಖಿಸುತ್ತಾಳೆ ?

ಮಿಥಿಲೆಯ ರಾಜಕುಮಾರಿ , ಅಯೋಧ್ಯೆ ಮಹಾರಾಣಿ ಇಂದು ಕಾಡಿನ ಪಾಲು , ಅಂದು ರಾವಣನ ಕುತಂತ್ರದಿಂದ ಏಕಾಂಗಿ ಆದರೆ ಇಂದು ಪ್ರಾಣ ತ್ಯಜಿಸಲು ಕೂಡ ಅಸಾಧ್ಯವಾದ ಪರಿಸ್ಥಿತಿ , ಗರ್ಭಿಣಿಯಾಗಿರುವುದರಿಂದ ಬಣ ಹತ್ಯೆ ಮಹಾಪಾಪವಾಗುವುದು , ರಾಜಕುಮಾರರಾಗಿ ಜನ್ಮ ಪಡೆಯಬೇಕಾದ ತನ್ನ ಕಂದಮ್ಮಗಳು ಕಾಡಿನಲ್ಲಿ ಜನಿಸುವಂತಾಗಿದೆಯಲ್ಲಾ ಎಮದು ದು : ಖಿಸುತ್ತಾಳೆ .

6. ಕಾಡಿನಲ್ಲಿ ಸೀತೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಲಕ್ಷ್ಮಣನು ಯಾರಿಗೆ ಹೇಗೆ ವಹಿಸುತ್ತಾನೆ ?

ಕಾಡಿನಲ್ಲಿ ಸೀತೆಯನ್ನು ರಕ್ಷಿಸುವ ಜವಾಬ್ದಾರಿಯನ್ನು ಲಕ್ಷ್ಮಣನು ಕಾಡಿನ ವೃಕ್ಷಗಳಿಗೆ ಅಲ್ಲಿದ್ದ ಮೃಗ – ಪಕ್ಷಿಗಳಿಗೆ ಅಷ್ಟದಿಕ್ಷಾಲರಿಗೆ , ಪಂಚಭೂತಗಳಿಗೆ ವಹಿಸುತ್ತಾನೆ

7. ಸೀತೆ ಕಲ್ಮರಂ ಕರಗುವಂತೆ ದು : ಖಿಸಿದ ಪರಿಣಾಮವನ್ನು ವಿವರಿಸಿ .

ಏಕಾಂಗಿಯಾದ ಸೀತೆ ಸುತ್ತುಮುತ್ತಲೂ ನೋಡಿ ದೂಳಿನ ನೆಲದಲ್ಲೇ ಕುಸಿದ ಮುಂದೆ ನನಗೆ ದಾರಿಯಾವುದು ಎಂದು ರೋಧಿಸುತ್ತಾ ಬಿಚ್ಚಿದ ಮುಡಿಯ ಕಡೆಗೂ ಗಮನ ಕೊಡದೆ ಮಿಥಿಲರಾಜನ ಮಗಳ ಹುಟ್ಟಿ ರಘುಕುಲದ ಸೊಸೆಯಾಗಿ ಈ ದಟ್ಟವಾದ ಅಡವಿಯಲ್ಲಿ ರೋದಿಸುವ ಸ್ಥಿತಿ ಒದಗಿಬಂತೆ ಹೇ ವಿಧಿಯೇ ಎಂದು ಕಲ್ಮರಂ ಕರಗುವಂತೆ ಹಲುಬಿದಳು .

8. ವಾಲ್ಮೀಕಿ ಸೀತೆಯನ್ನು ಹೇಗೆ ಸಂತೈಸುತ್ತಾನೆ ?

ವಾಲ್ಮೀಕಿ ಸೀತೆಯನ್ನು ಕಂಡು ‘ ದೇವಿ ‘ ಶೋಕವನ್ನು ಬಿಡು , ತಮ್ಮ ದಿವ್ಯ ದೃಷ್ಟಿಯಿಂದ ನೋಡಿ ನೀನು ಇಬ್ಬರು ಪುತ್ರರತ್ನರಿಗೆ ಜನ್ಮ ನೀಡುವೆ , ನನ್ನನ್ನು ಸಂದೇಹದಿಂದ ನೋಡದಿರಿ ನಿನ್ನ ತಂದೆಯೆಂದು ತಿಳಿ ನಮ್ಮ ಆಶ್ರಮಕ್ಕೆ ಬಂದು ಸುಖವಾಗಿರು ನಿನ್ನಲ್ಲಿ ಏನೇ ಬಯಕೆ ಇದ್ದರೂ ತಿಳಿಸು ಎಂದು ಸೀತೆಯನ್ನು ಸಂತೈಸುವನು .

9. “ ಕರುಣಾಳು ರಾಘವನಲ್ಲಿ ತಪ್ಪಿಲ್ಲ ” ಎಂಬ ಸೀತೆಯ ನಿಲುವನ್ನು ವಿಶ್ಲೇಷಿಸಿ .

ಲಕ್ಷ್ಮಣನು ರಾಘವನ , ಆಜ್ಞೆಯಂತೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಲು ಹೇಳಿದುದನ್ನು ಸೀತೆಗೆ ತಿಳಿಸಿದಾಗಲೂ , ರಾಘವ , ರಘುರಾಮ ಕರುಣಾಳು , ಇದರಲ್ಲಿ ಅವನ ತಪ್ಪಿಲ್ಲ ಹೆಣ್ಣಾಗಿ ಜನಿಸಿದ್ದು ನನ್ನ ತಪ್ಪು , ಈ ಕಷ್ಟಕ್ಕೆ ಕಾರಣ ನನ್ನ ವಿಧಿ , ಎಂದು ಕರುಣಾಳು ರಾಘವನಲ್ಲಿ ತಪ್ಪಿಲ್ಲ ಎಂದು ಸೀತೆಯು ನುಡಿಯುತ್ತಾಳೆ .

ಅಭ್ಯಾಸ

IV ಸಂದರ್ಭ ಸೂಚಿಶಿ ವಿವರಿಸಿ .

1 ಅಹಹಯಂದಡಿಗಡಿಗೆ ತಲೆಗೊಡಹುವಂತಿರಲ್

ಪ್ರಸ್ತಾವನೆ : ಪ್ರಸ್ತುತ ಈ ಸಾಲುಗಳನ್ನು ಲಕ್ಷ್ಮೀಶನು ” ರಚಿಸಿರುವ “ ಜೈಮಿನಿ ಭಾರತದ ” “ ಹಲುಬಿದಲ್ ಕಲ್ಮರಂಕರಗುವಂತೆ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಸೀತೆಯನ್ನು ರಥದ ಮೇಲೆ ಕುಳ್ಳುರಿಸಿಕೊಂಡು ಸೌಮಿತ್ರಿಯು ಹೊರಟಾಗ ಗಾಳಿ ಬೀಸಿ ಆ ಬಾವುಟ ಬೀಸುತ್ತಿದ್ದ ರೀತಿಯನ್ನು ಕವಿ ಈ ರೀತಿ ವಿವರಿಸಿದ್ದಾರೆ .

ವಿವರಣೆ : ಸೀತೆ ರಥವೇರಿ ಹೊರಟಾಗ ಬೀಸುತ್ತಿದ್ದ ಗಾಳಿಯಿಂದ ಪದೇ ಪದೇ ಪಟ ಪಟ ಎಂದು ಹಾರುತ್ತಿದ್ದುದ್ದು ಸೀತೆ ಹೋಗದಿರುವಂತೆ ಪಡೆಯುತ್ತಿದೆಯೇನೊ ಎಂದು ಅನ್ನಿಸುತ್ತಿತ್ತು .

ವಿಶೇಷತೆ : ಮುಂದಾಗಬಹುದಾದ ಅನಾಹುತದ ಮುನ್ಸೂಚನೆ ಇಲ್ಲಿ ಕಂಡುಬರುತ್ತದೆ .

2. ಇಲ್ಲಿಗೇಕೈತಂದೆ ತಂದೆ ಸೌಮಿತ್ರಿ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಲಕ್ಷ್ಮೀಶನು ” ರಚಿಸಿರುವ “ ಜೈಮಿನಿ ಭಾರತದ ” “ ಹಲುಬಿದಲ್ ಕಲ್ಮರಂಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಲಕ್ಷ್ಮಣನು ಸೀತೆಯನ್ನು ದಟ್ಟಭಯಂಕರ ಕಾಡಿಗೆ ಕರೆದುಕೊಂಡು ಬಂದಾಗ ಸೀತೆ ಗಾಬರಿಯಿಂದ ಲಕ್ಷ್ಮಣನಿಗೆ ಈ ವಾಕ್ಯವನ್ನು ಹೇಳುತ್ತಾಳೆ .

ವಿವರಣೆ : ಭಯಂಕರವಾದ ಕಾಡು ಸೀತೆ ಅರಮನೆಯಿಂದ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂದು ಋಷಿ ಕುಮಾರರು ಋಷಿ ಪತ್ನಿಯರನ್ನು ಭೇಟಿ ಮಾಡಲೆಂದು ಆದರೆ ಕಾಡಿಗೆ ಬಂದಾಗಿ ಆಶ್ಚರ್ಯದಿಂದ ಈ ಮಾತನ್ನು ಕೇಳಿದಳು .

ವಿಶೇಷತೆ : ಮನಸ್ಸಿನಲ್ಲಿ ಉಂಟಾದ ಭಾವನೆ ಇಲ್ಲಿ ಮಾತಿನಲ್ಲಿ ವ್ಯಕ್ತವಾಗಿದೆ .

3. ಮೆಲ್ಲನೀ ವಿಪಿರರೊಡಗೊಂಡು ಬಂದಂ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಲಕ್ಷ್ಮೀಶನು ” ರಚಿಸಿರುವ “ ಜೈಮಿನಿ ಭಾರತದ “ ಹಲುಬಿದಲ್ ಕಲ್ಮರಂಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಲಕ್ಷ್ಮಣನು ಸೀತೆಯನ್ನು ಕಾಡಿಗೆ ಕರೆದುಕೊಂಡು ಬಂದ ಕಾರಣವನ್ನು ಸೀತೆಗೆ ಹೇಳುವಲ್ಲಿ ಈ ವಾಕ್ಯವನ್ನು ಹೇಳುತ್ತಾನೆ .

ವಿವರಣೆ : ರಘುನಾಥನ ಮಾತನ್ನು ಮೀರಲಾಗದೆ ಲಕ್ಷ್ಮಣನು ಆತನ ಸೇವಕನಾಗಿ ಆತನ ಆಜ್ಞೆಯನ್ನು ಪಾಲಿಸಲು ಸೀತೆಯನ್ನು ಕಾಡಿಗೆ ಕರೆತಂದುದಾಗಿ ತಿಳಿಸಿದನು .

ವಿಶೇಷತೆ : ರಾಜಾಜ್ಞೆ , ಅಣ್ಣನ ಆಜ್ಞೆ ಮಾತೆಯ ರಕ್ಷಣೆ ಪಾಲಿಸಬೇಕಾದ ಸಂದಿಗ್ಧ ಸ್ಥಿತಿ ಲಕ್ಷ್ಮಣನನ್ನು ದು : ಖ ಸಾಗರದಲ್ಲಿ ಮುಳುಗಿಸಿತ್ತು .

4 ರಾಮನ ಸೇವೆ ಸಂದುದೇತನಗೆ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಲಕ್ಷ್ಮೀಶನು ” ರಚಿಸಿರುವ “ ಜೈಮಿನಿ ಭಾರತದ ” “ ಹಲಿಬಿದಲ್ ಕಲ್ಮರಂಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಲಕ್ಷ್ಮಣನ ಬಾಯಿಂದ , ರಾಮನು ತನ್ನನ್ನು ಪರಿತ್ಯಜಿಸಿದ್ದಾನೆ ಎಂಬ ಮಾತನ್ನು ಕೇಳಿದೊಡನೇ ಶೀತೆ ಮೂರ್ಛ ಹೋಗಿ ಕೆಳಗೆ ಬಿದ್ದಳು . ಇದನ್ನು ಕಂಡ ಸೌಮಿತ್ರಿ ತನ್ನ ಅತ್ತಿಗೆಯು ಈ ರೀತಿ ಮೂರ್ಛ ಬಿದ್ದುದ್ದನ್ನು ಕಂಡು ಆಕೆಯನ್ನು ಎಚ್ಚರಗೊಳಿಸುವ ಸಲುವಾಗಿ ಆಕೆಯನ್ನು ಉಪಚರಿಸಿ ಆ ನಂತರ ಈ ವಾಕ್ಯವನ್ನು ಹೇಳಿದಳು .

ವಿವರಣೆ : ತಾನು ರಾಮನ ಸೇವೆಯನ್ನು ನಿಷ್ಠೆಯಿಂದ ಮಾಡಿರುವುದು ನಿಜವಾದಲ್ಲಿ ಸೀತಾಮಾತೇ ಬೇಗ ಎಚ್ಚರಗೊಳ್ಳಲಿ ಎಂಬ ಮಾತನ್ನು ಆಡಿದನು . ಆಗ ಸೀತಾಮಾತೆ ಪವಾಡವೆಂಬಂತೆ ಎಚ್ಚರಗೊಂಡಳು .

ವಿಶೇಷತೆ : ಸೀತಾ – ಲಕ್ಷ್ಮಣರ ದು : ಖದ ಸ್ಥಿತಿ ಇಲ್ಲಿ ಅರಿವಿಗೆ ಬಂದಿದೆ .

5. ಹರದನುವನುಡಿದೆನ್ನಂ ಮದುವೆಯಾದಂ

ಪ್ರಸ್ತಾವನೆ : ಈ ಸಾಲನ್ನು “ ಲಕ್ಷ್ಮೀಶನು ರಚಿಸಿರುವ “ ಜೈಮಿನಿ ಭಾರತದ “ ಹಲುಬಿದಳ್ ಕಲ್ಮರಂಗಕರಗುವಂತೆ ” ಎಂಬ ಪದ್ಯಬಾಗದಿಂದ ಆರಿಸಲಾಗಿದೆ .

ಸಂದರ್ಭ : ರಾಮನು ಸೀತೆಯನ್ನು ಪರಿತ್ಯಜಿಸಿದ್ದಾನೆ ಎಂದು ತಿಳಿದಾಕ್ಷಣ ಸೀತೆ ಮೂರ್ಚೆ ಹೋಗುತ್ತಾಳೆ . ನಂತರ ಲಕ್ಷ್ಮಣನ ಉಪಚಾರದಿಂದ ಎಚ್ಚರಗೊಂಡು ಮಿಥಿಲೆಗೆ ವಿಶ್ವಾಮಿತ್ರರೊಂದಿಗೆ ಬಂದುದು , ರಾಮನು ಶಿವಧನಸ್ಸನ್ನು ಮುರಿದು ಸೀತೆಯನ್ನು ವಿವಾಹವಾದುದನ್ನು ನೆನೆಯುತ್ತಾ ಈ ವಾಕ್ಯವನ್ನು ಹೇಳುತ್ತಾಳೆ .

ವಿವರಣೆ : ತನ್ನನ್ನು ಹೀಗೆ ಪರಿತ್ಯಜಿಸಲೆಂದೆ ರಾಮನು ಶಿವಧನಸ್ಸನ್ನು ಮುರಿದು ತನ್ನನ್ನು ವರಿಸಿದನೆ ಎಂದು ದುಃಖಿಸುತ್ತಾಳೆ .

ವಿಶೇಷತೆ : ಸೀತೆಯ ದು : ಖ ಇಂದಿಗೂ ಸಮಾಜದಲ್ಲಿ ಸೀತೆಯಂತಹ ಸ್ತ್ರೀಯರ ಸ್ಥಿತಿಯನ್ನು ಕಾಣಬಹುದಾಗಿದೆ .

6. ಲೋಕದರಸೇಗೈದೊಡಂ ತನ್ನ ಕಿಂಕರರ್ ಬೇಕು ಬೇಡೆಂದು ಹೇಳಿರೆ .

ಪ್ರಸ್ತಾವನೆ : ಪ್ರಸ್ತುತ ಈ ಸಾಲುಗಳನ್ನು ” ಲಕ್ಷ್ಮೀಶನು ರಚಿಸಿರುವ “ ಜೈಮಿನಿ ಭಾರತದ “ ಹಲ್‌ಬಿದಳ ಕಲ್ಮರಂಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಲೋಕಾಪವಾದಕ್ಕೆ ಹೆದರಿ ತನ್ನನ್ನೂ ಪರಿತ್ಯಜಿಸಿದನು ಎಂಬ ಮಾತುಗಳು ತಿಳಿದಂತೆ ಸೀತೆ ಅತಿಯಾಗಿ ರೋಧಿಸಿದಳು

ವಿವರಣೆ : ಲಕ್ಷ್ಮಣನ ರಾಮನ ಸೇವಕನಾದ ನೀನು ಆತನ ಆಜ್ಞೆಯನ್ನು ಪಾಲಿಸು ನಿನಗೆ ಮಂಗಳವಾಗಲಿ ಹೊರತೆಂದು ಸೀತೆಯು ಹೇಳಲು ವಾತಾವರಣವೆ ದುಃಖದಿಂದ ಕೂಡಿತ್ತು .

ವಿಶೇಷತೆ : ಈ ವಾಕ್ಯದಲ್ಲಿ ಲಕ್ಷ್ಮಣನ ಸ್ವಾಮಿನಿಷ್ಠೆ ಕಂಡು ಬರುತ್ತದೆ .

7 ಸಲಹಿಕೊಂಬುದು ತನ್ನ ಮಾತೆಯಂ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಲಕ್ಷ್ಮೀಶನು ” ರಚಿಸಿರುವ ” ಜೈಮಿನಿ ಭಾರತದ ” “ ಅಲುಬಿದಳ್ ಕಲಿರಂಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು ಲಕ್ಷಣನು ರಾಮನ ಆಜ್ಞೆಯಂತೆ ಗರ್ಭಿಣಿಯಾದ ಸೀತೆಯನ್ನು ಕಾಡು ಮೃಗಗಳಿರುವ ದಟ್ಟ ಕಾಡಿನಲ್ಲಿ ಏಕಾಂಗಿಯಾಗಿ ಬಿಟ್ಟು ಬರುವ ಸಂದರ್ಭದಲ್ಲಿ ಅತ್ಯಂತ ದು : ಖಿಯಾಗಿ ಅಲ್ಲಿದ್ದ ಮರಗಳಿಗೆ ಮೃಗ ಪಕ್ಷಿಗೆ ನಮಸ್ಕರಿಸಿ ಈ ವಾಕ್ಯವನ್ನು ಹೇಳಿದನು .

ವಿವರಣೆ : ಏಕಾಂಗಿಯಾಗಿರುವ ಸೀತಾ ಮಾತೆಯನ್ನು ಈ ಪ್ರಕೃತಿ ನಿನ್ನೊಡಲಲ್ಲಿ ಬಿಟ್ಟು ಹೋಗುತ್ತಿದ್ದೆನೆ , ಆಕೆಗೆ ಯಾವ ಸಂಕಟವು ಬಾರದಂತೆ ಸಲುಹಿರಿ ಎಂದು ವನಸ ಗಿಡಮರ , ಪ್ರಾಣಿ – ಒಕ್ಷಿಗಳಿಗೆ ವಿನಂತಿಸಿಕೊಂಡನು .

ವಿಶೇಷತೆ : ಲಕ್ಷ್ಮಣನಿಗೆ ಸೀತಾಮಾತೆಯ ಬಗ್ಗೆ ಇದ್ದ ಗೌರವ , ಭಕ್ತಿ ಭಾಗ ವ್ಯಕ್ತವಾಗಿದೆ .

8. ಜಗದೊಳುತ್ತಮರ ಹಾನಿಯಂ ಕಂಡು ಸೈರಿಸುವರುಂಟೆ

ಪ್ರಸ್ತಾವನೆ : ಪ್ರಸ್ತುತ ಈ ಸಾಲುಗಳನ್ನು ಲಕ್ಷ್ಮೀಶನು ” ರಚಿಸಿರುವ “ ಜೈಮಿನಿ ಭಾರತದ “ ಹಲುಬಿದಲ್ ಕಲ್ಮರಂಗಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಲಕ್ಷ್ಮಣನು ರಾಮನ ಆಜ್ಞೆಯಂತೆ ಸೀತೆಯನ್ನು ತ್ಯಜಿಸಿ ಕಾಡಿನ ಮೃಗ ಪಕ್ಷಿಗಳಿಗೆ ಗಿಡ ಮರಗಳಿಗೆ , ಕ್ರೂರ ಮೃಗ ಜಂತುಗಳಿಗೆ , ಪಂಚಭೂತಗಳಿಗೆ ಹಾಗೂ ಅಷ್ಟ ದಿಕ್ ಪಾಲಕರಿಗೆ ಸೀತಾಮಾತೆಯನ್ನು ಸಲುಹಿರಿ ಎಂದು ಪ್ರಾರ್ಥಿಸಿ ಹೊರಟನು . ಲಕ್ಷ್ಮಣನು ಹೋದ ಮೇಲೆ ಸೀತೆಯ ದು : ಖ ಮತ್ತಷ್ಟು ಅಧಿಕವಾಯಿತು . ಆಗ ಎಲ್ಲಾ ಕ್ರೂರ ಪ್ರಾಣಿ ಪಕ್ಷಿಗಳನ್ನು ತಮ್ಮ ವೈರತ್ವವನ್ನು ಮರೆತು ಶೀತೆಯನ್ನು ಸುತ್ತುವರಿದು ಆಕೆಯ ದು : ಖದಲ್ಲಿ ತಾವು ಭಾಗಿಗಳಾದುದನ್ನು ಕಂಡು ಕವಿ ಈ ಮಾತನ್ನು ಹೇಳಿದ್ದಾನೆ .

ವಿವರಣೆ : ಎಷ್ಟೇ ಕ್ರೂರಿಗಳಾದರೂ ಜಗತ್ತಿನಲ್ಲಿ ಅತಿ ದು : ಖಿಗಳು ಇರುವಾಗ ಅವರು ಕೂಡ ಅವರ ದು : ಖವನ್ನು ಹಂಚಿಕೊಳ್ಳುತ್ತಾರೆ ಎಂಬುದು ಈ ವಾಕ್ಯದ ಸ್ವಾರಸ್ಯ .

ವಿಶೇಷತೆ : ಜಗತ್ತಿನಲ್ಲಿ ಒಳಿತು ಕೆಡಕು , ದುಷ್ಟ – ಶಿಷ್ಯರು ಎಂಬ ಭಾವ ಇಲ್ಲಿ ಕೇವಲವಾದರೂ ಸರಿ ಮಾಯವಾಗುತ್ತದೆ ಎಂಬುದು ಈ ವಾಕ್ಯದಿಂದ ತಿಳಿದು ಬರುತ್ತದೆ .

9. ಹಲುಬಿದಳು ಕಲ್ಮರಂ ಕರಗುವಂತೆ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ಲಕ್ಷ್ಮೀಶನು ರಚಿಸಿರುವ “ ಜೈಮಿನಿ ಭಾರತದ “ ಹಲುಬಿದಳ್ ಕಲ್ಮರಂಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಲಕ್ಷ್ಮಣನು ಏಕಾಂಗಿಯಾಗಿ ಸೀತೆಯನ್ನು ಬಿಟ್ಟು ಹೊರಟು ಹೋದ ಮೇಲೆ ಆಕೆಯ ಅತೀವ ದುಃಖ ಮತ್ತಷ್ಟು ಹೆಚ್ಚಾಯಿತು , ಆಕೆಯ ಅತೀವ ದುಃಖವನ್ನು ಕಂಡು ಕವಿ ಈ ವಾಕ್ಯವನ್ನು ಹೇಳಿದ್ದಾನೆ .

ವಿವರಣೆ : ಸೀತೆಯು , ತನ್ನ ಇಂತಹ ಗರ್ಭ ಸ್ಥಿತಿಯಲ್ಲಿ ಅಯೋದ್ಯೆಯ ರಾಣಿಯಾಗಿದ್ದವಳು ಮಿಥಿಲಾನಗರದ ರಾಜಕುವರಾರಿಯಾಗಿ ತನಗೆ ತನ್ನ ಪುತ್ರರು ಈ ಕಾಡಿನಲ್ಲಿ ಜನ್ಮ ತಾಳಬೇಕಾದ ಸ್ಥಿತಿಯಿಂದಾಗಿ ಕಲ್ಲುಗಳು ಕೂಡ ಕರಗುವಂತೆ ದು : ಖಿಸಿದಳು .

ವಿಶೇಷತೆ : ಸೀತೆಯ ಅತೀವ ದು : ಖ ಇಲ್ಲಿ ವ್ಯಕ್ತವಾಗಿದೆ .

10. ಜನಕರಿಗೆ ನಾನನ್ಯರಲ್ಲ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು “ ಲಕ್ಷ್ಮೀಶನು ” ರಚಿಸಿರುವ “ ಜೈಮಿನಿ ಭಾರತದ “ ಅಲುಬಿದಲ್ ಕರಂಕರಗುವಂತೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಏಕಾಂಗಿಯಾಗಿ ಕಾಡಿನಲ್ಲಿ ರೋಧಿಸುತ್ತಿದ್ದ ಸೀತೆಯ ರೋಧನವನ್ನು ಕೇಳಿ , ಶಿಷ್ಯರೊಂದಿಗೆ ಆ ಮಾರ್ಗವಾಗಿ ಆಗಮಿಸುತ್ತಿದ್ದ ವಾಲ್ಮೀಕಿ ಋಷಿಗಳು ಸೀತೆಯ ಬಳಿ ಬಂದು ತಮ್ಮ ದಿವ್ಯ ದೃಷ್ಟಿಯಿಂದ ಸೀತೆಯ ಪರಿಥಿತಿಯನ್ನು ಅರಿತು ಆಕೆಯನ್ನು ಸಂತೈಸುತ್ತಾ ಈ ಮಾತನ್ನು ಹೇಳಿದರು .

ವಿವರಣೆ : ತಪೋನಿದಿ – ವಾಲ್ಮೀಕಿ ಮಹಾಋಷಿಗಳು ತಮ್ಮ ದಿವ್ಯದೃಷ್ಟಿಯಿಂದ ರೋಧಿಸುತ್ತಿದ್ದ ಸೀತೆಯ ಬಗ್ಗೆ ಅರಿತು ಆಕೆಗೆ ಸಂತೈಸಿ ನಾವು ನಿನ್ನ ತಂದೆಯಂತೆ ಅನ್ಯರಲ್ಲ ತಮ್ಮ ಆಶ್ರಯದಲ್ಲಿರಬೇಕೆಂದು ಹೇಳುತ್ತಾರೆ .

ವಿಶೇಷತೆ : ವಾಲ್ಮೀಕಿ ಋಷಿಗಳ ವ್ಯಕ್ತಿತ್ವ ಹಾಗೂ ಅವರ ದಿವ್ಯ ಜ್ಞಾನ ಬಗ್ಗೆ ತಿಳಿಯುತ್ತದೆ .

1st PUC Kannada Question Answer Halubidal Kalmaram Karaguvante Questions and Answers Notes PDF download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 1PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

One thought on “1st P.U.C Kannada Halubidal Kalmaram Karaguvante Notes| ಹಲುಬಿದಳ್‌ ಕಲ್ಮರಂ ಕರಗುವಂತೆ ನೋಟ್ಸ್

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh