1st P.U.C Kannada Devanolidana Kulave Satkulam Notes |ದೇವನೊಲಿದನ ಕುಲವೇ ಸತ್ಕುಲಂ ನೋಟ್ಸ್

1st PUC Kannada Devanolidana Kulave Satkulam Question answer pdf Download 3rd Chapter Notes ದೇವನೊಲಿದನ ಕುಲವೇ ಸತ್ಕುಲಂ ನೋಟ್ಸ್,ಪ್ರಶ್ನೆ ಉತ್ತರಗಳು devanolidana kulave satkulam kannada question answer

ತರಗತಿ: ಪ್ರಥಮ ಪಿ.ಯು.ಸಿ

ಕಾವ್ಯಾ ಭಾಗದ ಹೆಸರು: ದೇವನೊಲಿದನ ಕುಲವೇ ಸತ್ಕುಲಂ

ರಗಳೆ-ಕವಿ ಹೆಸರು: ಹರಿಹರ

1st P.U.C Kannada Devanolidana Kulavee Satkulam Notes ದೇವನೊಲಿದನ ಕುಲವೇ ಸತ್ಕುಲಂ ನೋಟ್ಸ್
1st P.U.C Kannada Devanolidana Kulave Sathkulam Notes ದೇವನೊಲಿದನ ಕುಲವೇ ಸತ್ಕುಲಂ ನೋಟ್ಸ್

ರಗಳೆ – ಕವಿ : ಹರಿಹರ ( ೧೧೯೦-೧೨೫೦ )

‘ರಗಳೆಕವಿ ‘ ಎಂದು ಪ್ರಸಿದ್ಧನಾಗಿರುವ ಹರಿಹರ ದ್ವಾರಸಮುದ್ರದ ಹೊಯ್ಸಳ ವೀರನರಸಿಂಹ ಬಲ್ಲಾಳನ ಆಸ್ಥಾನದಲ್ಲಿ ಕರಣಿಕನಾಗಿದ್ದನು . ರಾಜಾಶ್ರಯವನ್ನು ತಿರಸ್ಕರಿಸಿ ಹಂಪೆಯ ವಿರೂಪಾಕ್ಷನ ಸನ್ನಿಧಿಯಲ್ಲಿ ಕಾವ್ಯ ರಚನೆಗೆ ತೊಡಗಿದನು .

ಶಿವ ಮತ್ತು ಶಿವಭಕ್ತರನ್ನೇ ಕುರಿತು ಕಾವ್ಯ ರಚಿಸುವ ದಿಟ್ಟ ನಿಲುವನ್ನು ತಳೆದ ಇವನು ನೂರಕ್ಕೂ ಹೆಚ್ಚು ರಗಳೆಗಳು ಹಾಗೂ ‘ ಗಿರಿಜಾಕಲ್ಯಾಣ’ವೆಂಬ ಚಂಪೂಕಾವ್ಯವನ್ನು ರಚಿಸಿದ್ದಾನೆ . ‘ ಪಂಪಾಶತಕ ‘ , ‘ ರಕ್ಷಾಶತಕ ‘ , ‘ ಮುಡಿಗೆಯ ಅಷ್ಟಕ’ಗಳನ್ನೂ ರಚಿಸಿದ್ದಾನೆ .

ಹರಿಹರನ ರಗಳೆಗಳ ಮೂಲದ್ರವ್ಯ ಹರಭಕ್ತಿ . ಶಿವಭಕ್ತರು ಇವನ ಕಥಾನಾಯಕರು . ಇವರು ಒಂದಲ್ಲಾ ಒಂದು ರೀತಿ ಗುಪ್ತಭಕ್ತಿಯಿಂದ ಶಿವನನ್ನು ಆರೋಗಿಸುವವರೇ ಆಗಿರುತ್ತಾರೆ .

ಭಕ್ತರ ಗುಪ್ತಭಕ್ತಿಯನ್ನು ಇತರರಿಗೆ ತಿಳಿಸುವ ಸಲುವಾಗಿ ಶಿವ ಮಾರುವೇಷದ ಮೂಲಕ ಭಕ್ತರನ್ನು ಪರೀಕ್ಷಿಸುವುದರ ಜೊತೆಗೆ ಅವರ ಭಕ್ತಿಯನ್ನು ಪ್ರಕಟಗೊಳಿಸುವುದೇ ಆಗಿದೆ .

ಪ್ರಸ್ತುತ ರಗಳೆಯಲ್ಲಿ ಚೆನ್ನಯ್ಯನ ಶಿವಭಕ್ತಿಯನ್ನು ಅನಾವರಣಗೊಳಿಸುತ್ತಾನೆ . ಚೋಳನಾಡಿನಲ್ಲಿ ಹರಿಯುತ್ತಿರುವ ಕಾವೇರಿಯ ವರ್ಣನೆಯನ್ನು ಕಾಣಬಹುದು . ಅರಸನ ಮತ್ತು ಆಳಿನ ಮುಖಾಮುಖಿಯ ಜೊತೆಗೆ ಸರಳಭಕ್ತಿಯೇ ಶ್ರೇಷ್ಠವೆಂದು ಸಾರುವ ವಿಚಾರ ಇಲ್ಲಿದೆ .

ಪದಕೋಶ :

೧-೫೦ : ಸೆಜ್ಜೆ – ಲಿಂಗವಸ್ತ್ರ , ನೆಲೆ , ಶಯನ ; ವಜ – ಗುಂಪು , ಸಮೂಹ ; ಆರವೆ ( ಆರಮೆ ) -ಉದ್ಯಾನ ; ಕಾವೇರಿ ( ಕಾವ + ಏರಿ ) – ಕಾಪಾಡುವ ನೀರು ; ಸೋವೇರಿ ( ಸೋವ + ಏರಿ ) -ಪಾಪ ನಿವಾರಿಸುವ ತೀರ್ಥ ; ವಾಚಾಮಗೋಚರ – ಮಾತಿಗೆ ನಿಲುಕದ ; ಓತು – ಒಂದಾಗಿ , ಒಲಿದು ; ಬೀಱದ – ಪ್ರಕಟಗೊಳ್ಳದ ; ಕಂಪಣ ( ಕಂಪಣ – ಕವಳ ) -ಮೇವು ; ಸೊಂಪು ಸೊಗಸು ; ತಿಲ – ಎಳ್ಳು : ಕಾಷ್ಠ ಕಟ್ಟಿಗೆ ; ನಿಧಾನ – ಸಂಪತ್ತು ; ಕಾಂತಾರ -ಕಾಡು ; ದಿಂಟೆ ( ದಿಣ್ಣೆ ) -ದಿಣ್ಣೆ ; ಅಭವ – ಶಿವ ; ಹರವರಿ – ಹರವು , ವಿಸ್ತಾರ ; ಪೊರೆಯೇಱು – ಉಬ್ಬು : ಪಡ್ಡಲಿ – ಕೆಂಜಾಜಿ , ಪಾದರಿ ; ಓವು – ಉಪಚರಿಸು ; ಇಂಬು – ಪ್ರೀತಿ ; ತುರಗ – ಕುದುರೆ ; ಸಾದರ – ಆದರ ; ವತ್ಸರ – ವರ್ಷ .

೫೧-೧೦೦ : ದಳವೇಱು – ಉತ್ಸಾಹ ; ಮೈಲ ( ಕಪ್ಪು ) -ಬೂದುಬಣ್ಣದ ಎತ್ತು ; ಅಂಬಕಳ -ಅಂಬಲಿ , ರಾಗಿಗಂಜಿ ; ಕಪ್ಪರ – ಮಣ್ಣಿನ ತಟ್ಟೆ : ಆಮ್ರ – ಮಾವು ; ಅಡ್ಡಣಿಗೆ- ಊಟದ ತಟ್ಟೆಯನ್ನು ಇಡುವ ಪೀಠ : ಚಿಲುಪಾಲು – ಕೆನೆಹಾಲು ; ಘಟ್ಟ ಮಣ್ಣಿನಪಾತ್ರೆ ; ಹೆಱಸಾರು – ಹಿಂದೆ ಸರಿದು ; ಜವನಿಕೆ – ಪರದೆ ; ಅಲಗು -ಕತ್ತಿ ; ಪಡಿ – ಸಮಾನ ; ಕಱೆಗೊರಳ – ನೀಲಕಂಠ ; ಹುರುಡು- ಪೈಪೋಟಿ , ಹೊಟ್ಟೆಕಿಚ್ಚು .

೧೦೧-೧೬೦ : ಸೂಡು – ತಲೆಯ ಮೇಲೆ ಧರಿಸು ; ಅನುತಾಪ – ಸಂತಾಪ ; ಕೋಡು – ನಡುಗು ; ಸಮ್ಯಗ್‌ಜ್ಞಾನಿ – ಸಂಪೂರ್ಣಜ್ಞಾನಿ ; ಅಂಘ್ರ – ಪಾದ ; ರಜ ಧೂಳು ; ದರ್ಪಣ – ಕನ್ನಡಿ ; ಕೆರ್ಪು – ಚಪ್ಪಲಿ ; ಗುಡಿ – ಬಾವುಟ , ಧ್ವಜ , ತೋರಣ ; ತಾರ್ಕಣೆ- ಪ್ರತ್ಯಕ್ಷವಾದ , ಋಜುವಾತು ; ಹೆಱಿ – ಚಂದ್ರ ಬೀದಿಗಱು – ಬಯಲಾಗು ; ಹಱಲೆ – ವೃಥಾಪವಾದ ; ಮೋನಿ – ಮೌನಿ.

1st Puc Kannada Devanolidana Kulave Satkulam Notes Quotion answer

I. ಒಂದು ವಾಕ್ಯದಲ್ಲಿ ಉತ್ತರಿಸಿ .

1 .ಚೋಳ ದೇಶವನ್ನು ಆಳುತ್ತಿದ್ದ ದೊರೆ ಯಾರು ?

ಚೋಳ ದೇಶವನ್ನು ಆಳುತ್ತಿದ್ದ ದೊರೆ ಕರಿಕಾಲ ಚೋಳ ,

2. ಚೆನ್ನಯ್ಯನು ಹುಲ್ಲನ್ನು ಯಾವುದರ ಮೇಲೆ ಹೇರಿಕೊಂಡು ಬರುತ್ತಿದ್ದನು ?

ಚೆನ್ನಯ್ಯನು ಹುಲ್ಲನ್ನು ಎತ್ತಿನ ಮೇಲೆ ಹೇರಿಕೊಂಡು ಬರುತ್ತಿದ್ದನು .

3. ಚೆನ್ನಯ್ಯನನ್ನು ಹುಡುಕಲು ಚೋಳರಾಜನು ಯಾರನ್ನು ಕಳುಹಿಸಿದನು ?

ಚೆನ್ನಯ್ಯನನ್ನು ಹುಡುಕಲು ಚೋಳನು ತಾನೆ ಕಾಲ್ನಡಿಗೆಯಲ್ಲಿ ನಡೆದನು ಜೊತೆಗೆ ಎಲ್ಲಾ ದಿಕ್ಕುಗಳಿಗೂ ತನ್ನ ದೂತರನ್ನೇ ಕಳುಹಿಸಿದನು .

4. ಚೋಳರಾಜನು ಚೆನ್ನಯ್ಯನನ್ನು ಶಿವಾಲಯಕ್ಕೆ ಹೇಗೆ ಕರೆ ತಂದನು ?

ಚೋಳರಾಜನು ಚೆನ್ನಯ್ಯನನ್ನು ಶಿವಾಲಯಕ್ಕೆ ಆನೆಯ ಮೇಲೆ ಕರೆತಂದನು .

5. ಕೈಲಾಸದಲ್ಲಿ ಚೆನ್ನಯ್ಯನಿಗೆ ಯಾವ ಪದವಿ ಲಭಿಸಿತು ?

ಕೈಲಾಸದಲ್ಲಿ ಚೆನ್ನಯ್ಯನಿಗೆ ಗಣ ಪದವಿಯು ಲಭಿಸಿತು .

6. ಚೋಳ ದೇಶವು ಯಾರಿಗೆ ನೆಲೆಯಾಗಿತ್ತು ?

ಚೋಳ ದೇಶವು ಶಿವಭಕ್ತರ ನೆಲೆಯಾಗಿತ್ತು

7.ಚೆನ್ನಯ್ಯನು ಮಾಡುತ್ತಿದ್ದ ಕಾಯಕ ಯಾವುದು ?

ಚೆನ್ನಯ್ಯನು ಮಾಡುತ್ತಿದ್ದ ಕಾಯಕ ಗುಪ್ತಾರಾದನೆ .

8.ಶಿವನು ಯಾರ ಜೊತೆ ಊಟ ಮಾಡಿದನು ?

ಶಿವನು ಚೆನ್ನಯ್ಯನ ಜೊತೆಗೂಡಿ ಊಟಮಾಡಿದನು .

II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ಚೆನ್ನಯ್ಯ ಗುಪ್ತ ಭಕ್ತಿ ಯಾವ ರೀತಿಯದು ?

ಚೆನ್ನಯ್ಯನ ಗುಪ್ತ ಭಕ್ತಿ ಡಂಬಾಚಾರಕ್ಕೆ ಮರುಳಾದ , ಪ್ರದರ್ಶನ ಪ್ರಿಯನಲ್ಲದ , ಠಕ್ಕಿಲ್ಲದ , ನೆಟ್ಟ ನೇರದ , ಸಿಟ್ಟು ಸರಳತನದ ಗಂಭೀರತನದ ಗುಪ್ತ ಭಕ್ತಿಯಾಗಿತ್ತು .

2. ಶಿವನ ಮೇಲೆ ಚೆನ್ನಯ್ಯನು ಮುನಿಸಿಕೊಳ್ಳಲು ಕಾರಣವೇನು ?

ಚೆನ್ನಯ್ಯನು ತನ್ನ ಭಕ್ತಿಯನ್ನು ಎಂದು ಯಾರ ಮುಂದೆಯೂ ಹೇಳಿದವನೂ ಅಲ್ಲ , ತೋರಿಸಿಕೊಟ್ಟವನು ಅಲ್ಲ . ಆದರೆ ಚೋಳರಾಜನಿಂದಾಗಿ ಎಲ್ಲವೂ ಬಯಲಾಯಿತು . ರಾಜನು ಆನೆಯ ಮೇಲೆ ಕುಳ್ಳಿರಿಸಿ ಶಿವಾಲಯಕ್ಕೆ ಕರೆತಂದುದು ಚೆನ್ನಯ್ಯನಿಗೆ ಸಂಕೋಚದಿಂದ ಮುದುಡಿಕೊಳ್ಳುವಂತಾಯಿತು . ಇದಕ್ಕೆ ಕಾರಣ ಈ ಹರನೇ , ಈ ಶಿವನು ತನ್ನ ಬಕ್ತಿಯ ಬಗ್ಗೆ ಹೇಳಿದ್ದರಿಂದಲೇ ಇಂದು ತಾನು ಮುಜುಗರ ಪಟ್ಟಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ . ಆದ್ದರಿಂದ ಶಿವಾಲಯಕ್ಕೆ ಬಂದೊಡನೆ ಚೆನ್ನಯ್ಯನು ಶಿವನನ್ನು ನಾನೇನು ನಿನಗೆ ಸಿಂಹಾಸನ , ಅಧಿಕಾರ ಬೇಕೆಂದು ಬೇಡಿದನೆ , ನೀನೇಕೆ ನನ್ನ ಬಗ್ಗೆ ಚೋಳನಿಗೆ ತಿಳಿಸಿದೆ ಎಂದು ಶಿವನ ಮೇಲೆ ಚೆನ್ನಯ್ಯನು ಮುಸಿಕೊಂಡನು .

3. ಶಿವಲಿಂಗವನ್ನು ಯಾವ ಯಾವ ಹೂಗಳಿಂದ ಚೆನ್ನಯ್ಯ ಸಿಂಗರಿಸುತ್ತಿದ್ದನು ?

ಚೆನ್ನಯ್ಯ ಶಿವಲಿಂಗವನ್ನು ಮತ್ತೆ , ಮಲ್ಲಿಗೆ , ಸಂಪಿಗೆ , ಮರುಗ , ಧವನ , ಪಚ್ಚೆ , ಸುರಗಿ , ಸುರಹೊನ್ನೆ , ಗಣಿಗಲೆ ಮೊದಲಾದ ಹೂಗಳಿಂದ ಸಿಂಗರಿಸುತ್ತಿದ್ದನು .

4. ಶಿವನು ಚೆನ್ನಯ್ಯನನ್ನು ಹೇಗೆ ಸಮಾಧಾನ ಪಡಿಸಿದನು ?

ಚೆನ್ನಯ್ಯನು ಕೋಪಗೊಂಡದ್ದನ್ನು ಕಂಡು ಶಿವನು ಶಿವಲಿಂಗದಿಂದ ಬಂದು ಚೆನ್ನಯ್ಯನನ್ನು ಸಮಾಧಾನ ಪಡಿಸುತ್ತಾ ಚೋಳನು ತಾನು ಆಹಾರ ಸ್ವೀಕರಿಸಲಿಲ್ಲವೆಂದು ನೊಂದಾಗ ತಾನು ನಿನ್ನೊಡನೆ ರುಚಿಯಾದ ಅಂಬಲಿ ಉಂಟೆನಾದ್ದರಿಂದ ಅದರಿಂದ ನನ್ನ ಹಸಿವು ಪೂರ್ಣವಾಗಿ ಹೊರಟು ಹೋಗಿತ್ತು , ಅದನ್ನು ತಿಳಿಸಿದನಷ್ಟೆ ಚೆನ್ನಯ್ಯನನ್ನು ಸಮಾಧಾನ ಪಡಿಸಿದನು .

5.ಕಾವೇರಿ ನದಿಯ ಮಹಿಮೆ ಎಂತಹುದು ?

ಕಾವೇರಿ ನದಿಯ ಮೈಸೋಕಿದರೆ ಪಾಪವೆಲ್ಲವೂ ನಾಶವಾಗುವ ಮಹಿಮೆ ಳ್ಳದು .

6. ಚೋಳ ರಾಜ ಚೆನ್ನಯ್ಯನ ಪಾದಗಳನ್ನು ಹಿಡಿದಾಗ ಆವನ ಪ್ರತಿಕ್ರಿಯೆ ಏನು ?

ಚೋಳರಾಜ ಚೆನ್ನಯ್ಯನ ಪಾದಗಳನ್ನು ಹಿಡಿದಾಗ ಚೆನ್ನಯ್ಯನು , ಮುಜುಗರ ಪಟಟು ಗಾಬರಿಯಿಂದ ಏನಯ್ಯ ಚೋಳರಾಜ ನೀನು ಹೀಗೆ ಮಾಡಬಹುದೆ , ಸೂರ್ಯ ಕುಲ ವಂಶಸ್ಥನಾದ ನೀನು ನನ್ನಂಥ ಸಾಮಾನ್ಯ ಸೇವಕನ ಕಾಲು ಹಿಡಿಯುವುದು ಶ್ರೇಯಸ್ಕರವಲ್ಲ , ಹೇ ಚೋಖರಾಜ ನಾನು ಕೀಳು ಜಾತಿಯವನೆಂಬುದನ್ನು ತಿಳಿದಿಲ್ಲವೇ ? ನಾನು ಕೇಳು ಜಾತೀಯವನ್ನೆಂದು ತಿಳಿದು ಹೀಗೆ ಮಾಡುವುದು ಸರಿಯೇ ಬಿಡು ಎನ್ನ ಪಾದವನ್ನು ಎಂದು ಪರಿಪರಿಯಾಗಿ ಪರಿತಪಿಸತೊಡಗಿದನು .

III . ಐದು ಆರು ವಾಕ್ಯಗಳಲ್ಲಿ ಉತ್ತರಿಸಿ .

1. ಚೆನ್ನಯ್ಯನಿಗೆ ಶಿವನು ಗುಣದೇವಿಯನ್ನು ನೀಡಿದ ಪ್ರಸಂಗವನ್ನು ನಿರೂಪಿಸಿ .

ಚೆನ್ನಯ್ಯನನ್ನು ಚೋಳರಾಜನು ಶಿವಾಲಯಕ್ಕೆ ಆನೆಯ ಮೇಲೆ ಮೆರವಣಿಗೆ ಮಾಡಿ ಕರೆತಂದಾಗ ಚೆನ್ನಯ್ಯ ಶಿವನ ಮೇಲೆ ಕೋಪಿಸಿಕೊಳ್ಳುವನು , ಶಿವನನ್ನು ಚೆನ್ನಯ್ಯನನ್ನು ಸಮಾಧನೆ ಮಾಡಿ , ಚೋಳರಾಜನಿಗೆ ಶಿವನು ಚೆನ್ನಯ್ಯನ ಗುಪ್ತ ಪೂಜೆಯ ಬಗ್ಗೆ ತಿಳಿಸಿಕೊಟ್ಟನು , ಅಲ್ಲಿ ನೆರೆದಿದ್ದ ಎಲ್ಲರಿಗೂ ಮಾದರ ಚೆನ್ನಯ್ಯನ ಶಿವಭಕ್ತಿ ತಿಳಿಯುವುದು , ಎಲ್ಲರೂ ಸಂತೋಷಗೊಳ್ಳುವರು , ಆಗ ಗಗನದಲ್ಲಿ ದುಂದುಬಿನಾದ ಮೊಳಗುವುದು , ಗಣ ಸಮೂಹದೊಡನೆ ನಂದೀಶನು ಆಗಮಿಸುವನು , ಪುಷ್ಪಕ ವಿಮಾನವೂ ಇಳಿಯುವುದು , ಶಿವನು ಸಹರ್ಷನಾಗಿ ಚೋಳನನ್ನು ಬೀಳ್ಕೊಟ್ಟು ಪುಷ್ಪಕ ವಿಮಾನದಲ್ಲಿ ಚೆನ್ನಯ್ಯನನ್ನು ಕುಳ್ಳಿರಿಸಿಕೊಂಡು ಕೈಲಾಸ ಮಾರ್ಗಿಯಾಗುವನು , ಅಲ್ಲಿ ಚೆನ್ನಯ್ಯನಿಗೆ ಗಣಗಳಿಗೆ ಅಧಿಪಥಿಯನ್ನಾಗಿ ಮಾಡಿ ಗೌರವಿಸಿದನು . –

2 . ಶಿವನು ಎನ್ನಯ್ಯನ ಮನೆಯಲ್ಲಿ ಊಟಮಾಡಿದ ಪ್ರಸಂಗವನ್ನು ವಿವರಿಸಿ .

ಚೆನ್ನಯ್ಯನು ತನ್ನ ದಿನ ನಿತ್ಯದ ಕಾಯಕದಿಂದ ಬಂದಿದ್ದರಲ್ಲಿ ಅಂಬಲಿಯನ್ನು ಮಾಡಿ ಶಿವಲಿಂಗಕ್ಕೆ ಭಕ್ತಿಯಿಂದ ಅರ್ಪಿಸಿದಾಗ ಶಿವನು ಶಿವಲಿಂಗದಿಂದ ಹೊರ ಬಂದು ಚೆನ್ನಯ್ಯನ ಜೊತೆಗೂಡಿ ಭಕ್ತಿಯಿಂದ ನೀಡಿದ ಅಂಬಲಿಯನ್ನು ತೃಪ್ತಿಯಿಂದ ಸವಿಯುತ್ತಿದ್ದನು , ಆ ದಿನದ ಅಂಬಳಕದ ಭೋಜನ ಚೆನ್ನಯ್ಯನಿಗಷ್ಟೇ ಅಲ್ಲ , ಹರನಿಗೂ ಮರೆಯಲಾಗದ , ರುಚಿಕರವಾದ , ತೃಪ್ತಿಯ ಭೋಜನವಾಗಿತ್ತು . ಚೆನ್ನಯ್ಯನೊಡನೆ ಶಿವ ಉಂಡು ಇಬ್ಬರು ಸಂತೃಪ್ತರಾಗಿದ್ದರು , ಇದರಿಂದ ಚೆನ್ನಯ್ಯ “ ಛಾಪು ಪುಣ್ಯವೇ ? ಶಿವನ ಕರುಣೆ ಇನಿತುಂಟೆ ಎಂದು ಸಂತಾನ ಪಡುವನು , ಇದು ಚೆನ್ನಯ್ಯ ಗುಪ್ತ ಭಕ್ತಿಯ ಪಕಾರಷ್ಟೆತೆಯ ಕುರುಹಾಗಿದೆ .

3. ಚೋಳರಾಜ ಚೆನ್ನಯ್ಯನನ್ನು ಹುಡುಕಿದ ಬಗೆ ಹೇಗೆ ?

ಚೋಳರಾಜನು ಭಕ್ತಿಯಿಂದ ಅರ್ಪಿಸಿದ ಶುಚಿ-ರುಚಿ ಮೃಷ್ಟಾನ್ನ ಭೋಜನಗಳಾವುದನ್ನು ಸ್ವೀಕರಿಸಿದ ಶಿವನನ್ನು ಕಂಡು ಚೋಳನು ಬಹಳ ನಿರಾಶೆ , ಗದ್ದಿತನಾಗಿ , ಶಿವನನ್ನು ಏಕೆ ಹೀಗೆ ಮಾಡಿದೆಯೆಂದು ವಿಚಾರಿಸಲು ಶಿವನು ಶಿವಲಿಂಗದಿಂದ ಆಗಷ್ಟೆ ಚೆನ್ನಯ್ಯನೊಡಗೂಡಿ ಸವಿಯಾದ ಅಂಬಲಿಯನ್ನು ಹೊಟ್ಟೆತುಂಬ ಸವಿದಿರುವುದರಿಂದ ತನಗೆ ಹಸಿವಿಲ್ಲ ಆದ್ದರಿಂದ ಸೇವಿಸಲಿಲ್ಲ ಎಂದು ಹೇಳಿದಾಗ ಚೋಳನಿಗೆ ನಿಜವಾದ ಭಕ್ತಿ ಆ ಚೆನ್ನಯ್ಯನ ಭಕ್ತಿಯಲ್ಲಿರುವುದನ್ನು ಕಂಡು ನಾಕ್ಲಾರು ದಿಕ್ಕುಗಳಿಗೆ ಆ ಮಾದರ ಚೆನ್ನಯ್ಯನ ಹುಡುಕಲು ಕಳುಹಿಸಿದನು . ಸ್ವತಃ ತಾನೇ ಆ ಮಹಾಭಕ್ತನನ್ನು ಹುಡುಕುತ್ತಾ ಕಾಲ್ನಡಿಗೆಯಲ್ಲಿಯೇ ನಡೆದನು ನಂತರ ಮಾದರ ಚೆನ್ನಯ್ಯನ ಗುಸಿಡಲಿಗೆ ಬಂದು ಚೆನ್ನಯ್ಯನನ್ನು ಹುಡುಕಿ ಆತನನ್ನು ಕಂಡೊಡನೆ ರಾಜನಾದ ಚೋಳನು ಚೆನ್ನಯ್ಯನ ಕಾಲಿಗೆರಗಿದನು .

4. ಕರಿಕಾಲ ಚೋಳನು ಶಿವನನ್ನು ಅರ್ಚಿಸುತ್ತಿದ್ದ ರೀತಿಯನ್ನು ವರ್ಣಿಸಿ ,

ಕರಿಕಾಲ ಚೋಳನು ಶಿವನನ್ನು ವಿವಿಧ ಬಗೆಯ ಘಮಘಮಿಸುವ ಹೂಗಳಿಂದ ಶಿವಲಿಂಗವನ್ನು ಸಿಂಗರಿಸಿ ಅರಸಿಯರೊಡಗೂಡಿ , ವಿವಿಧ ಬಗೆಯ ಹಣ್ಣುಗಳನ್ನು ಬಾಯಲ್ಲಿ ನೀರೂರಿಸುವಂತೆ ಮೃಷ್ಟಾನ್ನ ಭಕ್ಷ್ಯ ಭೋಜನಗಳನ್ನು ತುಪ್ಪ , ಕೆನೆಹಾಲು , ಮೊಸರು , ಸಕ್ಕರೆ , ಮುಂತಾದವುಗಳನ್ನು ನೇವೇದ್ಯಕ್ಕಗಿ ಅರ್ಪಿಸುತ್ತಿದ್ದನು .

5.ಚೆನ್ನಯ್ಯನ್ನು ತನ್ನ ಕಾಯಕವನ್ನು ಹೇಗೆ ಮಾಡುತ್ತಿದ್ದನು ?

ಚೆನ್ನಯ್ಯನು ಪಾತ : ಕಾಲದಲ್ಲಿದ್ದು ನಿತ್ಯಕರ್ಮವ ಮುಗಿಸಿ ಕಾಡಿಗೆ ಹೋಗಿ ಮಲ್ಲೆ , ಮಲ್ಲಿಗೆ , ಸಂಪಿಗೆ , ಮರುಗ ದವನ , ಪಚ್ಚೆ , ಹೊನ್ನೆ , ಸುರಹೊನ್ನೆ , ಮೊದಲಾದ ಹೂಗಳಿಂದ ಶಿವನನ್ನು ಸಿಂಗರಿಸಿ ಶಿವನನ್ನು ಮನದಣಿಯೇ ಪೂಜೆಯನ್ನು ಮಾಡಿ , ಹರುಷದಿಂದ ಕೂಡಿದವನಾಗಿ , ಆಡಿ , ಹಾಡಿ ನಲಿಯುತ್ತಾ ತಕ್ಷಣ ಸಮಯ ಪರಿವೆ ಉಂಟಾಗಿ ವೇಳೆಯಾಯಿತೆಂದು ಹೊಲಕ್ಕೆ ಧಾವಿಸಿ ಹುಲ್ಲು ಕೊಯ್ದು ಹೊರೆಕಟ್ಟಿ ಮನೆಗೆ ಹಿಂತಿರುಗುವನು , ತನ್ನ ಪಾಲಿಗೆಯಿಂದ ಆ ದಿನದ ಅಂಬಕಳಮಂನ್ನು ಚೆನ್ನಯ್ಯ ಲಿಂಗರ್ತಿತ ಮಾಡಿ ಉಣಲು ಕೊಡುವನು , ಅವನು ನೀಡಿದ ಈ ಅಂಬಲಿ ಊಟ ಅವನಿಗಷ್ಟೆ ಅಲ್ಲ , ಹರನಿಗೂ ಮರೆಯಲಾಗದ ಮೃಷ್ಟಾನ್ನ ಅದ್ಭುತವಾದ ರುಚಿಯಿಂದ ಕೂಡಿದ ಅಂಬಲಿಯನ್ನು ಭಕ್ತ ಚೆನ್ನಯ್ಯ ಜೊತೆಗೆ ಶಿವ ಇಬ್ಬರೂ ಕೂಡಿ ಸವಿಯುವುದು , ಶಿವನ ಕರುಣೆಯಿಂದ ಹರುಷಗೊಳ್ಳುತ್ತಿದ್ದು ಅವನ ಕಾಯಕವಾಗಿತ್ತು .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ ,

1. ಸೊಂಪೇರಿ ಚಿತ್ತಜಾರಿಯ ಚಿತ್ರಮಂ ಸೋಲಸಿ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರ ಕವಿಯು ರಚಿಸಿರುವ “ ದೇವನೊಲಿದವನ ಕುಲವೇ ಸತ್ಕಲಂ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮಾದರ ಚೆನ್ನಯ್ಯನು ತನ್ನ ದಿನಚರಿಯನ್ನು ಪೂರೈಸುವ ರೀತಿಯನ್ನು ವಿವರಿಸುವ ಸಂದರ್ಭದಲ್ಲಿ ಕವಿ ಈ ವಾಕ್ಯವನ್ನು ನುಡಿದಿದ್ದಾನೆ .

ವಿವರಣೆ : ಚೆನ್ನಯ್ಯ ತನ್ನ ಮನಸ್ಸನ್ನು ಆಚೆ ಅತ್ತೆ – ಇತ್ತ ಹೊಗಗೊಡನೆ ಹರನ ಪೂಜೆಯಲ್ಲಿ ಕೇಂದ್ರೀಕರಿಸುತ್ತಿದ್ದ

ವಿಶೇಷತೆ : ಚೆನ್ನಯ್ಯನ ಮನಸ್ಸಿನ ಏಕಾಗ್ರತೆಯ ಬಗ್ಗೆ ವಿವರಿಸಲಾಗಿದೆ .

2. ನೆಲದ ಮನೆಯೊಳಗೆ ತೊಳಗುವ ನಿಧಾನದ ತೆರೆದೆ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನು ರಚಿಸಿರುವ “ ದೇವನೊಲಿದವನ ಕುಲವೇ ಸತ್ಕಲಂ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಮಾದರ ಚೆನ್ನಯ್ಯನ ಗುಣವನ್ನು ಹೇಳುತ್ತಾ ಈ ವಾಕ್ಯವನ್ನು ನುಡಿದಿದ್ದಾನೆ ಹರಿಹರ ಕವಿ .

ವಿವರಣೆ : ನೆಲದ ಮಣ್ಳಗೆ ಹುದುಗಿರುವ ಅಪಾರ ಸಂಪತ್ತಿನಂತೆ , ಅದನ್ನು ಹೇಗೆ ನಾವು ನೆಲದೊಳಗಿನಿಂದ ಪಡೆಯಬಹುದು ಅಂತೆಯೇ ಚೆನ್ನಯ್ಯನ ಅಂತರಂಗದಲ್ಲಿರುವ ಹರಭಕ್ತಿ , “ ನೆಲದ ಮನೆಯೊಳಗೆ ತೊಳಗುವ ನಿಧಾನದ ತೆರೆದಂತೆ ತೋರ್ಪ ಡುತ್ತದೆ .

ವಿಶೇಷತೆ : ಚೆನ್ನಯ್ಯ ಗುಣವನ್ನು ನೆಲದೊಳಗಿನ ಅಮೌಲ್ಯ ಖನಿಜಕ್ಕೆ , ನೆಲದ ಫಲವತ್ತತೆಗೆ ಹೋಲಿಸಲಾಗಿದೆ .

3. ಉಂಡನಭತಿಂ ಸ್ವರ್ಗ ಮರ್ತ್ಯಕ್ಕೆ ಹೊಸತಾಗಿ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನ್ನು ರಚಿಸಿರುವ “ ದೇವನೊಲಿದವನ ಕುಲವೇ ಸತ್ಕಲಂ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚನ್ನನು ಪ್ರತಿ ದಿನ ತನ್ನ ಕಾಯಕದಿಂದ ಬಂದ ದುಡಿಮೆಯಿಂದ ಅಂಬಲಿಯನ್ನು ಮಾಡಿ ಅದನ್ನು ಹರನಿಗೊಪ್ಪಿಸಿ ಆತನೊಡಗುಡಿ ಸವಿಯುತ್ತಿದ್ದರೆ ಅದು ಬಹಳ ರುಚಿಯಾಗಿತ್ತೆಂದು , ಸಂತೋಷದಿಂದ ಸವಿಯುತ್ತಿದ್ದರೆಂಬುದರ ಬಗ್ಗೆ ವಿವರಿಸಿದ್ದಾರೆ .

ವಿವರಣೆ : ಅಂಬಲಿಯನ್ನು ಚೆನ್ನನು ಹರನೊಡಗೂಡಿ ಏಕಾಂತದಲ್ಲಿ ಸವಿ ಯುತ್ತಿರಲು ಭೂಲೋಕ್ಕೆ ಸ್ವರ್ಗವೇ ಇಳಿದು ಬಂದಷ್ಟು ಹೊಸ ಪುಳಕಿತ ಮನೋಭಾವ ಉಂಟಾಗುತ್ತಿತ್ತು .

ವಿಶೇಷತೆ : ಚೆನ್ನಯ್ಯನ ಭಕ್ತಿ , ‘ ಹರನ ಪ್ರೀತಿ ಇಲ್ಲಿ ಮೂಡಿ ಬಂದಿದೆ , ದರೆಗೆ ಸ್ವರ್ತ ವಿಳಿಯದೆ ಪರಿಸುವ ರೀತಿ ಇದಾಗಿದೆ .

4. ಅಹ ನಿಮ್ಮರಸುತನವೆಮ್ಮಲ್ಲ ಮಾಳ್ವರೇ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನು ರಚಿಸಿರುವ “ ದೇವನೊಲಿದವನ ಕುಲವೇ ಸತ್ಕಲಂ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚೋಳರಾಜನು ಮಹಾನ್ ಹರಭಕ್ತನು , ಆತನು ಹರನನ್ನು ವಿಜೃಂಭಣೆಯಿಂದ ಪೂಜಿಸಿ , ಆರಾಧಿಸಿ ಭಕ್ಷ ಭೋಜ್ಯಗಳನ್ನು ನೈವೇದ್ಯ ಅರ್ಪಿಸಿ ಅದನ್ನು ಸ್ವೀಕರಿಸಲು ಬೇಡಿದಾಗ ಹರನು ದಿನವೂ ಅದನನು ಸೇವಿಸುತ್ತಿರಲು ಆ ದಿನ ಏನನ್ನು ಸವಿಯದೆ ಇದ್ದುದನ್ನು ಕಂಡು ಬಹಳವಾಗಿ ನೊಂದು ಪರಿಪರಿಯಾಗಿ ಬೇಡಲು ಹರನು ಚೋಳನಿಗೆ ಈ ವಾಕ್ಯವನ್ನು ಹೇಳಿದನು .

ವಿವರಣೆ : ಹರನು , ಚೋಳರಾಜನಿಗೆ , ವಿಚಾರ ಮಾಡದೆ ಏನೇನೋ ನುಡಿಯುತ್ತಿರುವೆಯಲ್ಲಾ , ನಿನ್ನ ಅರಸುತನದಲ್ಲಿ ನಿನ್ನ ವಿಜೃಂಭಣೆ ಭೋಗ – ಭಾಗ್ಯದಲ್ಲಿ ಯಾವ ಲೋಪವು ಇಲ್ಲ ಆದರೆ ರಾಜನಾಗುವ ನಿನಗೆ ಸೈರಣೆ ಇಲ್ಲದಾಗಿದೆ ಎಂಬುದನ್ನು ಹರನು ಚೋಳ ರಾಜನಿಗೆ ತಿಳಿಸಿಕೊಟ್ಟಿದ್ದಾನೆ .

ವಿಶೇಷತೆ : ಹರನು ಭಕ್ತರ ಪಾಲಿಗೆ ಎಷ್ಟು ಬೇಗ ಒಲಿಯುವನು , ಹೇಗೆ ತನ್ನ ಭಕ್ತರನ್ನು ಸಂತೈಸುವನೆಂಬ ಅರಿವು ಉಂಟಾಗುತ್ತದೆ .

5. ನಿಂದು ಚೋಳಂ ಕಾತರ ಮಿಕ್ಕು ನೋಡುತಂ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನ್ನು ರಚಿಸಿರುವ “ ದೇವನೊಲಿದವನ ಕುಲವೇ ಸತ್ಕಲಂ ” ಎಂ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚೋಳರಾಜನು ಹರನಿಗೆ ವಿವಿಧ ಭಕ್ಷ್ಯ ಭೋಜನಗಳನ್ನು ನೀಡಲು ಹರನು ಯಾವುದನ್ನು ಸ್ವೀಕರಿಸದೆ ಇದ್ದುದನ್ನು ಗಮನಿಸಿದಾಗ ಬಹಳವಾಗಿ ಮನನೊಂದನು , ನೊಂದ ಚೋಳನನ್ನು ಹರನು ಲಿಂಗದಿಂದ ತಾನು ಸ್ವೀಕರಿಸಿದಿರಲು ಕಾರಣವನ್ನು ತಳಿಸಿಮನ 😕 ಐಕ್ಯನಾಗಲು ಚೋಳನು ಅತ್ಯಾಶ್ಚರ್ಯದಿಂದ ಇದೆಲ್ಲವನ್ನು ನೋಡುತ್ತಿದ್ದ ಸಂದರ್ಭದಲ್ಲಿ ಈ ವಾಕ್ಯವನ್ನು ತಿಳಿಸಿದ್ದಾನೆ .

ವಿವರಣೆ : ಶಿವನು ಚೆನ್ನಯ್ಯನೊಂದಿಗೆ ಉಂಡ ವಿಚಾರವನ್ನು ಹೇಳಿ ಮನ ಲಿಂಗದೊಳಗೆ ಐಕ್ಯವಾಗಲು ಚೋಳರಾಜನು ಕುತೂಹಲ , ಆಶ್ಚರ್ಯದಿಂದ ಇವೆಲ್ಲವನ್ನು ನೋಡುತ್ತಿದ್ದನು .

ವಿಶೇಷತೆ : ಮಾನವನಿಗೆ ಕಲ್ಪನೆಗೂ ಮೀರಿ ಆಗುವ ಅನುಭವ ಎಷ್ಟು ರೋಮಾಂಚರಕಾರಿಯಾಗಿರುತ್ತದೆ ಎಂಬುದು ಇಲ್ಲಿ ತಿಳಿಯುತ್ತದೆ .

6. ದೇವ ದೇವ ನೊಲಿದವನ ಕುಲವೆ ಸತ್ಕುಲಂ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನ್ನು ರಚಿಸಿರುವ ದೇವ ನೊಲಿದವನ ಕುಲವೆ ಸತ್ಕುಲಂ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚೋಳೋನು ಭಕ್ತ ಚೆನ್ನಯ ಕಾಲಿಗೆರಗಿದಾಗ ಚೆನ್ನಯ್ಯನು ತನು ಮಾದಿಗರ ಕೀಳ ಜಾತಿಯವನು ಎಂದು ತಿಳಿದು ಕೂಡ ಅದರಲ್ಲಿಯೂ ತಾನೊಬ್ಬ ಬಡಕೂಲಿಯವ ತನ್ನ ಕಾಲಿಗೆರೆಸುವುದು ಸರಿಯೇ ಎಂಬುದಾಗಿ ಪ್ರಶ್ನಿಸಲು ಚೋಳನು ಭಕ್ತಿಭಾವದಿಂದ ಈ ವಾಕ್ಯವನ್ನು ತಿಳಿಸಿಕೊಟ್ಟಿದ್ದಾನೆ .

ವಿವರಣೆ : ಭಕ್ತನಿಗೆ ಜಾತಿ , ಕಾಲ , ಸಿರಿತನ ಬಡತನ ಯಾವುದು ಇಲ್ಲ , ಯಾರು ದೇವನ ಮನಸ್ಸು ಗೆದ್ದು ದೇವನಿಗೆ ಒಲಿಯುವನೋ ಆತನೇ ಉಚ್ಚ ಕುಲದವನು ಎಂಬುದಾಗಿ ಜಾತಿಯತೆಯ ಭಾವನೆಯನ್ನು ತಳ್ಳಿ ಹಾಕಿದ ಚೋಳರಜನ ಹಿರಿಮೆ ಈ ವಾಕ್ಯದಲ್ಲಿ ಮೂಡಿಬಂದಿದೆ .

ವಿಶೇಷತೆ : ಹರನ ಭಕ್ತರಿಗೆ ಯಾವುದೇ ಜಾತಿ ಕುಲ , ಉಚ್ಚ – ನೀಚ ಭಾವನೆಗಳು ಇರುವುದಿಲ್ಲ ಎಂಬ ಭಾವನೆ ಇಲ್ಲಿ ವ್ಯಕ್ತಪಡಿಸಲಾಗಿದೆ .

7. ಮೇಲಿನಿಗೆ ಬೀದಿಗರವಾದುದೇನ್ನೆಯ ಭಕ್ತಿ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನ್ನು ರಚಿಸಿರುವ ಮರೆತು “ ದೇವನೊಲಿದವನ ಕುಲಕವೇ ಸತ್ಕಲಂ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚೆನ್ನನಿಗೆ ಹರನಿಲ್ಲಿದ್ದುದು ಗುಪ್ತಭಕ್ತಿ ಆತನೊಬ್ಬ ಭಕ್ತ ಎಂಬುದನ್ನು ಯಾರಿಗೂ ತಿಳಿದಿರಲಿಲ್ಲ . ಆದರೆ ಈಗ ಅದು ಪ್ರಕಟವಾದ ಸಂದರ್ಭದಲ್ಲಿ ಚೋಳನು ಚೆನ್ನಯ್ಯನಿಗೆ ಈ ಮಾತನ್ನು ಹೇಳುತ್ತಾನೆ .

ವಿವರಣೆ : ಗುಪ್ತ ರೀತಿಯ ಭಕ್ತಿಯಿಂದ ನೀನು ಹರದ ಐಲಿಸಿದ ಚೆನ್ನಯ್ಯ ಭಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟು ಹರನನ್ನು ಮೆಚ್ಚಿಸಲು ಮುಖ್ಯವಾಗಿ ಬೇಕಾಗಿರುವುದು ನಿರ್ಮಲ ಮನಸ್ಸಿನ ಭಕ್ತಿಯೆಂಬುದನ್ನು ಚೋಳನು ತೋರಿಸಿ ಕೊಟ್ಟ ಸ್ವಾರಸ್ಯಕರ ಸಂಗತಿ ಇಲ್ಲಿದೆ .

ವಿಶೇಷತೆ : ನಿಜವಾದ ಭಕ್ತಿಯ ಅರಿವು ಈ ವಾಕ್ಯದಿಂದ ತಿಳಿದು ಬರುತ್ತದೆ .

8. ಕಾವೇರಿ ಸೋಂಕಿದವರ ಪಾಪಮಂ ಸೋವೇರಿ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನ್ನು ರಚಿಸಿರುವ “ ದೇವನೊಲಿದವನ ಕುಲವೇ ಸತ್ಕಲಂ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚೋಳ ದೇಶದಲ್ಲಿ ಹರಿಯುತ್ತಿದ್ದ ಕಾವೇರಿ ನದಿಯ ಪಾವಿತ್ರತೆಯ ಬಗ್ಗೆ ಹೇಳುತ್ತಾ ಕವಿ ಈ ವಾಕ್ಯವನ್ನು ಉದ್ಧರಿಸಿದ್ದಾನೆ .

ವಿವರಣೆ : ಕಾವೇರಿ ನದಿ ಅತ್ಯಂತ ಪವಿತ್ರ ನದಿ , ಈ ನದಿಯ ನೀರು ಶೋಂಕಿದವರಿಗೆ ಅಂದರೆ ಈ ನದಿಯ ನೀರನ್ನು ಉಪಯೋಗಿಸಿದರೆ ಅವರ ಪಾಪವೆಲ್ಲ ನಿವಾರಣೆಯಾಗುವುದು ಎಂಬುದು ಈ ಮೇಲ್ಕಂಡ ವಾಕ್ಯದ ಸ್ವಾರಸ್ಯ .

ವಿಶೇಷತೆ : ಕಾವೇರಿ ನದಿಯ ಪಾವಿತ್ರತೆಯನ್ನು ಇಲ್ಲಿ ಬಣ್ಣಿಸಲಾಗಿದೆ .

9. ಇಳಿಪಿದಂ ಸರ್ವಾಂಗಮಂ ಚೆನ್ನನಂಗ್ರಿಯೊಳು

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಕವಿ ಹರಿಹರನ್ನು ರಚಿಸಿರುವ “ ದೇವನೊಲಿದವನ ಕುಲವೇ ಸತ್ಕಲಂ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚೋಳರಾಜನು ಹರನ ಬಾಯಿಂದ ಚೆನ್ನನ ಭಕ್ತಿಯ ಬಗ್ಗೆ ತಿಳಿದು ಹರನೊಂದಿಗೆ ಉಣ್ಣುವ ಆ ಮಹಾನ್ ಭಕ್ತ ಚೆನ್ನಯ್ಯನನ್ನು ಅರಸುತ್ತ ಕಾಲ್ನಡಿಗೆಯಲ್ಲಿಯೇ ಬಂದು ಆತನ ಗುಡಿಸಲಲ್ಲಿ ಕಂಡ ದೃಶ್ಯ ಹಾಗೂ ಚಎನ್ನಯ್ಯನ ಬಗ್ಗೆ ಚೋಳರಾಜನಿಗೆದ್ದ ಅನುಭವವನ್ನು ಈ ಸಾಲುಗಳಲ್ಲಿ ವ್ಯಕ್ತಪಡಿಸಲಾಗಿದೆ

ವಿವರಣೆ : ಚೋಳನು , ಚೆನ್ನಯ್ಯನ ಗುಡಿಸಲಲ್ಲಿ ಆತನನ್ನು ಅಪಾರ ಮಸಕ್ಕೆ ನೋಡಿ ತನ್ನ ಸರ್ವಾಂಗವನ್ನು ಚೆನ್ನನ ಪಾದಕ್ಕೆ ಅರ್ಪಿಸಿ ನಮಸ್ಕರಿಸಿದನು ಎಂಬ ಭಾವ ಈ ವಾಕ್ಯದಲ್ಲಿ ಮೂಡಿ ಬಂದಿದೆ .

ವಿಶೇಷತೆ : ಹರನು ಭಕ್ತನೆದುರು ಚೋಳನು ತಾ ರಾಜ ಎಂಬುದನ್ನು ಮರೆತು ಚೆನ್ನಯ್ಯನ ಪಾದಗಳಿಗೆ ಬಿದ್ದು ನಮಸ್ಕರಿಸುವುದು ಚೋಳವ ಭಕ್ತಿ ಭಾವವನ್ನು ವ್ಯಕ್ತಪಡಿಸುತ್ತದೆ .

1st P.U.C Kannada Devanolidana Kulave Sathkulam Notes PDF Download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 1PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published.

close

Ad Blocker Detected!

Ad Blocker Detected! Please disable the adblock for free use

Refresh