1st PUC Kannada Vachanagalu Notes Question Answer Pdf, Allama Prabhu, Akkamahadevi, Gattivalayya Vachanagalu in Kannada Notes, ಪ್ರಥಮ ಪಿ.ಯು.ಸಿ ಕನ್ನಡ ವಚನಗಳು ನೋಟ್ಸ್ ಪ್ರಶ್ನೋತ್ತರಗಳು, 1st Puc Kannada 2nd Poem Notes Ghattivalayya Vachanagalu in Kannada 1st Puc Kannada Vachanagalu Questions and Answers KSEEB Solutions For Class 11 Kannada Poem 2 Notes
ತರಗತಿ: ಪ್ರಥಮ ಪಿ.ಯು.ಸಿ
ಕಾವ್ಯಾ ಭಾಗದ ಹೆಸರು: ವಚನಗಳು
ವಚನಕಾರ ಹೆಸರು: 1).ಅಲ್ಲಮಪ್ರಭು 2) ಘಟ್ಟಿವಾಳಯ್ಯ 3) ಅಕ್ಕಮಹಾದೇವಿ
ವಚನ – ವಚನಕಾರ : ಅಲ್ಲಮಪ್ರಭು ( ೧೧೬೦ )
ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವೆ ಇವನ ಜನ್ಮಸ್ಥಳ . ಯೌವನದಲ್ಲಿಯೇ ವಿರಕ್ತಿಯತ್ತ ಮುಖ ಮಾಡಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಬಾರಿಸುವ ಸೇವೆ ಮಾಡುತ್ತಿದ್ದನು . ಶಿವನ ಧ್ಯಾನದಲ್ಲಿ ಆಸಕ್ತನಾಗಿ , ಆಳವಾದ ಆತ್ಮಚಿಂತನೆ ನಡೆಸಿ , ತನ್ನ ಕಾಣ್ಕೆಯನ್ನು ವಚನಗಳಲ್ಲಿ ಪ್ರಕಟಿಸಿದ್ದಾನೆ. ಅನುಭವ ಮಂಟಪದ ಅಧ್ಯಕ್ಷನಾಗಿದ್ದ . ಬಸವಣ್ಣ , ಅಕ್ಕಮಹಾದೇವಿ , ಚೆನ್ನಬಸವಣ್ಣ , ಸಕಲೇಶಮಾದರಸ ಮುಂತಾದ ಶರಣರಿಗೆ ಮಾರ್ಗದರ್ಶಕನಾಗಿದ್ದನು .
ಅಲ್ಲಮಪ್ರಭುವಿನ ವಚನಗಳು ಪ್ರತಿಭಟನಾತ್ಮಕ , ವಿಚಾರಾತ್ಮಕ ಹಾಗೂ ವಿಮರ್ಶಾತ್ಮಕ ಅಂಶಗಳನ್ನೊಳಗೊಂಡು ಸತ್ಯಾನ್ವೇಷಣೆಯ ದಿಕ್ಕಿಗೆ ಕೊಂಡೊಯ್ಯುತ್ತವೆ. ಇಂತಹ ಸಂದರ್ಭದಲ್ಲಿ ಅವನ ವಾಕ್ಯಕ್ತಿ ಹಾಗೂ ಪದಪ್ರಯೋಗಗಳು ನೇರವಾಗಿರುತ್ತವೆ . ಹೇಳಲಿಚ್ಛಿಸಿದ್ದನ್ನು ಅಳುಕದೆ ಹೇಳುವುದು ಇವನ ವಚನಗಳ ವೈಶಿಷ್ಟ್ಯ
ತಾನು ಪಡೆದ ಲೋಕಾನುಭವವನ್ನು ಇತರರಿಗೆ ಹಂಚುವ ಪ್ರಯತ್ನ ಮಾಡಿದ್ದಾನೆ . ದೇಹವನ್ನು ಬಂಡಿಗೆ ಪೋಲಿಸಿ ಅದನ್ನು ಆಳಲು ಪ್ರಯತ್ನ ಮಾಡುವ ಪಂಚೇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಅನಾಹುತಕ್ಕೆ ಆಹ್ವಾನವಿತ್ತಂತೆ .
ಆಡಂಬರದ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸುವ ಮನೋಭಾವನೆಯ ಜೊತೆಗೆ ಶರಣ ಮತ್ತು ಆರಾಧನೆಯ ನಡುವಿನ ವ್ಯತ್ಯಾಸವನ್ನು ಖಂಡಿಸುವ ಪ್ರವೃತ್ತಿಯಿದೆ . ದೇವರನ್ನೇ ಪ್ರಶ್ನಿಸುವ ಹಾಗೂ ನಾನೇ ದೇವರೆನ್ನುವ ಧೈರ್ಯ ಇವನ ವಚನಗಳಲ್ಲಿ ಕಂಡುಬರುತ್ತದೆ .
ಪದಕೋಶ :
ಐವರು ಮಾನಿಸರು ಪಂಚೇಂದ್ರಿಯಗಳು ; ಅಚ್ಚು – ಆಧಾರ ಭಾಗ ; ಓಗರ – ಅನ್ನ ; ಸ್ವಾಯತ – ಧರಿಸುವಿಕೆ ; ಮಳೆ – ಪೊದೆ ; ಮೊಟ್ಟೆ – ಗಂಟು; ಆರೈದು – ಹುಡುಕಾಡಿ ; ಕುಡಿತೆ – ಗುಟುಕು , ಬೊಗಸೆ .
ವಚನ – ವಚನಕಾರ : ಘಟ್ಟಿವಾಳಯ್ಯ ( ೧೧೬೦ )
ಶತಮಾನದ ವಚನಕಾರ ಹಾಗೂ ಶರಣ . ಮುದ್ದಣ್ಣ ಇವನ ಶಿವಾನುಭವ ಸಾರುವ ನರ್ತನವೆ ಇವನ ಕಾಯಕ , ಕಪಟಿಗಳು ಇವನ ಸದಾಚಾರ ಪ್ರಭಾವದಿಂದಾಗಿ ನೈಜ ಜಂಗಮರಾದದ್ದು ಇವನ ವೈಶಿಷ್ಟ್ಯ , ಮದ್ದಳೆ ಬಾರಿಸುತ್ತಾ ನರ್ತಿಸುವಾಗಲೇ ಕೊನೆಯುಸಿರೆಳೆದನು . ಹನ್ನೆರಡನೇ ಪೂರ್ವನಾಮಧೇಯ . ಘಟ್ಟಿವಾಳಯ್ಯನು ತನ್ನ ವಚನಗಳಲ್ಲಿ ಡಾಂಭಿಕ ಭಕ್ತರ ನಡವಳಿಕೆಗಳೆಲ್ಲಾ ವ್ಯರ್ಥವೆನ್ನುತ್ತಾನೆ . ವೇಷಧಾರಿಗಳೆಲ್ಲರು ಭಕ್ತರಾಗಲು ಸಾಧ್ಯವಿಲ್ಲ . ಶರಣರ ಗುಂಪಿನಲ್ಲಿ ಅವರು ಸೇರಲು ಅರ್ಹರಲ್ಲವೆಂದು ಹೇಳುತ್ತಾನೆ . ಗುರು ಲಿಂಗ ಜಂಗಮ ಕಲ್ಪನೆಗೆ ಹೊಸ ಆಯಾಮವನ್ನು ನೀಡುವ ಮತ್ತು ಹೊಸ ವ್ಯಾಖ್ಯಾನ ನೀಡುವ ಇವನ ಧೈರ್ಯ ಪ್ರಶಂಸನೀಯ .
ಪದಕೋಶ :
ಇರಿ – ಕೊಲ್ಲು , ತಿವಿ , ಕತ್ತರಿಸು ; ಕೈದು – ಆಯುಧ ; ಮೊನೆ ತುದಿ , ತೀಕ್ಷ್ಯತೆ , ಧೈರ್ಯ ; ದಾಡೆ – ಕೋರೆಹಲ್ಲು , ದವಡೆಹಲ್ಲು ; ಸುಧೆ- ಹಾಲು , ಅಮೃತ ; ಕೂಟ – ಬೆರೆಯುವುದು , ರಾಶಿ , ನೆತ್ತಿ , ಮೋಸ ; ಅಜಾತ – ಹುಟ್ಟಿಲ್ಲದವ , ಸ್ವಯಂಭು , ಶಿವ ; ತಗಹು- ಕಟ್ಟುಪಾಡು ; ಕಟ್ಟು – ನಿರ್ಬಂಧ ; ಭಾಷೆಹೀನ – ವಚನಭ್ರಷ್ಟ , ಮಾತಿಗೆ ತಪ್ಪಿದವನು ; ಸೂತಕ – ಜನನ ಮರಣದ ಸಂದರ್ಭದಲ್ಲಿ ಆಚರಿಸುವ ಮೈಲಿಗೆ.
ವಚನ ವಚನಕಾರ್ತಿ : ಅಕ್ಕಮಹಾದೇವಿ ( ೧೧೬೦ )
ಹನ್ನೆರಡನೆಯ ಶತಮಾನದ ಪ್ರಸಿದ್ಧ ವಚನಕಾರ್ತಿ . ಈಕೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿ ( ಉಡುಗಣಿ ) ಯವಳು . ಬಾಲ್ಯದಿಂದಲೇ ಶಿವನಲ್ಲಿ ಅಪಾರವಾದ ಭಕ್ತಿಯಿದ್ದ ಈಕೆಗೆ ಕೌಶಿಕನೆಂಬ ರಾಜನೊಡನೆ ಬಲವಂತದ ವಿವಾಹವಾಗುತ್ತದೆ . ಶಿವಭಕ್ತಿಗೆ ಅಡ್ಡಿಪಡಿಸಿದ ಅವನನ್ನು ತೊರೆದು ಕಲ್ಯಾಣಕ್ಕೆ ಸಾಗುತ್ತಾಳೆ . ಶರಣರೊಂದಿಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಪಾಲ್ಗೊಂಡು ನಂತರ ಶ್ರೀಶೈಲದ ಕದಳಿವನದಲ್ಲಿ ಐಕ್ಯಳಾದಳೆಂದು ಐತಿಹ್ಯ . ಲೌಕಿಕ ಬಂಧನದಲ್ಲಿ ಸಿಲುಕಿದ ಭಕ್ತನಿಗೆ ಮುಕ್ತಿಯಿಲ್ಲ . ಆತ್ಮ ಪರಮಾತ್ಮನಲ್ಲಿ ಒಂದಾದಾಗ ಅಂತಹ ಭಕ್ತನಿಗೆ ಭವವಿಲ್ಲ , ಶರಣರ ಸಂಗದಿಂದ ಬದುಕು ಸಾರ್ಥಕ ಇಲ್ಲದಿದ್ದರೆ ನಿರರ್ಥಕವೆಂಬ ಆಶಯಗಳನ್ನು ಪ್ರಸ್ತುತ ವಚನಗಳು ವ್ಯಕ್ತಪಡಿಸುತ್ತವೆ .
ಪದಕೋಶ :
ಸಂಕೋಲೆ – ಬೇಡಿ , ಬಂಧನ ; ತೊಡರು – ತೊಂದರೆ ; ಚೇಷ್ಟೆ – ಚಟುವಟಿಕೆ ; ಕರಣ ತ್ರಿಕರಣಗಳು ( ಕಾಯಾ , ವಾಚಾ , ಮನಸಾ ) ; ಭವ – ಹುಟ್ಟು ; ಶೃಂಗಾರ – ಅಲಂಕಾರ , ಭೂಷಣ ; ಗಣ – ಶಿವಗಣ ; ಮೇಳಾಪ – ಸಮೂಹ ; ಬಾತೆ – ಪ್ರಯೋಜನ.
1st Puc Kannada allama prabhu Vachanagalu Notes Quotion answer
(ವಚನ – ವಚನಕಾರ : ಅಲ್ಲಮಪ್ರಭು)
I. ಒಂದು ವಾಕ್ಯದಲ್ಲಿ ಉತ್ತರಿಸಿ .
1. ಕಾಲುಗಳನ್ನು ಯಾವುದಕ್ಕೆ ಹೋಲಿಸಲಾಗಿದೆ ?
Ans: ಕಾಲುಗಳನ್ನು ಗಾಲಿಗಳಿಗೆ ಹೋಲಿಸಲಾಗಿದೆ .
2. ಅಲ್ಲಮಪ್ರಭುವಿನ ಅಂಕಿತ ಯಾವುದು ?
Ans: “ ಅಲ್ಲಮ ಪ್ರಭುವಿನ ಅಂಕಿತ , “ ಗುಹೇಶ್ವರಾ.
3.ಕಟ್ಟೋಗರದ ಮೊಟ್ಟೆಯನ್ನು ಎಲ್ಲಿ ಕಟ್ಟಲಾಗಿದೆ ?
Ans:ಹೊಟ್ಟೆಯ ಮೇಲೆ ಕಟ್ಟೋಗರದ ಮೊಟ್ಟೆಯನ್ನು ಕಟ್ಟಲಾಗಿದೆ .
4. ದೇಹವೆಂಬುದೇನು ?
Ans: ದೇಹವೆಂಬುದು ಬಂಡಿ
5. ಇಟ್ಟ ಕಲ್ಲು ಎಲ್ಲಿ ಸಿಕ್ಕರೆ ಲಿಂಗವೆಂದು ಕೇಳುತ್ತಾನೆ ?
Ans: ಇಟ್ಟ ಕಲ್ಲು ಮಳೆಯಲ್ಲಿ ಸಿಕ್ಕರೆ ಅದು ಲಿಂಗವೆಂದು ಕೇಳುತ್ತಾರೆ .
6. ಹಸಿದಾಗ ಏನನ್ನು ನೀಡಬೇಕೆಂದು ಅಲ್ಲಮ ಹೇಳುತ್ತಾನೆ ?
Ans:ಹಸಿದಾಗ ಒಂದು ತುತ್ತಾದರೂ ಅನ್ನ ನೀಡಬೇಕೆಂದು ಅಲ್ಲಮ ಹೇಳುತ್ತಾನೆ .
II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .
1 . ಕಾಲು ಮತ್ತು ದೇಹವನ್ನು ಯಾವುದಕ್ಕೆ ಹೋಲಿಸಲಾಗಿದೆ ?
Ans: ಕಾಲುಗಳನ್ನು ಗಾಲಿಗಳಿಗೂ , ದೇಹವನ್ನು ಬಂಡಿಗೂ ಹೋಲಿಸಲಾಗಿದೆ .
2. ಯಾರನ್ನು ಕಂಡರೆ ಅಲ್ಲಮ ನಾಚುವೆನೆಂದು ಹೇಳುವನು ?
Ans: ಡಾಂಬಿಕ , ಆಡಂಬರದ ಹಾಗೂ ಯಾಂತ್ರಿಕ ಭಕ್ತಿಯನ್ನು ಪ್ರಶ್ನಿಸುವ ಮನೋಭಾವನೆಯನ್ನು ಹೊಂದಿರುವ ಭಕ್ತರನ್ನು ಕಂಡು ಅಲ್ಲಮನು ನಾಚುವನು .
3. ಅಲ್ಲಮ ಏನನ್ನು ನೀಡುವುದರಿಂದ ನಾದೇವ ‘ ಎಂದು ಹೇಳುತ್ತಾನೆ ?
Ans: ಬಾಯಾರಿದವರಿಗೆ ನೀರನ್ನು , ಹಸಿದವರಿಗೆ ಅನ್ನವನ್ನು ನೀಡುವುದರಿಂದ ಅಲ್ಲಮ “ ನಾದೇವ ‘ ಎಂದು ಹೇಳುತ್ತಾನೆ .
II . ಐದು ಆರು ವಾಕ್ಯಗಳಲ್ಲಿ ಉತ್ತರಿಸಿ .
2. ಆಡಂಬರ ಭಕ್ತಿಯನ್ನು ಅಲ್ಲಮ ಹೇಗೆ ಖಂಡಿಸುತ್ತಾನೆ ?
Ans: ಆಡಂಬರದ ಭಕ್ತಿಯನ್ನು ಅಲ್ಲಮ ಖಂಡಿಸುತ್ತಾನೆ . ಹಸಿದವನಿಗೆ ಹೊಟ್ಟೆಗೆ ಅನ್ನ ನೀಡಬೇಕು ಅದ ಬಿಟ್ಟು ಹೊಟ್ಟೆಯ ಮೇಲೆ ಅನ್ನದ ಗಂಟು ಕಟ್ಟಿದರೆ ಆತನ ಹಸಿವು ನೀಗಲಾರದು . ಇದು ಆಡಂಬರ ಭಕ್ತಿಯ ಸೋಗೆ ಹೊರಗು , ನಿಜವಾದ ಭಕ್ತಿಯು ಅಲ್ಲ , ಸೇವೆಯೂ ಅಲ್ಲ , ಕೊರಳಲ್ಲಿ ಲಿಂಗವನ್ನು ಕಟ್ಟಿದ ಮಾತ್ರಕ್ಕೆ ಆತ ಶರಣನಾಗುವುದಿಲ್ಲ . ಮಳೆ ಮೇಲೆ ಲಿಂಗ ಇಟ್ಟಾಕ್ಷಣ ಆತ ಗುರುವು ಆಗಲಾರ ಆ ಕಲ್ಲು ಲಿಂಗವೂ ಆಗಲಾರದು , ಮಳೆ ಭಕ್ತನೂ ಆಗಲಾರನು . ಇವೆಲ್ಲಾ ಆಡಂಬರದ ಭಕ್ತಿಯೇ ಹೊರತು ನಿಜವಾದ ಭಕ್ತಿಯಲ್ಲ ಎಂಬುದಾಗಿ ಅಲ್ಲಮ ಖಂಡಿಸಿದ್ದಾನೆ .
3. ಅಲ್ಲಮ ಪ್ರಭುವಿನ ವಚನಗಳ ಆಶಯಗಳೇನು ?
Ans: ಅಲ್ಲಮ ಪ್ರಭುವಿನ ವಚನಗಳ ಆಶಯವೆಂದರೆ
- ಪಂಚೇಂದ್ರಿಯಗಳನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳುವುದು
- ಆಡಂಭರ ಹಾಗೂ ಡಾಂಭಿಕ ಭಕ್ತಿಯನ್ನು ಖಂಡಿಸುವುದು .
- ಹೊರ ಜಗತ್ತಿಗೆ ಮಾತ್ರ ಮನುಷ್ಯನಾಗಿ ಮೆರೆದು ತೋರಿಸಿ ಕೊಳ್ಳದೆ ತನ್ನ ಒಳಗೂ ಮನುಷ್ಯತ್ವವನ್ನು ಮೆರೆದು , ಸಂಕಟದಲ್ಲಿರುವವನನ್ನು ಸಲಹು ‘ ಎಂದು ಹೇಳುವುದು ಹಾಗೂ ದೇವರನ್ನು ಪ್ರಶ್ನಿಸುವ ಹಾಗೂ ತಾನೇ ಸಂಕಟದಲ್ಲಿರುವವನನ್ನು ಸಲಹುತ್ತಾ ಆತನೇ ದೈವವಾಗಬಲ್ಲ ” ಎಂಬುದನ್ನು ತೋರಿಸಿ ಕೊಡುವುದು ಈ ವಚನಗಳಲ್ಲಿನ ಆಶಯವಾಗಿದೆ .
3. ದೇಹವೆಂಬ ಬಂಡಿಯನ್ನು ಹೇಗೆ ನಡೆಸಬೇಕೆಂದು ತಿಳಿಸಲಾಗಿದೆ ?
Ans: ದೇಹವೆಂಬ ಬಂಡಿಯನ್ನು ಐವರು ಮಾನಿಸರಾದ ಪಂಚೇಂದ್ರಿಯಗಳು ಓಡಿಸುತ್ತಿರುವುದರಿಂದ ಅಂದರೆ ದೇಹವನ್ನು ಆಳುವ ಪಂಚೇಂದ್ರಿಯಗಳನ್ನು ಹದ್ದುಬಸ್ತಿನಲಿ ಇಟ್ಟುಕೊಂಡು ಓಡಿಸಬೇಕೆಂದು ಹೇಳಿದ್ದಾರೆ . ಒಂದು ವೇಳೆ ಹದ್ದು ಬಸ್ತಿನಲ್ಲಿಡದಿದ್ದಲ್ಲಿ ಅನಾಹುತಕ್ಕೆ ಆಹ್ವಾನವಿತ್ತಂತೆ ಆಗುವುದು ಎಂಬುದಾಗಿ ಅಲ್ಲಮ ಪ್ರಭು ತಿಳಿಸಿದ್ದಾನೆ .
ಅಭ್ಯಾಸ
I. ಸಂದರ್ಭ ಸೂಚಿಸಿ ವಿವರಿಸಿ ,
1. “ ಮೆಳೆ ಭಕ್ತನೆ ? ಇಟ್ಟಾತ ಗುರುವೆ ?
Ans ” ಪ್ರಸ್ತಾವನೆ : ಪ್ರಸ್ತುತ ಈ ಸಾಲುಗಳನ್ನು ‘ ಅಲ್ಲಮಪ್ರಭು ‘ ಎರಚಿತ “ ವಚನಗಳು ಎಂಬ ವಚನ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಶರಣರ ಡಾಂಬಿಕ ಆಡಂಬರವನ್ನು ಪ್ರಶ್ನಿಸುತ್ತಾ , ಅಲ್ಲಮ ಪ್ರಭು ನಿಜವಾದ ಭಕ್ತನಾರೆಂಬುದನ್ನು ತಿಳಿಸುತ್ತಾ ಈ ಮಾತನ್ನು ಹೇಳಿದ್ದಾರೆ .
ವಿವರಣೆ : ಕಲ್ಲನ್ನು ಮಳೆ ಅಥವಾ ಪೊದೆಯ ಮೇಲೆ ಹಾಕಿದಾಕ್ಷಣ ಕಲ್ಲು ಲಿಂಗವಾಗುವುದೇ ? ಅಥವಾ ಆ ಮೆಳೆ ಭಕ್ತನಾಗುವುದೇ ? ಅದನ್ನು ಮೊದೆ ಅಥವಾ ಮಳೆಯ ಮೇಲೆ ಹಾಕಿದಾತ ಗುರು ಆಗುವನೆ ? ಎಂದು ಪ್ರಶ್ನಿಸಿದ್ದಾರೆ . ಅಂದರೆ ಮಳೆಯಲ್ಲಿ ಇಟ್ಟ ಕಲ್ಲು ಹೇಗೆ ಲಿಂಗವಾಗುವುದಿಲ್ಲವೋ , ಆ ಪೊದೆಯಾ ( ಮಳೆಯಾ ) ಭಕ್ತನಾಗುವುದಿಲ್ಲ . ಕಲ್ಲನ್ನು ಇಟ್ಟಾತ ” ಗುರು ‘ ಆಗುವುದಿಲ್ಲ ಎಂಬುದಾಗಿ ಅಲ್ಲಮ ಪ್ರಭು ಡೊಂಗಿತನವನ್ನು ಅಲ್ಲಗಳೆದಿದ್ದಾರೆ . ವಿಶೇಷತೆ : ಆಡಂಬರ ಶರಣರ ಬಗ್ಗೆ ಅಲ್ಲಮಪ್ರಭು ವಿಚಾರಾತ್ಮಕವಾಗಿ ಹಾಗೂ ವಿಮರ್ಶಾತ್ಮಕವಾಗಿ ಚರ್ಚಿಸಿರುವುದು ಈ ಸಾಲಿನಿಂದ ತಿಳಿದು ಬರುತ್ತದೆ . ಭಾಷೆ , ಸರಳ ಹಾಗೂ ಸಹಜವಾಗಿ ಮೂಡಿ ಬಂದಿದೆ .
2, “ ನೀ ದೇವನಾದಡೆ ಎನ್ನನೇಕೆ ಸಲಹೆ ”
Ans ಪ್ರಸ್ತಾವನೆ : ಪ್ರಸ್ತುತ ವಾಕ್ಯವನ್ನು ಅಲ್ಲಮ ಪ್ರಭು ರಚಿಸಿರುವ ವಚನಗಳಿಂದ ಆರಿಸಲಾಗಿದೆ .
ಸಂದರ್ಭ : ಅಲ್ಲಮ ಪ್ರಭುವಿನ ಪ್ರತಿಭಟನಾತ್ಮಕ ಮನೋಭಾವನೆ , ದೇವರನ್ನು ದಿಟ್ಟಿಸಿ ಪ್ರಶ್ನಿಸುವ ಧೈರ್ಯ ಈ ಸಾಲಿನಲ್ಲಿ ಕಂಡು ಬಂದಿದೆ .
ವಿವರಣೆ : ಅರ್ಜುನನ ಪುತ್ರನಾದ ಹೇ ವೀರ ಅಭಿಮನ್ಯು , ನಿನ್ನ ಶೌಲ್ಯಕ್ಕೆ ಸರಿಸಾಟಿಯಾದ ವೀರರುಂಟೆ ? ಎಂಬುದು ಈ ವಾಕ್ಯದ ಭಾವಾರ್ಥವಾಗಿದೆ .
ವಿಶೇಷತೆ : ಅಭಿಮನ್ಯುವನ್ನು ಶತ್ರುವಾದರೂ ದುರ್ಯೋಧನನು ಅವನ ವೀರತೆಯನ್ನು ಪ್ರಶಂಸಿಸುತ್ತಿದ್ದಾನೆ . 3. ನೀಂ ಕ್ರಮವಿಪರ್ಯಯಂ ಮಾಡುವುದೇ ?
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು “ ಅಲ್ಲಮ ಪ್ರಭು ” ರಚಿಸಿರುವ ವಚನಗಳಿಂದ ಆರಿಸಲಾಗಿದೆ . ಸಂದರ್ಭ : ಅಲ್ಲಮ ಪ್ರಬುವಿನ ಪ್ರತಿಭಟನಾತ್ಮಕ ಮನೋಭಾವನೆ , ದೇವರನ್ನು ದಿಟ್ಟಿಸಿ ಪ್ರಶ್ನಿಸುವ ಧೈರ್ಯ ಈ ಸಾಲಿನಲ್ಲಿ ಕಂಡು ಬಂದಿದೆ . ವಿವರಣೆ : ಅಲ್ಲಮ ಪ್ರಭುವಿನ ದಿಟ್ಟತನ ಇಲ್ಲಿ ಕಂಡು ಬರುತ್ತದೆ . ಭಾಷೆ ಸರಳ ಹಾಗೂ ಸಹಜತೆಯಿಂದ ಕೂಡಿದೆ .
3 ‘ ಬಂಡಿಯ ಹೊಡೆವವರು ಮಾನಿಸರು
Ans ಪ್ರಸ್ತಾವನೆ : ಪ್ರಸ್ತುತ ಈ ಸಾಲುಗಳನ್ನು ಅಲ್ಲಮಪ್ರಭು ‘ ರಚಿಸಿರುವ ಆತನ ವಚನಗಳಿಂದ ಆರಿಸಲಾಗಿದೆ .
ಸಂದರ್ಭ : ಈ ವಾಕ್ಯವನ್ನು ಅಲ್ಲಮ ಪ್ರಭು , ದೇಹವನ್ನು ಬಂಡಿಗೆ ಹೋಲಿಸಿ , ಅದನ್ನು ಆಳಲು ಪ್ರಯತ್ನ ಮಾಡುವ ಪಂಚೇಂದ್ರಿಯಗಳು ಎಂದು ಹೇಳುವ ಸಂದರ್ಭದಲ್ಲಿ ಈ ವಾಕ್ಯವನ್ನು ಓದುಗರಿಗೆ ತಿಳಿಸಿದ್ದಾರೆ .
ವಿವರಣೆ : ‘ ದೇಹ ‘ ಎಂಬ ಬಂಡಿಯನ್ನು ಓಡಿಸುವವರು ಐವರು ಮಾನಿಸರು , ಅ ೦ ದರೆ ಪಂಚೇಂದ್ರಿಯಗಳು ‘ ಎಂಬುದು ಈ ವಾಕ್ಯದ ಅರ್ಥ , ‘ ಕಣ್ಣು , ಮೂಗು , ನಲಿಗೆ , ಕಿವಿ , ಚರ್ಮ , ಈ ಐದು ಪಂಚೇಂದ್ರಿಯಗಳ ದೇಹ ಎಂಬ ಬಂಡಿಯನ್ನು ಓಡಿಸುವವರಾಗಿದ್ದಾರೆ ಎಂಬುದು ಇದರ ಭಾವಾರ್ಥ
ವಿಶೇಷತೆ : ಇಲ್ಲಿ ದೇಹವನ್ನು ಬಂಡಿಗೆ ಹೋಲಿಸಲಾಗಿದೆ ಪಂಚೇಂದ್ರಿಯಗಳನ್ನು ‘ ವಾನಿಸರು ‘ ಎಂದರೆ ಮನುಷ್ಯರಂದು ಮಾನವೀಕರಣ ಮಾಡಲಾಗಿದೆ . ಭಾಷೆ , ಸರಳ ಹಾಗೂ ಸಹಜ ಹಾಗೂ ಸುಂದರವಾಗಿದೆ .
1st PUC gattivalayya kannada Questions and Answers Notes Vachanagalu
(ವಚನ – ವಚನಕಾರ : ಘಟ್ಟಿವಾಳಯ್ಯ)
I . ಒಂದು ವಾಕ್ಯದಲ್ಲಿ ಉತ್ತರಿಸಿ .
1 . ದಯ ಧರ್ಮದ ಮೊನೆ ಯಾವುದಕ್ಕೆ ಇರುವುದಿಲ್ಲ ?
Ans ಕೊಲ್ಲುವ ಆಯುಧಗಳಿಗೆ ದಯೆ ಧರ್ಮದ ಮೊನೆ ಇರುವುದಿಲ್ಲ .
2. ತಪವನ್ನು ಘಟ್ಟಿವಾಳಯ್ಯ ಏನೆಂದು ಕರೆಯುತ್ತಾನೆ ?
Ans ತಪವನ್ನು ಘಟ್ಟಿವಾಳಯ್ಯ ಬಂಧನ ಎಂದು ಕರೆಯುತ್ತಾನೆ .
3.ನನಗೆ ಈಡಾಗುವುದು ಯಾವುದು ?
Ans ನಿಬರ್ಂಧಗಳಿಂದ ಕೂಡಿದ ವತ , ಭಾಷೆಗಳು ( ವಚನ , ಮಾತು ) ನಗೆಗೆ ಈ ಡಾಗುವುದು .
4 ಭಾಷೆಹೀನರ ಕಂಡಾಗ ಏನಾಯಿತು ?
Ans ಭಾಷೆ ಹೀನರ ಕಂಡು ನಾಚಿಕೆಯಾಯಿತು .
5. ಘಟ್ಟಿವಾಳಯ್ಯನ ಅಂಕಿತ ಯಾವುದು ?
Ans ಘಟ್ಟಿವಾಳಯ್ಯನ ಅಂಕಿತ – “ ಚಿಕ್ಕಯ್ಯಪ್ರಿಯ ಸಿದ್ದಲಿಂಗ “
II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1 ಕೈದು , ಕಾಳೋರಗಳಿಗೆ ಏನೇನು ಇರುವುದಿಲ್ಲ ?
Ans ಕೈದುಗಳಿಗೆ ದಯೆ ಧರ್ಮವೆಂಬುದು ಇರುವುದಿಲ್ಲ , ಕಾಳೋರಗಳಿಗೆ ಅಮೃತವಿರುವುದಿಲ್ಲ .
2. ತಗಹು , ಸೂತಕಗಳು ಯಾವುವು ?
Ans ನೇಮ ಎಂಬುದು ತಗಹು ಹಾಗೂ ಶೂಲವೆಂಬುದು ಸೂತಕವು .
3. ತನು ಮನದನಗಳನ್ನು ಮರೆಯಲು ಏನನ್ನು ತೋರುತ್ತಾರೆ ?
Ans ಬಾಯಾರಿದವರಿಗೆ ನೀರನ್ನು ಹಸಿದವರಿಗೆ ಅನ್ನವನ್ನು ನೀಡುವುದರಿಂದ ಅಲ್ಲಮ ‘ ನಾದೇವ ‘ ಎಂದು ಹೇಳುತ್ತಾನೆ .
IV . ಐದು ಆರು ವಾಕ್ಯಗಳಲ್ಲಿ ಉತ್ತರಿಸಿ .
1. ವ್ರತಗಳನ್ನು ಕುರಿತಂತೆ ಘಟ್ಟಿವಾಳಯ್ಯನ ನಿಲುವೇನು ?
Ans ವ್ರತಗಳನ್ನು ಕುರಿತಂತೆ ಘಟ್ಟಿವಾಳಯ್ಯ ತಪವನ್ನು ಬಂಧನವೆಂದೂ , ನೇಮವೆಂಬುದು ಕಟ್ಟುಪಾಡು ಅಥವಾ ನಿರ್ಬಂಧವೆಂದೂ , ಶೀಲವೆಂಬುದು ಸೂತಕವೆಂದೂ ಕಟ್ಟುನಿಟ್ಟಾದ ವ್ರತ ಪ್ರಯೋಜನಕ್ಕೆ ಬಾರದೆ , ಮುಂದೆ ಅದು ನಗೆಗೀಡಾಗುವುದು ಎಂಬುದು ಘಟ್ಟಿವಾಳಯ್ಯನ ನಿಲುವು ನಿಯಮಗಳ ಇಕ್ಕಟಿಗಿಂತ ಮಧುರ ಬಾಂದವ್ಯಗಳು ಮುಖ್ಯ ಎಂಬುದು ಘಟಿವಾಳಯ್ಯನ ನಿಲುವಾಗಿದೆ .
2. ಘಟ್ಟಿವಾಳಯ್ಯನ ವಚನಗಳ ಆಶಯಗಳೇನು ?
Ans ಘಟ್ಟಿವಾಳಯ್ಯ ವಚನಗಳ ಆಶಯವೆಂದರೆ – “ ಡಾಂಭಿಕ ಭಕ್ತರ ನಡವಳಿಕೆಗಳೆಲ್ಲಾ ವ್ಯರ್ಥವೆನನುತ್ತಾನೆ , ವೇಷಧಾರಿಗಳೆಲ್ಲರು ಭಕ್ತರಾಗಲು ಸಾಧ್ಯವಿಲ್ಲ , ಶರಣರ ಗುಂಪಿನಲ್ಲಿ ಅವರು ಸೇರಲು ಅರ್ಹ ರಲ್ಲವೆಂದು ಹೇಳುತ್ತಾನೆ . ಗುರು , ಲಿಂಗ , ಜಂಗಮಕ್ಕೆ ಹೊಸ ಆಯಾಮವನ್ನು ನೀಡಿದ್ದಾನೆ . ಉತ್ತಮರ ಸ್ನೇಹ ಹಿತವಾಗಿದ್ದು ಪರಸ್ಪರ ಸಂಬಂಧಗಳು ರಾಗದ್ವೇಷರಹಿತವಾಗಿರಬೇಕು . ನಿಯಮಗಳ ಇಕ್ಕಟ್ಟಿಗಿಂತ ಮಧುರ ಬಾಂಧವ್ಯಗಳು ಮುಖ್ಯವಾದವುಗಳು , ನಡೆ – ನುಡಿಗಳು ಪ್ರಮಾಣ ಬದ್ಧವಾಗಿರಬೇಕು “
3.ಘಟ್ಟಿವಾಳಯ್ಯ ವೇಷಧಾರಿಗಳನ್ನು ಕೂಠದಿಂದ ಹೊರಗು ಎನ್ನಲು ಕಾರಣಗಳೇನು ?
Ans ಘಟ್ಟಿವಾಳಯ್ಯ “ ವೇಷದಾರಿಗಳನ್ನು ಕೂಟದಿಂದ ಹೊರಗು ” ಎನ್ನುತ್ತಾರೆ . ಕಾರಣವೇನೆಂದರೆ – ಡಾಂಭಿಕ ಭಕ್ತರ ನಡವಳಿಕೆಗಳೆಲ್ಲ ವ್ಯರ್ಥ , ಎಲ್ಲರೂ ಅಂದರೆ ವೇಷದಾರಿಗಳೆಲ್ಲರೂ ಭಕ್ತರಾಗಲು ಸಾಧ್ಯವೇ ಇಲ್ಲ . ಇಂತಹವರು ಶರಣರ ಗುಂಪಿನಿಂದ ಹೊರಗುಳಿಯುವುದೇ ಲೇಸು .
Akkamahadevi Vachanagalu in Kannada Notes Question answer
(ವಚನ ವಚನಕಾರ್ತಿ : ಅಕ್ಕಮಹಾದೇವಿ)
I . ಒಂದು ವಾಕ್ಯದಲ್ಲಿ ಉತ್ತರಿಸಿ .
1.ಲೋಕದ ಚೇಷ್ಟೆಗೆ ಬೀಜವಾದುದು ಯಾವುದು ?
Ans ಲೋಕದ ಚೇಷ್ಟೆಗೆ ಬೀಜವಾದುದು ರವಿ .
2. ಅಕ್ಕನು ಹೇಳುವ ತೊಡರು ಯಾವುದು ?
Ans ಅಕ್ಕನು ಹೇಳುವ ತೊಡರೆಂದರೆ – ‘ ರತ್ನದ ಸಂಕೋಲೆ
3. ಭವ ಯಾವಾಗ ಕೆಡುವುದು ? .
Ans ಲೌಕಿಕ ಬಂಧನಕ್ಕೆ ಸಿಲುಕಿದಾಗ ಭವ ಕೆಡುವುದು .
4. ಅಕ್ಕನ ವಚನಗಳ ಅಂಕಿತ ಯಾವುದು ? ‘
Ans ಚೆನ್ನಮಲ್ಲಿಕಾರ್ಜುನಾ ‘ ಎಂಬುದು ಅಕ್ಕನ ಅಂಕಿತವಾಗಿದೆ .
5. ಸತ್ಯವ ನುಡಿವುದು ಯಾವುದರ ಶೃಂಗಾರವಾಗಬೇಕು ?
Ans ಸತ್ಯವ ನುಡಿವುದು ವಚನಕ್ಕೆ ಶೃಂಗಾರವಾಗುವುದು .
II . ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ .
1. ಲೋಕ ಹಾಗೂ ಕರಣಗಳ ಚೇಷ್ಟೆಗೆ ಬೀಜ ಯಾವುದು ?
Ans ಲೋಕದ ಚೇಷ್ಟೆಗೆ ‘ ರವಿ ‘ ಬೀಜವಾದಂತೆ ಕರಣಂಗಳ ಚೇಷ್ಠೆಗೆ ಮನವು ಬೀಜವಾಗುತ್ತದೆ .
2. ಕಣ್ಣು ಮತ್ತು ಕರ್ಣಗಳಿಗೆ ಶೃಂಗಾರ ಯಾವುದು ?
Ans ಕಣ್ಣುಗಳಿಗೆ ಶೃಂಗಾರ ಗುರುಹಿರಿಯರನ್ನು ನೋಡುವುದು , ಕರ್ಣಗಳಿಗೆ ಶೃಂಗಾರ ಪುರಾತಶ ( ಶಾಸ್ತ್ರೀಯ ಸಂಗೀತವನ್ನು ಕೇಳುವುದು )
3. ರತ್ನ ಮತ್ತು ಮುತ್ತು ಏನನ್ನು ಸೂಚಿಸುತ್ತವೆ ?
Ans ರತ್ನ ಮತ್ತು ಮುತ್ತು ಅಮೂಲ್ಯ ದ್ರವ್ಯಗಳು , ಪ್ರಸ್ತುತ ವಚನದಲ್ಲಿ “ ರತ್ನ ” ವನ್ನು “ ಸಂಕೋಲೆಗೂ ಮುತ್ತನ್ನು “ ಬಲೆಗೂ ಹೋಲಿಸಲಾಗಿದ್ದು ಇದನ್ನು ಇಲ್ಲಿ ಬಂಧನಕ್ಕಾಗಿ ಬಳಸಲಾಗಿದೆ .
IV . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .
1. ಬದುಕು ಸಾರ್ಥಕವಾಗಬೇಕಾದರೆ ಯಾವ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾಳೆ ?
Ans ನಮ್ಮ ಕಣ್ಗಳನ್ನು ಗುರುಹಿರಿಯರನ್ನು ನೋಡುವುದಕ್ಕೆ , ನಮ್ಮ ಕಿವಿಗಳು ಇಂಪಾದ ಶಾಸ್ತ್ರೀಯ ಸಂಗೀತವನ್ನು ಕೇಳುವುದಕ್ಕೆ , ನಮ್ಮ ಮಾತುಗಳು ಸತ್ಯವಾದುದನ್ನು ನುಡಿವುದಕ್ಕೆ , ಸದ್ ಭಕ್ತರ ಸಂಭಾಷಣೆಗೆ ನಮ್ಮ ಕೈಗಳು ಸೂಕ್ತ ವ್ಯಕ್ತಿಗೆ ಅಂದರೆ ಅರ್ಹ ವ್ಯಕ್ತಿಗೆ ಉಪಯುಕ್ತವಾದುದನ್ನು ದಾನ ಮಾಡುವುದಕ್ಕೆ , ಸಮಾಜದ ಸಮೂಹದಲ್ಲಿ ಎಲ್ಲರೊಂದಿಗೆ ಕೂಡಿ ಬಾಳಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ . ಅದಕ್ಕಾಗಿ ಈ ಮೇಲ್ಕಂಡ ಎಲ್ಲಾ ಅಂಶಗಳು ಇರಬೇಕೆಂದು ಅಕ್ಕಮಹಾದೇವಿ ಹೇಳುತ್ತಾರೆ .
2. ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಹೇಗೆ ನಿರೂಪಿಸಿದ್ದಾಳೆ .
Ans ಲೋಕದ ಭಜನೆಯಲ್ಲಿ ಸಿಲುಕಿದವರಿಗೆ ಮುಕ್ತಿಯಿಲ್ಲ ಎಂಬುದನ್ನು ಅಕ್ಕ ಈ ರೀತಿ ನಿರೂಪಿಸಿದ್ದಾರೆ . ರತ್ನದ ಸಂಕೋಲೆಯಿಂದ ಬಂದಿಸಿದರೂ ಅದು ಬಂಧನವೇ , ಮುತ್ತಿನ ಬಲೆಯಿಂದ ಬಂಧಿಸಿದರೂ ಅದು ಬಂಧನ ಚಿನ್ನದ ಕತ್ತಿಯಿಂದ ಕತ್ತಿಗೆ ಹೊಡೆದರೂ ಆಗಲೂ ಸಾಯುವರು , ಈ ರೀತಿ ಸದಾಕಾಲ ರತ್ನ , ಮುತ್ತು , ಚಿನ್ನಾದ ವ್ಯಾಮೋಹದಲ್ಲಿ ಲೌಕಿಕ ಸುಖ ಭೋಗಗಳಲ್ಲಿ ಇರುವವರಿಗೆ ಜನನ ಮರಣಗಳಿಂದ ಮುಕ್ತಿಯಿಲ್ಲ ಎಂಬುದಾಗಿ ಹಲವಾರು ಉದಾಹರಣೆಗಳೊಂದಿಗೆ ಅಕ್ಕಾ ನಿರೂಪಿಸಿದ್ದಾಳೆ .
3.ಹುಟ್ಟು ಸಾವನ್ನು ಮೀರುವುದು ಹೇಗೆಂದು ಅಕ್ಕಮಹಾದೇವಿ ತನ್ನ ವಚನದಲ್ಲಿ ವಿವರಿಸಿದ್ದಾಳೆ ?
ವಾಚ ಲೋಕದ ಎಲ್ಲಾ ಚಟುವಟಿಕೆಗಳಿಗೆ ಮೂಲ ಸೂರ್ಯ , ಏಕೆಂದರೆ ಸೂಂರ್ತೋ ದಯದೊಡನೆ ಲೋಕದ ಎಲ್ಲಾ ಕಾರ್ಯ ಚಟುವಟಿಕೆಗಳು ಪ್ರಾರಂಭವಾಗುತ್ತವೆ . ಅದೇ ರೀತಿ ತ್ರಿಕರ್ಣ ಶುದ್ಧಿಗೆ ಅಂದರೆ ಕಾಯ ಮನಸಾ ನಾವು ಪರಿಶುದ್ಧರಾಗಬೇಕಾದರೆ ಅದಕ್ಕೆ ಮೂಲ ನಮ್ಮ ಮನಸ್ಸು , ನಮ್ಮೊಳಗಿರುವ ಮನಸ್ಸನ್ನು ತ್ರಿಕರ್ಣ ಶುದ್ಧಿಯಿಂದ ನಡೆಸಿಕೊಂಡಲ್ಲಿ ಮಾತ್ರ ಹುಟ್ಟು ಸಾವನ್ನು ಮೀರಿ ಮೋಕ್ಷವನ್ನು ಪಡೆಯಬಹುದು ಎಂಬುದಾಗಿ ಅಕ್ಕ ಮಹಾದೇವಿ ತನ್ನ ವಚನದಲ್ಲಿ ವಿವರಿಸಿದ್ದಾಳೆ .
ಅಭ್ಯಾಸ
ಸಂದರ್ಭ ಸೂಚಿಸಿ ವಿವರಿಸಿ .
1. ಎನಗೆ ಭವವುಂಟೆ ?
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ .
ಸಂದರ್ಭ : ಈ ವಾಕ್ಯವನ್ನು ಅಕ್ಕಮಹಾದೇವಿ ಚೆನ್ನ ಮಲ್ಲಿಕಾರ್ಜುನನಲ್ಲಿ ಹೇಳಿಕೊಳ್ಳುತ್ತಿದ್ದಾಳೆ .
ವಿವರಣೆ : ತನ್ನ ಮನವೆಲ್ಲವೂ ಚೆನ್ನಮಲ್ಲಿಕಾರ್ಜುನನಲ್ಲಿಯೇ ಲೀನವಾಗಿರುವುದರಿಂದ ತನಗೆ ಜನನ ಮರಣಗಳಿಲ್ಲ , ತನ್ನ ಆತ್ಮ – ಪರಮಾತ್ಮನಲ್ಲಿ ಈಗಾಗಲೇ ಲೀನವಾಗಿ ಹೋಗಿದೆ ಎಂಬುದಾಗಿ ಅಕ್ಕ ಹೇಳುತ್ತಿದ್ದಾಳೆ .
ವಿಶೇಷತೆ : ಅಕ್ಕಮಹಾದೇವಿ ತನ್ನ ಬದುಕಿನ ಸಾರ್ಥಕತೆಯನ್ನು ಚಿಕ್ಕ – ಚೊಕ್ಕ ವಾಕ್ಯದಲ್ಲಿ ತಿಳಿಸಿದ್ದಾಳೆ .
2.ಮುತ್ತಿನ ಬಲೆಯಾದಡೆ ಬಂಧನವಲ್ಲವೆ ?
ಪ್ರಸ್ತಾವನೆ : ಪ್ರಸ್ತುತ ಈ ಮೇಲ್ಕಂಡ ವಾಕ್ಯವನ್ನು ಅಕ್ಕಮಹಾದೇವಿಯು ರಚಿಸಿರುವ ವಚನಗಳಿಂದ ಆರಿಸಲಾಗಿದೆ .
ಸಂದರ್ಭ : ಲೌಕಿಕ ಬಂಧನದಲ್ಲಿ ಸಿಲುಕಿದ ಭಕ್ತನಿಗೆ ಮುಕ್ತಿಯಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಅಕ್ಕಮಹಾದೇವಿ ಈ ವಾಕ್ಯವನ್ನು ನುಡಿದಿದ್ದಾಳೆ .
ವಿವರಣೆ : ಬಂಧನದಲ್ಲಿಡಲು ಬೀಸುವ ಬಲೆ ಮುತ್ತಿನಿಂದ ಹೆಣದ ಮಾತ್ರಕ್ಕೆಪ್ರಥಮ ಸಂಕಟವಾಗದಿರದು , ಬಲೆ ಬಲೆಯೇ , ಅದು ಹಗ್ಗದಿಂದ ಹೆಣದರೂ ಸರಿ ಅಥವಾ ಮುತ್ತನ್ನು ಪೋಣಿಸಿ ಹೆಣೆದರೂ ಸರಿ , ಯಾವುದೆ ರೀತಿಯ ಬಲೆಯಿಂದ ಬ ೦ ದನದಲ್ಲಿದ್ದರೂ , ಅದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತದೆ .
ವಿಶೇಷತೆ : ‘ ಬಂಧನ ‘ ಮನುಷ್ಯನ ಏಳಿಗೆಯನ್ನು ಕುಂಟಿತ ಗೊಳಿಸುತ್ತೆ , ಅದಕ್ಕೆ ಲೌಕಿಕದ ಸುಖ ಲೋಲುಪದ ಬಂಧನದಿಂದ ಜೀವನವೇ ವ್ಯರ್ಥಗೊಳ್ಳುತ್ತದೆ .
3. “ ಕರಕ್ಕೆ ಶೃಂಗಾರ ಸತ್ಪಾತವುದು ”
ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ಅಕ್ಕಮಹಾದೇವಿಯವರ ವಚನಗಳಿಂದ ಆರಿಸಲಾಗಿದೆ . ”
ಸಂದರ್ಭ : ಸಾರ್ಥಕ ಬದುಕನ್ನು ಪಡೆಯ ಬೇಕಾದ್ದಲ್ಲಿ ತಾವು ಏನೇನು ಮಾಡಬಹುದು ಎಂಬುದನ್ನು ತಿಳಿಸುವ ಸಂದರ್ಭದಲ್ಲಿ ‘ ಕೈಗಳು ಸಾರ್ಥಕ ಗೊಳ್ಳುವುದು ಯಾವಾಗ ? ಎಂಬ ಪ್ರಶ್ನೆಗೆ ಉತ್ತರವಾಗಿ ಈ ಮಾತನ್ನು ಅಕ್ಕ ನುಡಿದಿದ್ದಾಳೆ ‘
ವಿವರಣೆ : ನಮ್ಮ ಕೈಗಳು ಸಾರ್ಥಕ ಗೊಳ್ಳುವುದು ಸತ್ಪಾತ್ರರಿಗೆ ತಮ್ಮಲ್ಲಿರುವುದನ್ನು ನಿರ್ವಂಚನೆಯಿಂದ ದಾನಮಾಡಿದಾಗ , ಆಗ ನಮ್ಮ ಕರಗಳ ಶೃಂಗಾರ ಗೊಳ್ಳುವುವು ಎಂಬುದಾಗಿ ಅಕ್ಕ ನುಡಿದಿದ್ದಾಳೆ .
ವಿಶೇಷತೆ : ಸರಳ – ಸಹಜ ಸುಂದರ ನುಡಿಗಳಲ್ಲಿ ಅಕ್ಕನ ನೀತಿಯ ಮಾತುಗಳು ಮೂಡಿಬಂದಿವೆ .
1st PUC Kannada Vachanagalu Notes |ವಚನಗಳು ನೋಟ್ಸ್ Vachanagalu Question and Answer Duryodhana Vilapa prashne uttara
FAQ :
Ans: ಕಾಲುಗಳನ್ನು ಗಾಲಿಗಳಿಗೆ ಹೋಲಿಸಲಾಗಿದೆ .
Ans: ಇಟ್ಟ ಕಲ್ಲು ಮಳೆಯಲ್ಲಿ ಸಿಕ್ಕರೆ ಅದು ಲಿಂಗವೆಂದು ಕೇಳುತ್ತಾರೆ .
ಇತರೆ ವಿಷಯಗಳು :
1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf
1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf
1 ರಿಂದ 12ನೇ ತರಗತಿ ಕನ್ನಡ ನೋಟ್ಸ್ Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
This is very useful
This website is very useful for the students .It has helped me a lot and one more thing is the answers are short and easy to understand
Good
Really you like this
Good