1st PUC Kannada Duryodhana Vilapa Notes| ದುರ್ಯೋಧನ ವಿಲಾಪ ನೋಟ್ಸ್‌

ಪ್ರಥಮ ಪಿ.ಯು.ಸಿ ದುರ್ಯೋಧನ ವಿಲಾಪ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, 1st Puc Duryodhana Vilapa Kannada Notes Question Answer Summary Mcq Pdf Download in Kannada Medium Karnataka State Syllabus 2023 Kseeb Solutions For Class 1 Kannada Chapter 1 Notes Duryodhana Vilapa Notes Duryodhana Vilapa Summary in Kannada pdf Duryodhana Vilapa question and answer 1st Puc Kannada Chapter 1 Question Answer

 

ತರಗತಿ: ಪ್ರಥಮ ಪಿ.ಯು.ಸಿ

ಕಾವ್ಯಾ ಭಾಗದ ಹೆಸರು: ದುರ್ಯೋಧನ ವಿಲಾಪ

ಕೃತಿಕಾರರ ಹೆಸರು: ರನ್ನ

ದುರ್ಯೋಧನ ವಿಲಾಪ ನೋಟ್ಸ್‌

1st PUC Kannada Duryodhana Vilapa Notes ದುರ್ಯೋಧನ ವಿಲಾಪ ನೋಟ್ಸ್‌
1st PUC Kannada Duryodhana Vilapa Notes ದುರ್ಯೋಧನ ವಿಲಾಪ ನೋಟ್ಸ್‌

ಕಾವ್ಯ – ಕವಿ ಪರಿಚಯ : ರನ್ನ ( ೯೪೯ )

‘ ರನ್ನ ‘ ರತ್ನತ್ರಯರಲ್ಲೊಬ್ಬನು . ರನ್ನನ ಜನ್ಮಸ್ಥಳ ಬಾಗಲಕೋಟೆ ಜಿಲ್ಲೆಯ ಮುದುವೊಳಲು ( ಮುಧೋಳ ) , ತಂದೆ ಜಿನವಲ್ಲಭ , ತಾಯಿ ಅಬ್ಬಲಬ್ಬೆ . ಬಳೆಗಾರ ವೃತ್ತಿಯ ಮನೆತನದ ಇವನು ತೀವ್ರ ವಿದ್ಯಾಕಾಂಕ್ಷೆಯ ತುಡಿತದಿಂದ ಶ್ರವಣಬೆಳೊಳದಲ್ಲಿ ತಾತ್ಕಾಲಿಕವಾಗಿ ನೆಲೆ ನಿಲ್ಲುತ್ತಾನೆ .

“ದಾನವಚಿಂತಾಮಣಿ” ಬಿರುದಾಂಕಿತ ಅತ್ತಿಮಬ್ಬೆಯ ಪ್ರೋತ್ಸಾಹ ದೊರಕಿತು. ಅಜಿತಸೇನಾಚಾರ್ಯರಿಂದ ವಿದ್ಯೆ ಸಂಪಾದಿಸಿದನು . ಮೊದಲು ಗಂಗರ ಮಂತ್ರಿ ಚಾವುಂಡರಾಯನ ಆಶ್ರಯ ಪಡೆಯುತ್ತಾನೆ . ಗಂಗರ ಪತನಾನಂತರ ಚಾಲುಕ್ಯದೊರೆ ತೈಲಪ ಹಾಗೂ ಸತ್ಯಾಶ್ರಯ ಇವಬೆಡಂಗ ( ಬದ್ದೆಗನ ಆಸ್ಥಾನ ಕವಿಯಾಗಿದ್ದನು .

ಅಜಿತ ತೀರ್ಥಂಕರ ಪುರಾಣ ‘ ಮತ್ತು ‘ ಸಾಹಸಭೀಮವಿಜಯಂ ‘ ಇವನ ಉಪಲಬ್ದ ಕಾವ್ಯಗಳು , ಚಂಪೂ ಶೈಲಿಯ ಕೃತಿಗಳಲ್ಲೊಂದಾದ ‘ ಸಾಹಸಭೀಮ ವಿಜಯಂ’ನಲ್ಲಿ ರನ್ನನು , ಪಂಪ ಕವಿಯು ಅರಿಕೇಸರಿಯನ್ನು ಸಮೀಕರಿಸಿ ಕಾವ್ಯ ರಚಿಸಿದಂತೆ , ‘ ಸಾಹಸಭೀಮ ‘ ಬಿರುದಾಂಕಿತ ಇವಬೆಡಂಗ ಸತ್ಯಾಶ್ರಯನನ್ನು ಭೀಮನೊಂದಿಗೆ ಸಮೀಕರಿಸಿದ್ದಾನೆ . ಮಹಾಭಾರತದ ಕುರುಕ್ಷೇತ್ರ ಯುದ್ಧದ ದೃಶ್ಯವೇ ಮುಖ್ಯ ಕಥಾವಸ್ತುವಾದರೂ , ಇಡೀ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸಿದ್ದಾನೆ . ಇವನ ಇಡೀ ಕಾವ್ಯದಲ್ಲಿ ನಾಟಕೀಯ ಶೈಲಿಯನ್ನು ಕಾಣಬಹುದು .

ಮಹಾಭಾರತ ಯುದ್ಧದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಯುದ್ಧಭೂಮಿಯಲ್ಲಿ ಶರಶಯ್ಯೆಯಲ್ಲಿದ್ದ ತಾತ ಭೀಷ್ಮನನ್ನು ಭೇಟಿ ಮಾಡಲು ಸಂಜಯನೊಡನೆ ಬರುತ್ತಾನೆ . ಸತ್ತು ಬಿದ್ದಿರುವ ವೈರಿಪಕ್ಷದ ವೀರ ಅಭಿಮನ್ಯುವನ್ನು ಪ್ರಶಂಸಿಸುವ ಅವನ ಮನೋಧರ್ಮ ಮೆಚ್ಚತಕ್ಕದ್ದಾಗಿದೆ . ಗುರು ದ್ರೋಣ , ತಮ್ಮ ದುಶ್ಯಾಸನ , ಮಗ ಲಕ್ಷಣಕುಮಾರ ಮತ್ತು ಪ್ರಾಣ ಸ್ನೇಹಿತ ಕರ್ಣರ ಕಳೇಬರಗಳನ್ನು ಕಂಡು ದುರ್ಯೊಧನ ಪಡುವ ದುಃಖ ದುಮಾನ ಹಾಗೂ ಪ್ರಲಾಪಗಳು ಪ್ರಸ್ತುತ ಕಾವ್ಯ ಭಾಗದಲ್ಲಿ ಕರುಳು ಮಿಡಿಯುವಂತೆ ಚಿತ್ರಿತವಾಗಿವೆ .

ಪದಕೋಶ :

೧. ಉಡಿದಿರ್ದ – ಮುರಿದ: ಕೈದು – ಆಯುದ: ತಳ – ಪಾದ: ಉರ್ಚು -ಚುಚ್ಚು: ದಡಿಗವೆಣ ( ದಡಿಗ + ಪೆಣ ) – ಬಾರಿಹೆಣ .

೨. ಇಭಶೈಲ – ಆನೆಗಳ ಬೆಟ್ಟ: ರುಧಿರ – ರಕ್ತ; ಸ್ರೋತ – ನದಿ: ಇಭದೋ – ಆನೆಗಳ ಸೊಂಡಿಲು: ನೀಲಲತಾ – ಕಪ್ಪು ಬಳ್ಳಿ: ಪ್ರತಾನ – ಗುಂಪು: ವ್ರಾತ – ಸಮೂಹ: ಉಱದೆ – ಲೆಕ್ಕಿಸದೆ: ಸ್ಕಂದ – ಹೆಗಲು : ಗಾತ್ರ – ದೇಹ : ತ್ರಾಣ -ರಕ್ಷಕ ( ಕವಚ ) .

ವ ॥ ನಿಸರ್ಗ ದುಷ್ಟ – ಸ್ವಭಾವತಃ ಕೆಟ್ಟವನಾದ; ಕಚ – ತಲೆಗೂದಲು ; ನಿಗ್ರಹ – ಶಿಕ್ಷೆ , ದಂಡನೆ : ವಿಲುಳಿತ – ತಿರುಚಲ್ಪಟ್ಟು; ಮೌಳಿ – ತಲೆ : ಭಾರದ್ವಾಜ – ದ್ರೋಣ .

೩. ಬಿನ್ನಣ – ಚಾತುರ್ಯ , ನೈಪುಣ್ಯ , ಕೌಶಲ್ಯ ; ಪಿನಾಕಪಾಣಿ – ಶಿವ : ನೆಱಿಯನ್ ಅಸಮರ್ಥ : ಕುಂಭಸಂಭವ – ದ್ರೋಣ .

೪. ಕಣ್ಮಲರ್ ( ಕಣ್ + ಮಲರ್ ) -ಕಣ್ಣೆಂಬ ಹೂ : ಅಲರ್ದ – ಅರಳಿದ : ಆಸುರತರ – ಅತಿಭಯಂಕರ : ಲೋಹಿತವಾರ್ದಿ – ರಕ್ತದ ಕಡಲು : ಅಱು – ಮುಳುಗಿ ; ಆಜಿ – ಯುದ್ಧ .

ವ ॥ ಅಹಿಕೇತನ – ಸರ್ಪ ಧ್ವಜ , ದುರ್ಯೋಧನ .

೫. ಪಣ್ಣು ( ಕ್ರಿ ) -ರಚಿಸು ; ಪುಗಲ್ – ಪ್ರವೇಶಿಸಲು : ರಣಾಜಿರ – ಯುದ್ಧಭೂಮಿ ; ಅರಿ – ಶತ್ರು ; ನರ – ಅರ್ಜುನ ; ಒರೆದೊರೆ – ಸರಿಸಮ .

೬. ಭವದ್ವಿ ಕ್ರಮ ( ಭವತ್ + ವಿಕ್ರಮ ) -ನಿನ್ನ ಶೌರ್ಯ : ನಿಜಸಾಹಸ – ನಿನ್ನ ಪರಾಕ್ರಮ : ಏಕದೇಶ – ಒಂದು ಅ೦ಶ , ಹೋಲುವ ; ಅನುಮರಣ -ಅನುರೂಪವಾದ ( ಅನುಗುಣವಾದ ) ಮರಣ .

ವ || ಮನ್ಯೊದ್ಗತಕಂಠನಾಗಿ – ಶೋಕಬರಿತವಾದ ಧ್ವನಿಯುಳ್ಳವನಾಗಿ ; ತದಾಸನ್ನ ( ತತ್ + ಆಸನ್ನ ) -ಅದಕ್ಕೆ ಹತ್ತಿರದ : ಗಾಂಧಾರೀನಂದನ – ದುರ್ಯೋಧನ : ಭಾನುಮತಿನಂದನ – ಲಕ್ಷಣಕುಮಾರ .

೭. ಜಲಾಂಜಲಿ ( ಜಲ + ಅಂಜಲಿ ) – ತರ್ಪಣ : ಕ್ರಮವಿಪರ್ಯಯ – ಪದ್ಧತಿ ತಪ್ಪುವುದು , ಕ್ರಮ ವ್ಯತ್ಯಾಸ .

ವ || ಪರಿಘ – ಆಯುದ : ಪ್ರಹರ – ಹೊಡೆತ .

೮. ಗಡಮೊಳನಿನ್ನುಂ – ಇನ್ನೂ ಬದುಕಿದ್ದಾನಲ್ಲ : ಇಕ್ಕಿ – ಬಡಿದು , ಹೊಡೆದು : ಮಾಣ್ – ಬಿಡು , ಸುಮ್ಮನಿರುವುದು ; ಕೂರ್ಮೆ -ಪ್ರೀತಿ : ಸೌಧರ್ಮ – ಸಜ್ಜನಿಕೆ .

೯. ಸೋಮಾಮೃತ – ಸೋಮರಸ ; ಮೊನೆಯೊಳ್ – ಯುದ್ಧದಲ್ಲಿ : ಸೂಟ್ – ಸರದಿ ; ಎಡೆ – ಸಮಯ : ಉಲ್ಲಂಘನೆ – ತಪ್ಪುವುದು , ಮೀರುವುದು.

ವ || ಕಳೇಬರ – ಶವ ; ತಳರ್ದು – ಹೊರಟು ;

೧೦. ದಲ್ – ದಿಟ , ಅಲ್ಲವೇ ; ಕೞದ – ತೀರಿದ .

೧೧. ಕೆಳೆಯ – ಗೆಳೆಯ , ಸ್ನೇಹಿತ ; ಬೆಸನ್ – ಆಜ್ಞೆ : ಜೀಯ – ಯಜಮಾನ , ಒಡೆಯ .

೧೨. ಅನೃತ – ಸುಳ್ಳು ; ನನ್ನಿ – ಸತ್ಯ ; ಚಾಗ – ತ್ಯಾಗ ; ಅಣ್ಮು- ಪರಾಕ್ರಮ .

೧೩. ಪೃಥೆ – ಕುಂತಿ ; ದಾನವರಿಪು – ಕೃಷ್ಣ ; ಅರ್ಕ – ಸೂರ್ಯ .

೧೪. ಬೆಳೊಡೆ ( ಬೆಳ್ + ಕೊಡೆ ) -ಬಿಳಿಯಕೊಡೆ ; ಪೀೞಿಗೆ – ಸಿಂಹಾಸನ .

೧೫. ಹರಿ – ಇಂದ್ರ: ಪುರಿಗಣೆ – ದಿವ್ಯಾಸ್ತ ; ಕಸವರಗಲಿ ( ಕಸವರ + ಕಲಿ ) -ದಾನಶೂರ ; ಅರಿದು – ಕತ್ತರಿಸಿ ; ಮೆಯ್ಗಲಿ- ಪರಾಕ್ರಮಿ .

ವ || ಸಂಕ್ರಂದನ – ಇಂದ್ರ ; ಶರಶಯನ – ಬಾಣದಮಂಚ ; ನದೀನಂದನ- ಭೀಷ್ಮ.

Duryodhana Vilapa Question and Answer

Duryodhana Vilapa Notes Quotion answer

I. ಒಂದು ವಾಕ್ಯದಲ್ಲಿ ಉತ್ತರಿಸಿ .

1. ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು ?

Ans: ರಣರಂಗದಲ್ಲಿ ಸಾಗುವಾಗ ದುರ್ಯೋಧನನು ಸಂಜಯನ ನೆರವನ್ನು ಅವಲಂಬಿಸಿದ್ದನು .

2. ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು ?

Ans: ಕುರುಪತಿ ರಣರಂಗದಲ್ಲಿ ( ಬಾರಿಗಾತ್ರದ ) ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದನು .

3. ಪಿನಾಕ ಪಾಣಿ ಎಂದರೆ ಯಾರು ?

Ans: ಪಿನಾಕ ಎಂಬ ದನಸ್ಸನ್ನು ಹಿಡಿದಿರುವ “ ಶಿವ ”

4. ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು ?

Ans: ತಂದೆಗೆ ಜಲಾಂಜಲಿಯನ್ನು ಮಗನು ಕೊಡಬೇಕು .

5. ಚಕ್ರವ್ಯೂಹವನ್ನು ರಚಿಸಿದವರು ಯಾರು ?

Ans: ಚಕ್ರವ್ಯೂಹವನ್ನು ರಚಿಸಿದವರು ದ್ರೋಣಾಚಾರ್ಯರು .

6. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ?

Ans: ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ .

7. ಹರಿಯು ಕರ್ಣನಿಂದ ಬೇಡಿದೇನು ?

Ans: ಹರಿಯು ಕರ್ಣನಿಂದ ಬೇಡಿದ್ದು ‘ ಕವಚವನ್ನು

8. ಅಂಗಾಧಿಪತಿ ಯಾರು ?

Ans: ಅಂಗಾಧಿಪತಿ ಕರ್ಣ

II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

1. ದುಶ್ಯಾಸನನು ಅಣ್ಣನಿಗೆ ತೋರಿದ ವಿನಯ ಶೀಲತೆ ಯಾವುದು ?

Ans: ಚಿಕ್ಕಂದಿನಿಂದ ಸಯುವವರೆಗೂ ದುಶ್ಯಾಸನನು ಅಣ್ಣನಿಗೆ ಎಲ್ಲೆಲ್ಲಿಯೂ ವಿನಯವನ್ನು ತೋರಿದ್ದನು ತಾಯಿಯ ಎದೆ ಹಾಲು ಕುಡಿಯುವದರಲ್ಲಿ , ಸೋಮರಸವನ್ನು, ಉತ್ತಮವಾದ ಭೋಜನವನ್ನು ಸೇವಿಸುವುದರಲ್ಲಿ ಅಣ್ಣನ ಬಳಿಕವೇ ದುಶ್ಯಾಸನನು ಸೇವಿಸುತ್ತಿದ್ದನು . ಹೀಗೆ ದುಶ್ಯಾಸನು , ಅಣ್ಣನಿಗೆ ಬಹಳ ವಿಧೇಯನಾಗಿ , ವಿನಯಶೀಲತೆಯನ್ನು ತೋರಿದನು .

2. ದುರ್ಯೋಧನನನು ತನ್ನ ಮಗನ ಶವವನ್ನು ಕಂಡು ಹೇಗೆ ವ್ಯಥೆ ಪಡುತ್ತಾನೆ ?

Ans: ದುರ್ಯೋಧನನು ತನ್ನ ಮಗನ ಶವವನ್ನು ಕಂಡಾಗ ಅವನ ಕೈಯಲ್ಲಿದ್ದ ಆಯುಧ ಬಿದ್ದು ಹೋಯಿತು . ಹೃದಯದಲ್ಲಿದ್ದ ಯುದ್ಯೋತ್ಸಾಹ ಜರನೆ ಇಳಿದು ಹೋಯಿತು. ಕಣ್ಣಿನಿಂದ ನೀರು ( ಕಣ್ಣೀರು ) ಸುರಿಯತೊಡಗಿತು . ತಂದೆಗೆ ಎಳ್ಳು ನೀರು ತರ್ಪಣ ಬಿಡಬೇಕಾದುದು ರೂಡಿ , ಅದಕ್ಕೆ ವ್ಯತಿರಿಕ್ತವಾಗಿ ನಾನು ನಿನಗೆ ತರ್ಪಣ ಬಿಡುವಂತಾಯಿತೆ . ನೀನು ಹೀಗೆ ಕ್ರಮ ವ್ಯತ್ಯಾಸಗೊಳಿಸಬೇಕೆ ? ಎಂದು ದುರ್ಯೋಧನನು ಮಗನ ಶವವನ್ನು ಕಂಡು ಮರುಗಿದನು .

3. ದುರ್ಯೋಧನನು ಕರ್ಣನ ದಾನ ಗುಣವನ್ನು ಹೇಗೆ ಪ್ರಶಂಸಿಸಿದ್ದಾನೆ . ?

Ans: ಅಂಗರಾಜಾ , ಇಂದ್ರನು ಬಂದು ಬೇಡಿದಾಗ ನಿನ್ನ ಸ್ವಾಬಿಕವಾದ ತನ್ನ ಕವಚನ್ನು ಕೊಟ್ಟೆ ಕುಂತಿ ಬಂದು ಬೇಡಿದಾಗ ಅನುಮಾನಕ್ಕೆ ಆಸ್ಪರದಕೊಡದೆ ಸ್ವಲ್ಪವೂ ಯೋಚಿಸದೆ ಮಂತ್ರಾಸ್ತ್ರಗಳನ್ನು ನೀಡಿದೆ ಎಂಬುದಾಗಿ ದುರ್ಯೋಧನನು ಕರ್ಣನ ದಾನ ಗುಣವನ್ನು ಹೊಗಳಿದ್ದಾನೆ .

4.ಕರ್ಣನ ಜನ್ಮ ರಹಸ್ಯವನ್ನು ಯಾರು ಯಾರು ಅರಿತಿದ್ದರು ?

Ans: ಕರ್ಣನ ಜನ್ಮರಹಸ್ಯವನ್ನು ಕುಂತಿ , ಕೃಷ್ಣ , ಸೂರ್ಯದೇವ ಹಾಗೂ ದಿವ್ಯಜ್ಞಾನಿಯಾದ ಸಹದೇವನು ತಿಳಿದಿದ್ದನು .

5. ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರ ಯಾವ ರೀತಿ ಕಾಣುತ್ತಿತ್ತು ?

Ans: ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರವು “ ಅರ್ಧ ಮುಚ್ಚಿದ ಕಣ್ಣು , ಉತ್ಸಾಹದಿಂದ ಅರಳಿದ ಮುಖ , ಕತ್ತರಿಸಿ ಹೋದ ಕೈಗಳು , ಬಭೀಕರವಾಗಿ ಕಚ್ಚಿದ ಅವುಡು ಸಹಿತವಾಗಿ ಶತ್ರು ಬಾಣ ಪ್ರಹಾರದಿಂದ ಮೈಯೆಲ್ಲ ಕಡಲಲ್ಲಿ ಮುಳುಗಿ ಬಿದ್ದು ಬೀಭತ್ಯಕರವಾಗಿ ಕಾಣುತ್ತಿತ್ತು . ” ಜರ್ಜರಿತವಾಗಿ ಬಿಸಿರಕ್ತದ ಕಡಲಲ್ಲಿ ಮುಳುಗಿ ಬಿದ್ದು ಭೀಭತ್ಯಕರವಾಗಿ ಕಾಣುತ್ತಿತ್ತು.

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ .

1. ದ್ರೋಣನ ಕಳೆಬರವನ್ನು ಕಂಡು ದುರ್ಯೋಧನ ಹೇಗೆ ದು : ಖಿಸುತ್ತಾನೆ ?

Ans: ದ್ರೋಣನ ದೇಹವು ಬಾಣ ಸಮೂಹಗಳಿಂದ ನಜ್ಜು ಗುಜ್ಜಾಗಿತ್ತು ದ್ರೋಣಾಚಾರ್ಯ ನನ್ನು ಕಾಣುತ್ತಲೆ , – ಆಚಾರ್ಯ ನಿಮ್ಮ ಧರ್ನು ವಿದ್ಯಾ ಕೌಶಲ್ಯವನ್ನು ಎಲ್ಲರು ಬಲ್ಲರು , ಅರ್ಜುನನ ಏನು , ಸ್ವತ : ಪಿನಾಕ ಎಂಬ ಧನಸ್ಸನ್ನು ಹಿಡಿದು ಬಂದ ಶಿವನು ಕೂಡ ನಿಮ್ಮೊಡನೆ ಯುದ್ಧ ಮಾಡಿ ಗೆಲ್ಲಲಾರನು ಅಂಥಹುದರಲ್ಲಿ ನಿಮಗೆ ಇಂತಹ ಮರಣ ವೇ ? ಇದಕ್ಕೆ ತಮ್ಮ ಉದಾಸೀನತೆ ಕಾರಣವೋ ಅಥವಾ ಆ ತನ್ನ ಕರ್ಮವೋ ಅದಕ್ಕೆ ನಿಮಗೆ ನಿಷ್ಕಾರಣಾವಾಗಿ ಸಾವು ಒದಗಿಬಂತೋ ಎಂಬುದಾಗಿ ದುಃಖಿಸುತ್ತಾನೆ .

2. ದುರ್ಯೋಧನನು ದುಶ್ಯಾಸನನ್ನು ಕಂಡು ವ್ಯಕ್ತ ಪಡಿಸಿದ ಭಾವನೆಗಳು ಯಾವುವು ?

Ans: ದುರ್ಯೋಧನನು ದುರ್ಯೋಧನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳೆಂದರೆ “ ನಿನ್ನನ್ನು ಕೊಂದವನು ಇನ್ನೂ ಬದುಕಿದ್ದಾನೆ , ಕೊಂದವನನ್ನೇ ಹೊಡೆದು ಕೊಲ್ಲದೆ ಬಿಟ್ಟ ನಾನು ಕೂಡ ಇನ್ನೂ ಜೀವಂತವಾಗಿ ಉಳಿದಿದ್ದೆನೆ , ನಿನ್ನ ಪ್ರೀತಿಗೂ , ನನ್ನ ಕುಟುಂಬ ವಾತ್ಸಲ್ಯಕ್ಕೂ ಇದು ಯೋಗ್ಯವೇ ? ” ತಾಯಿ ಎದೆ ಹಾಲನ್ನು ನಾನು ಮೊದಲುಂಡ ಬಳಿಕ , ನೀನು ಉಂಡೆ , ಸೋಮರಸವನ್ನು ಉತ್ತಮವಾದ ಬೋಜನವನ್ನು ನಾನು ಸೇವಿಸಿದ ಬಳಿಕವೇ ನೀನು ಸವಿದೆ . ಬಾಲ್ಯದಿಂದ ಇಂದಿನವರೆವಿಗೆ ಎಲ್ಲೆಲ್ಲಿಯೂ ನೀನು ವಿನಯವನ್ನು ಮೀರಿ ನಡೆದವನಲ್ಲ . ದುಶ್ಯಾಸನಾ , ಮರಣದ ವಿಷಯದಲ್ಲಿ ಮಾತ್ರ ನನಗಿಂತ ಮುಂದೆ ನೀನೆ ಹೋದೆಯಲ್ಲ . ಇದೊಂದರಲ್ಲಿ ಕ್ರಮ ತಪ್ಪಿತು , ಎಂಬುದಾಗಿ ತನ್ನ ಭಾಗವನೆಗಳನ್ನು ವ್ಯಕ್ತಪಡಿಸಿದನು .

3.ದುರ್ಯೋಧನನು ರಣರಂಗದಲ್ಲಿ ನಡೆದುಬಂದ ಬಗೆಯನ್ನು ಕವಿ ಹೇಗೆ ವರ್ಣಿಸಿದ್ದಾರೆ ?

Ans: ದುರ್ಯೋದನನು ರಣರಂಗದಲ್ಲಿ ನಡೆದು ಬರುತ್ತಿರಲು , ಕಾಲಿಡಲು ಕೂಡ ಆತನಿಗೆ ಸ್ಥಳವಿರಲಿಲ್ಲ . ನೆತ್ತರ ಕಡಲಲ್ಲಿ ಮುರಿದು ಬಿದ್ದಿದ್ದ ಆಯುಧಗಳು ಹೆಜ್ಜೆ ಹೆಜ್ಜೆಗೆ ಅಂಗಾಲುಗಳಿಗೆ ಚುಚ್ಚುತ್ತಿದ್ದವು , ಕಾಲಿಡುವುದನ್ನು ನೆಲಕಾಣದ ಬಾರಿಹೆಣಗಳ ರಾಶಿಯ ಮೇಲೆಯೇ ಕಾಲಿಟ್ಟು ನಡೆಯುತ್ತಿದ್ದನು . ಆನೆ ಹೆಣಗಳ ಬೆಟ್ಟವನ್ನೇರಿ , ರಕ್ತದನದಿಗಳನ್ನು ದಾಟಿ , ಆನೆ ಸೊಂಡಿಲೆಂಬ ಕರಿ ಬಳ್ಳಿಗಳ ಕಾಡಿನಲ್ಲಿ ಸಿಲುಕಿ , ಸಂಜಯನ ಹೆಗಲನ್ನು ಆದರಿಸಿಕೊಂಡು ರಣರಂಗದಲ್ಲಿ ನಡೆಯುತ್ತಿದ್ದನು ಎಂಬುದಾಗಿ ಕವಿ ರಣರಂಗದ ಬೀಭತ್ಯಕರ ದೃಶ್ಯವನ್ನು ವರ್ಣಿಸಿದ್ದಾನೆ .

4. ಅಭಿಮನ್ಯುವಿನ ಶೌರ್ಯ ಸಹಸವನ್ನು ದುರ್ಯೋಧನನು ಹೇಗೆ ಹೊಗಳುತ್ತಾನೆ . ?

Ans: ಅಭಿಮನ್ಯುವಿನ ಶೌರ್ಯ ಸಾಹಸವನ್ನು ದುರ್ಯೋಧನನನ್ನು ಬಹಳವಾಗಿ ಹೊಗಳಿದ್ದಾನೆ . ಗುರು ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸುವುದು ಬೇರೆ ಯಾರಿಗೂ ಸಾಧ್ಯವಾಗಿರಲಿಲ್ಲ . ಅದನ್ನು ಭೇದಿಸಿ ಹೊಕ್ಕು , ರಣರಂಗದಲ್ಲಿ ಶತ್ರು ರಾಜರನ್ನು ಹೊಡೆದು ಕೊಂದ ಅರ್ಜುನನ ಪುತ್ರನೇ , ನಿನಗೆ ಸರಿಸಾಟಿ ಯಾರು ಇಲ್ಲ . ಅದ್ವಿತೀಯ ಬಲಶಾಲಿಯಾದ ಅಭಿಮನ್ಯು ಕುಮಾರನೇ ನಿನ್ನ ಪರಾಕ್ರಮ , ಇತರರಿಗೆ ಅಸಾಧ್ಯ . ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ ನಿನ್ನ ಸಹವಾಸದಲ್ಲಿ ಒಂದಂಶವಾದರು ನಮ್ಮಲ್ಲಿದ್ದರೆ ಅದಕ್ಕೆ ಅನುಗುಣವಾದ ವೀರ ಮರಣ ನಮಗೆ ಒದಗಿ ಬರಲಿ ಎಂದು ದುರ್ಯೋಧನನು ಹೇಳಿದನು .

5. ಕರ್ಣನ ಉದ್ದಾತ್ತ ಗುಣಗಳನ್ನು ದುರ್ಯೋಧನ ಹೇಗೆ ಕೊಂಡಾಡಿದ್ದಾನೆ ?

Ans: ಕರ್ಣನು ಉದಾತ್ತ ಗುಣಗಳನ್ನು ಹೊಂದಿದವನು , ಅದನ್ನು ಕಂಡು ಆತನ ಆಪ್ತ ಮಿತ್ರನಾದ ದುರ್ಯೋಧನನು ಮನಸಾರೆ ಕೊಂಡಾಡಿದ್ದಾನೆ . “ ನಾನು ದುಶ್ಯಾಸನ ಹಾಗೂ ನೀನು ಮೂವರು ಒಂದು ಜೀವವಾಗಿ ಇದ್ದವರು ಆತನು ಹೋದ ಬಳಿಕ ನಾನು , ನೀನು ಇಬ್ಬರೆ ಆಗಿದ್ದೆವು . ಅಂಗರಾಜಾ ಈಗ ನೀನು ಕೂಡ ಬಿಟ್ಟು ಎಲ್ಲಿಗೆ ಹೋದೆ ? -ನಿನ್ನ ಗೆಳೆಯ ‘ ಈ ಸುಯೋಧನನನ್ನು ನೋಡದೆ , ಮಾತನಾಡಿದೆ , ಅಪ್ಪಿಕೊಳ್ಳದೆ , ಅಪ್ಪಣೆಯೇನೆಂದು ಕೇಳದೆ , ಜೀಯಾ ಎನ್ನದೆ , ದೇವಾ ಎನ್ನದೆ , ಏಕೆ ಮಾತನಾಡದಿರುವೆ ಕರ್ಣ . ನೀನಿರುವ ದೇಶದಲ್ಲಿ ಸುಳ್ಳು , ಲೋಭ , ಭಯ ಎಂಬುದು ಇರಲಿಲ್ಲ . ಸತ್ಯ ತ್ಯಾಗ , ಪರಾಕ್ರಮ ಎಂಬುದಕ್ಕೆ ನೀನೆ ಅಗ್ರಗಣ್ಯ , ಅಂಗರಾಜಾ , ಇಂದ್ರನು ಬೇಡಿದಾಗ ನಿನ್ನ ಸಹಜ ಕವಚವನ್ನು ಕೊಟ್ಟೆ , ಕುಂತಿ ಬೇಡಿ ಬಂದಾಗ ಅನುಮಾನಿಸದೆ ಮಂತ್ರಾಸ್ತ್ರಗಳನ್ನೇ ಕೊಟ್ಟು ನೀನು ಸಹಜ ಶೂರನೂ ಹೌದು , ಮಹಾವೀರನೂ ಹೌದು , ಎಂಬುದಾಗಿ ಕರ್ಣನ ಉದಾತ್ತ ಗುಣಗಳನ್ನು ದುರ್ಯೋಧನನು ಕೊಂಡಾಡಿದ್ದಾನೆ .

ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. “ ನಿನ್ನೊಡನೆ ದೊರೆಗೆ ಗಂಡರು ಮೊಳರೇ ”

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ‘ ರನ್ನ’ನು ಬರೆದ , “ ಸಾಹಸ ಭೀಮ ವಿಜಯಂ ” ( ರನ್ನನ ಗದಾಯುದ್ಧ ) ಎಂಬ ಕೃತಿಯಿಂದ ಆರಿಸಲ್ಪಟ್ಟ “ ದುರ್ಯೋಧನನ ವಿಲಾಪ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ತನ್ನವರನ್ನು ಕಾಣಲು ಬಂದ ದುರ್ಯೋಧನನು , ವೀರ ಅಭಿಮನ್ಯುವಿನ ಕಳೆಬರದೆಡೆಗೆ ಬಂದು ಈ ವಾಕ್ಯವನ್ನು ಅಭಿಮನ್ಯುವಿನ ಶೌರವನ್ನು ಪ್ರಶಂಸಿಸುತ್ತಾ ಹೇಳುತ್ತಿದ್ದಾನೆ .

ವಿವರಣೆ : ಅರ್ಜುನನ ಪುತ್ರನಾದ ಹೇ ವೀರ ಅಭಿಮನ್ಯು ನಿನ್ನ ಕೌರಕ್ಕೆ ಸರಿಸಾಟಿಯಾದ ವೀರರುಂಟೆ ? ಎಂಬುದು ಈ ವಾಕ್ಯದ ಭಾವಾರ್ಥವಾಗಿದೆ .

ವಿಶೇಷತೆ : ಅಭಿಮನ್ಯುವನ್ನು ಶತ್ರುವಾದರೂ ದುರ್ಯೋಧನನು ಅವನ ವೀರತೆಯನ್ನು ಪ್ರಶಂಸಿಸುತ್ತಿದ್ದಾನೆ .

2. ಜನನೀಸ್ತನ್ಯಮನುಂಡೆನಾಂ ಬಳಿಕ ನೀಂ

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ರನ್ನ’ನು ರಚಿಸಿರುವ “ ಸಾಹಸ ಭೀಮ ವಿಜಯಂ ” ಅಥವಾ ಗದಾಯುದ್ಧ ಎಂಬ ಕೃತಿಯಿಂದ ಆಯ್ದ “ ದುರ್ಯೋಧನನ ವಿಲಾಪ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ದುರ್ಯೋಧನನು ಮಡಿದ ತನ್ನವರನ್ನೆಲ್ಲಾ ಕಾಣಲು ಬಂದಾಗ ದುಶ್ಯಾಸನನ ಶವವನ್ನು ಕಂಡು ಆತನನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿದ್ದಾನೆ .

ವಿವರಣೆ : ತಾಯಿಯ ಎದೆ ಹಾಲನ್ನು ಮೊದಲು ಕುಡಿದವನು ನಾನು , ನಂತರನೀವು ಕುಡಿದೆ , ಇದೇ ರೀತಿ ಎಲ್ಲದರಲ್ಲೂ ಮೊದಲು ನಾನು ಬಳಿಕ ನೀನು , ಆದರೆ ಮರಣದಲ್ಲಿ ಮಾತ್ರ ನೀ ಹೇಗೆ ಮೊದಲಾದೆ . ನಾ ಮರಣಿಸಿದ ಬಳಿದ ನೀನು ಸಾಯಬೇಕಿತ್ತು . ಆದರೆ ವಿದಿ ಇಲ್ಲಿ ಕ್ರಮ ತಪ್ಪಿತು ಎಂದು ತಮ್ಮ ದುಶ್ಯಾಸನನ ಶವದ ಬಳಿ ಪಲಾಪಿಸಸುತ್ತಾನೆ .

ವಿಶೇಷತೆ : ದುರ್ಯೋಧನನಿಗೆ ತಮ್ಮನ ಮೇಲೆ ಇದ್ದ ಪ್ರೀತಿ ಕಂಡು ಬರುತ್ತದೆ . ಹಳೆಗನ್ನಡದ ಭಾಷಾಶೈಲಿಯಲ್ಲಿ ಧಾರ್ಮಿಕವಾಗಿ ಮೂಡಿ ಬಂದಿದೆ .

3. “ ಈ ಗಳ ನೀನು ಮಗಲ್ದೆತ್ತ ವೋದೆಯಂಂಗಾಧಿಪತೀ “

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ರನ್ನನು ರಚಿಸಿರುವ ‘ ಸಾಹಸ ಭೀಮವಿಜಯಂ ‘ ಏಂಬ ಕೃತಿಯಿಂದ ಆರಿಸಲ್ಪಟ್ಟ ‘ ದುರ್ಯೋಧನನ ವಿಲಾಪ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ದುರ್ಯೋಧನನು ಕುರುಕ್ಷೇತ್ರ ಯುದ್ಧದಲ್ಲಿ ತನ್ನವರೆಲ್ಲ ಕಳೆದುಕೊಂಡು ಅವರ ಕಳೆಬರಹದೆಡೆ ಬಂದಾಗ ಕರ್ಣನು ಮಡಿದು ಬಿದ್ದಿದ್ದನ್ನು ಕಂಡು ಆತನನ್ನು ಉದ್ದೇಶಿಸಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ .

ವಿವರಣೆ : ತನ್ನ ಪ್ರಿಯ ಪುತ್ರ , ತಮ್ಮ ಎಲ್ಲರನ್ನು ಕಳೆದುಕೊಂಡ ದುರ್ಯೋಧನನು ಆಪ್ತನಾದ ಕರ್ಣನನ್ನು ಕಳೆದುಕೊಂಡು , “ ನೀನು ಕೂಡ ನನ್ನನ್ನು ಬಿಟ್ಟು ಹೋದೆಯೆಲ್ಲ ” ಎಂದು ಪರಿತಪಿಸುತ್ತಿದ್ದಾನೆ .

ವಿಶೇಷತೆ : ಕರ್ಣನ ಬಗ್ಗೆ ದುರ್ಯೋಧನನಿಗಿದ್ದ ಅತೀವ ಪ್ರೀತಿ ಇಲ್ಲಿ ವ್ಯಕ್ತವಾಗಿದೆ .

4. “ಅನಱವೆಂ ಪೃಥೆ ಯಱವಳ್‌”

ಪ್ರಸ್ತಾವನೆ : ಪ್ರಸ್ತುತ ಈ ವಾಕ್ಯವನ್ನು ‘ ರನ್ನ’ನೂ ರಚಿಸಿರುವ ಸಾಹಸ – ಭೀಮ ವಿಜಯ ‘ ಎಂಬ ಕೃತಿಯಿಂದ ಆರಿಸಲಾದ ದುರ್ಯೋಧನನ ವಿಲಾಸ ‘ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ತನ್ನ ಆಪ್ತ ಗೆಳೆಯ ಕರ್ಣನು ಸತ್ತು ಬಿದ್ದಿರುವುದನ್ನು ಕಂಡು ಆತನನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾನೆ .

ವಿವರಣೆ : ಕರ್ಣನ ಬಳಿ ಬಂದ ದುರ್ಯೋಧನನನು ಆತನನ್ನು ಉದ್ಧೇಸಿಸಿ “ ನೀನು ಯಾರ ಮಗನೆಂದುದನ್ನು ನಾನು ಬಲ್ಲೆ ” ಎಂಬುದಾಗಿ ನುಡಿಯುತ್ತ ಕರ್ಣನು ಪಾಂಡವರ ಹಿರಿಯ ಸಹೋದರ , ಕುಂತಿಯ ಹಿರಿಯ ಮತ ಎಂಬುದನ್ನು ಇಲ್ಲಿ ಸೂಚ್ಯವಾಗಿ ತಿಳಿಸಲಾಗಿದೆ.

ವಿಶೇಷತೆ: ಆಪ್ತಮಿತ್ರನಾದ ಕರ್ಣನನ್ನು ನೆನೆದು ಮಮ್ಮುಲ ಮರಗುತ್ತಾನೆ. ಇಲ್ಲಿ ಕರ್ಣನ ಜನ್ಮ ರಹಸ್ಯದ ಅರಿವು, ಅದನ್ನು ತಿಳಿಯುವ ಕುತೂಹಲ ಇಲ್ಲಿ ತಿಳಿಸಿದ್ದಾರೆ.

5. ಗಾಂಡಿವಿಯಲು ಪಿನಾಕ ಪಾಣಿಯಂ ನೇಳೆಯನ್.

ಪ್ರಸ್ತಾವನೆ : ಈ ವಾಕ್ಯವನ್ನು ‘ ರನ್ನ’ನು ರಚಿಸಿರುವ ಗದಾಯುದ್ಧ ಅಥವಾ ಸಾಹಸ ಭೀಮಕೃತಿಯಿಂದ ಆರಿಸಲ್ಪಟ್ಟ “ ದುರ್ಯೋಧನನ ವಿಲಾಪ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಕುರುಕ್ಷೇತ್ರದ ಯುದ್ಧದಲ್ಲಿ ದುರ್ಯೋಧನನ ಕಡೆಯವರೆಲ್ಲಾ ಸಾವನಪ್ಪಿರಲು ( ಯುದ್ಧ ಮೈದಾನಕ್ಕೆ ರಣರಂಗಕ್ಕೆ ಬಂದಾಗ ದ್ರೋಣರನ್ನು ಕಂಡು ಈ ವಾಕ್ಯವನ್ನು ದುರ್ಯೋಧನನು ಹೇಳುತ್ತಿದ್ದಾನೆ .

ವಿವರಣೆ : ದ್ರೋಣಾಚಾರ್ಯರ ಬಿಲ್ಲು ವಿದ್ಯೆ ಪ್ರಾವಿಣ್ಯತೆಯ ಬಗ್ಗೆ ತಿಳಿಸಲಾಗಿದೆ , ಹಳೆಗನ್ನಡ ಬಾಷಾಶೈಲಿ ಮಾರ್ಮಿಕವಾಗಿ ಮೂಡಿ ಬಂದಿದೆ .

6. ನೀಂ ಕ್ರಮವಿಪರ್ಯಯಂ ಮಾಡುವುದೇ ?

ಪ್ರಸ್ತಾವನೆ : ಪ್ರಸ್ತುತ ಈ ಸಲನ್ನು “ ದುರ್ಯೋಧನನ ಎಲಾಖೆ ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಇದನ್ನು ‘ ರನ್ನ ಗದಾಯುದ್ಧ ‘ ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ .

ಸಂದರ್ಭ : ದುರ್ಯೋ ದನನು ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನು ಕಾಣಲು ಬ ೦ ದಾಗ ತನ್ನ ಮಗ ಲಕ್ಷಣ ಕುಮಾರನು ಮಾಡಿದು ಬಿದ್ದುದ್ದನ್ನು ಕಂಡು ಆತನನ್ನು ಉದ್ದೇಶಿಸಿ ಈ ವಾಕ್ಯವನ್ನು ಹೇಳುತ್ತಿದ್ದಾನೆ .

ವಿವರಣೆ : ಮಗನು ತಂದೆ ತೀರಿ ಹೋದಾಗ ಕ್ರಿಯಾಕರ್ಮಗಳನ್ನು ಮಾಡುತ್ತಾನೆ . ಆದರೆ ಇಲ್ಲಿ ತಂದೆಯೇ ಮಗನಿಗೆ ಮಾಡಬೇಕಾದ ಸ್ಥಿತಿಯನ್ನು ನೆನೆದು ಮಗನೇ ನೀನು ಹೀಗೆ ಕ್ರಮವನ್ನು ವ್ಯತ್ಯಾಸಗೊಳಿಸಬೇಕೆ ? ಎಂಬುದಾಗಿ ಲಕ್ಷಣ ಕುಮಾರನನ್ನು ಕಂಡು ದುರ್ಯೋಧನನು ಹೇಳುತ್ತಿದ್ದಾನೆ .

ವಿಶೇಷತೆ : ದುರ್ಯೋಧನನಲ್ಲಿ ಮಗನನ್ನು ಕಳೆದುಕೊಂಡ ದು : ಖ ಕಂಡುಬರುತ್ತದೆ .

FAQ :

ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು ?

Ans: ಕುರುಪತಿ ರಣರಂಗದಲ್ಲಿ ( ಬಾರಿಗಾತ್ರದ ) ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದನು .

ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ?

Ans: ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ .

ಇತರೆ ವಿಷಯಗಳು :

1st Puc All Subject Notes

 First PUC All Textbooks Pdf 

1 ರಿಂದ 10ನೇ ತರಗತಿ ಪಠ್ಯಪುಸ್ತಕಗಳು Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಕನ್ನಡ ನೋಟ್ಸ್‌ Pdf

All Class Subjects Notes

All Notes App

ಆತ್ಮೀಯರೇ..

ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

KANNADA DEEVIGE APP 

ಕನ್ನಡ ದೀವಿಗೆ.in ಜಾಲತಾಣದಲ್ಲಿ 11ನೇ ತರಗತಿಯ ಪಠ್ಯಪುಸ್ತಕಗಳು ನೋಟ್ಸ್ , ಪ್ರಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

11 thoughts on “1st PUC Kannada Duryodhana Vilapa Notes| ದುರ್ಯೋಧನ ವಿಲಾಪ ನೋಟ್ಸ್‌

Leave a Reply

Your email address will not be published. Required fields are marked *