rtgh

10th Sukumara Swamiya Kathe Kannada Lesson Notes | 10ನೇ ತರಗತಿ ಸುಕುಮಾರಸ್ವಾಮಿಯ ಕಥೆ ಕನ್ನಡ ನೋಟ್ಸ್ 

Kseeb Solutions for Class 10th Kannada Sukumara Swamiya Kathe Lesson Notes

Kseeb Solutions for Class 10th Kannada Sukumar Swamiya Kathe Notes Question Answer pdf 10ನೇ ತರಗತಿ ಸುಕುಮಾರಸ್ವಾಮಿಯ ಕಥೆ ಪ್ರಶ್ನೆ ಉತ್ತರ ನೋಟ್ಸ್

ಗದ್ಯಪಾಠ ೦೮ ಸುಕುಮಾರಸ್ವಾಮಿ

ಶಿವಕೋಟ್ಯಾಚಾರ್ಯರು
Kseeb Solutions for Class 10th Kannada
ಕವಿ – ಕಾವ್ಯ ಪರಿಚಯ;
ಶಿವಕೋಟ್ಯಾಚಾರ್ಯರು ಕ್ರಿ. ಶ. ಸುಮಾರು ೧೦ ನೆಯ ಶತಮಾನದಲ್ಲಿ ಬಳ್ಳಾರಿ ಜಿಲ್ಲೆಯ ಹೂವಿನ
ಹಡಗಲಿ ತಾಲ್ಲೂಕಿನ ಕೋಗಳಿ ನಾಡಿನಲ್ಲಿ ಜನಿಸಿದರು. ಕನ್ನಡದ ಪ್ರಥಮ ಗದ್ಯಕೃತಿ ಎನಿಸಿದ
‘ವಡ್ಡಾರಾಧನೆ’ ಎಂಬ ಕೃತಿಯನ್ನು ಬರೆದಿದ್ದಾರೆ. ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ ಇದರಲ್ಲಿ ೧೯
ಕಥೆಗಳಿವೆ. ಅದರಲ್ಲಿ ಸುಕುಮಾರ ಸ್ವಾಮಿ ಕತೆ ಎಂಬುದು ಒಂದು ಉತ್ತಮ ಕತೆಯಾಗಿದೆ.

ಪಾಠದ ಆಶಯ ಭಾವ

‘ಸುಕುಮಾರಸ್ವಾಮಿಯ ಕಥೆ”ಯ ಮೂಲಕ ಹಳಗನ್ನಡ ಸಾಹಿತ್ಯದ ಪರಿಚಯ ಮಾಡಿಸುವುದು ಮೂಲ ಉದ್ದೇಶ. ಶಿವಕೋಟ್ಯಾಚಾರ್ಯ
ಅವರ ಗದ್ಯಶೈಲಿ ಸಂಸ್ಕೃತ ಮಿಶ್ರಿತ ಪದಸಂಪತ್ತುಳ್ಳದ್ದು . ಕನ್ನಡ ನಾಡಿನ ಪ್ರಾಚೀನ ಸಂಸ್ಕೃತಿ, ರಾಜ್ಯಾಡಳಿತ ವ್ಯವಸ್ಥೆ ತಿಳಿಯಲು ಈ ಕತೆಗಳು  ಸಹಾಯಕವಾಗಿವೆ. ಈ ಕಥೆಯ  ಸನ್ನಿವೇಶ  ಪಾತ್ರ ಸಂವಾದದಲ್ಲಿ ಸಜೀವತೆ, ಮಾನವೀಯತೆ ಕಂಡುಬರುತ್ತದೆ. ಮಾತೃಪ್ರೇಮ, ಅತಿಥಿ ಸತ್ಕಾರ
ಮೊದಲಾದ ಮೌಲ್ಯಗಳ ಪ್ರಸ್ತಾಪವೇ  ಪ್ರಸ್ತುತ  ಪಾಠದ ಆಶಯ.
ಸುಕುಮಾರಸ್ವಾಮಿ ಪಾಠದ ಸಂಕ್ಷಿಪ್ತ ಸಾರಾಂಶ
ಈ ಜಂಬೂದ್ವೀಪದ ದಕ್ಷಿಣ ಭಾಗದ ¨ಭರತಕ್ಷೇತ್ರದಲ್ಲಿ  ಆವಂತಿ ಎಂಬ ನಾಡು ಇದ್ದಿತು. ಆ ನಾಡಿನಲ್ಲಿ ಉಜ್ಜಯನಿ ಎಂಬ ಪಟ್ಟಣವಿತ್ತು. ಅಲ್ಲಿ
ಇಂದ್ರದತ್ತನೆಂಬ ನೆಂಬ ವ್ಯಾಪಾರಿ ಮತ್ತು ಆತನ ಹೆಂಡತಿ ಗುಣಮತಿ ಎಂಬುವವಳು ಇದ್ದರು. ಆ ಇಬ್ಬರಿಗೆ ಸೂರದತ್ತನೆಂಬ  ಒಬ್ಬ ಮಗ ಹುಟ್ಟಿದನು .
ಮತ್ತೆ ಅದೇ ಪಟ್ಟಣದಲ್ಲಿ ಮೂವತ್ತೆರಡು ಕೋಟಿ ಚಿನ್ನದ ಒಡೆಯ ಸುಭದ್ರ ಎಂಬ ಸೆಟ್ಟಿ ಇದ್ದನು . ಆತನ ಹೆಂಡತೆ ಸರ್ವಯಶಿ ಎಂಬುವವನ್ನು . ಆ
ಇಬ್ಬರಿಗೂ ತ್ರಿವೇದಿ ಎಂಬ ದೇವತೆ ಬಂದು ಯಶೋಭದ್ರೆ ಎಂಬ ಮಗಳಾಗಿ ಹುಟ್ಟಿದಳು. (ಆ ತ್ರಿವೇದಿ ತಪಸ್ಸು  ಮಾಡಿದ ಫಲದಿಂದ ದೇವತ್ವವನ್ನು
ಪಡೆದಿದ್ದಳು. ಹಿಂದೆ ತಪಸ್ಸು  ಮಾಡುವಾಗ ಮುಂದಿನ ಜನ್ಮದಲ್ಲಿ ಇಂತಹ ವಿಷಯೋಪಬೊಗವು ದೊರೆಯಬೇಕೆಂಬ   ಭೋಗಕಾಂಕ್ಷೆಯಿಂದ  ಸತ್ತಕಾರಣವಾಗಿ ಮಿಥ್ಯಾತ್ವಕ್ಕೆ (ಶ್ರದ್ಧೆಯ ಅಭಾವ – ತತ್ತ್ವರ್ಥದಲ್ಲಿ ಶ್ರದ್ದೆಯನ್ನು ಯನ್ನು ಉಂಟು ಮಾಡದಂತೆ ಜೀವಿಯನ್ನು ಬಾಧಿಸುವುದು) ಸೇರಿ ಸ್ತ್ರೀಯತ್ವವನ್ನು ಪಡೆದಳು .) ಆ ಯಶೋಭದ್ರೆಯನ್ನು  ಸೂರದತ್ತನಿಗೆ ಕೊಟ್ಟು ವಿವಾಹ ಮಾಡಿದರು  . ಆ ಇಬ್ಬರಿಗೆ ನಾಗಶ್ರೀ ಎಂಬ ದೇವರು  ಬಂದು ಸುಕುಮಾರಸ್ವಾಮಿ ಎಂಬ ಮಗನಾಗಿ ಹುಟ್ಟಿದನು. ಆತನು ಹುಟ್ಟಿದ ದಿನದಂದೇ ವೈರಾಗ್ಯ ಉಂಟಾಗಿ ಸೂರದತ್ತ ಸೆಟ್ಟಿಯು ಸುಕುಮಾರಸ್ವಾಮಿಗೆ ¸ಸೆಟ್ಟಿ ಪಟ್ಟವನ್ನು ಕಟ್ಟಿ ತಪಸ್ಸಿಗೆ  ಹೋದನು. ಸುಕುಮಾರಸ್ವಾಮಿಯು ಯುವಕನಾಗಿ  ಅತ್ಯಂತ ರೂಪ,ಲಾವಣ್ಯ,ಸೌಭಾಗ್ಯ, ಕಾಂತಿಯಿಂದ  ಕೂಡಿದವನಾಗಿದ್ದು,ಆತನಿಗೆ ಮೂವತ್ತೆರಡು  ಲತಾಗೃಹಗಳು
, ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವಬಾs ವ ವಿಲಾಸದಿಂದ ಸೌಂರ‍್ಯಗಳ ಒಡತಿಯರಾದ
ದೇವಲೋಕದ ಅಪ್ಸರ ಸ್ತೀಯರನ್ನೇ  ಹೋಲುವಂತಹ ಮೂವತ್ತೆರಡು ದಿವ್ಯಸ್ತ್ರೀಯರು(ಹೆಂಡತಿಯರು)ಇದ್ದರು. ಮೂವತ್ತೆರಡು  ನಾಟ್ಯಶಾಲೆಗಳು
,ಮೂವತ್ತೆರಡು ಕೋಟಿ ಸಂಪತ್ತು, ಪಂಚರತ್ನಗಳು  ಇದ್ದವು. ಇವುಗಳೊಂದಿಗೆ ಕೂಡಿ ಭೋಗೋಪಭೋಗ ಸುಖಗಳನ್ನು ಅನುಭವಿಸುತ್ತಿದ್ದನು.
ಮತ್ತೊಂದು ದಿವಸ ಒಬ್ಬ ನೈಮಿತ್ತಿಕನು(ಜೋಹಿಸ) ಬಂದು ಈ ಸುಕುಮಾರ ಸ್ವಾಮಿ ಯಾವ ಒಂದು ಕಾಲದಲ್ಲಿ ಋಷಿಯರ ರೂಪವನ್ನು
ಕಾಣುತ್ತಾನೋ ಅಂದು ತಪಸ್ಸಿಗೆ  ಹೋಗುತ್ತಾನೆಂದು ಅಪ್ಪಣೆ ಮಾಡಿದನು  . ಆ ಮಾತನ್ನು ತಾಯಿ ಯಶೋಭದ್ರೆ  ಕೇಳಿ ತನ್ನ  ಮನೆಯನ್ನು ಋಷಿ
ಋಷಿಗಳುಹೊಕ್ಕದಂತೆ ಬಾಗಿಲಿಗೆ ಕಾವಲುಗಾರರನ್ನು  ನೇಮಿಸಿದಳು   .
ಹೀಗೆ ಕಾಲವು ಕಳೆಯಲು ಮತ್ತೊಂದು ದಿವಸ ರತ್ನ ದೀಪದಿಂದ ಒಬ್ಬ ವ್ಯಾಪಾರಿ ಲಕ್ಷದಿನಾರಗಳ  ಬೆಲೆಯುಳ್ಳ  ರತ್ನ ಕಂಬಳಿಗಳನ್ನು ತೆಗೆದುಕೊಂಡು ಉಜ್ಜಯಿನಿಗೆ ಮಾರಲುಬಂದನು. ಆ ಉಜ್ಜಯಿನಿ ಪಟ್ಟಣವನ್ನು ಆಳುತ್ತಿದ್ದ ವೃಷಭಾಂಕನೆಂಬ ಅರಸ ಮತ್ತುಆತನ ಮಹಾರಾಣಿ ಜ್ಯೋತಿರ್ಮಾಲೆಗೆ ಹೋಗಿ ತೋರಿಸಿದನು. ಅವರು ಅದರ ಬೆಲೆಎಷ್ಟೆಂದು ವಿಚಾರಿಸಿದರು. ಆ ವ್ಯಾಪಾರಿ ಲಕ್ಷದಿನಾರ ಬೆಲೆ ಎಂದು ಹೇಳಿದಾಗ ಅರಸನು ಅದನ್ನ  ಕೊಂಡುಕೊಳ್ಳಲಾರದೆ ಹೋಗಲು ಹೇಳಿದನು.
10th Kannada Sukumara Swamiya Kathe Lesson Notes
ಆ ರೀತಿ ಉಜ್ಜಯಿನಿ ಪಟ್ಟಣದೊಳಗೆ ಎಲ್ಲರಿಗೂ ತೋರಿಸಿದಾಗ ಯಾರು ಕೊಳ್ಳಲಾಗದೆ ಇದ್ದಾಗ ಆ ರತ್ನ ಕಂಬಳಿಗಳನ್ನು ತೆಗೆದುಕೊಂಡುಹೋಗಿ ಯಶೋಭದ್ರೆಗೆ  ತೋರಿಸಿದನು  . ಆಕೆಯು ಲಕ್ಷದಿನಾರಗಳನ್ನು ಕೊಟ್ಟು ರತ್ನಗಂಬಳಿಗಳನ್ನು ತೆಗೆದುಕೊಂಡು ಒಂದೊಂದರಲ್ಲಿ ನಾಲ್ಕು ತುಂಡುಗಳಾಗುವಂತೆ  ಮೂವತ್ತೆರಡು ತುಂಡುಗಳನ್ನಾಗಿ ಮಾಡಿ ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು  . ಅವರು ಆ ರತ್ನಕಂಬಳಿಯ ತುಂಡುಗಳನ್ನು  ತಮ್ಮ ತಮ್ಮ ಚಪ್ಪಲಿಗಳಲ್ಲಿ ಸೇರಿಸಿದರು ಎಂಬ ಮಾತನ್ನು  ವೃಷಭಾಂಕ ಅರಸನು  ಕೇಳಿ ಆಶ್ಚರ್ಯಪಟ್ಟನು. ಅವರ ಐಶ್ವರ್ಯವನ್ನುನೋಡುವೆನು ಎಂದು ಮನೆಗೆ ಬರುವುದನ್ನು ಯಶೋಭದ್ರೆ ಕೇಳಿ ಅರಸರು ಬರುವ ದಾರಿಯಲ್ಲೆಲ್ಲ ಪಂಚರತ್ನಗಳಿಂದ ರಂಗೋಲಿಯನ್ನು ಇಟ್ಟುನೇತ್ರ, ಪಟ್ಟು, ದುಕೂಲ, ಚೀನಾದಿ ದಿವ್ಯವಾದ ವಸ್ತುಗಳನ್ನು ಹಾಸಿ, ರತ್ನ ಮಣಿಗಳಿಂದ ಶೋಭಿಸುವ ಚಿನ್ನದ ಮುಕ್ತಹಾರಗಳಿಂದ ತೋರಣವನ್ನು ಕಟ್ಟಿಸಿ ರಾಜರು ಬರುವುದನ್ನು ಎದುರು ನೋಡುತ್ತಿದ್ದಳು. ರಾಜನು ಬಂದು ದೇವೇಂದ್ರನ ಅರಮನೆಯಂತಿರುವ ಮಹಲನ್ನು ಹೊಕ್ಕು ಆಶ್ಚರ್ಯಚಕಿತನಾಗಿ ದೇವಲೋಕವನ್ನು ಹೊಕ್ಕ ಪುಣ್ಯವಂತನಂತೆ  ಐಶ್ವರ್ಯದಿಂದ ಕೂಡಿದ ಹಾಸಿಗೆಯಲ್ಲಿ ಕುಳಿತು ಸುಕುಮಾರನು ಎಲ್ಲಿದ್ದಾನೆ ಎಂದು ವಿಚಾರಿಸಿದನು  . ಆಗ ಯಶೋದ್ರೆಯು ಸ್ವಾಮಿ ಆತಬಹುಸಾಧುಸ್ವಬಾವಾದವನು , ನೀವು ಬರುದನ್ನು ತಿಳಿಯನು , ಮಹಲಿನ ಮಹಡಿಯ ಮೇಲೆ ಇದ್ದಾನೆ ಎಂದಾಗ ಅರಸನು ದೂತನೊಡನೆ  ಹೇಳಿ ಕಳುಹಿಸಿರಿ ಎನ್ನಲು, ತಾಯಿ ಹೋಗಿ ಮಗನೆ ಅರಸರು ಬಂದರು ಬಾ ಹೋಗೋಣ ಎಂದಾಗ ಅರಸರು ಎಂಬುವವರು  ಅದು ಯಾರು ?ಎನ್ನಲು ಯಶೋಭದ್ರೆ  ಅರಸರೆಂದರೆ ನಮ್ಮನ್ನು ಆಳುವ ಪ್ರಭುಗಳು ಎಂದೊಡೆ ನಮ್ಮನ್ನು ಆಳುವವರು  ಇರುವರೆ ! ಎಂದು ಆಶ್ಚರ್ಯಪಟ್ಟುತಾಯಿಯ ವಚನವನ್ನು ಮೀರಲಾರದೆ ಬರುವವನನ್ನು  ಕಂಡು ರಾಜನು ಕಣ್ಣನ್ನು ಪಡೆದ  ಫಲವನ್ನು ಇಂದು ಪಡೆದನು ಎಂದು ಪ್ರತ್ಯಕ್ಷವಾಗಿ  ಮನ್ಮಥನನ್ನು  ಅಪ್ಪಿಕೊಳ್ಳುವಂತೆ ಸುಕುಮಾರಸ್ವಾಮಿಯನ್ನು ಅಪ್ಪಿಕೊಂಡನು. ನಂತರ ದಿವ್ಯವಾದ ಹಾಸಿಗೆಯ ಮೇಲೆ ಕೂರಿಸಿದನು. ಆಗ ಸ್ವಜನ
ಪರಿಜನರೆಲ್ಲರು ಮಂಗಳಕರವಾದದು  ಎಂದು  ಬಿಳಿಸಾಸಿವೆಗಳನ್ನು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಬಿಳಿಸಾಸಿವೆಗಳು
ಸುಕುಮಾರಸ್ವಾಮಿಯ ಆಸನದಲ್ಲಿ  ಒತ್ತಿದಾಗ ಸೊಂಟವನ್ನು ಅಲುಗಾಡಿಸಿದನು  . ದೀಪವನ್ನು  ನೋಡಿದಾಗ ಕಣ್ಣೀರು ಸುರಿಸಿದನು ಇದನ್ನು ಕಂಡು
ವೃಷಭಾಂಕನು ಈತನಿಗೆ ಯಾವುದೋ ವ್ಯಾಧಿ(ರೋಗ)ಇದೆ ಎಂದು ತಿಳಿದನು.
ನಂತರ ಸ್ನಾನಕ್ಕೆ ಬನ್ನಿರೆಂದಾಗ ಹಾಗೆ ಮಾಡುವೆನೆಂದು ಸ್ನಾನಕ್ಕೆ ಹೋದನು. ದೈವ ಸಮಾನವಾದ ರತ್ನದ  ನೆಲೆಗಟ್ಟುಳ್ಳ  ಬಾವಿಯನ್ನು ಹೊಕ್ಕು ಸ್ನಾನ ಮಾಡುವಾಗ ಅಲ್ಲಿ ತನ್ನ ಬೆಲೆಬಾಳುವ ಬೆರಳಿನ ಮಾಣಿಕ್ಯದ ಉಂಗುರವನ್ನು ಕಳೆದುಕೊಂಡನು. ಅದನ್ನು  ಹುಡುಕಲು ಬಯಸಿ, ಸಣ್ಣದ್ವಾರವುಳ್ಳು ರಂಧ್ರವನ್ನು  ತೆಗೆದು  ನೀರನ್ನು  ಬಿಟ್ಟಾಗ ಇಂದ್ರನ ಭಂಡಾರವನ್ನೇ ತೆಗೆದಂತಾಗಿ ಉತ್ತಮವಾದ ನಾನಾ ಮಣಿಗಳುಳ್ಳ ವಿಚಿತ್ರವಾದ ಹಲವು ಆಭರಣಗಳನ್ನು  ಕಂಡು ಮಹಾಶ್ಚರ್ಯಭೂತನಾಗಿ ನೋಡುತ್ತಿದ್ದನು. ಅಷ್ಟರಲ್ಲಿ ಊಟಮಾಡಲು ಬನ್ನಿರೆಂದಾಗ ಊಟಕ್ಕೆ ಹೋದರು  .ಸುಕುಮಾರಸ್ವಾಮಿಯ ಜೊತೆಗೂಡಿ ನಾನಾ ಪ್ರಕಾರದ ಸಿಹಿಯಾದ ತಿನಿಗಳನ್ನು ಊಟ ಮಾಡುತ್ತಿರುವಾಗ ಸುಕುಮಾರಸ್ವಾಮಿಯು ಅರ್ಧಹಾರವನ್ನು ನುಂಗುತ್ತಿದ್ದನು  ಇನ್ನು ಅರ್ಧಹಾರವನ್ನು ಉಗುಳುತ್ತಿದ್ದನು. ಇದನ್ನ  ನೋಡಿ ಇದು ಸಹ ಒಂದು ರೋಗ ಆಹಾರದ ಮೇಲೆ ರುಚಿಯಿಲ್ಲವೆಂದು ಭಾವಿಸಿಕೊಂಡನು.
ಊಟ ಮುಗಿದ ಬಳಿಕ ಗಂಧ, ತಾಂಬೂಲ, ಮಾಲೆ, ವಸ್ತ್ರಾಭರಣಗಳನ್ನು  ತಂದು ಕೊಟ್ಟಾಗ ಅವುಗಳನ್ನು ಧರಿಸಿಕೊಂಡು ಅಲಂಕರಿಸಿಕೊಂಡು  ಲೋಕಾಭಿರಾಮವಾಗಿ ಮಾತನಾಡುತ್ತ ವಿನೋಧದಿಂದ ಇದ್ದಾಗ ಯಶೋಭದ್ರೆಗೆ  ಅರಸನು ಇಂತೆಂದು  ವಿಚಾರಿಸಿದನು  . ಅಮ್ಮಾ ನಮ್ಮ ತಮ್ಮನಸೊಂಟದ ಭಾಗಕ್ಕೂ ,ಕಣ್ಣೇರು  ಬರುವುದಕ್ಕೂ ,ಆಹಾರದಲ್ಲಿ ರುಚಿ ಇಲ್ಲದಿರುವುದುಕ್ಕೂ ಔಷದವನ್ನು   ಮಾಡಿಸಿಲ್ಲವೇಕೆ ಎನ್ನಲು, ದೇವಾ ಆತನಿಗೆ ಇವುರೋಗವಲ್ಲವು ಮಂತ್ರಾಕ್ಷತೆ ಹಾಕಿದ್ದರಿಂದ ಬಿಳಿ ಸಾಸಿವೆಗಳು ಒತ್ತಲು ಸಹಿಸದೆ ಸೊಂಟವನ್ನು ಅಲುಗಾಡಿಸಿದನು  , ಮತ್ತೆ ಆತನೂ ಯಾವಕಾಲದಲ್ಲೂ ಮಾಣಿಕ್ಯದ  ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕಿಗೆ ಸಹಿಸದೆ ಕಣ್ಣಿರು ಬರುತ್ತಿದೆ, ಮತ್ತೆ ನೀವು ಬಂದಿದ್ದರಿಂದ ಕಮಲನೀಲೋತ್ಪಲದಲ್ಲಿಟ್ಟು ಸುವಾಸನೆ ಭರಿಸದೆ  ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು ಮಾಡಿದ್ದರಿಂದ ಸುವಾಸಿತ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು  , ಉಳಿದ ಅನ್ನವನ್ನು  ಉಗುಳುತ್ತಿದ್ದನು. ಅದರಿಂದ ಈತನಿಗೆ ಈ ಆವಸ್ಥೆಗಳು ಆದವು ಎನ್ನುವುದನ್ನು ಕೇಳಿ ಆಶ್ಚರ್ಯಗೊಂಡ
ಈತನ ಕ್ಷಣ ಮಾತ್ರದ ಭೋಗಕ್ಕೊ  ಸುಖಕ್ಕೂ ನಮ್ಮ ಎಲ್ಲಾ ಕಾಲದಲ್ಲೂ ಅರಸುತನವನ್ನು ಮಾಡಿದ ಭೋಗೋಪಭೋಗಗಳು ಸಮಾನವಲ್ಲ .ಅದರಿಂದ ಈ ಲೋಕದಲ್ಲಿ ಈತನೇ ಶ್ರೇಷ್ಠನಾದ ಸುಖಿ ಎಂದು ಹೇಳಿ ಅರಸನು ಆವಂತಿ ಸುಕುಮಾರ ಎಂದು ಹೆಸರನ್ನು  ಇಟ್ಟನು  .

10ನೇ ತರಗತಿ ಸುಕುಮಾರಸ್ವಾಮಿಯ ಕಥೆ ನೋಟ್ಸ್ 

Kseeb Solutions for Class 10th Kannada Sukumar Swamiya Kathe Notes Question Answer  ಸುಕುಮಾರಸ್ವಾಮಿಯ ಕಥೆ ನೋಟ್ಸ್ 10ನೇ ತರಗತಿ 10th Standard Sukumara swamiya Kathe Kannada Lesson Notes question answer text book pdf download Kseeb Solutions for Class 10th Kannada 10ನೇ ತರಗತಿ ಸುಕುಮಾರ ಸ್ವಾಮಿಯ ಕಥೆ ಕನ್ನಡ ನೋಟ್ಸ್ ಪಾಠ, ಪ್ರಶ್ನೆ ಉತ್ತರ

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು  ವಾಕ್ಯಗಳಲ್ಲಿ ಉತ್ತರಿಸಿ.

೧. ಸುಕುಮಾರಸ್ವಾಮಿಯ ತಂದೆತಾಯಿಗಳ ಹೆಸರೇನು?
ಸುಕುಮಾರಸ್ವಾಮಿಯ ತಂದೆ ತಾಯಿಗಳ  ಸೂರದತ್ತ – ಯಶೋಭದ್ರೆ.
೨. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
ಸುಕುಮಾರಸ್ವಾಮಿಗೆ ಸೆಟ್ಟಿಯ ಪಟ್ಟ ಪಟ್ಟವನ್ನು ಕಟ್ಟಲಾಯಿತು.
೩. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?
ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಈತನುಯಾವ ಒಂದು ಕಾಲದಲ್ಲಿ ಋಷಿಯರ ರೂಪವನ್ನು
ಕಾಣುತ್ತಾನೋ ಅಂದು ತಪ್ಪಸ್ಸಿಗೆ ಹೋಗುತ್ತಾನೆಂದು ಹೇಳಿದನು  .
೪. ಯಶೋಭದ್ರೆಯು  ರತ್ನ ಕಂಬಳಿಗಳನ್ನು ಯಾರಿಗೆ ಕೊಟ್ಟಳು  ?
ಯಶೋಭದ್ರೆಯು  ರತ್ನ ಕಂಬಳಿಗಳನ್ನು  ತನ್ನ ಮೂವತ್ತೆರಡು ಸೊಸೆಯಂದಿರಿಗೆ ಕೊಟ್ಟಳು.
೫. ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ  ಬಿದ್ದಿತು?
ಅರಸ ವೃಷಭಾಂಕನ ಉಂಗುರವು  ಸ್ನಾನ ಮಾಡುವಾಗ ಕೆಳಕ್ಕೆ  ಬಿದ್ದಿತು.
ಹೆಚ್ಚುವರಿ ಪ್ರಶ್ನೋತ್ತರಗಳು
೬. ಉಜ್ಜಯಿನಿ ಅರಸ ಯಾರು ?
ಉಜ್ಜಯಿನಿ ಅರಸ ವೃಷಭಾಂಕ
೭. ಸುಕುಮಾರಸ್ವಾಮಿಗೆ ಮತ್ತು ಅರಸ ವೃಷಭಾಂಕರಿಗೆ ಯಾವ ಕಾಳನ್ನು ಮಂತ್ರಾಕ್ಷಾತೆಯನ್ನಾಗಿ ಹಾಕಲಾಯಿತು ?
ಸುಕುಮಾರಸ್ವಾಮಿಗೆ ಮತ್ತು ಅರಸ ವೃಷಭಾಂಕರಿಗೆ ಬಿಳಿಸಾಸಿವೆ ಕಾಳನ್ನು ಮಂತ್ರಾಕ್ಷಾತೆಯನ್ನಾಗಿ ಹಾಕಲಾಯಿತು.
೮. ಸುಕುಮಾರಸ್ವಾಮಿ ಅರ್ಧಾಹಾರರವನ್ನು  ಏಕೆ ಉಗುಳುತ್ತಿದ್ದನು ?
ಕಮಲನೀಲೋತ್ಪಲದಲ್ಲಿಟ್ಟು ಸುವಾಸನೆ ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು ಮಾಡಿದ್ದರಿಂದ
ಸುವಾಸಿತ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು, ಉಳಿದ ಅನ್ನವನ್ನು ಉಗುಳುತ್ತಿದ್ದನು.
೯. ರತ್ನ  ಗಂಬಳಿಯ ಬೆಲೆ ಎಷ್ಟಾಗಿತ್ತು ?
ರತ್ನಗಂಬಳಿಯ ಬೆಲೆ ಲಕ್ಷದಿನಾರ ಆಗಿತ್ತು.
೧೦. ಸುಕುಮಾರಸ್ವಾಮಿಗೆ ಆವಂತಿಸುಕುಮಾರ ಎಂದು ಹೆಸರಿಟ್ಟವರು ಯಾರು ?
ಸುಕುಮಾರಸ್ವಾಮಿಗೆ ಆವಂತಿಸುಕುಮಾರ ಎಂದು ಹೆಸರಿಟ್ಟವರು ಉಜ್ಜಯಿನಿಯ ಅರಸ ವೃಷಭಾಂಕ.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

೧. ಸುಕುಮಾರಸ್ವಾಮಿಯು ಹೇಗೆ ಸುಖಭೋಗಗಳನ್ನು ಅನುಭವಿಸುತ್ತಿದ್ದನು?
ಉತ್ತರ : ಸುಕುಮಾರಸ್ವಾಮಿಯು ಯುವಕನಾಗಿ ಅತ್ಯಂತ ರೂಪ,ಲಾವಣ್ಯ,ಸೌಭಾಗ್ಯ, ಕಾಂತಿಯಿಂದ  ಕೂಡಿದವನಾಗಿದ್ದು ಆತನಿಗೆ ಮೂವತ್ತೆ ರಡು
ಲತಾಗೃಹಗಳು , ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವಭಾವ ವಿಲಾಸದಿಂದ ಸೌಂರ‍್ಯಗಳ ಒಡತಿಯರಾದ ದೇವಲೋಕದ ಅಪ್ಸರ
ಸ್ತೀಯರನ್ನೇ ಹೋಲುವಂತಹ ಮೂವತ್ತೆರಡು ದಿವ್ಯಸ್ತ್ರೀಯರು(ಹೆಂಡತಿಯರು)ಇದ್ದರು. ಮೂವತ್ತೆರಡು ನಾಟ್ಯಶಾಲೆಗಳು  , ಮೂವತ್ತೆರಡು ಕೋಟಿ
ಸಂಪತ್ತು, ಪಂಚರತ್ನಗಳು  ಇದ್ದವು. ಇವುಗಳೊಂದಿಗೆ ಕೂಡಿ ಭೋಗೋಪಭೋಗ  ಸುಖಗಳನ್ನು ಅನುಭವಿಸುತ್ತಿದ್ದನು.
೨. ಅರಸ ವೃಷಭಾಂಕನು ಆಶ್ಚರ್ಯಗೊಳ್ಳಲು ಕಾರಣವೇನು?
ಉತ್ತರ : ವೃಷಭಾಂಕನು ಕೊಂಡುಕೊಳ್ಳಲಾಗದ ರತ್ನಗಂಬಳಿಗಳನ್ನ  ಸುಕುಮಾರ ಸ್ವಾಮಿಯ ತಾಯಿ ಯಶೋಭದ್ರೆ ಖರೀದಿಸಿದಳು. ಅವುಗಳನ್ನು
ಮೂವತ್ತೆರಡು ತುಂಡುಗಳನ್ನಗಿ ಮಾಡಿ ಸೊಸೆಯಂದಿರಿಗೆ ನೀಡಿದಳು. ಅವರು ಅವುಗಳನ್ನು ಚಪ್ಪಲಿಗಳಿಗೆ ಸಿಕ್ಕಿಸಿಕೊಂಡರು  . ಈ ಸಂಗತಿಯನ್ನು
ತಿಳಿದು ವೃಷಭಾಂಕನು ಆಶ್ಚರ್ಯಪಟ್ಟನು.
೩. ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದುಕೊಳ್ಳಲು ಕಾರಣವೇನು?
ಉತ್ತರ :ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಆಗಮಿಸಿದಾಗ,ಸಜ್ಜನರೊ  ಸೇವಕರೊ ಬಿಳಿಸಾಸುವೆಗಳನ್ನು ಮಂಗಳಕರವೆಂದು  ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸವೆ ಕಾಳುಗಳು ಸುಕುಮಾರಸ್ವಾಮಿ ಕುಳಿತಿದ್ದ ಆಸನದಲ್ಲಿ  ಒತ್ತಿದ್ದರಿಂದ ,ಸೊಂಟವನ್ನುಅಲುಗಾಡಿಸಿದನು . ದೀಪ ನೋಡಿದಾಗ ಅವನ ಕಣ್ಣೀರು ಸುರಿಯುತ್ತಿತ್ತು. ಊಟಮಾಡುವಾಗ ಸುಕುಮಾರಸ್ವಾಮಿ ಅರ್ಧ ಆಹಾರ ನುಂಗುತ್ತಾ ಇನ್ನುಳಿದ ಅರ್ಧ ಆಹಾರವನ್ನು ಉಗುಳುತ್ತಿದ್ದನು  .
ಅದನ್ನು ಅರಸನು  ನೋಡಿ ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದು ಭಾವಿಸಿದನು.
೪. ಸುಕುಮಾರಸ್ವಾಮಿಯ ವ್ಯಾದಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ತಾಯಿ ಯಶೋಭದ್ರೆಯು ಏನೆಂದು ಹೇಳಿದಳು?
ಉತ್ತರ :ದೇವಾ ಆತನಿಗೆ ಇವು ರೋಗವಲ್ಲವು ಮಂತ್ರಾಕ್ಷತೆ  ಹಾಕಿದ್ದರಿಂದ ಬಿಳಿ ಸಾಸಿವೆಗಳು ಒತ್ತಲು ಸಹಿಸದೆ ಸೊಂಟವನ್ನು ಅಲುಗಾಡಿಸಿದನು,
ಮತ್ತೆ ಆತನೂ  ಯಾವ ಕಾಲದಲ್ಲೂ ಮಾಣಿಕ್ಯದ ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕಿಗೆ ಸಹಿಸದೆ ಕಣ್ಣಿರು ಬರುತ್ತಿದೆ, ಮತ್ತೆ ನೀವು
ಬಂದಿದ್ದರಿಂದ  ಕಮಲನೀಲೋತ್ಪಲದಲ್ಲಿಟ್ಟು ಸುವಾಸನೆ ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು  ಮಾಡಿದ್ದರಿಂದ ಸುವಾಸಿತ
ಅಕ್ಕಿಯ ಅನ್ನವನ್ನು  ನುಂಗುತ್ತಿದ್ದನು  , ಉಳಿದ ಅನ್ನವನ್ನು  ಉಗುಳುತ್ತಿದ್ದನು. ಆದುದರಿಂದ ಇವು ವ್ಯಾಧಿಗಳಲ್ಲ ಎಂದು ಹೇಳಿದಳು.
ಹೆಚ್ಚುವರಿ ಪ್ರಶ್ನೋತ್ತರಗಳು
೩. ಅಶೋಕ ಪೈರವರ ಸಂಶೋಧನಾ ಸತ್ಯದ ತಿರುಳೇನು ?
ಅಶೋಕ ಪೈರವರ ಸಂಶೋಧನಾ ಸತ್ಯದ  ತಿರುಳೇನೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ  ತಾನಿಲ್ಲ. ಒಂದು ಜೀವಿಗೆ ಆಗುವ ದುಃಖ ದುಮ್ಮಾನ
ಪರಿಸರದಲ್ಲಿ  ಉಸಿರಾಡುತ್ತ ಇರುವ ಎಲ್ಲಾ ಜೀವಿಗಳಲ್ಲೂ  ಕಂಪನ ಉಂಟು ಮಾಡುತ್ತದೆ. ಈ ಅನುಕಂಪನ ಇಡೀ ಜೀವಸಂಕುಲವೆಲ್ಲ
ಒಂದೇ ಎಂದು  ಹೇಳುತ್ತದೆ.
೪. ದೇವನೂರ ಮಹಾದೇವ ಅವರು ಗುರುತಿಸಿದ ವಚನಕಾರರ ಪ್ರಜ್ಞೆಯ ಬಗ್ಗೆ ತಿಳಿಸಿ.
ವಚನಕಾರರು ನಮ್ಮ ಸುತ್ತಮುತ್ತ ಇರುವ ದೇವರುಗಳನ್ನು ದೇವರು ಅಂದುಕೊಂಡಿರಲಿಲ್ಲ. ಪ್ರತಿಯೊಬ್ಬ ವಚನಕಾರರಿಗೂ ಅವರವರದೇ
ಆದ ಇಷ್ಟದೈವ  ಇದ್ದಿತು. ಅದೇ ಪ್ರಜ್ಞೆ , ಅಂದರೆ “ ವಚನಕಾರರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು.” ಅವರು ತಮ್ಮ  ಕಷ್ಟ ಸುಖ , ದುಃಖ ದುಮ್ಮಾನ,
ಏಳುಬೀಳುಗಳನ್ನು  ಅವರ ಉತ್ಕಟ ಇಕ್ಕಟ್ಟುಗಳನ್ನು  ಆ ಪ್ರಜ್ಞೆ ಮುಂದೆ ಹೇಳಿಕೊಳ್ಳುತ್ತ ಒದ್ದಾಡುತ್ತಿದ್ದರೆಂದು ಕಾಣುತ್ತದೆ. ಈ ಒದ್ದಾಟಕ್ಕೆ ಅವರು ನುಡಿ
ಕೊಟ್ಟರು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

೧. ಸುಕುಮಾರಸ್ವಾಮಿಯ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಉತ್ತರ : ಈ ಜಂಬೂದ್ವೀಪದ ದಕ್ಷಿಣ ಭಾಗದ ¨ಭರತಕ್ಷೇತ್ರದಲ್ಲಿ  ಆವಂತಿ ಎಂಬ ನಾಡಿನಲ್ಲಿ ಉಜ್ಜಯನಿ ಎಂಬ ಪಟ್ಟಣವಿತ್ತು. ಆ ಪಟ್ಟಣದ
ಯಶೋಭದ್ರೆ  ಮತ್ತು ಸೂರದತ್ತರ  ಮಗನೆ ಸುಕುಮಾರಸ್ವಾಮಿ. ನಂತರ ಸುಕುಮಾರಸ್ವಾಮಿಗೆ ಸೆಟ್ಟಿ ಪಟ್ಟವನ್ನು ಕಟ್ಟಲಾಯಿತು. ಸುಕುಮಾರಸ್ವಾಮಿಯು
ಯುವಕನಾಗಿ ಅತ್ಯಂತ ರೂಪ,ಲಾವಣ್ಯ,ಸೌಭಾಗ್ಯ, ಕಾಂತಿಯಿಂದ  ಕೂಡಿದವನಾಗಿದ್ದು, ಆತನಿಗೆ ಮೂವತ್ತೆರಡು ಲತಾಗೃಹಗಳು , ಅತ್ಯಂತ ರೂಪ,ಲಾವಣ್ಯ, ಸೌಭಾಗ್ಯ, ಕಾಂತಿ, ಹಾವಭಾವ ವಿಲಾಸದಿಂದ ಸೌಂರ‍್ಯಗಳ ಒಡತಿಯರಾದ ದೇವಲೋಕದ ಅಪ್ಸರ ಸ್ತೀಯರನ್ನೇ ಹೋಲುವಂತಹಮ್ ಮೂವತ್ತೆರಡು ದಿವ್ಯಸ್ತ್ರೀಯರು(ಹೆಂಡತಿಯರು)ಇದ್ದರು. ಮೂವತ್ತೆರಡು ನಾಟ್ಯಶಾಲೆಗಳು , ಮೂವತ್ತೆರಡು ಕೋಟಿ ಸಂಪತ್ತು, ಪಂಚರತ್ನಗಳು ಇದ್ದವು. ಇವುಗಳೊಂದಿಗೆ ಕೂಡಿ ಭೋಗೋಪಭೋಗ  ಸುಖಗಳನ್ನು ಅನುಭವಿಸುತ್ತಿದ್ದನು.
ಮತ್ತೊಂದು ದಿವಸ ಒಬ್ಬ ನೈಮಿತ್ತಿಕನು(ಜೋಹಿಸ) ಬಂದು ಈ ಸುಕುಮಾರ ಸ್ವಾಮಿ ಯಾವ ಒಂದು ಕಾಲದಲ್ಲಿ ಋಷಿಯರ ರೂಪವನ್ನುಕಾಣುತ್ತಾನೋ ಅಂದು ತಪಸ್ಸಿಗೆ  ಹೋಗುತ್ತಾನೆಂದು ಅಪ್ಪಣೆ ಮಾಡಿದನು  . ಆ ಮಾತನ್ನು  ತಾಯಿ ಯಶೋಭದ್ರೆ  ಕೇಳಿ ತನ್ನ ಮನೆಯನ್ನು ಋಷಿಗಳು ,ಹೊಕ್ಕದಂತೆ ಬಾಗಿಲಿಗೆ ಕಾವಲುಗಾರರನ್ನ  ನೇಮಿಸಿದಳು. ಹೀಗೆ ಕಾಲವು ಕಳೆಯಲು ಮತ್ತೊಂದು ದಿವಸ ರತ್ನದೀಪದಿಂದ ಒಬ್ಬ ವ್ಯಾಪಾರಿಲಕ್ಷದಿನಾರಗಳ  ಬೆಲೆಯುಳ್ಳ  ರತ್ನಕಂಬಳಿಗಳನ್ನು ತೆಗೆದುಕೊಂಡು ಉಜ್ಜಯಿನಿಗೆ ಮಾರಲು ಬಂದಾಗ ಯಶೋಭದ್ರೆ ಲಕ್ಷದಿನಾರಗಳನ್ನು ಕೊಟ್ಟು ರತ್ನಗಂಬಳಿಗಳನ್ನು ತೆಗೆದುಕೊಂಡು ಮೂವತ್ತೆರಡು ಸೊಸೆಯಂದಿರಿಗೆ ಹಂಚಿಕೊಟ್ಟಳು. ಅವರು ಆ ರತ್ನಕಂಬಳಿಯ ತುಂಡುಗಳನ್ನು ತಮ್ಮ  ತಮ್ಮ  ಚಪ್ಪಲಿಗಳಲ್ಲಿ ಸೇರಿಸಿದರು ಎಂಬ ಮಾತನ್ನು  ವೃಷಭಾಂಕ ಅರಸನು ಕೇಳಿ ಆಶ್ಚರ್ಯಪಟ್ಟನು. ಅವರ ಐಶ್ವರ್ಯವನ್ನು ನೋಡುವೆನು  ಎಂದು ಮನೆ ಬಂದನು.
ರಾಜನು ಸುಕುಮಾರಸ್ವಾಮಿಯನ್ನು ಮನ್ಮಥನನ್ನು ಅಪ್ಪಿಕೊಳ್ಳುವಂತೆ ಅಪ್ಪಿಕೊಂಡನು. ನಂತರ ದಿವ್ಯವಾದ ಹಾಸಿಗೆಯ ಮೇಲೆಕೂರಿಸಿದನು. ಆಗ ಸ್ವಜನ ಪರಿಜನರೆಲ್ಲರು ಮಂಗಳಕರವಾದದು ಎಂದು ಬಿಳಿಸಾಸಿವೆಗಳನ್ನು ನ್ನು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಬಿಳಿಸಾಸಿವೆಗಳು ಸುಕುಮಾರಸ್ವಾಮಿಯ ಆಸನದಲ್ಲಿ ಒತ್ತಿದಾಗ ಸೊಂಟವನ್ನು ಅಲುಗಾಡಿಸಿದನು  . ದೀಪವನ್ನು ನೋಡಿದಾಗ ಕಣ್ಣೀರು ಸುರಿಸಿದನು. ಸುಕುಮಾರಸ್ವಾಮಿಯ ಜೊತೆಗೂಡಿ ನಾನಾ ಪ್ರಕಾರದ ಸಿಹಿಯಾದ ತಿನಿಗಳನ್ನು ಊಟ ಮಾಡುತ್ತಿರುವಾಗ ಸುಕುಮಾರಸ್ವಾಮಿಯು ಅರ್ಧಹಾರವನ್ನು ನುಂಗುತ್ತಿದ್ದನು  ಇನ್ನು ಅರ್ಧಹಾರವನ್ನು ಉಗುಳುತ್ತಿದ್ದನು. ಇದನ್ನು ಕಂಡು ವೃಷಭಾಂಕನು ಈತನಿಗೆ ಯಾವುದೋ ವ್ಯಾಧಿ(ರೋಗ)ಇದೆ ಎಂದು ತಿಳಿದು ಯಶೋಭದ್ರೆಗೆ  ಅಮ್ಮಾ ನಮ್ಮ ತಮ್ಮನ ಸೊಂಟದ ಭಾಗಕ್ಕೂ,ಕಣ್ಣೀರೂ ಬರುವುದಕ್ಕೂ,ಆಹಾರದಲ್ಲಿ  ರುಚಿ ಇಲ್ಲದಿರುವುದುಕ್ಕೂ ಔಷಧವನ್ನು  ಮಾಡಿಸಿಲ್ಲವೇಕೆ ಎನ್ನಲು, ದೇವಾ ಆತನಿಗೆ ಇವು ರೋಗವಲ್ಲವು ಮಂತ್ರಾಕ್ಷತೆ ಹಾಕಿದ್ದರಿಂದ ಬಿಳಿ ಸಾಸಿವೆಗಳು ಒತ್ತಲು ಸಹಿಸದೆ ಸೊಂಟವನ್ನು ಅಲುಗಾಡಿಸಿದನು , ಮತ್ತೆ ಆತನೂ  ಯಾವ ಕಾಲದಲ್ಲೂ ಮಾಣಿಕ್ಯದ ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕಿಗೆ ಸಹಿಸದೆ ಕಣ್ಣಿರು ಬರುತ್ತಿದೆ,
ಮತ್ತೆ ನೀವು ಬಂದಿದ್ದರಿಂದ  ಕಮಲನೀಲೋತ್ಪಲದಲ್ಲಿಟ್ಟು ಸುವಾಸನೆ ¨ಭರಿಸಿದ ಅಕ್ಕಿಯಲ್ಲಿ ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು ಮಾಡಿದ್ದರಿಂದ
ಸುವಾಸಿತ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು  , ಉಳಿದ ಅನ್ನವನ್ನು ಉಗುಳುತ್ತಿದ್ದನು. ಅದರಿಂದ ಈತನಿಗೆ ಈ ಆವಸ್ಥೆಗಳು ಆದವು ಎನ್ನುವುದನ್ನು
ಕೇಳಿ ಆಶ್ಚರ್ಯಗೊಂಡು ಈತನ ಕ್ಷಣಮಾತ್ರದ ಭೋಗಕ್ಕೋ ಸುಖಕ್ಕೂ ನಮ್ಮ ಎಲ್ಲಾ ಕಾಲದಲ್ಲೂ ಅರಸುತನವನ್ನು ಮಾಡಿದ
ಭೋಗೋಪಭೋಗಗಳು  ಸಮಾನವಲ್ಲ . ಅದರಿಂದ ಈ ಲೋಕದಲ್ಲಿ ಈತನೇ  ಶ್ರೇಷ್ಠನಾದ ಸುಖಿ ಎಂದು ಹೇಳಿ ಅರಸನು  ಆವಂತಿ ಸುಕುಮಾರ
ಎಂದು ಹೆಸರನ್ನು ಇಟ್ಟನು .
೨.‘ಸುಕುಮಾರ’ – ಎಂಬ ಹೆಸರು ಸುಕುಮಾರ ಸ್ವಾಮಿಗೆ ಹೇಗೆ ಅನ್ವರ್ಥವಾಗುತ್ತದೆ? ವಿವರಿಸಿ.
ಉತ್ತರ :ಸುಕುಮಾರಸ್ವಾಮಿಯು ಯುವಕನಾಗಿ ಅತ್ಯಂತ ರೂಪ,ಲಾವಣ್ಯ,ಸೌಭಾಗ್ಯ, ಕಾಂತಿಯಿಂದ  ಕೂಡಿದವನಾಗಿದ್ದು, ಆತನಿಗೆ ಮೂವತ್ತೆರಡು
ಲತಾಗೃಹಗಳು , ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವಭಾವ ವಿಲಾಸದಿಂದ ಸೌಂರ‍್ಯಗಳ ಒಡತಿಯರಾದ ದೇವಲೋಕದ ಅಪ್ಸರ
ಸ್ತೀಯರನ್ನೇ ಹೋಲುವಂತಹ ಮೂವತ್ತೆರಡು ದಿವ್ಯಸ್ತ್ರೀಯರು(ಹೆಂಡತಿಯರು)ಇದ್ದರು. ಮೂವತ್ತೆರಡು ನಾಟ್ಯಶಾಲೆಗಲು , ಮೂವತ್ತೆರಡು ಕೋಟಿಸಂಪತ್ತು, ಪಂಚರಗಳು   ಇದ್ದವು. ಇವುಗಳೊಂದಿಗೆ ಕೂಡಿ ಭೋಗೋಪಭೋಗ ಸುಖಗಳನ್ನು ಅನುಭವಿಸುತ್ತಿದ್ದನು.
ವೃಷಭಾಂಕ ಅರಸನು  ಸುಕುಮಾರ ಸ್ವಾಮಿಯ ಕೋಮಲವಾದ ಶರೀರವನ್ನು ನೋಡಿ ಮನ್ಮಥನನ್ನ  ಅಪ್ಪಿಕೊಳ್ಳುವಂತೆ ಅಪ್ಪಿಕೊಂಡನು. ಸ್ವಜನ
ಒತ್ತಿದಾಗ ಸೊಂಟವನ್ನು ಅಲುಗಾಡಿಸಿದ್ದನ್ನು ಗಮನಿಸಿದಾಗ ಆತ ಮೃದುಶರೀರವುಳ್ಳವನಾಗಿದ್ದನೆಂದು ತಿಳಿಯಬಹುದು. ದೀಪವನ್ನು
ನೋಡಿದಾಗ ಕಣ್ಣೀರು ಸುರಿಸಿದನು ಎಂಬುದನ್ನು ನೋಡಿದಾಗ ಯಾವಾಗಲೂ ಮಾಣಿಕ್ಯದ ಬೆಳಕಿನಲ್ಲಿ ಇರುತ್ತಿದ್ದನು ಎಂಬ ಆತನ
ಸೂಕ್ಷ್ಮದ್ರುಷ್ಟಿಯನ್ನು ಅರಿಯಬಹುದು. ಊಟ ಮಾಡುತ್ತಿರುವಾಗ ಸುಕುಮಾರಸ್ವಾಮಿಯು ಕಮಲನೀಲೋತ್ಪಲದಲ್ಲಿಟ್ಟು ಸುವಾಸನೆ ಭರಿಸಿದ ಅಕ್ಕಿಯಲ್ಲಿ
ಬೇರೆ ಅಕ್ಕಿಯನ್ನು ಬೆರೆಸಿ ಅನ್ನವನ್ನು ಮಾಡಿದ್ದರೂ ಸುವಾಸಿತ ಅಕ್ಕಿಯ ಅನ್ನವನ್ನು  ಮಾತ್ರ ನುಂಗುತ್ತಿದ್ದನು, ಉಳಿದ ಅನ್ನವನ್ನು ಉಗುಳುತ್ತಿದ್ದನು
ಎಂಬುದನ್ನು  ಗಮನಿಸಿದರೆ ಆತನ ಸುಆಹಾರದ ವಿಚಾರ ತಿಳಿಯುತ್ತದೆ. ಇಂತಹ ವಿಚಾರಗಳನ್ನು  ತಿಳಿದ ಅರಸ ಆಶ್ಚರ್ಯಗೊಂಡು ಈತನ
ಕ್ಷಣಮಾತ್ರದ ¨ಭೋಗಕ್ಕೋ ಸುಖಕ್ಕೂ ನಮ್ಮ ಎಲ್ಲಾ ಕಾಲದಲ್ಲೂ ಅರಸುತನವನ್ನು ಮಾಡಿದ ¨ಭೋಗೋಪಭೋಗಗಳು  ಸಮಾನವಲ್ಲ . ಅದರಿಂದ ಈ
ಲೋಕದಲ್ಲಿ ಈತನೇ  ಶ್ರೇಷ್ಠನಾದ ಸುಖಿ ಎಂದು ಹೇಳಿ ಅರಸನು ಆವಂತಿ ಸುಕುಮಾರ ಎಂದು ಹೆಸರನ್ನು ಇಟ್ಟದ್ದು ಆತನ ಹೆಸರಿಗೆ ಸುಕುಮಾರಎಂಬ ಹೆಸರಿಗೆ ಅನ್ವಯ  ವಾಗುತ್ತದೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧.“ರಿಸಿಯರ ರೂಪಂ ಕಾಣ್ಗುಮಂದೀತನು೦ ತಪಂಬಡುಗುಮ್”
ಆಯ್ಕೆ :ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ
ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ಮಾತನ್ನು  ನೈಮಿತ್ತಕನು  ಯಶೋಭದ್ರೆಗೆ ಹೇಳುತ್ತಾನೇ  ಸುಕುಮಾರ ಸ್ವಾಮಿಯು ¨ಭೋಗೋಪಬೋಗ ಸುಖಗಳನ್ನು ಅನುಭವಿಸುತ್ತಇರುವಾಗ ಒಂದು ದಿನ ನೈಮಿತ್ತಿಕನೋಬ್ಬನು ಅರಮನೆಗೆ ಬರುತ್ತಾನೆ. ಅರಮನೆಯಲ್ಲಿದ್ದ ಸುಕುಮಾರಸ್ವಾಮಿಯನ್ನು ನೋಡಿ ಯಾವ ಒಂದು
ಕಾಲದಲ್ಲಿ “ರಿಸಿಯರ ರೂಪಂ ಕಾಣ್ಗುಮಂದೀತನು೦ ತಪಂಬಡುಗುಮ್” (ಋಷಿಗಳ ರೂಪವನ್ನು ಕಾಣುವನೋ ಅಂದು ಈತನು  ತಪಸ್ಸಿಗೆ ಹೋಗುವನು  ) ಎಂದು ಹೇಳಿದ ಸಂದರ್ಭವಾಗಿದೆ..
ಸ್ವಾರಸ್ಯ : ಸುಕುಮಾರಸ್ವಾಮಿ ವೈರಾಗ್ಯ ಹೊಂದಿ ತಪಸ್ಸಿಗೆ  ಹೋಗುವುದ ಮುನ್ಸೂಚನೆ ನೀಡುವ ನೈಮಿತ್ತಿಕನ ಮಾತು ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
೨. “ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು”
ಆಯ್ಕೆ :ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ‘ ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ವಾಕ್ಯವನ್ನು ಸುಮಾರಸ್ವಾಮಿಯು ತಾಯಿ ಯಶೋಭದ್ರೆಗೆ  ಹೇಳಿದನು. ರಾಜ ವೃಷಭಾಂಕನು ಸುಕುಮಾರ ಸ್ವಾಮಿಯ ಮನೆಗೆ
ಬಂದು ಸುಕುಮಾರನು  ಎಲ್ಲಿದ್ದಾನೆ ?ಎಂದು ವಿಚಾರಿಸಿದಾಗ ಯಶೋಭದ್ರೆ  “ ಸ್ವಾಮಿ, ಅವನು  ಬಹಳ ಸಾದು  , ನೀವು ಬರುವುದನ್ನು  ಅವನು
ತಿಳಿಯನು ಎಂದಾಗ ಅರಸನು ಆತನು  ಬರುವಂತೆ ದೂತರೊಡನೆ ಹೇಳಿಕಳುಹಿಸಿ ಎಂದಾಗ ಯಶೋಭದ್ರೆ ತಾನೆ ಸುಕುಮಾರನಲ್ಲಿಗೆ ಹೋಗಿ
“ಮಗನೇ , ಅರಸರು ಬಂದರು  ಬಾ ಎಂದಾಗ ಸುಕುಮಾರನು “ನಮ್ಮನಾಳ್ವರುಮೊಳರೆ ಎಂದು ವಿಸ್ಮಯಂಬಟ್ಟು” (ನಮ್ಮನ್ನು  ಆಳುವವರು ಇರುವರೆ
ಎಂದು ಆಶ್ಚರ್ಯಪಟ್ಟು) ಬಂದ ಸಂದರವಾಗಿದೆ.
ಸ್ವಾರಸ್ಯ : ಸುಖೋಪಭೋಗದಲ್ಲಿದ್ದ ಸುಕುಮಾರನಿಗೆ ನಮ್ಮನ್ನು ಆಳುವವರೊ  ಇದ್ದಾರೆ ಎಂಬುದು ತಿಳಿಯದಿರುವ ಮತ್ತು ವಿಸ್ಮಯಗೊಳ್ಳುವ
ವಿಷಯ ಇಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ..
೩.“ಅರ್ಧಾಹಾರಮ೦ ನುಂಗುಗುಮರ್ಧಾಹಾರಮನುಗುೞ್ಗುಮದ ನೋಡಿ”
ಆಯ್ಕೆ : ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ
‘ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ವೃಷಭಾಂಕನು ಸುಕುಮಾರನೊಂದಿಗೆ ಕುಳಿತುಕೊಂಡು ನಾನಾ ಪ್ರಕಾರದ ಸಿಹಿಯಾದ ತಿನಿಸುಗಳನ್ನು ಊಟಮಾಡುತ್ತಿದ್ದ ಸಂದರ್ಭದಲ್ಲಿ  ದಲ್ಲಿಸುಕುಮಾರಸ್ವಾಮಿ “ಅರ್ಧಾಹಾರಮಂ ನುಂಗುಗುಮರ್ಧಾಹಾರಮನುಗುೞ್ಗುಮದ೦  ನೋಡಿ” (ಅರ್ಧ ಆಹಾರವನ್ನು  ನುಂಗುತ್ತಿರಲು ಅರ್ಧ ಆಹಾರವನ್ನು  ಉಗುಳುವುದನ್ನು  ನೋಡಿ) ಇದು ಸಹ ಒಂದು ರೋಗ, ಊಟದ ಮೇಲೆ ರುಚಿಯಿಲ್ಲದುದು” ಎಂದು ರಾಜನು ಭಾವಿಸಿಕೊಂಡ ಸಂದರ್ಭವಾಗಿದೆ ವಾಗಿದೆ.
ಸ್ವಾರಸ್ಯ : ಸುಕುಮಾರಸ್ವಾಮಿ ಸುವಾಸನೆಯಿಂದ ಕೂಡಿದ ಅಕ್ಕಿಯ ಅನ್ನವನ್ನು ಮಾತ್ರ ನುಂಗುತ್ತಿದ್ದನು  ಬೇರೆ ಅಕ್ಕಿಯಿಂದ ಮಾಡಿದ ಅನ್ನುವನ್ನು
ಉಗುಳುತ್ತಿದ್ದದ್ದನ್ನು ನೋಡಿದರೆ ಆತನ ಜೀವನ ಸುಖೋಪಭೋಗವಾಗಿತ್ತು ಎಂಬುದನ್ನು  ಈ ವಾಕ್ಯದ ಮೂಲಕ ಕವಿ ಸ್ವಾರಸ್ಯಪೂರ್ಣವಾಗಿ
ವರ್ಣಿಸಿದ್ದಾನೆ.
೪.“ಅವಂತಿ ಸುಕುಮಾರನೆಂದು ಪೆಸರನಿಟ್ಟಂ”
ಆಯ್ಕೆ : ಈ ವಾಕ್ಯವನ್ನು ‘ಶಿವಕೋಟ್ಯಾಚಾರ್ಯರು ’ಬರೆದಿರುವ ‘ವಡ್ಡಾರಾಧನೆ ’ ಕೃತಿಯಿಂದ ಆರಿಸಲಾದ
ಸುಕುಮಾರಸ್ವಾಮಿ ಕಥೆ ’ಎಂಬ ಪಾಠ ದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಸುಕುಮಾರನು ಅನುಭವಿಸುತ್ತಿದ್ದ ಸುಖಭೋಗಗಳನ್ನು ಕೇಳಿದ ರಾಜನು “ಈತನ ಕ್ಷಣದ ಮಾತ್ರ ಭೋಗಸುಖಕ್ಕೂ ಎಮ್ಮಅರಸುತನದ ಕಾಲದಲ್ಲಿ ಅನುಭವಿಸಿದ ಎಲ್ಲಾ ¨ಭೋಗೋಪಗಗಳು ಸಮಾನವಲ್ಲ . ಆದುದರಿಂದ ಈ ಲೋಕದಲ್ಲಿ ಈತನೇ ಶ್ರೇಷ್ಠನಾದ ಸುಖಿ
ಎಂದು ಅವನಿಗೆ “ಅವಂತಿ ಸುಕುಮಾರನೆಂದು ಪೆಸರನಿಟ್ಟಂ”ಎಂದು  ಕವಿ ಹೇಳಿದ ಸಂಧರ್ಭವಾಗಿದೆ ವಾಗಿದೆ.
ಸ್ವಾರಸ್ಯ : ಸುಕುಮಾರಸ್ವಾಮಿಯ ವೈಭವನ್ನು  ಮೆಚ್ಚಿ ಈತನ ವೈಭವ  ಮುಂದೆ ತನ್ನ ವೈಭವ  ಸಮವಲ್ಲ   ಎಂದು ವೃಷಭಾಂಕನ್ನು  ಸುಕುಮಾರನಿಗೆ ಅವಂತಿ ಸುಕುಮಾರ ಎಂದು ಹೆಸರಿಟ್ಟಿದ್ದು  ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.

ಭಾಷಾ ಚಟುವಟಿಕೆ

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧. ನಾಮಪದ ಎಂದರೇನು? ಉದಾಹರಿಸಿರಿ.
ನಾಮ ಪ್ರಕೃತಿಗಳಿಗೆ ವಿಭಕ್ತಿ ಪ್ರತ್ಯಯಗಳು  ಸೇರಿ ಆಗುವ ಪದವೇ ನಾಮಪದ  ಅಂದರೆ ಯಾವುದೇ ಒಬ್ಬ ವ್ಯಕ್ತಿ, ವಸ್ತು , ಸ್ಥಳ ಇತ್ಯಾದಿ ಹೆಸರುಗಳನ್ನ ಸೂಚಿಸುವ ಪದಗಳು  . ಅವುಗಳು ವಿಭಕ್ತಿ  ಪ್ರತ್ಯಾಯ ಸಹಿತವಾಗಿರುತ್ತವೆ.
ಉದಾ : ‘ಭೀಮ’ಎನ್ನುವುದು ನಾಮ ಪ್ರಕೃತಿ, ಅನ್ನು ಎನ್ನುವುದು ವಿಭಕ್ತಿ ಪ್ರತ್ಯಯ ಸೇರಿ
ಭೀಮನನ್ನು ಎನ್ನುವುದು ನಾಮಪದ.
೨. ನಾಮವಾಚಕಗಳ ವಿಧಗಳನ್ನ  ಪಟ್ಟಿಮಾಡಿರಿ.
ನಾಮವಾಚಗಳು – ವಸ್ತುವಾಚಕ, ಗುಣವಾಚಕ, ಸಂಖ್ಯಾವಾಚಕ, ಸಂಖ್ಯೇಯವಾಚಕ, ಭಾವನಾಮ, ಪರಿಮಾಣವಾಚಕ, ದಿಗ್ವಾಚಕ, ಸರ್ವನಾಮ.
೩. ಕೃದಂತ ಎಂದರೇನು? ಉದಾಹರಣೆಗಳನ್ನು ಬರೆಯಿರಿ.
ಧಾತುಗಳಿಗೆ ಕೃತ್‌ಪ್ರತ್ಯಯಗಳು ಸೇರಿ ಕೃದಂತಗಳೆನಿಸುತ್ತವೆ.
ಕೃದಂತ ನಾಮ: ಮಾಡಿದ , ತಿನ್ನುವ, ನಡೆಯುವ , ಓಡಿದ
ಕೃದಂತ ಭಾವನಾಮ: ಮಾಟ , ತಿನ್ನವಿಕೆ, ನಡೆತ  ,ಓಟ
ಕೃದಂತಾವ್ಯಯ: ಮಾಡಿ,ತಿಂದು , ನಡೆಯುತ್ತ , ಓಡಿ
 ೪. ಕೊಟ್ಟಿರುವ ಪದಗಳನ್ನುಕೃದಂತನಾಮ, ಕೃದಂತಭಾವನಾಮ, ಕೃದಂತಾವ್ಯಯಗಳಾಗಿ ವಿಂಗಡಿಸಿ ಬರೆಯಿರಿ.
ಮಾಟ, ಓಡಿದ, ತಿಂದು, ನೋಡಿ, ಆಟ, ನೋಡಿದ.
ಕೃದಂತ ನಾಮ: ಓಡಿದ, ನೋಡಿದ
ಕೃದಂತ ಭಾವನಾಮ: ಮಾಟ , ಆಟ
ಕೃದಂತಾವ್ಯಯ: ನೋಡಿ, ತಿಂದು

ಆ) ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸೂಕ್ತವಾದುದನ್ನು ಆರಿಸಿ ಬರೆಯಿರಿ.

೧. ವರ್ತಮಾನ ಕೃದಂತನಾಮಕ್ಕೆ ಈ ಪದವು ಉದಾಹರಣೆಯಾಗಿದೆ.
ಅ) ಬರೆಯುವ ಆ) ಬರೆದ ಇ) ಬರೆಯದ ಈ) ಬರೆಹ
ಉತ್ತರ: ಅ) ಬರೆಯುವ
೨.‘ನೋಟ’ ಎಂಬುದು ಈ ವ್ಯಾಕರಣಾಂಶವಾಗಿದೆ.
ಅ) ಕೃದಂತನಾಮ ಆ) ಕೃದಂತಭಾವನಾಮ ಇ) ಕೃದಂತಾವ್ಯಯ ಈ)ತದ್ಧಿತಾಂತ
ಉತ್ತರ: ಆ) ಕೃದಂತಭಾವನಾಮ
೩. ಇವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ.
ಅ) ತೊಡುಗೆ ಆ) ತಿನ್ನುವಿಕೆ ಇ) ನಡೆಯುವ  ಈ) ಮಾಡಲಿಕ್ಕೆ
ಉತ್ತರ: ಈ) ಮಾಡಲಿಕ್ಕೆ
೪. ‘ಲೋಕದೊಳ್’ ಎಂಬುದು ಈ ವಿಭಕ್ತಿಯಲ್ಲಿದೆ .
ಅ) ಪ್ರಥಮ  ಆ) ತೃತೀಯಾ ಇ) ಪಂಚಮೀ ಈ) ಸಪ್ತಮೀ
ಉತ್ತರ: ಈ) ಸಪ್ತಮೀ
ಇ) ಮೊದಲೆರಡು ಪದಗಳಿಗಿರುವ ಸಂಬಂಧಿಸಿದಂತೆ  ಮೂರನೆಯ ಪದಕ್ಕೆ ಸಂಬಂಸಿದ ನಾಲ್ಕನೆಯ ಪದ ಬರೆಯಿರಿ.
೧. ನದಿ, ಪರ್ವತ : ರೂಢನಾಮ : : ವ್ಯಾಪಾರಿ, ವಿಜ್ಞಾನಿ : ಅನ್ವರ್ಥನಾಮ
೨. ನಾನು, ನೀನು : ಪುರುಷಾರ್ಥಕ ಸರ್ವನಾಮ : : ಯಾರು? ಏನು? : ಪ್ರಶ್ನಾರ್ಥಕ ಸರ್ವನಾಮ
೩. ಅಷ್ಟು : ಪರಿಮಾಣ ವಾಚಕ : : ಹನ್ನೆರಡು  : ಸಂಖ್ಯಾವಾಚಕ
೪. : ಪಟ್ಟಣ : : ಕಸವರ : ಚಿನ್ನ
Kseeb Solutions for Class 10th Kannada Sukumara swamiya  Lesson Notes question answer pdf lesson summary in Kannada deevige
10ನೇ ತರಗತಿ ಸುಕುಮಾರ ಸ್ವಾಮಿಯ ಕಥೆ ಪ್ರಶ್ನೆ ಉತ್ತರ ನೋಟ್ಸ್ Kseeb Solutions for Class 10th Kannada Sukumara swamiya  Kannada  Question Answer Summary text book pdf

SSLC 10th Kannada notes

Kannada Lesson Notes Kannada Deevige 10th Notes Sukumara swamiya  Pata Notes Question answer text book pdf download

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published. Required fields are marked *