ಕುವೆಂಪು ಅವರ ಜೀವನಚರಿತ್ರೆ ಕವಿ ಪರಿಚಯ, Kuvempu Information in Kannada Poet Kuvempu Parichaya in Kannada Information About Kuvempu in Kannada ಕುವೆಂಪು ಅವರ ಕವಿ ಪರಿಚಯ Kuvempu Stories in Kannada Kuvempu Books in kannada kuvempu biography in kannada
ಕುವೆಂಪು ಪರಿಚಯ Parichaya :
ರಾಷ್ಟ್ರಕವಿ ಕುವೆಂಪು ಎಂದು ಪ್ರಸಿದ್ದಿಯಾಗಿರುವ ಕುವೆಂಪುರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 1904 ಡಿಸೆಂಬರ್ 29 ರಂದು ಜನಿಸಿದರು ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ತಾಯಿ ಸೀತಮ್ಮ ತಂದೆ ವೆಂಕಟಪ್ಪ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ತೀರ್ಥಹಳ್ಳಿ , ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು ವರಕವಿ ಬೇಂದ್ರೆ ಯವರಿಂದ “ಯುಗದ ಕವಿ” “ಜಗದ ಕವಿ” ಎನಿಸಿಕೊಂಡವರು.ವಿಶ್ವಮಾನವ ಸಂದೇಶ ನೀಡಿದವರು.
ಕನ್ನಡದ ಎರಡನೆಯ ರಾಷ್ಟ್ರಕವಿ
ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಕೊಡಮಾಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾವರು.
ಕನ್ನಡ ರಸಋಷಿ , ರಾಷ್ಟ್ರಕವಿ , ಸಾಹಿತ್ಯ ದಿಗ್ಗಜ ಎಂದೇ ಪ್ರಸಿದ್ಧರಾಗಿರುವ ಕುವೆಂಪುರವರು ವಿದ್ಯಾರ್ಥಿ ದೆಸೆಯಲ್ಲಿಯೇ 1928 ರಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷತೆಯ ಗೌರವ ಇವರಿಗೆ ಸಂದಿತು . 1929 ರಲ್ಲಿ ಎಂ.ಎ. ಪದವಿಯನ್ನು ಪಡೆದು ತಾವು ಓದಿದ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದರು 1933 ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿ ಸಮ್ಮೇಳನದ ಅಧ್ಯಕ್ಷರಾದರು.1937 ಎಪ್ರಿಲ್ 30 ರಂದು ಹೇಮಾವತಿಯವರನ್ನು ಕೈ ಹಿಡಿದರು.
ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯ ಚೈತ್ರ ಎಂಬ ಪುತ್ರರು, ಇಂದುಕಲಾ ಮತ್ತು ತರಿಣಿ ಎಂಬ ಇಬ್ಬ ಪುತ್ರಿಯರಿದ್ದಾರೆ. ರಾಮಕೃಷ್ಣ ಪರಮಹಂಸರ ಜೀವನದಿಂದ ಪ್ರಭಾವಿತರಾದ ಕುವೆಂಪುರವರು ಸ್ವಾಮಿ ಶಿವಾನಂದರಿಂದ ದೀಕ್ಷೆ ಪಡೆದಿದ್ದಾರೆ. 1955 ರಲ್ಲಿ ಅಲ್ಲಿಯ ಪ್ರಾಂಶುಪಾಲರಾದರು . 1956 ರಿಂದ 1960 ರವರೆಗೆ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆಸಲ್ಲಿಸಿದರು .
ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು . ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು . ಮೈಸೂರಿನಲ್ಲಿ ನಡೆದ ೩೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು .
ಪ್ರಶಸ್ತಿ ಮತ್ತು ಪದವಿಗಳು | Prashasti Mattu Padavigalu
- 1955 ರಲ್ಲಿ ‘ ಶ್ರೀರಾಮಾಯಣ ದರ್ಶನಂ ” ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- 1956 ರಲ್ಲಿ ಮೈಸೂರು , 1966 ರಲ್ಲಿ ಕರ್ನಾಟಕ 1969 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿ ನೀಡಿವೆ
- 1957 ರಲ್ಲಿ ಧಾರವಾಡದಲ್ಲಿ ನಡೆದ 39 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡರು
- 1958 ರಲ್ಲಿ ಭಾರತ ಸರ್ಕಾರ ‘ ಪದ್ಮಭೂಷಣ ಪ್ರಶಸ್ತಿ ‘ ನೀಡಿತು
- 1964 ರಲ್ಲಿ ಕರ್ನಾಟಕ ಸರ್ಕಾರ ” ರಾಷ್ಟ್ರಕವಿ “ ಬಿರುದು ನೀಡಿ ಗೌರವಿಸಿತು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಸದಸ್ಯತ್ವವನ್ನು ನೀಡಿದೆ
- 1956 ರಲ್ಲಿ ‘ ಉಡುಗೊರೆ ‘ , 1968 ರಲ್ಲಿ ‘ ಗಂಗೋತ್ರಿ ‘ ,
- 1975 ರಲ್ಲಿ ‘ ಸಹ್ಯಾದ್ರಿ ಹೆಸರಿನ ಅಭಿನಂದನ ಗ್ರಂಥಗಳು ಇವರಿಗೆ ಅರ್ಪಿತವಾಗಿವೆ .
- 1969 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿಗಳು ದೊರೆತವು . . .
- 1991 ರಲ್ಲಿ ಭಾರತ ಸರ್ಕಾರದಿಂದ ‘ ಪದ್ಮವಿಭೂಷಣ ಪ್ರಶಸ್ತಿ ‘ ದೊರೆಯಿತು .
- 1992 ರಲ್ಲಿ ಕರ್ನಾಟಕ ಸರ್ಕಾರದಿಂದ ಪಂಪಪ್ರಶಸ್ತಿ ,
- 1992 ರಲ್ಲಿ ‘ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದವು .
- ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ
- ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು .
ಜಯ ಭಾರತ ಜನನಿಯ ತನುಜಾತೆ‘,
‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’,
‘ಓ ನನ್ನ ಚೇತನ ಆಗುವ ನೀ ಅನಿಕೇತನ’
ಹೀಗೆ ರಾಷ್ಟ್ರಕವಿ ಕುವೆಂಪು ಅವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ. ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಶತಮಾನದಲ್ಲಿ ಕಂಡ ದೈತ್ಯ ಪ್ರತಿಭೆ.
ಕಥನ ಕವನಗಳು,
ಕಲಾ ಸುಂದರಿ,
ನವಿಲು,
ಪಕ್ಷಿಕಾಶಿ,
ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೂ ಸೇರಿ 30ಕ್ಕೂ ಹೆಚ್ಚು
ಕಾವ್ಯ ಕೃತಿಗಳು
ಜಲಗಾರ,
ಯಮನಸೋಲು,
ಬೊಮ್ಮನಹಳ್ಳಿ ಕಿಂದರಿ ಜೋಗಿ,
ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ,
ಮಹಾರಾತ್ರಿ,
ರಕ್ತಾಕ್ಷಿ,
ಬಿರುಗಾಳಿ,
ಬೆರಳ್‌ಗೆ ಕೊರಳ್,
ಶೂದ್ರ ತಪಸ್ವಿ,
ನಾಡಗೀತೆ
ಇತರೆ ನಾಟಕಗಳು,
ಕಾನೂರು ಹೆಗ್ಗಡತಿ,
ಮಲೆಗಳಲ್ಲಿ ಮದುಮಗಳು ಕಾದಂಬರಿಗಳು
ವಿಮರ್ಶೆ,
ಮಲೆನಾಡು
ಕಾವ್ಯ ಮೀಮಾಂಸೆ-ಕಾವ್ಯ ,
ಶಿಶುಸಾಹಿತ್ಯ
ಕವನಸಂಕಲನಗಳು
ಕಾನೂನು ಬೃಹತ್ ಕಾದಂಬರಿಗಳು ,
ಬೆರಳೆ ಕೊರಳ್ ,
ರಕ್ತಾಕ್ಷಿ ,
ಸ್ಮಶಾನ ಕುರುಕ್ಷೇತ್ರ ,
ಯಮನಸೋಲು ಮುಂತಾದ ನಾಟಕಗಳು
ತಪೋನಂದನ ,
ರಸೋವೈಸಃ ,
ವಿಭೂತಿ ಪೂಜೆ ಮುಂತಾದವು
ವಿಮರ್ಶಾ ಗ್ರಂಥಗಳು , ವಿಚಾರಕ್ರಾಂತಿಗೆ ಆಹ್ವಾನ
ನಿರಂಕುಶಮತಿಗಳಾಗಿ ,
ಷಷ್ಠಿನಮನ ಮುಂತಾದವು
ವೈಚಾರಿಕ ಗ್ರಂಥಗಳು ,
ನೆನಪಿನ ದೋಣಿಯಲ್ಲಿ
ಆತ್ಮಕಥನ ,
ಮೋಡಣ್ಣನ ತಮ್ಮ ನನ್ನ ಗೋಪಾಲ ,
ಬೊಮ್ಮನಹಳ್ಳಿ ಕಿಂದರಿಜೋಗಿ
ಮುಂತಾದ ಮಕ್ಕಳ ಕವನಗಳು
ಕುವೆಂಪು ಅವರ ಬೃಹತ್ ಸಾಹಿತ್ಯ ಕೃಷಿಗೆ ಸಾಕ್ಷಿಯಾಗಿವೆ ಹೀಗೆ ಸಾಹಿತ್ಯಲೋಕಕ್ಕೆ ನೀಡಿರುವ ಕೊಡುಗೆ ಅಪಾರ. ಕನ್ನಡದ ಮಹೋನ್ನತ ಕವಿ ಕುವೆಂಪು 9 ನವೆಂಬರ್ 1994 ರಲ್ಲಿ ಮರಣ ಹೊಂದಿದರು
FAQ :
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 1904 ಡಿಸೆಂಬರ್ 29 ರಂದು ಜನಿಸಿದರು
ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿ ಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.
ಇನ್ನು ಹೆಚ್ಚಿನ ವಿಷಯಗಳನ್ನು ಓದಿ :
ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ
ಹಾಗೆ ನೀವು ಕುವೆಂಪುರವರು ಬರೆದಿರುವ ಪುಸ್ತಕಗಳನ್ನು ನೀವು ಖರೀದಿ ಮಾಡಬಹುದು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಿ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಕನ್ನಡ ದೀವಿಗೆ.in ಜಾಲತಾಣದಲ್ಲಿ ಇರುವ ಮಾಹಿತಿಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
👌
👌👌👌👌👌👌
super
👌👏👍👌
Super