Kuvempu Poems in Kannada | ಕುವೆಂಪು ಕವಿತೆಗಳು

ಕುವೆಂಪುರವರ ಜನಪ್ರಿಯ ಕವಿತೆಗಳು, Kuvempu Poems in Kannada, 5+ Kuvempu Poems Lyrics in Kannada Pdf, Kuvempu Poems List in Kannada Kuvempu Poet in Kannada Selected Poems of Kuvempu in Kannada Kuvempu Kavithegalu in Kannada

Kuvempu Poems in Kannada

ನವೀನ

ನಾಡಿನ ಪುಣ್ಯದ ಪೂರ್ವ ದಿಗಂತದಿ

ನವ ಅರುಣೋದಯ ಹೊಮ್ಮುತಿದೆ !

ಚಿರನೂತನ ಚೇತನಾಡುತ್ಸಾಹದಿ

ನವೀನ ಜೀವನ ಚಿಮ್ಮುತಿದೆ !

ಅಭಿನವ ಮಧುಕೋಕಿಲ ಕಲಾಕಂಠದಿ

ಸ್ವರಸುರ ಚಾಪಗಳುಣ್ಮುತಿವೆ !

ಶ್ಯಾಮಲ ಕಾನನ ಸುಮ ಸಮ್ಮೇಳದಿ

ಇಂಚರ ಸಾಸಿರ ಪೊಣ್ಮುತಿವೆ !

ಕಿವಿ ಕಣ್ಣಾಗುತಿದೆ !

ಕಾಣೆ ಕಿವಿಯಾಗುತಿದೆ !

ಭೂಮವೋಮದ ನೀಲಾಂಗಣದಲಿ

ಕೆಂದರೆಮುಗಿಲಿನ ರಂಗೋಲಿ

ರಂಜಿಸುತಿದೆ ಹೊಳೆ ತೆರೆದುಚ್ಚಿತ್ತಿದ

ಕೆಂಪಗೆ ನುನ್ಮಳಲನು ಹೋಳಿ !

ಹಿಮಾಮಣಿ ಸಿಂಚಿತ ತೃಣವಿಸ್ತಾರಡಿ

ನೇಸರು ಕೀಡಿಬಳನೆಯ್ಯುತಿದೆ

ವಿಹಂಗ ದಂಪತಿ ತರುಶಾಖಾಗ್ರದಿ

ಪ್ರೇಮಾಲಾಪಾನೆಗೈಯುತಿದೆ

ನವೀನಗಾನವ ಕೇಳಿ ,

ನಾಡಿನ ಪುಣ್ಯದ ಪೂರ್ವದಿಗಂತದಿ

ನವೀನ ಜೀವನ ಚಿಮ್ಮುತಿದೆ ! – ಕುವೆಂಪು

ಭಾರತ ತಪಸ್ವಿನಿ

ವೇದರುಶಿ ಭೂಮಿಯಲಿ ನಾಕನರಕಗಳಿಂದು

ಸಾವು ಬದುಕಿನ ಕಟ್ಟಕಡೆಯ ಹೋರಾಟದಲಿ

ಸಂದಿಸಿವೆ , ಮಾನವನೆಡೆಯ ಕಾಳಕೂಟದಲಿ

ಅಮೃತವನ ಹಾರೈಸಿ ಬಲಿರಕ್ತದಲಿ ಮಿಂದು

ಕಾಡಿಹೆವು ಕಣ್ಣೀರು ತುಂಬಿ , ನಾಗರಿಕತೆಯು

ನಾಗಿಣಿಯ ಪ್ರಗತಿನಾಮಕ ಫಣೆಯ ಮೇಲೆತ್ತಿ

ಚುಂಬಿಸಿಯೇ ಕೊಲ್ಲಲೆಳೆಸುತಿದೆ – ಹಿಂದಿನ ಬುತ್ತಿ

ಸವೆಯುತಿದೆ , ಇಂದಿನ ಮಹಾ ತಪಸ್ಸಿನ ಚಿತೆಯ

ರಕ್ತಮ ವಿಭೂತಿಯೊಳೆ ಮುಂದಿನ ನವೋದಯದ

ಧವಳಿಮ ಪಿನಾಕಾದಾರನೈಥಹನು , ಮತ್ತೊಮ್ಮೆ

ಭಾರತಾಂಬೆಯು ಜಗದ ಬೆಳಕಾಗುವಳು , ಹೆಮ್ಮೆ

ಗೌರವಗಳಿಂದ ಜನಗಣದ ಕಟು ನಿರ್ಧಯದ

ಲೋಭ ಬುದ್ಧಿಯ ಹೀನ ಕುಟಿಳತೆಯ ಸುರೆನೀಗಿ

ಮೆರೆವಳು ತಪಸ್ವಿನಿಯೆ ಚಕ್ರವರ್ತಿನಿಯಾಗಿ ! – ಕುವೆಂಪು

ಜಯ ಹೇ ಕರ್ನಾಟಕ ಮಾತೆ 

ಜೈ ! ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ ||

ಜೈ ! ಸುಂದರ ನದಿ ವನಗಳ ನಾಡೆ

ಜಯಹೇ ರಸ ಋಷಿಗಳ ಬೀಡೆ ,

ಗಂಧದ ಚಂದದ ಹೊನ್ನಿನ ಗಣಿಯೇ ,

ರಾಘವ ಮಧುಸೂಧನರವತರಿಸಿದ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ ,

ಜನನಿ ಜೋಗುಳದ ವೇದದ ಘೋಷ

ಜನನಿಗೆ ಜೀವವು ನಿನ್ನಾವೇಶ

ಹಸುರಿನ ಗಿರಿಗಳಸಾಲೆ

ನಿನ್ನಯ ಕೊರಳಿನ ಮಾಲೆ

ಕಪಿಲ ಪತಂಜಸ ಗೌತಮ ಜಿನನುತ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ.

ಶಂಕರ ರಾಮಾನುಜ ವಿದ್ಯಾರಣ್ಯ

ಬಸವೇಶ್ವರ ಮಾಧ್ವರ ದಿವ್ಯಾರಣ್ಯ

ರನ್ನ ಷಡಕ್ಷರಿ ಪೊನ್ನ

ಪಂಪ ಲಕುಪತಿ ಜನ್ನ

ಕಬ್ಬಿಗ ನುಡಿಸಿದ ಮಂಗಳಧಾಮ

ಕವಿ ಕೋಗಿಲೆಗಳ ಪುಣ್ಯಾರಾಮ

ನಾನಕರಾಮಾನಂದ ಕಬೀರರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ ಜೈ

ತೈಲಪ ಹೊಯ್ಸಲರಾಳಿದ ನಾಡೆ

ಡಂಕಣ ಜಕಣರ ನೆಚ್ಚಿನ ಬೀಡೆ

ಕೃಷ್ಣ ಶರಾವತಿ ತುಂಗಾ

ಕಾವೇರಿಯ ವರರಂಗ

ಚೈತನ್ಯ ಪರಮಹಂಸ ವೀವೆಕರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಸರ್ವಜನಾಂಗದ ಶಾಂತಿಯ ತೋಟ

ರಸಿಕರ ಕಣಗಳ ಸೆಳೆಯುವ ನೋಟ

ಹಿಂದೂ ಚಸ್ತ ಮುಸಲ್ಮಾನ

ಪಾರಸಿಕ ಜೈನರ ಉದ್ಯಾನ

ಜನಕನ ಹೋಲುವ ದೊರೆಗಳ ಧಾಮ 

ಗಾಯಕ ವೈಣಿಕರಾ ಧಾಮ  

ಕನ್ನಡ ನುಡಿ ಕುಣಿದಾಡುತ ಗೇಹ

ಕನ್ನಡ ತಾಯಿಯ ಮಕ್ಕಳ ದೇಹ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ . – ಕುವೆಂಪು

 ನೀ ಮೆಟ್ಟುವ ನೆಲ ಅದೆ ಕರ್ನಾಟಕ

ಎಲ್ಲಾದರೂ ಇರು , ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡ ಗೋವಿನ ಓ ಮುದ್ದಿನ ಕರು ,

ಕನ್ನಡತನವೊಂದಿದ್ದರೆ ನೀನಮ್ಮಗೆ

ಕಲ್ಪತರು!

ನೀ ಮೆಟ್ಟುವ ನೆಲ – ಅದೇ ಕರ್ನಾಟಕ

ನೀ ನೇರುವ ಮಾಲೆ – ಸಹ್ಯಾದ್ರಿ

aನೀ ಮುಟ್ಟುವ ಮರ – ಶ್ರೀಗಂಧದ ಮರ

ನೀ ಕುಡಿಯುವ ನೀರ್ – ಕಾವೇರಿ

ಪಂಪನನೋಡುವ ನಿನ್ನಾ ನಾಲಿಗೆ

ಕನ್ನಡವೇ ಸತ್ಯ ,

ಕುಮಾರವ್ಯಾಸನನಾಲಿಪ ಕಿವಿಯದು

ಕನ್ನಡವೇ ನಿತ್ಯ

ಹರಿಹರ ರಾಘವರಿಗೆ ಎರಗುವ ಮನ ,

ಹಾಳಾಗಿಹ ಹಂಪೆಗೆ ಕೊರಗುವ ಮನ ,

ಪೆಂಪಿನ ಬನವಾಸಿಗೆ ಕೊರಗುವ ಮನ ,

ಕಾ ಜಾನಕೆ ಗಿಣಿ ಕೋಗಿಲೆ ಇಂಪಿಗೆ ,

ಮಲ್ಲಿಗೆ ಸಂಪಗೆ ಕೇದಗೆ ಸೊಂಪಿಗೆ ,

ಮಾವಿನ ಹೊಂಗೆಯ ತಳಿರಿನ ತಂಪಿಗೆ

ರಸ ರೋಮಾಂಚನಗೊಳುವಾತನ ಮನ

ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?

ಎಂದೆಂದಿಗೂ ತಾನ್

ಕನ್ನಡವೇ ಸತ್ಯ !

ಕನ್ನಡವೇ ನಿತ್ಯ !

ಅನ್ಯವೆನಳದೆ ಮಿಥ್ಯಾ !  – ಕುವೆಂಪು

ಕುವೆಂಪು ಕವಿತೆಗಳು

ಕನ್ನಡಮ್ಮನ ಹರಕೆ 

ಕನ್ನಡಕೆ ಹೋರಾಡು

ಕನ್ನಡದ ಕಂದ

ಕನ್ನಡವ ಕಾಪಾಡು

ನನ್ನ ಆನಂದ |

ಜೋಗುಳದ ಹರಕೆಯಿದು

ಮರೆಯದಿರು , ಚಿನ್ನಾ

ಮರತೆಯಾದರೆ ಅಯ್ಯೋ

ಮರೆತಂತೆ ನನ್ನ |

ಮೊಲೆಯ ಹಾಲೆಒಂತಂತೆ

ಸವಿಜೆನು ಬಾಯ್ದೆ ;

ತಾಯಿಯಪ್ಪುಗೆಯಂತೆ

ಬಾಳಸೊಗಸು ಮೆಯ್ಕೆ |

ಗುರುವಿನೊಲ್ಲುದಿಯಂತೆ

ಶ್ರೇಯಸ್ಸು ಬಾಳೆ :

ತಾಯಿನುಡಿಗೆ ದುಡಿದು ಮಾಡಿ

ಇಹಪಾರಗಳೇಲ್‌ಗೆ |

ದಮ್ಮಯ್ಯ ಕಂದಯ್ಯ

ಬೇಡುವೆನು ನಿನ್ನ ,

ಕನ್ನಡಮ್ಮನ ಹರಕೆ ,

ಮರೆಯದಿರು , ಚಿನ್ನಾ |

ಮರತೆಯಾದರೆ ಅಯ್ಯೋ

ಮರೆತಂತೆ ನನ್ನ ;

ಹೋರಾಡು ಕನ್ನಡಕೆ

ಕಲಿಯಾಗಿ , ರನ್ನಾ | – ಕುವೆಂಪು

ನಡೆ ಮುಂದೆ ನಡೆ ಮುಂದೆ

ನಡೆ ಮುಂದೆ ನಡೆ ಮುಂದೆ

ನುಗ್ಗಿ ನಡೆ ಮುಂದೆ !

ಜಗ್ಗದಯೆ ಕುಗ್ಗದೆಯೆ

ಹಿಗ್ಗಿ ನಡೆ ಮುಂದೆ !

ಭಾರತ ಖಂಡದ ಹಿತವೇ

ನನ್ನ ಹಿತ ಎಂದು

ಭಾರತ ಮಾತೆಯ ಮತವೇ

ನನ್ನ ಮತ ಎಂದು

ಭಾರತಾಂಬೆಯ ಸುತರೆ

ಸೋದರರು ಎಂದು

ಭಾರತಾಂಬೆಯ ಮುಕ್ತಿ

ಮುಕ್ಕಿ ನನಗೆಂದು

ನಡೆ ಮುಂದೆ ನಡೆ ಮುಂದೆ

ನುಗ್ಗಿ ನಡೆ ಮುಂದೆ !

ಜಗ್ಗದಯೆ ಕುಗ್ಗದೆಯೆ

ಹಿಗ್ಗಿ ನಡೆ ಮುಂದೆ – ಕುವೆಂಪು

FAQ :

ಎಲ್ಲಾದರೂ ಇರು ಎಂತಾದರು ಇರು ಪದ್ಯದ ರಚನೆಕಾರರು ಯಾರು?

ಎಲ್ಲಾದರೂ ಇರು ಎಂತಾದರು ಇರು ಪದ್ಯದ ರಚನೆಕಾರರು ಕುವೆಂಪು

ತನುವು ನಿನ್ನದು ಮನವು ನಿನ್ನದು ಕವಿತೆಯನ್ನು ರಚಿಸಿದವರಾರು

ಇನ್ನು ಹೆಚ್ಚಿನ ವಿಷಯಗಳನ್ನು  ಓದಿ: 

Kuvempu Information in Kannada

ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ಕುವೆಂಪು ಅವರ ಬಗ್ಗೆ ಮಾಹಿತಿ

ಬಸವಣ್ಣನ ವಚನಗಳು

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕನ್ನಡ ದೀವಿಗೆ.in ಜಾಲತಾಣದಲ್ಲಿ ಇರುವ ಮಾಹಿತಿಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh