9th Marali Manege Kannada Notes | ಮರಳಿ ಮನೆಗೆ ಪದ್ಯದ ಪ್ರಶ್ನೆ ಉತ್ತರ ನೋಟ್ಸ್

Contents

9th Marali Manege Kannada Notes | ಮರಳಿ ಮನೆಗೆ ಪದ್ಯದ ಪ್ರಶ್ನೆ ಉತ್ತರ ನೋಟ್ಸ್

9th Class Marali Manege Kannada Notes 9ನೇ ಮರಳಿ ಮನೆಗೆ ಪದ್ಯದ ಪ್ರಶ್ನೆ ಉತ್ತರ ನೋಟ್ಸ್, marali manege poem summary, marali manege padya question and answer in kannada notes pdf

ಪದ್ಯ ಭಾಗ – 5 ಮರಳಿ ಮನೆಗೆ

  • ಅರವಿಂದ ಮಾಲಗತ್ತಿ

ಕೃತಿಕಾರರ ಪರಿಚಯ

ಅರವಿಂದಂ ಮಾಲಗತ್ತಿ ಅವರು ಕ್ರಿ ಶ 1956 ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು . ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ . ಎ . , ಪಿಎಚ್.ಡಿ . ಪದವಿಗಳನ್ನು ಪಡೆದು , ಇವರು ಸಂಶೋಧನೆ ಮತ್ತು ವೈಚಾರಿಕ ಪ್ರಸಿದ್ಧರಾಗಿದ್ದಾರೆ .

ಜನಪ್ರಿಯ ಕವಿಯಾಗಿರುವ ಇವರು ‘ ವಿಶ್ವತೋಮುಖ -ಹೂ ಬಲುಭಾರ ‘ , ‘ ಮೂಕನಿಗೆ ಬಾಯಿ ಬಂದಾಗ ‘ , ‘ ಕಪ್ಪುಕಾವ್ಯ ‘ , ‘ ಮೂರನೆಯ ಕಣ್ಣು ‘ , ‘ ನಾದ – ನಿನಾದ ‘ , ‘ ಸಿಲಿಕಾನ್ ಸಿಟಿ ಮತ್ತು ಕೋಗಿಲೆ ‘ , ‘ ಚಂಡಾಲ ಸ್ವರ್ಗಾರೋಹಣಂ ‘ ಕವನ ಸಂಕಲನಗಳನ್ನು ರಚಿಸಿದ್ದಾರೆ .

‘ ಕಾರ್ಯ ‘ ಕಾದಂಬರಿಯನ್ನೂ ಮುಗಿಯದ ಕತೆಗಳು ‘ ಎಂಬ ಕಥಾ ಸಂಕಲನವನ್ನೂ ‘ ಗೌರ್ಮೆಂಟ್ ಬಾಹ್ಮಣ ‘ ಎಂಬ ಆತ್ಮಕಥನವನ್ನೂ ಬರೆದಿದ್ದಾರೆ ‘ ಜಾನಪದ ಶೋಧ , ಭೂತರಾಧನೆ ‘ ಮುಂತಾದ ಕೃತಿಗಳನ್ನು ರಚಿಸಿದ್ದಾರೆ .

ಎಂಬ ಶ್ರೀಯುತರ ‘ ಮೂಕನಿಗೆ ಬಾಯಿ ಬಂದಾಗ ‘ ಕವನ ಸಂಕಲನಕ್ಕೆ ‘ ದೇವರಾಜ ಬಹದ್ದೂರ್ ಪ್ರಶಸ್ತಿ ‘ , ‘ ಕಪ್ಪು ಕಾವ್ಯ ‘ ಕೃತಿಗೆ ‘ ನರಸಿಂಹಯ್ಯ ಪುರಸ್ಕಾರ ‘ ಮತ್ತು ‘ ಗೌರ್ಮೆಂಟ್ ಬ್ರಾಹ್ಮಣ ‘ ಕೃತಿಗೆ ‘ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ಗಳು ಲಭಿಸಿವೆ .

ಪ್ರಕೃತ ‘ ಮರಳಿ ಮನೆಗೆ ‘ ಕವನವನ್ನು ಅರವಿಂದ ಮಾಲಗತ್ತಿ ಅವರ ‘ ವಿಶ್ವತೋಮುಖ – ಹೂ ಬಲುಭಾರ ‘ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ .

 

ಆಶಯ ಭಾವ

ಅರವಿಂದ ಮಾಲಗತ್ತಿ ಅವರು ಪ್ರಾಧ್ಯಾಪಕರಾಗಿ , ಸಾಹಿತಿಯಾಗಿ ದಲಿತ ಸಂವೇದನೆ ಮತ್ತು ಅನುಭವವನ್ನು ಅತ್ಯಂತ ಸೂಕ್ಷ್ಮವಾಗಿ ದಾಖಲಿಸುವವರು .

“ ಸಮಕಾಲೀನವಾದ ಜಾಗತಿಕ , ರಾಷ್ಟ್ರೀಯ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳಿಗೆ ಅತ್ಯಂತ ತೀವ್ರವಾಗಿ ಸ್ಪಂದಿಸಿ , ಎಲ್ಲಾ ಸಂದರ್ಭಗಳಲ್ಲಿಯೂ ಆಧುನಿಕವಾದ ಜನಪರವಾದ ನಿಲುವುಗಳನ್ನು ತೆಗೆದುಕೊಂಡ ಮತ್ತು ಇವೆಲ್ಲವನ್ನೂ ಕವಿತೆಗಳ ಒಡಲಿನಲ್ಲಿಯೇ ಅಳವಡಿಸಿಕೊಂಡ ಅಪರೂಪದ ಕವಿಗಳಲ್ಲಿ ಮಾಲಗತ್ತಿಯವರು ಒಬ್ಬರು .

” ಇವರ ” ಮರಳಿ ಮನೆಗೆ ‘ ಕವನವು ಇಂದಿನ ಪ್ರಕ್ಷುಬ್ಧ ಸ್ಥಿತಿಗೆ ಬುದ್ಧನ ಆಗಮನದ ಪ್ರಸ್ತುತತೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ . ಇಂದಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಬುದ್ಧನ ಬೆಳಕು ನಮಗೆ ಅವಶ್ಯಕ ,

ಬುದ್ಧನು ಸತ್ಯ , ಶಾಂತಿ , ಕರುಣೆಯ ಬೆಳಕು , ನಾವು ದಿವ್ಯವಾದ ಜಗತ್ತಿನ ಭವ್ಯವಾದ ಮನುಜರಾಗಿ ಬದುಕ ಬೇಕಾದರೆ ಬುದ್ಧನ ಉಪದೇಶ ಅನುಸರಿಸುವುದು ಬಹುಮುಖ್ಯವಾಗಿದೆ .

ನಾವೆಲ್ಲರೂ ಜಾತಿಯ ಸೀಮೆಯಾಚೆಗೆ ಬಂದು , ಧರ್ಮದ ಗಡಿಯಾಚೆಗೆ ನಿಂದು ಲಿಂಗಬೇಧ ಮಾಡದೆ ಮೇಲುಕೀಳು ಮನೋಭಾವನೆಯನ್ನು ತೊರೆದು ಬಾಳಿ ಬದುಕಲು ನಮ್ಮ ನಡೆ ಬುದ್ಧನ ಕಡೆಗೆ ಇರಬೇಕು , ನಮ್ಮ ನುಡಿಯು ಬುದ್ಧನ ನುಡಿಯಾಗಬೇಕು .

ಅದಕ್ಕೆ ಬುದ್ಧನು ನಮ್ಮ ಮನೆಗೆ , ಮನಕ್ಕೆ ಮರಳಿ ಬರಬೇಕು ” ಎಂಬುದು ಈ ಕವನದ ಆಶಯವಾಗಿದೆ .

ಪದಗಳ ಅರ್ಥ

ದೀಕ್ಷಾಭೂಮಿ   –  ಉಪದೇಶ ಮಾಡುವ ಸ್ಥಳ

ಪಥ                 –  ದಾರಿ , ಮಾರ್ಗ , ಹಾದಿ

ಬುದ್ಧ               –  ತಿಳಿದವನು , ಬೌದ್ಧ ಸನ್ಯಾಸಿ

ಬೋಧಿಸತ್ವ      –  ಬುದ್ಧನಾಗುವ ಸತ್ವವುಳ್ಳವನು , ಬುದ್ಧನ ಒಂದು ಹೆಸರು

ಮಹಾಮನೆ       –  ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮನೆ

ವೈಶಾಖ ( ತೃ )   –  ಬೇಸಗೆ ( ದ )

ಸಿದ್ಧಾರ್ಥ          –  ಬೌದ್ಧಮತ ಪ್ರವರ್ತಕ

ಪದ್ಯದ ಸರಳಾನುವಾದ ಮತ್ತು ಸಾರಾಂಶ .

marali manege kannada poem summary

ಬಾರಯ್ಯ ಬಾರೊ ಮರಳಿ ಮನೆಗೆ

ಬಾರಯ್ಯ ಬಾರೊ ಬುದ್ಧನೆಡೆಗೆ

 ಬಾರಯ್ಯ ಬಾರೊ ಕತ್ತಲಿಂದೀಚೆಗೆ

ಬಾರಯ್ಯ ಬಾರೊ ಬೆಳಕಿನ ಆದಿಗೆ – ಬಾರಯ್ಯ ಬಾರೊ

ಸಾರಾಂಶ : ಪ್ರಸ್ತುತ ಸಮಾಜವು ಅಜ್ಞಾನ , ಅಂಧಕಾರ , ಜಾತಿ , ಮತ , ಕುಲ , ಸಮಾಜದಲ್ಲಿ ಧರ್ಮಾಂಧತೆಯಂತಹ ಸಮಸ್ಯೆಗಳಿಂದ ನರಳುತ್ತಿದೆ .

ಶೋಷಿತರ ನೋವು ಕಷ್ಟಗಳು ದೂರವಾಗಬೇಕಾದರೆ , ಸಮಾಜದಲ್ಲಿ ಸಮಾನತೆ ಬರಬೇಕಾದರೆ , ಅಜ್ಞಾನದ ಕತ್ತಲೆಯನ್ನು ನೀಗಿ , ಸಮಾನತೆ ತರಲು , ಅಸಮಾನತೆ ದೂರವಾಗಲು ಬುದ್ಧನ ಆಗಮನದ ಅಗತ್ಯವಿದೆ ಬುದ್ಧನ ಸಂದೇಹಗಳ ಅವಶ್ಯಕತೆ ಇದೆ . ಬುದ್ಧನ ಆಗಮನವಾದರೆ ಸಮಾಜದಲ್ಲಿ ಪರಿವರ್ತನೆ ಸಾಧ್ಯ . ಆದ್ದರಿಂದ ಕವಿ ಬುದ್ಧನನ್ನು ಪ್ರಾರ್ಥನೆ ಮಾಡಿದ್ದಾರೆ .

 

ಬುದ್ಧನೆಂದರೆ ನಿತ್ಯ ಬುದ್ಧನೆಂದರೆ ಸತ್ಯ

ಬುದ್ಧನೆಂದರೆ ಶಾಂತಿ ಬುದ್ಧನೆಂದರೆ ಕ್ರಾಂತಿ

ಬುದ್ಧನೆಂದರೆ ಕರುಣೆ ಬುದ್ಧನೆಂದರೆ ಬೆಳಕು

ಲುಂಬಿನಿಯ ಬನಕೆ ವೈಶಾಖ ಬಂದಂತೆ – ಬಾರಯ್ಯ ಬಾರೊ

ಸಾರಾಂಶ : ಬುದ್ಧನೆಂದರೆ ಸತ್ಯ ,ಬುದ್ಧನೆಂದರೆ ನಿತ್ಯ , ಬುದ್ಧನೆಂದರೆ ಶಾಂತಿಯೂ ಹೌದು , ಕಾಂತಿಯು ಹೌದು , ಬುದ್ಧನ ತತ್ವಗಳು ಇಂದಿಗೂ ಜೀವಂತ ಅವುಗಳನ್ನು ಇಂದಿನ ಸಮಾಜ ಅನುಸರಿಸಬೇಕಿದೆ . ಆಗ ಮಾತ್ರ ದೇಶದಲ್ಲಿ ಸತ್ಯ ಶಾಂತಿ , ಕರುಣೆ , ಬೆಳಕು ಶಾಶ್ವತವಾಗಿ ನೆಲೆಸಲು ಸಾಧ್ಯ .

ಲುಂಬಿನಿಯ ಬನದಲ್ಲಿ ವೈಶಾಖ ಮಾಸದ ಚಿಗುರು ಬಂದಂತೆ ದೇಶದಲ್ಲಿ ಕರುಣೆಯ ಹೊಳೆಯನ್ನು ಹರಿಸಿ , ಬೆಳಕು ಬೀರಲು ಮರಳಿ ಮನೆಗೆ ಬಾ ಎಂದು ಕವಿ ಬುದ್ಧನನ್ನು ಕರೆಯುತ್ತಿದ್ದಾರೆ .

 

ನೀ ಹುಟ್ಟಿದೀ ಮನೆಯು ನೀ ಕಟ್ಟಿದೀ ಮನೆಯು

ಮರೆತೋದೆ ಹೇಗೆ ನೆನಪಾಯ್ತು ಈಗ

ನಿನಗಾಗಿ ತೆರೆದಿಹುದು ಈ ಮನೆಯ ಬಾಗಿಲು

ಪಂಚಶೀಲ ಪಥದಿ ದೀಕ್ಷಾಭೂಮಿ ರಥದಿ – ಬಾರಯ್ಯ ಬಾರೊ

ಸಾರಾಂಶ : ತಾನು ಹುಟ್ಟಿದ ನಾಡನ್ನು ಕಟ್ಟಿದ ಮನೆಯನ್ನು ಬುದ್ಧ ಮರೆತು ಬಿಟ್ಟಿದ್ದಾನೆ .

ಬೌದ್ಧ ಧರ್ಮದ , ಬುದ್ಧನ ಮಾರ್ಗವನ್ನು ನಾವು ಮರೆತುಬಿಟ್ಟಿದ್ದೇವೆ . ಆದರೆ ಆತನಿಗಾಗಿ , ಈ ಮನೆಯ ಬಾಗಿಲು ಸದಾ ತೆರೆದಿರುತ್ತದೆ . ಪಂಚಶೀಲದ ಮಾರ್ಗವನ್ನು ನಾವು ಅನುಸರಿಸಬೇಕು .

ಬುದ್ಧನು ಭಾರತಕ್ಕಿಂತ ಹೆಚ್ಚಾಗಿ ಬೇರೆ ಬೇರೆ ದೇಶಗಳಲ್ಲಿಯೇ ತನ್ನ ಧರ್ಮವನ್ನು , ಧರ್ಮದ ಸಾರವನ್ನು ಸಾರಿದ್ದಾನೆ . ಬುದ್ಧನಿಲ್ಲದ ನಾಡಿನಲ್ಲಿ ಅಸಮಾನತೆ , ಅಂಧಕಾರ ತುಂಬಿದೆ .

ಪಂಚಶೀಲ ತತ್ವಗಳನ್ನು ಅರಿತು ನಡೆದರೆ ಇಡೀ ಪ್ರಪಂಚದಲ್ಲಿಯೇ ನೆಮ್ಮದಿ ನೆಲೆಗೊಳ್ಳುತ್ತದೆ .

 

ಮರಳಿ ಮನೆಗೆ ಪದ್ಯದ ಸಾರಾಂಶ

 

ಬುದ್ಧ ನಮ್ಮ ತಂದೆ ಬುದ್ಧ ನಮ್ಮ ತಾಯಿ

ಬುದ್ಧ ನಮ್ಮ ಬಂಧು ಬುದ್ಧ ನಮ್ಮ ಬಳಗ

ಬೋಧಿಸತ್ವ ಮೀರಿದಡೆ ಮೆಚ್ಚನಾ ತಂದೆ

ಬಯಲಿನಲಿ ಬಂಧನ ಮೆಚ್ಚಳಾ ತಾಯಿ – ಬಾರಯ್ಯ ಬಾರೊ

ಸಾರಾಂಶ : ನಮಗೆ ಜನ್ಮ ಕೊಟ್ಟ ತಂದೆ ತಾಯಿ , ಬಂಧು – ಬಳಗ ಹೇಗೆ ನಮ್ಮ ಹಿತವನ್ನು ಬಯಸುತ್ತಾರೋ ಹಾಗೆಯೇ ಬುದ್ಧ , ಬುದ್ಧನ ಧರ್ಮವು ಸಮಾಜದ ಹಿತ ಕಾಯುತ್ತದೆ . ನಮ್ಮ ನಡೆ ಬುದ್ಧನಮಾರ್ಗವನ್ನು , ತತ್ವಗಳನ್ನು ಮೀರಿದಾಗ ನಮ್ಮ ತಂದೆಯಾದ ಬುದ್ಧನು ಮೆಚ್ಚುವುದಿಲ್ಲ .

ಬುದ್ಧನಂತೆ ನಾವೂ ಕೂಡ ಸಂಸಾರ ಬಂಧನದಿಂದ ದೂರಾಗಿ ಮುಕ್ತಿಯ ಬಯಲಿನಲ್ಲಿ ನಿಂತಾಗ ಐಹಿಕ ಬಂಧನವನ್ನು ಬಯಸಿದರೆ ತಾಯಿಯಂತಿರುವ ಬುದ್ಧನು ಮೆಚ್ಚುವುದಿಲ್ಲ ಎಂದು ಕವಿ ಹೇಳಿದ್ದಾರೆ .

 

ಬಹುಜನತೆಯ ಹಿತವೇ ಬಹುಜನತೆಯ ಸುಖವು

ಅ ನಮ್ಮುಸಿರ ನೀತಿಯು ನಮ್ಮನೆಯ ರೀತಿಯು

ಮಹಾಮನೆಯ ಮಹಾಮಂತ್ರ ಸಾರಿರೋ ನೀವೆಲ್ಲ

ದಿವ್ಯಜಗದ ಭವ್ಯ ಮನುಜರಾಗಿ ನೀವು ಬಾಳಿರೊ – ಬಾರಯ್ಯ ಬಾರೊ

ಸಾರಾಂಶ : ಬಹುಜನ ಹಿತ ಬಹುಜನ ಸುಖ ಎಂಬುದು ನಮ್ಮ ಉಸಿರಾಗಬೇಕು . ನಮ್ಮ ನೀತಿಯಾಗಬೇಕು . ಬುದ್ಧನ ಸಂದೇಶಗಳಲ್ಲಿ ಈ ಶಕ್ತಿಯಿದೆ ಬಸವಣ್ಣನವರು ತತ್ವಗಳನ್ನು ಎಲ್ಲಾಕಡೆ ಸಾರಬೇಕು .

ಸಮಾಸದಲ್ಲಿ ಸಮಾನತೆ , ಜಾತಿ ರಹಿತ ಸಮಾಜದ ಕಲನ , ಮೇಲುಕೀಳಿಲ್ಲದ ಸಮಾಜ ನಿರ್ಮಾಣವೇ ಮಹಾ ಮನೆಯ ಮಂತ , ಶ್ರೇಷ್ಠ ಜಗತ್ತಿನ ಭವ್ಯ ಮನುಷ್ಯರಾಗಲು ಕರೆ ನೀಡಿದ್ದಾರೆ .

 

ಬಾರಯ್ಯ ಬಾರೊ ಜಾತಿಯ ಸೀಮೆಯಾಚೆ

ಬಾರಯ್ಯ ಬಾರೊ ಧರ್ಮದ ಗಡಿಯಾಚೆ

ಲಿಂಗಭೇದ ಬೇಕಿಲ್ಲ ಮೇಲುಕೀಳು ಇಲ್ಲಿಲ್ಲ

ಬುದ್ಧ ನಡೆಯಮ್ಮನಡೆ ಬುದ್ಧ ನುಡಿಯೆಮ್ಮನುಡಿ – ಬಾರಯ್ಯ ಬಾರೊ

ಸಾರಾಂಶ : ಕವಿ ಬುದ್ಧನನ್ನು ಬಾರಯ್ಯ ಬಾರಯ್ಯ ಬಾರೋ ಎಂದು ಪಾರ್ಥಿಸಿದ್ದಾರೆ . ಬುದ್ಧನ ಮತ್ತೆ ಬಂದರೆ ಜಾತಿಧರ್ಮ , ಲಿಂಗಬೇಧ , ಮೇಲುಕೀಳು ದೂರಾಗುತ್ತದೆ . ನಾವೆಲ್ಲರೂ ಈ ಭಾವನೆಗಳನ್ನು ತೊರೆದು ಬಾಳಬೇಕು .

ಇದರ ಗಡಿ ಮೀರಿ ನಿಂತ ಬುದ್ಧನ ತತ್ವಗಳು ನಮಗೆ ಮಾರ್ಗಗಳು . ಹೀಗೆ ಬಾಳಲು ಬುದ್ಧನ ನುಡಿ ನಮ್ಮ ನುಡಿಯಾಗಬೇಕು ಆಗ ಸಮಾಜ ಸಮಾನತೆಯಿಂದ ಇರುತ್ತದೆ ಎಂಬುದೇ ಕವಿಯ ಆಶಯವಾಗಿದೆ .

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

marali manege kannada question answer

1. ಬುದ್ಧನು ಲುಂಬಿನಿಯ ವನಕ್ಕೆ ಯಾವ ರೀತಿ ಬರಬೇಕು ?

ಉತ್ತರ : ಬುದ್ಧನು ಲುಂಬಿನಿಯ ವನಕ್ಕೆ ವೈಶಾಖ ಬಂದಂತೆ ಬರಬೇಕು .

2. ಮನೆಯ ಬಾಗಿಲು ಯಾರಿಗಾಗಿ ತೆರೆದಿಹುದು ?

ಉತ್ತರ : ಮನೆಯ ಬಾಗಿಲು ಬುದ್ಧನ ಆಗಮನಕ್ಕಾಗಿ ತೆರೆದಿಹುದು .

3. ಮಹಾಮನೆಯಲ್ಲಿ ಯಾವ ಮಂತ್ರವನ್ನು ಸಾರಬೇಕು ?

ಉತ್ತರ : ಮಹಾಮನೆಯಲ್ಲಿ “ ಬಹುಜನತೆಯ ಹಿತವು , ಬಹುಜನತೆಯ ಸುಖವು ” ಎಂಬ ಮಂತ್ರವನ್ನು ಸಾರಬೇಕು .

4. ನಮ್ಮ ನಡೆ ಯಾರ ನಡೆಯಂತೆ ಇರಬೇಕು ?

ಉತ್ತರ : ನಮ್ಮ ನಡೆ ಬುದ್ಧನ ನಡೆಯಂತೆ ಇರಬೇಕು .

 

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ .

marali manege poem in kannada notes

1. ಬುದ್ಧನೆಂದರೆ ಏನೇನು ಎಂದು ಕವಿಗಳು ಹೇಳುತ್ತಾರೆ ?

ಉತ್ತರ : ಬುದ್ದನೆಂದರೆ ನಿತ್ಯ ಬುದ್ಧನೆಂದರೆ ಸತ್ಯ ಬುದ್ಧನೆಂದರೆ ಶಾಂತಿ ದ್ಧನೆಂದರೆ ಕ್ರಾಂತಿ ಬುದ್ಧನೆಂದರೆ ಕರುಣೆ ಬುದ್ಧನೆಂದರೆ ಬೆಳಕು . ಬುದ್ಧ ನಮ್ಮ ತಂದೆ ಬುದ್ಧ ನಮ್ಮ ತಾಯಿ ಬುದ್ಧ ನಮ್ಮ ಬಂಧು ಬುದ್ಧ ನಮ್ಮ ಬಳಗ ಎಂದು ಕವಿ ಹೇಳಿದ್ದಾರೆ .

2. ಭವ್ಯ ಮನುಜರಾಗಿ ಬಾಳಲು ನಮ್ಮಲ್ಲಿ ಇರಬೇಕಾದ ಗುಣಗಳಾವುವು ?

ಉತ್ತರ : ‘ ಬಹುಜನರ ಹಿತವೇ ಬಹುಜನರ ಸುಖವು ‘ ಎಂದು ಬಾಳಬೇಕು . ಸ್ವಾರ್ಥವನ್ನು ತೊರೆದು ಬಾಳಬೇಕು . ‘ ನಮ್ಮುಸಿರ ನೀತಿಯೇ ನಮ್ಮನೆಯ ರೀತಿ’ಯಾಗಬೇಕು . ಈ ರೀತಿಗಳು ಮಹಾಮನೆಯ ಮಹಾಮಂತ್ರ ಎಂಬ ಗುಣಗಳು ನಮ್ಮಲ್ಲಿ ಇರಬೇಕು . ಆಗ ದಿವ್ಯ ಜಗದ ಭವ್ಯ ಮನುಜರಾಗಿ ಬಾಳಬಹುದು .

3. ಬುದ್ಧನು ಬೋಧಿಸಿದ ಪಂಚಶೀಲತತ್ತ್ವಗಳು ಯಾವುವು ?

ಉತ್ತರ : ದುಃಖದ ನಿರೋಧಕ್ಕಾಗಿ ಬುದ್ಧ ನಿರೂಪಿಸಿದ ಅಷ್ಟಾಂಗ ಮಾರ್ಗಗಳೇ ಪಂಚಶೀಲ ತತ್ವಗಳು ,

I. ಯಾವುದೇ ಜೀವಿಗಳನ್ನು ಕೊಲ್ಲದಿರುವುದು ಅಥವಾ ಹಿಂಸೆ ಮಾಡದಿರುವುದು .

2. ನಮ್ಮದಲ್ಲದ ವಸ್ತುವನ್ನು ಕದಿಯದಿರುವುದು ಅಥವಾ ತೆಗೆದುಕೊಳ್ಳದಿರುವುದು .

3 , ಶೀಲಹರಣ ಮಾಡದಿರುವುದು ಅಥವಾ ಅತ್ಯಾಚಾರ ಮಾಡದಿರುವುದು .

4. ಸುಳ್ಳನ್ನು ಹೇಳದಿರುವುದು ಅಥವಾ ಅಸತ್ಯವನ್ನು ನುಡಿಯದಿರುವುದು ,

5. ಮಾದಕ ಪಾನೀಯ ಅಥವಾ ಮಾದಕ ವಸ್ತುಗಳನ್ನು ಸೇವಿಸದಿರುವುದು .

4. ಬುದ್ಧನ ನಡೆ ಏನು ? ವಿವರಿಸಿ ,

ಉತ್ತರ : ಜಾತಿಯ ಸೀವೆ ಮನೋಭಾವನೆಯನ್ನು ತೊರೆದು ಬಾಳಿ ಬದುಕುವ ಕಡೆ ಬುದ್ಧನ ನಡೆಯಿದೆ , ನಮ್ಮ ನಡೆಯೂ ಸಹ ಬುದ್ಧನ ಕಡೆಗೆ ಇರಬೇಕು , ನಮ್ಮ ನುಡಿಯು ಬುದ್ಧನ ನುಡಿಯಾಗಬೇಕು . ಆಗ ಸಮಾಜದಲ್ಲಿ ಸಮಾನತೆಯು ಜನ್ಮ ತಾಳುತ್ತದೆ . ಎಂದು ಕವಿಯ ಆಶಯವಾಗಿದೆ .

ಇ ) ಕೊಟ್ಟಿರುವ ಪ್ರಶ್ನೆಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1. ” ಮರಳಿ ಮನೆಗೆ ‘ ಕವನದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ ,

ಉತ್ತರ : ‘ ಮರಳಿ ಮನೆಗೆ ‘ ಕವನವು ಇಂದಿನ ಪ್ರಕ್ಷುಬ್ಧ ಸ್ಥಿತಿಗೆ ಬುದ್ಧನ ಆಗಮನದ ಪ್ರಸ್ತುತತೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ . ” ಇಂದಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಬುದ್ಧನ ಬೆಳಕು ನಮಗೆ ಅವಶ್ಯಕ .

ಬುದ್ಧನು ಸತ್ಯ , ಶಾಂತಿ , ಕರುಣೆಯ ಬೆಳಕು , ನಾವು ದಿವ್ಯವಾದ ಜಗತ್ತಿನ ಭವ್ಯವಾದ ಮನುಜರಾಗಿ ಬದುಕ ಬೇಕಾದರೆ ಬುದ್ಧನ ಉಪದೇಶ ಅನುಸರಿಸುವುದು ಬಹುಮುಖ್ಯವಾಗಿದೆ .

ನಾವೆಲ್ಲರೂ ಜಾತಿಯ ಸೀಮೆಯಾಚೆಗೆ ಬಂದು , ಧರ್ಮದ ಗಡಿಯಾಚೆಗೆ ನಿಂದು ಲಿಂಗಬೇಧ ಮಾಡದೆ ಮೇಲುಕೀಳು ಮನೋಭಾವನೆಯನ್ನು ತೊರೆದು ಬಾಳಿ ಬದುಕಲು ನಮ್ಮ ನಡೆ ಬುದ್ಧನ ಕಡೆಗೆ ಇರಬೇಕು , ನಮ್ಮ ನುಡಿಯು ಬುದ್ಧನ ನುಡಿಯಾಗಬೇಕು .

ಅದಕ್ಕೆ ಬುದ್ಧನು ನಮ್ಮ ಮನೆಗೆ , ಮನಕ್ಕೆ ಮರಳಿ ಬರಬೇಕು ”

ಬುದ್ಧನೆಂದರೆ ನಿತ್ಯ , ಸತ್ಯ ಶಾಂತಿ ಕ್ರಾಂತಿ ಕರುಣೆ ಬೆಳಕು ಎಲ್ಲವೂ ಆಗಿದ್ದುದರಿಂದ ಲುಂಬಿನಿ ವನಕ್ಕೆ ವೈಶಾಖ ಬಂದಂತೆ ನೀನೇ ಹುಟ್ಟಿದ ನೀನೇ ಕಟ್ಟಿದ ಮನೆಗೆ ಮತ್ತೆ ಬಾರೋ ಈ ಮನೆಯ ಬಾಗಿಲು ತೆರೆದಿದೆ .

ನಿನ್ನ ಪಂಚಶೀಲ ಪಥದ ‘ ದೀಕ್ಷಾ ಭೂಮಿಗೆ ಬಾರಯ್ಯ ನೀನೇ ತಂದೆ ತಾಯಿ , ನೀನೆ ಬಂಧು- ಬಳಗ ಎಲ್ಲವೂ ನೀನೆ ಆಗಿರುವೆ , ಎಲ್ಲರ ಒಳಿತಿನಲ್ಲಿ ನಮ್ಮ ಒಳಿತು ,

ಬಹುಜನರ ಸುಖದಲ್ಲಿ ನಮ್ಮ ಸುಖವನ್ನು ಕಾಣಬೇಕು ಎಂದು ಸಾರಿದ ಅನುಭವ ಮಂಟಪದ ಮಾತುಗಳನ್ನು ಅನುಸರಿಸಿ ಭವ್ಯ ಜಾಗದ ಮನುಜರಾಗಿ ಬಾಳಬೇಕು , ಜಾತಿಮತ ಧರ್ಮಗಳ ಗಡಿಯಿಂದಾಚೆಗೆ ಲಿಂಗ ಭೇದವಿಲ್ಲದ ,

ಮೇಲು – ಕೀಳಿಲ್ಲದ ಸರ್ವಸಮಾನ ಭಾವವುಳ್ಳ ಬುದ್ಧನ ನಡೆ ನುಡಿಯನ್ನು ನಾವೆಲ್ಲರೂ ಅನುಸರಿಸಿದರೆ ಜಗವೇ ಸುಂದರವಾಗಿರುವುದು ಎಂಬುದು ಮರಳ ಮನೆಗೆ ಪದ್ಯದ ಸಾರಾಂಶವಾಗಿದೆ .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. ” ಬಾರಯ್ಯ ಬಾರೊ ಬೆಳಕಿನ ಆದಿಗ

ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿ ‘ ಅವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ’ಕವನ ಸಂಕಲನದಿಂದ ಆಯ್ದು ‘ ಮರಳಿ ಮನೆಗೆ ‘ ಎಂಬ ಪದ್ಯದಿಂದಭಾಗದಿಂದ ಆರಿಸಲಾಗಿದೆ .

ಸಂದರ್ಭ : ಈ ಸಮಾಜವು ಅಜ್ಞಾನದ ಕತ್ತಲು , ಜಾತಿ ಧರ್ಮ , ಮೇಲುಕೀಳು , ಆಶಾಂತಿಯ ಗೂಡಿನಲ್ಲಿ ನರಳುತ್ತಿದೆ . ಆದ್ದರಿಂದ ಬುದ್ಧ ನೀನು ಜ್ಞಾನದ ಬೆಳಕಿಗೆ ನಮ್ಮನ್ನು ಕರೆದುಕೊಂಡು ಹೋಗು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಇಂದಿನ ಸಮಾಜದ ಸಮಸ್ಯೆಗಳಿಗೆ ಸರ್ವಕಾಲಿಕ ಸತ್ಯ ತತ್ವಗಳಾದ ಬುದ್ಧನ ತತ್ವಗಳು ಮತ್ತೇ ಬೆಳಕಿಗೆ ಬರಬೇಕು ಎಂಬುದು ಸ್ವಾರಸ್ಯಕರವಾಗಿವೆ .

2. “ ಬುದ್ಧನೆಂದರೆ ಕರುಣೆ ಬುದ್ಧನೆಂದರೆ ಬೆಳಕು ”

ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿ ‘ ಅವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ’ಕವನ ಸಂಕಲನದಿಂದ ಆಯ್ದು ‘ ಮರಳಿ ಮನೆಗೆ ‘ ಎಂಬ ಪದ್ಯದಿಂದಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬುದ್ಧ ಬರಿ ಹೆಸರಲ್ಲಿ ಬುದ್ಧ ನೆಂದರೇ ನಿತ್ಯ , ಸತ್ಯ , ಶಾಂತಿ , ಕ್ರಾಂತಿ , ಕರುಣೆ ಹಾಗೂ ಬೆಳಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಬುದ್ಧನು ತನ್ನ ಕರುಣೆಯ ಗುಣಗಳಿಂದ ಈ ಸಮಾಜವನ್ನು ಪರಿವರ್ತನೆ ಮಾಡಿರುವುದು , ತನ್ನ ಜ್ಞಾನದ ಬಲದಿಂದ ಜನರನ್ನು ತಿದ್ದಿತೀಡಿ ಹೊಸಯುಗಕ್ಕೆ ಕಾರಣವಾಗಲು ಮತ್ತೇ ಬುದ್ಧ ಬರಬೇಕು ಎಂಬ ಕವಿಯ ಇಂಗಿತ ಸ್ವಾರಸ್ಯಕರವಾಗಿದೆ .

3 , “ ಬಯಲಿನಲಿ ಬಂಧನ ಮೆಚ್ಚಳಾ ತಾಯಿ ”

ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿ ಅವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರಕವನ ಸಂಕಲನದಿಂದ ಆಯ್ದು ‘ ಮರಳಿ ಮನೆಗೆ ‘ ಎಂಬ ಪದ್ಯದಿಂದಭಾಗದಿಂದ ಆರಿಸಲಾಗಿದೆ .

ಸಂದರ್ಭ : ನಮ್ಮೆಲ್ಲರ ತಂದೆ , ತಾಯಿ , ಬಂಧು ಬಳಗ ಎಲ್ಲವೂ ಬುದ್ಧ , ಬುದ್ಧನ ತತ್ವಗಳನ್ನು ನಾವು ಅನುಸರಿಬೇಕು . ಇಲ್ಲದಿದ್ದರೆ ನಮ್ಮ ತಂದೆ ಬುದ್ಧ ಮೆಚ್ಚುವುದಿಲ್ಲ .

ಬುದ್ಧನಂತೆ ನಾವು ಸಂಸಾರ , ಮನೆ , ಮಕ್ಕಳ ವ್ಯಾಮೋಹವನ್ನು ತೊರೆಯಬೇಕು ಇಲ್ಲದಿದ್ದರೆ ನಮ್ಮ ತಾಯಿ ಬುದ್ಧ ಮೆಚ್ಚುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .

ಸ್ವಾರಸ್ಯ : ಬುದ್ಧನು ತಂದೆಯಾಗಿ , ತಾಯಿಯಾಗಿ , ಬಂಧು ಬಳಗವಾಗಿ ಸಮಾಜದ ಅಸಮಾನತೆಯನ್ನು ಹೊಗಲಾಡಿಸಿ ಸಮಾನತೆಯನ್ನು ತರಲು ದೀಕ್ಷೆ ತೊಟ್ಟಿರುವುದು ಸ್ವಾರಸ್ಯಕರವಾಗಿದೆ

4. ” ದಿವ್ಯ ಜಗದ ಭವ್ಯ ಮನುಜರಾಗಿ ನೀವು ಬಾಳಿರೊ “

ಆಯ್ಕೆ : ಈ ವಾಕ್ಯವನ್ನು ಅರವಿಂದ ಮಾಲಗತ್ತಿ ‘ ಅವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ ಕವನ ಸಂಕಲನದಿಂದ ಆಯ್ದು ‘ ಮರಳಿ ಮನೆಗೆ ‘ ಎಂಬ ಪದ್ಯದಿಂದಭಾಗದಿಂದ ಆರಿಸಲಾಗಿದೆ .

ಸಂದರ್ಭ : ಬಹುಜನರ ಹಿತವೇ ಬಹುಜನರ ಸುಖವು ‘ ಎಂದು ಬಾಳಬೇಕು . ಸ್ವಾರ್ಥವನ್ನು ತೊರೆದು ಬಾಳಬೇಕು . ‘ ನಮ್ಮುಸಿರ ನೀತಿಯು ನಮ್ಮನೆಯ ರೀತಿಯಾಗಬೇಕು . ಈ ರೀತಿಗಳು ಮಹಾಮನೆಯ ಮಹಾಮಂತ್ರ ಎಂಬ ಗುಣಗಳು ನಮ್ಮಲ್ಲಿ ಇರಬೇಕು .

ಆಗ ದಿವ್ಯ ಜಗದ ಭವ್ಯ ಮನುಜರಾಗಿ ಬಾಳಬಹುದು ಎಂದು ಕವಿ ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ .

ಸ್ವಾರಸ್ಯ : ಬಸವಣ್ಣನವರ ಮಂತ್ರವು ನಮ್ಮ ಜೀವನದ ಉಸಿರಾಗಬೇಕು . ಎಲ್ಲೆಡೆ ಅದನ್ನು ಸಾರಬೇಕು . ಆಗ ಈ ಜಗತ್ತು ದಿವ್ಯವಾಗುತ್ತದೆ . ನಾವು ಭವ್ಯರಾಗುತ್ತೇವೆ ಎಂಬ ಅಂಶ ಸ್ವಾರಸ್ಯಕರವಾಗಿದೆ .

5. “ ಬುದ್ಧ ನಡೆಯೆಮ್ಮನಡೆ ಬುದ್ಧ ನುಡಿಯೆಮ್ಮನುಡಿ “

ಆಯ್ಕೆ : ಈ ವಾಕ್ಯವನ್ನು ‘ ಅರವಿಂದ ಮಾಲಗತ್ತಿ ‘ ಅವರು ಬರೆದಿರುವ ‘ ವಿಶ್ವತೋಮುಖ – ಹೂ ಬಲುಭಾರ’ಕವನ ಸಂಕಲನದಿಂದ ಆಯ್ದು ‘ ಮರಳಿ ಮನೆಗೆ ‘ ಎಂಬ ಪದ್ಯದಿಂದಭಾಗದಿಂದ ಆರಿಸಲಾಗಿದೆ .

ಸಂದರ್ಭ : ಜಾತಿ – ಮತ ಸೀಮೆಯಿಂದಾಚೆ , ಧರ್ಮದ ಗಡಿಯಾಚೆ , ಲಿಂಗ ಭೇಧವಿಲ್ಲದ ಮೇಲು – ಕೀಳಿಲ್ಲದ ಬುದ್ಧನಡೆಗೆ ನಮ್ಮ ನಡೆಯಾಗಬೇಕು , ಬುದ್ಧನ ನುಡಿ ನಮ್ಮ ನುಡಿಯಾಗಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳುತ್ತಾರೆ .

ಸ್ವಾರಸ್ಯ : ಬುದ್ಧನ ನಡೆ , ನುಡಿ ನಮ್ಮದಾದರೇ , ಉಪದೇಶದಂತೆ ಬಾಳಿದರೆ ಸಮಾಸಕ್ಕೆ ಒಳ್ಳೆಯದಾಗುತ್ತದೆ . ಎಂಬುದು ಸ್ವಾರಸ್ಯಕರವಾಗಿದೆ .

ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .

1. ನಿತ್ಯ : ಅನಿತ್ಯ : : ಸತ್ಯ ;……….

2. ನಮ್ಮುಸಿರು : ಲೋಪ ಸಂಧಿ : ಸೀಮೆಯಾಚೆ :……………

3. ರಥ : ತೇರು : : ಪಥ :…………

4. ಸುಖವು : ಪ್ರಥಮ ವಿಭಕ್ತಿ : : ಮನೆಗೆ :…………..

5. ನಿತ್ಯ : ನಿಚ್ಚ : : ವೈಶಾಖ :…………

ಸರಿ ಉತ್ತರಗಳು .

1. ಅಸತ್ಯ , ಮಿಥ್ಯ

2 , ಆಗಮಸಂಧಿ ( ಯಕಾರಾಗಮಸಂಧಿ )

3. ದಾರಿ

4. ಚತುರ್ಥಿ ವಿಭಕ್ತಿ

5. ಬೇಸಿಗೆ

ಅ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಮತ್ತು ಕಂಠಪಾಠ ಮಾಡಿರಿ .

1. ಬುದ್ಧನೆಂದರೆ……………………..

…………………………………

……………………………………ರಥದಿ – ಬಾರಯ್ಯೋ ಬಾರೊ

2 , ಬಾರಯ್ಯ…………………

………………………………..

………………………………………. ನುಡಿ ಬಾರಯ್ಯ ಬಾರೊ

 

ಬುದ್ಧನೆಂದರೆ ನಿತ್ಯ ದ್ಧನೆಂದರೆ ಸತ್ಯ

ದ್ಧನೆಂದರೆ ಶಾಂತಿ ಬುದ್ಧನೆಂದರೆ ಕ್ರಾಂತಿ

ಬುದ್ಧನೆಂದರೆ ಕರುಣೆ ಬುದ್ದನೆಂದರೆ ಬೆಳಕು

ಲುಂಬಿನಿಯ ಬನಕೆ ವೈಶಾಖ ಬಂದಂತೆ – ಬಾರಯ್ಯ ಬಾರೊ

 

ನೀ ಹುಟ್ಟಿದೇ ಮನೆಯು ನೀ ಕಟ್ಟಿದೀ ಮನೆಯು

ಮರೆತೋದೆ ಹೇಗೆ ನೆನಪಾಯ್ತು ಈಗ

ನಿನಗಾಗಿ ತೆರೆಬಹುದು ಈ ಮನೆಯ ಬಾಗಿಲು

ಪಂಚಶೀಲ ಪಥದಿ ದೀಕ್ಷಾಭೂಮಿ ರಥದಿ – ಬಾರಯ್ಯ ಬಾರೊ 

 

ಬಾರಯ್ಯ ಬಾರೊ  ಜಾತಿಯ ಸೀಮೆಯಾಚೆ

ಬಾರಯ್ಯ ಬಾರೊ ಧರ್ಮದ ಗಡಿಯಾಚೆ

ಲಿಂಗಭೇದ ಬೇಕಿಲ್ಲ ಮೇಲುಕೀಳು ಇಲ್ಲಿಲ್ಲ 

ಬುದ್ಧ ನಡೆಯೆಮ್ಮನಡೆ ಬುದ್ಧ ನುಡಿಯೆಮ್ಮನುಡಿ – ಬಾರಯ್ಯ ಬಾರೊ

Siri Kannada Class 9 Guide Pdf

9th Marali Manege Kannada Notes | 9ನೇ ತರಗತಿ ಕನ್ನಡ ನೋಟ್ಸ್, Kannada Deevige 9th standard Marali Manege kannada notes pdf

Download all 9th Standard Kannada notes Click Here

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published. Required fields are marked *