9th Niyatiyanar Meeridapar Kannada Poem Notes 9 ನೇ ತರಗತಿ ಪದ್ಯ ನಿಯತಿಯನಾರ್ ಮೀಟಿದಪರ್

Contents

9th class Niyatiyanar Meeridapar Kannada Poem Notes 9 ನೇ ತರಗತಿ ಪದ್ಯ ನಿಯತಿಯನಾರ್ ಮೀಟಿದಪರ್

9ನೇ ತರಗತಿ ಪದ್ಯ ನಿಯತಿಯನಾರ್ ಮೀಟಿದಪರ್ ಪ್ರಶ್ನೆ ಮತ್ತು ಉತ್ತರಗಳು ನೋಟ್ಸ್, 9th Niyatiyanar Meeridapar Kannada Poem Notes padya bhaga question answer poems summary

ಪದ್ಯ ಭಾಗ – 4

ನಿಯತಿಯನಾರ್ ಮೀಟಿದಪರ್

  • ಜನ್ನ 

ಕೃತಿಕಾರರ ಪರಿಚಯ

ಜನ್ನ ಹಾಸನ ಜಿಲ್ಲೆಯ ಹಳೇಬೀಡು ಪ್ರಾಂತ್ಯದಲ್ಲಿ ಕ್ರಿ.ಶ 1225 ಜನಿಸಿದ್ದಾರೆ . ಹೊಯ್ಸಳರ ಬಲ್ಲಾಳನಿಂದ ಕವಿಚಕ್ರವರ್ತಿ ಅಭಿದಾನವನ್ನು ಪಡೆದ ಈತ ಯಶೋಧರ ಚರಿತೆ ,

ಅನಂತನಾಥಪುರಾಣ ಮತ್ತು ಅನುಭವ ಮುಕುರ ಕಾವ್ಯಗಳ ಕರ್ತೃ , ಜೈನಧಾರ್ಮಿಕ ಕಾವ್ಯಗಳನ್ನು ರಚಿಸಿದ ಜನ್ನ ಅಹಿಂಸಾ ತತ್ವವನ್ನು ಕಾವ್ಯಗಳಲ್ಲಿ ಸಂದೇಶರೂಪದಲ್ಲಿ ನೀಡಿದ ಕವಿ .

ಪ್ರಸ್ತುತ ‘ ನಿಯತಿಯನಾರ್ ಮೀಟಿದಪರ್ ‘ ನಿಗದಿತ ಪದ್ಯ ಭಾಗವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದಿರುವ ತೆಕ್ಕುಂಜೆ ಗೋಪಾಲಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನ ಕವಿ ವಿರಚಿತ ‘ ಯಶೋಧರ ಚರಿತೆ ‘ ಕಾವ್ಯದಿಂದ ಆಯ್ದುಕೊಳ್ಳಲಾಗದೆ .

ಆಶಯ ಭಾವ

ಆಹಿಂಸೆ – ಹಿಂಸೆಯ ಮೇಲೆ , ಧರ್ಮ – ಅಧರ್ಮದ ಮೇಲೆ , ನ್ಯಾಯ – ಅನ್ಯಾಯದ ಮೇಲೆ , ನೀತಿ- ಅನೀತಿಯ ಮೇಲೆ ಜಯವನ್ನು ಸಾಧಿಸಬೇಕೆಂಬುದು ಲೋಕದ ಆಶಯ .

ಈ ಆಶಯಕ್ಕನುಸಾರ ಕಾಮ , ಕ್ರೋಧ , ಲೋಭ , ಮೋಹ , ಮದ , ಮಾತ್ಸಲ್ಯಗಳ ಬಗೆಗೆ ಸದಾ ಎಚ್ಚರದಿಂದ ಇರಬೇಕು . ಸ್ವಲ್ಪ ಮೈ ಮರೆತರೂ ಅಮೃತಮತಿಯಂತೆ ನಾಯಕ ನರಕವನ್ನು ಅನುಭವಿಸಬೇಕಾದೀತು .

ಇಲ್ಲದಿದ್ದರೆ …. “ ಮನಸಿಜನ ಮಾಯೆ ವಿಧಿವಿಲಸನದ ನೆರಂಬಡೆಯೆ ಕೊಂದು ಕೂಗದೆ ನರರಂ ” ( ಮನ್ಮಥನ ಮಾಯೆ ವಿಧಿವಿಲಾಸದ ನೆರವನ್ನು ಪಡೆಯಲಾಗಿ ಅದು ಮನುಷ್ಯರನ್ನು ಕೊಂದು ಕೂಗುವುದಿಲ್ಲವೇ ? ) ಎಂದು ನಿಟ್ಟುಸಿರು ಬಿಡುವಂತಾಗುವುದು . ತಾಳ್ಮೆ ಮತ್ತು ಆಹಿಂಸೆಯನ್ನು ತಿಳಿಸುವುದೇ ಪ್ರಸ್ತುತ ಪದ್ಯಪಾಠದ ಆಶಯವಾಗಿದೆ .

ಪದಗಳ ಅರ್ಥ

ಅಡಗು – ಮಾಂಸ

ಆಭೀತೆಯಾಗು – ಹೆದರದಿರು

ಅಲರ್ವೋದ – ಹೂ ಬಿಟ್ಟ

ಉಯ್ – ಒಯ್ಯು , ಕರೆದುಕೊಂಡು ಹೋಗು .

ಚರಿಗೆ – ಭಿಕ್ಷಾಟನೆ

ತಳಾದ – ಕಾವಲುಗಾರ

ನಿಯತಿ – ವಿಧಿ ನಿಯಮ

ಬಳರಿ  – ಮಾರಿಯ ಹೆಸರು

ಅಡಿಮಂಚಕೆಯೊಳ್‌ – ಕಳಮಂಚ

ಅಟಿಕೆ – ತಿಳಿವಳಿಕೆ

ಅವಧಾರಿಪುದು – ಗಮನಕೊಡುವುದು

ಕುಸುರಿದಣಿದ – ಚಿಕ್ಕ ತುಂಡಾಗಿ ಕತ್ತರಿಸಿದ

ತರಕ್ಷು – ಹುಲಿ

ದೊರೆವೆತ್ತು – ಪ್ರಾಪ್ತವಾಗಿ ಒದಗಿ

ಪೂರ್ವ ಕಥೆ ಮತ್ತು ಪದ್ಯದ ಸಾರಾಂಶ

ರಾಜಪುರ ಎಂಬ ಪಟ್ಟಣದಲ್ಲಿ ಮಾರಿದತ್ತ ಎಂಬ ದೊರೆ ಇದ್ದನು . ಇದೇ ಮರದಲ್ಲಿ ಚಂಡಮಾರಿ ದೇವಾಲಯವಿತ್ತು . ಆಶ್ವಯುಜ ಹಾಗೂ ಚೈತ್ರಋತುಗಳಲ್ಲಿ ದೊರೆ ಮತ್ತು ಪ್ರಜೆಗಳು ಜಾತ್ರೆ ನಡೆಸಿ , ದೇವಿಯನ್ನು ಆರಾಧಿಸುತ್ತಿದ್ದರು .

ಒಮ್ಮೆ ಚೈತ್ರಮಾಸದಲ್ಲಿ ಜಾತ್ರೆ ನಡೆಯಬೇಕಿತ್ತು . ಮಾರಿಗೆ ಬಲಿ ಕೊಡುವುದಕ್ಕಾಗಿ ಮಾನವರನ್ನು ಹಿಡಿದುತರುವಂತೆ ಮಾರಿದತ್ತನು ತಳಾರ ಚಂಡಕರ್ಮನಿಗೆ ಆಜ್ಞಾಪಿಸಿದನು .

ಅವನು ಸುದತ್ತಾಚಾರ್ಯ ಮುನಿಗಳೊಡನೆ ಆ ಪುರಕ್ಕೆ ಬಂದು ಭಿಕ್ಷೆಗೆ ಹೊರಟಿದ್ದ ಎಳೆವಯಸ್ಸಿನ ಸಹೋದರ ಸಹೋದರಿಯರಾದ ಅಭಯಮತಿ ಮತ್ತು ಅಭಯಮತಿಯರನ್ನು ಹಿಡಿದುತಂದನು .

ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ . ಅವರ ಧೈರ್ಯ , ಧೈರ್ಯಗಳನ್ನು ಕಂಡು ಬೆಕ್ಕಸಬೆರಗಾದ ಮಾರಿದತ್ತನು ಅವರನ್ನು ಬಲಿಕೊಡದೆ ಅವರ ವೃತ್ತಾಂತವನ್ನು ತಿಳಿಯಬಯಸಿದನು .

ಅಭಯರುಚಿಯು ತಮ್ಮ ಪೂರ್ವ ಕಥೆಯನ್ನು ನಿರೂಪಿಸಿದನು .

ಉಜ್ಜಯನಿಯ ರಾಜಕುಮಾರ ಯಶೋಧರ , ತಂದೆ ಯಶೌಫ , ತಾಯಿ ಚಂದ್ರಮತಿ , ಪತ್ನಿ ಅಮೃತಮತಿ , ಯಶೋಧರ ಅಮೃತಮತಿಯರು ಅನ್ಯೂನ್ಯವಾಗಿದ್ದು ಸುಖದಿಂದಿದ್ದರು .

ಅತ್ಯಂತ ಚೆಲುವು , ಸುಂದರ ಸಕಲ ವಿದ್ಯಾಪಾರಂಗತ ಹಾಗೂ ಸುಸಂಸ್ಕೃತನಾದ ಯಶೋಧರನ ಪತ್ನಿ ಅಮೃತಮತಿಯು ಕುರುಪಿಯಾದ ಅಷ್ಟಾವಂಕ ಮಾವಟಿಗನ ಗಾನಮಾಧುರ್ಯಕ್ಕೆ ಮನಸೋತು ಪತಿಗೆ ದ್ರೋಹ ಬಗೆದಳು .

ಪತ್ನಿಯ ಹೇಯಕೃತ್ಯವನ್ನು ಕಣ್ಣಾರೆಕಂಡ ಯಶೋಧರನು ಅತ್ಯಂತ ಖಿನ್ನನಾಗುವನು . ತಾಯಿ ಚಂದ್ರಮತಿದೇವಿಯು ಪರಿಪರಿಯಾಗಿ ಬೇಡಿಕೊಂಡಾಗ ಮನಸ್ಸಿನ ಖಿನ್ನತೆಗೆ ಕಾರಣವನ್ನು ಹೇಳಲಾಗದೆ ಕಳದೆ ರಾತ್ರಿ ದುಸ್ವಪ್ನವೊಂದು ಕಂಡದ್ದಾಗಿ ಹೇಳುವನು .

ಸ್ವಪ್ನದೋಸ ನಿವಾರಣೆಗಾಗಿ ಪ್ರಾಣಿಬಲಿ ಕೊಡಲು ಒಪ್ಪದೇ ತಾಯಿಯ ಸಮಾಧಾನಕ್ಕಾಗಿ ಹಿಟ್ಟಿನಿಂದ ಮಾಡಿದ ಕೋಳಿಯೊಂದನ್ನು ಬಲಿಕೊಡಲು ಒಪ್ಪುವನು .

ಹಿಟ್ಟಿನಕೋಳಿಯನ್ನು ಬಲಿಕೊಟ್ಟಾಗ ಅದರೊಳಗೆ ಅಡಗಿದ್ದ ಬೆಂತರವೊಂದು ಕೂಗಿ ಅಸುನೀಗಿತು . ಇದರಿಂದ ಮತ್ತೂ ಖಿನ್ನನಾದ ಯಶೋಧರನು , ಮಗನಾದ ಯಶೋಮತಿಗೆ ಪಟ್ಟಕಟ್ಟಿ ಕಾಡಿಗೆ ತಪಕ್ಕೆ ಹೊರಡಲು ಅನುವಾಗುವನು .

ವಿಷಯ ತಿಳಿದ ಅಮೃತಮತಿಯು , ಗಂಡ ಹಾಗೂ ಅತ್ತೆಯನ್ನು ವಿಷವಿಕ್ಕಿ ಕೊಲ್ಲುವಳು , ಸತ್ತ ಯಶೋಧರ – ಚಂದ್ರಮತಿಯರು ಮುಂದಿನ ಜನ್ಮಗಳಲ್ಲಿ ನಾನಾ ಜನ್ಮಗಳಲ್ಲಿ ಜನಿಸಿದರು .

ಒಮ್ಮೆ ಆಕಂಪನಮುನಿಯ ಉಪದೇಶವನ್ನು ಕೇಳಿದ ಕೋಳಿಗಳು ಜ್ಞಾತಿಸ್ತರಗಳಾಗಿ ವ್ರತವನ್ನು ಆಚರಿಸಿ , ಹರ್ಷದಿಂದ ಕಲೆತಾಗ , ವನವಿಹಾರಕ್ಕೆ ಹೋಗಿದ್ದ ಯಶೋಮತಿಯ ಬಾಣಕ್ಕೆ ತುತ್ತಾಗುವುವು .

ಬಳಿಕ ಯಶೋಮತಿಯ ಪತ್ನಿ ಕುಸುಮಾವಳಿಯ ಮಕ್ಕಳಾಗಿ ಹುಟ್ಟುವುವು , ಆ ಅವಳಿ ಮಕ್ಕಳೇ ಅಭಯರುಚಿ ಮತ್ತು ಅಭಯಮತಿ , ಅವರು ಮುಂದೆ ಸುದತ್ತಾಚಾರರಲ್ಲಿ ಶಿಷ್ಯವೃತ್ತಿಯನ್ನು ಸ್ವೀಕರಿಸಿದರು .

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ .

1 . ಮುತ್ತುಗದ ಹೂವುಗಳು ಎಲ್ಲಿ ಉದುರಿ ಬಿದ್ದಿದ್ದವು ?

ಉತ್ತರ : ಮುತ್ತುಗದ ಹೂವುಗಳು ಮಾವಿನ ಮರದ ಕೆಳಗೆ ಮಾಂಸದ ತುಂಡುಗಳಂತೆ ಬಿದ್ದಿದವು .

2. ವನದಲ್ಲಿ ಅರಗಿಳಿಗಳು ಏನೆಂದು ಉಲಿಯುತ್ತಿದ್ದವು ?

ಉತ್ತರ : ವನದಲ್ಲಿ ಅರಗಿಳಿಗಳು ಮಲಯಪರ್ವತದ ಗಾಳಿಗೆ ತಾವರೆ ಹೂವುಗಳು ಸೂರ್ಯನಿಗೆ ನಮಸ್ಕಾರ ಮಾಡಿದಂತೆ ಕಾಣಿಸುತ್ತಿದೆ . ಎಂದು ಉಲಿಯುತ್ತಿದ್ದವು .

3 . ಯಾವ ದೇವತೆಯ ಹೆಸರಿನಲ್ಲಿ ಜಾತ್ರೆಯು ನಡೆಯುತ್ತಿತ್ತು ? ಕನ್ನಡ

ಉತ್ತರ : ಚಂಡಮಾರಿ ಎಂಬ ದೇವತೆಯ ಹೆಸರಿನಲ್ಲಿ ಜಾತ್ರೆಯು ನಡೆಯುತ್ತಿ

4. ಮಾರಿದತ್ತನ ಬಳಿಯಿದ್ದ ತಳಾರನ ಹೆಸರೇನು ?

ಉತ್ತರ : ಮಾರಿದತ್ತನ ಬಳಿಯಲ್ಲಿ ಚಂಡಕರ್ಮ ಎಂಬ ತಳಾರನಿದ್ದನು

5. ಚಂಡಕರ್ಮನು ಯಾರನ್ನು ಹಿಡಿದು ತಂದನು ?

ಉತ್ತರ : ಚಂಡಕರ್ಮನು ಅಭಯರುಚಿ ಮತ್ತು ಅಭಯಮತಿ ಎಂಬ ಎಳೆವಯಸ್ಸಿನ ಸಹೋದರ ಸಹೋದರಿಯರನ್ನು ಹಿಡಿದು ತಂದನು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಮಾವಿನ ಮರದಡಿಯಲ್ಲಿ ಉದುರಿದ್ದ ಮುತ್ತುಗದ ಹೂವುಗಳು ಹೇಗೆ ಕಾಣುತ್ತಿದ್ದವು ?

ಉತ್ತರ : ಶಿಶಿರ ಋತುವು ಕಳೆದು ವಸಂತಕ್ಕೆ ಕಾಲಿರಿಸಿದಾಗ ಮಾವಿನ ಮರವೆಲ್ಲವೂ ಹೂವಿನಿಂದ ಕೂಡಿತ್ತು ಮಾವಿನ ತೊಪಿನಲ್ಲಿ ತುಂಡು ತುಂಡಾಗಿ ಕತ್ತರಿಸಿದ ಮುತ್ತುಗದ ಹೂಗಳು ಗಾಳಿಗೆ ಹಾರಿ ಮಾವಿನ ಮರದ ಕೆಳಗೆ ಮಾಂಸದ ತುಂಡುಗಳಂತೆ ಕಾಣಿಸುತ್ತಿದ್ದವು .

2. ಮಾರಿದತ್ತ ಹಾಗೂ ಜನರು ಏಕೆ ಒಂದೆಡೆ ಸೇರಿದ್ದರು ?

ಉತ್ತರ : ರಾಜಪುರವೆಂಬ ಪಟ್ಟಣ ಅದರ ದೊರೆ ಮಾರಿದತ್ತ , ಆ ಪುರದಲ್ಲಿ ಚಂಡಮಾರಿಯ ದೇವಾಲಯವಿತ್ತು . ಆಶ್ವಯುಜ ಮಾಸದಲ್ಲಿ ಮಾರಿದತ್ತ ಹಾಗೂ ಪುರದ ಜನರು ಆ ಊರಿನ ದೇವತೆಯಾದ ಚಂಡ ಮಾರಿಯನ್ನು ಆರಾಧಿಸಿ ಜಾತ್ರೆ ನಡೆಸಲು ಒಂದೆಡೆ ಸೇರಿದ್ದರು .

3. ಚಂಡಕರ್ಮನು ಎಂತಹ ಬಲಿಯನ್ನು ಹುಡುಕಿ ಹೊರಟನು ?

ಉತ್ತರ : ಮಾರಿದತ್ತನು ತನ್ನ ತಳಾರನಾದ ಚಂಡಕರ್ಮನಿಗೆ ಮಾರಿಗೆ ಬಲಿಕೊಡುವುದಕ್ಕಾಗಿ ಮಾನವರನ್ನು ಹಿಡಿದು ತರುವಂತೆ ಆಜ್ಞಾಪಿಸಿದನು .

ಮಾರಿಯ ಬನದಿಂದ ಹೊರಟ ಚಂಡಕರ್ಮನು ಕಿರಿಯರಾದ ಸತ್ಕುಲ , ತಿಳುವಳಿಕೆಯುಳ್ಳ ಶುಭ ಲಕ್ಷಣದ ಮರ್ತ್ಯ ಜೋಡಿಯನ್ನು ಅರಸುತ್ತಾ ಹೊರಟನು .

4. ಅಭಯರುಚಿಯು ಅಭಯಮತಿಗೆ ಏನೆಂದು ಧೈರ್ಯವನ್ನು ಹೇಳಿದನು ?

ಉತ್ತರ : ಅಭಯರುಚಿ ಮತ್ತು ಅಭಯಮತಿಯರು ತಮ್ಮ ಗುರುಗಳ ಚರಣಕ್ಕೆ ನಮಸ್ಕರಿಸಿ ಮುನಿಗಳ ಸಮೇತ ಗುರುಗಳ ಉಪವಾಸವನ್ನು ಕಳೆಯುವ ಉದ್ದೇಶದಿಂದ ಭಿಕ್ಷಾಟನೆಗೆ ಆ ಸುರಕ್ಕೆ ಬಂದರು .

ಬಾಲಕರನ್ನು ಕಂಡ ತಳಾರ ಚಂಡಕರ್ಮನು ವನದಲ್ಲಿ ಜಿಂಕೆಯನ್ನು ಹುಲಿ ಹಿಡಿಯುವಂತೆ ಹಿಡಿದನು ಚಂಡಕರ್ಮನ ಕಂಡು ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ .

ಅಭಯರುಚಿ ಮತ್ತು ಅಭಯಮತಿಯರನ್ನು ಚಂಡಕರ್ಮನೆಂಬ ಪಾಪಕರ್ಮನು ಎಳೆದುಕೊಂಡು ಹೋಗುತ್ತಿರಲು ಅಭಯರುಚಿ ತಂಗಿಗೆ ಮರಣ ಕ್ಕಾಗಿ ಹೆದರಬೇಡ ಅಭಿಯತೆಯಾಗು ಎಂದು ಹೇಳಿದನು .

 2 ) ಕೊಟ್ಟಿರುವ ಪ್ರಶ್ನೆಗೆ ಸುಮಾರು ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ

1. ನಿಯತಿಯನಾರ ‘ ಮೀಡಿದವರ್ ಸಾರಾಂಶವನ್ನು ನಮ್ಮ ಮಾತುಗಳಲ್ಲಿ ಬರೆಯಿರಿ .

ಉತ್ತರ : ರಾಜಪುರವೆಂಬ ಪಟ್ಟಣದಲ್ಲಿ ಮಾರಿದತ್ತ ಎಂಬ ದೊರೆ ಇದ್ದನು . ಆ ಪುರದಲ್ಲಿ ಚಂಡ ಮಾರಿಯ ದೇವಾಲಯವಿತ್ತು . ಪ್ರತೀವರ್ಷ ಚೈತ್ರ ಮಾಸದಲ್ಲಿ ದೊರೆ ಮತ್ತು ಪ್ರಜೆಗಳು ಸೇರಿ ಚಂಡಮಾರಿ ದೇವಿಯನ್ನು ಆರಾಧಿಸಿ ಜಾತ್ರೆ ನಡೆಸುತ್ತಿದ್ದರು .

ಪ್ರತಿವರ್ಷದಂತೆ ಚಂಡಮಾರಿಗೆ ಬಲಿಕೊಡಲು ಮಾನವರನ್ನು ಹಿಡಿದು ತರುವಂತೆ ಮಾರಿದತ್ತನು ತಳಾರ ಚಂಡಕರ್ಮನಿಗೆ ಆಜ್ಞಾಪಿಸಿದನು . ಆದರಂತೆ ಚಂಡಕರ್ಮನು ಎಳೆಯರನ್ನು ಸುಲದವರನ್ನು ಹುಡುಕುತ್ತಾ ಹೊರಟನು ,

ಅದೇ ಸಮಯದಲ್ಲಿ ಸುದತ್ತಾಚಾರ್ಯ ಮುನಿಗಳೊಡನೆ ರಾಜಮಲಕ್ಕೆ ಬಂದು ಬಿಕ್ಷೆಗೆ ಹೊರಟಿದ್ದ ಎಳೆವಯಸ್ಸಿನ ಸಹೋದರ , ಸಹೋದರಿಯರಾದ  ಅಭಯರುಚಿ ಮತ್ತು ಅಭಯಮತಿಯರನ್ನು ಹುಲಿಯು ಜಿಂಕೆಯನ್ನು ಹಿಡಿಯುವಂತೆ ಚಂಡಕರ್ಮನು ಹಿಡಿದು ತಂದನು .

ಆ  ಸಮಯದಲ್ಲಿ ಆಭಯರುಚಿಯು ತನ್ನ ತಂಗಿಗೆ ಅಭಯಮತಿಗೆ ಹೆದರಬೇಡ ಅಭೀತೆಯಾಗಿದ್ದು ಎಂದು ಹೇಳಿದನು . ತಂಗಿಯು ವಿಧಿಯ ನಿಯಮವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ ಎಂದು ಧೈರ್ಯ ಹೇಳಿದಳು , ವಿನಯದಿಂದ ಎಲ್ಲವನ್ನು ಜಯಿಸಿ ಬಹುದಂದು ಹೇಳಿದಳು

ಚಂಡಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ . ಮಾರಿದತ್ತನು . ಅಭಿಯರುಚಿ ಹಾಗೂ ಅಭಿಯಮತಿಯರ ಜನ್ಮ ವೃತ್ತಾಂತವನ್ನು ಕೇಳಿದನು . ತಾಳ್ಮೆ ಮತ್ತು ಆಹಿಂಸೆಯಿಂದ ಎಲ್ಲವನ್ನು ಗೆಲ್ಲಬಹುದೆಂದು ಈ ಪದ್ಯದಿಂದ ತಿಳಿಯುತ್ತದೆ .

 ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ

1. ” ಪೂಜಯೊರಿದಿನ ಸರಿ ತನ್ನ ದೇಬ ತಪ್ಪದೆ ಮಾಳ್ ” 

ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದಿರುವ ತೆಕ್ಕುಂಜೆ ಗೋಪಾಲಕೃಷ್ಣಭಟ್ಟ ಅವರ ಸಂಪಾದನಾ ಗಂಥ ಜನ್ನ ಕವಿ ವಿರಚಿತ ‘ ಯಶೋಧರ ಚರಿತೆ ‘ ಕಾವ್ಯದಿಂದ ಆಯ್ದು ‘ ನಿಯತಿಯನಾರ್ ಮೀಡಪರ್ ‘ ಪದ್ಯಭಾಗದಿಂದ ಆರಿಸಲಾಗಿದೆ

ಸಂದರ್ಭ : ರಾಜಪುರವೆಂಬ ಪಟ್ಟಣದಲ್ಲಿ ಮಾರಿದತ್ತ ಎಂಬ ದೊರೆ ಇದ್ದನು . ಆ ಪುರದಲ್ಲಿ ಚಂಡ ಮಾರಿಯ ದೇವಾಲಯವಿತ್ತು ಪ್ರತಿವರ್ಷ ಚೈತ್ರಮಾಸದಲ್ಲಿ ದೊರೆ ಮತ್ತು ಪ್ರಜೆಗಳು ಸೇರಿ ದೇವಿಯನ್ನು ಆರಾಧಿಸಿ ಜಾತ್ರೆ ನಡೆಸುತ್ತಿದ್ದರು .

ಮಾನವರನ್ನು ಬಲಿಕೊಡುವುದನ್ನು ತಪ್ಪಿಸುವುದಿಲ್ಲವೆಂದು ಹೇಳಿದ ಸಂದರ್ಭದಲ್ಲಿ ದೇವಿಯ ಮುಂದೆ ಮಾರಿದತ್ತನು ಈ ಮಾತನ್ನು ಹೇಳಿದನು .

ಸ್ವಾರಸ್ಯ  ಚಂಡಮಾರಿಗೆ ಪ್ರತಿವರ್ಷ ಮಾನವರನ್ನು ಬಲಿಕೊಟ್ಟು ಜಾತ್ರೆ ಮಾಡುವುದು ತಪ್ಪುವುದಿಲ್ಲ ಎಂಬ ಮಾರಿದತ್ತನ ಮಾತನ್ನು ಕವಿ ಸ್ವಾರಸ್ಯ ಪೂರ್ಣವಾಗಿ ವರ್ಣಿಸಿದ್ದಾರೆ .

2 “ ತರಕ್ಷು ಪಿಡಿವಂತೆ ಚಂಡಕರ್ಮ ೦ ಪಿಡಿದಂ ” 

ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದಿರುವ ತೆಕ್ಕುಂಜೆ ಗೋಪಾಲಕೃಷ್ಣಭಟ್ಟಿ ಅವರ ಗಂಥ ಜನ್ನ ಕವಿ ವಿರಚಿತ ‘ ಯಶೋಧರ ಚರಿತೆ ‘ ಕಾವ್ಯದಿಂದ ಆಯ್ತು ‘ ನಿಯತಿಯನಾರ್ ಮೀಟಿದಪರ್ ‘ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಸುದತ್ತಚಾರ್ಯರ ಶಿಷ್ಯರಾದ ಅಭಯರುಚಿ , ಅಭಯಮತಿಯರು ಗುರುಗಳ ಉಪವಾಸವನ್ನು ಕಳೆಯುವ ಉದ್ದೇಶದಿಂದ ಭಿಕ್ಷಾಟನೆಗೆ ಹೊರಟು ರಾಜಪುರಕ್ಕೆ ಬಂದರು ಬಾಲಕರನ್ನು ಕಂಡ ತಳಾರ ಚಂಡಕರ್ಮನು ವನದಲ್ಲಿ ಜಿಂಕೆಯನ್ನು ಹುಲಿ ಹಿಡಿಯುವಂತೆ ಹಿಡಿದನು , ಆ ಸಂದರ್ಭದಲ್ಲಿ ಕವಿ ಈ ರೀತಿ ಹೇಳಿದ್ದಾರೆ .

ಸ್ವಾರಸ್ಯ : ಹುಲಿಯು ಜಿಂಕೆಯನ್ನು ಹಿಡಿದರೆ ಅದರ ಜೀವ ಹೋದಂತೆ ಹಾಗೆಯೇ ಚಂಡಕರ್ಮನು ಮನುಷ್ಯರನ್ನು ಹಿಡಿದರೆ ಅವರನ್ನು ಚಂಡಮಾರಿಗೆ ಬಲಿಕೊಟ್ಟಂತೆಯೇ ಎಂಬುದು ಸ್ವಾರಸ್ಯಕರವಾಗಿದೆ .

3 , “ ಆಭೀತೆಯಾಗೆಲಗೆ ತಾಯೆ ಮರದ ದೆಸೆಯೊಳ್

. ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದಿರುವ ತೆಕ್ಕುಂಜೆ ಗೋಪಾಲಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನ ಕವಿ ವಿರಚಿತ ‘ ಯಶೋಧರ ಚರಿತೆ ‘ ಕಾವ್ಯದಿಂದ ಆಯ್ದು ‘ ನಿಯತಿಯನಾರ್ ಮೀಟಿದಪರ್ ‘ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಅಭಯರುಚಿ ಮತ್ತು ಅಭಯಮತಿಯರನ್ನು ಹುಲಿಯು ಜಿಂಕೆಯನ್ನು ಹಿಡಿಯುವಂತೆ ಚಂಡಕರ್ಮನು ಹಿಡಿದು ಎಂದು ಧೈರ್ಯ ತಂದನು .

ಆ ಸಮಯದಲ್ಲಿ ಅಭಯರುಚಿಯು ತನ್ನ ತಂಗಿ ಅಭಯಮತಿಗೆ ಹೆದರಬೇಡ ಅಭೀತೆಯಾಗಿರು ಹೇಳಿದ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .

ಸ್ವಾರಸ್ಯ : ನಮಗೆ ಸಾವು ಯಾವ ರೀತಿ ಬರಬೇಕು ಎಂಬುದು ನಮ್ಮ ಹಣೆ ಬರಹದಲ್ಲಿ ಬರೆದಿರುತ್ತದೆ . ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಅಭಯರುಚಿಯ ಮಾತು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ .

 

4 ” ನಿಯತಿಯನಾರ್ ಮೀಟಿದಪರ್ ”

ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹೊರತಂದಿರುವ ತೆಕ್ಕುಂಜೆ ಗೋಪಾಲಕೃಷ್ಣಭಟ್ಟ ಅವರ ಸಂಪಾದನಾ ಸಂಥ ಜನ್ನ ಕವಿ ವಿರಚಿತ ‘ ಯಶೋಧರ ಚರಿತೆ ‘ ಕಾವ್ಯದಿಂದ ಆಯ್ದು ‘ ನಿಯತಿಯನಾರ್ ಮೀಡಿದಪರ್ ‘ ಪದ್ಯಭಾಗದಿಂದ ಆರಿಸಲಾಗಿದೆ .

ಸಂದರ್ಭ : ಚಂಡಕರ್ಮನು ಅಭಯರುಚಿ ಮತ್ತು ಅಭಯಮತಿಯರನ್ನು ಹುಲಿ ಜಿಂಕೆ ಹಿಡಿಯುವಂತೆ ಹಿಡಿದನು . ಚಂಡಮಾರಿಗೆ ಬಲಿಕೊಡಲು ನಮ್ಮನ್ನು ಸೆರೆ ಹಿಡಿದಿದ್ದಾನೆ ಎಂಬ ವಿಷಯ ತಿಳಿದ ಅಭಯಮತಿಯು ಭಯ ಪಡುತ್ತಾಳೆ .

ಆ ಸಂದರ್ಭದಲ್ಲಿ ಅಭಯರುಚಿಯು ಈ ಮಾತಿನಿಂದ ಧೈರ್ಯ ತುಂಬುತ್ತಾನೆ .

ಸ್ವಾರಸ್ಯ : ಅಭಯರುಚಿಯ ಧೈರ್ಯ ಗುಣ , ವಿಧಿನಿಯಮವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಅಂಶ ಸ್ವಾರಸ್ಯಕರವಾಗಿದೆ .

ಭಾಷಾ ಚಟುವಟಿಕ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

1. ಮಾತ್ರೆಗಳಲ್ಲಿ ಎಷ್ಟು ವಿಧ ? ಅವು ಯಾವುವು ?

ಉತ್ತರ : ಮಾತ್ರೆಗಳಲ್ಲಿ ಎರಡು ವಿಧ . ಅವೇ ಲಘು ಮತ್ತು ಗುರು , ಲಘುವನ್ನು ‘ V ‘ ಎಂತಲೂ ಗುರುವನ್ನು – ಎಂತಲೂ ಗುರುತಿಸಲಾಗುವುದು ,

2 , ಲಘು ಮತ್ತು ಗುರು ಎಂದರೇನು ? ಕನ್ನಡ

ಉತ್ತರ : ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಲಘು ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಗುರು .

3 , ಕಂದ ಪದ್ಯದ ಲಕ್ಷಣವನ್ನು ಬರೆಯಿರಿ .

ಉತ್ತರ :

೧, ನಾಲ್ಕು ಪಾದಗಳಿರಬೇಕು .

೨, ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಮೂರು ಮೂರು ಗಣಗಳಿರಬೇಕು .

೩, ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರೆಗಳ ತಲಾ ಐದೈದು ಗಣಗಳಿರಬೇಕು .

೪,  ಪ್ರತಿ ಪಾದವೂ ಆದಿಪ್ರಾಸದಿಂದ ಕೂಡಿರಬೇಕು .

ಆ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ , ಕಂಠಪಾಠ ಮಾಡಿರಿ ,

ಮಾರಿ ಮಲಯಾಳಂ ನವ

ನೀರಜವನವೆಂಬ ಕೆಂಡದೊಳ್ ದಂಡನಮ

ಸ್ಕಾರದೆ ಬಂದಪನಿತ್ತವ

ಧಾರಿಪುದೆಂಬಂತಿರುಲಿದುವರಗಳಿ ಬನದೊಳ್

 

ನಿಯತಿಯನಾರ್ ಮೀಟಿದಪರ್

ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್

ನಯವಿದೆ ಪತ್ತೆ ಪರೀಷಹ

ಜಯಮ ತಪಂ ತಪಕ ಬೇಟಿ ಕೋಡೆರಡೊಳವೇ

 

ಇ ) ಈ ಕೆಳಗಿನ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣ ವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .

ಪದ್ಯ ನಿಯತಿಯನಾರ್ ಮೀಟಿದಪರ್ ಪ್ರಶ್ನೆ ಮತ್ತು ಉತ್ತರಗಳು ನೋಟ್ಸ್, 9th Niyatiyanar Meeridapar Kannada Poem Notes padya

9th Standard Kannada Niyatiyanar Meeridapar Video Lessons Notes

Samveda – 9th – Kannada – Neetiyanaar Meeripar , ನಿಯತಿಯನಾರ್ ಮೀೞೆದಪರ್, ನಿಯತಿಯನಾರ್ ಮೀಟಿದಪರ್

9th standard | poem-4 |ನಿಯತಿಯನಾರ್ ಮೀರಿದಪರ್| Niyatiyanaar meeridapar Part 1

9th standard | poem-4 | ನಿಯತಿಯನಾರ್ ಮೀರಿದಪರ್ | part-2 | Niyatiyanar Meeridapar Part 2

Class 09 Kannada Poem | ನಿಯತಿಯನಾರ್ ಮೀರಿದಪರ್ ಪದ್ಯ ಸಾರಾಂಶ | Niyathiyanaar Meeridapar Poem Summary

9th class Niyatiyanar Meeridapar kannada padya | ನಿಯತಿಯನಾರ್ ಮೀಟಿದಪರ್ ಪದ್ಯ

9th Standard Kannada notes | 9ನೇ ತರಗತಿ ಕನ್ನಡ ನೋಟ್ಸ್, Kannada Deevige 9th standard kannada notes niyatiyanar miridapar kannada 9th

Download all 9th Standard Kannada notes Click Here

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ

9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

One thought on “9th Niyatiyanar Meeridapar Kannada Poem Notes 9 ನೇ ತರಗತಿ ಪದ್ಯ ನಿಯತಿಯನಾರ್ ಮೀಟಿದಪರ್

Leave a Reply

Your email address will not be published. Required fields are marked *