10th Vyagra Geethe Kannada Lesson Notes | 10ನೇ ತರಗತಿ ವ್ಯಾಘ್ರಗೀತೆ ಕನ್ನಡ ನೋಟ್ಸ್
10th Standard Vyagra Geethe Kannada Lesson Notes question answer, text book pdf download 10ನೇ ತರಗತಿ ವ್ಯಾಘ್ರಗೀತೆ ಕನ್ನಡ ನೋಟ್ಸ್ ಪಾಠ, ಪ್ರಶ್ನೆ ಉತ್ತರ
ಗದ್ಯಪಾಠ ೦೬೦೬
ವ್ಯಾಘ್ರಗೀತೆ
ಕವಿ – ಕಾವ್ಯ ಪರಿಚಯ
ಎ.ಎನ್.ಮೂರ್ತಿರಾಯ್
ಎ.ಎನ್. ಮೂರ್ತಿರಾವ್ ಇವರು ಕ್ರಿ.ಶ.೧೯೦೦ ರಲ್ಲಿ ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದ್ದಾರೆ.
ಇವರ ಪೂರ್ಣಹೆಸರು ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್. ಆಧುನಿಕ ಕನ್ನಡದ ಪ್ರಮುಖ
ಗದ್ಯಬರೆಹಗಾರರಾದ ಇವರು ಪ್ರಬಂಧಕಾರರಾಗಿಯೇ ಮಾನ್ಯರಾಗಿದ್ದಾರೆ. ಹಗಲುಗನಸುಗಳು.ಅಲೆಯುವ
ಮನ, ಅಪರವಯಸ್ಕನ ಅಮೆರಿಕಾಯಾತ್ರೆ, ಮಿನುಗು-ಮಿಂಚ
ಮಿಂಚು , ಪೂರ್ವಸೂರಿಗಳೊಡನೆಚಂಡಮಾರುತ ಮೊದಲಾದ ಪ್ರಮುಖ ಕೃತಿಗಳನ್ನು ಬರೆದಿದ್ದಾರೆ.
ಇವರ ಚಿತ್ರಗಳು- ಪತ್ರಗಳು ಎಂಬ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರು ಎಂಬ ಕೃತಿಗೆಪಂಪ
ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿದೆ. ೧೯೮೪ರಲ್ಲಿಕೈವಾರದಲ್ಲಿ
ನಡೆದ ೫೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಬಹು ಆಯ್ಕೆ ಪ್ರಶ್ನೆಗಳು
1.‘ತನ್ನ ಬಡಬಂಧುವಾದ ಬೆಕ್ಕಿನಂತೆ’ ಇಲ್ಲಿರುವ ಅಲಂಕಾರ.
ಅ] ಶ್ಲೇಷಾ ಆ] ರೂಪಕ ಇ] ಉಪಮಾ ಈ] ದೃಷ್ಟಾಂತ
2. ‘ಆ ಪ್ರಾಣಿ ತನ್ನಕುಲಧರ್ಮವನ್ನು ಪಾಲಿಸಿಕೊಂಡೇ ಬಂದಿತ್ತು’ ವಾಕ್ಯದ ಕೊನೆಗೆ ಇರಬೇಕಾದ ಲೇಖನ ಚಿಹ್ನೆ
ಅ] ಅಲ್ಪವಿರಾಮ ಆ] ಪ್ರಶ್ನಾರ್ಥಕ ಇ] ಭಾವಸೂಚಕ ಈ] ಪೂರ್ಣವಿರಾಮ.
3. ‘ವ್ಯಾಘ್ರ’ ಪದದ ತದ್ಬವ ರೂಪ.
ಅ] ಉಗ್ರ ಆ] ಪ್ರಯಾಗ ಇ] ಬಗ್ಗ ಈ] ಸುಯಾಗ.
4. ‘ವದನಾರವಿಂದ’ ಈ ಅಲಂಕಾರ
ಅ] ದೃಷ್ಟಾಂತ ಆ] ಉಪಮಾ ಇ] ಶ್ಲೇಷಾ ಈ] ರೂಪಕ
5. ‘ನಾಲ್ಕೈದು ’ ಇದು ಈ ಬಗೆಯ ನಾಮವಾಚಕ.
ಅ] ಸಂಖ್ಯಾವಾಚಕ ಆ] ಸಂಖ್ಯೇಯವಾಚಕ ಇ] ಗುಣವಾಚಕ ಈ] ಪರಿಮಾಣವಾಚಕ
6. ‘ಜಾಡು’ ಪದದ ಅರ್ಥ
ಅ] ಪಟ್ಟಿ ಆ] ಕಾಡು ಇ] ದೂಳು ಈ] ದಾರಿ
7. ‘ಮಡಿಯಬೇಕಾದರೆ ಮಾಡಿಯೇ ಮಡಿಯುತ್ತೇನೆ’ ಇಲ್ಲಿರುವ ಲೇಖನ ಚಿಹ್ನೆ.
ಅ] ವಾಕ್ಯವೇಷ್ಠನ ಆ] ಭಾವಸೂಚಕ ಕ ಇ] ಪ್ರಶ್ನಾರ್ಥಕ ಈ] ಪೂರ್ಣವಿರಾಮ.
8. ‘ಕಲ್ಲನ್ನು ಎಡವಿ ಶಾನುಭೋಗರು ಬಿದ್ದರು’ ಈ ವಾಕ್ಯವು ಈ ಕಾಲದಲ್ಲಿದೆ.
ಅ] ಭೂತ ಆ] ಭವಿಷ್ಯತ್ ಇ] ವರ್ತಮಾನ ಈ] ಯಾವುದು ಅಲ್ಲ.
9. ‘ರಾತ್ರಿ’ ಈ ಪದದ ವಿರುದ್ಧಾರ್ಥಕ ಪದ
ಅ] ಬೆಳಕು ಆ] ಕತ್ತಲು ಇ] ಹಗಲು ಈ] ಕಗ್ಗತ್ತಲು
10. ‘ಘ್ರಾಣೇಂದ್ರೀಯ’ ಪದವು ಈ ಸಂಧಿಗೆ ಉದಾಹಣೆ
ಅ] ಆಗಮ ಆ] ಲೋಪಸಂದಿ ಇ] ಗುಣಸಂಧಿ ಈ] ವೃದ್ಧಿಸಂಧಿ.
11. ‘ಬೆಳದಿಂಗಳು ಇದು ಈ ಸಮಾಸಕ್ಕೆ ಉದಾಹರಣೆ .
ಅ] ಅಂಶಿ ಆ] ಕರ್ಮಧಾರೆಯಾ ಇ] ದ್ವಂದ್ವ ಈ] ತತ್ಪುರುಷ .
12. ‘ಕತ್ತೆತ್ತಿ ’ ಇದು ಈ ಸಂಧಿಗೆ ಉದಾಹರಣೆ.
ಅ] ಲೋಪ ಆ] ಆಗಮ ಇ] ಆದೇಶ ಈ] ಸವರ್ಣಧೀರ್ಘ.
13. ‘ಪಶು’ ಪದದ ತದ್ಭವ ರೂಪ.
ಅ] ಪ್ರಾಣಿ ಆ] ಪಸು ಇ] ಹಸು ಈ] ಪಾಶು.
14. ‘ಹುಲಿಯ’ ಈ ಪದದಲ್ಲಿರುವ ವಿಭಕ್ತಿ
ಅ] ಪ್ರಥಮಾ ಆ] ಚತುರ್ಥಿ ಇ] ಸಪ್ತಮಿ ಈ] ಷಷ್ಠಿ.
15. ‘ದುಂಡುದುಂಡಾದ’ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ.
ಅ] ದ್ವಿರುಕ್ತಿ ಆ] ನುಡಿಗಟ್ಟು ಇ] ಜೋಡಿನುಡಿ ಈ] ಅನುಕರಣಾವ್ಯಯ
16. ‘ಪಂಚೆಂದ್ರಿಯ’ ಇದು ಈ ಸಮಾಸಕ್ಕೆ ಉದಾಹರಣೆ .
ಅ] ಗಮಕ ಆ] ದ್ವಿಗು ಇ] ಕರ್ಮಧಾರೆಯಾ ಈ] ತತ್ಪುರುಷ.
17‘ಮತ್ತೊಂದು’ ಈ ಸಂಧಿಗೆ ಉದಾಹರಣೆ.
ಅ] ಸವರ್ಣಧೀರ್ಘ ಆ] ಆಗಮ ಇ] ಆದೇಶ ಈ] ಲೋಪಸಂಧಿ.
18. ‘¨ಭಕ್ತಿ ’ ಈ ಪದದ ತದ್ಭವ ರೂಪ.
ಅ] ಭಕ್ತಿ ಆ] ಬಕುತಿ ಇ] ಕರುಣೆ ಈ] ಭಕ್ತ.
19. ‘ಅರವಿಂದ’ ಪದದ ಅರ್ಥ
ಅ] ಚಣ ಆ] ಜಲಜ ಇ] ಜಲ ಈ] ಸಲಿಲ.
20. ‘ವದನಾರವಿಂದ ’ ಇದು ಈ ಸಮಾಸಕ್ಕೆ ಉದಾಹರಣೆ
ಅ] ಅಂಶಿ ಆ] ಕ್ರಿಯಾ ಇ] ದ್ವಂದ್ವ ಈ] ದ್ವಿರುಕ್ತಿ .
21. ‘ಆರನೆಯ’ ಇದು ಈ ನಾಮವಾಚಕಕ್ಕೆ ಸೇರುತ್ತದೆ.
ಅ]] ರೂಢನಾಮ ಆ] ಸಂಖ್ಯಾವಾಚಕ ಇ] ಸಂಖ್ಯೇವಾಚಕ ಈ] ಅಂಕಿತನಾಮ
ಉತ್ತರಗಳು:
1]ಇ, 2]ಇ, 3]ಇ, 4]ಈ, 5]ಅ 6]ಈ 7]ಅ 8]ಅ 9]ಇ 10]ಇ
11]ಆ 12]ಅ 13]ಇ 14]ಈ 15]ಅ 16]ಆ 17]ಈ 18]ಆ 19]ಆ
20]ಇ 21]ಇ
ಇ -ಸಿರಿ ಕನ್ನಡ ವಿಶೇಷ ಪ್ರಶ್ನೆ ವಿಭಾಗ
1) ಇವುಗಳಲ್ಲಿ ಸರ್ವನಾಮ ಯಾವುದು.
ಎ] ಏಕಾಕ್ಷ ಬಿ] ಕೂಡಲಸಂಗಮ ಸಿ] ನಾನು ಡಿ] ಮೂರು
2) ಇವುಗಳಲ್ಲಿ ಯಾವುದು ಸರ್ವನಾಮ ಪದಕ್ಕೆ ಉದಾಹಣೆಯಾಗಿದೆ.
ಎ] ಬಲರಾಮ ಬಿ] ಪರ್ವತ ಸಿ] ಅದು ಡಿ] ಐದು
ಮೊದಲೆರೆಡು ಪದಗಳಿಗಿರುವ ಸಂಭಂಧತೆ ಮೂರನೆಯ ಪದಕ್ಕೆ ಸಂಬಂದಿಸಿದ ಪದ ಬರೆಯಿರಿ.
3)ಇಂದು ಅವನ ಬೇಗನೆ ಬಂದನು ಈ ವಾಕ್ಯದಲ್ಲಿರುವ ಸರ್ವನಾಮಪದ ಯಾವುದು
ಎ] ಮನೆಬಿ] ಇಂದು ಸಿ] ಬಂದನು ಡಿ] ಅವನು
4) ಸರ್ವನಾಮ ಪದಕ್ಕೆ ಉದಾ
ಎ] ಸೀತೆಬಿ] ಅವನು ಸಿ] ನದಿಡಿ] ಪುಸ್ತಕ
5) ಆತ್ಮಾರ್ಥಕ ಸರ್ವನಾಮಕ್ಕೆ ಉದಾ:
ಎ] ನೀನುಬಿ] ನೀವು ಸಿ] ತಾನು ಡಿ] ತಾವು
6) ‘ಅವನು’ ಎಂಬುದು ಈ ನಾಮಪದಕ್ಕೆ ಉದಾಹರಣೆ
ಎ] ಸರ್ವನಾಮ ಬಿ] ಅಂಕಿತನಾಮ ಸಿ] ರೂಢನಾಮ ಡಿ] ಅನ್ವರ್ಥಕನಾಮ
7) ಅವನು ಓದುವುದರಲ್ಲಿ ತುಂಬಾ ಜಾಣ.ಈ ಪದವು ಸರ್ವನಾಮಕ್ಕೆ ಉದಾ;
ಎ] ಅವನು ಬಿ] ಓದು ಸಿ] ತುಂಬಾ ಡಿ] ಜಾಣ
8) ‘ತಾವು’ ಎಂಬುದು ಸರ್ವನಾಮ ಈ ವಿಭಾಗಕ್ಕೆ ಸೇರಿದೆ.
ಎ] ಪ್ರಶ್ನಾರ್ಥಕ ಬಿ] ನಿರ್ದೇಶನಾತ್ಮ ಸಿ] ಪುರುಷಾರ್ಥಕ ಡಿ] ಆತ್ಮಾರ್ಥಕ
9) ‘ಅವರ ಜ್ಞಾನ ಸಂಗ್ರಹ ನಿಜವಾದ ಶಕ್ತಿಯಾಗಿ ಪರಿಣಮಿಸಿದೆ’ ಈ ವಾಕ್ಯದಲ್ಲಿರುವ ಸªðÀ ನಾಮ ಪದ.
ಎ] ರೂಢನಾಮ ಬಿ] ಅನ್ವರ್ಥಕನಾಮ ಸಿ] ಅಂಕಿತನಾಮ ಡಿ] ಭಾವನಾಮ
ಉತ್ತರಗಳು.
1]ಸಿ, 2]ಸಿ, 3]ಡಿ, 4] ಬಿ, 5]ಡಿ, 6]ಎ, 7]ಎ, 8]ಡಿ,9]ಎ
ಇ -ಸಿರಿ ಕನ್ನಡ ವಿಶೇಷ ಪ್ರಶ್ನೆ ವಿಭಾಗ
1) ಅನ್ವರ್ಥ ನಾಮಪದಕ್ಕೆ ಉದಾ:
ಎ] ಮರ ಬಿ] ಕುರುಡ
ಸಿ] ರಹೀಮ ಡಿ] ಅದು
2) ಅನ್ವರ್ಥ ನಾಮ ಪದಕ್ಕೆ ಉದಾ:
ಎ] ರಾಮ ಬಿ] ಕುಂಟ
ಸಿ] ನದಿ ಡಿ] ಪುಸ್ತಕ
3) ಇದು ಅನ್ವರ್ಥ ನಾಮ ಪದಕ್ಕೆ ಉದಾ:
ಎ] ವ್ಯಾಪಾರಿ ಬಿ] ನದಿ
ಸಿ] ಮೈಸೂರು ಡಿ] ಪುಸ್ತಕ
4) ಇವುಗಳಲ್ಲಿ ಅನ್ವರ್ಥ ನಾಮ ಪದ.
ಎ] ಬಸವ ಬಿ] ವ್ಯಾಪಾರಿ
ಸಿ] ಲಿಂಗವ್ವ ಡಿ] ಮರ
5) ‘ಕುರುಡ’ ಪದವು ನಾಮ ಪದಕ್ಕೆ ಉದಾ:
ಎ] ಅನ್ವರ್ಥನಾಮ ಬಿ] ರೂಢನಾಮ
ಸಿ] ಅಂಕಿತನಾಮ ಡಿ]ಸರ್ವನಾಮ
6) ‘ತನ್ಮಯಿ ಪದವು ನಾಮಪದಕ್ಕೆ ಉದಾ:
ಎ] ಅಂಕಿತನಾಮ ಬಿ] ರೂಢನಾಮ ಸಿ] ಅನ್ವರ್ಥನಾಮ ಡಿ]
7) ‘ಮೂಗ’ ಪದವು ಈ ನಾಮ ಪದಕ್ಕೆ ಉದಾ:
ಅ] ಸರ್ವನಾಮ ಬ] ಭಾವನಾಮ ಸಿ] ಅನ್ವರ್ಥನಾಮ ಡಿ]ಅಂಕಿತನಾಮ
8) ‘ವಿದ್ವಾಂಸ’ ಪದವು ಈ ನಾಮ ಪದಕ್ಕೆ ಸೇರಿದೆ.
ಎ] ರೂಢನಾಮ ಬಿ] ಅನ್ವರ್ಥಕನಾಮ ಸಿ] ಅಂಕಿತನಾಮ ಡಿ]ಭಾವನಾಮ
9) “ಪಂಪನು ಕನ್ನಡದ ಆದಿಕವಿಯೆಂಬುದು ನಮಗೆ ಹೆಮ್ಮೆ ” ಈ ಅಂಕಿತನಾಮ
ಎ] ನಮಗೆ ಬಿ] ಹೆಮ್ಮೆ ಸಿ] ಪಂಪ ಡಿ] ಕನ್ನಡ
ಉತ್ತರಗಳು
1]ಬಿ, 2]ಬಿ, 3]ಎ, 4]ಬಿ, 5]ಎ, 6]ಎ, 7]ಸಿ, 8]ಬಿ, 9]ಸಿ.
1. ರಾಜ : ರಾಯ:: ನಿಧಿ ________
2. ಮುಂಭಾಗ : ಭಾಗದ +ಮುಂದೆ :: ಇಮ್ಮಡಿ _______
3. ರಸದೂಟ : ಲೋಪಸಂಧಿ:: ಬ್ರಹ್ಮಾಸ್ತ್ರ _________
4. ಹುಲಿ : ರೂಢನಾಮ:: ಆಟ ________
5. ದೇಹ : ಶರೀರ:: ಆಯುಧ ________
ಉತ್ತರಗಳು
1] ಬಿದಿ 2] ಎರಡು+ಮಡಿ 3] ಸವರ್ಣಧೀರ್ಘ 4] ಭಾವನಾಮ 5] ಹತಾರ
ಇ -ಸಿರಿ ಕನ್ನಡ ವಿಶೇಷ ಪ್ರಶ್ನೆ ವಿಭಾಗ
1) ಅಂಜಿಕೆ ಇದು ಯಾವ ಕೃದಂತಕೆ ಉದಾ:
ಅ) ನಿಷೇಧ ಕೃದಂತ ಬ) ವರ್ತಮಾನ ಕೃದಂತ
ಕ) ಕೃದಂತ ಭಾವನಾಮ ಡ) ಕೃದಂತ ಅವ್ಯಯ
2) ತದ್ಧಿತಾಂತ ನಾಮಕ್ಕೆ ಉದಾಹರಣೆ ಕೊಡಿ.
ಅ) ಕನ್ನಡಿಗ ಬ) ಚಿಕ್ಕದು
ಕ) ಚಿಕ್ಕವರು ಡ) ಜಾಣ
3) ಮಾಡುತ ಪದವು ಇದಕ್ಕೆ ಉದಾಹರಣೆಯಾಗಿದೆ.
ಅ) ಅವ್ಯಯ ಬ) ಕೃದಂತನಾಮಕ್ಕೆ
ಕ) ಕೃದಂತ ಅವ್ಯಯ ಡ) ಕೃದಂತಬಾs ವಕ್ಕೆ.
4) ಹೂವಾಡಿಗ ಇದು ಯಾವ ತದ್ಧಿತಾಂತಕ್ಕೆ ಸೇರಿದೆ.
ಅ) ತದ್ಧಿತಾಂತ ನಾಮ ಬ) ತದ್ಧಿತಾಂತ ಭಾವನಾಮ
ಕ) ತದ್ಧಿಂತ ಅವ್ಯಯ ಡ) ತದ್ಧಿತಾಂತ
5) ಓಟ ಇದು ಯಾವ ಕೃದಾಂತಕ್ಕೆ ಸೇರಿದೆ.
ಅ) ಕೃದಂತ ಭಾವನಾಮ ಬ) ಕೃದಂತ ಅವ್ಯಯ
ಕ) ಕೃದಂತನಾಮ ಡ) ಅವ್ಯಯ
6) ಇವುಗಳಲ್ಲಿ ತದ್ಧಿತಾಂತ ನಾಮಕ್ಕೆ ಉದಾಹರಣೆ.
ಅ) ಕರುಡ ಬ) ಕಾವೇರಿ
ಕ) ಬಂಗಾರ ಡ) ಕನ್ನಡಿಗ
7) ಹಾಡುವಿಕೆ ಇದು ಯಾವ ಕೃದ್ಧಾಂತಕ್ಕೆ ಸೇರಿದೆ.
ಅ) ನಿಷೇಧ ಕೃದಂತ ಬ) ಕೃದಂತ ಭಾವನಾಮ
ಕ) ವರ್ತಮಾನ ಕೃದಂತ ಡ) ಕೃದಂತ ಅವ್ಯಯ
8) ಧಾತುವಿಗೆ ಕೃತ್ ಪ್ರತ್ಯಯ ಸೇರಿದಾಗ ಆಗುವ ಪದªÃÉ ನು?
ಅ) ತದ್ಧಿತಾಂತ ಬ) ಸರ್ವನಾಮ
ಕ) ಅಂಕಿತನಾಮ ಡ) ಕೃದಂತ
9) ಬಿಳುಪು ಎಂಬ ಪದವು ಯಾವ ವ್ಯಾಕರಣಕ್ಕೆ ಸೇರಿದೆ.
ಅ) ತದ್ಧಿತಾಂತ ನಾಮ ಬ) ಧಾತು
ಕ) ತದ್ಧಿತಾಂತ ಭಾವನಾಮ ಡ) ಅವ್ಯಯ
10) ಆಟ ಇದು ಯಾವ ವ್ಯಾಕರಣಕ್ಕೆ ಸೇರಿದೆ.
ಅ) ತದ್ಧಿತಾಂತ ಬ) ಕೃದಂತನಾಮ
ಕ) ಕೃದಂತ ಅವ್ಯಯ ಡ) ಕೃದಂತ ಭಾವನಾಮ
11) ಹಣವಂತ ಇದು ಒಂದು. [ತದ್ಧಿತಾಂತ ಭಾವ]
ಅ) ತದ್ಧಿತಾಂತ ಭಾವನಾಮ ಬ) ತದ್ಧಿತಾಂತ ನಾಮ
ಕ) ಕೃದಂತನಾಮ ಡ) ತದ್ಧಿತಾಂತ ಅವ್ಯಯ.
12) ಹೂವಾಡಿಗ ಇದರಲ್ಲಿರುವ ತದ್ಧಿತ ರೂಪ.
ಅ) ಇಗ ಬ) ವಾಡಿಗ
ಕ) ಡಿಗ ಡ) ಅಡಿಗ
13) ಕನ್ನಡಿಗ ಈ ಪದದಲ್ಲಿರುವ ತದ್ಧಿತ ಅರ್ಥ.
ಅ) ಇಗ ಬ) ಅಡಿಗ
ಕ) ನಡಿಗ ಡ) ಡಿಗ
14) ತದ್ಧಿತಾಂತ ಭಾವನಾಮಕ್ಕೆ ಉದಾಹರಣೆ ಕೊಡಿ.
ಅ) ಜಾಣ್ಮೆ ಬ) ರಾಮನಂತೆ
ಕ) ಮಾಲೆಗಾರ ಡ) ಗುಣವಂತ
15) ಮಗುವನ್ನು ಶಾಲೆಯ ತನಕ ಬಿಟ್ಟು ಬಂದನು. ಈ ವಾಕ್ಯದಲ್ಲಿರುವ ತದ್ಧಿತಾಂತ ಅವ್ಯಯ.
ಅ) ಮಗು ಬ) ಶಾಲೆ
ಕ) ಬಂದ ಡ) ಶಾಲೆಯ ತನಕ
16) ಕೃದಂತ ಬಾವನಾಮಕ್ಕೆ ಉದಾಹರಣೆ ಇದು.
ಅ) ನಡೆಯಲು ಬ) ನಡವಳಿಕೆ
ಕ) ನಡೆಯುವ ಡ) ಚಲುವಿಕೆ
17) ತದ್ಧಿತಾಂತ ಬಾವನಾಮಕ್ಕೆ ಉದಾಹರಣೆ ಇದು.
ಅ) ಲೆಕ್ಕಿಗ ಬ) ಅಲ್ಲಿಯತನಕ
ಕ) ದೊಡ್ಡತನ ಡ) ಹಣವಂತ
ಉತ್ತರಗಳು.
1]ಕ 2]ಅ 3]ಕ 4]ಅ 5]ಅ 6]ಡ 7]ಬ 8]ಡ 9]ಕ 10]ಡ 11]ಬ 12]ಡ 13]ಅ 14]ಅ 15]ಬಿ 16]ಡ 17]ಸಿ
ಪಾಠದ ಆಶಯ ಭಾವ
ಜೀವ ಜಗತ್ತು ವಿಸ್ತಾರವಾದುದು. ವೈವಿಧ್ಯಮಯವಾದುದು ಪರಿಸರದಲ್ಲಿ ಎಲ್ಲ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಅವುಗಳು ನಿಸರ್ಗ ನಿಯಮz
ದಂತೆ ಬಾಳುತ್ತವೆ. ಪರಿಸರ ಸಮತೋಲನದಲ್ಲಿ ಒಂದು ಮತ್ತೊಂದನ್ನು ಆಧರಿಸುವುದು ಅನಿವರ‍್ಯ ಮತ್ತು ವಾಸ್ತವ ಸಂಗತಿ, ಇಂತಹ ಪರಿಸ್ಥಿತಿಯನ್ನು
ಹಾಸ್ಯದ ನೆಲೆಯಲ್ಲಿ ತಿಳಿಸಿದಾಗ ಹಲವು ವೈಚಿತ್ರ್ಯಗಳು ತೋರಬಹುದು. ಪ್ರಾಣಿಗಳಿಗಿರುವ ಭಯ ಮತ್ತು ಸಹಜಜೀವನ ‘ಧರ್ಮ’ವಾಗಿಯೂ
ತೋರಬಹುದು. ಅದರ ಮರ್ಮವನ್ನರಿತ ವ್ಯಕ್ತಿ (ಮಾನವ) ಕೌಶಲದಿಂದ ಮೇಲಗೈಸಾಧಿಸಿರುವ ಬಗೆ ವಿಶಿಷ್ಟವಾದುದೆಂಬುದು ಧ್ವನಿತವಾಗಿದೆ.
ಹಿಂಸ್ರಪಶುಗಳು ಸಹ ಬದುಕುವುದಕ್ಕೆ ಒಂದು ಆದರ್ಶವನ್ನು ಪಾಲಿಸುವಾಗ ಪುಣ್ಯಭೂಮಿ ಭಾರತದಲ್ಲಿರುವ ಮನುಷ್ಯರು ಹಿರಿಯರ ಆದರ್ಶವನ್ನು
ಪಾಲಿಸಿದರಾಗದೆ ಎಂಬುದನ್ನು ವಿಡಂಬಿಸಿರುವುದು ಇಲ್ಲಿನ ವಿಶೇಷ.
ಎ.ಎನ್.ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಸಂಕಲದಿಂದ ‘ವ್ಯಾಘ್ರಗೀತೆ’ ಗದ್ಯ ಭಾವನ್ನು ಆಯ್ಕೆಮಾಡಲಾಗಿದೆ.ಮೇಲಗೈ
ವ್ಯಾಘ್ರಗೀತೆ ಪಾಠದ ಸರಳ ಸಾರಾಂಶ
ಎಲೆ ಬೆಕ್ಕೆ ರೂಪಿನಿಂದಲೆ
ಹುಲಿ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ |
ಬಲಮೆಯು ನಿನ್ನೊಳಿರುಹುದೇಂ
ಇಲಿಗಳ ಹಿಡಿವುದರೊಳಾಯ್ತು ನಿನ್ನಯ ಶೌರ್ಯಂ || ಕಂದ ||
(ಎಲೆ ಬೆಕ್ಕೆ ನಿನ್ನ ರೂಪಮಾತ್ರದಿಂದಲೇ ಹುಲಿ ಜಾತಿಗೆ ಸೇರಿದ್ದೆನೆಂದು ಗರ್ವಪಡಬೇಡ ¨
ಆ ಒಲುಮೆ ಎನ್ನುವುದು ನಿನ್ನಲ್ಲಿ ಇರುವುದೇನು?ಇಲಿಗಳನ್ನು ಹಿಡಿದು ತಿನ್ನುವುದರಲ್ಲಿಯೇ ನಿನ್ನ ಶೌರ್ಯ ಕಳೆದುಹೋಯಿತು.) ಇಲ್ಲಿ ಹುಲಿಯಲ್ಲಿರುವ ಒಲುಮೆ ಭಾವವನ್ನು ಹೇಳಲು ಕವಿ ಈಪದ್ಯವನ್ನು ಸ್ಮರಿಸಿದ್ದಾರೆ. ಈ ಪದ್ಯವನ್ನು ಬರೆದ ಕವಿ ಹುಲಿಯನ್ನು ಕೇವಲ ಹಿಂಸ್ರಪಶುವೆಂದು ವೆಂದು ಭಾವಿಸಿರಲಿಲ್ಲ. ಅದರಲ್ಲಿನ ಒಲುಮೆ ಗುಣಗಳನ್ನು ಮೆಚ್ಚಿದ್ದಾರೆ. ಬೆಕ್ಕು ಪರಾಕ್ರಮಿಯಲ್ಲದಿದ್ದರೂ ಹುಲಿಯ ಜಾತಿಗೆ ಸೇರುವುದು ಹೆಮ್ಮೆಯ ವಿಷಯವೆಂದು ಕೂಡ ಗರ್ವಪಡುತ್ತಿತ್ತು. ಆದರೆ ಬೆಕ್ಕಿನ ಪರಾಕ್ರಮ ಮಾತ್ರ ಇಲಿಗಳ ಮುಂದೆ ಎಂದು ಹೇಳುವುದರಲ್ಲಿ ಹುಲಿಯ ಪರಾಕ್ರಮ ಎಲ್ಲೆಲ್ಲೂ ಇದೆ ಎಂದು ಗ್ರಹಿಸಬಹುದು.
ಭರತ ಖಂಡದ ಹುಲಿಗಳು
ಹುಲಿ ಎಂದರೆ ಕ್ರೂರಪ್ರಾಣಿ ಕೊಂದು ತಿನ್ನುವುದೊಂದೆ ಅದರ ಸ್ವಭಾವ ಎಂದು ಭಾವಿಸುವವರು ಸಾಕಷ್ಟು ಜನರಿದ್ದಾರೆ. ಆದರೆ ಹುಲಿಆಹಾರಕ್ಕಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಂದು ತಿನ್ನುವುದೇನೋ ಉಂಟು. ಆದರೆ ನಿಷ್ಪಕ್ಷಪಾತವಾದ ದೃಷ್ಟಿಯಿಂದ ನೋಡಿದರೆ ಅದರಲ್ಲಿ
ತಪ್ಪೇನು ಇಲ್ಲ. ಯಾಕೆಂದರೆ ಅವು ಮೂಲತಃ ಮಾಂಸಹಾರಿಗಳು. ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾಂಸವನ್ನು
ತಿನ್ನಬಹುದಾದರೆ ಮಾಂಸಹಾರಿಯಾದ ಹುಲಿಯಲ್ಲಿ ಅದೊಂದು ದೊಡ್ಡ ಅಪರಾಧವೇನಲ್ಲ . ಅದು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದರಲ್ಲೇನು ತಪ್ಪಿಲ್ಲ. ಆದರೆಹಾಗೆ ಕೊಲ್ಲುವಾಗ ಯಾವುದಾದರೊಂದು ಧರ್ಮವನ್ನು ಅನುಸರಿಸಿ ಕೊಲ್ಲುತ್ತದೆಯೇ ಅಥವಾ ಧರ್ಮಾಧರ್ಮಗಳ ಲೆಕ್ಕವನ್ನೇ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಇಲ್ಲಿ ಮುಖ್ಯ ಪ್ರಶ್ನೆ . ಹುಲಿಗೆ ಧರ್ಮವೇನು ಬಂತುಎನ್ನಬಹುದು. ಇತರ ದೇಶಗಳಲ್ಲಿರುವ ಹುಲಿಗಳ ವಿಷಯ ಹೇಗೋ ನನಗೆ ತಿಳಿಯದು ಆದರೆ ಭರತಖಂಡದ ಹುಲಿಗಳ ಧರ್ಮಶ್ರದ್ದೆಯನ್ನುಅನುಸರಿಸಿ ಬೇಟೆಯಾಡುತ್ತವೆ. ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ, ಮಹರ್ಷಿ ವೇದವ್ಯಾಸರಿಂದ ರಚಿತವಾದ ಭಗದ್ಗೀತೆಯಂಥ ಗ್ರಂಥ ಉದ್ಭವಿಸಿತೋ, ಇಂತಹ ಈ ¨ಭರತ ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ.ಯಾರನ್ನೇ ಆಗಲಿ, ¨ಭರತಖಂಡದ ಹುಲಿಗಳು ಹಿಂದಿನಿಂದ ಹಾರಿಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ , ಆತ ಬೆನ್ನು ತಿರುಗಿಸಿರುವಾಗಕೊಲ್ಲುವುದು ಧರ್ಮವಲ್ಲ.
ಶಾನುಭೋಗರ ಕತೆ
ಕವಿ ಎ.ಎನ್.ಮೂರ್ತಿರಾಯರು ಹುಲಿಗಳು(ವ್ಯಾಘ್ರಗಳು ) ಧರ್ಮಶ್ರದ್ಧೆಯನ್ನು ಹೇಗೆ ಅನುಸರಿಸುತ್ತವೆ ಎಂಬುದನ್ನು ಅವರ ಬಂಧು
ಕೃಷಮೂರ್ತಿಯವರು ತನ್ನ ವಂಶದವರೊಬ್ಬರ ಅನುಭವದ ಕಥೆ ಹೇಳಿದನ್ನು ಕೇಳಿದ ಮೇಲೆ ಅವರಿಗೆ ಹುಲಿಯ ಧರ್ಮಶ್ರದ್ಧೆಯ ಅರಿವಾಯಿತು.
ಕೃಷ್ನಮೂರ್ತಿಯ ಅಜ್ಜಂದಿರು ತುಮಕೂರು ಜಿಲ್ಲೆಯ ಒಂದು ಹಳ್ಳಿಯವರು. ಅವರ ಹಿರಿಯರು ಸಣ್ಣದೊಂದು ಸಂಸ್ಥಾನದಲ್ಲಿ ಮಂತ್ರಿಯಾಗಿದ್ದು ತಮ್ಮ ರಾಜಭಕ್ತಿಗಾಗಿ ಹೆಸರು ಪಡೆದವರು . ಈಗ ಮಂತ್ರಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು. ಆದರೂ ಶಾನುಭೋಗರು ತಮ್ಮ ವಂಶದ ಕೀರ್ತಿಗೆ ಕುಂದು ತರದಂತೆ ಖಿರ್ದಿ ಪುಸ್ತಕ (ಕಂದಾಯ ವಿವರವನ್ನೊಳಗೊಂಡ ಪುಸ್ತಕ)ವನ್ನು ನಿಷ್ಠೆಯಿಂದ ಕಾಪಾಡಿಕೊಂಡು ಮಸಿಯಕಾಣಿಕೆ (ಕಂದಾಯ ವಸೂಲಿ ಸಂದರ್ಭದಲ್ಲಿ ಶಾನುಭೋಗರು ರೈತರಿಂದ ಪಡೆಯುತ್ತಿದ್ದ ಕಿರು ಕಾಣಿಕೆ) ಗಾಗಿ ರೈತರನ್ನು ಪೀಡಿಸದೆ, ದೇವರುಕೊಟ್ಟಷ್ಟರಲ್ಲಿ ತೃಪ್ತಿಗೊಂಡು ಜೀವನ ನಡೆಸುತ್ತಿದ್ದರು .
ಖಿರ್ದಿ ಪುಸಕ ಶಾನುಭೋಗರ ರಾಜಭಕ್ತಿಯ ಲಾಂಛನವಾಗಿತ್ತು.
ಒಂದು ಬಾರಿ ಶಾನುಭೋಗರು ಇರಸಾಲಿಗಾಗಿ (ರೈತರಿಂದ ಸಂಗ್ರಹಿಸಿದ ಕಂದಾಯದ ಮೊತ್ತವನ್ನು ಖಜಾನೆಗೆ ಕಟ್ಟುವುದ್ದಕ್ಕಾಗಿ) ಚಿಕ್ಕನಾಯಕನಹಳ್ಳಿಗೆ ಹೋಗಿದ್ದರು. ಖಜಾನೆಗೆ ಹಣ ಕಟ್ಟಿ, ಸ್ನೇಹಿತರನ್ನು ನೋಡಿಕೊಂಡು ಅಲ್ಲಿಂದ ವಾಪಸ್ಸು ಹೊರಡುವ ವೇಳೆಗೆ ಸಂಜೆ ಆರು ಘಂಟೆಯಾಗಿತ್ತು.ಶಾನುಭೋಗರು ತಮ್ಮ ಹಳ್ಳಿಯನ್ನು ತಲಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು. ಅದು ಕಾಡುದಾರಿ, ಆದರೂ ಬೆಳುದಿಂಗಳದಿನ ; ಆ ಮದಲಿಂಗನ ಕಣಿವೆಯಲ್ಲಿ ಬರುವಾಗ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.ಅಲ್ಲದೇ ಬೇಗಬೇಗ ನಡೆಯ ತೊಡಗಿದರು.
ಆದರೂ ಕಣಿವೆಗೆ ಬರುವ ವೇಳೆಗೆ ಆಗಲೇ ರಾತ್ರಿ ಆಗಿತ್ತು. ಹಸಿವಿನ ಜೊತೆಗೆ ¨ಭಯವು ಸೇರಿ ಅವರು ಇನ್ನಷ್ಟು ವೇಗವಾಗಿ ನಡೆಯ
ತೊಡಗಿದರು.
ಇತ್ತಾ ರಸ್ತೆಗೆ ಸ್ವಲ್ಪ ದೂರದಲ್ಲೆ ಇದ್ದ ಗುಹೆಯಲ್ಲಿ ಹುಲಿಯೊಂದು ಮಲಗಿತ್ತು. ದಿನವೆಲ್ಲ ನಿದ್ದೆಮಾಡಿ ಆಗ ತಾನೆ ಆಕಳಿಸುತ್ತ ಎದ್ದ ಹುಲಿಗೆತನ್ನ ಹೊಟ್ಟೆ ಬರಿದಾಗಿದೆಯೆಂದು ಭಾಸವಾಯಿತು. ಹಸಿದು ಮಲಗಿದ್ದ ಹುಲಿಯುವಿಧಿಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.ಬಂಡೆಗಳ ಮರೆಯಲ್ಲೇ ನಡೆಯುತ್ತಿದ್ದಾಗ ಇದ್ದಕಿದ್ದ ಹಾಗೆಯೇ ಮಧುರವಾದ ಗಂಡವೊಂದು ಅದರ ಘ್ರಾಣೇಂದ್ರಿಯವನ್ನು ಆಕ್ರಮಿಸಿತು. ಆಸುವಾಸನೆಯ ಜಾಡನ್ನೇ ಹಿಡಿದು ನಿಶ್ಶಬ್ದವಾಗಿ ನಡೆಯುತ್ತಾ ರಸ್ತೆಯ ಬಳಿಗೆ ಬಂದು ಶಾನುಭೋಗರನ್ನು ಕಂಡಿತು.
ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು. ಹುಲಿಯ ಆನಂದಕ್ಕೆ ಕೊರತೆ ಒಂದಿತ್ತು ; ಆ ಶಾನುಭೋಗರು ಹುಲಿಗೆಅಭಿಮುಖರಾಗಿರದೆ ಅದರ ಕಡೆಗೆ ಬೆನ್ನುತಿರುಗಿಸಿ ನಡೆಯುತ್ತಿದ್ದರು . ಆದ್ದರಿಂದ ಹುಲಿ ಹೇಗಾದರೂ ಮಾಡಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕು ಎಂದುಕೊಂಡು ತನ್ನ ಬಡಬಂಧುವಾದ ಬೆಕ್ಕಿನಂತೆ ದೇಹವನ್ನು ಹುದುಗಿಸಿಕೊಂಡು ಹುಲಿ ಮೆಲ್ಲಮೆಲ್ಲನೆ ಶಾನುಭೋಗರ ಹತ್ತಿರ ಸರಿಯಿತು.
ಹುಲಿ ಬಂದದ್ದು ಶಾನುಭೋಗರಿಗೆ ತಿಳಿಯಿತು. ಹುಲಿ ಹಿಂದಿನಿಂದ ಮೇಲೆ ಬೀಳುವುದಿಲ್ಲವೆಂದು ಶಾನುಭೋಗರು ಬಲ್ಲರು. ಹುಲಿ ಹತ್ತಿರಬಂದು ನೆಗೆಯಿತು. ಅದು ತಮ್ಮ ತಲೆಯಮೇಲೆ ಬರುವ ವೇಳೆಗೆ ಸರಿಯಾಗಿ ಶಾನುಭೋಗರು ಸ್ವಲ್ಪ ಬಾಗಿದರು. ಹುಲಿ ನೆಲಕ್ಕೆ ಇಳಿದು ತಮ್ಮ ಕಡೆಗೆ ತಿರುಗುವುದರೊಳಗೆ ಅವರೂ ಹಿಂದಿರುಗಿ ಬಂದ ದಾರಿಯಲ್ಲೇ ಪುನಃ ನಡೆದರು . ಹುಲಿ ಕತ್ತೆತ್ತಿ ನೋಡಿದರೆ ಶಾನುಭೋಗರು ಮತ್ತೆ ತನ್ನಕಡೆಗೆ ಬೆನ್ನುತಿರುಗಿಸಿದ್ದಾರೆ ! ಹುಲಿಯ ಮುಖ ಪೆಚ್ಚಾಯಿತು. ಆದರೆ ಶಾನುಭೋಗರ ವಿಷಯದಲ್ಲಿ ಮೆಚ್ಚಿಕೆಯೂ ಆಯಿತು. ತಿಂದರೆ ಇಂಥವನನ್ನೇ ತಿನ್ನಬೇಕು ಎಂದುಕೊಂಡು ಮತ್ತೊಂದು ಬಾರಿ ನೆಗೆಯಿತು. ಈ ಸಲವೂ, ಹುಲಿಗೆ ಕಂಡದ್ದು ಶಾನುಭೋಗರ ಬೆನ್ನೇ. ಅದಕ್ಕೆ ಒಂದು ಕಡೆ ಹಸಿವು,ಮತ್ತೊಂದು ಕಡೆ ತನ್ನ ಸ್ವಾಭಿಮಾನಕ್ಕೆ ಇಂಥ ದಕ್ಕೆ ಬಂತಲ್ಲಾ ಎಂಬ ಯೋಚನೆ. ನಾಳೆ ಇತರ ವ್ಯಾಘ್ರಗಳೆದುರಿಗೆ ತನ್ನ ಗೌರವ ಎಷ್ಟಕ್ಕೆ ನಿಂತೀತು,ಮೇಲೆ ಬಿದ್ದೇ ಬಿಡಲೆ ಎಂಬ ಯೋಚನೆ ಅದರ ಮನಸ್ಸಿನಲ್ಲಿ ಹೊಳೆದುಹೋಯಿತು. ಕ್ಷಣಕಾಲ ಅದರ ಮನಸ್ಸಿನಲ್ಲಿ ಗೊಂದಲ. ಆದರೆ ಆ ಗೊಂದಲ ಕ್ಷಣಕಾಲಕ್ಕಿಂತಲೂ ಹೆಚ್ಚಾಗಿ ನಿಲ್ಲಲಿಲ್ಲ. ಅದು ಸದ್ವಂಶದಲ್ಲಿ ಜನಿಸಿದ ಹುಲಿ. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ” ಎಂದು ಆ ಪುಣ್ಯಕೋಟಿ ಹಸು ಆಹ್ವಾನ ಕೊಟ್ಟಾಗ ತನ್ನ ಅಜ್ಜ ಬಾಯಿ ಚಪ್ಪರಿಸಿಕೊಂಡು ಹಸುವನ್ನು ತಿನ್ನಬಹುದಾಗಿತ್ತು.
ಆದರೂ ಆ ಹುಲಿರಾಯ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನದೆ ಪ್ರಾಣಬಿಟ್ಟಿತು. ಆ ಪವಿತ್ರ ಕಥೆ ಸುವರ್ಣಾಕ್ಷರದಲ್ಲಿ ಲಿಖಿತವಾಗಿ ಇಂದಿಗೂ
ಹುಲಿಗಳಿಗೂ ಹಸುಗಳಿಗೂ ಆದರ್ಶವಾಗಿದೆದೆ. ಅಂಥ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧಕ್ಕೆ ಕೈ ಹಾಕುವುದೆ? ಛೇ ಇಲ್ಲ !ಎಂದುಕೊಂಡಾಗ ಹುಲಿಗೆ ¨
ಭಗವದ್ಗೀತೆಯ ಸ್ವಧರ್ಮೇ ನಿಧನಂ ಶ್ರೇಯಃ ಎಂಬ ವಾಕ್ಯ ನೆನಪಿಗೆ ಬಂತು ; ಅದೇ ರೀತಿ ಬೈಬಲ್ ನೆನಪಿಗೆ ಬಂದು;“ಸೈತಾನ ಹಿಂದಿರುಗು” ಎಂದುಕೊಂಡಿತು.
ಶ್ರೇಯಾನ್ ಸ್ವಧರ್ಮಾಹ ವಿಗುಣಃ ಪರಧರ್ಮಾತ್ ಸ್ವನುಷ್ಠೀತಾತ್ |
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ||
ಅರ್ಥ: ಗುಣವಿಲ್ಲದ ಸ್ವಧರ್ಮವು ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕಿಂತಲೂ ಶ್ರೇಯಸ್ಕರವಾದದ್ದು . ಸ್ವಧರ್ಮದಲ್ಲಿ ಮರಣವು
ಒಳ್ಳೆಯದು. ಪರಧರ್ಮವು ಭಯಂಕರವಾದದ್ದು .
ಅನ್ವಯ: ಪ್ರತಿಯೊಂದು ಜೀವಕ್ಕೂ ಅದರದೇ ಆದ ಸ್ವಭಾವ ಇರುತ್ತೆ ಅದನ್ನು ಏಕಾಏಕಿ ಬದಲಿಸಲು ಬರುವುದಿಲ್ಲ.
ಜೀವಸ್ವಭಾವಕ್ಕನುಗುಣವಾಗಿ ನಮ್ಮ ಧರ್ಮ. ಅದು ಸ್ವಧರ್ಮ ಅದನ್ನು ಅನುಸರಿಸಬೇಕು. ಸ್ವಧರ್ಮವನ್ನು ಅನುಸರಿಸುವುದು ಶ್ರೇಷ್ಠ.ಪರಧರ್ಮ ಅಪಾಯಕಾರಿಯಾದದ್ದು. ಅಂದರೆ ಹುಲಿ ತನ್ನ ಧರ್ಮಶ್ರದ್ದೆಯನ್ನು ಬಿಡಬಾರದು ತನ್ನ ಧರ್ಮಮಾರ್ಗದಿಂದನೆಡೆಯಬೇಕು ಎಂದು ಆಲೋಚಿಸಿತು
|
ಸೈತಾನ ಹಿಂದಿರುಗು : ಒಂದು ಸಲ ಸೈತಾನನು ಯೇಸುವಿಗೆ ಪ್ರಲೋನೆಗೆ ಒಳಪಡಿಸಿ ಪಾಪವನ್ನು ಮಾಡುವಂತೆ ಬಯಸುತ್ತಿದ್ದನು.ಸೈತಾನನು ಯೇಸುವನ್ನು ಎತ್ತರವಾದ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಎಲ್ಲಾ ರಾಜ್ಯಗಳನ್ನು ಮತ್ತು ಅವುಗಳ ವೈಭವವನ್ನು
ತೋರಿಸಿ ನೀನು ನನಗೆ ಅಡ್ಡಬಿದ್ದು ಆರಾಧಿಸಿದರೆ ಅವೆಲ್ಲವನ್ನು ನಿನಗೆ ಕೊಡುತ್ತೇನೆ ಎಂದು ಹೇಳಿದಾಗ ಯೇಸು ತನ್ನ ಮನಸ್ಸನ್ನು
ಚಂಚಲಗೊಳಿಸದೆ ಸೈತಾನ ಇಲ್ಲಿಂದ ತೊಲಗು ಎಂದು ಹೇಳಿದನು . ಆಗ ಸೈತಾನ ಬಂದ ದಾರಿಗೆ ಸುಂಕವಿಲ್ಲ ಅನ್ನುವ ಹಾಗೆ ಸೈತಾನ
ಹಿಂತಿರುಗು ಎಂದು ಮನಸ್ಸಿನಲ್ಲಿ ಅಂದು ಕೊಂಡು ಹಿಂತಿರುಗಿ ಹೋಯಿತು. ಅಂದರೆ ಹುಲಿ ಕೆಟ್ಟದ್ದನ್ನು ಯೋಚಿಸಬೇಡ ಎಂದುಕೊಂಡಿತು.
|
ಆ ಪಾಪದ ಯೋಚನೆಯನ್ನು ಹೊದೂಡಿ ಮತ್ತೆ ಶಾನಶಾನುಭೋಗರ ಮುಂಭಾಗಕ್ಕೆ ನೆಗೆಯಿತು. ಕತ್ತೆತ್ತಿದರೆ ಶಾನುಭೋಗರು ಮತ್ತೆ ತಿರುಗಿ
ನಡೆಯುತ್ತಿದ್ದಾರೆ. ಹುಲಿಗೆ ಅವರ ಬೆನ್ನು ಹೊರತು ಮತ್ತೇನೂ ಕಾಣಿಸುತ್ತಿಲ್ಲ. ಈ ಸ್ಪರ್ಧೆ ಐದಾರು ಸಾರಿ ನಡೆಯುವುದರೊಳಗೆ ಇಬ್ಬರ ವೇಗವೂ
ಸಲಸಲಕ್ಕೂ ಹೆಚ್ಚಿತು . ಈಗ ಶಾನುಭೋಗರಿಗೆ ನಡೆಯುವುದು ಸಾದ್ಯವಿರಲಿಲ್ಲ. ನಿಂತ ಕಡೆಯಲ್ಲೇ ಹುಲಿಯ ವೇಗಕ್ಕೆ ಸರಿಯಾಗಿ ಚಾಚೂ ತಪ್ಪದಂತೆ
ತಮ್ಮ ವೇಗವನ್ನು ಹೊಂದಿಸಿಕೊಂಡು ಕುಲಾಲಚಕ್ರದಂತೆ ತಿರುಗುತ್ತಿದ್ದರು. ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಸಿಕೊಳ್ಳುವ ದೊಂಬರಾಟದಲ್ಲಿ
ಶಾನುಭೋಗರ ತಲೆ ಸುತ್ತಲಾರಂಭಿಸಿತು.
ಆ ವಿಪತ್ತಿನ ಸನ್ನಿವೇಶದಲ್ಲಿ ಅವರಿಗೆ ತಮ್ಮ ಖಿರ್ದಿ ಪುಸ್ತಕದ ಯೋಚನೆ ಬಂತು. ಹುಲಿಯ ಪಂಜಾದಿಂದ ಒಂದೇಟು ಬಿದ್ದರೆ ಸಾಕುಮುಂದೆ ಯಾವುದರ ಅರಿವೂ ಉಳಿಯುವುದಿಲ್ಲ. ನೋವೇನಿದ್ದರೂ ಒಂದೇ ಒಂದು ಕ್ಷಣದ ಮಾತು. “ವಮಡಿಯ ಬೇಕಾದರೆ ಮಾಡಿಯೇಮಡಿ(ಸಾಯಿ)ಯುತ್ತೇನೆ,” ಎಂದು ನಿಶ್ಚಯಿಸಿದರು. ಆದರೆ ಮಾಡುವುದಾದರೂ ಏನನ್ನು? ಅವರಲ್ಲಿ ಆಯುಧವಿರಲಿಲ್ಲ. ಶಾನುಭೋಗರ ಬ್ರಹ್ಮಾಸ್ತ್ರ
ಖಿರ್ದಿ ಪುಸ್ತಕ, ಅದನ್ನೇ ಉಪಯೋಗಿಸಬೇಕು . ಅದನ್ನು ಪ್ರಯೋಗಿಸಿದ್ದರಿಂದ ಹುಲಿ ಸಾಯುವುದಂತಿರಲಿ, ಅದರ ಮೇಲೆ ಯಾವ ಪರಿಣಾಮವೂ
ಆಗುವುದಿಲ್ಲ. ಆದರೂ ಕ್ಷಣಕಾಲ ಹುಲಿ ಅಪ್ರತಿಭಾವದರೆ, ಅದರ ಗಮನ ಸ್ವಲ್ಪ ಚಲಿಸಿದರೆ ಅಷ್ಟರಲ್ಲಿ ಓಡಿ ಸಮೀಪದ ಮರದ
ಮೇಲಕ್ಕೇರಬಹುದೆಂಬ ಹುಚ್ಚು ಆಸೆ, ಅಂತೂ ಮನುಷ್ಯ ಪ್ರಯತ್ನದಲ್ಲಿರುವುದನ್ನೆಲ್ಲಾ ಮಾಡಿಬಿಡಬೇಕು , ಅದರ ಮೇಲೆ-ಕರ್ಮಣ್ಯೇವಾಧಿಕಾರಸ್ತೇ
ಮಾ ಫಲೇಷು ಕದಾಚನ! (ಕರ್ಮದಲ್ಲಿ ನಿನ್ನ ಅಧಿಕಾರಕಾರವು ಆದರೆ ಕರ್ಮಫಲದಲ್ಲಿ ಎಂದಿಗೂ ಆಸಕ್ತಿಯಾಗದಿರಲಿ) ಎಂದುಕೊಂಡರು .
ಶಾನುಭೋಗರು ಖಿರ್ದಿ ಪುಸ್ತಕವನ್ನು ಎಸೆದಾಗ ಹುಲಿಯಮುಖಕ್ಕೆ ಬಂದು ಬಡಿಯಿತು. ಹುಲಿಗೆ ಪೆಟ್ಟೇನೂ ಆಗಲಿಲ್ಲ,
ಆಶ್ಚರ್ಯವಾಯಿತು.ಬಳಲಿಕೆಯಿಂದಜಡವಾಗಿದ್ದಶಾನುಭೋಗರಮನಸ್ಸಿಗೆಪರಿಸ್ಥಿತಿಯಅರಿವಾಗಲುಅರೆನಿಮಿಷ ಹಿಡಿಯಿತು. ಆ ಅರೆ ನಿಮಿಷದಲ್ಲಿ ಶಾನುಭೋಗರು ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು” ಎನ್ನುತ್ತಾಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸಿದರು. ಆದರೆದೇವರ ರಕ್ಷಣಾ ವ್ಯವಸ್ಥೆ ಬೇರೆ ಇತ್ತು. ಮರಕ್ಕೆ ಕೆಲವು ಅಡಿದೂರದಲ್ಲಿ ನೆಲದಿಂದ ಮೇಲೆದ್ದುಕೊಂಡಿದ್ದ ಕಲ್ಲನ್ನು ಎಡವಿಶಾನುಭೋಗರು ಬಿದ್ದರು, ಮೊದಲೆ ದಣಿವಾಗಿತ್ತು. ಬಿದ್ದ ಪೆಟ್ಟಿಗೆಪ್ರಜ್ಞೆ ತಪ್ಪಿ ಮೂರ್ಛೆ ಹೋಗಿದ್ದರು.
ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆ
ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ
ಹಿಂದಿರುಗಿ ಬರುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರಿದಾರಿಯಿದೆ ಎನ್ನುವಾಗ ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳು ಕಣಿ
ಹಾಕಿಕೊಂಡು ನಿಂತವು. ಅತ್ತ ಎತ್ತುಗಳ ಘಂಟೆಯ ಶಬ್ದ ಮತ್ತು ರೈತರ ಮಾತು ಕೇಳಿ ನಿರಾಶೆಯಿಂದಲೂ ಕೋಪದಿಂದಲೂ ಗರ್ಜಿಸಿ ಪಲಾಯನ
ಮಾಡಿತು. ಗಾಡಿಯವರು ಸ್ವಲ್ಪ ಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದರು . ಮತ್ತೆ ಗರ್ಜನೆ ಕೇಳಲಿಲ್ಲ. ಅನಂತರ ಅವರು ತಮ್ಮಲಿದ್ದ
ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನರಿಯ ಪಂಜು ಹೊತ್ತಿಸಿಕೊಂಡು ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ ಎಚರಿ್ಚ ಸಿದರು.
ಶಾನುಭೋಗರು ಗಟ್ಟಿಮನಸ್ಸಿನವರು. ಬೇಗ ಚೇತರಿಸಿಕೊಂಡೆದ್ದು ನಡೆದ ಸಂಗತಿಯನ್ನೆಲ್ಲಾ ನೆನಪಿಗೆ ತಂದುಕೊಂಡರು. ಮೈಕೈ ಸ್ವಲ್ಪ ನಡುಗುತ್ತಿತ್ತೇ
ಹೊರತು ಅವರಿಗೆ ಮೈಯಲ್ಲಿ ಗಾಯವೇನೂ ಆಗಿರಲಿಲ್ಲ. ಹುಲಿಯ ¨ಭಯವೇನೋ ಕಳೆದಿತ್ತು, ಖಿರ್ದಿ ಪುಸ್ತಕವನ್ನೂ ಮತ್ತೆ ಪಡೆದು ಭದ್ರಮಾಡಿಕೊಂಡರು. ಆದರೆ ಅವರ ಮನಸ್ಸನ್ನೆಲ್ಲಾ ವಿಸ್ಮಯ ಆವರಿಸಿತ್ತು. ತಾವು ಉಳಿದದ್ದು ಹೇಗೆ? ನಿಸ್ಸಹಾಯರಾಗಿ ಪ್ರಜ್ಞೆಯಿಲ್ಲದೆ ಬಿದ್ದಿದ್ದಾಗಹುಲಿ ತಮ್ಮನ್ನು ಎಳೆದುಕೊಂಡು ಹೋಗಲಿಲ್ಲವೇಕೆ? ಸ್ವಲ್ಪ ಹೊತ್ತು ಯೋಚಿಸಿ ಗಾಡಿಯವರನ್ನು ಕೇಳಿದರು. “ನಾನು ಮುಖ ಮೇಲಾಗಿ ಬಿದ್ದಿದ್ದೆನೆ?”ಎಂದು. ಆಗ ಅವರು ಇಲ್ಲ, ನೀವು ಬೆನ್ನು ಮೇಲಾಗಿ ಬಿದ್ದಿದ್ದಿರಿ ಎಂದರು . ಶಾನುಭೋಗರ ಸಮಸ್ಯೆಗೆ ಉತ್ತರ ದೊರೆತಂತಾಯಿತು.ಕೊನೆಯವರೆಗೂ ಆ ಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡೇ ಬಂದಿತ್ತು! ಗಾಡಿಯವರಿಗೆ ಅಂದಿನ ಕತೆಯನ್ನೆಲ್ಲ ಹೇಳಿದರು.
ಹುಲಿಯಿಂದ ತಪ್ಪಿಸಿಕೊಂಡು ಮನೆಗೆ ಬಂದ ಶಾನುಭೋಗರು
ಶಾನುಭೋಗರು “ಕುಡಿದ ನೀರು ಅಲುಗದ ಹಾಗೆ” ಎನ್ನಲಾಗದಿದ್ದರೂ ಜೀವ ಸಹಿತ ಮನೆ ಸೇರಿಕೊಂಡರು. ರಸದೂಟವನ್ನು ಮಾಡಿದರು .
“ಹುಲಿ ಈಗ ಎಷ್ಟು ಹಸಿದಿರಬೇಕು” ಎಂಬ ಯೋಚನೆ ಬಂದಾಗ ಅವರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು; ಊಟದ ರುಚಿ
ಇಮ್ಮಡಿಯಾಯಿತು. ಅವರಿಗೆ ಅರೆ ನಿಮಿಷದ ಅವಕಾಶವನ್ನು ಒದಗಿಸಿಕೊಟ್ಟು ಪ್ರಾಣವನ್ನು ಕಾಪಾಡಿದ ಆ ಖಿರ್ದಿ ಪುಸ್ತಕ ಎಂದಿನಂತೆ ತನ್ನ
ಜೀರ್ಣವಸ್ತ್ರದ ಹೊದಿಕೆಯಲ್ಲಿ ತೊಲೆಯಲ್ಲಿ ವಿಶ್ರಾಂತಿ ಪಡೆಯುತ್ತಿತ್ತು. ಶಾನಶಾನುಭೋಗರ ದೃಷ್ಟಿಯು ಅನಂತವಾತ್ಸಲ್ಯದಿಂ ದ, ಕೃತಜ್ಞತೆಯಿಂದ, ಆ ಕಡೆಗೆ
ಹೊರಳಿತು.
ಆ ಶಾನುಭೋಗರು ತೂ ಈಗ ಇಲ್ಲ. ಆದರೆ ಖಿರ್ದಿ ಪುಸ್ತಕ ಇಂದಿಗೂ ¨ಭದ್ರವಾಗಿಗೆ ದೇವರ ಮಂದಾಸನದ ಮೇಲೆ ಮಂಡಿಸಿ ಶಾನುಭೋಗರ ಸಂತತಿಯವರಿಂದ ಈಗಲೂ ಪೂಜೆಯನ್ನು ಕೈಗೊಳ್ಳುತ್ತಿದೆ. ಅವರೆಲ್ಲರ ಕೃತಜ್ಞತೆಯೂ ಅದಕ್ಕೆ ಸಂದಿದೆ. ಆದರೆ ನಿಜವಾಗಿ ನೋಡಿದರೆ ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ , ಹುಲಿಯಧರ್ಮಶದ್ದೇಯಿಂದ .ಆ ಗುಣವನ್ನು ಹಾಡಿ ಹೊಗಳುವ ಭಾಗ್ಯ ನನ್ನ ಪಾಲಿಗೆಬಂದಿದೆ.
ಅಭ್ಯಾಸ ಪ್ರಶ್ನೋತ್ತರಗಳು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.
1. ¨ಭಗವದ್ಗೀತೆಯನ್ನು ರಚಿಸಿದವರು ಯಾರು ?
ಭಗವದ್ಗೀತೆಯನ್ನು ರಚಿಸಿದವರುಮಹರ್ಷಿ ವೇದವ್ಯಾಸರು.
2. ಹುಲಿಗೆ ಪರಮಾನಂದವಾಗಲು ಕಾರಣವೇನು ?
ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.
3. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು ?
ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಸಿಕೊಳ್ಳುವ ದೊಂಬರಾಟದಲ್ಲಿ ಶಾನುಭೋಗರ ತಲೆ
ಸುತ್ತಲಾರಂಭಿಸಿತು.
4. ಶಾನುಭೋಗರ ‘ಬ್ರಹ್ಮಸ್ಟ್ರಾ ’ ಯಾವುದು ?
ಶಾನುಭೋಗರ ಬ್ರಹ್ಮಾಸ್ಟ್ರ ಖಿರ್ದಿ ಪುಸ್ತಕ
5. ಹಸಿದು ಮಲಗಿದ್ದ ಹುಲಿಯುವಿಧಿ ಏನೆಂದು ಯೋಚಿಸಿತು ?
ಹಸಿದು ಮಲಗಿದ್ದ ಹುಲಿಯುವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.
ಹೆಚ್ಚುವರಿ ಪ್ರಶ್ನೋತ್ತರಗಳು
6.ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದಾಗಿತ್ತು ?
ಖಿರ್ದಿ ಪುಸ್ತಕ ಶಾನುಭೋಗರ ರಾಜಭಕ್ತಿಯ ಲಾಂಛನವಾಗಿತ್ತು.
7.ಶಾನುಭೋಗರನ್ನು ಮೂರ್ಛೆಯಿಂದ ಎಚರಿ್ಚರಿಸಿದದವರು
ಯಾರು ?
ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ಶಾನುಭೋಗರನ್ನು ಮೂರ್ಛೆಯಿಂದ ಎಚ್ಚರಿಸಿದವರು.
8. ಎ.ಎನ್. ಮೂರ್ತಿರಾಯರ ಪ್ರಕಾರ ಶಾನುಭೋಗರು ಜೀವಸಹಿತ ಉಳಿದಿದ್ದು ಯಾರಿಂದ ?
ಎ.ಎನ್. ಮೂರ್ತಿರಾಯರಪ್ರಕಾರ ಶಾನುಭೋಗರು ಜೀವಸಹಿತ ಉಳಿದಿದ್ದು ಹುಲಿಯ ಧರ್ಮಶ್ರದ್ಧೆಯಿಂದ ಎಂದು ಹೇಳಬಹುದು.
9.ಹುಲಿಯ ಆನಂದಕ್ಕೆ ಕೊರೆತ ಕಂಡದ್ದು ಏಕೆ ?
ಶಾನುಭೋಗರು ಹುಲಿಗೆ ಅಭಿಮುಖರಾಗಿರದೆ ಅದರ ಕಡೆಗೆ ಬೆನ್ನುತಿರುಗಿಸಿ ನಡೆಯುತ್ತಿದ್ದರಿಂದ ಹುಲಿಯ ಆನಂದಕ್ಕೆ ಕೊರೆತ ಕಂಡು ಬಂತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು ?
ಶಾನುಭೋಗರು ತಮ್ಮ ಹಳ್ಳಿಯನ್ನು ತಲಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು . ಅದು ಕಾಡುದಾರಿ, ಆದರೂ
ಬೆಳುದಿಂಗಳ ದಿನ ; ಆ ಮದಲಿಂಗನ ಕಣಿವೆಯಲ್ಲಿ ಬರುವಾಗ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು
ಎಂದು ಯೋಚಿಸಿರು .
2. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು ?
¨ಭರತಖಂಡ ಹುಲಿಗಳ ಧರ್ಮಶ್ರದ್ದೆಯನ್ನು ಅನುಸರಿಸಿ ಬೇಟೆಯಾಡುತ್ತವೆ. ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ,ಮಹರ್ಷಿ ವೇದವ್ಯಾಸರಿಂದ ರಚಿತವಾದ ¨ಭಗದ್ಗೀತೆಯಂಥ ಗ್ರಂಥ ಉದ್ಭವಿಸಿತೋ, ಇಂತಹ ಈ ¨ಭರತ ¨ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ. ಯಾರನ್ನೇ ಆಗಲಿ, ಭರತಖಂಡದ ಹುಲಿಗಲು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ
3. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.
ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದದ್ದು ಇಷ್ಟು ; ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ
ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗಿ ಬರುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರಿದಾರಿಯಿದೆ ಎನ್ನುವಾಗ
ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳು ಕಣಿ ಹಾಕಿಕೊಂಡು ನಿಂತವು. ಅತ್ತ ಎತ್ತುಗಳ ಘಂಟೆಯ ಶಬ್ದ ಮತ್ತು ರೈತರ ಮಾತು ಕೇಳಿ
ನಿರಾಶೆಯಿಂದಲೂ ಕೋಪದಿಂದಲೂ ಗರ್ಜಿಸಿ ಪಲಾಯನ ಮಾಡಿತು. ಗಾಡಿಯವರು ಸ್ವಲ್ಪ ಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದಗ .
ಮತ್ತೆ ಗರ್ಜನೆ ಕೇಳಲಿಲ್ಲ. ಅನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ
ತೆಂಗಿನಗರಿಯ ಪಂಜು ಹೊತ್ತಿಸಿಕೊಂಡು ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ ಎಚರಿ್ಚ ಸಿದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.
ಹುಲಿ ಎಂದರೆ ಕ್ರೂರಪ್ರಾಣಿ ಕೊಂದು ತಿನ್ನುವುದೊಂದೆ ಅದರ ಸ್ವಭಾವ ಎಂದು ಭಾವಿಸುವವರು ಸಾಕಷ್ಟು ಜನರಿದ್ದಾರೆ. ಆದರೆ ಹುಲಿ ಆಹಾರಕ್ಕಾಗಿಬೇಟೆಯಾಡಿ ಪ್ರಾಣಿಗಳನ್ನು ಕೊಂದು ತಿನ್ನುವುದೇನೋ ಉಂಟು. ಆದರೆ ನಿಷ್ಪಕ್ಷಪಾತವಾದ ದೃಷ್ಟಿಯಿಂದ ನೋಡಿದರೆ ಅದರಲ್ಲಿ ತಪ್ಪೇನು ಇಲ್ಲ.ಯಾಕೆಂದರೆ ಅವು ಮೂಲತಃ ಮಾಂಸಹಾರಿಗಳು. ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾಂಸವನ್ನು ತಿನ್ನಬಹುದಾದರೆಮಾಂಸಹಾರಿಯಾದ ಹುಲಿಯಲ್ಲಿ ಅದೊಂದು ದೊಡ್ಡ ಅಪರಾಧವೇನಲ್ಲ. ಅದು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದರಲ್ಲೇನೂ ತಪ್ಪಿಲ್ಲ. ಆದರೆಹಾಗೆ ಕೊಲ್ಲುವಾಗ ಯಾವುದಾದರೊಂದು ಧರ್ಮವನ್ನು ಅನುಸರಿಸಿ ಕೊಲ್ಲುತ್ತದೆಯೇ ಅಥವಾ ಧರ್ಮಾಧರ್ಮಗಳ ಲೆಕ್ಕವನ್ನೇ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಇಲ್ಲಿ ಮುಖ್ಯ ಪ್ರಶ್ನೆ . ಹುಲಿಗೆ ಧರ್ಮವೇನು ಬಂತು ಎನ್ನಬಹುದು. ಇತರ ದೇಶಗಳಲ್ಲಿರುವ ಹುಲಿಗಳ ವಿಷಯ ಹೇಗೋ ನನಗೆ ತಿಳಿಯದು ಆದರೆ ¨ಭರತಖಂಡದ ಹುಲಿಗಳ ಧರ್ಮಶ್ರದ್ದೆಯನ್ನು ಅನುಸರಿಸಿ ಬೇಟೆಯಾಡುತ್ತವೆ. ಯಾವನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ, ಮಹರ್ಷಿ ವೇದವ್ಯಾಸರಿಂದ ರಚಿತವಾದ ¨ಭಗದ್ಗೀತೆಯಂಥ ಗ್ರಂಥ ಉದ್ಭವಿಸಿತೋ, ಇಂತಹ ಈ ¨ಭರತ ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ. ಯಾರನ್ನೇ ಆಗಲಿ, ¨ಭರತ ಖಂಡದ ಹುಲಿಗಳು ಹಿಂದಿ ನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ. ಆದ್ದರಿಂದಲೇ ಹುಲಿಯು ಶಾನುಭೋಗರನ್ನು ಹಿಂದಿನಿಂದ ಹಾರಿ ಕೊಲ್ಲಲಿಲ್ಲ ಎಂದು ಮೂರ್ತಿರಾಯರು ಹುಲಿ ಬೇಟಿಯಾಡುವ ಬಗೆಯನ್ನು ವಿವರಿಸಿದ್ದಾರೆ.
2. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ.
ಹುಲಿಯ ಗಮನವನ್ನು ಬೇರೆಡೆಗೆ ಸೆಳೆದ ಅರೆ ನಿಮಿಷದ ಅವಕಾಶವನ್ನು ಒದಗಿಸಿಕೊಟ್ಟು ನನ್ನ ಪ್ರಾಣವನ್ನು ರಕ್ಷಿಸಿದ್ದು ಖಿರ್ದಿಪುಸ್ತವೆಂದು
ತಿಳಿದು ಅದಕ್ಕೆ ಅನಂತವಾತ್ಸಲ್ಯದಿಂದ , ಕೃತಜ್ಞತೆಯನ್ನು ಸಲ್ಲಿಸಿದ ಶಾನುಭೋಗರ ಮನಸ್ಸನ್ನು ಗಮಿಸಿದರೆ ಖಿರ್ದಿಪುಸ್ತಕವೇ ನನ್ನನ್ನು ರಕ್ಷಿಸಿತುಎಂದು ತಿಳಿದಿದ್ದಾರೆ. ಆದರೆ ನಿಜವಾಗಿ ನೋಡಿದರೆ ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ , ಹುಲಿಯಧರ್ಮ ಶ್ರದ್ದೆಯಿಂದ ಎಂದುಹೇಳಬಹುದು. ಏಕೆಂದರೆ ಅವರ ದುಂಡುದುಂಡಾದ ಶರೀರವನ್ನು ನೋಡಿದ ಹುಲಿ ಅವರು ಬೆನ್ನು ತಿರುಗಿಸಿ ನಡೆಯುತ್ತಿದ್ದರೂ ಮೇಲೆ ಬಿದ್ದು
ಕೊಲ್ಲಬಹುದಾಗಿತ್ತು. ಶಾನುಭೋರು ಎಚ್ಚರ ತಪ್ಪಿ ಕೆಳೆಗೆ ಬಿದ್ದಾಗ ಅವಅವರನ್ನು ಎಳೆದುಕೊಂಡು ಹೋಗಿ ತಿನ್ನಬಹುದಿತ್ತು. ಆದರೆ ಅದು ಹಾಗೆ
ಮಾಡಲಿಲ್ಲ. ಏಕೆಂದರೆ ¨ಭರತ ಖಂಡದ ಹುಲಿಗಳು ಶತ್ರುವನ್ನಾದರೂ ಸರಿ ಬೆನ್ನ ಹಿಂದಿನಿಂದ ಹಾರಿ ಕೊಲ್ಲವುದು ಧರ್ಮವಲ್ಲ. ಶಾನುಭೋಗರು
ಬೆನ್ನ ಮೇಲೆ ಮಾಡಿ ಬಿದ್ದಿದ್ದರಿಂದ ಹುಲಿಯು ಅವರನ್ನು ತಿನ್ನದೆ ಬಿಟ್ಟಿತು. ಅದು ಕೊನೆಯವರೆಗೂ
ಅನುಸರಿಸಿತು.ಆದ್ದರಿಂದ ಶಾನುಭೊಗರನ್ನು ರಕ್ಷಿಸಿದ್ದು ಹುಲಿಯ ಧರ್ಮವೇ ಎಂದು ಸಮರ್ಥವಾಗಿ ಹೇಳಬಹುದು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1.“ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.”.
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಹುಲಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕೆಂದು ಪ್ರಯತ್ನಿಸಿ ವಿಫಲವಾದಾಗ ಬೆನ್ನ ಹಿಂದಿನಿಂದ ಬಿದ್ದೇ ಬಿಡಲೆ ಎಂದು ಅದರ
ಮನಸಿನಲ್ಲಿ ಗೊಂದಲ. ಆದರೆ ಆ ಗೊಂದಲ ಕ್ಷಣಕಾಲಕ್ಕಿಂತಲೂ ಹೆಚ್ಚಾಗಿ ನಿಲ್ಲಲಿಲ್ಲ. ಅದು ಸದ್ವಂಶದಲ್ಲಿ ಜನಿಸಿದ ಹುಲಿ. “ಖಂಡವಿದೆಕೋ,
ಮಾAಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ” ಎಂದು ಆ ಪುಣ್ಯಕೋಟಿ ಹಸು ಆಹ್ವಾನ ಕೊಟ್ಟಾಗ ತನ್ನ ಅಜ್ಜ ಬಾಯಿ ಚಪ್ಪರಿಸಿಕೊಂಡು
ಹಸುವನ್ನು ತಿನ್ನಬಹುದಾಗಿತ್ತು. ಆದರೂ ಆ ಹುಲಿರಾಯ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನದೆ ಪ್ರಾಣಬಿಟ್ಟಿತು. ಅಂಥ ಹುಲಿಯ
ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಕೈ ಹಾಕುವುದೆ? ಎಂದು ಹುಲಿ ಯೋಚಿಸಿದ ಸಂದರ್ಭವಾಗಿದೆ.
ಸ್ವಾರಸ್ಯ : ಪುಣ್ಯಕೋಟಿ ಕಥೆಯಲ್ಲಿನ ವ್ಯಾಘ್ರನ ಆದರ್ಶ ತನಗೂ ಮಾದರಿಯಾದದ್ದು ಎಂಬ ಈ ಹುಲಿಯ ಚಿಂತನೆ
ಧರ್ಮಶ್ರದ್ದೆಯನ್ನು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತದೆ.
2.“ಸ್ವಧರ್ಮೇ ನಿಧನಂ ಶ್ರೇಯಃ ”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ :ಹಹುಲಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕೆಂದು ಪ್ರಯತ್ನಿಸಿ ವಿಫಲವಾದಾಗ ಬೆನ್ನ ಹಿಂದಿನಿಂದ ಬಿದ್ದೇ ಬಿಡಲೆ ಎಂದು ಅದರ
ಮನಸ್ಸಿನಲ್ಲಿ ಬಂದಾಗ ಪುಣ್ಯಕೋಟಿ ಕಥೆಯ ತನ್ನ ಅಜ್ಜನ ಆದರ್ಶ ನೆನಪಿಸಿಕೊಂಡು, ಅಂಥ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಹಾಕುವುದೆ? ಛೇ ಇಲ್ಲ ! ಎಂದುಕೊಂಡಾಗ ಹುಲಿಗೆ ¨ಭಗವದ್ಗೀತೆಯ ಸ್ವಧರ್ಮೇ ನಿಧನಂ ಶ್ರೇಯಃ ಎಂಬ ವಾಕ್ಯ ನೆನಪಿಗೆ ಬಂದ ಸಂದರ್ಭವಾಗಿದೆ.
ಸ್ವಾರಸ್ಯ : ಹುಲಿ ತನ್ನ ಧರ್ಮಶ್ರದ್ಧೆಯನ್ನು ಬಿಡಬಾರದು. ಧರ್ಮಮಾರ್ಗದಿಂದ ನೆಡೇಯಬೇಕು , ಸ್ವಧರ್ಮವನ್ನು ಅಅನುಸರಿಸಿ ನಿಧನ ಹೊಂದುವುದೇಶ್ರೇಯಸ್ಕರ ಎಂದು ಚಿಂತಿಸುವುದು ಸ್ವಾರಸ್ಯಪೂರ್ಣವಾಗಿದೆ.
3.“ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಸಂದರ್ಭ : ಶಾನುಭೋಗರು ಖಿರ್ದಿ ಪುಸ್ತಕವನ್ನು ಹುಲಿಯ ಮುಖಕ್ಕೆ ಎಸೆದಾಗ ಅದರ ಮುಖಕ್ಕೆ ಬಂದು ಬಡಿಯಿತು. ಆದರೆ ಹುಲಿಗೆ ಪೆಟ್ಟೇನೂ
ಆಗಲಿಲ್ಲ ಎಂಬುದು ಶಾನುಭೋಗರ ಮನಸ್ಸಿಗೆ ಅರಿವಾಗಲು ಅರೆನಿಮಿಷ ಹಿಡಿಯಿತು. ಆ ಅರೆ ನಿಮಿಷದಲ್ಲಿ ಶಾನುಭೋಗರು “ದೇವರೆ, ಮರ
ಹತ್ತುವಷ್ಟು ಅವಕಾಶ ಕರುಣಿಸು” ಎನ್ನುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸಿದ ಸಂದರ್ಭವಾಗಿದೆ .
ಸ್ವಾರಸ್ಯ : ಶಾನುಭೋಗರು ಹುಲಿಯಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡು ಎಂದು ದೇವರನ್ನು ಪ್ರಾರ್ಥಿಸುವುದು ಬಹು
ಸ್ವಾರಸ್ಯಪೂರ್ಣವಾಗಿದೆ
4.“ನಾನು ಮುಖ ಮೇಲಾಗಿ ಬಿದ್ದಿದ್ದೆನೆ?”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ಮಾತನ್ನು ಶಾನುಭೋಗರು ಗಾಡಿಯವರಿಗೆ ಕೇಳಿದರು . ಶಾನುಭೋಗರು ಪ್ರಜ್ಞೆತಪ್ಪಿ ಬಿದ್ದಿದ್ದಾಗ ಅದೇ ದಾರಿಯಲ್ಲಿ ಗಾಡಿಯಲ್ಲಿ
ಹೋಗುತ್ತಿದ್ದ ರೈತರು ಅವರ ಮುಖದ ಮೇಲೆ ನೀರೆರಚಿ ಎಚ್ಚರಿಸಿದ ಸಂದರ್ಭದಲ್ಲಿ ಅವರ ಮನಸ್ಸನ್ನೆಲ್ಲಾ ವಿಸ್ಮಯ ಆವರಿಸಿತ್ತು. ತಾವು ಉಳಿದದ್ದು
ಹೇಗೆ? ನಿಸ್ಸಹಾಯರಾಗಿ ಪ್ರಜ್ಞೆಯಿಲ್ಲದೆ ಬಿದ್ದಿದ್ದಾಗ ಹುಲಿ ತಮ್ಮನ್ನು ಎಳೆದುಕೊಂಡು ಹೋಗಲಿಲ್ಲವೇಕೆ? ಎಂದು ಸ್ವಲ್ಪ ಹೊತ್ತು ಯೋಚಿಸಿ
ಗಾಡಿಯವರನ್ನು “ನಾನನಾನು ಮುಖ ಮೇಲಾಗಿ ಬಿದ್ದಿದ್ದೆನೆ?” ಎಂದು ಕೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಹುಲಿಯು ಏಕೆ ಎಳೆದುಕೊಂಡು ಹೋಗಲಿಲ್ಲ ಎಂಬ ಸಮಸ್ಯೆಗೆ ಶಾನುಭೋಗರು ಕೊನೆಯವರೆಗೂ
ಆಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡೇ ಬಂದಿದೆ ಎಂಬ ಉತ್ತರ ಕಂಡುಕೊಳ್ಳುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
5. “ಹುಲಿ ಈಗ ಎಷ್ಟು ಹಸಿದಿರಬೇಕು.”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಶಾನುಭೋಗರು ಹುಲಿಯಿಂದ ತಪ್ಪಿಸಿಕೊಂಡು ಜೀವ ಸಹಿತ ಮನೆ ಸೇರಿಕೊಂಡು ರಸದೊಟವನ್ನು ಮಾಡುವ ಸಂದರ್ಭದಲ್ಲಿ “ಹುಲಿ ಈಗ ಎಷ್ಟು ಹಸಿದಿರಬೇಕು” ಎಂಬ ಯೋಚನೆ ಮೂಡಿ ಅವರ ವದನಾರವಿಂದಲ್ಲಿ ಮುಗುಳುನಗೆ ಮೂಡಿದ ಸಂದರ್ಭವಾಗಿದೆ.
ಸ್ವಾರಸ್ಯ : ನಾನು ಹುಲಿಯಿಂದ ತಪ್ಪಿಸಿಕೊಂಡು ಬಂದು ರಸದೂಟವನ್ನು ಮಾಡುತ್ತಿದ್ದೇನೆ ಆದರೆ ನನ್ನನ್ನು ಬಿಟ್ಟ ಆ ಹುಲಿ ಹಸಿವಿನಿಂದ
ಬಳಲುತ್ತಿರಬಹುದು ಎಂದು ಶಾನುಭೋಗರು ನೆನೆಯುವುದು ಸ್ವಾರಸ್ಯಪೂರ್ಣವಾಗಿದೆ.
ಭಾಷಾ ಚಟುವಟಿಕೆ
ಉ) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
1. ಮಂತ್ರಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು.
2. ಖಿರ್ದಿ ಪುಸ್ತಕ ಶಾನುಭೋಗರ ಬ್ರಹ್ಮಸ್ತ್ರ .
3. ನೆಲದಿಂದ ಮೇಲೆದ್ದುಕೊಂಡಿದ್ದ ಕಲ್ಲನ್ನು ಎಡವಿ ಶಾನುಭೋಗರು ಬಿದ್ದರು.
4. ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು.
5. ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ.
10th class Vyagra Geethe Kannada Lesson Notes question answer pdf lesson summary in Kannada deevige
10ನೇ ತರಗತಿ ವ್ಯಾಘ್ರಗೀತೆ ಪ್ರಶ್ನೆ ಉತ್ತರ ನೋಟ್ಸ್ 10th Class Vyagra Geethe Kannada Lesson Notes Question Answer Summary text book pdf
SSLC 10th Kannada Vyagra Geethe Kannada Lesson Notes Kannada Deevige 10th Notes vyagra geethe Pata Notes Question answer text book pdf download
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ ಎಲ್ಲಿ ಡೌನ್ಲೋಡ್ ಮಾಡಬಹುದು
ಇತರ ವಿಷಯಗಳು
ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ