Kannada 9th Notes | ರಂಜಾನ್ ಸುರಕುಂಬಾ ಮತ್ತು ಸಂಭ್ರಮದ ಜೋಕಾಲಿ
ಪೂರಕ ಪಠ್ಯ ಅದ್ಯಯನ
2. ರಂಜಾನ್ ಸುರಕುಂಬಾ ಮತ್ತು ಸಂಭ್ರಮದ ಜೋಕಾಲಿ
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ .
1. ರಂಜಾನ್ ಹಬ್ಬದ ಸಡಗರವು ಯಾವಾಗ ಶುರುವಾಗುತ್ತದೆ ?
ಉತ್ತರ : ಚಾಂದ್ ( ಚಂದ್ರ ) ಮುಖದೋರಿದ ಮೇಲೆ ಹಬ್ಬದ ಸಡಗರಗಳು ಶುರುವಾಗುತ್ತವೆ .
2. ರಂಜಾನ್ ಹಬ್ಬದ ಸಮಯದಲ್ಲಿ ತಯಾರಿಸುವ ಖಾದ್ಯಗಳಾವುವು ?
ಉತ್ತರ : ರಂಜಾನ್ ಹಬ್ಬದ ಖಾದ್ಯಗಳು , ರುಚಿಯಾದ ಗುಲ್‌ಗುಲೆ ಮತ್ತು ರಹಮ್ , ಹಾಲಿನಿಂದ ತಯಾರಿಸಿದ ಸುರಕುಂಬಾ . ಕೆ . ನೀಲಾ
3. ಮುಸ್ಲಿಂಯೇತರ ಗೆಳೆತಿಯರು ಮುಸ್ಲಿಂ ಸೋದರಿಯರಿಗಾಗಿ ಯಾವ ಕೂಟವನ್ನು ಏರ್ಪಡಿಸುತ್ತಿದ್ದರು ?
ಉತ್ತರ : ಮುಸ್ಲಿಂಯೇತರ ಗೆಳೆತಿಯರು ಮುಸ್ಲಿಂ ಸೋದರಿಯರಿಗಾಗಿ ‘ ಇಪ್ತಿಯಾರ್ ‘ ಕೂಟವನ್ನು ಡಿಸುತ್ತಿದ್ದರು
4. ಬಸವಕೇಂದ್ರದವರು ನಾಗರ ಪಂಚಮಿಯ ದಿನ ಮೈಕಿನಲ್ಲಿ ಏನೆಂದು ಹೇಳಿ ಜಾಗೃತಿ ಮೂಡಿಸುತ್ತಿದ್ದರು ?
ಉತ್ತರ : ಬಸವಕೇಂದ್ರದವರು ನಾಗರಪಂಚಮಿಯ ದಿನ ಹುತ್ತದ ಹತ್ತಿರ ದೊಡ್ಡ ಬಗೋಣಿಯಿಟ್ಟುಕೊಂಡು ‘ ಹುತ್ತಕ್ಕೆ ಸುರಿದ ಹಾಲು ಹಾವು ಕುಡಿಯುವುದಿಲ್ಲ ‘ ಎಂದು ಮೈಕಿನಲ್ಲಿ ಹೇಳುತ್ತಾ ಜಾಗೃತಿ ಮೂಡಿಸುತ್ತಿದ್ದರು .
5. ಹೆಂಗಸರು ಗೋಲಾಗಿ ನಿಂತು ಹಾಡುತ್ತಿದ್ದ ಭುಲಾಯಿ ಹಾಡು ಯಾವುದು ?
ಉತ್ತರ : ಹೈದರಾಬಾದ್ ಕರ್ನಾಟಕದ ಹೆಣ್ಣುಮಕ್ಕಳು ಗಂಡನಮನೆಯ ನಾಲ್ಕು ಗೋಡೆಗಳನಡುವೆ ಎಷ್ಟೆಲ್ಲಾ ನಿರ್ಬಂಧಗಳಲ್ಲಿ ಬದುಕು ಸೆಣಸುತ್ತ ಜಿಂದಗಾಣಿಯನ್ನು ಮುನ್ನಡೆಸುತ್ತಿದ್ದರು . ಅವರ ಸಂಕಟ – ನೋವುಗಳು , ಸುಖ – ಸಂತೋಷಗಳು , ಭುಲಾಯಿಗಳಲ್ಲಿ ಹಾಡುಗಳಾಗಿ ಬರುತ್ತಿದ್ದವು .
ಎಲ್ಲರೂ ಕೈಕೈ ಹಿಡಿದುಕೊಂಡು ಗೋಲಾಗಿ ನಿಂತರು , ಹಾಡು ಮೊದಲುಗೊಂಡಿತು .
ನಾಗರಪಂಚಮಿ ನಾಡಿನ್ಯಾಗ
ನಾರಾರ ಹಬ್ಬ ಏನು ಹುಬ್ಬ ಸುವ್ವನಾರಿ||
ಹಂಚಿಕೇನು ಮಾಡಲಿ ತಂಗಿ
ಎಚ್ಚ ತರಲಾಕ । ಈಗ
ಮುಂಚಿನಂಗ ದಿನಮಾನಿಲ್ಲ
ಎಲ್ಲಾ ಮಾಡೋದಕ ಸುವ್ವನಾರಿ||
9th kannada | ರಂಜಾನ್ ಸುರಕುಂಬಾ ಮತ್ತು ಸಂಭ್ರಮದ ಜೋಕಾಲಿ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
9ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ ಎಲ್ಲಿ ಡೌನ್ಲೋಡ್ ಮಾಡಬಹುದು
ಇತರ ವಿಷಯಗಳು
ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ