Kannada Poem
Contents
hide
ನಡೆ ಮುಂದೆ ನಡೆ ಮುಂದೆ
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !
ಭಾರತ ಖಂಡದ ಹಿತವೇ
ನನ್ನ ಹಿತ ಎಂದು
ಭಾರತ ಮಾತೆಯ ಮತವೇ
ನನ್ನ ಮತ ಎಂದು
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ಕಿ ನನಗೆಂದು
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ – ಕುವೆಂಪು