Swami Vivekananda Chintanegalu in Kannada notes
10th Standard Swamy Vivekanandara Chinthanegalu Notes 10ನೇ ತರಗತಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಕನ್ನಡ ನೋಟ್ಸ್ ಪ್ರಶ್ನೆ ಉತ್ತರ question answer text book pdf download Kannada deevige
10ನೇ ತರಗತಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಕನ್ನಡ ನೋಟ್ಸ್
ಪಠ್ಯಪೂರಕ ಅಧ್ಯಯನ – ೧ ಸ್ವಾಮಿ ವಿವೇಕಾನಂದರ ಚಿಂತನೆಗಳು
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
swami vivekananda chintanegalu in kannada question answer
೧. ವಿವೇಕಾನಂದರೆಂದರೆ ಯಾವುದರ ರೂಪಕವಾಗಿದೆ ?
ಉತ್ತರ : ವಿವೇಕಾನಂದರೆಂದರೆ ಸಾಮಾಜಿಕ ಸಂಕಟ , ಸಿಟ್ಟು , ಸ್ಫೋಟ , ಸ್ಪಷ್ಟತೆಗಳ ರೂಪಕವಾಗಿದೆ .
೨. ವಿವೇಕಾನಂದರು ಮೊದಲನೆ ಆದ್ಯತೆ ಯಾವುದಕ್ಕೆ ನೀಡಬೇಕೆಂದಿದ್ದಾರೆ ?
ಉತ್ತರ : ವಿವೇಕಾನಂದರು ದೈಹಿಕ ಹಸಿವನ್ನು ಇಂಗಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕೆಂದಿದ್ದಾರೆ .
೩. ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ ?
ಉತ್ತರ : ವಿವೇಕಾನಂದರು ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿದರು .
೪. ಜಾತಿ ವ್ಯವಸ್ಥೆಯ ಕೌರ್ಯಕ್ಕೆ ತುತ್ತಾಗಿರುವವರು ಯಾರು ?
ಉತ್ತರ : ಶೂದ್ರರು , ಅಸ್ಪೃಶ್ಯರು ಜಾತಿ ವ್ಯವಸ್ಥೆಯ ಕೌರ್ಯಕ್ಕೆ ತುತ್ತಾಗಿದ್ದಾರೆ .
೫. ಸರ್ವಧರ್ಮ ಸಮ್ಮೇಳನವು ಎಲ್ಲಿ ನಡೆಯಿತು ?
ಉತ್ತರ : ಸರ್ವಧರ್ಮ ಸಮ್ಮೇಳನವು ಚಿಕಾಗೋದಲ್ಲಿ ನಡೆಯಿತು
೬. ವಿವೇಕಾನಂದರನ್ನು ‘ ಮಾನವತಾಮಿತ್ರ ‘ ರೆಂದು ಕರೆದವರಾರು ?
ಉತ್ತರ : ಕುವೆಂಪು ಅವರು ವಿವೇಕಾನಂದರನ್ನು ‘ ಮಾನವತಾಮಿತ್ರ ‘ ಎಂದು ಕರೆದರು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
೧. ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು ?
ಉತ್ತರ : ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರು – ಜಾತಿ ಎಂಬುದು ಸಮಾಜದ ಒಂದು ಅಂತರಿಕ
ಭಾಗವಾಗಿದೆ . ಹಿಂದೆ ಅದು ವಿಕಾಸವಾಗುತ್ತಿತ್ತು . ಈಗ ಅದು ಘನೀಭೂತವಾಗಿದೆ . ಅದರ ದುರ್ಗಂಧದಿಂದ
ಭಾರತದ ವಾತಾವರಣವೆಲ್ಲ ತುಂಬಿದೆ ” ಎಂದು ಅಭಿಪ್ರಾಯಪಟ್ಟಿದ್ದಾರೆ .
೨. ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು , ಏಕೆ ?
ಉತ್ತರ : ಕೋಮುವಾದವು ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಠವೆಂದೂ ಅದೇ ಅಂತಿಮವೆಂದೂ
ನಂಬುತ್ತ ನಂಬಿಸುತ್ತ , ಪರಮಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ . ಆದ್ದರಿಂದ ವಿವೇಕಾನಂದರು ಕೋಮುವಾದದ
ಕಟ್ಟಾ ವಿರೋಧಿಯಾಗಿದ್ದರು .
೩. ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದ್ದೇನು ?
ಉತ್ತರ : ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಅವರು “ ಸ್ವಮತಾಭಿಮಾನ , ಅನ್ಯ ಮತದ್ವೇಷ
ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ .
ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು ” ಎಂದು ಹೇಳಿದರು .
10ನೇ ತರಗತಿ ಸ್ವಾಮಿ ವಿವೇಕಾನಂದರ ಚಿಂತನೆಗಳು ನೋಟ್ಸ್ ಪ್ರಶ್ನೆ ಉತ್ತರ 10ನೇ ತರಗತಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಪ್ರಶ್ನೆ ಉತ್ತರ
10th Kannada Deevige 10th Notes Lesson question answer pdf textbook swami vivekananda chintanegalu summary in Kannada deevige question answer text book pdf download 10th standard kannada Swamy Vivekanandara Chinthanegalu Notes
ಆತ್ಮೀಯರೇ..
ನಮ್ಮ ಕನ್ನಡ ದೀವಿಗೆ.ಇನ್ ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿಯಿಂದ 1೦ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ ಎಲ್ಲಿ ಡೌನ್ಲೋಡ್ ಮಾಡಬಹುದು
ಇತರ ವಿಷಯಗಳು
ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ
Super👌👌