rtgh

10th Kannada Mruga Mathu Sundari Notes | 10ನೇ ತರಗತಿ ಮೃಗ ಮತ್ತು ಸುಂದರಿ  ಕನ್ನಡ ನೋಟ್ಸ್ 

10th Kannada Question Answer Mruga Mathu Sundari Notes

10th Standard Mruga Mathu Sundari Notes 10ನೇ ತರಗತಿ ಮೃಗ ಮತ್ತು ಸುಂದರಿ ಕನ್ನಡ ನೋಟ್ಸ್, ಪ್ರಶ್ನೆ ಉತ್ತರ question answer, text book pdf download Kannada deevige

ಪಠ್ಯಪೂರಕ ಅಧ್ಯಯನ -೪ ಮೃಗ ಮತ್ತು ಸುಂದರಿ

10ನೇ ತರಗತಿ ಮೃಗ ಮತ್ತು ಸುಂದರಿ  ಕನ್ನಡ ನೋಟ್ಸ್ 

೧. ಬಡತನ ಸುಂದರಿ ಹಾಗೂ ಅವಳ ತಂದೆಗೆ ಕಷ್ಟವಾಗಲಿಲ್ಲ ಏಕೆ ? 

ಉತ್ತರ : ಬಡತನ ಸುಂದರಿ ಹಾಗೂ ಅವಳ ತಂದೆಗೆ ಕಷ್ಟವಾಗಲಿಲ್ಲ . ಏಕೆಂದರೆ ಅವರ ಜೀವನ ಸರಳವಾಗಿತ್ತು . 

೨. ಮೃಗದ ಬಾಹ್ಯ ಆಕಾರ ಹೇಗಿತ್ತು ? 

ಉತ್ತರ : ಮೃಗದ ಬಾಹ್ಯ ಆಕಾರ ಭೀಕರವಾಗಿತ್ತು . ಕೋರೆ ಹಲ್ಲು , ಹಂದಿಯ ದೇಹ , ತೋಳದ ಚಲನೆಯನ್ನು ಪಡೆದಿತ್ತು . 

೩. ಯಾರು ಶಾಪಗೊಂಡು ಮೃಗವಾಗಿದ್ದರು ? 

ಉತ್ತರ : ರಾಜಕುಮಾರನು ಶಾಪಗೊಂಡು ಮೃಗವಾಗಿದ್ದನು . 

೪. ಕನ್ಯ ಕೊಟ್ಟ ಶಾಪವೇನು ? 

ಉತ್ತರ : ನಿನ್ನನ್ನು ಕನೈಯೊಬ್ಬಳು ಮನಸಾರೆ ಒಪ್ಪಿ ಪ್ರೀತಿಸುವವರೆಗೆ ಮೃಗವಾಗಿಯೇ ಇರು ‘ ಎಂದು ಕನ್ಯ ಶಾಪ ಹಾಕಿದ್ದಳು . 

೫. ಶಾಪ ವಿಮೋಚನೆಯ ಫಲವೇನು ? 

ಉತ್ತರ : ಶಾಪ ವಿಮೋಚನೆಯ ನಂತರ ಮೃಗದ ಆಕಾರವೇ ಬದಲಾಯಿತು . ಅದು ಸುಂದರ ರಾಜಕುಮಾರನಾಗಿ ಬದಲಾಯಿತು .

 ೬. ಮೃಗದ ಬಗೆಗೆ ಸುಂದರಿಯ ಮನ ಕರಗುತ್ತಿತ್ತು ಏಕೆ ? 

ಉತ್ತರ : ಮೃಗದ ಒರಟು ಮಾತು . ತಿಕ್ಕಲು ನಡವಳಿಕೆ ಮನಸ್ಸಿನಲ್ಲೇ ನಗು ತರುತ್ತಿದ್ದವು . ಹಾಗೂ ಆತನ ಕಾಳಜಿಯನ್ನು ನೆನೆದು ಮನ ಕರಗುತ್ತಿತ್ತು .

ಹೆಚ್ಚುವರಿ ಪ್ರಶ್ನೆಗಳು 

೭. ವರ್ತಕನ ಮೂವರು ಹೆಣ್ಣು ಮಕ್ಕಳ ಸ್ವಭಾವ ಹೇಗಿತ್ತು ? 

ಉತ್ತರ : ವರ್ತಕನ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯರಾದ ಇಬ್ಬರು ಬಿಂಕ ಬಡಿವಾರದ ಹುಡುಗಿಯರು . ಫ್ಯಾಷನ್ . ಪಾರ್ಟಿ , ಗೆಳೆಯರೆಂದರೆ ಪಂಚಪ್ರಾಣ . ಆದರೆ ಮೂರನೆಯ ಹುಡುಗಿ ತಂದೆಯಷ್ಟೇ ಮೃದು ಸ್ವಭಾವದವಳಾಗಿದ್ದಳು . ಆಕೆಗೆ ತಂದೆಯ ನೆಮ್ಮದಿ ಮುಖ್ಯ . ರೂಪವತಿಯಾಗಿದ್ದ ಆಕೆಯನ್ನು ಎಲ್ಲರೂ ಸುಂದು ಎಂದೇ ಕರೆಯುತ್ತಿದ್ದರು . 

೮. ವರ್ತಕನು ಬಡವನಾಗಲು ಕಾರಣವೇನು ?

 ವರ್ತಕನಿಗೆ ಹಣಕಾಸಿನ ತೊಂದರೆ ಉಂಟಾಗಲು ಕಾರಣವೇನು ?

 ವರ್ತಕನು ಹಳ್ಳಿಗೆ ವಲಸೆ ಹೋಗಲು ಕಾರಣವೇನು ? 

ಉತ್ತರ : ವರ್ತಕನ ವ್ಯಾಪಾರ ಕುಸಿದು ಬಿತ್ತು . ಬರಬೇಕಾಗಿದ್ದ ಹಣ ಬರಲಿಲ್ಲ . ಸರಕುಗಳನ್ನು ತರಲು ದೂರದ ದೇಶಕ್ಕೆ ಪ್ರಯಾಣಿಸಿದ್ದ ಹಡಗುಗಳು ಹಿಂದಿರುಗಲಿಲ್ಲ . ಅವನ ಸಾಲಗಳು ಅವನನ್ನು ಬಾಧಿಸತೊಡಗಿದವು . ಇದ್ದಬದ್ದ ಸ್ಥಿರಾಸ್ತಿ , ಚರಾಸ್ತಿಯನ್ನೆಲ್ಲ ಮಾರಿ ಸಾಲತೀರಿಸಿದನು . ಆದ್ದರಿಂದ ಬಡವನಾದ ಅವನು ತನ್ನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಹಳ್ಳಿಯಲ್ಲಿ ನೆಲೆಸಿದನು .

 ೯. ವರ್ತಕನು ಹಡಗನ್ನು ಸ್ವಾಗತಿಸಲು ನಗರಕ್ಕೆ ಹೊರಟಾಗ ಮೂವರು ಹೆಣ್ಣು ಮಕ್ಕಳು ಏನೇನು ತರಲು ಹೇಳಿದರು ? 

ಉತ್ತರ : ವರ್ತಕನು ಹಡಗನ್ನು ಸ್ವಾಗತಿಸಲು ನಗರಕ್ಕೆ ಹೊರಟಾಗ ಅವನ ಇಬ್ಬರು ಹಿರಿಯ ಹೆಣ್ಣು ಮಕ್ಕಳು ಬಟ್ಟೆ , ಒಡವೆ . ಅಲಂಕಾರದ ವಸ್ತುಗಳ ಪಟ್ಟಿ ನೀಡಿದರು . ಆದರೆ ಸುಂದರಿ ತನಗೊಂದು ಗುಲಾಬಿ ಹೂಗಳ ಗೊಂಚಲು ತರಬೇಕೆಂದು ಕೇಳಿಕೊಂಡಳು . 

೧೦. ವರ್ತಕನು ನಿರ್ಜನ ಪ್ರದೇಶದಲ್ಲಿ ನೋಡಿದ ಅರಮನೆಯಲ್ಲಿ ಏನು ಮಾಡಿದನು ?

 ಉತ್ತರ : ವರ್ತಕನು ಅಂಜಿಕೆಯಿಂದ ಅರಮನೆ ಪ್ರವೇಶಿಸಿದನು . ಆ ಅರಮನೆಯ ಒಂದು ಕೋಣೆಯಲ್ಲಿ ಭಕ್ಷ್ಯ ಭೋಜ್ಯಗಳನ್ನು ಇಡಲಾಗಿತ್ತು . ಹಸಿವೆ ತಾಳಲಾರದೆ ಉಂಡ , ಭೋಜನ ಸವಿದು ಹೊರಬಂದ . ಪುಷ್ಪವನದ ಗುಲಾಬಿಗಳನ್ನು ನೋಡಿದ . ತನ್ನ ಮಗಳು ಸುಂದರಿಗಾಗಿ ಒಂದು ಗೊಂಚಲು ಕಿತ್ತುಕೊಂಡ . 

೧೧. ವರ್ತಕನು ಅರಮನೆಯಲ್ಲಿ ಊಟಮಾಡಿ , ಹೂಗಳನ್ನು ಕಿತ್ತಿದ್ದರಿಂದ ಮೃಗ ಅವನಿಗೆ ಏನೆಂದು ಎಚ್ಚರಿಕೆ ನೀಡಿತು ?

 ಉತ್ತರ : ವರ್ತಕನು ಆರಮನೆಯಲ್ಲಿ ಊಟಮಾಡಿ , ಹೂಗಳನ್ನು ಕಿತ್ತಿದ್ದರಿಂದ ಮೃಗ ಸಿಟ್ಟಿನಿಂದ ಅಬ್ಬರಿಸಿ “ ಕೇಳು ! ನಿನ್ನ ಬದಲಾಗಿ ನಿನ್ನ ಮುದ್ದು ಮಗಳನ್ನು ತಂದು ಕೊಟ್ಟರೆ ನಿನ್ನನ್ನು ಕೊಲ್ಲುವುದಿಲ್ಲ . ನೀನು ತಪ್ಪಿಸಿಕೊಳ್ಳಲಾರೆ . ಈ ಬುಟ್ಟಿ ತೆಗೆದುಕೋ . ಇದರೊಂದಿಗೆ ಹೋಗು ನಾಳೆ ಸಂಜೆ ಒಳಗೆ ನಿನ್ನ ಮಗಳನ್ನು ಕರೆತರದಿದ್ದರೆ ನಿನ್ನನ್ನು ನಿನ್ನ ಮಗಳನ್ನು ಒಟ್ಟಿಗೇ ಮುಗಿಸುತ್ತೇನೆ ” ಅಂದಿತು . 

೧೨. ಮೃಗವು “ ನನ್ನ ಹೃದಯ ಒಳ್ಳೆಯದಿರಬಹುದು , ಆದರೂ ನಾನು ಮೃಗ . ” ಎಂಬ ಮಾತಿಗೆ ಸುಂದರಿಯ ಪ್ರತಿಕ್ರಿಯೆ ಏನು ? 

ಉತ್ತರ : ಮೃಗವು “ ನನ್ನ ಹೃದಯ ಒಳ್ಳೆಯದಿರಬಹುದು , ಆದರೂ ನಾನು ಮೃಗ ” ಎಂದು ಹೇಳಿದ ಮಾತಿಗೆ ಸುಂದರಿ “ ಮೃಗ ಒಳ್ಳೆಯ ಹೃದಯ ಹೊಂದಿದ್ದರೂ ಮೃಗದ ಆಕಾರ ಹೊಂದಿರುವುದು ಸಹಜ . ಆದರೆ ಜಗತ್ತಿನ ಅನೇಕ ಮನುಷ್ಯರು ಸುಂದರ ಆಕಾರ ಪಡೆದು , ಮೃಗದ ಹೃದಯ ಹೊಂದಿರುತ್ತಾರೆ ” ಎಂದು ಪ್ರತಿಕ್ರಿಯಿಸಿದಳು . 

10th Kannada Question Answer Mruga Mathu Sundari pdf

10th Kannada Deevige 10th Notes Lesson question answer pdf textbook Mruga Mathu Sundari summary in Kannada 10th class Mruga Mathu Sundari Notes question answer text book pdf download 10ನೇ ತರಗತಿ ಮೃಗ ಮತ್ತು ಸುಂದರಿ ನೋಟ್ಸ್  ಪ್ರಶ್ನೆ ಉತ್ತರ

ಆತ್ಮೀಯರೇ..

ನಮ್ಮ ಕನ್ನಡ ದೀವಿಗೆ.ಇನ್   ವೆಬ್ಸೈಟ್ ಮತ್ತು ಆಪ್  ನಲ್ಲಿ 1ನೇ ತರಗತಿಯಿಂದ 1೦ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

10ನೇ ತರಗತಿ ಎಲ್ಲಾ ಪಾಠ ಮತ್ತು ಪದ್ಯದ ನೋಟ್ಸ್ ಪಿಡಿಎಫ್ ಬುಕ್ಸ್ ಗಳನ್ನೂ ಟೆಲಿಗ್ರಾಮ್ ಗೆ ಜಾಯಿನ್ ಆಗಿ ಅಲ್ಲಿಂದ  ಎಲ್ಲಿ ಡೌನ್ಲೋಡ್ ಮಾಡಬಹುದು

ಇತರ ವಿಷಯಗಳು

ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Notes App ಹಿಂದಕ್ಕೆ

Leave a Reply

Your email address will not be published. Required fields are marked *